Categories
ರಚನೆಗಳು

ಗೋಪಾಲದಾಸರು

ಕೃಷ್ಣನನ್ನು ಅವನ ಮಾವ ಕಂಸ
ಪುರಾಣ
೧೫೦
ಅಗಲಿ ಸೈರಿಸಲಾರೆವೊ ವೇಣುಗೋಪಾಲ ಪ.
ಅಗಲಿ ಸೈರಿಸಲಾರೆವೊ ನಗಧರ ಪನ್ನಗನಗಾಧೀಶಮೃಗಮದ ತಿಗುರಿದ ನಗೆಮೊಗ ಚೆನ್ನಿಗನಿಗಮಗಳಿಗೆ ಸಿಗದಗಣಿತ ಸುಗುಣ ಅ.ಪ.
ಗುಲಗಂಜಿ ಬರ್ಹಿಯಗರಿಯು ಎಳೆದಳಿರು ಕೇತಕಿಯ ಗರಿಯುಥಳಥಳಿಪ ಫಾಲದರಳೆಲೆಯು ಹೊಳೆವ ಕುಂಡಲಗಳ ಪ್ರಭೆಯುಹೊಳೆವ ಹಾರದಿಂದಲೊಪ್ಪುವ ರಾಮಾರಾಮದಿ ಗೆಳೆಯರೊಡನೆ ಆಡಿ ಪಾಡುತ್ತ ರಾಜಬೀದಿಯೊಳು ಸುಳಿದು ಕುಲುಕಿ ನಲಿನಲಿದಾಡುತ್ತ ನಿತ್ಯಗೋವತ್ಸಗಳನು ಸಂರಕ್ಷಣೆ ಮಾಡುತ್ತ ಕೊಳಲನೂದುತ್ತ ಸುಳಿವಳಿಗಿಳಿಶಿಖಿಗಳ ಕುಲಾವಳಿಗಳ ಘಲಿ ಘಲಿ ಘಲಿರೆಂದು ಕುಣಿಸುತ್ತ ಎಳೆವಾರೆಗಣ್ಣಲಿ ನೋಡುತ್ತ ಲಲನೇರ ತನುಮನ ಸೆಳೆಯುತ್ತ ಕಿಲಕಿಲ ನಗುತೆಮ್ಮೊಳು ರಮಿಸುತ್ತ ಕೆಂದೊಳದಯಸವಿಯುವ ಚೆಲುವ ಚೆನ್ನಿಗ ೧
ದೇವ ಕೊಳಲನೂದುವುದು ನಾವು ಕೇಳಿ ಮುದದಿ ನಲಿದು ಗೋವ್ಯಾಘ್ರ ಏಕತ್ರ ಬೆರೆದು ಕೇವಲವೈರತ್ವ ಮರೆದು ಮೇವು ಜರಿದು ನಿನ್ನನೆ ನೋಡುತ್ತ ಖಗಮೃಗ ಏಕೋ-ಭಾವದಿಂದ ಗಾನವ ಕೇಳುತ್ತ ಚಿತ್ರದಿ ಬರೆದಭಾವದಂತೆ ಜಗಕೆ ತೋರುತ್ತ ಮನೆ ಮನೆಯೊಳುನಾವೀವಾರ್ತೆ ಕಿವಿಯಲ್ಲಿ ಕೇಳುತ್ತ ನಿಲ್ಲದೆ ತ್ವರಿತ ತಾವನ ಬಾವನ ಮಾವಿನ ಮರದೊಳು ಗೋವಳ ನಿನ್ನನು ಕಾಣುತ್ತಭಾವಜ ಕಲೆಗಳು ಉಕ್ಕುತ್ತ ಭಾವದಿ ಬಿಗಿಬಿಗಿದಪ್ಪುತ್ತ ಈ ವಿಧ ಮುದ ನಮಗೀವ ಸುಖಾಂಬುಧಿ ಪೂವಿನ ಶರಪಿತ ಮಾವನ ಬೆರೆದರೆ ೨ ಅನಘ ನಿನ್ನನುಗಾರರ ಕೂಡಿ ವನವನ ಸುಳಿಯಲು ನೋಡಿ ಕೊನೆಗಣ್ಣಿಂದ ಸನ್ನೆಮಾಡಿ ಮನೆಯ ಕೆಲಸಗಳೀಡಾಡಿವನಿತೇರೆಲ್ಲ ಮಾತನಾಡುತ್ತ ಚೆಲುವ ಮೂರ್ತಿಯ ಮನದೊಳಗೆ ಧ್ಯಾನವ ಮಾಡುತ್ತ ಊದುವ ಕೊಳಲಧ್ವನಿಯ ಕರ್ಣದಿಂದ ಕೇಳುತ್ತ ಬಂಧುಗಳ ಮಾತ ಗಣನೆ ಮಾಡದಲೆ ಮೀರುತ್ತ ನಿನ್ನನರಸುತ್ತ ತನುಮನಧನವನು ಗಣನೆಗೆ ತಾರದೆ ವನ ವನತಿರುಗುತ್ತ ಬಂದೆವೊತನುಮನ ಒಪ್ಪಿಸಿ ನಿಂದೆವೊ ಕ್ಷಣವನು ಅಗಲದಿರೆಂದೆವೊಚಿನುಮಯ ಗೋಪಾಲವಿಠಲ ಮಾ ಮನೋಹರ ಮುನಿಜನ ಮನ ಮಂದಿರ ೩

ಕಾಳಿಂಗಮರ್ದನನ ಕಥೆ
೧೫೧
ಆಕಳ ಕಾಯ್ದ ಗೋಕುಲವಾಸನು ಪ.
ಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿ ನಾಕೇಶ ವಿನುತ ಲೋಕರ ಪಾಲಕ ಸಾಕಾರ ಮೂರುತಿ ಏಕಮೇವಾದ್ವಿತೀಯ ಕೃಷ್ಣರಾಯ ಅ.ಪ.
ಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲತುರುವ ಕಾಯಲು ಹೊರಹೊರಡೆಂದು ಕರೆದು ಸೂಚಿಸಿ ಹರುಷದಿಕರಣಕುಂಡಲ ಶಿರದಿ ಕಿರೀಟ ಸಿರಿಮುಖಕ್ಕೆ ಕಸ್ತೂರಿ ನಾಮವುಬರೆದು ಪೂಸರ ಕೊರಳಲೊಪ್ಪುವ ಸರಸ ಪೀತಾಂಬರಧರ ೧
ನಳಿನ ಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುಕಾಳಿಂದಿ ತೀರದಿ ಗೆಳೆಯರ ಕೂಡಿ ಮಳೆಯ ಮಿಂಚಿನಂಥೊಳೆಯುತ್ತಕೊಳಲನೂದುತ್ತ ಕಿಲಿಕಿಲಿನಗುತ ಗಿಳಿ ಚಕೋರವು ಅಳಿಮಯೂರಾ-ವಳಿ ಬಳಿಯಲ್ಲಿ ಸುಳಿಯಲು ಕೃಷ್ಣ ನಲಿವ ನಂದವ ಪೇಳಲಳವಲ್ಲ ೨
ತೊಂಡರೊಡಗೂಡಿ ಪುಂಡರೀಕಾಕ್ಷ ಗೋವಿಂದ ಕಾಳಿಯ ದಂಡೆಯಲ್ಲಿರಿಸಿಕೊಂಡು ಬಂದ ಬುತ್ತಿ ಹಿಂಡು ಮಕ್ಕಳಿಗೆಲ್ಲ ಉಂಡು ಉಣಿಸುತ ಪುಂಡಾಟದಿಚೆಂಡು ಚಿಣ್ಣಿಕೋಲು ತಂಡ ತಂಡದುದ್ದಂಡ ಲೀಲೆಯ ಕಂಡು ಖೇಚರದಿಅಂಡಜ ಉಮೇಶ ಪುಂಡರೀಕೋದ್ಭವ ಮಂಡೆಯನು ಬಾಗಿ ಕೊಂಡಾಡಲು ೩
ಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಆಡಲೋಡಿದ ಆ ಹುಡುಗರೆಲ್ಲ ಕೂಗ್ಯಾಡುತಲಿ ಮೊರೆಯಿಡಲಾಗಮೃಡ ವಿನುತ ತಾ ನುಡಿಯನಾಲಿಸಿ ಕಡಹದ ಮರನಡರಿ ಮೇಲೇರಿನಡು ನೀರೊಳು ತಾ ಸಿಡಿದು ಧುಮುಕೆ ಗಡಬಡಿಸಿತ್ತು ಪೊಡವಿಯೆಲ್ಲ ೪
ಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಲೆಕ್ಕಿಸದಲೆ ಕಾಲಿಕ್ಕಿ ಹಣೆಯಲ್ಲಿ ಫಕ್ಕನೆ ತುಳಿದನಕ್ಕರದಿತಕ್ಕತಥೈಯ ಧಿಮಿಧಿಮಿಕೆಂದು ಕುಣಿಯೆ ಸೊಕ್ಕು ಉಡುಗಲು ಫಕ್ಕನೆ ಕಾಳಿಂಗದಿಕ್ಕುಗಾಣದೆ ಪ್ರಾಣಕ್ಕೆ ಬಂದಿತೆಂದು ಕಕ್ಕಸದಿಂದುಸುರಿಕ್ಕುತಿರೆ ೫
ಇಂದಿರಾಪತಿ ಆನಂದದಿಂದಾಡಲು ಬಂದು ಬೊಮ್ಮ ವಾಯುನಂದಿವಾಹನಮ-ರೇಂದಿರ ಸನಕ ಸನಂದನ ಸಕಲ ವೃಂದಾರಕರೆಲ್ಲ ನಿಂದಂಬರದಿಂದ ಚೆಂದದಿ ಪೂಮಳೆ ಸುರಿಯೆ ದುಂದುಭಿಗಳು ತಮ್ಮಿಂದ ತಾವೆ ಮೊರೆಯೆ ಗಂಧರ್ವರು ಮನ ಬಂದಂತೆ ಪಾಡಲು ಸುಂದರ ನಾರೇರು ವಂದಿಸಲು ೬
ಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಪರಿಹಾರ ಮಾಡಿ ಸರ್ರನೆ ನೀನಿದ್ದ ಪುರಕ್ಕೆ ಪೋಗು ಎಂದರುಪಿದಹೊರಗೆ ನೆರೆದ ಪರಿವಾರವೆಲ್ಲ ಕರೆಯುತ್ತಿರಲು ಭರದಿ ಅವರಬೆರೆದು ಸರ್ವರ ಹೊರೆದು ಲೋಕದಿ ಮೆರೆದ ಸುಖದಿ ಗಿರಿಧರ ೭
ಗರಳ ಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಹರಿಯು ಕೊಳಲಸ್ವರಪೂರ್ಣ ಮಾಡಿ ಕರೆಯಲಾಗ ಎಚ್ಚರವಾಗೆಕರುಣವಾರಿಧಿ ಕರಸ್ಪರುಷದಿ ಪರಮ ಉಲ್ಲಾಸಭರಿತರಾಗಿನ್ನುತರಳರೆಲ್ಲ ತುತ್ತೂರಿಯನೂದುತ್ತ ಪುರದ ದಾರಿಯ ಪಿಡಿಯಲು ೮
ಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ ಕಂಗಳುಪೊಳೆಯೆ ಅಂಗನೆರೆಲ್ಲರು ಶೃಂಗಾರವಾಗಿನ್ನು ರಂಗವಲ್ಲಿನಿಟ್ಟ ರಂಗಣದಿಬಂಗಾರದಾಭರಣಗಳ ಧರಿಸಿ ಮುಂಗಟ್ಟಿ ನಿಂತರು ಸಂಗೀತ ಪಾಡುತ್ತತುಂಗ ವಿಕ್ರಮ ಗೋಪಾಲವಿಠಲಗೆ ಮಂಗಳಾರತಿ ಎತ್ತಿ ಶೃಂಗಾರದಿ ೯

ಇದು ಶ್ರೀಹರಿಯ ಸರ್ವೋತ್ತಮತ್ವ
೧೧೮
ಆಪ್ತ ಮಾತಿದು ನಿಜ ಪ್ರಾಪ್ತ ಜನಕೆಕುಪ್ತ (ಕುಪಿತ ?) ರಾದರೆ ಕೇಳಿ ಅಪ್ರಾಪ್ತರು ಪ.
ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆನಿರಯವೆ ಪ್ರಾಪ್ತಿ ಸಂದೇಹವಿಲ್ಲಹಿರಿಯ ಹರಿಗೋಲ ನಂಬಿ ಕಿರಿಧುಟ್ಟುಗಳ ಬಿಡಲುಭರದಿ ಹೊಳೆದಾಟಿ ತಾ ದಾರಿಯ ಸೇರುವನೆ1
ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿಎಷ್ಟು ಮಾಡಿದರು ಗತಿ ಪೊಂದುವನೆಸಿಟ್ಟಿನಲಿ ಸರ್ಪನ ತುಟಿ ತುದಿಯ ಚಿವುಟಿದರೀಷ್ಟು ಸುಖ ಐದುವನು ನಷ್ಟವಿಲ್ಲದೆ ೨
ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆಪರಮಪದ ದೊರಕುವುದೆ ಮರುಳನಲ್ಲದೆಶರಧಿ ಆಶ್ರೈಸಿದ್ದ ಮಚ್ಚನ ಬಲಮಾಡಿಶರಧಿಯನು ದೂಷಿಸಲು ಹರುಷಬಡುವುದೆ ೩
ಹರನ ದ್ವೇಷವ ಮಾಡಿ ಹರಿಯ ಪೂಜೆಯ ಮಾಡೆಪರಮಗತಿಯಾಗುವುದೆ ಪತಿತನಿಗೆಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆವರ ಭೋಜನವು ಅವಗೆ ಒದಗಿ ಆಗುವುದೆ ೪
ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದದೇವನಲ್ಲದೆ ಜೀವನೆನಲು ಬಿದ್ದಪಾವನ್ನ ಮೂರುತಿ ಗೋಪಾಲವಿಠಲನಂಘ್ರಿಸೇವಕಗೇನು ಗತಿ ಆದವರಿಗೆ ಆಗಲಿ ೫

ಶ್ರೀಹರಿಯ ಭಕ್ತಿಗೆ ದಾಸರ ಮೈಮನಗಳು
೯೪
ಆವ ರೋಗವೊ ಎನಗೆ ದೇವಧನ್ವಂತ್ರಿ ಪ.
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ಅ.ಪ.
ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ ೧
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ ೨
ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ ೩

ಈ ಕೀರ್ತನೆಯಲ್ಲಿ ಶ್ರೀಕೃಷ್ಣನ ಒಂದೇ
೧೫೩
ಇಂದಿರೇಶ ನಿನ್ನದೊಂದೆ ಕ್ರಿಯಾ ದ್ವಂದ್ವವಾಯಿತೋಕುಂದು ತೋರಿತು ಖಳರಿಗೆ ಪರಮಾನಂದವಾಯಿತು ವೃಂದಾರಕರಿಗೆ ಪ.
ಜನನ ಕ್ರಿಯವೆ ದೇವಕಿ ಮನೋಜಯವಾಯಿತೊಜನನ ಕ್ರಿಯವೆ ಜೈನನ ಮನೆತನವಳಿಯಿತೊಸ್ತನ್ಯಪಾನದಿಂದ ಗೋಪಿಗೆ ಘನ ಮೋದವಾಯಿತೊಸ್ತನ್ಯಪಾನದಿಂದ ಪೂತನಿ ಪ್ರಾಣ ನಾಶವಾಯಿತೊ1
ಬಾಲಕ್ರೀಡೆ ಯಮಳಾರ್ಜುನರ ಪಾಲಿಸಿತೊ ಕರುಣದಿಬಾಲಕ್ರೀಡೆ ಶಕಟಾದ್ಯರನು ಮೂಲನಾಶನ ಮಾಡಿತೊಪಲಾಯನವೆ ಮುಚುಕುಂದನಿಗೆ ಪರಮಗತಿಗೈದಿಸಿತೊಪಲಾಯನವೆ ಕಾಲಯವನನ ಪ್ರಾಣವಪಹರಿಸಿತೊ ೨
ಒಂದೆ ವಚನವೆ ಇಂದ್ರಾದ್ಯರಿಗಾನಂದಕರವಾಯಿತೂಂದೆ ವಚನವೆ ವಿರೋಚನಗೆ ಬಂಧವ ತಂದಿಟ್ಟಿತೊಬಂಧುತನವೆ ಧರ್ಮಾದ್ಯರನು ವೃಂದದೊಳು ಸಲಹಿತೊಬಂಧುತನವೆ ಪೌಂಡ್ರಕರಸನ ಮಂದಭಾಗ್ಯನ ಮಾಡಿತೊ ೩
ನರ ವಿಶ್ವರೂಪ ನೋಡೆ ಹರುಷೋದ್ರೇಕವಾಯಿತೊದುರ್ಯೋಧನ ನೋಡಲವಗೆ ದುಃಖವೆ ಬಂದೊದಗಿತೊಕರಸ್ಪರ್ಶವಾಗೆ ತುರುಗಳ ಮರಣ ಪರಿಹರಿಸಿತೊಕರಸ್ಪರ್ಶವಾಗೆ ಕೇಶಿಗೆ ಮರಣವೆ ಒದಗಿತೊ ೪
ನಿನ್ನ ಗುಣರೂಪಕ್ರಿಯಾ ಬಲದ ಕೊನೆಯಾವನು ಬಲ್ಲನೊನಿನಗೆ ವೈಷಮ್ಯಲೇಶವನು ಕಾಣೆ ಶ್ರೀಶನೆದನುಜ ದಿವಿಜರ ಮನದನುಸಾರದಾತನೆಮಣಿದು ನಮಿಸುವೆ ಕಾಯೋ ಗೋಪಾಲವಿಠಲ ೫

