Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ

ಜಿ.ಎಸ್.ಸಿದ್ದಲಿಂಗಯ್ಯನವರು ಹುಟ್ಟಿದ್ದು ಫೆಬ್ರವರಿ ೧೯೩೧ ರಲ್ಲಿ. ತುಮಕೂರು ಜಿಲ್ಲೆಯ ಬೆಳ್ಳಾವೆ ಗ್ರಾಮ ಅವರ ಹುಟ್ಟೂರು. ವಿದ್ಯಾಭ್ಯಾಸ ತುಮಕೂರು ಮತ್ತು ಮೈಸೂರುಗಳಲ್ಲಾಯಿತು. ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಬಿಸಿದ ಇವರು ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕೊನೆಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ನಿವೃತ್ತರಾದರು. ವಿದ್ವಾಂಸರಾದ ಸಿದ್ದಲಿಂಗಯ್ಯನವರು ಬೆಂಗಳೂರು ಮೈಸೂರು, ಕರ್ನಾಟಕ, ಮಂಗಳೂರು, ಮುಂಬೈವಿಶ್ವವಿದ್ಯಾಲಯಗಳ ವಿಚಾರ ಸಂಕೀರ್ಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕವಿಗೋಷ್ಟಿ ಹಾಗೂ ವಿದ್ವತ್ ಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಮಹಾನುಭಾವ ಬುದ್ಧ, ಬಸವಣ್ಣ, ವಿರತಿಯಸಿರಿ ಸಣ್ಣಪ್ಪನವರು, ಡಾ.ಸಿದ್ದಯ್ಯ ಪುರಾಣಿಕ- ಇವು ಇವರು ರಚಿಸಿರುವ ಜೀವನ ಚರಿತ್ರೆಗಳು.

ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡಕಾವ್ಯ, ರತ್ನಾಕರವರ್ಣಿ, ವಚನಸಾಹಿತ್ಯ; ಒಂದು ಇಣುಕುನೋಟ, ವಚನ ವ್ಮಾಯ ಮತ್ತು ಭಾಷೆ, ಹರಿದಾಸ ಸಾಹಿತ್ಯ ಪರಂಪರೆ, ಶೂನ್ಯಸಂಪಾದನೆ-ಒಂದು ಮರುಚಿಂತನೆ, ವಿಮರ್ಶೆಯ ಕೃತಿಗಳು ಶೂನ್ಯಸಂಪಾದನೆನೆಗಳು-ಒಂದು ಅವಲೋಕ, ಇವರ ಮಹತ್ವದ ವಿಮರ್ಶಾಗ್ರಂಥ ಬಿಂದುವಿನಿಂದ, ಎಂಬುದು ಚಿಂತನೆಗಳ ಸಂಕಲನ. ಕವಿ, ವಿಮರ್ಶಕ, ವಿದ್ವಾಂಸ, ವಾಗ್ಮಿ, ದಕ್ಷ ಆಡಳಿತಗಾರ- ಹೀಗೆ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ಬಹುಮುಖ ಪ್ರತಿಭೆಯುಳ್ಳವರು ೧೯೮೯ ರಿಂದ ಮೂರು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇವರು ನಿರ್ವಹಿಸಿದ ಸೇವೆ ಅವಿಸ್ಮರಣೀಯ.