Categories
ರಚನೆಗಳು

ಗೋಪಾಲದಾಸರು

ವಾತ್ಸಲ್ಯಭಾವದ ಕೃತಿಯಿದು
೧೭೧
ಸುಳಾದಿ
ಧ್ರುವತಾಳ
ಮಗುವಾಗಿ ಮಗನಾಗಿ ಮಮತೆ ಪುಟ್ಟಿಸಿ ನಿನ್ನಮಗುವ ರೂಪವು ತೋರಿ ಮರಳಿ ಎನ್ನ ಕಣ್ಣಿಗೆಸಿಗದಂತೆ ನೀನು ಎನ್ನ ಮಗನೆಂದು ಪೇಳಿಕೊಂಡಬಗೆ ಆವಲೀಲೆಯೊ ಚೆನ್ನಿಗನೆ ಗೋವಳರಾಯ ಬಪ್ಪಬಗೆಯೇನೊ ಎನ್ನೊಡನೆ ಚುನ್ನಾಟವಾಡಲಿಕ್ಕೆಅಗಣಿತಗುಣಗಣ ಅಂಬುಧಿಯೊಸೊಗಸಾಗಿ ಎನಗೆ ಮೊದಲಿಗೆ ನಿಜವ ತೋರಿದರೆಮಿಗಿಲಾಗಿ ನಿನ್ನ ಸ್ತೋತ್ರಗಳನಾದರು ಮಾಳ್ಪೆಯುಗ ಮಹಾಪ್ರಳಯಕ್ಕೆ ಚಲಿಸದ ಸತ್ವೇಶಮಗುವಾಗಿ ತೋರಿ ಮೋಸಗೊಳಿಸುವುದರಿಯದಾದೆನಗು ಪಾಟಲವ ಮಾಡಿ ಕಡೆಗೆ ಹಿಂದೆ ನೋಳ್ಪುವಿಯೊಧಿಕು ಧಿಕು ಎನ್ನ ಜನುಮ ಸಾರ್ಥಕೇನೊನಗಧರ ಚೆಲುವ ಗೋಪಾಲವಿಠಲ ಕೃಷ್ಣನಗೆ ಆಟ ತೋರೆನ್ನೊಡನೆ ಸಿಗದೆ ಮರೆಯಾಗಬಹುದೆ ೧

ಮಠ್ಯತಾಳ
ತಿಳಿಯದೆ ಸ್ವಪ್ನದಿ ಕಳವಳಿಕೆಯಿಂದಸೆಳೆದು ನೂಕಿದೆನಲ್ಲ ಬಳಿಯ ನಿಲ್ಲಗೊಡದೆಕಿಲಕಿಲನೆ ನಗುತ ಚಿನ್ನ ಬಾಲಕನಾಗಿಸುಳಿದು ಆಡಿದರು ತಿಳಿಯದೆ ನಾ ಪೋದೆತಳಕು ಹಾಕಿ ಕಾಲು ತೊಡರಿಸಿಕೊಂಡರುಎಳೆದು ಎಳೆದು ನಿನ್ನ ಎಬ್ಬಟ್ಟಿದೆನಲ್ಲಭಳಿರೆ ನಿನ್ನ ಮಾಯ ಬಡವರಿಗೆ ಇನ್ನುತಿಳಿಯಲೊಶವೆ ಕರುಣಾ ಚಿತ್ರವಿಚಿತ್ರನೆಮಲತಮಲ್ಲರಗಂಡ ಗೋಪಾಲವಿಠಲಾಲೌಕಿಕ ಚರಿಯ ಅಘಟಿತ ಮಹಾಘಟಿತ2

ತ್ರಿಪುಟತಾಳ
ಪುಟ್ಟಿದ ಶಿಶುವೆಲ್ಲಿ ಎಷ್ಟು ದಿವಸಾಯಿತುದೃಷ್ಟಿಲಿ ನಾನತ್ತ ನೋಡಿದವನೆ ಅಲ್ಲಕೊಟ್ಟವನೆ ಕೊಂಡೊಯ್ದನೆಂದು ಮನಸು ಎಲ್ಲಗಟ್ಯಾಗಿ ಅದರ ಚಿಂತನಿಯ ಗಂಧವೆ ಎಲ್ಲಬಿಟ್ಟವನಿಗೆ ಸ್ವಪ್ನದಲ್ಲಿ ಆ ರೂಪದಿಚೇಷ್ಟೆಯ ತೋರಿಸಿ ಚತುರ ಕ್ರೀಡೆಯನಾಡಿಬಿಟ್ಟು ಕೊನೆಗೆ ಎನಗೆ ದೃಷ್ಟಿಗೆ ತೋರದ ಶ್ರೇಷ್ಠ ಬಾಲಕರೂಪ ನೀನೊ ಅಜೀವನೊಇಷ್ಟು ಮಾತ್ರವು ಎನ್ನ ಮನದಲ್ಲಿ ನೆಲೆಗೊಂಡುಸ್ಪಷ್ಟಾಗಿ ತಿಳಿಪೋದು ಸರ್ವೇಶ್ವರಾಷ್ಟಿಲ್ಲವೆಂದರೆ ಎನ್ನ ಮನದ ವ್ಯಥೆಬಿಟ್ಟು ಪೋಗದು ಕಾಣೊ ಬಿನ್ನೈಸುವೆಇಷ್ಟು ಮಾತ್ರವು ಅಲ್ಲ ನಿನ್ನ ರೂಪ ಬಾಲ-ಕೃಷ್ಣನೆಂದು ಪೆಸರು ಪೇಳಿದ್ಯಾಗಎಷ್ಟು ಜನ್ಮದ ನೋಂಪಿ ನಾ ತಿಳಿದವನಲ್ಲಗಟ್ಯಾಗಿ ಎನ್ನ ಗುರುಗಳೆ ಬಲ್ಲರೊಪುಟ್ಟ ಬಾಲಕ ಉಡುಪಿಕೃಷ್ಣ ಗೋಪಾಲವಿಠಲೈಷ್ಟೇವೊ ಎನ್ನ ಪ್ರಾಪ್ತಿ ಮುಂದೆ ಉಂಟೊ ೩

ಅಟ್ಟತಾಳ
ತೃಷೆಯಿಂದ ನೀರ ರಭಸದಿ ಕುಡಿವಂಗೆಕಸುಕೊಂಡ ತೆರನಂತೆ ಕೈಯೊಳ ಪಾತ್ರೆಯಹಸಿದನ್ನವಕೊಂಬಾಗ ಹಾರಹೊಡದು ತುತ್ತುಕೊಸರಿ ಬಿಟ್ಟಂತಿನ್ನು ಎನ್ನ ಆಸೆಯು ನೋಡೂಸುರಲಾರೆನೊ ನೀ ಪೋಷಿಸಿ ಸುಖಿಸಿ ಎನ್ನಕೊಸರಿಬಿಟ್ಟು ಕ್ಲೇಶಕೊಂದೆನಲಲ್ಲ ಈಡಿಲ್ಲಕಸುಕೊಂಡು ಗಂಟ ಗಲ್ಲದಿ ಬಡಿದಿನ್ನೂಸುರದೆ ಮೆಲ್ಲಗೆ ಪೋದವನಂತೆ ರಾ-ಜಸ ಮತಿಯವನಿಗೆ ನಿನ್ನ ಒಲುಮೆ ಎಂತುಅಸಮದೈವ ಕೃಷ್ಣ ಗೋಪಾಲವಿಠಲ ಕ-ನಸಿನ ರೂಪವು ಮನಸಿಗೆ ನೆಲೆಯಾಗೊ ೪

ಆದಿತಾಳ
ಏನನರಿಯೆ ನಿನ್ನ ಮಹಿಮೆ ಏನನರಿಯೆ ನಿನ್ನ ಸೇವೆಏನನರಿಯೆ ಪ್ರೀತಿ ಕರ್ಮ ಏನನರಿಯೆ ಜ್ಞಾನಮಾರ್ಗಏನನರಿಯೆ ಭಕುತಿ ಸ್ಥಿತಿಯು ಏನನರಿಯೆ ವಿರಕುತಿಯುಏನೊ ನಿನ್ನ ಕರುಣಾಪೂರ್ಣನು ನೀನು ಎಂದು ನಾನು ಬಲ್ಲೆದೀನನಾಥÀ ಎನ್ನ ಅವಗುಣ ಗುಣ ನಿನಗೇನೊ ಜೇನು ಕ್ರಿಮಿಗಳ ವಮನವನು ಮಜ್ಜನವು ಎಂದುಜ್ಞಾನಿಗಳ ತಂದು ಸ್ನಾನಮಾಡಿಪರೊ ನಿನಗೆಜ್ಞಾನಿಗಳ ಪದದಡಿಯಲ್ಲಿ ನಾನು ಬಿದ್ದವನು ಎಂದುನೀನೆ ನೋಡಿ ಸಾಕಬೇಕು ಶ್ರೀನಿವಾಸ ದಯಾಂಬುಧಿಮಾನಿಸರೂಪಾಗಿ ಪೊಳೆದ ಜಾಣ ಗೋಪಾಲವಿಠಲಪ್ರಾಣಾಧಾರ ನಿನ್ನ ಇರವ ಧ್ಯಾನದೊಳಗೆ ನಿಲಿಸಿ ಕಾಯೊ ೫

ಜತೆ
ಸ್ವಪ್ನದಲ್ಲಿ ಸುಳಿದ ಅಪರಿಮಿತ ಮಹಿಮತಪಸಿಗೆ ಒದಗೊ ಗೋಪಾಲವಿಠಲ ಕೃಷ್ಣ

ಈ ಸುಳಾದಿಯಲ್ಲಿ ‘ಮಡಿ’ಯ
೧೧೨
ಸುಳಾದಿಧ್ರುವತಾಳ
ಮಡಿ ಮಾಡಬೇಕು ಒಳ್ಳೆ ನಡತೆ ಕಲಿಯಬೇಕೆಂ-ದೆಡಹಿ ಮುಗ್ಗುತ ನೀರ ಮಡುವಿನೊಳಗೆ ಪೋಗಿಬುಡುಗುಳಿಯಂತೆ ಮಿಂದು ಗುಡುಗುಡುಗುಟ್ಟುತಲಿನಡುವೆ ಮಂತ್ರಗಳು ಕಡುವೇಗ ಪಟ್ಟೆನಾಮಬಡಿದು ಮುದ್ರೆಯ ಹಚ್ಚಿ ಜಡದೇಹ ತೊಳೆದು ನಾಮಡಿವಂತನೆನಿಸುವೆ ಬಡಿವಾರತನದಲ್ಲಿಅಡಿಗಡಿಗೆ ಕಾಮಕ್ರೋಧ ಒಡಲೊಳು ಮಲಮೂತ್ರಜಡಿತ ರಕ್ತಮಾಂಸ ಕಡುಘೋರ ಇಂದ್ರಿಯಗಳುಕೊಡದೊಳು ಮದ್ಯ ತುಂಬಿ ಮುಡಿಗೆ ಪೂಮಾಲೆ ಸುತ್ತಿಕಡು ಪರಿಮಳದ್ರವ್ಯ ಸುಗಂಧಲೇಪಿಸಿನಡು ಬೀದಿಯೊಳಗಿಟ್ಟು ಬೆಡಗು ತೋರಿಸಿ ಇನ್ನುಮಡಿ ಮಾಡಿದರದು ಮಡಿಯಾಗಬಲ್ಲುದೆಕಂಡಕಡೆಯೆಲ್ಲ ವ್ಯಾಪ್ತ ಗೋಪಾಲವಿಠಲನೆಂದುದೃಢನುಡಿಯ ಒಮ್ಮೆನುಡಿದು ಮಡಿಮಾಡಿದವಮಡಿವಂತ ಮಡಿವಂತ ಮಡಿವಂತನೊ ೧

ಮಠ್ಯತಾಳ
ಮಡುವಿನೊಳಗೆ ಇದ್ದ ಕರಿರಾಜನ ನೋಡುಕಡು ಛಲ ಭಕುತ ಪ್ರಹ್ಲಾದನ ನೋಡುಅಡವಿಯೊಳಗೆ ಭಜಿಸಿದ ಧ್ರುವರಾಯನ ನೋಡುಕಡುಪಾತಕಿಯಾದ ಅಜಮಿಳನ ನೋಡುಎಡೆಯ ಕೊಂಡೋಡಿದ ಹನುಮಂತನ ನೋಡುಕಡೆ ಮೊದಲಿಲ್ಲದ ಮುನಿಗಳನೆ ನೋಡುಕಡಲಶಯನ ಗೋಪಾಲವಿಠಲ ನಾಮನುಡಿದರಲ್ಲದೆ ಮಡಿಮಾಡಿ ದಣಿದರೆ2

ತ್ರಿಪುಟತಾಳ
ಗುರುಮುಖವಿರಬೇಕು ಹರಿದೈವವೆನಬೇಕುಪರ ಉಪಕಾರ ಇರಬೇಕು ಪ್ರತಿಕ್ಷಣಪರರು ತನ್ನವರು ಸಮವೆಂದು ತಿಳಿಯಬೇಕುಹಿರಿದು ಹಿಗ್ಗದೆ ತಾನಸ್ವತಂತ್ರನೆನಬೇಕುಪರಮಾಣು ಸ್ಥಳದಲ್ಲಿ ಹರಿವ್ಯಾಪ್ತನೆನಬೇಕುಈ ಪರಿಯಲ್ಲಿ ತಿಳಿದರೆ ಅವನೆ ಮುಕ್ತಿಯೋಗ್ಯಸಿರಿಯರಮಣ ನಮ್ಮ ಗೋಪಾಲವಿಠಲನ್ನಕರುಣಕ್ಕೆ ಪಾತ್ರನಾದವನೆ ಇದನರಿವ ೩

ಅಟ್ಟತಾಳ
ನಿತ್ಯ ಸಂಸಾರಿಗೆ ಅತ್ಯಂತ ದೂರವುದೈತ್ಯಗಂತು ಸ್ವಪ್ನದಲ್ಲೂ ನಾಸ್ತಿಸತ್ವಜೀವರಿಗೆ ಹರಿಕರುಣವನೆ ಮಾಡಿತತ್ವಾಭಿಮಾನಿ ದೇವತೆಗಳಿಗೆ ಪೇಳಿಮೊತ್ತ ದೋಷಗಳ ಕರಿಯಾಧೀನ ಮಾಡಿಉತ್ತಮ ಕರ್ಮಗಳ ಮಾಡಿಸಿಸತ್ಯಲೋಕಾಧಿಪನ ಕಲ್ಪಾಂತರದಲ್ಲಿಸತ್ವಜೀವಿಗಳು ವಿರಜೆಯಲಿ ಬೊಮ್ಮನ ಸಹಮುಕ್ತಿಯೈದುವರು ಶಕ್ತ್ಯಾನುಸಾರದಿಂದಸತ್ಯಸಂಕಲ್ಪ ಗೋಪಾಲವಿಠಲನ್ನಭೃತ್ಯರೆ ಧನ್ಯರೊ ಉತ್ತಮೋತ್ತಮರು ೪

ಆದಿತಾಳ
ಎತ್ತ ಪೋದರೇನು ಎತ್ತ ನಿಂತರೇನುಚಿತ್ತ ಬಂದಂತೆ ಚಿಗಿದಾಡಿದರೇನುಚಿತ್ತದಲ್ಲಿ ಹರಿಯ ಕಾಂಬುವ ಭಕುತರಿಗೆಮತ್ತೆ ಇತರ ಜನರವರಿಗೆ ಸರಿಯೆಮತ್ತೆ ವ್ಯಾಘ್ರನ ನೋಡಿ ನರಿ ಸುಟ್ಟುಕೊಂಡಂತೆಚಿತ್ತಕ್ಕೆ ಬಂದ ಪರಿಪರಿ ಗಣನೆಯೇನೌತ್ತಮೋತ್ತಮ ನಮ್ಮ ಗೋಪಾಲವಿಠಲನ ಚಿತ್ತಾನುಸಾರ ನಡೆದವರೆ ಧನ್ಯರೊ ೫

ಜತೆ
ಆವಾವ ಕರ್ಮಗಳು ದೇವಗರ್ಪಿಸುವಜೀವರೆ ಧನ್ಯರೊ ಗೋಪಾಲವಿಠಲ

ಮುಕ್ತಿಯನ್ನು ಅಪೇಕ್ಷಿಸುವ ಭಕ್ತರು
೧೩೯
ಸುಳಾದಿ
ಧ್ರುವತಾಳ
ಮುಕುತಿಯು ಬೇಕು ಎಂಬಾಸಕುತಿ ಉಳ್ಳವರೆಲ್ಲಯುಕುತಿಯ ಕೇಳಿ ಎನ್ನ ಶಕುತಿದ್ದಷ್ಟು ಪೇಳುವೆಸಕಲ ಧರ್ಮವು ನೋಡಾ ಪ್ರಕಟಾಗೆ ಬಂದವೆರಡುಭಕುತಿ ಜ್ಞಾನವು ಪುಟ್ಟಿ ತಿಳಿಯಬೇಕುಸುಖತೀರ್ಥರೆ ಶಾಸ್ತ್ರದ ಉಕುತಿಯ ಅನುಸರಿಸಿಕಕುಲಾತಿ ಹರಿಯಲ್ಲಿ ಮುಕುರಿ ಬಿದ್ದಿರಬೇಕುಲಕುಮಿ ಮೊದಲುಮಾಡಿ ಪುಷ್ಕರ ಪರಿಯಂತಭಕುತರ ತಾರತಮ್ಯ ಯುಕುತಿಯಿಂದ ಅರಿಯಬೇಕುಭಕುತರೊಳು ತನ್ನಿಂದಧಿಕರನ್ನು ಕಂಡರಲ್ಲಿಭಕುತಿಯನಿಟ್ಟು ಅವರ ಕೃಪೆಯ ಪಡೆಯಬೇಕುಭಕುತರೊಳು ತನ್ನಿಂದ ಸುಖಿಸುತ್ತಲಿರಬೇಕು ಅ-ಶಕುತರ ಕಂಡರೆ ಭಕುತಿ ಪುಟ್ಟುವಂತೆ ಕರುಣಮಿಗಿಲಾಗಿ ಮಾಡಬೇಕುಸಕಲ ಪ್ರಾಣಿಗಳೆಲ್ಲ ಸುಖದಲ್ಲಿರಲಿ ಎಂದುವಿಕಸಿತವಾಗಿ ಮುಖ ಪ್ರಕಾಶಿಸುತ್ತಿರಬೇಕುಭಕುತರೊಳಗೆ ಸಮಾನಿಕರಲ್ಯಾದರು ತನಗೆಸಖತ್ವವಾಗಿ ಸತತ ಸಕಲ ಇಂದ್ರಿಯಗಳೆಲ್ಲಪ್ರಕಟಿಸದೆ ಬಂಧಿಸಿ ಬಕನಂತೆ ಭಕುತಿಯಕ್ಕುಯುಕುತಿಬಿಟ್ಟು ಮುಕುತಿದಾಯಕ ಚೆಲ್ವ ಗೋಪಾಲವಿಠಲನ್ನನಖಶಿಖ ಪರಿಯಂತ ನಿತ್ಯ ಧ್ಯಾನವಮಾಡು ೧

ಮಠ್ಯತಾಳ
ಕಾಮಕ್ರೋಧಲೋಭಮೋಹಮದಮತ್ಸರನೇಮದಿ ಬಿಡಬೇಕು ನೇಮದಲ್ಲಿಡಬೇಕುಸ್ವಾಮಿಯ ಬಿಟ್ಟು ಅನ್ಯವಿಷಯ ಕೇಳುವಂಥಕಾಮವನ್ನು ಹಿಡಿದು ಖಂಡ್ರಿಸಲಿಬೇಕುಸ್ವಾಮಿಯ ದ್ರೋಹಿಗಳ ಕಂಡರವರ ಮೇಲೆಕ್ಷೇಮ ಚಿಂತಿಸದಲ್ಲಿ ಕ್ರೋಧ ಮಾಡಲಿಬೇಕುಸ್ವಾಮಿ ವಿಷಯದಲ್ಲಿ ತತ್ವಧರ್ಮದ ಮಾರ್ಗನೇಮವು ಬಲ್ಲಾತನಾಗಿದ್ದರು ಸರಿಯೆತಾಮಸ ಜೀವನು ಬಂದು ಕೇಳಿದರುಪಾಮರ ಗರುವದಲೊಶಮಾಡಲಿಬೇಕುತಾಮಸ ಜೀವನ್ನ ತಾ ಮತ್ತೆ ಕಂಡರೆತಮಸಿಗೆ ಹೋಗುವಂತೆ ಮೋಹ ಪುಟ್ಟಿಸಬೇಕುಸ್ವಾಮಿಯ ಧ್ಯಾನಾನಂದಭರಿತನಾಗಿಪಾಮರನೆದುರಿಗೆ ಮದದಿ ತಿರುಗಬೇಕುಸ್ವಾಮಿ ಸರ್ವೋತ್ಮತ್ವ ಬಿಟ್ಟು ಪೇಳುವಂಥತಾಮಸನ್ನ ಕಂಡು ಮತ್ಸರಿಸಲಿಬೇಕುಸ್ವಾಮಿಯ ಸೇವೆಯು ಬೇಕು ಎಂಬುವಂಥಕಾಮವು ಸರ್ವದಾ ಕಕುಲಾತಿಯು ಬೇಕುಸ್ವಾಮಿಯ ದಾಸರ ಕಂಡರಾಯಿತೆ ಇನ್ನುಪ್ರೇಮದಿಂದಲಿ ಇನ್ನು ಮೋಹ ಮಾಡಲಿಬೇಕುಸಾಮಜವರದ ಶ್ರೀ ಗೋಪಾಲವಿಠಲನೆಕಾಮಕ್ರೋಧಗಳಿಗೆ ನಿಯಾಮಕನೆನಬೇಕು ೨

ರೂಪಕತಾಳ
ಆಡಲಿಬೇಕಿನ್ನು ಸರ್ವ ಮಾತುಗಳುಆಡಿಸುವ ಬೇರೆ ಎಂದು ತಿಳಿಯಬೇಕುನೋಡಲಿಬೇಕು ಎಲ್ಲಜೀವರು ಮಾಡುವ ಕರ್ಮಮಾಡಿಸುವ ಬೇರೆ ಎಂದು ತಿಳಿಯಲಿಬೇಕುಮಾಡಬೇಕು ಜಡಗಳಿಂದ ಹರಿಯಪೂಜೆನೋಡಿ ಚಿಂತಿಸಬೇಕು ಅಲ್ಲಿಪ್ಪ ಮೂರ್ತಿಗಳಆಡಿಸುವ ಮೂರ್ತಿ ಬೇಡಿಸುವ ಮೂರ್ತಿನೋಡಿಸುವ ಮೂರ್ತಿ ಕೂಡಿ ಚಿಂತಿಸಿ ತನ್ನಗೂಡಿನಲ್ಲಿ ನಿತ್ಯ ಮಾಡಬೇಕು ಧ್ಯಾನರೂಢಿಗೊಡೆಯ ರಂಗ ಗೋಪಾಲವಿಠಲಂಗೆಈಡಿಲ್ಲವೆಂದು ಕೂಗ್ಯಾಡಬೇಕು ನಿತ್ಯ ೩