ಕೈಯಲ್ಲಿ ಜಪಮಾಲೆ ಹಿಡಿದು
ಹನುಮ-ಭೀಮ-ಮಧ್ವ
೫೭
ಇದು ಏನೊ ಚರಿತ ಯಂತ್ರೋದ್ಧಾರ ಪ.
ಇದು ಏನೊ ಚರಿತ ಶ್ರೀಪದುಮನಾಭನ ದೂತಸದಾ ಕಾಲದಲಿ ಸರ್ವರ ಹೃದಯಾಂತರ್ಗತ ಅ.ಪ.
ವಾರಿಧಿ ಗೋಷ್ಪಾದನೀರಂತೆ ದಾಟಿದಧೀರ ಯೋಗಾಸನಧಾರಿಯಾಗಿಪ್ಪೊದು ೧
ದುರುಳ ಕೌರವರನ್ನು ವರಗದೆಯಲಿ ಕೊಂದಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು೨
ಹೀನ ಮತಗಳನ್ನು ವಾಣಿಲಿ ತರಿದಂಥಜ್ಞಾನವಂತನೆ ಹೀಗೆ ಮೌನವ ಧರಿಸಿದ್ದು ೩
ಸರ್ವವ್ಯಾಪಕ ನೀನು ಪೂರ್ವಿಕ ದೇವನೆಶರ್ವನಪಿತ ಬಂದೀ ಪರ್ವತ ಸೇರಿದ್ದು ೪
ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯುವ್ಯಾಪಾರ ಮಾಡದೆ ಈ ಪರಿ ಕುಳಿತದ್ದು ೫

ಈ ಕೀರ್ತನೆಯಲ್ಲಿ ಜೀವನ ಪಾರತಂತ್ರ್ಯ
೧೨೦
ಇದೆ ಪಾಲಿಸಿದೆ ಪಾಲಿಸಿದೆ ಪಾಲಿಸಯ್ಯ ಪ.
ಪದುಮ ಸಂಭವ ಪಿತನೆ ಪದೆಪದೆ ಎನಗಿನ್ನು ಅ.ಪ.
ಜೀವ ಅಸ್ವತಂತ್ರ ದೇವ ನಿಜ ಸ್ವತಂತ್ರಜೀವ ಜಡರು ದೇವರಾಧೀನವೆಂದುಜೀವೋತ್ತಮರಲ್ಲಿ ಭಕುತಿ ಜಡದಲ್ಲಿ ವಿರಕುತಿಕಾವ ಕೊಲ್ಲುವುದೆಲ್ಲ ಹರಿಯೆಂಬ ಜ್ಞಾನ ೧
ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದುಬಿಂಬ ಪೂರ್ಣನು ಪ್ರತಿಬಿಂಬನು ಅಲ್ಲಉಂಬುಡುವೊ ಕ್ರಿಯೆಗಳು ಬಿಂಬ ಮಾಡಿಸಲು ಪ್ರತಿ-ಬಿಂಬಕ್ಕೆ ಉಂಟೆಂಬ ಬಿಂಬ ಕ್ರಿಯವು ಎನಗೆ2
ಎನ್ನ ಬಿಂಬನೆ ಸರ್ವರ ಬಿಂಬನೆಂತೆಂದುಇನ್ನು ಪ್ರತಿಬಿಂಬಗಳ ಭೇದವ ತಿಳಿದುಮನ್ನಣೆ ಉತ್ತಮಗೆ ಅಮನ್ನಣೆ ನೀಚರಿಗೆಭಿನ್ನ ಭಿನ್ನರಿಗೆ ಫಲಗಳನ್ನು ಕೊಡುವ ಜ್ಞಾನ ೩
ಪುಣ್ಯಪಾಪಗಳೆರಡು ಇನ್ನು ಆಗುತಲಿರಲುಎನ್ನವೆಂದು ಹಿಗ್ಗಿ ಕುಗ್ಗದಲೆಭಿನ್ನ ಪುಣ್ಯದ ಜೀವ ಭಿನ್ನ ಪಾಪದ ಜೀವೈನ್ನು ಮುನ್ನು ತಿಳಿವ ಚೆನ್ನ ಜ್ಞಾನವು ಎನಗೆ ೪
ಬಂಧನ ನಿವೃತ್ತಿ ಎಂದಿಗೊ ಎನಗೆಂದುಸಂದೇಹದಿಂದ ನಾ ಕೇಳಲಿಲ್ಲ ಸುಂದರ ಮೂರುತಿ ಗೋಪಾಲವಿಠಲಕುಂದಿಲ್ಲದಲೆ ಎನಗೆ ನವವಿಧ ಭಕುತಿಯ ೫

ಲೋಕದಲ್ಲಿ ಸಜ್ಜನರ ರಕ್ಷಣೆಗೆ
೧೨೧
ಇರಬೇಕು ಸಜ್ಜನರಿಗೆ ದುರ್ಜನಪರಿಪರಿ ಪಾಲಿಪುದು ಒಂದು ಸಮಯದಿನ್ನವರ ಪ.
ಮೇಲಾದ ತೆಂಗು ಏಲಕ್ಕಿ ಬಾಳೆಯ ಗಿಡವಜಾಲಿಯಾದಿ ಗಿಡದ ಮುಳ್ಳುಗಳಿಂದಲೆಪಾಲನೆಯ ಮಾಡುವರು ಪ್ರಾಕಾರವನ್ನೆ ಮಾಡಿಕಾಲಕಾಲಕೆ ತಂದು ಕಲಿಪರು ಬಿಡದೆ ೧
ತುಲಸಿಯ ಗಿಡವನ್ನು ಬೆಳೆಸಬೇಕಾದರೆಹೊಲಸು ಉಳ್ಳಿಯ ತಂದು ನಿಲಿಸುವರುಕೆಲಕಾಲ ಬೆಳೆದು ಪಂಟಿಯಗಟ್ಟೋದಲ್ಲದೆಹೊಲಸು ಉಳ್ಳಿಂದೇನು ಅಳುಕು ಆಗುವುದೆ ೨
ನಯನಕ್ಕೆ ರೆಪ್ಪೆಯಿಧಾಗಪಾಯವ ನೀಗಿ ಕರನಿಟ್ಟುದಯಾನಿಧಿಯು ಪರಿಪಾಲಿಸುವನು ಬಿಡದೆಭಯನಿವಾರಣ ರಂಗ ಗೋಪಾಲವಿಠಲನಾಶ್ರೈ-ಸಿಯಿದ್ದಂಗೆ ದುರುಳರ ಭಯವೆ ಮರುಳೆ ೩

೧೭೫
ಈ ಪರಿಯ ಅಧಿಕಾರ ಒಲ್ಲೆ ನಾನು ಪ.
ಶ್ರೀಪತಿಯೆ ನೀನೊಲಿದು ಏನು ಕೊಟ್ಟುದೆ ಸಾಕು ಅ.ಪ.
ಚಿರಕಾಲ ನಿನ್ನ ಕಾದು ತಿರುಗಿದುದಕೆ ನೀನುಕರುಣದಿಂದಲಿ ರಚಿಸಿ ಈ ದುರ್ಗದೀರ ಪೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆಹುರುಳು ಲೇಶವು ಕಾಣೆ ಕರೆ ಕರೆಯು ಮೇಲೆ ೧
ದಾರಿಯಲ್ಲಿ ಹೋಗಿ ಬರುವುದಕ್ಕೆ ಉಪಟಳ ಘನ್ನಚೋರರಟ್ಟುಳಿಗಂತು ನೆಲೆಯಿಲ್ಲವೋವೈರಿ ವರ್ಗದ ಜನರು ಒಳಗೆ ಬಲು ತುಂಬಿಹರುಮೀರಿ ನಿನ್ನವರಲ್ಲಿ ಊರಿ ನಿಲ್ಲಲಿಗೊಡರು ೨
ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆಸ್ವಾಮಿತ್ವವನು ನೋಡೆ ಮನೆಮನೆಯಲಿ ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನುಗ್ರಾಮ ಒಪ್ಪಿಸಿ ನಮಿಪೆ ಸರಿ ಬಂದುದನೆ ಮಾಡೊ ೩
ಸರಿಬಂದ ವ್ಯಾಪಾರ ತಾವು ಮಾಡಿ ಎನ್ನಬರಿದೆ ಲೆಕ್ಕಕ್ಕೆ ಮಾತ್ರ ಗುರಿಯ ಮಾಡಿಕರೆಕರೆಯ ಪಡಿಸಬೇಕೆಂದು ಯೋಚಿಸುತಿಹರುಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೆ ೪
ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿಪಾಳತಿಯೊಳೊಪ್ಪಿಸಿಕೊಡುವೆವೆಂದುಆಲೋಚಿಸಿಹರು ಈಗ ನಿನ್ನ ನಿಜ-ಆಳುಗಳ ಬಲ ಮಾಡಿ ಎನ್ನ ರಕ್ಷಿಸೊ ದೊರೆಯೆ ೫
ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯಾನುವಾದ ದಿವಸ ಒಂದಾದರಿಲ್ಲಮೊನೆಗಾರ ಬಲವಿಲ್ಲ ಇದ್ದವರು ವಶವಿಲ್ಲಕೊನೆಗೊಂಡು ಗ್ರಾಮ ಕಾಪಾಡುವ ಬಗೆ ಎಂತೊ ೬
ಇನಿತನಾಯಕದ ಕೊಂಪೆ ಒಳಗಿನವಾಸ-ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳುಮನೆಮಾಡಿಕೊಡಲು ನಿನ್ನ ಹೊಂದಿಕೊಂಡುಅನುಗಾಲ ಬದುಕುವೆನೊ ಗೋಪಾಲವಿಠಲ ೭

ಪಾತಕಗಳನ್ನು ಪರಿಹರಿಸುವ

ಈತನೀಗ ನಮ್ಮ ದೇವನು ಪ.
ಪ್ರೀತಿಯಿಂದಲಿ ಸ್ಮರಿಸುವವರಪಾತಕಗಳ ಪರಿಹರಿಪ ಅ.ಪ.
ಅಕ್ರೂರನ ಪ್ರೀತನೀತ ಚಕ್ರಶಂಖ ಧರಿಸಿದಾತನಕ್ರಬಾಧೆಯ ತರಿದು ತನ್ನಭಕ್ತರನ್ನ ಕಾಯಿದಾತ ೧
ಅಜಮಿಳನ್ನ ಸಲಹಿದಾತ ವ್ರಜದ ಗೋವು ಕಾಯಿದಾತಭಜಿಸುವವರ ಬಿಡನು ಪ್ರೀತತ್ರಿಜಗದೊಳಗೆ ಮೆರೆವ ದಾತ ೨
ಸಕಲಗುಣಪೂರ್ಣನೀತಸಕಲ ದೋಷದೂರನೀತಸಕಲಾನಂದಪೂರ್ಣನೀತಭಕುತಿಮಂತ್ರಕೊಲಿವ ದಾತ ೩
ಅನಾಥ ಬಾಂಧವನೀತಾನಾದಿ ಕಾಲದವನಾತಾನಾದಿ ಮೊರೆಯ ಕೇಳಿಅನಿಮಿಷದೊಳು ಒದಗಿದಾತ ೪
ಕಮಲಮುಖಿಯ ರಮಣನೀತಕಮಲಾಸನಜನಕನೀತಕಮಲಾಕ್ಷ ಗೋಪಾಲವಿಠಲ ಹೃತ್‌-ಕಮಲದೊಳು ನಿಲುವ ದಾತ ೫

ವಾಯುದೇವರ ಸ್ತುತಿ
೫೮
ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನಾಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ಪ.
ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವುತಾನು ಕರುಣಿಸಿ ಜೀವ ಯೋಗ್ಯತೆಯೇನು (ಯನು?) ಅರಿತು ಕರ್ಮಮಾಡಿಸಿತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ ೧
ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯುಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವುಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿ ಯುವ ಪವನಾಖ್ಯಾನಾಗಿ ನಮ್ಮನು ಪವನಗತಿ ಪೊಂದಿಸುವನ ೨
ಜ್ಞಾನ ಭಕುತಿವೈರಾಗ್ಯಖಣಿಯು ದಾನವಾಂತಕ ಧರ್ಮಶೀಲಪೂರ್ಣಬೋಧೆಯ ಪುಣ್ಯನಾಮಕೆ ಪ್ರಾಣಾಪಾನವುದಾನರಿಗೆಪ್ರಾಣ ಮುಖ್ಯ ಪ್ರಾಣ ಇವ ನಮ್ಮ ಪ್ರಾಣ ನಿಲ್ಲದು ಇವನು ಇಲ್ಲದಿರೆಪ್ರಾಣಪತಿ ಗೋಪಾಲವಿಠಲನ ಕಾಣಿಸಿತೋರ್ಪ ಕರುಣೆಯ ೩

ಗುರುಗಳಾದ ಮಧ್ವಾಚಾರ್ಯರ
೫೯
ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ-ಲಿನ್ನು ಮನಸಿಜ ಆರಂಭಿಸಿ ಮನುಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ-ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ಪ.
ಸ್ನಾನಾನುಷ್ಠಾನ ಕಾಲದಲ್ಲಿ ಶ್ರೀಶರಂಗಪಾಣಿಯ ನ್ಯಾಸ ಧ್ಯಾನ ಮಾಡುವ ಧೀರದಾನಾದಿ ಕರ್ಮ ಶಮೆದಮೆ ನಾನಾಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ೧
ಹರಿಯೆ ಸರ್ವೋತ್ತಮ ಮರುತ ದೇವನೆಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿಧರೆಯೊಳು ಮೆರೆದೆ ವಾದಿಗಳುಕ್ತಿಧುರದಿಂದತರಿದೆ ನಂಬಿದವರ ಕರುಣದಿ ಪೊರೆದೆ ೨
ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ-ಭೇದವ ತರಿದೆ ಮನೋಭೀಷ್ಟ ಮೋ-ದದಿಗರೆದೆ ರಾಮನಾಮ ಸ್ವಾದ ಸವಿದೆ ೩
ದರಹಾಸಸರಿತೆ ತೀರ ಮಂತ್ರಾಲಯದಲ್ಲಿಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿಸ್ಥಿರವಾಗಿ ನಿಂದೆ ಸುಮಹಿಮೆಯಲ್ಲಿ ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ ೪
ಮರುತಾಂತರ್ಗತ ಗೋಪಾಲವಿಠಲನ್ನಹರುಷದಿ ಪೂಜಿಪ ಗುರು ಉಪೇಂದ್ರ-ತೀರ್ಥರ ಕರಕಂಜಜಾತ ಭಕ್ತರಕಾಮ ವರಪಾರಿಜಾತ ಕಾಮಧೇನು ಕರುಣಿಸೊ ದಾತ ೫

೧೭೬
ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ಪ.
ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರುವಿಧ ವಸ್ತುಗಳುನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವುಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೆ ೧
ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವುಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದುಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೆ ಪೊರೆಯೊ ಸ್ವಾಮಿ ೨
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆಹೇ ದೇವ ನಿನ್ನ ಕರಕುಶಲ ಸುಧೆವೆರೆದು ಸಾಧುಗಳ ಸಂತೈಸುವಿಮೋದ ಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನೀವಿಆದರಿಸಿ ಇವಗೆ ತವ ಪಾದ ಧ್ಯಾನವನಿತ್ತು ಸಾಧುಗಳೊಳಗಿಟ್ಟು ಮೋದಕೊಡು ಸರ್ವದಾ ೩
ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಆಲ್ಪರಿಯಬೇಕೆನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರು ದಿನ್ನು ಉಳುಹೊ ಸಲಹೊ4
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದುನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಆಲ್ಪರಿಯೆ ಎನ್ನ ಪಾಲಿಸುವ ದೊರೆಯೀನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು ಕರುಣಿಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೊ ಸ್ವಾಮಿ ೫

ಉಡುಪಿಯ ಕೃಷ್ಣದೇವರನ್ನು
೧೫೬
ಎಲ್ಲಿ ಪೋಯಿತೊ ಅವಿದ್ಯಾಪಟಲ ಕಾಣೆ ನಾನುಮಲ್ಲಮರ್ದನನೆ ಸಿರಿವಲ್ಲಭ ಗೋಪಾಲಕೃಷ್ಣ ಪ.
ಶರಣರ ಪಾದರಜಸ್ಪರುಶ ಸಂಭೂತವಾದಮಾರುತ ಸೋಕೆ ಈ (ಗ) ಹರಿಹರಿದು ಪೋಯಿತೊ ಹ್ಯಾಗೊ ೧
ಅನಘ ಒಡನೆ ಮಧ್ವಮುನಿ ಸರೋವರದಿಸ್ನಾನವನು ಮಾಡೆ ತೊಯಿದು ಭರದಿಮುಣುಗಿಪೋಯಿತೊ ಹ್ಯಾಗೊ ೨
ತೇರಿನೊಳಗೆ ನಿನ್ನ ವಿಹಾರ ಮೈ-ಮರೆದು ನೋಡಿ ಚೋರರಿಂದಲ್ಲೆಅಪಹಾರವಾಯಿತೊ ಹ್ಯಾಗೊ ೩
ಅನಾದಿಯಿಂದ ಬಂದದ್ದುನೀನೀಕ್ಷಣದಿ ಕಳೆದೆ ಭಾನು-ಜನಾಳುಗಳಿಗಿನ್ನೇನು ತೊರಲೀ ಮೋರೆ ೪
ಅದರ ಸಂಬಂಧಿಗಳು ಕದನ ಗ-ಯ್ಯದ ಮುನ್ನ ಒದಗಿ ರಕ್ಷಿಸೊ ತೀರ್ಥ-ಪಾದ ಶ್ರೀಗೋಪಾಲವಿಠಲ ೫

