Categories
ರಚನೆಗಳು

ಗಲಗಲಿಅವ್ವನವರು

ಪಲ್ಯಾದ ತುದಿಯಿಂದ ಎಲ್ಲಪದಾರ್ಥ
೬೮
ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ.
ಸಂಜಿಲೆ ಬಂದೆವೆಂಬೊ ಅಂಜಿಕೆ ನಿನಗ್ಯಾಕೆ ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ೧
ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ೨
ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ೩
ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ೪
ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ ೫
ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರಜಾಲಬಲ್ಲವಳಿಗಿಂಥ ಭಯವುಂಟೆ೬
ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ ೭
ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ೮
ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ೯

೬೩
ಅಂಜೋರೆ ಹೀಂಗೆ ಅಂಜೋರೆನಮ್ಮ ಕಂಜನಾಭನ ಮುಂದೆ ಕಾದುವ ಭ್ರಮತೆಯರು ಪ.
ಅಷ್ಟೂರೊಳಗೆ ಅತಿ ಶ್ರೇಷ್ಠಳೆ ಭಾವೆ ಅಷ್ಟೂರಿಗೆ ಅಭಯ ಕೊಡದಲೆಅಷ್ಟೂರಿಗೆ ಅಭಯ ಕೊಡದಲೆ ಒಳಗೋಗಿಕೃಷ್ಣನ ಮುಸುಕಲಿ ಅಡಗೋರೆ ಜಾಣಿ೧
ಚಲುವರೊಳಗೆ ಅತಿ ಚಲುವಳು ಭಾವೆ ಎಲ್ಲರಿಗೆ ಅಭಯವ ಕೊಡದಲೆ ಎಲ್ಲರಿಗೆ ಅಭಯವ ಕೊಡದಲೆ ರಂಗನವಲ್ಲಿ ಮುಸುಕಲಿ ಅಡಗೋರೆ ಜಾಣೆ೨
ಕೃಷ್ಣರಾಯನ ಮತ್ತಷ್ಟು ಮಡದಿಯರುಎಷ್ಟು ಅಂಜುತಲೆ ನಮಗಿನ್ನುಎಷ್ಟು ಅಂಜುತಲೆ ನಮಗಿನ್ನು ಕೈಕಾಲುಮುಟಿಗ್ಯಾಗಿ ಕುಳಿತಾರೆ ಜಾಣಿ ೩
ಬಲರಾಮನ ಮಡದಿಯ ಛಲವನೆ ನೋಡಿರೆಲಲನೆಯರು ಕರೆಯೆ ಬರಲಿಲ್ಲಲಲನೆಯರು ಕರೆಯೆ ಬರಲಿಲ್ಲ ನಮಗಂಜಿನೆಲವ ಗೀಚುತಲೆ ಕುಳಿತಾರೆ ಜಾಣಿ ೪
ಕಂಜಾಕ್ಷಿ ರುಕ್ಮಿಣಿ ಕರೆಯ ಬರಲಿಲ್ಲ ಸಂಜೀಲೆ ನಾವು ಬಂದೇವಸಂಜೀಲೆ ನಾವು ಬಂದೇವ ರಾಮೇಶನ ಅಂಜಿಕೆ ಇಲ್ಲೇನ ಮಡದಿಯರ ಜಾಣಿ ೫

೫೧
ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ಕೇಳ ತಾಯಿಅವರ ಕೀರ್ತಿಯ ಪ.
ಹೋಗಿ ನಾನು ನಾಗವೇಣಿಯರ ಬಾಗಿಲು ಹೊಕ್ಕೆನುಸಾಗರಶಯನ ಮಂಚವೇರಲು ಧಕ್ಕನೆ ನಿಂತೆನು ೧
ಮರ್ಯಾದಿಲೆ ಹರಿಯ ಮನೆ ಬಾಗಿಲು ಮರೆಯಲಿ ನಿಂತೆನುಸಿರಿಯರಸು ಸತಿಯರಿಂದ ಬೆರೆದು ಕುಳಿತೆ೨
ಫುಲ್ಲನಾಭನು ಮಲ್ಲಿಗೆ ಮಂಚದೊಳಿರುತಿರೆವಲ್ಲಭೆಯರಿಬ್ಬರು ಗಂಧಪೂಸಿ ಅಲ್ಲೆ ಕುಳಿತಿಹರು೩
ವನಜನಾಭಗೆ ಪುನಗು ಜಾಜಿ ವನಿತೆಯರು ಹಚ್ಚುತಿಹರುಪುನಗು ಫ್ಸ್ತ್ತೂರಿ ಬೊಟ್ಟು ಮಾನಿನಿಯರು ಇಡುತಿಹರು೪
ನೀರ ಜಾಕ್ಷಗೆ ಥೋರ ಮಲ್ಲಿಗೆಹಾರ ಹಾಕುತ ಚಾರು ಅಂಗದ ಮ್ಯಾಲೆ ಬುಕ್ಕಿಟ್ಟು ಸೂರಿ ಸುಖಿಸುತ ೫
ಕೃಷ್ಣರಾಯಗೆ ಕೊಟ್ಟು ಅಡಿಕೆ ತುಷ್ಟರಾಗಲಿಪಟ್ಟದ ರಾಣಿಯರಿಬ್ಬರು ಇಟ್ಟರು ತೊಡೆಮೇಲೆ ೬
ಬಟ್ಟನೆ ವೀಳ್ಯ ರುಕ್ಮಿಣಿದೇವಿ ಕೊಟ್ಟೆನೆನುತಲಿಥಟ್ಟನೆ ಕೃಷ್ಣನವದನದಲ್ಲಿ ಇಟ್ಟಾಳು ಭಾವೆ ತಾ ೭
ಭರದಿ ಕೋಪಿಸಿ ರುಕ್ಮಿಣಿದೇವಿ ತೆರೆದುಕಣ್ಣುತಾಹಿರಿಯಳೇನು ಮೊದಲು ಕೊಟ್ಟೆ ವೀಳ್ಯವೆನ್ನುತಲೆ ೮
ಭೂಪ ರಾಮೇಶ ರುಕ್ಮಿಣಿದೇವಿಯ ತಾಪವ ಕಾಣುತಅಪಾರ ಕೋಪವ ಅರಘಳಿಗೆಯಲಿ ಇಳಿಸುವೆನೆಂದು ತಾ೯

೨೫೦
ಅರ್ಥಿವಿನೋದವ ಮಾಡುತ
ಸ್ವಸ್ಥದಲೆ ಕುಳಿತರು ಎಲ್ಲ
ಚಿತ್ತ ಜನೈಯನ ಸಹಿತಾಗಿ
ಸಹಿತಾಗಿ ಶಚಿವಾಣಿ
ಮುತ್ತಿನಾರತಿಯ ಬೆಳಗಿರೆ ೧
ರಂಗ ರುಕ್ಮಿಣಿ ಭಾಮೆಯರಿಗೆ
ಶೃಂಗಾರದ ಲೈವರಿಗೆ
ಅಂಗನೆಸುಭದ್ರೆ ದ್ರೌಪತಿ
ದ್ರೌಪತಿಗೆ ವಾಣಿಯರು
ಮಂಗಳಾರತಿಯ ಬೆಳಗಿರೆ ೨
ಉಲ್ಹಾಸದಲಿ ಅಮರರು
ಚಲ್ವ ರಮಿ ಅರಸಗೆ
ಮಲ್ಲಿಗೆ ಸೂರ್ಯಾಡಿ ಐವರು
ಐವರು ಎನುತಲಿ
ಎಲ್ಲರೂ ಹರುಷ ಬಡುವರು ೩

೧೧೫
ಆ ಬಾಲೆಯರಬಗೆ ಬಗೆ ಸೋಲಿಸಿಬರುವಂಥ ಮೇಲು ಮೇಲಾದ ಕೋಲಪ.
ಸಾಗರನ ತನುಜಳು ಬಳುಕುತಬಾಗುತ ನಾಗವೇಣಿ ರುಕ್ಮಿಣಿಆಗ ಗೋವಿಂದಗೆ ಬೇಗನೆ ವಂದಿಸಿ ಹೋಗಬೇಕು ಮುಯ್ಯಕ್ಕೆ೧
ಬಡನಡು ಬಳುಕುತ ಮಡದಿ ಮೋಹದ ರಾಣಿಖಂಡಿ ಮುದ್ದು ಸುರಿಯುತಲೆ ನಡೆದು ಬಂದು ಕೃಷ್ಣನಡಿಗೆರಗಿಭಾಮೆ ನುಡಿದಳು೨
ಪೊಡವಿ ಪಾಲಿಪವಪ್ಪನೀ ನಡೆಮುಯ್ಯಕ್ಕೆನುತಲಿ ನುಡಿದಳು ಸತ್ಯಭಾಮೆ ಉಡಬೇಕು ವಸ್ತ್ರಂಗಳಇಡಬೇಕು ಭೂಷಣನಡೆ ಬೇಗ ಕೃಷ್ಣರಾಯ ೩
ಚಂದ್ರವದನೆಯರ ಮುಯ್ಯಇಂದೇ ತಿರುಗಿಸಬೇಕಮಂದರೋದ್ದರ ಮಾಧವ ಸಿಂಧೂಶಯನ ನೀನು ಬಂದರೆಮುಯ್ಯಕ್ಕೆ ಛಸ್ಂದ ತೋರುವುದೆಂದರು ೪
ನೀಲ ಮೊದಲಾದ ಬಾಲೆಯರು ರಂಗಗೆ ಮೇಲೆ ಮೇಲೆ ವಂದಿಸಿ ಶ್ರೀಲೋಲ ರಾಮೇಶ ನೀಆಲಸ್ಯ ಮಾಡದೆ ಪಾಲಿಸಬೇಕೆಂದರು೫

೨೬೧
ಆನಂದ ಭರಿತರಾಗಿ ಆಚಾರ್ಯರು
ಆನಂದ ಭರಿತರಾಗಿ
ಕುಂದಣ ರತ್ನ ದೊಸ್ತ
ಚಂದದ ವಸ್ತ್ರ
ನಮಗೆ ಅಂದಣವ ಕೊಟ್ಟರು ಪ.
ವ್ಯಾಲಾಶಯನನ ಕಥೆ
ಕೇಳುತ ಬೆಳತನಕ
ಭಾಳ ಹರುಷದಿಂದ
ಉಚಿತವ ಕೊಟ್ಟರು ೧
ಮುತ್ತು ಮಾಣಿಕದೊಸ್ತ
ಮತ್ತೆ ಕುದರಿಯ ಸಾಲು
ಛಸ್ತ್ರ ಚಾಮರ ನಮಗೆ
ಅರ್ಥಿಲೆ ಕೊಟ್ಟರು ೨
ಬರಿಯ ಮಾಣಿಕ ದೊಸ್ತ
ಜರದ ಪಟ್ಟಾವಳಿ ವಸ್ತ್ರ
ಹಿರಿಯರಿಗೆ ಮುತ್ತಿನ
ಸರಗಳ ಕೊಟ್ಟರು ೩
ಅಚ್ಚ ಮುತ್ತಿನ ವಸ್ತ
ಹೆಚ್ಚಿನ ಜರತಾರಿ ವಸ್ತ್ರ
ಹೆಚ್ಚಿನ ಕುದುರೆ ನಮಗೆ
ಉಚ್ಛವದಿ ಕೊಟ್ಟರು ೪
ರಮಿಯರಸನ ಕಥೆ
ತಮ್ಮ ಮನ ಉಬ್ಬಿ ಕೇಳಿ
ಅಮ್ಮ ರತ್ನದ ಕವಚ
ನಮಗೆ ಕೊಟ್ಟರು ೫

೧೭೯
ಆರತಿ ಮಾಡುವರು ಜನರು
ಮಾರುತನ ಪಿತಗೆ
ಕೀರುತಿ ಕೊಂಡಾಡುತಲೆ
ದ್ವಾರಕೆಯ ಅರಸಗೆ ಪ.
ಸುರೂಪಿಸೀರೆಯನುಟ್ಟು
ಥೋರ ಮುತ್ತನೆ ಕಟ್ಟಿ
ತೇರಿನಾರುತಿಯ
ಮುರಾರಿಯ ಮುಂದೆತ್ತುವರು೧
ರಂಜಿಸೊಸೀರೆಯನುಟ್ಟು
ಪಂಜರ ದ್ವಾಲೆನಿಟ್ಟು
ಕಂಜಾಕ್ಷ ಕೃಷ್ಣಗೆ
ನೀರಾಂಜನ ಎತ್ತಿದರು ೨
ನಾಲ್ಕು ಜನರ ದೃಷ್ಟಿ ಹರಿಗೆ
ತಾಕೀತೆಂದು ಕೆಲರು
ಓಕುಳಿ ನಿವಾಳಿಸುವರು
ಲೋಕನಾಯಕಗೆ ೩
ಕೃಷ್ಣರಾಯನ ಮುಖಕೆ
ದೃಷ್ಟಿ ನೆಟ್ಟೀತೆಂದು ಕೆಲರು
ಬಟ್ಟು ಮುತ್ತು ನಿವಾಳಿಸಿ
ಇಟ್ಟು ಕಸ್ತೂರಿ ಕಪ್ಪು ೪
ಮೇಲು ಮನೆಯು ಕದಳಿ ಕಂಬ
ಮ್ಯಾಲೆ ಹಂದರಗಳು
ಸಾಲು ಜಗಲಿ ತೋರಣ
ವಿಶಾಲ ಬೀದಿಯೊಳು ೫
ವ್ಯಾಳಾಶಯನಗೆ ನಿವಾಳಿಸಿ
ಬಾಳೆ ಹಣ್ಣು ಒಗೆದು
ನಾರಿಕೇಳ ನಿವಾಳಿಸಿ
ನಾಲ್ಕು ಕಡೆಗೆ ಒಗೆದು೬
ಸಾವಿರ ಅಂಗಡಿಗಳು
ಸಾಲು ಬೀದಿಯೊಳು
ಶ್ರೀಲೋಲ ರಾಮೇಶನ ಭಕ್ತರು ವಾಲೈಸುವರು ಹೀಗೆ೭

೧೫೫
ಆರು ಬಂದರು ಸಖಿ ತೇರಿನ ಬೀದಿಲೆಮಾರಜನಕನ ಸಾರುತ ಹೊಗಳುವರಾರೆ ಕರಿಪುರದಲಿ ಬಂದವರಾರೆ ಪ.
ದುಷ್ಟ ದೈತ್ಯರ ಶಿರವ ಕುಟ್ಟಿ ತಮಸ್ಸಿಗೆ ಹಾಕಿಅಟ್ಟಹಾಸದಿಂದ ಭೇರಿ ಘಟ್ಯಾಗಿ ಹೊಯಿಸುವರಾರೆ೧
ಕ್ರೂರ ದೈತ್ಯರ ಶಿರವ ಸೇರಿಸಿ ತಮಸ್ಸಿಗೆ ಭೋರೆಂಬೊ ತುತ್ತೂರಿ ಕಾಳಿ ಹಿಡಿಸುವರಾರೆ ೨
ವೆಂಕಟನ ದ್ವೇಷಿಗೆ ಸಂಕಟ ಬಿಡದೆಂದುಡಂಕರದಿಂದಲೆ ಡಂಕಿಯ ಹೊಯಿಸುವರಾರೆ ೩
ಖೂಳ ದೈತ್ಯರ ಶಿರವ ಸೀಳಿ ತಮಸಿಗೆ ಹಾಕಿಭಾಳಾ ರೌಸದಿಂದ ಕಾಳಿಯ ಹಿಡಿಸುವರಾರೆ೪
ಭಾಗವತರ ಸುಖ ಹೀಗೆ ಉನ್ನತ ಎಂದು ಈಗ ತೋರುತ ಭರದಿ ನಾಗಸ್ವರ ಹಿಡಿಸುವರಾರೆ೫
ಅಂಬುಜನಾಭನ ನಂಬಲು ಸುಖವಿತ್ತು ಬಂಬಂಬೆನುತ ಶಂಖವ ಸಂಭ್ರಮದಿ ಹಿಡಿಸುವರಾರೆ ೬
ಕೌಂಸಾರಿ ನಿರ್ಜರ ಹಂಸನೀ ಹೌದೆಂದು ಸಂಶಯ ಬಿಡಿಸುತ ಕಂಸಾಳೆ ಹೊಯ್ಸುವರಾರೆ೭
ಎಷ್ಟೆಷ್ಟು ಕಾಲಕ್ಕೂ ಕೃಷ್ಣಗೆ ದೊರೆ ಎಂದುಶ್ರೇಷ್ಠಾದ ಜಾಂಗುಟಿ ಫಟ್ಯಾಗಿ ಹೊಯಿಸುವರಾರೆ೮
ಕಬ್ಬು ಬಿಲ್ಲಿನಯ ಒಬ್ಬ ಜಗದೀಶನೆಂದುಅಬ್ಬರದಿ ಕರಣೆ ನಿರ್ಭಯದಿ ಹಿಡಿಸುವರಾರೆ೯
ಮಿತಿಯಿಲ್ಲದೆ ಶೃತಿ ಸಾರುವ ಮಧ್ವಮವ್ವೆ ಅಧಿಕವೆಂದು ಶೃತಿಯನೆ ಹಿಡಿಸುವರಾರೆ ೧೦
ತಂದೆ ರಾಮೇಶನ ಹೊಂದಲು ಸುಖವೆಂದು ಸುಂದರ ಕೊಳಲನೆ ಮುಂದೆ ಊದಿಸುವರಾರೆ ೧೧

೧೫೭
ಆರು ಬಣ್ಣಿಪರಮ್ಮಶ್ರೀ ಹರಿಯ ದ್ವಾರಕೆಯ ದೊರೆಯ ಪ.
ಆರು ಬಣ್ಣಿಪರಮ್ಮ ಶ್ರೀ ಹರಿಯ ನೀರ ಪೊಕ್ಕ ಭಾರ ಹೊತ್ತದೊರೆಯನೆತ್ತಿದ ಕರಳು ಕಿತ್ತಿದ ಚರಿಯ ಹೇಳ ಸಿರಿಯು ಸೋತಳು ೧
ಆರು ಬಣ್ಣಿಪರಮ್ಮ ಶ್ರೀ ಹರಿಯಮೂರು ಪಾದ ಬೇಡಿ ದೊರೆಯಭಾರ ಕೊಡಲಿ ಪೊತ್ತ ಹಿರಿಯ ನಾರಿ ತಂದ ಧೀರ ವರ್ಯ ೨
ಆರು ಬಣ್ಣಿಪರಮ್ಮ ಶ್ರೀ ಹರಿಯಕ್ರೂರ ಕಂಸನ ಕೊಂದ ಚರಿಯ ನಾರಿಯರ ವೃತವನಳಿದ ಪರಿಯಏರಿದ ರಾಮೇಶ ಕುದುರೆಯ೩

ದುರ್ಗಾದೇವಿಯ ರಮಣ ಭಾರ್ಗವಿರಾಮಗೆ
೩೭
ಆವ ಸುಕೃತವುಈ ನಾರಿಯರು ಈಪರಿ ಸುಖಿಸುವುದು ಪ.
ಪಂಕಜನಾಭಗೆ ಶಂಖೋದಕವೆತ್ತಿಅಂಕದಲ್ಲಿಹೊ ಲಕುಮಿಯಅಂಕದಲ್ಲಿಹೊ ಲಕುಮಿಯ ನಲ್ಲಗೆಅಸಂಖ್ಯಸ್ತೋತ್ರವನೆ ಸ್ತುತಿ ಸೋರು ೧
ದುರ್ಗಾದೇವಿಯ ರಮಣ ಭಾರ್ಗವಿರಾಮಗೆಶೀಘ್ರದಿ ಕೊಟ್ಟು ಕವಳವಶೀಘ್ರದಿ ಕೊಟ್ಟು ಕವಳವ ಗೋಗ್ರಾಸವಸ್ವರ್ಧುನಿ ಜನಕ ಕುಳಿತಾನೆ ೨
ರಂಗವಲ್ಲಿ ಹಾಕಿದ ಶೃಂಗಾರದ ಮನೆಯೊಳು ಬಂಗಾರದ ಮಣಿಯ ಹರಿವಾಣಬಂಗಾರದ ಮಣಿಯ ಹರಿವಾಣ ಇದ್ದಲ್ಲೆರಂಗಯ್ಯ ಬಂದು ಕುಳಿತಾನೆ ೩
ವೀತದೋಷನ ಮುಂದೆ ಮಾತಿನಮಧುರೆಯರು ಜಾತಿ ಮಾಣಿಕದ ಸಮೆಜಾತಿ ಮಾಣಿಕದ ಸಮೆ ತಂದಿಟ್ಟುಜ್ಯೋತಿಗಳ ಹಚ್ಚಿ ಎಡಬಲ ೪
ಮಂದಗಮನೆಯರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಎಲೆಯಲಿಇಂದಿರಾಪತಿಯ ಎಲೆಯಲಿ ಬಡಿಸೋರುಕುಂದದೆ ಕೊಟ್ಟ ಸೌಭಾಗ್ಯ೫
ಬಂದ ಜನರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಜೊತೆಯಾಗಿಇಂದಿರಾಪತಿಯ ಜೊತೆಯಾಗಿ ಊಟಕ್ಕೆಬಂದು ಕುಳಿತವರು ಕಡೆಯಿಲ್ಲ ೬
ಉಪ್ಪು ಉಪ್ಪಿನಕಾಯಿ ಹಪ್ಪಳ ಸಂಡಿಗೆಒಪ್ಪುವ ಬುತ್ತಿ ಕಲಸನ್ನಒಪ್ಪುವ ಬುತ್ತಿ ಕಲಸನ್ನ ಬಡಿಸೋರುಸುಪ್ಪಾಣಿ ಮುತ್ತು ಉದುರುತ೭
ಹೊನ್ನಹರಿವಾಣದಿ ಅನ್ನಭಕ್ಷ್ಯವ ತುಂಬಿಚೆನ್ನರಾಮೇಶನ ಎಡೆಯೊಳುಚೆನ್ನರಾಮೇಶನ ಎಡೆಯೊಳು ಬಡಿಸೋರುರನ್ನ ಮುತ್ತುಗಳು ಉದುರುತ೮

೧೮೩
ಇಂಥ ಮದಕದ ಬಾಲೆಯನಾಳುವರೆಂಥ ಧನ್ಯರೆ
ಆಗಿನ್ನೆಂಥ ಕವತುಕ ಕಂಡೆ ಅಮ್ಮಿನ ಎಂಥ ಅಂಜಿದೆವೆ ಪ.
ಉತ್ತಮಳು ದ್ರೌಪತಿ ಎಂದು
ಮತ್ತೆ ಎರಗಲು ಹೋದೆನಮ್ಮ
ಹತ್ತು ಪಾದ ಕಂಡು
ಕಣ್ಣು ಕತ್ತಲೆ ಹೊಯ್ದಾವೆ ಅಮ್ಮಿನ ೧
ಪಂಚಭಕ್ಷ ಪರಮಾನ್ನವನು
ಪಾಂಚಾಲಿ ಉಣಬಡಿಸಿದಳೆನಗೆ
ಪಂಚ ಹಸ್ತ ಕಂಡು
ಮನದಲೆ ಚಂಚಲಗೈಯ್ದೆನೆ ೨
ಅತ್ಯಂತ ಪ್ರೇಮದಲಿ ದ್ರೌಪತಿ
ವಸ್ತ್ರವೀಳ್ಯ ಕೊಟ್ಟಾಳೆನಗೆ
ಹತ್ತು ಹಸ್ತ ಕಂಡು
ಮೈಯ ಮರೆತೆನೆ ನಾನು ೩
ಬಾರಿ ಬಾರಿಗೆ ಬೆದರಿಬೆಚ್ಚಿ
ನಾರಿಯ ನೋಡಿದೆನೆ ನಾನು
ಸೂರ್ಯನಂತೆ ಹೊಳೆವೊ
ಐದುಮಾರಿ ಕಂಡೆನೆ೪
ಕೀರುತಿವಂತಳ ಮುಂದೆ
ವಾರ್ತೆಯ ಹೇಳುತಲಿದ್ದೆ
ಮಾರುತನ ರಾಣಿ
ಭಾರತಿಯು ಆದಳೆ ಅಮ್ಮಿನ್ ೫
ಶುಚಿರ್ಭೂತ ಗೌರಿಯ ಕಂಡು
ವಚನ ಪೇಳುತ ನಿಂತೆನಮ್ಮ
ರುಚಿರರೂಪ ಅಡಗಿ ಆಗ
ಶಚಿಯು ಆದಳೆ ಆಮ್ಮಿನ್ ೬
ಇಂದ್ರನರಸಿ ಅಡಗಿ ಶ್ಯಾಮಲೆ
ಬಂದು ನಿಂತಾಳಮ್ಮ ಕ್ಷಣದಿ
ಎಂದೂ ಕಾಣದ ಸೋಜಿಗ
ಒಂದೊಂದು ಕಂಡೆನೆ ಅಮ್ಮಿನ್೭
ನಿಂತ ಶ್ಯಾಮಲೆ ಅಡಗಿ ಉಷೆಯು
ಎಂಥ ಬೆಳಕನೆ ತೋರಿಸಿದಳಮ್ಮ
ಇಂಥ ಬೆಡಗು ರಾಮೇಶನ
ಕಾಂತೆ ಕೇಳಮ್ಮ ಅಮ್ಮಿನ್೮

