Categories
ರಚನೆಗಳು

ಗಲಗಲಿಅವ್ವನವರು

೪೨
ಬರತಾರಂತ್ಹೇಳೆ ಹರಿಪಾದ ದರ್ಶನಕೆತ್ವರಿತದಿ ಪಾಂಡವರು ಪ.
ಹದಿನಾಲ್ಕು ಲೋಕದ ಪದುಮಗಂಧಿಯರೆಲ್ಲಮದನನಯ್ಯನ ಮನೆನೋಡಲುಮದನನಯ್ಯನ ಮನೆನೋಡೋ ವ್ಯಾಜ್ಯದಿಮುದದಿಂದ ಮುಯ್ಯ ತರುತಾರೆ೧
ಸುರನಾರಿಯರು ನಾನಾ ಪರಿಯ ಭೂಷಣವನಿಟ್ಟುಹರಿಯ ಮನೆ ನೋಡೋ ಹರುಷದಿಹರಿಯ ಮನೆ ನೋಡೋ ಹರುಷದಿ ಮುಯ್ಯವತರತಾರೆ ತಾವು ತವಕದಿ೨
ನಾರಿಯರೆಲ್ಲರು ನಾನಾ ವಸ್ತಗÀಳಿಟ್ಟುಸಾರಾವಳಿಗಳ ನಿರಿದುಟ್ಟು ಸಾರಾವಳಿಗಳ ನಿರಿದುಟ್ಟು ಹೊರಡೆ ಸೂರ್ಯಮುಳಗಿದನೆ ಆಕಾಶದಲಿ ೩
ಅಕ್ಕತಂಗಿಯರು ತಾವು ಚಕ್ಕನೆ ವಸ್ತಗಳಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟು ಹೊರಡಲುಅರ್ಕ ಮುಳುಗಿದ ಆಗಸದಿ ೪
ಮಂದ ಗಮನೆಯರೆಲ್ಲ ತುಂಬಿದೊಸ್ತಗಳಿಟ್ಟುಕಂದರಿಗೆ ಬಾಲರ ಉಡುಗೆ ಇಟ್ಟುಕಂದರಿಗೆ ಬಾಲರ ಉಡುಗೆಯಿಟ್ಟು ಹೊರಡಲುಚಂದ್ರಜ್ಯೋತಿಗಳು ಹಿಡಿದಾವೆ ೫
ಸುಮನಸೆಯರೆಲ್ಲ ಯಮುನಾದೇವಿಯ ದಾಟಿಧಿಮಿ ಧಿಮಿ ಭೇರಿ ಹೊಯಿಸುತಧಿಮಿ ಧಿಮಿ ಭೇರಿ ಹೊಯಿಸುತ ಬರುವಾಗಭುವನದ ಬೆಳಕು ಹರವಿತು೬
ಅಂಬರಕೆ ತುಳುಕುವ ಅಂಬಾರಿ ಆನೆಗಳು ಕುಂಭಿಣಿ ಜಡಿದು ಬರತಾವೆ ಕುಂಭಿಣಿ ಜಡಿದು ಬರತಾವೆ ರಾಮೇಶನ ಪದಾಂಬುಜ ನೋಡೊ ಭರದಿಂದ೭

೧೭೫
ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ.
ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ ೧
ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು೨
ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ ೩
ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು೪
ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ೫
ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ೬
ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ ೭
ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ೮
ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ೯
ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ೧೦

೧೫೯
ಬಲು ಬಲು ಬೆರಗಾದ ಬಲರಾಮನು ನೋಡಿ ಹಲವು ಚಿತ್ರದ ದ್ವಾರ ವೀರ ಪ.
ಕುಂದ ಮಂದಾರವು ಸುಂದರ ಉದ್ಯಾನ ಅಂದವಾಗಿ ಬೆಳೆದ ತುಳಸಿಯ ಅಂದವಾಗಿ ಬೆಳೆದ ವೃಂದಾವನ ಚಂದ ತೋರುವುದೊ ಜನಕೆಲ್ಲ೧
ಕಾರಂಜಿ ಜ¯ ಹಾರಿವೆ ಗಗನಕ್ಕೆ ನೀರೆ ವರ್ಣಿಸಲು ವಶವಲ್ಲನೀರೆ ವರ್ಣಿಸಲು ವಶವಲ್ಲ ಕಲ್ಪತರು ವೀರ ಪಾಂಡವರ ವನವಿದು೨
ಹಸಿರು ಪಚ್ಚದ ಕಲ್ಲು ಕುಸುರಾದ ಗಿಳಿಬೋದ ಎಸೆವೊ ಮಾಣಿಕದ ಚೌಕಟ್ಟುಎಸೆವೊ ಮಾಣಿಕದ ಕಳಸಗಳು ದೆಸೆಗೆಲ್ಲ ಬೆಳಕು ಎಸೆವೋದು ೩
ಮೇಲಾದ ದ್ವಾರಕ್ಕೆ ಮ್ಯಾಲೆ ಕನ್ನಡಿಗಳು ಸಾಲು ಕಿಡಕಿಗಳು ಧ್ವಜಗಳುಸಾಲು ಕಿಡಕಿಗಳು ಒಳಗಿದ್ದಬಾಲೆರಿನೆÀ್ನಂಥ ಚಲುವರು ೪
ಮುತ್ತು ಮಾಣಿಕ್ಯ ರತ್ನತೆತ್ತಿಸಿದ ಅರಮನೆಗಳುಜತ್ತು ತೋರುವ ಜನಕೆಲ್ಲಜತ್ತು ತೋರುವ ಜನಕೆಲ್ಲ ಒಳಗಿದ್ದಮಿತ್ರೇರಿನ್ನೆಂಥ ಚಲುವರು ೫
ಬರಿಯ ಮಾಣಿಕದ ಗೋಡೆ ಸರಿಯಾದ ಕನ್ನಡಿಪರಿಪರಿ ರತ್ನ ಹೊಳವೋವೆಪರಿಪರಿ ರತ್ನ ಹೊಳೆವವು ಒಳಗಿದ್ದದೊರೆಗಳಿನ್ನೆಂಥ ಚಲುವರು೬
ವೀರರ ಮನೆ ಮುಂದೆ ಧೀರ ರಾಮೇಶ ಇಳಿದ ನಾರಿಯರ ಸಹಿತ ಹರುಷದಿ ನಾರಿಯರ ಸಹಿತ ಹರುಷದಿ ಹೇಳಲುತೀವ್ರ ಒಬ್ಬಳನ ಕಳಿಸೆಂದ೭

೨೬೦
ಬಲ್ಲಿದ ಗುರುಗಳಿಗೆ
ಎಲ್ಲ ಹಿರಿಯರಿಗೆ ಎರಗಿ
ಬಲ್ಲಷ್ಟು ತತ್ವ ರಚಿಸಿದೆ ಕೋಲ
ಬಲ್ಲಷ್ಟು ತತ್ವ ರಚಿಸಿದೆ
ಲಕ್ಷ್ಮಿವಲ್ಲಭನಿದಕೆ ಒಲಿಯಲಿ ಕೋಲ ೧
ಪತಿಗಳ ದಯದಿ ಮಾತು ಪತಿ ರಚಿಸಿದ
ಶ್ರೀಪತಿ ಗುಣನಿಧಿ ಕವನವ ಕೋಲ
ಶ್ರೀಪತಿ ಗುಣನಿಧಿ ಕವನವು ವಿಸ್ತರಕೆ
ಮಧ್ವ ಮತದ ಜನ
ತಿದ್ದಿ ಕೊಡಬಹುದು ಕೋಲ ೨
ರಾಮಕೃಷ್ಣ ದೈವರು ಪ್ರೇಮದ ನುಡಿಗಳು
ನೇಮ ನಿಷ್ಠೆಯಲೆ ಶ್ರವಣವೆ ಕೋಲ
ನೇಮ ನಿಷ್ಠಯಲಿ ಶ್ರವಣವ ಮಾಡಲು
ನಮ್ಮ ಕಾಮನ ಪಿತನು
ಕೈಹಿಡಿವ ಕೋಲ ೩
ಮುದ್ದುರಂಗನ ಕಥೆ
ಬುದ್ಧಿ ಸಾಲದೆ ಅಪದ್ಧವೆ ಇರಲಿ
ಅತಿದಯದಿ ಕೋಲ
ಅಪದ್ಧವೆ ಇರಲಿ ಅತಿದಯದಿ ಪಾಂಡುರಂಗ
ವಿದ್ವಜ್ಜನ ವಂದ್ಯ ಕೈಕೊಳ್ಳೊ ಕೋಲ4
ಅರಸಿ ರುಕ್ಮಿಣಿ ಭಾವೆಗೆ
ಸರಸಲ್ಲಾಡಿದ ಮಾತು
ಹರುಷ ಮನದಿಂದ ಶ್ರವಣವೆ ಕೋಲ
ಹರುಷ ಮನದಿಂದಶ್ರವಣ ಮಾಡಲು
ನಮ್ಮ ನರಸಿಂಹನಿದಕೆ ಒಲಿವನು ಕೋಲ5
ಹರದಿ ರುಕ್ಮಿಣಿ ಭಾಮೆ
ತಿರುಗಿಸಿದ ಮುಯ್ಯವ
ಆದರದಿಂದ ಕೇಳಿದವರಿಗೆ ಕೋಲ
ಆದರದಿಂದ ಕೇಳಿದವರಿಗೆ ಶ್ರೀಕೃಷ್ಣ
ಪರಮ ಪದವಿಯನೆ ಕೊಡುವನು ಕೋಲ6
ಮಚ್ಛ ನೇತ್ರಿಯರು ತಂದ
ಅಚ್ಛಾದ ಮುಯ್ಯವ
ಸ್ವಚ್ಛಮನದಿಂದ ಶ್ರವಣವಕೋಲ
ಸ್ವಚ್ಛಮನದಿಂದ ಶ್ರವಣವ ಮಾಡಲು
ನಮ್ಮ ಅಚ್ಯುತನಿದಕೆ ಒಲಿವನು ಕೋಲ7
ಮಂದಗಮನೆಯರು ತಂದ
ಚಂದದ ಮುಯ್ಯವ
ಆನಂದ ಮನದಿಂದ ಶ್ರವಣವ ಕೋಲ
ಆನಂದ ಮನದಿಂದ ಶ್ರವಣವ ಮಾಡಲು
ನಮ್ಮ ಅನಂತ ನಿದಕೆ ಒಲಿವನು ಕೋಲ8
ಕಾಂತೆ ರುಕ್ಮಿಣಿ ಭಾಮೆಗೆ
ಪಂಥಲಾಡಿದ ಮಾತು
ಸಂತೋಷದಿಂದ ಶ್ರವಣವ ಕೋಲ
ಸಂತೋಷದಿಂದ ಶ್ರವಣವ ಮಾಡಲು ಭಾಗ್ಯಸಂತಾನ ಕೊಡುವ ರಮಿ ಅರಸು ಕೋಲ9

೮೮
ಬಲ್ಲೆ ಬಲ್ಲೆ ನಿಮ್ಮೆಲ್ಲರ ಗುಣವನು ನಾನು ಪಾರ್ಥಅವರ ಹೊಲ್ಲತನವ ಹೇಳಲು ಹೋಗುವಿ ಕೋಪಿಸಿ ನೀನು ಪ.
ದೊರೆ ಧರ್ಮನೆಂಬೊ ಬರಿ ಬಿಂಕದ ಹೆಸರ್ಯಾಕೊಬರಿಯ ಬಿಂಕದ ಹೆಸರ್ಯಾಕೊ ಜನ ಒರಲಿ ಒರಲಿಬಾಯಿ ತೆರೆಯಬಾರದು ದಯಸಾಕೊಹಿರಿಯನೆಂಬೊ ಹರಲಿಗೆ ತಕ್ಕವನಲ್ಲಇವ ಹರಲಿಗೆ ತಕ್ಕವನಿವನಲ್ಲನಿಮ್ಮ ಚರಿಯವ ಕೇಳುತ ಅಂಜರೊ ನರರೆಲ್ಲ ೧
ಕುಂಭಿಪಾಕದೊಳು ಕುದಿಸುವ ಕೆಲವರು ಕೇಳೋ ಅದು ದಯವೆಂಬೊಮಾತಿದು ಮಂದಿಗೆ ಇರದು ಹೇಳೊಜಂಬವೆಂಬುದು ತುಂಬಿದೆ ಇವನಲ್ಲೆಷ್ಟು ಇದುನಮ್ಮ ಅಂಬುಜಾಕ್ಷನಲಿ ಅತಿ ಬ್ಯಾಗ ಬಾಹೋದು ಸಿಟ್ಟು ೨
ಅನ್ಯ ಲೋಕದವರ ನ್ಯಾಯ ಕೇಳುವನಿವನಲ್ಲತನ್ನ ಬುದ್ದಿಯನು ತಾ ಕಳೆದನು ಧರ್ಮನು ಎಲ್ಲಮಾನ್ಯ ಮಾನ್ಯರೊಳು ಮಾನ ಭಂಗಿಸುವುದು ಇರುವುದು ಏನೊನಮ್ಮ ಚದುರ ರಾಮೇಶನು ಚನ್ನಾಗಿ ನಗುತಿಹನುತಾನು ೩

೧೪೮
ಬಾ ವೆಂಕಟರಮಣ ಭಾಗ್ಯದ ನಿಧಿಯೆ ಸುರರಿಗೆ ನಿತ್ಯ ಸುಧೆಯೆ ಪ.
ಕೇಶವ ನಾರಾಯಣ ಲೇಸು ಕೊಡು ಮಾಧವಎಲ್ಲ ಕಂಟಕವ ಪರಿಹರಿಸೊಎಲ್ಲ ಕಂಟಕವ ಪರಿಹರಿಸೊ ಗೋವಿಂದ ಈ ಸಮಯದಿ ಗೆಲಿಸೆಂದು ೧
ವಿಷ್ಣು ಮದುಸೂದನ ಶ್ರೇಷ್ಠತ್ರಿವಿಕ್ರಮತುಷ್ಟವಾಮನ ಗೆಲಿಸೆಂದುತುಷ್ಟವಾಮನ ಗೆಲಿಸೆಂದು ಕಾಲಕಾಲಕೆಎಲ್ಲರೂ ಕರವ ಮುಗಿವೆವು೨
ಶ್ರೀಧರ ಹೃಷಿಕೇಶ ಸಾಧು ಪದ್ಮನಾಭಮುದದಿ ಎನಗೆ ವರಗಳಮುದದಿ ಎನಗೆ ವರಗಳ ಕೊಡುವಂಥದಾಮೋದರಗೆ ಕರವ ಮುಗಿವೆವು ೩
ಸಂಕರ್ಷಣ ವಾಸುದೇವ ಪಂಕಜಾಕ್ಷ ಪ್ರದ್ಯುಮ್ನಶಂಕಿಸದೆ ನಮಗೆ ವರಗಳ ಶಂಕಿಸದೆ ನಮಗೆ ವರಗಳ ಕೊಡುವಂಥಕುಂಕುಮಾಂಕಿತ ಘನ ಮಹಿಮನೆ ೪
ಅನಿರುದ್ಧ ಪುರುಷೋತ್ತಮ ಹರುಷಾಗೊ ನಾರಸಿಂಹಪರುಷಸೂಕ್ತದಿ ಪ್ರತಿಪಾದ್ಯಪರುಷಸೂಕ್ತದಿ ಪ್ರತಿಪಾದ್ಯ ಅಚ್ಯುತಹರುಷದಿ ನಮ್ಮ ಗೆಲಿಸೆಂದು೫
ಜನಾರ್ದನ ಉಪೇಂದ್ರ ಜಾಹ್ನವಿ ಜನಕನೆಜನನ ರಹಿತನೆ ಹರೇಕೃಷ್ಣಜನನ ರಹಿತನೆ ಹರೇಕೃಷ್ಣ ವೇದವ್ಯಾಸ ವನಜನಾಭನ ಮೊದಲ ಬಲಗೊಂಬೆ ೬
ಮಚ್ಛ ಕೂರ್ಮ ವರಾಹ ಸ್ವಚ್ಛಾಗೊ ನಾರಸಿಂಹ ಅಚ್ಚ ಸುಶೀಲ ಬಲಿರಾಯ ಅಚ್ಚ ಸುಶೀಲ ಬಲಿಗೊಲಿದಂಥಮಚ್ಚನೇತ್ರಿಯರ ಬಲಗೊಂಬೆ ೭
ಭಾರ್ಗವಿ ರಘುವೀರ ಶೀಘ್ರದಿಗೆಲಿಸೆಂದುರುಕ್ಮಿಣ ಪತಿಗೆನಮೋಯೆಂಬೆ ರುಕ್ಮಿಣ ಪತಿಗೆನಮೋಯೆಂಬೆ ಬೌದ್ಧಕಲ್ಕಿಕುಗ್ಗದೆ ನಮಗೆ ವರಗಳ ೮
ಸೃಷ್ಟಿ ಸ್ಥಿತಿಲಯ ಲವಕೆ ಕಾರಣವಾದ ಜಗತ್ಪತಿ ಜಾಹ್ನವಿ ಜನಕನೆಜಗತ್ಪತಿ ಜಾಹ್ನವಿ ಜನಕನೆ ರಾಮೇಶನ ನಗಧರನ ಮೊದಲ ಬಲಗೊಂಬೆ೯

೧೫೩
ಬಾಗುವ ತೆಂಗಿನ ಮರನೋಡ ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ.
ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ ೧
ಜಾತಿ ಹಂಸನೋಡ ವನದೊಳು ಮಾತಿನ ಗಿಳಿ ನೋಡ ಸಖಿಯೆನೂತನ ಮೃಗ ನೋಡ ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ ೨
ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ ೩
ಚಾರು ಕೋನವ ನೋಡ ಕಮಲವು ತೂರಿ ಬರುತಲಿವೆ ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ೪
ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ ೫
ಜಾಜಿ ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ ೬
ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ೭
ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ ೮
ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ೯

೬೦
ಬಾರೆ ರುಕ್ಮಿಣಿ ನಿನ್ನ ಮುಖತೋರೆನಗೆಪಾಟಲಾಗದೆಸಾರ ಶ್ರೀಕೃಷನ್ಣ ತೊಡೆಬಿಟ್ಟುಬಾರೆ ರುಕ್ಮಿಣಿ ಪ.
ಕೃಷ್ಣರಾಯನ ಮನೆಯ ಪಡಸಾಲೆಯೊಳಗೆಪಟ್ಟಿ ಪಟ್ಟಾವಳಿ ಹರವಿಲ್ಲಪಟ್ಟಿ ಪಟ್ಟಾವಳಿ ಹರವಿಲ್ಲ ಕುಂತಿ ಮನೆಯವಿಶಿಷ್ಠ ಸಿಂಹಾಸನವ ತರಿಸೇವ ರುಕ್ಮಿಣಿ ಬಾರೆ೧
ಜರದ ಸಿಂಹಾಸನಕೆ ಸರದ ಮಾಣಿಕವು ರಚಸಿಬರೆದಿವೆ ಮ್ಯಾಲೆ ದಶರೂಪಬರೆದಿವೆ ಮ್ಯಾಲೆ ದಿವ್ಯ ದಶರೂಪದಆಸನವ ದೊರೆಗಳು ಏರಿ ಕುಳಿತಾರೆ ಬಾರೆ ರುಕ್ಮಿಣಿ೨
ಮುತ್ತಿನ ಸಿಂಹಾಸನಕೆ ಮುತ್ತು ಮಾಣಿಕವೆ ರಚಿಸಿಹತ್ತಾವತಾರವÀ ಬರೆದಿವೆಹತ್ತಾವತಾರ ಬರೆದ ಸಿಂಹಾಸನವಹತ್ತಿ ಪಾಂಡವರು ಕುಳಿತಾರೆ ಬಾರೆ ರುಕ್ಮಿಣಿ ೩
ಮಂದಗಮನೆಯರೆಲ್ಲ ಚಂದ್ರಶಾಲೆಯೊಳಗೆಛಂದ ಛಂದದಲಿ ಹೊಳೆಯುತಛಂದ ಛಂದದಲಿ ಹೊಳೆಯುತ ನಿಂತಾರೆಗಂಧ ಕಸ್ತೂರಿ ಉದುರೂತ ಬಾರೆ ರುಕ್ಮಿಣಿ೪
ಹರಿಯ ಮಡದಿಯರು ನಮ್ಮ ಕರೆಯ ಬರಲಿಲ್ಲೆಂದುಮರ್ಯಾದೆಯುಳ್ಳ ಶುಕವಾಣಿಮರ್ಯಾದೆಯುಳ್ಳ ಶುಕವಾಣಿ ರಾಮೇಶನಹರದೆಯರಿಗೆ ವಿನಯದಿ ನುಡಿದಳು ಬಾರೆ ರುಕ್ಮಿಣಿ೫

೨೨೮
ಬಾರೆ ವೈಯ್ಯಾರಿ
ದೊಡ್ಡಮಾರಿ ಸಂಚರಿಸುವಾಗ
ಫೋರರಾತ್ರಿಲೆ ಬರಬಹುದೆ ಪ.
ಮಂದಗಮನೆ ನೀ ಮದನಜ ನೈಯ್ಯನ
ಬದಿಯಲೆ ಬೆರೆದ ಬಗೆ ಹ್ಯಾಂಗ
ಬಗೆಹ್ಯಾಂಗನಿನ್ನ ಕೀರ್ತಿ
ಅದ್ಭುತವಮ್ಮಾ ಜಗದೊಳು ೧
ಧರ್ಮನ ಒಂದು ವರುಷ ರಮ್ಮಿಸಿ ಕರೆದೆಲ್ಲ
ಧರ್ಮ ತಾ ಹೇಸಿ ಜರಿದನು
ಧರ್ಮ ತಾ ಹೇಸಿ ಜರಿದನು ಅದಕೇಳಿ
ಬ್ರಮ್ಹಾದಿಗಳೆಲ್ಲ ನಗುತಾರೆ ೨
ಭೀಮನ ಒಂದು ವರುಷ ಕಾಮಿಸಿ ಕರೆದೆಲ್ಲ
ಭೀಮತಾ ಹೇಸಿ ಜರಿದನು
ಭೀಮತಾ ಹೇಸಿ ಜರಿದನು ಅದಕೇಳಿ
ಭೂಮಿ ಪಾಲಕರು ನಗುತಾರೆ3
ಮಿತ್ರಿ ಇಬ್ಬರ ಸಂಗ ತೃಪ್ತಿಯ ಗೈಯದೆ
ಪಾರ್ಥನ ವರುಷ ಕರೆದೆಲ್ಲ
ಪಾರ್ಥನ ವರುಷ ಕರೆದೆಲ್ಲ
ಅವ ಜರಿದು ಯಾತ್ರೆಗೆ ನಡೆದ ಬಿಡಳೆಂದು4
ಸಕಲರ ಕರೆಯಲು ಕಕುಲಾತಿ ತೀರದೆ
ನಕುಲನ ವರುಷ ಕರೆದೆಲ್ಲ
ನಕುಲನ ವರುಷ ಕರೆದೆಲ್ಲ
ಅವ ಜರಿದು ಯುಕ್ತಿಲೆ ಬ್ಯಾಗ ಕಡೆಯಾದ5
ಸಹದೇವನೊಂದು ವರುಷ ಮೋಹಿಸಿ ಕರೆದೆಲ್ಲ
ಸಹದೇವ ಹೇಸಿ ಜರೆದನು
ಸಹದೇವ ಹೇಸಿ ಜರೆದನು
ಆದೆಲ್ಲ ಹಲ್ಲಿ ಮರಿಯಂತೆ ೬
ಎಲ್ಲರ ಕರೆಯಲು ಒಲ್ಲದೆ ಜರೆದರು
ಅಲ್ಲವತಿಂದ ಇಲಿಯಂತೆ
ಅಲ್ಲವತಿಂದ ಇಲಿಯಂತೆ ಮರುಗಲುಚಲವ ರಾಮೇಶ ಜರಿದನು ೭