೧೧೦
ಎಷ್ಟು ಮಮತೆಯೊ ನಿನಗೆ ಭ್ರಷ್ಟಮನವೆಕಷ್ಟ ದೇಹವ ನೆಚ್ಚಿ ಇವನೆ ಕಳೆದಿ ಪ.
ಹಿಂದೆ ಅನಂತ ಜನುಮಗಳಲ್ಲಿ ಇನ್ನುತಂದೇಸುಮಂದಿಗಳು ತಾಯೇಸು ಎನಗೆಬಂದ ಸತಿಸುತರೇಸು ಬಂಧು ಜನರುಗಳೇಸುಇಂದೊಬ್ಬರನ್ನ ಕರೆತಂದದ್ದೇನೊ ಮರುಳೆ ೧
ಚಿನ್ನಬೆಳ್ಳಿ ನಾನಾ ಬಣ್ಣ ಬಿರುದುಗಳನ್ನುಅನಂತ ಗಳಿಸಿ ಅನಂತ ಹರುಷದಲಿನನ್ನವರು ನನ್ನದು ಎಂಬ ದೋಷದ ಮದದೀನ್ನು ದೇಹವ ಧರಿಸಿ ಇನ್ನು ಎಚ್ಚರಿಯೊ ೨
ನಿನ್ನ ಕಣ್ಣ ಮುಂದೆ ಪೋಪ ಜೀವರು ಕಂಡುಇನ್ನು ನಿನಗೆ ನಾಚಿಕೆ ಬಾರದೆಇನ್ನು ಮುನ್ನೆ ನಾಳಿಗೆಂಬೊ ಘನ್ನ ಆಸೆಚೆನ್ನಾಗಿ ಬಿಡುಕಂಡ್ಯ ಖೂಳ ಮನವೆ ೩
ಆಸೆ ಎಂಬೋದು ಸಂಧಿಸಿಕೊಂಡರೆ ನಿನಗೆದೋಷವೆಂಬೊ ರಾಶಿ ಆಶ್ರಯಿಸೋದುಮೀಸಲ ಮಾಡು ಮನ ಮೋಸಹೋಗದೆಹೃಷಿಕೇಶನ ಚರಣ ವಿಶೇಷವಾಗಿ ಸ್ಮರಿಸೊ ೪
ಸತಿ ಸುತರು ಇತರ ಜನ ಹಿತವಾದ ಧನ ದೇಹೈತರ ನೋಡಲು ಮೋಹ ಅಧಿಕವಾಗಿಪತಿತಪಾವನ ರಂಗ ಗೋಪಾಲವಿಠಲಜಿತವಾಗಿ ಭಕುತಿ ಇಟ್ಟು ಮುಕುತಿಯ ಪಡೆಯೊ ೫

ವಿಷಯಲಾಲಸೆಗಳಲ್ಲಿ ಮುಳುಗಿಹೋಗಿರುವ
೧೦
ಏಕೆ ಮಮತೆ ಕೊಟ್ಟು ದಣಿಸುವಿ ರಂಗನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ಪ.
ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ-ಗೆನ್ನನೊಪ್ಪಿಸುವುದು ನೀತವೆಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ ೧
ತನುವು ತನ್ನದು ಅಲ್ಲ ತನು ಸಂಬಂಧಿಗಳೆಂಬೋತನುವ್ಯಾರೊ ತಾನ್ಯಾರೊ ಅವರಿಗೆಧನ ಮೊದಲಾದ ವಿಷಯಗಳ ಅನುಭವ ಹಿಂ-ದಿನ ದೇಹದಂತಲ್ಲವೆ ೨
ಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ-ವಿಂದ ಎನ್ನ ವಶಕೆ ಬಾರವೊಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನಬಂಧಕ ಶಕುತಿಗೆ ನಮೋನಮೋ ೩
ಅರಿತು ಅರಿತು ಎನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆಮರುಳು ನೀಗುವ ಬಗೆಗಾಣೆನೊ ೪
ಎಂದಿಗೆ ನಿನ್ನ ಚಿತ್ತಕೆ ಬರುವುದೊ ಸ್ವಾಮಿಅಂದೆ ಉದ್ಧರಿಸಯ್ಯ ಕರುಣಿಯೆಸುಂದರ ವಿಗ್ರಹ ಗೋಪಾಲವಿಠಲ ಸುಖ-ಸಾಂದ್ರ ಭವಮೋಚಕ ನಮೋ ನಮೋ ೫

ನಿಂದಾಸ್ತುತಿಯಾದ ಈ ಕೀರ್ತನೆಯ
೧೧
ಏಕೆ ಮಲಗಿಹೆ ಹರಿಯೆ ಏಸು ಆಯಾಸಜೋಕೆ ಮಾಡುವ ಬಿರುದು ಸಾಕಾಯಿತೇನೊ ಪ.
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊಅಮೃತಮಥನದಿ ಗಿರಿಯು ಅತಿಭಾರವಾಯ್ತೊರಮಣಿಯನು ತರುವಾಗ ರಣರಂಗ ಬಹಳಾಯ್ತೊಅಮರರಿಪುವನು ಸೀಳೆ ಆಯಾಸವಾಯ್ತೊ ೧
ಆಕಾಶ ಭೇದಿಸಲು ಆ ಕಾಲು ಉಳುಕಿತೊಕಾಕುನೃಪರನು ಸೀಳಿ ಕರ ಸೋತಿತೊಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊಲೋಕಭಾರವ ಇಳುಹಿ ಸಾಕುಸಾಕಾಯ್ತೊ ೨
ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊಕೃಪೆ ಮಾಡಿನೋಡಯ್ಯ ಕಣ್ಣುತೆರೆದು ಎನ್ನಕಡೆಕಪಟನಾಟಕ ಶ್ರೀಗೋಪಾಲವಿಠಲ ೩

ಧನ ಧಾನ್ಯ ಅಷ್ಟೈಶ್ವರ್ಯಗಳು
೧೫೭
ಏನು ಬೇಡಲಿ ನಿನ್ನ ಬಳಿಗೆ ಬಂದುನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ಪ.
ಜನನಿಯ ಕೊಡು ಎಂದು ಜಯವಂತ ಬೇಡುವೆನೆಜನನಿ ಏನಿತ್ತಳಾ ಧ್ರುವರಾಯಗೆಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ ೧
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆಅನುಜನೇನಿತ್ತನೈ ಆ ವಾಲಿಗೆಧನವನ್ನೆ ಕೊಡು ಎಂದು ದೈನ್ಯದಲಿ ಬೇಡುವೆನೆಧನವ ಗಳಿಸಿದ ಸುಯೋಧನನೇನಾದನು ೨
ಸತಿಯಳ ಕೊಡು ಎಂದು ಮತಿವಂತ ಬೇಡುವೆನೆಸತಿಯಿಂದ ದ್ಯುನಾಮಕನೇನಾದನಯ್ಯಸುತರುಗಳ ಕೊಡು ಎಂದು ಸತತದಲಿ ಬೇಡುವೆನೆಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ೩
ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೆ ಬಂಧುಗಳು ಸಲಹಿದರೆ ಗಜರಾಜನಾಂದಣವ ಕೊಡು ಎಂದು ಅಂದದಲಿ ಬೇಡುವೆನೆಅಂದಣೇರಿದ ನಹುಷನೇನಾದನಯ್ಯ ೪
ಬೇಡುವೆನು ನಾ ನಿನ್ನ ಬೇಡತಕ್ಕುದ ದೇವನೀಡೇನೆಂಬುದು ನಿನ್ನ ಮನದೊಳಿತ್ತೆಮೂಡಲಗಿರಿವಾಸ ಗೋಪಾಲವಿಠಲ ಪರರಬೇಡದಂತೆ ಎನ್ನ ಮಾಡಯ್ಯ ಹರಿಯೆ ೫

ಹರಿದಾಸರ ಸಂಗ
೧೧೧
ಏನು ಸುಖವೋ ಎಂಥಾ ಸುಖವೊ ಪ.
ಹರಿಯ ಧ್ಯಾನ ಮಾಡುವವರ ಸಂಗ ಏನು ಸುಖವೊ ಅ.ಪ.
ತಂಬೂರಿ ಮೀಟುತ್ತ ಹೃದಯಾಂಬಕದಿಂದ ಆನಂದಾಂಬುಗರೆಯುತ ಬಲುಸಂಭ್ರಮದಿಂದಿಹರ ಸಂಗ ೧
ಗೆಜ್ಜೆಯು ಕಾಲಲ್ಲಿ ಕಟ್ಟಿಲಜ್ಜೆ ಬಿಟ್ಟು ಹರಿಯ ನಾಮಗರ್ಜನೆ ಮಾಡುತ್ತ ಅಘ-ವರ್ಜರಾಗಿಹರ ಸಂಗ ೨
ಸ್ವರ್ಣಲೋಷ್ಠ ಸಮವೆಂದುತನ್ನದೆಂಬೊ ಹಮ್ಮು ತೊರೆದುಘನ್ನ ಮಹಿಮನ್ನ ಪಾಡಿಧನ್ಯರಾಗಿಹರ ಸಂಗ ೩
ಪುಷ್ಪದಿ ಸುಗಂಧ ಹ್ಯಾಂ-ಗಿಪ್ಪುದೊ ತದ್ವತ್ತು ಜಗ-ದಪ್ಪ ಬೊಮ್ಮಾದಿಗಳಲ್ಲೀಪ್ಪನೆನ್ನುವರ ಸಂಗ ೪
ದರ್ವಿಯಂತೆ ದೇಹವನ್ನುಸರ್ವದಾ ತಿಳಿದು ಶೇಷ-ಪರ್ವತವಾಸನ್ನ ನಂಬಿಉರ್ವಿಯೊಳಗಿಹರ ಸಂಗ ೫
ನಡೆವೋದು ನುಡಿವೋದು ನಿರುತಕೊಡುವೋದು ಕೊಂಬೋದು ಜಗ-ದೊಡೆಯನ ಪ್ರೇರಣೆಯೆಂದುನುಡಿದು ಹಿಗ್ಗುವರ ಸಂಗ ೬
ಸೃಷ್ಟಿಗೊಡೆಯನ ಮನ-ಮುಟ್ಟಿ ಭಜಿಸುತ್ತ ಜ್ಞಾನಕೊಟ್ಟ ಗೋಪಾಲವಿಠಲ-ಗಿಷ್ಟರಾಗಿಹರ ಸಂಗ ೭

ಶ್ರೀಹರಿ ಅನಾದಿಸ್ವಾಮಿಯೆಂದೂ
೯೫
ಸುಳಾದಿ
ಧ್ರುವತಾಳ
ಏನೋ ನಿನ್ನ ಮಹಿಮೆ ಆನೇನು ಕೊಂಡಾಡುವೆಜ್ಞಾನಾನಂದಕಾಯ ಲೋಕಮೋಹಕ ದೇವದೀನಜನರಪಾಲ ದಿನಕರ ಶತತೇಜಗಾನಲೋಲಪ್ರಿಯ ಗಾಯಿತ್ರಿ ಪ್ರತಿಪಾದ್ಯಜಾನಕಿರಮಣನೆ ಜಗಸೃಷ್ಟ್ಯಾದ್ಯಷ್ಟಕರ್ತದಾನವಾರಿಯೆ ರಂಗದಾಸರ ಮನದೊಡೆಯಮಾನಭಿಮಾನಕರ್ತ ಮನ್ಮಥನ ಜನಕಶ್ರೀನಾಥ ಸರ್ವೋತ್ತಮ ಶೃಂಗಾರ ಮೂರುತಿಯೆಧ್ಯಾನದಿ ಭಕ್ತರಿಗೆ ದೀಪ್ತಿಸುತ ಪೊಳೆವನೆನಾನಾ ಪದಾರ್ಥದಲ್ಲಿ ನಾನಾ ದೇಶಗಳಲ್ಲಿನಾನಾ ಕಾಲಗಳಲ್ಲಿ ನೀ ನಿತ್ಯ ನಿತ್ಯತೃಪ್ತಾನಾದಿ ಕಾಲದೈವ ಅಪ್ರಮೇಯವಾಣಿ ಭಾರತಿ ಅಜ ಸುರರಿಂದ ವಂದಿತನೆಕ್ಷೆÆÃಣಿಯೊಳಗೆ ಸಮವಿಲ್ಲದ ದೈವವೆಧೇನಿಸಿ ನೋಡಲು ದಿನದಿನಕೆ ವಿಚಿತ್ರಜ್ಞಾನಿಗಳರಸನೆ ಗರುಡವಾಹನರಂಗಕಾಣರು ನಿನ್ನ ಗುಣಹೀನ ಮನುಜರಿನ್ನುತಾನೆ ನೀನೆಂಬುವಗೆ ಏನೆಂಬೆ ಹರಿಯೆನೀನೆ ಗತಿ ಅಂತ ನಂಬಿದ ಭಕ್ತರಿಗೆಊನವಾಗೋವು ದೋಷ ಅನಂತವಿದ್ದರನ್ನನಾನು ನಿನ್ನ ಬಣ್ಣಿಸಿ ಏನು ಬೇಡುವುದಿಲ್ಲರೇಣು ಎನಿಸು ಎನಿಸು ಎನ್ನ ಜ್ಞಾನಿಗಳ ಪಾದದನಾನು ನನ್ನದು ಎಂಬೊ ಹೀನಮತಿಯಲಿಂದಗಾಣದ ಎತ್ತಿನಂತೆ ತಿರುಗುವೆ ಧರೆಮೇಲೆಭಾನುಶತತೇಜ ಗೋಪಾಲವಿಠಲದೀನರಿಗೆಲ್ಲ ದತ್ತ ಪ್ರಾಣದೇವ ೧

ಮಠ್ಯತಾಳ
ಎಲ್ಲಿ ನೋಡಲು ನೀನು ಅಲ್ಲಲ್ಲಿ ವ್ಯಾಪ್ತನುಎಲ್ಲಿ ನೋಡಲು ನೀನು ಅಲ್ಲಲ್ಲಿ ಪೂರ್ಣನುಬಲ್ಲಿದವರಿಗೆ ಬಲ್ಲಿದ ಬಲ್ಲವಗತಿಸುಲಭಸಲ್ಲುವುದೊ ಬಿರುದು ಎಲ್ಲಿ ನಿನಗೆ ಸಮ-ವಿಲ್ಲವು ನಾ ಕಾಣೆ ಮಲ್ಲರ ಮರ್ದನಹುಲ್ಲು ಕಲ್ಲಿನಲ್ಲಿ ಎಲ್ಲದಿ ಭರತನೀಲ್ಲ ಕಾಲವು ನಮ್ಮನೆಲ್ಲರ ಸಲಹುವಿಜಲಧಿ ಒಳಗೆ ಇನ್ನು ಕಮಲವು ಇದ್ದಂತೀಲ್ಲವನು ತೊರೆದು ನಿಲ್ಲಿಸಿ ಮನವನ್ನುಸೊಲ್ಲು ಎತ್ತಿ ಪಾಹಿ ಇಲ್ಲೆ ಆರಾಧಿಸಲುಚೆಲ್ಲಿ ಪೋಗದವರ ಮೆಲ್ಲನೆ ನೀ ಹೃದಯದಲ್ಲಿ ನಿಂತು ತೋರಿಘಿಲ್ಲಕೆಂದು ಕುಣಿದು ಉಳ್ಳಷ್ಟು ದೋಷವೆಲ್ಲ ಪೋಗಲಾಡಿ ಸಲ್ಲುವಂಥ ಪದವಿಭಳಿರೆ ಇತ್ತು ಪೊರೆವಿ ಫುಲ್ಲನಾಭನೆ ಚೆಲ್ವ ಗೋ-ಪಾಲವಿಠಲ ಒಲ್ಲೆನೆಂದರೆ ಬಿಡ ಎಳ್ಳಷ್ಟು ಕ್ಲುಪ್ತಕೆ ೨

ತ್ರಿಪುಟತಾಳ
ನಿನ್ನ ಜ್ಞಾನವಂತನೆಂದು ಇನ್ನು ಜ್ಞಾನ ಸಂಪಾದಿಸುವೆನಿನ್ನ ದೋಷದೂರನೆಂದು ಎನ್ನ ದೋಷಂಗಳಟ್ಟುವೆನಿನ್ನ ಗುಣಪೂರ್ಣನೆಂದು ಗುಣವಂತನಾಗುವೆನಿನ್ನ ಸುಖಪೂರ್ಣನೆಂದು ಸಂತೋಷದಿಂದಲಿರುವೆನಿನ್ನ ಬಲಪೂರ್ಣನೆಂದು ಬಲವಂತನಾಗುವೆನಿನ್ನ ಜನನಮರಣರಹಿತನೆಂತೆಂದು ಕೊಂಡಾಡಿಮುನ್ನೆ ಧರೆಯ ಮೇಲೆ ಎನ್ನ ಜನನ ಕಳೆವೆನಿನ್ನ ಜಾರವಂತನೆಂದು ಎನ್ನ ಜಾರತ್ವ ಕಳೆವೆನಿನ್ನ ಕಂಸಾರಿ ಎಂತೆಂದು ಎನ್ನ ಸಂಸಾರ ನೀಗುವೆನಿನ್ನ ದನುಜಮರ್ದನನೆಂದು ಎನ್ನ ಅರಿಗಳ ಗೆಲ್ಲುವೆನಿನ್ನ ಭಕ್ತವತ್ಸಲನೆಂದು ಇನ್ನು ಭಕ್ತಿ ಸಂಪಾದಿಸುವೆನಿನ್ನ ಕರುಣಾಳೆಂತೆಂದು ಎನ್ನ ಕರಣ ಶುದ್ಧನಾಗುವೆನಿನ್ನ ತೊತ್ತಿಗೆ ತೊಂಡನಾಗಿ ನಿನ್ನ ಭೃತ್ಯನಾಗುವೆನಿನ್ನವರ ಮನೆ ಮುಂದೆ ಕುನ್ನಿ ಆಗಿ ಆನಿರುವೆನಿನ್ನ ತೀರಥ ಪ್ರಸಾದ ನಿನ್ನ ಎಂಜಲುಗಳುಂಡುನಿನ್ನ ಬೇಡಿ ನಿನ್ನ ಕಾಡಿ ನಿನ್ನ ಹಾಡಿ ಹಾರೈಸಿಎನ್ನ ದಿನಗಳ ಕಳೆವೆ ಮುನ್ನೆ ಕ್ಲುಪ್ತ ಪರಿಯಂತರಪುಣ್ಯವೊ ಪಾಪಗಳೊ ಎನ್ನಿಂದ ಮಾಡಿಸೋ ಕಾರ್ಯಮುನ್ನೆ ಏನಿದಕೆ ಫಲವೊ ನಿನಗೆ ನೀನೆ ಬಲ್ಲೆಯೈನ್ನು ನಾ ಒಂದು ಬಲ್ಲೆನು ನಿನ್ನನೆ ಗತಿ ಎಂಬೋದುಚಿನ್ನುಮಯ ಮೂರುತಿ ಗೋಪಾಲವಿಠಲರೇಯಧನ್ಯನಾಗುವೆ ಕೇಳು ನಿನ್ನವರ ಬಳಿವಿಡಿದು ೩

