Categories
e-ದಿನ

ನವೆಂಬರ್-8

 

ಪ್ರಮುಖ ಘಟನಾವಳಿಗಳು:

1731: ಅಮೇರಿಕಾದ ಫಿಲಾಡೆಲ್ಫಿಯಾದಲ್ಲಿ ಬೆಂಜಾಮಿನ್ ಫ್ರಾಂಕ್ಲಿನ್ ಮೊದಲ ಗ್ರಂಥಾಲಯವನ್ನು ತೆರೆದರು.

1793: ಪ್ಯಾರಿಸ್ಸಿನ ಲವ್ರೆ ವಸ್ತುಸಂಗ್ರಹಾಲಯವು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಾಯಿತು.

1895: ವಿಲ್ಹೆಮ್ ರೋನ್ಟೆಜೆನ್ ವಿದ್ಯುತ್ ಪ್ರಯೋಗದಲ್ಲಿ ತೊಡಗಿದ್ದ ವೈಜ್ಞಾನಿಕ ತತ್ವವನ್ನು ಕಂಡುಹಿಡಿದು ಮೊದಲ ಎಕ್ಸ್ ರೇ ಚಿತ್ರವನ್ನು ತೆಗೆದರು.

1904: ಹಾರ್ವೇ ಹಬ್ಬಲ್ ಪ್ರತ್ಯೇಕವಾಗಿ ವಿದ್ಯುತ್ ಲಗತ್ತನ್ನು ಪ್ಲಗ್ ಮಾಡುವ ವಸ್ತುವಿಗೆ ಪೇಟೆಂಟ್ ಪಡೆದರು.

1910: ಕೀಟ ನಾಶಕಕ್ಕೆ ವಿಲ್ಲಿಯಂ ಫ್ರಾಸ್ಟ್ ಪೇಟೆಂಟ್ ಪಡೆದರು.

2009: ಭಾರತದಲ್ಲಿ ಬುದ್ಧ ಅನುಯಾಯಿಗಳು ದಲೈಲಾಮ ಅವರು ಮರಳಿದಕ್ಕೆ ಅವರನ್ನು ಸ್ವಾಗತಿಸಿದರು.

2016: ಭ್ರಷ್ಟಾಚಾರದ ವಿರುದ್ದ ಭಾರತ ಸರ್ಕಾರವು 500 ಮತ್ತು 1000 ರುಪಾಯಿಯ ನೋಟುಗಳ ಚಲಾವಣೆ ರದ್ದುಗೊಳಿಸಿತು.

ಪ್ರಮುಖ ಜನನ/ಮರಣ:

1627: ಮುಘಲ್ ರಾಜ್ಯದ ಸಾಮ್ರಾಟ ಜಹಂಗೀರ್ ನಿಧನರಾದರು.

1900: ಪಟಿಯಾಲ ರಾಜ್ಯದ ಮಹಾರಾಜ ಆಗಿದ್ದ ಮಹಾರಾಜ ರಾಜಿಂದರ್ ಸಿಂಗ್ ನಿಧನರಾದರು.

1919: ಭಾರತದ ನಟ, ಚಿತ್ರಕಥೆಗಾರ ಮತ್ತು ಲೇಖಕ ಪುರುಷೋತ್ತಮ್ ಲಕ್ಷ್ಮಣ್ ದೇಶಪಾಂಡೆ ಅವರು ಜನಿಸಿದರು.

1920: ನಟಿ, ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಿತಾರ ದೇವಿ ಜನಿಸಿದರು.

1927: ಭಾರತೀಯ ರಾಜಕಾರಣಿ ಮತ್ತು ಭಾರತದ 7ನೇ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಜನಿಸಿದರು.

1953: ಭಾರತದ ರಾಜಕಾರಣಿ ನಂದ ಕುಮಾರ್ ಪಟೇಲ್ ಜನಿಸಿದರು.

1960: ಭಾರತೀಯ ವಾಯುಪಡೆಯ ಮುಖ್ಯಸ್ಥ ಸುಬ್ರತೋ ಮುಖರ್ಜಿ ನಿಧನರಾದರು.

2013: ಪತ್ರಕರ್ತ ಮತ್ತು ನಟ ಅಮ್ನಾಚಿ ವೆಂಕಟ ಸುಬ್ರಮಣ್ಯಂ ನಿಧನರಾದರು.

2015: ಭಾರತೀಯ ಏರ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ ನಿಧನರಾದರು.