೭೯
ಇಂದು ಭಕ್ತರು ಬಂದರೆಂದು ಗೋವಿಂದ ತಾ ನಲೆದಾಡಿದ ಗೋಪಾಲ ತಾ ನಲೆದಾಡಿದ ಪ.
ಹರಿಯು ಆಡಿದ ಮಾತು ದೊರೆ ಧರ್ಮನು ಕೇಳಿಕರುಣಾಳು ನಿಮ್ಮ ಕೃಪೆಯಿಂದ ಕರುಣಾಳು ನಿಮ್ಮ ಕೃಪೆಯಿಂದಪರಮ ಆಶೀರ್ವಾದ ಇರಲುಂಟು೧
ಮುತ್ತಿನ ಮಂಚದ ಹತ್ತಿಲೆ ಸಾಲಾಗಿಮತ್ತ ಪಾಂಡವರು ಕುಳಿತರುಮತ್ತ ಪಾಂಡವರು ಕುಳಿತರು ಹರುಷದಿಭಕ್ತವತ್ಸಲನ ಮುಖನೋಡಿ ೨
ಹಸಿರು ಪಚ್ಚವ ಬಿಗಿದ ಕುಸುರು ಸಿಂಹಾಸನದೇಶಕೆಲ್ಲ ಬೆಳಕು ಎಸೆಯುತದೇಶಕೆಲ್ಲ ಬೆಳಕು ಎಸೆವೊ ಸಿಂಹಾಸನದಿವಸುಧಿಪಾಲಕರು ಕುಳಿತರು ೩
ಇಂದ್ರಾದಿಗಳು ಮುನಿವೃಂದ ಸಹಿತಾಗಿ ಬಂದು ಒಂದೆ ಮನದಲೆ ಕುಳಿತರು ಒಂದೆ ಮನದಲೆ ಕುಳಿತರು ದೇವಕಿನಂದನ ನೋಡಿ ಹರುಷಾಗಿ ೪
ರನ್ನ ಮಾಣಿಕ ಬಿಗಿದ ಹೊನ್ನಮಂಚಕೆಹೊಂದಿ ಕನಿ ಸುಭದ್ರೆ ದ್ರೌಪದಿಕನಿ ಸುಭದ್ರೆ ದ್ರೌಪದಿ ಕುಳಿತರುಚನ್ನ ಕೃಷ್ಣಯ್ಯನ ಮುಖನೋಡಿ೫
ಚಿತ್ರ ವಿಚಿತ್ರದ ರತ್ನಗಂಬಳಿ ಮ್ಯಾಲೆಪುತ್ರರ ಸಹಿತ ಹರುಷದಿಪುತ್ರರ ಸಹಿತ ಹರುಷದಿ ಕುಳಿತರು ಭಕ್ತವತ್ಸಲನ ಮುಖ ನೋಡಿ ೬
ಸಾಲು ದೀವಿಗೆಯಂತೆ ಬಾಲೆಯರುಕುಳಿತಾರೆ ಬಾಲರ ಸಹಿತ ಹರುಷದಿಬಾಲರ ಸಹಿತ ಹರುಷದಿ ರುಕ್ಮಿಣಿ ನಿಂತಿಹಳು ಲೋಲ ರಾಮೇಶನ ಮುಖನೋಡಿ೭

೭೮
ಇಂದ್ರರೊ ದೇವೇಂದ್ರರೊಚಂದ್ರನಂತೆ ಹೊಳೆಯುತ ಬಂದರೈವರು ಪ.
ರಾಮ ಪಾಂಡವರಿಗೆ ಕ್ಷೇಮಾಲಿಂಗನಕೊಟ್ಟುಪ್ರೇಮದಿ ಕೈಯ ಹಿಡಿದನುಪ್ರೇಮದಿ ಕೈ ಹಿಡಿದು ಮಾತಾಡಿದಸ್ವಾಮಿ ಸನ್ನಿಧಿಗೆ ಬರಬೇಕು ೧
ನೊಸಲಲ್ಲೆ ಕಸ್ತೂರಿ ಎಸೆವುತ ಸಂಪಿಗೆಕುಸುಮದ ಮಾಲೆ ಅಲವುತ ಕುಸುಮದ ಮಾಲೆ ಅಲವುತ ಪ್ರದ್ಯುಮ್ನವಸುಧಿಪಾಲಕರ ಕರೆದನು೨
ದುಂಡು ಮುತ್ತುಗಳಿಟ್ಟು ಪೆಂಡೆ ಸರ ಹಾಕಿಪುಂಡರೀಕಾಕ್ಷ ಕುಳಿತಿದ್ದಪುಂಡರೀಕಾಕ್ಷ ಕುಳಿತಿದ್ದ ಚರಣಕ್ಕೆಪಾಂಡವರು ಬಂದು ಎರಗಿದರು೩
ರನ್ನ ಮಾಣಿಕ ಬಿಗಿದ ಹೊನ್ನ ಮಂಚದ ಮೇಲೆ ಪನ್ನಂಗಶಯನ ಕುಳಿತಿದ್ದಪನ್ನಂಗಶಯನ ಕುಳಿತಿದ್ದ ಚರಣಕ್ಕೆಸುಭದ್ರೆ ಬಂದು ಎರಗಿದಳು ೪
ಮಿಂಚಿನಂತೆ ಹೊಳೆಯುತ ಪಂಚಬಾಣನಪಿತ ಮಂಚದ ಮೇಲೆ ಕುಳಿತಿದ್ದಮಂಚದ ಮೇಲೆ ಕುಳಿತಿದ್ದ ಚರಣಕ್ಕೆಪಾಂಚಾಲೆ ಬಂದು ಎರಗಿದಳು೫
ಸೂಸು ಮಲ್ಲಿಗೆ ಹೂವ ಹಾಸಿದ ಮಂಚದಿವಾಸುಕಿಶಯನ ಕುಳಿತಿದ್ದವಾಸುಕಿಶಯನ ಕುಳಿತಿದ್ದ ಚರಣಕ್ಕೆಆಶೇಷ ಜನರೆಲ್ಲ ಎರಗಿದರು೬
ಸ್ವಾಮಿ ರಾಮೇಶನು ಕ್ಷೇಮ ಕುಶಲವ ಕೇಳಿಬ್ರಾಹ್ಮಣರ ದಯವು ನಿಮಗುಂಟು ಬ್ರಾಹ್ಮಣರ ದಯವು ನಿಮಗುಂಟು ಎನುತಲೆಸ್ವಾಮಿ ಶ್ರೀಕೃಷ್ಣ ನುಡಿದನು೭

೨೧೫
ಇಲ್ಲೆ ಕರೆಯ ಬ್ಯಾಡ ಕ್ಷಲ್ಲಕರ ತಾಸು
ನಿಲ್ಲಿಸಿ ಹಾಸ್ಯ ಮಾಡಿ ಅಕ್ಕಯ್ಯ ಪ.
ನಲ್ಲೆ ದ್ರೌಪತಿ ನಿನ್ನ ನಿಲ್ಲಿಸಿದವಗುಣ
ಎಲ್ಲಮನಕೆತಾರೆ ಅಕ್ಕಯ್ಯ ೧
ವಂಚಕ ಗುಣದವರ ಮುಂಚೆ ನಿಲ್ಲಿಸಬೇಕು
ಪಾಂಚಾಲಿಬೇಡಿಕೊಂಬೆ ಅಕ್ಕಯ್ಯ ೨
ಬೂಟಕ ಗುಣದವರ ಪಾಟು ಬಡಿಸುವಿ ತಾಸ
ಕೋಟಿ ಜನರು ನೋಡ ಅಕ್ಕಯ್ಯ ೩
ಗರುವಿನ ಗೊಂಬೆಯರ ಹಿರಿಯತನ್ಹಾಂಗಿರಲಿ
ಕರವ ಮುಗಿಯೋಣವಂತೆ ನಾಳೆಗೆ ಅಕ್ಕಯ್ಯ ೪
ಕೃಷ್ಣನ ಮಡದಿಯರ ಶ್ರೇಷ್ಠತನ ಹಾಂಗಿರಲಿ
ಸಾಷ್ಟಾಂಗಕ್ಕೆರಗೋಣವಂತೆ ನಾಳಿಗೆ ಅಕ್ಕಯ್ಯ5
ನಿಂದಕರನ ತಾಸು ನಿಂದಿಸೋದುಚಿತ
ವಂದಿಸುವೆನು ನಿನಗೆ ಅಕ್ಕಯ್ಯ ೬
ಸಿರಿ ರಮಿ ಅರಸನು ಭರದಿ ನಗುವಂತೆ ಇವರ ಗರವು ಮುರಿಯಬೇಕು ಅಕ್ಕಯ್ಯ ೭

೨೦೨
ಇವ ಬಲು ಕಳ್ಳ ನಮ್ಮ ಮಾಧವ ಬಲು ಸುಳ್ಳ
ನವನವ ಗುಣಗಳ ಹಿಡಿಸಿದನ್ಹಳ್ಳ ಪ.
ನಿತ್ಯ ತೃಪ್ತನೆಂಬೊ ಸ್ತುತ್ಯಾರ್ಥ ನಿನ್ನ ಬಿಟ್ಟು
ಎತ್ತ ಹೋದವಯ್ಯ ನಮಘೇಳೊ ಯದುಪತಿ
ಎತ್ತ ಹೋದವಯ್ಯ ನಮಘೇಳೊ ಯದುಪತಿ
ತುತ್ತನ್ನ ನಿನಗೆ ಫನವೇನೊ ಯದುಪತಿ ೧
ಮುನ್ನಶಬರಿ ಎಂಜಲ ಪನ್ನಿ ಪಾವನ್ನೊ ನಿನಗೆ
ಅನಸ್ತಾವೆಂಬೊ ಶೃತಿಗಳು ಯದುಪತಿ
ಅನಸ್ತಾವೆಂಬೊ ಶೃತಿಗಳು ಹೊಗಳುತ ನಿನ್ನಲ್ಲೆ
ಹ್ಯಾಂಗ ಇರಬೇಕೊ ಯದುಪತಿ ೨
ಪಟ್ಟದ ರಾಣಿ ಲಕುಮಿ ಎಷ್ಟು ಗುಣವಂತಳಲ್ಲೊ
ಅಷ್ಟು ಭಾವದಲೆ ಚಲುವಳೊ ಯದುಪತಿ
ಅಷ್ಟು ಭಾವದಲೆ ಚಲುವಳೊಕುಬ್ಜಿಯಂಥ
ಸೊಟ್ಟ ಹೆಣ್ಣಿಗ್ಯಾಕೆ ಮನಸೋತೆಯ್ ಯದುಪತಿ ೩
ಎಷ್ಟು ಸೃಷ್ಟಿಯ ಮಾಡಿಪುಟ್ಟ ಲವಕುಶರ ಪಡೆದಿ
ಸೃಷ್ಟಿ ಮಾಡಿದ್ದು ಮರೆತೆನೊ ಯದುಪತಿ
ಸೃಷ್ಟಿ ಮಾಡಿದ್ದು ಮರೆತೆನೊ ನಾಭಿಯಲ್ಲಿ
ಪುಟ್ಟಿದ ಬೊಮ್ಮನಗುತಾನೊ ಯದುಪತಿ ೪
ರುದ್ರನ ಭಜನೆ ಮಾಡಿ ಪ್ರದ್ಯುಮ್ನನ ಪಡೆದಿ
ವಿದ್ವಜ್ಜನರೆಲ್ಲ ನಗುತಾರೊ ಯದುಪತಿ
ವಿದ್ವಜ್ಜನರೆಲ್ಲ ನಗುತಾರೊ ಶ್ರೀಧ ಶ್ರೀಧ
ವಿದ್ಯವನೆಲ್ಲ ಮರೆತೇನೋ ಯದುಪತಿ5
ಸ್ವರಮಣ ನೀನೆಂಬೊ ಸ್ವರ ಗೈವ ಶೃತಿಗಳು
ಹರಿದಾವನೊ ಜಲದೊಳು
ಹರಿದಾವನೊ ಜಲದೊಳು ಗೊಲ್ಲತಿಯರ ಬೆರೆದ
ಕಾರಣವ ನಮಗೆ ಹೇಳೊ ಯದುಪತಿ ೬
ಧೀರ ಗಂಭೀರನೆಂದು ಸಾರುವ ಶೃತಿಗಳು
ಹಾರಿದವೇನೊ ಮುಗಿಲಿಗೆ
ಹಾರಿದವೇನೊ ಮುಗಿಲಿಗೆ ರಮಿಯರಸುಪೋರತನವೆಂದು ನಗತಾರೊ ಯದುಪತಿ7

೧೫೦
ಇವರಲ್ಲೆ ನೀತಿ ರಾಮದೇವರ ಪ್ರೀತಿ ವಿದ್ಯಾಧಿಕರ ಮೂರ್ತಿ ಸತ್ಯ ಸಂಧರ ಕೀರ್ತಿ ಜಗದಲ್ಲಿ ಉದ್ಧರರ ಪ.
ಮಧ್ವರಾಯರು ಪದ್ಮನಾಭ ನರಹರಿ ತೀರ್ಥಶುದ್ಧ ಮಾಧವ ಅಕ್ಷೋಭ್ಯರ ರನ್ನದಶುದ್ಧ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ರನ್ನದ ೧
ಪ್ರಸಿದ್ಧ ಜಯತೀರ್ಥ ವಿದ್ಯಾಧಿವಾದಿ ಕವೀಂದ್ರವಾಗೀಶ ರಾಮಚಂದ್ರ ರನ್ನದ ವಾಗೀಶ ರಾಮಚಂದ್ರ ವಿದ್ಯಾನಿಧಿಗಳ ಪಾದ ಪದ್ಮವ ಮೊದಲೆ ಬಲಗೊಂಬೆ ರನ್ನದ ೨
ರಘುನಾಥ ರಘುವರ್ಯ ರಘೋತ್ತಮ ತೀರ್ಥರ ವೇದವ್ಯಾಸ ವಿದ್ಯಾಧೀಶರೆ ರನ್ನದ ವೇದವ್ಯಾಸ ವಿದ್ಯಾಧೀಶರ ಚರಣವ ಜಗದ ಗುರುಗಳನು ಬಲಗೊಂಬೆ೩
ಉತ್ತಮ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರ ರನ್ನದ ಸತ್ಯನಾಥರ ಚರಣವ ಭಕ್ತಿಂದ ಮೊದಲ ಬಲಗೊಂಬೆ ೪
ಸತ್ಯಾಭಿನವ ತೀರ್ಥ ಸತ್ಯಪೂರ್ಣ ತೀರ್ಥರಸತ್ಯವಿಜಯ ಸತ್ಯಪ್ರಿಯರ ರನ್ನದ ಸತ್ಯಪ್ರಿಯರ ಚರಣವ ಅತ್ಯಂತವಾಗಿ ಬಲಗೊಂಬೆ ೫
ಸತ್ಯಬೋಧ ಸತ್ಯಸಂಧ ಸತ್ಯವರಚಿತ್ತಶುದ್ಧಿಯಲೆ ಬಲಗೊಂಬೆಚಿತ್ತಶುದ್ಧಿಯಲೆ ಸಭೆಯೊಳುಸತ್ಯವಾಕ್ಯಗಳ ನುಡಿಸಲು ರನ್ನದ೬
ಸತ್ಯವರ್ಯರೆಂಬ ಉತ್ತಮ ಗುರುಗಳ ಹಸ್ತಕಮಲದಲೆ ನಮಿಸುವೆ ರನ್ನದ ಹಸ್ತಕಮಲದಲೆ ನಮಿಸುವೆ ಜಗದೊಳುಮೆರೆವ ಸತ್ಯಧರ್ಮರನು ಬಲಗೊಂಬೆ ೭
ಮಧ್ವರಾಯರ ಪಾದ ಪೊಂದಿದ್ದ ಗುರುಗಳು ವಿದ್ಯುಕ್ತದಿಂದ ಬಲಗೊಂಬೆ ರನ್ನದ ವಿದ್ಯುಕ್ತದಿಂದ ಬಲಗೊಂಬೆ ಅತ್ತಿಗೆಯರ ಗೆದ್ದು ದುಂಧುಭಿಯ ಹೊಯಿಸೇವ ರನ್ನದ ೮
ಯತಿ ಮುನಿರಾಯರು ಅತಿ ಭಕ್ತರಾಗಿದ್ದಅತಿಪ್ರಿಯರಾದ ಗುರುಗಳು ಅತಿ ಪ್ರಿಯರಾದ ರಾಮೇಶನ ಅತಿ ಭಕ್ತರ ಮೊದಲ ಬಲಗೊಂಬೆ ರನ್ನದ ೯

೨೮
ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ಪ.
ಹತ್ತೆಂಟು ಸಾಲಿನ ಬತ್ತಾಸದಂಗಡಿಭತ್ತದ ಅರಳು ಮೊದಲಾಗಿ ಏ ನಾರಿಭತ್ತದ ಅರಳು ಮೊದಲಾಗಿ ಏ ನಾರಿಸಕ್ಕರೆಯ ತಂದಿಟ್ಟು ಮಾರುವವರು ಕಡೆಯಿಲ್ಲ ೧
ಕುಂಕುಮ ಅರಿಷಿಣ ಅಲಂಕಾರ ದ್ರವ್ಯವಅಂಕ ಅಂಕಣಕ ನೆರವ್ಯಾವ ಏನಾರಿ ಅಂಕ ಅಂಕಣಕ ನೆರವ್ಯಾವ ಬೆಲೆ ಮಾಡೊಕಂಕಣದ ಕೈಯ ಕೆಲದೆಯರು ಕಡೆಯಲ್ಲಾ ಏ ನಾರಿ ೨
ಬುಕಿಟ್ಟು ಪರಿಮಳ ದ್ರವ್ಯ ಪೊಟ್ಟಣ ಕಟ್ಟಿತರಹತರಹ ಏ ನಾರಿಪೊಟ್ಟಣವ ಕಟ್ಟಿ ತರಹತರದ ದ್ರವ್ಯವ ಕೊಟ್ಟು ಕೊಂಬುವರು ಕಡೆಯಿಲ್ಲ ಏ ನಾರಿ೩
ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು ಸೂಜಿ ಮಲ್ಲಿಗೆ ಸರಗಳ ರಂಗನ ಪೂಜೆಗೊಯ್ವೊ ಪುರುಷರು ಏ ನಾರಿ೪
ನಾಲ್ಕು ದಿಕ್ಕಿಗೆ ದಿವ್ಯ ಆಕಳ ಹಿಂಡುಗಳು ಸಾಕುವ ಎರಳೆ ಎಳಿಗಾವು ಏ ನಾರಿಸಾಕುವ ಎರಳೆ ಎಳಿಗಾವು ಹೂಂಕರಿಸಿ ಬಾಹೋ ಚಲ್ವಿಕೆಯ ಏ ನಾರಿ ೫
ಎತ್ತೆತ್ತ ನೋಡಿದರೂ ಮುತ್ತಿನ ಪಲ್ಲಕ್ಕಿಉತ್ತಮ ರಥವ ಹಿಡಿದೇಜಿ ಏ ನಾರಿಉತ್ತಮ ರಥವ ಹಿಡಿದೇಜಿ ಮ್ಯಾಲಿನ್ನು ಹತ್ತಿ ಬಾಹುವರು ಕಡೆಯಿಲ್ಲ ಏ ನಾರಿ೬
ಬಾಜಾರದೊಳಗಿನ್ನು ರಾಜಸಿಂಹಾಸನ ರಾಜ ರಾಮೇಶ ಕುಳಿತಲ್ಲಿಯೆ ಏ ನಾರಿ ರಾಜ ರಾಮೇಶ ಕುಳಿತು ಪೂಜೆಗೊಂಬೊಮೂರ್ಜಗವು ಮುದದಿಂದ ಏ ನಾರಿ೭

೪೪
ಈ ಸುದ್ದಿ ಹೇಳಮ್ಮಇಂದಿರೇಶಗೆ ಹೋಗಿಶ್ರೀಶನ ತಂಗಿಯರು ಮುಯ್ಯಾಸೋಸಿಲೆ ತಂದರೆಂದು ಪ.
ಸತ್ಯ ಲೋಕದ ದೊರೆಯುತಾನು ಮತ್ತೆ ಪಾಂಡವರ ಕೂಡಿಅರ್ಥಿಲೆ ಬಂದು ಇಳಿದಾರೆಂದುಸತ್ಯಭಾಮೆಯ ರಮಣಗೆ ೧
ಸ್ವರ್ಗದರಸು ಭೀಮರಾಯನ ಅಗ್ರಜಅನುಜರ ಕೂಡಿ ಶೀಘ್ರದಿಬಂದಿಳಿದಾರೆಂದುರುಕ್ಮಿಣಿ ರಮಣಗೆ೨
ವೈವಸ್ವತನು ರಾಮೇಶನ ವೈಭವವ ನೋಡುವೆನೆಂದುತಾವಿಭವ ಸಹಿತ ಬಂದು ದೇವಾಧಿ ದೇವನ ಮುಂದೆ೩

ನಾರಿಯರಿಬ್ಬರ ಬಿಟ್ಟು ನೀರೊಳಡಗಿದ
೭೧
ಎಂಥ ಕೌತುಕವೆ ನಿಮ್ಮಿಬ್ಬರದೆಂಥ ಕೌತುಕವೆಎಂಥ ಕೌತುಕ ಚಿಂತಾಮಣಿಯ ನೋಡಿಸಂತೋಷ ವಾಗದೆ ಕಾಂತೆಯರುಕಾದುವ ಎಂಥ ಕೌತುಕವೆ ಪ.
ನಾರಿಯರಿಬ್ಬರ ಬಿಟ್ಟು ನೀರೊಳಡಗಿದಮಾರಿ ತೋರದಲೆ ನೆಲವನೆ ಮಾರಿ ತೋರದಲೆ ನೆಲವನೆ ಬಗಿದುಅತಿ ಕ್ರೂರನಾದರೂ ಬಿಡರೆಲೆ ಸಖಿಯೆ೧
ತಿರಕ ತಾಯಿಯಸುದ್ದಿ ಅರಿತವನಲ್ಲದೆದೊರೆತನ ಬಿಟ್ಟು ದನವನೆ ಕಾಯ್ದುದೊರೆತನ ಬಿಟ್ಟು ದನವ ಕಾಯ್ದರುನಿಮ್ಮ ಕರಕರೆ ಒಂದು ಬಿಡರೆಲೆ ಸಖಿಯೆ೨
ಬತ್ತಲಾಗಿ ಎನ್ನ ಹತ್ತಿಲೆ ನಿಲ್ಲೆಂದುಎತ್ತ ಓಡಲೆನುತ ಕುದುರೆಯಎತ್ತ ಓಡಲೆನುತ ಕುದುರೆ ಜಳಕಿಸಿಬೆನ್ಹತ್ತಿ ಕೊಂಡವನ ಬಿಡರೆಲೆ ಸಖಿಯೆ೩
ಪ್ರಳಯದಿ ಕಳವಳಿಸಿ ಕಳೆಯಲಾರೆನು ಕಾಲ ನಳಿನಾಕ್ಷಿ ಆಗ ನೆರವಾದಿನಳಿನಾಕ್ಷಿ ಆಗ ನೆರವಾದಿ ಉಪಕಾರ ಒಲಿದುಶ್ರೀಕೃಷ್ಣ ಮದುವ್ಯಾದ ಸಖಿಯೆ ೪
ಕುಂದುಗುಣಗಳೆಲ್ಲ ಮುಂದಕ್ಕೆ ತಾರದೆ ಹಿಂದಿನ ಉಪಕಾರ ಸ್ಮರಿಸುತ ಹಿಂದಿನ ಉಪಕಾರ ಸ್ಮರಿಸುತ ಅವಳು ಮುಂದೆ ಬೇಕೆಂದು ಮನಸೋತ ಸಖಿಯೆ೫
ಭಾವೆ ರುಕ್ಮಿಣಿ ನಿಮ್ಮ ಹೀನಗುಣನೋಡದೆಕಾಮನ ಪಿತನು ಕೈ ಹಿಡಿದ ಕಾಮನ ಪಿತನು ಕೈ ಹಿಡಿದ ಕಾರಣಭೂಮಂಡಲವೆಲ್ಲ ನಮಿಸಿತು ಸಖಿಯೆ ೬
ಅಷ್ಟು ಜನರೊಳು ಧಿಟ್ಟತನವ ಮಾಡಿಗಟ್ಯಾಗಿ ನೀನು ರಥವೇರಿಗಟ್ಯಾಗಿ ನೀನು ರಥವೇರಿ ಧೈರ್ಯದಿಕೃಷ್ಣನ ಬೆರೆದು ತೆರಳಿದಿ ಸಖಿಯೆ ೭
ಮುದ್ದು ರಾಮೇಶಗೆ ಕದ್ದು ಓಲೆಯ ಬರಿಯೆಹದ್ದು ವಾಹನನು ಎರಗಿದಹದ್ದು ವಾಹನನು ಎರಗಿದ ಕಾರಣವಿದ್ವಜ್ಜನರೆಲ್ಲ ನಮಿಸಿತು ಸಖಿಯೆ೮