ಅಟ್ಟತಾಳ
ಹೀನರ ಒಳಗೆಲ್ಲ ಹೀನನು ನಾ ಬಲುಮಾನವರೊಳಗೆಲ್ಲ ಮಾನಗೇಡಿ ಬಲುದೀನರ ಒಳಗೆಲ್ಲ ದೀನನು ನಾ ಬಲುಹೀನ ದೀನ ಅಜ್ಞಾನಕೆಲ್ಲ ನಿನ್ನಧ್ಯಾನ ನಾಮಬಲ ನಾನೊಂದು ಮಾಡಲುತಾನು ಇದರ ಮುಂದೆ ಏನೇನು ಮಾಳ್ಪವುಜಾಣ ಸುಂಕರಿಗಂಡವ(ವಾ)ನು ? ಬಂದರೆ ಇನ್ನುಗೋಣಿಯನೊಪ್ಪಿಸಿ ತಾನು ಸುಮ್ಮನಾಗೆಏನು ಮಾಡುವನವ ಕ್ಷೆÆÃಣಿಯ ಒಳಗಿನ್ನುಶ್ರೀನಾಥ ನಿನ್ನ ದಾಸನಾದವನ ಇನ್ನುನಾನು ಕಾರಣವಲ್ಲ ಏನೇನು ಮಾಡೋವುದಾನವಾಂತಕ ರಂಗ ಗೋಪಾಲವಿಠಲಮಾನಾಭಿಮಾನಕೆ ನೀನೆ ಗತಿಯೊ ದೇವ ೪

ಆದಿತಾಳ
ಜನರಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನುಧನದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನುದಿನದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನುಗುಣದಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನೂಣಿಸಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನುಕುಣಿದಾಡು ಮನ ಹೋಗೆ ನಿನಗೆ ಹೋಯಿತು ಇನ್ನುಎಣಿಸಲು ಮನ ಹೋಗೆ ನಿನಗೆ ಹೋಯಿತು ಇನ್ನುಅಣಕಿಸ ಮನ ಹೋಗೆ ನಿನಗೆ ಹೋಯಿತು ಇನ್ನುಅನುವುದಪ್ಪಿದುವೆಲ್ಲ ಅನುವು ಮಾಡಿನೋಡೆನಿನಗೆ ಕಾರಣವಯ್ಯ ನೀನಿಲ್ಲದಾರಿಲ್ಲನೀನು ಮಾಡಿಸಿದುದು ನಿನಗೆ ಸಮರ್ಪಿತನಿನಗೆ ನೀನೇಗತಿ ಎನಗೆ ನೀನೇಗತಿಘನಮಹಿಮ ನಮ್ಮ ಗೋಪಾಲವಿಠಲರೇಯಾನುವು ತಪ್ಪಿದುವೆಲ್ಲ ಅನುವು ಮಾಡಿ ಪೊರೆಯೊ ೫

ಜತೆ
ನೀನು ಅನಾದಿಸ್ವಾಮಿ ನಾನು ಅನಾದಿಭೃತ್ಯನೀನೆ ನೀನೆ ಗತಿಯೊ ಗೋಪಾಲವಿಠಲ

೧೭೭
ಏಳು ಆರೋಗಣೆಗೆ ಏಕೆ ತಡವೊ ಪ.
ಆಲಸ್ಯಮಾಡದಲೆ ಮೂಲರಾಮಚಂದ್ರ ಅ.ಪ.
ಕುಡಿಬಾಳಿದೆಲೆ ಹಾಕಿ ಸಡಗರದಿಂದ ಎಡೆಮಾಡಿಮಣೆ ಹಾಕಿ ಮುತ್ತಿನ ಶೆಮ್ಯ?ಗಳಿಟ್ಟುಮುಡಿಸಿ ದೀಪಗಳು ಹಚ್ಚಿ ಉದಕ ರಂಗೋಲಿ ಹಾಕಿಬಡಿಸಲು ಶ್ರೀದೇವಿ ಬಂದು ನಿಂದಿಹಳು ೧
ಪುಡಿ ಉಪ್ಪು ಚೆಟ್ನಿ ಕೋಸಂಬರಿ ಉಪ್ಪಿನಕಾಯಿ ಪಡವಲಕಾಯಿ ಜೆವಳೀಕಾಯಿಯುಅಡವಿಗುಳ್ಯದ ಪಳಿದ್ಯ ಆಂಬೊಡೆ ಫೇಣಿಯುಬಡಿಸಲು ಶ್ರೀದೇವಿ ಬಂದು ನಿಂದಿಹಳು ೨
ಎಣ್ಣೂರಿಗತಿರಸವು ಸಣ್ಣ ಶ್ಯಾವಿಗೆ ಫೇಣಿಬೆಣ್ಣೆದೋಸೆ ಹುಗ್ಗಿ ಅನ್ನ ದಧ್ಯಾನ್ನ ತೀರ್ಥಾನ್ನಗಳನುಕಾಯಿಹಾಲು ಬಡಿಸಲುಬಣ್ಣಿಸಿ ಶ್ರೀದೇವಿ ಬಂದು ನಿಂತಿಹಳು ೩
ಗಂಧ ಕಸ್ತೂರಿ ಪುನಗು ಕರ್ಪೂರದ ವೀಳ್ಯಚೆಂದಾಗಿ ಮಡಿಸಿ ಕೈಲಿ ಹಿಡಿದುಕೊಂಡುದುಂಡುಮಲ್ಲಿಗೆ ಹೂವ ಅಂದವಾಗಿ ಕಟ್ಟಿರಂಭೆ ಜಾನಕಿದೇವಿ ಹಿಡಿದು ನಿಂತಿಹಳು ೪
ನಿತ್ಯ ತೃಪ್ತನೆ ನಿನ್ನ ಉದರದೊಳಿಹಉತ್ತಮ ಪುರುಷನೆ ಉಣಲು ಏಳು ಮುಕ್ತಿದಾಯಕ ನಮ್ಮ ಗೋಪಾಲವಿಠಲಭಕ್ತರ ಬಿನ್ನಪವ ನೀ ಕೇಳಿ ಬಾರೊ ೫

ರುಕ್ಮಿಣಿ ಕೃಷ್ಣರ ಸರಸಸಲ್ಲಾಪದ ಚಿತ್ರಣ
೧೫೮
ಒಂದು ದಿನ ರುಕ್ಮಿಣಿಯ ಮಂದಿರಕೆ ಶ್ರೀಕೃಷ್ಣಚೆಂದದಿಂದಲಿ ಬಂದ ಹರುಷದಿಂದಹರಿ ಬರಲು ಕಾಣುತ ಸಿರಿಯು ತಾ ಹರುಷದಲಿಕರಪಿಡಿದು ಮಂಚದಲಿ ಕುಳಿತುಕೊಂಡುಮಡುದೆಲೆಯ ನೀಡುತಿರೆ ಮಡದಿಯ ಮುಖ ನೋಡಿಕಡು ಹರುಷದಲಿ ಹಾಸ್ಯ ಮಾಡುತಿರಲುಬಡಗೊಲ್ಲನು ನಾನು ದೊರೆಯ ಮಗಳು ನೀನುಮದುವೆಯಾಗಲುಬಹುದೆ ಚದುರೆ ಪೇಳುಒಡಹುಟ್ಟಿದಣ್ಣನು ದೊರೆ ಮಗನ ಕರೆತಂದುವರ ಪೂಜೆಯನು ಮಾಡೆ ಬಲ್ಲಧೋದೆಪರಪುರುಷನ ಕರೆದು ಬರೆದೆ ಎನಗೆ ಓಲೆಭರದಿ ನೋಡಲು ಬಂದ ಭಂಡ ನಾನುಪರಮಮೂರ್ಖಳು ಎಂದು ತಿಳಿಯಲಿಲ್ಲಬಡವರನು ಕಣ್ಣೆತ್ತಿ ನೋಡಲಿಲ್ಲಗರುವಿ ಎಂದೆನುತ ಜನ ಪೇಳ್ವರಲ್ಲವರದ ಗೋಪಾಲವಿಠಲ ಪೇಳಿದನೆ ಸೊಲ್ಲ ೧
ಅಂದ ಮಾತನು ಕೇಳಿ ನೊಂದು ರುಕ್ಮಿಣಿ ತಾನುಒಂದು ಮಾತಾಡಿದಳು ಸುಂದರಾಂಗಿಕಂದರ್ಪ ಜನಕನೆ ಹಿಂದೆ ಆಡಿದ ಮಾತುಇಂದು ಮರೆತೆನ್ನನೆ ನಿಂದಿಸುವುದೆಕ್ಷೀರಸಾಗರದಲ್ಲಿ ಆಲದೆಲೆಯ ಮೇಲೆಬಾಲರೂಪದಿ ನೀನು ಮಲಗಿ ಇರಲುಬೇರೊಂದು ರೂಪದಲಿ ಬದಿಯಲ್ಲಿ ನಾ ಕುಳಿತುಬಹಳ ಮೃದುವಚನದಲಿ ಮಾತನಾಡಿಭಕ್ತ ಭೀಷ್ಮಕನಿಗೆ ಪುತ್ರಿಯಾಗೆಂದೆನುತಾಪ್ಪಣೆ ಕೊಡಲು ನಾ ಅಲ್ಲಿ ಜನಿಸಿರುಕ್ಮಿಣಿ ಎನುತಲಿ ನಾಮಾಂಕಿತವ ಪಡೆದೆಕೃಷ್ಣನೆ ಪತಿಯು ಆಗುವನು ಎಂದು ಮಿಕ್ಕ ರಾಜರಿಗೆ ನಾ ತಕ್ಕವಳೆ ಪೇಳುಭಕ್ತವತ್ಸಲನೆ ನೀ ಕರುಣಿಸೆಂದುಸೃಷ್ಟಿಸ್ಥಿತಿಗಳಿಗೆ ನೀ ಕಾರಣನೆಂದುರಕ್ಷಿಸೊ ಗೋಪಾಲವಿಠಲನೆ ಬಂದು ೨
ಅಷ್ಟ ಲಕ್ಷ್ಮಿಯರೊಳು ಅಧಿಕಳು ನೀನೆಂದುವಕ್ಷಸ್ಥಳದೊಳಿಟ್ಟು ರಕ್ಷಿಸಿದೆನೆಅಟ್ಟಿ ನಿನ್ನನುಜ ಬರೆ ಅವನ ಬಲವನು ಮುರಿದೆಪಟ್ಟದರಸಿ ಎಂದು ನಿನ್ನ ತಂದೆಕೊಟ್ಟಳು ದಾನವನು ಸುರಮುನಿಗೆ ಆ ಭಾಮೆಶ್ರೇಷ್ಠಳನು ಮಾಡಿ ನಾ ಬಿಡಿಸಿಕೊಂಡೆರೂಪು ಯೌವನದಿ ಮೆರೆವ ಭಾಮೆಗರ್ವವ ಮುರಿದೆಸೀತೆ ರೂಪವ ಧರಿಸಿ ಕೀರ್ತಿ ತಂದೆಗೋಕುಲದ ಸ್ತ್ರೀಯರಿಂದಧಿಕಳೆಂದುಕೋಪ ಬಿಡೆ ಹಾಸ್ಯವನು ನುಡಿದೆನೆಂದುಲೋಕಸೃಷ್ಟಿಸಲು ನೀ ಮಾಯೆ ಎಂದುಗೋಪಾಲವಿಠಲನು ಕೈಪಿಡಿದನೆ ಬಂದು ೩
ಎಷ್ಟು ಜನ್ಮದಿ ತಪವಗೈದೆನೊ ನಾ ಕಾಣೆಅಚ್ಯುತಾನಂತಗೆ ಅರಸನಾದಿ ಸಪ್ತೆರಡು ಲೋಕಗಳಕುಕ್ಷಿಯಲಿಟ್ಟು ಕಪಟ ಸೂತ್ರಧಾರಿಯಂತೆ ನಟಿಸುತಿರುವಿಜಗದೀಶ ಅರೆಕ್ಷಣವು ಅಗಲದೆ ನಾ ನಿನ್ನಉಗುರುಕೊನೆ ಮಹಿಮೆಯ ತಿಳಿಯಧೋದೆನಿಮ್ಮ ನಾಭಿಲಿ ಪಡೆದ ಬ್ರಹ್ಮಬಲ್ಲನು ಮಹಿಮೆನಿಮ್ಮ ಭಕ್ತನು ವಾಯು ಬಲ್ಲನಿದನುಸರಸ್ವತಿ ಭಾರತಿ ಗರುಡ ಶೇಷ ರುದ್ರಸುರಪತಿಯು ಮುಖ್ಯ ದೇವತೆಗಳೆಲ್ಲ ತೃಣ ಜೀವ ಮೊದಲು ಕಮಲಜನವರೆಗೂಎಣಿಸಲಾರರು ಈಗ ನಿಮ್ಮ ಗುಣವ ಘನಮಹಿಮ ಗೋಪಾಲವಿಠಲ ವಂದಿಸುವೆ4

ಸುಖವಿಲ್ಲದ ಈ ಸಂಸಾರ ನಮಗೆ
೯೬
ಒಗತನದೊಳು ಸುಖವಿಲ್ಲ ಒಲ್ಲೆಂದರೆ ನೀ ಬಿಡೆಯಲ್ಲ ಪ.
ಜಗದೊಳು ಹಗರಣ ಮಿಗಿಲಾಯಿತು ಪನ್ನಂಗನಗನಗರ ನಿವಾಸ ಅ.ಪ.
ಮೂರು ಬಣ್ಣಿಗೆಯ ಮನೆಗೆ ಮೂರೆರಡು ಭೂತಗಳುಮೂರು ನಾಲ್ಕು ಪ್ರಾಕಾರಕ್ಕೆ ಮೂರಾರು ಛಿದ್ರಗಳುಮೂರು ಅವಸ್ಥೆಯು ದಿನಕೆ ಮೂರುನೂರಾರುಹತ್ತರಲ್ಲಿಮೂರು ವಿಧದ ಅನ್ನದಿಂದ ಮೂರುತಾಪಕ್ಕಾರೆ ೧
ಐದುಮಂದಿ ಭಾವನವರು ಐದುಮೈದುನರು ಕೂಡೈದುಪರಿ ತಾನಾಗಿ ಮಾವನೈದು ಕತ್ತಲೆಕೋಣೆ -ಗೈದುವಂತೆ ಮಾಡುವರು ಐದುತಂದು ಬೆಚ್ಚಿಸುವರೈದನೆ ಬೊಕ್ಕಸದಮನೆ ಎಲ್ಲಿದೆಯೊ ನಾ ಕಾಣೆ ೨
ಆರಾರು ಎರಡುಸಾವಿರ ದಾರಿಲಿ ಹೋಗಿ ಬರುವರುಆರುಮೂರು ಮೂರುಸಾವಿರದಾರುನೂರು ನಿತ್ಯದಿಆರುನಾಲ್ಕು ಮಂದಿ ಹಿರಿಯ ಪಾರುಪತ್ಯಗಾರರಿದಕೆಆರು ಎರಡು ವಿಧದಲೆನ್ನ ಗಾರುಮಾಡುತಿಪ್ಪರೊ ೩
ಒಬ್ಬ ಬೆಳಕು ಮಾಡುವ ಮತ್ತೊಬ್ಬ ಕತ್ತಲೆಗೈಸುವಒಬ್ಬ ಎರಡೂ ಮಾಡುವ ಮೇಲೊಬ್ಬ ನಿಂತು ನೋಡುವಒಬ್ಬ ಮೂವರ ಒಳಗೊಳಗೆ ಹಬ್ಬಿಕೊಂಡು ಇರುವನಂತೆಒಬ್ಬನ ಕಾಣದೆ ನಾ ತಬ್ಬಿಬ್ಬಿಗೊಳಗಾದೆ ೪
ಆರುಹತ್ತರ ಮೂಲದಿ ಆರುಮಂದಿ ಬಿಡದೆ ಎನ್ನಘೋರೈಸುವರೊ ಮರುಳೊಂದು ವಿಚಾರ ಮಾಡಲೀಸರೊಆರುಮೂರು ವಿಧದ ಸೋಪಸ್ಕಾರ ಒಂದಾದರು ಇಲ್ಲಆರೆ ಇಬ್ಬರು ಸವತೇರ ಹೋರಾಟಕೇನೆಂಬೆ ೫
ಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳುಒಡಹುಟ್ಟಿದೈವರೆನ್ನ ಕಡೆಗಣ್ಣಿಂದೀಕ್ಷಿಸರೊಬಿಡದೆ ಹತ್ತಿರ ಕಾದಿಪ್ಪ ನುಡಿಸನು ಹಿರಿಯಣ್ಣನವನಮಡದಿಯ ತ್ಯಾಗಕ್ಕೇನೆಂಬೆ ತನ್ನ ಒಡವೆ ಲೇಶವೀಯಳೊ6
ಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದುಕಟ್ಟಿಎತ್ತ ಹೋಗಲೀಸರೊ ನಿನ್ನತ್ತ ಬಾರಲೀಸರೊಹೊತ್ತಿ ಬಂದೊದಗಿ ನೃಪನ ಭೃತ್ಯರು ಎಳೆದೊಯ್ವಾಗಹೆತ್ತಯ್ಯ ನೀ ಬಿಡಿಸದಿರಲು ಮತ್ಯಾರು ಗತಿ ಪೇಳೊ ೭
ಮನೆಯೊಳು ನಾಳಿನ ಗ್ರಾಸಕ್ಕನುಮಾನ ಸಂದೇಹವಿಲ್ಲಋಣದಿಂದ ಕಡೆಹಾಯ್ವ ಮಾರ್ಗ ಲೇಶ ನಾ ಕಾಣೀಣಿಸಲು ಈ ಕಾಲಪುರುಷನ ಬಂಧನದಿಂದ ನಾನಿಷ್ಟುದಣಿದೆನು ಇನ್ನು ನಿನ್ನಣುಗರೊಳಗಾಡಿಸೊ ೮
ನಿನ್ನ ಹೊಂದಿ ಇಷ್ಟು ಬವಣೆಯನ್ನು ಬಡಲೀ ಜನರುನಿನ್ನ ದೂರಿ ನಗುವರೋ ನಾನಿನ್ನು ತಾಳಲಾರೆಘನ್ನ ಕರುಣಿ ಸೌಭಾಗ್ಯಸಂಪನ್ನ ಗೋಪಾಲವಿಠಲಬಿನ್ನಪವ ಚಿತ್ತೈಸಿ ನೀ ಮನ್ನಿಸಯ್ಯ ಮಾಧವ ೯