ಝಂಪೆತಾಳ
ಆರುಪರಿಯ ಭೇದ ತಾರತಮ್ಯವಾಗಿ ತಿಳಿದಿರಲಿಬೇಕುಕಾರಣ ಅಕಾರಣರ ದಾರಿ ವಿಚಾರಿಸುತ್ತೈರಲಿಬೇಕು ಸೋಪಾನಗಳನ್ನು ನಾರಾಯಣಗೆನಾರಾಯಣನರಾಣಿಗೆ ಭೇದ ನಾರಾಯಣಗೆ ಜೀವನಕೆ ಭೇದಆರಾರು ಜೀವರು ತಮ್ಮೊಳು ತಮಗೆ ಭೇದಕಾರಣವಾಗಿಪ್ಪ ಜೀವ ಜಡಕೆ ಭೇದಆರಿಸುವುದು ಜಡಜಡಕ್ಕೆ ಭೇದನಾರಿಯರಿಗೆ ಭೇದ ಪುರುಷರಿಗೆ ಭೇದನಾರಾಯಣಲಕುಮಿ ಇವರೆ ಎಂದುತಾರತಮ್ಯವು ನಿತ್ಯ ಮೂರೆರಡುಭೇದ ನಿತ್ಯಸಾರುತ್ತಿಪ್ಪುವು ಶ್ರುತಿಸ್ಮ್ರತಿವಾಕ್ಯವುಆರು ಮೂರು ಭಕುತಿಯಿಂದ ಶ್ರೀ ಹರಿಯನ್ನುಆರಾಧಿಸುವಂಥ ಭಕುತರಿಗೆತೋರುತಿಪ್ಪ ತನ್ನ ಮೂರ್ತಿ ಇಷ್ಟರೊಳಗೆಸೂರಿಯನಂದದಿ ಪೊಳೆವುತಲಿಕಾರುಣ್ಯಸಾಗರ ಗೋಪಾಲವಿಠಲೈಇ ರೀತಿ ಅರಿದವಗೆ ಪೊರೆಯದೆ ಬಿಡನು ೪

ತ್ರಿಪುಟತಾಳ
ಭಕುತಿಯ ಮಾಡಿರಿ ಸಕಲವೆಲ್ಲವ ಬಿಟ್ಟುಮುಕುತಿಗೆ ಸೋಪಾನ ಇದೆ ಇದೆ ಎಂದುಭಕುತರೆಂಬವರಿಗೆ ಲಕುಮಿಪತಿಯೆ ಭಾಗ್ಯಲಕುಮಿಪತಿಗೆ ಭಕುತರೇವೆ ಭಾಗ್ಯಲಕುಮಿಯನು ಬಿಡುವೆ ಭಕುತರ ಬಿಡೆನೆಂದೂಕುತಿ ಶ್ರೀಹರಿ ತಾನು ಶಪಥ ಮಾಡಿಹನುಸಕಲ ಸತಿಸುತರು ಮಿಗಿಲಾದ ದ್ರವ್ಯದೇಹಸಕಲವೆಲ್ಲವು ನೋಡಾ ಸ್ನೇಹವು ಅಧಿಕವಾಗಿಮುಕುರಾತಿ ಹರಿಯಲ್ಲೆ ಕಕುಲಾತಿ ಇರಬೇಕುಸಕಲ ಗುಣಪೂರ್ಣ ಗೋಪಾಲವಿಠಲಮಕ್ಕಳ ತಾಯಿ ಆಲಿಸಿದಂತಾಲಿಸುವ ೫

ಅಟ್ಟತಾಳ
ನಿನಗೆ ನಿಜವಸ್ತು ನೀನು ಅರಿತು ನೋಡುನಿನಗೆ ಆವುದು ಎಂದು ಖೂನವು ಪಿಡಿಯಿನ್ನುವನಿತೆ ಸುತರು ನಿನ್ನ ಅನುವಿಗೆ ಬಾರರುತನು ಸಂಬಂಧಿಗರೆಲ್ಲ ತತ್ಕಾಲದವರೆಲ್ಲನೆನೆಸದಿರಿವರಿಂದ ನಿನಗೆ ಆಗುವ ಸುಖಕನಸಿನೊಳಾದರು ಕಾಣದಿರೆಲೊ ನೀನುನಿನಗೆ ಸುಖದುಃಖ ಕ್ಷಣಕ್ಷಣಕೆ ಇನ್ನುಅನುದಿನ ಬಿಡದಲೆ ಉಣಿಸುವ ಬೇರುಂಟುಘನಮಹಿಮ ನಮ್ಮ ಗೋಪಾಲವಿಠಲನ್ನನೆನೆವರಿಗೆ ಈ ಸುಖ ಅನುಭವವಾಗುವುದು ೬

ಆದಿತಾಳ
ಸುಲಭವಾಹುದು ಅಗಾಧವಾಹುದುಗೆಲುವು ಆಹುದು ತಿಳಿಯಬಾರದುನಿಲಕ ಆಹುದು ನೆಲೆಯದೋರದುಒಲಿದ ಬಳಿಕ ಚಲಿಸನೆಂದಿಗುತಲೆಯ ಕೆಳಗೆಮಾಡಿ ಹಲುಬಿದರುಹಲವು ಕಾಲ ನೆಲೆಯು ದೋರನವಗೆ ತನ್ನ ತಳತಿಳಿಯದಂಥ ಮನುಜನಿಗೆಅಳಿದು ವಿಷಯಂಗಳನು ಎಲ್ಲಮಲವು ತೊಳೆದು ತಿಳಿದು ತನ್ನತನ್ನ ಕೆಳಗೆ ಬಿದ್ದನೆಂದ ಬಳಿಕತಿಳಿಯಗೊಟ್ಟು ಪೊರೆವನಾಗಕಳೆವ ನಾನಾ ದೋಷರಾಶಿ-ಗಳನು ಎಲ್ಲನು ಕತ್ತಲೆಲ್ಲಬೆಳಕು ಮಾಡುವನು ತನ್ನಎಳೆಯ ಕರುಣ ನೋಟದಿಂದಸುಲಭ ಭಕ್ತವತ್ಸಲ ಗೋಪಾಲವಿಠಲರೇಯ ತನ್ನತಿಳಿದ ಹಾಗೆಲ್ಲ ನಾವುತಿಳಿಸಿಕೊಡುವ ತನ್ನನು ೭

ಜತೆ
ನಂಬಿರೊ ನಂಬಿರೊ ಇಂಬು ಬೇಕೆಂಬೋರುಡಂಭವ ಬಿಟ್ಟು ಗೋಪಾಲವಿಠಲನ್ನ

ಮುಕ್ತರ ಸ್ಥಿತಿಯನ್ನು ವರ್ಣಿಸುವ
೧೪೦
ಸುಳಾದಿಧ್ರುವತಾಳ
ಮುಕ್ತರ ಸ್ಥಿತಿಯನ್ನು ವರ್ಣಿಸಿದೆ ಪೇಳುವುದಕ್ಕೆಶಕ್ತರಾರಿನ್ನು ಎನ್ನ ಶಕ್ತ್ಯಾನುಸಾರ ಪೇಳ್ವೆಉತ್ತಮ ಮಧ್ಯಮ ಅಧಮ ತಾರತಮ್ಯದಿಂದ ಜೀವಮುಕ್ತಿಲಿ ಇಪ್ಪುವರು ಬಿಡದೆಂದೆಂದುಮತ್ತೆ ತ್ರಿಗುಣಾತ್ಮಕ ಲಿಂಗರಹಿತರಾಗಿಚಿತ್ಸ್ವರೂಪದಿಂದಲೆ ಸಂಚರಿಸುತ್ತಮತ್ತೆ ಸಾಕಾರ ಸರ್ವ ಅಂಗಾಭರಣಭೂಷಿತವಸ್ತ್ರಮಾಲಿಕೆ ಗಂಧ ಪರಿಮಳದಿಎತ್ತಿ ಪಿಡಿದ ಶಂಖಚಕ್ರ ಆಯುಧ ಧರಿಸಿನಿತ್ಯ ಆನಂದ ಆನಂದ ಅನುಭೋಗಿಸುತ್ತಾತ್ಯಂತಾಭೇದ ಎಲ್ಲ ಸ್ವರೂಪಭೂತವಿನ್ನುಎತ್ತಲಾದರು ನಿತ್ಯವೆಂಬುದಿಲ್ಲನಿತ್ಯ ಸೇವೆಯುತ್ತಮಗಿಂದುತ್ತಮರಾದವರಿಗೆಛತ್ರಚಾಮರ ನಾನಾ ಮುಂತಾದುದುಭೃತ್ಯ ಕೆಲಸಕಿನ್ನು ಕೈಜೋಡಿಸಿಕೊಂಡುಜತ್ತಾಗಿ ನಿಂತಿಪ್ಪರು ಕೆಡಕಿಲ್ಲದೆಚಿತ್ತಶುದ್ಧರೆ ಎಲ್ಲ ಚಂಚಲೀರಿಷೆಗಳಿಲ್ಲಮತ್ತೆ ಕವಲು ಬುದ್ಧಿ ಮಾಂದ್ಯವಿಲ್ಲಪತ್ನಿ ಉಳ್ಳವರು ಕೆಲರು ಪತ್ನಿರಹಿತರು ಕೆಲರುಅತ್ಯಂತ ಸುಖಿಗಳನ್ನ್ಯಾಪೇಕ್ಷವಿಲ್ಲಪತ್ನಿ ಉಳ್ಳವರು ತಮ್ಮ ಸತಿಯರಿಂದಲಿ ಕ್ರೀಡೆನಿತ್ಯ ಮಾಳ್ಪರು ನೀತವಾಗಿ ಇನ್ನುಪತ್ನಿರಹಿತರಾದವರು ಅತ್ಯಂತ ಸ್ವರೂಪಚಿತ್ತಿನಿಂದೇವೆ ತಜ್ಜನ್ಯ ಸುಖಮತ್ತೆ ಆಗದು ರೇತೋಸ್ಖಲನಮುಕ್ತರಿಗೆ ಅಭಿವ್ಯಕ್ತತಜ್ಜನ್ಯಾನಂದಚಿತ್ತಿನೊಳಗೆ ನಿತ್ಯ ಒದಗಿಸುವಾನಂದ ಗೋಪಾಲವಿಠಲಉತ್ತಮ ಪುರುಷ ಬಿಂಬನಾಗಿ ಇದ್ದು ೧

ಮಠ್ಯತಾಳ
ಉದರಹಸಿವೆಯಿಲ್ಲ ಮೆದುವರು ಫಲಗಳುಒದಗೋದು ತಜ್ಜನ್ಯ ಆನಂದವು ಒಳಗೆಮಧು ಫಲಾದಿಗಳು ಮೆದುವ ಮನಸಿಲ್ಲಮುದದಿ ತಾವಿದ್ದಲ್ಲಿ ಬಂದು ಸೇರುವುವೂದಕ ಕುಡಿವರಿಗೆ ಒಂದೆರಡನೆ ಸಲ್ಲಕ್ಷÄಧೆ ಪಿಪಾಸೆ ನಿದ್ರೆ ದಶ ಇಂದ್ರಿಯಗಳಿಂದಒದಗಿ ಬಾಹುವ ಸುಖ ಎಲ್ಲ ಆನಂದವುವಿಧಿಸೆ ಜೀವನಿಗೆ ಸ್ವರೂಪದೊಳಗೆಒದಗಿ ಇಪ್ಪುವುದೆಲ್ಲ ಎಲ್ಲ ಅಭೇದವಾಗಿವಿಧಿಸಿ ಹೀಗೆ ಒಂದೆ ಜೀವಕ್ಕೆ ಎನೆ ಸಲ್ಲವಿಧಿ ಆದಿ ತೃಣ ಅಂತ್ಯ ಎಲ್ಲ ಜೀವನಕೆ ಹೀಗೆಮದನನಯ್ಯ ಚೆಲುವ ಗೋಪಾಲವಿಠಲಒದಗಿಸುವಾನಂದ ತಾರತಮ್ಯದಿಂದ ೨

ರೂಪಕತಾಳ
ಚಿತ್ತಿನಿಂದಲಿ ಹೀಗೆ ಭೋಗ ಬಡುವರು ಸತತಮತ್ತೆ ಶುದ್ಧ ಸತ್ವÀದಿಂದ ಕ್ರೀಡೆನಿತ್ಯ ತಮ್ಮಿಂದಲಿ ಭಿನ್ನವಾದುದರಿಂದಾರ್ತಿಬಡುವರು ನಾನಾ ರೂಪವ ತೆಗೆದುಕೊಂಡುಹಸ್ತಿ ತುರಗ ನಾನಾ ವಸ್ತ್ರವಾಹನಗಳುಮತ್ತೆ ಆಗುವರು ಮಹಾಮಹಾ ವಿಚಿತ್ರವರ್ತಮಾನವು ಕೇಳಿ ಇದರೊಳಗಿನ್ನು ವಿ-ಚಿತ್ರವಾಗುವುದುಂಟು ಜೀವರ ಸ್ಥಿತಿಗಳೂತ್ತಮ ಸಾಂಶ ಜೀವರು ಇಲ್ಲಿಮತ್ತೇಕಕಾಲದಿ ತಮ್ಮ ಅಂಶಗಳಿಂದಸತ್ವಪ್ರಕೃತಿಗೊಂಡು ಚಿತ್ತ ಬಂದಂತೆ ತಾವುಹತ್ತೆಂಟು ಇಪ್ಪತ್ತು ನೂರಾರು ಸಾಸಿರಮತ್ತೆ ನಾನಾರೂಪ ಛತ್ರ ಚಾಮರ ಸರ್ವವಸ್ತ್ರಾಭರಣ ಫಲಪುಷ್ಪಗಂಧಮಾಲೆಹತ್ತೆಂಟು ಪರಿ ವಾಹನರಾಗಿ ತಮಗಿಂತಲೂತ್ತಮರಾದವರ ಹೊತ್ತಾಡುವರು ಕ್ರೀಡಾಮತ್ತೆ ಈ ಪರಿ ಹರಿಯ ಸೇವಿಸಿ ಪುನಹಮತ್ತೆ ತಮ್ಮ ಸ್ವರೂಪ ಚಿತ್ತಿನೊಳು ಕೂಡುವರುಅತ್ಯಾಯಾಸವು ಸಲ್ಲ ಎಲ್ಲ ಸುಲಭವು ನೋಡಿಬತ್ತಿಯಿಂದಲಿ ಜ್ಯೋತಿ ಬತ್ತಿಘಚ್ಚಿದಂತೆವ್ಯಕ್ತವೆಲ್ಲವು ಅವರ ಸಾಧನಗಳುಇತ್ತ ಕೇಳಿನ್ನು ನಿರಂಶ ಜೀವರಗತಿಯುಪ್ರತ್ಯೇಕ ಒಂದೊಂದು ಅಂಶದಿಂದಸತ್ವಪ್ರಕೃತಿಗೊಂಡು ಒಂದೊಂದೆ ರೂಪದಿಮತ್ತೆ ಸೇವಿಸುವರು ಸಿರಿಹರಿಯಎತ್ತ ನೋಡಿದರು ಬಲು ರೂಪವಾಗುವ ಶಕ್ತಿಮತ್ತಿಲ್ಲ ನಿರಂಶ ಜೀವರಿಗೆಮುಕ್ತರೊಳಗಿರುತಿಪ್ಪ ಗೋಪಾಲವಿಠಲನ್ನಭಕ್ತರಾನಂದ ಬಲ್ಲವರು ಯಾರೊ3

ಝಂಪೆತಾಳ
ಜ್ಞಾನ ಭಕ್ತಿ ವಿರಕ್ತಿ ಮೂರು ಮುಕುತರಿಗೆನ್ಯೂನವಿಲ್ಲವು ನೋಡು ಒಂದು ಕ್ಷಣವಾದರುಜ್ಞಾನಕೆ ಎಲ್ಲವು ಕಾಣಿಸುವುದೆ ಫಲವುಏನು ಬೇಡಿದ್ದು ಒದಗುವುದೆ ಭಕ್ತಿಯ ಫಲಕಾಣದೆ ಆಧಿಕ್ಯ ಇಚ್ಛೈಸದಿಪ್ಪುವುದೆತಾನು ವಿರಕ್ತಿ ಎಂಬುದು ಇದುವೆಆನಂದಮಯವೆಲ್ಲ ಆಡುವ ವಚನಗಳುಯೋನಿ ಎಂಭತ್ತು ನಾಲ್ಕು ಲಕ್ಷ ಜೀವರುಗಳುಗೇಣು ಮೊಳವು ಇಲ್ಲ ಎಲ್ಲ ಅಣುರೂಪವುತಾನು ಕಿರಿದು ಎಂಬ ಕ್ಲೇಶವಿಲ್ಲನಾನಾ ಜೀವರು ಪರಸ್ಪರ ವಿರೋಧಗಳಿಲ್ಲಆನೆ ಸಿಂಹಗೆ ಅಲ್ಲಿ ವೈರವಿಲ್ಲಹೇನು ವೃಶ್ಚಿಕಗಳು ಮೇಲೆ ಓಡಾಡಿದರುಆನಂದಮಯವೆಲ್ಲ ಅವುಗಳಿನ್ನುಕಾಣರೆಂಬುದು ಇಲ್ಲ ಹರಿಯನ್ನ ಸರ್ವರುತಾನು ಸಂದಳಿ ಎಂಬ ಚಿಂತೆಯಿಲ್ಲಕಾಣಿಸುವ ಹರಿ ತಾನು ಅವರ ಯೋಗ್ಯತೆ-ಯಾನುಸಾರವಾಗಿ ತೋರುತಲಿ ಇನ್ನುಧ್ಯಾನವೆಂಬುದು ಇಲ್ಲ ತಮ್ಮ ಸ್ವರೂಪದಿಧೇನಿಪರು ತಮಗಿಂತ ಉತ್ತಮರ ಅನೇಕವಾಗಿಧ್ಯಾನವ ಮಾಳ್ಪುವರು ಹರಿಯುತಾನು ದಿನದಿನ ನೂತನನಾಗಿ ಇನ್ನುಆನಂದಮಯಮೂರ್ತಿ ಗೋಪಾಲವಿಠಲನ್ನಕಾಣುವರು ಪ್ರತಿಕ್ಷಣದಿ ಕೆಡಕಿಲ್ಲದೆ4

ತ್ರಿಪುಟತಾಳ
ಸೃಷ್ಟ್ಯಾದಿ ಅಷ್ಟ ಕರ್ತೃತ್ವವು ಜೀವನಸ್ವರೂಪಕ್ಕೆಗಟ್ಟಿಯಾಗಿಪ್ಪುವು ಎಂದೆಂದಿಗೂ ಬಿಡದೆಪುಟ್ಟಿಸಿಕೊಡುವ ಪ್ರತಿಕ್ಷಣಕೆ ಆನಂದ ಹರಿಸ್ಪಷ್ಟದಿ ಅಭಿವ್ಯಕ್ತಿ ಸೃಷ್ಟಿ ನೋಡುಬಿಟ್ಟು ಜೀವ ನಾನೆಂದು ಪೋಗದೆ ಇಪ್ಪುವುದೆಗಟ್ಯಾಗಿ ಇದೆ ಪಾಲನೆಯೊನಷ್ಟಮಾಡಿ ಜಗವ ಮುಕ್ತ ಅಮುಕ್ತ ಜೀವಪೊಟ್ಟೆಯೊಳಗೆ ಇಪ್ಪುವುದೆ ಲಯವು ನೋಡುಅಷ್ಟು ಕಾರ್ಯಕೆ ಜೀವವೆ ದುಡಿವುದಿನ್ನುಗಟ್ಟಿಯಾಗಿದೆ ಹರಿನೇಮನ ಕಾಣೊನಷ್ಟವಾಗದೆ ಜೀವ ನಿಜವಾಗಿ ಇಪ್ಪುವುದೆಗಟ್ಯಾಗಿ ಜ್ಞಾನ ಹರಿಕೊಟ್ಟುದೆನ್ನಿಸ್ಪಷ್ಟದಿ ತನಗಿಂತ ಉತ್ತಮರ ಗುಣಗಳುಗಟ್ಯಾಗಿ ತಿಳಿಯದೆ ಅಜ್ಞಾನವೊಕಟ್ಟುಮಾಡಿ ಅಧಿಕ ಆನಂದ ಕೊಡದಿಚ್ಛಾ-ವರ್ಕ ಮಾಡಿಪ್ಪುದೆ ಬಂಧ ಕಾಣೊಪುಟ್ಟಲೀಸದೆ ಪುನಃ ಸಂಸಾರ ಬಿಡಿಸಿದೆಗಟ್ಟಿಯಾಗಿ ಇದೆ ಮೋಕ್ಷ ಕಾಣೊಅಷ್ಟ ಕರ್ತೃತ್ವವು ಸ್ವರೂಪದೊಳಗಾಗಿಗಟ್ಯಾಗಿ ನಿಂತು ಮಾಡಿಸಲು¿ಷ್ಟರಿಂದ ಜೀವ ಮುಕ್ತರುಗಳಾನಂದಸ್ಪಷ್ಟದಿ ಹರಿಯು ಅಭಿವ್ಯಕ್ತಿ ಮಾಳ್ಪೈಷ್ಟ ಮೂರುತಿರಂಗ ಗೋಪಾಲವಿಠಲನುಗಟ್ಟಿಯಾಗಿ ಮುಕ್ತರೊಡನಾಡುವ ೫

ಅಟ್ಟತಾಳ
ವರಣಾಶ್ರಮಗಳುಂಟು ವರಣ ಬಾಹ್ಯರು ಉಂಟುಪರಿಪರಿ ಸ್ಥಾವರ ಜೀವರುಗಳು ಉಂಟುಇರುವರು ಇದ್ದಲ್ಲೆ ಆನಂದಹರುಷಬಡುವರಿನ್ನು ಸ್ವರೂಪದಿಂದಲೆತರತಮ ಜೀವರು ಅಲ್ಲಿ ಉಂಟುಪರಿಪರಿ ಶುದ್ಧ ಸತ್ವಗಳನೆ ಕೊಂಡುಮರಗಳು ನಾನಾ ಕುಲತೆಯ ರೂಪವಾಗಿಪರಿವಾರ ಸುರರಿಂದ ಬೆರೆದು ಹರಿಯು ತಾನುಹೊರಗೆ ಹೊರಟು ತಾನು ಸಂಚರಿಸುತ್ತಸಿರಿಯಿಂದ ಸುರರುಗಳಿಂದಾಡೋ ಪರಿ ಕ್ರೀಡೆಗನುಕೂಲಪರಿ ಪರಿ ಪುಷ್ಪಫಲವು ರಸಗಂಧವುಹರಿಯ ಕ್ರೀಡೆಗೆ ಅನುಕೂಲರಾಗಿ ನಾನಾ ಕುಸುಮಸಿರಿತುಲಸಿ ಮುಂತಾದ ಮರಗಳು ಆಗಿಹರಿಯ ಸೇವಿಸಿ ಪುನಃ ಇರುವರು ಇದ್ದಲ್ಲೆಸಿರಿಶಂಖಚಕ್ರಧಾರಿಗಳು ಮತ್ತಿವರಲ್ಲಮರಗಳು ನಿರುತ ತದಾಕಾರರುಎರಡು ವಿಧರು ಉಂಟು ಸಾಂಶ ನಿರಂಶೈರುತಿಪ್ಪರು ಸ್ಥಾವರರು ಜೀವಿಗಳೆನ್ನುಹರಿಯ ಸೇವಿಸುತಲಿ ತಮ್ಮ ಶಕ್ತ್ಯಾನುಸಾರಪರಿಪರಿ ಆನಂದ ಅನುಭೋಗಿಸುತಲಿಸಿರಿಮಹಾರಾಜ ಗೋಪಾಲವಿಠಲರೇಯಪರಿ ಪರಿ ರೂಪನಾಗ್ಯವರ ಪಾಲಿಸುವ ೬