೫೩
ಎಂಥ ಗರವು ನೋಡಮ್ಮಯ್ಯರುಕ್ಮಿಣಿಗೆಂಥ ಗರವು ನೋಡಮ್ಮಯ್ಯಕಂತುನಯ್ಯನ ಎನಗಂತ್ರವ ಮಾಡಿದ ಮಂತ್ರವ ಮಾಡಿದಳಮ್ಮಯ್ಯ ಪ.
ಹಿಡಿದ ವೀಳ್ಯವ ನಾನು ಕೊಡುವೊ ಸಮಯದಿಬಂದು ಕಿಡಿ ಹಾಕಿದಳು ನೋಡಮ್ಮಯ್ಯಭಾವೆ ಕಿಡಿಯ ಹಾಕಿದಳು ನೋಡಮ್ಮಯ್ಯ ಹುಡುಗೆ ವೀಳ್ಯಕೆ ಮುಖಕೊಡಬಹುದುಕೃಷ್ಣನು ಬಿಡನು ಇವಳದೇನಮ್ಮಯ್ಯಇಂಥ ಭಿಡೆಯು ಇವಳದೇನಮ್ಮಯ್ಯ ೧
ಶ್ರೀಧರನ ಪಾದದಲೆ ಮೋದ ಇಟ್ಟವಳಿಗೆಆದರವಿಲ್ಲ ನೋಡಮ್ಮಯ್ಯಏನೂ ಆದರವಿಲ್ಲ ನೋಡಮ್ಮಯ್ಯ ಕಾಡುತ ಕೊಟ್ಟ ವೀಳ್ಯವ ಮಾಧವಗೆಕೊಟ್ಟರೆ ಹೋದೀತು ಬುದ್ದಿ ನೋಡಮ್ಮಯ್ಯರುಕ್ಮಿಣಿಯಲ್ಲೆ ಹೋದೀತು ಬುದ್ಧಿ ನೋಡಮ್ಮಯ್ಯ ೨
ಥಾಟು ಥೀಟಿನ ಭಾವೆ ಮಾಟ ಮಾಡಿದಳೇನಮ್ಮಯ್ಯಬೂಟಕತನ ನೋಡಮ್ಮಯ್ಯಬೂಟಕಗುಣದವಳ ಕೂಟಕೆ ಮೆಚ್ಚಿದಹರಿಯ ಆಟವ ನೋಡಮ್ಮಯ್ಯಮರುಳಾಟವ ಹರಿಯ ನೋಡಮ್ಮಯ್ಯ೩
ಸೃಷ್ಟ್ಯಾದಿಕರ್ತಗೆ ಇಟ್ಟಳು ಮದ್ದಾನೆ ಧಿಟ್ಟತನವ ನೋಡಮ್ಮಯ್ಯರುಕ್ಮಿಣಿಯ ದಿಟ್ಟತನವ ನೋಡಮ್ಮಯ್ಯಎಷ್ಟು ಧೈರ್ಯವೆಂದು ಕೃಷ್ಣತಾ ಬೆರಗಾಗಿ ಬಿಟ್ಟನುವೀಳ್ಯವ ನೋಡಮ್ಮಯ್ಯ೪
ವಟಪತ್ರ ಶಾಯಿಗೆ ಕುಟಿಲ ಮಂತ್ರವಮಾಡೊ ಚಟುಲತನ ನೋಡಮ್ಮಯ್ಯ ಭಾವೆಯ ಚಟುಲತನವ ನೋಡಮ್ಮಯ್ಯಸಟಿಯಲ್ಲ ಇವಳೆದೆ ಕಠಿಣತಿಶಯವೆಂದು ಮಿಟಿಮಿಟಿ ನೋಡಿದನಮ್ಮಯ್ಯಕೃಷ್ಣ ಮಿಟಿಮಿಟ ನೋಡಿದನಮ್ಮಯ್ಯ ೫
ಭಾಳೆ ದಯಾಳು ಎಂದು ಹೇಳುವ ಶೃತಿಗಳುಕೇಳಿ ಆಟವು ನೋಡಮ್ಮಯ್ಯಹರಿಯ ಕೇಳಿ ಆಟವು ನೋಡಮ್ಮಯ್ಯಕಾಳ ಕೂಟವ ಕೈತಾಳವ ಹಿಡಿದಂತೆಆಳುವನಿವಳ ನೋಡಮ್ಮಯ್ಯಕೃಷ್ಣ ಆಳುವನಿವಳ ನೋಡಮ್ಮಯ್ಯ೬
ಸರ್ವದಾ ತನ್ನ ಕೂಡ ಇರಬೇಕೆಂದೆನುತಲಿಎರೆದಳು ತೈಲವ ನೋಡಮ್ಮಯ್ಯಹರಿಗೆ ಎರೆದಳು ತೈಲವಮ್ಮಯ್ಯಭರದಿ ಕೋಪಿಸಿ ಕಣ್ಣು ತೆರೆದು ನೋಡುವರೆನ್ನಧರಿಸಲಿನ್ನೆಷ್ಟು ನೋಡಮ್ಮಯ್ಯನಾ ಧರಿಸಲಿನ್ನೆಷ್ಟು ನೋಡಮ್ಮಯ್ಯ ೭
ಪುಂಡರೀಕಾಕ್ಷನ ಕೊಂಡಾಡಿ ಸುಖಿಸುವಹೆಂಡಿರು ಕಡಿಮೆಯೇನಮ್ಮಯ್ಯಹರಿಗೆ ಹೆಂಡಿರು ಕಡಿಮೆಯೇನಮ್ಮಯ್ಯಕೆಂಡವ ತುಂಬಿದ ಮಂಡಿ ತೋರಿಸಿದಂತೆಚಂಡಿಯನಾಳುವ ನಮ್ಮಯ್ಯಕೃಷ್ಣ ಚಂಡಿಯನಾಳುವ ನಮ್ಮಯ್ಯ೮
ಧಿಟ್ಟಿಯರಿಬ್ಬರು ಕೋಪ ಬಿಟ್ಟರೆ ಇವರಿಗೆಎಷ್ಟು ಒಲುಮೆ ನೋಡಮ್ಮಯ್ಯನಾ ಎಷ್ಟು ಒಲುಮೆ ನೋಡಮ್ಮಯ್ಯಧಿಟ್ಟ ರಾಮೇಶನಲೆ ಇಟ್ಟರೆ ಇವರಿಗೆಎಷ್ಟರೆ ಗರ್ವ ನೋಡಮ್ಮಯ್ಯಬೇಡಿದ್ದು ಎಷ್ಟರೆ ಗರ್ವ ನೋಡಮ್ಮಯ್ಯ ೯

೧೭೧
ಎಂಥ ಧರ್ಮರಾಯ ಸಂತೋಷ ಬಡಿಸುವ ಅನಂತ ಪ್ರಜರಿಗೆಲ್ಲ ಚಿಂತಾಮಣಿಯು ತಾಎಂಥ ಧರ್ಮರಾಯ ಇಂದಿವರಾಕ್ಷಿ ಪ.
ಒಡಹುಟ್ಟಿದವರೆಲ್ಲ ಬಿಡದೆ ಸೇವಿಸುವರು ಕಡುಭಕ್ತಿಯಿಂದಲೆ ನಡೆನುಡಿ ಬಿಡದೆ ೧
ಹರದೆಯರು ರಾಯಗೆ ಪರಿಪರಿ ಸೇವಿಸಿ ಎರಗೋರು ಕಾಲಕಾಲಕೆ ಪರಮ ಭಕ್ತಿಯಲಿ೨
ಭೃತ್ಯರು ರಾಯಗೆ ಅತ್ಯಂತ ಸೇವಿಸಿ ಚಿತ್ತವ ಹಿಡಿಯಲು ಉತ್ತಮನೆಂದು ೩
ದಾಸರು ರಾಯಗೆ ಸೋಸಿಲೆ ಸೇವಿಸಿಏಸೇಸು ಕಾಲಕ್ಕೆ ಈ ಸ್ವಾಮಿ ಬಯಸೋರು೪
ವಿಪ್ರರು ರಾಯಗೆ ಒಪ್ಪೋದು ದೊರೆತನ ತಪ್ಪದೆ ಇರಲೆಂದು ಗೌಪ್ಯದಿ ಜಪಿಸೋರು ೫
ಮಿಕ್ಕ ಜನರಿಗೆ ಸಕ್ಕರೆ ಹೇರಮ್ಮಲಕ್ಷ್ಮಿ ರಮಣಗೆ ಸಖ್ಯನು ರಾಯ ೬
ಎಲ್ಲ ಜನಕೆ ರಾಯಬೆಲ್ಲದ ಹೇರಮ್ಮಚಲ್ವ ರಾಮೇಶನ ನಲಿವಿನ ಮುಂದೆ ೭

೨೪
ಎಂಥ ನಗರ ಎಂಥನಗರ ನಿಂತು ವರ್ಣಿಸಬೇಕುಶ್ರೀಕಾಂತೆಯಿಂದ ಇಂತು ರಮಿಸುವುದು ಪ.
ಮುಂದಕ್ಕೆ ನೋಡಲು ಹೊಂದಿದ್ದ ಮನೆಗಳುಹಂದರದ ಜಗಲಿ ಸುಳಿಗೊಳಹಂದರದ ಜಗಲಿ ಸುಳಿಯೆಲಿ ಬೀದಿಯಲಿತುಂಬಿದ ಜನರು ಕಡೆಯಿಲ್ಲ ೧
ಅತ್ತಿತ್ತ ನೋಡಲು ಕಾಣುವ ಗೋಪುರಮುತ್ತಿನಂಗಡಿ ಎಡಬಲಮುತ್ತಿನಂಗಡಿ ಎಡಬಲ ನೋಡುತ ಕತ್ತೆತ್ತಿ ನೋಡಿದರೂ ಕಡೆಯಿಲ್ಲ ೨
ಕೋಗಿಲದ ಸ್ವರದಂತೆ ಮಕ್ಕಳ ಜೋಗುಳಹಾಡುತೆ ಮನೆ ಬಾಗಿಲ ಮುಂದೆಹಾಡುತೆ ಮನೆಮುಂದೆ ಮಕ್ಕಳಲಾಲಿ ಪಾಡುವರು ಕಡೆಯಿಲ್ಲ೩
ಸಾರಾಮೃತವುಳ್ಳ ಕ್ಷೀರ ನವನೀತ ಭಾರವ ವಹಿಸಿ ಕೆಲರುಭಾರವ ವಹಿಸಿ ಕೆಲರು ಅಲ್ಲಲ್ಲಿಸಾರಿ ಮಾರುವವರು ಕಡೆಯಿಲ್ಲ೪
ಹಸಿರು ಬಳೆತೊಟ್ಟು ಕುಸುರಿನ ಸಿಂಬೆಯಲಿಮೊಸರ ಗಡಿಗೆ ಎಸಗುತಮೊಸರ ಗಡಿಗೆ ಎಸಗುತ ಮಾರುವ ಬಿಸಜನೇತ್ರಿಯರು ಕಡೆಯಿಲ್ಲ ೫
ಬಿಳಿಯ ದಟ್ಟಿಯುಟ್ಟು ಸಣ್ಣ ಬುಟ್ಟಿಹೊತ್ತುಕಣ್ಣು ಕಜ್ಜಲದ ಕೆಲದೆಯರು ಕಣ್ಣು ಕಜ್ಜಲದ ಕೆಲದೆಯರು ಕೂಗುತಹಣ್ಣು ಮಾರುವವರು ಕಡೆಯಿಲ್ಲ ೬
ಅಮ್ಮಮ್ಮ ರಮಿಯರಸು ಒಮ್ಮೊಮ್ಮೆ ಬೀದಿಲೆಸುಮ್ಮನೆ ಸುಳಿವ ಯಮಕದಿಸುಮ್ಮನೆ ಸುಳಿವ ಯಮಕದಿ ಶ್ರೀಕೃಷ್ಣತನ್ನ ಭಕುತರನ ಸಲುಹಲಿ ೭

೩೪
ಎಂಥ ಸುಕೃತ ವಮ್ಮರಂಗನ ಕಾಂತೆಯರದಮ್ಮಅನಂತ ದೇಶಗಳು ಇವನಂತ ತಿಳಿಯವುಈ ಕಾಂತೆಯರುಒಲಿದರೆಂತು ಪೇಳಮ್ಮ ಪ.
ಪಟ್ಟಿ ಪಟ್ಟಾವಳಿ ಕೊಟ್ಟರು ರಂಗಗೆ ಇಟ್ಟರು ದಿವ್ಯ ಮುಕುಟವಇಟ್ಟರು ದಿವ್ಯ ಮುಕುಟ ಮುತ್ತಿನಹಾರ ಗಟ್ಟಿ ಕಂಕಣದ ಕೆಲದೆಯರು೧
ಕೇಶರ ಬೆರೆಸಿದ ಮೀಸಲ ಶ್ರೀಗಂಧವಶ್ರೀಶನ ಸತಿಯರು ಹಿಡಕೊಂಡುಶ್ರೀಶನ ಸತಿಯರು ಹಿಡಕೊಂಡುರಂಗಗೆ ಲೇಪಿಸೆವೆಂಬೊ ಭರದಿಂದ೨
ಸಾರ ತುಳಸಿಯು ಬೆರೆದ ಪಾರಿಜಾತದ ಮಾಲೆವಾರಿಜ ಮುಖಿಯರು ಹಿಡಕೊಂಡವಾರಿಜ ಮುಖಿಯರು ಹಿಡಕೊಂಡುರಂಗಗೆ ಏರಿಸೆವೆಂಬೊ ಭರದಿಂದ೩
ಪಚ್ಚಮಾಣಿಕ ಬಿಗಿದ ಹೆಚ್ಚಿನ ಸರಗಳುಮಚ್ಛನೇತ್ರಿಯರು ಹಿಡಕೊಂಡುಮಚ್ಛನೇತ್ರಿಯರು ಹಿಡಕೊಂಡುರಂಗಗೆ ಏರಿಸೆವೆಂಬೊ ಭರದಿಂದ೪
ಕೊರಳಲಿ ಸರಮಾಲೆ ಅರಳಿದ ಮುಖ ಕಮಲಎರಳೆ ನೋಟದಲಿ ಚಲುವನಎರಳೆ ನೋಟದಲಿ ಚಲುವ ಚನ್ನಿಗರಾಯನ ತರುವಳಿನೋಡಿ ಹರುಷಾಗಿ ೫
ಹಸ್ತದಿ ಹಣಿಮ್ಯಾಲೆ ಕಸ್ತೂರಿ ಬಟ್ಟಿಟ್ಟುಉತ್ತಮ ತಿಲಕ ರಚಿಸುತಉತ್ತಮ ತಿಲಕ ರಚಿಸುತರಂಗನ ಹತ್ತಿರ ನಿಂತ ಕೆಲವರು೬
ಇನ್ನೋರ್ವಳು ಬಂದು ಕನ್ನಡಿ ತೋರುತಕರ್ಣ ಕುಂಡಲವ ಸರಿಸುತಕರ್ಣ ಕುಂಡಲವ ಸರಿಸುತ ರಾಮೇಶನ ಚನ್ನಾಗಿ ನೋಡಿ ಸುಖಿಸುತ ೭

೨೪೨
ಎಂಥ ಸುಖ ಎಂಥ ಸುಖ ಎಂಥ ಸುಖವ
ಲಕ್ಷ್ಮಿಕಾಂತನ ಪೂಜಿಸಿ ಸಂತೋಷ ಪಡುವರು
ಕುಂತಿ ಮಕ್ಕಳು ಕೆಲದಿ ಪ.
ಜಾಳಿಗೆ ಮುತ್ತಿನ ಕವಚಭಾಳ ರತ್ನಗಳ ವಸ್ತ
ಏಳು ಲೋಕಗಳ ಬೆಳಗುವ
ಏಳು ಲೋಕಗಳ ಬೆಳಗುವ ಪೀತಾಂಬರ
ವ್ಯಾಳಾಶಯನಗೆ ದೊರೆಕೊಟ್ಟ1
ಸರಮುತ್ತು ಹೆಣಿಸಿದ ಬರಿಯ ಮಾಣಿಕದ ವಸ್ತ
ಧರೆಯೆಲ್ಲ ಬೆಳಗುವ ಪಟ್ಟಾವಳಿ
ಧರೆಯೆಲ್ಲ ಬೆಳಗುವ ಪಟ್ಟಾವಳಿ ಕುಪ್ಪುಸ
ನಾರಿ ರುಕ್ಮಿಣಿಗೆ ದೊರೆ ಕೊಟ್ಟ ೨
ಮುತ್ತು ಮಾಣಿಕ ರತ್ನ ತೆತ್ತಿಸಿದ ಆಭರಣ
ಹತ್ತು ದಿಕ್ಕುಗಳ ಬೆಳಗುವ
ಹತ್ತು ದಿಕ್ಕುಗಳ ಬೆಳಗುವ ಛಸ್ತ್ರ ಚಾಮರ
ಸತ್ಯಭಾಮೆಗೆ ದೊರೆಕೊಟ್ಟ ೩
ಆನೆ ಕುದುರೆಯ ಸಾಲು ಎಷ್ಟೋ ರಥಗಳು
ಮಾನದ ಕಾಲಾಳು ಮೊದಲಾಗಿ
ಮಾನದ ಕಾಲಾಳು ಮೊದಲಾಗಿ ಹರುಷದಿ
ಶ್ರೀನಿವಾಸಗೆ ದೊರೆಕೊಟ್ಟ ೪
ಕುದುರೆ ಪಲ್ಲಕ್ಕಿ ರಥಸಾಲು ಬಿರುದಿನ ನೌಬತ್ತು
ಛಸ್ತ್ರ ಚಾಮರವು ಮೊದಲಾದ
ಛಸ್ತ್ರ ಚಾಮರ ಮೊದಲಾದ ಉಚಿತವ
ಮುದದಿ ರುಕ್ಮಿಣಿಗೆ ದೊರೆ ಕೊಟ್ಟ ೫
ಸಾವಿರ ಅಬುಜ ಕುದರಿ ಸಾಲಾದ ರಥಗಳು
ಮ್ಯಾಲೆ ಪಲ್ಲಕ್ಕಿ ಮೊದಲಾಗಿ
ಮ್ಯಾಲೆ ಪಲ್ಲಕ್ಕಿ ಮೊದಲಾಗಿ ಛಸ್ತ್ರವ
ಸತ್ಯಭಾಮೆಗೆ ದೊರೆಕೊಟ್ಟ ೬
ದೊರೆಯು ಧರ್ಮನು ಹರಿಗೆ ಬಿರುದು ಬಿನ್ನಾಣಗಳ ಕೊಟ್ಟ
ಕರಗಳ ಮುಗಿದು ಶಿರಬಾಗಿ
ಕರಗಳ ಮುಗಿದು ಶಿರಬಾಗಿ ರಾಮೇಶನ
ಪರಮ ಪ್ರೀತಿ ಇರಲೆಂದು ೭

೯೦
ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ಪ.
ಸಣ್ಣ ಕೂಸಿದ್ದಾಗ ಇವನು ಸೂರ್ಯಗೆ ಹಣ್ಣೆಂದುಹಾರಿದ ಗಗನಕ್ಕೆ ತಾನು ಉಡ್ಡೀನ ಗೈದುನೀರಧಿಯ ದಾಟಿದನುಇವನ ಅಂಗದ ಕೋಮಲ ಬಣ್ಣ ವರ್ಣಿಸಲೇನು ೧
ಗಂಧಮಾದನ ಗಿರಿ ತಂದು ನೋಡಿ ಗಿರಿ ನಿಂದಲ್ಲೆ ಹಿಂದಕ್ಕೆ ಒಗೆದ ಈಡ್ಯಾಡಿಒಂದೊಂದು ಬೆಡಗವ ನೋಡಿನಮ್ಮ ಇಂದಿರೇಶನು ನಕ್ಕ ಕೌತುಕ ಮಾಡಿ ೨
ಹುಟ್ಟಿದಾಗ ಭೀಮ ಒಂದಿಷ್ಟು ಎತ್ತಿಪಟ್ಟನೆ ಬಿದ್ದು ಕೌತುಕ ಮಾಡಿದನೆಷ್ಟುಬೆಟ್ಟಗಳ ಒಡೆದು ಹಿಟ್ಟೆಟ್ಟುಇವನ ಅಂಗದ ಕೋಮಲ ವರ್ಣಿಸಲೆಷ್ಟು೩
ಖಂಡಗನ್ನವು ಗ್ರಾಸವಂತೆ ಅದು ಉಂಡು ಸಾಲದೆ ಭಿಕ್ಷೆ ಬೇಡಿದನಂತೆ ಕಂಡು ತಾನರಿಯಳು ಕಾಂತೆ ಇಂಥ ದಿಂಡ ಪುರುಷನ ಬೆರೆದಳು ಕಾಂತೆ೪
ಘನ್ನಗರಳ ಕುಡಿದನಂತೆ ಅದು ತನ್ನ ದೇಹವ ತಪಿಸುತಲಿದ್ದವರಂತೆಸನ್ಯಾಸ ಇವಗ್ಯಾಕೆ ಕಾಂತೆನಮ್ಮ ಚೆನ್ನ ರಾಮೇಶ ನೋಡಿನಕ್ಕನಂತೆ ೫

೧೮೦
ಎಂಥ ಸೊಗಸು ನೋಡ
ಚಿಂತಾಮಣಿಯು ಬಂದ
ಇನ್ನೆಂತಹದೆ ಮುಯ್ಯ ಹರಿಣಾಕ್ಷಿ
ಬಂದು ಎಂಥ ಸೊಗಸಿಲೆ ಕುಳಿತಾರೆ ಪ.
ಕುಂತಿ ಅರಮನೆಯೊಳು ಕಾಂತೆರುಕ್ಮಿಣಿ ಭಾವೆ
ಚಂದ್ರ ಕಾಂತಿಯಿಂದೊಪ್ಪ್ಪುತ ಕುಳಿತಾರೆ
ಕಾಂತಿಯಿಂದೊಪ್ಪುತ ಕುಳಿತಾರೆ ಪಾಂಡವರ
ಎಂಥ ಸುಕೃತವು ಫಲಿಸಿತು ೧
ಛತ್ರ ಹಿಡಿದವರೆಷ್ಟು ಚಾಮರ ಬೀಸುವರೆಷ್ಟು
ನರ್ತನ ಮಾಡುವವರೆಷ್ಟು
ನರ್ತನ ಮಾಡುವವರೆಷ್ಟು ಸಭೆಯೊಳು
ಕೀರ್ತನ ಮಾಡುವವರೆಷ್ಟು ೨
ಗಾಳಿ ಬೀಸುವವರೆಷ್ಟು ಬಹಳೇ ಹೊಗಳುವರೆಷ್ಟು
ಕೇಳೋ ರಾಮೇಶನ ಮಡದಿಯರ
ಕೇಳೋ ರಾಮೇಶನ ಮಡದಿಯರ ಮುಂದೆ ನಿಂತು ಹೇಳಿ ಕೊಂಬುವವರೆಷ್ಟು೩