ಸತಿಯು ಸುಭದ್ರೆ ನೀನು ಯತಿಯ ಬೆನ್ನತ್ತಿದಾಗ
೬೬
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ.
ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ ೧
ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ ೨
ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು೩
ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ೪
ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ೫
ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು ೬
ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ೭
ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ೮
ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ೯

೨೪೦
ಬಾರೊ ಬಾರೊ ಕೃಷ್ಣಬಾರೊ ಬಾರಯ್ಯ
ಚಾರು ನವರತ್ನದ ಹಸೆಯ ಏರು ಬಾರಯ್ಯ ಪ.
ನಾರುವ ಮೈಯವನೆ ನೀರು ಬಿಟ್ಟು ಬಾರಯ್ಯ
ಭಾರ ಹೊರೆಸೋದಿಲ್ಲ ಹಸೆಯ ಏರು ಬಾರಯ್ಯ
ಕ್ವಾರಿ ಮಸೆದು ಕೋಪಿಸಬ್ಯಾಡ
ದಾರಿಗಾಲ ಪರಿಯಬ್ಯಾಡ
ಭಾರ ಕೊಡಲಿ ಧರಿಸಿ ನೀನು ಭೋರಾಡ ಬ್ಯಾಡ ೧
ಮಡದಿಯ ಹಂಬಲದಿ ಅಡವಿ ಹಿಡಿಯ ಬ್ಯಾಡಯ್ಯ
ತುಡುಗತನದಿ ಹಾಲು ಮೊಸರು ಕುಡಿಯ ಬ್ಯಾಡಯ್ಯ
ಒಡವೆ ವಸ್ತ್ರ ಕಾಣೆ ನಿನಗೆ ಹಿಡಿದೇಜಿ
ಎಲ್ಲವೂ ಕೃಷ್ಣ ಬಡಿವಾರ ಸಾಕೊ
ನಿನ್ನ ಸಡಗರ ರಂಗಯ್ಯ ೨
ಅರ್ಥಿಲೆ ಪುರುಷ ರಾಮೇಶ ಮತ್ತೆ ಬಾರಯ್ಯ
ಜಾರವೃತ್ತಿಗಳ ಜರೆದು ಹಸೆಯ ಹತ್ತ ಬಾರಯ್ಯ
ಮಿತ್ರಿ ರುಕ್ಮಿಣಿ ಸತ್ಯಭಾವೆಯರು
ಮತ್ತೆ ಉಳಿದ ನಾರಿಯರು ಅತ್ಯಂತ ಶೋಭಿಸುತಲೆ
ಮುತ್ತಿನ ಹಸೆಯ ಏರು ಬಾರಯ್ಯ ಕೃಷ್ಣ ಬಾರೊ ಬಾರೊ ೩

ವಾತನೊಡಗೂಡಿ ಜನಿಸಿ ಆತನ ಮದುವೆ ಮಾಡಿಕೊಂಡೆ
೭೪
ಬಿಂಕವ್ಯಾತಕ್ಕೆನಮ್ಮ ಕೂಡ ಬಿಂಕವ್ಯಾತಕ್ಕೆಅಕಳಂಕ ರುಕ್ಮಿಣಿಯರಮನೆಗೆ ಅಹಂಕಾರದಲಿ ಮುಯ್ಯ ತಂದು ಪ.
ವಾತನೊಡಗೂಡಿ ಜನಿಸಿ ಆತನಮದುವೆ ಮಾಡಿಕೊಂಡೆನೀತಿಯೇನ ನಿನಗೆ ದ್ರೌಪತಿಈ ಮಾತು ಕೇಳಿ ಮಂದಿ ನಗರೆ ೧
ಹುಟ್ಟು ಹೊಂದು ನಾರಿ ನೀನುಎಷ್ಟೊಂದು ಗರವು ನಮ್ಮ ಕೂಡಯಾಕೆ ಕೃಷ್ಣನ ಅರಸಿ ರುಕ್ಮಿಣಿಗೆಒಂದಿಷ್ಟರೆ ದೋಷ ತೋರ ಸಖಿಯೆ೨
ಜನನ ಮರಣವೆಂಬೆರಡು ಜಾಣಿ ರುಕ್ಮಿಣಿಬಲ್ಲಳೇನ ಜನನಿ ಬೊಮ್ಮಗ ಎನಸಿತಾನೆ ಜಗದಿ ಖ್ಯಾತಿ ತುಂಬಿಲ್ಲವೇನ ಈ ಜಗದಿ ಖ್ಯಾತಿ ತುಂಬಿಲ್ಲವೇನ ೩
ನಿತ್ಯ ಮುಕ್ತಳುನಿರ್ವಿಕಾರಳು ನಿತ್ಯ ನಿತ್ಯ ಜಗದುದ್ದಾರಳು ನಿತ್ಯ ಮೂರುತಿ ಕೃಷ್ಣನ ಭಜಿಸಿನಿತ್ಯ ತೃಪ್ತಳು ಎನಿಸುತಿಹಳು ೪
ಅತ್ತಿಗೆಯರೆಂಬೊ ದಿವ್ಯ ಅರ್ಥನಾಮವ ಜಪಿಸಿಮತ್ತೆ ರಾಮೇಶನ ಅರಸಿಯರಿಬ್ಬರಭೃತ್ಯಳಾಗಿ ಭಾಗ್ಯವ ಪಡಿಯೆ೫

ಶಂಬರಾರಿ ಪಿತನ
೬೨
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ.
ಭಕ್ತವತ್ಸಲನ ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ ೧
ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ೨
ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ೩
ಜಗದೊಡೆಯನ ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ೪
ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ೫
ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ೬
ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ೭

೨೦೯
ಬಿಟ್ಟು ಹೋಗುವರೇನೊ ಕೃಷ್ಣಕೋಮಲೆಯರ
ವೃಷ್ಟಿವÀರ್ಯ ಸಕಲ ಇಷ್ಟದ ಬಾಲೆಯರ ಪ.
ಮಿತ್ರೆಯರ ಕೂಡಿ ರಮಣ ಚಿತ್ತದಿ ಚಿಂತಿಸಿ
ರಾತ್ರಿ ಕೊಳಲು ವಿಚಿತ್ರದಿಂದ ಊದಿದಿ1
ಎಲ್ಲ ವಿಷಯ ಬಿಟ್ಟು ನಿಲ್ಲದೆ ಬಂದರು
ಒಲ್ಲದೆ ಅಡಗಿದಿ ಕಲ್ಲೆದೆ ಅಂದ ಪಾರ್ಥ2
ಇಟ್ಟು ನಿನ್ನಲೆ ಮನ ಬಿಟ್ಟು ವಿಷಯ ಸುಖ
ಗಟ್ಯಾಗಿ ರಾತ್ರಿಲೆ ಬಂದು ಎಷ್ಟು ನಂಬಿದ್ದಾರಲ್ಲೊ3
ಇಂಥ ವಂಚಕನೆಂದು ಕಾಂತೆಯರು ಅರಿಯರು
ಭ್ರಾಂತಿಯ ಗೈಸಿದಿ ಎಂತು ಅರ್ಜುನ ನುಡಿದ ೪
ಹಸಿದವಗೊಂದೆ ತುತ್ತು ಅಶನವÀ ಕೊಟ್ಟು ಅನ್ನ
ವ್ಯಸನವ ಹಚ್ಚಿದಂತೆ ಕುಸುಮನಾಭ ಮಾಡಿದ ೫
ಬೆಂದು ಬಿಸಲೆಳು ಬಹಳ ಬಂದ ಪುರುಷಗೆ ಉದಕ
ಒಂದು ಗುಟುಕುಕೊಟ್ಟು ಆನಂದವ ಮಾಡಿದೆ ೬
ಕಂದಗೆ ಸ್ತನ ಕೊಟ್ಟುಬಿಂದು ಬಾಯೊಳಗೆ ಇಟ್ಟು
ಹಿಂದಕ್ಕೆ ಸರೆಯದಂತೆ ತಂದೆ ರಾಮೇಶ ಮಾಡಿದ7

೧೨
ಬಿನ್ನಹ ಮಾಡುವೆನು ಅತ್ತಿಗೆಯರ ಚನ್ನಾಗಿ ಗೆಲಿಸೆಂದುಚದುರ ಮುದ್ಗಲವಾಸನೆದುರಿಗೆಮಧುರ ವಾಕ್ಯಗಳ ನುಡಿಸೆಂದು ಪ.
ಗೋಕರ್ಣ ಹಿಮವಂತ ಕೇದಾರಿ ದೇಶಗೋಕುಲ ವೃಂದಾವನ ಮಥುರೆಯಗೋಕುಲ ವೃಂದಾವನ ಮಥುರೆಯ ಒಡೆಯನಸಾಕಲ್ಯದಿಂದ ಬಲಗೊಂಬೆ ೧
ಕರವೀರ ಪುರವಾಸ ದೊರೆಯುಪಂಢರಿನಾಥವರವಡ್ಡಿಒಡೆಯ ಬದರಿಯವರವಡ್ಡಿಒಡೆಯ ಬದರಿ ನಾರಾಯಣಗೆಕರವ ಜೋಡಿಸುವೆ ಕರುಣಿಸು೨
ಅಯೋಧ್ಯ ಪುರವಾಸ ಗಯಾ ಗದಾಧರಕೈವಲ್ಯ ನೀವ ಜಗದೊಡೆಯಕೈವಲ್ಯ ನೀವ ಜಗದೊಡೆಯನ ಪಾದಕೈಮುಗಿದು ಮೊದಲೆ ಬಲಗೊಂಬೆ೩
ದೇಶ ದೇಶದ ಜನಕೆ ಲೇಸಾಗಿ ಸಲಹುವೆಶ್ರೀ ಸತಿದೇವಿ ಅರಸನೆಶ್ರೀ ಸತಿದೇವಿ ಅರಸನೆ ಕಾಶಿವಿಶ್ವೇಶ್ವರನ ಮೊದಲೆ ಬಲಗೊಂಬೆ೪
ಹರಿಹರವಾಸಗೆ ಕರಗಳ ಜೋಡಿಸಿಸರ್ವರಿಗೆ ವರವ ಸುಲಭದಿಸರ್ವರಿಗೆ ವರವ ಸುಲಭದಿ ಕೊಡುವಹರದೆಯರ ಪಂಥವ ಗೆಲಿಸೆಂದು೫
ಲಕ್ಷ್ಮಿರಮಣನೆ ಪಕ್ಷಿವಾಹನ ಸ್ವಾಮಿಕುಕ್ಷಿಲೆ ಜಗವ ಸಲಹುವೆಕುಕ್ಷಿಲೆ ಜಗವ ಸಲಹುವೆ ಶೂರ್ಪಾಲಿವೃಕ್ಷರಾಜನ ಬಲಗೊಂಬೆ೬
ಗಲಗಲಿ ನರಸಿಂಹ ಬಲು ದಯವಂತಸುಲಭದಿ ವರವ ಕೊಡುವವನುಸುಲಭದಿ ವರವ ಕೊಡುವ ರಾಮೇಶನ ಚಲ್ವ ಮೂರ್ತಿಯ ಬಲಗೊಂಬೆ ೭

೧೧೮
ಬೊಮ್ಮ ಬಂದನೆಂದು ತಮ್ಮ ಲೋಕದಿ ನಮ್ಮ ಮಾರುತ ಬಂದನೆ ಧಿಮ್ಮಿ ಧಿಮ್ಮಿ ಧಿಮ್ಮಿ ಧಿಮಕು ಎನುತಲೆ ರಮ್ಮಿ ರಮಣಿಯರ ಕುಣಿಸುತ ಪ.
ರುದ್ರ ಬಂದನೆಂದು ಸಿದ್ದಜನ ಕೂಡಿಪ್ರಸಿದ್ದ ಇಂದ್ರನು ಬಂದನೆ ಅಲ್ಲಿದ್ದÀ ಪರಿವಾರ ಎಲ್ಲ ಸಹಿತಾಗಿಶುದ್ಧ ಅಗ್ನಿಯು ಬಂದನೆ ೧
ಯಮನು ಬಂದನೆಂದು ಯಾಮದಿಂದಲೆಝಮ್ಮನೆ ನಿರರತಿ ಬಂದನೆ ವಿಮಲ ವಾಹನ ವರುಣ ಬಂದನೆರಮಣಿ ಗಂಗೆಯು ಬಂದಳೆ೨
ವಾತ ಬಂದನೆಂದು ಖ್ಯಾತಿಯಿಂದಲೆಆತಪನು ಬಂದನೆ ವೀತ ದೋಷ ರಮೇಶನಲ್ಲಿಗೆ ನೂತನದ ಮುಯ್ಯ ನೋಡಲು೩

೧೪೩
ಬೊಮ್ಮಗೆ ಶರಣಿಂಬೆವಮ್ಮ ನಮ್ಮ ಗುರು ಎಂದುಹಮ್ಮಿನ ಸುಭದ್ರಾ ದೇವಿಗೆ ದಮ್ಮಯ್ಯ ಎನಲೆಂದು ಪ.
ವಾಚಾಭಿಮಾನಿ ನಿಜ ಬುದ್ಧಿ ಸೂಚಿಸು ನಮಗೆಂದುನಾಚಿಸಿ ದ್ರೌಪತಿಯ ಆಣೆ ಅಚೆ-ಲಿಟ್ಟೆವೆಂದು೧
ಮಂದ ಜಾಸನ ಜಗಕೆ ನೀವು ತಂದೆ ಹೌದೆಂದುನಿಂದಿಸಿ ಸುಭದ್ರೆ ಪಂಥ ಹಿಂದಕ್ಕೆ ಹಾಕೆವೆಂದು೨
ಸರಸಿಜಾಸನ ರಾಮೇಶನ ಅರಸಿಯರ ಗೆಲಿಸೆಂದುಸರಸದಿ ಸುಭದ್ರಾ ಪಂಥ ಬಿರುಸು ಮಾಡೆವೆಂದು ೩

೬೪
ಬ್ಯಾಡ ಬ್ಯಾಡಿರೆಂದ ಅವರೊಳು ಪಂಥಬ್ಯಾಡ ಬ್ಯಾಡಿರೆಂದು ಬ್ಯಾಡ ಬ್ಯಾಡ ಪಂಥ ನೋಡಿಕೊ ರುಕ್ಮಿಣಿಮಾಡೋರು ಮುಖಭಂಗಬೇಡಿಕೊಂಡೆನು ಭಾವೆ ಪ.
ಹರದೆಯರಾಡಿದ ಮಾತು ಹರಿಯು ಕೇಳುತಬೇಗ ಕರೆಯ ಹೋಗೆಂದ ಮಡದಿಯರ ಕರಿಯ ಹೋಗೆಂದ ಮಡದಿಯರ ದ್ರೌಪತಿಯೆಸರಿಯಲ್ಲ ಪಂಥ ಬಿಡಿರೆಂದ೧
ಹಾದಿ ಬೀದಿಯ ಮಾತು ಸಾಧಿಸುವರೆ ನೀವುವೇದಾಂತ ಮಳೆಯ ಗರೆದಾರುವೇದಾಂತ ಮಳೆಯ ಗರೆದಾರು ನಿಮ್ಮ ಮುಖಆದೀತು ಸಣ್ಣ ಸಭೆಯೊಳು ೨
ಅತ್ತಲಿತ್ತಲೆ ಮಾತು ಜತ್ತು ಮಾಡೋರೆನೀವುಶ್ರುತ್ಯರ್ಥವೆಲ್ಲ ಸುರಿಸೋರುಶ್ರುತ್ಯರ್ಥವೆಲ್ಲ ಸುರಿಸೋರು ನಿಮ್ಮಮುಖ ಬತ್ತೀತು ಒಂದು ಕ್ಷಣದಾಗೆ ೩
ಮಂದರಧರ ತನ್ನ ತಂಗಿಯರ ಕರೆಯೆಂದು ಮಂದಹಾಸದಲಿ ನುಡಿದನುಮಂದಹಾಸದಲಿ ನುಡಿದನು ಭಾವೆರುಕ್ಮಿಣಿ ಬಂದರು ಭಾಳೆ ವಿನಯದಿ೪
ಆರು ಮಂದಿ ಹರಿಯ ನಾರಿಯರುಹದಿನಾರು ಸಾವಿರ ಮಂದಿ ಸಹಿತಾಗಿಹದಿನಾರು ಸಾವಿರ ಮಂದಿ ಸಹಿತಾಗಿ ಬಂದರು ನಾರಿ ದ್ರೌಪದಿಯ ಕರೆಯಲು೫
ನೂರುಮಂದಿ ಹರಿಯನಾರಿಯರುತಂತಮ್ಮ ಹಾರಭಾರಗಳ ಅಲವೂತಹಾರಭಾರಗಳು ಅಲವೂತ ಬಂದರು ನೀರೆ ಸುಭದ್ರೆಯು ಕರೆಯಲು ೬
ಪನ್ನಂಗ ವೇಣಿಯರು ಮನ್ನಿಸಿ ಹರಿಯಾಜ್ಞೆಚನ್ನ ರಾಮೇಶನ ಮಡದಿಯರು ಚನ್ನ ರಾಮೇಶನ ಮಡದಿಯರು ಬಂದರುಕನಿ ದ್ರೌಪತಿಯ ಕರೆಯಲು ೭

೧೯೩
ಭಕ್ತವತ್ಸಲ ಬಂದು ಬಾಗಿಲಲಿ ನಿಂತು
ಎತ್ತ ಹೋದನೆಂದು ಧಿಗಿಲು ಎನುತ
ಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.
ವೀರರಾಯರÀ ಸೇವೆ ಪರಿಪರಿ ಮಾಡಿದ್ದು
ಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ ೧
ಪಾಂಚಾಲಿ ರಮಣನು ಪಂಚ ಪಗಡೆಯನಾಡಿ
ವಂಚನೆ ಮಾಡದೆ ಹಂಚಿಕೆಯಲಿಕುಳಿತ ೨
ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡು
ಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ ೩
ಪುಂಡ ಭೀಮರಾಯ ಮಂಡಿ ಕೆದರಿಕೊಂಡು
ಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ ೪
ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟು
ಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ ೫
ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆ
ಹುಚ್ಚನ್ಹಾಂಗೆ ಮಾರಿ ಮುಚ್ಚಿಕೊಂಡು ಕುಳಿತ ೬
ಚದುರ ನಕುಲರಾಯ ಎದುರಿಗೆ ಬಾರದೆ
ಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ ೭
ಧನವೆತ್ತಿಸಹದೇವ ಘನ ವಿದ್ಯಾನರಿಯದೆ
ದನಕರುಗಳನ್ನೆಲ್ಲ ಅನುಸರಿಸಿ ಇರುವ ೮
ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದು
ಶೌರಿ ಕುರುರಾಯಗೆ ತಾ ನುಡಿದನು ೯
ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲು
ಧಿಟ್ಟ ಬಲರಾಮ ತಾ ಘಟ್ಯಾಗಿ ಕೈ ಹೊಯಿದನು10
ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿ ಕೊಟ್ಟನು ಅಭಯ ದಿಟ್ಟ ರಾಮೇಶ11

೧೪೭
ಭಾಗೀರಥಿ ಭಾಗೀರಥಿಬಾಗುವವರಿಗೆ ದಯವಾಗಿರತಿ ಪ.
ಗಂಗೆ ಗೌತುಮೆ ತುಂಗೆ ಮಂಗಳೆ ಕೃಷ್ಣಿ ನಿನ್ನಹಿಂಗದೆ ಅವರನ ರಂಗಿಸುವರೆ ತಾಯಿ ೧
ಮಾನಸ ಸರೋವರನಾನಾ ತೀರ್ಥಗಳೆಲ್ಲಧೇನಿಸಿ ನಿನ್ನಯ ಮಾನ್ಯವ ಪಡೆದಿವೆ೨
ಬ್ರಮ್ಹಾಂಡ ಬಿಚ್ಚಿ ಪರಬೊಮ್ಮಗ ಮಗಳಾದಿಬೊಮ್ಮನ ತಂಗಿ ನಾವು ನಿನ್ನನು ನೆನೆದೆವು೩
ಸತ್ಯ ಲೋಕವ ಸ್ಮರಿಸಿ ಮತ್ತೆ ಸ್ವರ್ಗಕೆ ಬಂದಿಪ್ರಾರ್ಥಿಸಿದ ದೈವ ನಿನ್ನ ಅರ್ಥಿಲೆ ಗೆಲಿಸಮ್ಮ ೪
ಭಗೀರಥ ಕರೆಯಲು ನಗದಲ್ಲಿ ಬಿದ್ದು ಕಾಶಿನಗರಕ್ಕೆ ಬಂದ ರಮಿ ಮಗಳ ಬಲಗೊಂಬೆ ೫

೧೪೫
ಭಾರತಿದೇವಿ ಭಕ್ತರತಾಯಿಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ.
ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ೧
ನೀನೆ ಮುಂದಣ ವಾಣಿ ಪ್ರಾಣದೇವರ ರಾಣಿಪ್ರವೀಣೆ ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ ೨
ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ ೩

೨೨೩
ಭಾವೆ ಗೋಪಾಲ ಸವತಿ ಪಾಲಾದನಲ್ಲೆ
ಯುಕ್ತಿ ಯುಕ್ತಿಲೆ ಒಲಿವೋ ಕೌತುಕ ನೋಡ ನಲ್ಲೆ ಪ.
ಹೆಣ್ಣು ನಮ್ಮಿಬ್ಬರ ಕಣ್ಣಿಗೆ ಇಂಗು ಹಚ್ಚಿ
ಸುವರ್ಣದಂತೆ ಹೊಳೆಯುತ
ಸುವರ್ಣದಂತೆ ಹೊಳೆಯುತ ರಮಿಸುತ
ನಮ್ಮಣ್ಣನ ಕೂಡ ಇರುವೋಳು ೧
ನಿತ್ಯ ಪ್ರಕಾಶನ ಅತ್ಯಂತ ಬೆರೆದಿರೆ
ಹತ್ತಿರ ಆಕೆ ರಮಿಸುತ
ಹತ್ತಿರ ಆಕೆ ರಮಿಸುತಿರಲು
ಎಲ್ಲಾ ಪತ್ನಿಯರು ಮಾಡೊ ತೆರನೇನ ೨
ಕಾಲದಲ್ಲಿದ್ದ ಹರಿಯ ಮೇಲಾಗಿ ಸ್ತುತಿಸುತ
ಕಾಲಾಲವ ತ್ರುಟಿಯು ಬಿಡದಲೆ
ಕಾಲಾಲವ ತ್ರುಟಿಯು ಬಿಡದಲೆ ರಮಿಸಿ
ಎಲ್ಲಾ ಬಾಲೆಯರು ಮಾಡೊತೆರನೇನ ೩
ದೇಶದಲ್ಲಿದ್ದ ಹರಿಯಲೇಸಾಗಿ ಬೆರೆದಿರೆ
ಲೇಶವಬಿಡದೆ ರಮಿಸುತ
ಲೇಶವ ಬಿಡದೆ ಇರಲು
ನಮ್ಮ ಆಶೆ ಪೂರೈಸೊ ಬಗೆ ಹ್ಯಾಂಗೆ ೪
ರುದ್ರಾದಿ ವಂದ್ಯನ ಬದ್ದಾಗಿ ರಮಿಸುತ
ಮುದ್ದು ಕೋಮಲೆಯು ಇರತಾಳೆ
ಮುದ್ದು ಕೋಮಲೆಯು ಇರತಾಳೆ
ನಿಮ್ಮ ಬುದ್ಧಿ ಎಲ್ಲಿ ಹೋಗಿ ಅಡಗಿತ ೫
ಬ್ರಮ್ಹನ ಮಾತಿಗೆ ತಮ್ಮಂಜಿಕೆಯು ಏನ
ಅಮ್ಮ ಅಚ್ಯುತನ ಒಡಗೂಡಿ
ಅಮ್ಮ ಅಚ್ಯುತನ ಒಡಗೂಡಿ ರಮಿಸಿದಾಗ
ನಿಮ್ಮ ಹೆಮ್ಮಿಎಲ್ಲಿ ಹೋಗಿ ಅಡಗಿತ6
ಮುದ್ದು ರಾಮೇಶನ ಕದ್ದಿಲೆ ಕರೆದಿರೆ
ಹರದೆಯರು ಹರಿಯ ರಮಿಸುತ
ಹರದೆಯರು ಹರಿಯ ರಮಿಸುತ ಗಗನಕೀದ್ದರೆ ನಿನಗೆ ತೆರನೇನ ೭