ಆದಿತಾಳ
ಬಿಂಬನಾಗಿ ಪ್ರತಿಬಿಂಬಗಳಂತೆ ರೂಪಎಂಬತ್ತುನಾಲ್ಕು ಲಕ್ಷಯೋನಿ ಜೀವರಾಶಿಗಳಿಗೆಬಿಂಬನಾಗಿ ಶ್ರೀಹರಿ ಇಂಬಾಗಿ ತದಾಕಾರಬಿಂಬನಾಗಿ ಒಳಗೆ ಇದ್ದು ಅವರು ಏನುಹಂಬಲಿಪರಾನಂದ ಸಂಭ್ರಮ ಒದಗಿಪ್ಪಗಂಭೀರಗುಣ ಭಕ್ತರ ಹೊರೆವ ಕು-ಟುಂಬಿ ಎನಿಪಾನಂದಾಂಬುಧಿಯುಡಂಭಜೀವರಿಗತಿ ಸಂಭ್ರಮವೂಂಬೋ ಅಪಾರ ಸುಖಜ್ಞಾನ ಮುಕ್ತರಿಗುಂಟುಬಿಂಬನಾದ ಶ್ರೀಹರಿ ತಿಳಿಸಿಕೊಡುವಕಾಂಬೋದು ಮಾತ್ರ ಭೋಗವೆಂಬನು ಭಾವರಲ್ಲತುಂಬಿದಾನಂದಪೂರ್ಣರಿವರು ನೋಡುಹೊಂಬಣ್ಣ ವಸ್ತ್ರ ಕಂಬಳಿ ಕಟ್ಟಿದ ಕ್ಷಣಕಂಬಳಿಯ ಬಣ್ಣವು ಹೊಂಬಣ್ಣ ಸೇರುವುದೆಕುಂಭಿಣಿಯಲ್ಲಿ ವ್ಯಕ್ತಿ ಸುಖದುಃಖ ಅ-ನುಭವವೆಂಬ ಜ್ಞಾನವುಂಟು ಭೋಗವು ಇಲ್ಲಬಿಂಬಹರಿಗಿಲ್ಲ ಎಂಬೊದೇನಾಶ್ಚರ್ಯಸಂಭ್ರಮಪದಮೂರ್ತಿ ಗೋಪಾಲವಿಠಲಾಂಬುಜನಾಭನ ಪಾದಕ್ಕೆ ನಮೋ ನಮೋ ೭

ಜತೆ
ಚಿತ್ರವಿಚಿತ್ರ ಮುಕ್ತರ ಕ್ರೀಡಿಪನು ಬಲು ಕ್ರೀಡ್ಯಾವನು ಎಲ್ಲಮುಕ್ತಿದಾಯಕ ಗೋಪಾಲವಿಠಲ ಬಲ್ಲ

ಸರ್ವವ್ಯಾಪ್ತನೂ ಸರ್ವೇಶನೂ
೪೫
ಸುಳಾದಿಧ್ರುವತಾಳ
ಲಕುಮಿದೇವಿಗೆ ಈಶ ಎನಗೆ ನೀನೆವೆ ಈಶಸಕಲ ಬೊಮ್ಮಾದಿ ಸುರರಿಗೆಲ್ಲರಿಗೆ ನೀ ಈಶಮುಕುತಿದಾಯಕ ಸರ್ವವ್ಯಾಪ್ತನೆ ಸರ್ವೇಶಭಕುತವತ್ಸಲ ಆರ್ತಜನಭಯನಿವಾರಣಶಕುತಿಯುಕುತಿ ಸರ್ವಚೇಷ್ಟಪ್ರದಾಯಕಸಕಲರಂತರಿಯಾಮಿ ಹೇ ಸರ್ವೋತ್ತಮ ಹರಿಯೆಅಕಳಂಕಗುಣ ಅಪ್ರಾಕೃತನೆ ನಿರ್ದೋಷಸಕಲಠಾವಿಲಿ ವ್ಯಾಪ್ತ ಸರ್ವೇಶ ನಿರ್ಲಿಪ್ತನಖಶಿಖವೆಲ್ಲ ಪೂರ್ಣ ಜ್ಞಾನಾನಂದ ಕಾಯಮಕರಕುಂಡಲ ಕೊರಳಮಾಲೆಯಿಂದ ಶೋಭಿತಭಕುತಜನಕೆ ಸುಖ ವ್ಯಕುತಮಾಡಿಪದಾತಾಅಕಟಕಟ ನಾ ನಿನ್ನ ಅರಿಯದೆ ಮೋಸ ಹೋದೆಉಕುತಿಗಳಿಂದ ನಿನ್ನ ಒಂದಿನವಾದರುಯುಕುತಿ ಪೂರ್ವಕವಾಗಿ ತುತಿಯನು ಮಾಡಲರಿಯೆರುಕುಮಿಣಿಯ ವಲ್ಲಭ ಗೋಪಾಲವಿಠಲಭಕುತರಲ್ಲಿ ನಿಂತಿರುವೆ ಭಯ ಅಭಯನೀವುತಲಿ ೧

ಮಠ್ಯತಾಳ
ಅಚ್ಯುತನೆ ಕೇಳು ಅನಂತನೆ ಕೇಳುಮತ್ಸ್ಯಾದಿಯೆ ಕೇಳು ಸಚ್ಚಿದಾನಂದಸ್ವಚ್ಛುಳ್ಳ ವಿಗ್ರಹ ಸ್ವರಮಣ ಚೆಲ್ವನಿಚ್ಚಳಾನಿಚ್ಚಳ ನಿತ್ಯತೃಪ್ತ ದೇಹಹೆಚ್ಚಿನ ಹೆದ್ದೈವ ಹೇ ದೋಷ ದೂರಕುಚ್ಛಿತ ನರರಿಗೆ ಕುರುವು ತೋರದವನೆವತ್ಸನ ಬಿನ್ನಪ ಒದಗಿ ಮನಕೆ ತಂದುತುಚ್ಛೀಕರಿಸದಲೆ ತುತ್ತು ಮಾಡಿದ್ದಂತೆಎಚ್ಚರಿಕೆಯನ್ನಿತ್ತು ಎಡಬಲದಲೆನಗೆಇಚ್ಛೆಯು ನಿನ್ನಲ್ಲೆ ನ್ಯಾಯದಿಂದಲಿನ್ನುಅಚ್ಚಕರುಣಿ ರಂಗ ಗೋಪಾಲವಿಠಲಪೆಚ್ಚಿದ ಅಘವೆಲ್ಲ ನುಚ್ಚುಮಾಡಿ ಸಲವೊ ೨

ರೂಪಕತಾಳ
ಭಕುತರಾಧೀನನಾಗಿ ನೀನು ಇರುವೆ ಅಯ್ಯಭಕುತರಿಗಾಗಿ ನೀ ಕರ್ಮಗಳ ಮಾಡುವಿಭಕುತರಿಗಾಗಿ ನೀ ವ್ಯಕ್ತವು ಆಗುವಿಭಕುತರಿಗಾಗಿ ನೀ ಸಂಕಲ್ಪ ಮಾಡುವಿಭಕುತರಿಗಾಗಿ ನೀ ಪುರಗಳ ಸೃಜಿಸುವಿಭಕುತರಿಗಾಗಿ ನೀ ಉಣುತ ಉತ್ಸಾಹಪಡುವಿಭಕುತರಿಗಾಗಿ ಅಳೆದೆ ಬಳೆದೆನೆಂಬಿಭಕುತರಿಗಾಗಿ ನೀ ಹಿಗ್ಗುವಿ ಹಿತಬಡುವಿಭಕುತರಿಗಾಗಿ ನೀ ಬಂದೆ ಹೋದೆನೆಂಬಿಭಕುತರಿಗಾಗಿ ಸರ್ವಜಡಗಳ ಸೃಜಿಸುವಿಭಕುತರಿಂದಲಿ ನೀನು ಭೇದನಾಗಿಪ್ಪೆಭಕುತರು ಎಲ್ಲರು ನಿನ್ನಾಧೀನರಯ್ಯಭಕುತವತ್ಸಲ ನಮ್ಮ ಗೋಪಾಲವಿಠಲಭಕುತರಿಂದಲಿ ಬಾಹೊ ಫಲ ನಿನಗೊಂದಿಲ್ಲ ೩

ಝಂಪೆತಾಳ
ನಿನ್ನ ಭಕುತರು ನಿನ್ನನೆ ಹುಡುಕುವರುಚೆನ್ನಾಗಿ ನೀ ಇನ್ನು ಭಕುತರ ಹುಡುಕುವಿನಿನ್ನನೆ ಆಶ್ರಯಿಸಿ ತಮ್ಮ ಮನಬಂದಂತೆಇನ್ನಿಪ್ಪುವರು ಸುಸನ್ಮಾರ್ಗದಿಂದಲಿನಿನ್ನ ಬಲದಿಂದಲೆ ಮೆರೆವುವರು ಸಿರಿಯಿಂದನಿನ್ನ ಬಲದಿಂದಲೆ ಉರುವುವರು ಜಗವೆಲ್ಲಅನ್ಯರ ಗಣನೆಯಿಲ್ಲ ಸ್ವಧರ್ಮದಿಂದಲೆಘನತೆಯಿಂದಲಿ ಉಬ್ಬಿಕೊಂಡಿಹರಯ್ಯಘನ್ನ ಮಹಾಮಹಿಮ ಗೋಪಾಲವಿಠಲನಿನ್ನ ಭಕುತರಿಗೆ ನಿನ್ನ ಮಹಿಮೆಗೆ ನಮೋ ೪

ತ್ರಿಪುಟತಾಳ
ಇಟ್ಟು ನೋಡುವೆಯ್ಯ ಭಕುತರಲ್ಲೆ ನೀನುಬಿಟ್ಟು ನೋಡುವೆಯ್ಯ ಭಕುತರಲ್ಲೆ ನೀನುಕಟ್ಟಳೆಯ ಮಾಡಿ ಕರ್ಮ ಮಾಡಿಸುತ್ತಇಷ್ಟಾನಿಷ್ಟವು ಎಂಬೊ ದಾರಿಯ ತೋರಿಸುತ್ತಕಷ್ಟಗತಿಗೆ ಅವರ ಕೆಡಹದಲೆದುಷ್ಟ ಜೀವರಿಗಿನ್ನು ಈ ಮೂರು ಕ್ರಿಯವುದೃಷ್ಟಿಲಾದರು ಅವರನೋಡಿಸದೆಸೃಷ್ಟಿಸ್ಥಿತಿಲಯ ಮೂರರೊಳಗೆ ನೋಡೆಸ್ಪಷ್ಟವಾಗಿ ತೋರೋದು ನಿನ್ನವರಿಗೆ ದಿಟ್ಟನಾಗಿಪ್ಪರು ಕಳೆಯುಗುಂದದಲೆನಷ್ಟಲಾಭಕ್ಕಿನ್ನು ಅಂಜದಲೆಹುಟ್ಟಿಲಿ ಉದಕವು ಅಟ್ಟಿ ನೂಕದಂತೆಭ್ರಷ್ಟ ಸಂಗತಿಗಿನ್ನು ಸಿಲುಕದಲೆಇಷ್ಟದೇವ ನಮ್ಮ ಗೋಪಾಲವಿಠಲಇಷ್ಟರೊಳಗೆ ಎಲ್ಲ ಇಷ್ಟವಸ್ತುವು ನೀನೆ ೫

ಅಟ್ಟತಾಳ
ಮಂದರಧರನೆ ಮಹಾ ಭಯಹಾರಿಸುಂದರವಿಗ್ರಹ ಶುಭ್ರವರ್ಣ ಗೋ-ವಿಂದ ಇಂದಿರಾಪತಿ ಇಂದುವದನ ಆ-ನಂದಪೂರ್ಣನೆ ಅಜ್ಞಾನವಿನಾಶಕವೃಂದಾವನದಿಂದ ನಂದಗೋಪಿಯಕಂದಒಂದೆ ಮೂಲ ಅನಂತಾವತಾರದಿನಿಂದು ಸಕಲರ ಮಂದಿರದೊಳಗೆಚೆಂದದಿ ನಲಿನಲಿದಾಡಿ ಕುಣಿವ ಮು-ಕುಂದ ಮುರಾರಿ ಮೂಜಗದೊಡೆಯಮಂದಾಕಿನಿಯ ಪೆತ್ತ ಮಹದಾದಿ ದೈವಬಂಧಕಮೋಚಕ ಭಕುತವತ್ಸಲಸಿಂಧುಶಾಯಿ ಕರುಣಾಕರ ಕೃಷ್ಣಬಂಧು ಅನಿಮಿತ್ತ ಗೋಪಾಲವಿಠಲಸಂದರುಶನವಿತ್ತು ಸಲಹೆನ್ನ ಬಿಡದೆ ೬

ಆದಿತಾಳ
ನಿನ್ನ ವ್ಯಾಪಾರವೆ ಎನಗೆ ವ್ಯಾಪಾರವುನಿನ್ನ ತಿಳಿವ ಜ್ಞಾನ ಎನಗದೆ ಧನವುನಿನ್ನ ನೋಡುವ ರೂಪ ಎನಗದೆ ವಿಷಯವುನಿನ್ನೊಳಗಾಡೋದೆ ಎನಗೆ ಆನಂದವುಇನಿತು ಈ ಪರಿ ಸುಖ ಇರಲಾಗಿ ಎನಗೆಇನ್ನಿದಲ್ಲದೆ ಭಿನ್ನ ವಸ್ತುವಿನಿಂದನಿನ್ನಿಂದಾಗುವ ಸುಖ ಇನ್ನಾಗಬಲ್ಲುದೆನಿನ್ನ ನಂಬಿದ ಅಚ್ಛಿನ್ನ ಭಕುತರೆಲ್ಲನಿನ್ನ ವಿಷಯೀಕರಿಸಿನ್ನು ಇಪ್ಪುವರಯ್ಯನಿನ್ನವರ ಕೃಪೆಯೆನಗಾಗುವುದಕ್ಕೆನಿನ್ನ ಕರುಣದಿಂದ ಮನ್ನಿಸುವರಯ್ಯಘನ್ನ ದಯಾನಿಧೆ ಗೋಪಾಲವಿಠಲನಿನ್ನಲ್ಲದೆ ನಾ ಇನ್ನೊಂದರಿಯೆ ೭

ಜತೆ
ಜಗದ ಅಂತರಿಯಾಮಿ ಎನ್ನ ಅಂತರಿಯಾಮಿಅಘದೂರ ಗೋಪಾಲವಿಠಲ ಅನಿಮಿತ್ತ ಬಂಧು

ವೈರಾಗ್ಯದ ಅರ್ಥ
೧೪೨
ಸುಳಾದಿಧ್ರುವತಾಳ
ವೈರಾಗ್ಯ ಮಾರ್ಗ ಕೇಳು ದಾರಿದ್ರ್ಯ ಮಾರ್ಗ ಕೀಳುಶ್ರೀರಮಣನ್ನ ಪಾದ ಆರಾಧಿಸುವುದಕ್ಕೆನಾರಿಯ ಧಾರುಣಿಯ ಧನವ ಬಿಟ್ಟರಾಯಿತೆವೈರಾಗ್ಯವಲ್ಲ ಕಂಡ್ಯ ಧೀರರಿಗೆಶರೀರಕ್ಕಾಪಾದ ಭಸ್ಮ ಧರಿಸಿಕೊಂಡುಚೀರವಸ್ತ್ರವನುಟ್ಟು ತಿರುಗಾಡುತ್ತಿರಲಾಗಆರಾದರು ಅವನ ಅವಧೂತನೆಂತೆಂದುಸಾರಿಸಾರಿಗೆ ಇನ್ನು ಕರೆವರಯ್ಯವೈರಾಗ್ಯವೆಂಬುವಂಥ ವಾರುತಿ ಒಂದಲ್ಲದೆನಾರಾಯಣಗೆ ಇದು ಪ್ರಿಯವಲ್ಲನಾರಿ ಸುತರುಗಳು ಶರೀರ ಸಂಬಂಧಿ-ಗರು ಎಂತೆಂದರಿದಿರಬೇಕುನೀರೊಳಗೆ ಇನ್ನು ಕಮಲವು ಇದ್ದಂತೆಕಾರಣನಾಗಿ ಕಾರ್ಯವಿಲ್ಲದಲಿರಬೇಕುಮಾರಜನಕ ನಮ್ಮ ಗೋಪಾಲವಿಠಲನುತೋರಿಕೊಟ್ಟ ವೈರಾಗ್ಯವನ್ನು ತೋರುವೆ ೧

ಮಠ್ಯತಾಳ
ಸ್ವಯೋಗ್ಯತೆಯೊಳಗೆ ಆಯತವಾದದ್ದುನೋಯದೆ ಉಣುವುದೆ ನ್ಯಾಯದ ವೈರಾಗ್ಯಸ್ನೇಹದಿ ಹರಿಕೊಟ್ಟ ಕರ್ತೃತ್ವವು ಎನಗೆನೀ ಇಲ್ಲದೆ ಎನ್ನಿಂದಾಗದೆಂತಿಪ್ಪುದೆ ನ್ಯಾಯದ ವೈರಾಗ್ಯಆಯಾಸಬಡದೆ ಪರರ ಶ್ರೇಯಸು ನೋಡಿಶ್ರೀಯರಸನಿತ್ತನೆಂಬುದೆ ವೈರಾಗ್ಯಮಾಯಾರಹಿತ ದೇವ ಗೋಪಾಲವಿಠಲನ್ನಪ್ರಿಯದಿ ನೆಚ್ಚಿ ಅನ್ಯಕ್ಕೆರಗದಿಪ್ಪುದೆ ವೈರಾಗ್ಯ ೨

ತ್ರಿಪುಟತಾಳ
ಧನಪರಿತ್ಯಾಗವನು ಮಾಡಿದಡಾಯಿತೆಘನವಾದ ವೈರಾಗ್ಯವಲ್ಲ ನೋಡಿಧನವಬಿಟ್ಟಿರವೆ ದನಗಳು ಅನುದಿನಘನವೇನೊ ಇವಗೆ ಅವಕ್ಕೆ ನೋಡೊಜನ ಮನೆಯ ಬಿಟ್ಟೇಕಾಂತದಲಿ ಕುಳಿತರಾಯಿತೆಘನವಾದ ವೈರಾಗ್ಯವಲ್ಲ ನೋಡಿಜನರ ಮನೆಯ ಬಿಟ್ಟಿರದೆ ಅನುಗಾಲ ಗೂಗೆಯುಘನವೆಂದು ಕರೆವರೆ ಜ್ಞಾನಿಗಳುತನುಮನದಭಿಮಾನವನು ಬಿಟ್ಟರಾಯಿತೆಘನವಾದ ವೈರಾಗ್ಯವಲ್ಲ ನೋಡಿತನುಮನದಭಿಮಾನವನು ಬಿಟ್ಟುಕುನ್ನಿ ತಾ ಮನೆಮನೆ ತಿರುಗದೆ ಅನುಗಾಲವುಘನಮಹಿಮ ಚೆಲ್ವ ಗೋಪಾಲವಿಠಲನ್ನನೆನೆದು ಏಕಾಂತದಲಿ ನಿರ್ಮಲ ಮನನಾಗೊ ೩

ಅಟ್ಟತಾಳ
ರಾಗ ಭೋಗಂಗಳು ಆಗದೆ ಇರಲ್ಯಾಕೆಯಾಗಂಗಳನು ಮಾಡಿ ಹರಿಗರ್ಪಿಸಿ ಸಮ-ಭಾಗವೆರಡು ಹರಿಯಿಂದಾದುದು ಎಂದುಭೋಗಿಸುತಿಪ್ಪುದೆ ವೈರಾಗ್ಯ ವೈರಾಗ್ಯಕಾಗೆಯಂತೆ ಮೈಯ ಕರ್ರಗೆ ಮಾಡಿನ್ನುರೋಗ ಬಂದೆಮ್ಮೆಯಂತೆ ನಾಮ ಬರಕೊಂಡುಭೋಗದ ವಸ್ತು ಪರಿತ್ಯಾಗವ ಮಾಡಿನ್ನುಆಗುವ ಕಾರ್ಯಗಳಾಗುತ್ತಲಿರೆ ಅಂತೆಹೇಗೆ ಜನರು ಕಾಂಬ ಹಾಗೆವೆ ಬಾಹಿರ ವೈ-ರಾಗ್ಯವನ್ನು ಮಾಡೆ ವೈರಾಗ್ಯವಲ್ಲವೊನಾಗಶಯನ ನಮ್ಮ ಗೋಪಾಲವಿಠಲ ಸಮ್ಮ-ತಾಗಿ ಉಣಿಸಿದ್ದುಂಡು ಇಪ್ಪುದೆ ವೈರಾಗ್ಯ ೪

ಆದಿತಾಳ
ಧನವ ಕಟ್ಟಿದ ಚೀಲ ಧಾನ್ಯ ತುಂಬಿದ ಗೋಣಿಪುಣುಗು ಬೆಕ್ಕಿನಂತೆ ಪುಣ್ಯಾತ್ಮರಘದಂತೆಒಣಗಿದ ಗೋಡೆಗೆ ಹರಳು ಮೀಟಿದಂತೆಉಣುವ ಜಿಹ್ವೆಗೆ ಕೈ ಅನುಕೂಲವಾದಂತೆಮನಸಿಗೆ ಹರುಷವು ಮಾಧವ ಮಾಡಿಸಿದ್ದುತನುವಿಗೆ ಸುಖವೆಂದು ತಿಳಿದು ಕೆಡದಲೇವೆಗುಣಿಸುತ ಅಲ್ಲಲ್ಲಿ ಗುಣಗಳ ತಿಳಿದು ಹರಿಯನೆನೆದು ನೆನೆದು ದಿನಗಳೆವುದೆ ವೈರಾಗ್ಯಮುನಿನುತ ಸಿರಿ ಗೋಪಾಲವಿಠಲನುಇನಿತೀಪರಿಯಿಂದ ಒಳಗಿದ್ದು ಪೊರೆವನು ೫

ಜತೆ
ಅರಿಯದ ವೈರಾಗ್ಯ ಹರಹಿಕೊಂಬುದಕಿಂತಾರಿತು ಮೊರೆಹೋಗಿರೊ ಗೋಪಾಲವಿಠಲನ್ನ

ಅದ್ವೈತಿಗಳ ಖಂಡನೆ
೧೪೩
ಸುಳಾದಿ
ಧ್ರುವತಾಳ
ಸಾಕಾರ ಹರಿಗೆ ನಿರಾಕಾರನೆಂಬಿ ನೀನುಯಾಕೊ ಕುವಾದಿ ಗರುವಿಕಿತನವು ಏನೊಏಕವಾಗಿ ಸುರರು ಅಸುರರು ಕೊಂಡಾಡಿ ಕೂಡಿಕೊಂಡು ಇನ್ನುಆ ಕಲಶದಮೃತ ನೀ ಕುಡಿ ತಾ ಕುಡೆಂಬೊಆ ಕಾಲದಲಿನ್ನು ಸ್ತ್ರೀಯಾಕಾರವಾಗೆ ಹರಿಆಕಾರಕ್ಕಸುರರು ಮೋಹಕರಾಗಲಿಲ್ಲವೆಸಾಕಲ್ಯ ಗುಣನಿಗೆ ನಾಲ್ಕೆರಡು ಗುಣವೆಂಬಯಾಕೆ ನಿನ್ನದು ಇಂಥ ಪೋಕತನವು ಬಿಡೆ ಲೋಕದೋಲಿದ್ದಂಥ ನಾನಾ ಕುಪದಾರ್ಥದಿಆಕಾರ ಹರಿಗುಣ ನೀ ಕೇಳೊ ಮೂರ್ಖಜೀವಸಾಕಲ್ಯ ನಿರ್ದೋಷಗೆ ನೀ ಕಲ್ಪಿಸಿ ವಿದೋಷನೀ ಕಲಿ ರಾವಣನ್ನ ಕೊಂದ ಈ ಕಲ್ಪಣದೋಷ ?ತಾ ಕಳೆವೆನೆಂದು ರಾಮ ಬೇಕಾಗಿ ಲಿಂಗವನ್ನುಆಕಾರ ಮಾಡಿದನೆಂಬಿ ಈ ಕುಟಿಲತನಗಳ್ಯಾಕೊ ನಿನಗೆ ಇನ್ನುಬೇಕಾಗಿಲ್ಲೊ ನಿನಗೆ ಲೋಕಪಾಲಕನ ಕೂಡ ಈ ಕಠಿಣ ವ್ರತಗಳುಈ ಕಲಿಯುಗವಿಲ್ಲ ಅಪ್ರಾಕೃತದಲ್ಲಿತಾ ಕಳದ್ದೆಲ್ಲರಲ್ಲಿ ಏಕಮೇವನಾಗಿಪ್ಪಸಾಕಲ್ಯ ಸುಖನಿಗೆ ತಾ ಕಳಕೊಂಡು ಸೀತೆಆಕಾರ ಕಾಣೆನೆಂದು ಶೋಕಿಸಿದನೆಂತೆಂಬೊಈ ಕಪಟತನವು ಸಾಕುಮಾಡಲಾರೆಯಸೋಕಿದ ಮಾತ್ರ ಶಿಲೆ ಆಕಾರಾದಳು ಅಹಲ್ಯಾಪ್ರಾಕೃತನೆಂಬಿ ನೀ ಅಪ್ರಾಕೃತ ಹರಿಯನ್ನಜೋಕೆಲಿ ನೀನು ಬದುಕಲಾರೆಯ ಹೇಗೆಆ ಖಳನು ಕಂದನ ತಾ ಕೊಲ್ಲುತಿರಲಾಗಿಏ ಕಾಯೊ ಹರಿ ಎನ್ನೆ ತಾ ತಿಳಿದಾಕ್ಷಣದಿಹೂಕರಿಸಿ ಕಂಬದಿಂದ ತಾ ಪ್ರಕಟಿಸಿತು ನಾದನೀ ಕಾಣಲಿಲ್ಲ ಚಾರ್ವಾಕ ಅಯೋಗ್ಯ ಭ್ರಷ್ಟಸಾಕಲ್ಯ ಬಲಾಢ್ಯನ್ನ ಆ ಕಂಸ ಕುಬುಜೆಯನ್ನುಗೋಕುಲ ಪೊಕ್ಕನೆಂಬಿ ಈ ಕಪಟತನವೇನೊಆಕಾರವನು ಹರಿಯ ನೀಕರಿಸಲಾಗಿನ್ನುತಾರಕದಿ ಶಸ್ತ್ರಿಲ್ಲದೆ ಆ ಕಿರೀಟಿಗೆವೆ ತಾನೆ ಸಾಕಾರವಾಗಿ ಹರಿಆಕಳು ಗಳಿಸಿದ ಪಾಕಶಾಸನನು ಗರು-ವಿಕೆತನದಲಿ ಆಕಳ ಕಾಯುವನೆಂದ-ನೇಕ ವೃಷ್ಟಿಗರೆಯೆ ತಾ ಕಾಣುತಲೆ ಬೆರಳನಖದಿಂದಲಿ ಗಿರಿಯ ಆಕಾಶಕ್ಕೆ ಮೀಟಿದ್ದುಸಾಕಿದ ಬಾಲಕರ ಸಾಕಲ್ಯಜ್ಞಾನಭರಿತ ಗೋಪಾಲವಿಠಲ ಅನ-ನ್ಯ ಕಾಲದೈವ ಕಾಣೊ ಶೋಕರಹಿತರಂಗ ೧