೧೮೭
ಎತ್ತಿರೆ ಕೋಲ ಅರ್ಥಿಲೆ
ಕೆಲದೆಯರು ಸತ್ಯ ಕನ್ಯಳೆ ದ್ರೌಪತಿ ಎಂದು ಪ.
ಮತ್ತೆ ಅಭಿಮಾನಿಯೆಂದು ನಿತ್ಯ ಉತ್ಪತ್ತಿಯೆಂದು
ಸತ್ಯ ಕನ್ಯಳೆ ದ್ರೌಪತಿಯೆಂದು1
ಒಂದೇ ಮಂದಿರದಲ್ಲಿ ಪೊಂದಿದ್ದ ಜನರಂತೆ
ಅವರಿಂದ ಹೊರಗಾಗುವಳೆ ಜಾಣೆ ೨
ಧರ್ಮ ಶ್ಯಾಮಲೆ ಬೆರಿಯೆ ಅಮ್ಮ ದ್ರೌಪತಾದೇವಿ
ಸುಮ್ಮನಿಹಳೇ ಬಾರೆ ನೀರೆ ೩
ವನಜಾಕ್ಷಿ ಭೀಮ ಬರಲು ತನುಮನ ಸೂರೆಗೊಂಡು
ಘನ ಮಹಿಮನ ಬೆರೆಯೋಳೆ4
ಅರ್ಜುನ ಶಚಿಯು ಬೆರಿಯೆ ನಿರ್ಜರೋತ್ತಮಳು ತಾನು
ವರ್ಜಿಸಿ ಸುಖವ ದೂರಾಗಿಹೋಳು ೫
ಮತ್ತೆ ಸಹದೇವ ನಕುಲ ಪತ್ನಿಯ ಬೆರೆಯಲು
ಪ್ರತ್ಯಕ್ಷ ಇಹಳು ಚತುರಳು6
ಕಾಂತ ರಮಣನು ಕೇಳಿ ಸಂತೊಷ ಬಡಲು ಭಾಗ್ಯಸಂತಾನ ಕೊಡುವ ರಮಿ ಅರಸು7

೮೦
ಎಲೆ ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ.
ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ ೧
ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ೨
ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ೩
ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ ೪
ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ೫

೪೮
ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ವರ್ಣಿಸಿ ದೂತೆ ಪ.
ಗೆಜ್ಜೆ ಘಿಲ ಘಿಲಕೆಂದು ಬಂದಳು ದೂತೆಗುಜ್ಜಿ ದ್ರೌಪತಿಗೆರಗಿ ನಿಂತಳುನಮ್ಮ ಅರ್ಜುನಗೆ ಅತಿ ದಯವೆಂದಳು ನಿರ್ಜರೇಶನ ಕಂಡೆನೆಂದಳು೧
ಕಳಕಳಿಯ ಸೂಸುತ ತನ್ನ ಥಳ ಥಳ ಮುಖಕಮಲ ಹೊಳೆವುತದೂತೆನಳಿನ ತೋಳಿನ ವಸ್ತ ಝಳ ಝಳಿಸುತಬಂದು ಕುಳಿತಳೆ ಮಾತಿನ ಚಪಲೆ ೨
ನಡೆದು ಅಚ್ಯುತನಲ್ಲೆ ಹೋದೆಯಾ ಕೃಷ್ಣನ ಅಡಿಗೆರಗಿ ಮುಖ ನೋಡಿದೆಯನಯ ನುಡಿಯ ಮಾತುಗಳನೆ ಆಡಿದೆಯ ನಿಮ್ಮ ಒಡೆಯರ ಭಕುತಿ ಕೊಂಡಾಡಿದೆಯ ದೂತೆ ೩
ಶಾಂತ ಮೂರುತಿ ನಿನ್ನ ನೋಡಿದನೇನಐವರಿಗೆ ಅಂತಃಕರುಣ ಭಾಳ ಮಾಡಿದನೇನಎನ್ನ ಅಂತರಂಗದ ಮಾತು ನುಡಿದೆಯೇನಲಕ್ಷ್ಮಿಕಾಂತನ ಗುಣ ಕೊಂಡಾಡಿದೆಯ ದೂತೆ೪
ಎನ್ನ ದ್ರೌಪತಿ ಕಳುಹ್ಯಾಳೆಂದೇನೆ ಸ್ವಾಮಿನಿನ್ನ ಮಾತುಗಳ ಮನಕೆ ತಂದಾನೇನ ಕೃಷ್ಣ ಎನ್ನ ಪ್ರಾಣವು ಐವರದೆಂದನೇನಇನ್ನುದಯದ ಸುಗ್ಗಿ ಸುದ್ದಿ ತಂದೇನ ದೂತೆ ೫
ಭಾವೆ ರುಕ್ಮಿಣಿಪಾದ ನೋಡಿದೆಯ ನೀನುಭಾವ ಭಕುತಿಯಲಿ ವಂದನೆ ಮಾಡಿದೆಯ ನಿಮ್ಮ ಮೋಹ ದ್ರೌಪತಿಗಿರಲಂದೆಯ ಮುಯ್ಯಾ ತಾಹೊ ವಿಸ್ತಾರವ ಕೊಂಡಾಡಿದೆಯ ೬
ನೀಲವರ್ಣನ ಪಾದ ಕಂಡೆಯಘೃತ ಹಾಲು ಸಕ್ಕರೆ ಸವಿದುಂಡೆಯ ವಸ್ತ್ರ ವೀಳ್ಯ ರಾಮೇಶನಿಂದ ಕೊಂಡೆಯನಿನ್ನ ಕಣ್ಣು ಹಬ್ಬವ ಮಾಡಿಕೊಂಡೇನ ದೂತೆ ೭

ಮಾತೆಯ ಬಂಧನ ಕಡೆದ ಬಲು ಧೀರ
೧೦
ಎಲ್ಲರಿಗೊಂದಿಸಿ ಕರವ ಜೋಡಿಸಿ ಎಲ್ಲರಿಗೊಂದಿಸಿ ಪ.
ಎಲ್ಲರಿಗೊಂದಿಸಿ ಫುಲ್ಲನಾ¨ಸ್ನ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ.
ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ ೧
ಹದಿನಾಲ್ಕು ಲೋಕವ ಮುದದಿಂದ ಸೃಜಿಸಿದ ಪದ್ಮ ಸಂಭವನೆ ಪರಮೇಷ್ಠಿ ಪದ್ಮ ಸಂಭವನೆ ಪರಮೇಷ್ಠಿ ನಿನ್ನ ಪಾದ ಪದ್ಮವನೆ ಮೊದಲೆ ಬಲಗೊಂಬೆ೨
ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ ೩
ಹನುಮ ಭೀಮ ಮಧ್ವಮುನಿರಾಯಮಾರುತ ಘನಮಹಿಮಮಾರುತ ಘನಮಹಿಮ ಭಕ್ತ ವಿರಕ್ತನಿನ್ನ ಪಾದ ವನಜವ ಮೊದಲೆ ಬಲಗೊಂಬೆ೪
ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು೫
ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ೬
ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ೭
ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ ೮
ಸೌಪರಣಿ ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ೯

೨೩೨
ಎಲ್ಲೆಲ್ಲು ನೋಡಿದರು ಕೆಲದಿ
ರಂಗನ ಪಾಡಿನಲ್ಲೆಯರು
ಕೋಲ ಹಾಕೋರಮ್ಮ ಪ.
ಹಗಲು ಜ್ಯೋತಿಗಳು ಹೊಳೆವಂಥ ನಾರಿಯರ ಕೂಡ
ನಗಧರ ಬಂದು ನಿಂತಾನಮ್ಮ ೧
ಕೃಷ್ಣನರಸಿಯರು ನಿಂತಿರಲು ಸುರನಾರಿಯರೆಲ್ಲ
ಉತ್ಕ್ರಷ್ಟದಿ ಹಾಡಿ ಪಾಡೋರಮ್ಮ ೨
ರಂಗನರಸಿಯರು ನಿಂತಿರಲು ಅಂಬರದಿ
ಗಂಧರ್ವರು ಹಾಡಿ ಪಾಡೋರಮ್ಮ ೩
ನಕ್ಷತ್ರ ಮಾಲೆಯಂತೆ ಹೊಳೆವೊ ನಾರಿಯರ ಕೂಡ
ಲಕ್ಷÄಮಿರಮಣ ನಿಂತಾನಮ್ಮ4
ಚಂದ್ರ ಜ್ಯೋತಿಗಳು ಹೊಳೆವಂಥ ಯಾದವರ ಕೂಡ
ತಂದೆ ರಾಮೇಶ ನಿಂತಾನಮ್ಮ ೫

೮೧
ಎಷ್ಟು ಜಾಣಳೆ ಸುಭದ್ರಾ ಎಷ್ಟು ಜಾಣಳೆ ನಷ್ಟ ಮಾತು ನಿನ್ನದುನಾವು ಅಷ್ಟು ತಾಳಿಕೊಂಡೆವಲ್ಲ ಪ.
ಮಾನ್ಯ ಮಾನ್ಯರೊಳಗೆ ನೀನು ಕನಿ ರುಕ್ಮಿಣಿಗೆಧಿಕವಾಗಿಎನ್ನ ಹೀನ ನುಡಿದು ಹರಿಯ ನೀಬೆನ್ನ ಬಿದ್ದು ಬಂದುಕುಳಿತೆ೧
ಎಲ್ಲ ಜನರೊಳು ಎನಗೆ ಹೊಲ್ಲಮಾತಾಡಿ ಬಹಳೆಫುಲ್ಲನಾಭನ ಬದಿಲೆ ಬಂದು ಫುಲ್ಲ ಮಲ್ಲಿಗಿ ಹಾಂಗಕುಳಿತೆ೨
ಅಷ್ಟು ಜನರೊಳಗೆ ಎನಗೆ ನಿಷ್ಠುರವಾಡಿ ಬಹಳ ಕೃಷ್ಣರಾಯರ ಬದಿಲೆ ನೀನುಶ್ರೇಷ್ಠಳಾಗಿ ಬಂದು ಕುಳಿತಿ ೩
ನೋಡ ಬಂದ ಜನರೊಳಗೆ ಆಡಿಕೊಂಡಿ ಅಕ್ಕನ ಬಹಳ ಮೂಡಲಗಿರಿವಾಸಗೆ ಮಾರಿ ಬಾಡಧಾಂಗೆ ತೋರಿಕೊಂಡಿ ೪
ಮಾನ ಬಿಟ್ಟು ಮಂದಿಯೊಳಗೆ ನಾನಾ ಮಾತು ಎನಗೆ ಆಡದಿನೀನು ರಾಮೇಶನಂಫ್ರಿಯಲಿಮೌನ ದಿಂದ ಬಂದು ಕುಳಿತಿ ೫

೨೦೪
ಎಷ್ಟು ಬಡಿವಾರೊ ನಿನ್ನ
ಶ್ರೇಷ್ಠ ಸುಖಪೂರ್ಣ ಫನ್ನ
ಅಷ್ಟ ಗುಣವನು
ಅತಿಗಳದ್ಯೊ ಯಾದವರನ್ನ ಪ.
ಕುಕ್ಷಿಲೋಕನೆ ನಿನಗೆ ರಕ್ಷೆ ಇಟ್ಟಾಳೊ ಗೋಪಿ
ವಕ್ಷ ಸ್ಥಳದಲ್ಲಿಹ ಲಕುಮಿಯು
ವಕ್ಷ ಸ್ಥಳದಲ್ಲಿಹ ಲಕುಮಿಯು
ಬೆರಗಾಗಿ ವೀಕ್ಷಿಸುತಲಿ ನಗತಾಳೊ ೧
ಅಂಧಕಾರದಿ ಜಲವೃಂದದಿ ದುಡುಕಿಸಿ
ಒಂದೇ ಕೂಸಲ್ಲೊ ಪ್ರಳಯದಿ
ಒಂದೇ ಕೂಸಲ್ಲೊ ಪ್ರಳಯದಿ ರಕ್ಷವ
ತಂದು ಇಟ್ಟವರು ನಿನಗಾರೊ ೨
ಪುಟ್ಟ ಕೂಸೆಂದು ಸ್ತನ ಕೊಟ್ಟ ನಾರಿಯ ಕೊಂದೆ
ಇಷ್ಟು ಕರುಣೆ ನಿನಗಿಲ್ಲೊ
ಇಷ್ಟು ಕರುಣೆ ನಿನಗಿಲ್ಲೊ ದಯಾಬುದ್ದಿ
ಕೆÀಟ್ಟು ಹೋಯಿತೇನೊ ಪ್ರಳಯದಿ ೩
ಕೃಷ್ಣ ಕೃಷ್ಣ ಎನುತ ಬಿಟ್ಟಳು ಪ್ರಾಣವ
ದೃಷ್ಟಿಗೆ ಬೀಳೋದು ತಡವೇನೊ
ದೃಷ್ಟಿಗೆ ಬೀಳೋದು ತಡವೇನೊ ನಿನ್ನ
ವ್ಯಾಪ್ತಿ ಕೆಟ್ಟು ಹೋಯಿತೇನೊ ಪ್ರಳಯದಿ ೪
ಮಂದಮತಿಯರ ಗಂಡ ಮುಂದಕ್ಕೆ ಬಿಡಲೊಲ್ಲ
ಇಂದಿರಾ ಪತಿಯೆ ಗತಿಯೆಂದ
ಇಂದಿರಾ ಪತಿಯೆ ಗತಿಯೆಂದ ಭಕ್ತಳ
ಕೊಂದೆಯಲ್ಲೊ ಪಾಪ ಬರಲಿಲ್ಲ ೫
ಕಡಲಶಾಯಿ ನಿನ್ನ ಬೆಡಗು ಎಷ್ಟು ಹೇಳಲಿ
ಹಿಡ ಹಿಡಿದು ಲಾಳಿ ಕೊಡುವಾಗ
ಹಿಡ ಹಿಡಿದು ಲಾಳಿ ಕೊಡುವಾಗ ಗೊಲ್ಲರ
ಹುಡುಗರಿಗಿಂತ ಕಡೆಯೇನೊ ೬
ವೀರ ರಾಮೇಶ ನಿನ್ನ ಚಾರು ಗುಣಗಳನೆಲ್ಲ
ಸೂರಿ ಬಿಟ್ಟೇನೊ ಸುರರಿಗೆ
ಸೂರಿ ಬಿಟ್ಟೇನೊ ಸುರರಿಗೆ ನಿನಗಿನ್ನು ಯಾರೂ ಮನ್ನಿಸದ ಪರಿಯಂತ ೭

೩೨
ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ.
ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ ೧
ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ೨
ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ ೩
ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ ೪
ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ ೫
ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ ೬
ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ ೭

೨೯
ಎಷ್ಟು ಸಂಪದವಮ್ಮ ದ್ವಾರಕೆ ಎಂದು ಸಂತುಷ್ಟನಾದನು ಬೊಮ್ಮ ಕೃಷ್ಣನ ಹಾಡುತ ಪಾಡುತಜನರೆಲ್ಲ ಉತ್ರ‍ಕಷ್ಟರಾಗಿಹರಮ್ಮ ಪ.
ಪ್ಯಾಟಿಯ ಎದುರಾಗಿ ಕೋಟೆಬಾಗಿಲ ಕೋಟ ಸೂರ್ಯರ ಬೆಳಕಿಲೆ ಕೋಟ ಸೂರ್ಯನ ಬೆಳಕಿಲೆ ಹೊಳೆವಂಥಹಾಟಕಾಂಬರನ ಅರಮನೆ ೧
ರನ್ನದ ಬಾಗಿಲು ಚಿನ್ನದ ಚೌಕಟ್ಟುಹೊನ್ನ ಕಳಸಗಳು ಹೊಳೆವೋವೆಹೊನ್ನ ಕಳಸಗಳು ಹೊಳೆವೋವೆಇದು ನಮ್ಮ ಪನ್ನಗ ಶಯನನ ಅರಮನೆ೨
ಯೋಗಿ ಜನ ವಂದ್ಯ ಭಾಗವತ ಪ್ರಿಯಸಾಗರ ಶಯನನ ಅರಮನೆ ಸಾಗರ ಶಯನನ ಅರಮನೆಯ ಬಾಗಿಲೊಳು ಹೋಗಿ ಬರುವವರು ಕಡೆಯಿಲ್ಲ೩
ನಾಗಶಯನನ ಮನೆ ಬಾಗಿಲು ಮುಂದೆಸೋಂಗ್ಹಾಕಿ ನಿಂತ ಕೆಲವರುಸೋಂಗ್ಹಾಕಿ ನಿಂತ ಕೆಲವರು ಸಭೆಯೊಳು ಹೋಗಬೇಕೆಂಬೊ ಭರದಿಂದ ೪
ದಾಸರು ಬಗೆಬಗೆ ಸೋಸಿಲೆ ತಳವೂರಿಶ್ರೀಶ ರಾಮೇಶನ ಅರಮನೆ ಮುಂದೆಶ್ರೀಶ ರಾಮೇಶನ ಅರಮನೆ ಮುಂದಿನ್ನು ಕೂಸೆತ್ತಿಕೊಂಡು ನಿಂತ ಕೆಲವರು೫

೨೨೭
ಎಷ್ಟು ಸಾಹಸ ಬಟ್ಟಳಮ್ಮ ಧಿಟ್ಟೆ ರುಕ್ಮಿಣಿ
ಇಷ್ಟು ನಾರಿಯರೊಳಗೆ
ಶ್ರೀ ಕೃಷ್ಣ ತನಗೆ ಒಲಿಯಲೆಂದು ಪ.
ಮಂಚವಾಗಿ ಮನೆಯು ಆಗಿ
ಪಂಚರತ್ನದ ವಸ್ತಗಳಾಗಿ
ಮಿಂಚುದೀವಿಗೆ ಮಲ್ಲಿಗೆ
ಸಂಪಿಗೆ ಕೆಂಚಿತಾನಾಗಿ ೧
ಮಂದಗಮನೆ ಸಹವಾಸವ
ಒಂದೂ ಲೆಕ್ಕಿಸದಲೆ ಕೃಷ್ಣ
ಚಂದ್ರ ಸೂರ್ಯರ ಚದುರರ
ನಿರ್ಮಿಸಿ ಚಂದದಿ ತೋರಿದನೆ ೨
ವಟ ಪತ್ರಳು ತಾನಾಗಿ
ಚಟುಲ ಚಮತ್ಕಾರಿ ಯಾಗಿ
ಸಟಿಯಿಲ್ಲದೆ ರಾತ್ರಿ ಒಲವು
ಕುಟಿಲದಿ ತೋರಿದಳೆ ೩
ದೇಶ ಕಾಲ ತಾನಾಗಿ ರಾಮೇಶಗೆ
ತೋರಿದಳೆ ಕುಶಲ
ಲೇಸು ಲೆಕ್ಕಿಸದೆ
ಗುಣದ ರಾಶಿ ತೋರಿದಳೆ4

೧೮೯
ಎಷ್ಟು ಸುಕೃತದಿಂದ ಕಂಡಿಯೆ
ಮನೋಭಿಷ್ಟಗಳನೆ ಪಡೆದುಕೊಂಡಿಯೆ ದೂತೆ ಪ.
ಪಾದ ನೋಡಲು ಅತಿ ಪಾವನ
ಹಾಂಗೆ ಮೋದಭರಿತಳು ನೀ ಆದೆನೆ ದೂತೆ
ಸಾಧು ಜನರು ನಿನ್ನ ಸ್ವಾಧೀನ
ನಮ್ಮ ಮಾಧವ ಅನುದಿನ ಅಧೀನ ದೂತೆ ೧
ಕೆಂಚಿಹಸ್ತವ ನೀನು ಕಂಡಿಯೆ ಹ್ಯಾಂಗೆ
ಸಂಚಿತಾಗಾಮಿ ಕಳಕೊಂಡೆಯೆ
ದೂತೆ ಪಾಂಚಾಲಿದಯವ ಪಡಕೊಂಡಿಯೆ
ನಿನ್ನ ವಾಂಚಿತಾರ್ಥವ ಕೈಕೊಂಡಿಯೆ ದೂತೆ ೨
ಮುಖವ ನೋಡಲು ನಿಜ ಮುಕ್ತಿಯ ಹಾಗೆ
ಭಕ್ತಿ ಞೆನವು ವಿರಕ್ತಿಯೆ ದೂತೆ
ದಿವ್ಯ ಪ್ರಕೃತಿಯ ಗೆಲುವಂಥ ಶಕ್ತಿಯ
ನಮ್ಮ ಲಕುಮಿ ರಾಮೇಶ ಒಲಿಯೆ ಮುಕ್ತಿಯೆ ದೂತೆ ೩

೨೫
ಎಷ್ಟು ಸುಖವ ಕೃಷ್ಣನ ನೋಡಿನೋಡಿಸುಖಿಸುವ ಜನರು ಎಷ್ಷು ಎಷ್ಟು ಭಾಗ್ಯದಿಂದ ತುಷ್ಟರು ಉತ್ರ‍ಕಷ್ಟರಿವರು ಪ.
ಬಾಜಾರದೊಳಗೆಲ್ಲ ತೇಜಿ ಆನೆಯ ಸಾಲುಕಾಜಿನ ಕಂಬ ಕಿಡಕಿ ಕಮಲಾಕ್ಷಿಕಾಜಿನ ಕಂಬ ಕಿಡಕಿ ಮಹಲೊಳು ಜೂಜಾಡುವರು ಕಡೆಯಿಲ್ಲ ೧
ನೀಟಾದ ಬೀದೀಲಿ ಥಾಟಾದ ಮನೆಗಳುಮಾಟಾದ ಪಗಡಿ ಚದುರಂಗ ಕಮಲಾಕ್ಷಿಮಾಟಾದ ಪಗಡಿ ಚದುರಂಗ ಜೂಜಿನ ಆಟ ಆಡೋರು ಕಡೆಯಿಲ್ಲ೨
ಸಾಲು ಮನೆಗಳ ಬರೆದು ಮ್ಯಾಲೆ ವಡ್ಡಿಲೆಮೇಲು ಪಾಶಗಳ ಗೀಚುತಲಿ ಕಮಲಾಕ್ಷಿಮೇಲು ಪಾಶಗಳ ಗೀಚುತಲಿ ಆಡೋಬಾಲಿಕೆಯರ ಹಿಂಡು ಕಡೆಯಿಲ್ಲ ೩
ಲಿಂಬೆ ಪೊಪ್ಪುಳಿ ಸೀರೆಯನ್ನುಟ್ಟು ತುಂಬ ವಸ್ತ್ರಗಳಿಟ್ಟುಕಂಬು ಕಂದರನ ಪುರದೊಳು ಕಮಲಾಕ್ಷಿಕಂಬುಕಂದರನ ಪುರದ ಬೀದಿಯೊಳಗೆಗೊಂಬೆ ಯಾಡುವರು ಕಡೆಯಿಲ್ಲ ೪
ಮ್ಯಾಲಿನ ಬೀದೀಲಿ ಬಾಲಕಿಯರಿಂದೆಷ್ಟುಶ್ರೀಲೋಲ ರಾಮೇಶನ ಪುರದೊಳಗೆ ಕಮಲಾಕ್ಷಿಶ್ರೀಲೋಲ ರಾಮೇಶನ ಪುರದ ಬೀದಿಯೊಳಗೆ ಗೋಲಿಯಾಡುವರು ಕಡೆಯಿಲ್ಲ ೫