ಇದು ‘ವಾಸುದೇವ ವಿಠಲಾಂಕಿತರಾದ
೮೮
ಕಂಡೆ ಕರುಣಿಗಳೊಳು ಅಗ್ರೇಸರರಾದ ಪಂಡಿತ ರಾಮಾರ್ಯರಕೊಂಡಾಡಲಿವರನು ಎಷ್ಟರವ ನಾನು ಕಂಡೆ ಎನ್ನ ಮನಕುತ್ಸಾಹವಾಗಿಪ.
ಸಿರಿವೆಂಕಟನರಸಿಂಹಾಚಾರ್ಯರೆಂಬುವರ ಕ್ಷೀರಶರಧಿಯಲ್ಲಿಪರಮಶೋಭಿತ ಚಂದ್ರನಂತೆ ಉದ್ಭವಿಸಿ ಸುಜನರಿಗೆ ಆಹ್ಲಾದವಾಗಿವರವೇದಶಾಸ್ತ್ರಗಳನೋದಿಸಿ ಶಿಷ್ಯಜನಕೆ ಒರೆದೊರೆದು ಉಪದೇಶಿಸಿಮರೆಯದೆ ಒಂದು ಕ್ಷಣ ಬಿಡದೆ ಹರಿಪರರಾಗಿ ಇರುವ ಮಹಾ ಸುಗುಣರನ್ನು ಇಂದು ೧
ಚರಣವೆಂದರೆ ಇವರ ಚರಣವೆ ಸುಖಕರ ಹರಿಯಾತ್ರೆ ಪರವಾಗಿನ್ನುಕರಗಳೆಂದರೆ ಇವರ ಕರವೆ ಮಂಗಳಕರ ಹರಿಪೂಜೆಯಲ್ಲಿ ಸತತಕರ್ಣಗಳು ಮುಂತಾದ ಸರ್ವೇಂದ್ರಿಯಗಳಿಂದ ಹರಿಯನ್ನೆ ವಿಷಯೀಕರಿಸೀರುವ ಅನುಭೋಗವು ಇರತೋರಿ ತಮ್ಮ ನಿಜಕುರುಹ ನೋಡೆಂದುಚಪ್ಪರಿಸಿ ಬಿಗಿದಪ್ಪಿದುದ2
ಏಸುಜನ್ಮದ ಸುಕೃತ ಎನಗಿವರ ಕರುಣ ಉಪದೇಶ ಸ್ವಪ್ನದಿ ಆದುದಾಕೇಶವನೆ ಈ ರೂಪದಿಂದ ಪೇಳಿದನ್ಹ್ಯಾಗೊ ಲೇಶ ನಾ ಅರಿದವನಲ್ಲದಾಸವರ್ಯ ಗುರು ವಿಜಯರಾಯರೆ ಇಲ್ಲಿ ನಿಂದೆನ್ನ ಪೋಷಿಸುವ ಬಗೆಯು ಹಾಗೋವಾಸುದೇವ ಹಯಾಸ್ಯ ಗೋಪಾಲವಿಠಲನ ದಾಸರೊಳುತ್ತಮರ ದಯಕೆ ಸರಿಯುಂಟೆ ೩

ಲಕ್ಷ್ಮೀದೇವಿಯ ಸ್ತುತಿ
೫೩
ಕಮಲಮುಖಿಯೆ ಕಮಲಾಲಯೆ ಕಮಲೆಕಮಾಲಾಕ್ಷಿಯೆ ಕೋಮಲೆ ಪ.
ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ಅ.ಪ.
ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ೧
ಕರಿಯ ಸೊಂಡಲಿನಂತೆ ಕರಯುಗದೊಳಗೊಪ್ಪುವ ಬೆರಳು ಮಾಣಿಕ್ಯದುಂಗುರಹರಡಿ ಕಂಕಣ ವಂಕಿ ಬಿರುದಿನ ತೂೀಳ್ಬಂದಿ ಶಿರಿಭುಜದಲ್ಲಿ ಕೇಯೂರಕೊರಳ ಒಪ್ಪುವ ಸರಗಳು ಪದಕವು ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ ೨
ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ ೩
ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ ೪
ಪಕ್ಷಿವಾಹನನಾದ ಪಾವನಮೂರ್ತಿಯ ವಕ್ಷಸ್ಥಳದಿ ಶೋಭಿತೆಲಕ್ಷ್ಮೀದೇವಿಯೆ ಸಲಕ್ಷಣೆ ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ ೫

ರಾಮನ ಎದುರಿನಲ್ಲಿ ಹನುಮಂತ
೬೦
ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ.
ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು ೧
ತಾರತಮ್ಯ ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು ೨
ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು೩
ಪರಿಪರಿ ಭಕ್ತರ ಹೃದಯಕಮಲದಲ್ಲಿನಿರುತ ಮಾಡುವ ಕರ್ಮ ಶ್ರೀಹರಿಗೆ ಅರ್ಪಿತವೆಂದು ೪
ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು ೫

ಕೊಲ್ಲಾಪುರದ ಲಕ್ಷ್ಮೀದೇವಿಯ ಸ್ತುತಿ
೫೪
ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ ಪ.
ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು ಅ.ಪ.
ಇಂದೀವರವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆಇಂದ್ರನೀಲನಭ ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ ಬೃಂದಾವನಪತಿನಂದನಂದನನಾನಂದಿನಿ ವಂದಿತೆ ೧
ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿನಿನ್ನನು ಮರೆದೆನು ಎನ್ನವಗುಣಗ-ಳನ್ನು ಎಣಿಸದಿರು ಮನ್ನಿಸು ಬಿನ್ನಪ ೨
ಲೋಲಕುಂಡಲ ಕಪೋಲ ಶೋಭಿತ ಕೀಲಾಲಜಾತಪಾಣಿಕೇಳಿಲಿ ಯಮುನಾಕೂಲದಿ ಹರಿ ದು-ಕೂಲಚೋರನ ರಾಣಿ ಜಾಣೆ ಶುಶ್ರೋಣೆ ಜಗತ್ರಾಣೆಕಾಳಕೂಟಸಮ ಕೀಳು ವಿಷಯದಲಿಬೀಳುವುದೆನ್ನ ಮನ ಕೀಳಿಸಿ ಶ್ರೀಗೋ-ಪಾಲವಿಠಲನನುಗಾಲ ಸೇವಿಪಂತೆಶೀಲವೀಯೆಯೆಂದು ಕೇಳುವೆ ಲಾಲಿಸೆ ೩

ನರಸಿಂಹದೇವನ ಸ್ತುತಿ.
೧೬೦
ಕಾಯೋ ಶ್ರೀ ನಾರಸಿಂಹ ಕಾಯೋ ಪ.
ಕಾಯೋ ಶ್ರೀನಾರಸಿಂಹ ತ್ರಿಯಂಬಕಾದ್ಯಮರೇಶಭಯ ಅಂಧಂತಿಮಿರ ಮಾರ್ತಾಂಡ ಶ್ರೀನಾರಸಿಂಹ ಅ.ಪ.
ಘೋರ ಅಕಾಲಮೃತ್ಯು ಮೀರಿಬರಲು ಕಂಡುಧೀರ ನೀ ಬಿಡಿಸದಿನ್ಯಾರೊ ಶ್ರೀನಾರಸಿಂಹ1
ಭೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯುಸುಷುಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ೨
ಜ್ಞಾನರಹಿತನಾಗಿ ನಾ ನಿನ್ನ ಮರೆತರೆನೀನೂ ಮರೆತದ್ಯಾಕೆ ಪೇಳೊ ಶ್ರೀನಾರಸಿಂಹ ೩
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆಸುಬಲರು ಕಂಡು ಮೆಚ್ಚುವರೆ ಶ್ರೀನಾರಸಿಂಹ ೪
ಪಾಲಮುನ್ನೀರಾಗರ ಪದುಮೆ ಮನೋಹರ ಗೋ-ಪಾಲವಿಠಲ ಜಗತ್ಪಾಲ ಶ್ರೀನಾರಸಿಂಹ ೫

ಇದು ಲಕ್ಷ್ಮೀದೇವಿಯನ್ನು ಕುರಿತ ಕೀರ್ತನೆ
೫೫
ಕೋಮಲೆ ರಮಾದೇವಿಯನ್ನ ನೋಡಬನ್ನಿರೆಕಮಲಾರಿ ಸಹೋದರಿಯನೀಗ ಬೇಡಬನ್ನಿರೆ ಪ.
ಇಂದುನಿಭದ ಸುಂದರಿಯರು ಬಂದು ನೋಡಿರೆ ಈಕುಂದರದನೆ ಮಂದರೋದ್ಧರನರ್ಧಾಂಗಿಯೆ೧
ಭಕ್ತಿಯಿಂದ ಭಜಿಪರಿಗೆ ಮುಕ್ತಿಕೊಡುವಳೆಶಕ್ತಿಯುಕ್ತಿಗಳನೆ ಕೊಟ್ಟು ಅರ್ತಿಮಾಳ್ಪಳೆ ೨
ದಾಸಿಯಾದರೆ ಶ್ರೀಶನರಾಣಿ ಪೋಷಿಸುವಳೆಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೆ ೩

ಗಣೇಶ ಸ್ತುತಿ

ಗಜವದನ ಪಾವನ ವಿಘ್ನನಾಶನ ಪ.
ವರ ಪಾಶಾಂಕುಶಧರ ಪರಮದಯಾಳೊಕರುಣಾಪೂರಿತ ಗೌರೀವರಕುಮಾರನೆ ೧
ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ ೨
ಗೋಪಾಲವಿಠಲನ ಅಪಾರ ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ ೩

ಮಾಧ್ವರಲ್ಲಿ ಗುರುಗಳೆಂದೂ
೭೪
ಗುರು ರಾಘವೇಂದ್ರರ ಚರಣ ಕಮಲವನ್ನುಸ್ಮರಿಸುವ ಮನುಜರಿಗೆ ಪ.
ಕರೆಕರೆಗೊಳಿಸುವ ದುರಿತ ದುಷ್ಕ್ರತವೆಲ್ಲಕರಿಯು ಸಿಂಹನ ಕಂಡ ತೆರನಾಗುವುದಯ್ಯಾ.ಪ.
ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿಹರ ಧರಿಸಿದ ಶಶಿಯಂತುದಿಸಿ ಪರಮತ ತಿ-ಮಿರಕ್ಕೆ ತರಣಿಕಿರಣನೆನಿಸಿ ಪಿರಿದುಮೆರೆವ ಸಿರಿ ರಾಮನರ್ಚಕರಾದ ೧
ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿಪರಮೇಷ್ಟಿ ಮರುತರೆ ಗುರುಗಳೆಂದುಗರುಡಶೇಷರುದ್ರ ಸಮರೆಂದು ಸ್ಥಾಪಿಸಿಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ ೨
ಅಂಧಕರಿಗೆ ಚಕ್ಷÄ ವಂದ್ಯರಿಗೆ ಸುರತರು ಬಂದಬಂದವರಭೀಷ್ಟಗಳನಿತ್ತುಒಂದಾರುನೂರು ವತ್ಸರ ವೃಂದಾವನದಲ್ಲಿಚೆಂದಾಗಿ ನಿಂದು ಮೆರೆವ ಕೃಪಾಸಿಂಧು ದೇವಾಂಶರ ೩
ರಾ ಎನ್ನೆ ದುರಿತರಾಶಿಗಳ ದಹಿಸುವಘ ಎನ್ನೆ ಘನ ಜ್ಞಾನ ಭಕುತಿ ಈವವೇಂ ಎನ್ನೆ ವೇಗದಿ ಜನನಮರಣ ದೂರದ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ ೪
ವರ ತುಂಗಾತೀರ ಮಂತ್ರಾಲಯ ಪುರದಲ್ಲಿಪರಿಪರಿ ಸೇವೆ ಭೂಸುರರಿಂದ ಕೊಳುತಸಿರಿಯರಮಣ ನಮ್ಮ ಗೋಪಾಲವಿಠಲನಚರಣ ಸೇವಿಸುತಿಪ್ಪ ಗುರು ಶಿಖಾಮಣಿಯಾದ ೫

ತಮ್ಮ ಗುರುಗಳಾದ ವಿಜಯದಾಸರನ್ನು
೮೧
ಗುರು ವಿಜಯವಿಠಲ ನಿನ್ನ ಚರಣಯುಗಳಿಗೀರಗಿ ನಮೋ ನಮೋ ಎಂದೆನೊ ಹರುಷದಲಿ ನೀ ನಮ್ಮಗುರು ವಿಜಯದಾಸರನ ಕರುಣಿಸಿ ತಂದು ತೋರು ಬಾರೊ ಪ.
ಹಿಂದೆ ನೀನಿವರ ಪುರಂದರದಾಸರ ಮಂದಿರದಲಿ ಸೃಜಿಸಿಚೆಂದ ಚೆಂದದ ಪರತತ್ವ ಕವನಗಳನ್ನುಕುಂದುಯಿಲ್ಲದಲೆ ನುಡಿಸಿ ಸಂದರುಶನವಿತ್ತು ಸಲಹಿ ಆಗಾಮಿಯನುಮಂದಸಂಚಿತವನಳಿಸಿ ನಿಂದ ಪ್ರಾರಬ್ಧ ಉಣ ತಂದಿಟ್ಟು ಈ ಧರೆಗೆ ಮಂದಜನರನ್ನ ಪೊರಿಯೊ ಪರಿಯ ೧
ಆರುಮೂರೆರಡೊಂದು ಜನರು ಇವರಿಂದ ಉ-ದ್ಧಾರ ಗತಿಯನು ಚಿಂತಿಸಿ ಮೂರು ಜನ್ಮಗಳಲಿಬಿಡದೆ ಮೂಲವ ಕೆಡದೆ ಸೇರಿ ಮತ್ತಿವರ ಬಳಿಯಶ್ರೀರಮಣ ನಿನ್ನ ವಿಚಾರವನು ಮಾಡುತಸಾರಿಸಾರಿ ವರವಪಿಡಿದು ಕಾರಣರು ನಮಗಿವರು ಕರ್ಮಮೂಲವ ಕೆಡಿಸಿ ನಾರಾಯಣನೆ ನಿನ್ನ ಪರನೆಂದು ತೋರುವ2
ನೀನು ನಡೆಯಲು ನಡೆದು ನೀನು ನುಡಿಯಲು ನುಡಿದುನೀನು ಪಿಡಿಯಲು ಪಿಡಿದು ನೀನು ಮಾಡಿಸೆ ಮಾಡಿನೀನು ನೋಡಿಸೆ ನೋಡಿ ನೀನು ಕೂಡಿಸಲು ಕೂಡಿಯೆನೀನು ಪರಿಪರಿ ಏನು ಮಾಡಿದ ಕರ್ಮ ಶ್ರೀನಾಥನಿನಗರ್ಪಿಸಿ ನಾನಾಪರಿಯಲಿ ನಮ್ಮನ್ನು ಕೂಡಿಕೊಂಡಿನ್ನುಜ್ಞಾನ ಬೋಧಿಸಿ ನಿನ್ನ ಧ್ಯಾನದೊಳಿಪ್ಪಂಥ ೩
ನಿನ್ನ ಸೃಷ್ಟಿಯಾದಿ ಅಷ್ಟಕರ್ತೃತ್ವಗಳು ಚೆನ್ನಾಗಿಮನದಿ ತಿಳಿದು ನಿನ್ನ ವಾಪ್ತತ್ವವನುಇನ್ನು ಹುಡುಕುತ ತಮ್ಮ ಮನಬಂದಂತೆ ನಡೆದುಪುಣ್ಯ ಪಾಪಂಗಳಿಗೆ ಹಿಗ್ಗಿಕುಗ್ಗದೆ ನೋಡಿನಿನ್ನ ಪ್ರೀತಿದೆಂದರಿದು ಸನ್ಮತಿಯಿಂದ ಸಕಲ ಸ-ಜ್ಜನರ ಸಮ್ಮತಿ ನಿನ್ನ ತುತಿಸುತ ಮೆರೆವ ಘನ್ನ ದಯಾನಿಧಿಯ ೪
ಆವದಿನ ನೀನಿವರ ಸೇವೆ ದೊರಕಿಸಿ ಎನಗೆ ಸಾವಾಸದಲ್ಲಿ ಇತ್ತುಕಾವು ಘನವಾಗಿ ಪ್ರತಿಕ್ಷಣಕೆ ಸ್ಮರಣೆಗೆ ಅನು-ಭವಕೆ ತಂದುಕೊಳುತ ಜೀವಿಸುತ ನಮ್ಮನ ಪೊರೆದು ರಕ್ಷಿಸಿ ಬಿಡದೆಪಾವನದ ದಾರಿತೋರಿ ಈ ವಿಧದಲಿ ನಿನ್ನ ಇ-ರವ ತೋರುತ ಜಗದಿ ಧೀರರನ ಮಾಡಿ ನೀ ಅಲ್ಲಿ ಪೂಜ್ಯನೆಂಬಾ ೫
ಎಂದಿನಂತಾಡಿ ನಿನ್ನ ಯೋಚಿಸುತ ಬಪ್ಪರೊಳು ಇಂದು ಎನಗೊಂದು ಪರಿಯ ಸಂದೇಹವನು ತೋರಲಾಗಿಮನದಲಿ ಎನಗೆ ನಿಂದಿರದು ಏಕಸ್ಥಳದಿನೊಂದ ದಣಿವಿಕೆಯೇನೊ ನೀನು ಬಲ್ಲೆಯೊ ಮನಕೆತಂದು ಅನುಭವಕೆ ತೋರಿ ಚೆಂದತೋರದು ಅವರಬಿಡಿಸಿ ಎನ್ನಿಡುವುದು ನಂದನಂದನ್ನಕಂದ ಮುಕುಂದ ೬
ಎಲ್ಲಿ ನೀನುಂಟು ಮತ್ತಲ್ಲಿ ಆವರುಂಟೆಂಬುದೆಲ್ಲಬಲ್ಲರು ಸರಿಯೆ ಅಲ್ಲಿದ್ದು ನೀನು ನಮಗಿನ್ನುತಿಳಿಸುವ ಕರ್ಮ ಇಲ್ಲಿ ಈಗಾಗರಿಯದುಎಲ್ಲಿ ಸಕಲವು ಕರ್ಮ ಅಲ್ಲೆ ಒಪ್ಪಿಸಿದ್ದೇವೆಬಲ್ಲಿದ್ದು ಮಾಡೊ ದೊರೆಯೆ ಎಲ್ಲ ನಾಮಕನು ನೀನೆ ಗೋಪಾಲವಿಠಲಾಲ್ಲಲ್ಲಿ ಏನಯ್ಯ ಎಲ್ಲ ಭಕುತರೊಡೆಯ ೭