ಮಠ್ಯತಾಳ
ಹರಿ ಸರ್ವೋತ್ತಮ ಸಿರಿ ಆತನ ರಾಣಿಪರಮೇಷ್ಠಿ ಮಗನು ಹರ ಮೊಮ್ಮಗ ಹರಿಗೆಉರಗ ಮಂಚವು ಇನ್ನು ಗರುಡ ಏರೋರಥವುಪುರುಹೂತ ಸುರರೆಲ್ಲ ಪರಿವಾರವು ಹರಿಗೆಮರಳಿ ಮೂರುದಿನ ದೊರೆಯದಿದ್ದರೆ ನೀರುನರಕನಾರುವ ಮನುಜ ಹರಿ ನೀನಾಗುವಿಯಾಬರ ಬಂದರೆ ನೀನು ಬರಿದೆ ಮೂರಾರು ದಿನದೊರೆಯದಿದ್ದರೆ ಅನ್ನ ಒರಲಿ ಸಾಯುವಂಥಮರುಳು ಮಾನವ ನೀನು ಹರಿಗೆ ಸರಿಯೆಂತೊಅರಿತು ನೀನು ಬದುಕೊ ನರಕವ ಬೀಳಬೇಡಹರಿದ್ರೋಹಿಗಳ ಕಂಡು ಧರಿಸನು ಯಮ ತಾನುದುರಿತ ಸಂಹಾರಕ ಗೋಪಾಲವಿಠಲನ್ನದೊರೆಯೆಂದು ತಿಳಿದು ಧರೆಯ ಮೇಲಿರು ಇನ್ನು ೨

ತ್ರಿಪುಟತಾಳ
ಮರುಳು ಮಾನವ ಕೇಳೊ ಸರಿಯಾದರೆ ನೀ ಇನ್ನುಹರಿ ಚರಿತೆ ನಿನ್ನಲ್ಲಿ ಇರತೋರೆಯ ನೀನೊಂದುಕರಿಯು ನಕ್ರಗೆ ಸಿಲುಕಿ ಮೊರೆ ಇಡಲಾಗಿನ್ನುಹರಿ ವೇಗನೆ ಪೋಗಿನ್ನು ಸೆರೆಯ ಬಿಡಿಸಿದನುಸರ್ರನೆ ನೀನು ಒಂದು ನೆರಮನೆ ಝಗಡವಹರಿದು ಬರಲು ಭಯ ಮರುಳು ಮನುಜನೆ ನೀಹರಿ ಕಾಳಿಂಗನ ಏರಿ ಭರದಿಂದ ಕುಣಿದನುತಿರುಗಿ ನೀನು ಒಂದು ಉರಗನ್ನ ಪಿಡಿವೆಯಾಹರಿ ಪೊಕ್ಕಳಿಂದಲಿ ಹಿರಣ್ಯಗರ್ಭನ ಪೆತ್ತನರನೆ ನೀನು ಒಂದು ಇರುವೆಯ ಪೆತ್ತೆಯಹರಿಯ ರಾಣಿಯು ಸಿರಿ ಧರೆ ಎಲ್ಲ ಪೊರೆವಳುತಿರುಗಿ ತಿರುಗಿ ನೀನು ಕುರುಡನಾಗಿ ಕುಳ್ಳಿರೆಮರಳಿ ನಿನ್ನರಸಿನ್ನು ತಿರುಕೆ ಬೇಡುವಳಲ್ಲೊಶರಧಿ ಮಥÀನದಲ್ಲಿ ಗರಳ ಹೊರಡಲಾಗಿಹರಿಯ ಮಗನು ವಾಯು ಭರದಿಂದ ಮೆದ್ದನು ಕಾಣೊಮರುಳೆ ನಿನ್ನ ಮಗನು ಸರ್ರನೆ ವೃಶ್ಚಿಕಕ್ಕೆಹೊರಳಿ ಹೊರಳಿ ದಿಂಡುರುಳಿ ಅಳುವನಲ್ಲೊಹರಿಯ ಮಂಚವು ಇನ್ನು ಧರೆಯೆಲ್ಲ ಹೊತ್ತಿತುಮರುಳೆ ನೀನೊಂದು ಸತ್ತ ಕರುವಿನ ಹೊತ್ತೀಯಉರಿಗೆ ಅಂಜುವ ಮನುಜ ಹರಿ ನೀನಾಗಲಿ ಬಲ್ಲ್ಯಮರುಳೆ ಕಣ್ಣಿಗೆ ನಿದ್ರೆ ಬರುವುದು ಅರಿ ನೀನುಹರಿ ನಾನೆಂಬಂಥÀಪರಿ ಆವುದು ತೋರೊತರವಲ್ಲ ನಿನಗಿದು ಕುರಿ ಹಿಂಗಾದೆಪರಮದಯಾಳು ಗೋಪಾಲವಿಠಲರೇಯಸ್ವರಮಣ ಶ್ರುತಿಪಾದ್ಯ ಜರಾಮರಣರಹಿತ ೩

ಅಟ್ಟತಾಳ
ಹರಿದ್ರೋಹಿಗಳು ಜರಾಸಂಧ ಹಿರಣ್ಯಾಕ್ಷದುರ್ಯೋಧನರೆಲ್ಲ ತೆರನೇನಾದರು ನೋಡುಹರಿಯ ಕೂಡ ಕರಿಯು ಮರಳಿ ವಕ್ಕರಿಸಲುಇರುವುದೊಂದು ಇನ್ನು ಧರೆಯ ಮೇಲೆ ತಾನೀಗಬರಿದೆ ನೀನು ವ್ಯರ್ಥ ನಿರಯವ ಹೊಗಬೇಡಹರಿಯನ್ನೆ ಭಜಿಸಿದವರ ಭಾಗ್ಯವ ನೋಡುಹರಿ ಸರ್ವೋತ್ತಮನೆಂದ ತರಳ ಪ್ರಹ್ಲಾದಂಗೆಸರ್ರನೆ ಹಿಗ್ಗುತ ತವರು ಮನೆಯಾಗಿ ಪೊರೆದಹರಿಭಕ್ತರಾದಂಥ ಕರಿರಾಜ ಧ್ರುವರಾಯವರ ವಿಭೀಷಣ ಭೃಗು ಸುರಮುನಿ ನಾರದಪರಿ ಪರಿಯಲ್ಲಿ ಇನ್ನು ಹರಿಯನ್ನೆ ಕೊಂಡಾಡಿಸಿರಿ ಸಂಪತ್ತುಗಳುಳ್ಳ ದೊರೆ ಆದರು ನೋಡೊಹರಿಗೆ ಭೃತ್ಯನೆಂದು ಸ್ಮರಿಸಿದ ಮನುಜಂಗೆಪರಗತಿ ಸಾಧನ ದೊರಕೊಂಬುವುದು ಕಾಣೊಹರಿಯು ನಾನು ಎಲ್ಲ ಸರಿಯೆಂದವರಿಗಿನ್ನುನರಕ ತಪ್ಪದು ಎಂದು ಶ್ರುತಿ ಸಾರುತಲಿದೆಕರುಣಾಕರ ರಂಗ ಗೋಪಾಲವಿಠಲನ್ನಸ್ಮರಣೆ ಮಾತ್ರಲಿಂದ ದುರಿತ ದೂರಹುದೊ ೪

ಆದಿತಾಳ
ಬಹಳ ಪರಿ ತಿಳಿ ಹೇಳಿದರನ್ನ ನಿನ್ನಖೂಳ ಮತವ ಬಿಡೆ ಬಾಳಲಾರೆಯೊ ನೀನುತಾಳರು ನಿನ್ನ ಯಮನಾಳು ಕಂಡರೆ ಇನ್ನುಸೀಳೋರು ಜಿಹ್ವೆಯ ಕೀಳೋರು ಕಣ್ಣನುಹೋಳು ಮಾಡೋರು ತಲೆ ಆಳಾಗದಂತೆ ನಿನ್ನಹೂಳೋರು ಕ್ರಿಮಿಕೊಂಡದೊಳು ನಿನ್ನೊಯಿದುಕೇಳದೆ ಎನ್ನ ಮಾತು ಏಳಿಲ ಮಾಡಿದರೆಹಾಳಾಗಿ ಹೋಗು ನಿನ್ನ ಕಾಲ ಮುಂದಾಗಿ ಬೇಗಸೊಳೆ ಶೃಂಗಾರ ದೇಹ ವೇಳೆ ಮೀರಿದ ಮೇಲೆಕಾಲ ಅರಗಳಿಗೆ ಇಳೆಯೊಳಿರದಿನ್ನುಗಾಳಿಯಂತಲಿ ತಿಂದು ಆಳೋ ದೊರೆಗೆ ಸಮ-ನಾಳು ಎಂಬೊದು ಹೀಯಾಳಿತನವು ಏನೊಗೋಳು ತಪ್ಪದು ನರಕ ಬೀಳೋದು ನೀ ಸತ್ಯಗಾಳಿ ದೇಹವ ನೆಚ್ಚಿ ಖೂಳ ಕೆಡಲಿಬೇಡಕಾಳಿಮರ್ದನ ರಂಗ ಗೋಪಾಲವಿಠಲಂಗೆಊಳಿಗನಾಗಿನ್ನು ಬಾಳೆಲೊ ಮನುಜ ೫

ಜತೆ
ಹರಿ ಸರ್ವೋತ್ತಮ ಮರೆತರೆ ಗುರುವೆನ್ನುಸ್ವರೂಪ ಸುಖವ ಕೊಡುವ ಗೋಪಾಲವಿಠಲ

ಶ್ರೀಹರಿ ಸರ್ವವ್ಯಾಪ್ತ
೧೦೬
ಸುಳಾದಿ
ಧ್ರುವತಾಳ
ಸಿರಿದೇವಿ ಅರಸನೆ ಶ್ರೀಕೃಷ್ಣ ನಮೋ ನಮೋಸರಸಿಜಾಸನಪಿತ ನಿನಗೆ ನಮೋಹರನಂತರ್ಗತಮೂರ್ತಿ ಸಂಕರ್ಷಣನೆ ನಮೋಪುರುಹೂತಪಾಲಕ ಉಪೇಂದ್ರ ನಮೋ ನಮೋತರುಣಿಯಂತರ್ಗತ ಶ್ರೀನಾರಾಯಣನೆ ನಮೋವರ ಶಶಿ ಅಂತರ್ಗತ ದಧಿ ವಾಮನ ನಮೋಸಿರಿ ಭಾಗೀರಥಿ ಪೆತ್ತ ವಾಸುದೇವನೆ ನಮೋಸುರರ ಭೂಸುರರೊಡೆಯ ಶ್ರೀಹರಿ ನಮೋ ನಮೋಕರುಣಾಕರರಂಗ ಗೋಪಾಲವಿಠಲ ನಿನ್ನಪರಿವಾರ ಮೂರ್ತಿಗಳಿಗೆ ನಮೋ ನಮೋ ನಮೋ ಎಂಬೆ ೧

ಮಠ್ಯತಾಳ
ಜನನಿ ಎಂದು ಒಮ್ಮೆ ಕರೆವೆ ಆನಯ್ಯ ನಿನ್ನಜನಕನೆಂದು ಒಮ್ಮೆ ಕರೆವೆನಯ್ಯನಿನ್ನ ಭೃತ್ಯನೆಂದು ಒಮ್ಮೆ ಕರೆವೆನಯ್ಯನಿನ್ನ ಸೋದರನೆಂದು ಒಮ್ಮೆ ಕರೆವೆನಯ್ಯನಿನ್ನ ಬಂಧುವೆಂದು ಒಮ್ಮೆ ಕರೆವೆನಯ್ಯನಿನ್ನ ದಾತನೆಂದು ಒಮ್ಮೆ ಕರೆವೆನಯ್ಯಎನ್ನ ಇಷ್ಟದೈವ ಗೋಪಾಲವಿಠಲನಿನ್ನನು ಎನ್ನವಯವಗಳಿಗೆ ನೆನೆವೆ ೨

ರೂಪಕತಾಳ
ನಿನ್ನನ್ನೇವೆ ಎನ್ನ ಶಿರಸು ಎಂದು ಕರೆವೆನಿನ್ನನ್ನೇವೆ ಎನ್ನ ನಯನವೆಂದು ಕರೆವೆನಿನ್ನನ್ನೇವೆ ಎನ್ನ ಕರ್ಮವೆಂದು ಕರೆವೆನಿನ್ನನ್ನೇವೆ ಎನ್ನ ನಾಸಿಕವೆಂದು ಕರೆವೆನಿನ್ನನ್ನೇವೆ ಎನ್ನ ವದನ ಎಂದು ಕರೆವೆನಿನ್ನನ್ನೇವೆ ಎನ್ನ ಜಿಹ್ವೆ ಎಂದು ಕರೆವೆನಿನ್ನನ್ನೇವೆ ಎನ್ನ ಭುಜವು ಎಂದು ಕರೆವೆನಿನ್ನನ್ನೇವೆ ಎನ್ನ ಬಾಹು ಎಂದು ಕರೆವೆನಿನ್ನನ್ನೇವೆ ಎನ್ನ ಕರಗಳೆಂದು ಕರೆವೆನಿನ್ನನ್ನೇವೆ ಎನ್ನ ಹೃದಯ ಎಂದು ಕರೆವೆನಿನ್ನನ್ನೇವೆ ಎನ್ನ ಊರು ಜಾನು ಎಂದು ಕರೆವೆನಿನ್ನನ್ನೇವೆ ಎನ್ನ ಪಾದವೆಂದು ಕರೆವೆನಿನ್ನನ್ನೇವೆ ಎನ್ನ ಸರ್ವವ್ಯಾಪಕನೆಂದುಬಣ್ಣಿಸಿ ಬಗೆಬಗೆಯಲಿ ನಾ ತಿಳಿಯುವೆಚಿನ್ಮಯಮೂರ್ತಿ ಗೋಪಾಲವಿಠಲನಿನ್ನನು ಎನ್ನವಯವಂಗಳಲ್ಲಿ ನೆನೆವೆನಿನ್ನವರ ಸಹಿತಾಗಿ ಎನ್ನಲಿ ಪರಿಪೂರ್ಣ ೩

ಝಂಪೆತಾಳ
ಸಪ್ತಾವರಣ ಕಾಯ ಪ್ರಾಕಾರ ಮನೆಯಲ್ಲಿಸಪ್ತಮದ್ವಾರಂಗಳಲ್ಲಿ ನೀನುಸಪ್ತಮರೂಪದಿ ತನ್ನಿಯಾಮಕನಾಗಿವ್ಯಾಪ್ತಿಸಿ ಅಲ್ಲಿ ಗುಪ್ತನಾಗಿತಪ್ತ ಕಾಂಚನದಂತೆ ಪೊಳೆವುತ್ತ ಸಿರಿಸಹಿತಗುಪ್ತ ತಾ ಗುಣಬಂಧನಂತೆ ನೀನುಶಪ್ತ ಮಾಡಿ ಸೃಷ್ಟಿಸ್ಥಿತಿಲಯಗಳನು ನೀನುಕ್ಲುಪ್ತ ಮೀರದಲೇವೆ ಮಾಡಿಸುವಿಸುಪ್ತ ಜಾಗ್ರತ ಸ್ವಪ್ನಾವಸ್ಥೆ ಕಾಲಂಗಳಲ್ಲಿಆಪ್ತನಾಗಿ ಆದರಿಸಿ ಎನ್ನಸಪ್ತೆರಡು ಭುವನದೊಡೆಯ ಗೋಪಾಲವಿಠಲಕುದಿತದೊಳಗೆ ಎನ್ನ ಕೂಡಿಸದೆ ಪೊರೆಯೊ ೪

ತ್ರಿಪುಟತಾಳ
ನಿನ್ನ ಮತ್ಸ್ಯರೂಪ ಎನ್ನರಿಷ್ಟವ ಕಳೆವೆನಿನ್ನ ಕೂರ್ಮರೂಪ ಎನ್ನ ಭಾರ ವಹಿಸುವೆನಿನ್ನ ವರಾಹರೂಪ ಎನಗೆ ವರವಾಗಲಿನಿನ್ನ ನರಮೃಗರೂಪ ಎನ್ನ ಅರಿಗಳ ಸೀಳಲಿನಿನ್ನ ವಾಮನರೂಪ ಎನ್ನ ಸೇವೆಗೊಳಲಿನಿನ್ನ ಭಾರ್ಗವ ರೂಪ ಎನ್ನ ಅಷ್ಟಮದ ಕಡಿಯಲಿನಿನ್ನ ರಾಮರೂಪ ಎನ್ನ ಸ್ಮರಣೆಗೊದಗಲಿನಿನ್ನ ಕೃಷ್ಣರೂಪ ಎನ್ನಭೀಷ್ಟನೀಯಲಿನಿನ್ನ ಬೌದ್ಧರೂಪ ಎನ್ನ ವಿಷಯ ಬಿಡಿಸಲಿನಿನ್ನ ಕಲ್ಕಿರೂಪವು ಎನ್ನ ಮನನಿಲ್ಲಿಸಲಿನಿನ್ನನಂತ ರೂಪವು ಎನ್ನನುದ್ಧರಿಸಲಿಚಿನ್ಮಯ ಮೂರುತಿ ಗೋಪಾಲವಿಠಲನಿನ್ನ ತಿಳಿವ ಧನ್ಯ ಇನ್ನು ಮಾಡಿದ್ದು ಪುಣ್ಯ ೫

ಅಟ್ಟತಾಳ
ಕಣ್ಣು ಮಾಡುವ ಕಾರ್ಯ ಕರ್ಣ ಮಾಡುವುವೊ ನಿನ್ನಕರ್ಣ ಮಾಡುವ ಕಾರ್ಯ ಕಣ್ಣು ಮಾಡುವುದಯ್ಯಬೆನ್ನು ಮಾಡುವ ಕಾರ್ಯ ವದನ ಮಾಡುವುದುನಿನ್ನ ವದನ ಮಾಡುವ ಕಾರ್ಯ ಬೆನ್ನು ಮಾಡುವುದುನಿನ್ನ ಚರಣ ಮಾಡುವ ಕಾರ್ಯ ಕರವು ಮಾಡುವುದುನಿನ್ನ ಕರವು ಮಾಡುವ ಕಾರ್ಯ ಚರಣ ಮಾಡುವುದಿನ್ನುನಿನ್ನ ಅವಯವಂಗಳು ಎಲ್ಲಿ ನೋಡಲು ಅಕ್ಷಿನಿನ್ನ ಅವಯವಂಗಳ ರೂಪ ಅನಂತಾನಂತವಾಗಿ ತೋರುವುವುಇನ್ನು ಮೊದಲು ಕೊನೆ ಬಣ್ಣಿಸಿ ನೋಡಲುಎನ್ನಿಂದಲೊಶವೆ ಚಿನ್ಮಯಚಿದ್ರೂಪಾನ್ನಂತಮಹಿಮ ಗೋಪಾಲವಿಠಲರೇಯನಿನ್ನ ನೋಡುವರೊಳಗೆ ಎನ್ನನು ಇಡಿಸೊ ೬

ಆದಿತಾಳ
ಅನಂತ ಜನರು ನಿನ್ನ ನೋಡಲುನ್ಯೂನವಾಗದು ನಿನ್ನ ಕಾಂತಿಗೆಅನಂತ ಜನರು ನಿನ್ನ ಪಾಡಲುನ್ಯೂನವಾಗದು ನಿನ್ನ ನಾಮಕ್ಕೆಅನಂತ ಜನರು ನಿನ್ನ ಬೇಡಲುನ್ಯೂನವಾಗದು ನಿನ್ನ ವೇಷಕ್ಕೆಅನಂತ ಜನರು ನಿನ್ನ ಸೇವಿಸೆನ್ಯೂನವಾಗದು ನಿನ್ನ ಸೇವೆಯುಅನಂತ ಜನಕೆ ವರವಿತ್ತರೆನ್ಯೂನವಾಗದು ನಿನ್ನ ಬಲಕೆಅನಂತನೆಂದು ಕರೆದವರಿಗೆಅನಂತನಾಗಿ ತೋರುತಲಿಪ್ಪಾನಂತ ಜನಕೆ ಅನಂತಕರ್ಮಾನಂತ ಜನಕೆ ಅನಂತಫಲವುಅನಂತ ಗುಣನಿಧಿ ಗೋಪಾಲವಿಠಲಾನಂತ ಕಾಲಕ್ಕೆ ನೀನೆ ಗತಿಯೊ7