೨೩೭
ಎಷ್ಟು ಸೊಗಸು ಎಷ್ಟು ಸೊಗಸ
ಕೃಷ್ಣರಾಯರು ಕುಳಿತ ಸಭೆಯು
ಅಷ್ಟದಿಕ್ಕು ಬೆಳಗಿ
ಉತ್ಕ್ರಷ್ಟವಾಗಿ ತೋರುವುದಮ್ಮ ಪ.
ಚದುರೆ ರುಕ್ಮಿಣಿ ಭಾಮೆ
ಹದಿನಾರು ಸಾವಿರದ
ನೂರು ಸುದತೆಯರೊಪ್ಪುತಿಹರು
ಅದ್ಭುತವಾಗಿ ಸಖಿಯೆ ೧
ಜತ್ತಾದ ದೀವಿಗೆ ಎಷ್ಟು
ರತ್ನದ ಪ್ರಕಾಶ ಎಷ್ಟು
ಹಸ್ತಿಗಮನೆಯರ ಕಾಂತಿ
ಚಿತ್ತಹರಣಮಾಡುವುದಮ್ಮ ೨
ಭ್ರಾಂತಿಗೈದು ಮುಯ್ಯ ಮರೆದು
ನಿಂತು ಕುಳಿತು ನೋಡೋರೆಷ್ಟ
ಕಂತು ನೈಯನ ಸಭೆಯ
ಇಂಥ ಅಂದವ ಎಲ್ಲೆ ಕಾಣೆ3
ನಟ ನರ್ತಕರು ಎಷ್ಟು
ಚಟುಲ ಚಮತ್ಕಾರಿ ಎಷ್ಟು
ವಟ ಪತ್ರ ಶಾಯಿ ಕುಳಿತ
ಸಭೆಗೆ ಸಾಟಿ ಇಲ್ಲವಮ್ಮ4
ವೀರ ಪಾಂಡವರ ಪುಣ್ಯ
ಯಾರು ವರ್ಣಿಸಲೊಶವ
ಶ್ರೀರಾಮೇಶ ಒಪ್ಪುತಿಹನು
ಮೂರುಲೋಕ ಮಿಗಿಲಾಯಿತಮ್ಮ5

೪೯
ಎಷ್ಟೆಂದು ಹೇಳಲಮ್ಮಯ್ಯಕೃಷ್ಣನ ದಯವ ದಿಟ್ಟ ಪಾಂಡವರಲ್ಲೆಪ್ರಾಣ ಇಟ್ಟುಕೊಂಡಿ ಹನಮ್ಮ ಪ.
ನೀರಜಾಕ್ಷಗೆ ನಮಿಸಿ ವೀರರೈವರು ಮಹಾದ್ವಾರದಲ್ಲಿ ಹೋರೆಂದು ಸಾರಿ ಹೇಳಿದೆನಮ್ಮಮಾರನಯ್ಯನ ಪಿತನ ಮೋರೆ ನೋಡುತಲಿತೀವ್ರ ಕರೆತಾರೆ ಮುತ್ತಿನ ಹಾರ ನಿನಗೆ ಈವೆನೆಂದ೧
ಇಂದು ಮುಖಿಗೆ ನಾನು ವಂದಿಸಿ ಐವರು ಹೊರಗೆ ಬಂದಾರೆ ಹೀಗೆಂದೆ ನಮ್ಮಯ್ಯಮಂದಹಾಸನು ದಯದಿಂದ ನೋಡುತಲೆನ್ನತಂದು ತೋರಮ್ಮ ತೋಳಬಂದಿ ನಿನಗೀವೆನೆಂದ೨
ಪುಟ್ಟ್ಟಸುಭದ್ರೆ ಪಾಂಡವರ ಪಟ್ಟದರಾಣಿ ದ್ರೌಪತಿಅಷ್ಟೂರೂ ಬಂದಾರೆಂಬೊ ಉತ್ಕ್ರಷ್ಟ ಹೇಳಿದೆನಮ್ಮತುಷ್ಟನಾಗಿ ರಮಿಯರಸು ಥಟ್ಟನೆ ಕರೆತಾರೆಂದುಕೊಟ್ಟು ವೀಳ್ಯವ ದಯದ ವೃಷ್ಟಿಗರೆದನಮ್ಮ ೩

೧೫೨
ಏನು ಬೇಕಾದದ್ದು ಬೇಡ ಮಾನಿನಿ ಕಾಂತೆ ಶ್ರೀನಿವಾಸ ನಡೆದ ಕಾಮಧೇನುವಿನಂತೆ ಪ.
ಲಕ್ಷುಮಿ ರಮಣ ನಮಗೆ ಕಲ್ಪವೃಕ್ಷತಾನಂತೆಅಕ್ಷಯ ಸುಖವಿತ್ತು ಭಕ್ತರ ರಕ್ಷಿಪೋನಂತೆ೧
ಕಾಂತೆ ಕೃಷ್ಣರಾಯ ನಮಗೆ ಚಿಂತಾಮಣಿಯಂತೆಅನಂತ ಸುಖವ ವಿತ್ತು ಭಕ್ತರ ಸಂತೈಸುವನಂತೆ೨
ಇಂದು ಸಂಚಿತಾಗಾಮಿಯು ಹಿಂದಾದುವಂತೆ ತಂದೆ ರಾಮೇಶನ ಪಾದಕೆ ಹೊಂದಿವೆಯಂತೆ ೩

೧೬೯
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ.
ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ ೧
ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ ೨
ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ ೩
ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ ೪
ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ೫
ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ ೬
ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ ೭
ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರಎ್ಞÁನಿಗಳಿಗೆ ಕೊಡುವೊನೇನೆ ದೂತೆ ೮
ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ ೯
ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ ೧೦
ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ೧೧
ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ ೧೨
ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ೧೩

೧೦೬
ಒಂದು ಮಾತ ನಾಡೋಣು ಬಾರೆ ನಗುತಲಿಮಾತನಾಡೋಣು ಬಾರೆ ಪ್ರೀತಿ ಹರುಷದಿಂದ ನೀತಿಯಿಂದ ನಲಿದಾಡುತ ಪ.
ನೀಲಕುಂವ್ಳೆಯರು ವಾಲೆಬುಗುಡಿಯನಿಟ್ಟು ನೀಲ ಮಾಣಿಕದ ಸರಗಳು ನೀಲ ಮಾಣಿಕದ ಸರಗಳು ಸರಗಿಯನಿಟ್ಟುಬಾಲೆಯರು ಭಾಳೆ ಹರುಷದಿ೧
ಸೂರ್ಯರಾಗದ ಸೀರೆ ಸಾಲೆವಲಿಯ ಕುಪ್ಪುಸ ತೋರ ಮಾಣಿಕದ ನೆನಿದಂಡೆ ತೋರ ಮಾಣಿಕದ ನೆನಿದಂಡೆ ತಂದೇವ ನಾರಿರುಕ್ಮಿಣಿಯೆ ಉಡುಬಾರೆ೨
ಉದಯರಾಗದ ಸೀರೆ ಪದುಮರಾಗದ ಕುಪ್ಪಸ ಪದುಮದ್ಹೂವಿನ ನೆನೆದಂಡೆಪದುಮದ್ಹೂವಿನ ನೆನೆದಂಡೆ ತಂದೇವ ಪದುಮಾಕ್ಷಿ ಭಾವೆ ಉಡುಬಾರೆ ೩
ತುರಗ ತಾಪತಿ ಭೇರಿ ಬಿರುದಿನ ಹೆಗ್ಗಾಳೆಬರಿಯ ಮಾಣಿಕದ ರಥಗಳುಬರಿಯ ಮಾಣಿಕದ ರಥಗಳು ಅಂಬಾರಿ ಆನೆಹಿರಿಯ ರುಕ್ಮಿಣಿಗೆ ಉಚಿತವ ೪
ಛಸ್ತ್ರ ಚಾಮರ ದಿವ್ಯ ಮುತ್ತಿನ ಪಲ್ಲಕ್ಕಿಉತ್ತಮ ರಥವು ಹಿಡಿದೇಜಿಉತ್ತಮ ರಥವು ಹಿಡಿದೇಜಿ ರಾಮೇಶನ ಮಿತ್ರಿ ಭಾವೆಗೆ ಉಚಿತವ ೫

೧೯೯
ಒಂದು ಸಂಜೀವಿನಿ
ಕಿತ್ತಿ ತಂದ ಕಾಲದಲೆ
ಅಂಜಿಕೆ ಎಲ್ಲಡಗಿತ್ತೋ ಭೀಮ ಪ.
ಬೆಳೆದ ಬಾಲಕೆ ಖಳರು ಇಕ್ಕಲು ಬೆಂಕಿ
ಲಂಕೆಯಬೆಳಗಿ ಬಂದ
ಪುರುಷ ಬಿಡು ನಿನ್ನ ಸೋಂಗು ೧
ಹೊಡೆದು ಹಿಡಿಂಬೆಯ ಮಡುಹಿದ ಕಾಲಕ್ಕೆ
ಅಡಗಿತ್ತೆಲ್ಲೋ ಭೀತಿ
ಬಿಡು ನಿನ್ನ ಸೋಂಗು ೨
ಹೆದರಿಕಿದ್ದರೆ ಒಬ್ಬನೆ ಬದರಿಕಾಶ್ರಮಕೆ ಹೋಗಿ
ಚದುರ ರಾಮೇಶನಪಾದಗಳಿಗೆರಗೊ3

೮೯
ಒಳ್ಳೆವಾಜಿಯ ಕಲಿತಿದ್ದಿತಾಳೊ ಬುದ್ಧಿಲ್ಲ ಕೇಳೊಒಳ್ಳೆ ವಾಜಿಯ ಕಲಿತಿ ತಾಳೊಸುಳ್ಳು ಕೆಲಸವ ಹೇಳಿ ಸುಳಿಯುವಿ ನೆರೆಮನೆಯಚಲುವನರಿಯುತ ಚಲುವೆರಿಬ್ಬರ ಕುಚೋದ್ಯದಲಿ ಪ.
ಹೆಣ್ಣು ಕೊಟ್ಟವನಿಗೆ ಕಣ್ಣು ಕಾಣದು ಏನೊಇನ್ನೆಲ್ಲಿ ವರನ ಕಾಣದೆ ಇನ್ನೆಲ್ಲಿ ವರನ ಕಾಣದೆ ಇಂಥವಗೆಹೆಣ್ಣು ಕೊಟ್ಟವನು ಬಲು ಹೇಡಿ ೧
ಕೊಟ್ಟರೇನಾಯಿತು ಅಟ್ಟುಣಲು ಬಲ್ಲಹುಟ್ಟು ಗತಿಯಂತು ಮೊದಲಿಲ್ಲಹುಟ್ಟು ಗತಿಯಂತು ಮೊದಲಿಲ್ಲ ದಾನವಕೊಟ್ಟ ಬಲೀಂದ್ರ ಇದು ಬಲ್ಲ ೨
ಕುಲವಿಲ್ಲಗೋತ್ರವಿಲ್ಲ ನೆಲೆಯಿಲ್ಲ ಆಚಾರವಿಲ್ಲಬಲುದೈತ್ಯರೊಳು ಹಗೆಯಾದ ಬಲುದೈತ್ಯರೊಳು ಹಗೆಯಾದ ಇಂಥವಗೆ ಜಲನಿಧಿ ಮಗಳ ಕೊಡಬಹುದೆ ೩
ಮೂರು ಗುಣಗಳ ಮೀರಿದವ ನೀಚನೆನಿಸುವ ಇವನು ನೀಚನೆನಿಸುವಇವನ ಗುಣಯಾರು ಅರಿಯರು ಧರೆ ಮ್ಯಾಲೆ೪
ಹಾಲು ಕೆನೆಯ ಕದ್ದು ಬಾಲೆರೆಲ್ಲರಪೀಡಿಸಿಬಾಲನಾಗಿ ಒರಳ ಎಳೆಯುತಬಾಲನಾಗಿ ಒರಳ ಎಳೆಯುತಜನನಿಗೆ ಚಾಲವರೆದದ್ದು ಮರೆತೇನೊ೫
ಬೆಣ್ಣಿ ಮೊಸರು ಕದ್ದು ಹೆಣ್ಣುಮಕ್ಕಳ ಕಾಡಿಸಿ ಮುನ್ನ ತೊತ್ತಿನ ಮನೆಯಲ್ಲಿಮುನ್ನ ತೊತ್ತಿನ ಮನೆಯಲ್ಲಿ ಉಂಡುನೀ ಹೆಣ್ಣಾಗಿದ್ಯಲ್ಲೊ ರಮಿಯರಸು೬

೨೦೬
ಒಳ್ಳೆವೀರನೆಂಬೊ ಮಾತು ಸುಳ್ಳು ಕೃಷ್ಣರಾಯ
ಮೈಗಳ್ಳನೆಂದು ಕರೆಯೋರಲ್ಲೊ ಅಜರ್ಂನರಾಯ ಪ.
ವೀರ ಮಾಗಧ ಯುದ್ಧಕ್ಕೆ ಬಾರೆಂದು ಕರೆಯಲು ಅಂಜಿ
ನೀರೊಳಗೆ ಹೋಗಿ ಅಡಗಿದೆಯಲ್ಲೊ ಶ್ರೀಕೃಷ್ಣರಾಯ1
ಯುದ್ಧ ಮಾಡುವೆನೆಂದು ಸನ್ನದ್ದನಾಗಿ ಬಂದು ಅಂಜಿ
ಗುದ್ದು ಹೊಕ್ಕೆಯಲ್ಲೊ ನೀನು ಅರ್ಜುನರಾಯ ೨
ಜರಿಯ ಸುತನು ಯುದ್ದದಲ್ಲಿ ಕರಿಯೆ ಅಂಜಿಕೊಂಡು ನೀನು
ಗಿರಿಯಮರೆಯಲ್ಲಡಗಿದೆಲ್ಲೊ ಶ್ರೀ ಕೃಷ್ಣರಾಯ ೩
ಬಿಂಕದಿಂದ ಬಾಣ ಧರಿಸಿ ಶಂಕಿಸದೆ ಅಂಜಿ ಬಂದು
ಮಂಕು ಮನುಜರಂತೆ ನಿಂತ್ಯೊ ಅರ್ಜುನರಾಯ ೪
ದೊರೆಯು ಮಾಗದ ಯುದ್ದಕ್ಕೆ ಬಾರಂದು ಕರೆದರೆ ಅಂಜಿ
ವರಾಹನಾಗಿ ಓಡಿದೆಲ್ಲೊ ಶ್ರೀ ಕೃಷ್ಣರಾಯ ೫
ಪೊಡವಿರಾಯರೆಲ್ಲ ಒಂದಾಗಿ ಬಿಡದೆ ಯುದ್ಧಮಾಡೆನೆಂಬೊ
ಬಡಿವಾರವು ಎಷ್ಟು ನಿನಗೆ ಅರ್ಜುನರಾಯ6
ಬಿಲ್ಲು ಧರಿಸಿ ಮಾಗಧನು ಬಿಲ್ಲಿಗೆ ಬಾ ಎಂದು ಕರಿಯೆ
ಹಲ್ಲು ತೆರೆದು ಹೆದರಿಕೊಂಡ್ಯೊ ಶ್ರೀಕೃಷ್ಣರಾಯ7
ಸಿಟ್ಟಿನಿಂದ ಕರ್ಣ ಬಾಣ ಬಿಟ್ಟನಯ್ಯ ನಿನ್ನ ಮ್ಯಾಲೆ
ಕೊಟ್ಟಿಯಲ್ಲೊ ಮುಕುಟವನ್ನು ಅರ್ಜುನರಾಯ8
ಹಲವುರಾಯರೆಲ್ಲ ನಿನ್ನ ನೆಲಿಯುಗಾಣದಂತೆ ಮಾಡೆ
ಬಲಿಯ ಹೋಗಿ ಬೇಡಿದೆಲ್ಲೊ ಶ್ರೀ ಕೃಷ್ಣರಾಯ ೯
ಕರ್ಣನ ಬಾಣವು ನಿನ್ನ ಹರಣ ಮಾಡಲೆಂದು ಬರಲು
ಮರಣ ತಪ್ಪಿಸಿದೆನಲ್ಲೊ ನಾನು ಅರ್ಜುನರಾಯ ೧೦
ನಡವಕಟ್ಟಿ ವೈರಿಗಳ ಹೊಡೆಯಲಿಕ್ಕೆ ಅರಿವೊ ಕೃಷ್ಣ
ಕಡಿಯಲಿಕ್ಕೆ ಜಾಣನಯ್ಯ ಶ್ರೀ ಕೃಷ್ಣರಾಯ11
ಎಷ್ಟು ಗರ್ವದಿಂದ ದ್ವಿಜಗೆಕೊಟ್ಟೊ ಭಾಷೆ ಶಪಥ ಮಾಡಿ
ನಷ್ಟವಾಯಿತಲ್ಲೊ ವಚನ ಅರ್ಜುನರಾಯ12
ಎಲ್ಲ ವ್ಯಾಪ್ತಿ ಎಂಬೊ ಮಾತು ಎಲ್ಲಿದೆಯೊ ಈಗ
ನಿನ್ನವಲ್ಲಭೆಯ ಒಯ್ದನ್ಹ್ಯಾಂಗೊ ಶ್ರೀಕೃಷ್ಣರಾಯ ೧೩
ಧೀರಾಧೀರರೆಲ್ಲ ಕೂಡಿ ವೀರನೆಂದು ಪೊಗಳಲು
ನಾರಿಯ ಸೀರೆಯ ಹ್ಯಾಂಗ ಸೆಳಿದಾನಯ್ಯ ಅರ್ಜುನರಾಯ ೧೪
ಶಂಭರಾರಿ ಪಿತನೆ ನಿನ್ನಜಂಬವೆಷ್ಟು ಕದ್ದುಕೊಂಡು
ತಿಂಬೋದಕ್ಕೆ ಜಾಣನಯ್ಯ ಶ್ರೀಕೃಷ್ಣರಾಯ15
ಎಷ್ಟುಗರುವ ನಿಮ್ಮೆಲ್ಲರ ಅಷ್ಟಗುಣವ ನಾನ ಬಲ್ಲೆ
ಹೊಟ್ಟೆಬಾಕ ಭೀಮನಯ್ಯ ಅರ್ಜುನರಾಯ ೧೬
ಬತ್ತಲೆಂದು ನಗಲು ಜನರು ಮತ್ತೆನಾಚಿ ಕುದುರೆಯನ್ನು
ಹತ್ತಿಕೊಂಡು ಓಡಿದೆಲ್ಲೊ ಶ್ರೀ ಕೃಷ್ಣರಾಯ17
ವ್ಯರ್ಥಕೈಪ ಧರಿಸಿ ಕನ್ಯೆ ಎತ್ತಿಕೊಂಡು ಒಯ್ದಮ್ಯಾಲೆ
ಹತ್ತು ಜನರು ನಕ್ಕರಲ್ಲೊ ಅರ್ಜುನರಾಯ18
ಕೃಷ್ಣಾರ್ಜುನರ ಈ ಸಂವಾದ ಸಂತುಷ್ಟನಾಗಿ ರಮಿ ಅರಸು ಇಷ್ಟಾರ್ಥವ ಕೊಡಲಿ ನಮಗೆ ಶ್ರೀ ಕೃಷ್ಣರಾಯ ೧೯

೧೯೫
ಓಡಿ ಹೋಗುವರೇನೋ ಜಾಣ ಪಾರ್ಥ
ನೋಡಿ ಬಲ್ಲೆವೊ ನಿಮ್ಮ ತ್ರಾಣ ಪ.
ಹೆಣ್ಣುತನದಿ ಒಳಗೆ ಸೇರಿದಿ
ನಮ್ಮ ಕಣ್ಣಿಗೆ ಬೀಳದೆ ಹಾರಿದಿ
ಬಣ್ಣವ ಬಹಳ ಬಹಳ ತೋರಿದಿ
ನಮ್ಮಣ್ಣ ಬಲರಾಮನ ಇದುರಿಗೆ ಬಾರದೆ ೧
ಹೊಳೆವು ಎಷ್ಟು ಹೇಳಲೊ ನಿನ್ನ
ಶೌರ್ಯ ತಿಳಿದೀತು ಘನ ಮಹಿಮನ ಘನ
ಬಳೆಯ ನಿಟ್ಟಿದ್ದು ಮುನ್ನ
ಇಂಥ ಅಳಿಯ ದೊರೆತೆಲ್ಲೊರನ್ನ2
ಗಂಡಸಲ್ಲವೊ ಇಂಥ ಬಾಳು ನಿನಗೆ
ಗಾಂಡೀವಿಯಾತಕೆ ಹೇಳೊ
ಷಂಡನೆಂದರೆ ಇಂಥ ಬಾಳುವೆ
ನಾಚಿಕೊಂಡು ಬರಲಿಲ್ಲೇನೊ ಹೇಳೊ ೩
ಬಿಲ್ಲು ಕಂಡರೆ ನಿನಗೆ ಭೀತಿಯೆ
ಒಳ್ಳೆ ಚಲುವೆಯರ ಮ್ಯಾಲೆ ಅತಿ ಪ್ರೀತಿಯೊ
ನಲ್ಲ ಹೀನಳ ಬೆರೆದ ಖ್ಯಾತಿಯೊ
ಅದಕೆ ಇಲ್ಲೆ ಬರಲಿಲ್ಲಿಯೋ ಸೋತು ೪
ಏನು ಹೇಳಲಿ ಇಂಥ ನಿಂದ್ಯವ
ನಿನಗೆ ಮಾನಿನಿ ಹೆರಳೇನು ಚಂದ
ಧೇನಿಸಿ ನೋಡಲು ಕುಂದ
ಹಾಗೆ ತಾನು ರಾಮೇಶ ಅಂದ ೫

೧೯೬
ಕಂಡು ಅಂಜಿದೆವಯ್ಯ ವೆಂಕಟ
ನಿನ್ನ ಕಂಡು ಅಂಜಿದೆವಯ್ಯ
ಪುಂಡರಿಕಾಕ್ಷ ನಿನ್ನ ಸೊಂಡಿಲ ಮಾರಿ
ಸಾಲದೆ ವದನವ ಪ.
ಅಚ್ಯುತ ನಿನಗುಣ ಸ್ವಚ್ಚವೆಂದು ಬರಲು
ಮಚ್ಚ ಕೂರ್ಮ ಅತಿ ಹುಚ್ಚುರೂಪಗಳು ೧
ಮುರಲಿಧರ ನಿನಗೆ ಎರಗಲು ಬಂದರೆ
ಕ್ವಾರಿದಾಡಿಲುರಿಬಾಯಿ ತೆರೆದದ್ದು ನಾವು2
ಸುರತನೆಂದು ನಾವು ನಿರುತಲಿ ಬಂದರೆ
ತಿರಕ ಕೊಡಲಿ ಎತ್ತಿ ಕರಕರ ಬಡಿಸವ ೩
ಕೊಂಡಾಡೊ ಗುಣವಿಲ್ಲ ಹೆಂಡತಿಯನೆ ಒಲ್ಲಿ
ಬಂಡಿ ಮುರಿದು ಅತಿದಿಂಡೆ ಪುರುಷನ ೪
ಉತ್ತಮನೆ ರಮಿಯರಸು ಬತ್ತಲಿದ್ದ ಮ್ಯಾಲೆ
ಹತ್ತಿ ಕುದುರೆ ಕತ್ತಿ ಸುತ್ತ ಬೀಸುವನ5

೧೮೪
ಕಂಡು ಅಂಜುವರೇನ ದೂತೆ
ಪಾಂಡವರ ಅರಸಿಯ
ಭೂಮಂಡಲದ ಬಾಲೆಯರು
ಕಂಡರೆಂದು ಕೊಂಡಾಡಮ್ಮ ಪ.
ಉಮಾಶಚಿ ಶಾಮಲೆ ಉಷೆ
ಬೊಮ್ಮ ಶಪಿಸಲು ಅಂಜುತಲೆ
ಅಮ್ಮ ಭಾರತಿ ರತಿ
ಸಮ್ಮಿಸಿಟ್ಟಳಾ ದೇವತೆ ೧
ಇಂದು ಮಾರುತನ ರಾಣಿ
ಮುಂದಿನ ಕಲ್ಪದ ವಾಣಿ
ಸಂದೇಹ ಬ್ಯಾಡಮ್ಮ ಜಾಣೆ
ಇಂದರೇಶನ ಸೊಸೆಯು ಕಾಣೆ2
ಚಂದ್ರಕಾಳಿ ಇಂದ್ರಸೇನ ಬಂದು
ದ್ರೌಪತಿ ವಿಪ್ರಕನ್ಯ
ಒಂದೊಂದು ರೂಪಗಳೆ ರನ್ನ
ಚಂದ ಬಣ್ಣಿಪರಮ್ಮ ಆಕೆಯನ್ನು3
ಎಲ್ಲರ ನಡೆಒಂದೆ ಎಲ್ಲರ ನುಡಿ ಒಂದೆ
ದೇಹ ನಿಂದೆ ಎಲ್ಲರ
ಹೃದಯದಲಿ ನಿಂತ
ಎಲ್ಲರೊಲ್ಲಭನ ಹೊಂದು4
ಪರಮೇಷ್ಟಿ ಎಂಬ ದಾತಾ ಪರಮ
ಶಾಪ ಹೊಯ್ಸುತ ಶಿರಿರಾಮೇಶನ
ಭಕ್ತ ಮಾರುತ ಸುಖ ಅವರಿಗಿತ್ತ5