೨೦
ಗೋಪಾಲವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ಪ.
ಉದಿತ ತರಣೀನಿಭ ಪದಪದ್ಮ ನಿನ್ನಯಹೃದಯದೊಳಗಿರಿಸಿ ಮುದದಿಂದ ಧ್ಯಾನಿಪಸದಯುಗಳ ಪಾದಪದುಮಸೇವೆಯನುಒದಗಿ ಪಾಲಿಸೊ ಶಶಿವದನ ಸಂ(ಕಂ)ಸದನನೆ ೧
ವಾಸುದೇವನೆ ಎನ್ನ ದೋಷಿಯೆಂತೆಂದರೆಆಸರಿನ್ನ್ಯಾರು ನಿನ್ನ ದಾಸರದಾಸಗೆದಾಸವಿನುತ ಹೀಗುದಾಸೀನ ಮಾಡಲುದಾಸಜನರು ನಿನ್ನ ಲೇಶವು ಮೆಚ್ಚರು ೨
ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿಪರಮಾನುಗ್ರಹ ಪರಿಪಾಲಿಸಿಪ್ಪರೆನ್ನನಿರುತದಿಬೇಡುವೆ ಗೋಪಾಲವಿಠಲ ಶ್ರೀಲೋಲನೆದೊರೆಯೆ ನಿನ್ನ ಮೂರುತಿ ಬರವೆನ್ನ ಮನಸಿಗೆ ೩

ಜೀವಿಗಳನ್ನು ನೀನಾಗಿ ಕಾಪಾಡು
೨೧
ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ.
ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ ೧
ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ ೨
ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ೩

ಮಧ್ವಮತಕ್ಕೆ ಭೂಷಣಪ್ರಾಯರಾಗಿರುವ
೮೨
ಚರಣಕಮಲವನ್ನು ನೆನೆವೆ ನಾಗುರು ಚರಣವನ್ನು ನೆನೆವೆ ನಾಚರಣಕಮಲವನ್ನು ನೆನೆದು ನೆನೆದುಹರಿಚರಣಕಮಲ ಅರ್ಚಿಸುವೆ ನಾ ಪ.
ಸುರ ದ್ವಿಜ ವೇಷದಿಂದುದಿತನ್ನ ತ್ರಾಣಿಸುರಗಂಗೆಯನ್ನು ಸೇವಿಸಿದನ್ನಸುರಮುನಿಯಿಂದುಪದೇಶನ್ನ ಭೂಸುರರ ಕರುಣ ಸಂಪಾದಿಸಿದಾತನ್ನ ೧
ಪರಮತಗಳನು ಖಂಡ್ರಿಸಿದನ್ನ ಸತ್ಯಹರಿವರನೆಂದು ಸ್ಥಾಪಿಸಿದನ್ನಪರತತ್ವ ಆರು ಪದಳ್ಮ ? ತನ್ನವರಗುರುಮಧ್ವಮತ ಹೊಂದಿಸಿದಾತನ್ನ ೨
ಪರಿಪರಿ ವ್ರತಾಚರಿಸಿದನ್ನ ಮನೋದುರ್ವ್ಯಸನವ ಪರಿಹರಿಸಿದನ್ನಪರಿಪರಿಯಾತ್ರಾ ಚರಿಸಿದನ್ನ ನಮ್ಮಗುರುವರ ಶಿರೋರತುನನ್ನ ೩
ಶುದ್ಧಾದ ಸಂಪ್ರದಾಯಕನನ್ನ ತತ್ವತಿದ್ದಿ ಮುದ್ದೆಮಾಡಿದಾತನ್ನಾದ್ವೈತಮತ ದೂಷಿತನ್ನ ಸಿರಿಮಧ್ವಮತಕೆ ಭೂಷಿತನ್ನ ೪
ಪರಸತಿ ಪರಧನ ತೊರೆದನ್ನ ತನ್ನಪರಿಚಾರಕರಿಘಿತ ಒರೆದನ್ನಹರಿನಾಮಾಮೃತವನ್ನು ಸುರಿದನ್ನ ತನ್ನಸರಿಬಂದಶಿಷ್ಯರ ಪೊರೆದನ್ನ ೫
ದೂರದರ್ಶಿ ಸರ್ವಕಂಡನ್ನ ನಿಜಪ್ರಾರಬ್ಧಭೋಗವ ಉಂಡನ್ನ ತನ್ನಆರಾಧಿಪುವರಘ ಖಂಡನ್ನ ನಮ್ಮನಾರಾಯಣನ ನಿಜತೊಂಡನ್ನ ೬
ವೈಷ್ಣವ ಸಿದ್ಧಾಂತ ಒರೆದನ್ನ ಆವೈಷ್ಣವಾಚಾರವ ತೋರಿದನ್ನ ವೀರವೈಷ್ಣವದಾಸವರ್ಯನ್ನ ೭
ತಪಸೆ ಸಂಗರವೆಂದರಿದನ್ನ ತನ್ನಸ್ವಪನದಿ ಬಿರುದು ತೋರಿದನ್ನಉಪದೇಶ ಬಲಮಾಡಿದನ್ನ ನಿಜಉಪಾಸನ ಜಪಿಸಿ ಪೇಳಿದನ್ನ ೮
ವಿಜಯವಿಠಲದಾಸನ್ನ ತನ್ನಭಜಿಸುವರಿಗೆ ವರದಾತನ್ನ ಸಿರಿಗೋಪಾಲವಿಠಲನ ಮಾತನ್ನ ನಿತ್ಯಭಜಿಸಿ ಬದುಕುವೆ ಪುಣ್ಯಾತ್ಮ ೯

ಭೀಮನನ್ನು ಕುರಿತ ಕೀರ್ತನೆ
೬೧
ಜಯ ಜಯ ಭೀಮಸೇನ ಪ.
ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ.
ಕುಂತಿಜ ಕುಮುದಸಖನ ಕುಲತಿಲಕನೆಅಂತಕಾತ್ಮಜನನುಜನೆ ಅರ್ಜುನಾಗ್ರಜಕಿಂತು ಜೀಮೂತ ಪ್ರಚಂಡ ಮಾರುತ ತಾತಶಾಂತದಾನ ದ್ರುಪದನ ತನುಜೆಯ ನಿಜಕಾಂತ ದಿಗಂತ ವಿಶ್ವಾಂತ ಮಹಿಮ ಮಣಿಮಂತ ಅಂಬ ಸುವಿದಾರಿ ಸಹಜ ಬಲವಂತ ದುರ್ಜನ ಕುಠಾರಿ ಕೌರವಸೇನಾಕಾಂತಾರ ಪಾವಕ ದೀನೋದ್ಧಾರಿ೧
ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ ೨
ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ ೩
ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ ೪
ಭೀಮಭವಾರಣ್ಯ ಧೂಮಕೇತನೆನಮೋ ಶ್ರೀ ಮನೋಹರ ಗೋಪಾಲವಿಠಲನ್ನಪ್ರೇಮ ಪುಣ್ಯ ಪುತ್ರ ಸೂತ್ರ ಸಜ್ಜನ ಮಿತ್ರಶ್ರೀಮಂತ ಧೀಮಂತ ರಹಿತಾದಿಮಧ್ಯಾಂತಭೀಮ ವಿಕ್ರಮ ಸದ್ಭೀಮ ದುರ್ಜನರಿಗೆಭೀಮಾದಿ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ ೫

ಗೋಪಿಯರ ಪೂರ್ವಜನ್ಮದ ವ್ರತ
೧೬೨
ಜಯತು ಜಗದಾಧಾರ ಜಯತು ದೋಷ ವಿದೂರ ಜಯತು ಸಿರಿರಂಗ ಎನ್ನಂತರಂಗ ಸುಂದರಮಕುಟ ಮುತ್ತಿನ ಚೆಲ್ಲೆದುರುಬುಅರವಿಂದ ಮುಖನಯನ ಕಸ್ತೂರಿ ತಿಲಕ ೧
ಕುಂದಕುಟ್ಮಲದಂತೆ ವದನ ಮಂದಹಾಸ ಚೆಂದದ ಕರ್ಣಕುಂಡಲದ ಪ್ರಭೆಯಕಂದರದಿ ಕಂಬುಗ್ರೀವ ಭುಜಕೀರ್ತಿ ತೋಳಬಂದಿ ಹಸ್ತದಿ ಕಡೆ ಕಂಕಣ ೨
ಇಂದಿರಾಲಯವಕ್ಷ ತುಲಸಿಮಾಲೆ ಸಿರಿಗಂಧಕೌಂಸ್ತುಭಾಭರಣ ಭೂಷಿತಗುಂಭ ಸುಳಿಪೊಕ್ಕುಳ ಉದರ ತ್ರಿವಳಿಯು ಪೀ-ತಾಂಬರ ಕಟಿಯ ಒಡ್ಯಾಣ ಚೆಲುವ ೩
ಸ್ತಂಭ ಉರುಟು ಕದಳಿ ಊರು ಜಾನುಜಂಘೆಗಂಭೀರ ಚರಣದಂದಿಗೆಯ ನಾದಗೋಪಿಯರ ಪೂರ್ವದ ನೋಂಪಿ ಪುಣ್ಯದ ಫಲವುತಾ ಪ್ರೇಮದಿಂದ ಪೂರೈಪೆನೆಂದು ೪
ಶ್ರೀಪತಿ ಅನೇಕರೂಪನಾಗಿ ನಿಂದು ಗೋಪತಿ ರಾಸಕ್ರೀಡೆಗೆ ತೊಡಗಿದಮಧುಕುಂಜವನದಲ್ಲಿ ಚದುರೆಯರ ಬೆರೆದಿನ್ನು ಮದನನಯ್ಯನು ನಿಂದ ಮಂಡಲಾಕಾರ ೫
ಇಂದೀವರಾಕ್ಷಿಯರ ಮನದ ಹದನವನರಿತುಕೊಳ್ಳಲುವಿಧಿಸಿ ಊದಿದನಾಗ ವಿಧಿಯ ಜನಕ ಕೆಳದಿಯರ ಮುಖ ವಿಕಸಿಸಿ ಕಳೆಯುಕ್ಕಿ ಕೃಷ್ಣತಮ್ಮೊಳಗಾದನೆಂದು ತಿಳಿದರು ಹರುಷದಿ ೬
ಬಳಿಯಲೊಬ್ಬಳನೆ ನಿಲಿಸಿ ಹೆಗಲಲ್ಲಿ ಕರವ ಹಾಕಿಕುಣಿಯ ಕುಳಿತ ಕೃಷ್ಣನುಲಲನೆಯರ ಕರತಳದಲ್ಲಿ ಕರವನು ಇಟ್ಟುನಿಲಿಸಿ ಪಾಡುತ ಸರಿಗಮದಿಂದಲಿ ೭
ಕುಳದಲ್ಲಿ (?) ಕೃಷ್ಣನ ಸ್ಥಳದಲ್ಲಿ ಹೆಜ್ಜೆಯೊಳುನಿಲಿಸಿ ನಿಲಿಸಿ ಕೃಷ್ಣನಲಿ ಆಡೋರು ಮಲಕು ಬಿಡಿಸುವ ಹಾರ ತುಡುಕುವನುಕುಚಗಳ ಸಲಿಸುವನು ಅವರವರ ಚೆಂದುಟಿಗಳ ೮
ಘಲಕು ಘಲಕು ತಾಳಗತಿಗಳಿಂದಲಿ ಸುತ್ತಿತಳಖಾಕಿ ಅಂಗನಾಮಾಂಗನೆಂದುನಿಲಿಸದೆ ಆಡುವ ಕಳೆಯುಕ್ಕಿ ಅಂಬರದಿನಿಲಿಸಿ ಅಜಭವಸುರರು ನೋಳ್ಪರು ೯
ದುಂದುಭಿವಾದ್ಯ ತಮ್ಮಿಂದ ತಾಂ ಬಾರಿಪವುಗಂಧರ್ವರು ಗಾಯನ ಮಾಡೆಮಂದಾರ ಮಲ್ಲಿಗೆಯ ತಂದು ಪುಷ್ಪವ ಸುರರುಚೆಂದದಿಂದಲಿ ವೃಷ್ಟಿಯಗರೆದರು ೧೦
ಒಂದೊಂದು ದೋಷದಿಂದಿನ್ನು ಅಜಭವಸುರರುತಂದು ಇಡುವರು ಉಡುಗೊರೆಗಳೆಲ್ಲೈಂದುಮುಖಿಯರ ಮನದ ಆನಂದ ಪೂರ್ತಿಸಿದ ಚೆಂದ ಚೆಂದದಲಿನ್ನು ಇಂದಿರೇಶ ೧೧
ಶರಣು ಕರುಣಾನಿಧಿಯೆ ಶರಣು ಗುಣವಾರಿಧಿಯೆಶರಣು ಭಕ್ತಜನರ ಶಿರೋಮಣಿಯೆಶರಣು ನಾ ನಿನ್ನ ನಿಜ ಚರಣ ಸೇವಕನುಶರಣು ಗೋವಳ ಗೋಪಿಯರ ಪಾಲಕ ೧೨
ರಾಸಕ್ರೀಡೆಯಲಿ ತೋರಿಸಿದ ಗೋಪಿಯರ ಅಭಿ-ಲಾಷೆ ಪೂರ್ತಿಸಿದ ಭಾಸುರಮೂರುತಿಪೋಷಿಸು ಎನ್ನ ಗೋಪಾಲವಿಠಲ ವಿಜಯ ದಾಸರಾಸರದಲ್ಲಿ ಇಟ್ಟು ಎನ್ನ ೧೩

ಘೋರತರ ಮೃತ್ಯುವಿನಿಂದ ಕಾಪಾಡು
೯೭
ಜಯನಾರಸಿಂಹ ಕಾಯೊ ಪ.
ಘೋರ ಅಕಾಲ ಮೃತ್ಯು ಮೀರಿ ಬರುವುದು ಕಂಡುವೀರ ನೀ ಬಿಡಿಸದಿದ್ದರೆ ಇನ್ಯಾರೊ ಶ್ರೀನರಸಿಂಹ ಕಾಯೊ ೧
ಭೀಷಣನೆ ಸುಭದ್ರ ದೋಷ ಮೃತ್ಯುವಿಗೆ ಮೃತ್ಯು ಸುಷುಮ್ನನಾಡೀಸ್ಥಿತ ಪ್ರಭುವೆ ೨
ಜ್ಞಾನರಹಿತನಾಗಿ ನಾ ನಿನ್ನ ಮರೆತರೆನೀನೆನ್ನ ಮರೆತಿದ್ಯಾತಕೆ ಪೇಳೊ ೩
ಪ್ರಬಲತಮನೆನಿಸಿ ಅಬಲರು ಕಾಡಿದರೆಸುಬಲರು ಕಂಡು ಮೆಚ್ಚುವರೇನೊ ೪
ಪಾಲ ಮುನ್ನಿಗನಾದ ಪದುಮ ಮನೋಹರ ಗೋ-ಪಾಲವಿಠಲ ಜಗತ್ಪಾಲ ಶ್ರೀ ನಾರಾಯಣ5

