Categories
ರಚನೆಗಳು

ಗಲಗಲಿಅವ್ವನವರು

೧೩೪
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ.
ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು೧
ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು ೨
ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು ೩
ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ೪
ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ ೫
ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ ೬
ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ ೭
ಇಂದಿರಾದೇವಿಗೆ ನಮಿಸಿಬಂದು ರಾಮೇಶಗೆ ಎರಗಿಛಂದಾಗಿ ಕೋಲ ಹೊಯಿದುಪಂಥ ಇಂದು ಗೆಲಿಸೆಂದು ೮

೨೩೪
ಕೋಲ ಕೋಲೆಂದು ಕೋಮಲೆಯರೆಲ್ಲರ
ಕಾಲುಗೆಜ್ಜೆಯು ಘಿಲ್ಲು ಘಿಲುಕೆಂದು ಇಲ್ಲೆ ಪ.
ಸಿಂಧುಶಯನನ ಚಂದದಲೆ ನೋಡಿ
ಆನಂದ ಭಾಷ್ಪದ ಬಿಂದು ಉದುರುತ ಪಾಡಿ
ಮಂದಹಾಸದಿ ಮನೆಗೆ ಬಾರೆನಲು
ಕೂಡಿಕೊಂಡು ಕೃಷ್ಣನ ಸಭೆಯ ಪ್ರವೇಶಮಾಡಿ ೧
ಕರಲಾಘವ ಧರ್ಮ ಕೊಟ್ಟನು ರಾಜ ಶ್ರೇಷ್ಠನು ಮನ
ನರಹರಿಯಲ್ಲಿಟ್ಟಿಹನು ವರಸಿಂಹಾಸನ ಏರಿದ
ಶ್ರೇಷ್ಠ ತೋರಿದ ಬಲುಹರುಷ ಬೀರಿದ
ರಾಜಗೋಪಾಲನ ನೋಡುವ ವರವ ಬೇಡುವ2
ಜಳಕು ಜಳಕು ರಂಗ ಜಳಜಳಿಸುತ ಬರಲು
ಬೆಳಕು ತುಂಬಿತು ಬಹಳೆಮಂದಿರದಲಿ
ಥಳಕು ಥಳಕನೆ ಹೊಳೆವ ಸಿಂಹಾಸನದಲಿ
ಕುಳಿತ ಕೃಷ್ಣನು ಅಣಕಿಸಿ ಸೂರ್ಯನ3
ಭೇರಿ ತುತ್ತೂರಿನಾನಾ ಪರಿ ವಾದಯ್ವ
ಸಾರಿ ಕುಳಿತ ಧೀರ ಮುರಾರಿ
ಚಾರು ಮಲ್ಲಿಗೆ ಮಳೆಗರೆದ ಸುಖಸುರಿವರ
ರಾಯರು ಏನು ಧನ್ಯರೆ ರಾಜಗೋಪಾಲನ್ನ ನೋಡುವ ೪
ಹಲವು ರಾಯರು ಹಲವು ಯಾದವರು
ಬಲುಸೊಗಸಿಲೆ ಬಂದು ಕುಳಿತಾರೆ ಅವರು
ಹಲಧರನ ಹತ್ತಿರೆ ರಾಮೇಶನವರು
ಜಲಜಾಕ್ಷನ ನೋಡುತಲೊಪ್ಪುತಿಹರು5
ಕಡು ಚಲ್ವ ರಾಮೇಶನ ಮಡದಿಯರು
ಉಡುರಾಜ ಮುಖಿಯರು ನಡೆದು ದ್ರೌಪತಿ
ಸುಭದ್ರೆಯರ ಮಾನ ಶುದ್ಧೆಯರ
ಹರಿಯ ಅಡಿಗೆರಗುವ ರಾಜಗೋಪಾಲನ ನೋಡುವ ೬

೯೨
ಕೋಲ ಕೋಲೆನ್ನ ಕೋಲಕೋಲ ಕೋಲೆನ್ನ ಕೋಲಕೋಲಾಹಲವ ಮಾಡಿ ಬಾಲೆಯರು ಪಾರ್ಥಗೆ ಕೋಲ ಪ
ಕಟ್ಟಿ ಜಾನ್ಹವಿಯಲ್ಲಿ ಬಿಟ್ಟು ಬದುಕಲು ಭೀಮ ಥಟ್ಟನೆ ಮಗ್ಗಲ ಹಚ್ಚಿ ಬಿಟ್ಟಿತು ಸರ್ಪಪ್ರಾಣ೧
ಕುಸುಮದಂಥವಳಿಗೆ ಸವಳ ಪುರುಷನು ವಿಷದ ಲಡ್ಡಿಗೆ ತಿಂದು ಭಸ್ಮ ಮಾಡಿದ ಭೀಮ೨
ಲಜ್ಜೆ ಬಿಟ್ಟು ಅರ್ಜುನ ಖೋಜಾನೆಂದೆನಿಸಿಕೊಂಡಿವಜ್ರ್ಯವಾಯಿತು ಮಾನ ನಿರ್ಜರೋತ್ತಮ ನಕ್ಕ೩
ಹೆಣ್ಣಲ್ಲ ಗಂಡಲ್ಲ ಬಣ್ಣ ವಿಷ್ಟ್ಯಾಕೊ ನಿನಗೆ ಸಣ್ಣದಿ ನೆನೆದು ಕೀರ್ತಿ ಅಣ್ಣ ಬಲರಾಮನಕ್ಕನು ೪
ಶೂರತನ ವೆಲ್ಲ ನೀಗಿ ಸೀರೆಯನುಟ್ಟುಕೊಂಡಿಬಾರದೆ ನಾಚಿ ನಿಂತೆಶೌರಿ ರಾಮೇಶನಕ್ಕನು ಕೋಲ೫

೧೦೯
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ.
ಜರದ ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ೧
ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ ೨
ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ ೩
ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ ೪
ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ ೫
ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ೬
ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ ೭
ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ ೮
ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ೯
ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ೧೦
ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ ೧೧

೩೬
ಕೋಲ ಕೋಲೆನ್ನ ಕೋಲ ಕೃಷ್ಣಯ್ಯನ ನೆನೆದೇವ ಕೋಲ ಪ.
ಶಿರವ ದೂಗಿದನೆ ಬ್ರಹ್ಮ ದೂಗಿದನೆಮಂದಗಮನೆಯರ ಭಾಗ್ಯ ಚಂದ್ರ ಸೂರ್ಯರಿಗಿಲ್ಲಇಂದ್ರಗೆ ಇಲ್ಲವೆಂದು ೧
ಲೋಕನಾಯಕಗೆ ಏಕಾರತಿಯನೆತ್ತಿ ಗೋಕುಲಾಧೀಶ ಸಲುಹೆಂದುಗೋಕುಲಾಧೀಶ ಸಲುಹೆಂದು ಕೈಮುಗಿದುಏಕೋಭಾವದಲಿ ಕೆಲದೆಯರು೨
ಭೂಮಂಡಲಪತಿ ಮುಂದೆ ಮಂಡಲ ಮಾಡಿಅನ್ನಭಾಂಡವ ತಂದು ಇಟ್ಟಾರುಅನ್ನಭಾಂಡವ ತಂದಿಟ್ಟು ಕೈಮುಗಿದಾರುಪುಂಡರಿಕಾಕ್ಷ ಕೈಕೊಳ್ಳೊ ೩
ತುಪ್ಪ ಸಕ್ಕರಿಯಲಿ ಪಕ್ವಾದ ಭಕ್ಷ್ಯಮಿತ್ರೆಯರು ತಂದು ಇಡುವೋರುಮಿತ್ರೆಯರು ತಂದಿಟ್ಟು ಕೈಮುಗಿದಾರುಭಕ್ತವತ್ಸಲನೆ ಕೈಕೊಳ್ಳೊ೪
ಯಾಲಕ್ಕಿ ಕಸಕಸಿ ಮೇಲಾದ ಪಾಯಸ ಬಾಲೆಯರು ತಂದು ಇಡುವೋರುಬಾಲೆಯರು ತಂದಿಟ್ಟು ಕೈಮುಗಿದಿಹರುಬಾಲಗೋಪಾಲ ಕೈಕೊಳ್ಳೊ೫
ಫಲದಿಂದ ಪಕ್ವಾದ ಹಲವು ಪದಾರ್ಥಕೆಲದೆಯರು ತಂದು ಇಡುವೋರುಕೆಲದೆಯರು ತಂದಿಟ್ಟು ಕರ ಮುಗಿದಿಹರುಸುಲಭ ಮೂರುತಿಯೆ ಕೈಕೊಳ್ಳೊ೬
ಭೇರಿ ಮೊದಲಾದ ಭೋರೆಂಬೊ ತುತ್ತೊರಿವಾರುಜ ಗಂಟೆ ಮೊದಲಾಗಿವಾರುಜ ಗಂಟೆ ಮೊದಲಾಗಿ ರಂಗನಸಾರುತಲಿವೆ ಸಭೆಯೊಳು ೭
ಪಟ್ಟಿದರಸಿಯರು ಇಟ್ಟ ಪದಾರ್ಥವದೃಷ್ಟಿಲಿನೋಡಿ ಸುಖಿಸುತದೃಷ್ಟಿಲಿನೋಡಿ ಸುಖಿಸುತ ಅವರಿಗೆಕೊಟ್ಟಾನು ಬ್ಯಾಗ ಕೈವಲ್ಯ೮
ನಿತ್ಯ ಪ್ರಕಾಶಗೆ ಮುತ್ತಿನಾರುತಿಯಸತ್ಯಭಾಮೆಯರು ಮೊದಲಾಗಿಸತ್ಯಭಾಮೆಯರು ಮೊದಲಾಗಿ ಬೆಳಗಿದರುಮತ್ತ ರಾಮೇಶ ಸಲುಹೆಂದು೯

೧೩೦
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ.
ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ ೧
ವೀತ-ದೋಷನ ಮುಂದೆ ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ೨
ಸೂರ್ಯ ಮಂಡಲಕೊಪ್ಪೊ ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ೩
ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ ೪
ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ ೫
ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ ೬
ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ ೭
ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ ೮
ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ೯

ನೂರು ಮಂದಿ ಹರಿಯ ದಾರಿಯ ಕಟ್ಟಲು
೨೨೫
ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ.
ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ ೧
ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ ೨
ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ ೩
ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ ೪
ಸುರತ ರಂಗಯ್ಯಗೆ ದೊರೆತನ ಕಡಿಮೆ ಏನ ತಿರುಕನ ಮಾಡಿ ಕಳುಹಿದಿ ಕೋಲತಿರುಕನಮಾಡಿ ಕಳುಹಿದಿಮಿತ್ರವಿಂದ ಕರ ಕರಿಯೆಂದು ಬಿಡಬೇಕು ಕೋಲ ೫
ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ ೬
ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ ೭
ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ ೮
ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ ೯
ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ೧೦
ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ ೧೧

೧೩೧
ಕೋಲ ಕೋಲೆನ್ನಿ ಕೋಲ ಕೋಲ ಕೋಲೆನ್ನಿ ಕೋಲಕೋಲೆಂದು ಹರಿಯ ಪಾಡುವರು ಎಷ್ಟಪ.
ನಾಗಶಯನನ ಮುಂದೆ ಪೂಗಿ ಫಲಗಳ ಇರಿಸಿನಾಗವೇಣಿಯರು ಸಾಗುವರು ಎಷ್ಟ ೧
ಪಂಕಜಾಕ್ಷನ ಮುಂದೆ ಕುಂಕುಮ ಅರಿಷಿಣ ಪಿಡಿದುಕಂಕಣದ ಕೈಯ ಶಂಕಿನಿಯರೆಷ್ಟ೨
ಅಂಬುಜಾಕ್ಷನ ಮುಂದೆ ತಾಂಬೂಲ ತಬಕಗಳುಸಂಭ್ರಮದಿ ಧರಿಸಿದ ರಂಭೆಯರು ಎಷ್ಟ೩
ಮಂದಗಮನೆಯರ ಮುಂದೆಗಂಧ ಕಸ್ತೂರಿ ಪುನಗುಛಸ್ಂದದಲಿ ಧರಿಸಿ ಮುಂದಾಗುವರೆಷ್ಟ೪
ಚಲ್ವ ರಂಗನ ಮುಂದೆ ಮಲ್ಲಿಗೆ ಹೂವಿನ ಝಲ್ಲೆಗಳ ಧರಿಸಿದ ನಲ್ಲೆಯರು ಎಷ್ಟ ೫
ಬುಕ್ಕಿಟ್ಟು ಮೊದಲಾಗಿ ವಿಶಿಷ್ಠ ಪರಿಮಳ ಧರಿಸಿಕೃಷ್ಣರಾಯನ ಮುಂದೆ ನಡೆವೋರು ಎಷ್ಟ೬
ಕ್ಯಾದಿಗೆ ಸಂಪಿಗೆ ಊದಿನ ಖಡ್ಡಿಗಳುಮುದದಲಿ ಧರಿಸಿ ಮುಂದಾಗುವರಷ್ಟ೭
ಉತ್ತತ್ತಿಕದಳಿ ಜಂಬುದ್ರಾಕ್ಷ ಚೂತ ಫಲ ಹೊತ್ತುಹರುಷದಲ್ಲಿ ಮಿತ್ರೆಯರು ಸಾಗುವರೆಷ್ಟ೮
ಹಾಲು ಮೊಸರಿನ ಕುಂಭ ಬಾಲೆಯರು ಧರಿಸುತ ಸಾಲು ಸಾಲಾಗಿ ಸಾಗುವರೆಷ್ಟ ೯
ಬೆಂಡು ಬತ್ತಾಸ ದುಂಡುಗಡಲೆ ಕಬ್ಬುತಂಡ ತಂಡದಲಿ ಹಿಡಿದವರು ಎಷ್ಟ೧೦
ರಂಗರಾಯನ ಮುಂದೆ ಗಂಗೋದಕ ಧರಿಸಿಶೃಂಗಾರದಿಂದ ಸಾಗಿದವರು ಎಷ್ಟ೧೧
ಚಲ್ವರಮಿಅರಸಗೆ ಸಲ್ಲಿಸಬೇಕೆಂದುಕಲ್ಲು ಸಕ್ಕರೆ ಹೊತ್ತ ನಲ್ಲೆಯರು ಎಷ್ಟ ೧೨

೧೧೯
ಕೋಲ ಕೋಲೆನ್ನಿ ಕೋಲಕೋಲೆನ್ನಿ ಮುತ್ತಿನ ಕೋಲಕಾಲ ಕಾಲಕೆ ಸುಭದ್ರಿಯ ಮಾನ ಕಳೆದುನಾಚಿಸಿ ನಗುತಲೆ ಬನ್ನಿಪ.
ದೇವ ನಾರಿಯರೆಲ್ಲ ಬಂದರೆ ಅಲ್ಲಿರುವೊ ಗಂಧರ್ವರು ಬಂದರೆಪಾವನ ಸುರರೆಲ್ಲ ಬಂದರೆ ನಮ್ಮ ದೇವರ ನೋಡಬೇಕೆಂದಲೆ ೧
ರಂಭೆ ಊರ್ವಶಿಯರು ಬಂದರೆ ತಾಳ ತಂಬೂರಿ ಜನರೆಲ್ಲ ಬಂದರೆ ತುಂಬರ ನಾರದರು ಬಂದರೆ ನಮ್ಮ ಅಂಬುಜಾಕ್ಷನ ನೋಡೆವೆಂದಾರೆ೨
ಸಿದ್ದ ಸಾಧ್ಯರೆಲ್ಲ ಬಂದರೆಪ್ರಸಿದ್ದ ನಾಟಕರೆಲ್ಲ ಬಂದರೆ ಸನ್ನದ್ದರಾಯರೆಲ್ಲ ಬಂದರೆ ನಮ್ಮ ಮುದ್ದುರಮೆ ಅರಸನ್ನ ನೋಡೆವೆಂದಾರೆ೩

೧೨೭
ಕೋಲ ಕೋಲೆನ್ನಿ ಕೋಲ ಕೋಲೆನ್ನಿಲಕ್ಷ್ಮೀಲೋಲ ನಿಂತಾನೆಂದು ಕೋಲೆನ್ನಿ ಪ.
ಅಚ್ಚ ಮುತ್ತಿನ ಸರಗಳನಿಟ್ಟುಕೃಷ್ಣ ಮಚ್ಛ ರೂಪದಿ ನಿಂತ ಕೋಲೆನ್ನಿ೧
ಹೇಮ ರತ್ನದಾಭರಣಗಳನಿಟ್ಟು ಕೃಷ್ಣಕೂರ್ಮರೂಪದಿ ನಿಂತ ಕೋಲೆನ್ನಿ ೨
ಸರಸ ಮುತ್ತಿನ ವಸ್ತಗಳಿಟ್ಟುಕೃಷ್ಣ ವರಾಹ ರೂಪದಿ ನಿಂತ ಕೋಲೆನ್ನಿ ೩
ಪ್ರೇಮದಿ ರತ್ನದ ವಸ್ತಗಳಿಟ್ಟುಕೃಷ್ಣ ನರಸಿಂಹ ರೂಪದಿ ಬಂದ ಕೋಲೆನ್ನಿ೪
ಶೀಘ್ರದಿ ರತ್ನದ ವಸ್ತಗಳಿಟ್ಟುಕೃಷ್ಣ ವಾಮನ ರೂಪದಿ ನಿಂತ ಕೋಲೆನ್ನಿ೫
ಭರದಿ ಮುತ್ತಿನ ಸರಗಳಿಟ್ಟು ಕೃಷ್ಣಭಾರ್ಗವ ರೂಪದಿ ನಿಂತ ಕೋಲೆನ್ನಿ ೬
ನೂತನ ಮುತ್ತಿನ ಸರಗಳಿಟ್ಟುಕೃಷ್ಣ ಸೀತಾರಾವಇನು ನಿಂತ ಕೋಲೆನ್ನಿ ೭
ತಿದ್ದಿದ ರತ್ನದ ವಸ್ತಗಳಿಟ್ಟುಕೃಷ್ಣ ಮುದ್ದು ರೂಪದಿ ನಿಂತ ಕೋಲೆನ್ನಿ ೮
ಬದ್ಧವಾದ ಮಣಿಗಳನಿಟ್ಟುಕೃಷ್ಣಬುದ್ಧ ರೂಪದಿ ನಿಂತ ಕೋಲೆನ್ನಿ೯
ಹಲವು ರತ್ನದ ವಸ್ತಗಳಿಟ್ಟುಕೃಷ್ಣ ಚಲ್ವಕಲ್ಕಿನಿಂತ ಕೋಲೆನ್ನಿ ೧೦
ಚಲ್ವ ರಾಮೇಶ ವಸ್ತಗಳಿಟ್ಟುನಮ್ಮ ಸುಲಭ ಮೂರುತಿ ನಿಂತ ಕೋಲೆನ್ನಿ ೧೧

೧೧೩
ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಆ ಬಾಲೆ ಭಾವೆಯ ಈಗ ಸೋಲಿಸಿದೆವೆನ್ನಿ ಪ.
ಕೊಟ್ಟುತಾ ಮುಯ್ಯ ರುಕ್ಮಿಣಿಗೆ ಇಟ್ಟರು ಆಣಿಯಥಟ್ಟನೆ ತಿರುಗಿಸದಿದ್ದರೆ ಕೃಷ್ಣ ನಿಮ್ಮಯ ಅ.ಪ
ತಂದ ಮುಯ್ಯವ ಹಿಂದಕೆ ತಿರುಗಿಸದಿದ್ದರೆಇಂದಿರಾಪತಿಭಾಮೆಗೆ ತಂದೆಯಾಗುವ೧
ಬಾಲಿಯರು ಆಣೆಯ ಮೇಲೆ ಮೇಲೆ ಇಟ್ಟರೆಆಲಿಸಿ ಕೇಳುತ ರೋಹಿಣಿ ಬಾಲ ನಕ್ಕನು೨
ಇಂಥ ಆಣೆಗೆ ಭಾಮೆ ಇನ್ನೆಂತು ಮಾಡುವಿಪಂಥಗಾರಳೆ ಬಂದು ಚಿಂತಿಸೆಂದನು ೩
ಭದ್ರೆ ದ್ರೌಪತಿ ತಿದ್ದಿ ಆಣೆ ನಿಟ್ಟರೆಮುದ್ದು ರಾಮೇಶ ಇದಕೆ ಬಿದ್ದು ನಕ್ಕನು ೪

೧೨೦
ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಗೋಪಾಲರಾಯನ ನೋಡುವ ಬಾಲೆಯರೆ ಬನ್ನಿ ಪ.
ದಿಕ್ಕು ತುಂಬಿತು ಈ ದಿಕ್ಕು ತುಂಬಿತುಲೆಕ್ಕವಿಲ್ಲದ ಜನರು ರುಕ್ಮಿಣಿಯ ಮುಯ್ಯಕ್ಕೆ೧
ಕಾಶ ತುಂಬಿತು ಎಲ್ಲ ಕೋಶ ತುಂಬಿತು ಆಶೆ ಬಡುತಲೆ ಜನರು ಸೋಸಿನ ಮುಯ್ಯಕ್ಕೆ ೨
ಹಾದಿ ತುಂಬಿತು ಎಲ್ಲ ಬೀದಿ ತುಂಬಿತು ಆದರದಿಂದಲೆ ಜನರುಮೋದದಿ ಮುಯ್ಯಕ್ಕೆ ೩
ಅಂಬರ ತುಂಬಿತು ಮ್ಯಾಲೆ ಮ್ಯಾಲೆ ಅಂಬರ ತುಂಬಿತುಸಂಭ್ರಮದಿಂದಲೆ ಜನರು ರಂಭೆಯರ ಮುಯ್ಯಕ್ಕೆ ೪
ಪಟ್ಟಣ ತುಂಬಿತು ಒಂದಿಷ್ಟು ಬಿಡದಲೆ ಕೃಷ್ಣ ರಾಮೇಶನ ಜನರು ಶ್ರೇಷ್ಠದ ಮುಯ್ಯಕ್ಕೆ ೫

೪೭
ಕೋಲ ನವರಂಗದ ಕೋಲ ನಳನಳಿಸುವಕೋಲಶ್ರೀಲೋಲನೆಂದು ಹೊಗಳುವ ಕೋಲ ಪ.
ಛಸ್ತ್ರ ಚಾಮರ ವಿಚಿತ್ರದ ಬಾಣ ಬಿರಸುನೃತ್ಯವಾದ್ಯಗಳು ಹೊಗಳುವನೃತ್ಯವಾದ್ಯಗಳು ಹೊಗಳುವ ಬಂಧಿಗಳಿಂದ ಅರ್ಥಿಲೆ ನಿಮ್ಮ ಕರೆಸುವ ಕೋಲ ೧
ಶಂಕಿನಿ ಪದ್ಮಿನಿಯರು ಕುಂಕುಮ ಅರಿಷಿಣವಪಿಡಿದು ಪಂಕಜನಾಭನೆದುರಿಗೆ ಕೋಲಪಂಕಜನಾಭನೆದುರಿಗೆ ಕರೆಯಲುಅಲಂಕಾರವಾಗಿ ಬರುತಾರೆ ಕೋಲ೨
ಗಂಧ ಕೇಶರದ ಚಂದದೋಕುಳಿ ತುಂಬಿಮಂದಗಮನೆಯರು ಹಿಡಕೊಂಡುಮಂದಗಮನೆಯರು ಹಿಡಕೊಂಡು ಐವರಿಗೆಬಂದು ನಿವಾಳಿ ತೆಗಿಸುವೆವು ಕೋಲ ೩
ಚಿತ್ತಜನಯ್ಯಗ ಮಿತ್ರೆಯರು ಕರೆಯಲುಮುತ್ತಿನಾರತಿಯ ಹಿಡಕೊಂಡುಮುತ್ತಿನಾರತಿಯ ಹಿಡಕೊಂಡು ಐವರಿಗೆ ಎತ್ತಬೇಕೆಂಬೊ ಭರದಿಂದ ಕೋಲ೪
ಹರದೆಯರು ಮುತ್ತಿನ ಸರಗಳ ಅಲುಗುತಕರದಲ್ಲಿ ಅರಳು ಫಲಗಳು ಕೋಲಕರದಲ್ಲಿ ಅರಳು ಫಲಗಳು ಐವರಿಗೆ ಭರದಿಂದ ಸೂರ್ಯಾಡಿ ಬರತೇವ ಕೋಲ ೫
ರಥ ಕುದುರೆಗಳೆಷ್ಟು ರಥಿಕರು ಸೊಬಗೆಷ್ಟು ರತಿಯಿಟ್ಟು ನೋಡೊ ಜನರೆಷ್ಟು ಕೋಲರತಿಯಿಟ್ಟು ನೋಡೊ ಸೊಬಗೆಷ್ಟು ಸಖಿಯೆನಮ್ಮ ಅತಿಶಯವಾದ ಸೊಬಗೆಷ್ಟು ಕೋಲ೬
ವೀರ ರಾಮೇಶನು ಭೇರಿ ದುಂಧುಭಿ ಹೊಯ್ಸಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಐವರವಾರಿಜನಾಭ ಕರೆಸುವ ಕೋಲ೭