೩೩
ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ.
ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ ೧
ಛತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು ೨
ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು೩
ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ ೪
ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ ೫
ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು ೬
ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ೭

೧೯೦
ಕಂಡೆ ಗುಣಗಣ ಸಾಂದ್ರಳ
ಕೈಕೊಂಡೆ ಮುಕ್ತಿ ಫಲಗಳ ಪ.
ಶೃತಿ ತತಿಗಳಿಂದ ಯುಕ್ತಳ
ಲಕ್ಷ್ಮೀಪತಿಯ ದಯಕೆ ಪೂರ್ಣ ಪಾತ್ರಳ
ಅತಿ ಭಕ್ತಿಯಿಂದ ಯುಕ್ತಳ
ಮಧ್ವಮತಕ ಹಿತದಿಂದ ವ್ಯಾಪ್ತಳ1
ವ್ಯಾಳಾಶಯನನ ಭಕ್ತಳ ಗುಣ
ಹೇಳಿದೆಮ್ಮ ಸುಶಕ್ತಳೆ
ಏಳು ಲೋಕದಿ ವ್ಯಾಪ್ತಳ
ಕರುಣಾಳು ಎನಿಸುತಿಪ್ಪಳ2
ರಮಿಯ ರೂಪಳೆ ರುಕ್ಮಿಣಿಯ
ದಿವ್ಯ ಪ್ರಮೇಯ ತಿಳಿಸಿದೆ ಭಾಮಿನಿ
ಅಮಿತ ಮಹಿಮಳೆ ಕಾಮಿನಿ
ನಮಗೆ ಸುಮತಿದಾತಳೆ ಸುಗುಣಿ ನೀ3

೭೨
ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ಪರಹೆಂಡಿರು ಸಹಿತಾಗಿಗಂಡನ ಬೆರೆಯೋದು ಪ.
ಪಟ್ಟದರಸಿಗೆ ಸಿಟ್ಟು ತುಂಬಿಸಿ ಭಾಳ ಕುಟ್ಟಿ ಮೈದುನರ ಸವರಿಸಿಕುಟ್ಟಿ ಮೈದುನರ ಸವರಿಸಿ ದ್ರೌಪತಿಇಂಥವಳು ಹುಟ್ಟಬೇಕಿನ್ನು ಜಗದೊಳು ೧
ಗಂಡನ ಬಳಗವ ಚಂಡನಾಡಿಸಿ ಬಿಟ್ಟೆಪುಂಡಗಾರ್ತಿಯೆ ಜಗದೊಳುಪುಂಡಗಾರ್ತಿಯೆ ಜಗದೊಳು ನಿನಕೀರ್ತಿ ಕೊಂಡಾಡುತಾರೆ ದ್ರೌಪದಿ೨
ನೂರು ಮಂದಿಯ ಕೊಂದು ಊರು ಕೇರಿಯಪಡೆದುಯಾರ್ಯಾರನ್ನೆಲ್ಲ ಅಡವಿಗೆ ದ್ರೌಪದಿಯಾರ್ಯಾರನ್ನೆಲ್ಲ ಅಡವಿಗೆ ಅಟ್ಟಿದೆಮಹಾರಾಯಳೆ ನಿನಗೆ ಭಯ ಉಂಟೆ೩
ಜಾಣಿಯೆಂಬೊ ನುಡಿಯಿಂದ ವಾಣಿ ಜನಿಸಿಸುಶ್ರೇಣಿ ತಾತನ್ನು ದ್ರೌಪತಿಸುಶ್ರೇಣಿ ತಾತನ್ನು ಮದುವ್ಯಾದಿ ಇದಕಿನ್ನುಜಾಣಿಯರು ನಗರೆ ಜಗದೊಳು೪
ಎಂತೆಂಥ ಪತಿಗಳ ಎಂತೆಂತು ಮಾಡಿದೆಕೊಂಚರೆ ಭೀತಿ ನಿನಗಿಲ್ಲಕೊಂಚರೆ ಭೀತಿ ನಿನಗಿಲ್ಲ ಧರ್ಮನ ಶಾಂತ ಗುಣದಿಂದ ಉಳಿದಿದಿ ದ್ರೌಪತಿ೫
ಒಂದೊಂದು ನಿನ್ನ ಗುಣವು ಚಂದಾಗಿ ವರ್ಣಿಸಲುಎಂದಿಗೆ ವಶವ ಎಲೆನಾರಿಎಂದಿಗೆ ವಶವ ಎಲೆನಾರಿ ಐವರಿಗೆ ಕುಂದು ಬಂದೀತು ಬಿಡುಕಂಡೆ ದ್ರೌಪತಿ ೬
ಇಷ್ಟಮಿತ್ರರೊಳು ಉಟ್ಟ ಸೀರೆಯಸೆಳೆದುಒಟ್ಟಿದನಾಗ ಸಭೆಯೊಳು ಒಟ್ಟಿದನಾಗ ಸಭೆಯೊಳು ರಮಿಯರಸು ಧಿಟ್ಟಿ ನಿನಮಾನ ಉಳಿಸಿದ ದ್ರೌಪತಿ೭

೩೯
ಕಡಲಶಯನನ ಪುರದಿ ಬಡವ ರೊಬ್ಬರಿಲ್ಲಪಡೆಯಲಿ ಮುತ್ತು ಅಳೆದಳೆದು ಕೋಲಪಡೆಯಲಿ ಮುತ್ತು ಅಳೆದಳೆದು ರಂಗಯ್ಯಕೊಡವೋನು ದಾನ ಕಡೆಯಿಲ್ಲ ಕೋಲ ೧
ಚಿಂತಾಮಣಿ ಕಾಮಧೇನು ಕಲ್ಪತರು ಎಂಬೊಶ್ರೀಕಾಂತನ ಕೈದಾನಕ್ಕೊಳಗಾಗಿ ಕೋಲ ಶ್ರೀಕಾಂತನ ಕೈದಾನ ಕ್ಕೊಳಗಾಗಿ ಸ್ವರ್ಗದ ಅಂತಃ ಪುರದಲ್ಲಿ ಅಡಗಿದವು ಕೋಲ೨
ಒಂದಕ್ಕೊಂದು ತಾವು ನಿಂತು ಮಾತಾಡುತತಂದೆ ರಾಮೇಶನ ಅರಮನೆಗೆ ಕೋಲತಂದೆ ರಾಮೇಶನ ಅರಮನೆಗೆ ತಾವುಹೋಗೋದು ಛಸ್ಂದಲ್ಲವೆಂದು ಜರಿದಾವು ಕೋಲ೩

೭೦
ಕತ್ತಲೆಗಂಜುವುದೇನುಮೈದುನ ನಿನ್ನ ಬತ್ತಲೆ ಮಾಡಿದನ ಚಿತ್ತ ಸ್ವಸ್ಥ್ಯವಾದ ಚಪಲಾಕ್ಷಿ ನೀ ಇಂಥಕತ್ತಲೆಗಂಜುವುದೇನ ಪ.
ಪುನುಗಿನ ಪರಿಮಳ ಬಿನುಗು ಬೆಕ್ಕಿಗೆ ಉಂಟೆನಿನ್ನ ಮನದಿ ಪಾಂಡವರು ಸರಿಯೆಂದು ದ್ರೌಪತಿನಿನ್ನ ಮನದಿ ಪಾಂಡವರು ಸರಿಯೆಂದು ಕೈ ಹಿಡಿದಿಜನರೆಲ್ಲ ನಗರೆ ಜಗದೊಳು ದ್ರೌಪತಿ೧
ಗಿಳಿಯಂಥ ಕಳೆಯ ಹೊಳೆಯ ಬಲ್ಲುದೆ ಗುಬ್ಬಿತಿಳಿದು ನಿನ್ನ ಗರವು ಬಿಡು ಕಂಡ್ಯಾ ದ್ರೌಪತಿತಿಳಿದು ನಿನ್ನ ಗರವು ಬಿಡು ಕಂಡ್ಯಾ ಐವರೂ ಹಳಿದುಕೈ ಹೊಯಿದು ನಗರೇನ ದ್ರೌಪತಿ೨
ಆತುರವಾಗಿದ್ದ ಕೀಚಕನಿಗೆಮಾತು ಕೊಟ್ಟವನ ಮಡುಹಿದಿಮಾತು ಕೊಟ್ಟವನ ಮಡುಹಿದ ನಿನ್ನಂಥಫಾತಕಳುಂಟೆ ಜಗದೊಳು ದ್ರೌಪತಿ೩
ಮಾಯಗಾರುತಿ ಪತಿಯ ದಾಯದಾಟಕೆ ಹಚ್ಚಿಕಾಯದ ಕಾಂತಿ ಅಡಗಿಸಿಕಾಯದ ಕಾಂತಿ ಅಡಗಿಸಿ ಮೆರೆಸಿದಿಯಾವ ಕಚ್ಚೆತನ ಪರಿಯಲೆ ದ್ರೌಪತಿ೪
ಸೃಷ್ಟಿಕರ್ತನೆಂಬೊ ಧಿಟ್ಟ ಗಂಡನ ಒಯ್ದುಅಟ್ಟು ಹಾಕುವನ ಪರಿಯಲಿಅಟ್ಟು ಹಾಕುವನ ಪರಿಯಲಿ ಕೈಯೊಳುಹುಟ್ಟು ಕೊಟ್ಟವನ ಮೆರೆಸೀದಿ ದ್ರೌಪತಿ ೫
ಕಳೆಯ ಸುರಿಯುವ ಮುದ್ದು ಎಳೆಯ ಚನ್ನಿಗಪತಿಗೆಬಳೆಯನೆ ಇಡಿಸಿ ಜನರೊಳುಬಳೆಯನೆ ಇಡಿಸಿ ಜನರೊಳು ರೂಪವ ತಿಳಿಯದಂತವನ ತಿರುಗಿಸಿ ದ್ರೌಪತಿ ೬
ರಾಜಪುತ್ರನ ಒಯ್ದುತೇಜಿ ಕೆಲಸಕೆ ಇಟ್ಟಿಸೋಜಿಗವಲ್ಲ ಜನರೊಳು ಸೋಜಿಗವಲ್ಲ ಜನರೊಳು ರೂಪವಮಾಂಜುಕೊಂಡವನ ಮೆರೆಸಿದಿ ದ್ರೌಪತಿ೭
ಘನ ಗಂಭೀರನ ಒಯ್ದು ದನದ ಕೆಲಸಕೆ ಇಟ್ಟಿಜನರೆಲ್ಲ ನಗರೆ ಜಗದೊಳುಜನರೆಲ್ಲ ನಗರೆ ಜಗದೊಳು ದ್ರೌಪತಿಮನಬುದ್ಧಿ ಎಂದು ಬರಬೇಕು೮
ಅತಿ ಅಂತಃಕರಣಿ ಹಿತದ ಅಗ್ರಜನ ಒಯ್ದುರಥಿಕನ ಮಾಡಿ ಮೆರೆಸಿದಿ ದ್ರೌಪತಿರಥಿಕನ ಮಾಡಿ ಮೆರೆಸಿದಿ ರಾಮೇಶನ ಪತಿಗಳಭಿಮಾನ ಇರಲುಂಟೆ ದ್ರೌಪತಿ೯

೭೬
ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ಮಾತಿಗೆ ಇದುರೇನ ಎಲ್ಲ ನೀ ನೋಡ ಪ.
ಓಡಿ ಬಂದವಳೆಂದು ಆಡಿದೆ ನೀ ಎನಗೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಎಲೆ ನೋಡೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಸುಭದ್ರ ನೋಡಿಕೋನಿನ ಮನದಲ್ಲೆ ಎಲ್ಲ ನೋಡೆ೧
ಅಣ್ಣನ ವಂಚಿಸಿ ಓಡಿ ಬಂದವಳೆಂದುಎನ್ನನೆ ನುಡಿದೆ ಸುಭದ್ರಾ ಎಲೆ ನೋಡೆಎನ್ನನೆ ನುಡಿದೆ ಸುಭದ್ರಾನಿನ್ನಂತೆ ಸನ್ಯಾಸಿಯೊಡನೆ ಬರಲಿಲ್ಲ ಎಲ್ಲಿ ನೋಡೆ೨
ಅತ್ತೆಯ ಮಗಳೆಂದು ಹತ್ತೆಂಟು ತಾಳಿದೆ ಒಂದುತ್ತರ ನಿನಗೆ ಕೊಡತೇನ ಎಲೆ ನೋಡೆಒಂದುತ್ತರ ನಿನಗೆ ಕೊಡತೇನ ಸುಭದ್ರಾಚಿತ್ತಕ್ಕೆ ಹೋಗಿ ನಡುವಂತೆ ಎಲೆ ನೋಡೆ ೩
ಒಂದು ನುಡಿದು ಹನ್ನೊಂದು ನುಡಿಸಿಕೊಂಡೆಕುಂದದಂಥಸ್ವಳೆ ನಿನ್ನ ಬಣ್ಣ ಎಲೆ ನೋಡೆಕುಂದದಂಥಸ್ವಳೆ ನಿನ್ನ ಬಣ್ಣ ಸುಭದ್ರಾಬಂದದಾರಿ ಹಿಡಿದು ತಿರುಗಿ ಹೋಗೆ ೪
ಬಾಳುವರ ಮನೆ ಮುಂದೆ ಕೋಳಿ ಕೂಗಿದಂತೆವೀಳ್ಯವ ಕೊಟ್ಟು ಯಾತರಿಂದ ಎಲೆನೋಡೆವೀಳ್ಯವ ಕೊಟ್ಟು ಯಾತರಿಂದ ಹೊಡೆಸಿಕೊಂಡಿನಿಲ್ಲದೆ ಹೋಗೆ ಮನೆತನಕ ಎಲೆ ನೋಡೆ ೫
ಕುದುರೆಯ ಸಂಗಡ ಕುರಿ ಹುಲ್ಲು ಮೆಯ್ದರೆಕುದುರೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಕುದುರೆ ಹಿಂಗಾಲಿಲೆ ಒದೆಯದೆ ಸುಭದ್ರಾಸುದತೆ ರುಕ್ಮಿಣಿಗೆ ಸರಿಯೇನೆ ನೋಡೆ೬
ಆನೆಯ ಸಂಗಡ ಆಡು ಹುಲ್ಲು ಮೆಯ್ದೆರೆ ಆನೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಆನೆ ಹಿಂಗಾಲಿಲೆ ಒದೆಯದೆ ಸುಭದ್ರಾನೀ ರಾಮೇಶನ ಮಡದಿಯ ಸರಿಯೇನೆ ಎಲೆ ನೋಡೆ ೭

೨೧೬
ಕದ್ದು ಕಳ್ಳಿಯ್ಹಾಂಗ ಮುಯ್ಯ
ಮಧ್ಯರಾತ್ರಿಲೆ ತಂದ ಮ್ಯಾಲೆ ಬುದ್ಧಿವಂತಳೆ
ಸುಭದ್ರಾ ಬುದ್ದಿವಂತಳ ಪ.
ಮೂರುಸಂಜಿಯಲಿ ತರುವ ಮುಯ್ಯ
ಘೋರ ರಾತ್ರಿಯಲೆ ತಂದಮ್ಯಾಲೆ
ಚೋರಳೆಂದು ನಿನಗೆ ನಮ್ಮ
ಊರ ಜನರು ನಗತಾರಲ್ಲ ೧
ಒಳ್ಳೆ ಮಾನವಂತಿ ಆದ ನೀನು
ಕಳ್ಳರ ಕಾಲದಿ ಬಾಹೋರೇನ
ತಳ್ಳಿಕೋರಳೆಂದು ನಮ್ಮ
ಪಳ್ಳಿ ಜನರು ನಗತಾರಲ್ಲ2
ಬಹಳೆ ಜಾಣಳು ಆದರೆ ನೀನು
ಕಾಳರಾತ್ರಿಲಿ ಬಾಹೋರೇನ
ತಾಳ ತಾಳನಿನ್ನ ಕುಶಲ
ಹೇಳಲಿನ್ನ ಹುರುಳು ಇಲ್ಲ ೩
ಕತ್ತಲಲಿ ಒಬ್ಬ ದೈತ್ಯ
ಎತ್ತಿ ಒಯ್ದರೇನು ಮಾಡುವಿ
ಪಾರ್ಥ ರಾಯನ ಧರ್ಮದಿಂದ
ಮಿತ್ರಿ ಮಾನವ ಉಳಿಸಿಕೊಂಡಿ4
ಗಾಢ ರಾತ್ರಿಲೆ ಒಬ್ಬ ದೈತ್ಯ ಓಡಿಸಿ
ಒಯ್ದರೇನು ಮಾಡುವಿ
ಮಾಡೋರೇನ ಮೂರ್ಖತನವ
ಮೂಢಳೆಂದು ಜನರು ನಗರೆ ೫
ಸಂಧ್ಯಾಕಾಲದಿ ಮುಯ್ಯತಂದು
ನಿಂತೇವ ನಿನ್ನ ದ್ವಾರದಲ್ಲಿ
ಬಂದುನಮ್ಮನ ಕರೆಯಲಿಲ್ಲ
ಸಂದಿ ಹೋಗಿ ಸೇರೋರೇನ ೬
ನೀಲವರ್ಣನ ತಂಗಿಯರಿಗೆ
ಚಾಲವರಿದು ಕರೆದೆವಲ್ಲ
ಮೇಲುದಯದಿ ಬಂದರೆ ನೀನು
ಮೂಲೆಘೋಗಿ ಸೇರೋರೇನ ೭
ಭಾಮೆ ರುಕ್ಮಿಣಿ ದೇವಿಯರಿಗೆ
ಕಾಲಿಗೆರಗಿ ಕಲೆಯೋರೆಲ್ಲ
ಆಲಯಕೆ ಬಂದರೆ ನೀನು
ವ್ಯಾಲನಂತೆ ಅಡಗೋರೇನ ೮
ಕೃಷ್ಣರಾಯನ ತಂಗಿಯರೆಂಬೋದೆಷ್ಟ
ಗರುವ ಬಿಡಿಸಲುಬಂದೆವು
ಪಟ್ಟು ಮಾಡಿ ಬಿಡತೇವೀಗ
ಧಿಟ್ಟ ರಾಮೇಶ ನೋಡುವಿಯಂತೆ9

೯೫
ಕಮಲಾಲಯ ಕೈಹಿಡಿದೆನ್ನ ಪಾಲಿಸುಮುನ್ನ ಕರುಣ ಕಟಾಕ್ಷದಿ ಎನ್ನಕಮಲಾಲಯ ಪ
ಸ್ವಾಮಿ ಭೃತ್ಯನ್ಯಾಯ ಅರಿಯದೆ ನಾ ನಿನ್ನಪರವು ಪಾಮರನೆಂದು ನುಡಿದೆನು ಪರಮ ಪಾಮರನೆಂದು ನುಡಿದ ಅಪರಾಧವ ಸ್ವಾಮಿ ಚಿತ್ತದಲೆ ಹಿಡಿಬ್ಯಾಡ ೧
ಗುಣನಿಧಿ ನೀ ಎಂದು ಗುಣಕೆ ಕೀರ್ತನೆ ಗೈದೆಎಣಿಸದಿರೆನ್ನ ಅಪರಾಧಎಣಿಸದಿರೆನ್ನ ಅಪರಾಧ ಎನುತಲೆ ಮಣಿದು ಸಾಷ್ಟಾಂಗ ಕ್ಕೆರಗಿದಳು೨
ನಿನ್ನವರ ಅಪರಾಧ ಇನ್ನೇನು ನೋಡದೆಮನ್ನಿಸ ಬೇಕೊ ಕಮಲಾಕ್ಷಮನ್ನಿಸ ಬೇಕೊ ಕಮಲಾಕ್ಷ ಎನುತಲಿ ಕನಿದ್ರೌಪತಿ ನುಡಿದಳು೩
ಬಡನಡ ಬಳಕುತ ಕುಚಗಳಲ್ಲಾ ಡುತ ಮುಡಿದಿದ್ದ ಪುಷ್ಪ ಉದುರುತಮುಡಿದಿದ್ದ ಪುಷ್ಪ ಉದುರುತ ಸುಭದ್ರೆಅಣ್ಣನ ಅಡಿಗೆರಗಿದಳು೪
ಹೆಣ್ಣು ಕೊಟ್ಟ ಮ್ಯಾಲೆ ಹಿತವ ಚಿಂತಿಸಬೇಕು ಇನ್ನು ನುಡಿದಲ್ಲಿ ಫಲವೇನೊಇನ್ನು ನುಡಿದಲ್ಲಿ ಫಲವೇನೊ ಅಣ್ಣಯ್ಯಎನ್ನ ಮುಖವ ನೋಡಿ ಕರುಣಿಸೊ ೫
ಎನ್ನವ್ವ ಸುಭದ್ರಾ ಈ ನುಡಿನಿನಗ್ಯಾಕೆ ನೀನು ನಿಮ್ಮಿಂದ ನಿಮ್ಮವರುನೀನು ನಿಮ್ಮಿಂದ ನಿಮ್ಮವರಿಗೆ ಪ್ರಾಣವ ನಾನು ಕೊಡುವೆನು ೬
ಮೊದಲೆ ಅತ್ತೆಯ ಮಗ ಆದರದಿಂದ ನಿನ್ನ ಕೊಟ್ಟೆ ಹೆದರೋನೆ ಅವನು ನಮಗಿನ್ನುಹೆದರೋನೆ ಅವನು ನಮಗಿನ್ನು ಎನುತಲೆಮುದದಿ ರಾಮೇಶ ನುಡಿದನು೭

ಕರವೀರಪುರವ ಸೇರಿದಳು
೪೦
ಕರವೀರಪುರವ ಸೇರಿದಳು ಹದಿನಾರು ಸಾವಿರ ನಾರಿಯರ ಭಾಗ್ಯವ ನೋಡಿ ಸೇರಿದಳುಲಕುಮಿ ಜರಿದಾಳು ಪ.
ಶ್ರೀವೈಕುಂಠಕ್ಕೆ ಸರಿಯೆಂದು ದ್ವಾರಕೆಹರಿ ಬ್ರಹ್ಮ ಕೇಳಿ ಹರುಷಾಗಿಹರಿ ಬ್ರಹ್ಮ ಕೇಳಿ ಹರುಷಾಗಿ ತಮ್ಮ ತಮ್ಮಪುರದಿಂದ ಇಳಿದು ಬರುತಾರೆ ೧
ವೃಂದಾರಕರೆಲ್ಲ ಬಂದರು ದ್ವಾರಕೆಗೆ ಚಂದ್ರ ನೊಬ್ಬ ಬರಲಿಲ್ಲಚಂದ್ರ ತಾನೊಬ್ಬ ಬರಲಿಲ್ಲ ತನ್ನಕಾಂತಿ ಕುಂದೀತೆಂಬೊ ಭಯದಿಂದ೨
ಸಾರು ದೇವತೆಗಳು ದ್ವಾರಕೆಗೆ ಬರಲುಸೂರ್ಯ ತಾನೊಬ್ಬ ಬರಲಿಲ್ಲಸೂರ್ಯ ತಾನೊಬ್ಬ ಬರಲಿಲ್ಲ ತನ್ನತೇಜ ಕುಂದೀತೆಂಬೊ ಭಯದಿಂದ ೩
ಜಾಣ ನಾರದ ತಮ್ಮ ವೀಣೆ ನುಡಿಸುತ ವಾಣಿ ಮಾವನ ಸ್ತುತಿಸುತವಾಣಿ ಮಾವನ ಸ್ತುತಿಸುತ ತಾಒಂದು ಓಣಿಯ ಹಿಡಿದು ಬರುತಾನೆ೪
ವಶಿಷ್ಠ ಮೊದಲಾದ ಮಹಾಶಿಷ್ಠರು ಮುನಿಗಳು ತಮ್ಮ ಕೃಷ್ಣ್ಣಾಜಿನ ಕಾಷ್ಠ ಸಹಿತಾಗಿಕೃಷ್ಣ್ಣಾಜಿನ ಕಾಷ್ಠ ಸಹಿತಾಗಿ ಬಂದರು ಧಿಟ್ಟ ರಾಮೇಶನರಮನೆಗೆ ೫

