Categories
ರಚನೆಗಳು

ಅಚಲಾನಂದದಾಸರ ರಚನೆಗಳು

ಇಲ್ಲಿ ‘ಕೊಡಲಿ’ ಎಂಬ ಶಬ್ದವನ್ನು

11
ಕೊಡಲಿ ಬೇಕು ಪಾಪದ ಬೇರ ಕಡಿವಡೆ
ಕೊಡಲಿ ಬೇಕು ಪುಣ್ಯವ ಕಟ್ಟಿಕೊಂಬರೆ
ಕೊಡಲಿ ಬೇಕು ಗುರುಹಿರಿಯರ ಕೈಯಲಿ
ಕೊಡಲಿ ಬೇಕು ಸತ್ಪಾತ್ರಂಗಳೆಡೆಯಲಿ
ಕೊಡಲಿಲ್ಲದವನಿಗೆ ನೀ
ಕೊಡಲಿಲ್ಲ ಎನ್ನೊಡೆಯ ಕೇಳೋ ಅಚಲಾನಂದವಿಠಲ

12
ಚಂದ್ರಕಾಂತದ ಕರಡಿಗೆಯೊಳಗೆ ಇಂದ್ರನೀಲದಿಂದೆಸೆವ
ಕುಂದಕುಟ್ಮಲ ಪ್ರಜ್ವಲಿತ ಇಂದೀವರಾಸ್ಯ ಕೋಮಲಾಂಗ
ಚಂದದಿಂದೆನ್ನ ಮನದಿಂದಗಲದಿರು ಹರಿ ನಿನ್ನ ಸಿರಿಚರಣವಿರಲಿ
ಅಚಲಾನಂದವಿಠಲ ಬೇಲೂರ ಚೆನ್ನಿಗರಾಯ

13
ತಂದೇ ತಂದೇ ತಂದೆನ್ನತಂದೆ ನಾ ಬಂದೆ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಲಕ್ಷ ಎಂಬತ್ತುನಾಲ್ಕು ಜೀವರಾಶಿಗಳಲ್ಲಿ
ಎಲ್ಲೆದೋರದು ತಂದೆ
ಹಿಂದಿನ ಜನ್ಮವು ಹ್ಯಾಗಾದರಾಗಲಿ
ಮುಂದೆನ್ನ ಕರುಣಿಸೊ
ತಂದೆ ಅಚಲಾನಂದವಿಠಲ

ತಾನು ಮಾಡಿದ ಕರ್ಮವನ್ನು ತಾನೇ

14
ತಾ ಮಾಡಿದ ಪಾಪ ತನಗಲ್ಲದಿರ್ದಡೆ
ವಿಧಿಯನ್ನ ಬೈದರೆ
ವಿಧಿ ತಾ ಎಲ್ಲಿಂದ ಕದ್ದು ತಾಹೋದಯ್ಯ
ಕೇಳಯ್ಯ ಅಚಲಾನಂದವಿಠಲ

‘ಅನ್ಯಥಾ ಶರಣಂ ನಾಸ್ತಿ’

15*
ದೇವ ತಪ್ಪಿಲ್ಲದೆ ಅವಗುಣವಿಲ್ಲದೆ
ಒಬ್ಬರೊಬ್ಬರ ಮರೆಹೊಗುವರೆ
ಮರೆಹೊಕ್ಕರೆ ಕಾವರಿಲ್ಲದೆ ಅಲ್ಲಿ
ಕುಲಾಚಾರ್ಯನಾಗಿ ದುಃಖ ಭೀತನಾಗಿ
ಮರೆಹೊಕ್ಕೆ ಕಾಯೊ ಅಚಲಾನಂದವಿಠಲ
* ಇದು ಉಗಾಭೋಗ 6ರ ಪಾಠಾಂತರದಂತಿದೆ.

