Categories
ರಚನೆಗಳು

ಗಲಗಲಿಅವ್ವನವರು

೫೨
ಸುಗುಣಿಯರಿಬ್ಬರು ಬಂದು ಹಗರಣವ ಮಾಡಿದರವ್ವ
ಹಗರಣವ ಮಾಡಿದರವ್ವ ನಗಧರನ ಮುಂದೆ ನಾಚಿಕೆ ಇಲ್ಲವ್ವ ಪ.
ಸಿಟ್ಟಿಲೆ ತನ್ನೆದೆಯ ಗಟ್ಟಸಿದಳವ್ವತಾ ಗಟ್ಟಿಸಿದಳವ್ವ
ಕಷ್ಟದಿ ಭೀಷ್ಮಿಯುನಿಟ್ಟುಸಿರು ಹಾಕಿದಳವ್ವ೧
ಇತ್ತ ದೂತೆಯು ತಾಥಟ್ಟನೆ ಬಂದಳವ್ವತಾ ಥಟ್ಟನೆ ಬಂದಳವ್ವ
ಇಷ್ಟ ಏನೆಂದು ನೆಟ್ಟನೆ ಕೇಳಿದಳವ್ವ೨
ಎಷ್ಟು ಹೇಳಲಿ ಈಕೆಎದೆಗಿಚ್ಚಿನವಳವ್ವಭಾವೆ ಎದೆಗಿಚ್ಚಿನವಳವ್ವ
ಕೃಷ್ಣಗೆ ಕರೆದು ಕೊಟ್ಟಳು ವೀಳ್ಯವವ್ವ ೩
ಕೆಟ್ಟ ರುಕ್ಮಿಣಿಯು ಕಲಹಗಾರುತಿಯವ್ವಬಲು ಕಲಹಗಾರುತಿಯವ್ವ
ಅಗ್ಗಿಷ್ಟಿಗೆ ಆದಳು ಅತಿ ಸಿಟ್ಟಿನ ಹುಲಿಯವ್ವ೪
ಚಿಕ್ಕ ಚೇಳೆಂದು ಬಲು ಅಕ್ಕರೆ ತೋರಿದೆನವ್ವ ಬಲು ಅಕ್ಕರೆ ತೋರಿದೆನವ್ವ
ಭಾವೆಯ ಉಕ್ಕುಹೇಳಲು ಎನಗೆ ಶಕ್ಯ ಇಲ್ಲವ್ವ೫
ಉರಗ ಹಿರಿಯದೆಂದು ಎರಗೊದೇನವ್ವಅದಕೆ ಎರಗೋದೆನವ್ವ
ಉರವಣಿಗೆ ರುಕ್ಮಿಣಿಯಮುರಿಯಲಿಲ್ಲವ್ವ ೬
ಕೆಂಜಿಗ ಕಚ್ಚಲು ಅಂಜೋರೇನವ್ವಅದಕಂಜುವರೇನವ್ವ
ಭಾವೆಯ ಮಂಜುಳವಾಣಿ ಮೂಲೆಗೆ ಬೀಳಲೆವ್ವ ೭
ಹದ್ದುಕುಕ್ಕಿದರೆ ಗದ್ದರಿಸೋರೇನವ್ವಅಂಜಿ ಗದ್ದರಿಸುವರೇನವ್ವ
ರುಕ್ಮಿಣಿಯ ಮುದ್ದು ಮಾತುಗಳಸದ್ದಡಗಲಿಲ್ಲವ್ವ ೮
ಒಳ್ಳೆಯವಳಲ್ಲ ಭಾವೆಮುಳ್ಳಿನಂಥವಳವ್ವಬಲುಮುಳ್ಳಿನಂಥವಳವ್ವ
ಇವಳ ತಳ್ಳಿ ಮಾತುಗಳ ತಾಳಲಾರೆನವ್ವ೯
ಸುಳ್ಳಿ ರುಕ್ಮಿಣಿ ಶೂಲದಂಥವಳವ್ವಬಲು ಶೂಲದಂಥವಳವ್ವಕಳ್ಳ ಮಾತುಗಳೆಷ್ಟುಕಲಿತಾಡುವಳವ್ವ೧೦
ಮಸೆದ ಕತ್ತಿಯಂತೆ ಎಸೆವಳು ಭಾವೆಯವ್ವಬಲು ಎಸೆವಳು ಭಾವೆಯವ್ವ
ಇವಳ ಹೆಸರು ಅಡಗಲಿಎನ್ನ ಉಸಿರು ಮುಟ್ಟಿಲಿಯವ್ವ೧೧
ಬಾಲೆ ರುಕ್ಮಿಯು ಶೂಲದಂಥವಳವ್ವಬಲು ಶೂಲದಂಥವಳವ್ವ
ಕಾಲು ಕೆದರಿಎನ ಮ್ಯಾಲೆ ಬಂದಿಹಳವ್ವ ೧೨
ಧರೆಯಲ್ಲಿ ನಾ ಒಬ್ಬಳುಹಿರಿಯಳು ಅಲ್ಲವೇನವ್ವ
ನಾ ಒಬ್ಬಳುಹಿರಿಯಳು ಅಲ್ಲವೇನವ್ವಈ ವೈರಿ ಸವತಿಯುಎನ್ನ ಸರಿಯಳೇನವ್ವ ೧೩
ಶ್ರೇಷ್ಠಳಾದರೆ ನೀಉಚಿತವ ಇಟ್ಟುಕೊಳ್ಳವ್ವನೀ ತೊಟ್ಟುಕೊಳ್ಳವ್ವ
ಇಷ್ಟೊಂದು ಸೊಕ್ಕುಕಟ್ಟಿಡಿಸುವೆನವ್ವ ೧೪
ಸೊಕ್ಕು ಸೊಕ್ಕೆನಲಿಕ್ಕೆ ತಕ್ಕವಳೇನೆ ಭಾವೆಇವಳು ತಕ್ಕವಳೇನೆ ಭಾವೆ
ಇವಳ ಚಕ್ಕಂದಕ್ಕೆ ಹರಿಯುಅಕ್ಕರ ಬಡುವನವ್ವ೧೫
ಅಕ್ಕಸದ ಮಾತು ಕೇಳಲಾರೆನವ್ವನಾ ಕೇಳಲಾರೆನವ್ವ
ಇವಳ ಉಕ್ಕಸಕೆ ಕೃಷ್ಣಧಕ್ಕನೆ ನಾಚಿದನವ್ವ೧೬
ಮುಂಜೆರಗು ಹಿಡಿದು ಗುಂಜಿಸಿ ಎಳೆವೆನವ್ವನಾ ಎಳೆವೆನೆವ್ವ
ಪಂಜರದ ಗಿಳಿಯಂತೆಅಂಜಲಿ ಇವಳವ್ವ೧೭
ಕೈ ಹಿಡಿದು ಕೆಳಗೆ ಎಳೆವೆನವ್ವನಾ ಕೆಳಗೆ ಎಳೆವೆನವ್ವಭಯವೇನವ್ವ
ರುಕ್ಮಿಣಿಯ ಭಯವೇನವ್ವಅಯ್ಯೊ ಅಂಜಲ್ಯಾತಕೆ ಸೈ ಸೈಯವ್ವ೧೮
ಎಷ್ಟು ಫಾತುಕಳೆ ನಷ್ಟಳು ಭಾವೆಯವ್ವಬಲು ನಷ್ಟಳು ಭಾವೆಯವ್ವ
ಕೃಷ್ಣನ ತೊಡೆಬಿಟ್ಟು ಇಳಿಸುವೆನವ್ವ೧೯
ಭಾಳೆ ಘಾತುಕಳು ರುಕ್ಮಿಣಿಯವ್ವನೀ ಕೇಳೆ ರುಕ್ಮಿಣಿಯವ್ವ
ಗೈಯ್ಯಾಳಿಯ ತೊಡೆಬಿಟ್ಟು ಇಳಿಸುವೆನವ್ವ೨೦
ಚಂದ್ರನಿಲ್ಲದ ಚಿಕೆ ಚಂದವೇನವ್ವಅದು ಚಂದವೇನವ್ವ
ನಿಜಳೆ ಎನ್ನಮ್ಯಾಲೆಬಂದಿಹಳ್ಯಾತಕವ್ವ೨೧
ದಾರ ಮಲ್ಲಿಗೆ ನಡುವೆ ತೋರಿದಂತವ್ವಅದು ತೋರಿದಂತವ್ವ
ಇವಳ ಹಿರಿತನವೆಲ್ಲವಅರಿಯೆನವ್ವ೨೨
ಸಿರಿರಮಿ ಅರಸಗೆ ಸರಿಯಿಬ್ಬರು ನೀವವ್ವನೀವು ಸರಿಯಿಬ್ಬರವ್ವ
ಬರಿಯೆ ಕರಕರೆಯಹಿರಿಯರಲ್ಲವ್ವ ೨೩