೧೦೭
ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ.
ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ ೧
ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ೨
ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ ೩
ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ೪
ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ೫
ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ೬
ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ೭

೯೪
ಕಾಂತೆ ದ್ರೌಪತಾದೇವಿಗೆಂತು ಮರುಳಾದಿರಿಭ್ರಾಂತಿ ಹಿಡಿತೇನೊ ಏ ಹೀನ ಎಂಥ ನ್ಯಾಯವಯ್ಯಈ ಮಾತಿಗಿನ್ನೆಂತು ನಕುಲರಾಯ ಪ.
ಹೆಣ್ಣು ಮಕ್ಕಳು ಹೊಳೆವೋದುತಪ್ತ ಸುಣ್ಣದಂತೆ ತಿಳಿವೋದುಸಣ್ಣವರೆನೀವು ಅಣ್ಣನ ಮಡದಿಗೆ ಕಣ್ಣು ಹಾಕುವರೇನೊ ಏ ಹೀನಾ ೧
ಜಾತಿ ಮಾಣಿಕ ಮಾಲೆ ಕೊಡಲು ತಂದು ಕೋತಿ ರಾಜನ ಕೈಲಿಚಾತುರ್ಯದ್ವಸ್ತವು ನೀತಿಲೆ ಹಿಡಕೊಂಡುಆತುರ ಮಾಡಿದಂತೆ ನಿಮ್ಮಂತೆ೨
ನಕುಲರಾಯನೆ ಕೇಳೊಸುಂದರಿಯಲ್ಲೆ ಕಕುಲಾತÉ ಭಾಳೊಸುಖಚಂದ್ರವದನಳೆ ಸಕಲರು ಬೆರೆಯಲು ನಕಲಿ ಆಯಿತು ಕಾಣೊನಿನ್ನಾಣೆ ೩
ಅದ್ಬುತ ಮಹಿಮಳೊ ಧರ್ಮರಾಯಗೆಮುದದಿಕೊಟ್ಟರು ಕೇಳೊಅದ ತಾಳಲಾರದೆ ಇದು ನಿಮಗೈವರುಸುದತಿಯ ಬೆರೆಯುವರೇನೊ ಏ ಹೀನ೪
ಅತಿ ಪತಿವ್ರತೆಯಳೊ ಬ್ರಹ್ಮಗೆ ಮುಂದೆ ಸತಿಯಾಗುವಳೊ ಕೇಳೊಮತಿಗೆಟ್ಟು ಐವರು ಅತಿ ಬಾಯಿಬಿಡುವರೊರಾಮೇಶ ಪತಿ ನಗುವನು ಭಾಳೆ ಏ ತಾಳೊ ೫

ಮುಯ್ಯಾ ತಿರುಗಿಸಿದ ಹಾಡುಗಳು
೧೧೨
ಕಾಲಕಾಲಕ್ಕೆ ಗುರುಗಳ ಕಾಲಿಗೆ ಎರಗುವೆ ಕೋಲೆನ್ನಿ ಕೆಲದೆಯರು ಕೋಲೆನ್ನಿರೆ ಪ.
ಫುಲ್ಲನಾಭನೆಂಬೊ ಮಲ್ಲಿಗೆ ಸರಮುಡಿದು ಉಲ್ಲಾಸ ಬಡವೊ ಗುರುಗಳ ಸೊಲ್ಲು ಸೊಲ್ಲಿಗೆ ನಮಿಸಿ ೧
ವೀತ ದೋಷನೆಂಬೊ ನೂತನ ಪುಷ್ಪ ಮುಡಿದು ಪ್ರೀತಿ ಬಡುವಗುರುಗಳ ಮಾತು ಮಾತಿಗೆ ನಮಿಸಿ೨
ಬಾಲೆ ಗುರುಗಳ ಹೃದಯ ಆಲಯ ವಶವಾದ ಬಾಲಗೋಪಾಲನೆಂಬೊನೀಲ ಮಾಣಿಕವೆ ಬಿಗಿದು ೩
ಮತ್ತೆ ನಮ್ಮ ಗುರುಗಳ ಚಿತ್ತದಲಿ ವಶವಾದ ನಿತ್ಯ ಮೂರುತಿ ಎಂಬೊಮುತ್ತು ಮಾಣಿಕವೆ ಬಿಗಿದು೪
ಗುರುಗಳ ಹೃದಯವೆಂಬೊಅರಮನೆ ವಶವಾದ ಸಿರಿ ರಮೆಯರಸನೆÉಂಬೊ ಬರಿಯ ಮಾಣಿಕವೆ ಬಿಗಿದು೫

೨೪೮
ಕಾಳಿ ಮೊದಲಾದವರು ಭಾಳೆ ವಸ್ತಗಳಿಟ್ಟು
ವ್ಯಾಳಾಶಯನನ ಮಡದಿಯರು ಪ.
ಬಂದು ಶ್ರೀ ಪ್ರದ್ಯುಮ್ನ ಗಂಧಹಚ್ಚಿ ಐವರಿಗೆ
ಅಂದದಲಿ ಬುಕ್ಕಿಟ್ಟು ಸೂರಾಡಿ
ಮಂದಾರಮಲ್ಲಿಗೆ ತಂದು ಕೊರಳಿಗೆ ಹಾಕಿ
ಆನಂದ ಬಟ್ಟನು ನೋಡ ಕೆಲದಿ ೧
ಅಚ್ಯುತನ ಮಡದಿಯರು ಹಚ್ಚಿ ಅರಿಷಿಣ ಕುಂಕುಮ
ಮಚ್ಚನೇತ್ರಿಯರು ದ್ರೌಪತಿಗೆ
ಅಚ್ಛಾದ ಸುಭದ್ರೆಗೆ ಹಚ್ಚಿ ಅರಿಷಿಣ ಕುಂಕುಮ
ಅಚ್ಚ ಮಲ್ಲಿಗೆಯನ್ನೆ ಮುಡಿಸಿ ೨
ಶಂಬರಾರಿಪಿತನ ಗಂಭೀರ ತಂಗಿಯರಿಗೆ
ತಾಂಬೂಲ ಅಡಿಕೆಯನೆ ಕೊಟ್ಟು
ಸಂಭ್ರಮದಿ ರಮಿ ಅರಸು ಅಂಬರಗಳ ಉಡಿಸಿ
ಮೈತುಂಬ ವಸ್ತಗಳ ಇಡಿಸಿ ೩

೧೭೦
ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ಪ.
ಗಣನೆ ಇಲ್ಲದೆ ದ್ರವ್ಯ ಕೊಡುವೋನರಾಯಗೆ ಕ್ಷಣ ತೆರವಿಲ್ಲವೆಂಬೊ ಬಿರುದು ೧
ಸಟಿ ಇಲ್ಲದೆ ದ್ರವ್ಯ ಕೊಡುವೋನು ರಾಯಗೆ ತೃಣ ತೆರವಾಗದೆಂಬೋ ಬಿರುದು ೨
ಹಲವು ದಾನಗಳನ್ನ ಕೊಡುವೋನುರಾಯಗೆ ಹಲವು ಕೊಡುವೋನೆಂಬ ಬಿರುದು ೩
ಲೆಕ್ಕವಿಲ್ಲದೆ ದಾನ ಕೊಡುವೋನು ಕೀರ್ತಿಸಲು ಶಕ್ಯವಿಲ್ಲ ಆತನ ಬಿರುದು೪
ಮಿತಿ ಇಲ್ಲದೆ ದ್ರವ್ಯ ಕೊಡುವೋನು ಕೀರ್ತಿ ಅತಿಶಯವಮ್ಮ ಆತನ ಬಿರುದು ೫
ಕರೆದು ಕರೆದು ದ್ರವ್ಯ ಕೊಡುವೋನುರಾಯನ ಕರ ತೆರವಾಗದೆಂಬ ಬಿರುದು ೬
ಕೃಷ್ಣಾರ್ಪಣೆಂತೆಂಬೋದು ರಾಯಗೆ ಇಷ್ಟಕರತೆರವಾಗದು೭
ಅತ್ಯಂತ ಪ್ರೇಮ ಸೂಸುತ ರಾಯ ದಿವ ರಾತ್ರಿಯಲಿತತ್ವ ಕೇಳುತಲಿವ ೮
ನಿದ್ರೆ ಇಲ್ಲವು ರಾಯಗೆ ಏನೇನುನಮ್ಮ ಮುದ್ದು ರಮೇಶ ನಂಫ್ರಿಯ ಧ್ಯಾನ ೯

೧೭೭
ಕುಂತಿಯ ಮಕ್ಕಳು ನಿಂತಾರು ದ್ವಾರದಿ
ಕಾಂತೆಯರುತುಂಬಿದ ನಗರಿಯಲಿ
ಎಂಥ ಸೊಗಸಮ್ಮ ಬಾಹೋದೆಂಥ ಸೊಗಸಮ್ಮ ಪ.
ಗಂಧ ಕಸ್ತೂರಿ ಧರಿಸಿರಾಯರು
ಚಂದಾಗಿ ನಿಂತಿರಲು ಮೇಲೆ
ಮಂದ ಮಾರುತ ಸುಳಿದು
ಪರಿಮಳ ತುಂಬಿದ ನಗರಿಯಲಿ ಎನುತ ೧
ರಾಶಿ ಮಲ್ಲಿಗೆ ಸಂಪಿಗೆ ಮುಡಿದು
ಸೋಸಿಲೈವರು ಇರಲು ಮೇಲೆ
ಬೀಸಿ ಮಾರುತ ಪರಿಮಳ ತಂದು
ಸೂಸಿದ ನಗರಿಯಲಿ ಎನುತ ೨
ಮಿತಿ ಇಲ್ಲದೆ ಹಗಲು ಬತ್ತಿ
ಶತ ಕೋಟಿ ದೀವಟಿಗಿ ದೀಪ
ಅತಿಶಯ ಬೆಳಗೊ ನಗರಿಗೆ
ಪ್ರತಿಯಿಲ್ಲ ತಾಯಿ ೩
ಹಾದಿ ಬೀದಿ ದ್ವಾರ ಜಗಲಿ
ಹಂದರ ಅಂದದ ತೋರಣಗಳು
ಸಾದಿನಥಳಿ ಕೊಟ್ಟಾವಮ್ಮ
ಮಾಧವ ಬರಲಿಕ್ಕೆ ಎನುತ ೪
ಚಿತ್ರ ಬರೆದ ಮನೆಗಳ ಮುಂದೆ
ವಿಸ್ತರಿಸಿದ ರಂಗವಲ್ಲಿ
ಉತ್ತತ್ತಿ ಬಾಳೆಯ ಗಿಡಗಳು
ಜತ್ತಾಗಿ ತೋರುವವು ಎನುತ ೫
ಕೇರಿ ಕೇರಿ ನಾರಿಯರೆಲ್ಲ
ಸೀರೆ ಕುಪ್ಪಸ ವಸ್ತಗಳಿಟ್ಟು
ಏರಿ ಗೋಪುರ ಅಟ್ಟಾಲಗಳ
ವೀರರ ನೋಡಲು ಎನುತ ೬
ಎತ್ತೆತ್ತ ನೋಡಿದರೂ ಜನರು
ಮುತ್ತುರತ್ನದ ವಸ್ತಗಳಿಟ್ಟು
ಹತ್ತಿಗೋಪುರ ಅಟ್ಟಾಲಗಳ
ಧಿಟ್ಟೆಯರು ನಿಂತಾರೆ ಎನುತ ೭
ಅಲ್ಲಲ್ಲಿ ನಿಂತಿದ್ದು ಬಾಲೆಯರು
ಝಲ್ಲೆ ಮುತ್ತಿನ ವಸ್ತಗಳಿಟ್ಟು
ಅಲ್ಲೆಲ್ಲೆ ಉಪ್ಪರಿಗೆ ಏರಿ
ಚಲ್ವರ ನೋಡಲು ಎನುತ ೮
ಅಲ್ಲಲ್ಲೆ ತುಂಬಿದ ಜನರು
ಮಲ್ಲಿಗೆ ಸಂಪಿಗೆ ಫಲಗಳ ಹಿಡಿದು
ಚೆಲ್ಲಾಡಬೇಕೆಂದು ಐವರಿಗೆ
ಅಲ್ಲೇ ನಿಂತಾರೆ ಎನುತ ೯
ಕೃಷ್ಣರಾಯ ಪಾಂಡವರ
ಭೆಟ್ಟಿಯ ಸೌಭಾಗ್ಯ ನೋಡಿ
ಎಷ್ಟು ಹರುಷ ಬಟ್ಟೇವೆಂದು
ಧಿಟ್ಟೆಯರು ನಿಂತಾರೆ ಬೀದಿಲಿ೧೦
ಮಹಲಮ್ಯಾಲೆ ನಿಂತು ಜನರು
ಸಾಲಾಗಿ ಆರತಿಯ ಹಿಡಿದು
ಶ್ರೀ ಲೋಲ ರಾಮೇಶನ ಭಕ್ತರು
ವಾಲಗೈಸೋರಮ್ಮ ಎನುತ ೧೧

೨೩೬
ಕುಸುಮನಾಭನ ಮಡದಿಯರು
ಹೆಸರ್ಹೇಳ ಅರ್ಥಿಲಿ
ಹಸುಳೆಯರು ಹಾಡಿ ಪಾಡಿ
ಕುಶಲದಿ ಕೋಲ ಹೊಯ್ದು ಪ.
ಬಂದು ರುಕ್ಮಿಣಿ ಭಾವೆಗೆ
ವಂದಿಸಿ ಭದ್ರೆ ದ್ರೌಪತಿ
ಮಂದಾರ ಮಲ್ಲಿಗೆ ಸಂಪಿಗೆ
ಚಂದದಿ ಸೂರ್ಯಾಡಿ1
ಕೃಷ್ಣನರಸಿಯರು ಇಬ್ಬರು
ಬುಕ್ಕಿಟ್ಟು ಸೂರ್ಯಾಡಿ
ಗಟ್ಟಿ ಕಂಕಣದ ಕರದಲೆ
ಮುಟ್ಟಿ ಆಲಂಗಿಸುತ ೨
ಹರದಿ ರುಕ್ಮಿಣಿ ಕೈಯ
ಮರಿಯದಲೆ ಹಿಡಿದು ದ್ರೌಪತಿ
ದೊರೆಯರ ಹೆಸರ್ಹೇಳಿ
ಮುಂದಕೆ ಬರಬೇಕೆಂದರು3
ಸತ್ಯಭಾಮೆಯ ಕೈಯ
ಅರ್ಥಿಲೆ ಹಿಡಿದು ದ್ರೌಪತಿ
ಮತ್ತೆ ಪತಿಗಳ ಹೆಸರು
ವಿಸ್ತರಿಸೆಂದರು ೪
ವಾರಿಜಾಕ್ಷನ ಹೆಸರು
ನಾರಿಯರಿಬ್ಬರು ಹೇಳಿ
ಶ್ರೀ ರಾಮೇಶನ ಮಡದಿಯರುಏರಿದರು ಆಸನವ5

೨೦೫
ಕೃಷ್ಣ ಇನ್ಯಾತರ ಶ್ರೇಷ್ಠನೆ
ಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.
ಅರ್ಜುನ ಯಾತರ ಭಂಟನೆ
ನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆ ಅ.ಪ.
ಏನೇನೂ ಧೈರ್ಯವಿಲ್ಲವೊ ಕೃಷ್ಣಗೆ
ಬಲು ಮೀನಿನಂತ ಚಂಚಲವೊ1
ಇಷ್ಟು ಎದೆಗಾರನಲ್ಲವೊ ಪಾರ್ಥ
ಯುದ್ಧ ಬಿಟ್ಟರೆ ನಗುವರಲ್ಲವೊ ೨
ಸೊಲ್ಲು ಸಾಲವ ಕೊಡುವೊನಲ್ಲವೊ
ದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ ೩
ಹೆಣ್ಣು ಬಾಳ್ವೆ ಬಲು ಹೊಲ್ಲೊ
ಹರಡು ಸಣ್ಣವಲ್ಲವೊ ನಿನಗಲ್ಲವೊ ೪
ತಲೆದೂಗೊ ಲಕ್ಷಣ ಹೊಲ್ಲವೊ
ಅತಿ ಮಲೆತು ನಡೆವ ಬುದ್ದಿ ಅಲ್ಲವೊ ೫
ವೇಷಗಾರಿಕೆ ಬಲು ಹೊಲ್ಲವೊ
ವಿಶೇಷ ಪರಾಕ್ರಮ ಅಲ್ಲವೊ ಅರ್ಜುನ ೬
ಬಿರಿಗಣ್ಣು ಲಕ್ಷಣ ಹೊಲ್ಲವೊ
ದೊಡ್ಡ ಉರಿ ಮಾರಿ ಪುರುಷನಲ್ಲವೊ ೭
ಮರುಳುತನ ಬಲು ಹೊಲ್ಲವೊ
ಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ ೮
ತಿರುಕತನ ಬಲು ಹೊಲ್ಲವೊ
ಅತಿ ಹರಕ ನೀ ಪುರುಷನಲ್ಲವೊ ಕೃಷ್ಣ ೯
ಚೋರತನದಿಂದ ಬಲು ಕೆಟ್ಯೊ
ನಿನ್ನ ಧೀರತನವ ತೋರಿಸಿ ಬಿಟ್ಯೊ ೧೦
ಕೊಡಲಿಗಡುಕತನ ಹೊಲ್ಲವೊ
ಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ11
ಅಹಲ್ಯದೇವಿಯ ಕೆಡಿಸಿದನೆಂದು
ಬಹು ಭೋಳೆ ಬುದ್ದಿಹೇಳಲೊ ನಿಂದು ಅರ್ಜುನ ೧೨
ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊ
ನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ ೧೩
ವೈರಾಗ್ಯವ ತೋರಿಕೊಂಡೆಲ್ಲೊ
ನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ14
ಪೋರತನವು ಬಲು ಅಲ್ಲವೊ ಕೃಷ್ಣ
ನಿನ್ನ ಜಾರತನವ ಬಿಡಲ್ಲಿವೊ15
ದಾರಿದ್ರ್ಯತನ ಬಲು ಹೊಲ್ಲವೊ
ದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ16
ಅನ್ನವಸ್ತ್ರವು ನಿನಗಿಲ್ಲವೊ
ಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ ೧೭
ರಾಜ ಲಕ್ಷಣ ನಿನಗಿಲ್ಲವೊ
ರೂಪ ಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ ೧೮
ದ್ವಂದ್ವ ಯುದ್ಧವÀ ಮಾಡಿದವನಲ್ಲವೊ
ಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ ೧೯
ಕರೆದರೆ ಯುದ್ಧಕ್ಕೆ ಹ್ಯಾಗೆಂದು
ನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ ೨೦
ಕೃಷ್ಣ ಅರ್ಜುನರ ಈ ಸಂವಾದ
ಸಂತುಷ್ಟ ರಾಮೇಶ ಕೊಡುವ ಮೋದ ೨೧

೨೫೮
ಕೃಷ್ಣ ತನ್ನ ರೂಪ ಇಟ್ಟ
ಉತ್ಕ್ರಷ್ಟ ಭಕ್ತರ ಮನೆ ಬಿಟ್ಟು ಹೋಗಲಾರದೆ ಪ.
ಮಿತಿಯಿಲ್ಲದೆ ರೂಪದಿಂದ ಕುಂತಿ ಸುತರ
ಭಕ್ತಿಗೆ ಲಕ್ಷ್ಮೀಪತಿ ಅಲ್ಲೆ ನಿಂತ
ಮಿತರೂಪ ದ್ವಾರಕೆಗೆ ಬಂದ
ಇಂಥ ಅತಿಶಯ ಶಕ್ತಿ ನೋಡುವದೆಂಥ ಚಂದ ೧
ಚೆಲ್ವನ ನೋಡುವರು ಜನರು
ಮನೆ ಒಲ್ಲದೆ ಜರಿದಾತನಲ್ಲೆ ಇದ್ದರು
ಫುಲ್ಲನಾಭನ ರೂಪ ಚಾರು ಇದಕೆಲ್ಲರೂ ನಗಲು
ಹೃದಯದಂಬರದಲ್ಲಿ ತುಂಬಿದರು ೨
ಧಿಟ್ಟ ಬೊಮ್ಮಾದಿಗಳೆ ಸಾಕ್ಷಿ
ಇದನಷ್ಟು ಬಲ್ಲಂಥ ಶಿವನೊಬ್ಬ ಸಾಕ್ಷಿ
ಅಷ್ಟ ದಿಕ್‌ಪಾಲಕರೆ ಸಾಕ್ಷಿ
ಮತ್ತಷ್ಟು ವೈಭವದ ಸುರರೆಲ್ಲ ಸಾಕ್ಷಿ ೩
ಭಕ್ತ ಪ್ರಲ್ಹಾದನೆ ಸಾಕ್ಷಿ
ಇಂಥ ಉತ್ತುಮನೆನಿಸುವ ಧ್ರುವನೊಬ್ಬ ಸಾಕ್ಷಿ
ಸತ್ಯ ಅಜಮಿಳನೊಬ್ಬ ಸಾಕ್ಷಿ
ನಮ್ಮ ಮಿತ್ರಿ ದ್ರೌಪತಾದೇವಿ ಅತ್ಯಂತ ಸಾಕ್ಷಿ ೪
ಪಂಡಿತ ಬಲಿಯೊಬ್ಬ ಸಾಕ್ಷಿ
ಜಲದಿ ಕಂಡ ಅಕ್ರೂರ ಅವನೊಬ್ಬ ಸಾಕ್ಷಿ
ಪುಂಡರೀಕನೊಬ್ಬ ಸಾಕ್ಷಿ
ರಮಿಗಂಡ ಭಕ್ತರ ಕಾದು ಕೊಂಡಿಹ ನಿಜ5

೨೨೯
ಕೃಷ್ಣ ನಿಮ್ಮೆಲ್ಲರ ಬಿಟ್ಟನೆ
ಒಬ್ಬ ಶ್ರೇಷ್ಠ ನಾರಿಯಮೇಲೆ ಮನಸಿಟ್ಟನೆ ಪ.
ಸತ್ಯ ಸುಶೀಲಳು ಅವಳಮ್ಮ
ಜನಕೆ ತತ್ವ ಬೋಧಿಸುವಳು ಇವಳಮ್ಮ ೧
ಕಾಂತೆ ಕೋಮಲ ಹೃದಯದವಳಮ್ಮ
ಬುದ್ಧಿ ಭ್ರಾಂತಿ ಗೈಸುವವಳಿವಳಮ್ಮ2
ತಪ್ಪದೆ ಸಲಹುವಳವಳಮ್ಮ
ಜನಕೆ ಒಪ್ಪುವ ಗುಣವ ತೋರುವಳಿವಳಮ್ಮ ೩
ಶ್ರೀಶನ ಬಿಡದಿಹಳವಳಮ್ಮ
ಅತಿ ಮೋಸಗಾರುತಿಯು ಇವಳಮ್ಮ ೪
ಉತ್ತಮಳು ರಮಾ ಅವಳಮ್ಮಾತಿ ಕೀರ್ತಿಯ ಪಡೆದಿಹಳಿವಳಮ್ಮ ೫