ನಮ್ಮಣ್ಣಗೆ ಬರೆದ ಓಲೆಯ
೨೧೯
ಭಾಳ ಭಾಳ ಬಿಂಕ ರುಕ್ಮಿಣಿ
ನಿನ್ನ ಕೇಳಿ ಬಲ್ಲೆನೆ ಸತ್ಯಭಾಮಿನಿ ಪ.
ದೊರೆಯರ ಮಗಳೆಂದು ಗರವಿಲೆ ರುಕ್ಮಿಣಿ
ಬರಲಿಲ್ಲ ನಮ್ಮ ಕರೆಯಲು
ಬರಲಿಲ್ಲ ನಮ್ಮ ಕರೆಯಲು ರುಕ್ಮಿಣಿ
ಸರಿಯವರು ನೋಡಿ ನಗತಾರ ೧
ಕೆಂಚಿ ನಿಮ್ಮಣ್ಣನ ಪಂಚೆಚೂಡನ ಮಾಡಿ
ಕಂಚಿಯ ವರದ ಕಳುಹಿಲ್ಲ
ಕಂಚಿಯ ವರದ ಕಳುಹಿಲ್ಲ ರುಕ್ಮಿಣಿ
ಪಾಂಚಾಲಿಗೆ ನೀನು ಸರಿಯೇನ2
ನಾರಿ ನಿಮ್ಮಣ್ಣನ ಮಾರಿಯ ಬಾಡಿಸಿ
ತೇರಿಗೆ ಕಟ್ಟಿ ಮೆರೆಸಿಲ್ಲ
ತೇರಿಗೆ ಫ್ಟ್ಟಿ ಮೆರೆಸಿಲ್ಲ ರುಕ್ಮಿಣಿ
ಯಾರ ಮುಂದಿಷ್ಟು ಬಡಿವಾರ3
ಹರದಿ ನಮ್ಮಣ್ಣಗೆ ¨ರೆದ ಓಲೆಯನೋಡ
ಹಿರಿಯರಿಲ್ಲೇನ ಮನೆಯಾಗ
ಹಿರಿಯರಿಲ್ಲೇನ ಮನೆಯಾಗ ಅತ್ತಿಗೆ
ಸರಿಯವರು ನೋಡಿ ನಗತಾರ ೪
ಹತ್ತು ಮಾರಿಯವನ ಬೆನ್ನತ್ತಿ ಹೋದವಳೆಂದು
ಕೀರ್ತಿಯ ಪಡೆದೆಯೆಲೆ ಭಾವೆ
ಕೀರ್ತಿಯ ಪಡೆದೆಯೆಲೆ ಭಾವೆನೀ
ಮಹಾ ಮೂರ್ತಿ ಎಂಬೋದು ಹರಿಬಲ್ಲ5
ಪಟ್ಟದರಸಿ ಎಂದು ದೃಷ್ಟಿ ತಿರುಗ್ಯಾವ ನಿನ್ನ
ಎಷ್ಟು ಬಡಿವಾರ ಎಲೆ ಭಾವೆ
ಎಷ್ಟು ಬಡಿವಾರ ಎಲೆ ಭಾವೆ ನೀ ನಮ್ಮ
ಪುಟ್ಟ ಸುಭದ್ರೆಯ ಸರಿಯೇನ ೬
ಪತಿವ್ರತೆ ಅಂದರೆ ಅತಿ ಅತಿ ಗರುವ್ಯಾಕ
ಪತಿ ಎಲ್ಲ ಬಲ್ಲ ನಿನ್ನ ಗುಣ
ಪತಿ ಎಲ್ಲ ಬಲ್ಲ ನಿನ್ನ ಗುಣ ವನದೊಳು
ಸತಿ ಅಲ್ಲವೆಂದು ಬಿಡಲಿಲ್ಲ7
ಗಂಡ ನಿನ್ನಯ ಗುಣ ಕಂಡನೆ ವನದೊಳು
ಕೆಂಡವು ಎಂದು ಹೊಗಸಿಲ್ಲ
ಕೆಂಡವು ಎಂದು ಹೊಗಸಿಲ್ಲ ಈ ಮಾತು
ಪಂಡಿತರು ಕೇಳಿ ಹುಸಿಯಲ್ಲ8
ಮಂದಗಮನೆ ನಿನ್ನ ತಂದೆ ಹ್ಯಾಂಗೆ ಅಂಧಾಂಗೆ
ಇಂದಿರಾಪತಿಯೆ ಗತಿ ಕೊಟ್ಟ
ಇಂದಿರಾಪತಿಯೆ ಗತಿ ಕೊಟ್ಟ ಅದರಿಂದ
ಬಂದಿತ್ಯಾಕಿಷ್ಟು ಬಡಿವಾರ ೯
ನಾರಿ ಹಿಂದಕ್ಕೆ ಒಂದು ಪಾರಿಜಾತಕ್ಕಾಗಿ
ನೀರಜನಯ್ಯನ ದಣಿಸಿದೆಯಲ್ಲ
ನೀರಜನಯ್ಯನ ದಣಿಸಿದೆಯಲ್ಲ ಅತ್ತಿಗೆ
ಯಾರ ಮುಂದಿಷ್ಟೆ ಬಡಿವಾರ ೧೦
ನಾರಿ ಹಿಂದಕೆ ಒಂದು ನಾರು ವಸ್ತ್ರವ ಕಾಣಿ
ಊರು ಇಲ್ಲದಲೆ ವನವನ
ಊರು ಇಲ್ಲದಲೆ ವನವನ ತಿರುಗಿದಿ
ಯಾರ ಮುಂದಿಷ್ಟು ಬಡಿವಾರ ೧೧
ಧಿಟ್ಟೆ ಹಿಂದಕ್ಕೆ ಒಂದು ಉಟ್ಟೆನೆಂದರೆ ಇಲ್ಲ
ಹೊಟ್ಟೆಗಿಲ್ಲದಲೆ ಮುನಿಪನ
ಹೊಟ್ಟೆಗಿಲ್ಲದಲೆ ಮುನಿಪನ ಕುಟೀರದಿ
ಎಷ್ಟು ದಿನ ಕಾಲ ಕಳೆದೆಯಲ್ಲ12
ಸ್ವಾಮಿ ಶ್ರೀಕೃಷ್ಣರಾಯ ರಾಮನಂಥವನಲ್ಲ
ಭೂಮಿ ಮ್ಯಾಲಿಂಥ ದೊರೆಯಿಲ್ಲ
ಭೂಮಿ ಮ್ಯಾಲಿಂಥ ದೊರೆಯಿಲ್ಲ ಅದರಿಂದ
ಭಾಮೆ ನೀ ಕಂಡೆ ಒಗೆತನ ೧೩
ಪಟ್ಟಾಭಿರಾಮನಂತೆ ಸಿಟ್ಟು ಕೃಷ್ಣಯ್ಯಗಿಲ್ಲ
ಎಷ್ಟು ದಯವಂತ ಯದುಪತಿ
ಎಷ್ಟು ದಯವಂತ ಯದುಪತಿ ಅದರಿಂದ
ಶ್ರೇಷ್ಠಳೆ ಕಂಡೆ ಒಗೆತನ ೧೪
ಇಷ್ಟು ಜನರೊಳು ಅಷ್ಟೂಗುಣಗಳ ಸ್ಪಷ್ಟ ಮಾಡಿ ಹೊಗಳಲಿ
ಸ್ಪಷ್ಟ ಮಾಡಿ ಹೊಗಳಲಿ ರಮಿ ಅರಸು
ಬಿಟ್ಟರೆ ನಿನ್ನ ತೆಗ್ನೆನ
ಭಾಳ ಭಾಳ ಬಿಂಕ ರುಕ್ಮಿಣಿ15

೩೮
ಭಾಳೆ ಗಾಬರಿಗೊಂಡಳು ಇಂದಿರಾದೇವಿಭಾಳೆ ಗಾಬರಿಗೊಂಡಳು ವ್ಯಾಲಾಶಯನನು ಇವಳ ಪೇಳಿದಂತಿರಲುಏನು ಬಾಳು ಯಾತಕೆ ಎಂದಳು ಪ.
ಸಂಡಿಗೆ ಹಪ್ಪಳ ಮಂಡಗಿ ಗುಳ್ಳೋರಿಗೆ ದಿಂಡು ಸೂರಣವು ಮೊದಲಾಗಿದಿಂಡು ಸೂರಣವು ಮೊದಲಾಗಿ ಬಡಿಸೋರುದುಂಡು ಮುತ್ತುಗಳು ಉದುರುತ೧
ಅಪಾರ ಮಹಿಮಗೆ ರೂಪಸುಂದರಿಯರು ಸೂಪ ಪರಮಾನ್ನ ಮೊದಲಾಗಿಸೂಪÀ ಪರಮಾನ್ನ ಮೊದಲಾಗಿ ಬಡಿಸುವವರಭಾಪುರಿ ಮುತ್ತು ಉದುರುತ ೨
ನಾರಿಯರು ತಾವೆಲ್ಲ ಹಾರ ಭಾರಗಳಿಟ್ಟುಕ್ಷೀರ ಮಧು ಘೃತ ಮೊದಲಾಗಿಕ್ಷೀರ ಮಧು ಘೃತ ಮೊದಲಾಗಿ ಬಡಿಸುವವರತೋರ ಮುತ್ತುಗಳು ಉದುರುತ ೩
ನಗಧರನ ಪುರದೊಳಗೆ ಹಗಲು ರಾತ್ರಿಯು ಬಂದೆಝಗ ಝಗಿಸುವ ಮಣಿಯು ಖಚಿತದಝಗ ಝಗಿಸುವ ಮಣಿಯು ಖಚಿತವಾದುದರಿಂದಹಗಲು ರಾತ್ರಿಗಳು ತಿಳಿಯವು೪
ಮಂದ ಗಮನೆಯರೆಲ್ಲ ಮಿಂದು ಮಡಿಯುಟ್ಟು ಇಂದಿರಾಪತಿಯ ಸರಿಯಾಗಿಇಂದಿರಾಪತಿಯ ಸರಿಯಾಗಿ ಊಟಕ್ಕೆ ಬಂದುಕುಳಿತವರು ಕಡೆಯಿಲ್ಲ೫
ಪುಂಡರಿಕಾಕ್ಷÀನು ಉಂಡು ಕೈತೊಳೆದನು ದುಂಡುಮಲ್ಲಿಗೆಯ ಸೆಳಿಮಂಚದುಂಡು ಮಲ್ಲಿಗೆಯ ಸೆಳಿ ಮಂಚವನೇರಿದ ಪಾಡವಪ್ರಿಯ ಹರುಷದಿ ೬
ಹದಿನಾರುಸಾವಿರ ಚದುರೆಯರು ಒಂದಾಗಿಚಲುವ ರಾಮೇಶನ ಉಪಚಾರಚಲುವ ರಾಮೇಶನ ಉಪಚಾರ ಮಾಡುವ ಸುದತೆಯರ ಸುಖಕೆ ಎಣೆಗಾಣೆ೭

೨೦೧
ಭಿಕ್ಷೆ ಬೇಡಿದವರು ರಾಜ್ಯ ರಕ್ಷಿಸ ಬಲ್ಲವರಲ್ಲ
ಭಕ್ಷಿಸಿರೊ ಬಂಡಿ ತುಂಬ ಭಕ್ಷ್ಯ ತುಪ್ಪವೆಲ್ಲ ಪ.
ಹಿಂದೆ ಧರ್ಮರಾಯ ರಾಜ್ಯ ಎಂದೂ ಕಂಡವನಲ್ಲ
ಅಂದು ಕರಡಿ ಕುಲದವನಂತೆಂದು ರಾಯ ಬಲ್ಲ ೧
ಮಾತಿಲೆ ಜಾಣನು ಭೀಮ ಮಾತು ಮಾಯಾವಿಯಲ್ಲ
ಖ್ಯಾತಿ ಹೇಳಲು ಒಂದು ಕೋತಿ ಕುಲದವನಲ್ಲ2
ಮ್ಯಾಲೆ ಗರವಿನ ಪಾರ್ಥನಿಗೆ ವಾಲಿಯೆಂಬೊ ಕೋತಿ
ಮ್ಯಾಲೆ ತಮ್ಮನ ಮಡದಿಯ ಕೆಡಸಿದ ಏನು ಹೇಳಲಿ ಖ್ಯಾತಿ3
ಆತ ನಕುಲ ಸಹದೇವ ಬಲು ಕುಲಖ್ಯಾತಿಯ ಕೋತಿಗಳು
ಕುದುರೆ ಜಾತಿಯಲ್ಲಿ ಜನಿಸಿದ ಮ್ಯಾಲಿನ್ಯಾತರ ದೊರೆಗಳು ೪
ಅಕ್ಕ ಸಿಂಹಾಸನಕೆ ಇವರು ತಕ್ಕ ಪುರುಷರಲ್ಲ
ನಕ್ಕಿಹನು ರಾಮೇಶ ಇದಕೆ ಮಿಕ್ಕ ರಾಯರೂ ಎಲ್ಲ5

೧೭೩
ಭೂಮಂಡಲಕೆ ಮಿಗಿಲೆನಿಸಿದ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ.
ಸಂಭ್ರಮದಿರಾಯನು ತುಂಬಿಸಿದ ಮನೆಯೊಳಗೆ ಉಂಬೊ ಪದಾರ್ಥ ಕೋಟಿ ಫಲಕದಳಿ ತಿಂಬೊ ಪದಾರ್ಥ ಕೋಟಿಷಡ್ರಸವೆಂಬೊ ಪದಾರ್ಥ ಕೋಟಿಈ ತೂಗಿಕೊಂಬ ಮಣಿಮಂಚ ಕೋಟಿ ತಾಯಿ೧
ಅರ್ಥಿ ಮನಿಒಳಗೆ ಮುತ್ತು ರತ್ನದ ರಾಶಿಮತ್ತೆ ನವ ಧಾನ್ಯರಾಶಿಧನದ್ರವ್ಯ ವಿತ್ತ ಕೋಟಿಯು ರಾಶಿ ರಾಯನಚಿತ್ತ ಸಂತೋಷ ರಾಶಿ ೨
ಏಸುಮುನಿ ಬಳಗ ದಾಸರು ದಾಸಿಯರು ಬೀಸಿ ತೊಟ್ಟಿಲವ ತೂಗÀುವರುಮಕ್ಕಳನ ಸೋಸಿಲೆ ಕರೆದೊಯ್ಯುವರುಮಂಚದಲಿ ಹಾಸಿಗೆ ಹಾಸುವರು ರಾಯಗೆ ಈ ಬಗೆ ಸೇವಕರು ತಾಯೆ ೩
ಎಲ್ಲ ಮನೆಯೊಳಗೆ ಮಲ್ಲಿಗೆ ಸಂಪಿಗೆ ಅಲ್ಲೆ ಕ್ಯಾದಿಗೆದವನವುಬುಕ್ಕಿಟ್ಟು ಅಲ್ಲಲ್ಲೆ ಶ್ರೀಗಂಧವುಎಲಿ ಅಡಕಿ ಅಲ್ಲಲ್ಲಿ ತಬಕಿಹೋದುರಾಯಗೆ ಈ ಬಗೆ ಸೇವಕರು ತಾಯೆ ೪
ಅಷ್ಟು ಮನೆಗಳ ಮುಂದೆ ಪಟ್ಟದ ಆನೆಗಳು ಕಟ್ಯಾವ ಕುದರಿಯ ಸಾಲು ರಥಗಳು ಇಟ್ಟಾವ ಬಿಲ್ಲುಗಳು ಪಲ್ಲಕ್ಕಿ ಧಿಟ್ಟಾದ ವಯಿರಗಳು ರಮೆ ಅರಸಗಿಷ್ಟು ಉಪಚಾರಗಳು ತಾಯೆ ೫

೧೩೫
ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ.
ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು೧
ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು ೨
ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು೩
ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು ೪
ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು ೫
ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ ೬


ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ಒಂದೊಂದು ನಿಮಿಷ ಯುಗವಾಗಿ ರಂಗಯ್ಯ ಬಾರೊ ತಂಗಿ ನಾ ಹ್ಯಾಂಗಿರಬೇಕಪ.
ಒಂದಿನ ಸುಭದ್ರ ಮಂದಿರದೊಳು ಕುಳಿತುತಂದೆಯ ಭಾಗ್ಯ ಸ್ಮರಿಸುತ ಹಿಗ್ಗುತ ತಂದೆ ಭಾಗ್ಯ ಸ್ಮರಿಸುತ ಹಿಗ್ಗುತ ಇಂದಿರಾಪತಿ ನೆನೆದಾಳ ೧
ಹೆಣ್ಣು ಸುಭದ್ರ ತಮ್ಮ ಅಣ್ಣನ ಭಾಗ್ಯವಬಣ್ಣ ಬಣ್ಣದಲೆ ಸ್ಮರಿಸುತಬಣ್ಣ ಬಣ್ಣದಲೆ ಸ್ಮರಿಸುತ ಹಿಗ್ಗುತ ಕಣ್ಣು ಮುಚ್ಚುತಲೆ ತೆರೆಯುತಲೆ೨
ತಿಂಗಳಿಗೆ ಸುಭದ್ರಾ ಬಂದೆನ ನಿನ್ನ ನೋಡಲುಒಂದೇ ಮನದಿಂದ ಇರುಯೆಂದಒಂದೆ ಮನದಿಂದ ಇರುಯೆಂದ ಕಳುಹಿದ ಇಂದೆನ್ನ ಮನಸ್ಸು ಕಲಕಿತ ೩
ಕೈವಲ್ಯಪತಿಯ ದಯದಿಂದ ಸಲುಹಿದವೈಭವದೊಳಗÀÉ ಮರೆತಾನವೈಭವದೊಳಗÀÉ ಮರೆತಾನ ಮುಯ್ಯವ ಒಯ್ದರೆ ನೋಡಿ ಬರಬೇಕ ೪
ಕೃಷ್ಣರಾಯರ ಮನೆಯ ಅಷ್ಟೈಶ್ವರ್ಯವಎಷ್ಟು ವರ್ಣಿಸಲ್ವಶವಲ್ಲಎಷ್ಟು ವರ್ಣಿಸಲ್ವಶವಲ್ಲ ಮುಯ್ಯವ ಒಯ್ದರ ನೋಡಿ ಬರಬೇಕ ೫
ಗೊಲ್ಲಾಧೀಶನ ಭಾಗ್ಯ ಚಲುವಿ ಸುಭದ್ರಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತ ಎಲ್ಲರ ಮನಸ್ಸು ಎರಗೀತ೬
ಗೋಕುಲೇಶ ರಾಮೇಶ ಯಾಕೆ ಮಥುರೆ ಬಿಟ್ಟವಾಕ್ಕುಪೇಳೆಂದು ವನಿತೆಯರುವಾಕ್ಕುಪೇಳೆಂದು ವನಿತೆಯರು ನುಡಿಯಲುಸಾಕಲ್ಯದಿಂದ ತಿಳಿಸಿದಳು೭

೨೪೯
ಮಚ್ಛನೇತ್ರಿಯರಿಗೆ ಉಚಿತವನೆ
ಅಚ್ಯುತ ಕೊಟ್ಟನೆಂದು
ಉಚ್ಛವದಿ ಕೋಲ
ಹೊಯ್ದೇವ ಕೋಲ ಪ.
ಮುತ್ತು ಮಾಣಿಕದ ವಸ್ತ ಮತ್ತೆ ಕುದುರೆಯ ಸಾಲು
ಛಸ್Àತ್ರ ಚಾಮರ ರಥಗಳು ಕೋಲ
ಛಸ್Àತ್ರ ಚಾಮರ ರಥ ಉಚಿತವ
ಅರ್ಥಿಲೆ ದ್ರೌಪತಿಗೆ ಹರಿಕೊಟ್ಟ ಕೋಲ1
ಸಾರಾವಳಿಯ ಸೀರೆ ಥೋರ ಮುತ್ತಿನ ಸರ
ಹಾರಭಾರಗಳು ಹಿಡಿದೇಜಿ
ಹಾರಭಾರಗಳು ಹಿಡಿದೇಜಿ ಉಚಿತವ
ನಾರಿ ಕುಂತೆಮ್ಮಗೆ ಹರಿ ಕೊಟ್ಟ ಕೋಲ ೨
ದುಂಡು ಮುತ್ತಿನ ವಸ್ತ ತಂಡ ತಂಡದ ಜವಳಿ
ಪಂಡಿತರಿಗೆಲ್ಲ ಉಚಿತವ
ಪಂಡಿತರಿಗೆಲ್ಲ ಉಚಿತವ ಸಭೆಯೊಳು
ಪುಂಡರಿಕಾಕ್ಷ ಇವು ಕೊಟ್ಟ ಕೋಲ3
ಲೆಕ್ಕ ವಿಲ್ಲದೆ ವಸ್ತ ಅಚ್ಚ ಬೆಳಕಿನ ಸೀರೆ
ಸಂಖ್ಯವಿಲ್ಲದಲೆ ರಥಗಳು
ಸಂಖ್ಯ ವಿಲ್ಲದಲೆ ರಥಗಳ ಪಾಂಡವರ
ಮಿಕ್ಕ ಮಡದಿಯರಿಗೆ ಇವು ಕೊಟ್ಟ ಕೋಲ4
ಅರ್ಥಿ ನೋಡಬಂದ ಜನಕೆ ಮುತ್ತು ರತ್ನದ ವಸ್ತ
ಚಿತ್ತಜನೈಯ ಇವುಕೊಟ್ಟ ಕೋಲ
ಚಿತ್ತಜನೈಯ್ಯ ಇವುಕೊಟ್ಟ ರಮಿ ಅರಸು
ವಿಸ್ತರಿಸಿ ಹೇಳಲೊಶವಲ್ಲ5

ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯ ತೇಜಿ
೮೫
ಮಡದಿ ಭಾಗ್ಯ ಎಂಬುವಿಯಾಕೊ ರಂಗಯ್ಯನಿನ್ನ ಬಡಿವಾರವ ಹೇಳಿಕೊಂಬೆ ಸಾಕೊ ಕೃಷ್ಣಯ್ಯ ಪ.
ಬಿಡು ಬಿಡು ಸಣ್ಣ ಮಾರಿಯನ್ನು ನೀ ಮಾಡಬ್ಯಾಡ ಬಡಿವಾರವ ಹೇಳಿಕೊಂಬುವುದೇನೊಕಡುಭಾಗ್ಯ ಪುರುಷನಾಗೊ ನೀನು ಎತ್ತಿಕೊಂಡ್ಹೋಗಿ ಮಡುವು ಸೇರಿಕೊಂಡಿ ಮತ್ತೇನೊ೧
ದೊರೆತನ ಹೇಳಿಕೊಂಬೆ ಸಾಕೊ ರಂಗಯ್ಯನಿನ್ನ ಕರಕರ ಹಲ್ಲು ತಿಂಬೊ ಸಿಟ್ಟು ಕೃಷ್ಣಯ್ಯಬಿರುಗಣ್ಣು ಬಿಡವೋದ್ಯಾಕಿಷ್ಟು ರಂಗಯ್ಯನಿನ್ನ ಉರಿಮಾರಿಗೆ ಅಂಜೋರೆಲ್ಲೊ ಅಷ್ಟು ೨
ಧರೆ ಮ್ಯಾಲೆ ರಾಜ್ಯ ಹ್ಯಾಂಗ ರಂಗಯ್ಯನಿನ್ನ ತಗಿ ತಗಿ ಬಲುಲೀಲಾ ಕೈಯ್ಯ ಕೃಷ್ಣಯ್ಯಸುಗುಣನೆಂತೆಂಬೊ ಮತಿಯಾದುದಕ್ಕೆಜನರು ನಗದೆ ಸೈ ಸೈ ಎಂದಾರು ಬರಿಯ ಕೃಷ್ಣಯ್ಯ೩
ಧೀರ ಧನವಂತನಲ್ಲೊ ಸಾಕೊ ರಂಗಯ್ಯಆದರೆ ವನದಿನಾರು ವಸ್ತ್ರವನುಟ್ಟುಕೊಂಡಿ ಯಾಕೊ ಕೃಷ್ಣಯ್ಯಚೋರನಂತಾಡಿಕೊಂಬಿ ಸಾಕೊ ರಂಗಯ್ಯಇದ ಕೇಳಿದ ವೀರರೆಂಬವರು ನಗತಾರೊ ಕೃಷ್ಣಯ್ಯ ೪
ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯತೇಜಿ ಹತ್ತೇನು ಎಂದು ಬರುವಿಯಲ್ಲೊ ಕೃಷ್ಣಯ್ಯಕತ್ತಿ ಕೈ ಶೂರನೆಂಬೊದೆಲ್ಲೊ ರಂಗಯ್ಯರಾಮೇಶ ನಿನ್ನ ಹತ್ತಿಲ್ಲಿದ್ದರೆಲ್ಲ ನಗುವರೊ ಕೃಷ್ಣಯ್ಯ೫

೧೩೮
ಮಣಿಗಣ ಭೂಷಣ ಅಣಿಗಾಣೆನಿಮಗಿನ್ನು ಗಣರಾಯ ಗಣರಾಯ ಪ.
ರುದ್ರ ಕುಮಾರನೆ ಸಿದ್ಧಿ ನಿನಾಯಕ ವಿದ್ಯವಪಾಲಿಸೊಬುದ್ಧಿದಾತನೆ ಅ.ಪ.
ಆನೆಯ ಮುಖದವನ ಧೇನಿಸಿನಮಿಸುವೆ ಗಣರಾಯ೧
ಶ್ರೀನಿವಾಸನ ಪ್ರಿಯ ನೀನಮ್ಮಗೆಲಿಸೆಂದು ಗಣರಾಯ೨
ಹಸ್ತಿಯ ಮುಖದವಗೆ ಹಸ್ತವ ಮುಗಿದೆವಸ್ವಸ್ಥ ಮನಸು ಕೊಡು ವಿಸ್ತರ ಉದರನೆ ಗಣರಾಯ೩
ಗಂಧ ಅಕ್ಷತೆ ಪುಷ್ಪ ತಂದೆ ದುರ್ವಾಂಕುರ ಚಂದದ ವಸ್ತ್ರಗಳ ಒಂದೊಂದು ಕೈಕೊಳ್ಳೊ ಗಣರಾಯ ೪
ರನ್ನ ಮಾಣಿಕ ಬಿಗಿದ ಚಿನ್ನದಾಭರಣವ ನಿನ್ನ ಪೂಜೆಗೆ ತಂದೆ ಚೆನ್ನಾಗಿ ಕೈಕೊಳ್ಳೊ ಗಣರಾಯ ೫
ಚಕ್ಕಲಿ ತರುಗುಮಿಕ್ಕಾಗಿ ಲಡ್ಡುಗೆ ಚಿಕ್ಕಗಣಪ ಉಂಡು ಚಕ್ಕನೆ ವರಕೊಡು ಗಣರಾಯ ೬
ಚಲ್ವ ರಾಮೇಶನನೆಲೆಕಂಡ ಪುರುಷನೆಇಲಿವಾಹನ ನಮ್ಮ ಸಲುಭದಿ ಗೆಲಿಸಯ್ಯ೭

೧೬೫
ಮದಗಜಗಮನೆಯರ ಮುದದಿ ಮುಯ್ಯಕ್ಕೆ ಸರಿ ಹದಿನಾಲ್ಕು ಲೋಕದೊಳಗಿಲ್ಲಕೇಳಮ್ಮ ದೂತೆ ಹೇಳಮ್ಮ ಹೋಗಿ ಈ ಮಾತೆ ಪ.
ಚಂದ್ರ ಉದಿಸಿದಂತೆ ಬಂದರೆ ಐವರು ಇಂದೆಮ್ಮ ಪುಣ್ಯ ಫಲಿಸಿತೆ ಇಂದೆಮ್ಮ ಪುಣ್ಯ ಫಲಿಸಿತೆ ಐವರುಬಂದೆರಗೋರಮ್ಮ ಕ್ಷಣದೊಳು ೧
ಎಂಥ ದಯವ ಮಾಡಿ ಕಾಂತೆಯರು ಬಂದಾರೆಎಂತು ನಮ್ಮ ಪುಣ್ಯ ಫಲಿಸಿತುಎಂತೆಮ್ಮ ಪುಣ್ಯ ಫಲಿಸಿತುಲಕ್ಷಿ ್ಮಕಾಂತನೆ ಬಂದ ಮನೆತನಕ ೨
ಹರದೆಯರು ಬಂದದ್ದು ಅರಿದು ಎಷ್ಟೇಳಲಿಬೆರಗಾದರಮ್ಮ ಹರಬೊಮ್ಮಬೆರಗಾದರಮ್ಮ ಹರಬೊಮ್ಮ ಕಾಮಧೇನುಕರೆದಂತಾಯಿತು ಸುಖವನೆ೩
ಸಚ್ಚಿತಾನಂತ ಬಂದದಾಶ್ವರ್ಯ ನೋಡÀ ತಾಯಿಅಚ್ಚ ಕರುಣದಲೆ ಐವರಿಗೆ ಅಚ್ಚ ಕರುಣದಲೆ ಐವರಿಗೆ ಪರಿಪರಿಉತ್ಸಾಹ ಉನ್ನತಿಯ ಕೊಡುವವನೆ೪
ಅತಿಶಯ ಮುಯ್ಯವನು ಸುತಿಸಲಾರೆವ ಕೆಲದಿಚತುರಂಗ ಬಲವ ಸಹಿತಾಗಿಚತುರಂಗ ಬಲವ ಸಹಿತಾಗಿ ರಾಮೇಶನ ಸತಿಯರ ಕರೆಯ ಬರತೇವ೫

೧೬೮
ಮಲ್ಲೆ ಮಲ್ಲಿಗೆ ಕೋಲ ಝಲ್ಲಿ ಮುತ್ತಿನ ಕೋಲನಲ್ಲೆಯರು ನಲಿ ನಲಿದು ಚಲುವ ರಂಗನ ಪಾಡಿಉಲ್ಲಾಸ ಬಡುವ ಕೋಲ ಅಮ್ಮಯ್ಯಪ.
ನಾರಿ ರುಕ್ಮಿಣಿ ಮುದ್ದು ಚಾರು ವÀದನಳೆ ದಿವ್ಯಥೋರ ಕುಚಗಳ ಆ ಭಾರಕೆ ಬಳಕುವಳೆ ವಿಸ್ತಾರ ಜಘನಳೆ ಚಲ್ವಳೆ ಅಮ್ಮಯ್ಯ ೧
ನಾರಿಕೇಲದಂತೆ ಕರಗಳೆ ಉರಗಳೆ ವರಜಾನು ಜಂಗಿಗಳ ಚರಣಗಳ ನಖಗಳಬೆರಳುಗಳಿಗೆ ಎರಗುವೆನು ಅಮ್ಮಯ್ಯ ೨
ಅಂಬುಜಾ ಮುಖಿ ಭಾವೆ ಬಿಂಬಾಧರಳೆ ದಿವ್ಯಕುಂಭ ಕುಚ ಕಟಿ ಸಣ್ಣ ನಿತಂಬಿನಿಮೈ ಬಣ್ಣದ ವಿಸ್ತರಳೆ ಲತೆಯಂತೆ ತೋಳತೊಡೆ ರಂಭೆ ಕಂಬು ನಮ್ಮಯ್ಯ ೩
ಅಂಬುಜಾಂಬಳ ಪಾದವೆಂಬೊ ಕಮಲಗಳಬೆರಳೆಂಬೊ ಹವಳಗಳ ನಖವೆಂಬೊ ಚಂದ್ರಗಳ ಸಂಭ್ರಮದಿ ಎರಗುವೆ ನಮ್ಮಯ್ಯ೪
ಮಂದಗಮನೆಯರ ಮುಯ್ಯ ಸುಂದರ ತೋರುವದು ಚಂದ್ರ ಲೋಕದಲಿಲ್ಲ ನಾಗೇಂದ್ರ ಲೋಕದಲಿಲ್ಲ ಸಿಂಧು ಸಪ್ತದಿಗಂಧರ್ವ ಲೋಕದಲಿಲ್ಲ ಹಿಂದಿಲ್ಲ ಮುಂದಿಲ್ಲವೆಂದೆ ನಮ್ಮಯ್ಯ ೫
ಮಂದಾರ ಗಿರಿಮೇರು ಮಂದಾರದÀಲೆ ಮೇಲೆಂಬೊ ಮಾರ್ಜನ ತಪ ಒಂದು ಲೋಕದಲಿಲ್ಲವೆಂದು ದ್ರೌಪತಿಗ್ಹೇಳಿ ಬಂದೆನಮ್ಮಯ್ಯ ೬
ಮಿತ್ರೆಯರ ಮುಯ್ಯಕ್ಕೆ ಮತ್ತೆಲ್ಲಿ ಸರಿಯಿಲ್ಲ ಸತ್ಯಲೋಕದಲಿಲ್ಲಮೃತ್ಯು ಲೋಕದಲಿಲ್ಲ ಅತ್ಯಂತ ತೆಳಗಿಹೊ ರತ್ನ ಲೋಕದಲಿಲ್ಲಹತ್ತು ದೆಸೆಗಿಲ್ಲವೆಂದೇ ನಮ್ಮಯ್ಯ ೭
ಭಕ್ತವತ್ಸಲ ಸ್ವಾಮಿ ಅತ್ಯಂತ ಪ್ರೇಮದಲೆ ಸತ್ಯಭಾಂವೆರ ಅರಸು ಅರ್ಥಿಲೆ ಬಂದದ್ದುಚಿತ್ತಕ್ಕೆ ತಾ ಎಂದೆ ನಮ್ಮಯ್ಯ ೮
ವೈಭವದ ಮುಯ್ಯವು ವೈಕುಂಠದಲಿಲ್ಲ ಕೈವಲ್ಯವೆನಿಪ ಸೇತುದ್ವೀಪದೊಳಗಿಲ್ಲಭಯವಿಲ್ಲವೆನಿಪ ಅನಂತಾಸನದಲಿಲ್ಲಐವರ ಅರಸಿಗೆ ಹೇಳಿಬಂದೆನಮ್ಮಯ್ಯ ೯
ಕೈವಲ್ಯಪತಿ ತಾನು ದಯಮಾಡಿ ಬಂದದ್ದುದಯವ ಬಹಳಮ್ಮ ಐವರದು ಎನುತಲೆ ಕೈಮುಗಿದು ಹೇಳಿ ಬಂದೆ ನಮ್ಮಯ್ಯ೧೦
ನಲ್ಲೆಯರ ಮುಯ್ಯಕ್ಕೆ ಎಲ್ಲೆಲ್ಲೂ ಸರಿಯಿಲ್ಲ ಸಪ್ತದ್ವೀಪದಲಿಲ್ಲಮೇರುವಿನಲಿಲ್ಲ ಈ ಭಾಗ್ಯವೆಲ್ಲ ಸ್ವರ್ಗದಲಿಲ್ಲಚಲ್ವಿ ದ್ರೌಪತಿಗೆ ಹೇಳಿ ಬಂದೆ ನಮ್ಮಯ್ಯ ೧೧
ಬಲ್ಲಿದ ಅತಳ ವಿತಳ ಸುತಳ ಮಹಾತಳ ತಳಾತಳ ರಸಾತಳದಲಿಲ್ಲಈ ಮುಯ್ಯಕ್ಕೆಲ್ಲಿ ಸರಿ ಹೇಳಿ ಬಂದೆನಮ್ಮಯ್ಯ೧೨
ನಮ್ಮ ದೇವಿಯರು ತಂದ ರಮ್ಯದ ಮುಯ್ಯವು ಈ ಮಹಿಮೆಯೊಳಗಿಲ್ಲ ಬೊಮ್ಮ ಲೋಕದಲಿಲ್ಲಸುಮನ ಸಾರಿರುವೋ ಸ್ವರ್ಗಲೋಕದಲಿಲ್ಲ ಅಮ್ಮಿಳ್ಳ ಪಾತಾಳವೆಂದೆ ನಮ್ಮಯ್ಯ೧೩
ರಮಿಯರಸನು ತಂದ ಜಮ್ಮನೇ ನಿಮ್ಮ ಭಾಗ್ಯವು ಬಹಳ ಅಮ್ಮ ದ್ರೌಪತಿ ಎಂದು ಜುಮ್ಮನೆ ಹೇಳಿ ಬಂದೆನಮ್ಮಯ್ಯ ೧೪

೧೦೪
ಮಾತನ್ನಾಡೊ ಮನ್ನಾರಿ ಕೃಷ್ಣ ಮಾತನ್ನಾಡೊಧಾತನ ಪಿತ ಸಂಪ್ರೀತಿಲಿ ಮುದ್ದು ಮಾತನ್ನಾಡೊ ಪ.
ಲಕ್ಷಮಾಣಿಕ ಜಡಿದ ಅಕ್ಷಯ ಪದಕ ಮುಕುಟಲಕ್ಷ ಸೂರ್ಯರ ಬೆಳಕಿಲೆಲಕ್ಷ ಸೂರ್ಯರ ಬೆಳಕಿಲೆ ಹೊಳೆವೊ ವಸ್ತಲಕ್ಷ್ಮಿನರಸಿಂಹಗೆ ಉಡುಗೊರೆ ೧
ಚಂದ್ರ ನಂತೊಪ್ಪುವ ಚಂದ್ರಗಾವಿ ಸೀರೆತಂದೆ ಮಾಣಿಕದಾಭರಣವ ತಂದೆ ಮಾಣಿಕದಾಭರಣ ಕುಂದಣದ ಕುಪ್ಪುಸವ ಇಂದಿರಾದೇವಿಗೆ ಉಡುಗೊರೆ೨
ವರಗಿರಿವಾಸಗೆ ತುರಗ ತಾಪತಿ ಭೇರಿದೊರೆಗಳು ತಂದ ಉಚಿತವ ದೊರೆಗಳು ತಂದ ಉಚಿತವ ಭಕ್ತಿಯಿಂದ ಕರಗಳ ಜೋಡಿಸುತ ಕರುಣಿಗೆ ಉಡುಗೊರೆ ೩
ಜಾಂಬೂನದಾಂಬರ ನಿನಗೆ ತಂದೆವು ಸ್ವಾಮಿಜಾಂಬವತೀಶಗೆ ಉಡುಗೊರೆಜಾಂಬವತೀಶಗೆ ಉಡುಗೊರೆ ನಮಗಿನ್ನುಕಂಡು ಬರುವ ಭೂವೈಕುಂಠಾಧೀಶಗೆ ಉಡುಗೊರೆ೪
ಅನಘ್ರ್ಯವಾಗಿದ್ದ ಅನಂತ ವಸ್ತ್ರಾಭರಣಚಂದಾಗಿ ನಾವು ತಂದೇವ ಚಂದಾಗಿ ನಾವು ತಂದೇವ ರಮಿಯರಸುನಿನ್ನ ಬಳಗಕ್ಕೆಲ್ಲ ಉಡುಗೊರೆ ೫

೨೭
ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ.
ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ೧
ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ ೨
ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ ೩
ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ೪
ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ ೫

೨೧೮
ಮಾರಿತೋರೆ ನೀರೆ ಕರೆಯ ಬಾರೆ ಪ.
ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆ
ಹ್ಯಾಂಗ ಮಾಡಲಿಯೆಂದು
ಹೋಗಿ ಕೋಣಿಯನ್ಹೊಕ್ಕೆ ೧
ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆ
ಒದರಿ ಆಣಿಯನಿಟ್ಟೆ
ಕದನ ತೆಗೆಧೋಗಿ ಗದಗದ ನಡಗುವಿ ೨
ವಾಸುದೇವರ ತಂಗಿ ಸೋಸಿಲಾಣಿಯನಿಟ್ಟು
ಸೋಸಿಲಾಣಿಯನಿಟ್ಟ ಶ್ರೀಶನ
ಸತಿಯರು ದಾಸಿ ಎನಿಸುವರೇನ ೩
ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟು
ಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕ
ತಪ್ಪು ತಪ್ಪೆನ ಬಾರ ೪
ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆ
ಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲು
ಎದೆ ಝಲ್ಲು ಝಲ್ಲೆನುತಿರೆ ೫
ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆ
ಇಲ್ಲಿಗೆಬಂದ ಪುಟ್ಟ ಸುಭದ್ರಾ
ಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ6
ಪೋರ ಬುದ್ದಿಯಿಂದ ಸಾರಿ ಆಣೆಯನಿಟ್ಟೆ
ಸಾರಿ ಆಣಿಯನಿಟ್ಟೆ
ನಾರಿರುಕ್ಮಿಣಿ ಬರಲು ಹಾರುತಿದೆ ಎದೆ ೭
ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆ
ಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆ
ಆಣಿಸೊಕ್ಕಿನಿಂದಲೆ ಇಟ್ಟೆ ೮
ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆ
ಆಣಿಯನಿಟ್ಟೆ ನಮ್ಮ ಕಾಣುತ ಒಳಗೆ ಗುಮ್ಮನಂತಡಗಿದಿ9

೨೧೦
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿ
ರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.
ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬ
ಮಾನಿನಿಯ ಜರಿದು ನಡೆದಿ ಇನ್ನೇನು ಉಚಿತವಯ್ಯ ಕೃಷ್ಣ ೧
ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನ
ನಳಿನ ಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2
ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳ
ಸೋಸು ಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ ೩
ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟು
ಮಂದಾರ ಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4
ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳ
ತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ ೫
ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲು
ತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ 6
ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನು
ಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ ೭
ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿ
ಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8
ನೋಡು ನೋಡು ಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವ
ಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುವ 9
ನಗಧರ ಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿ
ಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ ೧೦
ಹಿಂಡು ನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿ
ಪುಂಡರಿಕಾಕ್ಷನ ತೋರೆ ದಿಂಡೆ ಮನುಜಳೆ ಎನುತ ೧೧
ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳು
ಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ12
ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿ
ಫುಲ್ಲನಾಭ ಮಾಡಿದ ಪಾಟನ ಎಲ್ಲಿ ಉಸಿರಲೆ ಎನುತ13
ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತು
ಮದನ ಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14
ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದು
ಕ್ಲೇಶ ಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ ೧೫