೧೮೫
ಸುರನಾರಿಯರ ಮಹಿಮೆ
ಪರಿಪರಿ ಹೊಗಳುತ
ಬಿರುದಿನ ಕೋಲ
ಹೊಯಿದೇವ ಕೋಲ ಪ.
ಉಮಾದಿಗಳಿಗೆಲ್ಲ ಬೊಮ್ಮ ಹ್ಯಾಂಗ ಶಪಿಸಿದ
ಅಮ್ಮಾ ಇದು ಒಂದು ಕೌತುಕ ಕೋಲ
ಅಮ್ಮಾ ಇದು ಕೌತುಕ ಹೇಳೆಂದ
ಝಮ್ಮನೆ ದೂತೆ ನುಡಿದಳು ಕೋಲ ೧
ಭಾರತಿ ದೇಹದಲ್ಲಿ ಸೇರಿದರ್ಹಾಂಗಮ್ಮ
ಪಾರ್ವತಿದೇವಿ ಮೊದಲಾದ ಕೋಲ
ಪಾರ್ವತಿದೇವಿ ಮೊದಲಾದ ಕೆಲದಿಯರು
ನಾರಿರುಕ್ಮಿಣಿ ಎನಘೇಳ ಕೋಲ2
ಪಾಂಚಾಲಿದೇವಿ ತಾನು ಪಂಚಪಾಂಡವರ ಕೂಡಿ
ಕೆಂಚಿ ತಾ ಹ್ಯಾಂಗ ರಮಿಸೋಳು ಕೋಲ
ಕೆಂಚಿ ತಾ ಹ್ಯಾಂಗ ರಮಿಸೋಳು
ಮಹಿಮೆಯ ಕಿಂಚಿತ್ತಾಗಿ ಎನಘೇಳ ಕೋಲ ೩
ಇಂದು ಮುಖಿಯರ ಜನ ಚಂದಾಗಿ ಹೇಳಮ್ಮ
ಸಂದೇಹ ಬ್ಯಾಡ ಎನಕೂಡ ಕೋಲ
ಸಂದೇಹ ಬ್ಯಾಡ ಎನಕೂಡ ಅದ ಕೇಳಿ
ಆನಂದವ ಬಡುವೆ ಅನುಗಾಲ ಕೋಲ4
ಮತ್ತೆ ರಾಮೇಶನ ಅತ್ಯಂತ ಭಕ್ತಳ
ಉತ್ತಮ ಕಥೆಯ ಎನಘೇಳ ಕೋಲ
ಉತ್ತಮ ಕಥೆಯ ಎನಘೇಳ ಹರುಷದಿಬಿತ್ತಿ ಬೆಳೆದೇವ ಧರೆ ಮ್ಯಾಲೆ ಕೋಲ5

೧೨೨
ಸುಲಭದಿಂದ ಪಾಂಡವರ ಗೆಲಿದುಕೊಂಡುನಗುತಬಾಹೊ ಬಲವ ಹೇಳೆಂದ ಕೃಷ್ಣ ಪ.
ಭರದಿ ಕೃಷ್ಣನಂಫ್ರಿಗಳಿಗೆ ಎರಗಿಬೃಹಸ್ಪತಿಯು ನಗುತ ಬರುವೋದು ಚಂದ್ರನ ಬಲವ ಹರಿಯೇ ತೆಗ್ಳೆಂದ ೧
ಮತ್ತೆ ಪಾಂಡವರ ಗರುವ ಒತ್ತೇವೋ ಮೂಲೆಗೆ ಈ ಹೊತ್ತೆ ಸೂರ್ಯನ ಬಲವ ಚಿತ್ತೈಸÉಂದನು ಬೃಹಸ್ಪತಿ ಚಿತ್ತೈಸೆಂದನು ೨
ಗುರುಬಲ ಎಂಬೋದು ಎಲ್ಲ ಹರದೆಯರಿಗೆ ತೋರುತಿರೆÉ ಗರವು ಮುರಿದು ಸುಭದ್ರೆಯಬರುವಿರಮ್ಮಯ್ಯ ನಗುತ ಬರುವಿರಮ್ಮಯ್ಯ ೩
ಶೀಘ್ರದಿ ಸತ್ಯಭಾಮೆ ರುಕ್ಮಿಣಿದೇವಿಯರು ತೆರಳಿ ದುರ್ಗೆರವಿ ದ್ರೌಪತಿಯ ಮಾನ ತಗ್ಗೋದೆಂದನು ಮಾರಿ ಕುಗ್ಗೋದೆಂದನು೪
ಹದಿನಾರು ಸಾವಿರ ವೀರ ರಾಮೇಶನ ಮಡದಿಯರು ಮಾರಿ ಮೇಲಾಗಿ ಬಾಹೋದು ನಿಜವೆಂದ ಆಮಾತು ನೀರೆ ನಿಜವೆಂದ ೫