೨೨೨
ಕೃಷ್ಣನ ತಂಗಿಯರೆಂಬೊ ಗರವಿಲೆ
ಇಷ್ಟು ನುಡಿದಾರೆ ಇವರು
ನಮ್ಮನೆಗೆ ಬಂದಿನ್ನೆಷ್ಟುನುಡಿದಾರೆ ಪ.
ಕೃಷ್ಣನ ಮನದಿ ನೆನಸಿ
ಮುಯ್ಯದ ಸುದ್ದಿ ಅಷ್ಟು ಲೋಕಕ್ಕ ಮೆರೆಸಿ
ಅಷ್ಟದಿಕ್ಕಿನ ಶ್ರೇಷ್ಠರಾಯರ ಕರೆಸಿ
ಇಟ್ಟ ಮುದ್ರಿಕೆ ತೆಗಿಸಿ
ಧಿಟ್ಟೆಯರು ಮುಯ್ಯವಿರಸಿ
ನ್ನೆಷ್ಟು ನುಡಿದಾರೆ ಇವರು ೧
ಹರಿಯ ತಂಗಿಯರೆಂದು ದ್ರೌಪತಿ
ಭದ್ರ ಗರವಿಲೆ ಮುಯ್ಯ ತಂದು
ರಾತ್ರಿಲೆ ತಮ್ಮ ಕರೆಯ ಬರಲಿಲ್ಲವೆಂದು
ಭರದಿ ಕೋಪಿಸಿ ಬಂದು
ಸರಿಯವರು ನಗತಾರೆ
ಇನ್ನೆಷ್ಟು ನುಡಿದಾರೆ ಇವರು2
ಬೇಗನೆ ಮುಯ್ಯಾ ತಂದು
ರಂಗನ ಯಾವಾಗ ನೋಡೆವೆಂದು
ಸೋಗು ಮಾಡುತ
ಬಾಗಿಲೊಳು ನಿಂದು
ಬೀಗವ ತೆಗೆಸಿರೆಂದು ಕೂಗಾಡಿದರಿ
ನ್ನೆಷ್ಟು ನುಡಿದಾರೆ ಇವರು ೩
ಸುಳ್ಳು ಮುಯ್ಯವ ತಂದು
ಹರಿಯಲ್ಲೆ ಸ್ನೇಹ ಬಳ್ಳಿಯ ಸುತ್ತಿಕೊಂಡು
ಜನರೊಳು ಬಹಳ ಒಳ್ಳೆಯವರೆನಿಸಿಕೊಂಡು
ತಳ್ಳಿ ಮಾತಾಡಿಕೊಂಡು
ತಳಮಳತಾವೆಗೊಂಡು
ಇನ್ನೆಷ್ಟು ನುಡಿದಾರೆ ಇವರು4
ರಮ್ಮಿ ಅರಸನ ಎದುರು
ದ್ರೌಪತಿ ಭದ್ರೆ ಹೆಮ್ಮಿಲೆ ದೂರಿದರು
ಎಲ್ಲರು ನಗಲು ಜಮ್ಮನೆ ನಾಚಿಹರು
ನಮ್ಮನ ಕರೆಯದೆ ಒಳಗೆ
ಗುಮ್ಮನಂತೆ ಅಡಗಿದೆ
ರಿನ್ನೆಷ್ಟು ನುಡಿದಾರೆ ಇವರು5

೧೪೧
ಕೇಶವ ನಾರಾಯಣ ಶ್ರೀಶ ಮಾಧವ ಸರ್ವೇಶ ಗೋವಿಂದಗೆಲಿಸೆಂದು ಕೋಲಸರ್ವೇಶ ಗೋವಿಂದಗೆಲಿಸೆಂದು ವಿಷ್ಣುವಿನ ಸೋಸಿಲೆ ಮೊದಲೆ ಬಲಗೊಂಬೆ ಕೋಲ ೧
ಮಧುಸೂದನ ತ್ರಿವಿಕ್ರಮ ವಿಧಿಪಿತ ವಾಮನ ಸುದತೆ ಶ್ರೀಧರ ಋಷಿಕೇಶ ಕೋಲಸುದತೆ ಶ್ರೀಧರ ಋಷಿಕೇಶನ ನೆನೆದರೆ ಹದಕಾನೆ ವರವ ಕೊಡುವೊನು ಕೋಲ ೨
ಪದ್ಮನಾಭ ದಾಮೋದರ ಮುದ್ದು ಸಂಕರ್ಷಣವಸುದೇವ ನಮ್ಮ ಗೆಲಿಸೆಂದು ಕೋಲವಸುದೇವನಮ್ಮ ಗೆಲಿಸೆಂದು ಪ್ರದ್ಯುಮ್ನಅನಿರುದ್ಧರ ಮೊದಲೆ ಬಲಗೊಂಬೆ ಕೋಲ ೩
ಪುರುಷೋತ್ತಮ ಅಧೋಕ್ಷಜ ಹರುಷಾಗೊ ನಾರಸಿಂಹ ಪುರುಷ ಸೂಕ್ತದಲೆ ಪ್ರತಿಪಾದ್ಯ ಕೋಲಪುರುಷಸೂಕ್ತದಲೆ ಅಚ್ಯುತಹರುಷದಿ ನಮ್ಮ ಗೆಲಿಸೆಂದು ಕೋಲ ೪
ಜನಾರ್ದನ ಉಪೇಂದ್ರ ಘನಮಹಿಮ ಹರೆ ಕೃಷ್ಣಮುನಿಜನ ವಂದ್ಯ ರಮಿ ಅರಸು ಕೋಲ ಮುನಿಜನ ವಂದ್ಯರಮಿಯರಸುನಿನ್ನ ಪಾದ ನೆನದೆವ ಪಂಥಗೆಲಿಸೆಂದು ೫

೧೯
ಕೇಳೆಲೊವಾದಿ ಕೇಳೆಲೊವಾದಿಕೇಳದಿದ್ದರೆ ತಮಸಿಗೆ ಹೋದಿ ಪ.
ಅತ್ತೆಸೊಸೆ ಒಂದೆ ಮಕ್ಕಳು ಮರಿಯೊಂದೆಹೆತ್ತಮ್ಮನೊಂದೆ ಮಡದಿಯೊಂದೆ ಹೆತ್ತಮ್ಮ ಒಂದೆ ಮಡದಿಒಂದೆಯಾದರೆವಿತ್ತವೆಚ್ಚಾಗಿ ಮದುವೆಯಾಕೆ೧
ಅಕ್ಕ ತಂಗಿಯೊಂದೆ ಮಕ್ಕಳು ಸೊಸೆಯೊಂದೆಚಿಕ್ಕಮ್ಮನೊಂದೆ ಮಡದಿಒಂದೆಚಿಕ್ಕಮ್ಮನೊಂದೆ ಮಡದಿಒಂದೆಯಾದರೆವಿತ್ತವೆಚ್ಚಾಗಿ ಮದುವೆ ಯಾಕೆ೨
ಆಳು ಅರಸು ಒಂದೆ ಕೋಳಿ ಕೋಗಿಲ ಒಂದೆಮಾಳಿಗೆ ಒಂದೆ ಬಯಲೊಂದೆಮಾಳಿಗೆ ಒಂದೆ ಬಯಲೊಂದೆಯಾದರೆಮಾಳಿಗೆ ಮನೆಯು ನಿನಗ್ಯಾಕೆ ೩
ಇಂತೆಂಬೊ ದ್ವೆತ್ಯರನ ನಿಂತ ಕ್ಷಣದಿ ಕೊಂದಿ ಕುಂತಿ ಮಕ್ಕಳ ಸಲುಹಿದಿಕುಂತಿ ಮಕ್ಕಳ ಸಲುಹಿದಿ ಲಕ್ಷ್ಮಿಕಾಂತನೀನಮ್ಮ ಕರುಣಿಸೊ ೪
ಖೂಳ ದೈತ್ಯರ ಚರಿಯ ತಾಳಲಾರದೆಭೂದೇವಿ ಹೇಳಿದಳಾಗ ಹರಿಗ್ಹೋಗಿಹೇಳಿದಳಾಗ ಹರಿಗ್ಹೋಗಿ ರಮಿಯರಸುಕೇಳಿದ ಪರಮ ಹರುಷದಿ ೫

ಹೊರಗಿಂದ ಬಂದಳು ತಿರುಗಲ ತಿಪ್ಪಿಯು
೯೩
ಕೇಳೊ ಗೋವಿಂದ ಹೇಳಿದರಂತು ಬಲು ಚಂದ ಇಂದಿರೇಶನ ಗುಣ ಚಂದಿಲ್ಲಚಾರವಿಲ್ಲ ಅಂದರೆಭಾಳ ಬಲುಕೋಪ ಕೇಳೊ ಗೋವಿಂದ ಪ
ಭೇರಿ ಬಾರಿಸಿ ಕೇಳುತ ಭೂರಿಜನರ ಕೂಡಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಖಳರ ಸಂಹಾರ ಮಾಡಿದ ಮಧುರೆಯಲಿ ಕೇಳೊ ೧
ಹೊರಗಿಂದ ಬಂದಳು ತಿರುಗಲ ತಿಪ್ಪಿಯು ಹೆರವರಿಗುಪಕಾರಿ ಮನೆಗೆ ಮಾರಿ ಹೆರವರಿಗುಪಕಾರಿ ಮನೆಗೆ ಮಾರಿ ಮಕ್ಕಳ ಕೊರಳ ಹಿಚುಕಿ ಕೊಂದಳು೨
ತಲೆಹೊೈಕ ಹಿರಿಯವ ಚಿಕ್ಕವ ಚಂಚಲ ಬಹು ಚಾಡಿಕೋರ ಇನ್ನೊಬ್ಬಬಹು ಚಾಡಿಕೋರ ಇನ್ನೊಬ್ಬ ಎನುತಲಿಫಲ್ಗುಣ ನಗುತ ನುಡಿದನು ೩
ಇಂದ್ರಲೋಕಕೆ ಹೋಗಿ ಸುರತರು ತರುವಾಗ ಇಂದ್ರ ಬಂದಿದ್ದ ಜಗಳಕ್ಕೆ ಇಂದ್ರ ಬಂದಿದ್ದ ಜಗಳಕ್ಕೆ ಆಗನಮ್ಮಕ್ಕನಿಂದ ಮಾನ ಉಳಿದೀತೊ೪
ನಿಲ್ಲೊ ನಿಲ್ಲೊ ನಿನ್ನ ಸೊಸೆ ಎಂಬೊಳು ತಾನು ಎಲ್ಲರ ಬಾಯಿಗೆ ಬರವೋಳು ಎಲ್ಲರ ಬಾಯಿಗೆ ಬರುವೋಳು ಇದರ ಮ್ಯಾಲೆ ಒಳ್ಳೇದೊ ನಿನ್ನ ಒಗೆತನ ೫
ಬಲು ಪತಿವ್ರತೆಯೆಂದು ಜನರೆಲ್ಲ ಹೊಗಳೋರು ತಲೆಯಲ್ಲಿ ಹೊತ್ತ ಮಹಾದೇವತಲೆಯಲ್ಲಿ ಹೊತ್ತ ಮಹಾದೇವ ಇಂಥವಳ ಬಲುಗುಣವಂತೆ ಎನಬಹುದೆ ೬
ಅಚ್ಯುತ ನೀನೊಬ್ಬ ಹುಚ್ಚಾಗೊ ಹುರುಳಾಗೊಮೆಚ್ಚಿದವರೆಲ್ಲ ನಿನಗುಣ ಮೆಚ್ಚಿದವರೆಲ್ಲ ನಿನಗುಣ ಕಲಿತಮ್ಯಾಲೆ ಉಚ್ಚ ರಾಮೇಶನ ಒಗೆತನ ಕೇಳೊ ಗೋವಿಂದ೭

೧೬
ಕೈ ಮುಗಿವೆ ಕೈ ಮುಗಿವೆ ಕೈಮುಗಿವೆನುಸಖಿ ವೈಭವದ ಗುರುಗಳು ಕೈವಲ್ಯನೀವನಮ್ಮ ಕವಿಗಳ ಚರಣಕ್ಕೆ ಪ.
ಮಧ್ವರಾಯರು ಪದ್ಮನಾಭ ನರಹರಿತೀರ್ಥಶುದ್ದ ಮಾಧವ ಅಕ್ಷೋಭ್ಯರೆ ಸಖಿಯೆಶುದ್ದ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ಸಖಿಯೆ ೧
ಪ್ರಶಿದ್ದ ಜಯತೀರ್ಥ ವಿದ್ಯಾಧಿರಾಜಕವೀಂದ್ರ ವಾಗೇಶ ರಾಮಚಂದ್ರರೆ ಸಖಿಯೆ ವಾಗೇಶ ರಾಮಚಂದ್ರ ವಿದ್ಯಾನಿಧಿಗಳಪಾದಪದ್ಮವ ಮೊದಲೆ ಬಲಗೊಂಬೆ ಸಖಿಯೆ ೨
ರಘುನಾಥ, ರಘುವರ್ಯ, ರಫೂತ್ತಮ ತೀರ್ಥರವೇದವ್ಯಾಸ ವಿದ್ಯಾಧೀಶರೆ ಗೆಲಿಸಲಿವೇದವ್ಯಾಸ ವಿದ್ಯಾಧೀಶರ ಚರಣವಭಕ್ತಿಯಿಂದಮೊದಲೆ ಬಲಗೊಂಬೆ ಸಖಿಯೆ೩
ಅಗಣಿತ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರೆ ಸಖಿಯೆಸತ್ಯನಿಧಿ ಸತ್ಯನಾಥರ ಚರಣವ ಅತ್ಯಂತವಾಗಿ ಬಲಗೊಂಬೆ ಸಖಿಯೆ೪
ಸತ್ಯಾಭಿನವತೀರ್ಥ ಸತ್ಯಪೂರ್ಣತೀರ್ಥರಸತ್ಯ ವಿಜಯ ಸತ್ಯಪ್ರಿಯರ ಸಖಿಯೆಸತ್ಯ ವಿಜಯ ಸತ್ಯಪ್ರಿಯತೀರ್ಥರಚರಣವ ಅತ್ಯಂತವಾಗಿ ಬಲಗೊಂಬೆ ಸಖಿಯೆ ೫
ಸತ್ಯಬೋಧ ಸತ್ಯಸಂಧ ಸತ್ಯವರರಚಿತ್ತಶುದ್ಧಿಯಲಿ ಬಲಗೊಂಬೆಚಿತ್ತಶುದ್ದಿಯಲಿ ಬಲಗೊಂಬೆ ಸಭೆಯೊಳುಸತ್ಯವಾಕ್ಯಗಳ ನುಡಿಸಲಿ ಸಖಿಯೆ ೬
ಯತಿಮುನಿರಾಯರ ಅತಿಭಕ್ತರಾಗಿದ್ದಗತಿಪ್ರದರಾದ ಗುರುಗಳ ಸಖಿಯೆಗತಿ ಪ್ರದರಾದ ಗುರುಗಳುರಾಮೇಶನ ಅತಿಭಕ್ತರ ಮೊದಲೆ ಬಲಗೊಂಬೆ ೭

೨೩೩
ಕೊಂಡ ಭೆಟ್ಟಿ ಭೂಮಂಡಲಾಧೀಶನು
ಪಾಂಡವರ ಉದ್ದಂಢಗಳಿಂದ ಪ.
ಚಂದ್ರನಂತೊಪ್ಪುತ ವಂದಿಸಿ ಐವರು
ಆನಂದಬಾಷ್ಪಗಳು ದೇವ ದುಂದುಭಿ ಆಗ ೧
ತೋಳ ಭಾಪುರಿಯವರು ಬಹಳೆ ಹಾರಗಳಿಂದ
ವ್ಯಾಳಾಶÀಯನ ಒಪ್ಪ ಹೇಳಲು ವಶವಲ್ಲ ೨
ಶ್ರೀಶ ಇವರ ಭೆಟ್ಟಿ ದೇಶದ ಜನ ನೋಡಿ
ಸೂಸು ಮಲ್ಲಿಗೆ ತಮ್ಮ ಆಸೆ ಪೂರೈಸಿಕೊಂಡು ೩
ಭೆಟ್ಟಿಯಾದ ಉತ್ಕರ್ಷ ನೋಡಿ ಪುಷ್ಪ
ವೃಷ್ಟಿಯಗರೆದರು ಶ್ರೇಷ್ಠದ ಸುರರು ೪
ಅಮ್ಮ ಇವರ ಮ್ಯಾಲೆ ರಮ್ಮಿ ಅರಸನ ಪ್ರೀತಿಬೊಮ್ಮ ಕಂಡು ಬೆರಗೊಮ್ಮೆ ಬಡುವ ೫

೨೫೩
ಕೊಟ್ಟ ಉಡುಗೊರೆ
ಉತ್ಕ್ರಷ್ಟ ಗೋಪಾಲ
ಧಿಟ್ಟ ಪಾಂಡವರಿಗೆ ಉಚಿತವ ಕೆಲದಿ ಪ.
ಏಸವೊ ಮಾಣಿಕದೊಸ್ತ ದೆಸೆಗೆಲ್ಲ ಬೆಳಗುವ ವಸ್ತ
ಹೊಸ ಮುತ್ತಿನ ರಥ ಹಿಡಿದೇಜಿ ಕೆಲದಿ
ಹೊಸ ಮುತ್ತಿನ ರಥ ಹಿಡಿದೇಜಿ ಶೂರಪಾಲಿ
ಅಶ್ವತ್ಥ ನರಸಿಂಹಗೆ ಹರಿ ಕೊಟ್ಟ ಕೆಲದಿ ೧
ಪಟ್ಟಾವಳಿಯ ಸೀರೆ ಧಿಟ್ಟಾದ ಪಲ್ಲಕ್ಕಿ
ಬಟಮುತ್ತಿನ ರಥ ಹಿಡಿದೇಜಿ
ಬಟಮುತ್ತಿನ ರಥ ಹಿಡಿದೇಜಿ ಶೂರಪಾಲಿ
ಕೃಷ್ಣಾ ಭಾಗೀರಥಿಗೆ ಹರಿಕೊಟ್ಟ ಕೆಲದಿ ೨
ಏಸವೊ ಮಾಣಿಕದೊಸ್ತ ಹಸಿರು ಪಟ್ಟಾವಳಿವಸ್ತ್ರ
ಕುಶಲದ ಪುಸ್ತಕವ ನಡುವಿಟ್ಟು ಕೆಲದಿ
ಕುಶಲದ ಪುಸ್ತಕವ ನಡುವಿಟ್ಟು ಶ್ರೀಕೃಷ್ಣ
ಋಷಿಗಳಿಗುಚಿತವ ಹರಿ ಕೊಟ್ಟ ಕೆಲದಿ ೩
ಸಾರಾವಳಿ ಸೀರೆ ಥೋರ ಮುತ್ತಿನ ಸರ
ಹಾರ ಭಾರಗಳು ನಡುವಿಟ್ಟು ಕೆಲದಿ
ಹಾರ ಭಾರಗಳು ನಡುವಿಟ್ಟು ಉಚಿತವ
ನಾರಿ ಕುಂತೆಮ್ಮಗೆ ಹರಿಕೊಟ್ಟ ಕೆಲದಿ4
ಲೆಕ್ಕವಿಲ್ಲದೆ ವಸ್ತ್ರ ಸಂಖೆವಿಲ್ಲದ ರಥ
ಆಕ್ಷಆನೆಗಳು ರಥಗಳು ಕೆಲದಿ
ಅಕ್ಷ ಅನೆ ರಥಗಳು ಬಿಲ್ಲು ಬಾಣ
ಮುಖ್ಯ ಧರ್ಮನಿಗೆ ಹರಿ ಕೊಟ್ಟ ಕೆಲದಿ ೫
ಮಿತಿಯಿಲ್ಲದೆ ಬಾಣ ಬಿಲ್ಲುಗಳು ರಥ ಕುದುರೆಗಳು
ಅತಿಶಯ ಬೆಳಗುವ ಆಭರಣ ಕೆಲದಿ
ಅತಿಶಯ ಬೆಳಗುವ ಆಭರಣ ಪಟ್ಟಾವಳಿ
ಕುಂತಿಸುತ ಭೀಮ ರಾಯಗೆ ಹರಿಕೊಟ್ಟ ಕೆಲದಿ ೬
ಮದ ಸೊಕ್ಕಿದಾನೆಗಳು ರಥ ಬಿಲ್ಲುಗಳು ಬಾಣ
ಅದ್ಬುತ ಬೆಳಗುವ ಆಭರಣವ ಕೆಲದಿ
ಅದ್ಬುತವಾಗಿ ಬೆಳಗುವ ಪೀತಾಂಬರ
ಚದುರ ಪಾರ್ಥಗೆ ಹರಿಕೊಟ್ಟ ಕೆಲದಿ ೭
ಆನೆ ಹಯ ರಥಗಳು ಏನೆಂಬೊ ಬಿಲ್ಲಾಳು
ನಾನಾ ರತ್ನಗಳು ಆಭರಣವೆ ಕೆಲದಿ
ನಾನಾ ರತ್ನ ಆಭರಣವೆ ನಕುಲಗೆ
ಮಾನದ ವಸ್ತ್ರಗಳು ಹರಿಕೊಟ್ಟ ಕೆಲದಿ ೮
ಉತ್ತಮ ಕುದುರೆಗಳು ಹತ್ತುವ ರಥ ಕೋಟಿ
ಮತ್ತೆ ಬಿಲ್ಲುಗಳು ಆಭರಣ ಕೆಲದಿ
ಮತ್ತೆ ಬಿಲ್ಲು ಆಭರಣವಸ್ತ್ರ ಗಳ ಸಹದೇವಗೆ
ಅರ್ಥಿಲೆ ರಾಮೇಶ ಇವು ಕೊಟ್ಟ ಕೆಲದಿ ೯

೨೪೩
ಕೊಟ್ಟುರಾಯ ಸಂತುಷ್ಟನಾದ
ಕೃಷ್ಣನರಸಿಯರಿಗೆ ಶ್ರೇಷ್ಠದ ಉಚಿತವ ಪ.
ನೀಲ ಮಾಣಿಕದೊಸ್ತ ಸಾಲದೆ ಹಿಡಿದೇಜಿ
ಮೇಲು ಜರತಾರಿ ಪಟ್ಟಾವಳಿ
ಮೇಲು ಜರತಾರಿ ಪಟ್ಟಾವಳಿ ಉಚಿತವ
ನೀಲಾದೇವಿಗೆ ದೊರೆ ಕೊಟ್ಟ1
ಸಾರಾವಳಿಯ ಸೀರೆ ಥೋರ ಮುತ್ತಿನ ವಸ್ತ
ಹಾರಭಾರಗಳು ಹಿಡಿದೇಜಿ ಮೊದಲಾಗಿ
ಹಾರಭಾರಗಳು ಹಿಡಿದೇಜಿ ಚಾಮರವ
ನಾರಿ ಭದ್ರಾಗೆ ದೊರೆಕೊಟ್ಟ2
ಮುತ್ತಿನ ಝಲ್ಲೆ ವಸ್ತ ಮತ್ತೆ ಕುದುರೆಯ ಸಾಲು
ಛಸ್ತ್ರಚಾಮರ ದಿವ್ಯ ಪಟ್ಟಾವಳಿ
ಛಸ್ತ್ರಚಾಮರ ಉಚಿತವ
ಮಿತ್ರವಿಂದಾಗೆ ದೊರೆ ಕೊಟ್ಟ3
ಬರಿಯ ಮಾಣಿಕದೊಸ್ತ ಜರದ ಪಟ್ಟಾವಳಿ ಸೀರೆ
ತುರುಗ ತಂಬಟಿಯು ಮೊದಲಾಗಿ
ತುರಗತಂಬಟಿಯು ಮೊದಲಾಗಿ ಹೆಗ್ಗಾಳೆ
ಹರದಿ ಕಾಲಿಂದಿಗೆ ದೊರೆಕೊಟ್ಟ ೪
ಲಕ್ಷ ಮಾಣಿಕದೊಸ್ತ ಪಕ್ಷಿಯಂತೆ ಹಾರುವ ಕುದುರೆ
ಲಕ್ಷ ಸೂರ್ಯರ ಬೆಳಕಿಲೆ
ಲಕ್ಷ ಸೂರ್ಯರ ಬೆಳಗುವ ಉಚಿತವ
ಲಕ್ಷಣದೇವಿಗೆ ದೊರೆಕೊಟ್ಟ ೫
ಪಚ್ಚ ರತ್ನದವಸ್ತ ಅಚ್ಚ ಜರತಾರಿ ಸೀರೆ
ಹೆಚ್ಚಿನ ಧನ ಕುದುರೆ ರಥಗಳು
ಹೆಚ್ಚಿನ ಧನ ಕುದುರೆ ರಥ ಜಾಂಬವಂತಿ
ಅಚ್ಯುತನ ಮಡದಿಗೆ ದೊರೆಕೊಟ್ಟ ೬
ಹದಿನಾರು ಸಾವಿರ ಚದುರೆಯರು
ಅದ್ಭತ ವಸ್ತ ರಥಗಳು
ಅದ್ಭುತ ವಸ್ತ ರಥಗಳು ರಾಮೇಶನ ಸುದತೆಯರಿಗೆ ದೊರೆ ಕೊಟ್ಟ ೭

Leave a Reply

Your email address will not be published. Required fields are marked *