ಜತೆ
ನಿನಗೆ ನಿನ್ನ ಪರಿವಾರ ಮೂರ್ತಿಗಳಿಗೆವಿನಯದಿ ನಮಿಸಿದೆ ಗೋಪಾಲವಿಠಲ ಕಾಯೊ

ಇದೊಂದು ನಿಂದಾಸ್ತುತಿ
೪೮
ಸುಳಾದಿ
ಧ್ರುವತಾಳ
ಸೃಷ್ಟಿಗೊಡೆಯ ಕೇಳೆಂದಷ್ಟು ನಾ ತುತಿಸಲುದೃಷ್ಟಿಯಿಂದಲಿ ಎನ್ನಕಡೆಯೆ ನೋಡಲೊಲ್ಲೆಅಷ್ಟ ಸೌಭಾಗ್ಯವೆಂಬೋದೆಷ್ಟು ಮದವೊ ನಿನಗೆಗಟ್ಯಾಗಿ ನೀನಲ್ಲದನ್ಯರಿಲ್ಲವೆಂದರೆಸೊಟ್ಟ ತಿರುಹಿ ಮೊಗ ಅಟ್ಟವೇರುತಲಿದೆಎಷ್ಟಿಲ್ಲವೆಂದು ಕಣ್ಣ ಬಿಟ್ಟರಂಜುವನಲ್ಲಗಟ್ಟಿ ಭಕುತಿಪಾಶದಿ ಕಟ್ಟಿ ಎನ್ನುದರದೊಳುಇಟ್ಟುಕೊಂಬೆನೊ ಏ ಜಿಷ್ಣು ಸಖನೆ ಕೃಷ್ಣಭ್ರಷ್ಟನೆಂತೆಂದು ದೂರದೃಷ್ಟಿಲಿ ನೋಡಿದರೆಬಿಟ್ಟುಕೊಡೊ ಭಕ್ತವತ್ಸಲನೆಂಬ ಬಿರುದುಅಷ್ಟ ಸಂಪತ್ತು ಮತ್ತಷ್ಟು ಕೊಡು ಎಂದುಕಷ್ಟ ಬಡಿಸಿ ನಿನ್ನ ಕಾಡಿ ಬೇಡುವನಲ್ಲಕಷ್ಟ ಸಂಸಾರವೆಂಬೊ ಸುಳಿಯೊಳಗೆ ಎನ್ನಇಟ್ಟು ನೋಡೋದು ನಿನಗೆಷ್ಟು ಸುಖವೊ ಕಾಣೆಮೆಟ್ಟಿ ತುಳಿಯೊ ಬೆನ್ನಟ್ಟಿ ಬಾಹೊ ದುರಿತಕುಟ್ಟಿ ಬಿಸಾಡೊ ಅರಿಷ್ಟ ಸಂಸಾರಬೇರಸೃಷ್ಟ್ಯಾದ್ಯಷ್ಟಕರ್ತ ಗೋಪಾಲವಿಠಲರೇಯಸ್ಪಷ್ಟರೂಪವ ತೋರೊ ಮುಟ್ಟಿ ಪೂಜಿಸಲು ೧

ಮಠ್ಯತಾಳ
ಭಕುತರಿಗಾಗಿ ನೀ ಜಗವ ಸೃಷ್ಟಿಸಿದಯ್ಯಭಕುತರಿಗಾಗಿ ನೀ ಅವತಾರ ಮಾಡಿದಯ್ಯಭಕುತರು ನಿನ್ನನು ಭಜಿಸದಿದ್ದರೆ ದೇವಸಕಲಲೋಕರು ನಿನ್ನ ಅರಿಯುವರೆಂತೊಮುಕುತಿದಾಯಕ ಮೂಲದೈವನೆಂತೆಂಬೋದುಸಕಲಲೋಕಕೆ ಕರಿರಾಜ ತೋರಿಸಿದನುಉಕುತಿಗಳಿಂದಲಿ ತುತಿಸಲು ಬಾಹೋದುಪ್ರಕಟಮಾಡಿದಳಯ್ಯ ಶಕುತಳು ದ್ರೌಪದಿಸಕಲರಲ್ಲಿ ನೀನು ವ್ಯಾಪಕನೆಂಬೋದುಭಕುತ ಪ್ರಹ್ಲಾದ ಇರವ ತೋರಿಸಿದ ನರಭಕುತರಿಂದಲಿ ನೀನು ಭಕುತರಾಧೀನ ದೇವಭಕುತವತ್ಸಲ ನಮ್ಮ ಲಕುವಿಯ ರಮಣನೆವಿಖನಸಪತಿ ನಮ್ಮ ಗೋಪಾಲವಿಠಲರೇಯಭಕುತರ ಮುಂದೆ ನಿನ್ನ ಯುಕುತಿ ನಡೆಯದೊ ೨

ಝಂಪೆತಾಳ
ಶೃಂಗಾರಗದ್ದಿಗೆ ಬಂಗಾರಾಭರಣವಿಟ್ಟುರಂಗ ಒಲಿಯೊ ಎಂದು ಅಂಗೀಕರಿಸಲರಿಯೆಮಂಗಳ ಮೂರುತಿ ಮನವೆ ಕುಳ್ಳಿರುಪೀಠಗಂಗಾಜನಕನೆಂದೆನಿಸಿಕೊಂಬುದೆ ಸ್ನಾನಅಂಗನೆ ದ್ರೌಪದಿ ಅಭಿಮಾನರಕ್ಷಕಶೃಂಗಾರ ಬಿರುದು ವಸನಂಗಳು ನಿನಗೆಅಂಗವೆ ಕೊರಡು ಶ್ರೀಗಂಧ ತೇದಿಡುವೆನೊಕಂಗಳೆರಡು ದೀಪ ಕರವುಭಯ ಚಾಮರಅಂಗದೊಳಿದ್ದಷ್ಟಕಮಲವೆ ಕುಸುಮವುಹಿಂಗದೆನ್ನಯ ಕಿಂಚಿದ್ಭಕುತಿಯೆ ನೈವೇದ್ಯರಂಗ ದಿನದಿನದಿ ಮಾಡಿಸಿದ ಕರ್ಮವೆ ಕಷ್ಟತುಂಗವಿಕ್ರಮ ಜಠರಾಗ್ನಿಯೆ ಆರತಿ ತು-ರಂಗವದನ ಸರ್ವಾಂಗಸಮರ್ಪಿಸಿ ಕ-ರಂಗಳ ಮುಗಿವೆ ಎನ್ನಂತರಂಗದಿ ನಿಲ್ಲೊಸ್ವಾಂಗಾಯನಾಮ ಗೋಪಾಲವಿಠಲರೇಯಸಂಗವಿಡಿಸೊ ನಿನ್ನ ಡಿಂಗರಿಗರೊಡನೆ ೩

ತ್ರಿಪುಟತಾಳ
ಒಡೆಯ ನಿನಗೆ ಮೊರೆಯಿಡುತಲಿದ್ದರೆ ಎನ್ನ-ಕಡೆಗೆ ನೋಡಲೊಲ್ಲೆ ಬಡಿವಾರ ನಿನಗೆಷ್ಟೊತಡೆಯದೆ ನಾನೊಂದು ನುಡಿಯ ನುಡಿವೆನಯ್ಯಕಡುಗುಷ್ಟು ನಾರುತ ಮಡುವಿನೊಳಗೆ ಸೇರುಬಿಡದೆ ಬೆಟ್ಟವಪೊತ್ತು ಕಡಲೊಳಗಿರು ನೀನುಅಡವಿಸೂಕರಜನ್ಮ ಬಿಡದೆ ಬರಲಿ ನಿನಗೆಕೆಡಲಿ ನಿನ್ನರೂಪ ಕಡುಘೋರನಾಗೆಲೊಒಡಲಿಗಿಲ್ಲದೆ ನೀನು ತಿರುಕೆಯನು ಬೇಡೊಕೊಡಲಿಯ ಪಿಡಿದು ನೀನಡವಿ ಸಂಚಾರನಾಗೊಮಡದಿಯ ಕಳಕೊಂಡು ಜಡೆಯ ಧರಿಸೊ ನೀನುತುಡುಗ ದನಗಾವನೆಂದು ನುಡಿಯಲಿ ಜನರೆಲ್ಲಉಡುವಸ್ತ್ರವಿಲ್ಲದೆ ಬತ್ತಲಾಗಿ ನಿಲ್ಲೊಕಡುವೇಗದಲಿ ನೀನು ಕಲ್ಕಿರೂಪನಾಗೊತಡೆಯದೆ ವರಗಳ ಕೊಡುವವನೆಂತೆಂದುನುಡಿದೆನೊ ನಾನಿಂಥ ಭಿಡಿಯ ಮಾತುಗಳಕಡುದಯಾಸಾಗರ ಗೋಪಾಲವಿಠಲರೇಯಹಿಡಿದು ಬಿಡೆನೊ ನಿನ್ನ ಬಡವರಾಧಾರಿ ೪

ಆದಿತಾಳ
ಈ ಪರಿ ನುಡಿದರೆ ಪಾಪವೆಂಬೋರೆ ಹರಿಯೆಪಾಪವೆಲ್ಲಿಹುದೊ ನಿನ್ನ ವ್ಯಾಪಾರ ಇಂಥಾದ್ದುಪಾಪದ ಕಡಲಿನ ಕೂಪದೊಳಗೆ ಬಿದ್ದುತಾಪಕ್ಕಾರದೆ ನಿನ್ನ ಕೋಪದಿಂದಲಿ ನುಡಿದೆಪಾಪಿ ಎಂತೆಂದು ಎನ್ನ ಹೋಪನೂಕಲು ಪತಿ-ತಪಾವನ್ನನೆಂಬೊ ಬಿರುದುಂಟೆ ದೇವಮೋಪಾಗಿದ್ದೇನೆ ನಾನು ಕಾಮಕ್ರೋಧದೊಳಗೆರಾಪುಮಾಡದೆ ದೋಷ ಉಪ್ಫೆಂದು ಹಾರಿಸಿಕುಪಥವ ತಪ್ಪಿಸಿ ಸುಪಥವ ತೋರಿಸೊಶ್ರೀಪತಿ ಎನ್ನಮೇಲೆ ನೀ ಪ್ರೀತಿಯನ್ನೆ ಮಾಡೊಅಪಾರ ನಾಮಗಳ ಲೇಪಿಸೆನ್ನ ಜಿಹ್ವೆಗೆಪಾಪಗಳನೆ ಕಳೆಯೊ ದ್ರೌಪದಿಮಾನದೊಡೆಯಭಾಪುರೆ ನಮ್ಮ ಗೋಪಾಲವಿಠಲರೇಯನೀ ಪರದೇವತೆಂದು ನಾ ಪಾದ ಪಿಡಿದೆ ೫

ಜತೆ
ಎಂದಿಗಾದರು ನಿನ್ನ ಬಳಿಗೆ ಬಾಹೋದೆ ಸತ್ಯಇಂದೆ ಮುಂದಕೆ ಕರೆಯೊ ಗೋಪಾಲವಿಠಲ

ಹರಿ ಇಟ್ಟ ಹಾಗೆ ಜೀವರು ಇರಬೇಕು
೧೪೫
ಸುಳಾದಿ
ಧ್ರುವತಾಳ
ಹರಿ ಮಾಡಿದಂತೆ ಎಲ್ಲ ಮಾಡುವೆನಯ್ಯ ನಾನುಹರಿ ನೋಡಿಸಿದುದೆಲ್ಲ ನೋಡುವೆನಯ್ಯ ನಾನುಹರಿ ಕೇಳಿಸಿದರಿನ್ನು ಕೇಳುವೆನಯ್ಯ ನಾನುಹರಿ ಉಂಡರಾಯಿತಿನ್ನು ಉಣುವೆನಯ್ಯ ನಾನುಹರಿ ನುಡಿಸಲಾಗಿನ್ನು ನುಡಿವೆನಯ್ಯ ನಾನುಹರಿ ಪಿಡಿದರೆ ನಾನು ಪಿಡಿವೆನಯ್ಯ ನಾನಾಕು ?ಹರಿ ಕೊಡಿಸಿದಂತೆ ಆನು ಕೊಡುವೆ ಏನಾದದ್ದುಹರಿ ನಡೆಸಿದಡಾನು ನಡೆವೆ ನಾನಾ ಕಡೆಗೆಹರಿ ನಿಂತಡಾಯಿತೆ ನಿಲ್ಲುವೆನಯ್ಯ ನಾನುಹರಿಯು ಮನಸ್ಸು ಮಾಡೆ ಮನಸ್ಸು ಮಾಡುವೆ ನಾನುಹರಿಯು ದ್ವೇಷವು ಮಾಡೆ ಆನು ದ್ವೇಷವು ಮಾಳ್ಪೆಹರಿ ಮೋಹಿತನಾಗೆ ಆನು ಮೋಹಿಪೆನಯ್ಯಹರಿ ಜಾಗ್ರತನಾಗೆ ಆನು ಜಾಗ್ರತನಾಹೆಹರಿ ಮರೆದಡಾಯಿತೆ ಮರೆವುವೆನಯ್ಯ ನಾನುಹರಿ ನೆನೆಸಲ್ಯೆನಗೆ ನೆನಪು ಆಗುವುದುಹರಿ ಕಾಮನಮಾಡೆ ಆನು ಕಾಮನ ಮಾಳ್ಪೆಹರಿ ಇಚ್ಛೆಗೊಂದಕನ ಪ್ರತಿಕೂಲನಲ್ಲ ನಾನುಹರಿ ಪೂರ್ಣಶಕ್ತ ಗುಣಶರಧಿ ಕಾಣಯ್ಯ ನಿರುತಹರಿ ನಿರ್ದೋಷ ಜ್ಞಾನಾನಂದ ಪರಿಪೂರ್ಣದೇವಹರಿ ಪೂರ್ಣಕಾಮ ಆನು ಅತ್ಯಂತ ಅಲ್ಪನೀರಹರಿಯು ಹೋದಾಗೆ ಎಲ್ಲ ತೃಣವು ಹೋಗುವುದಯ್ಯಹರಿಯೆ ಸ್ವತಂತ್ರ ಆನು ಅಸ್ವತಂತ್ರಹರಿ ಸರ್ವವ್ಯಾಪ್ತ ಮೂರ್ತಿ ಗೋಪಾಲವಿಠಲಹರಿಯೆ ಭಕುತರ ಮನದ ಸಿರಿಯೆ ಹೇ ಎನ್ನ ದೊರೆಯೆ ೧

ಮಠ್ಯತಾಳ
ಕರ್ತೃ ನಾನೆಂದರೆ ಹರಿಯ ಹೊರತಾಗಿನ್ನುವ್ಯರ್ಥ ನೋಡು ಏನು ಮಾಡಿದ ಕರ್ಮವುಮೃತ್ಯು ತನಗೆ ತಾನು ತಂದುಕೊಂಡವನಾಹಾರ್ತಿ ಅವನಿಗೆ ನಾಶವಾಗದಿನ್ನುಕರ್ತೃ ನಾನಲ್ಲವೆನೆ ಸಾಧನಕೆ ಫಲವೇನುಪ್ರತ್ಯಕ್ಷಕೆ ಬಾಧೆ ಮಿಥ್ಯಾ ಜ್ಞಾನಿಯು ಆವ ಕರ್ತೃತ್ವವೆಂಬೋದು ಜೀವನಿಷ್ಪವು ನೋಡುಶ್ರುತ್ಯರ್ಥಗಳಲ್ಲಿ ಸಿದ್ಧವಾಗಿದೆ ನೋಡುಮರ್ತು ಹರಿಯ ಮಹಿಮೆನರಿಯದೆ ಜೀವನುಸ್ಫೂರ್ತಿಯಿಲ್ಲದ ಅಪಕೀರ್ತಿವಂತನಾಹಕರ್ತೃ ಕಾರ್ಯತಾ ವಿಷ್ಣು ಗೋಪಾಲವಿಠಲನ್ನಾರ್ತವ ಧನ್ಯನೊ ಕರ್ತೃನೆಂಬುದರೊಳಗೆ ೨

ರೂಪಕತಾಳ
ಪೃಥಿವಿ ಮೇಲೆ ಒಂದು ರಥವೇರಿ ಬರಲಾಗಿರಥ ಬರುತಿದೆ ನೋಡು ಎಂಬರು ಜನರೆಲ್ಲರಥರಥಿಕರಿಬ್ಬರಿಗಾವಾಧಾರವು ಎಂಬಮತಿ ಮನದಲ್ಲಿ ಉಳ್ಳವರಾಗಿದ್ದರು ಸರಿಯೆಪೃಥಿವಿಯೆ ರಥ ಹೊತ್ತು ಬಾಹುದನ್ಯರ್ಯಾತಕ್ಕೆಪ್ರತಿತ ತೋರಿದರ್ಥ ಯತಾರ್ಥವೆನಬೇಡಿಮತಿ ಎರಡು ಪ್ರಕಾರ ಕರ್ತೃತ್ವದೊಳಗಾಗಿಸ್ಥಿತಿ ಅರಿತು ನೋಳ್ಪರು ಜ್ಞಾನಿಗಳುಖತಿಗೊಳದಿರಿ ಇನ್ನು ಕರ್ತೃತ್ವವೆಂಬುದುಜಿತವಾಗಿ ಜೀವ ಜಡಗಳಿಗನಾದಿ ಸಿದ್ಧಮತಿವುಳ್ಳ ಕರ್ತೃತ್ವ ಜಡದ ಸ್ಥಿತಿಸತತ ಜಡಚೇತನಕೆ ಕರ್ತನೆನಿಸಿ ಹರಿಯುಗತಿ ಅರಿತು ಅವರವರ ಪಥದಲಿಡುವಪತಿತಪಾವನ ರಂಗ ಗೋಪಾಲವಿಠಲಚತುರ ಕ್ರೀಡೆಯ ಮಾಳ್ಪ ಸರ್ವರೊಳಗೆ ನಿಂತು ೩

ಝಂಪೆತಾಳ
ಆತ್ಮ ಪರಮಾತ್ಮನ ವಿವೇಕ ಜ್ಞಾನವುಸೋತ್ತಮರ ಕರುಣದಿಂದಾಗಬೇಕುಸೋತ್ತಮರ ಪ್ರಸಾದವೆಂಬುವುದು ಗತಿಗಿನ್ನುಮತ್ತೆ ತ್ರಿರಾವರ್ತಿ ಆಗಬೇಕೂತ್ತಮ ಮಧ್ಯಮ ಅಧಮವಾಗಿ ಪ್ರಸಾದದಿಂಉತ್ತಮವಾದ ಗತಿ ಹೊಂದಿಸುವುದುಆತ್ಮ ತನ್ನ ಸ್ವರೂಪ ಜ್ಞಾನನೀವನೊಮತ್ತದೆ ಅಧಮ ಪ್ರಸಾದವೆನ್ನುಸತ್ವ ಕರ್ಮಗಳಲ್ಲಿ ಪ್ರವರ್ತನ ಮಾಳ್ಪಮತ್ತೆ ”ಏನಂ ಮೋಚಯಾಮಿ’’ ಎಂದುನಿತ್ಯ ಅನಿತ್ಯ ಜ್ಞಾನ ಆವಾಗ ಪುಟ್ಟುವುದುಮತ್ತೆ ಅವನೀಗ ಯಾತಕೆ ಸಲ್ಲಸೋತ್ತಮ ಗುರುವುಪದೇಶವೆಂಬುವುದು ಅವನಿಗೆಮತ್ತೆ ಅಶರೀರ ವಾಕ್ಯದಿ ಆಹುದುಪ್ರತ್ಯಕ್ಷ ಪೇಳರು ಅವನಿಗೆ ಇದು ನೋಡು ವಾಚಾಪ್ರಸಾದವೆಂದು ಕರೆಸೋದುಸತ್ಯಸಂಕಲ್ಪ ಗೋಪಾಲವಿಠಲ ತನ್ನ ಭ-ಕುತರ ಬಲ ಮಾಡದವರಿಗೊಲಿಯ ೪

ತ್ರಿಪುಟತಾಳ
ಒಂದು ಕರ್ಮವು ಮಾಡೆ ಅವರಿಗೆ ಅದರಲ್ಲೀಂದಿರೆ ಅಜಭವ ಪರಿವಾರ ಸಹವಾಗಿನಿಂದು ತನಗೆ ಕರ್ಮ ಮಾಡಿಸಿದರೆಂಬಚೆಂದದ ಸ್ಮ್ರತಿಯನ್ನು ಬಂದು ಒದಗಿದರೆಸಂದೇಹಸ್ಥನಾಗ ಸಂಸಾರಕೆ ದೂರಬಂಧಮೋಚಕ ಅದೆ ಮಧ್ಯಮ ಪ್ರಸಾದಸಂದರ್ಶನಪೂರ್ವ ಸ್ವಚ್ಛಾದಕಿಂತಲಿಹಿಂದಾಗುವುವು ಸಂಚಿತಾಗಾಮಿ ಕರ್ಮವುಮಂದಮತಿಯು ನಾಶ ಮೊದಲಿಗಿಂತಹಿಂದಾಗ ಈ ಮೇಲೆ ಹರಿಯ ದರುಶನದಲ್ಲ್ಯಾ-ನಂದಭರಿತನಾಗಿ ಸಂಚರಿಸುವಮುಂದೆ ಮುಂದತಿಶಯ ಸಮಾಧಿ ಸಾಧನಪೊಂದಿ ಕೂಡ್ರುವನಾಹ ಜಡನಂದದಿನಿಂದಿರದೆ ಬಾಹಿರ ಸ್ಮ್ರತಿಭೇರಿ ತಾಡಣವಾಗೆಒಂದೆ ಅವನ ವ್ಯಾಪಾರ ವೃತ್ತಿನಾಶಸಂದೇಹವಿಲ್ಲದಕೆ ಸದ್ಗುರು ಪ್ರಸಾದಚೆಂದವಗಾಯಿತೆಂದು ಅರಿವುದುವೃಂದಾರಕೇಂದ್ರ ಶ್ರೀಗೋಪಾಲವಿಠಲಒಂದು ಮಾತ್ರವು ಇಟ್ಟು ಸಕಲ ಸುಖಕೊಡುವ ೫

ಅಟ್ಟತಾಳ
ಉತ್ತಮ ಪ್ರಸಾದ ಮತ್ತೆ ಲಕ್ಷಣ ಕೇಳುಪ್ರತ್ಯಕ್ಷವು ನೋಡು ಆವಾವ ವಿಷಯದಿತತ್ವ ಸಂದೇಹವಿಲ್ಲ ಪ್ರಾರಬ್ಧಕರ್ಮವುಅತ್ಯಲ್ಪವಾಗಿನ್ನು ಕಡೆಗೆ ಆಗುವುದುಹತ್ತಿದ ಲಿಂಗವು ಅಕಾರ್ಯ ಕಾರ್ಯವುಎತ್ತ ನೋಡಿದರು ಹರಿಯ ರೂಪಗಳೆಂಬಚಿತ್ತ ವ್ಯಾಕುಲನಾಗ ಅಖಂಡ ಧ್ಯಾನದಿಸತ್ಯಲೋಕದಿ ವಾಸವಾಗಿ ಅನಂತರಮುಕ್ತನಾಗುವ ತಾನು ಹಿಂದೆ ನಾನಾ ಜನ್ಮಸುತ್ತಿಬಂದುದನೆಲ್ಲ ನೆನೆದು ತನ್ನ ಮನೋ-ವೃತ್ತಿ ನಾನಾಪರಿ ವ್ಯಭಿಚರಿಸಿದುದೆಲ್ಲಉತ್ತಮರ ಕೂಡ ಸುಖ ಪೇಳಿಕೊಳ್ಳುತಉತ್ಕಟವಾಗಿ ತಮಗಿಂದವರಿಗೆಮತ್ತೆ ತಮ್ಮೊಡನೆ ಭಕ್ತಿಯ ವೆಗ್ಗಳವ ಮಾ-ಡುತ್ತ ಆನಂದಭರಿತನಾಗುವನಾವಸತ್ಯ ಸಂಕಲ್ಪ ಗೋಪಾಲವಿಠಲನ್ನಭಕ್ತರಲ್ಲಿ ಭಕ್ತಿ ಮುಕ್ತಿ ಸಾಧನವೆ ೬

ಆದಿತಾಳ
ಹರಿ ಪರನೆನ್ನು ಹರಿವಾರ್ತೆಯ ಕೇಳು ಹರಿ ಮಾತುಗಳಾಡುಹರಿ ಮೂರ್ತಿಯ ನೋಡು ಹರಿ ಪೂಜೆಯ ಮಾಡುಹರಿಗಡ್ಡವ ಬೀಳು ಹರಿಪರನಾಗುಹರಿಭಕ್ತರ ಕೂಡು ಹರಿಯನ್ನೆ ಬೇಡುಹರಿಯ ಹೊರತಿನ್ನು ಹರಿಗೆ ಬೀಳದಿರುಹರಿಮಯದಿನ್ನು ಹರಿಗುಣವ ತಿಳಿಹರಿಯ ಭಕುತರಿಂದ ಹರಿಯ ಮರೆದರಘಳಿಗೆ ಇರಸಲ್ಲಹರಿಗರ್ಪಣ ಮಾಡು ಹರಿ ಮಾಡಿಸಿದ್ದೆಲ್ಲಹರಿಯನ್ನು ತಿಳಿ ಗುರುಗಳಲಿನ್ನುಹರಿ ಧೇನಿಸಿ ಗುರುವಿನ ಗುರುತು ಮಾಡುಹರಿ ಸರ್ವಕರ್ತೃ ಗೋಪಾಲವಿಠಲನ್ನಸ್ಮರಣೆಯು ಕ್ಲೇಶಹರ ಸುಖಕರ ೭