೯೯
ಸುವ್ವಿಸತ್ಯಭಾವೆ ಸುವ್ವಿ ರುಕ್ಮಿಣಿದೇವಿ ಸುವ್ವಿ ಸುವ್ವಿ ಕೃಷ್ಣರಾಯ ಸುವ್ವಿ ಎಂದರು ಪಲ್ಲ
ಮುಯ್ಯ ತಂದು ದ್ರೌಪದಿ ಸೈಯ ಸೈಯ ಎನ್ನಿಸಿಕೊಂಡು ಕೈಯ ಹೊಯಿದು ನಗುತ ಕೃಷ್ಣಸುವ್ವಿ ಎಂದರು೧
ಮುದ್ದು ಸುಭದ್ರಾತಾನು ಗೆದ್ದು ಭಾವೆ ರುಕ್ಮಿಣಿಯರು ಬಿದ್ದು ನಗುತ ಕೈಯ ಹೊಯಿದು ಸುವ್ವಿ ಎಂದರು೨
ದಿಟ್ಟೆರಿಬ್ಬರ ಗರ್ವಕುಟ್ಟಿ ಕೇರಿ ತೌಡು ತೆಗೆದು ಕೃಷ್ಣರಾಯನ ನೆನೆಸಿ ಸುವ್ವಿ ಎಂದರು೩
ಚಲುವಿಭಾವೆ ರುಕ್ಮಿಣಿಯರು ಸುಲಭದಿಂದ ಗೆದ್ದುಕೊಂಡು ಹಲಧರನ ಪ್ರೀತಿ ಪಡಿಸಿ ಸುವ್ವಿ ಎಂದರು ೪
ವೀತ ದೋಷ ರಾಮೇಶನ ಪ್ರೀತಿ ಬಡಿಸಿ ದ್ರೌಪತಿಯ ಮಾತಿನಿಂದ ಗೆದ್ದು ಕೊಂಡು ಸುವ್ವಿ ಎಂದರು ೫

೯೬
ಸುಳ್ಳಿಗೆ ನಗರೇನೊರಂಗಯ್ಯನಿನ್ನ ಕಳ್ಳತನವ ನೋಡಿ ಪ.
ಹಾರುವ ಹದ್ದನೇರಿ ತಿರುಗಾಡುವಿಜಾರಿಬಿದ್ದರೆ ತೆರನೇನೊ ಜಾರಿಬಿದ್ದರೆ ತೆರನೇನೊ ನಿನಗೆ ಬುದ್ಧಿಯಾರು ಹೇಳುವರೊ ಧರೆ ಮ್ಯಾಲ೧
ಕ್ಷೀರ ಸಮುದ್ರಶಾಯಿ ಎಂದರೆ ಹಿಗ್ಗುವಿಯಾರು ಅರಿಯರು ನಿನ್ನ ಹುಳುಕುಯಾರು ಅರಿಯರು ನಿನ್ನ ಹುಳುಕು ಅತ್ತೆಮನೆ ಸೇರಿದವನೆಂದು ನಗತಾರೊ ೨
ನೀರೊಳು ನಿನ್ನ ಮನೆ ಹಾವಿನ ಮ್ಯಾಲೆ ನಿದ್ರೆ ಹಾರುವ ಹದ್ದನೇರುವಿಹಾರುವ ಹದ್ದನೇರುವಿ ತಿರುತಿಂಬೊಮೂರು ಅಹಂಕಾರ ನಿನಗ್ಯಾಕೊ೩
ಮಗಳ ಕೊಟ್ಟೆನೆಂದು ಮಮಕಾರದಿಂದಲೆಸುಗುಣ ಸಮುದ್ರ ಉಳುಹಿದಸುಗುಣ ಸಮುದ್ರ ಉಳುಹಿದ ಕಚ್ಚುವ ಶೇಷಖಗರಾಜನಿಂದ ಕೈಕಾಯ್ದ೪
ಹಾರುವ ಗರುಡ ಹಾರಿಸೇನೆಂದರೆ ಮಾರುತಿ ಕರವ ನೆಗಹಿದ ಮಾರುತಿ ಕರವ ನೆಗಹಿದ ಕಾರಣ ಹಾರುವ ಗರುಡ ಕೈ ಕಾಯ್ದ೫
ಕಾಲ ಯವನನ ಕೂಡ ಕಲಹವ ಮಾಡಿಬಂದು ಮೂಲೆಲೆ ಹೋಗಿ ಅಡಗಿದಿಮೂಲೆಲೆ ಹೋಗಿ ಅಡಗಿದಿ ಮುಚಕುಂದ ರಾಯ ನಿಂತಾಗ ಉಳದೆಲ್ಲೊ೬
ಯಾದವರ ಹೊರತಾಗಿ ಕಾಯ್ದಿಲ್ಲ ಒಬ್ಬರನ ಮಧುವೈರಿ ನೀನು ಗೆಲಲಿಲ್ಲಮಧುವೈರಿ ನೀನು ಗೆಲಲಿಲ್ಲ ರಮಿಯರಸ ಮಧೂಕದಿಂದ ಅವರ ಮುಡುಹಿದ ೭

೭೭
ಸೈಯೆ ಸೈಯೆ ಸೈಯೆ ಸೈಯೆ ರುಕ್ಮಿಣಿ ಕೈ ಹೊಯಿದು ಇದಕೆ ನಗುವರೊಸೈಯೆ ಸೈಯೆ ಸತ್ಯಭಾಮೆ ಧ್ಯನನೀವೆ ನೀತಿ ಸೈಯೆ ಪ.
ಮಂದ ಗಮನೆಯರ ಮಾತು ಒಂದೊಂದು ಬಲರಾಮ ಕೇಳಿ ಬಂದನು ಭಾಳ ನಗುತಲೆ ಬಂದನು ಭಾಳ ನಗುತಲೆಭಾಳೆ ಪುಣ್ಯ ಬಂದೊದಗಿತೆಂದು ಕೈ ಹೊಯಿದು ಸೈಯೆ ಸೈಯೆ ೧
ಎಷ್ಟು ಉಪವಾಸ ಮಾಡಿ ಇಷ್ಟು ಸಿದ್ಧಿ ಪಡೆದೆಕಷ್ಟ ಬಟ್ಟಿದ್ದೆ ಬಹುಕಾಲ ಕಷ್ಟ ಬಟ್ಟಿದ್ದೆ ಬಹುಕಾಲ ಭೀಷ್ಮನ ಹೊಟ್ಟಿಯ ಪುಣ್ಯ ಒದಗಿತು ಸೈಯೆ ಸೈಯೆ ೨
ಸತ್ಯ ಭಾಮೆಯ ಪುಣ್ಯ ಅತ್ಯಂತ ಒದಗಿತುಹಿತ್ತಲಿನ ತುಳಸಿ ಬಲು ತಾಳಹಿತ್ತಲಿನ ತುಳಸಿ ಬಲು ತಾಳ ಇದರಮ್ಯಾಲೆ ಹೆತ್ತವರ ಪುಣ್ಯ ಒದಗಿತ ಸೈಯೆ ಸೈಯೆ೩
ಅರಸರ ಮಕ್ಕಳು ನಿಮಗೆ ಬಿರುಸು ಮಾತುಗಳೆಷ್ಟುಸರಸಾಡೊ ಬಗೆಯ ಅರಿಯದೆ ಸರಸಾಡೊ ಬಗೆಯ ಅರಿಯದೆ ಸಭೆಯೊಳು ಸುರಿಸೋರೆ ಇಂಥ ವಚನವ ಸೈಯೆ ಸೈಯೆ ೪
ನಲ್ಲೆ ಸುಭದ್ರ ಇಂಥ ಸೊಲ್ಲು ಕೇಳರಿಯಳು ಎಲ್ಲ ವಿದ್ಯೆಯಲಿ ಕುಶಲರೆಎಲ್ಲ ವಿದ್ಯೆಯಲೆ ಕುಶಲರೆ ನೀವು ಬಲ್ಲಿರೆ ಇದರ ಬಗೆಯಲ್ಲ ಸೈಯೆ ಸೈಯೆ ೫
ಬಿಡದೆ ಕೂಗುವದೆಷ್ಟು ಹೊಡೆಯೊ ಭೇರಿಗಳೆಷ್ಟುಇಂಥನುಡಿಯ ಸುಭದ್ರೆ ಅರಿಯಳುಇಂಥನುಡಿಯ ಸುಭದ್ರೆ ಅರಿಯಳುಸಭೆಯೊಳು ನುಡಿವರೆ ಇಂಥ ವಚನವ ಸೈಯೆ ಸೈಯೆ ೬
ಜಾತಿಗಾರರಂತೆ ಮಾತಿಲೆ ಕುಶಲರು ಭೂತಳದೊಳಗೆ ಪ್ರತಿಯಿಲ್ಲಭೂತಳದೊಳಗೆ ಪ್ರತಿಯಿಲ್ಲ ರಾಮೇಶನ ಪ್ರೀತಿಯ ಮಡದಿಯರು ಹೌಂದ ಹೌಂದ ಸೈಯೆ ಸೈಯೆ೭