ಎಲ್ಲವನ್ನೂ ಮಾಡಿಸುವವನು
೧೨೮
ಜ್ಞಾನವಿಲ್ಲದ ಕರ್ಮ ಏನು ಮಾಡಿದರೇನುಆನೆ ತಿಂದ ಕಪಿತ್ಥ ನಾನಾ ಪರಿಯಲಿಕಾಯವನು ದಂಡಿಸಲ್ಯಾತಕೆಶ್ರೀನಿವಾಸನು ಒಲಿಯನು ಮನುಜ ಪ.
ನಿನ್ನ ಉನ್ನತವೆಷ್ಟು ನೀನಾವ ಜಾತಿಯವನೀನಾರ ಬಲದಲಿರುವಿ ನಿನಗೆನಿನ್ನವರಿಗೆ ನೀನರಿತು ನೋಡಿಕೊನಿನಗೆ ಸಥೆಯಾದದಿನ್ನು ಏನು ಕಾಣದೆ ಬರಿದೆನಾನೆ ಮಾಡಿದೆನೆಂಬೋದೇನು ಈಅನ್ಯಾಯವ ಹೇನು ತನ್ನ ಮ್ಯಾಲೆಗೋಣಿಯ ಹಾಕಿಕೊಂಡಂತೆ ನಾನುನನ್ನದು ಎಂಬುದನು ಬಿಡದಲೆ ವ್ಯರ್ಥ ೧
ವಹ್ನಿಯಂತೆಂಬಂತೆ ಇನ್ನು ನಿನ್ನಲ್ಲಿರಲುಪುಣ್ಯದಂಕುರ ಫಲಿಸೋದೆಕಣ್ಣಲ್ಲಿ ನೋಡಲರಿಯದ ಕರ್ಮಾನಂತವನ್ನು ಮಾಡಲು ತಿಳಿಪೋದೀಣೆಯಿನ್ನೆಷ್ಟಿರಲು ಇನ್ನು ಜೋಡಿಯ ಮುಂದೆತನ್ನ ಬಲವನು ನಡೆವದೆ ತನಗೆ ಮಾಡಿ-ಸಿನ್ನು ಜೀವಕ್ಕೆ ಫಲತರಿದುಮುನ್ನ ತಂದುಕೊಡುವ ಚಿನ್ಮಯವರಿಯದೆ ೨
ಕೇಳುವನು ದಾರು ಹೇಳುವನು ದಾರುಅರಿವವನು ದಾರು ತಾಳಿ ಮಿತಿ ಕೊಡುವರುಆಲೋಚಿಸಿ ನೋಡು ಮನದಿ ಪಾಲಸಾಗರಶಾಯಿ ಗೋಪಾಲವಿಠಲನ್ನ ಊಳಿಗಮಾಡಿನ್ನು ಬಾಳುವೆ ಮಾಡದಲೆ ೩

ತಮ್ಮ ಮೇಲೆ ದಯವಿಡಬೇಕೆಂಬುದಾಗಿ
೨೪
ದಯವಿರಲಿ ದಯವಿರಲಿ ದಾಮೋದರ ಪ.
ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ.
ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ೧
ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ ೨
ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ರ‍ಮತಿಗೆ ವಿಶೇಷ ಮಾರುತಿರಮಣ ನಿನ್ನ ೩
ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು ೪
ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು ೫
ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ ೬
ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ ೭
ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ೮

ವಿಜಯದಾಸರ ಸ್ತುತಿ.
೮೩
ದುರಿತ ವಾರಿವಾಹ ಜಂಝಾನಿಳ ಶರಣುಶರಣು ನಮ್ಮ ಗುರುವೆ ವಿಜಯರಾಯ ಪ.
ಆಗಾಮಿ ಸಂಚಿತ ಅಖಿಳಕರ್ಮದೂರರಾಗದ್ವೇಷಾದಿ ದುರ್ಗುಣವರ್ಜಿತಭೋಗಪ್ರಾರಬ್ಧ ಭುಂಜಿಸುವ ಭೂದೇವಭಾಗವತರನ್ನ ಬಿಡದೆ ಭಜಿಸುವರ ೧
ಈಷಣತ್ರಯ ದೂರ ಇಳೆಯೊಳಗೆ ಪುಣ್ಯದೇಶ ಸಂಚಾರ ಪಾವನ ಶರೀರದಾಸರ ನಿಜಪ್ರಿಯ ದಮೆಶಮೆಯಾದಿ ಪಾವನತೋಷಭರಿತ ನಿತ್ಯ ಕೊಂಡಾಡುವ ಜನರ ೨
ಅಧ್ಯಾತ್ಮ ಅಮಿತ ಗೋಪ್ಯತತ್ವವಿಚಾರಸ್ವಾಧ್ಯಾಯ ನಿಪುಣ ಸಕಲ ಜನ್ಮದಿಅದ್ವೈತಮತಕೋಲಾಹಲ ಅಮಲಶೀಲಸಿದ್ಧಾಂತ ಜ್ಞಾನನಿಧಿಯೆ ನಿಜಾಶ್ರಿತರ ೩
ಕಾಮಾದಿ ಷಡುರಿಪುಗಳನ ಗೆಲಿದು ಹೃದಯವ್ಯೋಮದೊಳಗೆ ನಿತ್ಯದಿ ಪೂಜಿಸುವ ಮಹಿಮನೇಮದಿಂದಲಿ ನಿಮ್ಮ ಸ್ಮರಿಸುವ ಜನರ ೪
ಭುವನ ಮಂಡಲಾಧಿಪ ಕವಿಗಳ ಶಿರೋರತುನಭವದೂರ ಭಾಗ್ಯನಿಧಿಯೆ ಭಕ್ತರಪವನಾಂತರ್ಗತ ನಮ್ಮ ಗೋಪಾಲವಿಠಲನ್ನಸುವನಜಚರಣ ಸೇವೆಯಲಿಟ್ಟ ಗುರುರನ್ನ ೫

೧೭೮
ದೇವಿ ಅಂಬುಜವಲ್ಲಿ ರಮಣನೆ ಭೂವರಾಹ ದಯಾನಿಧೆ ಪ.
ಪವಮಾನನ ದಿವ್ಯ ಕರದಲಿ ಸೇವೆ ಸಂತತಗೊಳ್ಳುವಿ ಅ.ಪ.
ಅವನಿಯೊಳು ಶ್ರೀಮುಷ್ಣಕ್ಷೇತ್ರದಿ ನೀ ವಿಹಾರವ ಮಾಡುವಿಭವವಿಮೋಚನ ಭಕ್ತವತ್ಸಲ ಕವಿಗಳಿಗೆ ಕರುಣಾಕರ ೧
ಅತ್ಯಗಾಧ ಸುಶೀಲ ಜಾಹ್ನವಿ ಸುತ್ತು ಷೋಡಶತೀರ್ಥದಿನಿತ್ಯ ಪುಷ್ಕರಿಣಿಯ ಗರ್ಭದಿ ನಿತ್ಯ ಇರುವುದು ಕಂಡೆ ನಾ ೨
ಮತ್ತು ವರ್ಣಿಪೆ ತೀರ್ಥ ತಟದಲಿ ಉತ್ತಮಾಗ್ನೇಯಭಾಗದಿಚಿತ್ತವೇದ್ಯದಿ ಕಲ್ಪತರು ಅಶ್ವತ್ಥರೂಪದಿ ಇರುವನ ೩
ಕರಗಳೆರಡು ಕಟಿಯಲಿಟ್ಟು ಕೋರೆಹಲ್ಲನೆ ತೋರುತಧರಿಸಿ ಚಿನ್ಮಯ ಸಾಲಿಗ್ರಾಮದ ಸರವು ಈ ಪರಿ ಬೆಳಗುತ ೪
ಘನ್ನಶ್ವೇತವರಾಹಮೂರುತಿ ಎನ್ನ ಪೂರ್ವದ ಪುಣ್ಯದಿನಿನ್ನ ಶುಭಕರ ಪಾದಪಂಕಜವನ್ನು ಕಂಡೆನು ಇಂದು ನಾ ೫
ಸುಂದರಾನನ ಕಂಜಮಧುಪನ ಇಂದು ನೋಡಿದ ಕಾರಣಬಂದ ದುರಿತಗಳೆಲ್ಲ ಹೋದವು ಚೆಂದ ಶುಭಕರವಾದವು ೬
ಮಲ್ಲಮರ್ದನ ವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯಝಲ್ಲಿಕಾವನದಲ್ಲಿ ಕುಳಿತು ಎಲ್ಲ ಭಕ್ತರ ಸಲಹುವಿ ೭
ಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಾಡುವೆಶೋಕಹರ ಗೋಪಾಲವಿಠಲ ನೀ ಕರುಣಿಸಿ ರಕ್ಷಿಸೊ ೮

ಬಿಂಬ ಮೂರುತಿಯನ್ನು ಕುರಿತು
೧೩೦
ಧ್ಯಾನವನೆ ಮಾಡು ಬಿಂಬಮೂರುತಿಯ ಪ.
ಆನಂದದಲಿ ಕುಳಿತು ಅಂತರಂಗದಲಿ ಅ.ಪ.
ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಮುದದಿಂದ ಮೂಲಮಂತ್ರವನು ಜಪಿಸಿಸದಮಲ ಭಕುತಿಯಲಿ ದೇಹಸ್ಥನ ತಿಳಿದುಪದಮಾಸನವ ಹಾಕಿ ಪರಮ ವಿಶ್ವಾಸದಲಿ ೧
ಅಂಗವನು ಚಲಿಸದೆ ಚೆಂದಾಗಿ ದೃಢದಿಂದಕಂಗಳನು ಮುಚ್ಚಿ ಇಂದ್ರಿಯಂಗಳ ಜರಿದುಮಂಗಳ ಶೋಭಿತನ ಅಖಂಡ ಧ್ಯಾನವನು ಅಂತರಂಗದಿ ನಿಲಿಸಿ ಎಲ್ಲವನು ಕಾಣೊ ೨
ಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿಮಗುಳೆ ಪರಮ ಗುರುವಿನ ಮೂರ್ತಿಯನುತೆಗೆದು ಆವಾಹನವನೆ ಮಾಡಿ ಅಲ್ಲಿಂದಲೆಸ್ವಗುರು ಬಿಂಬಮೂರುತಿಯಲಿ ಐಕ್ಯವನೆ ಮಾಡೊ ೩
ತಿರುಗಿ ಮೆಲ್ಲಗೆ ಮೂರು ರಂಧ್ರದಿಂದಲಿ ನಿನ್ನವರಮೂರ್ತಿಯಲಿ ಚಿಂತನೆಯ ಮಾಡೊಭರದಿಂದ ಎಲ್ಲವನು ತಂದು ಹೃದಯದಲ್ಲಿಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕೂಡಿಕೊ ೪
ಆತನೆ ಬಿಂಬಮೂರುತಿಯೆಂದು ತಿಳಿದುಕೊಆ ತರುವಾಯ ನಾಡಿಗಳ ಗ್ರಹಿಸಿಆ ತೈಜಸನ ತಂದು ವಿಶ್ವಮೂರುತಿಯಲ್ಲಿಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ೫
ಜ್ಞಾನಪ್ರಕಾಶದಲಿ ನಿನ್ನ ಹೃದಯ-ಸ್ಥಾನ ಚೆನ್ನಾಗಿ ಅಷ್ಟದಳಕಮಲ ಮಧ್ಯಶ್ರೀನಿವಾಸಮೂರ್ತಿ ನಿಲ್ಲಿಸಿ ಬಾಹ್ಯದಲಿಏನೇನು ಪೂಜೆಗಳ ಅದನೆ ತಿಳಿದು ಮಾಡೊ ೬
ಗುಣ ನಾಲ್ಕರಿಂದ ಉಪಾಸನೆಯನು ಮಾಡುಕ್ಷಣಕ್ಷಣಕೆ ಹರಿರೂಪ ನೀ ನೋಡುತಾಣುರೇಣು ಚೇತನಕೆ ತಾನೆ ನಿಯಾಮಕಫಣಿಶಾಯಿಯಲ್ಲದೆ ಮತ್ತೊಬ್ಬರಿಲ್ಲವೆಂದು ೭
ಮಮತೆಯನು ತೊರೆದು ಮೇಲೊಂದಪೇಕ್ಷಿಸದೆಸಮ ವಿಷಯವ ತಿಳಿದು ಒಂದೆ ಭಕುತಿಯಲಿಸಮಾಧಿಗೊಳಗಾಗಿ ದಿವ್ಯದೃಷ್ಟಿಯಲಿಕ್ರಮದಿಂದ ಭರಿತಭಾವವನು ಕಾಣೊ ೮
ಈ ಪರಿ ಧೇನಿಸಲು ದೇವ ಕರುಣವ ಮಾಳ್ಪಪಾಪ ಸಂಚಿತವು ಪ್ರಾರಬ್ಧ ನಾಶಾಪರೋಕ್ಷಿತನಾಗಿ ನಿನ್ನ ಯೋಗ್ಯತೆಯಿದ್ದಷ್ಟುಗೋಪಾಲವಿಠಲನೊಲಿವನಾಗ ೯