ಕೋಲನಾಡುತ ಬಂದ ಬಾಲೆಯರು ಕೈಮುಗಿದುನಿಂದು ಮೇಲುಗಿರಿ ವಾಸ ಗೆಲಿಸೆಂದು ಕೋಲ ಪ.
ಖಳರ ಬೆನ್ನಿನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲ ಅಲವ ಬೋಧರೆ ಜಗದ್ಗುರು ವೆನುತಲೆಛಲದಿಂದ ಭೇರಿ ಹೊಯ್ಸಿ ದರ ಕೋಲ೧
ಹರಿಯೆ ಸರ್ವೋತ್ತಮ ಹರಿಯೆ ಪರದೈವಹರಿದಾಸರೆಂಬೊ ಬಿರುದಿನ ಕೋಲಹರಿದಾಸರೆಂಬೊ ಬಿರುದಿ ಹೆಗ್ಗಾಳೆ ಹೆಬ್ಬಾಗಿಲಲ್ಲೆ ಹೊಯಿಸುತ ಕೋಲ ೨
ವಿಷ್ಣು ಸರ್ವೋತ್ತಮ ವಿಷ್ಣುಪರದೈವ ವಿಷ್ಣು ದಾಸರೆಂಬೊ ಬಿರುದಿನ ಕೋಲವಿಷ್ಣು ದಾಸರೆಂಬೊ ಬಿರುದಿನ ಢಕ್ಕಿಯಘಟ್ಯಾಗಿ ತಾವು ಹೊಯಿಸುತ ಕೋಲ ೩
ಒಬ್ಬನೆ ವಿಷ್ಣು ಇನ್ನೊಬ್ಬನಿಲ್ಲವೆಂದು ಅಬ್ಬರದಿಂದನಾಗಸ್ವರ ಹೆಗ್ಗಾಳೆ ಕೋಲಅಬ್ಬರದಿಂದ ನಾಗಸ್ವರ ಹೆಗ್ಗಾಳೆಹೆಬ್ಬಾಗಿಲಲ್ಲೆ ಹೊಯಿಸುತ ಕೋಲ೪
ಮತದೊಳು ಮಧ್ವಮತ ವ್ರತದೊಳು ಹರಿದಿನ ಕಥೆಯೊಳು ಭಾಗವತ ವೆನ್ನಿಕೋಲಕಥೆಯೊಳು ಭಾಗವತ ವೆನ್ನಿ ರಾಮೇಶನಅತಿಭಕ್ತರ ನಡುವೆ ಪಥವೆನ್ನಿ ಕೋಲ ೫

೨೩೧
ಕೋಲೆಂದು ಪಾಡಿರೆ
ಕೋಮಲೆಯರೆಲ್ಲ
ಗೋಪಾಲರಾಯನ
ಮಡದಿಯರು ಕೋಲ ಪ.
ಶ್ರೀದೇವಿಯರ ಕೂಡ ವಾದ ಸರಸವೆ
ಆದರದಿ ಪಾದಕ್ಕೆರಗಿ ಕೋಲ
ಮಾಧವ ನರಸಿಯರ ಮೋದದಿ
ಕರೆಯೆ ವಿನೋದವ ನುಡಿದಾನುರಾಯ1
ಸರಿಯ ರಾಣಿಯರ ಕೂಡ ತರವೇನು ಸರಸವು
ಕರವ ಜೋಡಿಸಿ ಕಮಲಾಕ್ಷಿ ಕೋಲ
ಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದು
ಹರದೆಯರಿಗೆ ನುಡಿದ ಭೀಮನು ಕೋಲ ೨
ಕೀರ್ತಿವಂತರ ಕೂಡ ಯಾತಕ್ಕೆ ಸರಸವು
ಮಾತಿನ ಸುಖದ ವಾಣಿಯರ ಕೋಲ
ಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದು
ಪಾರ್ಥ ಮಾತಾಡಿದ ಸತಿಗೆ ಕೋಲ3
ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊ
ನಕಲಿ ಮಾತಾಡಬ್ಯಾಡ ಕೋಲ
ಮುಖವ ನೋಡುತ ಅತಿ ಸುಖವ ಪಡಿರೆಂದು
ನಕುಲಮಾತಾಡಿದ ಸತಿಗೆ ಕೋಲ ೪
ಇಂತು ರಾಮೇಶನ ಕಾಂತೆಯರ ಕರೆಯೆ
ವೇದಾಂತ ವೇದ್ಯಳೆ ದ್ರೌಪತಿ ಕೋಲ
ಪಂಥವ ಬಿಟ್ಟು ಸಂತೋಷದಿ ಕರೆಯೆಂದು
ಕಾಂತೆಗೆ ನುಡಿದ ಸಹದೇವ ೫

೧೩೭
ಕೋಲೆಂದು ಪಾಡಿರೆ ಕೋಮಲೆಯರೆಲ್ಲ ಅಮ್ಮಯ್ಯಬಾಲೆಯರು ಅರಿಷಿಣ ಕುಂಕುಮ ಹಚ್ಚಿಹೊಯಿದಾರಮ್ಮಯ್ಯ ಕೋಲ ಹೊಯಿದಾರಮ್ಮಯ್ಯ ಪ.
ಹಿಂಡು ನಾರಿಯರೆಲ್ಲ ಕೂಡಿ ದುಂಡು ಗಟ್ಟುತ ಕೊಂಡಾಡಿ ಕೃಷ್ಣನ ಕೋ¯ ಹೊಯಿದಾರಮ್ಮಯ್ಯ ೧
ಹಸ್ತ ಕಡಗ ಹರಡಿ ದೋರೆ ಹವಳ ಕಂಕಣಹಸ್ತಿಗಮನೆಯರು ಎತ್ತಿ ಕೋಲ ಹೊಯಿದಾರಮ್ಮಯ್ಯ ೨
ಮುತ್ತಿನ ವಾಲೆ ಮೂಗುತಿ ಮುದ್ದು ಸುರಿಯುತ್ತಜತ್ತಾಗಿ ಜಾಣೆಯರು ಕೋಲ ಹೊಯಿದಾರಮ್ಮಯ್ಯ ೩
ಹೆರಳು ಬಂಗಾರ ಕ್ಯಾದಿಗೆ ಹೆಳಲು ಅಲೆಯುತ ನಳಿನ ಮುಖಿಯರಿಟ್ಟ ಕೋಲ ಹೊಯಿದಾರಮ್ಮಯ್ಯ ೪
ಮಲ್ಲಿಗೆ ಸಂಪಿಗೆ ಮುಡಿದ ನಲ್ಲೆಯರೆಲ್ಲರುನಮ್ಮ ಫುಲ್ಲನಾಭನ ಪಾಡಿ ಕೋಲ ಹೊಯಿದಾರಮ್ಮಯ್ಯ೫
ಚವರಿ ರಾಗಟೆ ಚಲ್ವಗೊಂಡ್ಯ ಛಂದಾಗಿ ಒಪ್ಪುತಚದುರೆಯರು ಛಂದಾಗಿ ಕೋಲ ಹೊಯಿದಾರಮ್ಮಯ್ಯ ೬
ಥೋರ ಮುತ್ತಿನಹಾರ ಪದಕ ಭಾರ ಧರಿಸುತ ರಘುವೀರನ ಕೊಂಡಾಡಿ ಕೋಲ ಹೊಯಿದಾರಮ್ಮಯ್ಯ ೭
ನಡುವಿಗೆ ಒಡ್ಯಾಣವಿಟ್ಟು ನಾರಿಯರೆಲ್ಲರು ತಮ್ಮ ಬಡನಡಬಳುಕುತ ಕೋಲ ಹೊಯಿದಾರಮ್ಮಯ್ಯ೮
ಉಟ್ಟ ಪೀತಾಂಬರ ಕಾಲಿಗಿಟ್ಟ ಗೆಜ್ಜೆಯುನಮ್ಮ ಧಿಟ್ಟರಮಿಅರಸನೆಂದು ಕೋಲ ಹೊಯಿದಾರಮ್ಮಯ್ಯ೯


ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ಕೃಷ್ಣಯ್ಯಗ ಶರಣಿಂದು ಕೋಲ ಪ.
ಮುದ್ದು ಸುಭದ್ರ ನೀನು ಗೆದ್ದುಬರುತಿಯೆಂದುಎದ್ದ ಬೃಹಸ್ಪತಿಯು ತವಕದಿ ಕೋಲಎದ್ದ ಬೃಹಸ್ಪತಿಯು ತವಕದಿ ಅರ್ಜುನ ಸಿದ್ಧ ಮಾಡೆಂದ ರಥಗಳ ಕೋಲ ೧
ಕೇಳಿರಿ ನಿಮಗೆಲ್ಲ ಭಾಳ ಬಲವದೆಕಾಳಿ ಮೊದಲಾದ ಕೆಲದೆಯರುಕಾಳಿ ಮೊದಲಾದ ಕೆಲದೆಯರು ಹರುಷದಿ ಹೇಳಿ ಬೃಹಸ್ಪತಿಯು ನುಡಿದಾನು ಕೋಲ೨
ಪಾಂಡವರೆಲ್ಲರು ಉಂಡು ವೀಳ್ಯವನ್ಹಾಕಿಪುಂಡರಿಕಾಕ್ಷನ ಅರಮನೆಗೆ ಕೋಲಪುಂಡರಿಕಾಕ್ಷನ ಅರಮನೆಗೆ ಐವರುತಂಡ ತಂಡದಲೆ ನಡೆದಾರು ಕೋಲ೩
ದ್ರೌಪದಿ ಸುಭದ್ರಾ ಇಬ್ಬರು ಒಂದಾಗಿಅಗಣಿತ ಒನಿತೆಯರು ಕೋಲಅಗಣಿತ ಒನಿತೆಯರು ಕೂಡಿಕೊಂಡು ತಾವುಪ್ರೇಮದಿಂದಲಿ ಬರುತಾರೆ ಕೋಲ ೪
ಅರಿಷಿಣ ಕುಂಕುಮ ಗಂಧಬೆರೆಸಿ ಪರಿಮಳದಿಂದಸರಸಾದ ಸುರಭಿ ಕುಸುಮವ ಕೋಲಸರಸಾದ ಸುರಭಿ ಕುಸುಮರಾಮೇಶನ ಅರಸಿಯರಿಗೆ ಒಯ್ವೋ ಉಪಚಾರ ಕೋಲ ೫

೨೧೪
ಕೋಲೆಂದು ಪಾಡಿರೆ ಬಾಲೆ ದ್ರೌಪತಿ ದೇವಿ
ಮೇಲಾದ ಗುಣವ ಕೊಂಡಾಡಿ ಕೋಲ ಪ.
ಫುಲ್ಲನಯನೆಯರ ಕರಿಯೆ ನಲ್ಲೆ ದ್ರೌಪತಿ ದೇವಿ
ಮೆಲ್ಲನೆ ಹೆಜ್ಜೆ ನಿಕ್ಕಿದಳು ಕೋಲ
ಉಲ್ಹಾಸವಾಗೋದು ನಿಲ್ಲದೆ ನಡೆಯಮ್ಮ
ಹಲ್ಲಿ ಮಾತಾಡಿದವಾಗ ಕೋಲ1
ಬಡನÀಡ ಬಳುಕುತ ನಡೆದಳು ದ್ರೌಪತಿ
ಅಡಿಗಳ ಘೆಜ್ಜಿ ಫಲಕೆಂದು ಕೋಲ
ಒಡೆÉಯ ರಂಗಯ್ಯ ನಿನಗೆ ಕಡು ಪ್ರೀತಿ ಮಾಡುವ
ನಡೆಯೆಂದು ನುಡಿದರು ಹರುಷದಿ ಜನರು ೨
ಚಂದ್ರವದನೆಯರು ಕರಿಯೆ ಚಂದಾಗಿ ನಡೆಯಮ್ಮ
ಒಂದೂಅನುಮಾನ ಬ್ಯಾಡವೆ ಕೋಲ
ತಂದೆ ರಾಮೇಶ ಆನಂದವ ಪಡಿಸುವ
ಎಂದು ಕುಂತೆಮ್ಮ ನುಡಿದಳು ಕೋಲ ೩

ಮುಯ್ಯಾ ಒಯ್ದಹಾಡುಗಳು

ಕೋಲೆನ್ನಿ ಕೋಮಲೆಯರು ಅಮ್ಮಯ್ಯ
ಮುಯ್ಯಿ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ ಪ.
ಇಂದು ಗುರುಗಳಂಫ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯಿ ರಚಿಪೆನಕ್ಕಯ್ಯ ೧
ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ ೨
ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ
ಭಾವೆ ಚರ್ಚಾ ಮಾತುಗಳನ್ನೆ ರಚಿಸೆ ನಕ್ಕಯ್ಯ ೩
ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ
ರುಕ್ಮಿಣಿ ನಕ್ಕುನುಡಿದ ನುಡಿಯ ರಚಿಪೆನಕ್ಕಯ್ಯ ೪
ನಮ್ಮ ಗುರುಗಳಂಫ್ರಿಗೆರಗಿ ಅಮ್ಮಯ್ಯ
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ ೫

೧೯೭
ಕೌತುಕ ಲಕುಮಿನಾಥನು ಒಲಿದದ್ದು
ಭೂತಳದೊಳಗಂಜೋದ್ಯಾತರ ಮಾತಿದು ಪ.
ವೇದ ತಂದಾತನ ಪಾದವ ನೋಡಿ ನೋಡಿ
ಮೋದ ಬಟ್ಟನು ಬೊಮ್ಮ ಮಾಧವ ಅಂಜಿದ್ದು ೧
ಮಂದಾರ ಗಿರಿಎತ್ತಿ ತಂದ ಅಮೃತವನ್ನು
ಆನಂದ ಬಟ್ಟನು ಬೊಮ್ಮ ಇಂದೈವರು ಅಂಜಿದ್ದು ೨
ಧರಣಿ ತಂದಾತನ ವರಹಾ ಸುರರರಿಗೆ ಸುಖವಿತ್ತು
ದೊರೆ ಧರ್ಮನ ಕಂಡು ಪರಮ ಭೀತನಾದ ೩
ನರಸಿಂಹ ದೈತ್ಯನ ವಧಿಸಿಬಿಟ್ಟನೆಂದು
ಹರುಷವಾದನು ಬೊಮ್ಮ ಅರಸ ಅಂಜಿದ್ದು4
ವಾಮನ ರೂಪಕ್ಕೆ ಕಾಮ ಮೋಹಿತರಾಗಿ
ಶಾಮ ವರ್ಣನ ಕಂಡು ಭೀಮ ಭೀತನಾದ ೫
ಜ್ಞಾನಿಗಳು ಭಾರ್ಗವನ ಧೇನಿಸಿ ನಮಿಸೋರು ಏನೆಂಬೆ
ಪಾರ್ಥನು ತಾ ನೋಡಿ ಅಂಜಿದ್ದು6
ಚಲ್ವರಾಯನ ಗುಣ ಎಲ್ಲ ಮೋಹಿಸಬೇಕು
ನಲ್ಲಿ ದ್ರೌಪತಿದೇವಿಯ ವಲ್ಲಭರಂಜಿದ್ದು ೭
ಕೃಷ್ಣಾವತಾರಗೆ ಎಷ್ಟು ಮೋಹಿಸುವವರು
ಧಿಟ್ಟ ನಕುಲರಾಯ ಇಷ್ಟೊಂದು ಅಂಜಿದ್ದು ೮
ಬೌದ್ಧನ್ನ ಧೇನಿಸಿ ಸಿದ್ಧಿ ಪಡೆದವರೆಷ್ಟು
ರುದ್ರಾದಿ ವಂದ್ಯಗೆ ಬುದ್ದಿವಂತರು ಬೆದರ ೯
ಚಲುವ ರಂಗಯ್ಯನು ಕುದುರೆ ಏರಿ ಬರಲು
ಬುದ್ಧರು ನಮಿಸುವರು ಹೆದರ ಸಹದೇವನು ೧೦
ತಂದೆ ರಾಮೇಶನ ಕೊಂಡಾಡೊ ಗುಣವಿಲ್ಲ
ಪುಂಡರಿಕಾಕ್ಷಗೆ ಪಾಂಡವ ರಂಜಿಸಿದ್ದು ೧೧

೧೪
ಗಂಗೆ ಗೆಲಿಸಮ್ಮ ನಮ್ಮ ಪಂಥವ ಶ್ರೀರಂಗನ ರಾಣಿಯರ ಸೋಲಿಸುವೆ ಪ.
ಇಂದ್ರಲೋಕಕೆ ಬರಲು ವಂದಿಸಿ ಸುರರೆಲ್ಲಬಂದರು ಮೇರುಗಿರಿಗಾಗಬಂದರು ಮೇರುಗಿರಿಗಾಗ ಸ್ಕಂದನ ತಂದೆಯ ಭಾರ ವಹಿಸಿದ ೧
ಸಗರನ ಮಕ್ಕಳ ಅಘದೂರವಾಗಲೆಂದುಭಗೀರಥ ಭಾಳ ತಪಮಾಡಿಭಗೀರಥ ಭಾಳ ತಪಮಾಡಲು ವ್ಯಾಜ್ಯದಿಜಗವ ನುದ್ಧರಿಸಿದ ಜಾಹ್ನವಿ೨
ನಾಗಶಯನನ ಮಗಳು ಸಾಗರನ ನಿಜರಾಣಿಈಗ ನೀ ನಮ್ಮ ಗೆಲಿಸೆಂದುಈಗ ನೀ ನಮ್ಮ ಗೆಲಿಸೆಂದು ಸುಭದ್ರೆಬೇಗನೆ ಕೈಯ ಮುಗಿದಳು೩
ಪ್ರಯಾಗ ರಾಜನ ಮುಂದೆ ವೇಗದಿ ಹರಿದಳುಹೋಗಿ ಸರಸ್ವತಿಯ ನೆರೆದಳುಹೋಗಿ ಸರಸ್ವತಿಯ ನೆರೆದು ಯಮುನೆಯ ಸೇರಿಸಾಗಿಹಳು ಕಾಶಿಪುರಕಾಗ ೪
ಕಂಚಿ ಕಾಶಿ ಮುಂದೆ ಪಂಚಗಂಗೆಯೆನಿಸಿಅಂಚು ಅಂಚಿಗೆ ಮೆರೆಯೋಳುಅಂಚು ಅಂಚಿಗೆ ಮೆರೆಯುವರಾಮೇಶನ ಪಂಚಪ್ರಾಣಳ ಬಲಗೊಂಬೆ ೫

ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವು
೧೩
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ.
ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ೧
ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು ೨
ಕಂಡ ಜಲವ ಕಮಂಡಲದಿ ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ ೩
ಸುರನಾರಿಯರೆಲ್ಲಾ ಪರಿಪರಿಸ್ತುತಿಸಲುಹರಿಪಾದದ ರೇಣು ಹರಿದಿಲ್ಲಿಹರಿಪಾದದ ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ೪
ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ ೫

೧೫
ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ತರಂಗಿಣಿ ಹರಿಪಾದ ಸಂಗಿಗೆ ಕೋಲ ಕೋಲೆನ್ನಿರೆ ಪ.
ಗೋದಾ ನಿನ್ನಯ ಪಾದಾ ಆದರದಿ ಬಲಗೊಂಬೆಸಾಧು ಸಜ್ಜನರ ಸಲಹುವಿಸಾಧು ಸಜ್ಜನರ ಸಲಹುವಿ ನಮಗಿನ್ನುಮೋದದಿ ಮುಯ್ಯವ ಗೆಲಿಸೆಂಬೆ೧
ಕೃಷ್ಣ ನಿನ್ನಯ ಪಾದಮುಟ್ಟಿ ಭಜಿಸುವೆನುಇಷ್ಟವ ಕೊಟ್ಟು ಕಾಲಕಾಲಕ್ಕೆಇಷ್ಟವ ಕೊಟ್ಟು ಕಾಲಕಾಲಕ್ಕೆ ಸಲಹುವಿಶ್ರೀ ಕೃಷ್ಣನ ಮಗಳ ಬಲಗೊಂಬೆ ೨
ಕವೇರ ರಾಜನ ಪುತ್ರಿ ಕಾವೇರಿಯ ಬಲಗೊಂಬೆಶ್ರೀಶನ ಮಗಳ ಬಲಗೊಂಬೆಶ್ರೀಶ ರಾಮೇಶನ ಮಗಳುತುಂಗಭದ್ರೆಯ ಚಾರು ಚರಣವ ಬಲಗೊಂಬೆ ೩

೨೧೭
ಗಂಭೀರೆಯರ ನಿಲ್ಲಿಸಿದಿ
ಪೋರ ಬುದ್ಧಿಯ ಬಾಲೆ
ನೀರೆಮನಕೆ ತಾರೆ ಪ.
ನೀರಜಾಕ್ಷೆಯರ ನಿನ್ನ
ದ್ವಾರದಿ ನಿಲ್ಲಿಸಿದಿ
ಪೋರ ಬುದ್ಧಿಯನೆಲ್ಲ
ತೋರಿಸಿದೆ ಈಗ ೧
ನೋಡಿ ನಮ್ಮನು ಕರೆಯದೆ
ಓಡಿದೆ ಒಳಗಿನ್ನು
ಮಾಡಿದ ಕಪಟದ ಸೇಡು
ತೆಗೆಯುವೆ ನೀಗ ೨
ಮೂಡಲಗಿರಿ ವಾಸ
ನೋಡುವಂತೆ ಮಾರಿ
ಬಾಡಿಸಿ ಕಳಿಸುವೆ
ನೋಡಿಕೊ ರುಕ್ಮಿಣಿ ೩
ಹೀನಗುಣದ ಬಾಲೆ
ಮಾನವು ನಿನಗಿಲ್ಲ
ಶ್ರೀನಿವಾಸನು ನಿನ್ನ
ಏನೆಂದು ಮದುವೆಯಾದ ೪
ರಜವೆಂಬೊ ಗುಣ ಸೇರಿ
ರಾಜ್ಯ ಭೋಗವ ಬಟ್ಟೆ
ತ್ರಿಜಗವಂದನ ಕೂಡ
ಭುಜಗಾಲಿಂಗನೆಯಾಕೆ5
ಸತ್ವಗುಣವ ಸೇರಿ
ಅತ್ಯಂತ ಸುಖಿಸಿದಿ
ಚಿತ್ತಜನಯ್ಯಗೆ
ಪತ್ನಿ ತಕ್ಕವಳಲ್ಲ6
ತಮವೆಂಬೊ ಗುಣಗಳ
ಸುಮ್ಮನೆ ಗುತ್ತಿಗೆ ಹೊತ್ತಿ
ರಮಿ ಅರಸನ ಕೂಡ
ರಮಿಸೋದು ತರವಲ್ಲ7

೧೨೮
ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ನಾವೆಲ್ಲ ಈಗ ಬಾರೆ ನೀರೆ ಪ.
ಗಗನದಿ ಬೆಳಗುವ ಹಗಲು ಬತ್ತಿಗಳೆಷ್ಟುಹಗಲು ಬತ್ತಿಗಳೆಷ್ಟು ಮುಗಿಲಿಗೆ ಮುಟ್ಟೋಬಿರಸೆಷ್ಟ ಬಹುಶ್ರೇಷ್ಠಮುಟ್ಟೋ ಮಿಂಚಿನಂತೆ ಹೊಡೆವೊ ಬಾಣಗಳು ಕಡಿಯಿಲ್ಲ ನಲ್ಲೆ ೧
ಎಡಬಲ ಭಾವೆ ರುಕ್ಮಿಣಿ ಮಡದಿಯರೊಪ್ಪುವ ಮಡದಿಯ ಹಿಂದೊಪ್ಪುವ ಬೆಡಗು ವರ್ಣಿಸಲು ವಶವಲ್ಲ ನಲ್ಲೆಬೆಡಗು ವರ್ಣಿಸುವೊ ಅವರಾರೆ ಚತುರ್ಮುಖನು ಖಡಿಸೋತು ಕೈಯ ಮುಗಿದಾನೆ ತಾನೆ೨
ಕೃಷ್ಣನರಸಿಯರುಉಟ್ಟ ಪಟ್ಟಾವಳಿಯ ಬೆಳಕು ಅಷ್ಟು ಇಷ್ಟೆಂಬ ಮಿತಿ ಇಲ್ಲ ನಲ್ಲೆ ಅಷ್ಟು ಇಷ್ಟೆಂಬ ಮಿತಿ ಇಲ್ಲ ಸೂರ್ಯನಾಚಿಬಿಟ್ಹೋದ ತಮ್ಮ ಮನೆತನಕ ಸುಜನಕೆ ೩
ಚದುರೆಯರು ಕೃಷ್ಣರಾಯ ಹೊದೆವ ಚಾದರದ ಬೆಳಕುಹೊದೆವೊ ಚಾದರದ ಬೆಳಕು ಅದ್ಬುತವಾಗಿ ಬೆಳಗೋದೆಹೊಳವೋದೆ ಅದ್ಬುತವಾಗಿ ಬೆಳಗೋದೆಅವರ ಚಲ್ವಿಕೆಗೆ ಮದನ ತಾ ನಾಚಿ ಮನೆಗ್ಹೋದ ಅಗಾಧ೪
ಕಡಗ ಸರಪಳಿ ಗೆಜ್ಜಿ ನಡುವಿನೊಡ್ಯಾಣ ಪದಕ ನಡುವಿನೊಡ್ಯಾಣ ಪದಕ ಇಡವೊಕುಂಡಲದ ಮುಕುಟವೆ ಚಂದವುಮುಕುಟದ ಕಾಂತಿಗೆ ಅಡಗಿವೆ ತಾರೆ ಗಗನದಿ ಮುದದಿ ೫
ಫುಲ್ಲ ನಯನೆಯರ ಮುತ್ತಿನ ಝಲ್ಲೆ ವಸ್ತದ ಬೆಳಕುಎಲ್ಲೆಲ್ಲು ಇಲ್ಲ ಜಗದೊಳು ಕೇಳುಎಲ್ಲೆಲ್ಲೂ ಇಲ್ಲ ಜಗದೊಳು ಚಂದ್ರನಾಚಿಖಡಿ ಸೋತು ಕೈಯ ಮುಗಿದಾನೆ ತಾನೆ೬
ಶ್ರೀ ವತ್ಸ ಕೌಸ್ತುಭ ಚಾರುವನ ಮಾಲೆ ಹೊಳೆವ ನೂರು ಸೂರ್ಯರ ಬೆಳಕಿಲೆ ಎನುತಲೆನೂರು ಸೂರ್ಯರ ಬೆಳಕಿಲೆ ವೈಜಯಂತಿ ಹಾರ ಶೋಭಿಸುವ ಬೆಳಕೆಷ್ಟು ಬಹುಶ್ರೇಷ್ಠ೭
ಮಂದಗಮನೆಯರು ಹರಿಯ ಗಂಧ ಕಸ್ತೂರಿ ಸೊಬಗುಛಂದ ವರ್ಣಿಸುವವರ್ಯಾರ ತೋರೆಛಂದ ವರ್ಣಿಸುವ ಅವರ್ಯಾರೆ ಚತುರ್ಮುಖನ ಛಂದಾಗಿ ನಾಚಿ ಕೈ ಮುಗಿದ ಸುಕರ ೮
ನಲ್ಲೆಯರು ರಮೆ ಅರಸು ಮಲ್ಲಿಗೆ ಮುಡಿದ ಚಂದ ಮಲ್ಲಿಗೆ ಮುಡಿದ ಚಂದ ಎಲ್ಲೆಲ್ಲೂ ಇಲ್ಲಧಸ್ರೆ ಮ್ಯಾಲೆ ಎಲ್ಲೆಲ್ಲೂ ಇಲ್ಲ ಧರೆ ಮ್ಯಾಲೆ ಸರಸ್ವತಿಯುಚಲ್ವಿ ತಾ ನಾಚಿ ನಡೆದಾಳೆ ಕೇಳೆ ೯

೨೨೬
ಗುಜ್ಜಿ ರುಕ್ಮಿಣಿಗೆ ನಾಚಿ ಲಜ್ಜವಗೈಯ್ಯುತಲೆ
ಮುಂದಕ್ಕೆ ಹೆಜ್ಜೆ ಹಾಕಲೊಲ್ಲಿ ಯಾಕೆ
ಅರ್ಜುನನ ರಾಣಿ ಮುದ್ದು ಅರ್ಜುನನ ರಾಣಿ ಪ.
ಒಬ್ಬರಿಗಿಂತ ಒಬ್ಬರ ಚಲ್ವಿಕೆಗೆ ಉಬ್ಬಿಹಳು
ಐವರ ನಿರ್ಭಯದಿ ನಾಚಿಕೆಯ ಬಿಟ್ಟು
ಒಬ್ಬಳೆ ಬೆರೆದಾಳು ದ್ರೌಪತಿ
ಒಬ್ಬಳೆ ಬೆರೆದಾಳು ೧
ತರುಳ ರೈವರ ಚಲ್ವಿಕೆಗೆ ಮರುಳುಗೊಂಡಳು
ಸಭೆಯೊಳು ಅರಳು ಮಲ್ಲಿಗೆಯ ಮಾಲೆಯನು
ಕೊರಳಿಗೆ ಹಾಕಿದಳು
ಐವರ ಕೊರಳಿಗೆ ಹಾಕಿದಳು ೨
ಪಂಚ ಪಾಂಡವರ ನೋಡಿ ಚಂಚಲಾಗಿಹಳು
ನಾಚಿ ಹಂಚಿಕೆ ಹಾಕುವಾಗ
ಜಾಣಿ ಮಂಚದಲ್ಲಿಹಳು
ದ್ರೌಪತಿ ಮಂಚದಲ್ಲಿಹಳು ೩
ಸರಿಕ ಸರಿಕ ನಾರಿಯರೆಲ್ಲ ಕರವ ಹೊಯ್ದರು
ಹೊರಗೆ ಬರಲ್ಹಾಂಗೆಂದು ಹೋಗಿ
ಒಳಗೆ ಸೇರಿದಳು ದ್ರೌಪತಿ
ಒಳಗೆ ಸೇರಿದಳು ೪
ಇಂದು ರಾಮೇಶನ ಮಡದಿಯರು
ಬಿದ್ದು ನಗುವಂತೆ
ನಾಚಿಸೆಂದು ಸೇರಿದಳೆ ಹೋಗಿಚಂದಾಗಿ ಆಕಾಂತೆ ೫

ಭಂಡಿಲಿದ್ದ ಅಸುರನ ಶಿರವ :
೧೨೪
ಘಿಲಕು ಅಂದಾವಮ್ಮಗೆಜ್ಜೆ ಗಿಲಕು ಅಂದಾವೆ ಕಲಕು ಮಾಡಿ ದೈತ್ಯರನ್ನನೆಲಕ ಒತ್ತಿದ ಪಾದವಮ್ಮ ಪ.
ಸಿಟ್ಟಿಲೆ ದೈತ್ಯರ ಶಿರವ ಕುಟ್ಟಿಸವರಿದ ಪಾದವೆಂದು ಅಷ್ಟ ಸೌಭಾಗ್ಯ ಸುರರಿಗಿಟ್ಟ ಪಾದವೆಂದು೧
ಅಂಗಾಲಿಲೆ ಬಲಿರಾಯಗೆ ಹಿಂಗದ ಸುಖವಿತ್ತ ಪಾದಗಂಗಾದೇವಿ ಪಡೆದ ಶ್ರೀರಂಗನ ಪಾದವೆಂದು೨
ಭಂಡಿಲಿದ್ದ ಸುರನ ಶಿರವ ತುಂಡರಿಸಿದ ಪಾದವೆಂದು ಕೊಂಡಾಡಿ ಅಕ್ರೂರ ತಿಳಿದುಕೊಂಡ ಪಾದವೆಂದು೩
ಮರಣ ತಪ್ಪಿಸಿ ಪಾರ್ಥನಿಗೆಕರ್ಣನ ನಾಚಿಸಿದ ಪಾದ ತರುಳೆರ ಕುಚಕಿತ್ತ ಆ ಅರುಣನ ಪಾದವೆಂದು ೪
ಮಣಿಗಣ ಭೂಷಣ ಸರ್ಪನ ಫಣಿಯಲ್ಲಿ ಕುಣಿದಿದ್ದ ಪಾದ ಗುಣಪೂರ್ಣ ರಾಮೇಶ ನಮ್ಮ ತಪ್ಪೆಣಿಸದ ಪಾದವೆಂದು೫

೧೫೬
ಘಿಲಿ ಘಿಲಿ ಘಿಲಿಕೆಂದು ಗೆಜ್ಜೆಘಿಲಿ ಘಿಲಿ ಘಿಲಿಕೆಂದು ಗೆಜ್ಜೆ ಪ.
ಘಿಲಿ ಘಿಲಿ ಘಿಲಿ ಘಿಲಿಕು ಎನ್ನುತಲೆ ಬಲು ಬಲು ರೌಸದಿ ಬಾಲೆ ರಂಭಾ ೧
ಕಿಲಿ ಕಿಲಿ ಕಿಲಿ ಕಿಲಿ ಕಿಂಕಿಣಿ ಜಾಲದಿನಲಿನಲಿದಾಡುತ ಚಲ್ವೆ ರಂಭಾ೨
ಝಣ ಝಣರೆನುತಲಿ ಜಾಣಿ ಕುಣಿ ಕುಣಿದಾಡುತ ಕುಂಭಿಣಿ ಮ್ಯಾಲೆರಂಭಾ ೩
ಥಳ ಥಳ ಹೊಳೆಯುತ ತಾಳವ ಹಾಕುತ ಅಳಕಿಸಿ ಸೂರ್ಯನ ಬೆಳಕವ ತಾನು ೪
ತಕ್ಕಡ ತಕ್ಕಡ ತಾಥಾ ಎನುತಲೆ ಧಿಕ್ಕಿಡಿ ಧಿಕ್ಕಿಡಿ ಧಿಮಕಿಡಿ ಕೃಷ್ಣ ೫
ಘಲು ಘಲು ಘಲುಕು ಎನುತ ಚಲ್ವ ರಾಮೇಶನ ಸುಲಭದಿ ಒಲಿಸಿ ೬

೫೮
ಘಿಲ್ಲು ಘಿಲ್ಲೆನ್ನುತಲಿಘಮಕದಿಪಾಂಡವರುಫುಲ್ಲನಾಭನÀ ದಯಪಲ್ಲವನೋಡಿ ನಿಲ್ಲದಲೆ ಎಲ್ಲರೂ ಪ.
ವೀರಾಧಿವೀರ ಧರ್ಮರಾಯ ಮುಂದಕ್ಕೆ ಬರಲುನೀರಿನ ಕುಂಭ ಎದುರಾಗ ನೀರಿನ ಕುಂಭ ಎದುರಾಗ ರಂಗಯ್ಯನೆ ಸೂರಿ ಬಿಡವೋನೆ ದಯವನೆ೧
ಸಲ್ಲು ಸಲ್ಲಿಗೆ ಲಕ್ಷ್ಮಿನಲ್ಲನ ಸ್ತುತಿಸುತಮಲ್ಲಿಗೆ ತುರುಬಿನಮಲ್ಲಿಗೆ ತುರುಬಿನ ಚಲುವಿಯರೆಲ್ಲ ಹೊರಡಲುಮಲ್ಲ ಮರ್ದನನ ಮನೆ ನೋಡ೨
ಎಲ್ಲರು ಹೊರಡಲು ಹಲ್ಲಿ ಮಾತಾಡಿದವುಫುಲ್ಲನಾಭನ ದಯ ಚಲ್ಲುವುದೆನುತಲಿಫುಲ್ಲನಾಭನ ದಯ ಚಲ್ಲುವುದೆನುತಲಿವಾಲಿ ಗಂಟಿಟ್ಟ ನಕುಲನು೩
ಅಂಗಳಕೆ ಬರುತಿರೆ ಮಂಗಳವಾದ್ಯಗಳಾದವುಹಂಗ ಹಾರಿದವು ಎಡಗಡೆಹಂಗ ಹಾರಿದವು ಎಡಗಡೆ ರಂಗಯ್ಯಆಲಿಂಗನವ ಕೊಡುವೋನು ನಿಜವೆಂದು ೪
ತೇರಿನ ಬೀದಿಯ ದ್ವಾರದಿ ಬರುತಿರೆಕಾಗೆ ಹಾರಿದವು ಬಲಗಡೆ ಕಾಗೆ ಹಾರಿದವು ಬಲಗಡೆ ರುಕ್ಮಿಣಿಸೂರಿ ಬಿಡುವಳು ದಯವನ್ನೆ೫
ರೂಢಿಗೊಡೆಯನ ಕೈಲಿ ನೀಡಿ ಮಂತ್ರಾಕ್ಷತೆನೋಡುವರು ದ್ವಿಜರು ದಯದಿಂದ ನೋಡುವರು ದ್ವಿಜರು ದಯದಿಂದ ಸತ್ಯಭಾಮಮಾಡುವಳು ಪರಮ ಕರುಣವ ೬
ಅಕ್ಕಿ ತೆಂಗಿನಕಾಯಿ ಚಿಕ್ಕ ನಿಂಬೆ ಹಣ್ಣುಅಚ್ಚ ಮಲ್ಲಿಗೆ ಇದುರಿಗೆಅಚ್ಚ ಮಲ್ಲಿಗೆ ಇದುರಿಗೆ ರಮಿಯರಸುನಕ್ಕು ನುಡಿವನು ನಮಕೂಡ ೭

೧೧೬
ಚಿತ್ತಜನೈಯ ಮಿತ್ರೆರಾಡಿದ ಉತ್ರಮನಸಿಗೆ ತಂದನು ಅವರ ಉತ್ರ ಮನಸಿಗೆ ತಂದನು ಮಿತ್ರೆ ದ್ರೌಪತಿ ಸುಭದ್ರೆ ಮುಯ್ಯವಇವತ್ತೆ ತಿರುಗಿಸಿರೆಂದನು ಪ.
ಧನ್ಯ ಭಕ್ತರ ಮನೆಗ್ಹೋಗುವ ಎನ್ನ ಸನ್ಮತವೆಂದನುಮುನ್ನ ಆಲಶ್ಯವ ಮಾಡದೆಹೊನ್ನ ರಥ ಹೊರಗಿನ್ನು ಇಡಿಸೆಂದ೧
ಕುಂತಿ ಮಕ್ಕಳು ಸಂತೋಷಿಸುವುದು ಎಂಥ ಹರುಷವಿದೆಂದನು ಎನಗ ಕಾಂತೆಯರೇರುವ ಕುದುರೆ ರಥಗಳು ಚಿಂತಾಮಣಿ ತಾ ಪಂಥವ ಗೆಲಿಸೆಂದ೨
ಕಾತಿಲೆ ಐವರು ನೀತಿ ನೋಡಲು ಪ್ರೀತನಾಗುವೆನೆಂದನು ಭೂತಳದಿ ಕುಂತಿ ಜಾತರನ ನೋಡೋ ಆತುರದಿಒಂದೂ ಮಾತು ಸೊಗಸದು ೩
ಎನ್ನ ಭಕ್ತರಿಗಿನ್ನು ಸರಿಗಾಣೆ ಧನ್ಯ ಧನ್ಯರೆಂದನು ಚನ್ನ ಪಾಂಡವರನ್ನ ನೋಡದೆಅನ್ನ ಸೊಗಸದು ಮುನ್ನ ಮಾನಿನಿ ೪
ಇಂದು ಭಕ್ತರಿಗೆ ಆನಂದ ಬಡಿಸುವೆ ಸಂದೇಹಬೇಡೆಂದನು ತಂದೆ ರಮೆಯರಸು ಬಂದು ಜನಸಹಿತಮುಂದೆ ನಡೆದನು ಮೋದ ಸೂಸುತ ೫

೧೫೪
ಚಿತ್ತಜನೈಯನ ಕೂಡ ಅರ್ಥಿಲೆ ಹೋಗುವಾಗ ಹಸ್ತಿನಾವತಿಯ ಕಂಡರು ಜತ್ತಾಗಿ ಜನರು ಪ.
ನದ ನದಿಗಳ ದಾಟಿ ಮುದದಿಂದ ಮುಯ್ಯಕ್ಕೆ ಬರಲು ಅದ್ಭುತವಾಗಿ ಬೆಳಗೋದೆಅದ್ಭುತವಾಗಿ ಬೆಳಗೋದೆ ನಗರಿಯುಇದೇ ವೈಕುಂಠ ಹೌದೇನ೧
ಸಾಲು ವನಗಳ ನೋಡ ಸರಳ ಕಾವಲಿ ನೋಡ ತರಣಿ ಸರೋವರ ಇವ ನೋಡ ತರಣಿ ಸರೋವರ ಇವ ನೋಡಗಗನಕ್ಕೆ ಸರಳಾಗಿ ಬೆಳೆದ ಮರನೋಡ೨
ಆಲ ಅಶ್ವತ್ಥ ಶಾಲ ಶಾಬರವೃಕ್ಷ ಸಾಲು ಮಂಟಪ ನೋಡ ಸಾಲು ಮಂಟಪ ಇವ ನೋಡ ದೇವಾಲಯವು ವಿಶಾಲವಾಗಿದ್ದ ಬಗಿ ನೋಡ೩
ಪ್ಯಾಟಿ ಬಾಜಾರ ಸಾಲು ಥಾಟಾಗಿ ತೋರುವುದೆ ಕೋಟಿ ಸೂರ್ಯರ ಬೆಳಕಿಲೆಕೋಟಿ ಸೂರ್ಯರ ಬೆಳಕಿಲೆ ಒಪ್ಪೊ ನಗರಿಯ ಮಾಟ ವರ್ಣಿಸಲು ವಶವಲ್ಲ೪
ಹತ್ತಿ ಗೋಪುರ ಕೋಟಿ ಹಚ್ಚಿದೆ ಧ್ವಜ ಕೋಟಿಮತ್ತ ಪತಾಕೆಗೆ ಮಿತಿ ಇಲ್ಲಮತ್ತ ಪತಾಕೆಗೆ ಮಿತಿಯಿಲ್ಲ ಹರಿಣಾಕ್ಷಿಸತ್ಯ ಲೋಕವು ಹೌದೇನ೫
ಅಟ್ಟಾಲದ ಮ್ಯಾಲೆ ಧಿಟ್ಟಾದ ಗೊಂಬೆಗಳು ಕೃಷ್ಣಗೆ ಕೈಯ್ಯ ಮುಗಿವಂತೆ ಕೃಷ್ಣಗೆ ಕೈಯ್ಯ ಮುಗಿವಂತೆ ನಿಲ್ಲಿಸಿದ್ದುಎಷ್ಟು ವರ್ಣಿಸಲು ವಶವಲ್ಲ೬
ಜತ್ತಾದ ಮನೆಗಳಿಗೆ ರತ್ನದ ಶೋಭೆ ನೋಡಹತ್ತು ದಿಕ್ಕುಗಳ ಬೆಳಗೋವೆ ಹತ್ತು ದಿಕ್ಕುಗಳ ಬೆಳಗೋವೆ ಸ್ವರ್ಗವಎತ್ತಿಟ್ಟರೇನ ಐವರು೭
ಚಂದದ ಮನೆಗಳಿಗೆ ಮುತ್ತಿನ ಹಂದರ ತೋರಣಊಳೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟ ರಂಗವಾಲಿಅಂದವಾಗಿದ್ದ ಜಗುಲಿ ಎಷ್ಟ ೮
ತಾರಕ್ಕಿ ಹೊಳವಂತೆ ತೋರೋದೀವಿಗೆ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟ ಉಪ್ಪರಿಗಿಏರಿ ನೋಡುವ ಜನರೆಷ್ಟ ೯
ಶ್ರೀಶನ ಮುಖವನೆ ಸೋಸಿಲೆ ನೋಡುತ ಈಜಾಡಿ ಸುಖದ ನದಿಯೊಳು ಈಜಾಡಿ ಸುಖದ ನದಿಯೊಳುಬಹುಜನ್ಮಕ ಲೇಸಾದ ಪುಣ್ಯ ಫಲಿಸಿತು೧೦
ಮೇಲಾದ ಮನೆಗಳ ಮ್ಯಾಲೆ ಸಾಲು ಗೊಂಬಿಗಳ ನೋಡ ಶ್ರೀಲೋಲ ರಾಮೇಶಗೆ ಕೈ ಮುಗಿವಂತೆಶ್ರೀಲೋಲ ರಾಮೇಶಗೆ ಕೈ ಮುಗಿದುಹರಿಣಾಕ್ಷಿ ಕಾಲಿಗೆ ಎರಗುವ ಪರಿಯಂತೆ ೧೧

೧೭೮
ಚೆಲ್ಲುತ ಹೆಜ್ಜೆನಿಕ್ಕುತ ನಮ್ಮ ಚಲುವ
ರಂಗನ ಮೇಲೆ ಚಲುವೆಯರು ಬುಕ್ಕಿಟ್ಟು ಪ.
ಸುಂದರೆಯರು ಇಂದಿರೇಶಗೆ ಎರಗಿ
ಬಂದು ಪ್ರಾರ್ಥನೆಮಾಡಿ ಆನಂದವ ಸೂಸುತ ೧
ತೋಳ ಬಂದಿಗಿಯಲಿ ವ್ಯಾಲಾಶಯನಗ
ಒಪ್ಪ ಹೇಳಿ ಪ್ರಾರ್ಥನೆಮಾಡಿ ಬಹಳ ಉತ್ಸುಕದಿಂದ ೨
ಮುಗುಳು ನಗೆಯ ನಕ್ಕುನಲ್ಲೆಯರು ಕೃಷ್ಣಗೆ
ಹಸ್ತಗಳ ಮುಗಿದು ಮಾತುಗಳನ್ನಾಡಿದರು೩
ಹರದಿ ರುಕ್ಮಿಣಿ ಭಾವೆಗೆ ಎರಗಿ ದ್ರೌಪತಿ ಭದ್ರಾ
ಆದರದಿ ಮಾಡಿದರು ಪ್ರಾರ್ಥನೆ ಕರಗಳ ಮುಗಿದು ೪
ಚಲುವ ರಾಮೇಶನ ವಲ್ಲಭೆಯರಿಗೆ ಭದ್ರಾಅಲ್ಲೆ ಪ್ರಾರ್ಥನೆ ಮಾಡಿ ಎಲ್ಲರ ಕರೆಯಲು ೫

೧೪೦
ಜಗದೋದ್ದಾರನ ಸಖಿ ಮೊದಲಿಗೆ ಬಲಗೊಂಬೆಮುದದಿಂದ ಮುಯ್ಯ ಗೆಲಿಸೆಂಬೆನಲ್ಲೆ ನಮೋ ಎಂಬೆ ಸುರರ ಎಲ್ಲರ ಬಲಗೊಂಬೆ ಪ.
ನಿಗಮ ತಂದವನಿಗೆ ಮುಗಿವೆವು ಕರಗಳನಗವ ಪೊತ್ತವನ ಬಲಗೊಂಬೆ ೧
ಜಗವನೆತ್ತಿದವಗೆ ಜಾಣಿ ವಂದಿಸಿಕರುಳು ಬಗೆದ ನರಸಿಂಹನ ಬಲಗೊಂಬೆ ೨
ಪೊಡವಿಯನಾಳಿದವಗೆ ಬಿಡದೆ ವಂದಿಸಿಕೊಡಲಿಯ ಪಿಡಿದ ಭಾರ್ಗವನ ಬಲಗೊಂಬೆ ೩
ಸೇತುವೆ ಕಟ್ಟಿದವಗೆ ಪ್ರೀತಿಲೆ ನಮಿಸಿಪಾರಿಜಾತ ತಂದವನ ಬಲಗೊಂಬೆ೪
ವಸ್ತ್ರ ಹೀನಗೆ ನಾವು ಅತ್ಯಂತ ನಮಿಸಿ ಕುದುರೆಹತ್ತಿದ ರಾಮೇಶನ ಬಲಗೊಂಬೆ ೫

೨೧೨
ಜಯ ಜಯವೆಂದರು ಸುರರು
ಇಂಥ ವೈಭವದಾಟ ಕಾಣುತಲೆ ಅಮರರು ಪ.
ಗಂಧದ ಓಕುಳಿಯನ್ನೇಕಲೆಸಿ
ತಂದು ಮಂದಗಮನೆಯರೆಲ್ಲ ಜೀಕುಳಿ ತುಂಬಿ
ಇಂದಿರೇಶನ ಮ್ಯಾಲೆ ಸುರಿಸಿ
ಆನಂದ ದಿಂದಲೆ ಕೈ ಹೊಡೆದು ಚಪ್ಪಳಿಸಿ ೧
ಕೇಶರ ದೋಕುಳಿಯ ತುಂಬಿ ಸರ್ವೇಶ
ನೀ ಚಿಮ್ಮುವ ಕುಚಗಳ ಅಪ್ಪಿಕೊಂಬೆ
ಈ ಸುಖ ನೀ ಎಲ್ಲೆ ಕಾಂಬೆ
ಆಭಾಸ ಮಾಡಲು
ಅದು ನೀ ಒಪ್ಪಿಕೊಂಬೆ2
ಬತ್ತಲೆ ಜಲವ ಪೊಕ್ಕಿಹರು
ಸೀರೆ ಎತ್ತಿಕೊಂಢೋಗಿ ಪುಗಡೆನ್ಹಾಕುವರು
ಎತ್ತಿ ಕರವ ಜೋಡಿಸುವರು
ಮರವಸುತ್ತಿ ಚಪ್ಪಾಳೆಯನಿಕ್ಕಿ ಸಿದಿಯಲ್ಲೊ ನೀನು ೩
ಚಂದದ ಸೀರೆಯನುಟ್ಟು
ಗಂಧ ಕಸ್ತೂರಿ ಕುಂಕುಮ ಕೇದಗೆಯನಿಟ್ಟು
ಆನಂದವ ಬಟ್ಟರು ಅಷ್ಟು
ಗೋವಿಂದನಂಘ್ರಿ ಕಮಲದಿ ಮನಸಿಟ್ಟು ೪
ಅವರ ಒಲ್ಲಭರೆಲ್ಲ ಸೊಲ್ಲುಗಳೆತ್ತಧಾಂಗೆ
ಚಲ್ವನ ಪ್ರಾರ್ಥಿಸಿದರೆಲ್ಲ ಹೀಂಗೆ
ರಮಿನಲ್ಲನ ದಯದಿಂದ ಇದ್ದರು ಮೊದಲಿನ್ಹಾಂಗೆ ೫

೨೫೫
ಜಯಪತ್ರವ ತಾರೆ ಜಾಣೆ
ಮುಂದಕೆ ಬಾರೆ
ವೈಭವದಿ ಆಣಿಯಿಟ್ಟು
ಓಡಿದ್ಯಾತಕೆ ನೀರೆ ಪ
ಬಿಂಕ ಬಿಡಿಸಿಕೊಂಡೆವೆಂದು
ದ್ರೌಪತಿ ಶಂಕಿಸಿಕೊಂಡೆ ನೀರೆ
ಪಂಕಜಾಕ್ಷಿ ರುಕ್ಮಿಣಿ ಮುಂದೆ
ಕಿಂಕರಳೆನ್ನು ಬಾರೆ ನೀರೆ1
ಸೋಗೆಗಣ್ಣಿನ ಭದ್ರೆ ನೀನು
ಆಣಿ ಇಟ್ಟ ಬಗೆಯೆ ನಮಗೆ
ನಾಗವೇಣಿ ರುಕ್ಮಿಣಿ ಮುಂದೆ
ಮೂಗಿನ ಗೆರೆಯ ತೆಗಿಯೆ ೨
ಇಟ್ಟ ಆಣೆತಪ್ಪಿಗೆ
ಕೈಯ ಕಟ್ಟಿಕೊಂಡು ಬಾರೆ
ಕೊಟ್ಟು ಬಿರುದು ಸೋತೆವೆಂದು
ಅಟ್ಟಾಸದಲಿ ಸಾರೆ ೩
ಪಂಥ ಕಳೆದುಕೊಂಡಿರೆಂದು
ಎಂಥ ನಗುತಾರಲ್ಲ
ಇಂಥ ಮಾನ ಭಂಗವಾಗಿ ನಿಂತಿರ್ಯಾತಕೆ ಇಲ್ಲೆ
ನೀವು ಕುಳಿತಿರ್ಯಾತಕೆ ಇಲ್ಲೆ4
ಸೋತೆವಮ್ಮ ನಿಮಗೆ
ರಮಿನಾಥನರಸಿಗೆ ಎಂದು
ರುಕ್ಮಿಣಿಗೆ ನೀತಿಲೆಜಯಪತ್ರಕೊಟ್ಟು ದ್ರೌಪತಿ ಎರಗಿದಳು ೫

೧೬೦
ಜಾಣಿ ಕಲ್ಯಾಣಿ ಸುಂದರವಾಣಿ ಪನ್ನಂಗ ವೇಣಿಜಾಣಿ ಹೇಳಮ್ಮ ಹೋಗಿ ಕಾಣಿ ನಿನ್ನಂಥವಳ ಪ.
ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ೧
ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು೨
ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು ೩
ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ ೪
ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು೫
ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು೬
ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ ೭
ಧಿಟ್ಟೆಯರು ಮುಯ್ಯ ಉತ್ರ‍ಕಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ೮
ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ೯


ಜಾಣಿ ರಂಗಯ್ಯನ ಕಾಣದೆ ನಿಲ್ಲದು ಮನ ವಾಣಿ ರಮಣನ ಪಿತನ ವೇಣದಿ ಕರೆತಾರಮ್ಮ ಪ.
ಜರಿಯ ಸುತನು ತಾನು ಜಗಳಕೆ ಬಾಹೋನೆಂದು ಕರೆಸಿದ ವಿಶ್ವಕರ್ಮನ ಕರೆಸಿದ ವಿಶ್ವಕರ್ಮನ ದ್ವಾರಕಾವಿಪುರನಿರ್ಮಿಸೆಂದ ಕ್ಷಣದಾಗೆ ಜಲದೊಳು೧
ದ್ವಾರದ್ವಾರಂಗಳಿಗೆ ತಳಿರು ತೋರಣನಿವಹ ಮೇರುವಿಗೆ ಪೊನ್ನ ಕಳಸ ಮೇರುವಿಗೆ ಪೊನ್ನ ಕಳಸ ಕನ್ನಡಿ ಮನೋಹರವಾಗಿದ್ದು ಸಟಿಯಿಲ್ಲ೨
ದ್ವಾರಕಾಪುರದ ಶೃಂಗಾರ ವರ್ಣಿಸಲು ಮೂರು ಕಣ್ಣವಗೆ ವಶವಲ್ಲಮೂರು ಕಣ್ಣವಗೆ ವಶವಲ್ಲ ನಾಲ್ಕು ಮುಖದವಗೆ ಬಲುಮಿಗಿಲು೩
ಹದಿನಾರು ಸಾವಿರ ಚದುರೆಯರ ಮಂದಿರ ಮದನನಯ್ಯನ ಮನೆಮಧ್ಯಮದನನಯ್ಯನ ಮನೆಮಧ್ಯ ದ್ವಾರಕೆಅದ್ಬುತವಾಗಿ ಬೆಳಗಿದೆ ೪
ಶಿಶುಪಾಲ ದಂತವಕ್ತ್ರ ಮೊದಲಾದ ಮಹಾಅಸುರರನ್ನೆಲ್ಲ ಅಳುಹಿದ ಅಸುರರನ್ನೆಲ್ಲ ಅಳಿದು ದ್ವಾರಕೆಯಲ್ಲಿನಸು ನಗುತಿದ್ದ ನರಹರಿ ೫
ಸತ್ಯದಿ ರುಕ್ಮಿಣಿ ಸತ್ಯಭಾಮಾದೇವಿ ವಾರಿಜ ಮುಖಿ ಷಣ್ಮಹಿಷೇರಸಹಿತಾಗಿಷಣ್ಮಹಿಷೇರ ಸಹಿತಾಗಿಕಾರುಣ್ಯಸಿಂಧು ರಾಮೇಶ ಕುಳಿತಿದ್ದ ೬
ಶ್ರೀ ರಮಾರಮಣನಾದ ಶ್ರೀ ಕೃಷ್ಣನ ಅರಮನೆಗೆಸುಭಧ್ರೆ ಮುಯ್ಯ ತರುತಾಳೆಸುಭಧ್ರೆ ಮುಯ್ಯ ತರುತಾಳೆ ಹಸ್ತಿನಾವತಿಯ ಭೂಸುರರೆಲ್ಲ ಬರತಾರೆ೭

೨೦೩
ಜೋಗಿ ಪಾರ್ಥ ನೀನಾದೆ ಬಹು ಭೋಗಿ
ಕುರುರಾಯರ ಮಾಡಿದ ಹೆಸರೆಲ್ಲನೀಗಿ ಪ.
ಚಿತ್ರ ಕುಸುಮೆಯರ ಬೆರದಿ
ಇಂಥ ಉತ್ತಮ ಸತಿಯರ ಅತ್ಯಂತ ಮರೆತಿ
ಸತ್ಯ ವಾಕ್ಯಗಳೆಲ್ಲ ತೊರೆದಿ
ಇದಕೆ ಹತ್ತೂರು ನಗಲು ಕೋಪವೆ ಭರದಿ ೧
ನೀತಿಯಿಲ್ಲವೊ ನಿನ್ನದೊಂದು
ದೇವ ಜಾತಿಗೆ ಉತ್ತಮನೆಂದು ಖ್ಯಾತಿಯೊ ನಿಂದು
ಕಪೋತನ ತಿಂದವನೆಂದು
ಒಂದು ಮಾತು ಹೇಳಲು ಅತಿ ಕೋಪವೆ ಬಂದು ೨
ಅತ್ಯಂತ ನಿಷ್ಕರುಣಿ ನೀನು
ದೇಹ ಕಿತ್ತು ಕೊಟ್ಟನಾಗ ಶಿಬಿರಾಯ ತಾನು
ತೃಪ್ತನಾಗದಿರೊ ನೀನು
ಇದಕೆ ಅತ್ಯಂತ ನಕ್ಕ ರಮೇಶ ತಾನು ೩

೧೧೭
ಡಂಕಿ ಹೊಯ್ಸಿದ ನಮ್ಮ ವೆಂಕಟರಾಯನು ಪಂಕಜಾಕ್ಷರ ಮುಯ್ಯ ತಿರುಗಿಸಿ ಅಸಂಖ್ಯ ರಾಜರು ಬರಬೇಕೆಂದುಪ.
ವಾರಿಜಾಕ್ಷರು ಸುರರು ಮೊದಲೆ ತೀವ್ರದಿಂದ ಬರಬೇಕೆಂದುಭೇರಿನಾದವ ಮಾಡಿದ ಕೃಷ್ಣಬಾರೆ ಬಾರೆ ಭಾಗ್ಯನಿಧಿಯೆ೧
ಬೊಮ್ಮಮೊದಲಾದ ಸುರರುತಮ್ಮ ತಮ್ಮ ಸತಿಯರಿಂದ ಝಮ್ಮನೆ ಮುಯ್ಯಕ್ಕೆ ಬರಬೇಕೆಂದುರಮ್ಯಕಾಳಿ ಹಿಡಿಸಿದ ಕೃಷ್ಣ೨
ಇಂದ್ರ ಮೊದಲಾದ ಸುರರುಚಂದ್ರ ಸೂರ್ಯರೊಡಗೂಡಿತಂದೆ ರಾಮೇಶನರಮನೆಗೆಒಂದು ಕ್ಷಣದಿ ಬರಬೇಕೆಂದು೩

೨೫೧
ತಂಬೂರಿ ಮಾಡಿಸಿ ತರಲಿಲ್ಲವಮ್ಮ
ನಮ್ಮ ರಂಭೆ ದ್ರೌಪತಿ ಕೋಪ ಘನವಾಯಿತಮ್ಮ ಪ.
ಮೂಡಲಗಿರಿವಾಸ ನಾಡು ನಾಡಿನ ಜವಳಿ
ಬೇಡಿದ ಪರಿಯು ತರಿಸಿದನಮ್ಮ
ಬೇಡಿದ ಪರಿ ತರಿಸಿದನು ಧರ್ಮನ
ನೋಡ ಬಂದವರಿಗೆ ಉಡುಗೊರೆ ಕೆಲದಿ ೧
ಚಂದದ ಜವಳಿ ಕಂದರಿಗೊಸ್ತವು
ಇಂದಿರಾರಮಣ ತರಿಸಿದನಮ್ಮ
ಇಂದಿರಾರಮಣ ತರಿಸಿದನಮ್ಮ ಧರ್ಮನ
ಬಂದ ಜನಕೆಲ್ಲ ಉಡುಗೊರೆ ಕೆಲದಿ2
ಲೆಕ್ಕವಿಲ್ಲದ ಜವಳಿ ಮಕ್ಕಳಿಗೊಸ್ತವು
ಲಕ್ಕುಮಿರಮಣ ತರಿಸಿದನಮ್ಮ
ಲಕ್ಕುಮಿರಮಣ ತರಿಸಿದನಮ್ಮ ಧರ್ಮನ
ಮಿಕ್ಕ ಜನಕೆಲ್ಲ ಉಡುಗೊರೆ ಕೆಲದಿ ೩
ಏಸು ರತ್ನದ ಹೇರು ವಾಸುದೇವನು ತರಿಸಿ
ರಾಶಿ ಸುರುವಿದ ಸಭೆಯೊಳು ಕೆಲದಿ
ರಾಶಿ ಸುರುವಿದ ಸಭೆಯೊಳು ಧರ್ಮನ
ಆಸು ಜನಕೆಲ್ಲ ಉಡುಗೊರೆ ಕೆಲದಿ ೪
ಫುಲ್ಲನಾಭನು ದ್ರವ್ಯ ಚಲ್ಲಿದ ಸಭೆಯೊಳು
ಎಲ್ಲ ನಾರಿಯರು ಬಳಕೊಳ್ಳಿರಮ್ಮ
ಎಲ್ಲ ನಾರಿಯರು ಬಳಕೊಳ್ಳಿರಮ್ಮ ಎನುತಲೆ
ಚಲ್ವ ರಾಮೇಶ ನಗುತಿಹನಮ್ಮ ೫

೪೫
ತರುತಾರೆಂದು ತಿಳಿಯೆ ತವಕದಿಬಾಳೆಯಸುಳಿಯೆಚಂದಿರನಂತೆ ಹೊಳೆಯುತ ಲೋಕ ಸುಂದರಿ ಭೃಂಗ ಕುಂತಳೆಯರು ಮುಯ್ಯ ತಂದಾರೆಂದು ಪ.
ಅಂದದ ವಸ್ತವಧರಿಸಿ ದೂತೆ ಚಂದದ ಸೀರೆ ಶೃಂಗರಿಸಿಇಂದಿರೇಶಗೆ ನಮಸ್ಕರಿಸಿತಾನು ಬಂದಾಳೆ ದ್ರೌಪತಿ ಸ್ಮರಿಸಿ ೧
ಬಾಗಿಲಿಗೆ ಬಂದಾಳು ನೋಡಿದ್ವಾರಪಾಲಕಗೆ ಉಚಿತವ ಹೇಳಿಹೊನ್ನುಂಗುರಆತಗೆ ನೀಡಿಒಳಗೆ ಪೋದಳು ಹರಿಯ ಕೊಂಡಾಡಿ೨
ವಂದಿಸಿ ಯದುನಾಥನಢಿಗೆಮಂದಹಾಸವ ಬೀರಿದೂತೆಯಡೆಗೆಬಂದಾರೈವರೆಂಬೊ ನುಡಿಗೆಆನಂದ ಬಟ್ಟ ಕೃಷ್ಣ ಬ್ಯಾಗನೆ೩
ವೇಗದಿ ರುಕ್ಮಿಣಿಗೆಬಾಗಿ ಸುದ್ದಿ ಹೇಳಿ ಮುಯ್ಯದ ಬಗಿ ಬಗಿನಾಗವೇಣಿಯು ಹರುಷಾಗಿಕರೆಯ ಬರತೇವಂತ್ಹೇಳೆ ಹೋಗಿ೪
ಸತ್ಯಭಾಮೆಗೆ ಶರಣೆಂದು ಕೃಷ್ಣ ತರತಾಳೆ ಮುಯ್ಯಾವೆಂದು ಅರ್ಥಿ ವಿನೋದಾ ಒಂದೊಂದುಹೊನ್ನ ಪುತ್ಥಳಿ ಮನಕೆ ತಾರೆಂದು ೫
ಗುರ್ತು ಹೇಳುವೆ ಕೇಳೊ ದೊರೆಯೆ ಕೃಷ್ಣಚರ್ಚೆ ಮಾತಿನ ಚಮತ್ಕಾರಿಯೆಶೃತ್ಯರ್ಥದಾ ಮಳೆಗರಿಯೆಪ್ರತಿಯುತ್ತರವಕೊಡೋದು ಮರಿಯೆ ೬
ಕೋಕಿಲ ಸ್ವರದಂತೆ ಅಳಕು ಹರುಷಾಗಿರಾಮೇಶಗ್ಹಾಕಿ ಮಲಕುಆಗಮಾ ತರತಾಳೆ ಮಲಕುಎಲ್ಲಾ ನಾರಿಯರು ಅಕೆಗೆ ಅಳಕು ೭

೧೨೩
ತೆರಳಿದ ನಮ್ಮರಂಗ ಅರಳುಮಲ್ಲಿಗೆ ಹೂವತರುಳೆ ಸೂರ್ಯಾಡಿ ಬಾರೆ ಪ.
ರಾಜ ರಾಜರು ಸಹಿತ ಭೋಜನ ಮಾಡಿ ಕೃಷ್ಣರಾಜ ಗೋಪಾಲನೀಗ ತೆರಳಿದ ೧
ಅಂಬುಜಾಕ್ಷನು ದಿವ್ಯ ತಾಂಬೂಲಹಾಕಿಕೊಂಡು ಕಂಬು ಕಂದರನೀಗ ತೆರಳಿದ ೨
ಇಂದಿರೇಶ ತಾನು ಚಂದ್ರ ಸಾಲಿಗ ಳಿಳಿದು ತಂದಿ ಭಕ್ತರ ಮನೆಗೆ ತೆರಳಿದ೩
ಪ್ರೇಮದಿ ಕೃಷ್ಣರಾಯ ಸೋಮ ಸಾಲಿಗ ಳಿಳಿದು ಸ್ವಾಮಿ ಭಕ್ತರ ಮನೆಗೆ ತೆರಳಿದ ೪
ಕುಂತಿ ದೇವಿಯರ ಪುಣ್ಯ ಎಂತು ವರ್ಣಿಸಬೇಕು ಶ್ರೀಕಾಂತನು ಅವರ ಅರಮನೆಗೆ ತೆರಳಿದ೫
ಮತ್ತೆಪಾಂಡವರ ಪುಣ್ಯ ವಿಸ್ತರಿಸಲೊಶವಲ್ಲಚಿತ್ತಜನೈಯನೀಗ ತೆರಳಿದ೬
ಪಕ್ಷಿವಾಹನ ಸ್ವಾಮಿ ಲಕ್ಷರೂಪವೆ ಧರಿಸಿ ಲಕ್ಷ್ಮಿರಮಣ ನೀಗ ತೆರಳಿದ ೭
ಹಾಟಗಾಂಬರ ಧಾರಿ ಕೋಟಿ ರೂಪದಿ ಜಗನ್ನಾಟಕ ಕೃಷ್ಣನೀಗ ತೆರಳಿದ ೮
ಚನ್ನರಾಮೇಶ ತಾನು ಅನಂತ ರೂಪವಧರಿಸಿತನ್ನ ಭಕ್ತರ ಮನೆಗೆ ತೆರಳಿದ ೯

೧೭೬
ಥಟ್ಟನೆ ನಿಂತನು ರಾಯ
ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ಪ.
ಸಭೆಯ ದ್ವಾರದಲೆ ವಿಬುಧ ಸಹಿತಾಗಿ
ಅಭಯ ಜನಕೆ ಕೊಟ್ಟು ನಭದ ಸೂರ್ಯನಂತೆ ೧
ಮಾರನೈಯನ ದಯ ಅಪಾರವಾಗಲೆಂದು
ಬಾರಿ ಬಾರಿಗೆ ದ್ರವ್ಯ ಸೂರಿ ಮಾಡುತಲಾಗ ೨
ವಾಯುದೇವರ ದಯ ಸೋಸಿಲೆ ನಮಗೆಂದು
ಸಾಸಿರ ಅರ್ಬುದ ದ್ರವ್ಯ ಆಸಮಯದಲೆ ಕೊಟ್ಟ ೩
ಲಕ್ಷ್ಮಿದಯ ನಮಗೆ ಅಕ್ಷಯ ಇರಲೆಂದು
ಲಕ್ಷಕೋಟಿ ದ್ರವ್ಯ ಆಕ್ಷಣದಲಿ ಕೊಟ್ಟ ೪
ಬಲರಾಮ ನಮಗಿನ್ನು ಸುಲಭವಾಗಲೆಂದು
ಬಲುಬಲುದ್ರವ್ಯ ಮೇಲೆ ಮೇಲೆ ಕೊಟ್ಟು ೫
ಎಷ್ಟೆಷ್ಟು ಕಾಲಕ್ಕೆ ಕೃಷ್ಣನೆ ದೊರೆ ಎಂದು
ಶ್ರೇಷ್ಠದ ಭೇರಿಯ ಘಟ್ಯಾಗಿ ಹೊಯಿಸುತ ೬
ಹಿಂದೆ ಮುದದಿಂದ ಬಂದ ರಾಮೇಶನು ತಂದೆ ಬೊಮ್ಮಗೆ ದುಂದುಭಿ ಹೊಯಿಸುತ ೭

೧೨೬
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ.
ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ೧
ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ ೨
ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ ೩
ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ ೪
ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ ೫
ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ ೬
ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ೭
ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು ೮
ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ ೯

ಕೊಡಲಿಯ ಪಿಡಕೊಂಡು…
೮೭
ದನವ ಕಾಯ್ವೊನೆ ದೈನ್ಯ ಬಡುವವನೆ ವನಜಭವಾಂಡಕೆ ಒಡೆಯನಾಗೆಂದರೆಒಲ್ಲದೆ ವನವನ ತಿರುಗಿದನಮ್ಮ ನೋಡಮ್ಮಯ್ಯ ಪ.
ದನಗಾಹಿ ಎಂದರೆ ಎನಗೇನು ಸಂಶಯವಿಲ್ಲಜನರೆಲ್ಲ ಬಲ್ಲರು ಈ ಮಾತು ಜನರೆಲ್ಲ ಬಲ್ಲರು ಈ ಮಾತು ಭಾವಯ್ಯನೆನಪಿಸಿ ಕೊಟ್ಟೆಲ್ಲೊ ಮರೆತಿದ್ದೆ ೧
ಗೋಪಾಲ ಶಬ್ದಾರ್ಥ ನೀ ಕೇಳಿಶ್ರೀ ಕೃಷ್ಣ ಕೋಪವಿನ್ಯಾಕೊ ಎನಮ್ಯಾಲೆ ಕೋಪ ವಿನ್ಯಾಕೊ ಎನ ಮ್ಯಾಲೆ ಭಾವಯ್ಯನೀ ಪೇಳಿಕೊಂಡ್ಯೊ ನಿಷ್ಕಪಟಿ ೨
ಕುದುರೆಯ ಮಾರಿಯ ಹೂವು ಗಣ್ಣಿನ ವರನಿಗೆ ಮದಗಜಗಮನೆ ಮನಸೋತುಮದಗಜಗಮನೆ ಮನಸೋತು ಮ್ಯಾಲಿನ್ನುಬದಲು ಮಾತಾಡಿ ಫಲವೇನೊ೩
ನಾರುವ ಮೈಯವ ನೀರೊಳು ಅಡಗಿದ ಹಂದಿ ಮೈಯವನೆ ಮಹಾಕೋಪಿಹಂದಿ ಮೈಯವನೆ ಮಹಾಕೋಪಿ ತಿರುತಿಂಬೊಹಾರುವನ ಗೊಡವೆ ನಮಗ್ಯಾಕೊ ೪
ಕೊಡಲಿಯ ಪಿಡಕೊಂಡ ಪಡೆದಮಾತೆಯಕೊಂದೆ ಒಡಲಿಗಿಕ್ಕದಲೆ ಮಡದಿಯಒಡಲಿಗಿಕ್ಕದಲೆ ಮಡದಿಯ ಕೊಂಡೊಯ್ದುಅಡವಿಗಟ್ಟಿದ ಮಹಾ ಮಹಿಮನೆ೫
ಜಾರ ಚೋರನೆಂದು ಜಗದೊಳು ಹೆಸರಾದಿಅಪಾರವಾದ ವನಿತೆಯರುಅಪಾರವಾದ ವನಿತೆಯರ ಒಗೆತನಕೆನೀರು ತಂದಿದ್ದ ಮಹಾಮಹಿಮನೆ ೬
ಭಂಡ ಗಾರನಂತೆ ದೇಹ ಕಂಡಜನಕೆಲ್ಲತೋರಿ ಪುಂಡಗಾರನಂತೆ ಹಯವೇರಿಪುಂಡಗಾರನಂತೆ ಹಯವೇರಿ ಹಾರಿಸುವ ಲೆಂಡ ರಾಮೇಶನ ಅರಿವೆನೊ೭

೧೦೩
ದಯಮಾಡೊ ರಂಗ ದಯ ಮಾಡೊಕೈವಲ್ಯಪತಿ ನಮಗೆ ಕರುಣೆ ಮಾಡೊ ಕೃಷ್ಣ ಪ.
ಕುಂತಿ ದೇವಿಯರು ತಂದ ಅನಂತ ಪದಾರ್ಥವ ಶಾಂತ ಮೂರುತಿಯೆ ಕೈಕೊಳ್ಳೊ ಕೃಷ್ಣಶಾಂತ ಮೂರುತಿಯೆ ಕೈಕೊಳ್ಳೊ ಎನುತಲಿ ಕಾಂತೆ ಸುಭದ್ರಾ ನುಡಿದಳು೧
ಶ್ರೀದೇವಿಯರಸನ ಪಾದವ ತೊಳೆದರು ಕ್ಯಾದಿಗೆ ಗಂಧ ತುಳಸಿಕ್ಯಾದಿಗೆ ಗಂಧ ತುಳಸಿ ಅಕ್ಷತೆಯಿಂದ ವೇದಗೋಚರನ ಉಪಚರಿಸಿ ೨
ಸುರರಿಗಭಯವಿತ್ತು ಕರದಿ ವೀಳ್ಯವಕೊಟ್ಟುವರ ಪೂಗಿ ಫಲವ ನಡುವಿಟ್ಟುವರ ಪೂಗಿ ಫಲವ ನಡುವಿಟ್ಟು ರಾಮೇಶಗೆ ಕರವ ಜೋಡಿಸುತ ಐವರು೩

೨೪೬
ದಯವಿರಲಿ ವ್ಯಾಸ ದಯವಿರಲಿ
ಕೈವಲ್ಯಪತಿ ನಮಗೆ ಕರುಣೆ ಮಾಡೊ ಪೂರ್ಣ ಪ
ಚಲ್ವರಾಯರ ಮನೆಯ ಕುಲದೈವ ವ್ಯಾಸನು
ಬಲರಾಮ ಪಾದವ ತೊಳೆದನು ಪೂರ್ಣ
ಬಲರಾಮ ಪಾದ ತೊಳೆದು ಪ್ರಾರ್ಥಿಸಿದನು
ಹಲವು ಪದಾರ್ಥ ಕೈಕೊಳ್ಳೊ ಪೂರ್ಣ ೧
ತಂದೆ ವ್ಯಾಸ ಮುನಿಗೆ ಗಂಧ ಅಕ್ಷತೆ ಪುಷ್ಪ
ಚಂದದ ತುಳಸಿಜಲದಿಂದ ಪೂರ್ಣ
ಚಂದದ ತುಳಸಿಜಲದಿಂದ ಬಲರಾಮನು
ಗೋವಿಂದ ಗರ್ಪಿಸಿದ ಹರುಷದಿ ಪೂರ್ಣ2
ಸತ್ಯವತಿಯ ಮಗನ ಮುತ್ತು ರತ್ನದ ವಸ್ತ
ಲಕ್ಷ ಸೂರ್ಯರ ಬೆಳಕಿಲೆ ಪೂರ್ಣ
ಲಕ್ಷ ಸೂರ್ಯರ ಬೆಳಕಿಲೆ ಉಚಿತವ
ಅರ್ಥಿಲೆ ರಾಮೇಶ ಕೈಕೊಳ್ಳೊ ಪೂರ್ಣ3

೫೬
ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ಮುದ್ದು ವೈಯ್ಯಾರಿ ನಿನ್ನಯಮಾರಿ ತೋರೆಂದು ದಾರಿ ನೋಡುವನು ಪ.
ಏಳು ಸಾವಿರ ಮನೆಯು ತೆರವೆಂದು ಹೇಳಿದನಿಮಗಾಗಿ ಜಾಳಿಗೆ ಮುತ್ತು ಜಡಿಸೆಂದ ಜಾಳಿಗೆ ಮುತ್ತು ರಂಗಯ್ಯ ಜಡಿಸೆಂದ ಪಾಂಡವರ ಆಳು ಮಂದಿಗಳ ತಂದು ಇಳಿಸೆಂದ ೧
ಚಂದದ ಮನೆ ಮುಂದೆ ಮುತ್ತಿನ ಹಂದರ ಹಾಕೆಂದ ಕುಂದಣ ರತ್ನ ರಚಿಸೆಂದ ಕುಂದಣ ರತ್ನ ರಚಿಸೆಂದ ರಂಗಯ್ಯಪಾಂಡವರ ಬಂಧುಗಳ ತಂದು ಇಳಿಸೆಂದ ೨
ನೀಲಮೇಘಶ್ಯಾಮ ಮುತ್ತಿನ ಮಹಲು ರಚಿಸೆಂದಮ್ಯಾಲೆ ಮಾಣಿಕವ ರಚಿಸೆಂದ ಮ್ಯಾಲೆ ಮಾಣಿಕವ ರಚಿಸೆಂದ ರಂಗಯ್ಯ ಪಾಂಡವರ ಬಾಲಿಯರ ತಂದು ಇಳಿಸೆಂದ ೩
ಮದಗಜನಯ್ಯನು ಮುತ್ತಿನ ಸದನ ವಿಸ್ತರಿಸೆಂದಹದಿನದಿ ರತ್ನ ರಚಸೆಂದಹದಿನದಿ ರತ್ನ ರಚಸೆಂದ ರಂಗಯ್ಯಪಾಂಡವರ ಮುದದಿಂದ ತಂದು ಇಳಿಸೆಂದ ೪
ಚದುರ ರಾಮೇಶನು ಮಡದಿಯರೆದುರಿಗೆಮುದದಿ ದ್ರೌಪತಿಯ ಕರೆಯೆಂದಮುದದಿ ದ್ರೌಪತಿಯ ರಂಗಯ್ಯ ಕರೆಯೆಂದ ವಜ್ರದ ಸದನದಿ ತಂದು ಇಳಿಸೆಂದ ೫

೧೬೬
ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ಮಾರ್ಗನೋಡ್ಯಾನೆಂಬೊ ಭಯದಿ ಪ.
ಕೃಷ್ಣರಾಯನ ಬಿಟ್ಟುಎಷ್ಟು ಹೊತ್ತು ಆಯಿತೆಂದುಸಿಟ್ಟು ಬರಧಾಂಗೆ ಸುರರಿಗೆ ಎಷ್ಟು ಸಲುಹಲಿ ಎನುತ ೧
ವೀಕ್ಷಿಸಿ ಎನ್ನ ಮಾರಿಯನುಲಕ್ಷ್ಮಿಯರು ಕೋಪಿಸದಿರಲಿಲಕ್ಷ ಕೋಟಿದ್ರವ್ಯ ದಾನಈ ಕ್ಷಣ ಕೊಡುವೆನೆ ಎನುತ೨
ಮದನಜನೈಯ್ಯನ ದಯವುಮೊದಲ್ಹಾಂಗೆ ಇದ್ದರೆ ನಾನು ಅದ್ಬುತದ್ರವ್ಯ ದಾನ ಬುಧರಿಗಿತ್ತೇನೆ ಎನುತ೩
ಚಿತ್ತಜನೈಯನ ದಯವುಅತ್ಯಂತವಾದರೆ ನಾನು ವಿತ್ತ ಕೋಟಿ ದಾನವನ್ನು ಮತ್ತೆಕೊಡುವೆನೆ ಎನುತ೪
ಇಂದಿರೇಶಗೆ ಅಂಜಿಕೊಂಡುಚಂದ್ರ ಸೂರ್ಯರು ತಿರಗೋರಮ್ಮಚಂದಾದ ನಕ್ಷತ್ರ ಬಂದುಅಂಜಿ ಹೋಗಿವೆ ಎನುತ ೫
ಹರಿಗೆ ಅಂಜಿಕೊಂಡು ಶರಧಿಮರ್ಯಾದಿಲೆ ಇರುವೋ ನಮ್ಮದೊರೆಗೆ ಅಂಜಿಕೊಂಡು ವಾಯುತಿರುಗಾಡುವನಮ್ಮ ಎನುತ ೬
ಅಗ್ನಿಅಂಜಿ ತನ್ನ ದರ್ಪತಗ್ಗಿಸಿ ಕೊಂಡಿಹ ನಮ್ಮಭಾಗ್ಯದರಸು ಅಂಜಿ ಮಳೆಯುಶೀಘ್ರದಿ ಗರೆಯುವನು ಎನುತ ೭
ಹಾಸಿಗ್ಯಾಗುವ ಶೇಷ ಅಂಜಿದಾಸಿ ಆಗುವಳಂಜಿ ಲಕುಮಿದೇಶಕಾಲ ಅಂಜಿ ಒಂದುಲೇಸು ಮೀರ್ಯಾವೆ ಎನುತ ೮
ವರಗಿರಿ ವಾಸಗೆ ಅಂಜಿಶೇಷ ಜಗವ ಪೊತ್ತಿಹನಮ್ಮಗರಿಯ ಹರವಿ ಗರುಡ ಅಂಜಿಹರಿಯ ಧರಸಿಹನೆ ಎನುತ೯
ಸಂಖ್ಯವಿಲ್ಲದ ಗಜಗಳಂಜಿಫಕ್ಕನೆ ನಿಂತಿಹ ವಮ್ಮದಿಕ್ಪಾಲಕರು ಅಂಜಿ ತಮ್ಮದಿಕ್ಕು ಕಾಯುವರು ಎನುತ ೧೦
ನದ ನದಿಗಳಂಜಿಕೊಂಡು ಒದಗಿಮುಂದಕ್ಕೆ ಹರಿವೋವಮ್ಮಸುದತೆ ವೃಕ್ಷ ಅಂಜಿಪುಷ್ಪಫಲವ ಕೊಡುವೊವೆ ಎನುತ ೧೧
ಕಂತು ನೈಯನ ಅರಸುತನಎಂಥದೆಂದು ಬೆರಗುಬಟ್ಟುನಮ್ಮಂಥಾ ಒಣ ಬಳಗಅಂಜಿಲಿವೋದು ಕಾಂತೆ ಅರುವನೆ ಎನುತ ೧೨
ರಮಿ ಅರಸಗಂಜಿಕೊಂಡು ಬ್ರಮ್ಹ ಸೃಷ್ಟಿ ಮಾಡೋನಮ್ಮಸುಮ್ಮನೆ ಸುರರೆಲ್ಲ ಕೂಡಿದಮ್ಮಯ್ಯ ಎನಲೆಂದು ಹರಿಗೆ೧೩

೧೩೬
ದುಂಡುಗಟ್ಟಿ ನಿಂತರಮ್ಮದುಂಡುಗಟ್ಟುತ ಎಲ್ಲರೂದುಂಡುಗಟ್ಟುತ ಪೆಂಡೆಯಗೆಜ್ಜೆಗಳು ಘಿಲ್ಲು ಘಿಲಕು ಎನ್ನುತ ಪ.
ಕೋಗಿಲಂತೆ ಸ್ವರವನೆತ್ತಿಬಾಗಿ ಬಳಕುತ್ತ ಎಲ್ಲರೂಬಾಗಿ ಬಳುಕುತ್ತ ನಾಗವೇಣಿಯರುಚಂದ್ರನ್ಹಾಂಗೆ ಒಪ್ಪುತ ಚಂದ್ರನ್ಹಾಂಗೆ ಒಪ್ಪುತ೧
ಚಿತ್ರ ಚಕೋರದಂತೆ ನಲಿದು ನರ್ತನಾಡುತ ನಲಿದು ನರ್ತನಾಡುತ ಹಸ್ತವೆಂಬೊ ಕಮಲ ಮುದದಿ ಎತ್ತಿಮುಗಿಯುತರಂಗಗೆ ಎತ್ತಿ ಮುಗಿಯುತ ೨
ಲಕುಮೇಶನಲ್ಲೆ ಸ್ನೇಹ ಉಕ್ಕಿ ಚೆಲ್ಲುತ ಶರದಿ ಉಕ್ಕಿಚಲ್ಲುತ ಅಕ್ಕನೇತ್ರವೆಂಬೊ ಕುಮುದ ಚಕ್ಕನೆ ಅರಳುತ ಚಕ್ಕನರಳುತ ೩
ರಂಗನಂಫ್ರಿಗೆರಗುವಂತೆ ಭೃಂಗವಾಗುತ ಎರಗಿಭೃಂಗವಾಗುತ ತಮ್ಮಅಂಗ ಮರೆದು ಮುದದಿಉತ್ತುಂಗರಾಗುತ ಉತ್ತುಂಗರಾಗುತ೪
ಹರವಿದ ಕ್ಯಾದಿಗೆಯು ನವಿಲು ಗರಿಯಂತೊಪ್ಪುತ ನವಿಲುಗರಿಯಂತೊಪ್ಪುತ ಶ್ರೀ ರಾಮೇಶನೆಂಬೊ ಮುಗಿಲಿಗೆ ಪರಿವೆ ನಲಿಯುತ ಪರಿವೆನಲಿಯುತ೫

ಬೊಮ್ಮಕಂಡು ಕೋಪಿಸಿ ಶಾಪಝಮ್ಮನೆ ಕೊಟ್ಟನು :
೧೮೬
ದೂತೆ ಕೇಳ ದ್ರೌಪತಿಯ ಖ್ಯಾತಿ ಕೇಳಿದ ಮನುಜರಿಗೆ
ಪಾತಕ ದೂರಾಗೊದೆಂಬೋ ಮಾತು ನಿಜವಮ್ಮ ಪ.
ಉಮಾಶಚಿ ಶಾಮಲಾ ಉಷೆ ತಮ್ಮ ಪತಿಗಳ ಬೆರೆದು ರಮಿಸೆ
ಬೊಮ್ಮ ಕಂಡುಕೋಪಿಸಿ ಶಾಪ ಝಮ್ಮನೆ ಕೊಟ್ಟಾನು1
ಪರಮ ಮದದ ಬಾಲೆಯರಿವರು ಪರ
ಪುರುಷನ ಬೆರೆಯಲ್ಯಾಂಗೆ
ನರದೇಹ ಬರಲೆಂದು ಬೊಮ್ಮಗೆ ನಾಲ್ವರು ನುಡಿದರು ೨
ಚಂದಾಗಿ ನಾಲ್ವರ ದೇಹ ಒಂದೇ ಮಾಡಿ ತೋರೆ ಬೊಮ್ಮಗ
ಬಂದವು ಮೂರು ನರದೇಹಗಳ ಲೊಂದಾಗಿರಲೆಂದು ೩
ತಪ್ಪು ನಮ್ಮದೆಂದು ಶಾಪ ಒಪ್ಪಿಕೊಂಡು ನಾಲ್ವರು
ಜಪಿಸಿ ಸಾವಿರ ವರುಷ ಗೌಪ್ಯದಿ ಭಾರತಿಯ4
ಬಂದು ಮೊರೆಯ ಪೊಕ್ಕವರ ಚಂದಾಗಿ ದೇಹದಲ್ಲಿಟ್ಟು
ಅನಂದದಿಂದ ವಿಪ್ರಕನ್ಯೆ ಎಂದು ಜನಿಸಿದಳು5
ಎಲ್ಲರ ಕರ್ಮ ಒಂದಾಗಿ ಎಲ್ಲೆಲ್ಲೆ ಭಿನ್ನ ತೋರಧಾಂಗೆ
ಫುಲ್ಲನಾಭನ ದಯವ ಪಡೆದಳು ಅಲ್ಲೆ ಆ ಬಾಲೆ ೬
ಮುದ್ಗಲ ನೆಂತೆಂಬೊ ಋಷಿಯು ಬಿದ್ದು ನಕ್ಕ ಬ್ರಹ್ಮನ ಕಂಡು
ಮುದ್ದು ಮಗಳ ರಮಿಸಿದಾತಗೆ ಬುದ್ಧಿಯಿಲ್ಲವೆಂದು7
ತ್ವರೆಯಿಂದ ಬೊಮ್ಮ ಮುನಿಗೆ ಬೆರಿಯೆ ಭಾರತಿಯ ಕಂಡು
ಕರವ ಮುಗಿದು ಎರಗಿ ಮುನಿಯು ಮೊರೆಯ ಹೊಕ್ಕಾನು ೮
ಮಾರುತನ ದೇಹದಲ್ಲೆ ಭಾರತಿಯು ರಮಿಸುವಾಗ
ಹಾರಿತಯ್ಯ ಸ್ಮ್ರತಿಯು ಸುಖವು ತೋರದು ನಮಗಿನ್ನು ೯
ಮಂದಗಮನೆಯರಿಂದ ಭಾರತಿ ಇಂದ್ರ ಸೇನಳಾಗಿ ಜನಿಸೆ
ಬಂದ ಮರುತ ದೇಹದ ಮುನಿಯು ಚಂದದಿ ಮದುವ್ಯಾದ ೧೦
ಮರುತ ಅಕೆÉಯಿಂದ ರಮಿಸ ಮಾರುತದೇಹದ ಮುನಿಯು ಏನು
ಗುರುತು ಇಲ್ಲಧಾಂಗೆ ಆತ ಇರುತಲಿದ್ದನು11
ಬಾಲೆಯ ಸಂತೋಷ ಪಡಿಸಿ ಮೂಲ ರೂಪ ಕಂಡುವಾಯು
ಮ್ಯಾಲ ವನಕೆ ನಡೆದ ಮುನಿಯು ಆ ಕಾಲದಲೆಚ್ಚತ್ತು12
ಇಂದ್ರಸೇನ ಬಂದು ಆಗ ಇಂದಿರೇಶನದಯವ ಪಡೆಯೆ
ನಂದಿವಾಹನ ನಮ್ಮ ಪತಿಯ ವಂದಿಸೆಂದಾರು ೧೩
ಪತಿಯ ಬಯಸಿದ ಬಾಲೆಯರಿಗೆ ಚತುರ್ವಾಹ ನುಡಿದನು ಶಿವನು
ಅತಿಶಯ ರೋದನವ ಮಾಡೆ ಮಿತಿ ಇಲ್ಲದಲೆ ಅಂಜಿ14
ಮಂದಗಮನೆಯ ಧ್ವನಿಯಕೇಳಿ ಬಂದ ಇಂದ್ರ ಬಹಳದಯದಿ
ಬಂದಿತೆನಗೆ ಇಂಥ ಕ್ಲೇಶ ಎಂದು ನುಡಿದಳು ೧೫
ಬಂದು ವರವ ಬೇಡಿ ಪತಿಗಳ ಹೊಂದಿರೆಂದು ನಾಲ್ಕುಬಾರಿ
ಬಂದಿತೆಮಗೆ ಇಂಥ ಕ್ಲೇಶ ಎಂದು ನುಡಿದಳು16
ಇಂಥ ಅನ್ಯಾಯ ಯಾಕೆಂದು ನಿಂತ ಒಟುಗೆ ನುಡಿದ ಇಂದ್ರ
ಭ್ರಾಂತ ನರನ ನಿಂದೆ ಶಚಿಯ ಕಾಂತೆಗೆ ಶಿವನು ೧೭
ನಾನು ಸೃಷ್ಟಿ ಮಾಡಿದವನು ನೀನು ಏನು ನುಡಿದ ಶಿವನು
ಮಾನವನಾಗೊ ಬೊಮ್ಮಗ ತಾನು ಆತಗೆ18
ಉಮಾ ಮೊದಲಾದವರಿಗೆಲ್ಲ ತಮ್ಮ ಪತಿಗಳ ಹೊಂದಿರೆಂದ
ಉಮಾ ನಿಮ್ಮ ಬೆರಿಯ ಬ್ಯಾಡ ಸುಮ್ಮನೆ ಹೋಗೆಂದ ೧೯
ಎತ್ತು ಗಿರಿಯ ಕೆಳಗ ಇದ್ದ ಮತ್ತÀ ನಾಲ್ವರ ನೋಡೆ
ಸತ್ತ ಎಂದು ತಿಳಿಯೋ ನಿನ್ನ ಚಿತ್ತಕತಾ ಎಂದು20
ಕೇಳಿದ ಬೊಮ್ಮನ ನುಡಿಯು ತಾಳಿದ ಬಾಲಿಯರು ಬೆರೆದು
ಬಹಳ ಪ್ರೇಮದಿಂದ ಭಾರತಿ ಇಳಿದಳು ಬಂದು ೨೧
ರಾಮೇಶನ ಕ್ಲುಪ್ತ ತಿಳಿದು ಭೀಮಸೇನನಾದ ವಾಯುಕಾಮಿನಿಯರ ಸಹಿತ ದ್ರೌಪತಿ ಪ್ರೇಮದಿ ಜನಿಸಿದಳು22

೨೪೭
ದೇವಿವರಲಕ್ಷ್ಮಿ ಭಕ್ತರ ಕಾಯ್ವಿ
ಕರುಣದಿ ವರವ ನೀಡಿ ಪ.
ಸಿಂಧುಶಯನನ ದಯೆ
ಎಂದೆಂದು ಬಿಡದಂತೆ
ಚಂದದಿ ಕರುಣಿಸೆ ಇಂದಿರೆ ನಮಗೆ ೧
ಮಂದಗಮನೆಯರು ತಂದ
ಮಂದಾರ ಮಲ್ಲಿಗೆ
ಗಂಧ ಕುಂಕುಮದಿಂದ ಚಂದಾಗಿ ಅರ್ಚಿಸೆದೇವಿ ೨
ಮಿತ್ರ ವಿಂದಾದಿಗಳಿಂದ
ಮತ್ತೊಮ್ಮೆ ಲಕುಮಿಯೆ
ಮುತ್ತು ರತ್ನದ ವಸ್ತ ವಸ್ತ್ರ ವೀಳ್ಯವ ಕೊಳ್ಳದೇವಿ ೩
ನಗಧರ ರಾಮೇಶನು
ಅಗಲದಂತೆ ನಮ್ಮಮುಗಿದೇವ ಕರಗಳ ನಗೆಮುಖದ ಗೌರಿ ನೀ ದೇವಿ ೪

೧೬೭
ದೊರೆ ಧರ್ಮಗೆ ಶಿರವ ಬಾಗಿ ಕರವ ಮುಗಿದು ಹೇಳಿದೆ ನಾ ಕರವ ಮುಗಿದು ಹೇಳಿದೆ ಹರಿಯ ಭಕ್ತರ ಸಿರಿಯ ದ್ವಾರಕೆ ದೊರೆಗೆ ಎರಗುವೆನೆಂದಳು ಶ್ರೀ ಹರಿಗೆ ಎರಗುವೆನೆಂದಳು ಪ.
ಇಂದು ನಮ್ಮ ಮಂದಿರಕ್ಕೆ ಮಂದಗಮನೆಯರಿಂದಲೆ ರಂಗ ಇಂದು ನಿಮ್ಮ ಸುಕೃತ ಬಹಳ ಬಂದುಒದಗಿತೆಂದನು ರಾಯ ಬಂದು ಒದಗಿತೆಂದನು ೧
ಅಂದಮಾತು ಕೇಳಿ ಆನಂದ ಪೂರ್ಣನಾದನು ರಾಯಬಂದ ಜನರು ವೃಂದಾರಕರೆಂದು ಬಂದ ಕೃಷ್ಣ ಎಂದನು ಈಗ ಬಂದ ಸ್ವಾಮಿ ಎಂದನು ೨
ಎಷ್ಟು ಯಜ್ಞವು ಎಷ್ಟು ದಾನವು ಎಷ್ಟು ಜಪ ತಪ ಹೋಮವುಮತ್ತೆ ಎಷ್ಟು ತೀರ್ಥಯಾತ್ರೆ ಫಲಿಸಿತು ಕೃಷ್ಣ ಬಂದನೆಂದು ಈಗ ಕೃಷ್ಣ ಮನೆಗೆ ಬಂದನು ೩
ಧಿಟ್ಟೆರೈವರು ಕೃಷ್ಣನಂಘ್ರಿಯ ಮುಟ್ಟಿ ಮನದಲ್ಲಿಟ್ಟರುಕೃಷ್ಣ ಮನೆಗೆ ಬಂದನೆಂದುಎಷ್ಟು ಹರುಷ ಬಟ್ಟರು ಅವರು ೪
ಏಳು ಜನ್ಮದ ಸುಕೃತದಿಂದ ಈ ವೇಳೆ ಒದಗಿತೆಂದನು ರಾಯ ಕೇಳ ರುಕ್ಮಿಣಿ ಭಾವೆ ಬಂದದ್ದು ಹೇಳಲ್ವಶವೆಎಂದನುರಾಯ ಹೇಳಲ್ವಶವೆ ಎಂದನು ೫
ಫುಲ್ಲನಾ¨ಸ್ನÀ ಪಾದ ಕಾಣದೆ ನಿಲ್ಲಲಾರೆವೆಂದರುಕ್ಷಣ ನಿಲ್ಲಲಾರೆವೆಂದರು ಚಲ್ವ ರಂಗನ ಬದಿಲೆ ಬಂದು ನಿಲ್ವೆವೀಗ ಎಂದನು ರಾಯ ೬
ಏಸು ಜನ್ಮದ ಸುಕೃತದಿಂದ ರಾಮೇಶಬಂದನೆಂದನು ಸರ್ವೇಶ ಬಂದನೆಂದನು ವಾಸುದೇವರ ಪಾದಕಾಂಬುವೆ ಈ ಸಮಯದೊಳು ಎಂದನುರಾಯ ೭

೨೪೫
ದೊರೆಗಳಿಗೆ ಯದುಪತಿ ಗರವು ಹಮ್ಮನೆ ಬಿಟ್ಟು
ಬರಬೇಕು ಎಂದು ಹಸೆಮೇಲೆ
ಹಸೆ ಮೇಲೆ ಹರುಷದಲೆ
ಮುದದಿ ಪಾಂಡವರು ಬರಬೇಕು ಪ.
ನೂರು ಸೂರ್ಯನ ಬೆಳಕಿನ
ಥೋರ ಮುತ್ತಿನ ಹಸೆಗೆ
ವೀರಪಾಂಡವರು ಬರಬೇಕು
ಬರಬೇಕು ಎನುತಲೆ
ನಾರಿ ರುಕ್ಮಿಣಿಯು ಕರೆದಳು1
ಮತ್ತೆ ಸೂರ್ಯನ ಬೆಳಕಿಲಿ
ವಿಸ್ತರಿಸಿದ ಹಸೆ ಮ್ಯಾಲೆ
ಚಿತ್ತೈಸಬೇಕು ಐವರು
ಚಿತ್ತೈಸಬೇಕು ಐವರು ಎನುತಲಿ
ಸತ್ಯಭಾಮೆಯು ಕರೆದಳು ೨
ಥೋರ ಮುತ್ತಿನ ಹಸೆಗೆ
ಚಾರು ರತ್ನವ ರಚಿಸಿ
ವೀರ ಪಾಂಡವರ ಕರೆದರು
ವೀರ ಪಾಂಡವರ ಕರೆದರು
ಆರು ನಾರಿಯರು ಹರುಷದಿ ೩
ಹದಿನಾರು ಸಾವಿರ ಚದುರೆಯರು
ಹರುಷದಿ ಅದ್ಬುತವಾಗಿ
ಬೆಳಗೋಹಸೆ ಮೇಲೆ
ಅದ್ಬುತ ಬೆಳಗೊ ಹಸೆಮೇಲೆ
ಮುದದಿ ಪಾಂಡವರ ಕರೆದರು ೪
ವೀರ ರಾಮೇಶನ ತಂಗಿಯರು
ಪೋರ ಬುದ್ಧಿಯಬಿಟ್ಟು
ನಾರಿಯರು ಬನ್ನಿರಿ ಹಸೆ ಮ್ಯಾಲೆ
ಹಸೆ ಮ್ಯಾಲೆ ಹರುಷದಿ
ನೂರು ನಾರಿಯರು ಕರೆದರು ೫

೧೭೨
ಧನ್ಯ ಧನ್ಯ ರಾಯ ಮಾನ್ಯ ಮಾನ್ಯವೀತ ಮುನ್ನಾರು ಸರಿಯಿಲ್ಲಮುನ್ನೆಲ್ಲ ಕೆಲದಿ ಕೃಷ್ಣನ ಪ್ರಿಯ ಪ.
ಕಾಮ ಕ್ರೋಧಗಳೆಲ್ಲ ಸೀಮೆಯ ದಾಟಿಸಿಭೂಮಿಯನಾಳುವನೆಪ್ರೇಮದಿರಾಯ ೧
ಚಲ್ವನರಾಜ್ಯದಿ ಇಲಿಗೆ ಬೆಕ್ಕಿಗೆ ಹಿತ ಹುಲಿಗೆ ಮೊಲಕೆ ಹಿತ ಬಲು ಕೌತುಕವ೨
ಅಪ್ಪನ ರಾಜ್ಯದಿ ಸರ್ಪಕಪ್ಪೆಗೆ ಹಿತ ತಪ್ಪು ಗುಣಗಳೆಲ್ಲ ಒಪ್ಪರು ಕೆಲದಿ ೩
ಮಾನ್ಯನ ರಾಜ್ಯದಿ ಆನೆ ಸಿಂಹಕೆ ಹಿತ ಏನೆಂಬ ಸವತೆಯರ ಹೀನತೆ ಇಲ್ಲ೪
ಮುನ್ನ ಕಲಿಯಕಟ್ಟಿ ಚನ್ನರಾಮೇಶನಅನಂತ ದಯಪಡೆದ ಉನ್ನತಿ ನೋಡ ೫

೨೩೫
ಧನ್ಯರೆ ನೀವು ಧನ್ಯರೆ
ಪನ್ನಂಗ ಶಯನನ ಕನ್ಯೆಯರು
ನಮಮ್ಯಾಲೆ ಅನಂತ ದಯಮಾಡಿ
ಮನ್ನಿಸಿ ಬನ್ನಿರಿ ಪ.
ಇಂದಿರಾ ದೇವಿಯರು ಕುಂದುನೋಡದೆ
ನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪತಿಯು ೧

ಮುದ್ದು ಪಾದಕೆ ನಾನು ಬಿದ್ದು ಬೇಡುವೆ
ದಯೈದ್ದರೆ ಬಾ ಅನಿರುದ್ಧನ ರಾಣಿ2
ಕಡು ಬ್ಯಾಗ ಸುಭದ್ರಾ ಅಡಿಗೆರಗುತ
ಕರಹಿಡಿದು ರಾಮೇಶನ ಮಡದಿ ಬಾರಮ್ಮ ೩

೯೮
ಧೀರ ಶೂರನ್ನ ಗುಣಗಂಭೀರ ಶೂರನ್ನಪೋರತನದ ಈ ನಾರಿಯರನೆಚ್ಚದಿರು ವೀರ ಶೂರನ್ನ ಪಲ್ಲ
ಎಲ್ಲ ಮಂಗಳಕಾರ್ಯ ಕಲ್ಲು ಒರಳು ಪೂಜೆ ಬಲ್ಲನಾರಿಯರು ನಗದಿರಿಬಲ್ಲ ನಾರಿಯರು ನಗದಿರಿ ಲಕ್ಷ್ಮಿವಲ್ಲಭಇದಕೆ ಒಲಿಯಲಿ ೧
ಪಂಕಜ ಮುಖಿಯರ ಗರುವ ಕಲ್ಲೊಳು ತುಂಬಿ ಕುಂಕುಮ ಮಾಡಿ ಅರೆದೆವಕುಂಕುಮ ಮಾಡಿ ಅರೆದು ಬೀಸಿದೆವಮ್ಮ ಪಂಕಜನಾಭ ಒಲಿಯಲಿ೨
ಸರಸಿಜಾಕ್ಷಿಯರ ಗರುವು ತರಿಸಿಕಲ್ಲೊಳು ತುಂಬಿ ಅರಿಷಿಣ ಮಾಡಿ ಅರೆದೆವ ಅರಿಷಿಣ ಮಾಡಿ ಅರೆದು ಬೀಸಿದೆವಮ್ಮಸರಸಿಜನಾಭಒಲಿಯಲಿ ೩
ಮಂದಗಮನೆಯರ ಗರ್ವ ತಂದು ಕಲ್ಲೊಳು ತುಂಬಿ ಗಂಧವ ಮಾಡಿ ಅರೆದೆವಗಂಧವ ಮಾಡಿ ಅರೆದು ಬೀಸಿದೆವಮ್ಮಇಂದಿರೆಯರಸು ಒಲಿಯಲಿ೪
ಧಿಟ್ಟೆರಿಬ್ಬರ ಗರವು ಅಷ್ಟುಕಲ್ಲೊಳು ತುಂಬಿ ಬುಕ್ಕಿಟ್ಟು ಮಾಡಿ ಅರೆದೆವಬುಕ್ಕಿಟ್ಟು ಮಾಡಿ ಅರೆದು ಬೀಸಿದೆವಮ್ಮ ಧಿಟ್ಟ ರಾಮೇಶ ಒಲಿಯಲಿ ೫

ಆಪನೊಳು ಮನೆಕಟ್ಟಿ
೨೦
ನಂದ ಯಶೋದೆಯರಲ್ಲಿ ಬಂದು ಅವತರಿಸಿದ ಇಂದಿರಾಪತಿಯ ಮಹಿಮೆಯನಲುವಿನಿಂದ ಚಂದವನೆಲ್ಲ ರಚಿಸಿದ ಪ.
ದೇವನಾರಾಯಣ ಭೂದೇವಿ ಮೊರೆ ಕೇಳಿ ದೇವಕಿಯಲ್ಲಿ ಅವತರಿಸಿದ ದೇವಕಿದೇವಿಯಲ್ಲಿ ಅವತರಿಸಿದ ಧರಾದೇವಿ ಭಾರವನೆಲ್ಲ ಇಳಿಸಿದ೧
ದುಷ್ಟ ದೈತ್ಯರನಟ್ಟಿ ಆಪನೊಳು ಮನೆಕಟ್ಟಿಪಟ್ಟದ ರಾಣಿಯರ ಒಯ್ದಿಟ್ಟಪಟ್ಟದ ರಾಣಿಯರ ಒಯ್ದಿಟ್ಟ ಶೌರ್ಯವ ಎಷ್ಟು ವರ್ಣಿಸಲ್ಪಶವಲ್ಲ ೨
ಹರಿಯು ವೈಕುಂಠದ ಪರಿಯ ತೋರುವೆನೆಂದುಧರೆ ಮೇಲಾಗ ಜನಿಸಿದ ಧರೆ ಮೇಲಾಗ ಜನಿಸಿದ ದ್ವಾರಕಾಪುರನಿರ್ಮಿಸೆಂದು ಜಲದೊಳು ೩
ದೊರೆ ಕೃಷ್ಣಯ್ಯನ ಹಿರಿ ಮಡದಿಮನೆಪರಿಯ ವರ್ಣಿಸಲು ವಶವÀಲ್ಲಪರಿಯ ವರ್ಣಿಸಲು ವಶವಲ್ಲ ದ್ವಾರಕಾಸಿರಿಕೇಳಿ ಬ್ರಹ್ಮ ಬೆರಗಾದ೪
ಅಪ್ಪ ರಾಮೇಶನು ಇಪ್ಪಂಥ ಅರಮನೆಯುಅಪ್ರಾಕೃತ ವೈಕುಂಠಅಪ್ರಾಕೃತ ವೈಕುಂಠ ವೆಂಬೋದುಸುಪ್ರಕಾಶವಾಗಿ ಹೊಳೆದೀತು೫

೨೩೯
ನಕ್ಕರಮ್ಮ ಕೆಲದೆಯರು
ಸಖ್ಯದಿಂದ ಕೈ ಹೊಯ್ದುಪ.
ಚಿಕ್ಕ ಸುಭದ್ರೆ ಬರೆಸಿದ ಚಿತ್ರಕ್ಕೆ
ಅಕ್ಕಜ ಬಟ್ಟಾರವರು ಭಾಳಾಪ
ಶೌರಿ ಕೃಷ್ಣನರಸಿಯರು ಗೌರಿಯ ಕಂಡರು
ತೋರುತಿರೆ ಬರೆಸಿದ ಚಿತ್ರ ನೀರೆ ನೀನು ವರ್ಣಿಸಲೆಂದು ೧
ನಾರಿ ಬರೆಸಿದ ಗೊಂಬೆನೋಡೆ ನೀರೊಳು ಹರಿದಾಡತಾವೆ
ಮಾರಿ ಸಣ್ಣದು ಮಾಡಿ ಭಾಳೆ ಭಾರಪೊತ್ತು ಭೋರ್ಯಾಡುತಾವೆ ೨
ನಲ್ಲೆನೆಲವ ಕೆದರೋದೊಂದು ಹಲ್ಲು ತೆರೆದು ಬೇಡೋದೊಂದು
ಕಲ್ಲು ಮನದಿಕೊಡಲಿ ಎತ್ತಿ ನಿಲ್ಲಗೊಡದೆ ಜನನಿಯ ೩
ಮಡದಿಯ ಒಲ್ಲದ್ದೆಂದು ಕಿಡಿಗೇಡಿ ಪುರುಷನೊಂದು
ಕಡುಬತ್ತಲೆಯಾದದ್ದೊಂದು ಹಿಡಿದೇಜಿ ಏರೋದೊಂದು ೪
ವೀರತನವೆಲ್ಲ ನೀಗಿ ನಾರಿರೂಪ ಆದದ್ದೊಂದು
ಆ ರಾಮೇಶನ ಹಾಡಿಪಾಡಿ ಸಾರಿ ಸಾರಿ ಹೊಗಳೋದೊಂದು ೫

೫೪
ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ಬಗೆಯ ಕಾಣೆರಂಗ ಪ.
ಅನ್ಯಾಯ ನ್ಯಾಯವೆಂಬುದಿನ್ನು ನೀ ಅರಿಯೆಲೊಮನ್ನೆಯಳ ವೀಳ್ಯ ಹಿಡಿದೆಯಲ್ಲೊನೀ ಹಿಡಿದೆಯಲ್ಲೊ ರಂಗ೧
ಭರದಿ ಕೋಪಿಸಿ ಭೀಷ್ಮ್ಮೆ ತಿಳುವಳಿಕೆ ನಿನಗಿಲ್ಲಹರದೆಯರಿಬ್ಬರು ಎನಗೆ ಸರಿಯರಲ್ಲಎನಗೆ ಸರಿಯರಲ್ಲ ಭೀಷ್ಮ್ಮೆ ದೂರುವರೇನೆ೨
ಹೀಂಗೆ ಯಾರೂ ನಗರೇನ ಭೀಷ್ಮ್ಮೆಇರುವೆಗಿಂತ ಕಡಿ ಮಾಡಿದೆಲ್ಲಎನ್ನ ಕಡಿಮಾಡಿದೆಲ್ಲ ೩
ಅತಿ ಕೋಪದಿಂದ ಭೀಷ್ಮೆ ಸ್ರ‍ಮತಿಯಿಲ್ಲ ನಿನಗಿನ್ನುಸತಿಯರಿಬ್ಬರು ಎನಗೆ ಸರಿಯರಲ್ಲಎನಗೆ ಸಮರಲ್ಲ೪
ಅಕ್ಕ ತಂಗಿಯರೆಂಬೊ ದಿಕ್ಕಿನ ಮೂಲೆಗೆ ಬೆಕ್ಕಿನಕಿಂತ ಕಡಿ ಮಾಡಿದೆಲ್ಲೊಎನ್ನ ಮಾಡಿದೆಲ್ಲೊ ರಂಗಾ ೫
ವಾರಿಜಾಮುಖಿ ಎನಗೆ ಯಾರು ಹಿರಿಯರು ಹೇಳೆನಾರಿಯರಿಬ್ಬರು ಎನಗೆ ಪೊರರಲ್ಲಎನಗೆ ಪೊರರಲ್ಲ್ಲ ೬
ಹುಡುಗಿಯರೆಂಬುವನುಡಿಯ ಕೇಳುತ ಭೀಷ್ಮಿಕಡುಹರುಷ ಬಡುತಲೆ ಮನದೊಳಗೆತನ್ನ ಮನದೊಳಗೆ೭
ಕೃಷ್ಣನ ಮಡದಿಯರು ಎಷ್ಟು ಗುಣವಂತರೆಂದುಅಷ್ಟ್ಟೂರಕ್ಕಿಂತ ಮೊದಲೆ ಮದಿವ್ಯಾದೆನಿಮ್ಮನ್ನು ಮದುವ್ಯಾದೆ೮
ಸಿಟ್ಟು ಬಿಟ್ಟಿಬ್ಬರು ಕೃಷ್ಣ ನಮ್ಮವನೆನ್ನಿಧಿಟ್ಟಿ ರಾಮೇಶ ಸಕಲೇಷ್ಟವೆನ್ನಿಸರ್ವೇಷ್ಟವೆನ್ನಿ೯

೨೫೯
ನಡೆರಂಗ ನಡೆ ಕೃಷ್ಣ ನಡೆ ಮನೆಗೆ
ಧೃಡ ಭಕ್ತರ ಕೂಡಿ ದ್ವಾರಕೆಗೆ ಪ.
ಬಂದ ಜನರಿಗೆಲ್ಲ ಗಂಧ ಕುಂಕುಮವನಿಟ್ಟು
ತಂದು ತಾಂಬೂಲ ಕೊಡುತಲೆ
ತಾಂಬೂಲ ಕೊಡುತಲೆ ರುಕ್ಮಿಣಿ
ಕುಂದವ ಮಾಡಿ ಬಗೆಯದೆ ೧
ಮಿತ್ರೆ ದ್ರೌಪತಿದೇವಿ ಮತ್ತೆ ಪಾದಕ್ಕೆರಗಿ
ಅತ್ಯಂತ ನಾವು ನುಡಿದೆವ
ಅತ್ಯಂತ ನಾವು ನುಡಿದ ಅಪರಾಧವ
ಚಿತ್ತದೊಳಿಡದೆ ಕರುಣಿಸು ೨
ಅರಗಿಳಿ ಮಾತಿನ ಹರದಿ ಸುಭದ್ರಾ ತಾನು
ಎರಗಿದಳು ಭಾವೆ ಚರಣಕ್ಕೆ
ಎರಗಿದಳು ಭಾವೆ ಚರಣಕ್ಕೆ ರುಕ್ಮಿಣಿಯ
ಪರಮ ಆಶೀರ್ವಾದ ಇರಲೆಂದು3
ಅತ್ತಿಗೆಯರೆಂದು ಅರ್ಥಿಲಾಡಿದ ಮಾತು
ಮತ್ತೊಂದು ನೀವು ತಿಳಿಯದೆ
ಮತ್ತೊಂದು ನೀವು ತಿಳಿಯದೆ ರಂಗನ
ಮಿತ್ರೆಯರೆ ನಿಮ್ಮ ದಯವಿರಲಿ4
ಬಂದು ಪಾಂಡವರೆಲ್ಲ ಇಂದಿರೇಶಗೆ ಎರಗಿ
ಚಂದಾಗಿ ತಾವು ಕೈ ಮುಗಿದು
ಚಂದಾಗಿ ತಾವು ಕೈ ಮುಗಿದು ನುಡಿದರು
ಕುಂದುಗಳೆಣಿಸದೆ ಸಲುಹೆಂದು5
ಭಾವ ಮೈದುನತನದಿ ನಾವೊಂದು ವಿನಯದಿ
ಯಾವ ತಪ್ಪುಗಳ ಎಣಿಸದೆ
ಯಾವ ತಪ್ಪುಗಳ ಎಣಿಸದೆ ಶ್ರೀ ಕೃಷ್ಣ
ದೇವ ನೀ ಮಾಡೊ ದಯವನೆ6
ತಂದೆ ರಾಮೇಶಗೆ ನಾವಂದ ಮಾತುಗಳೆಲ್ಲ
ಕುಂದವ ಮಾಡಿ ಬಗೆಯದೆ
ಕುಂದವ ಮಾಡಿ ಬಗೆಯದೆ ನಮ್ಮನೆಗೆ
ಬಂದು ಬಂದೊಮ್ಮೆ ಸಲುಹಯ್ಯ7

ನಿಜನಾರಿ ಕಳಕೊಂಡು :
೧೯೪
ನಮ್ಮ ಬಿಲ್ಲು ಕಂಡು ಬಹಳ ಭೀತಿ ಪಡುವ
ಕೃಷ್ಣ ನಿಲ್ಲಲಿ ತಾಸು ನಿಲ್ಲಲಿ ಪ.
ವೀರನೆ ಯುದ್ಧಕ್ಕೆ ಬಾರೆಂದು ಕರೆದರೆ
ನೀರೊಳಗೆ ಚರಿಸುವ ಮಾರಿ ಸಣ್ಣದು ಮಾಡಿ ೧
ಶರವ ಧರಿಸಿ ನಮ್ಮ ಸರಿಗೆ ಬಾ ಎಂದರೆ
ಕರಕರ ಹಲ್ಲು ತಿಂದು ತೆರೆವ ತನ್ನ ಉರಿಬಾಯಿ2
ದೊರೆತನ ಕಳಕೊಂಡ ತಿರುಕತನದಿ ತಾಯಿಯ
ಕರಕರ ಬಡಿಸುವ ಮರುಕು ಇಷ್ಟ ಇವಗ್ಯಾಕ ೩
ಅಜಗಳ ಪುರುಷನೆ ನಿಜನಾರಿ ಕಳಕೊಂಡು
ಗಜಗಮನೆಯರಿಗೆಲ್ಲ ನಿಜಪತಿ ನಾನೆಂದು ೪
ಬರಿಯ ಬತ್ತಲೆ ಪುರುಷ ಸರಿಯಲ್ಲ ನಮಗಿವ ಸಿರಿ ರಮಿ ಅರಸಗೆ ಈ ತುರುಗ ತಂಬಟಿಯಾಕ ೫

೧೪೬
ನಲ್ಲೆಯರು ನಮೋ ಎಂಬೆವು ಸುರರಎಲ್ಲರ ಬಲಗೊಂಬೆವು ಪ.
ಚಲ್ವೆ ಕಂಗಳೆಯರಿಗೆ ಹೊಲ್ಲವು ಎನುತಿರೆಹೊಲ್ಲ ತನವೆಲ್ಲ ಹೊರಗ್ಹಾಕಿ ಬಾಹೊಅ.ಪ.
ಜಗದುದರನ ನಾವು ಹೆಗಲಲ್ಲಿ ಧರಿಸುತ ಅಗಣಿತ ಮಹಿಮ ಹೌದೆಂದುಅಗಣಿತ ಮಹಿಮಎನುತಿರೆಮಗನ ಮುಂದಾಗಿ ಬಲಗೊಂಬೆ೧
ಸಾಗರಶಯನಗೆ ಆಗುವ ಹಾಸಿಗೆ ಬ್ಯಾಗನೆ ವರವ ಕೊಡುವೋನುಬ್ಯಾಗನೆ ವರವ ಕೊಡುವ ನಾಗೇಂದ್ರನಮೋ ಎಂಬÉ ನಮ್ಮ ಗೆಲಿಸೆಂದು ೨
ನಂದಿವಾಹನ ಶಿವನ ಮುಂದಾಗಿ ಬಲಗೊಂಬೆ ಇಂದಿಗೆ ಪಂಥಗೆಲಿಸೆಂದುಇಂದಿಗೆ ಪಂಥಗೆಲಿಸೆಂದು ಬ್ರಹ್ಮನ ಕಂದನ ಮೊದಲೆ ಬಲಗೊಂಬೆ ೩
ಸೌಪರ್ಣವಾರುಣಿ ಅಪರ್ಣ ದೇವಿಯರು ಸೌಕರ್ಯದಿಂದ ನಮ್ಮ ಪಂಥಸೌಕರ್ಯದಿಂದ ನಮ್ಮ ಪಂಥಗೆಲಿಸೆಂದುಕರವ ಮುಗಿವೆವು ಕ್ಷಣಕ್ಕೊಮ್ಮೆ ೪
ಇಂದ್ರ ಕುಮಾರನ ನಾವು ಮುಂದಾಗಿ ಬಲಗೊಂಡುಇಂದು ರಾಮೇಶನನುಗಾಲ ಇಂದು ರಾಮೇಶನನುಗಾಲ ನೆನೆಯುತ ಮುಂದಕ್ಕೆ ಹೆಜ್ಜೆನಿಡುವೋಣ೫

೧೪೯
ನವಖಂಡದ ಸ್ವಾಮಿ ಒಂದು ನಮ್ಮಗೆಲಿಸಲಿಶುಕಬುದ್ಧಿ ಬಾಲೆಯರ ಕುಂದುಗೈಸಲಿ ಪ.
ಚನ್ನನಚಾರಿವಾಸ ಮನ್ನಾರಿ ಕೃಷ್ಣನ ಸಹಮುನ್ನ ಪ್ರಯಾಗಿ ಮಾಧವನ ಬಲಗೊಂಬೆವು೧
ಇಳಾ ವರ್ತಾ ಭದ್ರಶಾಮ ಈತನ ಬಲಗೊಂಬೆವುನಾವು ಈತನ ಬಲಗೊಂಬೆವು ಅವರು ನಮ್ಮ ಪಂಥ ಗೆಲಿಸೆಂಬೆವು೨
ಹರಿ ವರುಷ ಕಿಂಪುರುಷ ಭರತ ಖಂಡದಲ್ಲಿದ್ದಭರತ ಖಂಡದಲ್ಲಿದ್ದ ನರಹರಿಯ ಬಲಗೊಂಬೆ ಪಂಥಗೆಲಿಸುವ ಶುದ್ಧ ೩
ಕೇತು ಮೂಲ ಖಂಡದ ಹರಿಯ ಪ್ರೀತಿಲೆ ಬಲಗೊಂಬೆವುಮಾತು ಸೋಲಿಸಿ ಅವರ ನಮ್ಮ ಮಾತುಊಲಿಸೆಂಬೆವು ೪
ರಮ್ಯಕ್ಕೆ ಹಿರಣ್ಮಯ ಈ ಕುರುಖಂಡವೆಂಬೊಕುರುಖಂಡದಲಿ ರಮಿಸಿ ಅಲ್ಲಿರುವ ರಾಮೇಶನ ಬಲಗೊಂಬೆವು೫

೧೮೨
ನಳಿನ ಮುಖಿ ಇಳೆಯಲಚ್ಚುತಗೆ ನಿಮಗೆ
ಹೊಳೆವೊ ಮಂದಿರವ ಪ.
ರಂಗಗೆ ರಚಿಸಿದ ಶೃಂಗಾರದ ವೈಕುಂಠ
ರಂಗು ಮಾಣಿಕದ ಅರಮನೆ
ರಂಗು ಮಾಣಿಕದ ಅರಮನೆ ರಂಗನ
ಮಂಗಳಾದೇವಿಯರು ಇಳಿಯಲಿ೧
ವೀತದೋಷಗೆ ದಿವ್ಯ ಸೇತು ದ್ವೀಪವ ರಚಿಸಿ
ಜಾತಿ ಮಾಣಿಕದ ಅರಮನೆ
ಜಾತಿ ಮಾಣಿಕದ ಅರಮನೆ ರಂಗನ
ಪ್ರೀತಿ ಮಡದಿಯರು ಇಳಿಯಲಿ೨
ಪನ್ನಂಗಶಯನಗೆ ಅನಂತಾಸನ ರಚಿಸಿ
ರನ್ನಮಾಣಿಕದ ಅರಮನೆ
ರನ್ನಮಾಣಿಕದ ಅರಮನೆ ರಂಗನ
ಪನ್ನಿಯರು ಬಂದು ಇಳಿಯಲಿ ೩
ಪಟ್ಟೆ ಮುತ್ತುಗಳ ಬಿಗಿದು ಇಟ್ಟಾವ ಕನ್ನಡಿ
ಧಿಟ್ಟ ತೋರೋದೆ ಜನಕೆಲ್ಲ
ಧಿಟ್ಟ ತೋರೋದೆ ಜನಕೆಲ್ಲ ಕೃಷ್ಣನ
ಅಷ್ಟು ಮಡದಿಯರು ಇಳಿಯಲಿ ೪
ಹಸಿರು ಪಚ್ಚವ ಬಿಗಿದ ಕುಸುರಾದ ಗಿಳಿಬೋದು
ಎಸಕೊ ಮಾಣಿಕದ ಅರಮನೆ
ಎಸಕೋ ಮಾಣಿಕದ ಅರಮನೆ
ದೇವಕಿ ವಸುದೇವ ಬಂದು ಇಳಿಯಲಿ೫
ಮುತ್ತು ಮಾಣಿಕದಿಂದ ತೆತ್ತಿಸಿದ ಅರಮನೆ
ಜತ್ತು ತೋರುವುದು ಜನಕೆಲ್ಲ
ಜತ್ತು ತೋರುವುದು ಜನಕೆಲ್ಲ
ಸರಸ್ವತಿ ಮತ್ತೆ ಚತುರ್ಮುಖನು ಇಳಿಯಲಿ ೬
ಶುದ್ಧ ರತ್ನಗಳಿಂದ ತಿದ್ದಿ ಕಟ್ಟಿದರಮನೆ
ಎದ್ದು ತೋರುವುದು ಜನಕೆಲ್ಲ
ಎದ್ದು ತೋರುವುದು ಜನಕೆಲ್ಲ
ಪಾರ್ವತಿ ರುದ್ರಾದಿಗಳೆಲ್ಲ ಇಳಿಯಲಿ ೭
ಕುಂದಣ ರತ್ನಗಳಿಂದ ಹೊಂದಿ ಕಟ್ಟಿದರಮನೆ
ಅಂಬರಕೆ ಮ್ಯಾಲೆ ತುಳುಕುವ
ಅಂಬರಕೆ ಮ್ಯಾಲೆ ತುಳುಕುವ
ಶಚಿದೇವಿ ಇಂದ್ರಾದಿಗಳೆಲ್ಲ ಇಳಿಯಲಿ ೮
ಹಲವು ಮಾಣಿಕದಿಂದ ಬಲುಶೋಭೆ ತೋರುವ
ಬೆಲೆಯಿಲ್ಲದಂಥ ಅರಮನೆ
ಬೆಲೆಯಿಲ್ಲದಂಥ ಅರಮನೆ
ರೇವತಿ ಬಲರಾಮರು ಬಂದು ಇಳಿಯಲಿ೯
ಒಂಭತ್ತು ಬಗೆ ರತ್ನ ತಂಬಿ ರಚಿಸಿದ ಮನೆ
ಅಂಬರಕೆ ಮೇಲೆ ತುಳುಕುವ
ಅಂಬರಕೆ ಮೇಲೆ ತುಳುಕುವರತಿದೇವಿಸಾಂಬ ಪ್ರದ್ಯುಮ್ನರು ಇಳಿಯಲಿ೧೦
ತಂದೆ ರಾಮೇಶನ ಒಂದೊಂದು ಮನೆ ಸೊಬಗು
ಚಂದ ತೋರುವುದು ಜನಕೆಲ್ಲ
ಚಂದ ತೋರುವುದು ಜನಕೆಲ್ಲಭಾನು ಮಾನು ಬಂದ ಜನರೆಲ್ಲ ಇಳಿಯಲಿ ೧೧

೧೩೨
ನಾಗಲೋಕದ ಕಾಳಿ ಈಗಳೆ ಹಿಡಿಸುತನಾಗವೇಣಿಯರೆಲ್ಲ ಸಾಗಿ ಹೆಜ್ಜೆ ನಿಕ್ಕುತ ಈಗ ನೋಡುಣು ಬಾರೆ ಬ್ಯಾಗಸೆ ದ್ವಾರಕಾಸಾಗರ ಶಯನನಿನ್ನು ಪ.
ಅಂಬುಜಾಕ್ಷನು ತಾನು ಅತಿ ಬೇಗ ಹೊಯ್ಸಿದ ಜಂಬುದ್ವೀಪದ ಜಯಭೇರಿಜಂಬುದ್ವೀಪದ ಜಯಭೇರಿ ಹೊಯಿಸಲು ಕುಂಭಿಣಿ ಜನರೆಲ್ಲ ಕೂಡಿತು ಎಲೆ ಸಖಿ ೧
ಏಳು ಲೋಕದ ಕಾಳಿಭಾಳೆ ರೌಸದಿ ಹಿಡಿಯೆಕಾಳಿ ಮರ್ದನನ ಮನೆಮುಂದೆಕಾಳಿ ಮರ್ದನನ ಮನೆಮುಂದೆ ಹಿಡಿಸಲುಏಳು ಲೋಕದ ಜನ ಮೇಳವ ನಮಗೆ ಎಲೆ ಸಖಿ೨
ಕೋಟಿ ಕೋಟಿ ಹಿಲಾಲು ಥಾಟಾಗಿ ತೋರುವ ಹಾಟಗಾಂಬರನ ಮನೆಮುಂದೆ ಹಾಟಗಾಂಬರನ ಮನೆಮುಂದೆ ಬೆರಗಾಗಿಪಾಟಿಸಿ ನೋಡೋ ಪ್ರಜರೆಷ್ಟ ಎಲೆ ಸಖಿ ೩
ಹತ್ತು ಕೋಟಿ ಹಿಲಾಲು ಜತ್ತಾಗಿ ತೋರುತಚಿತ್ತಜನೈಯನ ಮನೆಮುಂದೆಚಿತ್ತಜನೈಯನ ಮನೆಮುಂದೆ ಬೆರಗಾಗಿಅರ್ಥಿಲೆ ನೋಡೋ ಪ್ರಜರೆಷ್ಟ ಎಲೆ ಸಖಿ೪
ನೂರು ನೂರು ಸಾವಿರ ತೋರುವ ಬಾಣ ಬಿರುಸುವಾರಿಜಾಕ್ಷನ ಮನೆಮುಂದೆ ವಾರಿಜಾಕ್ಷನ ಮನೆಮುಂದೆ ಈ ಸೊಬಗುಆರುವರ್ಣಿಸಲು ವಶವಲ್ಲ ಎಲೆಸಖಿ೫
ಸಿಡಿಲು ಫರ್ಜಿಸಿದಂತೆ ಬಿಡುವ ಬಾಣಗಳೆಷ್ಟಧಡ ಧಡ ಹಾರುವ ಬಿರುಸೆಷ್ಟಧಡ ಧಡ ಹಾರುವ ಬಿರುಸೆಷ್ಟು ಮುಯ್ಯದ ಬೆಡಗವರ್ಣಿಸಲು ವಶವಲ್ಲ ಎಲೆಸಖಿ೬
ಗರುಡನ ಆಭರಣವ ಮೃಡನು ವರ್ಣಿಸಲಾರ ಜಡಿದ ರತ್ನಗಳು ಝಳಪಿಸುತಜಡಿದ ರತ್ನಗಳು ಝಳಪಿಸುವ ವಾಹನವೇರಿಒಡೆಯ ರಾಮೇಶ ಕುಳಿತಾನೆ ಎಲೆಸಖಿ ೭

೨೦೦
ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ಕೃಷ್ಣ
ವಂದಿಸಿ ಭಕ್ತರು ಕರೆದರೂ ನೀನು ಹಿಂದಕ್ಕೆ ಹೋಗುವಿ ಪ.
ಅಂದು ಅಹಲ್ಯಾದೇವಿ ಬಿಟ್ಟು ಒಂದೆರಡು ದಿವಸ ಕೃಷ್ಣ
ಬಂದವನಲ್ಲೋ ತ್ವರೆಯ
ಛಂದಾಗಿ ಹೇಳಯ್ಯ ನಮಗೆ ೧
ಒಂದಾರು ತಿಂಗಳದಿವಸ ಕಂದ ದಣಿಯೆ ಕರುಣಿಸಬಾರದೆ
ಬಂದದ್ದೇನು ಇಂಥ ತ್ವರೆಯ
ಚಂದಾಗಿ ಹೇಳಯ್ಯ ನಮಗೆ ೨
ಹಣ್ಣು ಹಸಿರು ಎಲೆ ತಿಂದು ಸಣ್ಣ ಮಾಡಿ ಶರೀರವನು
ಬಣ್ಣಿಸಿ ಭಕ್ತರು ಕರೆದರೆ
ನೀನು ಕಣ್ಣಿಲೆ ನೋಡೆಲೋ ಅವರ3
ಆನೆ ಜನ್ಮ ಬಂದು ರಾಯ ನಾನಾ ದುಃಖ ಬಡಲು ತಾನು
ನೀನು ಮುಂದೆ ನೋಡಿದೆ ಸಾವಿರ ವರುಷ ಇನ್ನೇನು
ದಯವಯ್ಯ ಅವನಿಗಿನ್ನೇನು ದಯವಯ್ಯ ೪
ತಂದೆ ರಾಮೇಶನ ಮನೆಗೆ ಬಂದಿದ್ದರೆ ಬಹಳ ದಯವು
ಒಂದು ನೆಗಳಿ ಸಾವಿರ ವರುಷ
ಹಿಂದಕ್ಕೆ ದಣಿದೆಲ್ಲೊ ಕೃಷ್ಣ ೫

೧೮೮
ನಿತ್ಯ ಅಂಗ ಸಂಗ ಕೊಟ್ಟನೆ ದೇವಿ
ಚಿತ್ತ ಹರುಷವ ಮಾಡಿ ಇಟ್ಟ ಪ.
ಶಾಂತ ಧರ್ಮನಲ್ಲೆ ನಿಂತಾನೆ
ನಿಜ ಕಾಂತೆ ರಮಿಸಿ ಸುಖವಂತನೆ ೧
ಭೀಮ ಕಾಮಿಸಿಯನ್ನ ಬೆರೆದಾನು
ಅತೀವಾನಂಗ ಸುಖ ಸುರಿದಾನೆ ೨
ವೀರ ಪಾರ್ಥನಲ್ಲೆ ಇರುವೋನು
ನಿಜ ನಾರಿಯ ರಮಿಸಿ ಸುಖಿಸುತಿಹನು ೩
ಸುಂದರ ನಕುಲ ನಲ್ಲಿರುವೋನೆ
ಲೇಶಕುಂದು ಇಲ್ಲದವಳ ಬೆರೆಯೋನು ೪
ನೀತಿಲೆ ಸಹದೇವನಲ್ಲಿದ್ದ
ನಿಜ ಪ್ರೀತಿ ಬಡಿಸಿದ ನಾರಿಗೆ ಮುದ್ದ5
ಭೀಮನ ಮಹಿಮೆ ಕೇಳುತಲಿದ್ದ
ಜನ ಕಾಮಪೂರ್ಣರಾಗಿ ಹರಿಸಿದ ೬
ಮತ್ತೆ ಭೀಮ ದ್ರೌಪತಿ ರತಿ ಇದಕೆ ನಿತ್ಯರಾಮೇಶ ಆಗುವ ಬಹು ಪ್ರೀತಿ7

೨೦೮
ನಿನ್ನ ಕೊಳಲಿಗೆ ಮೋಹಿಸಿ ನಿನ್ನ ಕೊಳಲಿಗೆ
ಅನ್ಯ ವಿಷಯ ಜರಿದು ಬಂದರೆ ಇನ್ನು ಯಾತಕೆ ಬಂದಿರೆಂದಿ ಪ.
ಅತ್ಯಂತ ಕಾಳ ರಾತ್ರಿಯೊಳು
ಮತ್ತೆ ಬಂದ ಬಾಲೆಯರಿಗೆ
ಉತ್ತಮ ಉತ್ತಮವ ನೋಡಿ
ಮತ್ತೆ ಮನೆಗೆ ಪೋಗಿರೆಂದಿ1
ಪ್ರೀತಿ ಪತಿಗಳ ಬಿಟ್ಟು ನೀವು
ಯಾತಕಿಲ್ಲೆ ಬಂದಿರೆಂದಿ
ಮಾತುಗಳನು ಆಡಿ ಪೋಗಿರಿ
ಘಾತುಕ ಪುರುಷನಯ್ಯ ಕೃಷ್ಣ ೨
ಭರದಿ ಬಂದ ಬಾಲೆಯರಿಗೆ
ತಿರುಗಿ ಪೋಗಿರೆಂದು ನುಡಿದಿ
ಕರಗಲಿಲ್ಲ ಕಠಿಣ ಹೃದಯ
ಕರೆವರ್ಹ್ಯಾಂಗ ಪತಿಗಳವರ ೩
ಜಾರ ರಾಜ ನಿನಗೆ ಒಂದೂ
ತೋರದಿದ್ದ ಭಾವವನು
ಯಾರ್ಯಾರ ಅಂಜಿಕೆ ಇಲ್ಲವೆಂದು
ನಾರಿಯರಿಗೆ ಖಿನ್ನ ಬಡಿಸಿದೆಲ್ಲೊ ೪
ಇಂದು ರಾಮೇಶ ಬಿಟ್ಟರೆ ನೀನು
ಹೊಂದೋದಿಲ್ಲ ಪತಿಗಳ ಘನ್ನ
ಚಂದಾಗಿ ಬೆರಿಯೆ ಚಕೋರನ್ನ
ಇನ್ನರೆ ರಮಿಸಿದೆಲ್ಲೊ ಚನ್ನ5

ಬ್ರಹ್ಮಾಂಡ ಬಿಚ್ಚಿ ಪರಬೊಮ್ಮಗ ಮಗಳಾದಿ :
೧೪೨
ನಿನ್ನನೆ ನಮೊ ಎಂಬೆವ ಇಂದಿರಾ ದೇವಿನಿನ್ನನೆ ನಮೊ ಎಂಬೆವ ಬಿನ್ನಹ ಲಾಲಿಸುಪನ್ನಗ ಶಯನನ ಘನ್ನ ಪಟ್ಟದ ರಾಣಿ ಪ.
ಬಾಲೆ ಇಂದಿರೆ ನಿನ್ನ ಕಾಲಿಗೆ ವಂದಿಸಿ ಜಾಲಗಾರುತಿಯರ ಸೋಲಿಸಬೇಕೆಂದು ೧
ಗುಜ್ಜಿ ಇಂದಿರೆ ನಿನ್ನ ಹೆಜ್ಜೆ ಹೆಜ್ಜೆಗೆ ನಮಿಸಿಅರ್ಜುನನ ಮಡದಿಯರ ಲಜ್ಜೆಗೈಸೆವೆಂದು೨
ನಿತ್ಯ ಮುಕ್ತಳೆ, ನಿನ್ನ ಅತ್ಯಂತ ಬಲಗೊಂಬೆ ಉನ್ಮತ್ತೆಯರ ಗರವು ಒತ್ತಿಬಂದೆವೆಂದು ೩
ವ್ಯಾಲಾಶಯನನ ರಾಣಿ ಬಹಳೆವಂದಿಸಿಗೈಯ್ಯಾಳಿಯರ ಮುಯ್ಯಾ ನಿವಾಳಿಸಬೇಕೆಂದು ೪
ಪ್ರಾಣೇಶ ನರಸಿಯ ಕಾಣುತ ವಂದಿಸಿಜಾಣಿಯರ ಮನೆಗ್ಹೋಗಿ ಆಣಿ ಬಿಡಿಸೇವೆಂದು೫
ಜರದ ಕುಪ್ಪುಸಸೀರೆ ಸರಿಗೆ ದೋರೆಯನಿಟ್ಟುಕರಗಳ ಮುಗಿದೆವ ವರಗಳ ಪಾಲಿಸು೬
ಥೋರ ಮುತ್ತಿನ ದಿವ್ಯಹಾರ ಭಾರವನಿಟ್ಟುನಾರಿಯರ ಗೆಲಿಸುವ ಭಾರವ ರಾಮೇಶಗೆ ವಹಿಸೆಂದು೭

ಹೆರಳು ಹಾಕಿಸಿಕೊಂಡು ತಿಳಿಯಲಿಲ್ಲವೊ ಬುದ್ಧಿ :
೮೬
ನಿಲ್ಲದೆ ವೈರಿಗಳುನಿನ್ನ ಮ್ಯಾಲೆ ಬಂದರೆ ಬಿಲ್ಲುಕೆಳಗಿಟ್ಟು ಬೇಡಿಕೊಂಡೆಲೊ ಪಾರ್ಥಸಾಕೊ ಸಾಕೊ ನಿನ್ನ ಹೋಕೆ ಬಡಿವಾರವುಸಾಕು ಜನರು ನಗರೆ ಪ.
ನಿನ್ನ ಪುಣ್ಯವ ಪಾರ್ಥ ಬಣ್ಣಿಸಲೊಶವಲ್ಲಇನ್ನು ಸುಭದ್ರಾ ಒಲಿಯಲು ಇನ್ನು ಸುಭದ್ರಾ ಒಲಿಯಲು ಸುಖದಿಂದ ಮಾನ್ಯವಾಗಿದ್ಯೊ ಜನರೊಳು ೧
ಕನ್ಯೆ ಸುಭದ್ರೆ ನಿನ್ನ ಮದುವ್ಯಾಗಿಅನ್ನ ವಸ್ತ್ರದ ನೆಲಿಗಂಡ್ಯೊಅನ್ನ ವಸ್ತ್ರದ ನೆಲಿಗಂಡ್ಯೊ ಎಲೊ ಪಾರ್ಥನಿನ್ನ ಭಾಗ್ಯವನ್ನೆ ಅರಿಯಲೊ ಪುರುಷ ೨
ಗಿಳಿ ಮಾತಿನ ಜಾಣ ಹೊಳೆವು ಎಷ್ಟೆ ್ಹೀಳಲ್ಯೊಬಳೆಯನಿಟ್ಟದ್ದು ಮರೆತೇನೊಬಳೆಯನಿಟ್ಟದ್ದು ಮರೆತೇನೊ ಸುಭದ್ರಾತಿಳಿಯದೆ ನಿನ್ನ ಬೆರೆದಳೊ ಎಲೊ ಪಾರ್ಥ ೩
ಹೆರಳು ಹಾಕಿಸಿ ಕೊಂಡು ತಿಳಿಯಲಿಲ್ಲವೊ ಬುದ್ದಿಇಳೆಯೊಳು ಇದು ಅಪವಾದ ಇಳೆಯೊಳಗಿದು ಅಪವಾದ ಬಲರಾಮ ಹಳಿಯದೆ ನಿನ್ನ ಬಿಡವೋನೆ ಎಲೊ ಪಾರ್ಥ೪
ದನಗಾಹಿ ನೀನೆತ್ತ ವನಜಕುಸುಮಳೆತ್ತಕನಕ ಕಬ್ಬಿಣಕೆ ಸರಿಯೇನೊಕನಕ ಕಬ್ಬಿಣಕೆ ಸರಿಯೇನೊ ಸುಭದ್ರೆಗೆಅಣಕವಾಡಿದನೆ ರಮಿಯರಸು೫

ಕಂಜನಾಭನು ಮನೆಯ ಎಂಜಲು ಬಳೆವವನ :
೧೯೨
ನಿಲ್ಲಿಸಬೇಕೊ ಯಾದವರ ಹೊಲ್ಲಗುಣದವರ
ನಿಲ್ಲಿಸಬೇಕೊ ಇವರ ಬಿಲ್ಲಿಗೆ ಅಂಜದವರ
ಗೊಲ್ಲರು ನಮ್ಮ ಸರಿ ಅಲ್ಲವೊ ಧರ್ಮರಾಯ ಪ.
ಒಡೆಯ ಧರ್ಮನು ಹರಿಯ ಅಡಿಗೆರಗುವೆನೆಂದ
ನಡೆದು ಹೋಗಲುರಾಯ ತಡೆಯಬೇಕೆಂದ ಭೀಮ ೧
ಕಂಜನಾಭನ ಮನೆಯ ಎಂಜಲು ಬಳೆವವನ
ರಂಜಿಸಿ ಕರೆಯಬ್ಯಾಡ ಅಂಜಿಕೆ ಏನು ಅವನ ೨
ಪಾರ್ಧನು ರಾಯಗೆ ಪಾರ್ಥಿಸಿ ಹೇಳಿಕೊಂಡ
ಸಾರಥಿಯ ಕರೆಯೋದು ಕೀರ್ತಿ ಅಲ್ಲವೊರಾಯ ೩
ನಕುಲನುರಾಯಗೆ ಯುಕ್ತಿಲೆ ಹೇಳಿಕೊಂಡ
ಸಖನಯ್ಯನ ಕುಶಲವು ಮುಖವ ಮಾಡಿದವನಲ್ಲೊ ೪
ಕೇಳಯ್ಯ ರಮಿ ಅರಸು ಗಾಳಿಸಿ ಬಯಸಿಕೊಂಡ
ಬಹಳ ಮನ್ನಿಸ ಬ್ಯಾಡ ಹೇಳಿಕೊಂಡ ಸಹದೇವ ೫

ವೇದ ತಂದಾತನ ಪಾದವ ಕಂಡು ಬಂದೆ :
೫೦
ನೀರಜಾಕ್ಷನ ಪಾದ ಚಾರು ಕಲ್ಪತರು ಸೇರಿಸುಖಿಸುವ ನಮ್ಮ ರಾಯ ಪರಾಕು ಪ.
ವೇದ ತಂದಾತನ ಪಾದವ ಕಂಡು ಬಂದೆಮೋದವಾದನು ಸಹದೇವ ಪರಾಕು ೧
ರುಕ್ಮಿಣಿ ಅರಸಗೆ ಸಕಲವು ಅರಿವಿದೆಭಕುತರ ತೋರೆಂದು ನಕುಲ ಪರಾಕು ೨
ಕೀರ್ತಿವಂತÀನ ದಿವ್ಯ ಮೂರ್ತಿಯ ಕಂಡು ಬಂದೆಪ್ರೀತಿ ಮಾಡಿದ ನಮಗೆ ಪಾರ್ಥ ಪರಾಕು೩
ಶಾಮ ವರ್ಣನ ಪಾದ ಕಾಮಿಸಿ ಕಂಡುಬಂದೆಪ್ರೇಮ ಮಾಡಿದನಮಗೆ ಭೀಮ ಪರಾಕು೪
ರಮ್ಮಿಯರಸನ ಪಾದ ಜುಮ್ಮನೆ ಕಂಡು ಬಂದೆನಿಮ್ಮ ಧ್ಯಾನದಲೆ ಇರುವ ಧರ್ಮ ಪರಾಕು ೫

೨೬
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ.
ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು೧
ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವರು ಕಡೆಯಿಲ್ಲ ೨
ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು ೩
ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ೪
ದೊರೆಗಳ ಮನೆಯಿಂದ ಬರೆದ ಚಿತ್ರದ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ ೫
ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ೬
ಚದುರ ರಾಮೇಶನು ಕುದುರೆ ಏರಿಕೊಂಡುಮದನ ಜನಕನು ಸುಳಿಯೋನೆ ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ ೭

೯೭
ನೆನೆಸಿ ನೆನೆಸಿ ನಗುವರಮ್ಮಯ್ಯಮನಸಿಜನಯ್ಯನ ಮಿತ್ರಿ ಧೇನಿಸಿಧೇನಿಸಿ ಹೇಳಿ ಬರೆಸಿದ ಚಿತ್ತಾರವ ಕಂಡು ನೆನೆಸಿ ನೆನೆಸಿ ನಗುವರಮ್ಮ ಪ.
ಅತ್ತಿಗೆಯರು ಕುಳಿತಲ್ಲೆ ಅರ್ಥಿಯ ನೋಡುವ ಬರೆಬತ್ತಲೆ ಗೊಂಬೆ ಬಗೆ ಬಗೆ ಬತ್ತಲೆ ಗೊಂಬೆ ಬಗೆ ಬಗೆ ಕುಶಲರ್ಥಚಿತ್ತಾರವ ಯಾರು ಬರೆಸಿಹರು ೧
ಜಾತಿ ಹಂಸ ಪಕ್ಷಿಗಳು ಮಾತಿನ ಗಿಳಿವಿಂಡುನೂತನ ನವಿಲು ಬರೆಸಿಲ್ಲನೂತನ ನವಿಲು ಪಕ್ಷಿ ಬರೆಸಿಲ್ಲಹನುಮನೆಂಬೊ ಕೋತಿ ಯಾಕೆ ಬರೆಸಿಹರು೨
ಗಂಡ ಭೇರುಂಡ ಮೃಗವ ತಿದ್ದಿ ತಾನುಬರೆಸಿಲ್ಲ ಬಿದ್ದು ಜನರೆಲ್ಲ ನಗುವಂತೆ ಬಿದ್ದು ಜನರೆಲ್ಲ ನಗುವಂತೆ ತಾನುಮುದಿಹದ್ದ ಯಾಕೆ ಬರೆಸಿಹರು ೩
ಎಂಟು ದಿಕ್ಕಿಗೊಪ್ಪೊ ಬಂಟರ ಬರೆಸಿಲ್ಲಕುಂಟ ಸಾರಥಿಯ ವಶವಾಗಿ ಕುಂಟ ಸಾರಥಿಯ ವಶವಾಗಿ ತಿರುಗಾಡುವ ಸೊಟ್ಟ ಸೂರ್ಯನ ಚಿತ್ತಾರ ಬರೆಸಿಹರು ೪
ಸುಂದರ ಸುಂದರ ವೃಂದಾರಕರನೆಲ್ಲ ಬಿಟ್ಟುಬಂದ ಜನರೆಲ್ಲ ನಗುವಂತೆ ಬಂದ ಜನರೆಲ್ಲ ನಗುವಂತೆ ಕಳೆಗುಂದಿದಚಂದ್ರನ ಚಿತ್ತಾರ ಬರೆಸಿಹರು ೫
ರೂಢಿಗೊಡೆಯನ ಮನೆಯ ಗೋಡೆ ಮ್ಯಾಲಿನ ಗೊಂಬೆ ನೋಡಿದವರೆಲ್ಲ ನಗುವಂತೆನೋಡಿದವರೆಲ್ಲ ನಗುವಂತೆ ತಾತನ ಕೋಡು ಇಲ್ಯಾಕೆ ಬರೆಸಿಹರು ೬
ಚೆನ್ನ ರಾಮೇಶನ ಹೊನ್ನ ಗೋಡೆಯ ಮ್ಯಾಲೆ ಮುನ್ನೆ ಜನರೆಲ್ಲ ನಗುವಂತೆ ಮುನ್ನೆ ಜನರೆಲ್ಲ ನಗುವಂತೆ ರುಗ್ಮನ ಪನ್ನಿ ವಿಸ್ತಾರ ಬರೆಸಿಹರು ಚಿತ್ತಾರ ೭