೧೭೪
ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ.
ಥೋರ ಮುತ್ತಿನ ಝಲ್ಲೆ ಬಿಗಿದ ತೇರುವಾಜಿ ಶೃಂಗರಿಸಿದ ದಾರಿ ಮ್ಯಾಲ ನಿಂತಾವ ನಮ್ಮ ವೀರ ರಂಗನ ಕರೆಯ ಬರಲು ೧
ಅಚ್ಚ ಮುತ್ತಿನ ಝಲ್ಲೆ ಬಿಗಿದಹೆಚ್ಚಿನ ರಥಗಳುವಾಜಿಜತ್ತಾಗಿ ನಿಂತಾವಮ್ಮಅಚ್ಯುತನ ಕರೆಯ ಬರಲು೨
ಬರಿಯ ಮಾಣಿಕ ರತ್ನ ಬಿಗಿದ ದೊರೆಗಳೇರೊ ರಥ ವಾಜಿಸರಿಯಾಗಿ ನಿಂತಾವಮ್ಮ ನಮ್ಮಹರಿಯ ಕರೆಯ ಬರಲು ೩
ನಾನಾ ಮುತ್ತು ರತ್ನ ಬಿಗಿದ ಆನೆ ಅಂಬಾರಿಗಳು ಕೋಟಿಮಾನವಂತರು ಏರಬೇಕುಶ್ರೀನಿವಾಸನ ಕರೆಯ ಬರಲು ೪
ಮುತ್ತು ಮಾಣಿಕ ರತ್ನ ಬಿಗಿದಹೆಚ್ಚಿನ ರಥಗಳು ವಾಜಿಮಿತ್ರೆಯರಿಂದ ಬರತಾರಮ್ಮನಮ್ಮ ಅಚ್ಯುತನ ಕರೆಯ ಬರಲು ೫
ಏಳು ಕೋಟಿ ಕಾಲಾಳುಗಳುಭಾಳ ಮುತ್ತಿನ ರತ್ನವಿಟ್ಟುತಾಳ ಮೇಳದಿ ನಿಂತಾರಮ್ಮವ್ಯಾಳಾ ಶಯನನ ಕರೆಯ ಬರಲು೬
ಸಾವಿರ ಬಂಡಿಯ ಮ್ಯಾಲೆ ಹೇರಿ ಬುಕ್ಕಿಟ್ಟು ಗುಲಾಲು ಸೂರ್ಯಾಡಿ ರಂಗನ ಕರೆಯಲು ವೀರರೈವರು ಬರುತಾರಮ್ಮ ೭
ಕೊಲ್ಹಾರಿ ಬಂಡಿಯ ಮ್ಯಾಲೆ ಮಲ್ಲಿಗೆ ಸಂಪಿಗೆ ಹೇರಿಚೆಲ್ಲಾಡಿ ರಂಗನ ಕರೆಯ ಬಲ್ಲಿದ ಐವರು ಬರುತಾರಮ್ಮ ೮
ಮದ್ದು ಬಾಣ ಬಿರುಸು ಕೋಟಿ ಶೀಘ್ರವಾಗಿ ನಿಂತಾವಮ್ಮಮುದ್ದು ರಂಗನ ಕರೆಯ ಬರಲು ಮಧ್ವ ಮತದ ಬಿರುದು ಹಿಡಿಸಿ ೯
ಬಿಡವೋ ಬಾಣ ಬಿರುಸು ಕೋಟಿ ಕಡು ಭಾಗÀವತರು ಕೋಟಿಷಟಶಾಸ್ತ್ರ ಬಲ್ಲವರು ಕೋಟಿಒಡೆಯ ರಂಗನ ಕರೆಯ ಬರಲು ೧೦
ತಂದೆ ರಾಮೇಶನ ಗುಣವ ಬಂಧುಗಳು ಹೊಗಳೋರು ಕೋಟಿಅಂದು ಆರಣ ಬ್ರಾಹ್ಮಣ ಕ್ರಮ ಜಟಿ ಬಂದು ಕರೆವೊ ದ್ವಿಜರು ಕೋಟಿ ೧೧

೧೦೧
ಸೋಬಾನವೆನ್ನಿರೆ ಶ್ರೀದೇವಿ ಅರಸಗೆ ನಾಭಿಯಲೆ ಅಜನ ಪಡೆದವಗೆ ಪ.
ಬರಿಯ ಮಾಣಿಕದ ಹಸೆಗೆ ಕಿರಿಯ ಚನ್ನಿಗ ಬಾರೊಸರಿಯವರು ನೋಡಿ ನಗುವಂತೆ ಸರಿಯವರು ನೋಡಿ ನಗುವಂತೆ ಎನುತಲೆ ದೊರೆಗಳು ನುಡಿದು ಕರೆದರು೧
ಮುತ್ತು ಮಾಣಿಕದ ಹಸೆಗೆ ಭಕ್ತವತ್ಸಲ ಬಾರೋಹತ್ತು ದಿಕ್ಕುಗಳ ಬೆಳಗುತ ಹತ್ತು ದಿಕ್ಕುಗಳ ಬೆಳಗುತ ಎನುತಲಿಮಿತ್ರಿ ಸುಭದ್ರಾ ಕರೆದಳು೨
ಚದುರ ರಾಮೇಶನ ಮುದಿಮಾರಿವನಿತೆಯರು ಬದಿಯಲಿ ಬನ್ನಿ ಹಸೆಮ್ಯಾಲೆ ಬದಿಯಲಿ ಬನ್ನಿ ಹಸೆಮ್ಯಾಲೆ ಎನುತಲಿ ಸುದತೆ ಸುಭದ್ರಾ ಕರೆದಳು೩