೨೦೭
ಮುತ್ತು ರತ್ನದ ಕೋಲ ಮತ್ತ ಮಲ್ಲಿಗಿ ಕೋಲ
ತತ್ವ ಸೂಸ್ಸಾಡುವ ಕೋಲ
ಮಿತ್ರೆಯರು ಹರುಷದಿ ಎತ್ತಿ ಕೋಲ್ಹಾಕುವ
ಅತ್ಯಂತ ಸೊಬಗಿನ ಕೋಲ ಪ.
ನಳಿನಾಕ್ಷಿಯರ ಮನ ಕೊಳಲೂದಿ ರಾತ್ರಿಲೆ
ಸೆಳಿದೆಲ್ಲ್ಯೊ ಕಪಟ ಭಾವದಲೆ ಕೃಷ್ಣ
ಸೆಳಿದೆಲ್ಲ್ಯೊ ಕಪಟ ಭಾವದಲೆ
ಎಳೆಯ ಮಕ್ಕಳು ಗಂಡ ಉಳಿದ ಭಾಗ್ಯವ ಬಿಟ್ಟು
ಅಳೆದೆಲ್ಲೊ ಅವರ ಒಗೆತನವ1
ಕಂಜಾಕ್ಷ ಶ್ರೀಕೃಷ್ಣ ರಂಜಿಸಿ ಕೊಳಲೂದಿ
ಮಂಜುಳ ಸ್ವರಕೆ ಮೋಹಿಸುತ ಬಾಲೆ
ಮಂಜುಳ ಸ್ವರಕೆ ಮೋಹಿಸುತ
ಕುಂಜರಗಮನೆಯರು ಸಂಜಿಲೆ ಬಂದರು
ಅಂಜದೆ ಅತ್ತೆಮಾವರಿಗೆ ೨
ಭಾವ ಮೈದುನರನ್ನ ಕೇವಲ ತುಚ್ಛಿಸಿ
ಧಾವಿಸಿ ಬಂದ ಬಾಲೆಯರ ಕೃಷ್ಣ
ಧಾವಿಸಿ ಬಂದ ಬಾಲೆಯರ
ಪಾವನ ಮಾಡದೆ ದೇವ ರಾತ್ರಿಯೊಳು
ಯಾವ ಪಾಶವ ಬಿಡಿಸಿದಯೊ ೩
ತಂದೆತಾಯಿ ಬಳಗ ಬಂಧು ಜನರ ಬಿಟ್ಟು
ಹೊಂದಲು ನಿನ್ನಂಘ್ರಿಗಾಗಿ ಕೃಷ್ಣ
ಹೊಂದಲು ನಿನ್ನಂಘ್ರಿಗಾಗಿ
ಬಂದ ಕಾರಣವ ಒಂದೂ ಮಾತಾಡದೆ
ಕಂದಿಕುಂದಿಸಿದೆಲ್ಲಾ ಅವರ4
ಚಿತ್ತ ಚಂಚಲವಾಗಿ ಎತ್ತಿಗೆ ಮುರವಿಟ್ಟು
ಮತ್ತೊಂದು ಹೋರಿಯ ತರಿಸೆ ಬಾಲೆ
ಮತ್ತೊಂದು ಹೋರಿಯ ತರಿಸೆ
ಹತ್ತಿರಿದ್ದವರೆಲ್ಲ ಅತ್ಯಂತ ನಗುವರು
ಒಂದು ಅರ್ಥಿಯು ಮಾಡಿಸಿದೆಲ್ಲೊ ೫
ಮಂಗನ ಮರಿಯೆತ್ತಿ ಅಂಗಿಯ ತೊಡಿಸುತ
ರಂಗನ ಬಳಿಗೆ ಬಾರೆಂದು ಕಂದ
ರಂಗನ ಬಳಿಗೆ ಬಾರೆಂದು
ಅಕ್ಕ ತಂಗಿಯರು ಕಂಡು ಹಂಗಿಸಿ ನಗುವರು
ಶ್ರೀರಂಗ ಮಾಡಿದ ಕೌತುಕವ ೬
ಬೆಕ್ಕಿನ ಬಾಯೊಳಗೆ ಇಕ್ಕುತ ತುತ್ತನೆ
ಚಿಕ್ಕ ಕಂದಯ್ಯ ಉಣ್ಣೆನುತ ಬಾಲೆ
ಚಿಕ್ಕಕಂದ ಉಣ್ಣೆನುತ ನಕ್ಕರು
ಗೆಳತಿಯರು ಚಕ್ಕನೆ ಜರಿದರು
ಚಕ್ಕಂದವೇನು ಮಾಡಿದೆಯೊ ೭
ಪಟ್ಟಿ ಮಂಚದ ಮೇಲೆ ಬಿಟ್ಟು ಕಂದನ ಬಾಲೆ
ತೊಟ್ಟಿಲ ತೂಗಲು ಭರದಿ ಬಾಲೆ
ತೊಟ್ಟಿಲ ತೂಗಲು ಭರದಿ
ಬಟ್ಟಿ ಬಂದವರು ಅಷ್ಟೂರು ನಗುವಂತೆ
ಎಷ್ಟು ಸೋಜಿಗವ ಮಾಡಿದೆಯೊ ೮
ಉಟ್ಟ ಪೀತಾಂಬರ ಬಿಟ್ಟು ಹಾಕಿಸಿ ಮ್ಯಾಲೆ
ಕೃಷ್ಣನ ಕೊಳಲು ಲಾಲಿಸುತ ಬಾಲೆ
ಕೃಷ್ಣನ ಕೊಳಲು ಲಾಲಿಸುತ ಧಿಟ್ಟನ
ಕೊಳಲೊಳು ಧಿಟ್ಟೆ ಲಾಲಿಸಿದಳು
ಶ್ರೀಕೃಷ್ಣ ಮಾಡಿದ ಕೌತುಕವ ೯
ಕಾಲಿನ ಗೆಜ್ಜೆಯು ಮ್ಯಾಲೆ ಕೊರಳಿಗೆ ಕಟ್ಟಿ
ಮೇಲಾದ ಸರ ಕಾಲಿಘಾಕಿ ಬಾಲೆ
ಮೇಲಾದ ಸರ ಕಾಲಿಘಾಕಿ
ಶಾಲೆ ಹಂಬಲ ಬಿಟ್ಟು ಲೋಲಾಕ್ಷಿ ನಡೆದಳು
ಕೋಲಾಹಲವ ಮಾಡಿಸಿದಿಯೊ ೧೦
ಹಣೆಗೆ ಕುಂಕುಮ ಗಲ್ಲಕ್ಕೆ ಕಾಡಿಗೆ
ಚಲ್ವ ಫಣಿಗೆ ಅರಿಷಿಣವು ಬಾಲೆ
ಚಲ್ವ ಫಣಿಗೆ ಅರಿಷಿಣವು
ನಲ್ಲೆಯರೆಲ್ಲರು ತಮ್ಮ ವಲ್ಲಭರನ ಬಿಟ್ಟು
ಅಲ್ಲೆ ರಾತ್ರಿಲೆ ಒರಗಿದರು11
ಕಜ್ಜಲ ನೇತ್ರಿಯರ ಲಜ್ಜವಗೈಸಿದೆ
ಸಜ್ಜಾಗಿ ಕೊಳಲೂದಿದೊಮ್ಮೆ
ಸಜ್ಜಾಗಿ ಕೊಳಲೂದಿಗುಜ್ಜಿರಮಾದೇವಿ
ಹೆಜ್ಜೆ ಹೆಜ್ಜೆಗೆ ಹಂಗಿಸುವಳು
ಅರ್ಜುನ ಆಡಿದ ನಗುತ ರಾಮೇಶ ಇದಕೆ ಮೆಚ್ಚಿದ12

೨೫೬
ಮುದ್ದು ಪಾಂಡವರನ್ನ ಗೆದ್ದು ಕೈಚಪ್ಪರಿಸಿ
ಗತ್ತಿಲೆಕಾಳಿ ರುಕ್ಮಿಣಿ ಹೊಯಿಸಿದಳು ಪ.
ಅಚ್ಯುತ ಪಾಂಡವರಿಗೆ ಹುಚ್ಚು ಹಿಡಿಸಿದನೆಂದು
ಉತ್ಸಾಹದಿಂದ ಭೇರಿ ಹೊಯ್ಸಿದಳು1
ಮಡದಿ ದ್ರೌಪತಿ ಭದ್ರಾ ಅಡಗಿದರು ಅಂಜಿ ನಮಗೆ
ಎಂದು ಬೆಡಗಿನ ಡಂಕಿ ರುಕ್ಮಿಣಿ ಹೊಯ್ಸಿದಳು2
ಕಾಂತೆ ದ್ರೌಪತಿ ಭದ್ರಾ ಭ್ರಾಂತರಾದರೆಂದು
ಕಾಂತೆಯರು ಕೈ ಹೊಯ್ದು ನಿಂತಾರೆಲ್ಲ ೩
ಪುಟ್ಟಸುಭದ್ರೆಯು ಧಿಟ್ಟ ದ್ರೌಪತಾದೇವಿ
ಬಿಟ್ಟಟ್ಟೆರು ಆಣಿ ಎಂದು ಘಟ್ಟನುಡಿದು ೪
ಧಿಟ್ಟೆರಿಬ್ಬರಗರವು ಕುಟ್ಟಿ ಚೂರ್ಣವ ಮಾಡಿ
ಬಿಟ್ಟರು ಆಣಿಯ ಎಂದು ಸ್ಪಷ್ಟ ನುಡಿದರು ೫
ತಪ್ಪು ಸತ್ಯಭಾಮೆ ತಪ್ಪು ತಪ್ಪು ರುಕ್ಮಿಣಿ ದೇವಿ ತಪ್ಪು
ತಪ್ಪು ತಪ್ಪು ಎಂದು ಕೈಯ ಒಪ್ಪಾಗಿ ಮುಗಿದರು ೬
ತಂದೆ ರಾಮೇಶನ ಮುಂದೆ ರುಕ್ಮಿಣಿದೇವಿ
ವಂದಿಸಿ ದೇವಿಯರೆಲ್ಲ ನುಡಿದರು ೭


ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ನಾರಿ ಮಾರನಯ್ಯನ ತೋರೆ ಪ.
ಹರದಿ ಸುಭದ್ರಾ ತಮ್ಮ ದೊರೆಗಳಿಗೆ ಅರುಹಲು ಪರಮ ಹರುಷರಾಗಿ ಐವರು ಚಪಲಾಕ್ಷಿ ಪರಮ ಹರುಷರಾಗಿ ಐವರು ಮುಯ್ಯಕ್ಕದುರದಿಂದ ಭೇರಿ ಹೊಯ್ಸಿದರ ಚಪಲಾಕ್ಷಿ೧
ಹಸ್ತಿನಾಪುರದರಸು ಮತ್ತೆ ಜೋಯಿಸರ ಕರೆಸಿ ಮುತ್ತು ತುಂಬಿಡಿಸಿ ಮರದಾಗ ಚಪಲಾಕ್ಷಿಮುತ್ತು ತುಂಬಿಡಿಸಿ ಮರದಾಗ ಮುಯ್ಯಕ್ಕಉತ್ತಮ ತಿಥಿಯು ಬರಬೇಕು ಚಪಲಾಕ್ಷಿ ೨
ಧರ್ಮನ ಪ್ರಶ್ನೆಯ ಪ್ರೇಮದಿಂದಲೆ ಕೇಳಿ ಅಮ್ಮಯ್ಯ ಶ್ರೀ ರಮಣನ ನೆನೆಯುತ ಚಪಾಲಾಕ್ಷಿ ಶ್ರೀ ರಮಣನ ನೆನೆಯುತ ಬೃಹಸ್ಪತಿಜಮ್ಮನೆ ತೆಗೆದಾ ಶುಭತಿಥಿಚಪಲಾಕ್ಷಿ೩
ಈಗಿನ ವ್ಯಾಳ್ಯಕ್ಕ ಜಾಗು ಮಾಡದೆ ಕೃಷ್ಣಿಹೋಗ ನೀಗೆದ್ದು ಬರತೀಯೆ ಚಪಲಾಕ್ಷಿಹೋಗ ನೀಗೆದ್ದು ಬರತೀಯೆ ಎನುತಲೆ ಆಗಬೃಹಸ್ಪತಿಯು ನುಡಿದಾನೆ ಚಪಲಾಕ್ಷಿ ೪
ಇಂದಿನ ದಿವಸÀಕ್ಕ ಸಂದೇಹ ಬ್ಯಾಡವ್ವಾ ತಂದೆರಾಮೇಶನ ಮಡದೇರ ಚಪಲಾಕ್ಷಿತಂದೆ ರಾಮೇಶನ ಮಡದೇರ ನಾಚಿಸಿ ಬಂದಿಯೆಕೃಷ್ಣಿ ನಗುತಲೆ ಚಪಲಾಕ್ಷಿ೫

೩೧
ಮುರಲೀಧರ ಮೋಹನಾಂಗ ಕಾಯೋ ಕೃಪಾಂಗ ದೇವನರಸಿಂಹ ಹೇ ಭವ ಭಂಗ ಪ.
ಥಳ ಥಳಿಸುತ ಗೆಳತಿಯರು ಸಹಿತಾಗಿಚಳತೆಂಬೊ ದಿವ್ಯ ಆಭರಣಚಳತೆಂಬೊ ದಿವ್ಯಾಭರಣ ಭೂಷಿತರಾಗಿಕುಳಿತ ನಾರಿಯರು ಕಡೆಯಿಲ್ಲ೧
ಕುಂತಲ ಕದುಪಿನ ಕಾಂತೆಯರು ಹರುಷದಿಕಂತುನಯ್ಯನ ಮುಖನೋಡಿಕಂತುನಯ್ಯನ ಮುಖನೋಡಿಮೈಮರೆದು ನಿಂತ ನಾರಿಯರು ಕಡೆಯಿಲ್ಲ ೨
ಅಂದುಗಿ ಅರಳೆಲೆ ಬಿಂದಲಿ ಭಾಪುರಿಅಂದವಾಗಿದ್ದ ಅಸಲಿಅಂದವಾಗಿದ್ದ ಅಸಲಿ ಕಟ್ಟಿದಕಂದರಿನ್ನೆಷ್ಟು ಕಡೆಯಿಲ್ಲ೩
ಕಾಲಲಂದುಗೆ ಗೆಜ್ಜೆ ತೋಳಲಿ ತಾಯತಲಾವಳಿಗೆ ಮುತ್ತು ಅಲುಗುತಲಾವಳಿಗೆ ಮುತ್ತು ಅಲುಗುತಸುಳಿದಾಡೊ ಬಾಲರಿನ್ನೆಷ್ಟು ಕಡೆಯಿಲ್ಲ ೪
ಹಸಿರು ಪಚ್ಚದ ಕಂಭ ಕುಸುರಾದ ಗಿಳಿಬೋದುಗೆಎಸಕೊ ಮಾಣಿಕದ ಜಗುಲಿಯ ಎಸಕೊ ಮಾಣಿಕದ ಜಗುಲಿ ಸಿಂಹಾಸನದಿ ವಸುದೇವ ತನಯ ಕುಳಿತಾನೆ ೫
ಬಿಸÀಜನೇತ್ರಿಯರ ಮುಂದೆ ಕುಶಲದ ಮಾತ್ಹೇಳುತವಸುದೇವ ತಾನು ಕುಳಿತಾನವಸುದೇವ ತಾನು ಕುಳಿತಾನ ದೇವಕಿಯಸೊಸೆಯರ ಕಂಡು ಹರುಷಾಗಿ ೬
ಚಲುವ ರಾಮೇಶನ ಬಲದ ಭಾಗದಿಬಂದು ಹಲವು ಮಾತುಗಳು ಕಿವಿಯೊಳುಹಲವು ಮಾತುಗಳು ಕಿವಿಯೊಳುಹೇಳುತ ಬಲರಾಮ ತಾನೆ ಕುಳಿತಾನೆ೭

೧೮೧
ಮೂರ್ಜಗದೊಡೆಯ ವಿರಾಜಿಸಿ ಕುಳಿತಿಹನು
ರಾಜ ರಾಜರ ಗಂಡ ರಾಜಗೋಪಾಲ ಪ.
ಚಿತ್ತಜನೈಯನು ಮುತ್ತಿನ ಗದ್ದುಗೆ ಮೇಲೆ
ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ ೧
ಇಂದಿರೇಶನು ಬಹು ಚಂದಾಗಿ ಕುಳಿತಿಹನು
ಬಂದ ಜನರ ಸಹಿತ ತಂದೆ ಗೋಪಾಲ ೨
ಸರ್ಪಶಯನನ ಬದಿಯಲೊಪ್ಪುವ ಬಲರಾಮ
ವಿಪ್ರರಿಂದಲೆ ಕುಳಿತ ಅಪ್ಪ ಗೋಪಾಲ೩
ಥಳ ಥಳ ಹೊಳೆಯುತ ಅಳಕಿಸಿ ಸೂರ್ಯನ
ಬೆಳಕು ತುಂಬಿಸಿ ತಾನು ಕುಳಿತ ಗೋಪಾಲ ೪
ಮುತ್ತು ಮಾಣಿಕ ನವರತ್ನ ಸಿಂಹಾಸನ
ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ೫
ನೃತ್ಯ ವಾದ್ಯಗಳಿಂದ ನರ್ತನ ಮಾಡಿಸಿ ಕುಳಿತ
ಕೀರ್ತಿವಂತನು ದಿವ್ಯ ಮೂರ್ತಿ ಗೋಪಾಲ ೬
ಬಂದ ಜನಕೆ ಆನಂದವ ಪಡಿಸುತ ಚಂದ್ರನಂತಲೆ ಕುಳಿತ ಬಂದು ರಾಮೇಶ ೭

೬೭
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರ
ರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ.
ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ೧
ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ೨
ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ೩
ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ ೪
ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ೫

೮೩
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ.
ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ೧
ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ ೨
ಒಡಲಿಗಿಲ್ಲದೆ ಹೋಗಿ ತುಡುಗುತನವ ಮಾಡಿಗಡಗಿ ಸಂದಿಯಲಿ ಅಡಗಿದ್ಯೋಗಡಗಿ ಸಂದಿಯಲಿ ಅಡಗಿದ್ಯೋ ಕೃಷ್ಣ ನಿನಗೆ ಬಡಿವಾರ ಬಂದ ಬಗಿ ಹೇಳೊ ಕೋಲ೩
ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ೪
ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ೫
ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ ೬

ಐವರನ ಠಕ್ಕಿಸಿ :
೨೨೪
ಯಾತರ ಗರವು ಹೇಳೆ ಮಾತಿನ ಜಾಣಿ
ಪ್ರೀತಿಲೆ ಕರೆಯದೆ ನೀತಿ ಬಿಟ್ಟೆನೀನು ಪ.
ಬಾಲೆ ನಿಮ್ಮರಸರು ಭಾಳಗುಣವಂತರು
ಕಾಲ ವಿಹಿತವನು ತಿಳಿದು ಇಂದಿವ ರಾಕ್ಷಿ
ಕಾಲ ವಿಹಿತವ ತಿಳಿದು ರಮಿಸುವಾಗ
ಸಾಲದೆ ಮಾನವ ಕಳಕೊಂಡೆ ಇಂದಿವರಾಕ್ಷಿ ೧
ಮಿತ್ರೆ ನಿನ್ನವಗುಣ ಮತ್ತೆ ಐವರು ನೋಡಿ
ಪ್ರತ್ಯೇಕ ಒಬ್ಬೊಬ್ಬ ಮಡದಿಯರ ಇಂದಿವರಾಕ್ಷಿ
ಪ್ರತ್ಯೇಕ ಒಬ್ಬೊಬ್ಬ ಮಡದಿಯರ ಮದುವ್ಯಾಗಿ
ಅರ್ಥಿಲೆ ರಮಿಸಿ ಇರುತಾರೆ ಇಂದಿವರಾಕ್ಷಿ2
ಐವರನ ಠಕ್ಕಿಸಿ ದೈವನಂಥವನ ಕೂಡ
ಮೈಮರೆದು ಓಡುವ ಸಮಯದಿ ಇಂದಿವರಾಕ್ಷಿ
ಮೈಮರೆದು ಓಡುವ ಸಮಯದಿ ಭೀಮಸೇನ
ಕೈ ಹಿಡಿದು ಕೆಳಗೆ ಎಳೆದಾನ ಇಂದಿವರಾಕ್ಷಿ ೩
ಸೂತ್ರ ನಾಮಕನ ಮಡದಿ ಸ್ತೋತ್ರಕೆ ಹಿಗ್ಗುವಿ
ವ್ರಾತ್ಯನ ಕೂಡ ರಥೆವೇರಿ ಇಂದಿವರಾಕ್ಷಿ
ವ್ರಾತ್ಯನ ಕೂಡ ರಥವೇರಿ ಹೋಗುವಾಗ
ಯಾತರ ಮಾನ ತಿಳಕೊ ಇಂದಿವರಾಕ್ಷಿ ೪
ಧಡ ಧಡ ರಥವನು ಹೊಡೆದು ಓಡಿಸುವಾಗ
ಸಿಡಿಲೆರಗಿದಂತೆ ಐವರು ಇಂದಿವರಾಕ್ಷಿ
ಸಿಡಿಲೆರಗಿದಂತೆ ಐವರು ನಿನ್ನಕೈ
ಹಿಡಿದೆಳೆದದ್ದು ಮರೆತೆಯೇನ ಇಂದಿವರಾಕ್ಷಿ ೫
ವಾಚಾಭಿಮಾನಿಯೆ ಯೋಚಿಸೆ ಮನದೊಳು
ಆಚೆಲಿದ್ದವರಿಗೆ ಅನುಮಾನ ಇಂದಿವರಾಕ್ಷಿ
ಆಚೆಲಿದ್ದವರಿಗೆ ಅನುಮಾನ ದ್ರೌಪತಿ
ನಾಚಿಕೆ ಎಂದು ಬರಬೇಕ ಇಂದಿವರಾವಕ್ಷಿ ೬
ಪಾಂಚಾಲಿ ನಿನ್ನವ ಗುಣ ಮಿಂಚಿತ ಜಗದೊಳು
ಹಂಚಿಕೆ ಹಾಕಿದರೆ ಹರವಿಲ್ಲ
ಹಂಚಿಕೆ ಹಾಕಿದರೆ ಹರವಿಲ್ಲ ರಮಿಅರಸುಕಿಂಚಿತ್ತು ಮಾನ ಉಳಿಸಿದ ಇಂದಿವರಾಕ್ಷಿ ೭

೨೩೮
ಯಾದವರನ್ನ ಪಾಲಿಸುವ ಮುನ್ನ
ಕರುಣ ಕಟಾಕ್ಷದಿನೀ ದಯ ಮಾಡೊ ಪ.
ಮತ್ತೆ ಭಾಗೀರಥಿ ಜಲವ
ಮಿತ್ರೆ ದ್ರೌಪತಿ ಎರಿಯೆ
ಅರ್ಥಿಲೆ ಪಾದ ತೊಳೆದರು
ಅರ್ಥಿಲೆ ಪಾದ ತೊಳೆದು ಪ್ರಾರ್ಥಿಸಿದರು
ಚಿತ್ತಕ್ಕೆ ತಂದು ಕೈಕೊಳ್ಳೊ ೧
ಹರದಿ ರುಕ್ಮಿಣಿಗೆರಗಿ
ದ್ರೌಪತಿ ಭದ್ರಾ
ಆದರದಿಂದ ಪಾದ ತೊಳೆದರು
ಆದರದಿಂದ ಪಾದ ತೊಳೆದು ಪ್ರಾರ್ಥಿಸಿದರು
ಶ್ರೀದೇವಿ ಪೂಜೆ ಕೈಕೊಳ್ಳೆ ೨
ಪಂಚ ಭಕ್ಷ್ಯ ಪರಮಾನ್ನ
ಪಾಂಚಾಲಿ ಬಡಿಸಿದಳು
ಪಂಚಪಾಂಡವರ ಸಹಿತಾಗಿ
ಪಂಚಪಾಂಡವರ ಸಹಿತಾಗಿ ಶ್ರೀಕೃಷ್ಣ
ಚಂಚಲಾಗದಲೆ ಸವಿದುಂಡ3
ಅಕ್ಕ ರುಕ್ಮಿಣಿ ಭಾಮೆ
ಮಿಕ್ಕ ತಂಗಿಯರ ಸಹಿತ
ಸಖ್ಯ ಭಾವದಲಿ ಉಣುತಿರೆ
ಸಖ್ಯ ಭಾವದಲಿ ಉಣುತಿರೆ ಹರುಷದಿ
ದೇವಕ್ಕಳು ನೋಡಿ ಬೆರಗಾಗಿ4
ಇಂದು ರಾಮೇಶ ತಾನು
ಮಿಂದು ಮಡಿಯನುಟ್ಟು
ಬಂಧು ಜನಸಹಿತ ಸವಿದುಂಡ
ಬಂಧು ಜನಸಹಿತ ಸವಿದುಂಡ ಐವರಿಗೆ
ಆನಂದ ಬಡಿಸಿದನು ಅತಿ ಬ್ಯಾಗ5

೧೫೧
ಯಾದವೇಂದ್ರ ಪರಿಮೋದವ ಸೂಸುತ ಹಾದಿಯ ಹಿಡಿದಾನು ತಾಗುಣ ಸಾಂದ್ರ ಯಾದವೇಂದ್ರ ಪ.
ಛತ್ರ ಚಾಮರದವರು ಜತ್ತಾಗಿ ನಡೆದರುಚಿತ್ತಜನೈಯನ ಹತ್ತಿರ ಕೆಲರು೧
ಆನೆ ಅಂಬಾರಿಯವರು ಶ್ರೀನಿವಾಸನ ಮುಂದೆ ನಾನಾ ಭೂಷಿತರಾಗಿ ಮಾನದಿ ತೆರಳಿ ೨
ರಾಜಪುತ್ರರು ದಿವ್ಯ ವಾಜಿಗಳೇರುತ ಬಾಜಾರದೊಳು ವಿರಾಜಿಸಿ ನಡಿಯೆ೩
ಮಂದಗಮನೆಯರ ರಥ ಮುಂದಾಗಿ ನಡೆದವುಇಂದಿರೆ ಅರಸನ ಸಂದಣಿ ನೋಡ ೪
ಎಲ್ಲೆಲ್ಲಿ ನೋಡಿದರೆ ಪಲ್ಲಕ್ಕಿ ಸಾಲಾಗಿ ಫುಲ್ಲನಾಭನ ಮುಂದೆ ನಿಲ್ಲಿಸಿ ನಡಿಯೆ೫
ನೋಡ ಬಂದವರೆಲ್ಲ ಗಾಡಿ ವಯಲುಗಳೇರಿರೂಢಿಗೊಡೆಯನ ಮುಂದೆ ಓಡಿಸಿ ನಡಿಯೆ ೬
ತಂದೆ ರಾಮೇಶನು ಬಂದ ಬೀದಿಯ ಸೊಬಗುಇಂದಿರೆವಶವಲ್ಲ ಚಂದಾಗಿ ರಚಿಸೆ ೭