ಜತೆ
ನೋಡಿ ಮಾಡು ಕರ್ಮ ಫಲದಿ ವಿರಕ್ತನಾಗಿಬೇಡು ಗೋಪಾಲವಿಠಲನಂಘ್ರಿಗಳ ಸೇವಾ

ಎಲ್ಲಕ್ಕೂ ಹರಿಯೇ ಮೂಲವೆಂದರಿತವ ಜ್ಞಾನಿ
೧೦೭
ಸುಳಾದಿ
ಧ್ರುವತಾಳ
ಹರಿಯ ಸೇವಿಸುವವ ಅವ ಪಾಮರನೆ ಮರೆದುಹರಿಯ ಸೇವಿಸುವವ ಅವ ಪಾಮರನು ಅಲ್ಲೆಹರಿಯ ತಿಳಿಯದವನು ಅವನು ಜ್ಞಾನಿಯೆ ನೋಡಾಹರಿಯ ತಿಳಿದವ ಪೂರ್ಣ ಅವನಜ್ಞಾನಿಯೆ ನೋಡಾಹರಿಯ ಕರ್ತ ನಾ ಕರ್ತನಲ್ಲನೆಂದವ ಜ್ಞಾನಿಹರಿಕರ್ತೃ ನಾನು ಕರ್ತೃನೆಂದವನು ಜ್ಞಾನಿಯೆಹರಿಯೆ ಸ್ವತಂತ್ರ ನಾನಲ್ಲವೆಂದವ ಜ್ಞಾನಿಹರಿಯೆ ಸ್ವತಂತ್ರ ನಾನು ಸ್ವತಂತ್ರನೆಂದವ ಜ್ಞಾನಿಯೆಹರಿ ಮಾಡಿಸಲು ಮಾಡಿದೆನೆಂಬುವ ಜ್ಞಾನಿಹರಿ ಮಾಡಿ ಮಾಡಿಸಲು ಮಾಡಿದೆಂದವ ಜ್ಞಾನಿಹರಿ ಮಾಡೆನ್ನೆ ಮಾಡಿದೆನೆಂದವನು ಜ್ಞಾನಿಹರಿ ಮಾಡಿದರೆ ನಾ ಮಾಡೇನೆಂದವ ಜ್ಞಾನಿಯೆಹರಿಯೆ ಕೂಡ ನಾನು ಮಾಡಿದೆಂಬುವ ಜ್ಞಾನಿಯೆಹರಿಯೆ ಮಾಳ್ಪವ ನಾನ್ಯಾತಕಲ್ಲೆಂದವ ಜ್ಞಾನಿಹರಿಯನರಿಯದವ ಅವನು ಒಬ್ಬ ಜ್ಞಾನಿಯೆಹರಿಯ ಬಲ್ಲೆನೆಂದವ ಅವನು ಒಬ್ಬ ಜ್ಞಾನಿಯೆಹರಿಯೆ ಸರ್ವಚೇಷ್ಟಪ್ರದ ಗೋಪಾಲವಿಠಲ ನರ-ಹರಿ ಎಂದರಿದವನು ನರನೆ ನರನೆ ನೋಡಾ ೧

ಮಠ್ಯತಾಳ
ಮಂತ್ರಮಾಡಿದರೇನು ತಂತ್ರ ತೋರಿದರೇನುಎಂತೆಂತು ಕರ್ಮ ನಿರಂತರ ಮಾಡಲೇನುಚಿಂತನೆ ಹರಿ ಸ್ವತಂತ್ರ ಪರತಂತ್ರೈಂತು ಜೀವೇಶರ ವಿವೇಕನರಿಯದಾ-ನಂತ ಜನುಮಗಳು ಆಗಿ ಬಂದಿದ್ದರುಸಂತೋಷವ ಕೊಡವು ಸಾಧನ ಕರ್ಮಗಳುದಂತಿ ಮಜ್ಜನ ಕಾಣೊಹರಿಯ ತಿಳಿಯದ ಕರ್ಮಗ್ರಂಥಿ ಬಿಡುವುದಲ್ಲ ಅಜ್ಞಾನದ ಸರಕುನಿಂತು ನಿದ್ರೆ ಮಾಳ್ಪನಂತೆ ಕೊನೆಗೆ ಸೌಖ್ಯಚಿಂತಿತ ಫಲದಾತ ಗೋಪಾಲವಿಠಲ-ನೆಂತೆಂತುಪಾಸ್ಯರಂತಂತೆ ಫಲವೀವ ೨

ರೂಪಕತಾಳ
ಚೇತನರೆಸರಿ ಜೀವ ಚಲನೆ ಮಾಡಿಸೆ ಹರಿಚೇತನವೆ ಜಡತುಲ್ಯ ಚಲನೆಮಾಡಿಸದಿರಲುಚೇತನಾಚೇತನಕೆ ಸಾಮ್ಯವೆ ಸರಿ ಹರಿವಿನಹಯಾತರಿಂದಲಿ ನೋಡು ವಿಜ್ಞಾನಿಚೆ ? ಪ್ರಯತ್ನವುಪಾತಕ ಪುಣ್ಯಕ್ಕು ಹರಿಯೆ ಪ್ರೇರಕನೆಂದುತಾ ತಿಳಿದು ಇಪ್ಪುವಗೆ ಯಾತನೆಂಬುದು ಎಲ್ಲೊತಾ ತಿಳಿಯದಲೆ ಪುಣ್ಯಮಾತುರಕೆ ನಾನೆನಲುಪಾತಕವನೆ ಮಾಡಿ ಪುಣ್ಯವಾದರು ನೋಡಪತಿವ್ರತೆ ಸ್ತ್ರೀ ತನ್ನ ಪತಿ ಆಜ್ಞದಿಂದ ವಿ-ಜಾತಿ ಪುರುಷನ್ನ ಅನುಸರಿಸೆಂದು ಆಜ್ಞೆ ಕೊಡೆಮಾತು ಪತಿಯದು ನಡೆಸೆ ಪಾತಕವಳಿಗೆ ಉಂಟೆಯಾತನೆಗೆ ಸರಿ ಯೋಗ್ಯಕರ್ಮ ಮಾಡಿದರಾಗೆಪಾತಕಿಲ್ಲವು ನೋಡು ನೋಡಿ ನೋಡುಜ್ಯೋತಿರ್ಮಯ ಮೂರ್ತಿ ಗೋಪಾಲವಿಠಲಯಾತರವ ನಾನಲ್ಲ ಎಲ್ಲ ನಿನ್ನಾಧೀನ ೩

ಝಂಪೆತಾಳ
ಹರಿ ಮಾಡೆನಲು ಮಾಡೆನೆಂಬುವಗೆ ಸಂಸಾರಹರಿಯೆಂಬುವುದು ಲಕ್ಷ ಹರಿದಾರಿ ಜಲವುದ್ದಶರಧಿಂದ ಕಡೆ ಬೀಳಲರಿಯನವನೆಂದಿಗುಹರಿಯ ತೋರದು ಅವಗೆ ಎಂದೆಂದಿಗುಹರಿ ಕೂಡ ನಾನು ಮಾಡಿದೆನೆಂಬುವಗೆಶರಧಿ ಹರಿಗೋಲು ಹುಟ್ಟಿಲ್ಲಧಾಕಿದಂತೆಹರಿ ಮಾಡಿಸಲು ಮಾಡೇನೆಂಬುವಗೆ ಭವಶರಧಿಹರಿಗೋಲಿಟ್ಟು ಹುಟ್ಟು ಹಾಕಿದಂತೆಹರಿ ಮಾಡಿಸಲು ನಾನು ಮಾಡಿದೆನೆಂಬುವನಿಗೆಶರಧಿ ಅರೆಕಾಲು ಪರಿಮಾಣ ಜಲವುಹರಿಯ ಕರ್ತೃತ್ವವು ಅರಿದಹಾಗೆಲ್ಲ ಭವ-ಶರಧಿ ಬತ್ತುವುದಿನ್ನು ಅರಿದವರಿಗೆಹರಿ ಮಹಾರಾಜ ಗೋಪಾಲವಿಠಲ ತನ್ನಾರಿದಂತೆ ಅರಿವ ಅರಿದಿರುವವರಿಗೆ4

ತ್ರಿಪುಟತಾಳ
ಮರೆದು ಮಾಡಿದ ಕರ್ಮ ಮಹಾಮಹತ್ತಾದರುಹುರಿದು ಬೀಜವ ಬಿತ್ತಿ ಫಲ ಅಪೇಕ್ಷಿಸಿದಂತೆದೊರಕಿಸಿಕೊಡದಿನ್ನು ಯೋಗ್ಯಗತಿಯು ನೋಡಾಮರಳಿ ಸಂಸಾರದಿ ತಂದಿಡುವುದುಅರಿದು ಮಾಡಿದ ಕರ್ಮ ಅಲ್ಪವಾದರು ನೋಡುಪರಮತ್ಯುತ್ತಮವಾದ ಫಲಗಳ ಕೊಡುವುದುಸರಿಬಿಡು ಹರಿ ಅರಿದು ಕುಕರ್ಮವನ್ನೆ ಮಾಡೆಮರೆದವನಂತೆ ಮರಳಿ ಫಲಯೈದಕುರುಡ ಜನ್ಮಾರಭ್ಯ ಕುರಿತು ಅವಗೆ ಒಂದುಗುರುತ ಪೇಳಲೆನ್ನ ಅದರ ಕುರುಹನರಿವನೆಅರಿದು ಬಹುದಿನ ನಾನಾ ಅರ್ಥವು ಮಧ್ಯಕುರುಡನಂತಿಪ್ಪನ ಕುರಿತು ಅಣಕಿಸಿ ಒಂದುಗುರುತು ತೋರಿ ಅದರ ಕುರುಹ ಪೇಳೆನ್ನೆ ಹುಟ್ಟು-ಗುರುಡನಂದದಿ ತಾನು ಹುಡುಕ್ಯಾಡುವನೆ ನೋಡಾಶರಣಜನರಪಾಲ ಗೋಪಾಲವಿಠಲ ತನ್ನಾರಿದವರ ಹಿಂದೆ ತಿರುಗುವ ಕ್ಷಣಬಿಡದೆ ೫

ಅಟ್ಟತಾಳ
ಕರ್ತೃತ್ವವೆಂಬುದು ಜೀವ ಸ್ವರೂಪವುಹತ್ತಿ ಇಪ್ಪುದು ನೋಡು ಅನಾದಿಯಿಂದಲಿ ನಿತ್ಯದತ್ತವಾಗಿದೆ ಈಶನಿಂದವೆಂಬ ಮಾತುಅರ್ತು ನೋಡಿ ಹರಿಯ ಹೊರ್ತು ಆಗುವುದಲ್ಲಮರ್ತರೆ ಮರೆವುವ ಅರ್ತರೆ ಅರಿವುವಕರ್ತೃಕಾರ್ಯತಾ ಸರ್ವಸ್ವತಂತ್ರ ಹರಿತಾನು ಸೂತ್ರನಾಟಕ ಸರ್ವಚೇಷ್ಟೆ ತಾ ಮಾಡಿಸೆಕೀರ್ತಿ ಅಪಕೀರ್ತಿ ಜೀವರ್ಗೆ ತಂದೀವಸ್ವಾರ್ಥಪಾರರಹಿತ ಗೋಪಾಲವಿಠಲಆರ್ತಿತರಿವ ಅರಿದ ಭಕ್ತರ ಮನದ ೬

ಆದಿತಾಳ
ಮಾಡಲಿಬೇಕು ಎಲ್ಲ ಮಾಡಿಲ್ಲವೆನಬೇಕುನೋಡಲಿಬೇಕು ಎಲ್ಲ ನೋಡಿಲ್ಲವೆನಬೇಕುಬೇಡಲಿಬೇಕು ನಾನೆ ಬೇಡಿಲ್ಲವೆನಬೇಕುಓಡಲಿಬೇಕು ನಾನೆ ಓಡಲಿಲ್ಲೆನಬೇಕುಆಡಲಿಬೇಕು ನಾನೆ ಆಡಿಲ್ಲವೆನಬೇಕುನೀಡಲಿಬೇಕು ನಾನೆ ನೀಡಿಲ್ಲವೆನಬೇಕುಕೇಡು ಲಾಭಕೆ ಮನವ ಕೆಡಿಸದೆ ಒಂದೇ ರೀತಿನೋಡಿದವರಿಗೆ ಉನ್ಮದನಂತೆ ತೋರುತ್ತಗೂಢನಾಗಿ ಹರಿಯ ಗುಣಗಳ ಕೊಂಡಾಡುತ್ತರೂಢಿಲಿ ಈ ವಪುವನ್ನು ಮಾಡಿದೆಲ್ಲ ಸಾಧನಪಾಡಿದವರ ಪ್ರಾಣ ಗೋಪಾಲವಿಠಲ ತಾನುನೋಡು ಈ ಪರಿ ಇದ್ದವಗೆ ಮಾಡುವಗತಿಗೆ ಹವಣಿ ೭

ಜತೆ
ಸಕಲ ಸಾಧನ ಹರಿಯಾಧೀನ ತಿಳಿವುದೆ ಸುಖವೃಕೋದರನೊಡೆಯ ಗೋಪಾಲವಿಠಲ ಒಲಿವ

ಪರಮಾತ್ಮನ ವಿಷಯವಾಗಿ
೪೯
ಸುಳಾದಿ
ಧ್ರುವತಾಳ
ಹರಿಯಭಕುತನಾಗು ಹರುಷದಿಂದಲಿ ಇನ್ನುಹರಿಯನ್ನು ತಿಳಿಯೊ ಸರ್ವಾಂತರದಿಧರಣಿ ಆಕಾಶ ಸಲಿಲ ಗಿರಿ ಅಗ್ನಿ ವಾಯು ಮಿಕ್ಕತರಣಿಯಲಿನ್ನು ಬಿಡದೆ ಹರಿಯು ಇಪ್ಪಸ್ಥಿರವಾಗಿ ಅವರವರ ಗುಣಕರ್ಮಾದಿಗಳೆಲ್ಲಹರಿಯೆ ವ್ಯಕುತಮಾಡಿಕೊಡುತಲಿಪ್ಪಹರಿನಡೆದಂತೆ ನಡೆವುದು ಈ ಜಗವೆಂದುಅರಿಯೊ ಮುಖ್ಯವಾಗಿ ಮನದೀಶಗೆಸಿರಿ ಅಜಭವಾದ್ಯರು ಹರಿಗೆ ಪರಿವಾರವೆಂದುತರತಮ ಮುಖ್ಯ ಮೂರುತಿಗಳ ಗುಣಿಸೊಎರಡುದಾರಿಯ ಮಾರ್ಗವನು ಯೋಚಿಸುತ್ತಸ್ಥಿರ ಅಸ್ಥಿರ ಆವುದೆಂದು ನೋಡುಸುರಯಾನ ಪಿತೃಯಾನ ಪರಿಪರಿಮಾರ್ಗವುಂಟುಅರಿಯೊ ನಿನಗೆ ಮುಖ್ಯ ಸುರಮಾರ್ಗವುಬರಿದೆ ಕರ್ಮಠಜನರು ಎರಗೋರು ಪಿತರಯಾನಸ್ಥಿರವಲ್ಲ ಅದರಿಂದ ದೊರೆತ ಫಲವುಪರಮಜ್ಞಾನಿಗಳು ಪಥವ ಎಯ್ದುವಂಥ ವಿ-ವರವ ಪೇಳುವೆನು ಹರಿಯ ಪ್ರೇರಣೆಯಂತೆಪರಮದಯಾಳು ಶ್ರೀ ಗೋಪಾಲವಿಠಲನ್ನಕರುಣ ಸಂಪಾದಿಸುವ ಭಕ್ತರಿಗೆ ೧

ಮಠ್ಯತಾಳ
ಏಕಪತ್ನೀವ್ರತವು ಜೋಕೆಯಿಂದಲಿ ಮಾಡುಕಾಕು ಆಗದಿರು ಕಂಡವರಿಗೆಲ್ಲವ್ಯಾಕುಲವನು ಬಿಡು ವ್ಯಾಜ್ಯರಹಿತನಾಗುಸ್ವೀಕರಿಸು ಇನ್ನು ಸಿದ್ಧವಾದುದನ್ನುಬೇಕು ಎಂದೆನಿಸಿಕÉೂ ಭಕ್ತ ಜನರಿಗೆನೀಕರಿಸು ನೀಚ ವಿಷಯಗಳೆಲ್ಲಪಾಕಶಾಸನವಿನುತ ಗೋಪಾಲವಿಠಲಸಾಕುವನು ನಿನ್ನ ಸರ್ವಸ್ಥಳದಲಿದ್ದು ೨

ರೂಪಕತಾಳ
ಗುಪ್ತದರ್ಚನೆಮಾಡು ವ್ಯಾಪ್ತನಾದ ಹರಿಯಆಪ್ತರೊಳು ಕೂಡಾಲೋಚಿಸಿಶಪ್ತವಮಾಡು ಒಬ್ಬರ ಸಂಗವಲ್ಲೆಂದುತಪ್ತಶೀತಲಿನ್ನು ಸಮನು ಆಗುಕ್ಲುಪ್ತ ಬಿಡದು ಎಂದು ಸುಖದುಃಖಗಳನುಂಡುತೃಪ್ತಿಬಡಿಸು ನಿನ್ನ ಮನದಿ ಹರಿಯಸಪ್ತತ್ರಯಕುಲ ನಿನ್ನದುದ್ಧಾರವಾಗೋದುಆಪ್ತವಾದ ತತ್ವ ಅರಿತುಕೊ ನೀಸುಪ್ತಿಜಾಗರ ಸ್ವಪ್ನಾವಸ್ಥೆ ಕರ್ಮ ನಿ-ರ್ಲಿಪ್ತಮಾರ್ಗಪಿಡಿದು ಹರಿಗರ್ಪಿಸುಸಪ್ತದ್ವಯ ಭುವನೇಶ ಗೋಪಾಲವಿಠಲಕ್ಲುಪ್ತರೊಳು ನಿನ್ನ ಕೂಡಿಸದಲೆ ಪೊರೆವ೩

ಝಂಪೆತಾಳ
ದರಿದ್ರನೆನಿಸಿಕೊ ಭಿನ್ನವಿಷಯ ಉಂಬಲ್ಲಿಸಿರಿವಂತನೆನಿಸಿಕೊ ನಿನ್ನ ಸುಖ ನೀನುಂಡುಹೊರಗಿನ ವಿಷಯಗಳ ಕಂಡು ಮೋಸಹೋಗದೆಎರಗು ನಿನಗೆ ಮುಖ್ಯವಿಷಯ ಶ್ರೀಹರಿಯೆಂದುದೊರೆವುದಕೆ ನಿನಗೆ ಈ ಸಾಧನೋಪಾಯವುಗುರುದ್ವಾರ ಪ್ರಸಾದವನ್ನು ಗಳಿಸುಎರಡು ಗುಣ ನಿನಗಿಂದಧಿಕರ ಮೊದಲು ಮಾಡಿಪರಮೇಷ್ಠಿಪರಿಯಂತ ತಾರತಮ್ಯನುಸಾರಅರಿದು ಅವರವರ ಪ್ರಸಾದವನ್ನು ಗಳಿಸುದೊರೆವುದು ನಿನಗೆ ಇದರಿಂದ ಸುಫಲವುಪರಮದಯಾಳು ಸಿರಿ ಗೋಪಾಲವಿಠಲನಚರಣ ಸಾಧಿಸುವರ್ಗೆ ಇದೆ ಇದೆ ಮಾರ್ಗ೪

ತ್ರಿಪುಟತಾಳ
ಇಂದ್ರೀಗಳೆಂಬುವು ನಿನ್ನ ಸುಖವುಬಡಿಸಬಂದಿಲ್ಲ ನೋಡು ನೀ ಗೋಳಕ ಚಿಂತಿಸಿಅಂದಬಡಲಿಬ್ಯಾಡ ಅಭಿಮಾನಮದದಿಂದಕುಂದು ಮಾಡೋದು ನಿನ್ನಾನಂದ ವ್ಯಕ್ತಿಗೆ ಇನ್ನುಬಂದಬಂದಂತೆ ವಿಷಯಂಗಳಿಗೆಳೆದೊಯಿದುತಂದಿಪ್ಪವು ಪುನಃ ಜನನ ಮರಣಗಳುದ್ವಂದ್ವ ಜೀವರುಗಳು ಅಭಿಮಾನಿಗಳು ಆಗಿಒಂದೊಂದು ಇಂದ್ರಿಯಲಿಪ್ಪುವರುಚೆಂದದಿ ತ್ರಿವಿಧ ಜೀವರ ಗತಿ ಅರಿತು ಮು-ಕುಂದ ಕರ್ಮಗಳ ಮಾಡಿಸಿ ಫಲವನುತಂದೀವ ತತ್ವಾಭಿಮಾನಿಗಳಲಿದ್ದುಇಂದಿರಾಪತಿ ನಿರ್ದೋಷನಾಗಿಸಂದೇಹವಿಲ್ಲದೆ ಸರ್ವೋತ್ತಮ ಹರಿಯೆಂದು ನಿನ್ನಮನದಿನಿಂದಿರಿಸು ಇಂದ್ರಿನಿಯಾಮಕ ದೈವ ಗೋಪಾಲವಿಠಲಬಂಧಕ ತರಿದು ಭಕುತನೆಂದೆನಿಸುವ ೫

ಅಟ್ಟತಾಳ
ಯಾಚನೆಯನು ಮಾಡು ಉಚ್ಚರಲ್ಲಿ ಪೋಗಿಯೋಚಿಸು ಹರಿಯಲ್ಲಿ ಆಚಾರಮಾರ್ಗದಿನೀಚಗತಿಗೆ ಕೈಯ್ಯಚಾಚಿ ಕುಗ್ಗದೆ ಕಾ-ಲೋಚಿತವೆನ್ನದೆ ಸೂಚನೆಯಿಂದಲಿನಾಚಿಕೆಯನು ಬಿಟ್ಟು ಬಿಚ್ಚದೆ ಅವರಲ್ಲಿಆಚರಣೆಯ ಮಾಡು ವಾಚಾಮನಕಾಯಾನೀಚಸಂಗವೆಂಬ ಶೌಚಶುದ್ಧಿಯನ್ನುಉಚ್ಚಸಂಗ ಉದಕ ಆಚಮನವು ಮಾಡುಶ್ರೀಚಕ್ರಧರನ ನೀ ವಿಚಾರಿಸುವ ತತ್ವಯೋಚನೆಯನು ಮಾಡು ಭೂಚಕ್ರದೊಳಗೆಲ್ಲಕೀಚಕಾರಿಗೀಶ ಗೋಪಾಲವಿಠಲನ್ನಾ-ಲೋಚನೆಮಾಡನ್ಯಾಲೋಚನೆಯನು ಬಿಟ್ಟು ೬