೧೫೮
ಸ್ವಾಮಿ ಬಂದನು ಸತ್ಯಭಾಮೆರುಕ್ಮಿಣಿಯರಿಂದ ಕಾಮಿತ ಫಲವ ಕೊಡುತಲೆ ಪ.
ತಂದೆ ವಾಸುದೇವ ತಾಯಿ ದೇವಕಿದೇವಿಎಂಭತ್ತುಕೋಟಿ ಯಾದವರುಎಂಭತ್ತುಕೋಟಿ ಯಾದವರು ಬರುತಾರೆ ತೊಂಭತ್ತು ಮಹಲು ತೆರವಿರಲಿ ೧
ಸರ್ಪಶಯನನ ಬದಿಯಲೊಪ್ಪುತ ಬಲರಾಮ ಛಸ್ಪ್ಪನ್ನ ಕೋಟಿ ದ್ವಿಜರಿಂದ ಛಸ್ಪ್ಪನ್ನ ಕೋಟಿ ದ್ವಿಜರಿಂದ ಬರುತಾರ ಎಪ್ಪತ್ತು ಮಹಲು ತರವಿರಲಿ ೨
ರಂಗ ಬಂದನು ಸಖಿ ಮಂಗಳಾರುತಿಯ ತಾರೆ ಕಂಗಳಿಗೆ ಸೂರ್ಯ ಹೊಳೆವಂತೆಕಂಗಳಿಗೆ ಸೂರ್ಯ ಹೊಳೆವಂತೆ ಗರುಡನೇರಿಅಂಗಳಕ ಬಂದ ನರಹರಿ ೩
ನಾಗಶಯನನು ಬಂದ ಬೇಗಆರುತಿ ತಾರೆ ನೂರು ಸೂರ್ಯರ ಬೆಳಕಿಲೆ ನೂರು ಸೂರ್ಯರ ಬೆಳಗೊ ಗರುಡನೇರಿಬಾಗಿಲಿಗೆ ಬಂದ ಯದುಪತಿ೪
ಮದಗಜಗಮನೆ ಬ್ಯಾಗ ಕಡಲಾರತಿಯ ತಾರೆ ಚದುರೆ ನೀ ತಾರೆ ಫಲಗಳಚದುರೆ ನೀ ತಾರೆ ಫಲಗಳ ಐವರಿಗೆ ಎದುರಿಗೆ ಬಾರೆಂದು ಕರಿಯಮ್ಮ ೫
ಕೃಷ್ಣರಾಯನು ಬಂದ ಬುಕ್ಕಿಟ್ಟು ಸೂರ್ಯಾಡೆಅಷ್ಟ ಸೌಭಾಗ್ಯ ಇವು ನೋಡಅಷ್ಟ ಸೌಭಾಗ್ಯ ಇವು ನೋಡ ಮಾಡಿದ್ದುಎಷ್ಟು ಸುಕೃತವು ಸ್ಮರಿಸಮ್ಮ೬
ಶ್ರೀದೇವಿಯರಸು ಬಂದ ಕೇದಿಗೆ ಮಲ್ಲಿಗೆ ತಾರೆ ಆದರದಿತಾರೆ ತುಳಸಿಯ ಆದರದಿತಾರೆ ತುಳಸಿಯ ಅಕ್ಷತೆಯಿಂದ ಮಾಧವ ರಾಮೇಶನ ಉಪಚರಿಸೆ೭

೧೪೪
ಹನುಮನ ಬಲಗೊಂಬೆ ಹರುಷದಲೆನಮ್ಮ ತನುಮನ ಧನ ಈತಗೊಪ್ಪಿಸುತಲೆ ಪ.
ರಾಣಿಗೆ ಮುದ್ರೆಯನಿಟ್ಟ ಜಾಣನೆನುತಲೆಮುಖ್ಯ ಪ್ರಾಣ ಮುಯ್ಯಾ ಗೆಲೆಸೋ ಈ ಕ್ಷಣ ಎನುತಲೆ ೧
ಕೋತಿಯ ಸ್ವರೂಪನಾದ ಈತನೆನುತಲೆ ದೈತ್ಯ ಜಾತಿಯ ಸಂಹರಿಸಿ ಬಂದ ಖ್ಯಾತನೆನುತಲೆ೨
ಸೀತೆಯ ಮನೆಗೆ ತಂದ ಮಹಾತ್ಮನೆನುತಲೆಈತಗೆ ಜೋಡ್ಯಾರು ಮುಂದೆ ಖ್ಯಾತನೆನುತಲೆ ೩
ಕೃಷ್ಣನ ಸೇವೆಗೆ ಅತಿ ನಿಷ್ಠ ನೆನುತಲೆದುಷ್ಟ ಕೌರವರ ಕೊಂದ ಶ್ರೇಷ್ಠ ನೆನುತಲೆ ೪
ಶ್ರೀಶ ರಾಮೇಶಗೆ ಮುಖ್ಯದಾಸನೆನುತಲೆ ವಾಸವಾದ ಬದರಿಯಲಿ ಮಧ್ವೇಶನೆನುತಲೆ೫

೧೦೦
ಹರಿಯು ಉಂಬೊ ಹರುಷವಮ್ಮನಮ್ಮ ದೊರೆಗಳೈವರು ಮಾಡೊ ಉಪಚಾರವಮ್ಮಪಲ್ಲ
ಮಂದಗಮನೆಯರ ಸಹಿತ ಕೃಷ್ಣ ಬಂದು ಮಿಂದು ಮಡಿಗಳನುಟ್ಟು ಶೀಘ್ರದಲಿ ಬಂದು ಕುಳಿತತಂದು ದ್ರೌಪತಿಯು ಬಡಿಸುತಿರಲು ಇಂದಿರೇಶ ಹರುಷದಲಿ ಉಣುತ ೧
ಮೆಲ್ಲಗೆ ಉಣ್ಣಯ್ಯ ಯದುವೀರ ಹಿಂದೆ ಖಲ ಬುತ್ತಿಯ ಕದ್ದು ಉಂಡ ಅತಿಶೂರಗೊಲ್ಲರೆಲ್ಲರ ಕೂಡ ವಿಹಾರ ಗೊಲ್ಲರೆಲ್ಲರ ಕೂಡ ವಿಹಾರಿಎನಿಸಿ ಎಲ್ಲ ಪದಾರ್ಥ ಚಲ್ಲದಿರೊ ಧೀರ೨
ಕದ್ದ ಬೆಣ್ಣಿಯ ನೆನೆಸಬೇಡ ನಮ್ಮ ಮುದ್ದು ರಾಮೇಶಗೆ ಬೇಕಾದ್ದು ಬೇಡೊ ಸಿದ್ಧ ದ್ರೌಪತಿ ನೀಡುತಿರಲು ಉದ್ದಿನ ಕಾಳಷ್ಟು ಭಿಡೆಯು ಬ್ಯಾಡ೩