16
ನಾನು ನಾನು ನಾನು ನನ್ನದು ನನ್ನದು ಎಂದು
ತಂದು ತಂದು ತಂದು ವ್ಯರ್ಥವಾಯಿತು
ತೋರುವ ಹರಿಗೋಲು ವೈಕುಂಠಕೆರಗಿತ್ತದರಲ್ಲಿ
ನಾನೇನ ಕಂಡುದಿಲ್ಲ
ಆನಂದಮೂರುತಿ ಅಚಲಾನಂದವಿಠಲನ
ಪಾದತೀರ್ಥದಿ ಮುಳುಗದನ್ನಕ

ಇದು ಸಂಸಾರ ಕೂಪದಿಂದ

17
ನಿಂದಿರೆ ನೆರಳಿಲ್ಲ ಹಿಡಿವರೆ ಕೊಂಬಿಲ್ಲ
ಮುಂದೆ ಬಾವಿ ಹಿಂದೆ ಕಿಚ್ಚು ಬೆನ್ನಟ್ಟುತಿದೆ
ಬಂದಿದೆ ವಿಪತ್ತು ಎನ್ನ ಕಾವರ ಕಾಣೆ
ಅಂಧಕನಾಗಿ ಉರ್ವಿಯೊಳು ಸಿಲುಕಿದೆ
ತಂದೆ ಸಲಹೋ ಅಚಲಾನಂದವಿಠಲ

ಇಲ್ಲಿ ಸಖ್ಯಭಾವದ ಸಲಿಗೆಯಿಂದ

18
ನಿನ್ನ ಡಿಂಗರಿಗನೆಂದುರದಲುಂಡಿಗೆಯೊತ್ತಿ
ಇನ್ನು ಸಲಹದಿರ್ದಡಾರು ಮೆಚ್ಚುವರಯ್ಯ
ನಿನ್ನಗೆ ಎನಗೆ ಆಚಾರವಿಚಾರ
ನಿನ್ನ ಸೆರಗ ಬಿಡೆ ಆರಿಗಾದರು ಹೇಳು
ಎನ್ನೊಡೆಯನೆ ಅಚಲಾನಂದವಿಠಲ
ಎನ್ನ ಸಲಹದಿರ್ದಡೆ ನಿನಗೆ ಭಕುತರಾಣೆ

ಶ್ರೀಹರಿಗೆ ತಮ್ಮ ನಿಷ್ಠೆಯನ್ನು

19*
ಪಾಡಿದರೆನ್ನೊಡೆಯನ ಪಾಡುವೆನು
ಬೇಡಿದರೆನ್ನೊಡೆಯನ ಬೇಡುವೆನು ಎ-
ನ್ನೊಡಲನು ಒಡೆಯಗೆ ತೋರುವೆನು
ಬಡತನವನು ನಾ ಬಿನ್ನಹ ಮಾಡುವೆ
ಪಾಡಿದರೆನ್ನೊಡೆಯನ ಪಾಡುವೆನು ಎ-
ನ್ನೊಡೆಯ ಅಚಲಾನಂದವಿಠಲ ನಿನ್ನ ಚರಣ
ದೆಡೆಯ ಸಾರಿ ಬದುಕುವೆನನುದಿನ
* ಈ ಉಗಾಭೋಗಗಳು ಪುರಂದರವಿಠಲ ಅಂಕಿತದಲ್ಲೂ ಇವೆ

20*
ಪಾತಕರೊಳಗೆಲ್ಲ ನಾನೆ ವೆಗ್ಗಳನಯ್ಯ
ಪ್ರಾಯಶ್ಚಿತ್ತಕ್ಕೆ ನಿನ್ನ ನಾಮವೇ ಘನವಯ್ಯ
ಪಾತಕವನು ನಾನು ಮಾಡಿದ್ದು ಏನು
ಪಾತಕ ಪಾವನ ಎರಡು ನಿನ್ನಾಧೀನ
ಪಾತಕಿ ನಾನಲ್ಲ ಪ್ರಾಯಶ್ಚಿತ್ತವೆನಗಿಲ್ಲ
ಕೇಳಯ್ಯ ದೇವ ಅಚಲಾನಂದವಿಠಲ
* ಈ ಉಗಾಭೋಗಗಳು ಪುರಂದರವಿಠಲ ಅಂಕಿತದಲ್ಲೂ ಇವೆ