Loading Events

« All Events

  • This event has passed.

ನಾರಾಯಣರಾವ್‌ ಮಾನೆ

October 11, 2023

೧೧.೧೦.೧೯೩೧ ಸುಪ್ರಸಿದ್ಧ ಸುಗಮ ಸಂಗೀತಗಾರರಾದ ನಾರಾಯಣರಾವ್‌ ಮಾನೆಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಪ್ಪಾರಹಳ್ಳಿ. ತಂದೆ ಕೃಷ್ಣಾಜಿರಾವ್ ಮಾನೆ, ತಾಯಿ ಲಕ್ಷ್ಮೀಬಾಯಿ. ಶಾಲಾಕಾಲೇಜು ದಿನಗಳಿಂದಲೂ ಸುಗಮ ಸಂಗೀತದ ಕಾರ್ಯಕ್ರಮಗಳಲ್ಲಿ ಭಾಗಿ. ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿ ಜನರಲ್ಲಿ ಮೂಡಿಸಿದ ಸ್ವಾತಂತ್ರ್ಯದ ಕಿಚ್ಚು. ಪ್ರವಾಹ ಪೀಡಿತರ ನಿಧಿ ಸಂಗ್ರಹಣೆಗಾಗಿ, ವಯಸ್ಕರ ಶಿಕ್ಷಣ ಪ್ರಚಾರ, ಕುಟುಂಬ ಕಲ್ಯಾಣ, ರಾಷ್ಟ್ರೀಯ ರಕ್ಷಣಾನಿಧಿ ಸಂಗ್ರಹಣೆ, ಏಡ್ಸ್‌ ಜಾಗೃತಿ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹಾಡಿನ ಮೂಲಕ ನೀಡಿದ ಕೊಡುಗೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದ ಪಂಚಾಯತ್‌ ರಾಜ್ಯಸಮ್ಮೇಳನದಲ್ಲಿ ಜವಹರಲಾಲ್‌ ನೆಹರು, ವಿಕ್ಟೋರಿಯಾ ಆಸ್ಪತ್ರೆಯ ಶತಮಾನೋತ್ಸವ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ವಿ.ವಿ.ಗಿರಿಯವರ ಮುಂದೆ ನಡೆಸಿಕೊಟ್ಟ ಸುಗಮಸಂಗೀತ ಕಾರ್ಯಕ್ರಮ. ಕನ್ನಡ ಸಾಹಿತ್ಯಪ್ರಚಾರಕ್ಕಾಗಿ ಆಂಧ್ರಪ್ರದೇಶದ ಗಡಿನಾಡು ವಿಭಾಗದಲ್ಲಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಾಜ್ಯಾದ್ಯಂತ, ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಜಿನಭಕ್ತಿ ಗೀತೆಗಾಯನದಲ್ಲಿ ಭಾಗಿ. ೧೯೯೭ರಲ್ಲಿ ಆಹ್ವಾನಿತರಾಗಿ ಅಮೇರಿಕದ ಕ್ಯಾಲಿಫೋರ್ನಿಯಾ, ಅಯೋವ, ಆರಿಜೋನ ರಾಜ್ಯಗಳಲ್ಲಿ ಕನ್ನಡಿಗರ ಮಕ್ಕಳಿಗಾಗಿ ನೀಡಿದ ಸುಗಮಸಂಗೀತ ಶಿಕ್ಷಣ, ಸುಗಮಸಂಗೀತ ಕಾರ್ಯಕ್ರಮ. ಚಿಕಾಗೋನಲ್ಲಿ ನಡೆದ ಗ್ರೀಷ್ಮಮೇಳದಲ್ಲಿ ಪಾಲ್ಗೊಂಡ ಹೆಗ್ಗಳಿಕೆ. ಹಲವಾರು ಧ್ವನಿ ಸುರುಳಿಗಳ ಬಿಡುಗಡೆ. ನಾರಾಯಣರಾವ್ ಮಾನೆ ಭಾವಗೀತೆಗಳು, ಪ್ರೇಮಾಭಟ್‌ರವರ ಹೆರ್ಗದ ದುರ್ಗಾದೇವಿ ಭಕ್ತಿಗೀತೆಗಳ ಧ್ವನಿಸುರುಳಿಗಳಿಗೆ ಹಾಡುಗಾರಿಕೆ. ಸಂಗೀತನೃತ್ಯ ಅಕಾಡಮಿ ಸದಸ್ಯರಾಗಿ ಸೇವೆ. ಹಾಸನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಪ್ರಮುಖವಾದವುಗಳು.   ಇದೇದಿನಹುಟ್ಟಿದಕಲಾವಿದ ನಾಗರಾಜ್‌ ಜಿ. – ೧೯೫೨

* * *

Details

Date:
October 11, 2023
Event Category: