Categories
ರಚನೆಗಳು

ಗೋಪಾಲದಾಸರು

ಗುರುಸ್ವರೂಪರಾದ ಹನುಮ
೬೭
ಶರಣು ಹರಿಯಶರಣಗ್ರೇಸರನೆ ಹನುಮ ಭೀಮ ಮಧ್ವಗುರುವೆ ನಿಮ್ಮ ಚರಣಕಮಲಕ್ಕೆರಗಿ ನಮಿಸುವೆ ಪ.
ಚಿನ್ನ ತಪುತಕಾಯ ನೊಸಲಲಿನ್ನು ಊರ್ಧ್ವಪುಂಡ್ರ ತುಲಸಿ ಘನ್ನ ವೈಷ್ಣವನೆ ಮುದ್ದು ಸನ್ಯಾಸಿಯೆಅ.ಪ.
ಚಿನ್ನದೊಂಟಿ ಚೌಕಳಿ ಮೋಹನ್ನಸರ ಕಿರೀಟಧಾರಿಮನುಜರ ರೂಪತಾಳ್ದ ಭೀಮಸೇನನೆಕರ್ಣಕುಂಡಲವು ಕಚ್ಚುಟವು ಮೌಂಜಿ ಧರಿಸಿ ಕಪಿವರ್ಣ ರೂಪನಾದ ಹರಿಯಭಜಕ ಹನುಮನೆನಿನ್ನ ದರುಶನವು ಎನಗೆ ಇನ್ನು ಆದುದಕೆ ಫಲವುಅನ್ಯವಿಷಯ ಬಿಡಿಸಿ ಬೇಗ ಹರಿಯ ತೋರಿಸೊ ೧
ಮಧ್ಯಗೇಹ್ಯ ನೋಂಪಿ ಅಭಿವೃದ್ಧಿ ಆದದ್ದು ಕಂಡೂದ್ಭವಿಸಿದಾನಂದತೀರಥಮುನಿಶುದ್ಧ ಮೂಲ ಕಲಿಯ ಅಂಶ ಬದ್ಧದ್ವೇಷಿ ದು-ರ್ಯೋಧನನ ಒದ್ದು ಕಾಯ ಹದ್ದಿನಿಂದ ಮುದ್ದಾಡಿಸಿದನೆಸುದ್ದಿ ಕೊಂಡುಪೋಗಿ ಸೀತೆಯಿದ್ದ ಸ್ಥಳವ ನೋಡಿ ಅಸುರ-ರೊದ್ದು ರಾಮರಿದ್ದೆಡೆಗೆ ಬಂದು ನಿಂತನೆಬಿದ್ದೆ ನಿಮ್ಮ ಪಾದಗಳಿಗೆ ತಿದ್ದಿ ಎನ್ನ ಮತಿಯನಾದ್ಯ-ವಿದ್ಯ ಗಂಟು ಬಿಡಿಸಿ ಉದ್ಧರಿಸುವುದು ೨
ಮೂರು ಅವತಾರದಲಿ ಮೂರು ಮೂರು ಭಕುತಿಯಿಂದಮೂರುಮೂರ್ತಿಗಳ ಭಜಿಪ ಮೂಲಗುರುವೆಸಾರುತಿಹವು ಶ್ರುತಿಯು ನಿಮ್ಮುದಾರ ಗುಣಗಳನು ಬಿಡದೆಆರತರನು ಪೊರೆವ ಸಮೀರ ಸದ್ಗುಣಭಾರತೀಶ ಭಯವಿನಾಶ ಸಾರ ಹೃದಯ ಸಾಧು ಸಾಧುಭಾರ ನಿನ್ನದಯ್ಯ ಎನ್ನುದ್ಧಾರ ಪ್ರಾಣನೆತೋರುವುದು ನಿಮ್ಮ ಹೃದಯದ್ವಾರ ಗೋಪಾಲವಿಠಲಮೂರುತಿಯ ಬಿಡದೆ ಎನ್ನ ಮನಕೆ ಒದಗಿಸೊ ೩

ಶ್ರೀ ಮಹಾಲಕ್ಷ್ಮಿಯ ಸ್ತುತಿ.
೫೬
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ.
ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ.
ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿಗಣನೆಯಿಲ್ಲದ ಜೀವಧ್ಯಾನ ತುಂಬಿರಿಸಿಜನರ ಯೋಗ್ಯತೆ ಉದಕವನಲ್ಲಿ ಬೆರೆಸಿಮಿನುಗುವ ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ ೧
ನಿಲಯಶಯ್ಯ ತಾಂಬೂಲಾಯುಧ ಚೇಲಜಲಜ ಮಂದಾರ ಚಂಪಕ ಮೊಲ್ಲೆ ಬಕುಳತುಲಸಿ ಕೇತಕಿ ದಿವ್ಯಗಂಧ ಪರಿಮಳವಲಯ ಕಿರೀಟಕುಂಡಲ ರತ್ನಮಾಲಾಹೊಳೆವ ಸುನವನವ ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ ೨
ಕಮಲ ಕುಟ್ಮಲರದನದಭಯಸುಪಾಣಿವಿಮಲ ಸುಧಾಕರನಿಭ ಶುಭವದನೆಭ್ರಮರಕುಂತಳೆ ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ ೩

೧೭೨
ಶ್ರೀ ಯದುವರಕುಲ ತೋಯದಿ ಹಿಮಕರಾಶ್ರಿತ ಜನಮಂದಾರಮಾಯಾಪೂತನಿಹಾರ ವೇದೋದ್ಧಾರ ಮಂದಾರ ಶೈಲಧರ ಪ.
ಗಂಗೋದ್ಭವ ಬಲಿ ವ್ಯಾಸ ಪರಾಶರ ಪುಂಗವನುತ ಚರಣಮಂಗಳಾಂಗ ಕುಂತಿಸುತಪಾಲನ ಮೌನಿ ಹೃದಯ ಸದನತುಂಗ ಚತುರ್ಭುಜ ಶಂಖಚಕ್ರಧರ ದನುಜವಂಶ ದಹನಾಂಗಜ ಜನಕ ಕಾಳಿಂಗ ಗರ್ವಹರ ಅಂಬರೀಶ ಕರುಣ ೧
ಭೂಸುರ ಪತ್ನಿ ವಿಭೂಷಣಧರ ಕಂಸಾಸುರ ಮುರ ಮಥನವಾಸವಾದಿ ಕಮಲಾಸನ ಪೂಜಿತ ವೈನತೇಯಗಮನಶ್ರೀಶುಕಶೌನಕಸನಕಸನಂದನ ಸೇವಿತ ಹಯವದನದಾಸಕಲುಷ ವಿನಾಶ ತ್ರಿಭುವನಾಧೀಶ ಶೇಷಶಯನ ೨
ಶರಣಾಗತ ಪೋಷಣ ಮೃದು ಭಾಷಣ ಶಕಟಾಸುರ ಹರಣಕರಿವರರಿಪುಹರ ಕನಕಾಂಬರಧರ ಶರನಿಧಿಮದ ಹರಣನರಹರಿ ವೇಲಾಪುರಿಕೇಶವ ಶ್ರೀಧರ ಕೌಂಸ್ತುಭಾಭರಣಕರುಣಾಸಾಗರ ಶ್ರೀಗೋಪಾಲವಿಠಲ ಕಮಲಾಚಲರಮಣ ೩

ಕಷ್ಟಪಡುತ್ತಿರುವ ಅಲ್ಪರನ್ನು ಕಂಡು
೪೭
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ.
ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ ೧
ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು ೨
ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ ೩
ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ ೪
ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು ೫
ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ ೬
ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ ೭

ಈ ಭವದ ಜಂಜಾಟವನ್ನು ಕುರಿತು
೧೪೪
ಸಾಕು ಸಾಕು ಭವಸಂಗ ಚಿತ್ತ-ವೈಕಲ್ಯ ಕಾರಣವದು ಮಾನಭಂಗ ಪ.
ಪ್ರಾಕೃತರೊಡನೆ ಸಂಬಂಧ ಸುವಿ-ವೇಕಕ್ಕೆ ಹಾನಿತೋರುವ ಪ್ರತಿಬಂಧಶೋಕ ಮೋಹಗಳದರಿಂದ ಮುಂದೆ ಏ-ಕಾಕಿಯಾಗಿ ಸಂಚರಿಪೊದೆ ಚೆಂದ ೧
ಬಿಟ್ಟದ್ದು ಬಯಸೋದು ಸಲ್ಲ ತಾಕೊಟ್ಟಾಭಯಕೆ ಕುಂದು ಬರಬಾರದಲ್ಲಸುಟ್ಟು ಪಾಪಂಗಳನೆಲ್ಲ ಬಲುದಿಟ್ಟನಾಗಲಿ ಬೇಡವೆ ಹೇಸಿ ಇದೆಲ್ಲ ೨
ಕ್ರೂರ ಕಾಮನದೊಂದು ಕಾಟ ಮ-ತ್ತಾರಯ್ಯ ಇಹಪರಕೆಲ್ಲ ಕವಾಟಘೋರ ಪಾಪಂಗಳ ಕೂಟ ಪರನಾರಿಯರೊಡನಾಟ ನರಕದೊಳಾಟ3
ಚಲಿಸದೆ ಧ್ಯಾನವ ಮಾಡು ಮನಒಲಿಸದೆ ಶ್ರವಣವನ್ನು ಮಾಡುಸುಲಭದ ಜಪದೊಳೋಲ್ಯಾಡು ಚಿತ್ತಒಳಗಾಗದಿರಲು ಕೀರ್ತನೆಗಳ ಪಾಡು ೪
ಎಲು ಮಜ್ಜಮಾಂಸದ ಪಿಂಡ ಇದುತಿಳಿದು ನೋಡಿದರಲ್ಲಿ ಹುರುಡಿಲ್ಲ ಕಂಡ್ಯಾಮಲಮೂತ್ರ ಪೂರಿತ ಭಾಂಡ ಇದ-ರೊಳಗಭಿಮಾನವುಳ್ಳಾತನೆ ಭಂಡ ೫
ಭಿನ್ನ ಬುದ್ಧಿಯ ನೆರೆ ಮಾಣು ಇನ್ನುನಿನ್ನಂತೆ ಸಕಲ ಭೂತಂಗಳ ಕಾಣುಸನ್ನುತನಾದಡೆ ಜಾಣು ಇದುಚೆನ್ನಾಗಿ ಕಾಣಲೀಸದು ಕರ್ಮರೇಣು ೬
ಕಪಟ ಕಲ್ಮಷವನೀಡಾಡು ಬಲುಗುಪಿತದಿ ಹರಿ ಭಕುತಿಯ ನೀ ಮಾಡುಚಪಲವೃತ್ತಿಯೆ ನಗೆಗೇಡು ಬಲುನಿಪುಣರ ನಡೆವಳಿಯನೆ ನೀ ನೋಡು ೭
ವ್ಯಾಪಾರಂಗಳ ತ್ಯಜಿಸು ಬಪ್ಪಕೋಪ ತಾಪಂಗಳ ಮಿಗೆ ಕಡೆಗಣಿಸುಪಾಪಕರ್ಮವ ಪರಿಹರಿಸು ಚೆಲ್ವಗೋಪಾಲವಿಠಲಮೂರ್ತಿಯ ಸಾರಿ ಸುಖಿಸು ೮

ಮುಕ್ತಿಯನ್ನು ಗಳಿಸುವುದು ಸುಲಭವಲ್ಲ
೧೧೩
ಸುಮ್ಮನೆ ಬರುವುದೆ ಮುಕ್ತಿ ಗುರುಧರ್ಮಭಿಕ್ಷವ ಬೇಡಿದವಗೆ ಸುಕೀರ್ತಿ ಪ.
ಮನದಲ್ಲಿ ದೃಢವಿರಬೇಕು ದುಷ್ಟಜನಸಂಸರ್ಗಗಳನು ಬಿಡಲಿಬೇಕುಅನುಮಾನವನು ಸುಡಬೇಕು ತನ್ನ ತನುಮನಧನವನೊಪ್ಪಿಸಿಕೊಡಬೇಕು ೧
ಕಾಮಕ್ರೋಧವ ಬಿಡಬೇಕು ಹರಿನಾಮ ಸಂಕೀರ್ತನೆಯನು ಮಾಡಬೇಕುಹೇಮದಾಸೆಯ ಬಿಡಬೇಕು ಹರಿನಾಮವೆ ಗತಿಯೆಂದು ನೆರೆ ನಂಬಬೇಕು ೨
ವ್ಯಾಪಾರ ವರ್ಜಿಸಬೇಕು ಜ್ಞಾನದೀಪದ ಕಾಂತಿಯಲ್ಯೋಲಾಡಬೇಕುಪಾಪರಹಿತನಾಗಬೇಕು ನಮ್ಮ ಗೋಪಾಲವಿಠಲನ್ನ ನೆರೆನಂಬಬೇಕು ೩

ತಮ್ಮ ಗುರುಗಳಾದ
೮೭
ಸ್ಮರಿಸುವೆ ನಾ ನಿಮ್ಮ ಚರಣಕಮಲ ಗುರು ವಿಜಯರಾಯಶರಣಜನರಪ್ರಿಯ ಪರಮ ಕರುಣಾನಿಧಿ ವಿಜಯರಾಯ ಪ.
ಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯೈನ್ನು ನಾ ವರ್ಣಿಸಲೆಷ್ಟರವನು ಗುರು ವಿಜಯರಾಯ1
ದಿವಿಜರ ವೇಷದಿಂದವನಿಯೊಳುದಿಸಿದ್ಯೊ ವಿಜಯರಾಯದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೊ ವಿಜಯರಾಯ ೨
ಭಾಗವತಧರ್ಮವಹಿಸಿ ತ್ರಿರಾವರ್ತಿ ವಿಜಯರಾಯಭಾಗೀರಥಿಯ ಚೆನ್ನಾಗಿ ಸೇವಿಸಿದ್ಯೊ ವಿಜಯರಾಯ ೩
ಕಂಚಿಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ ವಿಜಯರಾಯಪಂಚವಾರವು ಸಂಚರಿಸಿ ಸೇವಿಸಿದಯ್ಯ ವಿಜಯರಾಯ ೪
ಮರಿಯಾದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯಪರಿಪರಿ ಕ್ಷೇತ್ರಕ್ಕೆ ಪೋಗಿ ಪೂಜಿಸಿದಯ್ಯ ವಿಜಯರಾಯ ೫
ಮಹಿಯಲ್ಲಿ ತಿರುಗಿ ಸರ್ವಕ್ಷೇತ್ರದಿ ವಿಜಯರಾಯವಹಿಸಿದಾಸತ್ವವೈಷ್ಣವ ಸಿದ್ಧಾಂತ ವಿಜಯರಾಯ ೬
ಗುರೂಪದೇಶಕನಾಗಿ ವ್ಯಾಸಕಾಶಿಯಲ್ಲಿದ್ಯೊ ವಿಜಯರಾಯದುರ್ಯೋನಿಯಲಿ ಬಂದ ವಂಶ ಉದ್ಧರಿಸಿದ್ಯೊ ವಿಜಯರಾಯ ೭
ಸ್ವಚ್ಛವಾಗಿ ಗಂಗಾತೀರ ವಾಸಮಾಡಿ ವಿಜಯರಾಯ ಹೆಚ್ಚಾದ ಪರ್ವಣಿಯೊಳು ಮತ್ಸ್ಯೋದರಿತೋರ್ದೆ ವಿಜಯರಾಯ ೮
ತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ ವಿಜಯರಾಯಾಂಗದ ಮುಸುಕಿಲಿ ಪಾಂಡುರಂಗನ್ನ ಕಂಡ್ಯೊ ವಿಜಯರಾಯ ೯
ಮಧ್ವಮತದ ಸಾರ ಕವನದಿ ರಚಿಸಿದ್ಯೊ ವಿಜಯರಾಯಾದ್ವೈತಸಿದ್ಧಾಂತಾಬದ್ಧವೆನಿಸಿದ್ಯೊ ವಿಜಯರಾಯ ೧೦
ಶುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯಹೃದ್ಯದಿ ಧಿಮಿಕೆಂದು ಹರಿಯ ಕುಣಿಸಿದ್ಯೊ ವಿಜಯರಾಯ ೧೧
ಸದಾಚಾರಸಂಪತ್ತು ಮಧುಕರವೃತ್ತಿಯು ವಿಜಯರಾಯಕದನ್ನ ಉಂಡರಿಯರು ಶಿಷ್ಯಜನಸಂಘ ವಿಜಯರಾಯ ೧೨
ಭಕ್ತರ ಅಪಮ್ಯತ್ಯುಬಿಡಿಸಿ ಆಯುನಿತ್ತೆ ವಿಜಯರಾಯ ಪ್ರತ್ಯಕ್ಷವಲ್ಲವೆ ಮನವೆ ಇದಕ್ಕೆ ಸಾಕ್ಷಿ ವಿಜಯರಾಯ ೧೩
ನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ ವಿಜಯರಾಯಮತ್ತೆ ಧರ್ಮ ಮುಂಜಿ ಮದುವೆಗಳ ಮಾಡಿಸಿದ್ಯೊ ವಿಜಯರಾಯ ೧೪
ಭಕ್ತಜನರಿಗೆ ತತ್ವೋಪದೇಶವ ಮಾಡಿ ವಿಜಯರಾಯಹೃತ್ಕಮಲದಿ ಹರಿಯ ತಿಳಿಸಿ ಸದ್ಗತಿಗಭಯ ಇತ್ತ್ಯೊ ನೀ ವಿಜಯರಾಯ ೧೫
ಎಲ್ಲರಲಿ ಸಿರಿನಲ್ಲನ ಅಂಶವ ವಿಜಯರಾಯನಿಲ್ಲಿಸಿದೆಯೊ ನಿನ್ನ ಬಗೆ ಬಲ್ಲವರ್ಯಾರೊ ವಿಜಯರಾಯ ೧೬
ಬಲ್ಲಿದ ನೀನೊಂದುರೂಪದಿ ಎನ್ನಲ್ಲಿ ವಿಜಯರಾಯನಿಲ್ಲಿಸಿದ್ದರೆ ಎಲ್ಲ ಜನರು ಓಲೈಸೋರು ವಿಜಯರಾಯ ೧೭
ನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ ನಾವು ವಿಜಯರಾಯನಿಮ್ಮ ಸಾಮರ್ಥ್ಯವು ನಿಮ್ಮದೆಂದಿಗು ವಿಜಯರಾಯ ೧೮
ಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ ವಿಜಯರಾಯಎನ್ನ ಪೊಂದಿಹರೆಲ್ಲ ನಿನ್ನ ದಾಸರೊ ಗುರು ವಿಜಯರಾಯ ೧೯
ಈಗ ಈ ಯುಗದಿ ಸಾಧನವೆಂಬುದು ಕಾಣೆ ವಿಜಯರಾಯಯೋಗಿ ನಿನ್ನವರಿಗೆ ಬೇಗ ಒದಗುವುದೊ ವಿಜಯರಾಯ ೨೦
ಗುರು ನಿನ್ನ ಕರುಣಕವಚತೊಟ್ಟ ಭಕುತರ್ಗೆ ವಿಜಯರಾಯಸಿರಿವರ ಗೋಪಾಲವಿಠಲರೇಯ ಕೈಪಿಡಿವನೊ ವಿಜಯರಾಯ ೨೧

೧೭೩
ಹರಿಯೆ ಅಚ್ಯುತಾನಂತ ಗೋವಿಂದಾಚ್ಯುತಾನಂತ ಗೋವಿಂದ ಮುಕುಂದ ಶ್ರೀ-ಮಚ್ಚಕೂರುಮವರಾಹನಾರಸಿಂಹ ಭಕ್ತ-ವತ್ಸಲ ಕಾಯೋ ಕರುಣಾಕರ ಶ್ರೀರಮಣ ನೆಚ್ಚಿದನಾಥ ಬಂಧು ಪ.
ದುರುಳ ಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಮ ಉಗ್ರತಪಸು ಪರಮೇಷ್ಟಿಯ ಕುರಿತುನರ ಸುರರಿಂದಲಿ ಮರಣರಹಿತವಾದವರಬೇಡಿ ತಪವು ಮಾಡಿ ಹರಿಯೆ ನಿನ್ನಾಜ್ಞದಿಂವರವೀಯೆ ಆ ಅಜನು ಪರಮ ಅಸುರನು ತನಗೆಪರಿಣಾಮ ನಿಶ್ಚೈಸಿ ಸರಿಯು ತನಗಿನ್ನಾರು ಇಲ್ಲ ಈಧರೆಯೊಳೆಂದು ದುರುಳಾಚರಣೆ ತೊಡಗಿದ ಹರಿಯೆ ೧
ಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಸುರಋಷಿ ಪಿತೃಗಳ ಸೃಹಸ್ವಧಾಕಾರಗಳು ?ಪರದೇವತೆ ತಾನೆಯೆಂದು ಎಲ್ಲವು ಕೊಂಡುನರರಿಗೊರಗಳನೆ ಇತ್ತು ಧರೆಯ ಮ್ಯಾಲೆ ತನ್ನಬರಿದು ಬಹು ಪೊಗಾನಿಶೇ ? ಸುರರ ಕಂಟಕನಾಗೀರುತಿರಲು ಒಂದು ದಿನ ಸುರಪತಿ ಹೋಗ್ಯವನಪುರವ ಮುತ್ತಿಕೊಂಡು ಸೆರೆಪಿಡಿದನವನ ಸತಿಯ ೨
ಪಡೆದು ಅವನ ಸತಿಯ ಸುರಪತಿಯು ಎಳೆತರಲುಅಡವಿಯೊಳು ನಾರದನು ಕಂಡು ಎಲೊ ಎಲೊ ಅಪ್ಪಬಿಡು ಬಿಡು ಆ ಸ್ತ್ರೀಯ ಆಕೆ ಗರ್ಭದಲಿ ಎ-ನ್ನೊಡೆಯನ ಭಕುತನಿಹ್ಯ ಕಡುದಾನವನ ಸತಿಯುಪಡೆದರೆ ಮತ್ತಲ್ಲಿ ಕೊಡಲಿಯಂತೆ ನಮ್ಮ ಕುಲಕೆವೈರಿ ಎನಲು ತಡೆಯ ಗಟ್ಟಿಸಿ ಋಷಿಯು ಬಿಡಿಸಿ ಆಕೆಯ ತನ್ನ ಬಿಡಾರಕ್ಕೆ ಕರೆದೊಯಿದನು ೩
ಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಬಲ್ಲಿದ ಮುನಿ ತಾನು ಮೆಲ್ಲನಾಕೆಯ ಕುರಿತುಎಲ್ಲ ಪರಿತತ್ವಗಳ ಬೋಧಿಸಿ ರಕ್ಷಿಸಿಖುಲ್ಲ ತತ್ವಗಳ ಕಡಿದು ಮಲ್ಲ ದುಷ್ಟನ ಸತಿಯಿ-ದ್ದಲ್ಲಿಗೆ ಕಳುಹಿನ್ನು ಅಲ್ಲಿಂದ ನಾರದನೂಲ್ಲಾಸದಿ ಬಂದು ಎಲ್ಲ ಸುರಋಷಿಗಳಿಗೆ ಇಲ್ಲಿರಬ್ಯಾಡಿ ಶ್ರೀವಲ್ಲಭನ ಸಾರಿರೆಂದ ೪
ಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವಬಾಧೆ ಭೂಮಂಡಲದೊಳಗಿನ್ನು ಕಂಡುಸುರಮುನಿಗಳು ಕೆಂಡ ಸದೃಶ ಇವನ ಕೊಲ್ಲುವರ್ಯಾರೆಂದು ಹಿಂಡುಗಟ್ಟಿ ನಡೆದರೊತಂಡ ತಂಡದಲಿನ್ನು ಪೋಗಿ ಸುರರೆಲ್ಲರುದಂಡ ಪ್ರಣಾಮವನ್ನೆ ಮಾಡಿ ಈ ಜಗಕೆ ಕೋದಂಡಪಾಣಿ ನೀನುಅಲ್ಲದಿಲ್ಲವೆಂದು ಮಂಡೆಬಾಗಿ ಸರ್ವರು ೫
ದುಷ್ಟಮರ್ದನ ದೂರಾತಿದೂರ ಜಗ-ತ್ಸ್ರಷ್ಟಿ ಅಧಿಕಕರ್ತ ಶಿಷ್ಟರ ಪಾಲಕ ವಿಷ್ಣು ನೀನೆ ನಮ್ಮ ವಿಚಾರಿಸಲಿಬೇಕು ಕಷ್ಟ ನಮ್ಮೊರೆಯ ಕೇಳೊದುಷ್ಟ ಹಿರಣ್ಯಾಸುರ ಸಮಸ್ತನೆಲ್ಲವ ಸೆಳೆದುಅಟ್ಟಹಾಸದಿ ಎಲ್ಲ ಆಕ್ರಮಿಸಿ ನಮಗೆ ಅಡಿ-ಯಿಟ್ಟೇನೆಂದರೆ ಸ್ಥಳಯಿಲ್ಲದಂದದಿ ಮಾಡಿಸೃಷ್ಟಿಯ ವ್ಯಾಪ್ತಿಸಿಪ್ಪ ೬
ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆನರಹರಿ ಆಗ ಅಶರೀರ ವಾಕ್ಯವ ನುಡಿದಶರಣ ಜನರೆ ಕೇಳಿ ಧರಿಸಿವೆರಡೂ ದಿನವುದುರುಳನ ಸಂಹರಿಸುವೆ ಪರಿಪರಿ ದೋಷಪೂರ್ತಿ ಆಗ್ಯದೆ ಅವಗೆ ತರು ? ತನ್ನ ದ್ರೋಹಕ್ಕೀರಗುವನೊ ಆವಾಗ ಮರಳಿ ನೋಡದೆಮತ್ತೆ ನಾನೆ ಅವತರಿಸಿ ಆ ಹಿರಣ್ಯಕನ ಸಂಹರಿಸುವೆ ೭
ಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಇತ್ತ ಹಿರಣ್ಯಕಾಸುರ ಪೆತ್ತ ಪ್ರಹ್ಲಾದನ್ನಮತ್ತೆ ತಮ್ಮ ಗುರು ಪುತ್ರ ಚಂಡಮಾರ್ಯರ ಕರೆಸಿ ತದ್ವಿದ್ಯ ಕಲಿಸಿರೆಂದ ನಿತ್ಯದಲಿ ಅವರಿನ್ನು ಕರೆದೊಯಿದು ಬಾಲಕಗೆ ಮತ್ತೆ ಧರ್ಮಾರ್ಥ ಕಾಮ ವಿದ್ಯಗಳು ಪೇಳಿ ಸತ್ಯಶಿವ ಸರ್ವೋತ್ಮನೆಂದು ತಿಳಿಸಲಾಗಿ ಪ್ರತ್ಯೇಕ ಮಾಡಿಕೊಂಬ ೮
ಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿತರಳ ಪ್ರಹ್ಲಾದ ನೀ ಉಚ್ಚರಿಸು ಎಂದೆನಲುವರಮೋಕ್ಷಶಾಸ್ತ್ರ ಪ್ರತಿಪಾದಿಸುತ ಧರೆಗಿನ್ನುಹರಿಯೆ ಸರ್ವೋತ್ಮನೆಂದಾಗುರುಪುತ್ರರನ್ನುಪರಮತದ ಉಕ್ತಿಗಳು ಮರಳಿ ಆಡದಂತೆನಿರಪುತ್ರನ ಮಾಡೆ ತರಳನೆ ಈ ಶಾಸ್ತ್ರ ಅರುಹಿದರ್ಯಾರೆನಲು ಹರಿಯಲ್ಲದಿಲ್ಲವೆಂದ ೯
ನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿನಿಮ್ಮ ಮನೆತನಕಿನ್ನು ಅಲ್ಲೆನಲು ಸಿದ್ಧಾಂತಸುಮ್ಮನೆ ಈ ತತ್ವಯಾಕೆ ಉಚ್ಚರಿಪೆ ನೀ ನಿಮ್ಮಯ್ಯ ಸಹಿಸನಿನ್ನುಬೊಮ್ಮನೆ ಜಗಕೆ ತಾನೆಂದೆನಿಸಿ ಮಹಾ ದುರುಳಸುಮ್ಮನಸರುಗಳನ್ನು ಸೋಲಿಸಿ ಹರಿದ್ರೋಹಿ ಹರಿಯೆಲ್ಲಿ ಹತಬಡಿದು ಹರಿಯೆಂದು ಅನಲೀಸ ಕರ್ಮ ಶಾಸ್ತ್ರವೆ ಕಲಿಯೊ ನೀ ೧೦
ಅನ್ಯರಲ್ಲವು ನಾವು ಹಿತವರೆ ನಿನಗಿನ್ನು ನಿನ್ನ ಪಿತ ಕೇಳಿದರೆ ಸಹಿಸ ತಾ ಮುನ್ನದಕೆಅನ್ನವುದಕಗಳಿತ್ತು ಪಾಲಿಪ ನಮ್ಮನ್ನು ಇನ್ನಾತಗಂಜುವೆವೊ ನಿನ್ನ ಕ್ಷೇಮವು ನೀನೆ ತಿಳಿದುಕೊ ಈ ಮೇಲೆ ಇನ್ನೊಬ್ಬರು ಪೇಳುವರು ಬಂದು ಅವಗೆಲ್ಲ ಅನ್ಯಾಯವೆ ನ್ಯಾಯವೆಂದು ಸ್ಥಾಪಿಸಿಬಿಡುವ ನಿನ್ನಿಚ್ಛೆಯನ್ನು ಮುಂದೆ ೧೧
ಭಿನ್ನ ದೇಹ್ಯವು ನೋಡು ಮುನ್ನಿಂದಲಿ ಇನ್ನುಇನ್ನು ಜೀವಕೆ ಅಂತು ಭೇದ್ಯಭೇದಗಳಲ್ಲಿಬನ್ನ ಬಡಿಸುವುದು ನಾಲ್ಕು ಪರಿಭೋಗವು ಬಿಡದೆಸನ್ಮತಿಯಿದ ನೋಡೆ ಅನಂತ ಜನ್ಮಗಳು ಹೀಗಾಗಿ ಪೋಗಿ ಅವೆ ಇನ್ನಾರು ತಂದಿತ್ತರೀ-ದೇಹ್ಯಗಳು ಎನಗೆ ಮುನ್ನೆ ಆ ದೇಹವನುಮುರವೈರಿ ಇರಲಾಗಿ ಇನ್ನೊಬ್ಬಗಂಜೆನೆಂದ ೧೨
ಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆ ಹರಿಆದ್ಯಂತಗಳು ಇಲ್ಲಿ ಹರಿಯ ಹೊರತಾಗಿನ್ನುವೈದ್ಯನಹುದು ನಮಗೆ ವೇದ ಪ್ರತಿಪಾದ್ಯ ಅಭೇದ್ಯ ಭೇದ್ಯ ಗಣ್ಯಾಗಣ್ಯಬೈರಾಗಿಗಳಿಗೆಲ್ಲ ವರವಿತ್ತ ಸುದಾತಸದೃಶವಿಲ್ಲದ ಸ್ವಾಮಿ ಸರ್ವೋತ್ತಮ ತಾನೆಅದೃಶ್ಯವಾಗೀಜಗಕೆ ತೋರದಂತಿಪ್ಪನುರುದ್ರಾದಿಗಳಿಗೀಶನು ೧೩
ಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಖಂಡಿಸಿ ನೀ ನಮ್ಮ ವಿದ್ಯ ಓದು ಒಲ್ಲೆಂದುಚಂಡಶಾಸನನಾದ ಪಿತಗೆ ಪೋಗಿ ಪೇಳಿಕೊಂಡು ಇದು ಒಪ್ಪಿಸಿದರು ಕಂಡು ಹಿರಣ್ಯಕ ಅಸುರ ಕರೆದು ಮುಂದಕೆ ಮಗನ ಮಂಡೆ ನ್ಯಾವರಿಸಿ ಮಮತಿಂದ ಮಾತಾಡಿಸಿದಮಂಡಲಕೆ ಈಶ ಆವವನೆಂದು ಕೇಳೆ ಅ-ಖಂಡೇಶ ಹರಿಯೆ ಎಂದ ೧೪
ಆವ ವಿಪರೀತವನೆ ಅಲ್ಲದ್ದು ನುಡಿದನು ನಾವು ಹರಿ ದ್ರೋಹಿಗಳು ನಮ್ಮ ವೈರಿಯ ನೆನದಸುವಿವೇಕವು ಎನ್ನ ಸುಖಭಾಗ್ಯ ಉಣಲಿ ಈ ಜೀವಗೆ ಇಲ್ಲವೆಂದ ಬೇವು ಕುಡಿದಂತೆ ಮನವಾಗಿ ಮಹಾ ಅಸುರನು ನೀವೆಲ್ಲ ಸುತ್ತ ಇದ್ದವರು ಪೇಳೆಂದೆನಲು ಆವ ಪರಿಯಲವನ್ನ ತಿದ್ದಬೇಕೆಂದೆನಲು ಕಾವವ ನೀನಲ್ಲವೆಂದ ೧೫
ಏಸು ಬಗೆಯಿಂದ ಉಪಾಯದಲಿ ಕೇಳಿದರುಈ ಶಿಶುವು ನಮ್ಮ ಮಾರ್ಗವ ಪಡೆಯನೆಂತೆಂದುರೋಷದಲಿ ನೂಕಿ ಅಪ್ಪಳಿಸಿ ಇವನಿಗೆ ಉಪ-ವಾಸಲಿ ಇಡಿರಿಯೆಂದ ಘಾಸಿಗೊಳಿಸಿ ಬಹಳ ಗರ್ಜಿಸಿ ನುಡಿದರು ಸಾಸಿವೆಯನಿತನ್ನ ಕಳೆಯಗುಂದದ ಕಂಡು ಹೇಸನಿವ ಇದಕೆ ಎಂತೆಂದು ಮನದಲಿ ನಿಶ್ಚೈಸಿದನು ಶತ್ರುವೆಂದು ೧೬
ಈಸು ದಿನ ಇವ ಎನ್ನ ಸುತನು ಎಂದರಿದಿದ್ದೆಮೋಸಗೊಳಿಸಿ ನಮ್ಮ ಮನೆಗೆವೆ ಶ್ರೀಕೇಶವನ ಭಕುತ ಬಂದು ಜನಿಸಿದ ನಮಗೆ ಶಾಶ್ವತದ ವೈರಿಯಂತೆ ನಾಶಗೈಸಲು ಬೇಕು ಎಂದು ನಿಶ್ಚಯ ಮಾಡಿ ಬೀಸಿ ಬೀಸಿ ನೆಲಕೆಹೊಡೆದು ಅಪ್ಪಳಿಸಿನ್ನು ಕೇಶಗಳು ಕಿತ್ತಿನ್ನು ಕೆಡಹಿ ಧರಣಿಯ ಮೇಲೆ ರಾಶಿಪರಿಶಸ್ತ್ರದಿಂದ ೧೭
ನಾನಾ ಬಗೆಯಿಂದ ವಧೆಗೇನೇನು ಉಪಾಯಗಳು ಉಂಟೋ ಅವೆಲ್ಲ ತೀರಿ ಪೋಗೆಕಾಣದೆ ತಾ ಮುಂದೆ ಕಾಪಡವಿ ಬಿದ್ದಂತೆಏನಿದಕೆ ಎಂದನೆಂದ ತ್ರಾಣ ದೊಡ್ಡದು ಇವಗೆ ಕಾಣೆನಾಸರಿಯೆಲ್ಲಿಜಾಣನೆ ನಿನಗಿಷ್ಟು ಬಲವೆಲ್ಲೆದೆಂದೆನಲುಕಾಣ ನೀ ಮಾತ್ರ ನಿನ್ನೊಳಗಿದ್ದ ಹರಿ ನಮ್ಮ ಪ್ರಾಣ ಆಧಾರನೆಂದ ೧೮
ಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಬಲ್ಲಿ ಬಹು ಪಡೆದಿದ್ದೀಯೆಂದು ರೋಷದಿ ಬಂದುಹಲ್ಲುಗಳ ನಡುಗಿಸುತ್ತ ಹಾಹಾಕಾರದಿ ಕಂಬ-ದಲ್ಲಿ ಝಾಡಿಸಿ ಒದ್ದನುಇಲ್ಲಿರ ತೋರಿನ್ನು ಎಂದೆನೆ ಪ್ರಹ್ಲಾದಾಲ್ಯುಂಟು ಇಲ್ಲಿಲ್ಲ ಎಂಬ ಸಂಶಯ ಸಲ್ಲಬಲ್ಲ ಭಕ್ತರ ಹೃದಯವಾಸ ಶ್ರೀ-ವಲ್ಲಭನ ಇಲ್ಲೆ ತೋರಿಸುವೆನೆಂದ ೧೯
ಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಧಗಧಗಾಯಮಾನವಾಗಿ ಜಗಕೆಲ್ಲ ಇದೆಯುಗ ಮಹಾ ಪ್ರಳಯವೋ ಎಂದು ತೋರುತಿರಲುಧಿಗಿಧಿಗಿನೆ ಕಂಬದಿಂದಝಗ ಝಗಾ ಎಂದು ಜನಸಿ ಮೃಗನರರೂಪ ಸೊಗಸಾಗಿ ಧರಿಸಿ ಶ್ರೀವತ್ಸ ಶಂಖ ಚಕ್ರಯುಗ ಭುಜಗಳಲ್ಲಿ ಒಪ್ಪೆ ಈಶ ಸರ್ವೇಶಮಗುವಿನ ಮೊರೆಯ ಕೇಳೆ ೨೦
ಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಪಲ್ಕಿರಿಕಿರಿದು ಜಿಹ್ವೆ ಚಾಚುತ್ತ ರೋಷದಲಿಬಹು ತರಣಿ ಅಸ್ತಂಗತ ಸಮಯವನುನೋಡಿ ಆದರು ನನ್ನ ಸಂಹರಿಸಲಿಮರಳಿ ಮರಳಿ ಮತ್ತೆ ಪಡೆದವನ ಬಿಡುವುತ್ತಸರಸಲಿಯೋ ಎಂಬ ತ್ಯರನಂತೆ ತೋರಿಮುದುರಿಸಿ ತೊಡೆಯ ಮ್ಯಾಲೆ ಇರಿಸಿ ಆ ಖಳನಸಂಹರಿಸಿದನಾಕ್ಷಣದಲಿ ೨೧
ಕೆಡಿಸದೆ ತಾನಿತ್ತ ವರ ಸತ್ಯವೆಂದೆನಿಸಿಒಡಲ ಸೀಳ್ಯವನ ತನ್ನ ನಖಶಸ್ತ್ರಗಳಿಂದಜಡಿದು ಕರುಳನ್ನು ತ್ಯಗದು ಕೊರಳೊಳು ಧರಿಸಿಕುಡಿದಂತೆ ರಕ್ತವೆಲ್ಲಸಡಗರದಿ ಮೊಗವೆಲ್ಲ ಪೂಸಿಕೊಂಡು ಜನಕೆಕಡೆ ಮೊದಲು ಇಲ್ಲದಂತೆ ಆರ್ಭಟ ತೋರೆಹಿಡಿಯಲೊಬ್ಬರಿಗೆ ಅರಸ ಅಶಕ್ಯಾಗೆಮೃಡ ಮುಖ್ಯ ಸುರರು ಎಲ್ಲ ಹರಿಯ22
ಪರಿಪರಿಯಿಂದ ಸಿರಿದೇವಿಗೆಮೊರೆಯಿಡಲವರ ನುಡಿಗಳ ಕೇಳಿಪರಿವಾರವೆ ಕೇಳಿ ಕರುಣಾಕರನು ಆತಆರಿಗೋಸುಗ ಹೀಗೆ ಅವತರಿಸಿಯಿಪ್ಪ ನೋಡಿಹರುಷದಿಂದಲಿ ಆ ತರಳನ ಕರೆದೊಯಿದುಎರಗಿಸಿ ಸಾಷ್ಟಾಂಗ ನಮೋ ನಮೋ ಎಂದೆನಲುಕರುವಿಗೆ ಆವು ಮೆಚ್ಚಿಕೆ ಪುಟ್ಟಿದಂತೆ ನ್ಯಾ-ವರಿಸಿದ ಪ್ರಹ್ಲಾದನ ೧೩
ಇದೆ ಸಮಯವೆಂದು ಸಿರಿ ಅಜಭವಾದಿಗಳೆಲ್ಲಹದನವರಿತು ಹರಿಯ ತುತಿಗೆ ರಕ್ಷಿತರಾಗಿಅದುಭುತಮಹಿಮ ಅಗಮ್ಯ ಅಗಣಿತಗುಣಾಘಟಿತಘಟಿತನೆಂದುಮಧುಸೂದನ ಮಹದಾದಿ ಹೆದ್ದೈವ ಬಲುಕದನ ಕರ್ಕಶ ಅಸುರನ್ನ ಮಡುಹಿದೋ ರಾಯೈದೆ ನಿನ್ನ ಅವತಾರ ಪದೋಪದಿಗೆ ನಮಗೆ ಬಿಡ-ದೊದಗಿ ಕಾಯಲಿ ಎಂದರು ೨೪
ಪರಿಪರಿಯಿಂದ ಸುರ ಋಷಿ ಪಿತೃ ಗಂಧರ್ವಶರಣ ಕುಲವೆಲ್ಲ ಬಂದು ಹರಿಗೆದುರಾಗಿನರಹರಿ ನಮ್ಮನ್ನ ನೆರೆ ಬಳಲಿಸುತಲಿ ದುರುಳನ ತರಿದೆ ಎಂದುಕರಕಮಲ ಮುಗಿದು ಸಾಷ್ಟಾಂಗಗಳನೆ ಮಾಡಿತರಳ ಪ್ರಹ್ಲಾದವರದ ನಮ್ಮ ಪೊರೆಯೆಂದು ಹರುಷದಿಂದಲಿ ಪೂಮಳೆಗರೆದು ಹರಿಯ ಮೇಲೆ ವರತುತಿಯ ಮಾಡಿದರು ೨೫
ಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮತಂದೆಯನು ತರಿದದ್ದು ಸಹ್ಯವೆ ಎಂದೆನಲುಮಂದರಧರ ಗುಣಸಾಂದ್ರ ನೀನಲ್ಲದೆ ಬಂಧು ಎನಗಿಲ್ಲವೆಂದತಂದೆ ತಾಯಿ ಸಕಲ ಇಷ್ಟ ದೈವವು ನೀನೆಬಂಧಕ ಮೋಚಕ ಭಕ್ತವತ್ಸಲ ದಯಾ-ಸಿಂಧುವೆ ನೀ ಸರ್ವ ಅಂತರಿಯಾಮಿ ಗೋ-ವಿಂದ ನಮೋ ನಮೋ ಎಂದನು ೨೬
ಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಅಚ್ಚ ಭಕುತನು ನುಡಿದ ಆ ಸಮಯದಲಿ ಇನ್ನುಮೆಚ್ಚಿಕೆ ನಿನ್ನ ಪಾದತಾಮರಸ ಒಂದಲ್ಲದೆಇಚ್ಛೆ ಮತ್ತಿಲ್ಲವೆಂದಸಚ್ಚಿದಾನಂದ ಸರುವೋತ್ತಮನೆ ನೀ ಜಗದಿನಿಚ್ಚ ಭಕುತರಿಗೆ ಬಂದ ಭಯಗಳ ತರಿದೂತ್ಸಾಹವನೆ ಕೊಡು ಉದಯಾಸ್ತಮಾನದಲಿ ಎಚ್ಚರಿಕೆಯನ್ನೆ ಇತ್ತು ೨೭
ಆಗ ಪ್ರಹಲ್ಲಾದಗೆ ಕರಕಮಲಗಳಿಂದಸಾಗಿಸಿ ನ್ಯಾವರಿಸಿ ಸರ್ವ ಇಹ್ಯಪರ ಸುಖವುಆಗಲಿ ನಿನಗೆಂದು ಆಶೀರ್ವಾದವನಿತ್ತಯೋಗಿಗಳರಸ ಶ್ರೀಶತೂಗಿ ಪ್ರಹಲ್ಲಾದ ತಲೆ ಬಾಗಿ ಆಗಲಿ ಇನ್ನುಭೋಗ ಉಣದನಕ ಬಿಡದೆಂದು ಇಹಲೋಕ ಸುಖನಾಗಶಯನನ ಕರುಣ ಸಕಲ ಸಜ್ಜನ ಸಮ್ಮತಆಗಲಾಗಲಿ ಎಂದರು ೨೮
ಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಶರಣಜನಕೆಲ್ಲ ಮಂಗಳವಿತ್ತ ಪುರುಷನ್ನಸ್ಮರಣೆ ಮಾತ್ರವು ಮಾಡೆ ಸಕಲ ಅರಿಷ್ಟಗಳುಹರಿಹರಿದು ಪೋಪುವುಹರಿಯ ಚರಣವ ನಂಬಿದವರಿಗೆ ಭಯವಿಲ್ಲಸ್ಥಿರಪದವಿ ಉಂಟೆಂಬುವುದಕೆ ಸಾಕ್ಷಿಯಿನ್ನುಮೊರೆಯಿಟ್ಟರೆ ಕಾವನೆಂಬಲ್ಲಿಗೆ ನಮ್ಮವರಪ್ರಹಲ್ಲಾದ ನೋಡು ೨೯
ಜಯ ಜಯತು ಪ್ರಹ್ಲಾದವರದ ಜಗದಾಧಾರಜಯತು ಅನಂತಾವತಾರ ಮೂಲಕೆ ಐಕ್ಯಜಯತು ನಿರ್ದೋಷ ಜ್ಞಾನಾನಂದ ಗುಣಪೂರ್ಣಜಯ ಜಯ ಶ್ರೀ ಅಜಜನಕಜಯತು ಸೃಷ್ಟ್ಯಾದಿ ಕರ್ತ ನೀನೆವಲ ಮಾತ್ರಜಯತು ದುಷ್ಟಮರ್ದನನೆ ಶಿಷ್ಟ ಪರಿಪಾಲಜಯ ಜಯತು ಗೋಪಾಲವಿಠಲ ಭಕ್ತರ ಪ್ರಿಯಜಯವೀವ ಭಜಿಸುವರಿಗೆ ಹರಿಯೆ30

ತಮ್ಮ ಹಿರೀಕರು ಶ್ರೀಹರಿಗೆ
೬೮
ಹರಿಯೇ ನಮ್ಹಿರಿಯರು ಮಾಡಿದುಪಕಾರಮರೆಯದೆ ಸಲಹೊ ಎನ್ನ ಪ.
ಜನಕನಾಜ್ಞೆಯ ತಾಳಿ ನೀನುವನವನವ ಸಂಚರಿಪ ಕಾಲದಿಹನುಮಂತನಾಗಿ ಶರಧಿಲಂಘಿಸಿವನಿತೆ ಕುಶಲವ ತಿಳುಹಿಸಿಅನುಜ ಮೂರ್ಛಿತನಾಗೆ ಅಸುವಿತ್ತುದನುಜ ರಥವೇರಿ ರಣಕೆ ಬರಲಾಕ್ಷಣ ವಾಹನನಾಗಿ ಜಯಪಡೆದು ನಿನ್ನಘನತೆನುಳುಹಿದ ಕಾರಣ ೧
ಸುರದನುಜರಿಗಜೇಯ ಶೈವನುವರಬಲದಿ ಪಾಷಂಡ ದುರ್ಮತಿಜರೆಯ ತನುಜನು ನಿನ್ನಕೂಡೆ ಸಂಗರಕೆ ಬರಲು ನೀ ನಿಲ್ಲದೆಶರಧಿಯೊಳು ಪುರರಚಿಸಿ ಇರುತಿರೆವರವೃಕೋದರನಾಗಿ ದುಷ್ಟನಸರಕುಮಾಡದೆ ಸೀಳಿ ನಿನ್ನ ಭಯಪರಿಹರಿಸಿದ ಕಾರಣ ೨
ಹಿಂದಿನ ವೈರದಲಿ ಖಳಕು-ಲೇಂದ್ರ ಮಣಿಮಂತನೆಂಬ ದೈತ್ಯನುಬಂದು ಅವನಿಯೊಳು ಪುಟ್ಟಿ ನೀನೆ ತಾ-ನೆಂದು ದುರ್ಮತ ಪ್ರಬಲಿಸಿಕಂದುಗೊರಳನೆ ಜಗಕೆ ಕಾರಣ-ನೆಂದು ನಿನ್ನಾಚ್ಛಾದಿಸಿರಲಾನಂದತೀರಥರಾಗಿ ನಿನ್ನನುಮುಂದಕೆ ತಂದ ಕಾರಣ ೩
ನಿನ್ನನೆ ಗುರುದೈವವೆಂಬರುನಿನ್ನ ಪ್ರೀತಿಯ ಸತತ ಪಡೆವರುನಿನ್ನವಜ್ಞತೆ ಲೇಶ ತಾಳರುನಿನ್ನ ಸೇವಿಸುವರುನಿನ್ನ ಅನುಗ್ರಹದಿ ಜಗವ ಪೊರೆವರುನಿನ್ನಲೆ ಪರಮಾದರವರಿಗೆನಿನ್ನ ಕರುಣವರಲ್ಲಿ ಪೂರ್ಣಪ್ರ-ಸನ್ನವಾಗಿದ್ದ ಕಾರಣ ೪
ಹರಿಯೆ ನಾ ನಿನ್ನವರವನು ನಿನ್ನಶರಣು ಪೊಕ್ಕೆನು ಕರವ ಪಿಡಿದು ದು-ಸ್ತರ ಭವಾಂಬುಧಿ ವೇಗದಾಟಿಸಿನಿರುಪದ್ರವ ಸ್ಥಾನ ಪೊಂದಿಸಿನಿರುತ ನಿನ್ನಾರಾಧನೆಯನಿತ್ತುಕರಣಗಳಿಗೆ ಪ್ರತ್ಯಕ್ಷನಾಗಿಪರಮ ಭಕುತರ ಸಂಗಕೊಡು ಜಗದ್ಗುರುವೆ ಗೋಪಾಲವಿಠಲ ೫

ಜಗತ್ತಿನಲ್ಲಿ ನಡೆಯುವ ಎಲ್ಲ

ಉಗಾಭೋಗ
ಅನ್ಯರಿಂದಲಿ ಸುಖವಾಯಿತೆಂಬುದಕಿಂತನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತಕಣ್ಣಿಲ್ಲದಿರುವ ಕುರುಡ ಮೇಲಯ್ಯಪುಣ್ಯಪಾಪವರಿಯದೆ ಬದುಕುವ ಮನು-ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-ಹೀನನಾದರು ಸುಖದುಃಖಗಳುನಿನ್ನಿಂದಾಯಿತೆಂಬ ಮತಿಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

ಈ ಜಗತ್ತಿನಲ್ಲಿ ಯಾರಿಗೆ ಯಾರೂ ಆಗುವುದಿಲ್ಲ
ಲೋಕನೀತಿ
೧೦೯
ಉಗಾಭೋಗ
ಆರಿಗಾರಾಗುವರೊ ಆಪತ್ತು ಕಾಲಕ್ಕೆಆರಿಗಾರೊದಗುವರೊ ಸಂಪತ್ತು ಕಾಲಕ್ಕೆಆರಿಂದ ಬಪ್ಪುವುದು ಆರಿಂದ ತಪ್ಪುವುದುಆರಸಿ ನೋಡುವುದು ಇದರ ಕಾರಣವನು ಇದಕಾರು ವಾರಣದಲಿ ನೋಡಿಆರೋಪಿಸಲು ಎಲ್ಲ ಭಾರ ಅವಗೆಕಾರುಣ್ಯ ಮೂರುತಿ ಗೋಪಾಲವಿಠಲೈಇ ರೀತಿ ಅರಿದವಗೆ ಇಲ್ಲೆ ಪೊರೆವ

ಚಿಂತೆಯನ್ನು ಮಾಡದೆ
೧೨೨
ಉಗಾಭೋಗ
ಎಂತು ಪೋಪುದು ಮನದ ಕಿಂತು (ಚಿಂತೆ ?) ಎಂಬೋದು ಎನ್ನಾಂತರಂಗದಲ್ಲಿಪ್ಪನು ಸುಂದರಾಂಗಪಿಂತಿನ ಸಂಸಾರ ಮರದು ಪೋಗಿತ್ತು ಈಗಚಿಂತನೆಗೆ ಬಂದು ಬಹುದಣಿಸುವುದುಎಂತು ವಿಹಿತದಲ್ಲಿ ಬಿಡಿಸುವೆ ಈ ಅರ್ತಿನಿಂತಲ್ಲಿ ಕುಳಿತಲ್ಲಿ ಹತ್ತಿಹ್ಯದುನಿಂತು ಮಾತೆಯಲ್ಲಿ ಪುಟ್ಟಿಸಿದವನಾರುಚಿಂತಾಯಕ ದೇವ ಗೋಪಾಲವಿಠಲ ನಿ-ಶ್ಚಿಂತನಿಗೆ ವಿಷಯನಾಗಿರು ಸರ್ವದಾ

ಈ ಭೂಮಿಯನ್ನು ಆಳಿದ
೧೨೫
ಉಗಾಭೋಗ
ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿನಷ್ಟವಾಗಿ ಪೋದರಲ್ಲ ನೋಡ ನೋಡಕಟ್ಟಿಕೊಂಡೊಯ್ದರೆ ತೃಣವಾದರು ಹಿಂದೆಇಷ್ಟನಿಷ್ಟಕೆ ಪಾತ್ರರಾಗುವರುದಿಟ್ಟ ತಾ ಹರಿಗೋಲ ದಾಟಿಪೆನೆಂದುಹುಟ್ಟಿಲಿ ನೀರು ತಿರುಹಿ ಕಡೆದಾಟಿಸೆ ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದುಕೊಟ್ಟವರವಗುಂಟು ಬಹುಮಾನವಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರದಕೀಷ್ಟು ಹತ್ತೋದು ಜಲವು ಅಷ್ಟೇ ಅಲ್ಲದೆಇಷ್ಟು ಹರಿಯಾಧೀನ ನಂಬಿದಂಬಿಗನಯ್ಯೈಷ್ಟರೊಳು ಚೆಲುವ ಗೋಪಾಲವಿಠಲೈಷ್ಟವಾಗಿ ಸರ್ವಾಭೀಷ್ಟಗಳನೀವ

ಈ ಉಗಾಭೋಗದಲ್ಲಿ ದಾಸರು ಶ್ರೀಹರಿಗೂ
೧೫
ಉಗಾಭೋಗ
ಓವನ್ನ ಕಾಣದಲೆ ದೇಶದೇಶವ ತಿರುಗಿಘಾಸಿಯಾದೆನೊ ಬಲು ಗರ್ವತನದಿಈ ಶರೀರದೊಳಗೆ ವಾಸವಾಗಿ ಇದ್ದು ಕಾ-ಣಿಸಿ ಕೊಳದೆ ಎನಗೆ ಮೋಸಗೊಳಿಪೆಕೂಸಿನ ಮುಖಕೆ ಬೀಳದೆ ಜನನಿ ಮರೆಯಲಿರೆಕೂಸಿಗಿನ್ನಾವ ಬಲ ರೋದನೊಂದೆ ಆ ಶಿಶುವು ಕಳೆಗುಂದಿ ಸುಮ್ಮನಿದ್ದಿದ್ದರೆಪೋಷಿಸುವ ಜನನಿ ತಾ ಸುಮ್ಮನಿಹಳೊಕೂಸಿನಂತೆ ನಾನು ಜನನಿಯಂತೆ ನೀನುಏಸು ದಿನವೆಂದು ಉಪವಾಸವಿರಲಿದಾಸರ ದಾಸತನ ಉಂಟಾಗೆ ನೀಪೋಷಿಸುತಲಿ ಇಪ್ಪೆ ಇದ್ದಲ್ಲಲ್ಲೆ ಎನ್ನಈ ಸಥೆಯ ಮಾತು ನೀನಾಡಿಸಿದ್ದಲ್ಲವೆಶ್ರೀಶ ಗೋಪಾಲವಿಠಲ ಬಂಧು ಹಾ ಹಾ ಹಾ

ಅಂಟಿಯೂ ಅಂಟದಂತಿರುವ
೧೬೧
ಉಗಾಭೋಗ
ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿಮನೆಯ ಕಟ್ಟುವರೇನೌತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿಬಂದು ಪುಟ್ಟುವರೇನೊನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರ ಕೂಡಿ ಆಡುವುದೇನೊನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗಮತ್ತೆ ವಿದುರನ ಮನೆಯ ಪಾಲ್ಕುಡಿವರೇನೊಸತ್ಯಸಂಕಲ್ಪ ಗೋಪಾಲವಿಠಲ ನಿನ್ನಕೃತ್ಯಕೊಂದನಂತಾನಂತ ನಮೋ ನಮೋ ಎಂಬೆ

ಸರ್ವ ಕರ್ತೃತ್ವ ಶ್ರೀಹರಿಯೆಂಬ
೯೮
ಉಗಾಭೋಗ
ತನ್ನನರಿಯದೆ ಅನ್ಯರ ಬಲ್ಲೆನೆಂಬುದಕಿಂತಕಣ್ಣು ಇಲ್ಲದ ಈಪರಿ ಮಾನ ಉಳಿಸಯ್ಯ ಅ-ಜ್ಞಾನಿಗಳ ಮುಂದೆನ್ನ ನಾನು ಎಂಬುದು ಬಿಡಿಸುಸಕಲ ಕರ್ತೃತ್ವದೊಳು ನೀನು ಎಂಬೋದು ತಿಳಿಸುಅಲ್ಲಲ್ಲಿ ಶ್ವಾನ ಸೂಕರ ನಾನಾ ಯೋನಿಗಳು ಇರಲಿಜ್ಞಾನವಿದು ಒಂದೀಯೊದೀನರೊಡೆಯ ಜ್ಞಾನಮಯ ಗೋಪಾಲವಿಠಲಮೌನಿಗಳರಸ ನಮೋ ಎಂಬೆನೊ

ಇದೊಂದು ನಿಂದಾಸ್ತುತಿ
೨೩
ಉಗಾಭೋಗ
ತೀರಿತೆ ನಿನ್ನ ಸ್ಥಿತಿಸೃಷ್ಟಿಲಯ ವ್ಯಾಪಾರಪೋರನೊಬ್ಬನಗಲಿಸಿ ಸೆಳೆದು ಒಯ್ದುದರಿಂದಪೂರುತಿ ಆಯಿತೆ ನಿನ್ನ ಸಂಕಲ್ಪಕ್ಕೆಕಾರುಣ್ಯನಿಧಿ ಕಪಟನಾಟಕನೆಧಾರುಣಿಯೊಳಗವನ ಸೃಜಿಸಿ ಇಟ್ಟುದರಿಂದಕೀರುತಿಯ ತಂದಿತ್ತ ಧರ್ಮದಲ್ಲಿತೀರಿತೊ ಅವನ ಪುಣ್ಯ ತೋರಿತೊ ಮ್ಯಾಲಾವುದೊತೋರದೆನಗೆ ಒಂದು ಆರಿಂದಾರೊಭಾರವಾದರು ಬಲು ಪೊತ್ತಿದ್ದೆ ಎನ್ನೊಳಗೆಕೀರುತ್ಯಪಕೀರುತಿನ್ನಾರದಯ್ಯಭಾರ ಪೂರುತಿಯಾಯಿತೆ ಅವನ ಸಾಧನವೆಂಬೆನೆತೋರುತದೆ ಮನಕೆ ಮತ್ತೆಲ್ಲಿ ಜನನಭಾರ ನಿನ್ನದು ಎನ್ನ ಎಲ್ಲಿ ನೀನಿರಿಸಿದರುಸಾರಿ ಮೊರೆಯಿಡುವೆ ಲಾಲಿಸು ಬಿನ್ನಪಭಾರತೀಶನೊಡೆಯ ಗೋಪಾಲವಿಠಲಈ ರೀತಿ ಮಾಳ್ಪುದನರಿಯಲಿಲ್ಲ

ಬಿಂಬರೂಪಿಯಾದ ಶ್ರೀಹರಿಯಲ್ಲಿ
೨೬
ಉಗಾಭೋಗ
ನಂಬು ನಂಬು ಎನ್ನ ಎಂದು ಆಡುವ ಸ್ವಾಮಿಬಿಂಬನವನಲ್ಲವೆ ಎನಗೆ ಅಂದು ನೋಡೆಸಂಭ್ರಮ ಪೂರ್ತಿಸದು ಕಾಂಬೋಣಾದರು ಮನದಹಂಬಲವು ಬಿಡದೊ ವಿಷಯದಲ್ಲಿನಂಬಿದರೆ ಅವನ ನಂಬಿದವನೆ ಅಲ್ಲಅಂಬಿಕಾಹೃದಯಸ್ಥನೆನ್ನು ಭೇದವ ತಿಳಿದುಸಂಭ್ರಮದ ಜಾಗೃತಿ ಹುಟ್ಟಲಿ ಅವನಲ್ಲಿಬೊಂಬೆಯಾಗಿ ಎದುರುನಿಂತು ತೋರಿ ಆಡೆನಂಬುಗೆಯು ಸಾಲದೊ ಅಂಬುಜಾಕ್ಷನಂಬಿ ಇಪ್ಪೆನು ಕಂಡ್ಯ ಈ ಪರಿ ಚಿನ್ನಾಟಸಂಭ್ರಮದಲೆನ್ನ ಮೋಹಿಸಬ್ಯಾಡನಂಬಿಗಿ ಬಲು ಉಂಟು ಆಗಿರಲಿ ನಿನ್ನಲಿನಂಬುವರೊ ಜನ ಅನ್ಯ ಹಂಬಲಿಸದೆನಂಬಿ ನಿನ್ನನರಿಯೆ ಹಿಂದೆ ಇಂದು ಮುಂದೆ ಘನನಂಬುಗೆ ಇತ್ತರೆ ನಿನ್ನ ನಂಬುವೆನಯ್ಯಬಿಂಬಮೂರುತಿಯೆ ಗೋಪಾಲವಿಠಲ

ಸಕಲವೂ ಶ್ರೀಹರಿಯ ಅಧೀನವೆಂಬ ಭಾವ
೧೦೨
ಉಗಾಭೋಗ
ನೀನು ಕೊಡುವುದೆನಗೆ ಏನು ಎನಗಿಂದದರಖೂನವಾದರು ತೋರು ಎನ್ನ ಕುರಿತುನಾನು ಬಲು ಅರಸಿ ನೋಡಿದರು ನಿಜಗಾಣೆನುಪಾಣಿದ್ವಯಮುಗಿದು ಬಿನ್ನೈಪೆ ದೇವನೀನೊ ನಾನೊ ಪೇಳೊ ನಿನ್ನ ತಿಳಕೊಂಬಲ್ಲಿಜ್ಞಾನಿಗಳೆ ಇದಕೆ ಮಧ್ಯಸ್ಥರಯ್ಯಏನು ನೀ ಕೊಡುವುದು ಮುದವೆ ಎಲ್ಲಿಗೆ ಪೋದರುಕಾಣದೆ ಹುಡುಕುವೆ ಆನು ಏನೇನೆಂದುಶ್ರೀನಿವಾಸರಂಗ ಗೋಪಾಲವಿಠಲ ಆ-ಧೀನ ನಿನ್ನದು ಎಂದೇನಿದ್ದರು

ಇದು ಒಂದು ನಿಂದಾಸ್ತುತಿ
೩೧
ಉಗಾಭೋಗ
ನೀರೊಳಗೆ ನಿಂತು ನಿಡುಗುಷ್ಟು ನಾರುವಗೆಚಾರು ಕಸ್ತೂರಿ ಲೇಪನದ ಮದವೊಭಾರ ಬೆನ್ನಲಿ ಪೊತ್ತು ಕೈಕಾಲು ಮುದುರಿದಗೆಧೀರಶೇಷಶಾಯಿಯಾದ ಮದವೊಮೋರೆಯಲಿ ನೆಲ ಕೆದರಿ ಬೇರಮೆಲುವವಗೆಸಾರಷಡ್ರಸ ಭೋಜನದ ಮದವೊಕಾರು ಕರುಳನು ವನಮಾಲೆ ಹಾಕಿದವಗೆಹಾರ ಪದಕಾದಿಗಳ ಹಾಕಿದ ಮದವೊಮೂರಡಿಯ ಭೂದಾನ ಬೇಡಿದವಗೆಸಾರಿದರಭೀಷ್ಟಗಳ ಪೂರೈಪ ಮದವೊಧಾರುಣಿಯನಿತ್ತು ಕುಳ್ಳಿರೆ ಸ್ಥಳವಿಲ್ಲದವಗೆಈರೇಳು ಲೋಕಗಳನಾಳ್ವ ಮದವೊನಾರಿಯನು ಕಳಕೊಂಡು ವನವ ಸಂಚರಿಸಿದವಗೆಮೂರುಧಾಮದಿ ರಮೆಯ ಭೋಗದ ಮದವೊಪೋರನಾರಿಯರಿಂದ ಬೈಸಿಕೊಂಡವನಿಗೆವಾರಿಜೋದ್ಭವಾದಿ ಸುರರ ಸಂಸ್ತುತಿಯ ಮದವೊಊರೆಲ್ಲ ನೋಡೆ ಬತ್ತಲೆ ನಿಂತವಗೆಚಾರು ಪೀತಾಂಬರವುಡುವ ಮದವೊಘೋರ ತುರಗವನೇರಿ ಹಾರಿಸ್ಯಾಡುವಗಿನ್ನುವೀರಸಿಂಹಾಸನದಿ ಕುಳಿತ ಮದವೊಮೂರುದಿನದರಸುತನ ಸ್ಥಿರವೆಂದು ನೀನೆಚ್ಚಿಸೇರಿದವರನು ಬಿಡುವುದು ಧರ್ಮವೇನೊಬಾರದೆ ತಪ್ಪದೊ ಹಿಂದಣ ಬವಣೆಗಳುದೂರ ವಿಚಾರಿಸೊ ಮಾರಮಣನೆಶ್ರೀರಂಗರಾಜ ಗೋಪಾಲವಿಠಲ ನಿನ್ನಸಾರಿದವರನು ಪೊರೆದು ಕೀರುತಿಯ ಪಡೆಯೊ

೩೨
ಉಗಾಭೋಗ
ಪರಮಪುರುಷ ಪಾಪನಾಶ ಪತಿತಪಾವನ ಪರತರಪರಮ ಆಪ್ತ ಪರಾತ್ಪರಾತ್ಮಕಪರಂಜ್ಯೋತಿಸ್ವರೂಪ ಪರಮಮಂಗಳಪರಮ ಕರುಣಿ ಪಾಹಿ ಪಂಡರಿರಾಜಪರಮಪುರುಷ ಶರಣಜನಪಾಲಕನೆ ಜಯ ಜಯಶರಧಿ ಬಂಧನ ರಾಮ ಜಯ ಜಯ ಶರಧಿಶಯನ ಶ್ವೇತವರ್ಣ ಶ್ವೇತವಾಹನ ಪ್ರಿಯನೆಭಾರತೀಶನೊಡನೆ ಏ ಭೂ-ಭಾರನಿಳುಹಿದ ಸ್ವಾಮಿ ನಮೋ ನಮೋಚಾರು ಶ್ವೇತ ದ್ವೀಪವಾಸಿ ಗೋಪಾಲ ವಿಠಲಸಾರ್ವಭೌಮ ಪರಮ ಪುರುಷ

ತಾವು ಮಾಡುವ ಎಲ್ಲ ಕರ್ಮಗಳಿಗೂ
೧೦೩
ಉಗಾಭೋಗ
ನೋಡು ನೋಡದಲೆ ಇರು ಹರಿಯೆ ನೋಡಿಪನೆಂದುಮಾಡು ಮಾಡದಲೆ ಇರು ಹರಿಯೆ ಮಾಡಿಪನೆಂದುಕೂಡು ಕೂಡದಲೆ ಇರು ಹರಿಯೆ ಕೂಡಿಪನೆಂದುಓಡು ಓಡದಲೆ ಇರು ಓಡಿಪನರಿದಿನ್ನುಪಾಡು ಪಾಡದಲೆ ಇರು ಪಾಡಿಸುವನರಿದಿನ್ನುನೀಡು ನೀಡದಲೆ ಇರು ನೀಡಿಸುವನರಿದಿನ್ನುಬೇಡು ಬೇಡದಲೆ ಇರು ಬೇಡಿಸುವನರಿದಿನ್ನುಮಾಡಲೀಪರಿ ನೀನು ನಿತ್ಯದಲ್ಲಿಕೇಡು ಎಂಬುವುದುಂಟೆ ಸಾಧನಕೆ ಎಂದೆಂದುಗಾಢಮತಿ ಪುಟ್ಟುವುದು ದಿವಸ ದಿವಸಕ್ಕೆನೋಡಿದರೆ ಬಹು ಸುಲಭ ಗಾಢಸಂಗತಿ ಬ್ಯಾಡಗೋಡೆಮರೆ ಇಲ್ಲಿದಕೆಮಾಡಲಾಯಾಸವಿಲ್ಲ ಫಲವು ಅಧಿಕಪಾಡಿದವರ ಪ್ರಾಣ ಗೋಪಾಲವಿಠಲಪಿಡಿಯೆ ಬಂದನೆಂದವನ ಪಿಡಿದು ಬಿಡನೊ

ತಮ್ಮ ಮನದಂಗಳದಲ್ಲಿ ಆಡಲು ಬಂದಿದ್ದ
೧೬೭
ಉಗಾಭೋಗ
ಬಾಡದೊನಮಾಲೆ ಧರಿಸಿ ಕೊರಳಲ್ಲಿ ನೀಡಿ ನೋಡದ ಹಾಗೆ ಪೋದನವ್ವಆಡುವ ಧ್ವನಿ ಕೇಳಿ ಪಾಡುವ ಪೊಗಳುವನಾಡೊಳಗಪ್ರತಿಪುರುಷನವ್ವನೋಡಿದಮ್ಯಾಲಿವನ ಮನಸು ಅನ್ಯತ್ತರವುನೋಡದೆ ಎಚ್ಚರಿಕೆ ಏಕವವ್ವಾಮಾಡವಲ್ಲವು ಒಂದು ಕರ್ಮವು ಕರಣಂಗಳು ಅಡಗವಲ್ಲವುಆಡುವ ವಚನಗಳ ಕೇಳಲೊಲ್ಲವು ಕರ್ಣನೋಡಿ ಬೆರಗಾಗುತಿವೆ ಏನವ್ವರೂಢಿಯೊಳಗತಿ ಚೆಲುವನೀತನವ್ವನೋಡಿದರೆ ಮನದ ಅಘವಡಗಿತವ್ವಗಾಡಿಕಾರ ಚೆಲುವ ಗೋಪಾಲವಿಠಲಆಡ ಬಂದಿದ್ದೆನ್ನ ಅಂಗಳದೊಳಗೆ

ಸಾಂಸಾರಿಕ ಜೀವನದಲ್ಲಿ ಮುಳುಗಿ
೧೦೫
ಉಗಾಭೋಗ
ಮನೆಯ ಕಟ್ಟುವರುಂಟು ಮಡದಿಮಕ್ಕಳುಂಟುಧನವ ಗಳಿಸುವರುಂಟು ಗಳಿಸದಿದ್ದವರುಂಟುಧನವ ಕಟ್ಟುವರುಂಟು ದಾನ ಮಾಡುವರುಂಟುಋಣವ ಕೊಟ್ಟವರುಂಟು ಋಣ ಮಾಡಿದವರುಂಟುಮಣೆಗಾರತನವಿದರೊಳೆಂದಿಗು ಬೇಡಮುನಿಗಳು ಸಹಿತಾಗಿ ಮೋಸಹೋದರು ಇದಕೆಗುಣಪೂರ್ಣ ಚೆಲ್ವ ಗೋಪಾಲವಿಠಲ ನಿನ್ನಗುಣಚಿಂತೆಯೊಳಿಡು ಇಷ್ಟೆ ಸಾಕು

ಎಲ್ಲವನ್ನೂ ಮಾಡಿಸುವವನು ಶ್ರೀಹರಿ
೪೧
ಉಗಾಭೋಗ
ಮಾಡು ಎನಗೆಂದು ಪೇಳುವುದು ನಿನಗೆ ನೀತಮಾಡಿಸಲು ಮಾಡೆನೆಂಬುವುದು ಎನಗೆ ನೀತನೋಡು ಇದರೊಳು ಫಲವು ಆರದು ಗೆಲುವುದುನೋಡಬೇಕು ಕೊನೆಮೊದಲುವಿಡಿದುಮಾಡಿ ಬಂಧವು ಹಿಂದೆ ತಂದುಕೊಂಡವನಲ್ಲನೋಡು ಮುಂದೆಮಾಡಿ ಬಿಡಿಸಿಕೊಂಬುವುದಲ್ಲಪೀಡಿತನಾಗಿ ಹಸಿವಿಗೆ ಹದಕೆ ಪರಿಯಾಗಿಹಮೂಢಶಿಶುವಿನ ಚಿಂತೆ ಆರದಯ್ಯಓಡಿ ಆಡುವನಲ್ಲ ಕಂಡಕಡೆಯಲಿ ನಾನುಕೇಡು ಯಾರದು ನಿನ್ನವರು ಕೆಟ್ಟರೆಮಾಡಿಸೆನಗೆ ಇಂದು ಬೇಡೋದೆನಗೆ ವಿಹಿತಬೇಡಿದುದು ಕೊಡೆ ತಪ್ಪದು ನಿನಗೆಪಾಡಿದವರ ಪ್ರಾಣ ಗೋಪಾಲವಿಠಲಮಾಡಿ ಮಾಡಿಸು ಮಹಾಪ್ರೌಢದೊರೆಯೆ

ಹಾವಿನ ಹೆಡೆಯ ನೆರಳಿನಂತಿರುವ
೪೬
ಉಗಾಭೋಗ
ಶರಧಿಯ ಉದಕವು ಮೇಘ ಬಾಯೊಳು ಬಿದ್ದುಧರೆಯೊಳಗೆ ಮಧುರವನು ತೋರಿದಂತೆಕರಿಯದಂತವು ಜಗುಳಿ ಗುರುಗಳಂದಣವಾಗಿಪರಿಪರಿಯ ಪೂಜೆ ಕೈಕೊಂಡ ತೆರದಿಇರುತಿಪ್ಪ ನರನಿಗೆ ಹರಿ ನಿನ್ನ ಅರವಿಂದ-ಚರಣದಾಶ್ರಯವ ಕೊಟ್ಟು ಪೊರೆಯೊ ಎನ್ನಕರೆಕರೆ ಸಂಸಾರ ಉರಗನ ಹೆಡೆ ನೆರಳುಹರುಷವೆಂದು ಮಲಗಿಕೊಂಡ ತೆರದಿಕರುಣಾಕರ ರಂಗ ಗೋಪಾಲ ವಿಠಲಮರೆಹೊಕ್ಕರ ಕಾವ ಬಿರುದುಂಟು ದೇವ

ಶ್ರೀಹರಿಯನ್ನು ಹೊಂದಬೇಕಾದರೆ
೧೪೬
ಉಗಾಭೋಗ
ಹರಿಯಬೇಕು ಹರಿಯನು ಐದುವುದಕ್ಕೆಹರಿಯಬೇಕು ಬಹುಜನ್ಮದಘಗಳೆಲ್ಲಹರಿಯಬೇಕು ಜ್ಞಾನಶ್ರುತಿಗೆ ಸಮ್ಮತವಾಗಿಹರಿಯಬೇಕು ಮನ ಹರಿಯಲ್ಲೆ ಆವಾಗಹರಿಯನ್ನೆ ನೆನೆದವರ ಸಂಸಾರದ ಮೂಲಹರಿಯೆ ಬಲ್ಲನು ಕಾಣೊ ಹದವರಿತು ಇನ್ನುಹರಿಯನ್ನೆ ಕಾಣದೆ ಸಂಸಾರಾಂಬುಧಿಹರಿಯೊಳಗೆ ಬಿದ್ದು ಹರಿದಾಡುತಿಪ್ಪರಹರಿಯು ನೋಡವರಕಂಡು ಸಾಧನ ಮಾರ್ಗಹರಿಯ ತೋರಿ ತನ್ನರಿವಂತೆ ಮಾಳ್ಪನುಹರಿಯವತಾರ ಗೋಪಾಲವಿಠಲನುಹರಿಯೆ ಹೇ ದೊರೆಯೆ ನಾನೆಂದು ಮೊರೆಯೆ

ಎಲ್ಲ ಒಂದೆ ಎನ್ನುವ ಅದ್ವೈತವಾದಿ
೧೪೮
ಉಗಾಭೋಗ
ಹಲ್ಲಣವಿಲ್ಲದ ಕುದುರೆ ಹತ್ತಿ ಓಡಿಸಿದಂತೆಬೆಲ್ಲ ಹಾಕದ ಪರಮಾನ್ನದಂತೆಇಲ್ಲದೆ ಹುಟ್ಟು ಹರಿಗೋಲನೇರಿದಂತೆಸೊಲ್ಲಿಗೆ ಬುಡದಲ್ಲಿ ಅಳೆದಂತೆ ಸಾಧನಎಲ್ಲ ಒಂದೆಯೆಂಬ ಜ್ಞಾನವುಂಟಾದವಎಲ್ಲ ಸಾಧನೆಗಳ ಮಾಡಲೇನುಬೆಲ್ಲ ಬೇವಾಗುವುದವನಿಗೀಲ್ಲ ಕಡೆಯಲ್ಲಿ ನೋಡಿ ಮೆದ್ದರನ್ನಮಲ್ಲಮರ್ದನ ಗೋಪಾಲವಿಠಲನಂಘ್ರಿಪಲ್ಲವವನು ಕಾಣ ಎಲ್ಲಿ ಪೋದರನ್ನ

ಕ್ರೋಧದಿಂದ ಸರ್ವನಾಶವೆಂಬ ಅಭಿಪ್ರಾಯ
೧೪೯
ಉಗಾಭೋಗ
ಹಾದಿ ಹಾದಿ ಹಚ್ಚ ಹೋಗುವುದು ವೈದಿಕಮೊದಲುಣಿಸದೆ ತನ್ನ ಸ್ವಾದ ಕೊಡದೆ ಯಾವುದುಸಾಧನವು ತಾ ಒದಗಿ ಇದ್ದರುಕ್ರೋಧವೆಂಬೋದೊಂದು ತಾನೊದಗಲುಮಾದಿಗರ ಮನೆಯ ಮದುವೆ ತೆರದಂತೆಅದ ಮಾಡಿ ಸುಖ ಎಂದಿಗು ಬಾರದುಬೋಧಮೂರುತಿ ಚೆಲ್ವ ಗೋಪಾಲವಿಠಲನೆಪಾದಸೇವೆಯ ನೀಡು ಕ್ರೋಧವನೆ ಸುಡು ಸುಡು

ಶ್ರೀಹರಿಯನ್ನು ಕಾಣುವುದಕ್ಕೆ
ಆತ್ಮನಿವೇದನೆ
೮೯
ಸುಳಾದಿ
ಧ್ರುವತಾಳ
ಅನಂತ ಜೀವ ಮುಕ್ತಿಯೋಗ್ಯರ ಒಳಗೆಲ್ಲಆನೊಬ್ಬ ನೀಚಚೇತನನು ಕಾಣೊನೀನೆ ಬಲ್ಲಯ್ಯ ಸ್ವಾಮಿ ಎನ್ನ ಸ್ವರೂಪವನುನಾನಾ ಯೋನಿಗಳಲ್ಲಿ ಹಾಕುವನೆಶ್ವಾನ ಮುಂತಾದ ಜೀವರೆಲ್ಲರು ತಮ್ಮ ಗತಿಅನೇಕ ಯೋನಿಗಳು ಐದಿ ಐದಿ ಮಾನವಯೋನಿಯು ಮುಂತಾದ್ದೆಲ್ಲೆಲ್ಲಿ ಬಂದುನಾನಾಪರಿ ಸಾಧನಗಳು ಮಾಡಿ ಕಾಣಿಸಿಕೊಂಡುನಿನ್ನ ಆತ್ಮಾನಂದ ಸುಖವನು ಭಂಜಿಸುವರು ಅಂತ್ಯದಲ್ಲಿಜ್ಞಾನಭಕ್ತಿ ಎಂಬೋದು ಎಲ್ಲ ಜೀವರಿಗೆ ಬೇಕುನ್ಯೂನ ಅಧಿಕ ತಾರತಮ್ಯವಾಗಿನೀನೆ ಗತಿಯೊ ಸ್ವಾಮಿ ಇನ್ನು ಬರಲಿಲ್ಲವೆಂದುತಾನು ಇಹು(ರು?)ವ ಜೀವ ಸಾಮಾನ್ಯನೆಏನು ಎನಗೆನ್ನ ನಿನ್ನ ಮೂರ್ತಿಯೆಂದರೆತಾನು ಪುಟ್ಟುವುದಯ್ಯ ಮಮತೆ ಮನಸಾಪ್ರಾಣಿ ಒಬ್ಬ ಯಃಕಶ್ಚಿತ ತಿಳಿವುದಕ್ಕೆ ನಿನ್ನನಾನಾ ಭಕುತರ ಕರುಣ ಅವಗೆ ಬೇಕುಏನು ಗಳಿಸಿದರನ್ನ ಗಳಿಸುವ ಹರಿ ನಿನ್ನಜ್ಞಾನ ದೊರಕುವುದಿನ್ನು ಬಹು ದುರ್ಘಟಜಾಣ ಚೆನ್ನಿಗರಾಯ ಗೋಪಾಲವಿಠಲ ನಿನ್ನಕಾಣವುದಕ್ಕೆ ಜ್ಞಾನಚೇತನ ಬೇಕೊ ೧

ಮಠ್ಯತಾಳ
ಶ್ರುತಿ ಓದಲಿಬೇಕು ಸ್ಮ್ರತಿ ತಿಳಿಯಲಿಬೇಕುಇತರಾರ್ಥಗಳೆಲ್ಲ ನಿರಾಕರಿಸಲಿಬೇಕುಮತ ಅಭಿಮಾನಬೇಕು ಜಪತಪವು ಬೇಕು ಪ್ರತಿ ಪ್ರತಿ ಕ್ಷಣದಲ್ಲಿ ಹರಿಯ ಸ್ಮರಣೆಬೇಕುಪೃಥ್ವಿ ಉದಕ ವಾಯು ಅಗ್ನಿ ಆಕಾಶವುಇತರ ದಶೇಂದ್ರಿಯ ತನ್ಮಾತ್ರಗಳೈದುಜಿತಮನ ಅಹಂಕಾರ ಮಹತತ್ವವಿನ್ನುಚತುರವಿಂಶತಿತತ್ವದಭಿಮಾನಿಗಳುಸತತ ಹರಿಯು ತಾನು ಸರ್ವದ್ವಾರದಿ ತನಗೆಗತಿಗೆ ನಿಯಾಮಕನೆಂಬೊ ಸ್ಮ್ರತಿಬೇಕುಪತಿತಪಾವನ ಗೋಪಾಲವಿಠಲ ಲಕ್ಷ್ಮೀ-ಪತಿ ಸರ್ವಸ್ಥಳದಿ ವ್ಯಾಪ್ತನೆಂದರಿಯಬೇಕು ೨

ರೂಪಕತಾಳ
ಮಾಡಬೇಕು ನಾನು ಮಾಡಿಲ್ಲವೆನಬೇಕುಆಡಬೇಕು ನಾನು ಆಡಿಲ್ಲವೆನಬೇಕುನೀಡಬೇಕು ನಾ ನೀಡಿಲ್ಲವೆನಬೇಕುನೋಡಬೇಕು ಕರ್ಮ ಮಾಡಿಸುವುದು ತನಗೆಬೇಡಿಕೊಂಬುದಕಿನ್ನು ವಿಹಿತಾವಿಹಿತಗಳಿಗೆಕೇಡು ಲಾಭಗಳಿಗೆ ಹಿಗ್ಗಿ ಕುಗ್ಗದಲೆಓಡಿದರೆ ಬಹುಮಂದಿ ವಿಷಯಕ್ಕೆ ನಾಓಡಿದೆನೆಂತೆಂಬೊ ನೋಡು ಶ್ರುತಿ ಇರಲುಮಾಡಬೇಕಾದರೆ ಒಂದು ಕರ್ಮ ಎಲ್ಲಕೂಡಿದರೆ ಆಗುವುದೆಂದು ಅರಿದುಕೊಪಾಡಿದವರ ಪ್ರಾಣ ಗೋಪಾಲವಿಠಲನ್ನಮಾಡಿಪ್ಪ ಕರ್ಮ ಮುಖ್ಯವೆಂದರಿತು ಬಾಳೊ ೩

ಝಂಪೆತಾಳ
ಒಬ್ಬನ ಕರ್ಮ ಅನಂತ ಜನರ ಕರ್ಮಒಬ್ಬನ ದೋಷಕ್ಕನಂತ ಜನರ ಸಹಾಯಒಬ್ಬನ ಸೃಷ್ಟಿಗಾನಂತಜನರ ಸೃಷ್ಟಿಒಬ್ಬನ ಬಂಧ ಲಯ ಎಲ್ಲರಿಗೂ ಬಂಧ ಲಯಒಬ್ಬೊಬ್ಬರ ಗತಿ ಇನ್ನು ಬೇರೆ ಉಂಟು ಇನ್ನುಒಬ್ಬರ ಕರ್ಮಗಳಿಗೆ ಕಡೆ ಮೊದಲಿಲ್ಲಾಬ್ಜಸಂಭವಪಿತ ಗೋಪಾಲವಿಠಲಾಬ್ಬರ ಮೂರ್ತಿ ಹೀಗೆ ಅಂದವರಿಗೆ ಸಾರ್ಥಿ ೪

ತ್ರಿಪುಟತಾಳ
ಜ್ಞಾನ ಉಳ್ಳವನಾಗಿ ಮಾಡಿದ ಪಾಪಕ್ಕೆಜ್ಞಾನ ರಹಿತನಾಗಿ ಮಾಡಿದ ಪಾಪಕ್ಕೆಏನು ಇದಕ್ಕೆ ಪ್ರಾಯಶ್ಚಿತ್ತವೆಂದರೆಶ್ರೀನಿವಾಸನ ಸ್ಮರಣೆ ಮುಖ್ಯವಯ್ಯಾನಾನೆಲ್ಲಿ ಕಾಣೆನೊ ಹರಿಯ ಸ್ಮರಣೆಯಿಂದತಾನಾಗೊ ಸುಖಕ್ಕೆ ಇನ್ನೊಂದು ಕರ್ಮಾನಂತಾನಂತ ಮಾಡಿದ ಕಾಲಕ್ಕೂಪ್ರಾಣಿಗಳಿಗೆ ಸುಖ ದೊರೆಯದಿನ್ನುಏನಾದರು ಏನು ಸಕಲಕ್ಕು ಹರಿಮುಖ್ಯತಾನು ತಾರಕನಾಗಬೇಕು ಮುಖ್ಯದೀನಜನಬಂಧು ಗೋಪಾಲವಿಠಲಜ್ಞಾನಿಗಳಲ್ಲಿ ನಿತ್ಯ ವಾಸವಾಗಿಪ್ಪ ಬಿಡದೆ ೫

ಅಟ್ಟತಾಳ
ಭಯಭಕುತಿ ಕರ್ಮ ಅನಂತಮಾಡಲುಸವೆಯದ ಪದವಿಯು ದೊರೆಯದು ದೊರೆಯದುಜಯವು ಕೊಡದು ಅದು ತ್ರಯಲೋಕದೊಳಗಿನ್ನುಲಯವಾದ ಜ್ಞಾನ ಭಕುತಿ ಪುಟ್ಟಿಸದು ಅದುಪ್ರಿಯವಲ್ಲ ಆ ಕರ್ಮ ಮಾಡೆ ಹರಿಗೆ ಏನುಭಯವುಳ್ಳ ಸ್ಥಳದಲ್ಲಿ ಸುಯೋಗ್ಯನ ಮಾಳ್ಪಭಯನಿವಾರಣ ಸ್ವಾಮಿ ಗೋಪಾಲವಿಠಲಭಯರಹಿತಮಾಳ್ಪ ಭಯ ಬಿಟ್ಟರ್ಚಿಸಲು ೬

ಆದಿತಾಳ
ನಿತ್ಯ ನೈಮಿತ್ತಿಕ ಮತ್ತೆ ತೀರ್ಥಯಾತ್ರೆಹೊತ್ತು ಅರಿತು ಅಗ್ನಿಹೋತ್ರ ಅತಿಥಿಯಹೆತ್ತ ತಾಯಿತಂದೆ ಪೂಜೆಯು ನಾನಾಶ್ರುತ್ಯರ್ಥಗಳಲ್ಲಿ ಹೇಳಿದ ಕರ್ಮವುನಿತ್ಯ ಮಾಡದೆ ಹೋದರೆ ಭಯವಿಂತೆಂದುನಿತ್ಯ ಮಾಡಿದರೇನು ಇಷ್ಟವೆ ದೊರೆಯದುಭಕ್ತಿಪೂರ್ವಕವಾಗಿ ಭಯರಹಿತವಾಗಿಮತ್ತವರ ಕರ್ಮವ ಮಾಡಲುಹತ್ತಿಕೊಡುವ ಬಂದಾನಂತವಾಗಿತುತ್ತು ಮಾಡಿದಂತೆ ಸಾಧನವೆಲ್ಲಭಕ್ತವತ್ಸಲ ಸ್ವಾಮಿ ಗೋಪಾಲವಿಠಲಎತ್ತಲಾದರು ಏನು ಭಕ್ತಿಗೆ ಸಿಲುಕುವ ೭

ಜತೆ
ಜ್ಞಾನ ಭಕ್ತಿ ವಿರಕ್ತಿಯೆ ಸಾಧನ(ಮೇಣು) ಇಲ್ಲದೆ ಇಲ್ಲ ಗೋಪಾಲವಿಠಲ

ವಿಶೇಷ
೧೭೪
ಸುಳಾದಿಧ್ರುವತಾಳ
ಅನಂತನ್ನ ನೋಡಿ ಅಗಣಿತ ಗುಣಗಣನಾನಂತನ್ನ ಪಾಡಿ ಆಗಮಾದಿ ವಿನುತನಾನಂತನ್ನ ಬೇಡಿ ಅನಿಮಿತ್ತ ಬಾಂಧವನಾನಂತನ್ನ ತಿಳಿರಿ ಅಧಿಕಾರಾನುಸಾರಾನಂತ ಜನರ ಪೊರೆವ ಅನಂತರೂಪನಾಗಿಅನಂತನೇವೆ ಅಹೋಬಲ ನಾರಸಿಂಹನಾಗಿಅನಂತಪರಿಯ ತುತಿಪೊ ಆ ಮಾರ್ಕಂಡೇಯಗೊಲಿದುಅನಂತಮೂರ್ತಿ ತೋರಿ ಆತನ ವ್ರತವ ಗೆಲಿಸಿಅನಂತ ಸಿರಿ ಅಜಭವಾದ್ಯರಿಂದಲಿನ್ನುಅನಂತಪರಿಯಲ್ಲಿ ಸ್ಮರಿಸಿಕೊಳುತಲಿಪ್ಪಾನಂತಗಿರಿವಾಸ ಗೋಪಾಲವಿಠಲಾನಂತನಿಂದಲಿ ಅನಂತತೀರ್ಥ ಉಂಟು ೧

ಮಠ್ಯತಾಳ
ಭವನಾಶನ ಮಾಳ್ಪ ಭಾಗೀರಥಿ ಜನಕಭವನಾಶಿನಿ ತೀರ್ಥದಲ್ಲಿ ತಾನೆ ನಿಂದುಅವನಿಯೊಳಗೆ ಒಬ್ಬ ಚಂಡಶಾಸನನು ಎಂ-ಬುವನು ತಾನು ಬಲು ಕವಿಗಳ ದೂಷಿಸುತಭವಪೀಡಿತನಾಗಿ ಬಹು ವಿಪ್ರರ ದ್ರೋಹವನು ತಾಕಿ ಶವನು ಆಗಿ ಬೀಳೆಜವನದೂತರು ಬಂದು ಜಬರಿಸಿ ಒಯ್ಯುವ ಸಮಯ-ಕ್ಕವನ ಅಂಗುಟ ಬೆರಳು ಬನವಾಸಿಲಿ ಬೀಳೆಭವ ತರಿದು ಅನುಭವಕೆ ತಂದು ಇತ್ತುಭುವನದೊಳಗೆ ದಶರಥರಾಯನೆ ಆದಭವರೋಗದ ವೈದ್ಯ ಗೋಪಾಲವಿಠಲನುಪವನ ನಂತರ ನಿಂತು ಪಂಡಿತರನು ಪೊರೆವ ೨

ರೂಪಕತಾಳ
ಸಿರಿದೇವಿ ಪೆಸರಿನ ತೀರ್ಥ ಇಲ್ಲುಂಟುಗರುಡತೀರ್ಥ ಉಂಟು ಉರಗತೀರ್ಥ ಉಂಟುನರರ ಉದ್ಧರಿಸಲು ವಾಯುತೀರ್ಥ ಉಂಟುಪರಿ ಪರಿ ಪೆಸರಿನ ತೀರ್ಥಗಳಿಲ್ಲುಂಟುನರಹರಿ ತಾನೆ ಒಂದೊಂದು ತೀರ್ಥದಿ ಇದ್ದುಧರೆ ಮೇಲಿದ್ದ ಜನರ ಪೊರೆವ ತಿಳಿದವರಿಗೆಕರುಣಾಕರ ದೇವ ಗೋಪಾಲವಿಠಲ ತನ್ನಶರಣರ ಪೊರೆಯಲು ಇರುತಿಪ್ಪುವನಿಲ್ಲಿ ೩

ಝಂಪೆತಾಳ
ಸಿರಿವತ್ಸಕೌಸ್ತುಭ ಸಿರಿಗಂಧ ಕೊರಳಾರಳಿದ ಪೂಮಾಲೆ ಆ ಉರದ ಮೇಲೊಲೆಯೆಕರಣಕುಂಡಲ ಕಸ್ತುರಿ ನೊಸಲು ಥಳಥಳಿಸೆಕಿರಿದಂತ ಕಪ್ಪುರದಕರಡಿಗೊದನಸಿರಿ ಕಿರೀಟವು ಸಿರಿನಾಮ ಕಸ್ತುರಿತಿಲಕಕರ ಚತುರ್ಭೂಭುಜ ಶಂಖಚಕ್ರಾಯುಧವರನಾಭಿಯಿಂದ ಒಪ್ಪೊ ಒಡ್ಯಾಣ ಕಟಿ-ತರ ಮೇಲೆ ಉಡುಗೆ ಕಿಂಕಿಣಿಯ ಗಂಟೆಊರು ಜಾನು ಜಂಘೆ ಜಘನಶರಣರ ಮೋಹಿಪ ರೂಪ ಸಿರಿನಾರೇಯಣ ಶೃಂ-ಗಾರಮೂರ್ತಿ ಗರುಡವಾಹನ ಗೋಪಾಲವಿಠಲಪರಿವಾರದೊಡೆಯ ಪರಬೊಮ್ಮ ಕಾಣೊ ೪

ತ್ರಿಪುಟತಾಳ
ಇಲ್ಲಿ ಉಂಟು ಅಲ್ಲಿ ಇಲ್ಲ ಅಲ್ಲಿ ಉಂಟು ಇಲ್ಲೆ ಇಲ್ಲಸೊಲ್ಲನಾಡಸಲ್ಲದಿನ್ನು ಬಲ್ಲವರಿಗಲ್ಲೆ ಕೈವಲ್ಯಬೆಲ್ಲದಚ್ಚು ಆವ ಕಡೆಯಿಂದಾದರೂ ತಿನ್ನಲು ಬೆಲ್ಲ ಒಂದು ಕಡೆಯಾಗಿ ಕಲ್ಲು ಒಂದು ಕಡ್ಯಾಗೋದೀಲ್ಲಿ ನೋಡಾ ಹರಿ ಇರಲು ಇಲ್ಲಿಗೆ ಬಂದದ್ಯಾಕೆನಲುಸುಲಭದಿ ತಿಳಿವ ಸ್ಥಳದಲ್ಲಿ ಮಹಾತ್ಮೆ ಉಂಟುಅಲ್ಲಿಂದ ಬಂದದ್ದು ಏನುಇಲ್ಲಿಂದ ಕೊಂಡೊಯಿದುದೇನುಬಲ್ಲ ಜ್ಞಾನಿಗಳು ಮನದಲ್ಲಿದ್ದು ಗುಣಿಸಿ ನೋಡಿಮಲ್ಲಮರ್ದನ ರಂಗ ಗೋಪಾಲವಿಠಲಎಲ್ಲಿ ನೋಡಲು ವಿಶ್ವಮೂರ್ತಿ ತಾ ಪೊಳೆವ ೫

ಅಟ್ಟತಾಳ
ನೋಡುವ ತನ್ನ ತಾ ಒಬ್ಬರಲ್ಲಿ ನಿಂತುಬೇಡುವ ತನ್ನ ತಾ ಒಬ್ಬರಲ್ಲಿ ನಿಂತುಮಾಡುವ ತನ್ನ ತಾ ಒಬ್ಬರಲ್ಲಿ ನಿಂತುನೀಡುವ ತನಗೆ ತಾ ಒಬ್ಬರಲ್ಲಿ ನಿಂತುಕೆಡುವಲಾಭಂಗಳ ಕೂಡಿ ಉಣಿಸುವನಗೂಡು ಮಾಡಿಟ್ಟಂಥ ಜಡ ಜೀವರಿಗೆಗಾಡಿಕಾರ ದೇವ ಗೋಪಾಲವಿಠಲಕೂಡಿ ಆಡುತ ನಮ್ಮೊಡನೆ ಸುತ್ತುತಲಿಪ್ಪ ೬

ಆದಿತಾಳ
ಇಲ್ಲೆ ಅನಂತಾನಂತವಾಗಿ ಮೆಲ್ಲನೆ ತಾ ತೋರುತಿಪ್ಪೈಲ್ಲೆ ಅನಂತಾಯುಧಗಳು ಬಲ್ಲವರಿಗೆ ತೋರುತಿಪ್ಪೈಲ್ಲೆ ಅನಂತರೂಪಗಳು ಬಲ್ಲವರಿಗೆ ತೋರುತಿಪ್ಪೈಲ್ಲಿ ಒಂದು ಕರ್ಮವು ಮಾಡೆ ಅನಂತಮಡಿ ಅವರಿಗೀವಎಲ್ಲಿ ನೋಡಾ ತೀರ್ಥಗಳು ಎಲ್ಲಿ ನೋಡಾ ದೇವತೆಗಳುಎಲ್ಲಿ ನೋಡಾ ಮುನಿಗಳು ಎಲ್ಲಿ ನೋಡಾ ತಾಪಸಿಗಳುನಿಲ್ಲಿಸಿಪ್ಪರೊಂದು ಒಂದು ಬಳ್ಳಿ ವೃಕ್ಷರೂಪದಿಂದಪಲ್ಲವಿಸುತ ನಾನಾ ಪಕ್ಷಿಜಾತಿ ರೂಪದಿಂದಹುಲ್ಲುಕಾಷ್ಠಗಳನ್ನು ಇಲ್ಲಿ ಛೇದಿಸುವುದಕ್ಕೆಮೆಲ್ಲನೆ ತಿಳಿದು ಹರಿಗಲ್ಲಿ ಇನ್ನರ್ಪಿಸಬೇಕುಎಲ್ಲ ಪುಷ್ಪಫಲವು ಶ್ರೀವಲ್ಲಭನ್ನ ಸೇವಿಸುತ್ತೈಲ್ಲಿ ಇರುತಿಪ್ಪುವು ಬಲ್ಲವರು ತಿಳಿದು ನೋಡಾಎಲ್ಲರಂತರ್ಯಾಮಿಯಾದ ಬಲ್ಲಿದ ಗೋಪಾಲವಿಠಲಾಲ್ಲಿ ಪ್ರಹ್ಲಾದಗೊಲಿದು ಇಲ್ಲಿ ಬಂದ ದೈವ ನೋಡಿ7

ಜತೆ
ಅನಂತನ ನೋಡಿ ಅನಂತನ ಬೇಡಿಅನಂತ ಒಂದೆದೈವ ಗೋಪಾಲವಿಠಲನೆನ್ನಿ

ಎಲ್ಲಕ್ಕೂ ಪ್ರೇರಕನಾದ ಶ್ರೀಹರಿ
ಭಗವಂತನ ಸಂಕೀರ್ತನೆ

ಸುಳಾದಿ
ಧ್ರುವತಾಳ
ಅನ್ನಂತ ಅಪರಾಧ ಎನ್ನಲ್ಲಿ ಉಂಟೊ ದೇವಇನ್ನು ಮುಂದೆ ಆಗೋವು ಅನಂತವಿದ್ದರನ್ನಮುನ್ನ ನಿನ್ನ ಆ ನಾಮವನ್ನು ನೆನೆಯದೆಅನ್ನಂತ ಅಪರಾಧಕಧಿಕಾರಿ ಆನಾದೆನೋನಿನ್ನ ನಾಮದಿಂದ ಹೋಗುವಷ್ಟು ದೋಷಎನ್ನಿಂದ ಮಾಡಲು ಇನ್ನಳವಲ್ಲವುಇನ್ನು ತಿಳಿದುಹೋಗೆ ಎನ್ನ ಮನವುನಿನ್ನ ನೆನೆಸದನ್ಯಕೆರಗುತ್ತದೆಕಣ್ಣಲ್ಲಿ ಕಂಡರೆ ಕರ್ಣದಿ ಕೇಳಿದರೆಇನ್ನೆಂಥ ವೈರಾಗ್ಯವನ್ನು ನಾ ತೋರುವೆಕುನ್ನಿ ಸ್ವಪ್ನದಿ ಜ್ಞಾನವನ್ನು ತಂದುಕೊಂಡುಸನ್ನುತ ಪರರನ್ನವ ತಿಂದಂತೆಎನ್ನ ದಾಸತ್ವವು ಇನ್ನಿಚ್ಛೈಸಲೇಕಯ್ಯಅನ್ನಂತ ಪರಿಯಲಿ ಶಾಸ್ತ್ರಂಗಳೆಲ್ಲ ತಿಳಿದುತನ್ನ ಸತಿಯನು ಅನ್ಯರಿಗೊಪ್ಪಿಸಿಹೆಣ್ಣು ಶಿಶುವು ಪಡೆದು ಕನ್ಯಾದಾನವ ಮಾಡಿಪುಣ್ಯ ಗಳಿಸಿದಂತೆ ಎನ್ನ ಧರ್ಮವಯ್ಯನಿನ್ನ ದಾಸನಾಗಿ ನಿನ್ನ ಮುದ್ರೆಯ ಧರಿಸಿನಿನ್ನ ಹಾಡಿ ಪಾಡಿ ನಿನ್ನನು ಒಲಿಸದೆಹೊನ್ನ ಉಳ್ಳವನಲ್ಲಿ ಚೆನ್ನಾಗಿ ಪೋಗಿನ್ನುನಿನ್ನಂಥ ದಾತನ್ನ ಇನ್ನೆಲ್ಲಿ ಕಾಣೆನೆಂ-ದುನ್ನತ ಪರಿಯಲ್ಲಿ ಬಣ್ಣಿಸಿ ಕೊಂಡಾಡಿಹೊನ್ನು ಗಳಿಸಿ ತಂದು ಅನ್ನದಾನವ ಮಾಡಿಘನತೆ ಪಡೆದೆನೊ ನಿನ್ನನೊಯಿದು ಬೀರಿಇನ್ನೇನಾಯಿತೆಂಬೊ ಪುಣ್ಯ ಪಾಪಂಗಳುಮುನ್ನ ಮಾಡಿದುದೆಲ್ಲಿ ಇನ್ನು ಮಾಡುತಲಿಪ್ಪೆಸನ್ನುತ ಮುನಿಪ್ರಿಯ ಗೋಪಾಲವಿಠಲಎನ್ನ ದೇಹ ಬಲು ಭಂಗಗೆಟ್ಟಿತಲ್ಲೋ ೧

ಮಠ್ಯತಾಳ
ಆಸೆ ಎಂಬೋದು ದೊಡ್ಡ ದೋಷವೆಂಬೋದು ತಿಳಿದುರಾಸಿ ನರಕದೊಳು ವಾಸ ಮಾಡುವೆನಯ್ಯಹೇಸಿ ಜಂಬುಕ ತಾನು ಗ್ರಾಸಕಕ್ಕಿಯವಾಸೆ ಎಂದು ತಿಳಿದು ಘಾಸಿಬಟ್ಟ ತೆರದಿಮೋಸ ಹೋಗಿ ದುರಾಸೆಗೆರಗಿ ಇನ್ನುಮೀಸಲಾದ ಪುಣ್ಯಹ್ರಾಸ ಮಾಳ್ಪೆನಯ್ಯಈ ಸಮಸ್ತ ದೋಷರಾಶಿ ಒಪ್ಪಿಸಿನ್ನುಬೇಸರದಲೆ ಶ್ರೀ ವಾಸುದೇವ ನಿನ್ನ ಸಾಸಿರ ನಾಮವುಸೂಸಿ ವೃಷ್ಟಿಗರೆದು ನಾಶಮಾಡು ಅಘ-ಪಾಶ ಕಡಿಯೋ ಬೇಗ ಶೇಷಶಾಯಿ ಗೋಪಾಲವಿಠಲ ನಿಜದಾಸರಲಿ ಭಕುತಿ ಲೇಸಾಗಿ ಈಯೋ ೨

ತ್ರಿಪುಟತಾಳ
ಆವಾವ ಕಾಲಕ್ಕು ಜೀವಯೋಗ್ಯತೆ ಅರಿದುದೇವ ನೀನು ಫಲವನೀವುತಲಿರೆಆ ಒಂದು ಪರಿ ಯತನವ ಮಾಡಿ ನಿನ್ನಸೇವೆಗೆ ಅನ್ಯಥವಾಗುವೆನೊ ತನುವಿನ ಗ್ರಾಸವುಕಾವುವಾತನೆ ಬಲ್ಲ ಹಾವು ಬಲ್ಲುದೆ ವೃಥಾ ಧಾವತಿ ಅಲ್ಲದೆ ಹೇವ ಇಲ್ಲದೆ ಮಾನ ಈ ವಿಧ ಎಳೆದುಸಾವು ಕೊಲ್ಲುತಲಿದೆ ದೇವ ಕೇಳೋಆವುದಾದರು ನಿಷ್ಠುರ ಆಡಿದಡೆದೇವನೆ ಪ್ರೇರಕನೆಂದು ಅರಿಯದಲೆನೋವಾಗುವೆನು ನಿನ್ನ ಭಾವಾರ್ಥ ತಿಳಿಯದೆಆವ ಕಾರ್ಯದಲ್ಲಿ ಆವ ಕರ್ಮಗಳಲ್ಲಿ ಆವಾವರಲ್ಲಿನ್ನುಯಾವತ್ತರಲ್ಲಿ ನೀ ವ್ಯಾಪಕನಾಗಿನ್ನುಜೀವರ ಕೈಯ್ಯ ವ್ಯಾಪಾರ ಮಾಡಿಸಿನ್ನುಆ ಉದಕದಿ ಕಮಲವು ಇದ್ದಂತೆಈ ಉಪಾಸನೆಯನ್ನು ಸಾವಧಾನದಿ ಮಾಳ್ಪಜೀವರಿಗೆ ಇನ್ನು ನೀವರಿಯೆ ರಂಗದೇವಕಿನಂದನ ಗೋಪಾಲವಿಠಲಆವರಲ್ಲಿ ಇದ್ದರೆನ್ನ ಕಾವಭಾರ ನಿನ್ನದೋ ೩

ಅಟ್ಟತಾಳ
ಸಾಕು ಸಾಕು ದುರ್ವಿಷಯಕ್ಕೆರಗಿಸದೆನೂಕಬೇಡವೊ ನರಕದ ಜನುಮಕೆನೂಕುನೂಕು ದುರಿತ ಕುಪಥಗಳೆಲ್ಲನೂಕಿಸಬೇಡವೋ ದಿನವ ಕಳೆಯದೆ ವ್ಯರ್ಥಬೇಕು ಎನಿಸು ನಿನ್ನ ಶರಣರ ಸಹವಾಸಸಾಕು ಸಾಕೆಂಬಂತೆ ಸಾರಿದೆ ನಿನ್ನ ನಾಮವಾಕು ಎನಗೆ ಇತ್ತು ಸಹಕಾರವಾಗಿನ್ನುನೀ ಕಾಯಬೇಕೆನ್ನ ಸಾಕಲ್ಯಗುಣನಿಧಿಲೋಕರಕ್ಷಕ ರಂಗ ಗೋಪಾಲವಿಠಲವ್ಯಾಕುಲಗೊಳಿಸು ನಿನ್ನ ಕಳವಳಿಕೆಯೊಳು ೪

ಆದಿತಾಳ
ಧರೆಯೊಳು ಅಜ್ಞಾನವೆಂಬೊ ಕತ್ತಲೆಗಿನ್ನುಹರಿ ನಿನ್ನ ಚರಣಸ್ಮರಣೆದೀಪ ನಿಲ್ಲಿಸೆಇರಬಲ್ಲುದೆ ತಾ ತಮವು ಹರಿದು ಪೋಗುವುದಯ್ಯಕರುಣಾಕರನೆ ಸ್ಮರಣೆ ಫಲ ಉಳ್ಳವರಿಗೆಕರಿಯೆಂಬೊ ದೋಷವಿನ್ನು ಹರಿಯು ಕಂಡ ತೆರದಿಅರಿಯೆ ನಾನಾಪರಿ ಸಾಧನದೊಳಗೆಹರಿ ನಿನ್ನ ಸ್ಮರಣೆಗೆ ಇನ್ನೊಂದು ನಾ ಕಾಣೆಪರಮ ಮೂಢನು ನಾನು ಕರವೊಡ್ಡಿ ಬೇಡಿಕೊಂಬೆವರವ ಪಾಲಿಸು ದೇವ ಕರುಣಾಕರ ಕೃಷ್ಣದುರಿತ ಬಂದರಾಗಲಿ ಹರುಷ ಬಂದರಾಗಲಿಇರುಳು ಹಗಲು ನಿನ್ನ ಸ್ಥಿರ ಭಕುತಿ ಸ್ಮರಣೆಯಿತ್ತುಪೊರೆ ಎನ್ನ ಬಿಡದಲೆ ಗೋಪಾಲವಿಠಲ ೫

ಜತೆ
ನಿನ್ನ ವೃಕ್ಷದ ಹಣ್ಣು ಅನ್ಯರು ಒಯ್ದರೆಪುಣ್ಯ ನಿನ್ನದು ಕಾಣೊ ಗೋಪಾಲವಿಠಲ

ಸಕಲ ವ್ಯಾಪಾರಗಳನ್ನು ಮಾಡಿಸುವ
ತತ್ತ್ವಪ್ರತಿಪಾದನೆ
೧೧೪
ಸುಳಾದಿಧ್ರುವತಾಳ
ಅಪಕಾರ ಉಪಕಾರ ಹರಿಯೆ ನಿನ್ನಿಂದಲೇವೆರಿಪು ಮಿತ್ರಗಳ್ವ್ಯಾಪಾರ ಹರಿಯೆ ನಿನ್ನದು ನೋಡಾಕಪಟ ನಿಷ್ಕಪಟತ್ವ ನಿನ್ನಿಂದಲಾಗುವುದುಶಪಥ ಅಶಪಥಗಳು ನಿನ್ನಾಧೀನವು ಸ್ವಾಮಿಕ್ಲಿಪುತ ಅಕ್ಲಿಪುತಗಳು ನಿನ್ನಾಧೀನವು ನೋಡಾಅಪರಾಧ ಸುಪರಾಧ ನಿನ್ನಾಧೀನವು ನೋಡಾಅಪವರ್ಗ ಸುಪವರ್ಗ ನಿನ್ನಾಧೀನಸಪುತ ದ್ವಿಲೋಕ ಸುಪುತ ದ್ವೀಪ ನಿನ್ನಾಧೀನವುಸಪುತ ವರ್ಣವು ಉಳ್ಳ ಬೊಮ್ಮಾಂಡ ನಿನ್ನಾಧೀನಸ್ವಪನಜಾಗ್ರಸುಷುಪ್ತಿ ವ್ಯಾಪಾರ ನಿನ್ನಾಧೀನಸಫಲ ನಿಷ್ಫಲ ಸರ್ವಸಾಧನ ನಿನ್ನಾಧೀನಉಪದೇಶಾನುಪದೇಶಗಳು ನಿನ್ನಾಧೀನಗುಪುತವ್ಯಾಪುತ ಮೂರ್ತಿ ಗೋಪಾಲವಿಠಲತೃಪುತ ನಿತ್ಯ ನಿರ್ಲಿಪ್ತ ನಿರ್ದೋಷ ನಿಜಾನಂದ ೧

ಮಠ್ಯತಾಳ
ಲೋಕಲೋಕಾದಿಗಳಲ್ಲಿ ವ್ಯಾಪ್ತಲೋಕಾಧಿಪತಿಗಳಿಗೆ ಒಡೆಯಸಾಕಾರನಾಗಿ ಸಾಕುವನುಆಕಾರ ಅಂತ್ಯ ಕಂಡವರಿಲ್ಲಜೋಕೆ ಮಾಡುವ ಗತಿಗಳ ಅರಿದುನಾ ಕಾಣೆ ಇನ್ನೊಂದೊಸ್ತು ಸಾದೃಶ್ಯವಶ್ರೀಕರುಣಾಕರ ಗೋಪಾಲವಿಠಲಏಕನಲ್ಲದೆ ಅನ್ಯರ ನಾ ಕಾಣೆ ಪ್ರಭುವಿನ್ನು ೨

ರೂಪಕತಾಳ
ಹರಿ ಅರಿವಂತೆ ಪರಿಚಾರಕರರಿವನಾವಹರಿ ಸೇವೆಕೊಂಡಂತೂಳಿಗವ ಕೊಂಬನಾವಹರಿ ತಿಳಿದಂತೆ ತಿಳಿದು ಸಾಕುವನಾವಹರಿ ನೋಡಿದಂತೆ ಪರಿವಾರ ನೋಡುವನಾವಹರಿ ಆಳಿದಂತೆ ಪರಿಚಾರಕರಾಳುವನಾವಹರಿ ಸಾರ್ವಭೌಮ ಸುರ ಚಕ್ರವರ್ತಿ ನೋಡುಸಿರಿ ರಾಜಾಧಿರಾಜ ದೊರೆ ಮಹರಾಜಸಿರಿ ಅಜಭವವಂದ್ಯ ಗೋಪಾಲವಿಠಲದೊರೆ ಒಬ್ಬನಲ್ಲದೆ ನರರು ಪ್ರಭುಗಳೆ ೩

ಝಂಪೆತಾಳ
ತನ್ನ ಯೋಗಕ್ಷೇಮವನ್ನು ಅರಿಯದ ಪ್ರಭುವುಇನ್ನಾವ ಪರಿವಾರದಿರವನು ಬಲ್ಲನುತನಗಾಗೊ ಸುಖದುಃಖ ತಾನರಿಯದವಾನ್ಯರಿಗನುಭವ ತಂದೀಯಲಾಪನೆಭಿನ್ನ ಕಾಮದಲ್ಲಿ ಬಯಕೆ ಉಳ್ಳವನುಚಿನ್ನುಮಯ ಹರಿಯಂತೆ ನಮ್ಮ ಪಾಲಿಸುವನೆಅನಂತಗುಣಪೂರ್ಣ ಗೋಪಾಲವಿಠಲೈನ್ನಿಂಥ ಪ್ರಭುವಿರಲು ಅನ್ಯರ ಗೊಡವ್ಯಾಕೆ ೪

ತ್ರಿಪುಟತಾಳ
ಬೊಮ್ಮಾಂಡವೆ ಪುರವು ಬೊಮ್ಮನಯ್ಯನೆ ಪಿತನುರಮೆದೇವಿಯೆ ಮಾತಾ ಸುಮನಸರೆ ಬಂಧುಧರ್ಮಾಧರ್ಮಗಳೆಂಬ ನಿರ್ಮಳೆಂಬೆರಡು ವೃತ್ತಿಕರ್ಮವೆಂಬ ಭೂಮಿಯಲ್ಲಿ ಬಿತ್ತಿನಮ್ಮ ಯೋಗ್ಯತೆ ತಕ್ಕ ಸಂಬಂಧ ಫಲಗಳುಒಮ್ಮೆಗಾದರು ಕೊಡಲು ಕಡಿಮೆ ಇಲ್ಲದಂತೀಮ್ಮಯ್ಯ ಸಾಕು ಸಂಬಂಧವದು ಇಲ್ಲಹಮ್ಮು ಸಲ್ಲದು ನರನೆ ಈ ಮಹಿ ನಿನ್ನದೆನಮ್ಮ ಸಾಕುವ ದೊರೆ ಗೋಪಾಲವಿಠಲಆ ಮಹಿಮನಿರಲಾಗಿ ನಿಮ್ಮ ನುತಿಸಲ್ಯಾಕೆ ೫

ಅಟ್ಟತಾಳ
ಜನನಿ ಗರ್ಭದಲ್ಲಿ ತನುವು ಪೊರೆದನಾವಜನಕನ ಉದರದಿ ತಂದು ಇಟ್ಟವನಾವಎನಗೆ ಶ್ರೀಹರಿಪಾದವನಜಧ್ಯಾನದ ಬಲೈನಿತಾದರೆನ್ನಲ್ಲಿ ಅನುವಾಗಿ ಇತ್ತೆಮನೆಗೆ ಇದ್ದಲ್ಲಿಗೆ ತನಗೆ ತಾನೆ ಸರ್ವಘನಕಾಮ ಕನಕ ವಸನ ಮುಂತಾದುವು ಎಲ್ಲಸೆಣಸ್ಯಾಡಿ ಒಲ್ಲೆಂದರೆ ಬಿಡುವವು ಕಾಣೊಸನಕಾದಿಗಳ ವಂದ್ಯ ಗೋಪಾಲವಿಠಲಘನದೈವ ಎನಗಿರೆ ಮನುಜರ ಮಾತೇನು ೬

ಆದಿತಾಳ
ಹರಿಯನರಿಯದವನೆ ದರಿದ್ರಹರಿಯನರಿದ ಬಡವ ಸಂಪನ್ನಹರಿಯು ಈಯದ ವರವು ಅನಿತ್ಯಾರಿಯದುಣುವನ ಸಿರಿಯು ಮಿಥ್ಯಾಹರಿಯ ಭಜಿಸದೆ ಬದುಕಿದ್ದೆ ವ್ಯರ್ಥಹರಿಗೆ ತನ್ನ ಶರಣರೆಲ್ಲ ಸ್ವಾರ್ಥಹರಿ ಅವತಾರ ಗೋಪಾಲವಿಠಲದೊರೆ ಒಬ್ಬನೆ ಮನವೆರಕ ಎನಗಿನ್ನು ೭

ಜತೆ
ರಾಜಾಧಿರಾಜ ಗೋಪಾಲವಿಠಲ ಮಹಾ-ರಾಜನಿರಲು ಅನ್ಯರಾಜರ ಗೊಡವ್ಯಾಕೆ

ಅಪರೋಕ್ಷ ಜ್ಞಾನವನ್ನು ಗಳಿಸುವ
೧೧೫
ಸುಳಾದಿ
ಧ್ರುವತಾಳ
ಅಪರೋಕ್ಷವೆಂಬುದು ಬಹುದೂರವಿಲ್ಲವಿನ್ನುಸ್ವಪರೋಕ್ಷ ದಾರಢ್ಯದಂತೆ ತಿಳಿದಿರುವುದುಅಪವಾದದ ಮಾತಲ್ಲ ಆಲಿಸಿದರೆ ತಿಳಿವುದುಕಪಟರಹಿತರಾದ ಕೋವಿದರುಶಪಥ ಮಾಡಲಿಬೇಕು ಸರ್ವೋತ್ತಮ ಹರಿಯೆಂದುಚಪಲ ಸಂದೇಹವನ್ನು ಬಿಟ್ಟುತಪಸು ಎಂದು ತಿಳಿದು ತ್ರಿವಿಧತಾಪತ್ರಯವು ಅಪವರ್ಗ ಸುಪವರ್ಗ ದಾರಿ ಹಿಡಿದುಕುಪಿತನಾಗದೆ ದುಷ್ಟ ಉಕ್ತಿ ಸುಜನಕ್ಕೆಕ್ಲುಪ್ತ ಅಧಿಕಹ್ರಾಸ ಇಲ್ಲವೆಂದುಗುಪಿತದಲ್ಲಿ ಹರಿಯ ಗುಣಗಳ ಕೊಂಡಾಡಿಸ್ವಪನ ಜಾಗ್ರತಿ ವ್ಯಾಪಾರಗಳ ತಿಳಿದುಸುಫಲ ದುಷ್ಫಲಗಳು ಈಶಾಧೀನ ತಿಳಿದುರಿಪು ಮಿತ್ರಗಳ ವ್ಯಾಪಾರ ಹರಿಯೆ ಎಂದುಸಪುತಧಾತುಗಳನ್ನಮಯಾದಿ ಕೋಶಗಳುಸಪುತ ದಶಸಹಸ್ರ ದ್ವಿನಾಡಿಯಲಿಗುಪಿತನಾಗಿದ್ದ ಹರಿಯ ಗುಣರೂಪ ಕ್ರಿಯೆಗಳಜಪಿಸು ಏಕೀಭೂತ ಬಿಂಬದಲ್ಲಿಕಪಿಲ ಮೊದಲಾದ ಭಗವದವತಾರತಪಮಾಡಿ ಚಿಂತಿಸು ಬಿಂಬಕ್ರಿಯಗುಪಿತ ವ್ಯಕುತ ನಿನ್ನ ಗೋಪಾಲವಿಠಲತಪಸಿಗೆ ಲಭ್ಯನಾಹ ಈ ಪರಿ ಚಿಂತಿಸೆ ೧

ಮಠ್ಯತಾಳ
ಒಂದು ಮೂರುತಿ ಒಂದೆರಡು ಮೂರುತಿಪೊಂದಿ ಲಿಂಗದೇಹ ಇಷ್ಟ ಮೂರುತಿಒಂದು ಮೂರು ಮೂರ್ತಿ ಅನಿರುದ್ಧಕಾಯ-ದಿಂದ ಒಳಹೊರಗೆ ವ್ಯಾಪ್ತವಾದ ಮೂರ್ತಿಚೆಂದವಾದ ಹೃದಯ ಸದನದಲ್ಲಿಪ್ಪ ಮೂರುತಿಒಂದೇಳು ದಳದಿ ಬಿಡದೆ ತಿರುಗುವ ಮೂರುತಿಒಂದು ಹತ್ತು ಮೂರ್ತಿ ಚತುರ್ವಿಂಶತಿ ಮೂರ್ತಿಒಂದು ನವಮೂರುತಿ ಮತ್ಸ್ಯಾದಿಗಳಿನ್ನುಒಂದೆ ಕೃದ್ಧೋಲ್ಕಾದಿ ಮೂರುತಿಗಳುಒಂದು ಮೂರು ಮೂರ್ತಿ ವಟು ಜಾಮದಗ್ನಿಸಂದಿಸಂದಿಗೆ ವ್ಯಾಪ್ತ ಮೂರುತಿಗಳ ತಿಳಿದುವಂದಿಸಿದರೆ ಎಲ್ಲ ಒಂದೆ ಮೂರ್ತಿ ಕಾಣೋಇಂದಿರೆಯರಸ ಗೋಪಾಲವಿಠಲರೇಯವಂದಿಸಿದಂತೆ ತನ್ನವರಲಿಪ್ಪುವನು ಬಿಡದೆ ೨

ರೂಪಕತಾಳ
ಸಾಸಿರನಾಮಕ್ಕೆ ಸಾಸಿರ ಮೂರುತಿಸಾಸಿರದಳದಲ್ಲಿ ವಾಸವಾದ ಮೂರುತಿದಾಸೋಹಂ ಎಂದವಗೆ ಬಿಡದೆತೋರುವ ಮೂರುತಿಲೇಸು ಹ್ರಾಸಗಳಿಗೆ ಹಿಗ್ಗಿಕುಗ್ಗದ ಮೂರುತಿಕಾಸಿಗೆ ಬೆಲೆಯಾಗಿ ಕ್ರಯವಾಗದ ಮೂರುತಿದೇಶ ದೇಶದಿ ವ್ಯಾಪ್ತವಾಗಿದ್ದ ಮೂರುತಿನಾಶರಹಿತ ಸ್ವಪ್ರಕಾಶವಾದ ಮೂರುತಿದೋಷರಹಿತ ಮೂರುತಿ ಗೋಪಾಲವಿಠಲವಾಸವಾಗಿ ಹೃದಯದೊಳಗಿಪ್ಪ ಮೂರುತಿ ೩

ಝಂಪೆತಾಳ
ಕಣ್ಣಿನೊಳಗೆ ಇದ್ದು ಕಾಣಿಸುವ ಮೂರುತಿಕರ್ಣಂಗಳಲ್ಲಿ ನಿಂತು ಕೇಳಿಸುವ ಮೂರುತಿಭಿನ್ನ ಭಿನ್ನ ಮೂರುತಿ ಬೀಜವಾದ ಮೂರುತಿಅನ್ಯೋನ್ಯ ಆಶ್ರಯವಾಗಿದ್ದ ಮೂರುತಿತನ್ನ ನೆನೆವರಿಗೆ ತಗುಲಿ ತೊಲಗದ ಮೂರುತಿನಿನ್ನವನೆಂದವಗೆ ನೆಲೆಯಾದ ಮೂರುತಿಚಿನ್ನುಮಯ ಮೂರುತಿ ಗೋಪಾಲವಿಠಲಾನ್ಯ ಜನರಿಗೆ ಅವೇದ್ಯನಾದ ಮೂರುತಿ ೪

ತ್ರಿಪುಟತಾಳ
ಏಸು ಜನ್ಮದ ಉಪಾಸನೆ ಮಾಡಲುವಾಸನಾ ರೂಪದಿ ಒಲಿದು ತೋರಿದ ಮೂರುತಿಕೇಶವ ಮತ್ಸ್ಯಾದಿ ಅವತಾರ ರೂಪದಿದಾಸ ಜನರಿಗೆ ಒಲಿದು ತೋರುವ ಮೂರುತೀಇ ಶರೀರ ಹೃದಯಾಕಾಶದಲ್ಲಿ ನಿಂದುಸುಷುಪ್ತಿಲಾತ್ಮಗೆ ಸುಖವುಣಿಸುವ ಮೂರುತಿಭಾಸುರ ಮೂರುತಿ ಭವಗಳ ಕಳೆದಿನ್ನುವಾಸವಾಗಿ ನಿತ್ಯದಿ ನಲಿದು ಆಡುವ ಮೂರುತಿವಾಸುದೇವಾಚ್ಯುತ ಗೋಪಾಲವಿಠಲಶ್ರೀಶ ಕೃಷ್ಣ ಎನ್ನ ಪೋಷಿಸುವ ಮೂರುತಿ ೫

ಅಟ್ಟತಾಳ
ಸೃಷ್ಟಿಸ್ಥಿತಿಲಯಕಾರಣ ಮೂರುತಿನಿಷ್ಟಾನಿಷ್ಟಪ್ರದವಾದ ಮೂರುತೀಷ್ಟಾರಿಷ್ಟಕ್ಕೆ ತೊಡಕಾದ ಮೂರುತಿಬಿಟ್ಟೇನೆಂದರು ಬಿಡಲೀಯದ ಮೂರುತಿನಷ್ಟ ಜನರಿಗಿನ್ನು ವರ್ಜಿಸುವ ಮೂರುತಿಮುಟ್ಟಿ ಭಜಿಸುವರಿಗೆ ಮುಂದೊಲಿದುಸ್ಪಷ್ಟವಾಗಿ ಸುಳಿದಾಡುವ ಮೂರುತಿದಿಟ್ಟಿಸಿ ನೋಡಲು ಸರ್ವ ವಸ್ತುಗಳಿಗುಗಟ್ಟಿಯಾಗಿ ಬಿಂಬವಾಗಿದ್ದ ಮೂರುತೀಷ್ಟದೈವವು ನಮ್ಮ ಗೋಪಾಲವಿಠಲಕಷ್ಟ ಸಂಸಾರದ ಕಡಲ ದಾಟಿಪ ಮೂರುತಿ ೬

ಆದಿತಾಳ
ತಾರಕ ಕಾರಣವಾದಂಥ ಮೂರುತಿತಾರಕ ಮಂತ್ರೋಪದೇಶಕ ಮೂರುತಿಆರಬ್ಧಾಂತಗಾಮಿನಿಯಾದ ಮೂರುತಿಭಾರಕರ್ತ ಅನಿಮಿತ್ತ ಬಂಧು ಮೂರುತಿನಾರಿ ದ್ರೌಪದಿ ಅಭಿಮಾನಕಾಯ್ದ ಮೂರುತಿನಾರಿಯರ ವ್ರತಕೊಲಿದಂಥ ಮೂರುತಿಪೋರರ ಒಡಗೂಡಿ ಆಡಿದ ಮೂರುತಿನಾರಾಯಣಿ ರೂಪವಾದ ಶ್ರೀ ಮೂರುತಿವಾರಿಜೋದ್ಭವಪಿತ ಗೋಪಾಲವಿಠಲಕಾರಣನಾಗೆನ್ನ ಕಾಯ್ವಂಥ ಮೂರುತಿ ೭

ಜತೆ
ಖಂಡಾಖಂಡ ಧ್ಯಾನ ಬಿಡದೆ ನಿತ್ಯವು ಮಾಡೆ ಅ-ಖಂಡೇಶ ಗೋಪಾಲವಿಠಲ ನಿನಗೆ ಒಲಿವ

ಈ ಸುಳಾದಿಯಲ್ಲಿ ಶ್ರೀಹರಿ
೯೦
ಸುಳಾದಿಧ್ರುವತಾಳ
ಅರಿಯಾಗಿ ಸಖನಾಗಿ ಸರ್ವೇಶನೆಅರಸಾಗಿ ಆಳಾಗಿ ಅಪ್ರಮೇಯಸರಸಾಗಿ ವಿರಸನಾಗಿ ಸಿರಿಹರಿಯೆಇರುಳಾಗಿ ಹಗಲಾಗಿ ಶ್ರೀವಿಷ್ಣುವೆನರಕಾಗಿ ಸ್ವರ್ಗವಾಗಿ ನಾರಾಯಣದುರಿತನಾಗಿ ದೂರಾಗಿ ದುರುಳಾಂತಕವರ ಮಾತಾಪಿತನಾಗಿ ಪುರುಷೋತ್ತಮಪುರನಾಗಿ ಕಾನನಾಗಿ ಪುರಂದರತುರುವಾಗಿ ಕರುವಾಗಿ ದಾಮೋದರಮರಿಯಾಗಿ ಮಗನಾಗಿ ಮಂಗಳಾಂಗಧರೆಯಾಗಿ ಧೈರ್ಯನಾಗಿ ಶ್ರೀಕೃಷ್ಣನೆನೆರೆಯಾಗಿ ನಂಟನಾಗಿ ಶ್ರೀರಂಗನೆಹೊರಗಾಗಿ ಒಳಗಾಗಿ ಅನಂತನೆಸರಳಾಗಿ ಕಠಿಣವಾಗಿ ಸರ್ವಜ್ಞನೆಪರವಾಗಿ ಇಹವಾಗಿ ಪರಮೇಷ್ಠಿಯೆದೂರನಾಗಿ ಸಾರ್ಯಾಗಿ ಮುಕುಂದನೆಕಿರಿದಾಗಿ ಹಿರಿದಾಗಿ ತ್ರಿವಿಕ್ರಮವರನಾಗಿ ಅಭಯನಾಗಿ ವಾಸುದೇವಹಿರಿದಾಗಿ ಅಲ್ಪವಾಗಿ ಸಿರಿಕಾಂತನೀರಡಾಗಿ ಏಕೋನಾಗಿ ಶ್ರೀಹರಿಯೆಪರಿಪಾಲಿತನಾಗಿದ್ದ ಬಿಡದೆ ಎಂದೆಂದು ಎನ್ನಸಂರಕ್ಷಿಸುವ ಭಾರಕರ್ತ ಮುಕ್ತಾರಿದವನಿಗೆ ಲಭ್ಯ ಗೋಪಾಲವಿಠಲದೊರೆಯೆ ಪೂರ್ಣಕಾಮ ನಿತ್ಯನಿರ್ಲಿಪ್ತ ೧

ಮಠ್ಯತಾಳ
ಬಲ್ಲೆನೆಂದವ ಅರಿಯ ಅರಿಯೆನೆಂದವ ಬಲ್ಲೈಲ್ಲವೆಂದವಗುಂಟು ಇದ್ದೆನೆಂಬವಗಿಲ್ಲಪೊಳ್ಳುಗಟ್ಯಾಗುವುದು ಗಟ್ಟಿ ಪೊಳ್ಳಾಗುವುದುಒಲ್ಲದವನೆ ಒಲಿವ ಒಲಿದು ಇದ್ದವ ಬಿಡುವಕಲ್ಲುಕಲ್ಲಿಗೆ ತಾಕಿ ಅಗ್ನಿ ಪೊರಟರಿನ್ನುನಿಲ್ಲು ಅದಕ್ಕೆ ಒಬ್ಬ ಪುರುಷ ಬೇಕುಇಲ್ಲೊ ಸ್ತ್ರೀಲಿಂಗವು ಪುರುಷ ಎರಡು ಇದ್ದರೆ ಸೃಷ್ಟಿಎಲ್ಲ ಆಗುವುದೆಂಬೊ ಸೊಲ್ಲನಾಡಲಿ ಬೇಡಫುಲ್ಲಲೋಚನಕೃಷ್ಣ ಗೋಪಾಲವಿಠಲಎಲ್ಲರಿಂದಲಿ ಭೇದ ಅಭೇದನಾಗಿಪ್ಪ ೨

ರೂಪಕತಾಳ
ಧನದಿಂದ ವಿಕ್ರಯ ಸಕಲ ಪದಾರ್ಥವುಧನವ ವಿಕ್ರಯಿಪಂಥ ಅರ್ಥಾವುದುಧನಕ್ಕಿಂತ ಉತ್ತಮ ಮನುಜರಾವೆ ನೋಡುಎನಗಿಂತ ಉತ್ತಮರಾದವರಾನುಸಾರ್ಯಾಗಿ ನಡೆದು ಅಲ್ಲಿದ್ದ ಹರಿಯಗುಣಗಳೇವೆ ಧನವ ಮಾಡಿಕೊಂಡುಮನೆಯ ಮಾಡಿಕೊಂಡು ಮೂರು ಅವಸ್ಥೆಯನೆನೆದು ನೆನೆದು ದಿನ ಒಪ್ಪಿಸುವೆಸನಕಾದಿಗಳ ಪ್ರಿಯ ಗೋಪಾಲವಿಠಲಎನಗೆ ನೀ ವಿಷಯನೊ ಸರ್ವ ಪರಿಯಲಿ ೩

ಝಂಪೆತಾಳ
ಉಪಜೀವನವೆಂಬುದಾವುದು ನೋಡಲುವಿಪರೀತವಾಗಿಹುದು ಈಗ ನೋಡತಪರಹಿತವಾಗಿ ಬಿಂಬನ್ನ ಮರೆದು ಅನ್ಯ ವಿಷಾ(ವಿಷಯ)ಉಪಜೀವನವೆಂದು ತೋಷಬಡುವೆಕಪರ್ದಕವಾದರು ಲಾಭವಾದರು ಕಾಣೆತಪಿಸುವೆನು ಹಗಲಿರುಳು ವಿಷಯದಿಂದಸ್ವಪನದಲ್ಲ್ಯಾದರು ನಿಜ ಸುಖವನ್ನು ಕಾಣೆಉಪವಾಸ ಬಹು ಜನ್ಮ ದೀನ ಉದ್ಧಾರಕೃಪಾಪೂರ್ಣ ನೀ ಎನಗೆ ಗುಪಿತ ಸಖನಾಗಿದ್ದೂಪವಾಸದಲ್ಲಿ ಎನ್ನ ಇಡಲಿಬಹುದೆಸಪುತದ್ವಿಲೋಕಕ್ಕೆ ಅನ್ನದಾತನೆಂದುಅಪರಿಮಿತ ನಿನ್ನ ಕೀರುತಿಯು ಎತ್ತತೃಪುತನಾಗೊಂತೆನಗೆ ಅನ್ನ ನೀ ಉಣಿಸಿದರೆನೀ ಪರಮ ಕರುಣಿ ಎಂದು ತುತಿಪೆಕಪಟನಾಟಕಧಾರಿ ಗೋಪಾಲವಿಠಲಾಪರಾಧ ಮುನ್ನ ನಾ ಮಾಡಿದವನೆ ೪

ತ್ರಿಪುಟತಾಳ
ನಾ ನಿನ್ನ ಮರೆವುದಕ್ಕೆನಗೊಂದುಪಾಧಿ ಉಂಟುನೀ ಎನ್ನ ಮರೆವುದಕ್ಕೆ ಆವ ಉಪಾಧಿಯೋ ?ಅನಾದಿ ಅವಿದ್ಯೆ ಎನಗಾವರ್ಕವಾಗಿದೆನೀನು ನೋಡದಂತೆನ್ನ ನಿನಗಾವ ಆವರ್ಕಜ್ಞಾನಪೂರ್ಣನೆ ಎನಗೆ ನೀನೆ ಆವರ್ಕ ಅಭಿ-ಮಾನಿಗಳೆ ಎನ್ನ ಸ್ವಾತಂತ್ರ್ಯರೆನೀನೆ ಅವರಿಗೊಂದು ಮರ್ಯಾದೆ ಮಾಡಿಟ್ಟುಪ್ರಾಣಿಗಳಾವನ್ನ ಕರ್ತರೆನಿಪೆಗಾಣ ಕಟ್ಟಿದ ಎತ್ತು ಏನು ಬಲ್ಲದೊ ತೈಲತಾನು ಪಕ್ವವಾದ ಪ್ರಮಾಣವುಧೇನಿಪುವು ತಮ್ಮ ಆವಾಗ ಬಿಡೋನೆಂದುಗಾಣಿಗನಾಧೀನ ಎಲ್ಲ ಜೀವನಾನೆ ಮುಂತಾದ ಎಲ್ಲ ಜೀವ ತಿಲಸ್ಥಾನಗಾಣದ ಒರಳವೆ ಸಂಸಾರವೊಅನಾದಿ ಅವಿದ್ಯ ಸಂಸಾರದೊಳು ಹಾಕಿನೀನು ಮರ್ದಿಸಿ ಜ್ಞಾನ ಭಕುತಿ ತೈಲ-ವನು ತೆಗೆದು ಸರ್ವ ಜೀವರಿಗೆ ಎರೆದುನೀನು ಮಾಡುವ ಮರಿಯಾದೆ ಇದುನಾನೇವೆ ಅಪರಾಧಿ ತಿಳಿಯದೊಂದೆನ್ನಿಂದಕಾಣಿಸುತಲಿದೆ ಕರುಣಾಕರಗೋಣಿ ಹೊರಿಸಿದವನೆ ಇಳಿಸಬೇಕಲ್ಲದೆಏನನ್ನ ಸ್ವಾತಂತ್ರ್ಯ ಎಮಗೆ ಉಂಟೊಜಾಣ ಚೆನ್ನಿಗರಾಯ ಗೋಪಾಲವಿಠಲಜ್ಞಾನ ಅಂಬುಧಿ ನಿನ್ನ ಮರೆಯ ಹೊಕ್ಕೆ5

ಅಟ್ಟತಾಳ
ಆರಾಧಿತನಾಗು ಸರ್ವ ಇಂದ್ರಿಯಗಳಿಂದಆರಾಧನೆಯ ಮಾಡಿ ಸಾರೆ ನೀನಲ್ಲದೆಆರಾಧನೆಯಿಂದೊಂದು ಆಶೆ ಎನಗೆ ಬೇಡಆರಾಧಿಸಿದೆನೆಂಬೊ ಅಹಂಕಾರವದು ಬೇಡಆರಾಧನೆಯ ಸಾಧನಾರಾಧಕ್ಕಾಗಲಿತಾರತಮ್ಯ ಪರಿವಾರ ಸಹಿತ ತಂತ್ರಸಾರ ಯುಕುತವಾದಆರಾಧನೆಯ ಮಾಡಿ ಸಾರಭೋಕ್ತ ಸುಂದರ ಮೂರುತಿಯನುತೋರಿ ಎನ್ನೊಳಗೆ ಸ್ಫೂರುತಿಯನ್ನು ಕೊಟ್ಟುಕೀರುತಿ ನಿನ್ನದು ಕೊಂಡಾಡುತ ಸದಾವಾರಣಾಸಿಯು ಮುಂತಾದ ಕ್ಷೇತ್ರಗಳೆಲ್ಲತೋರಿಸಿ ಅಲ್ಲಲ್ಲಿ ಸ್ತೋತ್ರ ಮಾಡಿಸಿ ನಿನ್ನಚಾರು ಚರಣದಲ್ಲಿ ಸೇರಿಸಿ ಸಲಹುವುದೊಕಾರಣ ನೀ ಬಲ್ಲಿ ಎನ್ನ ತಂದುದಕಿನ್ನುನಾರಾಯಣ ನಿನ್ನ ತುತಿಯ ಮಾಡಿಸು ಪೂರ್ಣಮೀರಿ ಬಂದುವು ದಿನ ಸಾರಿಪೇಳುತ ಹೀನೆ (ಹೀಗೆ ?)ಶಾ(ಶ ?)ರೀರವೆಂಬುದು ಅನಿತ್ಯ ಬಲುಸಿದ್ಧಊರಿಗೆ ಮುತ್ತಿಗೆ ಬರುತಿದೆ ಎಂಬಂಥವಾರುತೆ ಆದರು ಸಾರೋರಪರೋಕ್ಷಭಾರ ನಿನ್ನದು ಕಂಡ್ಯ ಗೋಪಾಲವಿಠಲ ವಿಚಾರ ನಿನ್ನಲ್ಲಿರ್ಹಗಳೆ (ಇರುಳುಹಗಲೆ) ನಗಿರಲಿ ೬

ಆದಿತಾಳ
ಛಲವಾಗಿರಿಸು ಮತ್ಕುಲ ಸ್ವಾಮಿಯೆ ನಿಹಫಲವು ಅಧಿಕ ನೋಡಿ ಕಲಿಯುಗ ಸಾಧನಹಲವು ಬಗೆಯಲ್ಲಿ ಬೇಡುವುದೇನಿಲ್ಲಸುಲಭದಿ ಸುರನದಿ ಸ್ನಾನವ ಮಾಡಿಸಿಸ್ಥಳವ ಸೇರಿಸಿ ಬಂಧುಗಳ ಸಹಿತ ತಂದಿಲ್ಲಿ ನಿಲ್ಲಿಸಿದಮ್ಯಾಲೆನ್ನ ತಿಳಿದದ್ದು ಮಾಳ್ಪೋದುಕಳವಳ ಇದರ ಹೊರತಂದು ಕಾಣಿಸೋದಿಲ್ಲಉಳಿದ ಧರ್ಮಗಳ ಬಲ್ಲ ನಾನಾಗಲಿತಿಳಿವಿಕೆ ಬಲುಕೊಡು ನಿನ್ನ ಕಥೆಯಲ್ಲಿಚಲಿಸದೆ ಮನಸಿಗೆ ನಿಲುಕುತ ನೀನಿರುಗೆಲಿದೆ ನಾನಾ ಸಂಕಲಿಪಿಸಿದದನೆಲ್ಲಸಲಿಗೆಲಿ ಎನೆ ನಾ ಬಿನ್ನೈಸಿದದನೆಲ್ಲಭಳಿ ಭಳಿರೆ ಸ್ವಾಮಿ ಭಕುತ ಜನರ ಪ್ರೇಮಿಚೆಲುವ ಶುಭಾಕಾರ ಚಕ್ರ ಶಂಖಧರಬಲು ವೈಚಿತ್ರ್ಯ ಕೋಮಲಮನಪುರುಷಜಲಜಾಕ್ಷನೆ ಮಹಾಕಲುಷ ಸಂಹಾರನೆಜಲಜಸಂಭವಪಿತ ಜನನಮರಣದೂರಚಲ ಅಚಲಾಗತ ಅಚಲಾನಂದನೆಚಲಿಸುವ ಕರಣಕುಂಡಲಗಳ ಪ್ರಭೆಯಕಳೆಯ ಪ್ರಕಾಶಿತ ಮೊಗನೆ ಮನೋಹಾರಾ-ವಳಿ ಪಂಕ್ತಿಯ ಸುಜಠರ ಸಿರಿವತ್ಸಸುಳಿಯ ಗುಂಭ ಪೊಕ್ಕುಳ ಕಟಿ ಸುಗುಣಘಿಲ ಘಿಲಕು ಊರು ಎತ್ತಿಕುಣಿಯೋ ಚರಣನಿಲುಕುತ ಇರು ಎನ್ನ ಮನಕೆ ಆಭರಣಸುಲಭ ತಾರಕ ನೋಡು ಹರಿ ನಿನ್ನ ಸ್ಮರಣಚೆಲುವ ದೇವರದೇವ ಗೋಪಾಲವಿಠಲಸಲಿಗೆ ಬಿನ್ನಪಿದೊಂದು ಸಲಿಸೊ ಹೇ ಜೀಯ ೭

ಜತೆ
ಕಾರಣಿಲ್ಲದ ಕಾರ್ಯ ಮಾಡುವರುಂಟೇನಯ್ಯಕಾರಣ ಪುರುಷ ಕೇಳೊ ಗೋಪಾಲವಿಠಲ

ಶ್ರೀಹರಿ ಎಲ್ಲರಲ್ಲಿಯೂ ನಿಂತು
೧೧೬
ಸುಳಾದಿ
ಧ್ರುವತಾಳ
ಆಡಿ ಆಡಿಸುವನು ನಾಡ ಜೀವನರನ್ನುಮಾಡಿ ಮಾಡಿಸುವನು ನಾಡಜೀವರ ಕಯ್ಯಬೇಡಿ ಬೇಡಿಸುವನು ನಾಡಜೀವರ ಕಯ್ಯನೋಡಿ ನೋಡಿಸುವನು ನಾಡಜೀವರುಗಳಓಡಿ ಓಡಿಸುವನು ನಾಡಜೀವರನ್ನುನೀಡಿ ನೀಡಿಸುವನು ನಾಡಜೀವರ ಕಯ್ಯಕೇಡು ಲಾಭವು ಎರಡು ಕೂಡಿ ಹರಿ ಅಧೀನಮಾಡಿಸುವ ಯೋಗ್ಯತೆ ಹಿಡಿದು ಸಾಧನವರೂಢಿಯೊಳಗೆ ಇನ್ನು ಈಡಾದ ವಸ್ತುವಿಲ್ಲನಾಡಜೀವರಿಗೀತನಲ್ಲದೆ ಗತಿಯಿಲ್ಲಪೀಡೆ ಮನವೆ ನಿನ್ನ ನಾಡಯೋಚನೆ ಹೋಗ-ಲಾಡಿ ಹರಿಯ ಪಾದ ನೋಡಿ ಸುಖಿಯಾಗಿರುನಾಡದೈವರ ಗಂಡ ಗೋಪಾಲವಿಠಲನ್ನಹಾಡಿ ಪಾಡಿ ಕೊಂಡಾಡಿ ಬೇಡಿಕೊ ಪದ್ಧತಿಯ1

ಮಠ್ಯತಾಳ
ನನ್ನದೆಂಬುದರೊಳು ನಿನ್ನದೆ ಹರಿಯೆನ್ನೂಣ್ಣೊ ಊಟವು ಎಲ್ಲ ನಿನ್ನದೆ ಹರಿಯೆನ್ನುಚಿನ್ನ ರೌಪ್ಯಗಳು ಬಣ್ಣ ಬಿಳಿದು ಎಲ್ಲಕಣ್ಣಲ್ಲಿ ಕಂಡದ್ದು ನಿನ್ನದೆ ಹರಿ ಅನ್ನುಪುಣ್ಯ ಪಾಪಗಳು ನಿನಗೆ ಮಾಡಲಿಕ್ಕೆಇನ್ನು ಸ್ವಾತಂತ್ರ್ಯವು ಎಂದೆಂದಿಗೆ ಇಲ್ಲಕಣ್ಣು ಇಲ್ಲದವಗೆ ಅನ್ನ ಉಣಿಸಿದಂತೆಪುಣ್ಯಾತ್ಮ ದೇವ ಎನ್ನ ಪಾಲಿಸುವನುನಿನ್ನ ಕರ್ತೃತ್ವವು ಹರಿ ಅಧೀನವುಮನ್ನಿಸುವನು ತನ್ನ ಮನ ಬಂದಂತಾಡಿಅನ್ಯದೈವರ ಗಂಡ ಗೋಪಾಲವಿಠಲಾನಂತ ಶಕ್ತನು ಅನಂತ ಗುಣಪೂರ್ಣ ೨

ರೂಪಕತಾಳ
ಊರ ಒಳಗಿನ ವಸ್ತು ಆರಾದರು ಒಯ್ದರೆದೂರು ಹಾಕಿ ತಳವಾರರ ಹೊಡೆದಂತೆಕ್ರೂರವಚನ ನಿಷ್ಠುರ ಜಿಹ್ವೆ ನುಡಿದರೆಸೇರದೆ ಪರರ ಪಲ್ಲುದುರ ಬಡಿದಂತೆಆರು ಮೆಚ್ಚದ ತಪ್ಪು ಕರಗಳು ಮಾಡಿದರೆಹುರಿ ಬೆನ್ನ ಚರ್ಮ ಹಾರ ಹೊಡೆದಂತೆಆರಾರಲ್ಲಿ ಕರ್ತ ಕಾರಯತಾ ಪ್ರೇರಕಮಾರಜನಕನೆ ವ್ಯಾಪಾರ ಮಾಡಿಸಿ ಜೀವನರಗೀ ಪ್ರಕಾರ ಕರ್ಮಫಲವುಣಿಸುವಆರು ಈತಗೆ ಒಂದು ಸರಿಯಾದ ವಸ್ತುವಿಲ್ಲವಾರಿಜನಾಭನೆ ಸರ್ವೋತ್ತಮ ಕಾಣಿರೋಶ್ರೀರಮಣ ನಮ್ಮ ಗೋಪಾಲವಿಠಲಧೀರರಿಗೆ ಧೀರ ಕಾರುಣ್ಯಸಾಗರ ೩

ಝಂಪೆತಾಳ
ದೇವನೆಂದರೆ ನಮ್ಮ ದೇವ ಈತನೆ ಕಾಣೊದೇವಾದಿ ದೇವತೆಗಳಿಗೆ ದೇವದೇವರೆಂಬೊ ಮಿಕ್ಕದೇವತೆಗಳಿಗೆಲ್ಲ ದೇವ ಈತನೆ ಕಾವುತಾನೆ ನೋಡಿದೇವನಿಲ್ಲದ ಸ್ಥಳವು ಆವಲ್ಲಿ ಇಲ್ಲವಿನ್ನುದೇವ ಸರ್ವತ್ರದಲ್ಲಿ ವ್ಯಾಪಕ ಭಾವ ಶುದ್ಧದಲಿನ್ನುಸೇವಿಸಿದರಿನ್ನು ದೇವ ದೇವಕ್ಕಿಗೆ ಕಂದನಾದಗೋವಳರೊಡೆಯ ನಮ್ಮ ಗೋಪಾಲವಿಠಲನಕಾವೊಘನವಯ್ಯ ಇನ್ನಾವಲಿದ್ದರನ್ನ4

ತ್ರಿಪುಟತಾಳ
ಲೋಕಲೋಕದೊಳು ಅನೇಕ ಜೀವರುಂಟುಲೋಕಲೋಕಾಚಾರ ಅನೇಕ ಕರ್ಮಗಳುಂಟುಲೋಕ ಲೋಕದೊಳಗೆ ತ್ರಿವಿಧ ಜೀವರುಂಟುಲೋಕ ಲೋಕಕೆ ಎಲ್ಲ ಸಾಕುವನೊಬ್ಬನೆಕಾಕುಗೊಂಡಿನ್ನು ಕಂಡವರಿಗೆ ಬೇಡಿದರೆತಾ ಕೊಡುವರೆಲ್ಲಿಂದ ತಾ ಕಾಣದವರೆಲ್ಲಸಾಕುವನೊಬ್ಬನೆ ಸಕಲ ಜೀವರುಗಳನೀ ಕೇಳು ಮನವೆ ನಿನ್ವ್ಯಾಕುಲವನು ಬಿಡುಏಕ ಚಿತ್ತದಲಿನ್ನು ಏಕೋದೇವನ ಭಜಿಸುಸಾಕಲ್ಯ ಗುಣಪೂರ್ಣ ಗೋಪಾಲವಿಠಲಲೋಕದಿಂದಲಿ ಭಿನ್ನ ಲೋಕರ ಪಾಲಕ5

ಅಟ್ಟತಾಳ
ತ್ರಿವಿಧ ಜೀವರು ಉಂಟು ತ್ರಿವಿಧ ಕರ್ಮಗಳುಂಟುತ್ರಿವಿಧ ಗುಣಗಳುಂಟು ತ್ರಿವಿಧ ಕಾರ್ಯಗಳುಂಟುತ್ರಿವಿಧರೊಳೊಂದೊಂದು ತ್ರಿವಿಧ ಬಗೆಯೆ ಉಂಟುತ್ರಿವಿಧ ಜೀವರ ಕಾರ್ಯ ಶ್ರೀಹರಿ ಆಧೀನತ್ರಿವಿಧರಿಂದಲಿ ಭಿನ್ನ ತ್ರಿವಿಧರ ಪಾಲಕತ್ರಿವಿಕ್ರಮಮೂರ್ತಿ ಗೋಪಾಲವಿಠಲನ್ನತಿಳಿದು ಸಾಕಲ್ಯದಿ ತಿಳಿಯಲು ವಶವಲ್ಲ ೬

ಆದಿತಾಳ
ಈತನೆ ನಮ್ಮ ದೇವ ಈತನೆ ನಮ್ಮ ಕಾವೈಇತನೆ ನಮ್ಮ ತಂದೆ ಈತನೆ ನಮ್ಮ ತಾಯೀಇತನೆ ನಮ್ಮ ಬಂಧು ಈತನೆ ನಮ್ಮ ಬಳಗೈಇತನೆ ಇಹ ನಮಗೀತನೆ ಪರವೊಈತನೆ ದೇಶವು ಈತನೆ ದಿಕ್ಕಿನ್ನುಈತನೆ ಗತಿ ಇನ್ನೊಂದು ದೈವವಿಲ್ಲವಾತಜಾತನಪಿತ ಗೋಪಾಲವಿಠಲ ಸೋತೆನೆಂದವರ ಬೆನ್ನ್ಹತ್ತಿ ಪಾಲಿಸುವನು ೭

ಜತೆ
ಬಿಡೆನು ಬಿಡೆನು ಇನ್ನು ಮುಂದೆ ಇದೆ ದೈವಪಿಡಿದೆ ಗೋಪಾಲವಿಠಲನ ಅಡಿಗಳ ಅನುದಿನ

ಸರ್ವಾಂತರದಲ್ಲಿ ವ್ಯಾಪ್ತನಾಗಿ
೧೧೭
ಸುಳಾದಿ
ಧ್ರುವತಾಳ
ಆದಿನಾರಾಯಣ ಅನಿಮಿತ್ತ ಬಂಧು ದೇವ”ಭೇದಕಾರ್ಯತೋ ಗುಣವಾನ್ ಜ್ಞಾನಾನಂದ ಪೂರ್ಣ’’ವೇದಾಂತವೇದ್ಯ ಅವತಾರ ಮೂಲಕ್ಕೆ ಐಕ್ಯ-ನಾದ ಬಿಂದು ಘೋಷ ಸರ್ವರಂತಲಿ ಪೂರ್ಣಮೇದಿನಿಯೊಳಗಂತರ್ಬಹಿ ನಾರಾಯಣ ವ್ಯಾಪ್ತಛೇದಾಭೇದವು ನಾಶ ಜನನಮರಣರಹಿತಆದಿಯಲ್ಲಿ ಪೂರ್ಣ ಸಾಧುಜೀವರಪಾಲ ಸರ್ವಕಾಲದಲ್ಲಿಶೋಧಿಸಿ ತಿಳಿವೋದು ಜಡಚೇತನದಿ ಭಿನ್ನಕ್ರೋಧರಹಿತ ಸಕಲ ದೋಷದೂರ ರಂಗಮೋದತೀರ್ಥರ ಉಕ್ತಿ ಸಾಧಿಸಿ ಅರಿದರೆಆದರಿಸುವನು ಹರಿ ಆವಲ್ಲಿದ್ದ ರನ್ನಮಾಧವನ ಕೂಡ ವಿರೋಧ ಮಾಡಿದಂತೆ ಅಲ್ಲಖೇದಗೊಂಡು ಬರಿದೆ ಏನಾದರೂ ನೋಡಲಿಖೇದಗೊಂಡು ಬರಿದಾಗದೆ ಪೇಳುವುದಿಲ್ಲಶ್ರೀಧರ ಸೃಷ್ಟಿಸ್ಥಿತಿಲಯಕೆ ಕಾರಣಯಾದವರ ಕೂಡಲಿ ಅಜ್ಞ ಜನಮೋಹೈಇ ಧರೆಯೊಳಗಾಡಿ ಬಗೆ ಬಗೆ ತೋರಿದಕಾದಿ ಸೋತು ಬಾಣದಿಂದ ಪೆಟ್ಟನೆ ತಿಂದಆದಾವ ಜನರಿಗೆ ಅಜ್ಞಾನ ತೋರಿದಕಾದನು ಗೋವುಗಳ ಭಕ್ತರ ಪಾಲಿಪೈಇ ದೇವಕಿಗೆ ತಾ ಸುತನು ಆದಓದನಗಳು ಉಂಡ ಉದ್ಧರಿಪ ಭಕ್ತರಭೇದಾಭೇದ ತೋರಿದ ಅಸುರರಿಗೆವಾದ ಸಲ್ಲದು ಕೋವಿದರಾದರು ಕೇಳಿವಾದಿಪುವರಿಗೆ ನರಕವು ತಪ್ಪದುಭೂದೇವಿ ಅರಸ ಗೋಪಾಲವಿಠಲನ್ನಪಾದ ಸೇವಕರಿಗೆ ಬಾಧೆ ಬಂಧನವಿಲ್ಲ ೧

ಮಠ್ಯತಾಳ
ಒಂದೆ ದೇವನು ತಾನು ಅನಂತ ಅನಂತವತಾರಒಂದೊಂದು ಅವತಾರಕ್ಕೆ ಮೂಲ ರೂಪದಲ್ಲಿದ್ದಒಂದೆ ಬಲ ಜ್ಞಾನ ಆನಂದ ನಿರ್ದೋಷಒಂದಾನಂತ ರೂಪವರಿದು ಕಡೆಯ ಮಾಡಿಒಂದವತಾರ ನೋಡೆ ಒಂದೆ ಸಮಾನವಿನ್ನುಕುಂದು ಕೊರತೆಯಿಲ್ಲ ಹರಿಗುಣ ಬಲಜ್ಞಾನಒಂದರೊಳನಂತ ಅನಂತಾನಂತಎಂದೆಂದಿಗು ತಾನು ಒಂದೆ ಪರಿಯಲಿ ರೂಪಸಂದೇಹವು ಬೇಡಿ ಸಜ್ಜನರೆ ಕೇಳೀಂದಿರಾದೇವಿ ತಾನು ಚಂದದಿ ಹರಿ ನಖವುಎಂದು ಪಿಡಿದು ತಾನು ಎಣಿಸಲಾರದ ರೂಪಾಂದದ್ದೆ ಆನಂದ ಅಬ್ಧಿಯೊಳಗೆ ಮುಳುಗಿಮಂದರಧರನ ತಾ ಪೊಂದಿ ಕೊಂಡಾಡಿದಳುಮಂದ ಜನರು ಕೇಳಿ ಇಂದಿರೇಶನ ರೂಪಒಂದೆರಡೆಂಬಂಥ ಮಿತಿ ಇಲ್ಲವು ಕಾಣೊಸಿಂಧುಶಯನ ಗೋಪಾಲವಿಠಲರೇಯಒಂದೆ ದೈವವೆನ್ನಿ ಚೆಂದದಿ ಪಾಲಿಸುವ ೨

ರೂಪಕತಾಳ
ಪತಿ ಉಪಾಸನೆಯನ್ನು ಇಂದಿರಾದೇವಿಗೆಪಿತನುಪಾಸನೆಯನ್ನು ಬೊಮ್ಮಾದಿಗಳಿಗಯ್ಯಪಿತನಪಿತನುಪಾಸನೆಯು ಹರಾದಿಗಳಿಗೆ ಸತತಭೃತ್ಯಭಾವ ಇಂದ್ರಕಾಮರಿಗಯ್ಯೈತರ ಜನರಿಗೆಲ್ಲ ಇದರಂತೆ ತರುವಾಯಗತಿ ಹೊಂದುವರಿಗೆಲ್ಲ ಸ್ವಾಮಿ ಭೃತ್ಯನ್ಯಾಯಜಿತ ನಿತ್ಯ ಸಂಸಾರಿಗಳ ಉಪಾಸನೆ ಎನ್ನುಪಥತಪ್ಪಿ ಕಂಡ ದೇವತೆಗಳ ಭಜನೆಯುಹಿತ ದೈವ ಒಂದೆ ಅಹಿತ ದೈವ ಒಂದೆಇತರ ದೈವಗಳೆಲ್ಲ ಕರ್ಮಠರೆಂದೆಂದುಪೃಥಿವಿಯೊಳಗೆ ಸಂಚರಿಸುತಿಪ್ಪರುಗತಿಗೇಡಿಗಳೆಲ್ಲ ಹರಿಯನ್ನು ತಮ್ಮ ಸಮಾ-ನಿತನ ಮಾಡಿಕೊಂಡು ಮತಿಗೇಡಿಗಳು ಆಗಿಮಿತಿ ತಪ್ಪಿ ತಮ್ಮ ತಮ್ಮ ಗತಿಗಳನೈದೋರುಪತಿತಪಾವನ ರಂಗ ಕ್ಷಿತಿಯ ಒಳಗೆ ಇನ್ನು ಕೃತಿಯ ಮಾಡಿಸುವನು ತ್ರಿವಿಧ ಜೀವರ ಕೈಯಾತೀತನಾಗತಬಂಧು ಗೋಪಾಲವಿಠಲನುಗತಿ ಎಂದು ನಂಬಲು ಹಿತದಿ ಪಾಲಿಸುವ ೩

ಝಂಪೆತಾಳ
ಧರೆಯೊಳು ರಾಮಕೃಷ್ಣಾವತಾರಗಳನ್ನುನರರಂತಾಗದೆ ಪ್ರಾಕೃತವೆಂಬದರಿಮರಳುಗೊಳ್ಳಲಿ ಬೇಡ ಹಿರಿಯರಾದರು ಕೇಳಿಅರಿದು ಪೇಳುವೆ ಹರಿ ಪ್ರೇರಣೆಯಿಂದಹರಿಯೆ ನಾರಾಯಣ ಮೂಲರೂಪದಿ ತಾನುಇರಲಾಗಿ ಕ್ಷೀರಸಾಗರದಲಿನ್ನುಪರಮ ಕ್ರೂರತನದಿ ಬಲಿಚಕ್ರವರ್ತಿ ತಾನುಹರಿಯ ಕಿರೀಟ ಎತ್ತಿಕೊಂಡೋಡಲುಗರುಡ ವೇಗನೆ ಕಂಡು ಮರಳಿ ತಂದು ಇನ್ನುಸರ್ರನೆ ಗೋಮಂತ ಪರ್ವತದಲಿದ್ದಸಿರಿಕೃಷ್ಣಗೆ ತಾನು ಹರುಷದಿ ಇಡಲಾಗಿಸರಿ ಹೋಗೋದೆ ಬೇರೆ ಬೇರೆ ಆದರೆಹರಿ ಮೂಲವು ಇನ್ನು ಅವತಾರಗಳಿಗೆಲ್ಲಎರಡಿಲ್ಲವು ಕಾಣೊ ಜ್ಞಾನಿಗಳ ಕೇಳಿಮರಳಿ ಹಿಂದಾದ್ದು ಮುಂದಾಗುವುದಿನ್ನುಎರಡು ಪರಿ ಅನ್ನವನು ಒಲ್ಲೆನೆಂದುದುರುವಾಸ ಮುನಿ ಬಂದು ಹರಿರಾಮನ ತಾನುತ್ವರಿತದಲಿ ಅನ್ನವನು ಬೇಡಲಾಗಿಸಿರಿರಾಮನು ತಾನು ಕರವನೆತ್ತೀಯಲುಹರುಷದಲಿ ಉಂಡು ಸಂತೋಷವಾಗನೆಬರಿದೆ ಪ್ರಾಕೃತ ಶರೀರವಾದಡೆ ಇನ್ನುದೊರಕುವುದೆ ಈ ಪರಿ ಸಮ ರತುನವುಹರಿಗೆ ಪ್ರಾಕೃತ ಶರೀರವೆಂದವಗೆ ನರಕವುಹರಿಪರನೆಂದವಗೆ ಇಹಪರ ಸುಖವುದುರುಳಜನಮರ್ದನ ಗೋಪಾಲವಿಠಲನಿಗೆಸರಿಯಿಲ್ಲ ಸರಿಯಿಲ್ಲ ಪರದೇವತೆ ೪

ತ್ರಿಪುಟತಾಳ
ಜಗಕೆ ಒಡೆಯನಾಗಿ ಜಗವ ಪಾಲಿಸುವನುಜಗಕೆ ಕರ್ತನಾಗಿ ಸೃಷ್ಟಿಯ ಮಾಳ್ಪನುಜಗಕೆ ಭಿನ್ನವಾಗಿ ಲಯವನು ಮಾಡುವಜಗಜನ್ಮಾದಿಕರ್ತ ನಮ್ಮ ರಂಗಜಗದೇಶ್ವರನು ತಾನು ಜಗುಳಿಸಿದರೆ ಬೆರಳಜಗದ ಜೀವರು ಚಲಿಸಲೊಶವಲ್ಲವುನಗವ ಪಿಡಿದು ಇನ್ನು ಚೇತನ ಮಾಡಬಲ್ಲಸೊಗಸಾಗಿ ಜಡ ಚೇತನಗಳ ಮಾಡಬಲ್ಲಜಗವ ಸೃಷ್ಟಿಸಿ ಬೊಂಬೆಯಂತೆ ಕರುಣಿಸಬಲ್ಲಜಗವನೆಲ್ಲ ನುಂಗಿ ಒಬ್ಬನೆ ಇರಬಲ್ಲಜಗದೀಶನ ಲೀಲೆ ಮಕ್ಕಳಾಟಿಕೆ ಕಾಣೊಜಗದೊಳೀತಗೆ ಒಂದು ಸರಿಯ ವಸ್ತುಮಿಗಿಲು ಉಂಟೆಂದರೆ ಹೀಗೆ ಹ್ಯಾಗೆನ್ನಬಹುದುಜಗದೀಶ್ವರನ ಇಚ್ಛೆ ಇಂಥಾದೆಮಗಳಿಗೆ ಪತಿಯಾದ ಮಗಳಿಗಳಿಯನಾದಮಗುವಾಗಿ ಗೋಪಿಯ ಮೊಲೆಯನುಂಡಬಗೆ ಬಗೆ ಜಗದೊಳು ಹಗರಣ ತೋರಿದನಗುಬಾಟ ಈ ದೈವ ನಮ್ಮ ನಿಮ್ಮಿಂದೇನುಜಗದೊಳಗಿನ್ನು ತ್ರಿವಿಧ ಜೀವಿಗಳು ತಾವುರಘುಪತಿ ನಡೆಸಿ ನುಡಿಸಿದಂತೆ ನುಡಿವೋರುಜಗದ ವಲ್ಲಭ ನಮ್ಮ ಗೋಪಾಲವಿಠಲನುಅಗಲ ನಂಬಿದವರ ಸೊಗಸಾಗಿ ಪೊರೆವುವ ೫

ಅಟ್ಟತಾಳ
ಉತ್ತಮರೊಳಗೆಲ್ಲ ಉತ್ತಮ ಈತನೆನಿತ್ಯ ವಸ್ತುಗಳಲ್ಲಿ ಹರಿ ಒಬ್ಬನೆ ನಿತ್ಯಸತ್ಯಸಂಕಲ್ಪನು ಸತ್ಯಮಹಿಮನುಸತ್ಯವಾಕ್ಯನು ವರವನಿತ್ತರೆ ತಪ್ಪನುಮತ್ತೆ ಈ ತೆರದಿ ದೇವತೆಗಳೆಲ್ಲ ತಾವುಚಿತ್ತಜನಯ್ಯನ ಆಜ್ಞದಿಂದಲೆ ವರ-ವಿತ್ತು ಪಾಲಿಸುವರು ಶಕ್ತರಲ್ಲ ತಾವುಮೃತ್ಯು ಲಾಭಾಲಾಭ ಹರಿ ಆಧೀನವುಕರ್ತ ಭೋಕ್ತನೀತನಲ್ಲದಿಲ್ಲವಿನ್ನುವ್ಯರ್ಥ ಮನುಜ ನಿನ್ನ ಪುತ್ರ ಮಿತ್ರರಿನ್ನುನಿತ್ಯರೆಂದು ನೀನು ಸ್ವಾರ್ಥದಿ ಕೆಡಬೇಡನಿತ್ಯದಿ ಹರಿಪಾದ ಅರ್ಥಿಲಿ ಸ್ಮರಿಸುವರಉತ್ತಮರ ಸಂಗ ಹತ್ತಿಕೊಂಡಿರು ಇನ್ನುಇತ್ತಲನ್ಯವರ ಅಹಿತವ ನುಡಿದರೆಕತ್ತಲೆ ಪದವಿಗೆ ನಿನ್ನನು ಹಾಕುವಚಿತ್ತಜನಯ್ಯನ ಭೃತ್ಯರಲ್ಲಿ ಇನ್ನುಜತ್ತಾಗಿ ಭಕುತಿಡೆ ಹತ್ತೆಗರುವ ಹರಿಉತ್ತರ ಪೇಳುವೆ ನಿನಗಿಂದೆರಡು ಗುಣಉತ್ತಮರವಿಡಿದು ಅಜ ಸಿರಿ ಪರಿಯಂತಭೃತ್ಯಭಾವ ವಹಿಸಿ ಚಿತ್ತಶುದ್ಧನಾಗಿನಿತ್ಯವುಳ್ಳ ಪದವಿ ನಿತ್ಯ ನಿತ್ಯ ಪಡೆಯೊಭಕ್ತವತ್ಸಲ ರಂಗ ಗೋಪಾಲವಿಠಲಎತ್ತ ನೋಡಿದರತ್ತ ಸುತ್ತ ನಲಿವು ತಿಪ್ಪ ೬

ಆದಿತಾಳ
ಕಾರಣವೆಂಬಂಥ ಕಾರ್ಯ ಸರ್ವರಿಗುಂಟುಕಾರಣ ಶ್ರೀಮುಖ್ಯ ಹರಿಕಾಣೊಕಾರಣರು ನಮಗೆ ಹರಿಯ ತೋರಿಸುವಂಥಕಾರಣಕರ್ತರ ಪೇಳುವೆನುಕಾರಣಕೆ ಮಾಡುವ ಕಾರ್ಯಗಳೆಲ್ಲ ಜಡಕಾರಣದಿಂದೇನು ಫಲವಿಲ್ಲಕಾರಣ ಪ್ರಥಮ ಶ್ರೀಮರುತ ನಮಗೆಕಾರಣ ಈತನವರೆಲ್ಲ ನಮಗೆಕಾರಣವಂತರಾದ ಕಾರಣದಿಂದಲಿಕಾರಣ ದ್ವಾರಕೆ ಕಾರ್ಯವಯ್ಯಕಾರಣಿಲ್ಲದ ಕಾರ್ಯ ಒಂದಾದರು ಇಲ್ಲಕಾರಣಕೆ ಕಾರಣ ಮಾಡಿಸುವಕಾರಣ ಶ್ರೀಹರಿಗೆ ನಮೋ ನಮೋಕಾರುಣ್ಯ ಮೂರುತಿ ಶ್ರೀಗೋಪಾಲವಿಠಲಕಾರಣವಿಲ್ಲದೆ ಕಾರ್ಯ ಮಾಡಿಸನು ೭

ಜತೆ
ಈ ಪರಿ ತಿಳಿದವರಿಗೆ ಆಪತ್ತು ಹರಿಸಿತಾ ಪಾಲಿಸುವ ಬಿಡದೆ ಗೋಪಾಲವಿಠಲ

ಶ್ರೀಹರಿ ಒಲಿದವನಿಗೆ ಸುಖದುಃಖಗಳೆರಡೂ
೯೧
ಸುಳಾದಿಧ್ರುವತಾಳ
ಆನ್ಯಾತರವನಯ್ಯ ಅಲ್ಪ ಅತ್ಯಂತ ನಿರುತಕಾಣೆ ನಾ ಒಂದಾದರು ನಿನ್ನ ಹೊರತು ದೇವರೇಣು ಮಾತ್ರವಾದರು ನಿನ್ನ ಹೊರತುಜ್ಞಾನ ಅಜ್ಞಾನ ನಮಗೆ ಆಗುವುದೆನಾನೆ ಮಾತ್ರವು ಅಲ್ಲ ಸಿರಿ ಅಜಭವಾದಿಗಳುನೀ ನಡೆಸದಿರುವುದು ನಿಶ್ಚೇಷ್ಟದಿಅನಾದಿ ಕರ್ಮ ಬಂಧನಾಗಿ ಇಪ್ಪುವ ನಾನುಏನು ಬಲ್ಲೆನೊ ನಿನ್ನ ಮಹಿಮೆಯಕಾಣೆ ನಾ ಒಂದಾದರು ನಿನ್ನ ಸ್ವತಂತ್ರವಿನಹ ಮನದಿನಾನೆ ಸ್ವತಂತ್ರನೆಂದು ಹಿಗ್ಗಿ ಹಿಗ್ಗಿನಾನಾ ಯೋನಿಗಳಲ್ಲಿ ಜನಿಸಿ ಜನಿಸಿ ಬಂದುಏನು ಬಟ್ಟ ಬವಣೆ ನೀನರಿಯೆಖೂನವರಿಯದಪ್ಪಂದೆ ಒಳಗಿದ್ದುನಾನಾ ಚೇಷ್ಟೆಗಳೆಲ್ಲ ನೀನೆ ಮಾಡಿಪ್ರಾಣಿಗಳಿಗೆ ಸುಖದುಃಖವುಣಿಸಿ ಒಡನೆ ಇದ್ದುನೀನು ನಿರ್ಲಿಪ್ತನಾಗಿ ನಿತ್ಯವಾಗಿಜಾಣ ಚೆನ್ನಿಗರಾಯ ಗೋಪಾಲವಿಠಲಕಾಣದೆ ನಿನ್ನ ನಾ ಬಲು ದಣಿದ ೧

ಮಠ್ಯತಾಳ
ದಾರಿದ್ರ್ಯವೆ ಸಿರಿಯು ಸಿರಿಯೆ ದಾರಿದ್ರ್ಯವುಆರೋಗ್ಯವೆ ರೋಗ ರೋಗವೆ ಆರೋಗ್ಯಬಾರದ್ದೆ ಬಂದದ್ದು ಬಂದದ್ದೆ ಬಾರದ್ದುಸೇರದ್ದೆ ಸೇರಿದ್ದು ಸೇರಿದ್ದೆ ಸೇರದ್ದುತೋರದ್ದೆ ತೋರಿದ್ದು ತೋರಿದ್ದೆ ತೋರದ್ದುಕಾರಣ ಕಾರಣ ಓರಣ ಎಲ್ಲವುನಾರಾಯಣನು ಒಲಿದ ನರನಿಗೆಈ ರೀತಿ ಮಾಡಿ ಅನುಭವಕೆ ಇನ್ನುತೋರಿಗೊಡುತಲಿ ಕ್ಷಣಕ್ಷಣಕೆ ಬಿಡದೆಈ ರೀತಿ ತಿಳಿಸಿದ್ದು ಒಳಹೊರಗೆಭಾರಕರ್ತನಾಗಿ ಬಹುವ್ಯಾಪ್ತಸ್ವಾಮಿಆರು ಇದರ ವಿವರ ಅರುಹುವರೊ ಎನಗೆಶ್ರೀರಮಣ ಚೆಲುವ ಗೋಪಾಲವಿಠಲತಾರದವನೆ ಕೆಟ್ಟ ಅನುಭವಕೆ ನಿನ್ನ ೨

ರೂಪಕತಾಳ
ಕಂಡದ್ದೆ ಕಾಣದ್ದು ಕಾಣದ್ದೆ ಕಂಡದ್ದೂಂಡದ್ದೆ ಉಣ್ಣನೆ ಉಣ್ಣನು ಉಂಡದ್ದೆ ಮರುಳೆದಂಡನವೆ ಸುಖವು ಸುಖವೆ ದಂಡನವುಕೆಂಡ ಸೀತವು ಸಮವು ಆಗುವುದಲ್ಲದೆಪುಂಡಾರೀಕಾಕ್ಷನ ಕಂಡ ಮೇಲಕ್ಕೆ ನಿನ್ನಮಂಡಿಯವು ಬಾರದು ಮತ್ತೆ ಮನುಜಗೆಪಾಂಡವಪ್ರಿಯ ಗೋಪಾಲವಿಠಲರೇಯಕಂಡದ್ದಲ್ಲದೆ ಪಾರ್ಥಗೊಲಿದ ಮಹಾಮಹಿಮ ೩

ಝಂಪೆತಾಳ
ಆರನುದ್ಧರಿಸುವೆನೆಂದು ಮನದಿ ಮಾಳ್ಪೆತೋರಿಕೊಡುವುವೆ ಸಕಲ ಸಾಧನಗಳವಗೆಬಾರದಿದ್ದರೆ ಮನಕೆ ಅವಗೆ ಚೆನ್ನಾಗಿ ನಿಜಪ್ರೇರಿಸುವಿ ವಿಧಿಯು ವಿಹಿತಾಚರಣಗಳಿನ್ನುಬಾರಿ ಬಾರಿಗೆ ಸ್ಮ್ರತಿಯು ತಂದಿತ್ತುದೂರವೆ ಮಾಳ್ಪೆ ದುರಿತಗಳ ಅಪಾರ ಇದ್ದರನ್ನಕ್ರೂರನರರಿಂದ ಒಂದು ಧರ್ಮವಾದರು ಇನ್ನುಸೇರಿಸಿ ಕೆಡಿಸೆ ಕೊಡವಿ ಇನ್ನವರಿಗೆಮಾರನಯ್ಯ ಚೆಲುವ ಗೋಪಾಲವಿಠಲಬಾರೊ ನಿನಗಿನ್ನು ಈಡಾರೊ ಪ್ರಭುವೆ ೪

ತ್ರಿಪುಟತಾಳ
ಯೋಚನ್ಯಾತಕ್ಕೆ ದೇವ ಎನ್ನ ಪೊರೆವುದಕ್ಕೆಸೂಚನೆ ತೋರಿ ಸುಮ್ಮನಾಗಲಿಬೇಡನೀಚ ನಾನು ನಿತ್ಯದಲ್ಲಿ ನಿನ್ನ ಮರೆತುಯೋಚನೆ ಮಾಡುವೆ ಕಂಡವರಚಾಚಿ ಚಾಚಿ ಕರಗಳು ಬೇಸತ್ತವುವಾಚ್ಯಾ ತುತಿಸಿ ವದನವೆಲ್ಲ ಕೆಟ್ಟಿತಯ್ಯನಾಚಿಕೆಯಿಲ್ಲ ಇನ್ನು ಈ ಮನಸಿಗಿನ್ನುಮೋಚಕ ಮಾರ್ಗವು ಪಿಡಿಯದಿನ್ನುಮೋಚಕ ಮಾರ್ಗವ ವಿಚಿತ್ರ ಮಹಿಮ ನೀಯೋಚಿಸು ಎನಗಾಗಿ ಊಚಗತಿಯ ಸಾಧನದ ಮಾರ್ಗಕ್ಕೆನೀಚ ವಿಷಯಗಳಿಗೆ ನೀ ಎನ್ನ ಸೆಳೆದರೆಯಾಚಕ ಎನ್ನಿಂದಲೇನಾಹುದೊಖೇಚರವಾಸಿ ನೀ ನೀಚಸಾವಾಸಿ ನಾಆಚಾರವೇನೊ ನೀ ಅರಿಯದಿದ್ದಶ್ರೀ ಚಕ್ರಪಾಣಿ ಗೋಪಾಲವಿಠಲ ಕೇಳೊನೀಚ ಎಂದರೆ ಎನ್ನ ಪೊರೆವರಾರೊ ೫

ಅಟ್ಟತಾಳ
ನೀನೊಲಿಯಲು ಅಜಭವಾದಿಗಳು ಒಲಿವರುನೀನೊಲಿಯಲು ಅಮರರು ಎಲ್ಲ ಕರೆವರುನೀನೊಲಿಯಲು ಅವನಿಯರೆಲ್ಲ ಒಲಿವರುನೀನೊಲಿಯಲು ಒಂದು ಬಾರದ್ದು ಎನಗಿಲ್ಲದಿನವೆ ಒಂದು ಯುಗ ನಿನ್ನ ಕಾಣದಘನಯುಗ ಒಂದಿನ ನಿನ್ನ ಕಾಣುವನಿಗೆಕನಸೆ ಜಾಗ್ರವು ಮತ್ತೆ ಜಾಗ್ರವೆ ಕನಸಿನ್ನುಧನವೆ ನಿಧನವಯ್ಯ ಮನವೆರಗಿದವಗೆನೆನೆದರೆ ಆಗೋದು ಸಕಲ ಸುಖವೆಲ್ಲೈನಿತು ಇನಿತು ಎಂದು ವಿವರ ಪೇಳಲಿ ಸಲ್ಲಧನ ವಸನವು ಪಶು ವನಿತೆ ಸುತರು ಮತ್ತೆತನು ಆರೋಗ್ಯ ತಂದೆ ಜನನಿ ಸಹಿತಿನ್ನುಇನಿತು ಸುಖವುಯೆಲ್ಲ ಏಕವಾಗಿದ್ದವಗೆಇನಿತು ಸುಖವು ಉಂಟುಇನಿತು ಸದೃಶ ಸ್ವಲ್ಪ ನೆನೆವ ಸುಖದ ಭೋಗಾನುಭೋಗ್ಯನೆ ಬಲ್ಲ ಮನಜನೇನು ಬಲ್ಲ ಮಂದಬುದ್ಧಿಯವಘನ ದಯಾನಿಧೆ ಗೋಪಾಲವಿಠಲನಿನಗೆ ನೀ ಕರುಣಿಸಿ ನಿನ್ನವರವನೆನ್ನೊ ೬

ಆದಿತಾಳ
ಸಾಧನವೆ ಸಾಧ್ಯ ಸಾಧ್ಯ ಸಾಧನವುಕ್ರೋಧವೆ ಭಕುತಿಯು ಭಕ್ತಿಯು ಕ್ರೋಧವುಆದಿಯು ಅಂತ್ಯವು ಅಂತ್ಯವೆ ಆದಿಯುಭೇದವೆ ಅಭೇದವು ಅಭೇದವೆ ಭೇದವುನಾದದೊಳಗೆ ರೂಪ ರೂಪದೊಳಗೆ ನಾದಸ್ವಾದದೊಳಗಸ್ವಾದಸ್ವಾದದೊಳಗೆ ಸ್ವಾದಮಾಧುರ್ಯದೊಳಗೆಲ್ಲ ಮಾಧುರ್ಯ ವಸ್ತುವುಆದಿಮೂರುತಿ ದೇವ ನಿನ್ನನು ಭೋಗಿಸೆಬಾಧೆ ಅವರು ತೋರರೊಂದಾದರವಗೆಆದರಿಸುತ ಅಲ್ಲಿ ಇದ್ದ ಬಳಿಕ ಸ್ವಾಮಿಕ್ರೋಧರಹಿತ ರಾಮಗೋಪಾಲವಿಠಲಹಾದಿ ತೋರಿಸು ಪಥ ಯಾವುದು ಸಾಧನ7

ಜತೆ
ದಿನದಿನಕೆ ಅಭಿವೃದ್ಧಿ ಆಗಿ ನಿನ್ನಲಿ ಎನಗೆಘನ ಜ್ಞಾನ ಭಕುತಿ ಕೊಡೊ ಗೋಪಾಲವಿಠಲ

ಶ್ರೀಹರಿ ಬಿಂಬ

ಸುಳಾದಿ
ಧ್ರುವತಾಳ
ಆಪತ್ತು ಕಾಲ ಈಗ ಬಂದಿದೆ ಅಯ್ಯ ಅಯ್ಯಶ್ರೀಪತಿ ಕಾಯೊ ಆಶ್ರಿತಜನಬಂಧುನೀ ಪರಮಪರುಷ ನಿತ್ಯ ತೃಪುತ ದೇವನಾ ಪರದೇಶಿಯೊ ಹೇ ನಳಿನನಾಭಾಪಾರ ದೋಷಿ ಇನ್ನು ಆನಹುದಯ್ಯ ಅಯ್ಯನೀ ಪುಣ್ಯ ಗುಣನಿಧಿ ನಿರ್ದೋಷನಲ್ಲೆಲೇಪರಹಿತ ನೀನು ಬಿಂಬನಾದ ಬಳಿಕತಾಪ ಉಂಟೇನು ಪ್ರತಿ ಬಿಂಬಗಳಿಗೆಭೂಪಾಲಕನು ಸುಖದಲ್ಲಿ ಇರಲಾಗಿಆಪತ್ತು ಉಂಟೆ ಅವನ ಆಳುಜನಕೆನೀ ಪರ ಉಪಕಾರಿ ನಿನಗೊಂದಪೇಕ್ಷೆ ಇಲ್ಲಸಾಪಾಟಿ ಅಧಿಕ ಶೂನ್ಯ ಸರ್ವೋತ್ತಮತಾಪತ್ರಯಂಗಳು ತ್ರಿವಿಧ ಗುಣದ ಕಾರ್ಯನೀ ಪ್ರೇರಿಸಿದಂತೆ ನಿತ್ಯ ದಣಿಸೋವುನಾ ಪ್ರತಿಗಾಣೆ ನಿನಗೆ ಒಂದನ್ನ ಮಾಡಿ ತೋರಆಪೂ ಸಾಪಿಗೆ ಮಾತ್ರ ಕರ್ತನಯ್ಯಹೋಪ ಬಪ್ಪದು ಏನು ಒಂದಾದರೂ ಎನ್ನಿಂದಕಾಪಾಲಿವರದ ಕಾರುಣ್ಯಾಂಕಾರರಾಪು ಮಾಡುವೆ ನೀ ರಹಸ್ಯ ಮಾಡಿದ ಕಾರ್ಯಕೋಪ ಸಲ್ಲದಯ್ಯ ಕೋದಂಡಪಾಣಿಮಾಪು ಹಿಡಿದು ಇನ್ನು ಅಳೆಯ ಕುಳಿತ ಬಳಿಕಲೋಪ ಮಾಡುವುದ್ಯಾಕೆ ಲೋಕದೊಳುಈ ಪರಿ ಎನ್ನ ಮನದ ಅಭಿಪ್ರಾಯಗೋಪಾಲ ಸರ್ವಪಾಲ ಸರ್ವ ಇಷ್ಟದ್ರೌಪದಿ ಮಾನದೊಡೆಯ ಗೋಪಾಲವಿಠಲತಾಪಸರ ಮನದಿ ಸಿಲ್ಕಿ ಅಗಲದ ದೇವ ೧

ಮಠ್ಯತಾಳ
ನಿನ್ನದು ನೀ ನಿತ್ಯ ಎನ್ನದು ಅನಿತ್ಯನಿನ್ನದು ಸ್ವಾಧೀನ ಎನ್ನದು ಪರಾಧೀನನಿನ್ನಾನಂದ ನಿನಗೆ ನಿನ್ನಿಂದಾನಂದೆನಗೆನಿನ್ನವ ನಾ ಅಧೀನಾಗೆ ಎನ್ನುವ ನೀ ಎನಗೀನ್ನದು ಸಕಾಮ ನಿನ್ನದು ನಿಷ್ಕಾಮ ಎನ್ನ ಒಳಗೆ ನೀನೆ ನಿನ್ನ ಒಳಗೆ ನೀನೆಅನ್ಯ ಅಪೇಕ್ಷಮಾತ್ರವೆಂಬೋದು ಎನಗೆ ದೋಷನಿನ್ನ ಅಪೇಕ್ಷವೆ ಎನ್ನ ಪೋಷಣೆ ಅಲ್ಲೀನ್ನ ನೀ ಮರೆದರೆ ನಿನ್ನ ನಾ ಮರೆವೂವೆ
ಎನ್ನ ನೀ ತಿಳಿದರೆ ನಿನ್ನ ನಾ ತಿಳವೂವೀನ್ನನು ನೀ ಮರದದಕನುಭೋಗ
ಭಿನ್ನ ವಿಷಯದಲ್ಲಿ ಇನ್ನು ಪೋಗೋದೆ ಸಾಕ್ಷಿಎನ್ನ ವ್ಯಾಪಾರವು ನಿನ್ನಾಧೀನವಿರಲುಅನ್ಯಕೆ ಎಳೆದು ಬನ್ನಬಡಿಸ ಆವದುಅನ್ಯಾಯ ನ್ಯಾಯ ಇನ್ನೇನಿನ್ನೇನೊಮನ್ನವಾಚಕಾಯ ಇನ್ನು ಎನಗೆ ದೇವನಿನ್ನನ್ನೆ ಬೇಕೆಂಬೊ ಘನ್ನ ಆಸೆಯು ಬಹಳಮನ್ನಿಸಿ ಬಿನ್ನಪ ಮನಕೆ ತಾ ನೀ ವೇಗಸನ್ಮುನಿಗಳ ಪ್ರಿಯ ಗೋಪಾವಿಠಲನಿನ್ನನಲ್ಲದೆ ಬೇರೆ ಇನ್ನಾರನ ಕೇಳ್ವೆ ೨

ರೂಪಕತಾಳ
ಎನ್ನ ಯೋಗ್ಯತೆ ಅರಿತು ಉಣಿಸೆನೆಂದರೆ ನೀನುನಿನ್ನ ಸಂಕಲ್ಪಕ್ಕೆ ಪ್ರತಿಕೂಲ ನಾನಲ್ಲನಿನ್ನ ಭೃತ್ಯನು ನಾನು ನಿಜವೆಂಬೋದು ಇತ್ತೀನ್ನ ಸ್ವರೂಪವು ದುಃಖಿ ಬೇರೆಲ್ಲಿಲ್ಲಚೆನ್ನಾಗಿ ಚಿದ್ರೂಪಿ ನಿರ್ಗುಣ ಜೀವಕ್ಕೆಇನ್ನು ಶೋಕಂಗಳು ಆವಪರಿ ಉಂಟುಭಿನ್ನ ತ್ರಿಗುಣದಿಂದ ಘನ್ನ ಶೋಕಗಳೆಂಬೈನ್ನು ಜಡಂಗಳು ಬನ್ನ ಬಡಿಸುವುವೊಎನ್ನ ಮನಸಿಗಿದು ನಿಜವು ತೋರುವುದಿಲ್ಲೈನ್ನು ಬಿದ್ದಲ್ಲಿಂದ ಚಲಿಸದೆ ಜಡಗಳುಮುನ್ನ ಚೇತನಗಳು ದಣಿಸಬಲ್ಲುವೆ ದೇವಾಇನ್ನು ಅವಕ್ಕೆ ಬೇರೆ ಅಭಿಮಾನ್ಯರುಂಟೆಂಬಎನ್ನಂತೆ (ತ) ಸ್ವತಂತ್ರರವರಲ್ಲವೆಇನ್ನೊಬ್ಬರಿನ್ನೊಂದು ಜಡಚೇತನಗಳಿಂದಎನ್ನ ದಣಿಸುವರ ಕಾಣೆನಯ್ಯ ಸ್ವಾಮಿಘನ್ನ ವೈಕುಂಠದಿನ್ನಲ್ಲಿ ಆಗೊ ಸುಖೈನ್ನಿಲ್ಲೆ ಕೊಡುವ ಸ್ವಾತಂತ್ರ್ಯ ನಿನಗುಂಟಯ್ಯನೀನಿಲ್ಲದಿಲ್ಲಿನ್ನು ಸುಖದುಃಖಗಳು ಒಂದುಎನ್ನಯ್ಯ ಎನ್ನಯ್ಯ ಏ ದೇವನೆಕಣ್ಣಿನೊಳಗೆ ಕಣ್ಣು ಕರ್ಣದೊಳಗೆ ಕರ್ಣಬೆನ್ನಿನೊಳಗೆ ಬೆನ್ನು ಇನ್ನು ಕಾಲೊಳು ಕಾಲುಎನ್ನ ಆಕಾರದೊಳೆಲ್ಲ ವ್ಯಾಪಿಸಿ ಇಪ್ಪಚಿನ್ನುಮಯ ಜ್ಞಾನಾನಂದ ನಿರ್ದೋಷ ಪೂರ್ಣಭಿನ್ನಕಾಮರಹಿತ ಗೋಪಾಲವಿಠಲನಿನ್ನವರವನಯ್ಯ ಬಿನ್ನಪ ಚಿತ್ತೈಸು ೩

ಝಂಪೆತಾಳ
ಇದೆ ವೇಳ್ಯ ಇದೆ ಸಮಯ ಈಗಲೆ ನಿನ್ನಾಟಒದಗಿ ದೊರಕಿದೆ ನಿನಗೆ ಒಳಿತಾಗಿ ನೋಡುಗದಗದನೆ ನಡುಗಿಸು ಉದರ ಹಸಿವೆಯ ಕೊಡಿಸುಒದರಿಸು ಎನಗಿನ್ನು ಆರ ನಾ ಕಾಣೆಂದುಕುದುರೆಯಂತೆ ಕುಟಿಲ ರೋಗಗಳ್ಹಚ್ಚುಒದಗಿ ನಡೆಯದಂತೆ ಇದ್ದಲ್ಲಿ ಕುಳ್ಳಿಸೊಮದುವೆಗಳ ಮಾಡಿಸು ನದಿಗಳೊಳು ಮುಣುಗಿಸುಮಧುರ ಅನ್ನವ ಉಣಿಸು ಸದಾಚಾರಿ ಎಂದೆನಿಸುಇದಕ್ಕೊಂದೆ ಅದಕ್ಕೊಂದೆ ಇನ್ನೊಂದಕೆ ಒಂದೆಇದರ ಭೋಗಗಳೆಲ್ಲ ಭಿನ್ನ ಎನ್ನಿಂದಯ್ಯತುದಿಗೆ ನಿರ್ಗುಣನಾಗೆ ಒದಗೊದಾನಂದ ವ್ಯಕ್ತಿಅದರ ಮೇಲೆ ಇನ್ನು ಅಲ್ಲಿ ಮಾಡಿಸಲಾಪ್ಯಬದುಕು ಎನ್ನದು ಏನು ಕೆಟ್ಟು ಪೋಗುವುದುಪದೋಪದಿಗೆ ವಿಸ್ಮ್ರತಿಯಿಂದ ದಣಿವೆಅದೇ ಸಮಯದಲ್ಲಿ ಉದ್ಧರಿಸಬೇಕುಹೃದಯದೊಳಗೆ ನಿನ್ನ ನಿದರ್ಶನವನ್ನುಸದಾ ಕಾಲದಲ್ಲಿ ತಾ ಸಾಕುವ ದೊರೆಯೆಮದನಜನಕ ನಮ್ಮ ಗೋಪಾಲವಿಠಲಒದಗಿ ಬಪ್ಪುವ ಹರುಷ ಕ್ಲೇಶದಿ ನಿನ್ನನು ತಿಳಿಸೊ ೪

ತ್ರಿಪುಟತಾಳ
ಇಂದ್ರಿಯಗಳಿಂದಲಿ ಆಗುವ ಕರ್ಮವುದ್ವಂದ್ವವಾಗ್ಯುಂಟು ಕೃಷ್ಣದ್ವೈಪಾಯನಒಂದರೊಳಗೆ ಅಂದಿಸುತಲೆಲ್ಲಿಸಂದಿ ಸಂದಿಗೆ ಬಿಡದೆ ಎನ್ನ ಎಳೆದುಒಂದು ಎನ್ನ ವಿಷಯ ನಿಜವಸ್ತುವಿರಲಾಗಿಹಿಂದೆ ಮಾಡಿ ಅದರ ಹಿತ ಅರಸದೆಬಂಧಕರನು ಮಾಡಿ ಬಯಕೆ ಪುಟ್ಟಿಸಿ ಬಾಹಿರಕುಂದು ವಿಷಯಕಿನ್ನು ಮೋಸಗೊಳಿಸಿಅಂಧಕನ ಪಿಡಿದು ಆಟ ಆಡಿಸಿದಂತೆಸಂದಳಿ ಅಂಗಡಿಗೆನ್ನ ನೂಕಿಬಂಧು ಅಲ್ಲದವರ ಬಂಧುಯೆಂದು ತಿಳಿಸಿನಿದ್ರೆಲರಿಯದಾವಸ್ಥೆ ನಾ ನಿತ್ಯವೆಂದರಿವಿಸಿಗಂಧವಲ್ಲದ್ದು ಎಲ್ಲ ಗಂಧವೆಂದರಿವಿಸಿಚೆಂದವಲ್ಲದ ರಸವು ಚೆಂದವೆಂದು ತಿಳಿಸಿ ಹಿಂದೆ ಮುಂದೆ ಕಾಣದಂತೆನ್ನ ಕುಳ್ಳಿಸಿಎಂದಿಗೆ ನಾಶವಿಲ್ಲದ ಜೀವನಿಗೆಬಂದು ಹೋಗುತಿನೆಂಬೊ ಮೃತ್ಯು ಭಯಪುಟ್ಟಿಸಿಅಂದಾಗಿ ನೀ ಬಿಡದೆ ಈ ಪರಿ ಮಾಡಿಸಿಎಂದಿಗಾ ಜೀವರು ಹೊಂದುವರು ನಿನ್ನಗಂಧ ಸುಳಿದಂತೆ ಇದರ ಒಳಗೆ ಒಮ್ಮೆತಂದು ಸ್ಮ್ರತಿಗೆ ನಿಜ ಇಂದ್ರಿಯಿಂದ ನಿನ್ನಚೆಂದುಳ್ಳ ಗುಣಗಳು ಅನುಭವಕೆ ಬಂತೆಅಂದಿಗೆ ಸಂದೇಹ ನಿವೃತ್ತಿ ಆಹೋದುಇಂದನ್ನಕ ನೋಡೆ ಈ ಬಟ್ಟೆ ಹಾ ಕೆಟ್ಟೆಸಂದಿಲಿ ಇದ್ದನ್ನ ಈ ಪರಿ ಮಾಡಲುಅಂದವೆ ಅಂದವೆ ಅಪ್ಪಾ ಅಪ್ಪಾವಂದಿಸಿ ಮೊರೆ ಇಟ್ಟೆ ಒಂದು ಆದರು ನಿ-ನ್ನಿಂದಿಲ್ಲವಿಲ್ಲಾದಿಲ್ಲವೆಂದು ಸಂದೇಹವನ್ನು ಬಿಟ್ಟು ಸುಂದರ ಮೂರುತಿ ಗೋಪಾಲವಿಠಲತಂದೆ ನಿನ್ನ ಚಿತ್ತ ಬಂದದೆ ಮಾಡಯ್ಯಾ ೫

ಅಟ್ಟತಾಳ
ಹೇ ಅಚ್ಯುತನೆ ಹೇ ಅನಂತನೆ ಹೇ ಅದ್ಭುತನೆ ಹೇ ಅಗೋಚರನೆಹೇ ಅಗಮ್ಯನೆ ಹೇ ಅಹೋರಾಜಹೇ ಅದಿತಿಸುತ ಹೇ ಅಕ್ರೂರ ಪಾಲಹೇ ಅಹಲ್ಯಾರಕ್ಷಕ ಹೇ ಅಂಬರೀಷಪಾಲಹೇ ಅಜಮಿಳವರದ ಹೇ ಆರಕಾಣೆಂದ ಗಜರಾಜವರದನೆಹೇ ಅನಿಮಿತ್ತ ಬಂಧು ನಿತ್ಯ ನಿರಂಜನಹೇ ಅಪ್ಪ ಅಯ್ಯ ಪೂತುರೆ ಪೂತುರೆಹೇ ಅನಾದಿ ದೇವ ಆನಂದಪೂರ್ಣನೆಹೇ ಅಘಟಿತಘಟಿತಾನಂತ ಐಶ್ವರ್ಯಹೇ ಆಶ್ಚರ್ಯನೆ ಹೇ ಅಖಂಡಿತ ಹೇ ಅರ್ಥಗರ್ಭ ಹೇ ಅಧೋಕ್ಷಜಹೇ ಅಜ ಹೆದ್ದಯ್ಯಾ ನಾ ಅಜ್ಞಾ ನೀ ಪೂರ್ಣಬಾ ಅಯ್ಯಾ ಕಾಯಯ್ಯಾ ತ್ರಾಹಿ ತ್ರಾಹಿ ಕೃಷ್ಣನಾ ಅಲ್ಪ ನೀ ಪೂರ್ಣ ಭಳಿರೆ ಭಳಿರೆ ರಾಯನೀ ಅಲ್ಲದಿಲ್ಲಿನ್ನು ಗೋಪಾಲವಿಠಲಬಾ ಆಶ್ರಿತಜನಬಂಧು ಭಕುತಪಾಲಾ ೬

ಆದಿತಾಳ
ಪರರಿಗೆ ಹಿತವಾಗಿ ಎನ್ನಿಂದಲಿ ಇತ್ತೆಇರಿಸು ಎನ್ನನು ಇತ್ತೆ ಧರೆಯ ಮೇಲೆ ದೇವಶರಣಜನರ ಹಿತವೆ ಎನ್ನ ಹಿತವುಶರಣರ ಆಪತ್ತೆ ಎನ್ನ ಆಪತ್ತಯ್ಯಹರಿಯೆ ನಾ ನಿನಗಿನ್ನು ವಂದಿಸಿ ಮೊರೆ ಇಟ್ಟೆತರಳನ ಬಿನ್ನಪ ಮನಕೆ ತಾರೈ ದೇವಧರೆಯ ಮೇಲಿನ್ನೆಷ್ಟು ಶರಣು ಜನರು ಉಂಟುನಿರುತ ಅವರಿಗಿನ್ನು ಎರಡೊಂದು ಗುಣದಕರಕರೆ ಕ್ಲೇಶವು ಇರದಂತಲಿ ಮಾಡುಧರಣಿಯರಮಣ ತರಳ ಸಲಿಗೆಯಲ್ಲಿ ಇನ್ನೊಂದು ಬೇಡುವೆಕರುಣಿಸೋದುಚಿತವೆ ಆಗಿತ್ತೆ ಕರುಣಿಸುಸ್ಥಿರ ಎನ್ನ ಗುರುವಿನ ಇನ್ನು ಮೊದಲುಮಾಡಿಪರಿ ಪರಿ ಪರಿ ಇನ್ನೆಂತು ಉಂಟೊಪರಿಹರಿಸುವರಿಗೆ ಹರುಷದಲ್ಲಿ ಇಟ್ಟು ಬರಿದೆ ಎನ್ನನು ನೀನು ಅವರ ಕ್ಲೇಶಗಳೆಲ್ಲಹರಹುವೊ ಎನ್ನಲ್ಲಿ ಸ್ಮರಣೆ ಪೂರ್ವಕವಾಗಿದುರಿತಗಿರಿಕುಲಿಶ ದುಷ್ಟರಮರ್ದನಶರಣರರಕ್ಷಕ ಕರುಣಾಕರ ಸ್ವಾಮಿಮರುದಂತರ್ಗತ ಗೋಪಾಲವಿಠಲಸರಿಬಂದುದು ಮಾಡೊ ಶರೀರ ಒಪ್ಪಿಸಿದೆ ೭

ಜತೆ
ಸಕಲ ಭಕುತರೆಲ್ಲ ಸುಖದಲ್ಲಿ ಇರಲೆಂಬೊಕಕುಲಾತಿ ಎನಗೆ ಕರುಣಿಸೊ ಗೋಪಾಲವಿಠಲ

ಭಾವಶುದ್ಧಿಯೇ ಭಗವಂತವನ್ನು ಒಲಿಸುವ ಬಂಡವಾಳ
೯೨
ಸುಳಾದಿ
ಧ್ರುವತಾಳ
ಆವ ಕರ್ಮಗಳಿನ್ನು ಆವ ಧರ್ಮಗಳಿನ್ನುಆವ ತೀರ್ಥಯಾತ್ರೆಯು ಆವಾವ ವ್ರತಂಗಳುಆವಾವ ಸಜ್ಜನರ ಸಹವಾಸಂಗಳು ಎಲ್ಲಆವಾವ ವೇದಶಾಸ್ತ್ರ ದೇವತಾರ್ಚನೆಗಳೆಲ್ಲದೇವ ನಿನ್ನ ಒಲಿಸುವ ಉಪಾಯಂಗಳುಆವಾವ ಪರಿ ಸಾಧನಂಗಳು ಎನ್ನುಈ ವಿಧಾನ ಸಾಧನಗಳಿನ್ನುತಾ ಒಪ್ಪಿಸಿ ಸಾಧನವ ಪೋಗಲಾಡಿಸಿತೋನಾ ಒಂದರಿಯದಾದೆ ದೇವದೇವಾಗೋವು ಕರೆದು ಪಾಲು ಹಾವಿಗೆರೆದಂತೆಸಾವಿರ ಬಗೆ ಸಾಧನಂಗಳು ಎಲ್ಲೈಇ ಉದ್ಧಾರಕ್ಕುಪಾಯವು ದಾವುದಯ್ಯನೀ ಒಲಿವ ಬಗೆ ಇನ್ನಾವುದು ನಾನರಿಯೆಭೂವಲ್ಲಭ ನಮ್ಮ ಗೋಪಾಲವಿಠಲರೇಯಭಾವ ಶುದ್ಧದಿ ನಿನ್ನ ಸೇವಿಸದೆ ೧

ಮಠ್ಯತಾಳ
ಮನವು ಧನದಲ್ಲಿಟ್ಟು ಎಣಿಸಲು ಜೀವಂಗಳುಹಣವೆಣಿಕಲ್ಲದೆ ನಿನ್ನ ಎಣಿಸಲಿಲ್ಲನೊಣನು ಅನ್ನದಲ್ಲಿಟ್ಟು ಉಣಕಲಿತರೆ ಇನ್ನುಗುಣ ಕೊಡಬಲ್ಲುದೆ ದಣಿಸದೆ ಬಿಡದನಕಮನುಜ ಜಡನಾನು ಕುಣಿಯ ಕಾಣದೆ ಬಿದ್ದುಎಣಿಸುತಲಿದ್ದಂತೆ ಧನದ ವ್ಯಾಕುಲವಯ್ಯಮಣಿಕಾಂಚನ ಮೃಣ್ಮಯ ಸಮವೆಂದುಮನದೊಳು ಮಾಡದೆ ಮನಸಿಜನಯ್ಯನೀನಗೆ ನೀನೊಲಿಯೆ ನೀ ಬೋಧೆನಿತ್ತು ಇನಿತು ಕಾಣೆನಿನಗೆ ನೀನೇ ಬಲ್ಲೆ ಎನಗಾವ ಸಾಧನೆಯಕೊನೆ ಮೊದಲು ಕಾಣೆ ಗುಣಪೂರ್ಣ ಕಾಮನೆಫಣಿಶಾಯಿ ನಮ್ಮ ಗೋಪಾಲವಿಠಲತನುಮನದೊಡೆಯ ಅನುವರಿತು ಪೊರೆಯೋ ೨

ತ್ರಿಪುಟತಾಳ
ವಿಷಯಂಗಳೆಲ್ಲ ಇನ್ನು ವಿಷವೆಂದರಿದು ದು-ರ್ವಿಷಯಕ್ಕೆರಗುವೆನೊ ದೆಸೆಗೆಟ್ಟು ಬರಿದೆಹಸಿದು ಪೋಗಿ ಇನ್ನು ಅಸುರತನದಲೀಗನಸುಗುನ್ನಿಕಾಯಿಯ ಮಸಳಿ ಮೆದ್ದರೆತೃಷೆ ಹೋಗಬಲ್ಲದೆ ರಸ ಉಣ್ಣದನಕಹಸಿಯ ವಸ್ತ್ರವ ಒಯ್ದು ಕೆಸರೊಳು ತುಳಿದರೆಹಸನಾಗಬಲ್ಲುದೆ ವಸನಬೇಗಬಿಸಜಾಕ್ಷ ನಿನ್ನ ಕರುಣ-ರಸವೆಂಬ ಮಡುವಿನೊಳು ಶರೀರ ತೊಯಿದುಬಿಸಜಚರಣವ ತೋರೋಕಸವ ಕಿತ್ತು ಕಾಮಕ್ರೋಧಂಗಳೆಲ್ಲಉಸುರಿದೆ ನಿನಗೆ ನಾ ಅಸುರಮರ್ದನ ರಂಗವಸುದೇವಸುತ ನಮ್ಮ ಗೋಪಾಲವಿಠಲವಿಷಯದಾಸೆಗೆ ಮನ ವಶಮಾಡದಿರೋ ೩

ಅಟ್ಟತಾಳ
ಮಾಡದೆ ಭಕುತಿಯ ಬೇಡದೆ ಮುಕುತಿಯನೀಡಬಲ್ಲೆಯೊ ದೇವ ನೋಡುವರ ಪುಣ್ಯಕಾಡಿಗೆಮಸಿ ಕನ್ನಡಿಗೆ ಪೂಸಿ ಇನ್ನುನೋಡಲು ಮೊಗವನ್ನು ಪಾಡಾಗೆ ತೋರೋದೆಗಾಡಿಕಾರನು ತನ್ನೊಡಲಾಸೆಗೆನಾಡೊಳಗಿಲ್ಲದಾಟಾಡಿ ಜನ ಮರುಳುಮಾಡಿ ಧನವನ್ನು ಕೂಡಿಸಿದಂದದಿಆಡಿಪಾಡಿ ಹರಿದಾಸನೆಂದು ಜನರಬೇಡುವುದಕೆ ದ್ರವ್ಯ ಮಾಡುವೆ ಭಕುತಿಯನೋಡುವಂತೆ ಜನರು ರೂಢಿಯೊಳೆನ್ನಂಥಮೂಢನಿಲ್ಲೆಲೊ ದೇವ ಈಡ್ಯಾರೊ ಎನಗಿನ್ನುಮಾಡೆ ಮನದವಗೆ ಮಾಡಲೆಂತೊ ಕೃಪೆಬಾಡಿಗೆ ಮನೆ ದೇಹ ಬಿಡಾರ ಸ್ಥಿರವಲ್ಲನಾಡದೈವರ ಗಂಡ ಗೋಪಾಲವಿಠಲಗೋಡೆ ಮರೆಯ ಭಕ್ತಿ ಮಾಡಿದರೊಲುಮೆ ಇಲ್ಲ ೪

ಆದಿತಾಳ
ಇಷ್ಟು ನಾನಾಪರಿ ಚಿನ್ನ ಅಲಂಕಾರಉಟ್ಟ ಪೀತಾಂಬರ ಕೊಟ್ಟ ಪಟ್ಟಾವಳಿಅಷ್ಟ ಸಂಪತ್ತಿನ ದಿಟ್ಟ ಕನ್ನಿಕೆಯನುದೃಷ್ಟಿಯೊಳಗೆ ಸಮವಲ್ಲದ ಬಾಲೆಗೆನೆಟ್ಟನೆ ಮೊಗದಲ್ಲಿ ಕುಷ್ಟವು ಇದ್ದರೆನಷ್ಟ ಚೆಲುವಿಕೆ ಇನ್ಯಾತಕಯ್ಯಕೃಷ್ಣ ನಿನ್ನಲ್ಲಿ ಭಕುತಿ ಪುಟ್ಟದಲೇವೆ ಇನ್ನುವೈಷ್ಣವನಾಗಿ ಉಳ್ಳಷ್ಟು ಕರ್ಮಮಾಡಲುಭ್ರಷ್ಟ ಜನ್ಮಂಗಳು ಹೋಗಬಲ್ಲುವೇನಯ್ಯಹುಟ್ಟಿದರು ಗೌಡ ಹೆಸರು ಇಕ್ಕದಲೆಕೆಟ್ಟ ಕಬ್ಬಲಿಗಗೆ ಕೊಟ್ಟರೆ ತಾಳೋನೆಸೃಷ್ಟಿಗೊಡೆಯ ನಮ್ಮ ಗೋಪಾಲವಿಠಲನಿಷ್ಠೆಲಿ ಕೊಡು ನಿನ್ನ ಮುಟ್ಟಿ ಪೂಜಿಸಲು ೫

ಜತೆ
ಜ್ಞಾನವೇ ಭಕುತರಿಗೆ ನೀನೊಲಿಯೊ ಎನಗಿನ್ನುದಾನವಾಂತಕ ರಂಗ ಗೋಪಾಲವಿಠಲ

ಇದು ಉಡುಪಿಯ ಶ್ರೀಕೃಷ್ಣನನ್ನು ಕುರಿತ
೧೫೨
ಸುಳಾದಿ
ಧ್ರುವತಾಳ
ಆವ ಲೀಲೆಯೊ ನಿನ್ನನಾವಾವ ವರ್ಣಿಪದೇವ ನಿನ್ನ ನಿಜ ಸ್ವಭಾವ ಗುಣಆವ ಜನುಮರಹಿತವಾದ ನೀನು ಇನ್ನುದೇವಕಿ ಜಠರದಿ ಜನನವೇನೊಆವ ಜಗವೆಲ್ಲ ಬಂಧಕವ ಮಾಡಿಪ್ಪ ಶಕ್ತಗೋವತ್ಸ ಹಗ್ಗದಿಂದ ನೀವೇಗ ಸಿಕ್ಕೋದೇನೊಆವ ನಿತ್ಯತೃಪ್ತನಾದವ ನೀ ಇನ್ನು ಪೋಗಿಆವಾವ ಮನೆ ಬೆಣ್ಣೆ ಕದ್ದು ಮೆದ್ದದೇನುದೇವ ಸ್ವರಮಣನಾದ ಇನ್ನು ಪೋಗಿಆವ ಗೋಪಿಕೆರೊಡನಾಟವು ಕ್ರೀಡೆಗಳೇನೊಶ್ರೀ ವೈಕುಂಠವಾಸವಾಗಿಹ ಅಪ್ರಾಕೃತನೆಈ ಉಡುಪಿನಲ್ಲಿ ನೀ ಇಪ್ಪ ಬಗೆಯು ಏನೊಗೋವಳರೊಡೆಯ ಗೋಪಾಲವಿಠಲರೇಯನಿವಾಸ ಮಧ್ವಮುನಿ ಮಂದಿರ ಸರ್ವೇಶ ೧

ಮಠ್ಯತಾಳ
ಮುಕ್ತ ಬೊಮ್ಮಾದಿಗಳು ತುತಿಸೆ ಕಾಣದೆ ಸರ್ವ-ಶಕ್ತರಲ್ಲವೆಂದು ಸುಮ್ಮನಿರುವುದೇನುಸೊಕ್ಕಿನಿಂದಲಿ ಗೋಮಕ್ಕಳ ಕೈಯಿಂದಭಕ್ತವತ್ಸಲನೆ ಬಯಸಿ (ಬೈಸಿ)ಕೊಂಡದದೇನುಮುಕ್ತಿಪ್ರದಾತನೆ ನಿನಗೆ ಯಮುನಾದೇವಿಗಕ್ಕನೆ ಮಾರ್ಗವನಿತ್ತಳೆಂಬೋದೇನೊಮುಕ್ತ ನಿಯಾಮಕನೆ ನೀ ಕೌರವ ಸಭೆಗೆಚಕ್ಕನೆ ಸಂಧಾನಕ್ಕಿನ್ನು ಪೋದುದು ಏನೊಭಕ್ತವತ್ಸಲ ಕೃಷ್ಣ ಗೋಪಾಲವಿಠಲಮಕ್ಕಳಾಟಕೆ ನಿನ್ನ ಮಹಿಮೆಗೆ ನಮೋ ನಮೋ ೨

ತ್ರಿಪುಟತಾಳ
ಅಂಗನೆ ದ್ರೌಪದಿಗಕ್ಷಯ ವಸನವುಹಿಂಗದೆ ಇತ್ತಂಥ ಹಿತದೈವವೆಶೃಂಗಾರದೀಪುರದ ರಜಕನ್ನ ಬಿಡದಲೆಭಂಗಬಡಿಸಿ ವಸ್ತ್ರನುಟ್ಟುಕೊಂಡದ್ದು ಏನೊಹಿಂಗದೆ ಅಜಭವರಿನ್ನು ಅರ್ಚಿಸಲಾಗಿಕುಂಗಿದ್ದ ಕುಬುಜೆ ಅರ್ಚನೆಗೆ ಮೆಚ್ಚಿದ್ದದೇನೊಅಂಗನೆ ಲಕುಮಿ ಅಲಂಕರಿಸುತಲಿರೆರಂಗ ಪೂಗಾರನ ಮಾಲೆಕೊಂಡದ್ದು ಏನೊತುಂಗಮಹಿಮ ಗೋಪಾಲವಿಠಲ ಕೃಷ್ಣಡಿಂಗರಿಗರ ಪ್ರಿಯ ದೀನಜನರ ಬಂಧು ೩

ಅಟ್ಟತಾಳ
ದುಃಖ ಸಾಗರದ ಸಿಕ್ಕು ಬಿಡಿಪನೆ ದೇ-ವಕಿಯ ಸೆರೆಯ ಬಿಡಿಸಿದವನೆಂಬುವುದೇನೊಅಕ್ಕರದಲಿ ವದನ ತೆರೆದು ಇನ್ನುಗಕ್ಕನೆ ಹದಿನಾಲ್ಕು ಲೋಕ ತೋರಿದನೆ ಗೋ-ಮಕ್ಕಳ ಕೂಡಾಡಿ ಅಡಗಿಕೊಂಬುವುದೇನೊಮುಖ್ಯ ಮುಕುತರು ನಿನ್ನನ್ನು ಕೊಂಡಾಡುತ್ತಲಿರೆಉಖ್ಖಾ ಅಮ್ಮ ಎಂದು ಅಕ್ಕೆ ಮಾಡಿದುದೇನೊಭಕ್ತವತ್ಸಲದೇವ ಗೋಪಾಲವಿಠಲ ವಿ-ರಕ್ತರ ಮನದಲ್ಲಿ ಬಿಡದೆ ಇಪ್ಪುವ ಸ್ವಾಮಿ ೪

ಆದಿತಾಳ
ಜಾರ ಚೋರ ದೋಷಗಳು ಆರು ಆರು ಮಾಡಿ ನಿನ್ನಸಾರಿ ತುತಿಸಿ ಸಾರೆ ಅವರಾಪಾರ ಓಡವು ?ಜಾರ ಚೋರ ಗುಣಗಳೆಲ್ಲ ನಿನಗೆ ಒಪ್ಪಿತಯ್ಯಾ ಸರ್ವಕಾರಣಕ್ಕೆ ನೀನೆ ಮುಖ್ಯ ಕಾರಣಾದ ಕಾರಣವುಮಾರುತೀಶ ಚೆಲುವ ಗೋಪಾಲವಿಠಲರೇಯಆರು ಬಲ್ಲರಯ್ಯ ನಿನ್ನಪಾರ ಮಹಿಮೆ ಪೂರಣವು ೫

ಜತೆ
ಉಡುಪಿವಾಸ ಶ್ರೀಕೃಷ್ಣ ಗೋಪಾಲಬಿಡದೆ ನಂಬಿಸೊ ನಿನ್ನ ಚರಣಕಮಲವ

ಸಕಲ ಜೀವಜಡತತ್ವಾದಿಗಳಲ್ಲಿ
೧೧೯
ಸುಳಾದಿ
ಧ್ರುವತಾಳ
ಆವ ವಿಷ್ಣುನೆ ಜೀವದಂಗುಟ ಮಾತ್ರ ಮೂರುತಿಆವ ವಿಷ್ಣುನೆ ಜೀವದಾಕಾರ ಮೂರುತಿಆವ ವಿಷ್ಣುನೆ ಸರ್ವವ್ಯಾಪ್ತ ಮೂರುತಿಆವ ವಿಷ್ಣುನೆ ಜೀವಕ್ಕಾವರ್ಕವಾದ ಮೂರುತಿಆವ ವಿಷ್ಣುನೆ ಜೀವಾಧಿಷ್ಠಾನ ದೇಹ ಮೂರುತಿಆವ ವಿಷ್ಣುನೆ ಮೂಲದವತಾರ ಮೂರುತಿಆವ ವಿಷ್ಣುನೆ ಮಧ್ಯ ಅಜಾದಿ ಮೂರುತಿಆವ ವಿಷ್ಣುನೆ ಜೀವ ಸರ್ವ ವಿಶ್ವಾದಿ ಮೂರುತಿಆವ ವಿಷ್ಣುನೆ ಅನಂತಾವತಾರ ಮೂರುತಿಆವ ವಿಷ್ಣುನೆ ಜೀವದ ಪ್ರತಿಪಾದ್ಯ ಮೂರುತಿಆವ ವಿಷ್ಣುವಿನಾಧೀನವಾಗದ ಠಾವಿಲ್ಲ ಎಲ್ಲಿ ನೋಡಾಆವ ವಿಷ್ಣು ಸರ್ವಜ್ಞ ಸಾಕಾರ ಜ್ಞಾನಾನಂದಯಾವತ್ತು ಏಕಮೇವಾದೇವಾಶ್ರೀವಿಷ್ಣು ನಮ್ಮ ಸ್ವಾಮಿ ಗೋಪಾಲವಿಠಲಪಾವನ್ನ ಮೂರುತಿ ಪರಮಪುರುಷ ನೋಡು ೧

ಮಠ್ಯತಾಳ
ಪೃಥಿವಿ ಅಪ್ಪು ಅಗ್ನಿ ವಾಯುರಾಕಾಶವುತತು ತನ್ಮಾತ್ರ ಶಬ್ದಾದಿ ವಿಷಯಂಗಳುಜಿತ ತೈಜಸ ವೈಕಾರ ಸತು ಮಹಾತತುವ ಹರಿಗೆ ಸ್ವರೂಪಭೂತತತುಗಳು ಜಡವಲ್ಲ ಎಲ್ಲ ಆನಂದಮಯಗತಿ ಕೊಡುವುವು ಒಂದಕ್ಕೆ ಒಂದೊಂದೆ ಪೂರ್ಣಖತಿಗೊಳಿಸುವುವಲ್ಲ ಖಂಡಖಂಡವಲ್ಲಚತುರವು ಇವು ಬಲು ಹರಿಯೆ ಇವು ಎನ್ನಿಸತತ ತಾ ತನ್ನ ಸ್ವರೂಪಭೂತ ತತ್ವಪ್ರವೇಶವೆಮತಿಯೆ ಪ್ರಕೃತಿ ಅಂಶಗಳಿಗೆಸತತ ಬಿಂಬನಾಗಿ ಸವಿಯದೆ ಎಂದೆಂದುಕ್ಷಿತಿಯಲಿ ಜೀವರ ಗತಿಗೆ ಸಾಧನ ಮಾಳ್ಪಪತಿತ ಪಾವನ ವಿಷ್ಣು ಗೋಪಾಲವಿಠಲಸತತ ಕ್ರೀಡೆಯ ಮಾಳ್ಪ ಚೇತನತನದಿ ೨

ರೂಪಕತಾಳ
ವಿಷ್ಣು ವರುಣವಿನ್ನು ವಿಷ್ಣು ಕಾಲವು ನೋಡುವಿಷ್ಣುನೆ ಆಕಾಶ ಅವ್ಯಾಕೃತಕೆ ಬಿಂಬವಿಷ್ಣುನೆ ಮಹದಾದಿ ವಿಷ್ಣುನೆ ಅಹಂಕಾರಿಕವಿಷ್ಣು ವೈಕಾರಿಕಾ ವಿಷ್ಣು ತೈಜಸವಿನ್ನುವಿಷ್ಣು ಪಂಚಮಹಾಭೂತ ವಿಷ್ಣು ತನ್ಮಾತ್ರೆಗಳುವಿಷ್ಣುನೆ ಕಾರ್ಯಕಾರಣ ತತ್ವಜಡಗಳಿಗೆ ಬಿಂಬವಿಷ್ಣುನೆ ತತ್ವಾಭಿಮಾನಿಗಳಲ್ಲಿ ಬೇರೆತತ್ತದಾಕಾರನಾಗಿ ಇಷ್ಟರ ಒಳಗಿನ್ನುವಿಷ್ಣುನೆ ಅವರವರ ಸತತ ಪ್ರವರ್ತಕನಾಗೀಷ್ಟಾನಿಷ್ಟಗಳಿಗೆ ತೊಡಕದಿದ್ದುವಿಷ್ಣುನಾಮಕ ಚೆಲುವ ಗೋಪಾಲವಿಠಲ ಸರ್ವಂವಿಷ್ಣುಮಯಂ ಜಗತ್ತು ವ್ಯಾಪಿಸಿಪ್ಪ ೩

ಝಂಪೆತಾಳ
ವಿಷ್ಣು ಇಪ್ಪ ತತ್ವರೂಪ ತಾನಾಗೀಷ್ಟ ತತ್ವಗಳಿಗೆ ಬಿಂಬನಾಗಿವಿಷ್ಣು ತಾನಿಪ್ಪುದಾಶ್ಚರ್ಯವೆಂದೆನ್ನದಿರಿವಿಷ್ಣು ದಾಸರಿಗೆ ಸ್ವರೂಪಭೂತೈಷ್ಟು ತತ್ವಂಗಳು ಜೀವ ಸ್ವರೂಪದಂತೆಸ್ಪಷ್ಟವಾಗಿಪ್ಪುದು ತಿಳಿದವರಿಗೆಕಷ್ಟಬಡಿಸುವರೆಲ್ಲ ಎನ್ನೆ ಅನ್ಯಾಯಪುಟ್ಟಿಸುವ ಒಂದೊಂದ ಭೇದವನಷ್ಟವಾಗುವುದಲ್ಲ ಜೀವರ ಸ್ವರೂಪಬಿಟ್ಟು ಹೋಗುವುದಲ್ಲ ಎಂದೆಂದಿಗುಸ್ಪಷ್ಟವಾಗಿ ಇದರ ಅನುಭವವೆಂಬುವುದುವಿಷ್ಣುದಾಸರೆ ಇದರ ವಿವರವ ಬಲ್ಲರುಇಷ್ಟಮೂರುತಿ ನಮ್ಮ ಗೋಪಾಲವಿಠಲೈಷ್ಟರಲ್ಲಿ ನಿಂತು ಹರಿ ಏನೇನು ನೋಳ್ಪ ೪

ತ್ರಿಪುಟತಾಳ
ಭಿನ್ನವಾದ ವೃತ್ತಿರೂಪ ಸುಖದುಃಖವುಇನ್ನು ಸ್ವರೂಪ ಅನುಭವ ಉಂಟುಚಿನ್ಮನಸಿನ ಮನಸಿನ ದ್ವಾರವಿನ್ನು ಅಭಿಮಾನದಲ್ಲಿತನ್ನದೆಂದರಿವ ಭಿನ್ನವಾದ ದುಃಖವತನ್ನ ಪ್ರಕಾಶ ಅಭಿಮಾನವಿದ್ದಲ್ಲೆಲ್ಲತನ್ನದೆಂದೇ ತಿಳಿವ ಅಭಿಮಾನದೀನ್ನು ಹೀಗೆ ವೃತ್ತಿರೂಪ ದುಃಖವಿನ್ನುತನ್ನಭಿಮಾನದಿಂದಲೆ ಅನುಭವಚೆನ್ನಾಗಿ ಲಿಂಗಭಂಗವಾಗುವ ತನಕೈನ್ನು ಹೀಗೆ ಅನುಭವಿಪ ಜೀವನುಮುನ್ನ ವೃತ್ತಿರೂಪ ಸುಖವು ಮತ್ತೆ ಹೀಗೆಇನ್ನು ಅನುಭವವೆಲ್ಲ ಒಂದೆ ನೋಡುತನ್ನದೆಂಬ ಅಭಿಮಾನ ಬಿಟ್ಟು ನಿರ್ಗುಣದಲ್ಲಿಅನ್ನರಸ ಪಾನಂಗಳು ಎಲ್ಲ ಹರಿಯೆ ಉಣುವ-ವನೆಂದು ತಿಳಿದು ಉಂಬ ಜೀವರಿಗೆಚಿನುಮಯ ಬಿಂಬ ತಾನುಂಡು ಎಲ್ಲಭಿನ್ನರಸ ಸುಖವ್ಯಂಜಕ ಮಾಡಿಆನಂದವನು ಜೀವನಿಗೆ ಅಭಿವ್ಯಕ್ತಿ ಮಾಳ್ಪೈನ್ನಿವನಿಗೆ ವಿಪರೀತ ದುಷ್ಟ ಜೀವನರಿಗೆಇನ್ನು ದುಃಖ ಅಭಿವ್ಯಕ್ತಿ ಮಾಳ್ಪಪುಣ್ಯ ಪಾಪಗಳೆರಡು ಜೀವಕ್ಕೆ ಸಹಾಯವಾಗಿತನ್ನದೆಂಬೊ ಮಾತು ಮಾತ್ರ ಇನ್ನು ಪುಸಿಯುಭಿನ್ನನಾಗ್ಯಾಡುವನು ಅಭಿಮಾನದಿಅನಂತ ಗುಣಪೂರ್ಣ ಗೋಪಾಲವಿಠಲಚೆನ್ನಿಗನ ಮಹಿಮೆ ಚಿತ್ರವಿಚಿತ್ರವು ೫

ಅಟ್ಟತಾಳ
ಒಂದು ರಸದಲ್ಲಿ ಬಿಂದು ಉದರದಿ ಬಿದ್ದರೆಇಂದಿರೆ ಉಂಟಲ್ಲಿ ವಿರಿಂಚಿ ಶಿವನುಂಟುಚೆಂದದಿ ಗರುಡಶೇಷ ಇಂದ್ರಾದಿ ಸುರರೆಲ್ಲಹೊಂದಿರುವರು ತಮ್ಮ ತತ್ವದ ರಸೈಂದಿರೇಶ ವಿಭಾಗವ ಮಾಡಿ ತರತಮ-ದಿಂದಲೆ ಆರಾರ ಭಾಗ ಪೊಂದಿಸಿ ಈವೈಂದಿರಾದೇವಿಗವ್ಯಕ್ತ ರಸದಲ್ಲೆ ಅಭಿಮಾನಮಂದಜಜನಕಗೆ ಮಹಾ ತತ್ವರಸವಿನ್ನುಇಂದುಮೌಳಿಗೆ ಅಹಂಕಾರ ರಸದಲ್ಲೀಂದ್ರಾದಿ ಸುರರಿಗೆ ವೈಕಾರಿಕ ರಸತಂದುಕೊಡುವ ತೈಜಸರಸ ತಾರತಮ್ಯದಿಂದ ಭೌತಿಕರಸ ಬಪ್ಪುದು ಮನುಜರ್ಗೆತಂದುಕೊಡುವ ಒಂದರೊಳಗೆ ಎಲ್ಲಒಂದೆ ವಿಷಯ ಬಹುಮಂದಿಗೆ ಅನುಭೋಗತಂದಿಪ್ಪುದು ಪೃಥಿವಿಗಂಧ ತನ್ಮಾತ್ರೆಯಂತೆಮಂದ ಅಸುರ ದೈತ್ಯವೃಂದಕ್ಕೆ ಇದರೊಳುಗಂಧ ಬೇರೆ ಉಂಟು ಒಂದೆ ರಸದಲ್ಲೆಮಂದಾಕಿನಿಯಲ್ಲಿ ಮೈಲಿಗೆ ವಸ್ತ್ರ ತೊಳೆದರೆತಂದುಕೊಡುವುದು ತದ್ಭೂಷಣ ಆ ವಸ್ತ್ರಕ್ಕೆಸುಂದರ ಮೂರುತಿ ಗೋಪಾಲವಿಠಲಬಂಧುವಾದನು ಸಾಧು ಜೀವರ್ಗೆ ೬

ಆದಿತಾಳ
ದೇವಿಯಿಂದಲಿ ಕ್ರೀಡೆ ದೇವನಾಡುವ ತತ್ವದೇವತೆಗಳನ್ನೆಲ್ಲ ಕಾವಲಿಟ್ಟಿನ್ನುಆವರ್ಕ ಪ್ರಕೃತಿಗಳಲ್ಲಿ ತಾ ನಿಂತುತ್ರಿವಿಧ ಮೂಲರ ಜಗಕೆ ವೃಕ್ಷವಾಗಿಶ್ರೀವಿಷ್ಣುನೆ ಅಲ್ಲಿ ವಿಟಪನಾಗಿ ಸರ್ವ-ಜೀವರಿಗಾಶ್ರಯನಾಗಿ ಪಾಲಿಸುವಆವ ಈ ವೃಕ್ಷದ ಮೂಲ ಕಂಡವರಿಲ್ಲದೇವದೇವೇಶನಲಿ ಲೀಲೆಯೆಷ್ಟೋದೇವಿ ಲಕುಮಿ ಸಾಕಲ್ಯ ತಿಳಿಯದೆ ಶ್ರೀಭಾವವನು ತಾನು ನಂದದೊಳು ಮುಣುಗಿಶ್ರೀವರ ಪ್ರೇರಕನೆಂದು ತುತಿಸಿ ಇನ್ನುಭಾಮೆ ಗಂಡನ ಕೊಂಡಾಡಿಹಳುಜೀವರು ತಮ್ಮ ತಮ್ಮ ಯಾವತ್ತು ಶಕ್ತಿಲಿದೇವನ ಸ್ತುತಿಸಿ ಧೇನಿಸುವರುಗೋವರ್ಧನೋದ್ಧಾರ ಗೋಪಾಲವಿಠಲನ್ನದೇವನ ಮಹಿಮೆ ಬಲ್ಲವರಾರು ೭

ಜತೆ
ಆಪ್ತ ಉಪಾಸನೆ ಗುಪ್ತದಿ ಇದು ಮಾಡಿಪ್ರಾಪ್ತನಾಗುವ ಗೋಪಾಲವಿಠಲ ನಿಮಗೆ

ಜಗದ್ವ್ಯಾಪ್ತನೂ ನಿರ್ದೋಷನೂ
೯೩
ಸುಳಾದಿ
ಧ್ರುವತಾಳ
ಆವನ್ನೀ ಧರೆಯ ವ್ಯಾಪ್ತನೆಂದೆನಿಸುವಆವ ಪುರುಷನೆ ನಮ್ಮ ಸ್ವಾಮಿ ಕಾಣೊ ಆವಾವ ನಿರ್ದೋಷ ಎಂದೆನಿಸುವನೊಅವನೆ ಎನ್ನ ಭಾಗ್ಯದೊಡೆಯ ಕಾಣೊಆವಾವ ಜ್ಞಾನಪೂರ್ಣ ಪೂರ್ಣನೆಂದೆನಿಪನೊಅವನೆ ಎನ್ನ ಮನದೊಡೆಯ ಕಾಣೊಆವಾವ ಸರ್ವತ್ರ ವ್ಯಾಪ್ತನಾಗಿಪ್ಪನೊಅವನೆ ಎನಗೆ ಮುಖ್ಯ ವಿಷಯ ಕಾಣೊಆವನಿಂದ ಜಾಗ್ರವು ಸೃಷ್ಟಿ ಸ್ಥಿತಿಲಯವುಅವನೆ ಎನ್ನ ದಾತಾಶ್ರಿತನು ಕಾಣೊಆವನಿಂದ ಬಂಧಕ ಮೋಚಕಾದದೊಅವನೆ ಈಗ ಮನವೆ ಪಿಡಿಯೊ ಕಾಣೊಆವನ್ನ ಕಾವನ್ನ ಬಾವನ್ನ ತಾವನ್ನೈಇವನ್ನ ಪಾವನ್ನ ಪೂರ್ಣ ಗುಣಸಂಪನ್ನಮಾವನ್ನಮರ್ದನ ಗೋಪಾಲವಿಠಲನೆಂಬದೇವನ್ನ ತಂದು ತೋರು ಅನುಭವಕ್ಕೆ ೧

ಮಠ್ಯತಾಳ
ರಮ್ಮೆಯ ಅರಸನ್ನ ಬೊಮ್ಮನೈಯ್ಯನ್ನಮೊಮ್ಮಗನೆಂದೆನಿಪ ಹರನ ಪೊರೆವನ್ನಸುಮ್ಮನಸರನೆಲ್ಲ ಪರಿವಾರವು ಮಾಡಿಬೊಮ್ಮಾಂಡವೆ ಮನೆಯ ಗಮ್ಯನೆಂದೆನಿಪನಸುಮ್ಮನೆ ಹೋಗಿನ್ನು ಒಮ್ಮನದಲ್ಲಿಘಮ್ಮನೆ ಅಳಗಿರಿತಿಮ್ಮನ್ನ ಕರೆದು ತಾನಮ್ಮ ಸ್ಥಿತಿಯ ಪೇಳಿ ಸಮ್ಮತಿಸಿಕೊಂಬೈಮ್ಮನ ಬ್ಯಾಡಿದಕೆ ಈಗಲೆ ಸಮ್ಯ (ಸಮಯ ?)ಯಿದಕೆನಮ್ಮ ಪೊರೆವ ದಾತ ಗೋಪಾಲವಿಠಲಹಮ್ಮ ತೊರೆದು ಅಧಮ್ಮನೆಂದವಗೊಲಿವ ೨

ರೂಪಕತಾಳ
ಆವನಲ್ಲಿ (ಜೀವನಲ್ಲಿ) ಅಸ್ವತಂತ್ರವೆಂಬೋದು ಸಿದ್ಧಾವನಲ್ಲೆ ಅವನಿರೂಪವ ? ಅನುಭವ ತೋರುತಾವನೆ ಅವನ ಮಹಿಮೆಯನು ಬಲ್ಲವಾವನೆ ಸಕಲ ವಿಧಿಯನು ಮಾಡಿದವಪಾವನ್ನನಾಗುವ ಅವನೆ ಕಂಡರೆ ಮನುಜಆ ವೇಳ್ಯದಲಿ ಮನವೆ ಅನುಭೋಗವಲ್ಲದೆದೇವಕಿನಂದನ ಗೋಪಾಲವಿಠಲ ತ-ನ್ನವನೆಂದವನಿಗೆ ತನ್ನ ತೋರಿಸಿಕೊಂಬ ೩

ಅಟ್ಟತಾಳ
ಕುಣಿದು ಕುಣಿಸುವ ಮಣಿದು ಮಣಿಸುವಉಣಿಸುವನುಂಡು ತನಗಭೇದಾಗಿಎಣಿಕೆ ತಟ್ಟುವನಲ್ಲ ಅನುಮಾನ ವಸ್ತಲ್ಲಘನ ಜಾಗ್ರ ಪ್ರತಾಪ ನಿತ್ಯವ್ಯಕ್ತ ದೇವಎಣಿಸು ಮನವೆ ನಿನ್ನ ಎಲ್ಲ ಪ್ರಾವರ್ತಕಕ್ಷಣ ಕ್ಷಣಕೆ ಇನ್ನು ಕಾಣಿಸುವನು ಆ-ರನು ನಾಚದೆ ಪಿಡಿಯಿನ್ನು ನೂಕು ಸಕಲ ಅಘಕ್ಷೀಣಿಸಿ ಪೋಗುವುದಿದಕೆ ಅನುಮಾನ ಸಲ್ಲದುಘನಮಹಿಮ ನಮ್ಮ ಗೋಪಾಲವಿಠಲನ್ನನೆನೆಸುವುದೆ ಸುಖ ನಿನಗದೆ ಬಹುಲಾಭ ೪

ಆದಿತಾಳ
ಭಕ್ತರಿಗೆ ಭಕ್ತನಾಗು ಮುಕುತಿ ಬೇಕಿಚ್ಛೆ ಇತ್ತೆಸಕಲ ವಿಷಯದಿ ವಿರಕ್ತಿವುಳ್ಳವನಾಗುಕಕುಲಾತಿ ಬಿಡು ಇನ್ನೊಂದು ದೈವಿಲ್ಲಯೆಂದುಲಕುಮಿರಮಣಲ್ಲಾಸಕುತಿಯುಳ್ಳವನಾಗುಸಕಲ ವಿಧಿ ನಿಷೇಧ ಹರಿಗೆ ಆಧೀನವೆಂದೂಕುತಿಗಳಿಂದ ಹರಿಯ ತುತಿಗೆ ದೀಕ್ಷಿತನಾಗುಭಕುತವತ್ಸಲ ರಂಗ ಗೋಪಾಲವಿಠಲಸಕಲ ಬಂಧವ ಬಿಡಿಸಿ ಸುಖ ಅಂಬುಧಿಯೊಳಿಡುವ ೫

ಜತೆ
ಸ್ವತಂತ್ರಾಸ್ವತಂತ್ರ ತಿಳಿದವನಿಗೆ ಪರ-ತಂತ್ರವಿದೂರ ಗೋಪಾಲವಿಠಲ ಒಲಿವ

ಈ ಸುಳಾದಿಯಲ್ಲಿ, ಲಕ್ಷ್ಮಿ
ಲಕ್ಷ್ಮೀದೇವಿ
೫೨
ಸುಳಾದಿಧ್ರುವತಾಳ
ಇಂದಿರಾದೇವಿ ಮಾತೆ ತಂದೆ ವಿಠಲನರವಿಂದ ಚರಣಕಿನ್ನು ಅಂದಿಗೆ ಗೆಜ್ಜೆಯಾದೆಹೊಂದಿಕೆಯಾದ ಊರು ಜಾನು ಕೈಯಮೇಲೆಚೆಂದದ ಸ್ವರೂಪ ಪೀತಾಂಬರೊಡ್ಯಾಣಾದೆಮಂದರಧರನೊಕ್ಷ ಸ್ಥಳದಲಿ ನೀ ನಿಂದೆಕಂದರದಲಿ ಚಿತ್ರವೈಚಿತ್ರ್ಯ ಪರಿಗಂಧವು ಪದಕ ಹಾರಂಗಳು ಪುಷ್ಪತುಲಸಿಯಿಂದೊಪ್ಪುವ ಅಲಂಕಾರ ನಂದ ಶೋಭಿತಳಾದೆಒಂದೊಂದು ಹಸ್ತದಲ್ಲಿ ಆಯುಧಗಳಾದೆಚೆಂದುಳ್ಳ ಕಡೆಯ ತೋಳ್ಬಂದಿ ಭುಜಕೀರುತಿಕುಂದು ಇಲ್ಲದೆ ಕರ್ಣಕುಂಡಲ ನಾನಾಪರಿಅಂದವಾದರಳೆಲೆ ಸುಂದರ ಕಿರೀಟವುಸಂದಿಸಂದಿಗೆ ನಾನಾಭರಣಾಲಂಕಾರಳಾದೆಇಂದಿರೇಶನ ಪ್ರತಿ ಅವಯವಗಳಲಿನ್ನುಇಂದಿರೆ ಪ್ರತಿ ಪ್ರತಿ ವಸ್ತುವಾದೆಕಂದರ್ಪನಯ್ಯನ ಆನಂದ ಬೆರೆದು ಸುಖಸುರಿದೆ ನೀಒಂದರಘಳಿಗೆ ಅಗಲದೆ ಇನ್ನುಕಂದ ಬೊಮ್ಮನು ಮತ್ತೆ ನಂದಿವಾಹನ ಅಮರೇಂದ್ರ ಸನಕ ಸನಂದರಿಂದಲಿನ್ನುಕುಂದಿಲ್ಲದೋಲಗವ ನಂದದಿ ಕೊಳುತ ಮುಕ್ತ-ರಿಂದ ಸೇವಿತಳಾಗಿ ಎಂದೆಂದು ಬಿಡದಲೆಸಂದೇಹವಿಲ್ಲದೆ ಗೋಪಾಲವಿಠಲನಪೊಂದಿ ಸುಖದಲಿ ಚೆಂದದಿ ಮೆರೆದೆ ೧

ಮಠ್ಯತಾಳ
ಹರಿ ಅನಿರುದ್ಧನಾಗೆ ಸಿರಿ ಶಾಂತಿದೇವಿಯಾದೆಹರಿ ಪ್ರದ್ಯುಮ್ನನಾಗೆ ಸಿರಿ ಕೃತಿದೇವಿಯಾದೆಹರಿ ಸಂಕರುಷಣನಾಗೆ ಸಿರಿ ಜಯದೇವಿಯಾದೆಹರಿ ವಾಸುದೇವನಾಗೆ ಸಿರಿ ಮಾಯಾದೇವಿಯಾದೆಎರಡೆರಡವತಾರಕ್ಕೆ ಮರಳಿ ಮರಳಿ ಚ-ತುರವತಾರಗಳು ಆದೆಪರಿಪರಿ ಅವತಾರಕ್ಕೆ ಪರಿಪರಿ ರೂಪಳಾದೆಶರಣರ ಪಾಲಕ ಗೋಪಾಲವಿಠಲನಚರಣ ಕಮಲವನ್ನು ಪರಿಪರಿ ಸೇವಿಸುತ ೨

ತ್ರಿಪುಟತಾಳ
ಧರೆಯ ರೂಪದಿ ಹರಿಗೆ ಕುಳ್ಳಿರೆ ಗದ್ದುಗೆಯಾದೆಮೆರೆವ ಅವ್ಯಾಕೃತ ಗಗನವೆ ಕೊಡೆಯಾದೆಎರಡೆರಡೊಂದು ರೂಪದಿ ಹರಿಯಿತ್ತಲು ರಮಾಮರಳಿ ಶ್ರೀರೂಪದಿ ಹರಿಯಿಂದ ಬೆರೆದುಸ್ವರಮಣನ ರಮಿಸಿ ಯೋಗನಿದ್ರೆಯ ಮಾಡಿಹರಿಯಾಜ್ಞದಿಂದ ಅಂಭ್ರಣಿರೂಪಳಾದೆಪರಿಪರಿ ಶ್ರುತಿಯಿಂದ ಸೃಷ್ಟಿಯ ರಚಿಸೆಂದುಹರಿಯ ಕೊಂಡಾಡಿದೆ ಹರುಷದಿ ನಲಿದೆಹರಿಯ ನಾಭಿಯಲಿನ್ನು ಸರಸಿಜ ರೂಪದಿವಿರಿಂಚಿಯನೆ ಪಡೆದೆ ಕರುಣಾಕರೆ ಮತ್ತೆಅರಿವಂತೆ ಅಜಗಿನ್ನು ತಪತಪವೆಂದು ಅ-ಶರೀರ ಹಿತ ನುಡಿದೆ ಅವ್ಯಾಕೃತಕೆ ಅಭಿಮಾನಿಪರಿಪೂರ್ಣ ಗುಣಭರಿತ ಗೋಪಾಲವಿಠಲನಕರುಣದಿಂದೆರಡೆರಡು ಸೃಷ್ಟಿಯ ರಚಿಸಿದೆ೩

ಅಟ್ಟತಾಳ
ಹರಿಯಾಜ್ಞೆಯಿಂದಲಿ ಜಡ ಪ್ರಕೃತಿ ದೆಸೆಯಿಂದವರ ತ್ರಿಗುಣಾತ್ಮಕವಾದಂಥ ಮಹತತ್ವ ಅ-ದರಿಂದ ವೈಕಾರಿಕ ತೈಜಸ ತಾಮಸವನ್ನುಭರಿತವಾದಂಥ ಅಹಂಕಾರ ತತ್ವಪರಿಪರಿ ಸೃಷ್ಟಿಸಿದೆ ವರಮಾಯಾ ನೋವಿಲ್ಲದೆಪರಮ ದಯಾಳು ಗೋಪಾಲವಿಠಲನುಕರುಣಿಸುವನು ನೀ ಕರವಿಡಿದವರ ೪

ಆದಿತಾಳ
ಮಹತತ್ವ ದೆಸೆಯಿಂದ ಬೊಮ್ಮನ ಸೃಷ್ಟಿಸಿದೆಅಹಂಕಾರ ವೈಕಾರಿಕದಿಂದ ಮನಸ್ಸು ಆಮಹ ಇಂದ್ರಿಯಗಳಿಗಭಿಮಾನಿ ದೇವತೆಗಳನ್ನುಅಹಂಕಾರ ಪಂಚ ತನ್ಮಾತ್ರೆಯನ್ನು ಸೃಷ್ಟಿಸಿದೆಅಹಂಕಾರ ತೈಜಸದಿಂದ ಚಕ್ಷುರಾದಿಇಹ ಇಂದ್ರಿಯಗಳನ್ನೆಲ್ಲ ಸೃಷ್ಟಿಸಿದೆಅಹಂಕಾರ ತಾಮಸದಿಂದಲಿ ಪಂಚ-ಮಹಾಭೂತಂಗಳ ಸೃಷ್ಟಿಸಿದೆಮೋಹದಿಂದ ಸಕಲ ತತ್ವೇಶರ ಸೃಷ್ಟಿಸಿದೆಆ ಹರಿ ಕರುಣಾಪೂರ್ಣ ಕಟಾಕ್ಷದಿ ಈಮಹಾ ಜಗಕೆಲ್ಲ ಪ್ರೇಮದಿಂದ ಸಲಹುವೆಮೋಹನ ಮೂರುತಿ ಗೋಪಾಲವಿಠಲನಸಾಹಸವಿಲ್ಲದೆ ರಹಸ್ಯ ಪೂಜಿಪೆ ೫

ಜತೆ
ನಮೋ ನಮೋ ನಿನ್ನ ಪಾದಕಮಲವೆ ಮೊರೆ ಹೊಕ್ಕೆಮಮತೆ ಪುಟ್ಟಿಸೆನಗೆ ಗೋಪಾಲವಿಠಲನಲ್ಲಿ

ಈ ಸುಳಾದಿಯಲ್ಲಿ ಶ್ರೀಹರಿಯ

ಸುಳಾದಿ
ಧ್ರುವತಾಳ
ಇಂದುವಿನ ಪೋಲ್ವಪಾದದಂದಿಗೆ ಗೆಜ್ಜೆಗುಲ್ಲುಮಂದ ಕದಳಿಸ್ತಂಭದಂದದಿ ಊರು ಜಾನುಚೆಂದದಿ ಉಡಿಗಂಟೆ ಕುಂದಣದುಡುದಾರಬಿಂದುಲಿ ಖಡಿಯ ತೋಳ್ಬಂದಿ ಮುದ್ದಿನುಂಗುರಗಂಧಪೂಸಿದ ಕಂದರದಿ ವಿಶಾಲಾಗ್ರ ನಖವುಪೊಂದಿಸಿ ಇಟ್ಟ ಕರ್ಣಕುಂಡಲಾನಂದ ಮುಖಮಂದಹಾಸ ಅರವಿಂದ ನಯನ ಚೆಲ್ವಾಂದವಾದರಳೆಲೆ ಸುಂದರ ಕಿರೀಟವುವೃಂದಾವನದಿ ಗೋವಿಂದ ಶ್ರೀಕೃಷ್ಣೈಂದಿರಾಪತಿ ಅಮರೇಂದ್ರವಂದಿತಕಂದರ್ಪಜನಕ ಏ ನಂದನಂದನ ಕಂದಹಿಂದೆ ಕಾಳಿಂದಿ ಮೇಲೆ ನಿಂದು ಕುಣಿದಂತೆಇಂದೆನ್ನ ಮನವೆಂಬೊ ಮಂದಿರದೊಳು ಬಂದುಧಿಂ ಧಿಮಿದಿಮಿಕ್ಕು ತೋಂ ಧಿಗಿಧಿಗಿತಂದನ್ನ ತಾನಾ ತಥೈ ಎಂದು ಕುಣಿದಿನ್ನುಹಿಂದಿನ ದೋಷಂಗಳ ಕುಂದಲೊತ್ತಿನ್ನು ವೇಗಮುಂದಿನ ದುಷ್ಕ್ರತವು ನಿಂದಿರದಂತಲಿ ಮಾಡೊಮಂದಜನರ ದೋಷವೆಂಬೊ ಅಂಧಕಾರಕ್ಕೆಸುಂದರಾಂಗನೆ ರವಿಯಂದದಿ ನೀ ಪೊಳೆಯೊನಿಂದಿರುವೋದೆ ತಮ ಛಿಂದಿಸಿ ಪೋಗುವುದುಒಂದರಗಳಿಗೆನ್ನ ಮುಂದೆ ಬಿಡದಲೆನಂದದಿ ಸುಳಿದೆನ್ನ ಮಂದನ್ನ ಮಾಡದೆ ಮು-ಕುಂದ ನೀ ಎನಗೆ ಬಂಧು ಕಾಣಯ್ಯ ದೇವ ಸಿಂಧುಶಯನ ರಂಗ ಗೋಪಾಲವಿಠಲಹಿಂದೆ ಮುಂದೆ ಎನಗೆ ಒಂದಾಗಿ ಪೊರೆಯೊ ೧

ಮಠ್ಯತಾಳ
ಬಲಿಯ ದಾನವ ಬೇಡಿ ನೆಲನೆ ಈರಡಿ ಮಾಡಿಸ್ಥಳವು ಸಾಲದೆ ಪಾದ ಬಲಿಯ ಶಿರದಲ್ಲಿಟ್ಟೀಲೆ ದೇವ ಅದೆ ಪಾದ ಎನ್ನ ತಲೆಯ ಮೆಟ್ಟೆನಗೆತುಳಿ ಎನ್ನ ದೋಷಗಳಳಿದು ಪೋಗುವಂತೆಹಲವು ದೋಷಂಗಳಿಗೆ ಬಲು ಅಧಿಕಾರಿ ನಾನುನೆಲೆ ಆವದೊಂದಿನ್ನು ತಿಳಿಯ ಕುಳಿತರಿನ್ನುಹೊಳೆಯ ನೀರಿಗೆ ತೃಣವು ಮರಳಿ ಬೀಳೋದೆ ಅಡ್ಡನಳಿನನಾಭನೆ ನೀನು ನೆಲೆಯ ಬಲ್ಲವನಯ್ಯಸುಲಭದಿಂದಲಿ ನಿಚ್ಚಳನ ಮಾಡಿ ಎನ್ನತಿಳಿಸಿ ನಿನ್ನ ರೂಪ ಇಳೆಯೊಳಗಿಡಿಸೆನ್ನಖಳರ ಮರ್ದನನೆ ಗೋಪಾಲವಿಠಲಕಾಲಕಾಲಕೆ ನಿನ್ನ ವಾಲಗದೊಳಗಿಡಿಸೊ2

ತ್ರಿಪುಟತಾಳ
ನೀನು ಪಿಡಿಯೆ ಕುಬುಜೆ ಯೌವನಳಾದಳುನೀನು ಸೋಕಲು ಶಿಲೆ ತಾನೆ ಸ್ತ್ರೀಯಾದಳುನಿನಗೆ ನೀ ವರದೆ ಅಂದು ಧ್ರುವರಾಯಗೊಲಿದಯ್ಯಏನು ಸುಖ ಶಬರಿ ಫಲವನುಣ್ಣಿಸಿದಳುನೀನೊಲಿದವರ ಮಹಿಮೆ ನೀನೆ ಬಲ್ಲೆಯೊ ದೇವಆನೇನು ಬಲ್ಲೆನು ನೀನು ತೋರಿಸಿದಷ್ಟುನೀನೆ ಎನಗೆ ಸ್ವಾಮಿ ನಾ ನಿನ್ನ ಭೃತ್ಯನೆಂಬೊ-ದಾನು ಒಂದೆ ಬಲ್ಲೆ ಇನ್ನೊಂದು ಅರಿಯೆ ನಾ ಮನಸಾವಾಚಾಕಾಯಾ ನಿನ್ನ ನಂಬಿದೆ ದೇವಏನು ಮಾಡಿದದೊಳಿತೆ ನೀನೆ ಗತಿ ಎನಗೆಕಾನನ ಪಟ್ಟಣ ಸಮವನು ಮಾಡಿದಂಥಜ್ಞಾನಿಗಳೊಡನಿಡಿಸು ಅನಂತಕಾಲದಿದಾನವಾಂತಕ ರಂಗ ಗೋಪಾಲವಿಠಲದೀನರಕ್ಷಕ ಭಕ್ತರಾಧೀನ ದೇವ ೩

ಅಟ್ಟತಾಳ
ಹಿಡಿಯನೆ ಎನ್ನಲ್ಲಿ ಮಡಗಿಕೊಂಡಿದ್ದಿನ್ನುಬಿಡದೆ ಎನ್ನಿಂದ ಮಾಡಿಸಿದ ಕರ್ಮಗಳೆಲ್ಲಸಡಗರದಿ ನಿನ್ನ ಅಡಿಗೆ ಅರ್ಪಿಸಿದರೆಒಡನೆ ಎನ್ನನು ನೀನು ಕಡೆಯ ನೋಡಲಿಯಾಕೊಪೊಡವಿಯೊಳು ನ್ಯಾಯಕೆ ದೃಢ ಭಕುತರಲ್ಲಿ ಬಾಹಿಡಿದು ನಿನ್ನನು ನಾನು ಸಡಿಲದೆ ಕಟ್ಟುವೆ ಬಡವನೆಂದು ಬಾಯ ಬಿಡುವುದೊಳಿತಲ್ಲಬಿಡು ಹಾಗಾದರೆ ಭಕುತವತ್ಸಲ ಬಿರುದಿನ್ನುಸಡಗರದ ದೈವ ಗೋಪಾಲವಿಠಲಕೊಡು ಭಕುತಿ ನಿನ್ನ ಅಡಿಗಳಲ್ಲೆನಗೆ

ಆದಿತಾಳ
ಹಾಗೆ ಹೀಗೆ ಮನವು ಭೋಗ ವಿಷಯಂಗಳಿಗೆಹೇಗೆ ಹೋಗೆಳೆದರೆ ನೀನು ಸಾಗರದಂತೆ ಮಾಡೀಯನಾಗಾರಿಕುಳ್ಳ ನಿಜಭಾಗವತರ ಮನೆಬಾಗಿಲುಕಾಯುವಂಥ ಭಾಗ್ಯವನಿತ್ತುಹೇಗೆ ನಿನ್ನ ಚರಣಗಳಿಗೆ ಮರುಳಾಗುವಂತೆ ಮನನಾಗಶಯನ ಮಾಡೊ ರೋಗ ವಿಷಯಗಳೆಂಬೊ ಹಾದಿಗೆ ಹರವಿ ಮುಳ್ಳುಜಾಗರತದಲೆನ್ನ ಕಾಯಬೇಕಿನ್ನುಸಾಗರಶಯನ ಗೋಪಾಲವಿಠಲರೇಯಚಾಗುಡಿಸಿಕ್ಕದೆ ನೀಗರಿ ಮುಂದಕ್ಕೆ (?) ೫

ಜತೆ
ಎನ್ನಪರಾಧ ಅನಂತವಿದ್ದರು ಕ್ಷಮಿಸಿಮನ್ನಿಸಿ ಸಲಹೆನ್ನ ಗೋಪಾಲವಿಠಲರೇಯ

ಉಡುಪಿಯ ಶ್ರೀಕೃಷ್ಣನ ಸ್ತೋತ್ರ
೧೫೪
ಸುಳಾದಿ
ಧ್ರುವತಾಳ
ಎತ್ತಣ ಶಬ್ದವಿದು ಎನ್ನ ಕರ್ಣಕಿದು ಯವ್ವಎತ್ತಣ ಸ್ಪರ್ಶವಿದು ಎನ್ನ ಅಂಗಕಿದು ಯವ್ವಎತ್ತಣ ರೂಪವಿದು ಎನ್ನ ಜಿಹ್ವೆಗೆ ಇದು ಯವ್ವಎತ್ತಣ ರಸವಿದು ಎನ್ನ ನಯನಕಿದು ಯವ್ವಸುತ್ತಿಹ ಶಿರದಿ ನಾನಾ ಲತೆಯು ಎಳೆದಳಿರುರತುನ ಮಕುಟ ಫಣೆಯ ಕಸ್ತೂರಿ ಕಮಲನಯನವ್ಯಕ್ತವದನವು ಮಂದಸ್ಮಿತ ಚೆಲ್ವ ಕಿರಿದಂತತತ್ಥಳಿಪ ಕಪೋಲ ಚಲತ್ತು ಮಕರ ಕುಂಡಲಉತ್ತಮದ ಕಂಬುಕಂಠ ಉರದಲ್ಲಿ ಶ್ರೀವತ್ಸಶ್ರೀತುಲಸಿಮಾಲೆ ಶೃಂಗಾರಿಕವಾದ ಭುಜಕೀರ್ತಿತಿತ್ತಿರಿ ಮಾವೂರಿ ಕೊಳಲೂದುತ್ತ ಸ್ವರವೆತ್ತಿ ಗಾನಕುತ್ತಿಗೆಯ ಬಾಗಿ ತಾಳಕಿಕ್ಕಿತೋಳ ಕರವನ್ನುಗುತ್ತಿ ಗುಲಗಂಜಿ ದಂಡೆ ಚಿತ್ರೆ ಹೊನ್ನುಂಗುರ ಬೆರಳ-ಲೊತ್ತಿ ವೇಣು ಮೀಟುತ್ತ ಮತ್ತೆ ಸರಿಗಮದಿಂದಚಿತ್ತಜನಯ್ಯ ಜಗದ್ಭರಿತ ಉದರ ತ್ರಿವಳಿಯಸುತ್ತಿದ ಕಟಿಯ ಕಾಂಚಿದಾಮ ಕಲ್ಲಿಯಚೀಲಭುಕ್ತಿಯ ಚಿಕ್ಕವು ಬಚ್ಚಣಿಯ (ಚಿಣ್ಣಿಯ ?) ಕೋಲು ಬಲಸೆಕ್ಕಿಎತ್ತಿ ಎತ್ತಿ ಮೆಲ್ಲನೆ ಪಾದೆತ್ತಿ ಹೆಜ್ಜೆನಿಡುತ್ತಮತ್ತೆ ಮಹಾರ್ಥಿಗಿನ್ನು ಪೃಥ್ವಿ ಆತುರಳಾಗೀತ್ತ ವಿಭವು ಮುಂದತ್ತ ಚಿಂತಿಸುತಿಪ್ಪಳೊಸತ್ಯ ಸಾಕಾರ ಸರ್ವಜ್ಞ ಗೋಪಾಲವಿಠಲಮತ್ತೆ ಈ ಉಡುಪಿನ ಕೃಷ್ಣ ಸುತ್ತು ಸುಳಿದು ಸಲಹೆನ್ನ ೧

ಮಠ್ಯತಾಳ
ಸುಖ ಪೂರ್ಣ ಜ್ಞಾನಪೂರ್ಣ ಸುಖತೀರ್ಥರ ಪ್ರಿಯಭಕುತವತ್ಸಲದೇವ ಬಂಧಕ ಮೋಚಕಶಕುತ ಲಕುಮಿ ಮನೋಹರ ರಾಜರಾಜೇಶ್ವರಮುಕುತಿದಾಯಕ ಮೂಲ ಅವತಾರ ಅಭೇದನಖಶಿಖಪರಿಪೂರ್ಣ ನರಸಖ ನಿರ್ದೋಷಸಕಲರಲ್ಲಿ ವ್ಯಾಪ್ತ ಸಕಲ ಸಾರಭೋಕ್ತಭಕುತಿಯಿಂದ ಲಭ್ಯ ಬಡವ ಬಲ್ಲಿದನೆನ್ನಮಕ್ಕಳಮಾಣಿಕ್ಯ ದೇವಕಿ ಪುಣ್ಯೋದಯರಕ್ಕಸಾಂತಕ ರಾಮ ಪ್ರಾಕೃತರಹಿತಸಕಲಗುಣಪೂರ್ಣ ಗೋಪಾಲವಿಠಲಶ್ರೀಕೃಷ್ಣ ಉಡುಪಿ ನಿವಾಸ ಸಲಹೊ ನಮ್ಮ ೨

ರೂಪಕತಾಳ
ದ್ವಾಪರದಲಿ ಅಂದು ಅವತರಿಸಿದ ಹರಿಯೆಗೋಪಾಲರೊಡನಿನ್ನು ಆಡಿ ಆಕಳ ಕಾಯ್ದಾಪ್ರಮೇಯ ಪೂರ್ಣ ಪೂರ್ಣ ಮಾಡಲಿಬೇಕು ಎಂತೆಂದುಈ ಪೃಥ್ವಿಯಲ್ಲಿ ಈ ಸ್ಥಳದಲ್ಲಿ ನಿಂತಿನ್ನುಗೋಪಾಲಕರೆ ಗೋವುಗಳ ಅಂದಾದವರಸುಪರಮ ಸನ್ಯಾಸಿಗಳ ಮಾಡಿ ಸೃಷ್ಟಿಸಿತಾ ಪೂಜೆ ಇವರಿಂದ ನಿರುತ ತೆಗೆದುಕೊಂಡುಶ್ರೀಪತಿ ಇವರಿಂದ ಸರ್ವಸಾಧನಗಳನತಾ ಪಾಲಿಸುವ ಸಂಭಾಷ ಸಂದರುಶನದಿನಾ ಪ್ರತಿಕಾಣೆ ಈ ಕ್ಷೇತ್ರಕ್ಕೆ ಮಿಗಿಲೊಂದುಶ್ರೀ ಪುರುಷೋತ್ತಮ ಉಡುಪಿನ ಸಿರಿಕೃಷ್ಣಾಪಾರ ಮಹಿಮ ಗೋಪಾಲವಿಠಲೈಇ ಪರಿ ಇರುತಿಪ್ಪ ಇಲ್ಲಿ ಪಾಲಿಸುತ್ತ ೩

ಝಂಪೆತಾಳ
ಅಣುಮೂರುತಿ ಇದೆ ಘನಮೂರುತಿ ಇದೆಅಣುಘನಪರಿಪೂರ್ಣ ಮೂರುತಿ ಇದೆವನಜಭವಾದಿಗಳ ಮನಕೆ ಧ್ಯೇಯವು ಇದೆಸನಕಾದಿಗಳ ಮನಕೆ ಒಪ್ಪುವುದಿದೆಅಣಿಮಾದಿ ಅಷ್ಟಾಂಗ ಯೋಗ ಸಾಧನವುಳ್ಳಮುನಿಗಳ ಮನಕೆ ಪೊಳೆಯುತಲಿಹುದಿದೆಕನಸು ಜಾಗ್ರತೆ ಸ್ವಪ್ನ ಸುಷುಪ್ತಿವ್ಯಾಪಾರದಿನಗಳನು ನಡೆಸುವ ಮೂರ್ತಿ ಇದೆಫಣಿ ಫಣದಲ್ಲಿ ನಾಟ್ಯವಾಡಿ ಭಕ್ತರ ಕಾಯ್ದಮನುಜ ರೂಪವ ತಾಳ್ದ ಮೂರ್ತಿ ಇದೆಜನನಿಗಾಟವ ತೋರಿ ಜನರ ತೋಷ ಬಡಿಸಿದ ಘನ ಕರುಣಾಕರಮೂರ್ತಿ ಇದೆ ವನಧಿತೀರವಾಸ ಗೋಪಾಲವಿಠಲ ಚಿನುಮಯಮೂರ್ತಿ ಸುಖ ಮುನಿಮನಮಂದಿರ ನಿವಾಸ ೪

ತ್ರಿಪುಟತಾಳ
ಚಿತ್ತಜನಯ್ಯ ಕಾಣೊ ಚಿಂತನೆಗೆಭಕ್ತವತ್ಸಲ ಕಾಣೊ ಅಭಿಮುಖಕೆನಿತ್ಯ ವ್ಯಕ್ತನು ಕಾಣೊ ನಿರುಪಾಧಿಕರಿಗೆಲ್ಲಸತ್ಯ ಅವ್ಯಕ್ತ ವಿಷಯಾಸಕ್ತರಿಗೆಸತ್ಯ ರೂಪನು ಕಾಣೊ ಭೃತ್ಯಜನರಿಗಿನ್ನುಮೃತ್ಯುರೂಪನು ಕಾಣೊ ದೈತ್ಯಜನಕೆಮತ್ತೆ ಮಧ್ಯಮರಿಗೆ ಮನುಜರೂಪದಿ ತೋರ್ಪಮತ್ತಾ ಜಾರಸ್ತ್ರೀಯರಿಗೆ ಜಾರಸುತ್ತ ಆಡಿದ ಗೋಪಾಲಕರಿಗೆ ಗೋವಳತತ್ತದಾಕಾರವು ಒಂದರಲ್ಲೆಪ್ರತ್ಯೇಕ ಅವರವರಿಷ್ಟ ರೂಪಕನಾಗಿನಿತ್ಯ ತೋರುವ ನಿಲುಕೆ ಜೀವರಿಗೆಮುಕ್ತಿದಾಯಕ ಕೃಷ್ಣ ಗೋಪಾಲವಿಠಲಪ್ರತ್ಯಕ್ಷ ನೋಡಿಲ್ಲಿ ಬಲ್ಲವರಿಗೆ ೫

ಅಟ್ಟತಾಳ
ಇದೇ ಶ್ವೇತದ್ವೀಪ ಇದೇ ಅನಂತಾಸನೈದೇ ಶ್ರೀವೈಕುಂಠ ಇದೇ ಮುಕ್ತ ಭಾಗೈದೇ ಮಧ್ವಸರೋವರ ವಿಧಿಯಿಂದ ಮಾಡಿದ್ದುವಿಧಿಕಾಣೊ ವಿರಜಾನದಿಯ ಸ್ನಾನಕೆ ಮುಂದೆಪದುಮೆಯಿಂದರ್ಥಿಲಿ ಪೂಜಿತ ಮೂರ್ತಿದುವಿಧಿಯಿಂದ ನಿರ್ಮಿತವಾದ ಮೂರ್ತಿಯು ನೋಡಾಅಧಿಕಧಿಕವಾಹ ಮೂರ್ತಿ ಅಪ್ರತಿ ಈ ಕ್ಷೇತ್ರಬುಧರೇವೆ ಬಲ್ಲರು ವಿಧಿಸಿ ನೋಡಲು ಇನ್ನುಮದನನಯ್ಯ ಚೆಲ್ವ ಗೋಪಾಲವಿಠಲಸದಾ ನಮ್ಮ ಸಲಹೊ ಶ್ರೀ ಉಡುಪಿನ ಕೃಷ್ಣ ೬

ಆದಿತಾಳ
ನಮೋ ನಮೋ ಪಾಂಡವಪಕ್ಷಪಾತಿಯೆನಮೋ ನಮೋ ಅಗಣಿತ ಗುಣಗಣಾಂಬುಧೆನಮೋ ನಮೋ ನಿರ್ದೋಷ ನಿಜ ಆನಂದನಮೋ ನಮೋ ಪ್ರಾಕೃತಗಂಧ ವಿದೂರನೆನಮೋ ನಮೋ ನಿತ್ಯನಿರಂಜನ ಪೂರ್ಣನಮೋ ನಮೋ ಸ್ವಗತಭೇದವಿವರ್ಜಿತನಮೋ ನಮೋ ನಿರ್ಜಿತ ಮಾಯಾ ಸುವರ್ಗನಮೋ ನಮೋ ಕಾರುಣ್ಯ ಕಾಪಟ್ಯರಹಿತನಮೋ ನಮೋ ವಿಷ್ಣು ಸಾಕಾರ ಚೆಲುವನಮೋ ನಮೋ ನಿತ್ಯ ತೃಪ್ತ ನಿರಾಶ್ರಯನಮೋ ನಮೋ ಸಿರಿ ಅಬುಜಭವವಂದಿತನಮೋ ನಮೋ ಸರ್ವಜೀವ ಜಡವ್ಯಾಪ್ತನಮೋ ನಮೋ ಸೃಷ್ಟ್ಯಾದಿ ಅಷ್ಟಕರ್ತರಾಜನಮೋ ನಮೋ ಸುರನದಿಜನಕ ಹೇ ತಾತನಮೋ ನಮೋ ಗೋಪಾಲವಿಠಲ ಮೂರುತಿನಮೋ ನಮೋ ಜಯಜಯ ಉಡುಪಿನ ಸಿರಿಕೃಷ್ಣ ೭

ಜತೆ
ನೋಡಿದವನಲ್ಲ ನಾ ನಿನ್ನ ನಿಜರೂಪನೋಡಿಸೊ ಕರುಣದಿ ಗೋಪಾಲವಿಠಲ

ಹರಿಯ ಸರ್ವೋತ್ತಮತ್ವವನ್ನು ಸಾರುವುದು
೧೨೩
ಸುಳಾದಿಧ್ರುವತಾಳ
ಎನಗಿಂದುತ್ತಮರಿಲ್ಲವೆಂಬೋದೊಂದು ದೋಷಎನಗಿಂತ ನೀಚ ದೊಡ್ಡವನೆಂಬೋದಿದೊಂದು ದೋಷತನಗಿಂದಧಿಕನ್ನ ಸಮಾನವೆಂಬೋದು ದೋಷತನ್ನಿಂದ ಭಿನ್ನ ವಸ್ತು ತನ್ನದೆಂಬೋದು ದೋಷತನಗೆ ತಾನರಿಯ ಅನ್ಯ ಬಲ್ಲೆನೆಂಬೋದು ದೋಷತನಗೆ ತಾ ತುತಿಸಿಕೊಂಡು ಧನ್ಯನೆಂಬೋದು ದೋಷತನಗೆ ಶಕುತಿ ಇದ್ದು ಕರ್ಮ ಬಿಟ್ಟುಕೊಡುವುದೆ ದೋಷತನಗಿಲ್ಲದ ಕರ್ತೃತ್ವ ತಾನು ಎಂಬೋದು ದೋಷೈನಿತು ದೋಷಂಗಳೆಲ್ಲ ಎಣಿಸಿದಡಾಯಿತಿನ್ನುತನಗೆ ಈಶಗೆ ಐಕ್ಯ ಪೇಳುವುದಕ್ಕಿಂತ ದೋಷಸನಕಾದಿಗಳ ಒಡೆಯ ಗೋಪಾಲವಿಠಲನನೆನೆಸದಲಿದ್ದವಗೆ ದೊಡ್ಡ ದೋಷ1

ಮಠ್ಯತಾಳ
ಬೊಮ್ಮಾಂಡ ವ್ಯಾಪ್ತನ ಬಯಲು ಎಂಬೋದು ದೋಷಬೊಮ್ಮನ ಸೃಜ್ಜನ ಪುಟ್ಟಿದನೆಂಬೋದು ದೋಷಬೊಮ್ಮಾಂಡ ಸಂಹಾರಗೆ ಲಯ ಪೇಳ್ವುದೆ ದೋಷಬೊಮ್ಮನ ಪಿತನಲ್ಲದೆ ಇನ್ನೊಂದೆಂಬೋದೆ ದೋಷಸುಮನಸರಪ್ರಿಯ ಗೋಪಾಲವಿಠಲಂಗೆಸಮ ಉಂಟೆಂಬುವಗೆ ಸರಿಯಿಲ್ಲದ ದೋಷ ೨

ರೂಪಕತಾಳ
ಮಾಡಬೇಕು ಮಂದ್ಯೆಲ್ಲ ಸಾರುತಿರಲುಮಾಡದೆ ಇದ್ದದ್ದು ಮುಖ್ಯವಾದ ದೋಷಬೇಡಬೇಕೆಂದು ಜಗವೆಲ್ಲ ಪೇಳುತಿರಲುಬೇಡದಲಿಪ್ಪೋದು ಅಗತ್ಯವಾದ ದೋಷನೋಡಬೇಕೆಂದು ಲೋಕವೆಲ್ಲ ಪೇಳುತಿರಲುನೋಡದಲಿಪ್ಪೋದು ನೋವಾಗುವುದೆ ದೋಷಕೂಡಿ ಆಡಿ ತನ್ನಲ್ಲಿ ಫಲವನರಿಯದೆನಾಡ ದೇವತೆಗಳಿಗೆ ಹಾರೈಸುವುದೆ ದೋಷರೂಢಿಗೊಡೆಯ ನಮ್ಮ ಗೋಪಾಲವಿಠಲನನೋಡಿ ಪೂಜಿಸದವಗೆ ನಿತ್ಯ ದೋಷ ೩

ಝಂಪೆತಾಳ
ಆವಾವನು ಈ ಜಗಕೆ ದೇವನೆಂದರಿಯದೆಆವನಿಂದೀ ಜಗಕೆ ಸೃಪ್ಟಿಯೆಂದರಿಯದೆಆವನಿಂದೀ ಜಗವು ಪಾಲನೆಂದರಿಯದೆಆವನಿಂದೀ ಜಗವು ಲಯವು ಎಂದರಿಯದೆದೇವರಿಗೆ ಜೀವರಿಗೆ ವಿಲಕ್ಷಣರಿಯದಆವಾವನು ಕರ್ಮ ಅನಂತ ಮಾಡಿದರುಆವನಿಗೆ ಅನಂತ ದೋಷವಾಗಿ ತೋರುವುದುಆವ ಕರ್ಮವು ಕಡೆಯ ಗೆಲಿಸಲರಿಯವುಜೀವಜಡಭಿನ್ನ ಗೋಪಾಲವಿಠಲರೇಯಆವನಿಗೆ ತಾ ಒಲಿವ ಅವನೆ ಅರಿವ ೪

ತ್ರಿಪುಟತಾಳ
ಅನ್ಯದೈವರಿಯದೆ ಅನ್ಯಕ್ಕೆ ಎರಗದೆತನ್ನನೆ ನೆರೆನಂಬಿ ಚಿಂತಿಪರತನ್ನವನೆಂತೆಂದು ತನ್ನ ತಿಳಿಸಿಕೊಟ್ಟುಘನ್ನ ಪದವಿಗೇರಿಸಿನ್ನು ತಾ ಸಲಹುವಾನ್ಯ ಆಸೆಯು ಉಳ್ಳ ಜೀವರೆಲ್ಲರಿಗೆಅನ್ಯನಂತವರಿಗೆ ತೋರುತಿಪ್ಪತನ್ನವ ಅನ್ಯನೆಂಬ ವೈಷಮ್ಯ ನೈರ್ಗುಣ್ಯೈನ್ನಿಲ್ಲ ಇನ್ನಿಲ್ಲ ಈಶಗಿನ್ನುಭಿನ್ನ ಜೀವರ ಗತಿ ಅರಿತು ಪಾಲಿಸುವನುಇನ್ನೊಬ್ಬರಿಗೆ ಪೂರ್ಣ ಲಭ್ಯನಲ್ಲಘನ್ನ ಮಹಾಮಹಿಮ ಗೋಪಾಲವಿಠಲತನ್ನ ತಿಳಿವರನು ತನ್ನವನೆಂತೆಂಬ ೫

ಅಟ್ಟತಾಳ
ಇವನಂಥ ವಸ್ತುವು ಇಂದ್ರರೊಳಗಿಲ್ಲೈವನಂಥ ವಸ್ತುವು ರುದ್ರಾದಿಯೊಳಗಿಲ್ಲೈವನಂಥ ವಸ್ತುವು ಬೊಮ್ಮಾದಿಯೊಳಗಿಲ್ಲೈವನ ಸತಿಯಳಾಗಿ ಸಿರಿದೇವಿ ಓಲೈಸೆಅವರ ಪಾಡೇನಜಭವಾದಿಗಳಿವನನವವಿಧ ಭಕುತಿಂದ ಸೇವಿಸುತಿಪ್ಪರುಭವನಾಶ ಭಯಹಾರಿ ಗೋಪಾಲವಿಠಲಭುವನೆರಡೇಳಕ್ಕೆ ಒಡೆಯ ಕಾಣೊ ೬

ಆದಿತಾಳ
ಒಳಗುಂಟು ಹೊರಗಿಲ್ಲ ಒಳಗಿಲ್ಲ ಹೊರಗುಂಟುತಿಳಿಯದಿಪ್ಪನು ನಾನಾ ಸ್ಥಳದಿ ವ್ಯಾಪುತನಾಗಿಬೆಳಕು ಕತ್ತಲು ಇನ್ನು ಸ್ಥಳ ಎರಡೆನ್ನದೆಬಲು ಸುಂದರಾಂಗನಂಥೊಳೆವುತಲಿಪ್ಪನುಸುಲಭ ಭಕುತರಿಗೆ ಗೋಪಾಲವಿಠಲರೇಯನೆಲೆಯಾಗುವನು ತನ್ನ ತಿಳಿದರ್ಚಿಪುವಗೆ ೭

ಜತೆ
ಹಿರಿದು ಕಾರ್ಯಕೆ ಇವನೆ ಕಿರಿದು ಕಾರ್ಯಕೆ ಇವನೆಂದರಿದು ಭಜಿಸಿರೊ ಗೋಪಾಲವಿಠಲ ಒಲಿವ ೮

ಜೀವರ ಸಮಸ್ತ ಕಾರ್ಯಗಳೂ

ಸುಳಾದಿ
ಧ್ರುವತಾಳ
ಎನ್ನ ಜ್ಞಾನಗಳೆಲ್ಲ ಎನ್ನ ಧ್ಯಾನಗಳೆಲ್ಲಎನ್ನ ಮಾನಗಳೆಲ್ಲ ಎನ್ನ ಸ್ನಾನಗಳೆಲ್ಲಎನ್ನ ಮಂತ್ರಗಳೆಲ್ಲ ಎನ್ನ ತಂತ್ರಗಳೆಲ್ಲಎನ್ನ ದಾನಂಗಳೆಲ್ಲ ಎನ್ನ ಧರ್ಮಂಗಳೆಲ್ಲಎನ್ನ ತೀರ್ಥಯಾತ್ರೆಯೆಲ್ಲ ಎನ್ನ ಯಾಗಂಗಳೆಲ್ಲಎನ್ನ ಪುಣ್ಯಗಳೆಲ್ಲ ಎನ್ನ ಕೌಶಲ್ಯವೆಲ್ಲೈನ್ನಿದರೊಳಗಿನ್ನು ಎನ್ನಿಂದಾದ ಸಾಧನ-ವನ್ನು ಲೇಶವಾದರು ಕಣ್ಣಲಿ ಕಂಡದ್ದಿಲ್ಲನಿನ್ನ ಸ್ವಭಾವವಯ್ಯಾ ನಿನ್ನ ಕರುಣರಸಕಿನ್ನುಆನೇನೆಂಬೆ ಎನ್ನೊಡೆಯನೆ ಕೇಳುಎನ್ನ ಕರ್ತೃತ್ವಗಳು ಇನ್ನು ಮುನ್ನಾದುದಲ್ಲನಿನ್ನ ಅಧೀನವಯ್ಯ ಎನ್ನ ಫಲಾಫಲವುಮನ್ನಣೆ ಮಾಡಿಸುವಿ (ಅನ್ಯರಿಂದಲಿ ?) ನೀನುಮನ್ನಣೆಯನು ಕೊಂಬೆ ಎನ್ನಲ್ಲಿ ನಿಂತುಕೊಂಡುನಿನ್ನ ಭಕ್ತರವರನ್ನು ಪಾಲಿಸೊ ಬಗೆನಿನ್ನವರ ಮಹಿಮೆ ನೀನೆ ಬಲ್ಲೆಯೊ ದೇವನಿನ್ನನೆ ಗತಿ ಎಂದು ಬಿನ್ನಪ ಚಿತ್ತೈಸುಘನ್ನ ದಯಾನಿಧಿಯೆ ಪನ್ನಗಶಯನ ಗೋಪಾಲವಿಠಲರೇಯನಿನ್ನನೆ ನಿನ್ನನೆ ನಿನ್ನನೆ ಮರೆಹೊಕ್ಕೆ1

ಮಠ್ಯತಾಳ
ಸಿರಿ ಅಜಭವ ಸುರ ಸನಕಾದಿಗಳಿಗೆಹರಿ ನೀ ಚಲಿಸದಿರೆ ಬೆರಳು ಆಡಿಸಲಿನ್ನುತರವಲ್ಲವೆಂತೆಂದು ವರಶ್ರುತಿಸ್ಮ್ರತಿಗಳುಪರಿಪರಿಯಲಿ ಸ್ತುತಿಸಿ ಅರಸಿಕೊಂಡಾಡಲುಅರಿಯದೆ ನಾ ವ್ಯರ್ಥ ಮರುಳು ಕರ್ತೃತ್ವಾ-ಧರಿಸಿಕೊಂಡು ಇನ್ನು ಬರಿದೆ ದಣಿದೆನಯ್ಯಪರಮಮೂರ್ಖ ನಾನು ಮರೆಹೊಕ್ಕೆ ಮರೆಹೊಕ್ಕೆಮರದದ್ದೆಲ್ಲ ನೀನು ಅರಿವು ಮಾಡೆನಗೀಗ ಕರುಣಾಕರರಂಗ ಗೋಪಾಲವಿಠಲಕರುಣಾಳೆಂಬುವುದು ಅರಿಯದಾದೆ ನಿನ್ನ ೨

ರೂಪಕತಾಳ
ಕರಚರಣಂಗಳ ಚೇಷ್ಟೀಪರಿ ವ್ಯಾಪಾರವು ಎನ್ನಿಂ-ದರಿದು ಮಾಡಿದ್ದರೆ ಅರಿಯದಲೆ ಎನ್ನಬೆರಳಿಂದ ಕಣ್ಣನು ಇರಿದುಕೊಬಲ್ಲೆನೆ ಚರಣದಿಂದಲಿ ಮುಳ್ಳುಭರದಿಂದ ತುಳಿವೆನೆ ಮರಳಿ ಎನ್ನ ಜಿಹ್ವೆಮರೆದು ನಾ (ಕಡ್ವೆಳ್ವೆನೇ) ಕಡಿವೆನೆತೆರೆವೆನೆ ನೀ ಬಾಯನು ತೆರೆಸದಿದ್ದರೆ ನಾನುಹರಿಯೆ ನೀ ಕರ್ತನಿರೆ ಬರಿದೆ ನಾ ಕರ್ತೆಂದೂರುಲು ಹಾಕಿಸಿಕೊಂಡು ಗುರುಗುರು ಗುಟ್ಟುವೆನೆಶರಣರಪಾಲಕ ಗೋಪಾಲವಿಠಲಪೊರೆಯೆನ್ನ ದೊರೆಯೆ ನೀ ಪರಿಪರಿಯಿಂದಲಿ ೩

ಝಂಪೆತಾಳ
ಸರ್ವರಿಗೆ ಪ್ರೇರಕ ಸರ್ವಕರ್ತಭೋಕ್ತ ಸರ್ವತ್ರದಲಿವ್ಯಾಪ್ತ ಸರ್ವಶಬ್ದವಾಚ್ಯಸರ್ವಗುಣ ಪರಿಪೂರ್ಣ ಸರ್ವದೋಷದೂರಸರ್ವಜ್ಞಾನಗಮ್ಯ ಸರ್ವಶಕ್ತಮೂರ್ತಿಸರ್ವೇಶ ಚೆಲುವ ಗೋಪಾಲವಿಠಲರೇಯಸರ್ವಾಂತರಿಯಾಮಿ ಸಾರ್ವಭೌಮ ನಮೋ4

ತ್ರಿಪುಟತಾಳ
ಬಂದವನು ನೀನೆ ಭಕ್ತರಮನದಲ್ಲಿನಿಂದವನು ನೀನೆ ಪಂಡರಪುರದಲ್ಲಿತಂದೆಯಾಗಿ ಎನಗೆ ತಾಯಿಯಾಗಿ ಎನಗೆಬಂಧುವಾಗಿ ಎಮಗೆ ಸಂದೇಹವಿಲ್ಲದೆಹಿಂದೆ ಮುಂದೆ ಏಕಾಗಿ ಒಂದೆ ಪರಿಯಲಿನ್ನು ಸಕಲಕಾಲಿನ್ನುಚೆಂದದಿ ಪಾಲಿಸಲಾನಂದದಿ ಎನ್ನಮನ-ಮಂದಿರದಿ ಪೊಳೆದು ನಿಂದು ಆಡುವ ರಂಗಒಂದೆ ದೈವವೆ ನಮ್ಮ ಗೋಪಾಲವಿಠಲಕಂದನ ತಾಯಿ ಸಲಹಿದಂದದಿ ಸಲಹುವೆ ೫

ಅಟ್ಟತಾಳ
ಬೇ(ಬ್ಯಾ)ಡೆನ್ನಬಾರದೆ ನಾಡವಿಷಯಕೆ ಮನಓಡಿದರೆ ನೀನು ಓಡುತಲಿಹರೆಮಾಡಿಕೊಂಡ ಪತಿ ನೋಡುತಲಿರಲು ಸತೀಇಡ ಒಬ್ಬನ ಬೇರೆ ನೋಡಿಕೊಂಡರೆ ಇನ್ನು ಮಾಡುವನೊ ಕೃಪೆ ಕೇಡಾಗೋದಲ್ಲದೆನಾಡದೈವದ ಗಂಡ ಗೋಪಾಲವಿಠಲಖೋಡಿ ವಿಷಯಕ್ಕೆ ಮನ ಓಡಾಡದಂತೆ ಮಾಡೊ ೬

ಆದಿತಾಳ
ಗರತಿಯ ಲಕ್ಷಣ ದೊರಕಿಸು ಎನಗೆಗರಳ ಎನಿಸು ಪರ ಅರಸಿಯಲಿಕುರುಹ ತಿಳುಹಿಸು ನಿನ್ನ ತತ್ವಗಳಲ್ಲಿಮರುಳು ಬಿಡಿಸು ಮನಮತಿಗಳಲ್ಲಿತಿರುಗಿಸೆನ್ನನು ತೀರ್ಥಯಾತ್ರೆಗಳಲ್ಲಿಹರಟೆಮಾಡಿಸು ಹರಿವಾರ್ತೆಗಳಲ್ಲಿಕರವ ಮುಗಿಸು ನಿನ್ನ ರೂಪಂಗಳಲ್ಲಿಕರವವಿಡಿಸು ನಿನ್ನ ಶರಣರಲ್ಲಿಪರಮ ದಯಾಳು ಗೋಪಾಲವಿಠಲರೇಯಕರೆವ ವಚನಗಳಲ್ಲಿ ಅರಿವಂತೆ ಮಾಡೊ ನಿನ್ನ ೭

ಜತೆ
ನಾನಾಡುವ ಮಾತೆಲ್ಲ ನಿನ್ನದೆ ಅಯ್ಯಾನಾನರಿಯೆ ನೀನೆಗತಿ ಗೋಪಾಲವಿಠಲ

ಹರಿಯ ಸರ್ವೋತ್ತಮತ್ವವನ್ನೂ

ಸುಳಾದಿ
ಧ್ರುವತಾಳ
ಎಲೆಲೆ ದೋಷಂಗಳೆ ನಾ ನಿರ್ದೋಷನಾಶ್ರಿತನುಎಲೆಲೆ ದುರಿತವೆ ನಾನು ಬಲಪೂರ್ಣಾಶ್ರಿತನುಎಲೆಲೆ ಸುಖವೆ ನಾನು ಪೂರ್ಣಾನಂದನ ಆಳುಎಲೆಲೆ ಅಜ್ಞಾನವೆ ನಾ ಜ್ಞಾನಪೂರ್ಣನಾಶ್ರಿತನುಎಲೆಲೆ ಕಾಮವೆ ನಾನು ಪೂರ್ಣಕಾಮನ ಆಳುಎಲೆಲೆ ಕ್ರೋಧವೆ ನಾನು ಅಚ್ಚಕರುಣಾಕರನಾಳುಎಲೆಲೆ ಮೋಹವೆ ನಾನು ವ್ಯಾಪ್ತ ವಿಷ್ಣುವಿನ ಆಳುಎಲೆಲೆ ಲೋಭವೆ ನಾನು ಸಾರ್ವಭೌಮನ ಆಳುಎಲೆಲೆ ಮದವೆ ನಾನು ನಿರಹಂಕಾರಿಯಾಶ್ರಿತನುಎಲೆಲೆ ಮತ್ಸರವೆ ನಾನು ಕುಟಿಲರಹಿತನ ಆಳುಎಲೆಲೆ ನಿದ್ರೆಯೆ ನಾನು ಅನಿದ್ರೆಯನಾಳುಎಲೆಲೆ ಹಸಿವೆ ತೃಷೆಗಳೆ ನಾ ನಿತ್ಯತೃಪ್ತನ ಆಳುಸುಳಿಯಬೇಡಿನ್ನು ನೀವು ಸುತ್ತಲಾದರು ಎನ್ನಬಲವಂತನಾದ ಹಿರಿಯ ಬಿಂಬಾಶ್ರಿತಸ್ಥಳವಿಲ್ಲ ನಿಮಗೆ ನಿಲ್ಲಲೆನ್ನಲ್ಲಿ ನೋಡಲುತೊಲಗಿರಿ ತೊಲಗಿತ್ತ ಸುಳಿಯದಲೆಮಲತಮಲ್ಲರಗಂಡ ಗೋಪಾಲವಿಠಲಹಲವು ಪರಿಯಲಿ ನಮ್ಮ ಸಲಹೊ ದೇವ ೧

ಮಠ್ಯತಾಳ
ಗುಣಪೂರ್ಣ ಸುಖಪೂರ್ಣ ಅಣುಮಹದೊಳು ವ್ಯಾಪ್ತಕ್ಷಣಲವತೃಟಿಕಾಲ ಕೊರತೆಯಿಲ್ಲವುಕಾಣೆಗುಣಬದ್ಧನು ಅಲ್ಲ ಕೇವಲ ನಿರ್ಗುಣಾಣುಮಾತುರವನ್ನ ಭಿನ್ನ ವಿಷಯರಹಿತಾನ್ಯೋನ್ಯವಾಗೆ ಜೀವಜಡದಲಿದ್ದು ಇನ್ನು ಕ್ರೀಡೆಯು ಮಾಳ್ಪ ಚಿನ್ನುಮಯನಾಗಿತನ್ನ ಆನಂದಕ್ಕೆ ಲೇಶ ಕೊರತೆಯಿಲ್ಲೈನ್ನು ಜೀವರಿಗಾಗಿ ಸಕಲ ಕ್ರೀಡೆಯ ಮಾಳ್ಪಪುಣ್ಯ ಪಾಪಗಳಿಂದ ವಿಲಕ್ಷಣನಯ್ಯಾಇನ್ನೇನೊರ್ಣಿಸುವೆ ಇವನ ಮಹಾಮಹಿಮೆಅನಂತಗುಣಪೂರ್ಣ ಲಕುಮಿಗಾಗೋಚರಎನ್ನಾಳುವಸ್ವಾಮಿ ಗೋಪಾಲವಿಠಲತನ್ನ ನಂಬಿದವರ ತನ್ನಸದೃಶರ ಮಾಳ್ಪ ೨

ರೂಪಕತಾಳ
ನಿತ್ಯತ್ವ ನಿರ್ದೋಷ ನಿರ್ಗುಣ ಶ್ರೇಯಸ್ಸುಚಿತ್ತಾ ಭೃತ್ಯಭಾವನೆ ಆನಂದಬಲಸತ್ವ ಜೀವರಲ್ಲಿ ಬಿಂಬ ಸದೃಶ ಉಂಟುನಿತ್ಯ ಸಂಸಾರಿಗೆ ನಿತ್ಯತ್ವದಲ್ಲಿ ಮಾತ್ರಮತ್ತಾವ ತಾಮಸ ಜೀವರ್ಗೆ ಸಾದೃಶ್ಯನಿತ್ಯತ್ವ ನಿರ್ಗುಣ ಎರಡುವಿಧ ಉಂಟುಸತ್ಯಜ್ಞಾನಿಗೆ ಸುಖ ಮಿಥ್ಯಾಜ್ಞಾನಿಗೆ ದುಃಖವ್ಯಕ್ತಿ ಅಹುದು ಕೇವಲ ನಿರ್ಗುಣದಾಗಸತ್ಯಸಂಕಲ್ಪ ಗೋಪಾಲವಿಠಲನ್ನ ಭಕ್ತರಿಗೆ ಭಯವಿಲ್ಲ ಬಲು ಆನಂದ ೩

ಝಂಪೆತಾಳ
ದ್ವೇಷಿ ಎಂತೆಂದುಪಾಸನೆಯ ಮಾಳ್ಪರಿಗೆದ್ವೇಷಿಯಾಗಿ ದುಃಖ ಉಣಿಸುವನುದ್ವೇಷರಹಿತನೆಂದುಪಾಸನೆಯ ಮಾಳ್ಪರಿಗೆಮೀಸಲಾನಂದ ಸುಖ ಮಿಗಿಲುಣಿಸುವದೋಷವಾರದು ನೋಡು ಚೇತನ ಯೋಗ್ಯತೆನಾಶಮಾಡದದರ ಬೀಜ ಮೂಲಸಾಸಿವೆಯ ಬಿತ್ತಿನ್ನು ಸಾಸಿವೆಯ ಬೆಳೆವ ಕ-ರ್ಪಾಸು ಬೆಳೆದರೆ ಇದು ದೋಷವಲ್ಲೆವೈಷಮ್ಯ ನೈರ್ಗುಣ್ಯ ಈಷನ್ಮಾತ್ರದೋಷಚಿಂತನೆ ಜಗದೀಶಗಿಲ್ಲವಾಸುದೇವ ಗೋಪಾಲವಿಠಲನೆಂತು-ಪಾಸನೆಯ ಮಾಳ್ಪರಿಗಂತಂತೆ ಫಲವೀವ ೪

ತ್ರಿಪುಟತಾಳ
ಹರಿ ಎಂಬೋವನಧಿಯು ಕರುಣವೆಂಬೋಜಲಕ್ಕೀರಡು ದಡವು ಭಕುತಿ ವಿರಕುತಿಯನು ಮಾಡಿವರಜ್ಞಾನವೆಂಬ ನಾವೆಯನು ಆಶ್ರೈಸಿಪರಿಪರಿಗುಣವೆಂಬ ರತುನವ ಹುಡುಕುತನಿರುತ ಅಲ್ಲಿಹ ದಿವ್ಯ ನೆರೆಕಥಾಮೃತ ಉಣುತಮರೆಹೊಕ್ಕೆನೆನ್ನಿರೊ ಕೃಷ್ಣನೆಂಬೋಶರಧಿ ಬಿದ್ದುಬರಬೇಡಿರೆನ್ನಗೊಡವೆ ದುರಿತ ಕಾಮ ಕ್ರೋಧಗಳೆಹರಿದು ಹೋಗುವಿರಿತ್ತಬರಲು ಯೋಗ್ಯರಲ್ಲಶಿರವ ಚೆಂಡಾಡುವೆಮ್ಮರಸುಕಂಡರೆ ನಿಮ್ಮಸರಿಹೋದ ಸ್ಥಳಗಳಲಿ ಇರಹೋಗಿ ಇರಹೋಗಿಸಿರಿ ಮಹಾರಾಜ ಗೋಪಾಲವಿಠಲರೇಯನಪರಿಚಾರಕರ ಪರಿಚಾರಕರಾಳು ನಾ ೫

ಅಟ್ಟತಾಳ
ಕೋಪಂಗಳೆನ್ನ ಸಂತಾಪ ಪಡಿಸದಿರಿಶ್ರೀಪತಿಘೇಳಿ ನಾ ಕೊಲೆಯ ಕೊಲ್ಲಿಸುವೆನುಕೋಪಂಗಳ್ಯಾ ಪುಣ್ಯಲೋಪ ಮಾಡಿಸದಿರಿವ್ಯಾಪಕನಾದ ವಿಷ್ಣುವಿಘೋಗಿ ಪೇಳುವೆ ರೂಪಂಗಳೆ ಅನ್ಯರೂಪ ನೋಡಲು ಬೇಡಿಆ ಪುರುಷ ಹೃಷಿಕೇಶಗೆ ಪೇಳುವೆತಾಪಸರೊಡೆಯ ಗೋಪಾಲವಿಠಲ ಎನ್ನಕಾಪಾಡುವನು ನಿನ್ನ ವ್ಯಾಪಾರ ನಿಲ್ಲಿಸಿ ೬

ಆದಿತಾಳ
ಭಕುತಸಾರ್ಥ (ನಾರ್ತ) ಭಯನಿವಾರಣಮುಕುತಿದಾತ ಮುಕುಂದಾನಂದಶಕುತ ವ್ಯಕುತ ಸಾರಭೋಕ್ತಸುಖಸಮುದ್ರ ಸುರನದಿಜನಕಾಕುಟಿಲ ಅಷ್ಟ (ಮುದ) ಮದ ಸಂಪನ್ನಸ್ವಕುಲನಾಶಕ ಸ್ವಾರ್ಥರಹಿತಸುಖಮಯಕಾಯ ಸುಲಭದೇವಸಾಕಾರರೂಪ ಸರ್ವಜ್ಞನೆಪ್ರಾಕೃತದೂರ ಪರಮ ಪುರುಷನಾಕೇಶವಂದಿತ ಗೋಪಾಲವಿಠಲಸಾಕುವ ಸರ್ವದಾ ಸನ್ನಿಧಿಯಲಿದ್ದು ೭

ಜತೆ
ಹರಿಯೆ ಸರ್ವೋತ್ತಮನೆಂದು ನಿಶ್ಚಯದಿಪ್ಪನರಗೆ ನಿರಯವಿಲ್ಲ ಗೋಪಾಲವಿಠಲ ಬಲ್ಲ

ಶ್ರೀಹರಿಯ ಸೃಷ್ಟಿಸ್ಥಿತಿಲಯಾದಿ

ಸುಳಾದಿ
ಧ್ರುವತಾಳ
ಎಲೊ ಎಲೊ ಸರ್ವಜ್ಞ ಸರ್ವೋತ್ತಮ ಶ್ರೀಹರಿಚೆಲುವ ಸಾಕಾರ ಸಚ್ಚಿದಾನಂದ ಸಗುಣರಹಿತೈಳೆಯನೆಲ್ಲವನುಂಗಿ ಇನಿತು ಈಡಾದೆ ನಿನ್ನಬಲು ಉದರದಿ ಎಲ್ಲರನು ಅಡಗಿಸಿಲಲನೆ ಲಕುಮಿ ತಾನೆ ಮೂರು ಬಗೆಯು ಆಗಿಚೆಲುವ ನಿನ್ನ ಸೇವಿಪಳಾಕಾಲದಿಪ್ರಳಯೋದಕ ಸಿರಿ ವಟದೆಲೆಯು ಭೂರೂಪಳಾಗಿಬೆಳಕು ತೋರದೆ ದುರ್ಗೆ ತಮರೂಪಳಾಗೆ ಇನ್ನುಸುಲಭರೂಪದಿ ನೀನು ಎಲೆಯು ವಟದಮೇಲೆಮಲಗಿ ಬಾಲಕನಾಗಿ ಮತ್ತೆ ಎಲ್ಲವಬಿಟ್ಟುಕಿಲಿಕಿಲಿ ನಗುತಲಿ ಕಾಲ್ಬೆರಳು ಬಾಯೊಳಗಿಟ್ಟುನಲಿದು ಚಪ್ಪರಿಸುವೆ ತಿಳಿದುತಿಳಿದು ಇನ್ನುಕೆಲಕಾಲವು ಭಕ್ತರು ಮಾಡಿದ ಸತ್ಕರ್ಮಂಗಳುಹಲವುಪರಿ ಭಕ್ತಿಯ ಮಾಡಿ ಅರ್ಪಿಸಿದುದೆಲ್ಲಕೊಳುತ ಅವರ ರುಚಿಗಳನು ಎಲ್ಲವು ನೋಡಿನಿಲಿಸುವೆ ಅವರವರ ನಿಜಪದವಿಯಲ್ಲಿ ಸ್ವಾಮಿಭಳಿರೆ ಭಕ್ತವತ್ಸಲ ಗೋಪಾಲವಿಠಲನಿಲಿಸಿ ಎನ್ನಲಿ ನಿರುತ ಲೀಲೆ ತೋರಿಸು ದೊರೆಯೆ1

ಮಠ್ಯತಾಳ
ಏಕಾಂತದಿ ಇಪ್ಪ ಲೋಕನೆಲ್ಲವ ನಿನ್ನಆ ಕುಕ್ಷಿಯೊಳಿಟ್ಟು ಸಾಕುತ್ತ ಸರ್ವರನೀ ಕರುಣಿಸಿ ಮುಖ್ಯ ಪ್ರಾಣನೊಬ್ಬಗಿನ್ನುಬೇಕಾದ ಎಚ್ಚರಿಕೆನಿತ್ತು ಸಕಲಜೀವಜೋಕೆ ಮಾಡುವಿ ಇನ್ನು ಸೃಜ್ಜ ಅಸೃಜ್ಜರನುಸಾಕಲ್ಯಗುಣಪೂರ್ಣ ಗೋಪಾಲವಿಠಲನೀ ಕರುಣಿಸುವೆಮ್ಮ ನಿರ್ವ್ಯಾಜದಿ ನಿರುತ ೨

ರೂಪಕತಾಳ
ಅನಾದಿಜೀವ ಲಿಂಗಬದ್ಧರುಗಳ ನುಂಗಿತಾನಿಪ್ಪೆಪಾರು (ಪ್ಪಪಾರ) ಸುಪ್ತಾವಸ್ಥಿಯೋಪಾದಿಜ್ಞಾನ ಅಜ್ಞಾನವು ಎರಡನ್ನು ಅರಿಯದೆಜ್ಞಾನಸ್ವರೂಪವೆ ಆಚ್ಛಾದವಾಗಿರೆಪ್ರಾಣಿಗಳನು ನಿನ್ನ ದೃಷ್ಟಿಯಿಂದಲಿನೀ ನೆಚ್ಚಿಸಿನ್ನು ಉದ್ಧಾರ ಮಾಡುವೆನೆಂದುನಾನು ನನ್ನದು ಎಂಬೊ ಅಹಂಮತಿಯನೆ ಕೊಟ್ಟುನಾನಾ ಯೋನಿಗಳಲ್ಲಿ ತಂಧಾಕುವೆಮಾನವ ಜನುಮದಿ ಮಹಾಸಾಧನವು ತೋರಿಪ್ರಾಣಿಯ ನಿನ್ನ ತಿಳಿವಂತೆ ಮಾಳ್ಪೆಜಾಣ ಚೆನ್ನಿಗರಾಯ ಗೋಪಾಲವಿಠಲಕಾಣಿಸದನಕ ಕಾಣರು ನಿನ್ನ ೩

ಝಂಪೆತಾಳ
ಅನಂತ ಜನುಮದಲ್ಲಿ ಅನಂತ ಕಲ್ಪದಲ್ಲೀನ್ನು ಮಾಡಿದೆನಯ್ಯಾ ನಿನ್ನ ಪ್ರೇರಣೆಯಿಂದಕಿ(ಇ)ನ್ನು ಮಾಡುವನಾಗಿ ಮತ್ತೆ ಇಪ್ಪುವೆನಯ್ಯಾಅನಂತಪಾಪಕ್ಕೆ ಅನಂತ ನಿನ್ನ ನಾಮಎನ್ನಬಳಿಯಲ್ಲಿ ಈಗ ವಾಸವಾಗೆ ಓ ಅಯ್ಯಾಎನ್ನ ದೋಷಗಳೆಂಬೊ ಇನ್ನು ಅರಸಿ ಅರಸಿನಿನ್ನದೊಂದು ಸಾಕು ನಾಮ ಅದರನು (ಅವನು ?) ಕೆಡಿಸುಇನ್ನು ಅವಕೆ ಅಂಜೆ ಈ ಶಕುತಿ ಎನಗಿರಲಿಘನ್ನದಯಾನಿಧೆ ಗೋಪಾಲವಿಠಲನಿನ್ನ ಬಿಡೆ ನಿನ್ನ ಬಿಡೆ ನಿತ್ಯತೃಪ್ತ ೪

ತ್ರಿಪುಟತಾಳ
ಒಂದು ಶ್ರವಣದಿಂದ ಆವುದಾಗುವುದೆನಗೆಚೆಂದದಿ ಪಾಲಿಸು ಆ ಶ್ರವಣವಒಂದೆ ಸ್ನಾನದಲಿಂದ ಆವುದುದ್ಧರಿಪುದುಚೆಂದದಿ ಮಾಡಿಸೊ ಅದೆ ಸ್ನಾನವಒಂದೆ ಮಂತ್ರದಲಿಂದ ಆವ ಸಿದ್ಧಿಯೊ ಎನಗೆಚೆಂದದಿಂದಲಿ ಪಾಲಿಸೊ ಅದೆ ಮಂತ್ರವಒಂದೆ ಗುರುವಿನಿಂದ ಆವ ಉದ್ಧಾರವೊತಂದು ತೋರಿಸು ಮತ್ತೆ ಅದೆ ಗುರುವಿನಒಂದೆ ನಿನ ಮೂರುತಿ ಆವುದೆನಗೆ ತಿಳಿಯೆತಂದು ತೋರಿಸು ಎನ್ನ ಅನುಭವಕ್ಕೆಒಂದೆ ಅರ್ಚನೆಯಿಂದ ಆವುದೊ ನಿನ್ನ ಪೂಜೆಚೆಂದದಿ ತೋರಿಸೊ ಅದೆ ಬಗೆಯ ಒಂದೆ ಪರಿಯು ಮನಕೆ ಆವುದು ನಿಲ್ಲದೊಚೆಂದದಿ ಪಾಲಿಸು ಅದೆ ಜ್ಞಾನವುಸಂದೇಹದ ಕರ್ಮ ಸಾಸಿರ ಕೊಟ್ಟರುಮಂದಬುದ್ಧಿಯವ ಕಡೆ ಬೀಳೆನೂಂದು ಕರ್ಮವು ಮಾಡೆ ಮತ್ತಾನಂತ ಕರ್ಮಬಂದು ಒದಗುತಿವೆ ಸಂದೇಹಗೊಳಿಸುತಬಂಧಕವೆ ಮತ್ತೆ ಬಲಿಕೆ ಮಾಡುತಲಿವೀಂದಿಗೂ ಕಡೆ ಹಾಯುವುದು ಅರಿಯದೆಮಂದರಧರ ನಮ್ಮ ಗೋಪಾಲವಿಠಲತಂದೆಸಲಹೊ ನಿನ್ನ ಸಂದರುಶನ ಕೊಟ್ಟು ೫

ಅಟ್ಟತಾಳ
ಎಲ್ಲಿತನಕ ವಿಷಯ ವೆಗ್ಗಳಿಸುವಿ ಇನ್ನುಅಲ್ಲಿ ತನಕ ಮನನಿಲ್ಲದು ನಿನ್ನಲ್ಲಿಜ್ವಲಿಸುತಯಿಪ್ಪ ಬಲ್ಲಿದಗ್ನಿಯ ಮೇಲೆಹುಲ್ಲುಹಾಕುತ ಬರೆ ನಿಲ್ಲುವುದೆ ತಾಪಎಲ್ಲ ಕಾಲವು ವಿಷಯದಲ್ಲೆ ಮನಸುಹೋಗಿಸಲ್ಲಿಸಲ್ಲಿಸಿ ಸಾಕು ಎಂಬುವಂಥಾಲಂಬುದ್ಧಿಯು ಇನ್ನು ಎಳ್ಳನಿತು ಇಲ್ಲಕೊಲ್ಲುತದೆ ಕೊಂಡುವೊಯ್ದು ವಿಷಯಂಗಳಿ-ಗೆಲ್ಲಿತನಕ ಹೀಗೆ ಎಳೆದರೆ ನಾ ನಿನ್ನಗೆಲ್ಲುವತೆರನೆಂತು ಬಲ್ಲಿದ ಎಲೆದೇವನಿಲ್ಲಿಸಿ ಈ ಪಾಪಸಂಚಿತ ಕೆಡಿಸಿನ್ನುಮೆಲ್ಲನೆ ಬಾಹೊ ಆಗಾಮಿಯ ಒತ್ತಿನ್ನುಸಲ್ಲಿಸು ಪ್ರಾರಬ್ಧ ಇಲ್ಲಿಗೆ ಎಂತೆಂದುಎಲ್ಲ ಮನಕೆ ಅದು ಅರಿವಿಸಿ ಚೆನ್ನಾಗಿನಿಲ್ಲದೆ ನೀ ಸ್ಮರಣೆಗೆ ಬರುತಲಿದ್ದುನಲ್ಲ ನೀ ಕಾಯಬೇಕಲ್ಲದೆ ಎನ್ನನುಮಲ್ಲಮರ್ದನ ಗೋಪಾಲವಿಠಲಕೊಲ್ಲೊಕಾಯೊ ಬಿಡೊ ನಿನ್ನ ನಂಬಿದೆನೊ ೬

ಆದಿತಾಳ
ವಿಷಯ ಬಂಧುಗಳೆನಗೆ ವಿಷಯರು ಆದರೆವಶವಾಗಿ (ಗುವಿ ಎಂತೊ) ವೆಂತೊ ಮುಖ್ಯವಿಷಯ ನೀನುಕೆಸರೊಳಗೆ ಬಿದ್ದು ಕೆಸರಿಂದ ತೊಳೆದರೆಹಸನಾಗೊದೆಂತೊ ಅವು ಕುಶಲಮೂರ್ತಿಕಸುಗಾಯಿ ಎಂಬುವಂಥ ಬಿಸಿಲಲಿ ಬಡಿಸಿಕೊಂಡುರಸಪಕ್ವವಾಗಿನ್ನು ದ್ರವಿಸುತ ಶ್ರೀಹರಿಯೆವಿಷಯವಾಗಲೊ ಮುಖ್ಯ ನಿನಗೆ ನಿರುತವಸುದೇವಸುತ ನಮ್ಮ ಗೋಪಾಲವಿಠಲಾಸಮದೈವವೆ ನಿನಗೆ ನಮೋನಮೋನಮೋ ಎಂಬೆ ೭

ಜತೆ
ಎಲ್ಲಿತನಕ ಮನಸು ಎರಗುತಿಪ್ಪುದು ಎನಗೆಅಲ್ಲಲ್ಲಿ ವಿಷಯನಾಗೊ ಗೋಪಾಲವಿಠಲ

ಇದು ಶ್ರೀಹರಿಯ ಸರ್ವವ್ಯಾಪಕತ್ವವನ್ನು ಕುರಿತ
೧೫೫
ಸುಳಾದಿ
ಧ್ರುವತಾಳ
ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ ಎಲ್ಲರಂತರ್ಯಾಮಿ ಎಲ್ಲಿಯು ನೀನೆಹುಲ್ಲುಕಾಷ್ಠ ಜಡ ಚೇತನಗಳಲ್ಲಿ ನೀ-ನಿಲ್ಲದಿಲ್ಲವೆಂದು ಎಲ್ಲ ಸ್ತುತಿಸುತಿದೆಸಲ್ಲದ ಮನುಜನು ನಿನಗೆ ತನಗೆ ಭೇದÀ-ವಿಲ್ಲವೆಂಬುವನಿಗೆ ಏನೆಂಬೆ ಹರಿಯೆಜಲಜ ನೀರೊಳಗಿದ್ದು ಲೇಪನವಿಲ್ಲದಂತೀಲ್ಲ ಪ್ರೇರಕನು ಎಲ್ಲರಲ್ಲಿಯು ನೀನೆಚಿಲ್ಲರೆ ದೈವರ ಗಂಡ ಗೋಪಾಲವಿಠಲ ನಿನ್ನಬಲ್ಲವರೆ ಬಲ್ಲರು ಎಲ್ಲವರರಿಯರು ೧

ಮಠ್ಯತಾಳ
ವಿಶ್ವತೋಮುಖ ನೀನೆ ವಿಶ್ವತೋ ಚಕ್ಷ ನೀನೆವಿಶ್ವತೋ ಬಾಹು ನೀನೆ ವಿಶ್ವತೋ ಹಸ್ತ ನೀನೆವಿಶ್ವತೋ ಶ್ರವಣನೆ ವಿಶ್ವಾಧಾರಕ ನೀನೆವಿಶ್ವವ್ಯಾಪಕ ಸರ್ವ ವಿಶ್ವಮಯನು ನೀನೆವಿಶ್ವನಾಮಕ ಹರಿ ಗೋಪಾಲವಿಠಲವಿಶ್ವಾಸ ಕೊಡು ನಿನ್ನ ವಿಶ್ವ ಚರಣದಲ್ಲಿ ೨

ತ್ರಿಪುಟತಾಳ
ಅಂಗುಷ್ಠಾಗ್ರ ಮಾತ್ರ ಪರಿಮಾಣ ಮೂರುತಿ ನೀನೆರಂಗ ಆತ್ಮ ಅಂತರಾತ್ಮ ಮೂರುತಿ ನೀನೆಲಿಂಗದೇಹ ಭಂಗವಾಗುವುದಕ್ಕೆ ಸಾಧುಸಂಗದಲ್ಲಿ ಇಡುವ ಉತ್ತುಂಗ ಮಹಿಮ ನೀನೆಗಂಗಾತೀರದಲ್ಲಿದ್ದು ಸುಜನರ ದೋಷಂಗಳ ಕಳೆವುದಕೆಮಂಗಳಾತ್ಮ ಮೂರುತಿ ನೀನೆಸ್ವಾಂಗಾಯ ನಮ್ಮ ಗೋಪಾಲವಿಠಲಸಂಗದಲ್ಲಿರಿಸೊ ನಿನ್ನ ಡಿಂಗರಿಗರೊಡನೆ ೩

ಅಟ್ಟತಾಳ
ಸಿರಿಯಲ್ಲಿಯು ನೀನೆ ಪರಮೇಷ್ಠಿಯಲ್ಲಿಯು ನೀನೆಮರುತವಾಣಿ ಭಾರತಿ ಎಲ್ಲರಲ್ಲಿಯು ನೀನೆಉರಗನಲ್ಲಿಯು ನೀನೆ ಗರುಡನಲ್ಲಿಯು ನೀನೆಗಿರಿಜಾಪತಿಯಲ್ಲಿಯು ಸುರಪತಿಯಲ್ಲಿಯು ನೀನೆವರ ಸಿದ್ಧಸಾಧ್ಯ ಕಿನ್ನರರಲ್ಲಿಯು ನೀನೆ ಗಿರಿ ಗುಹೆಗಳಲ್ಲಿ ಒಳಗೆ ಹೊರಗೆ ಎಲ್ಲಕರೆದರೆ ಓ ಎಂಬ ಪ್ರತಿ ಶಬ್ದವು ನೀನೆಪರಶುರಾಮನಾಗಿ ಪಾವಕನಲ್ಲಿ ನೀನೆ ಬ-ಹಿರಂತರ್ದಶದಿಕ್ಕುಗಳಲ್ಲಿ ನೀನೆ ನೋಡಲುಕರಿಸಿಂಹ ಶಾರ್ದೂಲ ಮೊದಲಾದ ಸರುವ ಜೀವರಲ್ಲಿ ಪರಿಪೂರ್ಣ ನೀನೆಮರ ಮೃಗ ಮೊದಲಾದ ಅಖಿಳರಲ್ಲಿಯು ನೀನೆಕರ್ಮಾನುಸಾರವಾದ ದುಷ್ಟರಂತಕ ನೀನೆಧುರವಿಕ್ರಮ ನಮ್ಮ ಗೋಪಾಲವಿಠಲದೂರದೂರನೆ ಅತಿ ದೂರತರನು ನೀನೆ ೪

ಆದಿತಾಳ
ನಿಗಮವ ತಂದಂಥ ನಗಧರನು ನೀನೆಜಗವನು ತಂದಂಥ ಅಸುರಾಂತಕ ನೀನೆಮಿಗೆ ಕಂಬದಿ ಬಂದ ನರಸಿಂಹನು ನೀನೆಜಗವನೋರಡಿಯಾಗಿ ಅಳೆದ ವಾಮನ ನೀನೆಮಗನಾಗಿ ಮಾತೆಯ ಘಾತಿಸಿದ ಭಾರ್ಗವ ನೀನೆಜಗವರಿಯೆ ರಾವಣಾಂತಕನು ನೀನೆನಗುತ ಪೂತಣಿ ಅಸುವ ಹೀರಿ ಶಕಟನ ಒದ್ದುಹಗೆ ಕಂಸನ ಕೊಂದ ಶ್ರೀಕೃಷ್ಣನು ನೀನೆಮೃಗಧರಧರಗೊಲಿದು ಬತ್ತಲೆ ನಿಂದು ತ್ರಿಪುರವಒಗೆದು ಮೆರೆದ ಬೌದ್ಧಾವತಾರನು ನೀನೆಸೊಗಸಾಗಿ ಹಯವೇರಿದ ಕಲ್ಕಿಯು ನೀನಾದೆಮಿಗೆ ಅನಂತಾವತಾರನು ನೀನಾದೆಜಗಜನ್ಮಾದಿ ಕಾರಣ ಗೋಪಾಲವಿಠಲನಿಗಮಗೋಚರ ಅಘಶೂನ್ಯ ಪಾವನನೆ ೫

ಜತೆ
ಸರ್ವರಾಧಾರನೆ ಸರ್ವ ನಿರ್ಲೇಪನೆ ಸರ್ವದರ್ಶನನಾಮ ಗೋಪಾಲವಿಠಲ