ಹಸ್ತಿನಾಪುರದಾಗ ಹಸ್ತಿ ಮಾದಲಾದಉತ್ತಮ ರಥವು ಸಂದಣಿಸಿತು ಕೋಲ ಪ.
ಇಂದ್ರನು ತಾನೊಂದು ಗಜೇಂದ್ರನೇರಿಕೊಂಡುಮಂದಗಮನೆಯರ ಶಚಿ ಸಹಿತ ಕೋಲಮಂದಗಮನೆಯರ ಶಚಿ ಸಹಿತ ವಜ್ರಾಯುಧಉಪೇಂದ್ರನ ಮನೆಗೆ ಬರುತಾನೆ ಕೋಲ ೧
ಹುತಭುಕ್ತನು ತಾನುಸತಿ ಸ್ವಾಹಾದೇವಿಯ ಕೂಡಿಅತಿಶಯವಾದ ಮೇಷವೇರಿಅತಿಶಯವಾದ ಮೇಷವೇರಿ ಶಕ್ತಿಯ ಧರಿಸಿಕ್ರತುಪತಿ ಮನೆಗೆ ಬರುತಾನೆ ಕೋಲ ೨
ಜಾಣ ಯಮನು ತಾನು ಕೋಣ ವೇರಿಕೊಂಡುರಾಣಿ ಶಾಮಲೆಯ ಸಹಿತಾಗಿ ಕೋಲರಾಣಿ ಶಾಮಲೆಯ ಸಹಿತಾಗಿ ದಂಡವ ಧರಿಸಿಪ್ರಾಣೇಶನ ಮನೆಗೆ ಬರುತಾನೆ ಕೋಲ ೩
ನಿರುತಿ ತಾನೊಂದು ನರನ ಪೆಗಲನೇರಿತರುಣಿಯ ಸಹಿತ ಆಯುಧ ಧರಿಸಿ ಕೋಲತರುಣಿಯ ಸಹಿತ ಆಯುಧ ಧರಿಸಿನರಹರಿ ಮನೆಗೆ ಬರುತಾನೆ ಕೋಲ೪
ವರುಣನು ತಾನೊಂದು ಮಕರ ಮೇಲೇರಿ ಶ್ರೀ ಭಾಗೀರಥಿಯ ಒಡಗೂಡಿ ಕೋಲಶ್ರೀ ಭಾಗೀರಥಿಯ ಒಡಗೂಡಿ ಪಾಶವ ಧರಿಸಿದರಾಧರನ ಮನೆಗೆ ಬರುತಾನ ಕೋಲ ೫
ಮರುತನು ತಾನೊಂದು ಎರಳಿ ಮೇಲೇರಿತರುಣಿ ಪ್ರವಹಿ ಒಡಗೂಡಿ ಕೋಲತರುಣಿ ಪ್ರವಹಿ ಒಡಗೂಡಿ ಗದೆಯ ಧರಿಸಿಮುರಹರನ ಮನೆಗೆ ಬರುತಾನ ಕೋಲ ೬
ವಿತ್ತಪನು ತಾನೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೊಡಿ ಕೋಲಚಿತ್ತದೊಲ್ಲಭೆಯ ಒಡಗೊಡಿ ಖಡ್ಗವ ಧರಿಸಿಪೃಥ್ವೀಶನ ಮನೆಗೆ ಬರುತಾನೆ ಕೋಲ೭
ಈಶನು ತಾನೊಂದು ವೃಷಭನ ಮೇಲೇರಿಶ್ರೀ ಸತಿದೇವಿ ಒಡಗೂಡಿಕೋಲಶ್ರೀ ಸತಿದೇವಿ ಒಡಗೂಡಿ ತ್ರಿಶೂಲವ ಧರಿಸಿನರಸಿಂಹನ ಮನೆಗೆ ಬರುತಾನೆ ಕೋಲ೮
ಧರ್ಮ ಭೀಮಾರ್ಜುನ ನಕುಲ ಸಹದೇವರುಪ್ರೇಮದಿಂದಲೆ ಪೊರ ಹೊರಟು ಕೋಲಪ್ರೇಮದಿಂದಲೆ ಪೊರ ಹೊರಟು ಬರುತಾರೆ ರಮಿಯರಸನ ಅರಮನೆಗೆ ಕೋಲ ೯

೧೦೮
ಹಿಡಿಯೊರಂಗಯ್ಯ ಉಡುಗೊರೆಕೊಡುವೆವೊ ಕೃಷ್ಣಯ್ಯಭಿಡೆ ಬ್ಯಾಡೊ ಬೆತ್ತಲಿದ್ದಿಇದೇನು ಸಡಗರ ರಂಗಯ್ಯ ಪ.
ಶಾಲು ಜೋಡಿಯ ತಕ್ಕ ನೀಲ ದೊಡ್ಯಾಣನಿಟ್ಟುಮ್ಯಾಲೆ ಉಂಗುರವು ಮೊದಲಾಗಿಮ್ಯಾಲೆ ಉಂಗುರವು ಮೊದಲಾಗಿ ತಂದೆವಬಾಲ ಕೃಷ್ಣಯ್ಯನ ಜನಕಗೆ ಉಡುಗೊರೆ ೧
ಗೌರಿ ಪಟಾವಳಿ ಮ್ಯಾಲೆ ಚೌರಿ ರಾಗಟೆ ಗೊಂಡೆಯ ಶೌರಿ ಕೃಷ್ಣಯ್ಯನ ಜನನಿಗೆಶೌರಿ ಕೃಷ್ಣಯ್ಯನ ಜನನಿ ದೇವಕಿಗೆಕುವರಿಯರು ಕೊಟ್ಟ ಉಡುಗೊರೆ೨
ಹಲವು ಸೂರ್ಯರ ಬೆಳಕು ಗೆಲವೊ ಪಿತಾಂಬರ ಬೆಲೆಯಿಲ್ಲದಂಥ ಮುಕುಟವುಬೆಲೆಯಿಲ್ಲದಂಥ ಮುಕುಟ ಮುತ್ತಿನ ಹಾರ ಬಲರಾಮನಿಗೆ ಉಡುಗೊರೆ೩
ಬಿಳಿ ಬಣ್ಣದ ಸೀರೆರನ್ನ ಮಾಣಿಕದಾಭರಣಹೊನ್ನೋಲೆ ಕೊಪ್ಪು ನಡುವಿಟ್ಟುಹೊನ್ನೋಲೆ ಕೊಪ್ಪು ನಡುವಿಟ್ಟು ತಂದೆವ ಕನ್ನೆ ರೇವತಿಗೆ ಉಡುಗೊರೆ ೪
ಸಕಲಾತಿ ಸೀರೆ ದೋರೆ ಕಂಕಣ ಸರಿಗೆ ಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ರಾಮೇಶನನೂರು ಮಂದಿಗೆ ಉಡುಗೊರೆ ೫