೪೩
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ.
ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ೧
ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ೨
ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ ೩
ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ೪
ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ೫
ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ ೬
ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ೭
ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ೮
ಪಚ್ಚೆ ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ ೯
ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ ೧೦
ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ ೧೧

೨೪೪
ರಂಗಕೇಳಯ್ಯ ಬೆಳಂದಿಗಳ ಬೆಳಗುವ ವಸ್ತ್ರ
ಕಂಗಳಿಗೆ ಸೂರ್ಯ ಹೊಳೆವಂತೆ
ಶ್ರೀರಂಗ ಕೊಳ್ಳಯ್ಯ ಉಡುಗೊರೆ ಪ.
ಏಸೋ ಮಾಣಿಕದ್ವಸ್ತ ಹಸಿರು ಪಟ್ಟಾವಳಿ
ವಸುದೇವಗೀಗ ರಥ ತೇಜಿ ಕೊಟ್ಟ ೧
ಲೆಕ್ಕವಿಲ್ಲದೆ ರತ್ನ ಸಂಖ್ಯವಿಲ್ಲದೆ ವಸ್ತ್ರ
ದೇವಕಿಗೆ ಕೊಟ್ಟ ಪಟ್ಟಾವಳಿ ೨
ಹಲವು ಮಾಣಿಕದ ವಸ್ತ ಬೆಲೆಯಿಲ್ಲದಷ್ಟು ವಸ್ತ್ರ
ಬಲರಾಮಗೆ ಕೊಟ್ಟ ರಥಗಳ ೩
ಮುತ್ತು ಮಾಣಿಕದೊಸ್ತ ಮತ್ತೆ ಪಟ್ಟಾವಳಿ ಸೀರೆ
ಮಿತ್ರೆ ರೇವತಿಗೆ ದೊರೆ ಕೊಟ್ಟ ೪
ಸಂಭ್ರಮದಿ ಭಾನು ಮಾನು ಸಾಂಬ ಪ್ರದ್ಯುಮ್ನಗೆ
ಮೇಲೆಂಬೊ ವಸ್ತ್ರಗಳು ಪಟ್ಟಾವಳಿ ಕೊಟ್ಟ ೫
ಸರಸಿಜಾಸನ ಶಿವನ ಅರಸೆಯರಿಗೆ ಮೊದಲಾಗಿ
ಸರಸದೊಸ್ತಗಳು ರಥಕೊಟ್ಟ6
ಇಂದ್ರ ಚಂದ್ರನ ಮಡದಿಯರಿಗೆಬಂದ ಋಷಿಗಳಿಗೆಲ್ಲ
ಚಂದ-ದೆಸ್ತ್ರಗಳ ದೊರೆ ಕೊಟ್ಟ ೭
ಪಂಡಿತರು ರಾಯರಿಗೆ ದುಂಡು ಮುತ್ತಿನ ವಸ್ತ
ತಂಡ ತಂಡದಲಿಜವಳಿಯ ದೊರೆ ಕೊಟ್ಟ8
ದಾಸರುದಾಸಿಯರಿಗೆ ಸೋಸಿನ ವಸ್ತ್ರಗಳು ಸೀರೆ
ಕುಪ್ಪಸ ಜರತಾರಿಗಳ ದೊರೆ ಕೊಟ್ಟ ೯
ಗುಜ್ಜಿಯರ ಮಕ್ಕಳಿಗೆ ಗೆಜ್ಜೆ ಸರಪಳಿ ಅಂಗಿ
ಸಜ್ಜು ತೋರುವ ಅರಲೆ ಕೊಟ್ಟ10
ಗೊಲ್ಲನಾರಿಯರ ಕುಬ್ಜಿಗೆಲ್ಲ ರಾಮೇಶ ಕೊಟ್ಟ
ಚಲುವ ನಮ್ಮ ಮ್ಯಾಲೆ ಹರುಷಾಗೊ ೧೧

೨೩೦
ರಂಗನ ತಂಗಿಯರ ಮಾನಭಂಗ ಮಾಡಿ
ಹರುಷದಿಂದ ತಂಗಿಯರು
ಕೋಲ ಹಾಕುತಾರೆ ಬಾರೆ ದ್ರೌಪತಿ ಪ.
ದೊರೆಯರ ಮಗಳೆಂದು
ಬಹಳೆ ಗರವಿಲಿಂದ ಆಣಿನಿಟ್ಟು
ಒಳಗೆ ಹೋಗಿ
ಸೇರಿದ್ಯಾಕ ಬಾರೆ ದ್ರೌಪತಿ ೧
ಒಳ್ಳೆಯವರ ಮಗಳು ನೀನು
ಭಾಳ ಮಾತನಾಡಿ
ಗೈಯ್ಯಾಳಿ ತನವ
ತೋರಿಕೊಂಡಿ ಬಾರೆ ದ್ರೌಪತಿ2
ಗುಡ್ಡದಷ್ಟು ರಾಗ ಮಾಡಿ
ಅಡ್ಡಾದಿಡ್ಡಿ ಮಾತನಾಡಿ
ಧಡ್ಡ ತನವ ತೋರಿಕೊಂಡೆ
ಬಾರೆ ದ್ರೌಪತಿ3
ಸರ್ಪನ ಎದುರಿಗೆ ಕಪ್ಪೆ
ದರ್ಪತೋರುವದು ಉಂಟೇನ
ಅರಿಪುರೆಲ್ಲ ನಿನ್ನ ಬುದ್ಧಿ
ಬಾರೆ ದ್ರೌಪತಿ4
ಬರಿಯ ಮಾತಿನ ಜಾಣೆ
ನಿಮ್ಮನ ಕರೆಯ ಬರಲಿಲ್ಲವೆಂದು
ಕುರಿಯಂತೆ ಕೂಗಿದೆಲ್ಲ
ಬಾರೆ ದ್ರೌಪತಿ5
ನರಿಯ ಸಿಂಹನ ಮರಿಗೆ
ನೀನು ಸರಿ ಗಟ್ಟಿದಂತೆ
ಅದರ ಪರಿಯ
ತಿಳಕೊಳ್ಳಬಾರೆ ದ್ರೌಪತಿ ೬
ಅಕ್ಕ ರುಕ್ಮಿಣಿಗೆ ಭಾಳ
ಸೊಕ್ಕಿಲಿಂದ ಆಣಿನಿಟ್ಟೆ
ಬೆಕ್ಕಿನಾಂಗ ಸೇರಿದ್ಯಾಕ
ಬಾರೆ ದ್ರೌಪತಿ7
ನಳಿನಾಕ್ಷಿ ರಾಮೇಶ ನರಸಿಯರಿಗೆ
ತಿಳಿಯದೆ ಆಣಿಯನಿಟ್ಟು
ಮಾನವ ಎಂತು ಕಳೆದು ಕೊಂಡೆ
ಬಾರೆ ದ್ರೌಪತಿ8

೩೫
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ.
ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ೧
ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು೨
ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ ೩
ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ೪
ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು ೫
ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು ೬
ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು ೭

೨೫೨
ರಂಗನಮ್ಮನೆಗೆ ತಾ ಬಂದ
ಮತ್ತೇನು ತಂದ ಪ.
ಜಗದೋದ್ದಾರ ಸಭೆಗೆ ಬಂದ
ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರ ಕೊಳ್ಳಿರೆಂದ
ಪಗಡಿ ಧರ್ಮಗೆ ತರಲಿಲ್ಲೆಂದ ೧
ವಾಣಿ ಮಾವ ಮನೆಗೆ ಬಂದ
ಜಾಣತನವ ಹೇಳಿದ್ದು ತಂದ
ಮಾಣಿಕ ಮುತ್ತು ಕೊಳ್ಳಿರೆಂದ
ಕ್ವಾಣನ ಧರ್ಮಗೆ ತರಲಿಲ್ಲೆಂದ ೨
ಕೃಷ್ಣರಾಯಸಭೆಗೆ ಬಂದ
ಎಷ್ಟು ಜಂಬ ಹೇಳಿದ್ದು ತಂದ
ಪಟ್ಟಾವಳಿ ಕೊಳ್ಳಿರೆಂದ
ಹುಟ್ಟು ಭೀಮಗೆತರಲಿಲ್ಲೆಂದ ೩
ನಳಿನಾಕ್ಷ ಸಭೆಯೊಳು ಬಂದ
ಹೊಳೆವೊ ಎಷ್ಟು ಹೇಳಿದ್ದು ತಂದ
ಝಳಿಸೋವಸ್ತ್ರ ಕೊಳ್ಳಿರೆಂದ
ಬಳೆಯ ಪಾರ್ಥಗೆ ತರಲಿಲ್ಲೆಂದ ೪
ರಾಜ್ಯ ಲಕ್ಷಣ ನಿನಗಿಲ್ಲೆಂದ
ಮಾಜುದಾ ಕುಲ ಧರ್ಮ ಕುಂದ
ತೇಜಿ ಮುಂದೆ ಓಡಿದ್ದು ಚಂದ
ಸೋಜಿಗವಲ್ಲ ನಕುಲನೆಂದ ೫
ಸುಮನಸರು ನಗುವೊರೆಂದ
ಭ್ರಮೆಯ ಕಳೆದ್ಯೊ ಸಹದೇವ ಎಂದ
ಅಮಿತ ದನವ ಕಾಯ್ದ್ಯೊ ಛಂದ
ರಮಿಯ ಅರಸು ನಗುವ ನೆಂದ ೬
ಅಂದ ಮಾತಿಗೆ ಬಲರಾಮ ಹೀಗೆಂದ
ಚಂದ ವಾಯಿತು ಕುಶಲವೆಂದ
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ ೭

೨೫೪
ರಂಗರಾಯರ ಮುಂದೆ
ಇವರ ಕೊಂಗ ಬುದ್ಧಿ
ಕೋಲ ಹೊಯ್ಸಿ
ಹಂಗಿನ ಮುಯ್ಯ ಕಳೆದೆವ
ಇವರ ತಂಗಿಯರ ಮಾರಿ ಭಂಗಿಸಿ ನಾವು ಪ.
ಅಪ್ಪ ಅರಸು ಆಗೊ ಇವರ
ತಪ್ಪಿನ ಮಾತಿಲೆ ಸೋಲಿಸಿ
ನಿಮ್ಮಪ್ಪ ನಿಮ್ಮರಸನೆಂಬೊ
ಚಪ್ಪಾಳೆಯನಿಕ್ಕಿಸಿ ನಾವು ೧
ಒಡ ಹುಟ್ಟಿದಣ್ಣನ ದ್ರೌಪತಿ
ಒಡಗೂಡುತಲಿ ತಾ ಇಡುವರೆ
ಈ ಆಣೆ ನಮಗೆ
ನುಡಿದ ಆ ನುಡಿಗೆ ನಾಚಿಸಿ ಇವರನು ೨
ಹುಟ್ಟು ಹೊಂದೊದೆಂಬೋದಿವರ
ಬಿಟ್ಟು ಕಡೆಗೆ ಮಾಡಿಸಿನಾವು
ಶ್ರೀ ಕೃಷ್ಣನಂಫ್ರಿ ಕಮಲವನ್ನು
ಎಷ್ಟು ದಯದಿ ತೋರಿಸಿ3
ಅಷ್ಟ ಮದದ ತಮವು ಎಂಬೊ
ಕುಟ್ಟಿ ಹಿಟ್ಟು ಮಾಡಿಸಿ ನಾವು
ಸಿಟ್ಟು ಕೋಪವೆಂಬೊ ಬಣವಿ ಒಟ್ಟಿ
ಕೆಂಡ ಹೇರಿಸಿ ನಾವು4
ಸತ್ವರಜ ತಮವು ಎಂಬೊ
ಕತ್ತಲೆಯ ಅಡಗಿಸಿ ನಾವು
ಮತ್ತೆ ಞೆನ ಸೂರ್ಯನ
ಪ್ರಶಸ್ತ ಉದಯ ಮಾಡಿಸಿ ೫
ನೀತಿ ತಪ್ಪಿದ ಬಾಲೆಯರ
ಭೂತ ಹೊರಗೆ ಹೊರಡಿಸಿನಾವು
ಮಾತ್ರಗಳೆಂಬೊ ಇವರ
ಗಾತ್ರ ಬಿಟ್ಟು ದೂರ ಇಡಿಸಿ ೬
ಸಂಚಿತ ಗಾಮಿಯು ಇವರ
ಕಿಂಚಿತುಳಿಯದಲೆ ಹಾರಿಸಿ ನಾವು
ಪಂಚ ಪಾಂಡವರ ಮಡದಿ
ಪಾಂಚಾಲಿಯ ನಾಚಿಸಿ ೭
ದಶೇಂದ್ರಿಯಗಳೆಂಬೊ ಕುದುರೆಗಳ
ದಶ ದಿಕ್ಕಿಗೆ ಓಡಿಸಿ ನಾವು
ಮುಸುಕು ಹಾಕಿದ ಅಂಗವನು
ಕೊಸರಿ ಕೊಸರಿ ಝೂಡಿಸಿ ೮
ನಿಂದ್ಯವಾದ ಪಟಲು ವಿದ್ಯೆ
ಚಿಂದಿ ಚಿಂದಿ ಮಾಡಿಸಿ ನಾವು
ತಂದೆ ರಾಮೇಶನ ಪಾದಕೆ ತಂದು ಇವರ ಹೊಂದಿಸಿ ೯

೨೪೧
ರನ್ನ ಚಿನ್ನದ ಕೋಲ
ಹೊನ್ನು ಮುತ್ತಿನ ಕೋಲ
ಪನ್ನಂಗಶಯನ ನಲಿದು ಒಲವೊ ಕೋಲ ಪ.
ಇಂದಿರೇಶಗೆ ರಾಯ ಗಂಧ ಕಸ್ತೂರಿ ತೀಡಿ
ಮಂದಾರ ಮಲ್ಲಿಗೆ ಮಾಲೆ ಚಂದದಲ್ಹಾಕಿ ೧
ಶ್ರೀದೇವಿಯರಿಗೆ ಭದ್ರಾ ಕ್ಯಾದಿಗೆ ಮಲ್ಲಿಗೆ ಮುಡಿಸಿ
ಊದು ಪರಿಮಳ ಮ್ಯಾಲೆ ಮೋದವ ಬಟ್ಟು2
ಅಂಬುಜಾಕ್ಷರಿಗೆ ರಾಯ ತಾಂಬೂಲ ಅಡಿಕೆಯ ಕೊಟ್ಟು
ಕಂಬುಕಂಠರಿಗೆ ಎರಗಿ ಸಂಭ್ರಮದಿಂದ ೩
ಸರಸಿಜ ಮುಖಿಯರಿಗೆ ಅರಿಷಿಣಕುಂಕುಮ ಹಚ್ಚಿ
ಸರಸದ ವಸ್ತಗಳ ದ್ರೌಪತಿ ಅರಸಿಗೆ ಇಟ್ಟು4
ಪಚ್ಚಮುತ್ತಿನ ವಸ್ತ ಅಚ್ಯುತನಂಗದಲೆ ಇಟ್ಟು
ಉಚಿತ ವಸ್ತ್ರಗಳ ಕೊಟ್ಟು ಸ್ವಚ್ಚ ಮನದಿ ೫
ರುಕ್ಮಿಣಿ ಅರಸಿಯರಿಗೆ ಅನರ್ಘ್ಯ ವಸ್ತ್ರವಕೊಟ್ಟು
ಶೀಘ್ರದಿಂದ ಎರಗಿ ದ್ರೌಪತಿ ಹಿಗ್ಗಿದಳು6
ತಂದೆ ರಾಮೇಶಗೆ ಮಂದಗಮನೆಯರೆಲ್ಲ
ಗಂಧ ಕುಂಕುಮ ವೀಳ್ಯ ವಸ್ತ ಅಂದದಿಕೊಟ್ಟು ೭

೧೯೧
ರಾಜ ರಾಜರ ನೋಡ ಅಮ್ಮಯ್ಯ
ಕೋಟಿ ತೇಜರು ನಿಂತಿಹರಮ್ಮಯ್ಯ ಪ.
ಕುಂತಿ ಮಕ್ಕಳ ನೋಡ ಅಮ್ಮಯ್ಯ
ಚಂದ್ರ ಕಾಂತಿಯಿಂದೊಪ್ಪುತ ಅಮ್ಮಯ್ಯ
ನಿಂತ ಸೊಬಗು ನೋಡ ಅಮ್ಮಯ್ಯ
ಲಕ್ಷ್ಮೀಕಾಂತನ ಇದುರಿಗೆ ಅಮ್ಮಯ್ಯ1
ಪಾಂಡವರ ನೋಡ ಅಮ್ಮಯ್ಯ
ಸೂರ್ಯ ಮಂಡಲದಂತಿಹರ ಅಮ್ಮಯ್ಯ
ದುಂಡಾಗಿ ನಿಂತಿಹರಮ್ಮಯ್ಯ
ಅವರ ಕೊಂಡಾಡಲ್ವಶವಲ್ಲ ಅಮ್ಮಯ್ಯ ೨
ಶಶಿಮುಖಿಯರ ನೋಡ ಅಮ್ಮಯ್ಯ
ಕಾಂತೆ ದೇಶಲೆಲ್ಲ ಬೆಳಕು ನೋಡ ಅಮ್ಮಯ್ಯ
ಹಸುಳೆಯರು ನಿಂತಿಹರಮ್ಮಯ್ಯ
ನಮ್ಮ ಕುಸುಮನಾಭನ ಮುಂದೆ ಅಮ್ಮಯ್ಯ3
ಕಡು ಚಲುವೆಯರ ನೋಡಮ್ಮಯ್ಯ
ನಿಂತ ಉಡುರಾಜ ಮುಖಿಯರಮ್ಮಯ್ಯ
ಕಡಲಶಯನನ ಮುಂದೆ ಅಮ್ಮಯ್ಯ
ಅವರ ಬೆಡಗು ಎಷ್ಟು ಹೇಳಲಮ್ಮಯ್ಯ4
ಲಕ್ಷಣವಂತರಮ್ಮಯ್ಯ
ನಿಂತು ನಕ್ಷತ್ರ ಮಾಲೆಯಂತೆ ಅಮ್ಮಯ್ಯ
ವೀಕ್ಷಿಸಿ ರಾಮೇಶನ ಅಮ್ಮಯ್ಯ
ಸುಖ ಅಕ್ಷಯ ಪಡೆದಿಹರಮ್ಮಯ್ಯ ೫

೧೬೨
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ.
ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು೧
ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು ೨
ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ ೩
ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ ೪
ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ ೫
ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ ೬
ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು ೭

೧೬೪
ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ.
ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ೧
ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ೨
ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು ೩
ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು ೪
ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ ೫
ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ೬
ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ ೭
ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ ೮
ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು ೯

೧೨೫
ಲಕುಮಿ ರಮಣನು ಹೆಜ್ಜೆನಿಕ್ಕಲುಕಿಂಕಿಣಿ ಕಿಂಕಿಣಿ ಎಂದಿವೆ ಟೊಂಕದ ಗೆಜ್ಜೆ ಪ.
ಲೆಕ್ಕವಿಲ್ಲದ ಹಗ್ಗ ತಂದುಚಕ್ಕನೆ ಕಟ್ಟೋಳು ಬಂದುಚಿಕ್ಕಟೊಂಕಲಿಂತೆಂದುಅಕ್ಕಜ ಬಟ್ಟಳಾಕೆ ಬಂದು೧
ಧಿಟ್ಟನು ವರಳೆಳದು ತಂದುಥಟ್ಟನೆ ಮರ ಮುರಿದು ಬಂದುಸ್ಪಷ್ಟವಾದರೊ ಸೂರ್ಯರೆಂದುಕೊಟ್ಟ ಕೃಷ್ಣ ಅಭಯವೆಂದು೨
ತೊಡೆಯ ನೇರುವಳೆ ಬಂದುನಡವ ವರ್ಣಿಸೆವೆÉಂದುನುಡಿಯಲಾರೆವಿತಂಡನುಡಿದಳುರಮೆ ಬಂದು ೩

೨೩
ವನವ ನೋಡೋಣು ಬಾರೇ ನೀರೆ ಅಲ್ಲಲ್ಲಿಗೆ ಸರೋವರ ವನವ ನೋಡೋಣು ಬಾರೇ ನೀರೆ ಪ.
ನೀರ ಮೇಲಾಡುವ ಪಾರಿವಾಳದ ಹಿಂಡುದೂರಾಗಿ ಬೆಳೆದ ಅಡಿಕೆಯದೂರಾಗಿ ಬೆಳೆದ ಅಡಿಕೆ ತೆಂಗಿನಮರ ಶ್ರೀದೇವಿ ಅರಸನ ವನವಿದು ೧
ಲೋಕನಾಯಕಸ್ವಾಮಿ ಆ ಕಮಲಾಕ್ಷಿಯರು ಜೀಕುಳಿ ತುಂಬಿ ಜಡತಜೀಕುಳಿ ತುಂಬಿ ಜತಾ ರಂಗಯ್ಯಓಕುಳಿಯಾಡಿದ ವನವಿದು೨
ಘನÀ ಮೇಘ ಶ್ಯಾಮನ ವನದಮಧ್ಯದಲಿ ಪುನುಗಿನ ಬೆಕ್ಕಸ ಮೊದಲಾಗಿಬೆಕ್ಕಸ ಮೊದಲಾಗಿ ಕಸ್ತೂರಿಘÀನ ಮೃಗ ಹಿಂಡು ಕಡೆಯಿಲ್ಲ ೩
ತೋಟಪಟ್ಟಿಗಳಲ್ಲಿ ನೀಟಾದ ಹಂಸಗಳು ಆಟವಾಡುತ್ತಿರಲು ಹರುಷದಿಆಟವಾಡುತ್ತಿರಲು ಹರುಷದಿ ಅಲ್ಲಲ್ಲೆ ನೀಟಾಗಿ ನಲಿವ ನವಿಲು ಹಿಂಡು೪
ಕಬ್ಬಿನ ತೋಟಕ್ಕೆ ಹಬ್ಬಿದ ಹಂದರ ಅಬ್ಬರದಿ ಬೆಳೆದ ಹಲಸಿನ ಅಬ್ಬರದಿ ಬೆಳೆದ ಹಲಸು ತೆಂಗಿನ ಮರ ರುಕ್ಮಿಣಿ ರಾಮೇಶನ ವನವಿದು೫