೬೧
ನೋಡಿದ್ಯಾ ಶ್ರೀದೇವಿಯರ ನೋಡಿದ್ಯಾನೋಡಿದ್ಯಾ ರುಕ್ಮಿಣಿ ಮಾಡಿದಾಟ್ಟವಳಿಯಗಾಡಿಗಾರಳೆಂದು ಆಡೋರು ಭಾವೆಯ ಪ.
ಇಂತು ರುಕ್ಮಿಣಿ ಮ್ಯಾಲೆ ಪಂಥವೆ ಬಗೆದಿರಲಿನಿಂತು ಸುಭದ್ರಾ ಶಪಥದನಿಂತು ಸುಭದ್ರಾ ಶಪಥದ ವಾಗ್ಬಾಣಕಾಂತೆಯ ಎದೆಗೆ ಒಗೆದಾಳು ೧
ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತುತಾಯಿಯ ಸೊಸೆಯರು ಬರಲಿಲ್ಲತಾಯಿಯ ಸೊಸೆಯರು ಬರಲಿಲ್ಲ ನಮಗಂಜಿಬಾಯಿ ಬಿಡುತಾರೆ ಒಳಗಿನ್ನು೨
ಅಣ್ಣನ ಮನೆಗೆ ಬಂದು ಸಣ್ಣ ಹೊತ್ತಾಯಿತುಅಣ್ಣನ ಮಡದಿ ಬರಲಿಲ್ಲ ಅಣ್ಣನ ಮಡದಿ ಬರಲಿಲ್ಲ ರುಕ್ಮಿಣಿಇನ್ನು ಬಾ ಅಭಯ ಕೊಡತೇವ೩
ಅತ್ತಿಗೆ ಮನೆಗೆ ಬಂದು ಹತ್ತು ಫಳಿಗ್ಯಾದೀತುಎತ್ತ ಓಡಿದಳೆ ನಮಗಂಜಿಎತ್ತ ಓಡಿದಳೆ ನಮಗಂಜಿ ಸತ್ಯಭಾಮೆಇತ್ತ ಬಾ ಅಭಯ ಕೊಡತೇವ೪
ನಳಿನ ಮುಖಿಯರ ವಾರ್ತೆ ತಿಳಿದು ರುಕ್ಮಿಣಿದೇವಿಇಳಿದಾಳು ಬ್ಯಾಗ ಸೇಳೆ ಮಂಚ ಇಳಿದಾಳು ಬ್ಯಾಗ ಸೇಳೆ ಮಂಚ ರಮಿಯರಸುಎಳೆದ ಮುಂಜೆರಗು ವಿನಯದ ೫

೨೨
ನೋಡು ಮಾನಿನಿ ಜೋಡು ಕೋಗಿಲ ಭೃಂಗ ಪಾಡಿ ಪಾವನವಾದ ಬಗಿಯ ಪ.
ಮುತ್ತು ಮಾಣಿಕ ರತ್ನ ತೆತ್ತಿಸಿದ ಕೋಟೆಯುಹತ್ತಿರೆ ಹರವಾದ ಸರೋವರ ಹತ್ತಿರೆ ಹರವು ಸರೋವರದೊಳಗಿನ್ನು ಜತ್ತಾಗಿ ಆಡೋಗಿಳಿ ಹಿಂಡು ೧
ಏಳು ಸುತ್ತಿನ ಕೋಟೆಬಾಳೆ ನಿಂಬೆ ದಾಳಿಂಬ ವನ ಎಲೆತೋಟದಾಳಿಂಬವನ ಎಲೆ ತೋಟದೊಳಗಿನ್ನುಸೀಳಿ ಕುಣಿಯೋ ಕಪಿಹಿಂಡು೨
ನೆಲ್ಲಿ ನೀರಲ ನಿಂಬೆ ಮಲ್ಲಿಗೆ ವನದೊಳುಅಲ್ಲೆ ಕೋಕಿಲವು ಸ್ವರಗೈವಅಲ್ಲೆ ಕೋಕಿಲವು ಸ್ವರಗೈವ ಸೊಬಗುಇನ್ನೆಲ್ಲೂ ಕಾಣಿ ಧರೆಮೇಲೆ೩
ಆಲ ಅಶ್ವತ್ಥ ಪಲಾಶ ಬಾರಿಯ ವೃಕ್ಷಸಾಲು ಮಂಟಪವು ಸೊಬಗಿಲೆಸಾಲು ಮಂಟಪವು ಸೊಬಗಿಲೆ ರಂಗಯ್ಯವಾಲಗೈವ ವನವಿದು೪
ನೀಲ ಮೇಘಶಾಮ ಬಾಲಿಕೆರಿಂದಲಿಲೀಲೆ ಮಾಡುವ ಸರೋವರಲೀಲೆ ಮಾಡುವ ಸರೋವರರಮಿಯರಸು ಲಾಲಿ ಆಡುವ ಮಣಿಗಳು೫

೧೨೯
ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ.
ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ ೧
ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ೨
ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ ೩
ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ೪
ರಥಿಕಾ ರಥಿಕರು ಏರೋ ರಥ ಕೋಟಿಗಳಿಗೆ ರತ್ನಮಾಣಿಕ ಹಚ್ಚಿಮಿತಿಯಿಲ್ಲದ ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ೫
ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ೬
ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ ೭

೧೧೪
ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ.
ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ ೧
ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ೨
ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ೩
ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ೪
ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ ೫

೧೬೩
ಪನ್ನಂಗ ಶಯನನ ಸುವರ್ಣ ಕವಚಸುಗುಣಿ ಧರಿಸಿಧನ್ಯ ಧನ್ಯಳೆ ದೂತೆಮ್ಮ ಪ.
ಇಂದಿರೇಶನೆಂಬೊ ಶರಧಿಲೆಚಂದ್ರ ಉದಿಸಿದಂತೆ ಬಂದಿಆನಂದಾಮೃತ ತಂದು ಕುಡಿಸಿದಿಬಂದು ನೀ ಇಂದು ನಮಗೆ ೧
ಶೇಷಶಯನನೆಂಬೊ ದಿವ್ಯಭೂಷಣ ಮಾಡಿಟ್ಟ ಬಾಲೆ ವಿಶೇಷ ಕರುಣ ಮಾಡಿಉತ್ತಮ ಭಾಷ್ಯ ಹೇಳಿ ಹರುಷ ಬಡಿಸಿದಿ೨
ಅಚ್ಯುತ ರಾಮೇಶನೆಂಬೊಅಚ್ಚ ಬಾಳೆ ಹಣ್ಣು ಮೆಲಿಸಿದಿಉತ್ಸಾಹ ಉನ್ನತಿಯ ಮಾಡಿಸ್ವಚ್ಛ ಚಿತ್ತ ಚಲಿಸಧಾಂಗೆ೩

೧೦೫
ಪಾದವ ತೊಳೆದು ಪಾವನರಾಗಿಹರುಷದಿ ತಲೆದೂಗಿಪಾದವ ತೊಳೆದು ಪಾವನರಾಗಿಭಾವೆ ವಿನೋದದಿ ಕೃಷ್ಣನಗುತಲಿ ಪ.
ಗುಜ್ಜೆಯರ ಕಾಲಿಗೆ ತಕ್ಕ ವಜ್ರಕಲ್ಲನೆಪಿಡಿದುಅರ್ಜುನನÀ ಮಡದಿ ಸುಭದ್ರಾಅರ್ಜುನನÀ ಮಡದಿ ಸುಭದ್ರಾ ಹರುಷದಿಕಂಜನೇತ್ರಿಯರ ಉಪಚರಿಸಿ ೧
ಸತ್ಯಭಾಮೆಯ ಪಾದ ಭಕ್ತಿಯಿಂದ ಹಿಡಿದಳು ಪಾರ್ಥನ ಮಡದಿ ಸುಭದ್ರೆಪಾರ್ಥನ ಮಡದಿ ಸುಭದ್ರಾ ಹರುಷದಿಅತ್ತಿಗೆಯ ಕಾಲ ತೊಳೆದಳು೨
ಮಂದಗಮನೆಯರಿಗೆಲ್ಲ ಗಂಧ ಕಸ್ತೂರಿಯಿಟ್ಟುಅಂದವಾಗಿದ್ದ ಅರಿಷಿಣಅಂದವಾಗಿದ್ದ ಅರಿಷಿಣ ಕುಂಕುಮದಿಂದ ಇಂದುವದನೆಯರ ಉಪಚರಿಸಿ೩
ಶ್ರೀದೇವಿಯರಿಗೆ ದಿವ್ಯ ಕ್ಯಾದಿಗೆ ಮಲ್ಲಿಗೆ ಮುಡಿಸಿ ಸುಗಂಧಿ ಕೇಶರ ವೀಳ್ಯವ ಸುಗಂಧಿಕೇಶರ ವೀಳ್ಯ ಅಡಿಕೆ ಕೊಟ್ಟುಮಾಧವನ ಮಡದಿಯರ ಉಪಚರಿಸಿ೪
ನಳಿನಾಕ್ಷಿಯರಿಗೆ ಹೆಳಲು ಬಂಗಾರವ್ಹಾಕಿಹೊಳೆವೊ ಮಾಣಿಕದ ಸರಗಳುಹೊಳೆವೊ ಮಾಣಿಕದ ಸರವುಸರಗಿಯನಿಟ್ಟುಚಲುವ ರಾಮೇಶನ ಅರಸಿಯ ಪಾದ ತೊಳೆದು ಪಾವನರಾಗಿ೫

೧೧
ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ಮೂರ್ತಿಗಳು ಗೆಲಿಸಲಿ ಪ.
ರಾಮೇಶ್ವರ ಕಂಚಿ ಪ್ರೇಮದಿ ಕುಂಭಕೋಣಸ್ವಾಮಿ ಶ್ರೀ ರಂಗ ತೋತಾದ್ರಿಸ್ವಾಮಿ ಶ್ರೀ ರಂಗ ತೋತಾದ್ರಿಬೇಲೂರು ಚೆನ್ನನ ಮೊದಲೆ ಬಲಗೊಂಬೆ ೧
ಅಹೋಬಲ ಮೊದಲಾದ ಆ ವೆಂಕಟಾದ್ರಿ ಅಲ್ಲಿರೊ ಅನಂತ ಅಳಗಿರಿಅಲ್ಲಿರೊ ಅನಂತ ಅಳಗಿರಿ ದರ್ಭಶಯನದೇವರ ಮೊದಲೆ ಬಲಗೊಂಬೆ ೨
ದೇವ ಜನಾರ್ಧನ ಕಾಯೊ ಸಾರಂಗಪಾಣಿಭಾವ ಭಕ್ತಿಲೆ ನಮಿಸೇವ ಭಾವ ಭಕ್ತಿಯಲೆ ನಮಿಸೇವ ಚಕ್ರಪಾಣಿ ಬೇಗ ಗೆಲಿಸೆಂದು ೩
ಅಕ್ಕ ಶ್ರೀಮುಷ್ಣಿವಾಸ ಮುಖ್ಯಚಲುವರಾಯದೇವಕ್ಕಳಿಗೆ ವರವ ಕೊಡುವೋಳುದೇವಕ್ಕಳಿಗೆ ವರವ ಕೊಡುವೋಳು ಕನ್ಯಾಕುಮಾರಿ ಮುಖ್ಯಳ ಮೊದಲೆ ಬಲಗೊಂಬೆ೪
ಛಾಯಾಭಗವತಿ ನಮ್ಮ ಕಾಯೆ ಕರುಣಾಂಬುಧೆಸಹಾಯವಾಗಮ್ಮ ಕಾಲಕಾಲಸಹಾಯವಾಗಮ್ಮ ಕಾಲಕಾಲಕೆಬ್ರಮ್ಹನ ತಾಯ ಗೆದ್ದು ಬರಬೇಕು ೫
ಸುಬ್ರಹ್ಮಣ್ಯ ಸಾಸಿ ಒಬ್ಬ ಶ್ರೀ ಕೃಷ್ಣರಾಯ ನಿರ್ಭಯದಿ ಸ್ವಾದಿ ನಿಲಯನೆನಿರ್ಭಯದಿ ಸ್ವಾದಿ ನಿಲಯನೆ ತನುಮನಉಬ್ಬಿ ವಂದಿಸುವೆ ಕರುಣಿಸು೬
ಹಂಪಿವಿರೂಪಾಕ್ಷದಿ ನಿಂತು ಪೂಜೆಯಗೊಂಬಯಂತ್ರೋದ್ದಾರಕಗೆ ಒಲಿದವನೆಯಂತ್ರೋದ್ದಾರಕಗೆ ಒಲಿದ ರಾಮೇಶನಕಾಂತೆಯರ ಗೆದ್ದು ಬರಬೇಕು ೭


ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾರಿಗೆ ಬಂದೆನುಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ ಪ.
ಆದಿ ಬ್ರಹ್ಮನರಾಣಿಯೆ ವೇದಕ್ಕ ಭಿಮಾನಿಯೆಮೋದ ಗಾಯನ ಕುಶಲಳೆಮೋದ ಗಾಯನ ಕುಶಲಳೆ ಸರಸ್ವತಿ ನೀ ದಯಮಾಡಿ ಮತಿಯ ಕೊಡು ೧
ಹೊನ್ನವರೆ ಹೊಸ ಕಪ್ಪು ಬೆನ್ನಿನ ಮ್ಯಾಲಿನ ಹೆರಳುಕಿನ್ನರಿ ನಿನ್ನ ಬಲಗೈಯಕಿನ್ನರಿ ನಿನ್ನ ಬಲಗೈಯ್ಯಲಿ ಹಿಡಕೊಂಡುಖನಿ ಬಾ ನಮ್ಮ ವಚನಕ್ಕೆ ೨
ಮಿತ್ರಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಮತ್ತೆ ಮಲ್ಲಿಗೆಯ ನೆನೆದಂಡೆಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದ್ದೆಪ್ರತ್ಯಕ್ಷವಾಗ ಸಭೆಯೊಳು೩
ಹರದಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಅರಳು ಮಲ್ಲಿಗೆ ನೆನೆದಂಡೆ ಅರಳು ಮಲ್ಲಿಗೆ ನೆನೆದಂಡೆ ತಂದಿಹೆತಡೆಯದೆ ನಮಗೆ ವರವ ಕೊಡು ೪
ಗುಜ್ಜಿ ಸರಸ್ವತಿಗೆ ಗೆಜ್ಜೆ ಸರಪಳಿಯಿಟ್ಟು ವಜ್ರಮಾಣಿಕ್ಯ ದಾಭರಣವಜ್ರಮಾಣಿಕ್ಯ ದಾಭರಣ ಭೂಷಿತಳಾಗಿನಿರ್ಜರೊಳುತ್ತಮಳೆ ನಡೆ ಮುಂದೆ ೫
ಹರದಿ ಸರಸ್ವತಿ ಸರಿಗೆಸರಪಳಿಯಿಟ್ಟುಜರದ ಸೀರೆಯನೆ ನಿರಿದುಟ್ಟು ಜರದ ಸೀರೆಯನೆ ನಿರಿದುಟ್ಟು ಬಾರಮ್ಮದೊರೆ ರಾಮೇಶನ ಅರಮನೆಗೆ೬

೧೦೨
ಪ್ರೀತಿಯ ಮಾಡನೀತಿಯ ಶುಕವಾಣಿ ಪ್ರೀತಿಯ ಮಾಡ ಚಾತುರ್ಯದಲಿಮುದ್ದು ಮಾತಿನ ಮಾಧುರಿ ಪ್ರೀತಿಯ ಮಾಡು ಪ.
ದೇವಿ ರುಕ್ಮಿಣಿ ನಮ್ಮಮ್ಮ ದೇವಕಿ ಸರಿಯಮ್ಮನಾಕುಂದು ನಿನ್ನ ನುಡಿದೆನನಾಕುಂದು ನಿನ್ನ ನುಡಿದ ಅಪರಾಧವ ಭಾವದೊಳಿಡದೆ ಕರುಣಿಸು ಪ್ರೀತಿಯಮಾಡು೧
ಅತ್ತಿಗೆ ನೀನಮ್ಮ ಹೆತ್ತತಾಯಿ ಸರಿಯಮ್ಮಅತ್ಯಂತ ನಿನಗೆ ನುಡಿದೆವ ಅತ್ಯಂತ ನಿನಗೆ ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು ಪ್ರೀತಿಯಮಾಡು೨
ಸುಗುಣಸಹಕಾರಿಯೆ ನಿಗಮಾಭಿಮಾನಿಯೆ ವಿಗಡ ಬುದ್ಧಿಯಿಂದ ನುಡಿದೆವವಿಗಡ ಬುದ್ಧಿಯಿಂದ ನುಡಿದೆವ ಅತ್ತಿಗೆ ನಿನ್ನಮಗಳು ಜಾನ್ಹವಿಯ ಸರಿಯಮ್ಮ ಪ್ರೀತಿಯ ಮಾಡು೩
ಸತ್ಯಭಾವೆ ನಮ್ಮ ಅತಿ ವಿನೋದವಮತ್ತೊಂದು ನೀನು ತಿಳಿಯದೆ ಮತ್ತೊಂದು ನೀನು ತಿಳಿಯದೆ ಅತ್ಯಂತ ಎನಮ್ಯಾಲೆ ಕರುಣವ ಇರಲೆಮ್ಮ ಪ್ರೀತಿಯ ಮಾಡು೪
ಸರಸಿಜಮುಖಿ ನಮ್ಮ ಹರುಷ ವಿನೋದವ ವಿರಸ ಮಾಡದಲೆಮನದೊಳು ವಿರಸ ಮಾಡದಲೆ ಮನದೊಳು ರಾಮೇಶನ ಅರಸಿ ನೀನಮಗೆ ದಯಮಾಡು ಪ್ರೀತಿಯ ಮಾಡು೫

೨೧
ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ.
ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು೧
ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು೨
ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ ೩
ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ ೪
ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು೫
ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ೬
ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ೭

೨೫೭
ಬಂದ ಜನರು ಬ್ಯಾಗ ಏಳಿರೀಗ
ಗೋವಿಂದ ತೆರಳಿದ
ದೇವ ದುಂದುಭಿಯಾದವು ಪ.
ಭೇರಿ ಬಡಿದವು ತುತ್ತೂರಿಗಳ್ಹಿಡಿದವು
ವಾರಿಜ ಗಂಟೆ ಮೊದಲಾಗಿ
ವಾರಿಜ ಗಂಟೆ ಮೊದಲಾಗಿ ಸಾರಿದವು
ಏರಿದನು ಕೃಷ್ಣ ರಥವೊಂದ ೧
ಜೇಷ್ಠ ಬಹುಳ ಉತ್ಕ್ರಷ್ಠ ಪಂಚಮಿತಿಥಿ
ಶ್ರೇಷ್ಠವಾಗಿದ್ದ ಬುಧವಾರ
ಶ್ರೇಷ್ಠವಾಗಿದ್ದ ಬುಧವಾ7ರ ಈ ಕವನ
ಶ್ರೀ ಕೃಷ್ಣಗರ್ಪಿಸಿದೆ ಹರುಷದಿ2
ಭಾವ ಸಂವತ್ಸರದಿ ದೇವಾಧಿದೇವನ
ಪಾವನವಾದ ಚರಿತೆಯ
ಪಾವನವಾದ ಚರಿತೆಯ ರಚಿಸಿದೆ
ದೇವ ಮಧ್ವೇಶಕೊಳ್ಳೊ ೩
ಮುದ್ಗಲ್ಲ ವಾಸನ ಶುದ್ಧನಾಮದವರು
ಮುದ್ದು ಪಾದಗಳ ಸ್ಮರಿಸುತ
ಮುದ್ದು ಪಾದಗಳ ಸ್ಮರಿಸುತ ರಚಿಸಿದೆ
ಅಪದ್ಧ ನೋಡದಲೆ ಹರಿಕೊಳ್ಳೊ4
ಮೂಢಳು ನಾನೊಂದು ಬೇಡಿ ಬಯಸಿಕೊಂಬೆ
ಮಾಡಿದೆ ರಚನೆ ಮನ ಉಬ್ಬಿ
ಮಾಡಿದೆ ರಚನೆ ಮನ ಉಬ್ಬಿ ರಮಿಯರಸು ಕೂಡಿಸೊ ನಿನ್ನವರ ಚರಣದಲಿ5

೧೩೩
ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ಪ.
ಇಂದು ಮುಖಿಯರೆಲ್ಲ ಛಂದಾದ ವಸ್ತಗಳಿಟ್ಟುಚಂದ್ರಗಾವಿಯನುಟ್ಟು ಚಂದ್ರನಂತೆ ಒಪ್ಪುತ ೧
ನೀಲ ಕುಂತಳಿಯರು ನೀಲ ಮಾಣಿಕದ್ವಸ್ತ್ರಮೇಲುದು ಧರಿಸುತ ನೀಲಾದಿಗಳೆಲ್ಲ ೨
ವಸ್ತ ಮುತ್ತಿನ ಇಟ್ಟು ಕಸ್ತೂರಿ ಬೊಟ್ಟಿಟ್ಟುಮಸ್ತಕದಲಿ ಮಾಣಿಕ್ಕಿಟ್ಟು ಭದ್ರಾದಿಗಳು ೩
ಹಸ್ತಾಭರಣ ಸಮಸ್ತ ವಸ್ತಗಳಿಟ್ಟುಸ್ವಸ್ತ ಚಿತ್ತದಿಂದ ಮಿತ್ರ ವೃಂದಾರಕಾದಿಗಳು ೪
ಕಾಲಿಂದ್ಯಾದಿಗಳೆಲ್ಲ ಬಹಳೆ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಲಾಶಯನನ ಬಳಿಗೆ೫
ಲಕ್ಷಣಾದಿಗಳೆಲ್ಲ ಲಕ್ಷ ವಸ್ತಗಳಿಟ್ಟುಲಕ್ಷ್ಮಿರಮಣನೆ ಪಂಥ ವೀಕ್ಷಿಸಿಗೆಲಿಸೆಂದು ೬
ಜಾಂಬವಂತ್ಯಾದಿಗಳು ತುಂಬಿದೊಸ್ತಗಳಿಟ್ಟುಸಂಭ್ರಮ ಸೂಸುತ ಅಂಬುಜಾಕ್ಷನ ಬಳಿಗೆ೭
ಹದಿನಾರು ಸಾವಿರ ಚದುರೆಯರು ವಸ್ತಗಳಿಟ್ಟುಮದನ ಜನಕನ ಮುಯ್ಯ ಮುದದಿಂದ ಗೆಲಿಸೆಂದು೮
ವೀರ ರಾಮೇಶ ನಾರಿಯರ ಸೋಲಿಸೋ ಭಾರನಿನ್ನದೆಂದು ನೂರು ಮಂದಿನುಡಿದಾರು ೯

೬೫
ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ.
ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ ೧
ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ೨
ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ ೩
ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ೪
ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ೫
ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ೬
ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ ೭

೨೨೦
ಬಂದು ನಮ್ಮ ಮನೆಗೆ ನಿಂದಿಸಿಲ್ಲಿಗೆ ಬಂದೆ
ಚಂದೇನೆ ಇದು ಚಂದೇನೆ ಪ.
ಚಾರು ಗುಣಶೀಲೆಯರ ದೂರಿ ಇಲ್ಲಿಗೆ ಬಂದೆ
ಚಾರ್ವಾಕಳೆಂದು ಸಾರಿ ಕೈ ಹೊಯ್ದರು ೧
ಸುಂದರ ಗುಣದೆಯರಿಗೆ ಅಂದ ಮಾತುಗಳೆಲ್ಲ
ಹೊಂದೋವೇನೆ ವ್ಯರ್ಥ ನಿಂದ್ಯಳಾದಿ ನೀನು ೨
ಶ್ರೀಶನ ಸತಿಯರ ಮೀಸಲ ಗುಣದೆಯರ
ಹಾಸ್ಯ ಮಾಡಿ ಬಂದು ದೂಷಳಾದಿ ನೀನು ೩
ಭಾಳಗುಣಾಢ್ಯರಿಗೆ ಅವಹೇಳನವಾಡಿದಿ
ತಾಳೆ ಈ ಮಾತಿಗೆ ನಿವಾಳಿಸುವರ ನಿನ್ನ ೪
ಮುದ್ದು ರಾಮೇಶನ ಅರ್ಧಾಂಗಿಯರಿಗೆ
ಅವದ್ದ ನುಡಿದು ಬಂದು ಬಿದ್ದು ನಗುವಂತೆ ೫

೫೫
ಬಂದೆನವ್ವ ಭಾವಕಿಯರನ್ನೆತಂದೆನವ್ವ ಕುಶಲವಸಿಂಧುಶಯನನ ಮುಂದೆನಿಂದು ಸುದ್ದಿ ಹೇಳಿದೆನವ್ವ ಪ.
ಹರದೆಯರಿಂದ ಅಚ್ಯುತ ಹರುಷವಾದ ಮ್ಯಾಲವ್ವವರಗಿರಿವಾಸನ ಮುಂದೆ ಕರವ ಮುಗಿದು ಹೇಳಿದೆನವ್ವ ೧
ಮಂದಗಮನೆಯರ ಕೋಪ ಮಂದವಾದ ಮ್ಯಾಲವ್ವಸಿಂಧುಶಯನನ ಮುಂದೆ ನಿಂದು ಸುದ್ದಿ ಹೇಳಿದೆನವ್ವ ೨
ಕಾಂತೆಯರಿಂದ ಅಚ್ಯುತ ಶಾಂತನಾದ ಮ್ಯಾಲವ್ವಇಂತು ರಾಮೇಶನ ಮುಂದೆ ನಿಂದು ಸುದ್ದಿ ಹೇಳಿದೆನವ್ವ ೩

೪೬
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ.
ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ ೧
ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ ೨
ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ೩
ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ೪
ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ೫
ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ೬
ಆನೆ ಅಂಬಾರಿ ಲಕ್ಷಏನೆಂಬೆ ಹಿಡಿದೇಜಿಭಾನು ಮಾನಿನಿ ಸಹಿತಾಗಿ ಸಖಿಯೆಭಾನು ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ೭

Leave a Reply

Your email address will not be published. Required fields are marked *