೨೬೨
ಹಿಡಿರಂಗ ಜವಳಿ
ಕೊಡು ಉಡುಗೊರೆ
ಪಾಲ್ಗಡಲ ಶಯನ
ಭೂಪತಿ ಗುಡುಗೊರೆ ಪ.
ತಟಿತ್ತಾ ಸರಸವುಳ್ಳ
ಪಟ್ಟಾವಳಿ ಧೋತರ
ದಟ್ಟಿತ ವಾಗಿದ್ದ ಬಿಡಿಮುತ್ತು
ದಟ್ಟಿತವಾಗಿದ್ದ ಬಿಡಿ ಮುತ್ತು ಮುತ್ತಿನಕಂಠಿ
ಮಠದವರಿಗೆ ಕೊಟ್ಟ ಉಡುಗೊರೆ ೧
ಬಟ್ಟು ಗೋಲಂಚಿನ
ಧಿಟ್ಟಾದ ಧೋತರ
ಬಟ್ಟಿಗುಂಗುರ ಉಡದಾರ
ಬಟ್ಟಿಗುಂಗುರ ಉಡದಾರ ಶೂರಪಾಲಿ
ಕಟ್ಟಿಯವರಿಗೆ ಕೊಟ್ಟ ಉಡುಗೊರೆ ೨
ಹತ್ತು ಬಟ್ಟಿಗೆ ತಕ್ಕ
ಮುತ್ತಿನ ಉಂಗುರ
ಮತ್ತೆ ಎಲೆ ಅಡಕೆ ನಡುವಿಟ್ಟು
ಎಲೆ ಅಡಕೆ ನಡುವಿಟ್ಟು ಇವರ ಮನೆ
ಜೋಯಿಸರಿಗೆ ಕೊಟ್ಟ ಉಡುಗೊರೆ ೩
ಅಕ್ಕ ಕೊಲ್ಹಾಪುರ
ಮುಖ್ಯ ಪಂಢರಾಪುರ
ಚಿಕ್ಕ ಸಾತಾರೆ ಪುಣೆಯವ
ಚಿಕ್ಕ ಸಾತಾರೆ ಪುಣೆಯವ ಪೈಠಣ ಶಾಲು
ಮುಖ್ಯ ಗಲಗಲಿಯವರಿಗೆ ಉಡುಗೊರೆ 4
ಕಂಕಣವಾಡಿ ಮುಂದೆ
ಡೊಂಕಾಗಿ ಹರಿದಾಳು
ವಂಶಿಯ ಜೋಡು ನಡುವಿಟ್ಟು
ವಂಶಿಯ ಜೋಡು ನಡುವಿಟ್ಟು ಗಲಗಲಿಯ
ಮುತೈದೆಯರಿಗೆಲ್ಲ ಉಡುಗೊರೆ ೫
ಅಧ್ಯಾಪಕ ಜನರೊಳು
ವಿದ್ವಾಂಸರಿಗೆಲ್ಲ
ಶುದ್ಧ ರತ್ನದಲಿ ರಚಿಸಿದ
ಶುದ್ಧ ರತ್ನದಲಿ ರಚಿಸಿದ ಉಂಗುರ
ವಿದ್ವಾಂಸರಿಗೆಲ್ಲ ಉಡುಗೊರೆ ೬
ನಾಲ್ಕು ಸಾವಿರ ಉಂಗುರ
ಅನೇಕ ಬಗೆ ಶಾಲು
ಈ ಕಾಲದಲೆ ತರಿಸೇವ
ಈ ಕಾಲದಲೆ ತರಿಸೇವ ರಮಿಯರಸು
ಕೊಟ್ಟ ಅನೇಕ ಜನರಿಗೆ ಉಡುಗೊರೆ ೭

೨೨೧
ಹಿಡಿಸುವೆ ಹುಚ್ಚನೆ ಹಿಡಿಸುವೆ
ರಂಗನರಸಿಯರ ಪಾಟ ಬಡಿಸುವೆ ಪ.
ತಮವೆಂಬ ಭಂಗಿಯ ಕುಡಿಸುವೆ
ಬುದ್ಧಿಭ್ರಮೆಗೊಂಡ ಮಾತು ನುಡಿಸುವೆ
ಸುಮನಸರಿಗೆ ಹೆಂಡ ಕುಡಿಸುವೆ
ಯಾರೂ ನಮಿಸದಂತೆ ದೂರ ಇಡಿಸುವೆ ೧
ರಜವೆಂಬೋದ್ರವ್ಯ ಬಚ್ಚಿಡಿಸುವೆ
ಇವರ ರಾಜ ಲಕ್ಷಣ ಕಟ್ಟಿ ಇಡಿಸುವೆ
ಗಜಗಮನೆಯರ ಗರ್ವ ಮುರಿಸುವೆ
ನಮ್ಮ ತ್ರಿಜಗ ವಂದನ ಹಾಸ್ಯ ಮಾಡಿಸುವೆ ೨
ಸತ್ಯ ಸಾಮಿತ್ಯವತೆಗೆಸುವೆ
ಉನ್ಮತ್ತೆಯರ ಮಾಡಿ ಮೆರೆಸುವೆ
ಕತ್ತಲೆ ಮನೆಯೊಳಗೆ ಹೊಗಿಸುವೆ
ಇನ್ನೆತ್ತ ಹೋಗಲೆಂದು ಎನಿಸುವೆ ೩
ಯಾರೂ ಇಲ್ಲದಲಿ ಇಡಿಸುವೆ
ಇವರ ನೀರು ಕಂಡು ಭಯಬಡಿಸುವೆ
ಓರೆಂದು ಗಾಬರಿಗೆಡಿಸುವೆ
ಕಾಯೋ ಶ್ರೀನಿವಾಸಾನೆಂದೆನಿಸುವೆ ೪
ಒಬ್ಬರಿಲ್ಲದಲಿ ಇಡಿಸುವೆ
ಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆ
ತಬ್ಬಿಬ್ಬುಗೊಂಡು ತಳವೆಳಸುವೆ ಅರ್ಥಿಲೊಬ್ಬ ರಾಮೇಶನ ನೋಡಿಸುವೆ ೫

೭೫
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ.
ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ೧
ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು೨
ಮಂದಗಮನೆಯರ ವಾರ್ತೆ ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವ ಮಾಡಿ ಕರೆದಳು ೩
ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು೪
ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು ೫
ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು ೬
ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು ೭

೧೧೦
ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ.
ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ ೧
ಸೀತೆಗೆ ಹಿಂದಕ್ಕೆ ಪ್ರೀತಿಯ ಬಡಿಸಿದ ಕೋತಿಯ ಹಿಂಡು ಕರೆಸವ್ವಕೋತಿಯ ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ೨
ಮಡದಿ ಜಾಂಬವಂತಿ ಸಡಗರದಿ ಬರುವಾಗ ಒಡಗೂಡಿ ಯಾರು ಬರಬೇಕುಒಡಗೂಡಿ ಯಾರು ಬರಬೇಕು ತವರೂರ ಕರಡಿಯ ಹಿಂಡು ಕರೆಸವ್ವ ಸಖಿಯೆ ೩
ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ ೪
ಲಕುಮಿ ರಮಣನ ಚಿಕ್ಕ ಮಡದಿ ಭಾವೆ ಅಕ್ಕರದಿಂದ ಬರುವಾಗ ಅಕ್ಕರದಿಂದ ಒಡಗೂಡಿ ಬರುವಾಗ ಬೆಕ್ಕಿನ ಹಿಂಡು ಬರಲೆವ್ವ ಸಖಿಯೆ ೫
ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ ೬
ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ೭

ಕಡಲಶಯನನಪುರದಿ
೩೯
ಕಡಲಶಯನನ ಪುರದಿ ಬಡವ ರೊಬ್ಬರಿಲ್ಲಪಡೆಯಲಿ ಮುತ್ತು ಅಳೆದಳೆದು ಕೋಲಪಡೆಯಲಿ ಮುತ್ತು ಅಳೆದಳೆದು ರಂಗಯ್ಯಕೊಡವೋನು ದಾನ ಕಡೆಯಿಲ್ಲ ಕೋಲ ೧
ಚಿಂತಾಮಣಿ ಕಾಮಧೇನು ಕಲ್ಪತರು ಎಂಬೊಶ್ರೀಕಾಂತನ ಕೈದಾನಕ್ಕೊಳಗಾಗಿ ಕೋಲ ಶ್ರೀಕಾಂತನ ಕೈದಾನ ಕ್ಕೊಳಗಾಗಿ ಸ್ವರ್ಗದ ಅಂತಃ ಪುರದಲ್ಲಿ ಅಡಗಿದವು ಕೋಲ೨
ಒಂದಕ್ಕೊಂದು ತಾವು ನಿಂತು ಮಾತಾಡುತತಂದೆ ರಾಮೇಶನ ಅರಮನೆಗೆ ಕೋಲತಂದೆ ರಾಮೇಶನ ಅರಮನೆಗೆ ತಾವುಹೋಗೋದು ಛಸ್ಂದಲ್ಲವೆಂದು ಜರಿದಾವು ಕೋಲ೩