೫೭
ವರಗಿರಿವಾಸನ ಅರಮನೆ ಸೊಬಗನೆ ದೊರೆಗಳು ನೋಡಿ ಶಿರಗಳ ತೂಗುತ ಬೆರಗಾಗಿಪ.
ಛತ್ರ ಚಾಮರ ರಾಜ ಪುತ್ರರು ಚಂದಾಗಿಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತಬ್ಯಾಗ ಹೊಕ್ಕರು ಚಿತ್ತಜನೈಯ್ಯನ ಅರಮನೆಯೊಳಗೆ ೧
ತಾರಾಪತಿಗಳಂತೆ ತೋರುತಲೈವರುಥೋರ ಮುತ್ತುಗಳ ಅಲವೂತಥೋರ ಮುತ್ತುಗಳ ಅಲವೂತ ಹೊಕ್ಕರುವೀರಕೃಷ್ಣಯ್ಯನ ಅರಮನೆ ಬ್ಯಾಗ೨
ಪಚ್ಚದ ಪಾವಟಿಗೆ ರತ್ನ ಹಚ್ಚಿದ ಚೌಕಟ್ಟುಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತ ಹೊಕ್ಕರುಚಿತ್ತಜನಯ್ಯನ ಅರಮನೆ ಬ್ಯಾಗ ೩
ಪಕ್ಷಿ ವಾಹನನರಮನೆ ದಕ್ಷಿಣ ದ್ವಾರದಿಲಕ್ಷಣವುಳ್ಳ ವನಿತೆಯರುಲಕ್ಷಣವುಳ್ಳ ವನಿತೆಯರು ತೆರೆದ ಬಾಗಿಲೊಳು ನಕ್ಷತ್ರದಂತೆ ಹೊಳೆಯುತ೪
ಎಡಬಲ ಶ್ರೀತುಳಸಿಗಿಡಗಳು ಅಲವುತ ಕಡಲಶಯನನ ಅರಮನೆ ಒಳಹೊಂದಿಕಡಲಶಯನನ ಅರಮನೆ ಒಳಗಿನ್ನುನಾರಿಯರು ನೆರೆದರು ೫
ಗಂಧದ ಥಳಿ ಕೊಟ್ಟು ಚಂದುಳ್ಳ ಅಂಗಳಕಹಂದರಗಳ್ಹಾಕಿದ ಇಂದಿರೇಶನರಮನೆಇಂದಿರೇಶನ ಅರಮನೆಯೊಳಗೆಬಂದುನಾರಿಯರು ನೆರೆದರು ೬
ಚಂದ್ರನಂತೊಪ್ಪುತ ಚಂದಾಗಿನಿಂತತಂದೆ ರಾಮೇಶನ ಅರಮನೆ ತಂದೆ ರಾಮೇಶನ ಅರಮನೆ ವೃಂದಾವನಕೆಹೊಂದಿ ನಾರಿಯರುನೆರೆದರು ಬೆರಗಾಗಿ ೭

೧೬೧
ವಾಯಸ ಸಿದ್ಧಿ ಕೊಟ್ಟಾವಮ್ಮ ಒಲಿದಾಳೆ ದೂತೆ ಶ್ರೀಶನ ದಯ ಸೂಸಿತುಳುಕುತ ಶ್ರೇಯಸ್ಸು ಬರಲೆಂದು ಪ.
ಶುದ್ಧ ಮುತ್ತು ರತ್ನದವಸ್ತ ತಿದ್ದಿಸೀರಿ ಕುಪ್ಪುಸ ತೊಟ್ಟುಬದ್ಧವಾದ ತಳಪಿಲಿಂದ ಮುದ್ದು ಸುರಿಯುತ೧
ಪುಂಡರಿಕಾಕ್ಷನ ಪಾದಕೆ ದಂಡಪ್ರಣಾಮವ ಮಾಡಿ ಕೊಂಡಾಡಿ ಕೃಷ್ಣನ ನಡೆದಳು ಪಾಂಡವರರಮನೆಗೆ೨
ಭಾವೆ ರುಕ್ಮಿಣಿ ದೇವಿಯರಿಗೆ ಭಾವ ಭಕ್ತಿಯಿಂದ ನಮಿಸಿ ಸ್ವಾಮಿ ಕಾರ್ಯ ಸಾಧಿಸಿ ನಿಸ್ಸೀಮಳು ನಡೆದಾಳೆÉ ೩
ಅಂದಣ ಏರಿದಳು ದೂತೆ ಬಂದವು ನೀರಿನ ಕುಂಭಚಂದದ ಸೇವಕರು ಮಾರ್ಗ ಮುಂದೆ ನಡೆದರು ೪
ಹಾಲು ಮೊಸರು ಹಲವು ಫಲ ಸಾಲುಸಾಲು ಮುತ್ತೈದೆಯರು ಮೇಲಾದ ವಿಪ್ರರು ಮೇಲೆ ಮೇಲೆ ಬಂದರು೫
ಧೀರ ಧರ್ಮರಾಯನ ಸಭೆüಯ ದ್ವಾರಪಾಲಕಳಾಗಿ ದೂತೆ ವೀರ ಮುದ್ರಿಕೆಯ ಕೊಟ್ಟು ನೀರೆ ನಡೆದಳು೬
ಶ್ರೀದೇವಿ ದೂತೆ ರಾಮೇಶನ ಪಾದಸ್ಮರಣೆಯ ಮಾಡಿಮೋದಭರಿತಳಾಗಿ ರಾಯನ ಪಾದಕ್ಕೆರಗಿದಳು ೭

೪೧
ವಿಸ್ತರಿಸಿ ಬರುವನೊ ರುಕ್ಮಿಣಿಗೆ ಹಸ್ತಕಳ ಕಳಹುವನೊಮಿತ್ರೆ ದ್ರೌಪತಿ ಸುಭದ್ರೆ ಮುಯ್ಯಾಒಯ್ಯೋ ವರ್ತಮಾನವೆಲ್ಲ ಅರುಹೋನು ವಿಸ್ತರಿಸಿ ೧
ಹೇಳದೆ ಹೋಗುವನೊ ಅಥವಾ ಸುದ್ದಿತಿಳಿಯದೆ ಕಳುಹುವನೊಭಾಳ ಚರ್ಚೆಯ ಮಾತು ಭಾಮೆಯಕಿವಿಗೆ ಬೀಳದಂತೆ ಕಾಳಿ ಹಿಡಿಸುವನೊ೨
ಮೊದಲಿಗೆ ಅರುಹುವನೊ ಅಥವಾಬೆದರದೆ ನಗುವನೊಮದಗಜಗಮನೆಯರ ಎದೆ ಧಿಗಿಲೆಂಬಂತೆಚದುರ ಚರ್ಚೆಯ ಡಂಕಿ ಹೊಯ್ಸುವನೊ ೩
ಎಚ್ಚರ ಕಳಹುವನೊ ಅಥವಾನಿದ್ರೆ ಬೆಚ್ಚಲಿ ಹೋಗುವನೊಮತ್ತÀನೇತ್ರಿಯರ ಮನಕೆ ನಡುವಂತೆಚರ್ಚೆಮಾತಿನ ಭೇರಿ ಹೊಯ್ಸುವನೊ೪
ದಾಸಿಯ ಕಳಹುವನೊ ಅಥವಾಕಂಡು ಹಾಸ್ಯವ ಮಾಡುವನೊಮೋಸಗೊಳಿಸಿ ಆಭಾಸ ಉಕ್ತಿಗಳಿಂದ ಆಕಾಶವಾಣಿಯಿಂದ ನುಡಿಸುವನೊ೫
ಅರಿಯದೆ ಹೋಗುವನೊ ಅಥವಾಮೈಮರೆಯದೆ ನಗುವನೊಶ್ರೀಶರಾಮೇಶನರಸನ ಸತಿಯರ ಚರ್ಚಿಸಿ ಹರುಷಮಾಡಿ ಹರಿಯು ಬರುವನೊ ೬

೫೯
ಶಕುನವೆ ಬಲು ಶಕುನವೆ ಸಖ ಕೃಷ್ಣನ ಮುದ್ದು ಮುಖವ ಕಾಂಬುವೆ ನೀಗ ಪ.
ಹಾಲು ಮೊಸರಿನ ಕುಂಭ ಮೇಲಾದ ಘ್ರತ ಬೆಣ್ಣಿಸಾಲುಸಾಲಾಗಿ ಎದುರಾಗಿ ಇಂದೀವರಾಕ್ಷಿಸಾಲುಸಾಲಾಗಿ ಎದುರಾಗಿ ರಂಗನ ಕಾಲಿಗೆಶಿರವ ನೀಡುವಂತೆ ಇಂದೀವರಾಕ್ಷಿ ೧
ಕೋಟಿ ಜನರು ಕೂಡಿ ತ್ವಾಟ ಪಟ್ಟಿಗಳದಾಟಿ ನೀಟಾದ ಹಂಸ ಗಿಳಿವಿಂಡುನೀಟಾದ ಹಂಸ ಗಿಳಿ ವಿಂಡು ನಡೆದವುಹಾಟಕಾಂಬರನ ದಯವಿದು ಇಂದೀವರಾಕ್ಷಿ ೨
ಜತ್ತಾಗಿ ದ್ವಾರಕೆಯ ಹತ್ತಿರ ಬರುತಿರೆಮುತ್ತಿನ ಹೇರು ಇದುರಾಗಿ ಇಂದೀವರಾಕ್ಷಿಮುತ್ತಿನ ಹೇರು ಇದುರಾಗಿ ರಂಗಯ್ಯಹಸ್ತಲಾಘವ ಕೊಡುತಾನೆ ಇಂದೀವರಾಕ್ಷಿ೩
ಸಾವಿರ ಅಂಗಡಿ ಸಾಲಾದ ಬಾಜಾರ ನೇರಳೆ ಹಣ್ಣು ಇದುರಾಗಿ ಇಂದೀವರಾಕ್ಷಿನೇರಳೆ ಹಣ್ಣು ಇದುರಾಗಿ ರಂಗಯ್ಯಮೇಲು ಕರುಣದಲಿ ಕರೆಸುವನು ಇಂದೀವರಾಕ್ಷಿ ೪
ಹಸ್ತಿನಾಪುರದವರು ಸಪ್ತಪ್ರಾಕಾರ ದಾಟಿಮತ್ತೆ ಶ್ರೀಗಂಧ ಇದುರಾಗಿ ಇಂದೀವರಾಕ್ಷಿಮತ್ತೆ ಶ್ರೀಗಂಧ ಎದುರಾಗಿ ಬಲರಾಮಅರ್ಥಿಲೆ ಬಂದು ಕರೆವÀನು ಇಂದೀವರಾಕ್ಷಿ೫
ವ್ಯಾಲಾಶಯನನ ಮನೆಯ ಏಳು ಬಾಗಿಲದಾಟಿಬಾಳೆಯ ಹಣ್ಣು ಇದುರಾಗ ಇಂದೀವರಾಕ್ಷಿಬಾಳೆಯ ಹಣ್ಣು ಇದುರಾಗ ರಂಗಯ್ಯಕೇಳೋನು ಕ್ಷೇಮ ಕುಶಲವ ಇಂದೀವರಾಕ್ಷಿ೬
ನಾಗಶಯನನ ಮನೆಯ ಬಾಗಿಲು ಹೊಗಲಿಕ್ಕೆನಾಗಸಂಪಿಗೆಯ ಮುಡಿದವರು ಇಂದೀವರಾಕ್ಷಿನಾಗಸಂಪಿಗೆಯ ಮುಡಿದವರು ಬಂದರು ಈಗರಾಮೇಶನ ದರುಶನಕೆ ಇಂದೀವರಾಕ್ಷಿ ೭

೧೩೯
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ.
ಸ್ವಚ್ಚ ಮನದಿ ನಿನ್ನ ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ೧
ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ೨
ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ ೩
ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ೪
ರುಕ್ಮಿಣಿ ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ ೫
ಸತ್ಯಭಾಮಾ ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ೬

ಶ್ರೀವತ್ಸ : ಶ್ರೀವತ್ಸ ಎನ್ನುವುದು
೩೦
ಶೃಂಗಾರವ ನೋಡಿದ್ಯಾ ಎಂಥ ಶೃಂಗಾರವ ನೋಡಿದ್ಯಾ ಪ.
ಶಂಖ ಚಕ್ರಾಂಕಿತ ಬಿಂಕುಳ್ಳ ಶ್ರೀವತ್ಸಕುಂಕುಮಾಂಕಿತನ ಅರಮನೆ ಶೃಂಗಾರವನೋಡಿದ್ಯಾಅ.ಪ.
ರಂಗು ಮಾಣಿಕ ಬಿಗಿದ ಅಂಗಳದೊಳಗಿನ್ನು ಬಂಗಾರದ ಬೆತ್ತಹಿಡಕೊಂಡುಬಂಗಾರದ ಬೆತ್ತಹಿಡಕೊಂಡು ನಿಂತಾರೆ ಮಂಗಳಾಂಗನ ಮನೆ ಮುಂದೆ೧
ವ್ಯಾಲಶಯನನ ಮನೆಯೊಳು ಅಂತಸ್ತಿಗೆಜಾಳಿಗೆ ಮುತ್ತು ಜಡದಾವೆಜಾಳಿಗೆ ಮುತ್ತು ಜಡದಾವೆ ಅರಮನೆಸೊಬಗ ಹೇಳಲೊಶವಲ್ಲಜನರಿಗೆ೨
ಕನಿಯಾದ ಕದಗಳು ಚಿನ್ನದ ಚೌಕಟ್ಟುಸನ್ನಹದಿ ಅರಮನೆಸನ್ನಹದಿ ಅರಮನೆ ಯೊಳಗಿನ್ನುಕನಿಯಾದ ಕದಗಳು ತಿಳಿಯವು೩
ಹಲವು ಚಿನ್ನದ ನೆರಳುನೆಲದೊಳು ಬಿದ್ದಿರೆಕೆಲ ಸರೋವರ ಕಮಲವುಕೆಲ ಸರೋವರ ಕಮಲವು ಆದರಿಂದ ಜಲವು ನೆಲವೆಂದು ತಿಳಿಯದು ೪
ಅಂತರಂತರದಲ್ಲೆ ಮಂತ್ರಿಗಳು ಕುಳಿತಾರೆ ಕಂತುನಯ್ಯನ ಅರಮನೆಕಂತುನಯ್ಯನ ಅರಮನೆಯೊಳಗೆಅನಂತಪ್ರಜೆ ಬರಲಿ ಬಯಲುಂಟು೫
ಮಿಂಚಿನಂತೆ ಹೊಳೆಯೊ ಕೆಂಚೆಯರು ಮೈಬಣ್ಣಗೊಂಚಲ ಮುತ್ತು ಅಲುಗೂತಗೊಂಚಲ ಮುತ್ತು ಅಲುಗೂತಸುಳಿದಾಡೊಚಂಚಲಾಕ್ಷಿಯರು ಕಡೆಯಿಲ್ಲ೬
ವಜ್ರಮಾಣಿಕ್ಯ ಬಿಗಿದು ಸಜ್ಜಾದ ಆಭರಣವು ಗೆಜ್ಜೆ ಸರಪಳಿಯು ಗಿಲುಕೆಂದು ಗೆಜ್ಜೆ ಸರಪಳಿಯು ಗಿಲುಕೆಂದುರಾಮೇಶನ ಗುಜ್ಜೆಯರು ಹೆಜ್ಜೆ ಇಡುವೋರು೭


ಶ್ರೀ ಗಣರಾಯ ಶ್ರೀ ಗಣರಾಯ ಶ್ರೀ ಗಣರಾಯವಂದಿಸುವೆನೀಗ ಶ್ರೀ ಗಣರಾಯ ಪ.
ಆಕಾಶಕಭಿಮಾನಿ ಶ್ರೀಕಂಠನ ವರಪುತ್ರ ಏಕದಂತನೆ ವಿಘ್ನೇಶಏಕದಂತನೆ ವಿಘ್ನೇಶ ನಿನ್ನ ಪಾದ ಏಕಚಿತ್ತದಲೆಬಲಗೊಂಬೆ ವಂದಿಸುವೆ ಶ್ರೀ ಗಣರಾಯ ೧
ನೆನೆಯಕ್ಕಿ ನೆನಗಡಲೆ ಗೊನೆ ಬಾಳೆಹಣ್ಣು ಘನವಾದ ಚಿಗಳಿ ತಂಬಿಟ್ಟುಫನವಾದ ಚಿಗಳಿ ತಂಬಿಟ್ಟು ತಂದಿಹೆ ಗಣಪತಿಮತಿಯ ಕರುಣಿಸು ವಂದಿಸುವೆ ೨
ನಿತ್ಯ ಬ್ರಹ್ಮಚರ್ಯ ಉತ್ತಮ ವ್ರತವುಳ್ಳಮತ್ತು ಪಾರ್ವತಿಯ ತನಯನೆಮತ್ತು ಪಾರ್ವತಿಯ ತನಯನೆ ವಿಘ್ನೇಶನೆ ಭಕ್ತಿಯಿಂದ ಮೊದಲೆ ಬಲಗೊಂಬೆ ೩
ಸುಲಭದಿ ರುಕ್ಮಿಣಿಯ ಗೆಲಿಯಬೇಕೆನುತಲೆಹಲಧರನ ತಂಗಿ ಸುಭದ್ರೆಹಲಧರನ ತಂಗಿ ಸುಭದ್ರೆ ಮೊದಲಿಗೆ ಚಲುವ ಗಣಪತಿಯ ನೆನೆದಳು ೪
ಹಸ್ತಿಮೊಗದವನ ಮತ್ತಾರು ಪೂಜಿಸಿದರುಮತ್ತೆ ಪರೀಕ್ಷಿತ ಮೊದಲಾಗಿಮತ್ತೆ ಪರೀಕ್ಷಿತ ಮೊದಲೆ ಪೂಜೆಯ ಮಾಡಿಪ್ರತ್ಯಕ್ಷ ರಾಜ್ಯ ಪಡೆದನು ೫
ಆನೆಯ ಮುಖದವನ ಮತ್ತಾರು ಪೂಜಿಸಿದರುತಾನು ಮಾಂಧಾತರಾಯ ಮೊದಲಾಗಿತಾನು ಮಾಂಧಾತರಾಯ ಮೊದಲು ಪೂಜೆಯ ಮಾಡಿನಾನಾ ಸೌಭಾಗ್ಯ ಪಡೆದನು ೬
ಮುದ್ದು ರಾಮೇಶನ ಪೂಜಿಸಿ ರಾವಣನ ಗೆಲಿದನುಮ್ಯಾಲೆ ಪಾಂಡವರು ಮೊದಲಾಗಿಮ್ಯಾಲೆ ಪಾಂಡವರು ಮೊದಲ ಪೂಜೆಯ ಮಾಡಿಹೀನ ಕೌರವರ ಗೆಲಿದರು ೭

೧೧೧
ಶ್ರೀನಿವಾಸ ನಡೆದ ಕಾಮಧೇನುವಿನಂತೆಕಾಮಧೇನುವಿನಂತೆ ಇನ್ನೇನುಬೇಕಾದುದು ಕೊಡುವ ಮಾನಿನಿ ಕಾಂತೆ ಪ.
ಕಾಂತ ಕೃಷ್ಣರಾಯ ನಮಗೆ ಚಿಂತಾಮಣಿಯಂತೆ ಕೊಡುವ ಚಿಂತಾಮಣಿಯಂತೆ ಅನಂತ ಸುಖವಿತ್ತುಭಕ್ತರ ಸಂತೈಸುವನಂತೆ೧
ಲಕ್ಷ್ಮಿರಮಣ ಕಲ್ಪವೃಕ್ಷ ತಾನಂತೆ ಕಲ್ಪವೃಕ್ಷ ತಾನಂತೆ ಅಕ್ಷಯ ಸುಖವಿತ್ತು ಭಕ್ತರ ಸಂತೈಸುವನಂತೆ೨
ಮುಂದು ಸಂಚಿತಗಾಮಿಯುಹಿಂದಾದುವಂತೆನಮಗೆ ಹಿಂದಾದುವಂತೆ ತಂದೆ ರಾಮೇಶನ ಪಾದಕ್ಕೆ ಹೊಂದಿವೆಯಂತೆ೩

೧೨೧
ಶ್ರೀಶನ ಭೇರಿ ನಾದಗಳಿಂದ ಬೃಹಸ್ಪತಿ ಬಂದ ಪ.
ಮಿತ್ರೆಯರು ಬೃಹಸ್ಪತಿಗೆ ಮುತ್ತಿನ ಗದ್ದಿಗೆಯನಿಟ್ಟುಅರ್ಥಿಲೆ ಚರಣಕ್ಕೆರಗಿದರುಅರ್ಥಿಲೆ ಚರಣಕ್ಕೆರಗಿದರು ಬೃಹಸ್ಪತಿಉತ್ತಮ ತಿಥಿಯು ಬರಬೇಕು೧
ಜಾಣೆಯರು ಬೃಹಸ್ಪತಿಗೆ ಮಾಣಿಕದಕ್ಷತೆನಿಟ್ಟುಅಣಿ ಮುತ್ತಿಟ್ಟು ಮೊರ ತುಂಬಿಅಣಿ ಮುತ್ತಿಟ್ಟು ಮೊರತುಂಬಿ ಸುಭದ್ರಆಣಿಯ ಬಿಡಿಸೋ ತಿಥಿ ಬೇಕು೨
ಎಲ್ಲ ನಾರಿಯರಿಗೆ ಬಲ್ಲಿದತಿಥಿಬೇಕು ಚಲ್ವ ರಾಮೇಶ ನುಡಿದನು ಚಲ್ವ ರಾಮೇಶ ನುಡಿದನು ಬೃಹಸ್ಪತಿ ನಿಲ್ಲದೆ ತೆಗೆದ ಶುಭ ತಿಥಿಯ೩

ಗಂಡನ ಬಳಗವ ಕಂಡರೆ ನಿನಗಾಗದು
೭೩
ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ಕೋಲ ಪ.
ಧಿಟ್ಟೆ ನಾನೆಂಬೋದು ಸೃಷ್ಟಿಕರ್ತನೆ ಬಲ್ಲಗಟ್ಯಾಗಿ ನಿನ್ನ ಗುಣಗಳಗಟ್ಯಾಗಿ ನಿನ್ನ ಗುಣಗಳ ವರ್ಣಿಸಲು ಸಿಟ್ಟು ಬಂದಿತು ಸಭೆಯೊಳು೧
ಗಂಡನ ಬಳಗವ ಕಂಡರೆ ನಿನಗಾಗದುಲೆಂಡರ ಮನೆಗೆ ನಡೆದ್ಹೋಗಿಲೆಂಡರ ಮನೆಗೆ ನಡೆದ್ಹೋಗಿ ಸೇರಿದ್ದುಪಂಡಿತರು ಕಂಡು ನಗುತಾರೆ ೨
ಘಟ್ಯದೆಗಾರಳು ಪೆಟ್ಟಿಗಂಜುವಳಲ್ಲಎಷ್ಟು ಧೈರ್ಯವೆ ಎಲೆನಾರಿಎಷ್ಟು ಧೈರ್ಯವೆ ಎಲೆನಾರಿ ನಿನ್ನ ಕೂಡಕೃಷ್ಣ ಕಡಿ ಬೀಳೋ ತೆರನಂತೆ ೩
ಮುದದಿಂದಲೆ ದ್ವಾರಕಾಸದನದೊಳಗ್ಹೋಗಿಕದನವ ಹೂಡಿ ಕೆಡಿಸುವೆಕದನವ ಹೂಡಿ ಕೆಡಿಸುವೆ ನಿನ್ನಗುಣಕೆಮದನನಯ್ಯನೆಂತು ಮನಸೋತ೪
ಹಲವು ರಾಯರ ಗೆದ್ದ ಬಲುಧೀರರೆಲ್ಲನಿನ್ನ ಬಲೆಯೊಳು ಬಿದ್ದು ಬಳಲೋರುಬಲೆಯೊಳು ಬಿದ್ದು ಬಳಲೋರು ಇದ ಕಂಡುಬಲರಾಮ ತಾನು ನಗುತಾನ೫
ಹರ ಬ್ರಹ್ಮ ಮೊದಲಾದ ಸುರರು ಜರಿದು ನಾರಿಹರಿಯು ಗುಣಪೂರ್ಣ ನೆನುತಲೆಹರಿಯು ಗುಣಪೂರ್ಣ ನೆನುತಲೆ ಮಲ್ಲಿಗೆಸರವ ಹಾಕಿದಿಯೆ ಕೊರಳಿಗೆ ೬
ಕೇಳೆ ರುಕ್ಮಿಣಿ ನಿನ್ನ ಭಾಳ ಚಾಪಲ್ಯ ನೋಡಿಹೇಳ ಕೇಳದಲೆ ಹಿರಿಯರಹೇಳ ಕೇಳದಲೆ ಹಿರಿಯರ ಕೃಷ್ಣಯ್ಯಭೋಳೆ ತನದಿಂದ ಮದುವ್ಯಾದ ೭
ಗಂಡನ ಎದುರಿಗೆ ಗಂಡುಗಚ್ಚಿಯ ಕಟ್ಟಿಗಂಡಸಿನಂತೆ ಧನುವೆತ್ತಿಗಂಡಸಿನಂತೆ ಧನುವೆತ್ತಿ ಕಾದಿದಬಂಡುಗಾರತಿಯೆನಿನ ತಂಗಿ೮
ಅಕ್ಕ ತಂಗಿಯರ ಶೌರ್ಯ ಶಕ್ಯವೆ ವರ್ಣಿಸಲುನಕ್ಕು ನಾರಿ ಸರಿಯವರುನಕ್ಕು ನಾರಿ ಸರಿಯವರು ರಾಮೇಶಗೆತಕ್ಕವರೇನೆ ಮಡದಿಯರು ಕೋಲ೯

