Categories
e-ದಿನ

ಮೇ-28

ಪ್ರಮುಖಘಟನಾವಳಿಗಳು:

1742: ಲಂಡನ್ನಿನ ಗುಡ್ ಮ್ಯಾನ್ ಫೀಲ್ಡ್ಸ್ ನಲ್ಲಿ ಮೊದಲ ಒಳಾಂಗಣ ಈಜುಕೊಳ ತೆರೆದಿತ್ತು.

1889: ಎಡ್ವರ್ಡ್ ಮತ್ತು ಆಂಡ್ರೆ ಮಿಶೆಲ್ಲಿನ್ ಸೇರಿ ಮಿಶೆಲಿನ್ ಟೈರ್ ಸಂಸ್ಥೆಯನ್ನು ಆರಂಭಿಸಿದರು.

1892: ನಿಸರ್ಗವನ್ನು ಸಂರಕ್ಷಿಸಲು ಜಾನ್ ಮುಯಿರ್ ಸಿಯೆರ್ರ ಕ್ಲಬ್ ಸ್ಥಾಪಿಸಿದರು.

1900: ಪೂರ್ಣ ಸೂರ್ಯ ಗ್ರಹಣ ಸಂಭವಿಸಿತು.

1938: ಟೆಲ್ ಅವೀವ್ ಬಂದರು ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

1952: ಮೆಂಪಿಸ್ ಕಿಡ್ಡಿ ಉದ್ಯಾನದಲ್ಲಿರುವ ಲಿಟಲ್ ಡಿಪ್ಪರ್ ರೋಲರ್ ಕೋಸ್ಟರ್ ಉತ್ತರ ಅಮೇರಿಕಾದ ಅತ್ಯಂತ ಹಳೆಯದಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಉಕ್ಕಿನ ರೋಲರ್ ಕೋಸ್ಟರ್ ಆಗಿದೆ.

1952: ಗ್ರಿಸ್ ದೇಶದ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ನೀಡಲಾಗಿತ್ತು.

1953:  “ಮೆಲೊಡಿ” ಮೊದಲ 3ಡಿ ವ್ಯಂಗ್ಯ ಚಿತ್ರವನ್ನು ಟೆಕ್ನಿಕಲರ್ ನಲ್ಲಿ ಪ್ರದರ್ಶಿಸಲಾಯಿತು.

1959: ಕೋತಿಗಳಾದ ಏಬಲ್ ಮತ್ತು ಬೇಕರ್ 500 ಕಿಲೋಮೀಟರ್ ಜುಪಿಟರ್ ಕ್ಷಿಪಣಿಯ ಮೇಲೆ ಬಾಹ್ಯಾಕಾಶದ ಯಾತ್ರೆ ಮಾಡಿದ ಮೊದಲ ಪ್ರಾಣಿಗಳು.

1961: ಮಾನವ ಹಕ್ಕುಗಳ ಸಂಘಟನೆಯ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸ್ಥಾಪನೆಯಾಯಿತು.

1964: ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರ ಅಂತ್ಯಕ್ರಿಯೆಯನ್ನು ನವದೆಹಲಿಯಲ್ಲಿ ನೆರವೇರಿಸಲಾಯಿತು.

1964: ಮಾನವ ರಹಿತ ಅಪೋಲೋ ಉಪಗ್ರಹವನ್ನು ಶನಿಗ್ರಹಕ್ಕೆ ರವಾನಿಸಲು ಭೂಮಿಯ ಕಕ್ಷೆಯಿಂದ ಕಳುಹಿಸಲಾಯಿತು.

1971: ರಷ್ಯಾ ದೇಶದಿಂದ ಭೂಮಿಯಿಂದ ಮಂಗಳ ಗ್ರಹದ ಮೇಲೆ ತಲುಪಿದ ಮೊದಲ ಬಾಹ್ಯಾಕಾಶದ ನೌಕೆ ಮಾರ್ಸ್-3 ಹಾರಿಸಲಾಯಿತು.

1999: 22 ವರ್ಷಗಳ ನಂತರ ಲಿಯನಾರ್ಡೋ ಡಾವಿಂಚಿಯವರ ಮೇರು ಕೃತಿ “ದಿ ಲಾಸ್ಟ್ ಸಪ್ಪರ್” ಅನ್ನು ಮತ್ತೆ ಪ್ರದರ್ಶನಕ್ಕಿಡಲಾಗಿತ್ತು.

2008: ನೇಪಾಳ ತನ್ನ ಎರಡು ನೂರನಲವತ್ತು ವರ್ಷಗಳ ರಾಜಪ್ರಭುತ್ವವನ್ನು ಅಂತ್ಯಗೊಳಿಸಿ ವಿಶ್ವದ ನೂತನ ಗಣರಾಜ್ಯವಾಗಿ ಉದಯವಾಯಿತು.

ಪ್ರಮುಖ ಜನನ/ಮರಣ:

1783: ಫ್ರಾನ್ಸ್ ದೇಶದಲ್ಲಿ ಗಲ್ಲು ಶಿಕ್ಷೆಯ ಸಾಧನೆಯ ಬಳಕೆಯನ್ನು ಪ್ರಸ್ತಾಪಿಸಿದ ಡಾ.ಜೋಸೆಫ್ ಗಿಲೋಟಿನ್ ಜನಿಸಿದರು.

1807: ಜೀವಶಾಸ್ತ್ರಜ್ಞ ಲೂಇಸ್ ಅಗಾಸಿಸ್ ಜನಿಸಿದರು, ಇವರು ನಿರ್ನಾಮವಾಗಿರುವ ಮೀನುಗಳ ಹಾಗೂ ಹಿಮನದಿಗಳ ಮೇಲೆ ಸಂಶೋಧನೆ ಮಾಡಿದ್ದಾರೆ.

1908: ಜೇಮ್ಸ್ ಬಾಂಡ್ ಪತ್ತೇದಾರಿ ಸರಣಿಗಳ ಲೇಖಕರಾದ ಇಯಾನ್ ಫ್ಲೆಮಿಂಗ್ ಅವರು ಜನಿಸಿದರು.