ಹಾಡಿನ ಹೆಸರು :ಕಡಲಶಯನನಪುರದಿ
ಹಾಡಿದವರ ಹೆಸರು :ಕುಸುಮಾ ಕೆ.ಎಂ.
ರಾಗ :ಭೀಂಪಲಾಸ್
ಸಂಗೀತ ನಿರ್ದೇಶಕರು :ಪ್ರಸಾದ್ ಎನ್.ಎಸ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಿನ್ನನೇ ನಮೊ
೧೪೨
ನಿನ್ನನೆ ನಮೊ ಎಂಬೆವ ಇಂದಿರಾ ದೇವಿನಿನ್ನನೆ ನಮೊ ಎಂಬೆವ ಬಿನ್ನಹ ಲಾಲಿಸುಪನ್ನಗ ಶಯನನ ಘನ್ನ ಪಟ್ಟದ ರಾಣಿ ಪ.
ಬಾಲೆ ಇಂದಿರೆ ನಿನ್ನ ಕಾಲಿಗೆ ವಂದಿಸಿ ಜಾಲಗಾರುತಿಯರ ಸೋಲಿಸಬೇಕೆಂದು ೧
ಗುಜ್ಜಿ ಇಂದಿರೆ ನಿನ್ನ ಹೆಜ್ಜೆ ಹೆಜ್ಜೆಗೆ ನಮಿಸಿಅರ್ಜುನನ ಮಡದಿಯರ ಲಜ್ಜೆಗೈಸೆವೆಂದು೨
ನಿತ್ಯ ಮುಕ್ತಳೆ, ನಿನ್ನ ಅತ್ಯಂತ ಬಲಗೊಂಬೆ ಉನ್ಮತ್ತೆಯರ ಗರವು ಒತ್ತಿಬಂದೆವೆಂದು ೩
ವ್ಯಾಲಾಶಯನನ ರಾಣಿ ಬಹಳೆವಂದಿಸಿಗೈಯ್ಯಾಳಿಯರ ಮುಯ್ಯಾ ನಿವಾಳಿಸಬೇಕೆಂದು ೪
ಪ್ರಾಣೇಶ ನರಸಿಯ ಕಾಣುತ ವಂದಿಸಿಜಾಣಿಯರ ಮನೆಗ್ಹೋಗಿ ಆಣಿ ಬಿಡಿಸೇವೆಂದು೫
ಜರದ ಕುಪ್ಪುಸಸೀರೆ ಸರಿಗೆ ದೋರೆಯನಿಟ್ಟುಕರಗಳ ಮುಗಿದೆವ ವರಗಳ ಪಾಲಿಸು೬
ಥೋರ ಮುತ್ತಿನ ದಿವ್ಯಹಾರ ಭಾರವನಿಟ್ಟುನಾರಿಯರ ಗೆಲಿಸುವ ಭಾರವ ರಾಮೇಶಗೆ ವಹಿಸೆಂದು೭

ಹಾಡಿನ ಹೆಸರು :ನಿನ್ನನೇ ನಮೊ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಹಂಸಧ್ವನಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

ಪಾಲಿಸೆ ಸರಸ್ವತಿ ಪಾಲಿಸೆ

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾರಿಗೆ ಬಂದೆನುಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ ಪ.
ಆದಿ ಬ್ರಹ್ಮನರಾಣಿಯೆ ವೇದಕ್ಕ ಭಿಮಾನಿಯೆಮೋದ ಗಾಯನ ಕುಶಲಳೆಮೋದ ಗಾಯನ ಕುಶಲಳೆ ಸರಸ್ವತಿ ನೀ ದಯಮಾಡಿ ಮತಿಯ ಕೊಡು ೧
ಹೊನ್ನವರೆ ಹೊಸ ಕಪ್ಪು ಬೆನ್ನಿನ ಮ್ಯಾಲಿನ ಹೆರಳುಕಿನ್ನರಿ ನಿನ್ನ ಬಲಗೈಯಕಿನ್ನರಿ ನಿನ್ನ ಬಲಗೈಯ್ಯಲಿ ಹಿಡಕೊಂಡುಖನಿ ಬಾ ನಮ್ಮ ವಚನಕ್ಕೆ ೨
ಮಿತ್ರಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಮತ್ತೆ ಮಲ್ಲಿಗೆಯ ನೆನೆದಂಡೆಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದ್ದೆಪ್ರತ್ಯಕ್ಷವಾಗ ಸಭೆಯೊಳು೩
ಹರದಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಅರಳು ಮಲ್ಲಿಗೆ ನೆನೆದಂಡೆ ಅರಳು ಮಲ್ಲಿಗೆ ನೆನೆದಂಡೆ ತಂದಿಹೆತಡೆಯದೆ ನಮಗೆ ವರವ ಕೊಡು ೪
ಗುಜ್ಜಿ ಸರಸ್ವತಿಗೆ ಗೆಜ್ಜೆ ಸರಪಳಿಯಿಟ್ಟು ವಜ್ರಮಾಣಿಕ್ಯ ದಾಭರಣವಜ್ರಮಾಣಿಕ್ಯ ದಾಭರಣ ಭೂಷಿತಳಾಗಿನಿರ್ಜರೊಳುತ್ತಮಳೆ ನಡೆ ಮುಂದೆ ೫
ಹರದಿ ಸರಸ್ವತಿ ಸರಿಗೆಸರಪಳಿಯಿಟ್ಟುಜರದ ಸೀರೆಯನೆ ನಿರಿದುಟ್ಟು ಜರದ ಸೀರೆಯನೆ ನಿರಿದುಟ್ಟು ಬಾರಮ್ಮದೊರೆ ರಾಮೇಶನ ಅರಮನೆಗೆ೬

ಹಾಡಿನ ಹೆಸರು :ಪಾಲಿಸೆ ಸರಸ್ವತಿ ಪಾಲಿಸೆ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಕೀರವಾಣಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

ಸಖಿ ನೋಡ ದ್ವಾಪರ ಯುಗವ
೧೭
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ.
ಎಲ್ಲ ಗುರುಗಳ ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ ೧
ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ೨
ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ ೩
ಲಕ್ಷಕೋಟಿ ಸಂಖ್ಯದ ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ ೪
ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ೫
ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ ೬
ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ ೭

ಹಾಡಿನ ಹೆಸರು :ಸಖಿ ನೋಡ ದ್ವಾಪರ ಯುಗವ
ಹಾಡಿದವರ ಹೆಸರು :ರಿತೀಶ ಪದ್ಮನಾಭ, ಸುಪ್ರಿಯಾ ಆಚಾರ್ಯ
ರಾಗ : ದುರ್ಗಾ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

Leave a Reply

Your email address will not be published. Required fields are marked *