ಆದಿತಾಳ
ಧನದ ಒಳಗೆ ಧನವ ಹುಡುಕುಗುಣಗಳೊಳಗೆ ಗುಣವ ಹುಡುಕುವಿನಯದೊಳಗೆ ವಿನಯ ಹುಡುಕುಧಣಿಗಳೊಳಗೆ ಧಣಿಯ ಹುಡುಕುಎಣಿಸಿ ನಾನಾಗುಣ ಶಕುತಿಯ ಮನಸಿನಲ್ಲಿನೆನೆದು ನೆನೆದು ತನುವಿನಾಸೆ ತೊರೆದು ದುಷ್ಟಗುಣ ಅಂಕುರ ಒಣಗಿಸಿನ್ನು ವನಜನಾಭನೆಂಬ ಸುಖಗುಣಾಂಬುಧಿಯ ಗುಣಗಳನು ಸ್ಮರಿಸಿಗುಣತ್ರಯದ ಕರ್ಮಬೀಜವು ದ-ಹನವು ಮಾಡು ಜ್ಞಾನದಿಂದಘನಮಹಿಮ ಚೆಲುವ ಗೋಪಾಲವಿಠಲನು ತನ್ನನೆನೆದ ಹಾಗೆ ಎಲ್ಲ ನಿನ್ನ ಅನುಭವಕ್ಕೆ ಕಾಣಿಸುವ ೭

ಜತೆ
ಭಕುತ ಭಕುತ ನಾನು ಶಕುತ ನಾನಲ್ಲವೆನ್ನುಮುಕುತಿದಾಯಕ ಗೋಪಾಲವಿಠಲ ಒಲಿವ

ಶ್ರೀಹರಿಯನ್ನು ಕುರಿತ
೫೦
ಸುಳಾದಿ
ಧ್ರುವತಾಳ
ಹರಿಯೆ ಸರ್ವೋತ್ತಮ ಹರಿಯೆ ಪರದೈವಪರಿಪೂರ್ಣಗುಣಭರಿತ ನಿರಾಶ್ರಯಾನಂತಪರತತ್ವ ಪರಿಪೂಜ್ಯ ಪರಮಮಂಗಳಮೂರ್ತಿಸಿರಿದೇವಿ ಪರಮೇಷ್ಠಿ ಹರರಿಂದ ವಂದಿತಸ್ವರಮಣ ಶ್ರುತಿಪಾದ್ಯ ಜರಾಮರಣರಹಿತಸುರರ ಪಾಲಕನೆ ನಿರ್ದೋಷಿ(ಷ) ಶಿಖಾಮಣಿಕರಿರಾಜವರದನೆ ಕರುಣಾಕರ ದೇವದುರುಳಮರ್ದನ ದೂರಾತಿದೂರನೆಸುರಪತಿ ಸುರ ಮುನಿಗಳಿಂದ ಸೇವಿತಗರುಡವಾಹನ ಚೆಲುವ ಸ್ಥಿರ ಭಕುತರೊಡೆಯಸಿರಿದ್ರೌಪದಿ ಅಭಿಮಾನರಕ್ಷಕ ದೇವಸ್ಮರಣೆ ಮಾತ್ರದಲ್ಲಿ ಅಜಮಿಳನ ರಕ್ಷಿಸಿದಂತೆಪರಮ ದಯಾಳು ಗೋಪಾಲವಿಠಲರೇಯಸರಿಯಿಲ್ಲದ ದೈವ ಮೊರೆಹೊಕ್ಕೆ ಕಾಯೊ ೧

ಮಠ್ಯತಾಳ
ಅನಂತ ಜನ್ಮದಿ ಅನಂತ ಪಾಪವ ಮಾಡಿನಿನ್ನನು ಮರೆತೆನೊ ಸನ್ಮುನಿಗಳ ಪ್ರಿಯಎನ್ನಂಥ ಪಾತಕಿಯ ಏನೆಂತು ಕರುಣಿಪೆಯೊಬಿನ್ನಹಕ್ಕೆ ಬಾಯಿಲ್ಲ ನಿನ್ನ ಬೇಡಲೆನಗೆಬೆನ್ನು ಬಿದ್ದವರನ್ನು ಮನ್ನಿಸಿ ಕಾಯುವಂಥಘನ್ನ ಬಿರುದುಂಟೆಂದಿನ್ನು ನಾ ಮೊರೆಹೊಕ್ಕೆಚಿನ್ನುಮಯ ಮೂರುತಿ ಗೋಪಾಲವಿಠಲರೇಯಾನ್ಯರಿಗೊಪ್ಪಿಸದೆ ನಿನ್ನವರೊಳಿರಿಸೊ ೨

ತ್ರಿಪುಟತಾಳ
ಹಿಂದೆ ನಾ ಮಾಡಿದಂಥ ಕುಂದು ದೋಷಗಳಿಂದಬಂದೆ ನಾ ನರಜನ್ಮ ಬಂಧನದೊಳಗಿನ್ನುಮುಂದಣ ಸಾಧನಗಳೊಂದು ನಾ ಕಾಣೆನಯ್ಯಎಂದಿಗೆ ನಿನ್ನ ಅರವಿಂದ ಚರಣ ಬಳಿಗೆ ಪೊಂದಿಸಿಯೋ ಎನ್ನನುಕಂದರ್ಪಜನಕನೆ ನಿಂದಿರಿಸಿನ್ನು ನಿನ್ನಚೆಂದದರೂಪವ ಆನಂದದಿ ಎನ್ನ ಮನಮಂದಿರದೊಳಗೆಬಂಧನಾಗಲಿ ಸುಖ ಬಂದದಾಗಲಿ ಜನನಿಂದೆ ಮಾಡಲಿ ಬಹು ವಂದಿಸುವರಾಗಲಿಒಂದೆ ಮನವು ದೃಢದಿಂದ ನಿನ್ನರ್ಚಿಸಿದಂತೆಛಿಂದೆ ಇಲ್ಲದ ಭಕ್ತಿ ಚೆಂದದಿ ಪಾಲಿಸಯ್ಯಮಂದರಧರನೆ ಗೋಪಾಲವಿಠಲರೇಯವಂದಿಸಿದೆನು ಮನ ಬಂದದ್ದು ಮಾಡೊ ೩

ಅಟ್ಟತಾಳ
ಪದ್ಧತಿ ತಿಳಿಸಿನ್ನು ಮಧ್ವಮತಾನುಸಾರಶುದ್ಧ ಜ್ಞಾನವ ಕೊಟ್ಟಪದ್ಧಮತಗಳೆ ನಿ-ಷಿದ್ಧವೆನಿಸಿ ಪೊದ್ದಿಸದಂತಘ ಒದ್ದು ಕಡೆಗೆನೂಕಿತಿದ್ದಿಸಿ ಎನ್ನುನು ಉದ್ಧರಿಸು ಪಾಪ-ಖದ್ದಿನೋಳ್ಹಾಕದೆ ಮುದ್ರೆಪಚ್ಚಿಸಿ ನಿನ್ನಉದ್ಯೋಗದೊಳಗಿಡುಪ್ರದ್ಯುಮ್ನ ಮೂರುತಿ ಗೋಪಾಲವಿಠಲರೇಯಬಿದ್ದೆ ಚರಣದ ಮೇಲೆ ಬದ್ಧಾಗಿ ಪಿಡಿಯೊ ೪

ಆದಿತಾಳ
ಆರೋಗ್ಯ ಆಯುಷ್ಯ ಐಶ್ವರ್ಯಗಳು ಮಾನ ಅಪೇಕ್ಷಕೋರದಂತೆ ಮಾಡಯ್ಯ ಅನಾಥಬಂಧುಘೋರಿಸುತಿಪ್ಪ ಎನ್ನ ಆರುಮಂದಿ ಖಳರ ದೂರಮಾಡಿ ಇನ್ನುತೋರಿಸು ನಿನ್ನ ಚರಣ ಸೇರಿಸು ನಿನ್ನಪರಿಚಾರಕರೊಳಗಿನ್ನು ಆರೆ ಸಂಸಾರದ ಮರೆಯ ಕೆಳಗೆಶ್ರೀರಮಣನೆ ಚೆಲ್ವ ಗೋಪಾಲ ವಿಠಲಾ-ಪಾರಗುಣನಿಧಿ ಸಾರಿದೆ ಕಾಯೊ ೫

ಜತೆ
ಎಂದಿಗೆ ನಿನ್ನಪಾದ ಚೆಂದದಿಪೂಜಿಸಲಿಕುಂದು ಇಲ್ಲದ ಭಕ್ತಿಲಿ ಬೇಗ ಗೋಪಾಲವಿಠಲ

ಕ್ಷರಅಕ್ಷರರಿಂದ ಭಿನ್ನನಾದ
೧೪೭
ಸುಳಾದಿ
ಧ್ರುವತಾಳ
ಹರಿಯೆ ಸರ್ವೋತ್ತಮ ಹರಿಯೆ ಮೂಲದೈವಹರಿ ಕ್ಷರಾಕ್ಷರದಿಂದ ವಿದೂರ ದೂರಹರಿ ಜಗದ್ವ್ಯಾಪಕ ಸಕಲರಿಂದಲ್ಲಿ ಭಿನ್ನಹರಿ ಮೂಲರೂಪ ಅವತಾರ ಅತ್ಯಂತ ಐಕ್ಯಹರಿ ಚಿದಾನಂದ ಚಿನುಮಯ ಚಿದ್ರೂಪಹರಿ ಸತ್ಯಸಂಕಲ್ಪ ಉತ್ಪತ್ತಿನಾಶ ದೂರಹರಿ ನಿರ್ಜಿತ ಮಾಯಾ ಲೋಕಮೋಹಕದೇವನಿರಾಶ್ರಯಾನಂದ ಗೋಪಾಲವಿಠಲಸರಸಿಜಾಂಡದ ದೊರೆ ಸುರತರುವೆ ೧

ಮಠ್ಯತಾಳ
ಪಂಚಮುಖನ ಕುರಿತು ಕೃಷ್ಣ ತಪಸ್ಸು ಮಾಡಿಪಂಚಬಾಣನ ಪೆತ್ತನೆಂಬಿರೆಲಲಾ ಹಾವಂಚಕ ಶ್ರೀಹರಿ ಪ್ರಳಯದಿ ವಟದೆಲೆಯಮಂಚದ ಮೇಲೊರಗಿ ತದನಂತರದಿ ವಿ_ರಿಂಚಿಯನು ಪಡೆದ ವರವಾರದು ಪೇಳೊಕೆಂಚೆ ಲಕುಮಿಯರಸ ಉಪನಯನವಿಲ್ಲದೆಮುಂಚಿ ಮಕ್ಕಳ ಪಡೆದದು ಜಗವರಿಯದೆ ಮರುಳೆಪಂಚ ಏಕದಶಕಸಹಸ್ರ ಸ್ತ್ರೀಯರ ಪತಿಪಾಂಚಾಲಿಯ ವರದ ನಿತ್ಯ ಬ್ರಹ್ಮಾಚಾರ್ಯೆಂದುಪಂಚತ್ವವ ಐದಿದ ತರಳ ಪರೀಕ್ಷಿತಗೆಪಂಚಪ್ರಾಣಗಳಿತ್ತ ಅಪ್ರಾಕೃತ ದ್ವಿ-ಪಂಚೇಂದ್ರಿಗಳು ಶ್ರೀಹರಿಗೆ ಜನನಪಂಚತ್ವವು ನಾಶ ಪ್ರಾರಬ್ಧ ಆಗಾಮಿಸಂಚಿತಗಳ ದೂರ ಶುಕ್ಲಶೋಣಿತದ ಪ್ರ-ಪಂಚ ಎಂದಿಗೆ ಇಲ್ಲ ನರಪಂಚಾನನಮಿಂಚುತಲಿದೆ ಮಹಿಮೆ ಅನಂತ ವೇದಾವಳಿಗೆವಂಚನೆಯನು ತೋರಿದ ಅಸುರ ಮೋಹನಾರ್ಥಪಂಚಮುಖ ಹನುಮಂತನ ಪಿತ ಗೋಪಾಲವಿಠಲನವಂಚನಿಲ್ಲದೆ ಸ್ಮರಿಸಲು ಸಂಚಿತಾಗಾಮಿ ತರಿವ ೨

ರೂಪಕತಾಳ
ಶ್ರೀಧವ ಹರಿಯ ಮತ್ಸ್ಯಾವತಾರಗಳುಮೇದಿನಿಯೊಳಗೆ ಪ್ರಾಕೃತವೆಂಬಿರಿಶ್ರೀದೇವ ವದನದಿ ವಿಶ್ವ ತೋರಿಸಿದಾಗಛೇದಿಸದೆ ಪ್ರಾಕೃತ ಶರೀರವಾದರೆಛೇದಭೇದವ ತೋರಿದ ಅಸುರ ಮೋಹನಾರ್ಥಛೇದ್ಯಭೇದ್ಯ ಆ ದೇಹ ಪ್ರಾಕೃತವಾದಡೆ ಅಜ್ಞಾನಖೇದಕ್ಕೆ ಕಾರಣ ಪೂರ್ಣತ್ವಕ್ಕೆ ಹಾನಿವೇದಾವಳಿಗಳು ಪೂರ್ಣನೆಂದು ಪೊಗಳಲಿವಕೊಸಾಧುಜೀವರಿಗೆ ಈಪರಿ ಜ್ಞಾನ ಸಲ್ಲದುಮೋದತೀರ್ಥರ ಉಕ್ತಿವಿರೋಧ ಈಪರಿ ಜ್ಞಾನಆದಿ ನವವಿಧ ದ್ವೇಷದೊಳು ಇದು ಒಂದನ್ನಯಾದವ ಕೃಷ್ಣನು ತಪಸು ಮಾಡಿದ್ದು ಸತ್ಯ-ವಾದರೆ ಪ್ರಾಕೃತ ಶರೀರ ಅದರಂತೆವೇದಾಂತವೇದ್ಯ ಗೋಪಾಲವಿಠಲರೇಯಭೇದನಲ್ಲವೊ ಮೂಲ ಅವತಾರಕ್ಕೆ ಐಕ್ಯ ೩

ಝಂಪೆತಾಳ
ಹಿರಣ್ಯಕಶ್ಯಪನ ಸಂಹಾರ ಮಾಡಿ ನರಸಿಂಹ ಇರು-ತಿರಲು ಆಗ ಹರಿ ಶರಭರೂಪದಿ ಬಂದುನರಹರಿಯ ಕೂಡ ಯುದ್ಧವಮಾಡಿ ಜಯಿಸಿದಹರನೆ ಸರ್ವೋತ್ತಮನೆಂದು ನುಡಿವೀಶರಭಂಜೆಯ ಪೇಳುವುದು ಒಂದೇ ಪುರಾಣದಲ್ಲಿದುರುಳ ತಾಮಸ ಜೀವರಿಗೋಸುಗನರಸಿಂಹಜಯ ಪೇಳುವ ಪುರಾಣವು ಸಪ್ತವರವೇದ ಶಾಸ್ತ್ರಸರ್ವತ್ರದಲ್ಲಿ”ಹರಿಗಂ ಹರಂತಮನುಜಯಂತು ದೇವಾಃ’’ಅರಿಯೋ ಈ ವೇದಾರ್ಥ ಮರಳಿ ಮರಳಿಹರಿಗೆ ಆ ಪರಿ ಸಮರ್ಥಿಯನುಳ್ಳರೆ ತನ್ನಶರಣನ್ನ ಕೊಲ್ಲುತಿರೆ ನೋಡುತಿಹನೆನರಹರಿ ಧ್ವನಿಗೆ ಸರಸಿಜಾಂಡವು ನಡುಗೆಹರಿ ಮೌನ ಧರಿಸನೆ ಆ ಕಾಲದಲ್ಲಿಕರಸಹಸ್ರವು ಅಷ್ಟ ಚರಣ ಆನನ ಪಂಚಮೆರೆವದ್ವಯ ಪಕ್ಷ ಸಾವಿರ ಆಯುಧಧರಿಸಿದ ಘೋರ ಶರಭನ್ನ ನರಹರಿಯುಪರಮ ಅನಾಯಾಸದಿ ಸಂಹಾರ ಮಾಡಿದಧರೆಯಲ್ಲಿ ರುಧಿರವು ವ್ಯಾಪಿಸಲುದುರುಳಜನಮರ್ದನ ಗೋಪಾಲವಿಠಲರೇಯಗೆಸರಿಯಿಲ್ಲ ಸರಿಯಿಲ್ಲ ಸರ್ವೋತ್ತಮ ೪

ತ್ರಿಪುಟತಾಳ
ರಾಮ ರಾವಣನ ಕೊಂದ ದೋಷವು ಬರಲಾಗತಾ ಮಾಡಿದನು ಲಿಂಗಪೂಜೆ ತಸ್ಮಾತ್⃁ಮಾಕಾಂತನೆ ಸರ್ವೋತ್ತಮನೆಂದು ನುಡಿವೆ ನೀಪ್ರೇಮದಿ ಇರಿಸಿದ ಶಿವನ ಆ ಸ್ಥಳದಲ್ಲಿಭೀಮಸೇನನು ಪುರುಷಾಮೃಗ ತರಪೋಗುವಾಗರೋಮಗಳು ಹನುಮಂತ ಕೊಡಲು ಒಯ್ದುಆ ಮೃಗವು ಅತಿ ತೀವ್ರದಿ ಬರಲಾಗಲು ಒಂದುರೋಮ ಬಿಸಾಟೆ ಕೋಟಿಲಿಂಗ ಕೋಟಿತೀರ್ಥರೋಮ ರೋಮಕೆ ಕೋಟಿ ಲಿಂಗಗಳೆ ಮೂಡಿತುಶ್ರೀಮಾರುತಾತ್ಮಜನ ರೋಮಂಗಳು ಆ ಮ-ಹಾಮಹಿಮ ಶ್ರೀರಾಮಚಂದ್ರನ ದೂತರಾಮಗೆ ಲಿಂಗಪೂಜೆಯ ಮಾಳ್ಪ ಬಗೆಯೆಂತೊಆ ಮಹಾಕಾಲದಲ್ಲಿ ಈ ಮೂಜಗಂಗಳೆಲ್ಲಸಮಸ್ತ ಸುರಮುನಿ ಋಷಿ ಸನಕಾದಿಗಳು ಇಂದ್ರಕಾಮ ಗರುಡ ರುದ್ರ ಫಣಿಪ ಆ ವಿರಿಂಚಿಯತಾ ಮುದದಿ ತಿಂದು ಸರ್ಪವು ಲಯವು ಮಾಡಿ ಏ-ಕಮೇವಾದ್ವಿತೀಯಸ್ವಾಮಿ ಮಲಗಿದ್ದಾಗ ವ್ಯೋಮಕೇಶನು ಆವಕಡೆ ಇದ್ದನೊತಾಮರಸ ಪೀಠ ಫಣಿಪ ರುದ್ರಾದ್ಯರುರಾಮಗೆ ಕಿಂಕರರು ಜಗತ್ತಿಗೆ ಗುರುಗಳುರಾಮಚಂದಿರ ಗೋಪಾಲವಿಠಲರೇಯಕಾಮಾರಿ ವರದ ಕರುಣಾಸಾಗರ ೫

ಅಟ್ಟತಾಳ
ವ್ಯಾಸ ಹಯಗ್ರೀವ ಹರಿಪರರೆನ್ನುವ-ರಾ ಶಿರ ಬಾಹು ಖಂಡಿಸಿದಲೆಂಬರಿ ವೇದ-ವ್ಯಾಸ ಹಯಗ್ರೀವ ಇರುತಿರೆ ಅವರಂತೆ (ಲೆಂಕಾರಿ)ವೇಷವ ಧರಿಸಿ ಖಳರು ಇಬ್ಬರುಮೋಸದಿ ಸಭೆಯೊಳು ನಿಂತು ಕೂಗಲವರಶಿರಬಾಹು ಖಂಡಿಸಿದವು ಅವರಿಗೆಈ ಶಬ್ದ ನುಡಿಯ ಯೋಗ್ಯತೆ ಇಲ್ಲದವರಿಗೆಶ್ರೀಶರಂಗನೆ ಅವರನ್ನ ಭೇದಿಸಿದವ್ಯಾಸ ಹಯಗ್ರೀವರಿಬ್ಬರಿವರು ಬೇರೆಈಶನು ಭುಜವೆತ್ತಿ ಕುಣಿಯಲು ಉ-ಮೇಶಗೆ ಭೃಗುಶಾಪ ಲಿಂಗವಾಗೆಂದು ರ-ಮೇಶ ಗೋಪಾಲವಿಠಲನೆ ಪರೇಶವ್ಯಕ್ತ ಶಾಶ್ವತ ಶಾಶ್ವತನೊ ೬

ಜತೆ
ಮುಖ್ಯ ಕಾರಣ ಅಪ್ರಾಕೃತ ನಿರಂಜನಮುಖ್ಯ ಪ್ರಾಣಾಂತರ್ಗತ ಗೋಪಾಲವಿಠಲ

ಮಾತೃಸ್ಥಾನದಲ್ಲಿರುವ ಶ್ರೀಹರಿ
೫೧
ಸುಳಾದಿ
ಧ್ರುವತಾಳ
ಹಸಿದು ಉದರಗತಿಯ ಹದವನರಿಯದಶಿಶುವಿನ ತಾಯಿ ಪಿಡಿದು ಮೊಸರನ್ನ ಉಣಿಸಿದರೆಕೊಸರಿಕೊಳ್ಳುತಲಿಪ್ಪುದು ಒಲ್ಲೆನೆನ್ನಲಾ ಜನನಿಶಿಶುವಿಗೆ ಅನ್ನವ ಉಣಿಸದಲೆ ಬಿಡುವಳೆವಶವಾಗುವುದಕೆ ನಾನಾ ಬಣ್ಣಿಗೆಯೋಜನೀಸಗಿ ಮಂಡೆಯ ನ್ಯಾವರಿಸಿ ಉಣಿಸೋಳಲ್ಲದೆಶಿಶುವಿಗೇ (ನನ್ನ) ತನ್ನ ಹಸಿವೆ ಚಿಂತೆ ಮತ್ತುಂಟೆಹಸಿವಿಗೆ ತನಗಿದು ವಿಷಯವೆಂಬ ಜ್ಞಾನಶಿಶುವಿಗುಂಟಾಗಿದ್ದರೆ ಕೊಸರಿಕೊಂಬನೇನಯ್ಯಮಶಕಂಗಳ ಬಾಧೆ ಮುನ್ನೆ ಏನಿದ್ದರುಶಿಶುವಿಗೇನಾದರು ನಿವಾರಿಸುವ ಬೇರಿರಲಾಗಿಅಸುರಮರ್ದನರಂಗ ಗೋಪಾಲವಿಠಲ ನಿನ್ನಶಿಶುವಿನ ಹಸಗೆಡಿಸದಿರು ಪಿಡಿದು ೧

ಮಠ್ಯತಾಳ
ವಿಹಿತ ಫಲವು ನೀನು ವಹಿಸದಿದ್ದಡೆ ದೇವಸಾಹಸವು ಬರಿದಾಗೆ ಅಹಿತ ಮತ್ತಾರಿಗೆಅಹಿವದನಕೆ ಮೂಷಕವು ಸಿಲ್ಕಿದರೆವಿಹಿತ ಬಿಡುವುದೆ ಆಹಾರವೆಂದು ಅದಕ್ಕೆಅಹಿಗೆ ಅನಿಳಾಹಾರವನು ಇತ್ತು ಮೂಷಕನ ಬಿಡಿಸೋದುಅಹಿಗಿತ್ತಂತೆ ಮಾಡು ನೀ ಮಹಿಸುರರ ಸಮ್ಮತಿ ಛಲವು ದೇವವಹಿಸಬೇಕು ಧರ್ಮ ನಡೆಸಬೇಕಾಗಿತ್ತೆಬಹಿರಂತರಭೂತ ಗೋಪಾಲವಿಠಲಕುಹಕರ ಮರ್ದನ ಕುಜನ ಪ್ರದಾತನೆ ೨

ತ್ರಿಪುಟತಾಳ
ಕಂಟಕ ಪರಿಹಾರಕೆ ರಕ್ಷೆ ಮೆಟ್ಟಲಿಬೇಕುಕಂಟಕ ಪಾದರಕ್ಷೆಗೆ ಕುಂಟುಬೀಳಲು ಧರ್ಮವೆಂಬ ಪಾದವು ಜೀರ್ಣಕಂಟಕಾರಿಯ ಮೆಟ್ಟಿಯೇನು ಫಲವೂಂಟೆಡುಬ್ಬದಂಥ ಲೌಕಿಕರಿಂದಲೇನುಬಂಟಜನರು ಇದನು ಬಯಸುವರೆಕುಂಟಲಗಿತ್ತಿಯ ಕೂಡಲಿ ಅನುದಿನಒಂಟಿಲಿಡಿಸಬೇಡ ಲೌಕಿಕದಿನೆಂಟರು ಬಹುಮಂದಿ ಸಹಾಯವಾಗಿ ಬಂದುಗಂಟು ಕೆಡದಂತೆ ಕಾಪಾಡಲಿಕಂಟಕಹರ ಚೆಲ್ವ ಗೋಪಾಲವಿಠಲಉಂಟಾದದಕೆ ಒಲ್ಲೆನೆನಲು ಬಿಡದೆ ಉಣಿಪ ೩