ಕುದುರೆ ರೂಪ ಕಂಡು
೧೯೮
ಸಂಶಯವಾಯಿತೋ ನಮಗೆ
ಸಂಶಯವಾಯಿತೊ
ಕಂಸಾರಿ ನಿನಗೆ ಎರಗ ಬರಲು
ಹಂಸರೂಪ ಕಂಡು ಬೆದರಿ ಪ.
ಮದನ ಜನಕ ನಿನಗೆ ನಾವು
ಮುದದಿ ಎರಗ ಬರಲು ಬ್ಯಾಗ
ಕುದುರೆ ರೂಪ ಕಂಡು ನಮಗೆ
ಹೆದರಿಕೆ ಬಾಹೋದು ಕೃಷ್ಣ ೧
ಪ್ರದ್ಯುಮ್ನ ನಿನಗೆ ಎರಗಿ ನಾವು
ಸಿದ್ಧಿ ಪಡೆದೇವೆಂದು ಬರಲು
ಅರ್ಧನಾರಿ ರೂಪವ ಕಂಡು
ಗಡಗಡ ನಡುಗಿದೆವೊ ಕೃಷ್ಣ ೨
ಚಲ್ವ ರಾಮೇಶಗೆ ಎರಗಿ
ಕಲಿಯ ಕಿಲ್ಬಿಷ ಫ್ಳೆದೆವೆಂದರೆ
ಶಿಲೆಯ ಹೆಣ್ಣು ಮಾಡಿದ್ದು ಕಂಡು
ಬಲುಬಲು ಅಂಜಿದೆವೊ ಕೃಷ್ಣ ೩

೧೭
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ.
ಎಲ್ಲ ಗುರುಗಳ ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ ೧
ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ೨
ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ ೩
ಲಕ್ಷಕೋಟಿ ಸಂಖ್ಯದ ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ ೪
ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ೫
ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ ೬
ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ ೭

೨೧೧
ಸಜ್ಜನ ಬಾಲೆಯರ ಲಜ್ಜಗೈಸಿದಿ
ಹೆಜ್ಜೆನಿಕ್ಕಿ ಸಿದೆಯೊ ಕೃಷ್ಣ
ಗೆಜ್ಜೆಕಟ್ಟಿಸಿದ್ಯೊ
ಗೋವಳ ಹೆಜ್ಜೆನಿಕ್ಕಿಸಿದ್ಯೊ ಪ.

ಅರಿಷಿಣ ಕುಂಕುಮ ಗಂಧ
ಧರಿಸಿ ಸೀರೆ ಕುಪ್ಪುಸ ಕ್ಯಾದಿಗೆ
ಸರಸದ ಭೂಷಣಗಳಿಟ್ಟು
ಅರಸೆಯರು ಬಂದಾರೊ ಕುಣಿಯಲು ೧
ನಾನಾ ಪುಷ್ಪ ಬಳ್ಳಿಯೊಳಗೆ
ಮೀನಾಕ್ಷಿಯರ ಕೂಡಿ ರಮಿಸಿ
ಮಾನವ ಕಳೆದುಕೊಂಡ್ಯೊ
ಎನುತ ತಾನು ಪಾರ್ಥನಗುತ ೨
ಇಬ್ಬರಿಬ್ಬರ ನಡುವೆನೀನು
ಒಬ್ಬನೊಬ್ಬನಾಗಿ ನಿಂತು
ಕಬ್ಬು ಬಿಲ್ಲಿನಯ್ಯ ಕುಣಿಸಿದಿ
ನಿರ್ಭಯದಿಂದಲೆ ಕೃಷ್ಣ ೩
ಮಿತ್ರೆಯರಹೆಗಲಲ್ಲೆ ಪರಸ್ಪರ
ಹಸ್ತನಿಟ್ಟು ಹರುಷದಿಂದ
ನರ್ತನ ಮಾಡಿಸಿದ
ವಿಚಿತ್ರ ಪುರುಷನೆ ಕೃಷ್ಣ ೪
ಕಕ್ಕಸ ಕುಚದ ಬಾಲೆಯರ
ಚಕ್ರದಂತೆ ನಿಲಿಸಿ ನೀನು
ಢಕ್ಕಡ ಢಕ್ಕಡ ತಾಥಾ
ಎನುತಲೆ ಧಿಕ್ಕಿಡಿ ಧಿಮಿಕಿಡಿ ಕೃಷ್ಣ5
ಬಗರಿ ಕುಚದ ಬಾಲೆಯರ ಕೂಡ
ನಗಧರ ನೀ ಕುಣಿಯಲು
ನಗಗೀಡಾದಿತಯ್ಯ ಜಗದಿ
ಹಗರಣ ಪುರುಷನೆ ಕೃಷ್ಣ6
ಪುಂಡರಿಕಾಕ್ಷನು ಕೂಡಿಕೊಂಡು
ಅವರ ಕುಣಿಸುವಾಗ
ಗಂಡರು ಬಂದರು ತಮ್ಮ
ಹೆಂಡಿರ ನೋಡಲು ಕೃಷ್ಣ ೭
ಭಾಳಗೋವಳರಿಂದ ಕೂಡಿ
ತಾಳನ್ಹಾಕಿಸಿದಿಯಯ್ಯಾ ಹೀಂಗೆ
ಭಾಳ ರೌಸವಕೇಳಿ ಜನರು
ಮೇಳವಾದರೊ ಗಡನೆ ೮
ಶ್ರೀಶ ರಾಸಕ್ರೀಡೆ ಮಾಡಿ
ಸೋಸಿಲೆಸುರರೆಲ್ಲ ನೋಡಿ
ಸೂಸಿದರು ಪುಷ್ಪ ಮಳೆಯ
ಆಸಮಯದಲಿ ಕೃಷ್ಣ ೯
ಚಲುವ ರಾಮೇಶ ತಾನು
ಜಲಕ್ರೀಡೆಯನ್ನಾಡಿ
ಲಲನೆಯರ ಸಹಿತಾಗಿ ತಾನು ಬಲು ಬಲು ಹರುಷದಲೆ ಕೃಷ್ಣ10

೬೯
ಸರ್ಪಶಯನನೆಂಬೊ ದಿವ್ಯಕಲ್ಪತರು ಸೇರಿದ ದರ್ಪವೆಷ್ಷನಿಮ್ಮಿಬ್ಬರ ಧಿಮಾಕುಭಾಳೆ ನಾರಿ ಪ.
ನಿರತ ದಾಸಿ ನಾನೆಂಬೋದು ಸರಸಿಜಾಕ್ಷತಾನೆ ಬಲ್ಲಅರಸು ಅರಸನ ಹುಡುಕುತಅರಸು ಅರಸರನ ಹುಡುಕುತಲೆ ಹೋಗುವದುಸರಸ ತೋರುವುದೆ ಐವರಿಗೆ ಕೇಳನಾರಿ೧
ಒಬ್ಬ ರುಕ್ಮಿಣಿ ನಿನ್ನ ಮುಂದೆ ಗುಬ್ಬಿಕಾಗೆ ಹಿಂಡುಕಬ್ಬೆಕ್ಕು ಕೋಳಿ ನೆರೆದಾವಕಬ್ಬೆಕ್ಕು ಕೋಳಿ ನೆರೆದಾವ ಶ್ರೀಕೃಷ್ಣತಬ್ಬಿಬ್ಬುಕೊಂಡು ನಗುತಾನ ಕೇಳ ನಾರಿ ೨
ಅತ್ತಿಗೆ ನಿನ್ನ ಮೈಗೆ ಹತ್ಯಾವ ರುದ್ರಾಕ್ಷಿನೆತ್ತಿಯ ಮ್ಯಾ¯ ಜಡದಾವ ನೆತ್ತಿಯ ಮ್ಯಾ¯ ಜಡದಾವ ಅತ್ತಿಗೆ ನಿನ್ನಹತ್ತಿಲಿದ್ದವರು ನಗುತಾರೆ ಕೇಳನಾರಿ೩
ಜಾಣೆ ನಿನ್ನಂಥವಳ ಕಾಣೆ ನಾ ಜಗದೊಳುಕೋಣನ ಹೊಡೆವ ಕೌಶಲ್ಯಕೋಣನ ಹೊಡೆವೊÀ ಕೌಶಲ್ಯಕ್ಕೆ ಬೆರಗಾಗಿಸುರನಾರಿಯರು ಬಹಳೆ ನಗುತಾರೆ ಕೇಳ ನಾರಿ೪
ನಿತ್ಯ ಪ್ರಕಾಶನ ಉತ್ತಮೋತ್ತಮ ಗುಣವಅತ್ಯಂತ ನೋಡಿ ಸುಖಿಸದೆಅತ್ಯಂತ ನೋಡಿ ಸುಖಿಸದೆ ಎಲೆಭಾವೆಕತ್ತಲೆಗೈದ ಬಗಿಹೇಳ ಕೇಳನಾರಿ೫
ಕತ್ತಲೆಂಬುದು ನಿನ್ನ ಸುತ್ತುಮುತ್ತಲಾಗಿರೆಎತ್ತನೋಡಿದರು ಜನರಿಲ್ಲಎತ್ತನೋಡಿದರು ಜನರಿಲ್ಲ ಅವರೊಳು ಚಿತ್ತ ಸ್ವಾಸ್ಥ್ಯದ ಬಗಿ ಹೇಳ ಕೇಳನಾರಿ೬
ಹರಿ ಬಲು ಪ್ರೀತಿಯಿಂದ ಉರದೊಳು ಸ್ಥಳಕೊಟ್ಟಇರಬಾರದೇನೆ ವಿನಯದಿಇರಬಾರದೇನೆ ವಿನಯದಿ ಜಗಳಾಡಿಉರಿಯ ಹೊಗುವರೆ ಉನ್ಮತ್ತೆ ಕೇಳನಾರಿ ೭
ಮೂಡಲಗಿರಿಪತಿಗೆ ಜೋಡೆಂದು ನೀವಿಬ್ಬರುಮಾಡಿ ಸಹವಾಸ ಎಡಬಲಮಾಡಿ ಸಹವಾಸ ಎಡಬಲ ಹಿಡಿದಿರಿ ನೋಡಿದವರೆಲ್ಲ ನಗುವಂತೆ ಕೇಳನಾರಿ೮
ವರ ಮಾಣಿಕ್ಯದ ಜೋಡಿಗೆ ಕರಿ ಮಣಿಯು ಹೋಲುವುದೆಹರಿಯ ಚಲ್ವಿಕೆಗೆ ಹವಣಿಸಿಹರಿಯ ಚಲ್ವಿಕೆಗೆ ಹವಣಿಸಿ ರಾಮೇಶಗೆಸರಿಯಾಗುವೆ ಏನೆ ಬಿಡು ಬಿಡು ಕೇಳ ನಾರಿ ೯

೮೨
ಸಾಕು ಬಿಡು ಭಾವೆ ಸಾಕು ಬಿಡು ನಿನ್ನ ಹೋಕೆ ಮಾತುಗಳೆಷ್ಟುಸಾಕು ಬಿಡು ಪ
ಮದಗಜಗಮನೆ ನೀ ಒದೆವೋದ್ಯಾತಕೆ ಕಲಿತೆಬದಿಯಲಿದ್ದವರು ಇದಕೆ ನಗರೇನೆ ಸಖಿಯೆ ಬದಿಯಲಿದ್ದವರು ನಗರೇನೆ ನಿನ್ನ ಬುದ್ದಿಅದ್ಬುತವಾಗಿ ಈಗ ಬೆಳೆದಿದೆ ಸಖಿಯೆ೧
ಅಧರದಿಜೊಲ್ಲು ಸುರಿವೊ ಕುದುರೆಯ ಮೋರೆ ತಾವದನ ಚಂದುಟಿಯ ಸುದತೆಯ ಸಖಿಯೆವದನ ಚಂದುಟಿಯ ಸುದತಿ ಸುಭದ್ರಾಗೆ ಕದನ ಕಠೋರಿ ಸರಿಯೇನ ಸಖಿಯೆ೨
ಎತ್ತಿ ಒಯ್ದವ ನಿನ್ನ ಅತ್ಯಂತ ಸುಖಿಸಿದ ಲತ್ತಿತಿಂದೊಬ್ಬ ಬಳಲುವಲತ್ತಿತಿಂದೊಬ್ಬ ಬಳಲುವ ನಿನ್ನ ನಡತೆವಿಸ್ತಾರವಾಗಿ ಈಗ ತಿಳಿಸಿದೆ ಸಖಿಯೆ೩
ತಾಯಿ ಮಕ್ಕಳೊಳು ನ್ಯಾಯವನಿಕ್ಕುವಿಮಾಯಗಾರುತಿಯೆ ಬಲು ಮೂದೇವಿಮಾಯಗಾರುತಿಯೆ ಬಲು ಮೂದೇವಿ ನಿನಕಂಡುಬಾಯಿ ಬಿಡುತಾರೆ ಜನರೆಲ್ಲ ಸಖಿಯೆ೪
ಖ್ಯಾತ ರಾಮೇಶ ಈಗ ಈ ಮಾತೆಲ್ಲಿ ಕಲಿತೆಂದ ಚಾತುರ್ಯದಲ್ಲಿ ಚಪಲನೆಚಾತುರ್ಯದಲ್ಲಿ ಚಪಲ ಚನ್ನಿಗನೆಂಬೊಪಾರ್ಥನು ನಿನಗೆ ಗುರುವೇನ ಸಖಿಯೆ ೫

೮೪
ಸಾಕೊ ಪಾರ್ಥ ನಿನಗ್ಯಾಕೊ ಬಡಿವಾರ ನಿಮ್ಮ ಕೀರ್ತಿಅರಿಯೆವೊಪಾರ್ಥ ಸಾಕೊ ನಿನಗೆಬಡಿವಾರ ಪ.
ಬೀಗನಾಡಿದ ಬಲು ಬಿಂಕದ ಮಾತು ಕೇಳಿ ಸಾಗರಶಯನ ಮುರಿದೆದ್ದಸಾಗರಶಯನ ಮುರಿದೆದ್ದ ಅರ್ಜುನ ಹ್ಯಾಂಗಂದ್ಯೊ ನಿನ್ನ ಮನದಾಗ೧
ಏನಲೊ ಅರ್ಜುನ ಈ ನುಡಿ ನಿನಗ್ಯಾಕೊನೀನು ನಿಮ್ಮವಳು ತಿರು ತಿರುಗಿನೀನು ನಿಮ್ಮವಳು ತಿರು ತಿರುಗಿ ಮಾರಿದರೆಕಾಣಿಯ ಬೆಲೆಯ ಹೋಲಲಾರೆ೨
ದಶರಥರಾಯನ ಭಾಗ್ಯ ವರ್ಣಿಸಲು ವಶವಲ್ಲಹೊಸದಾಗಿ ಇವಳು ಹೋಗಲಿಕ್ಕೆಹೊಸದಾಗಿ ಇವಳು ಹೋಗಲಿಕ್ಕೆ ಎನಗೆ ಈ ದೆಶೆಗೇಡಿ ಬಂದು ದಣಿಸಲಿಲ್ಲ ೩
ಹಿಂದೆ ಇವಳಿಂದಲೆ ನೊಂದೆನೋ ಅನ್ನಕ್ಕೆ ಸಂದೇಹವಾಗಿ ಅಡವಿಯಸಂದೇಹವಾಗಿ ಅಡವಿಯ ತಿರುಗಿಸಿದವಳಿಗೆ ಅಂದಣ ಆನೆ ಬರಲುಂಟೆ ೪
ಬಾಲೆ ವಾಲ್ಮೀಕನ ಆಲಯದಲ್ಲಿದ್ದಾಗ ಮೇಲು ವಸ್ತ್ರವು ಇಲ್ಲ ಅಶನಿಲ್ಲಮೇಲ್ವಸ್ತ್ರ ಇಲ್ಲ ಅಶನಿಲ್ಲದಾಗ ಇವಳ ಕಾಲ ಲಕ್ಷಣವೆಲ್ಲಿ ಅಡಗಿತ್ತೆ ೫
ಅಕ್ಷ ಮ್ಯಾಲಂತರದಿ ವೃಕ್ಷದಲ್ಲಿದ್ದಾಗ ಲಕ್ಷ ಕಷ್ಟಗಳ ಬಡುವಾಗಲಕ್ಷ ಕಷ್ಟಗಳ ಬಡುವಾಗ ಇವಳ ಕೈಯ ಲಕ್ಷಣವೆಲ್ಲಿ ಅಡಗಿತ್ತೆ ೬
ನಿಮ್ಮವರ ಬಡಿವಾರ ಬಮ್ಮ ವರ್ಣಿಸಲಾರ ಹೆಮ್ಮಿ ನೋಡಿದರೆ ವಿಪರೀತಹೆಮ್ಮಿ ನೋಡಿದರೆ ವಿಪರೀತ ಎಲೊ ಪಾರ್ಥಸುಮ್ಮನೆ ಯಾಕೆ ಮುನಿಸಾಗಿ ೭
ಕೇಳಿ ನಿಮ್ಮವರ ಕೀರ್ತಿ ಭಾಳೆ ವಿಸ್ತಾರವಾಗಿ ಹೇಳಲು ಲಜ್ಜೆ ಬರತದೆ ಹೇಳಲು ಲಜ್ಜೆ ಬರ ತದೆ ನಮ್ಮ ಅಮ್ಮನ ತಾಳುವಿಕೆಯಿಂದ ಉಳಿದಾರೊ ೮
ನಾರು ವಸ್ತ್ರವನುಟ್ಟು ನಾರಿ ಸಂಚರಿಸುವಾಗವೀರ ರಾಮೇಶ ಜರಿದಾಗ ವೀರ ರಾಮೇಶ ಜರಿದ ಕಾಲಕ್ಕೆ ಇವಳ ಮೋರೆ ಲಕ್ಷಣವು ಅಡಗಿತು೯

ಮಗನ ಮಗನು ಬಲು ಕೊಂಡೆಗಾರನಾದ
೯೧
ಸಾಕೊ ರಂಗ ಅರಸುತನ ಯಾಕೊ ಯಾಕೊಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿಕಾಕು ಮಾಡಿದ್ದು ನಿನಗೆ ಬೇಕೊ ಬೇಕೊ ಪ.
ರುದ್ರ ಬ್ರಹ್ಮ ಹತ್ಯಾಕಾರ ಕ್ಷುದ್ರ ಬಲೀಂದ್ರನು ಕದ್ದೊಯ್ದ ಸುವರ್ಣ ಮುಕುಟವಕದ್ದೊಯ್ದ ಸುವರ್ಣ ಮುಕುಟವ ಬಲರಾಮ ಮಧ್ಯಪಾನಿ ಎಂದು ನುಡಿದನು ನುಡಿದನು ೧
ಮಗನ ಮಗನು ಬಲು ಕೊಂಡೆಗಾರನಾದ ಮಗಳ ಮಗ ನಿನ್ನ ಹಣಿಗಚ್ಚಿದ ಮಗಳ ಮಗ ನಿನ್ನ ಹಣಿಗಚ್ಚಿದ್ದು ಕಂಡುನಗತಾರೊ ನಿನ್ನ ಸರಿಯವರು ಸರಿಯವರು೨
ಮಾತೃದ್ರೋಹಿ ಶುಕ ಪಿತೃದ್ರೋಹಿ ಪ್ರಲ್ಹಾದ ಭ್ರಾತೃದ್ರೋಹಿ ವಿಭೀಷಣಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯಪಾತ್ರರೊ ನಿನ್ನ ಕರುಣಕೆ ಕರುಣಕೆ೩
ಸ್ವಾಮಿದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ ಬ್ರಾಹ್ಮಣರ ದ್ರೋಹಿಗಳು ಯಾದವರು ಬ್ರಾಹ್ಮಣರ ದ್ರೋಹಿಗಳು ಯಾದವರು ನಿನ್ನ ಮುಖ್ಯಪ್ರೇಮಕ್ಕೆ ವಿಷಯರೊ ವಿಷಯರೊ೪
ಅರಿಯದಲೆ ನಿನ್ನ ಎದೆಯಲೊದ್ದ ಭೃಗು ಋಷಿದುರುಳ ಶಿಶುಪಾಲನ ಸಭೆಯೊಳು ದುರುಳ ಶಿಶುಪಾಲನ ಸಭೆಯೊಳು ಬೈದದ್ದುಸರಿಬಂತೆ ರಾಮೇಶನ ಮನಸಿಗೆ ಮನಸಿಗೆ ೫

೨೧೩
ಸುಂದರಿಯರೆಲ್ಲರು ಇಂದಿರೇಶನ ಪಾಡಿ
ಚಂದಾಗಿ ಕೋಲಹಾಕಿರೆಂದಳು ಕುಂತಿಪ.
ವ್ಯಾಳಾಶಯನನ ಕೂಡ ಭಾಳ ಸರಸವೆ
ಕೇಳಯ್ಯ ಕರೆ ಎಂದು ಹೇಳಿದಳು ಕುಂತಿ ೧
ಕೃಷ್ಣರಾಯನ ಕೂಡ ಇಷ್ಟೊಂದು ಸರಸವೆ
ಧಿಟ್ಟರಿಗೆ ಬುದ್ಧಿಕೊಟ್ಟಳು ಕುಂತಿ2
ತಂದೆ ರಂಗನ ಕೂಡ ಚಂದವೆ ಸರಸವು
ಮುಂಧೋಗಿ ಕರೆ ಎಂತೆಂದಳು ಕುಂತಿ ೩
ಒಡೆಯ ರಂಗನ ಕೂಡ ಬಿಡುವುದೆ ಸರಸವು
ನಡೆಧೋಗಿ ಕರೆ ಎಂತೆಂದಳು ಕುಂತಿ ೪
ಸ್ವಾಮಿ ರಾಮೇಶನ ಪ್ರೇಮದಿ ಕರೆ ಬಾಲೆ ರಾಯನ ಸಹಿತ ಕಾಮಿನಿ ಕುಂತಿ ೫

Leave a Reply

Your email address will not be published. Required fields are marked *