Categories
e-ದಿನ

ಸೆಪ್ಟೆಂಬರ್ 18

 

ಪ್ರಮುಖ ಘಟನಾವಳಿಗಳು:

1789: ಮೊದಲ ಸಾಲವನ್ನು ಅಧ್ಯಕ್ಷರಿಗೂ ಮತ್ತು ಕಾಂಗ್ರೆಸ್ಸಿನವರ ವೇತನವನ್ನು ಪಾವತಿಲಸಲು ಪಡೆಯಲಾಯಿತು.

1803: ಬ್ರಿಟೀಷರು ಪುರಿಯನ್ನು ಯಾವುದೇ ಕಷ್ಟವಿಲ್ಲದೆ ಮರಾಠರಿಂದ ವಶಪಡಿಸಿಕೊಂಡರು.

1808: ರಾಯಲ್ ಥಿಯೇಟರ್ ದುರಸ್ಥಿಗೊಂಡ ನಂತರ ಶೇಕ್ಸ್ ಪಿಯರ್ ಅವರ ಮ್ಯಾಕ್ಬೆತ್ ನಾಟಕವು ಮತ್ತೆ ಮರುಪ್ರದರ್ಶನವಾಯಿತು.

1882: ಪೆಸಿಫಿಕ್ ಸ್ಟಾಕ್ ಎಕ್ಸ್ಚೇಂಜ್ ತೆರೆಯಲಾಯಿತು.

1905: ವಿದ್ಯುತ್ ಟ್ರಾಮ್ ಲೈನ್ ರೋಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1927: ಮಹರಾಷ್ಟ್ರ ವಾಣಿಜ್ಯ ಮಂಡಳಿ ಸ್ಥಾಪಿಸಲಾಯಿತು.

1947: ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಅಂಗೀಕರಿಸಲಾಯಿತು.

1948: ಹೈದರಾಬಾದಿನ ಸೈನ್ಯದ ನಿಜಾಮನ ಶರಣಾಗತಿನ್ನು ಭಾರತದ ಸೇನೆಯು ಸ್ವೀಕರಿಸಿದ ನಂತರ ಆಪರೇಷನ್ ಪೋಲೋ ಕೊನೆಗೊಂಡಿತು.

1965: ಚೀನಾ ಭಾಗದಲ್ಲಿರುವ ಚೀನಾ-ಸಿಕ್ಕಿಂ ಗಡಿಯಲ್ಲಿ ಭಾರತೀಯ ನೆಲೆಗಳನ್ನು ಪತ್ತೆಹಚ್ಚುವಲ್ಲಿ ಕಮ್ಯುನಿಸ್ಟ್ ಸರ್ಕಾರವು ತೀವ್ರ ಪರಿಣಾಮ ಎದುರಿಸಬೇಕಾಗಬಹುದೆಂದು ಎಚ್ಚರಿಗೆ ನೀಡಿತು.

1967: ನಾಗಾಲ್ಯಾಂಡಿನಲ್ಲಿ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯೆಂದು ಸ್ವೀಕರಿಸಿತು.

1978: ಅಂದಿನ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ಅವರ ಸಮ್ಮುಖದಲ್ಲಿ ಈಜಿಪ್ಟಿನ ಅಧ್ಯಕ್ಷ ಅನ್ವರ್-ಅಲ್-ಸದತ್ ಮತ್ತು ಇಸ್ರೇಲ್ ಪ್ರಧಾನ ಮಂತ್ರಿ ಮೇನಕೀಂ ಬೇಗಿನ್ ಶಾಂತಿ ಕಾಪಡಲು ಒಪ್ಪಂದ ಮಾಡಿದರು.

1987: ಮುಂಬರುವ ವರ್ಷಗಳಲ್ಲಿ 1000 ಪರಮಾಣು ಕ್ಷಿಪಣಿಗಳನ್ನು ತೆಗೆದುಹಾಕಲಾಗುವುದು ಎಂದು ಅಮೇರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಘೋಷಿಸಿದರು.

1997: ಕೇರಳಾದ ಕೊಟ್ಟಾಯಂನಲ್ಲಿ ಮಾಮ್ಮೆನ್ ಮಾಪಿಳ್ಳೈ ಹಾಲನ್ನು ರಾಷ್ಟ್ರಪತಿ ಕೆ.ಆರ್.ನಾರಾಯಣ್ ಉದ್ಘಾಟಿಸಿದರು.

2011: 2011ರ ಸಿಕ್ಕಿಂ ಭೂಕಂಪನವು ಈಶಾನ್ಯ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ದಕ್ಷಿಣ ಟಿಬೇಟಿನಲ್ಲಿ ಕಂಡುಬಂದಿತು.

2012: ಗೊಥೆನ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ವಿಶ್ವದ ಮೊದಲ ತಾಯಿಂದ ಮಗಳಿಗೆ ಗರ್ಭಾಂಶದ ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1879: ಅಮೇರಿಕನ್ ವಯಸ್ಕ ಶಿಕ್ಷಣತಜ್ಞ ವೆಲ್ತಿ ಹೌಸಿಂಗರ್ ಫಿಶರ್ ಜನಿಸಿದರು.

1909: ಪ್ರಸಿದ್ಧ ವ್ಯಾಪಾರಿ ಖಿಲಾಚಂದ ರಾಮ್ದಾಸ್ ಜನಿಸಿದರು.

1925: ಮಹಾರಾಷ್ಟ್ರದ ನಾಯಕ ಪ್ರಾಣ್ ಲಾಲ್ ಹರಕಿಶನ್ ದಾಸ್ ವೋರ ಜನಿಸಿದರು.

1950: ಹಿಂದಿ ನಟಿ ಶಬಾನಾ ಅಜ್ಮಿ ಜನಿಸಿದರು.

1950: ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ಜನಿಸಿದರು.

1992: ಭಾರತದ 6ನೇ ಉಪ ರಾಷ್ಟ್ರಪತಿಯಾಗಿದ್ದ ಮೊಹಮ್ಮದ್ ಹಿದಾಯುತ್ತುಲ್ಲ ನಿಧನರಾದರು.

1995: ಹಾಸ್ಯ ಕವಿ ಕಾಕ ಹತ್ರಾಸಿ ನಿಧನರಾದರು.

2013: ಭಾರತೀಯ ರಾಜಕಾರಣಿ ವಿಲಿಯಂ ಭಾರ್ಗವನ್ ನಿಧನರಾದರು.