ಅಟ್ಟತಾಳ
ಮೂಕನಣಕಿಸಲಿ ತಾ ಕುಳಿತವನಿಗೆಮೂಕತ್ವದ ಶೋಕ ಅವನಿಗೆ ಆಗುವುದುತಾ ಕುರುಡನಲ್ಲ ಪರರ ಅಣಕಿಸುವಂಗೆಶೋಕವಬಡುವನೆ ಅಂಧಕನಂದದಿವಾಕು ದಂತೋಚ್ಚರಣ ಪರರಣಕಿಪಗೆವಾಕು ಸಂಬಂಧ ಕ್ಲೇಶ ತಾಕುವುದೆ ಅವಗೆಶೋಕವಿಟ್ಟು ತಾನು ಪರರಣಕಿಸುವವಶೋಕದ ಅನುಭವ ಅವನಿಗೆ ಇಪ್ಪುವುದೆಶ್ರೀಕರುಣಾಕರ ನಿನಗೆ ಈ ಪರಿ ಅಹುದುನೀ ಕೇಳೆಲೊ ಸ್ವಾಮಿ ನಿನ್ನ ಭಕ್ತನಿಗೀಗಲೌಕಿಕದೊಳಗಿರೆ ಸಾಕುವೆ ಇದರಂತೆಏಕೋಮೇವದೇವ ಗೋಪಾಲವಿಠಲನೀ ಕರಪಿಡಿದವಗೆ ತಾಕಬಲ್ಲದೆ ದುರಿತ ೪

ಆದಿತಾಳ
ನಮೋ ನಮೋ ಕಾರುಣ್ಯಮೂರ್ತಿ ದಯಾಪರನಮೋ ನಮೋ ಸರ್ವಜ್ಞ ನಿತ್ಯ ನಿರಂಜನನಮೋ ನಮೋ ಅಖಂಡವ್ಯಾಪ್ತ ನಿರ್ದೋಷನೆನಮೋ ನಮೋ ದುಷ್ಟಶಿಕ್ಷ ಶಿಷ್ಟರಪಾಲನಮೋ ನಮೋ ಬ್ರಹ್ಮಣ್ಯದೇವ ಭಕ್ತರ ಕಾವನಮಿಸುವೆ ನಮಿಸುವೆ ನಮ್ರಭೂತನಾಗಿಶಮಲಮತಿಯು ಕಡಿ ದ್ಯುಮಣಿಶತತೇಜಯಮನೇಮಗಳಲ್ಲಿ ಮಮತೆ ನಿರಂತರಸಮ ಅಧಿಕೆನಿಸದೆ ನೀ ಎಮಗಿರು ಸದಾಸುಮನಸರೊಡೆಯ ಶ್ರೀಗೋಪಾಲವಿಠಲನಮಿಸಿ ಬೇಡುವವರ ನೀನರಿಯದುದಲ್ಲ ೫

ಜತೆ
ಪತಿವ್ರತಾ ಸ್ತ್ರೀಗೆ ಆವ ವ್ರತವು ಇಲ್ಲಪತಿ ಆಜ್ಞವು ಒಂದೆ ಗೋಪಾಲವಿಠಲ ತಂದೆ

ಅವಿದ್ಯೆ ತಮ್ಮನ್ನು ಆವರಿಸಿದೆ
೧೦೮
ಸುಳಾದಿ
ಧ್ರುವತಾಳ
ಹೊತ್ತು ಹೋಗದಿನ್ನು ಅನಾದಿ ಅವಿದ್ಯಾವಿನ್ನುಹೊತ್ತಿಸಲು ಜ್ಞಾನಾಗ್ನಿ ಬಲ ಸಾಲದುಹೊತ್ತು ಬಹು ಆಯಿತು ಇನ್ನು ತೀರದಲ್ಲಹೊತ್ತು ಹಾಕೋ ಉಪಾಯ ತಿಳಿಯಲಿಲ್ಲಹೊತ್ತು ಬಹು ದಣಿದು ಮಮತೆಂಬೊ ಭಾರವ ಪೊತ್ತುಹೊತ್ತು ಆವುದೊ ಎನಗೆ ನಿನ್ನ ತಿಳಿಯೆಹೊತ್ತಾಡುವುವು ಎನ್ನ ಕಾಯಾದಿಗಳು ಬಿಡದೆಹೊತ್ಥಾಕುವುವು ನಾನಾ ವಿಷಯಗಳಿಗೆಹೊತ್ತು ಒಂದಿನದ ಒಳಗಾಗಿ ಲವಕಾಲಹೊತ್ತು ನಿನ್ನ ಸಂಸ್ಕ್ರತಿಯು ಮನಕೆ ಬಂತೆಹೊತ್ತು ಅಂದರೆ ಅದೆ ಹೊತ್ತು ಸರಿಕಾಣೆಯ್ಯಹೊತ್ತವನೆ ಸರಿ ಬರಿದೆ ಹೊತ್ತು ವ್ಯರ್ಥಹೊತ್ತು ಆಡುವ ದೊರೆಯೆ ಗೋಪಾಲವಿಠಲಹೊತ್ತು ನಡೆಸುವ ಪಾದಧತ್ತಿಲಿಡಿಸೆನ್ನ ೧

ಮಠ್ಯತಾಳ
ನಿನ್ನ ಸ್ಮ್ರತಿಯೆ ಕಾಲ ವಿಸ್ಮ್ರತಿಯೆ ಅಕಾಲನಿನ್ನ ಸ್ಮ್ರತಿಯೆ ಪುಣ್ಯ ವಿಸ್ಮ್ರತಿಯೆ ಪಾಪನಿನ್ನ ತಿಳಿದವ ಸರ್ವ ತಿಳಿದವನಿನ್ನ ಅರಿಯದವ ನಿರಯ ಬಿದ್ದವನಿನ್ನಿಂದಲಿ ಒಂದು ಕರ್ಮ ಮಾಡಿದವೈನ್ನು ನಾನಾ ವಿಧಿಯು ತಾನು ಮಾಡಿದವಪುಣ್ಯವೆಂದರು ಇದೆ ಪಾಪವೆಂದರು ಅದೆಅನ್ಯಾಸಕ್ತಿ ಎಂಬುದೆನಗೆ ದೋಷನಿನ್ನಾಸಕ್ತಿಯು ಎಂಬುದೆನಗೆ ಪುಣ್ಯಎನ್ನ ಯತನವೇನು ಇನ್ನಿದಕಾದರುನಿನ್ನ ಕರುಣದಿಂದೆ ಇಂದು ಆಗಲು ಬೇಕುಘನ್ನ ದಯಾನಿಧೆ ಗೋಪಾಲವಿಠಲಾನಂತಾನಂತ ಅಘಟಿತ ಮಹಾಘಟಿತ ೨

ರೂಪಕತಾಳ
ನಿನ್ನ ಕರುಣವೆಂಬ ಘನ್ನ ಮಹಾಸೋನೆಗೀನ್ನ ದೋಷವೆಂಬ ವಹ್ನಿ ತಾ ನಿಲ್ಲುವುದೆನಿನ್ನ ಕರುಣರಸದ ಬಲವೆಲ್ಲಿ ನೀನೆಲ್ಲಿಎನ್ನಲೂ ಎನೆಸಲ್ಲ ಬಲ್ಲಮಾತಿಗೆ ದೇವನಿನ್ನ ಕರುಣದಿಂದ ಪೋಗುವಷ್ಟು ಪಾಪಎನ್ನಿಂದಲಾಗುವುದೆ ಎಲೆ ಎಲೆ ಸರ್ವಜ್ಞನಿನ್ನ ಅನಂತಕ್ಕೆ ಅಂತ್ಯ ಎಂಬುದು ಇಲ್ಲಕಣ್ಣಿಲಿ ಕಟ್ಟಿಸಿಕೊಂಡಿ ಎಂತೊ ಕರುಣಿನಿನ್ನ ಅಣುತ್ವಕ್ಕೆ ವಿಶ್ರಾಂತಿಯಿಲ್ಲ ಸರೀನ್ನೇಕಕಾಲದಲ್ಲೆ ಅಣುಮಹತ್ತುರೂಪ-ವನ್ನೆ ಒಂದರಲ್ಲೆ ತೋರ್ಪುದೆಂತೊಚಿನ್ನುಮಯಮೂರುತಿ ಗೋಪಾಲವಿಠಲನಿನ್ನ ಆಟವನ್ನು ಬಲ್ಲರೊ ನಿನ್ನವರು ೩

ಝಂಪೆತಾಳ
ಕೋಡಗ ತನ್ನ ಮರಿಯ ಕಚ್ಚಿಕೊಂಡು ಇನ್ನುಓಡ್ಯಾಡಿದರು ಇನ್ನು ನಾನಾ ಕಡೆಗೆಬಿಡಿಸಿಕೊಳ್ಳದೆ ಇಪ್ಪುವ ಸ್ವಾತಂತ್ರ್ಯಕೋಡಗನದೊ ಅದರ ವತ್ಸನದೊನೋಡೆನ್ನನು ಬಡಿದು ಆಡುವ ಆಟವುಓಡಿಸಿದಂತೆ ನಾ ಓಡಾಡುವೆಕೋಡಗ ತನ್ನ ಕೂಸುಕೊಂಡೇ ತಾನುಓಡ್ಯಾಡಿ ಫಲ ಮೆದ್ದರಿನ್ನು ಮೆಲಿಪುವುದುಕೇಡು ಲಾಭದ ಸ್ಥಿತಿಯ ಕೂಸು ಬಲ್ಲುದೆ ಇನ್ನುಕೋಡಗ ಕುಣಿಸಿದಂತೆ ಕುಣಿವುದುರೂಢಿಗೊಡೆಯ ದೇವ ಗೋಪಾಲವಿಠಲ ನೀಆಡಿಸಿದಂತೆ ನಾ ಆಡುವೆನೊ ೪

ತ್ರಿಪುಟತಾಳ
ಎಷ್ಟು ಆದುವು ನೋಡು ಎನಗೆ ಬಂದ ಯೋನಿಕಷ್ಟಬಟ್ಟುದು ಕಡೆ ಮೊದಲೆ ಇಲ್ಲವೈಷ್ಣವ ಜನ್ಮಂಗಳು ಇದಕ್ಕಿಂತಧಿಕಾಗಿಕೊಟ್ಟುದು ಹಾಗೆ ಸಾರಿ ಜ್ಞಾನವಿತ್ತುಎಷ್ಟು ಕಡಿಮೆ ನೋಡು ಆಗ ಈಗಲು ನೋಡಾನಷ್ಟ ಅನಂತ ಮಾಡಿ ಈ ಜ್ಞಾನನೆನ್ನಬಟ್ಟಬವಣೆ ಎಷ್ಟು ಈಗ ವೈಷ್ಣವನಾಗಿಪುಟ್ಟುವುದಕ್ಕೆನಗೆ ಪುಣ್ಯಪುರುಷಎಷ್ಟು ಮಂದಿ ಜನ ಎನಗೆ ಸಹಾಯವಾಗಿಸೃಷ್ಟಿ ಮಾಡಿಸಿಪ್ಪುದು ನೀನರಿಯಾಶಿಷ್ಟ ಜನರ ಪಾಲ ಗೋಪಾಲವಿಠಲಗಟ್ಯಾಗಿ ಪಡೆದೆನ್ನ ಸಾಕಬೇಕು ೫

ಅಟ್ಟತಾಳ
ಸನ್ಯಾಸಿ ಎನಿಸಿ ನಾ ನಿನ್ನ ಕಾಣಲಿ ಇಲ್ಲಹನ್ನೆರಡು ನಾಲ್ಕೊರುಷ ನರಕ ಭೋಗಿಸಿಯಿಪ್ಪೆಇನ್ನು ವೈದಿಕನಾಗಿ ಬ್ರಹ್ಮದ್ರೋಹವು ತಾಕಿಬನ್ನಬಟ್ಟುಯಿಪ್ಪೆ ಇನ್ನು ಕೆಲವು ಹಿಂದೆಹೆಣ್ಣಿಗಾಗಿ ಪೋಗಿ ಮುನ್ನೆ ಪ್ರಾಣವು ಕೊಟ್ಟುಇನ್ನು ಅದರ ಶೇಷ ಈಗನುಭವಿಸುವೆಇನ್ನು ನಾನಾದೋಷ ಘಟಿಸಿ ಇಪ್ಪುವು ಬಹಳನಿನ್ನ ಕರುಣದಿಂದ ಕಡೆಹಾಯಿಸೆಂದೆನಿಪೆಅನಿಮಿತ್ತ ಬಂಧು ಗೋಪಾಲವಿಠಲನಿನ್ನ ಬಿಟ್ಟವನಲ್ಲ ಏನು ಬಂದರನ್ನ ೬

ಆದಿತಾಳ
ಪಾಹಿ ಪಂಢರಿರಾಯ ಪಾಲಿತ ನಿನ್ನಿಂದಪಾಹಿ ಪಾಂಡವಪಾಲ ಪಾಪವಿನಾಶನಪಾಹಿ ಅಹೋಬಲ ಶ್ರೀನಾರಸಿಂಹನೆಪಾಹಿ ಅಳಗಿರಿ ತಿರುಮಲರಾಯನೆಪಾಹಿ ಪಾಹಿ ರಾಮ ತ್ರಾಹಿ ತ್ರಾಹಿ ಹರೆಹಾ ಹಾ ಅಲೌಕಿಕ ಹೋ ಹೋ ಸುಖಪೂರ್ಣಮಹಾತಿಸುಂದರ ಮನ್ಮಥ ಮನ್ಮಥದೇಹಿ ಜ್ಞಾನ ಭಕ್ತಿ ವೈದೇಹಿರಮಣನೆರಹಸ್ಯದಲಿ ನಿನಗಭಿವಂದಿಸುವೆ ಎನಗೆ ದೇಹ ತಂದಿತ್ತಂತೆ ತತ್ಕಾರ್ಯ ಸಾಧನ ಬಹಳಾಗಿ ಮಾಡಿಸಿ ಬಂದು ಒದಗಿ ನೀನುಶ್ರೀಹರಿ ಕಾಣಿಸಿಕೊಂಡು ಕಾಯೋ ನ-ರ ಹರೆ ಸಾದೃಶ್ಯರಹಿತ ಗೋಪಾಲವಿಠಲಪಾಹಿ ಪಾಹಿ ನಮೋ ನಮೋ ಸ್ವಾಮಿ ೭

ಜತೆ
ಅಪರಾಧ ಅನಂತ ಮಾಡಿ ನಾ ಮರೆಹೊಕ್ಕೆಅಪಾರ ಕರುಣಿ ಗೋಪಾಲವಿಠಲ ಕಾಂ

ಆವ ರೋಗವೊ ಎನಗೆ ದೇವಧನ್ವಂತ್ರಿ
೯೪
ಆವ ರೋಗವೊ ಎನಗೆ ದೇವಧನ್ವಂತ್ರಿ ಪ.
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ಅ.ಪ.
ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ ೧
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ ೨
ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ ೩

ಹಾಡಿನ ಹೆಸರು :ಆವ ರೋಗವೊ ಎನಗೆ ದೇವಧನ್ವಂತ್ರಿ
ಹಾಡಿದವರ ಹೆಸರು :ದತ್ತಾತ್ರೇಯ ವೇಲಂಕರ್
ಸಂಗೀತ ನಿರ್ದೇಶಕರು : ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಈ ಪರಿಯ ಅಧಿಕಾರ ಒಲ್ಲೆ ನಾನು
೧೭೫
ಈ ಪರಿಯ ಅಧಿಕಾರ ಒಲ್ಲೆ ನಾನು ಪ.
ಶ್ರೀಪತಿಯೆ ನೀನೊಲಿದು ಏನು ಕೊಟ್ಟುದೆ ಸಾಕು ಅ.ಪ.
ಚಿರಕಾಲ ನಿನ್ನ ಕಾದು ತಿರುಗಿದುದಕೆ ನೀನುಕರುಣದಿಂದಲಿ ರಚಿಸಿ ಈ ದುರ್ಗದೀರ ಪೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆಹುರುಳು ಲೇಶವು ಕಾಣೆ ಕರೆ ಕರೆಯು ಮೇಲೆ ೧
ದಾರಿಯಲ್ಲಿ ಹೋಗಿ ಬರುವುದಕ್ಕೆ ಉಪಟಳ ಘನ್ನಚೋರರಟ್ಟುಳಿಗಂತು ನೆಲೆಯಿಲ್ಲವೋವೈರಿ ವರ್ಗದ ಜನರು ಒಳಗೆ ಬಲು ತುಂಬಿಹರುಮೀರಿ ನಿನ್ನವರಲ್ಲಿ ಊರಿ ನಿಲ್ಲಲಿಗೊಡರು ೨
ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆಸ್ವಾಮಿತ್ವವನು ನೋಡೆ ಮನೆಮನೆಯಲಿ ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನುಗ್ರಾಮ ಒಪ್ಪಿಸಿ ನಮಿಪೆ ಸರಿ ಬಂದುದನೆ ಮಾಡೊ ೩
ಸರಿಬಂದ ವ್ಯಾಪಾರ ತಾವು ಮಾಡಿ ಎನ್ನಬರಿದೆ ಲೆಕ್ಕಕ್ಕೆ ಮಾತ್ರ ಗುರಿಯ ಮಾಡಿಕರೆಕರೆಯ ಪಡಿಸಬೇಕೆಂದು ಯೋಚಿಸುತಿಹರುಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೆ ೪
ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿಪಾಳತಿಯೊಳೊಪ್ಪಿಸಿಕೊಡುವೆವೆಂದುಆಲೋಚಿಸಿಹರು ಈಗ ನಿನ್ನ ನಿಜ-ಆಳುಗಳ ಬಲ ಮಾಡಿ ಎನ್ನ ರಕ್ಷಿಸೊ ದೊರೆಯೆ ೫
ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯಾನುವಾದ ದಿವಸ ಒಂದಾದರಿಲ್ಲಮೊನೆಗಾರ ಬಲವಿಲ್ಲ ಇದ್ದವರು ವಶವಿಲ್ಲಕೊನೆಗೊಂಡು ಗ್ರಾಮ ಕಾಪಾಡುವ ಬಗೆ ಎಂತೊ ೬
ಇನಿತನಾಯಕದ ಕೊಂಪೆ ಒಳಗಿನವಾಸ-ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳುಮನೆಮಾಡಿಕೊಡಲು ನಿನ್ನ ಹೊಂದಿಕೊಂಡುಅನುಗಾಲ ಬದುಕುವೆನೊ ಗೋಪಾಲವಿಠಲ ೭

ಹಾಡಿನ ಹೆಸರು :ಈ ಪರಿಯ ಅಧಿಕಾರ ಒಲ್ಲೆ ನಾನು
ಹಾಡಿದವರ ಹೆಸರು :ಅರುಣ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನು ಬೇಡಲಿ ನಿನ್ನ ಬಳಿಗೆ ಬಂದು
೧೫೭
ಏನು ಬೇಡಲಿ ನಿನ್ನ ಬಳಿಗೆ ಬಂದುನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ಪ.
ಜನನಿಯ ಕೊಡು ಎಂದು ಜಯವಂತ ಬೇಡುವೆನೆಜನನಿ ಏನಿತ್ತಳಾ ಧ್ರುವರಾಯಗೆಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ ೧
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆಅನುಜನೇನಿತ್ತನೈ ಆ ವಾಲಿಗೆಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೆಧನವ ಗಳಿಸಿದ ಸುಯೋಧನನೇನಾದನು ೨
ಸತಿಯಳ ಕೊಡು ಎಂದು ಮತಿವಂತ ಬೇಡುವೆನೆಸತಿಯಿಂದ ದ್ಯುನಾಮಕನೇನಾದನಯ್ಯಸುತರುಗಳ ಕೊಡು ಎಂದು ಸತತದಲಿ ಬೇಡುವೆನೆಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ೩
ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೆ ಬಂಧುಗಳು ಸಲಹಿದರೆ ಗಜರಾಜನಾಂದಣವ ಕೊಡು ಎಂದು ಅಂದದಲಿ ಬೇಡುವೆನೆಅಂದಣೇರಿದ ನಹುಷನೇನಾದನಯ್ಯ ೪
ಬೇಡುವೆನು ನಾ ನಿನ್ನ ಬೇಡತಕ್ಕುದ ದೇವನೀಡೇನೆಂಬುದು ನಿನ್ನ ಮನದೊಳಿತ್ತೆಮೂಡಲಗಿರಿವಾಸ ಗೋಪಾಲವಿಠಲ ಪರರಬೇಡದಂತೆ ಎನ್ನ ಮಾಡಯ್ಯ ಹರಿಯೆ ೫

ಹಾಡಿನ ಹೆಸರು :ಏನು ಬೇಡಲಿ ನಿನ್ನ ಬಳಿಗೆ ಬಂದು
ಹಾಡಿದವರ ಹೆಸರು :ಕೀರ್ತಿಕುಮಾರ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕರವ ಮುಗಿದ ಮುಖ್ಯಪ್ರಾಣ
೬೦
ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ.
ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು ೧
ತಾರತಮ್ಯ ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು ೨
ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು೩
ಪರಿಪರಿ ಭಕ್ತರ ಹೃದಯಕಮಲದಲ್ಲಿನಿರುತ ಮಾಡುವ ಕರ್ಮ ಶ್ರೀಹರಿಗೆ ಅರ್ಪಿತವೆಂದು ೪
ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು ೫

ಹಾಡಿನ ಹೆಸರು :ಕರವ ಮುಗಿದ ಮುಖ್ಯಪ್ರಾಣ
ಹಾಡಿದವರ ಹೆಸರು :ಸುಮನಾ ವೇದಾಂತ್
ರಾಗ :ಶ್ರೀರಾಗ
ಸಂಗೀತ ನಿರ್ದೇಶಕರು :ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದಯವಿರಲಿ ದಯವಿರಲಿ ದಾಮೋದರ
೨೪
ದಯವಿರಲಿ ದಯವಿರಲಿ ದಾಮೋದರ ಪ.
ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ.
ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ೧
ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ ೨
ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ರ‍ಮತಿಗೆ ವಿಶೇಷ ಮಾರುತಿರಮಣ ನಿನ್ನ ೩
ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು ೪
ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು ೫
ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ ೬
ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ ೭
ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ೮

ಹಾಡಿನ ಹೆಸರು :ದಯವಿರಲಿ ದಯವಿರಲಿ ದಾಮೋದರ
ಹಾಡಿದವರ ಹೆಸರು :ಮಾನಸಿ ಪ್ರಸಾದ್
ರಾಗ :ಮಧುವಂತಿ
ಸಂಗೀತ ನಿರ್ದೇಶಕರು :ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ
೩೭
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ಪ.
ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ಅ.ಪ.
ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ ೧
ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿನರಸಖನಿಗೆ ಭಾರ ಸಮರ್ಪಿಸಲಿವಿರಸಮಾಡಿ ಮನೆ ಮುರಿಸುತ ಬರಲಿ ೨
ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿಜ್ಞಾನಹೀನನೆಂದೆನುತ ನಿಂದಿಸಲಿಶ್ರೀನಿಧಿ ಗೋಪಾಲವಿಠಲ ಬೆರಿಲಿ ೩

ಹಾಡಿನ ಹೆಸರು :ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ
ಹಾಡಿದವರ ಹೆಸರು :ಸಂಧ್ಯಾ ಶಂಕರ್
ರಾಗ :ಸರಸ್ವತಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