ಈ ಕೀರ್ತನೆಯಲ್ಲಿ ಪಂಚಪ್ರಾಣರಿಗೆ
೨೫
ಧ್ಯಾನಿಸು ಮನವೆ ನೀ ಧ್ಯಾನಿಸು ಪ.
ಧ್ಯಾನಿಸು ಮನವೆ ಶ್ರೀಹರಿಯ ಪಾದಧ್ಯಾನನಿರುತ ಈ ಪರಿಯ ಆಹಾಪ್ರಾಣಾಪಾನವ್ಯಾನೋದಾನಸಮಾನರ್ಗೆ ಪ್ರಾಣನಾಗಿಪ್ಪ ಮುಖ್ಯ ಪ್ರಾಣಾಂತರ್ಗತನ ನೀ ಅ.ಪ.
ಪರಮಾಣು ಪ್ರದೇಶದಲ್ಲಿ ಪ್ರಾಣರಾಶಿ ಅನಂತುಂಟಲ್ಲಿ ಹೀಗೆಒರಲುತಿದೆ ವೇದದಲ್ಲಿ ದೃಷ್ಟಾಂತವ ಪೇಳ್ವೆ ಕೇಳು ದೃಢದಲ್ಲಿ ಆಹಾಪರಮಸೂಕ್ಷ್ಮ ವಟಮರನಾಗಿ ಅದರಲ್ಲಿಪರಿಮಿತಿಲ್ಲದರ ಫಲದಬೀಜವನರಿತು ನೀ ೧
ನಿರುತ ಸುವರ್ಣಬ್ರಹ್ಮಾಂಡದಲ್ಲಿ ಹರಿ ಪೂರ್ಣವ್ಯಾಪ್ತ ಅಖಂಡನಾಗಿಮಿರುವುತಲಿಪ್ಪ ಮಾರ್ತಾಂಡ ತೇಜೋಕಿರಣದಂತಿರುವ ಪ್ರಚಂಡ ಆಹಾಹೊರಗೆ ಒಳಗೆ ಸರ್ವತ್ತರದಲ್ಲಿ ಹರಿಮಯ-ವರಿತು ನಿನಗೆ ಎಲ್ಲಿ ದೊರಕಿದ ಸ್ಥಳದಿಂದ ೨
ಸಲಿಲಭೂಗಿರಿಲತೆ ನಾನಾವೃಕ್ಷಫಲಖಗಮೃಗ ಕಾನನತೃಣ ಪೊಳೆವಪಾವಕತರುಪವನ ಮುಕ್ತಸ್ಥಳ ಅವ್ಯಾಕೃತ ಗಗನ ಆಹಾಒಳಗೆ ಹೊರಗೆ ಹರಿ ಚಲಿಸದೆ ಇರುತಿಪ್ಪಸ್ಥಳದ ನಿಲುವಿನಂತೆ ತಿಳಿದು ನೀ ಅದರಂತೆ ೩
ಕೇಶವ ವಿಶ್ವಮತ್ಸ್ಯಾದಿ ತೈಜಸ ಶ್ರೀಶ ಹಯಗ್ರೀವಾದಿ ಜೀವರಾಶಿಯೊಳಿದ್ದಾನಾದಿ ಸರ್ವದೇಶ ವ್ಯಾಪಿಸಿದಂತಾಭೇದಿ ಆಹಾಈ ಸಮಸ್ತಮೂರ್ತಿ ಶ್ರೀಶ ರಂಗನೆ ಎಂದುವಾಸನಾಮಯದಿಂದ ನೀ ಸೇವಿಸುತ್ತ ನಿತ್ಯ ೪
ಸಪ್ತಾವರಣ ಶರೀರದಿ ದಶಸಪ್ತದ್ವಿಸಹಸ್ರ ನಾಡಿಯಲಿ ದಶ-ಸಪ್ತದ್ವಿಸಹಸ್ರ ರೂಪದಲ್ಲಿ ಹರಿವ್ಯಾಪ್ತ ನಿರ್ಲಿಪ್ತಸ್ಥಾನದಲ್ಲಿ ಆಹಾಆಪ್ತನಂತಿರುವ ಸುಷುಪ್ತಿ ಸ್ವಪ್ನ ಜಾಗ್ರದಿತಪ್ತಕಾಂಚನದಂತೆ ದೀಪ್ತಿಸುತಿಪ್ಪನ ೫
ಜೀವರಿಂದತ್ಯಂತ ಭೇದ ಪ್ರತಿಜೀವಾಂತರದಲಿ ಪ್ರಮೋದನಾಗಿಆವಾಗ ಚರಿಸುವ ವೇದ ಪೇಳುವುದು ಸತ್ಯಂಭಿದಾ ಆಹಾಈ ವೇದಾರ್ಥವು ಸಾವಧಾನದಿ ತಿಳಿದುಶ್ರೀವಾಯುಮತವ ಕೋವಿದರೊಡಗೂಡಿ೬
ಶ್ರೀ ಕೇಶವನೆ ಮೂಲಾಸಿ ಶ್ರುತಿ ಏಕೋನಾರಾಯಣಾಸಿ ನಾನಾಲೋಕ ಸೃಷ್ಟಿಪದ ತಾನಾಸಿ ತಾರಕಮಂತ್ರ ಉಪದೇಶಿ ಆಹಾನೀ ಕೇಳು ನಿಗಮಾರ್ಥ ನೀಕರಿಸು ಸಂಶಯಏಕಮೇವಾದ್ವಿತೀಯನೆಂಬೊ ಕೃಷ್ಣನಂಘ್ರಿಯ ೭
ಗಂಗಾಜನಕ ಸಿರಿರಂಗ ಉತ್ತುಂಗಗುಣಗಣತರಂಗ ಕಾ-ಳಿಂಗಸರ್ಪನ ಮದಭಂಗ ಭುಜಂಗಶಯನ ಅಮಲಾಂಗ ಆಹಾಪಿಂಗಳ ಇಡಾ ಮಂಗಳ ಸುಷುಮ್ನ ಸುಸಂಗಮ ಮಧ್ಯದಿ ತಿಮಿಂಗಿಲಂತಿಪ್ಪನ ೮
ಹೃದಯ ಸ್ಥಾನದಲ್ಲಿದ್ದ ಮೂರ್ತಿ ಬಲು ಅದುಭುತದಿವ್ಯಕೀರ್ತಿಅದೆ ಪದುಮಜಾಂಡದಿ ಪರಿಪೂರ್ತಿ ದೊರೆವುದಕೆ ಬೇಕು ವಾಯುಸಾರ್ಥಿ ಆಹಾಅದೆ ಬಿಂಬಮೂರ್ತಿ ಜೀವದಾಕಾರವಾಗಿ ತಾಪದುಮಜಾಂಡದಲಿಪ್ಪ ಸದಮಲಾತ್ಮಕನ ೯
ಧರೆಯನಳೆದ ದಿವ್ಯಚರಣ ಅದು ಮೆರವುತಿಪ್ಪುದು ಕೋಟಿ ಅರುಣನಂತೆಪರಿಪೂರ್ಣಭರಿತವು ಕಿರಣ ತನ್ನ ಸ್ಮರಿಸುವರಿಗೆ ಮಾಳ್ಪ ಕರುಣ ಆಹಾತರುಣಿಯಂದದಿ ನಖದಿ ಸುರನದಿಯ ಪೆತ್ತ ನೂ-ಪುರ ಗೆಜ್ಜೆಪೆಂಡೆಯ ಎರಡೈದು ಬೆರಳನು ೧೦
ಹರಡು ಜಂಘೆಯುಗಜಘನ ಸುರುಚಿರ ರೇಖಧ್ವಜವಜ್ರ ನಾನಾ ದಿವ್ಯ ವರರೇಖೆಯಿಂದಲೊಪ್ಪುವನ ಜಾನು ಪರಮಶೋಭಿಸುವ ಸುಂದರನ ಆಹಾಉರುಟುಕದಳಿಸ್ತಂಭದಂತಿರುವೊ ಊರುದ್ವಯಸರಿಗಾಣೆ ಹರಿ ಉಟ್ಟ ವರಪೀತಾಂಬರವನು ೧೧
ಗಜಹಾನದಂತಿಪ್ಪ ಮಧ್ಯ ಬಲುವಿಜಯ ಒಡ್ಯಾಣ ಅಭೇದ್ಯಾಭೇದ್ಯನಿಜಗಂಟೆ ಝಣರೆಂಬೊವಾದ್ಯ ಕುಬುಜೆ ಡೊಂಕು ತಿದ್ದಿದಾನಾದ್ಯ ಆಹಾಅಜಜನಿಸಿದ ನಾಭ್ಯಂಬುಜದಳ ಚತುರ್ದಶತ್ರಿಜಗಭರಿತ ಕುಕ್ಷಿ ನಿಜ ಸುಖಪೂರ್ಣನ ೧೨
ಉದರತ್ರಿವಳಿ ನಾನಾಹಾರ ದಿವ್ಯ ಪದಕ ಪಚ್ಚೆಗಳ ವಿಸ್ತಾರ ಬಲುಚದುರ ವೈಜಯಂತಿ ಮಂದಾರವನ್ನು ಮುದದಿಂದ ಧರಿಸಿದ ಧೀರ ಆಹಾಪದುಮಜಭವರಿಂದ ತ್ರಿದಶರು ತಿಳಿದಿನ್ನುಸದಾಕಾಲ ಧೇನಿಪರು ಹೃದಯಾಂಬರದಲ್ಲಿ ೧೩
ಸಿರಿವತ್ಸ ಕೌಸ್ತುಭಹಾರ ಮ್ಯಾಲೆ ಸರಿಗೆ ನ್ಯಾವಳದ ಶೃಂಗಾರ ಸುಂ-ದರವಾದ ಕಂಬುಕಂಧರ ಅತಿಗುರುತರ ಭುಜವು ಚತುರ ಆಹಾಮರಿ ಆನೆ ಸೊಂಡಿಲಂತಿರುವ ಬಾಹುಕೀರ್ತಿ ಕೇತಕಿಬೆರಳು ನಕ್ಷತ್ರದರಸಿನಂದದಿ ನಖ೧೪
ಕರಚತುಷ್ಟಯದಲಿ ಶಂಖಚಕ್ರ ವರಗದಾಪದುಮ ನಿಶ್ಶಂಕನಾಗಿಧರಿಸಿ ಮೆರೆವ ಅಕಳಂಕ ದುರುಳರ ತರಿವ ಛಲದಂಕ ಆಹಾಬೆರಳ ಮಾಣಿಕದುಂಗರ ಕಡಗ ಕಂಕಣಬಿರುದಿನ ತೋಳಬಂದಿ ಸಿರಿ ಭುಜಕೀರುತಿ೧೫
ಅಗರುಚಂದನ ಗಂಧಲೇಪ ಕಂಬು ಸೊಗಸಾದ ಚುಬುಕ ಪ್ರಕಾಶಚಿಗುರು ಚಂದ್ರೆಳೆದುಟಿ ಭೂಪ ನಸುನಗುವ ವದನ ಸುಸಲ್ಲಾಪ ಆಹಾಮಗನಾಗಿ ತಾನು ಗೋಪಿಗೆ ವದನದೊಳಗೆಜಗವೆಲ್ಲ ತೋರಿದ ಅಗಣಿತ ಮಹಿಮನ೧೬
ಮುಗುಳು ಮಲ್ಲಿಗೆ ಮೊಗ್ಗೆ ದಂತಪಂಕ್ತಿ ಜಗವಮೋಹಿಸುವ ಸುಶಾಂತ ಜಿಹ್ವೆನಿಗಮಕ್ಕೆ ವೇದ್ಯವಾದಂಥ ಬಹು ಬಗೆಯಲ್ಲಿ ಮೆರೆವ ಸುಪಂಥ ಆಹಾನಗುವ ವದನ ಝಗಝಗಿಸುವ ಕುಂಡಲಕರ್ಣಮಿಗೆ ಕೂರ್ಮಕದಪು ಸಂಪಿಗೆನಾಸಿಕವನ್ನು ೧೭
ಕರುಣಶಾಂತಶುಭನೋಟ ಕಂಗಳೆರಡರ ಚೆಲ್ವಿಕೆ ಮಾಟ ಇನ್ನುಅರವಿಂದದಳವೆನ್ನು ದಿಟ ಇನ್ನು ತರಣಿಚಂದ್ರಮರ ಕೂಟ ಆಹಾಶರಣಜನರ ಮನೋಹರ್ಷವಾರ್ಧಿಗೆ ಚಂದ್ರದುರುಳ ದಿತಿಜತಿಮಿರಕ್ಕೆ ಭಾಸ್ಕರನ ೧೮
ಪೊಳೆವ ಪುಬ್ಬುದ್ವಯ ಸ್ಮರನ ಚಾಪ ತಲೆಯ ತಗ್ಗಿಸುವಂಥಾ ರಚನಾಫಾಲದಲಿಟ್ಟ ತಿಲಕ ಸುಂದರ ಲೋಕ ಕಳವಳಗೊಳಿಸುವ ಸುಗುಣ ಆಹಾನಳಿನವದನದಲ್ಲಿ ಅಳಿಗಳಂತೊಪ್ಪುವಸುಳಿಗುರುಳಿನ ಮ್ಯಾಲೆ ಒಲೆವ ಅರಳೆಲೆಯನ್ನು ೧೯
ಕೋಟಿಸೂರ್ಯ ಪ್ರಕಾಶ ಕಿರೀಟಕ್ಕೆ ಸಮ ಆವದೇಶದಲ್ಲಿಸಾಟಿಗಾಣೆನೊ ವಿಶೇಷ ಕಪಟನಾಟಕ ನಿತ್ಯ ರಮೇಶ ಆಹಾನೀಟಾಗಿ ನಖ ಲಲಾಟ ಪರಿಯಂತ್ರನೋಟದಿಂದಲಿ ಈಶಕೋಟಿ ಸಹಿತನ ೨೦
ಕಾಮಾದಿಗಳೆಲ್ಲ ಜರಿದು ಮುಕ್ತಿಮಾರ್ಗ ಆವುದದರಿದು ಭೂಮಿ ಹೇಮಕಾಮಿನಿಯರ ಜರಿದು ಅತಿಪ್ರೇಮದಿ ಗುರುತುಗಳ ಬೆರೆದು ಆಹಾಸಾಮಜವರದ ಗೋಪಾಲವಿಠಲನ ಯಾಮ-ಯಾಮಕ್ಕೆ ನಲಿದಾಡುತ್ತ ನೀ ನಿತ್ಯ ೨೧

ಲೌಕಿಕ ಜೀವನ ಶಾಶ್ವತವಾದದ್ದಲ್ಲ
೧೩೧
ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಬುತ್ತಿ ನಿಂಬೆಲೆಯಾಗಿನೂಟ ಪರಲೋಕ ಸುಖಸಾರವೆಂಬೋದೆ ನಿಜ ಭಕುತಿ ಪ.
ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಂಬೋದುತೋಯದೊಳಗಿನ ಹೋಮಆಯಾಸವನು ಬಟ್ಟು ಮನೆಯ ಕಟ್ಟುವುದೆಲ್ಲಹೇಯಗೊರಳೆ ಧಾಮಮಾಯಕೆ ಸಿಲುಕಿ ತನ್ನವರ ಕೂಡುಂಬೋದುವಾಯಸಗಳ ಪ್ರೇಮನೋಯದು ಮನಸಿಗೆ ಹೇಯ ತಾ ಪುಟ್ಟದುನಾಯ ಬುದ್ಧಿಯ ಕಾಮ ೧
ದಣಿಸಿ ತನ್ನ ದೇಹ ಧನವ ಕೂಡಿಸುವುದುನೊಣ ಜೇನಿನ ವೃತ್ತಿಬಣಗು ದೈವಂಗಳ ಭಕ್ತಿಲರ್ಚಿಸುವುದೆಹೆಣಕೆ ಮಾಡಿದ ಅರ್ಥಿವನಿತೆ ಸುತರು ಬಂಧುಜನಸ್ನೇಹವೆಂಬೋದುಪ್ರಣತಿಯೊಳಗಿನ ಜ್ಯೋತಿಒಣಗಿಪೋಗಲು ತಾ ಉಪಜೀವನವೆಂಬೊ ತೈಲಕ್ಷಣವು ನಿಲ್ಲದು ಪ್ರೀತಿ ೨
ಹರಿಯರ್ಪಣವಿಲ್ಲದವ ಕರ್ಮ ಮಾಡಲುಹುರಿದು ಬಿತ್ತಿದ ಬೀಜಸಿರಿಮಧ್ವಮತವನು ಪೊಂದದ ವಿಪ್ರನುದುರುಳ ನೀಚಾಂತ್ಯಜಪರಧನ ಪರಸತಿ ಪರನಿಂದೆಗಳುಪಿದನರ ನೆರೆ ನರಕಭಾಜಸಿರಿಹರಿಯ ಮರೆದು ದಿನವಕಳೆವನಾಯುಕರಗಿತೋ ನಿರ್ವ್ಯಾಜ ೩
ಪರಪೀಡಕನಾಗಿ ಇದ್ದವನ ಜನ್ಮವರುಷ ನೂರಿದ್ದರೇನುಪರರಿಗೆ ಹಿತವಾಗಿ ವರುಷ ಬಾಳಿದವನುಎರಗು ವೈಕುಂಠವನುದುರುಳ ಮತವ ಪಿಡಿದು ಶ್ಲಾಘ್ಯ ಮಾಡಿದವನುನಿರಯವ ಬಿದ್ದವನುಅರಿತು ಮಾತಾಪಿತರ ಹಿರಿದರ್ಚಿಸಿದವನುಕರೆಕರೆ ನೀಗುವನು ೪
ಆಸೆ ಅರ್ಥದಲ್ಲಿಟ್ಟು ಹರಿಯ ಸೇವಿಸುವಂಥದಾಸ ಅಶ್ವದಾಸಆಸೆಯನೆ ಕೊಟ್ಟು ಭಾಷೆ ತಪ್ಪಿದಂಥೈಇಶನಧಃ ಕೇಶದಾಸತ್ವ ವಹಿಸದೆ ಕಾಶಿರಾಮೇಶ್ವರದೇಶ ತಿರುಗಲಾಭಾಸಹೇಸಿ ಸಂಸಾರದ ಕ್ಲೇಶವೆಂಬೋದು ಕೃಷ್ಣೋ-ಪಾಸನದಿಂದ ನಾಶ ೫
ಹಲವು ಸಾಧನಗಳ ಮಾಡುತಲಿದ್ದರೇನುಹೊಲಬ ಪಿಡಿಯದನಕಛಲವ ಪಿಡಿದರೇನು ತಿಳಿವಿಕೆ ನಿಜವಿಲ್ಲಒಲುಮೆಯಾಗದನಕಕೆಲಕಾಲ ಸುಜನರೊಳಾಡುತಲಿದ್ದರೇನುತಲೆಯ ಬಗ್ಗಿಸದನಕಹಲವು ಸಾಧನಕೆಲ್ಲ ಬಲವಂತನೊ ಹರಿತಿಳಿಯೊ ಬಂಧಮೋಚಕ6
ಎಷ್ಟು ಸಾಧನಗಳು ಕೂಡಿದ್ದರೇನಿನ್ನುದೃಷ್ಟಿಗೆ ಹರಿ ತೋರನಷ್ಟ ಮಾಳ್ಪವು ಎಲ್ಲ ಅಹಂಕಾರವೊಂದಿರೆಶಿಷ್ಟ ಜನಕೆ ದೂರೈಟ್ಟು ತೊಟ್ಟು ಬಹಳ ದಿಟ್ಟ ಸ್ತ್ರೀಯಳುಸ್ಪಷ್ಟ ಕುಷ್ಠಿಯ ಶೃಂಗಾರಎಷ್ಟು ಶೋಭಿತಳಾಗೆ ಅವಳ ಪತಿಯು ಕ-ನಿಷ್ಟಳಾದ ಅವಳ ಸೇರ ೭
ಗುಣತ್ರಯಕನುಸಾರ ಮಾಡಿದ ಕರ್ಮಗ-ಳುಣಬೇಡ ನೀನೀಗೆಗುಣಿಸು ಶ್ರೀಹರಿಯನ್ನು ನಖಶಿಖತನಕ ಹೃ-ದ್ವನಜದೊಳಗೆ ಹೊರಗೆಮನುಜಜನ್ಮ ಮಹಾಸುಕೃತದ ಫಲನಿನಗೆ ಬಂದಿದೆ ಈಗೆಕ್ಷಣಿಕವನಿತ್ಯವಸಾರ ಕಳೇಬರದಿನ ಪೋಗುತಿದೆ ಬೇಗೆ ೮
ಗುರು ಉಪದೇಶವೆಂಬುದೆ ಮಹಾದುರ್ಲಭಪರಮ ಮಂಗಳಕರವೊಕರಕರೆ ಸಂಸಾರ ಶರಧಿಯ ದಾಟಲುಹರಿಗೋಲು ಸ್ಥಾನೀಯವೊದೊರಕೆ ಮರೆಯಬೇಡ ಗುರು ವಿಜಯ-ರಾಯರ ಚರಣವ ಸಾರೆಲವೊಪರಮಮಂಗಳ ಮೂರ್ತಿ ಗೋಪಾಲವಿಠಲದೊರಕುವ ದೂರಿಲ್ಲವೊ ೯

೧೭೯
ನಡೆದು ಬಾರಯ್ಯ ನೀನು ವೆಂಕಟರಾಯ ಪ.
ನಡೆದು ಬಾರಯ್ಯ ಭವಕಡಲಿಗೆ ಕುಂಭಸಂಭವಸಡಗರದಿಂದ ನೀ ಮೆಲ್ಲಡಿಯನಿಡುತ ಬೇಗ ಎಡಬಲದಲಿ ನಿನ್ನ ಮಡದೇರಿಂದೊಪ್ಪುತತಡಮಾಡದೆ ಬಾ ಮೃಡಸಖ ವೆಂಕಟಾ.ಪ.
ವಿಜಯದಶಮಿ ಆಶ್ವೀಜಮಾಸ ಶುದ್ಧದಲ್ಲಿನಿಜರಥಾರೂಢನಾಗಿ ಸುಜನರಿಂದೊಡಗೂಡಿಗಜಹಂಸ ಮಯೂರ ದ್ವಿಜ ಸಿಂಗ ಸಾರಂಗಮಜ ಭಾಪುರೆ ಎನಲು ತ್ರಿಜಗವು ತಲೆದೂಗೆಅಜನು ಸ್ತುತಿಯ ಮಾಡೆ ಋಜಗಣಾಧಿಪ ಪಾಡೆಗಜಮುಖನಯ್ಯನು ನಿಜಾನಂದದಲಾಡೆಭುಜಗಶ್ರೇಷ್ಠನು ದ್ವಿಜರಾಜ ಜಯವೆನ್ನೆಕುಜನರೆದೆಯ ಮೆಟ್ಟಿ ರಜತಮ ಕಳೆಯುತ ೧
ದಕ್ಷಿಣ ದಿಕ್ಕಿನಲ್ಲಿ ರಾಕ್ಷಸ ಸಮೂಹ ಒಂ- ದಕ್ಷೋಹಿಣೀ ಬಲ ನಿನ್ನುಪೇಕ್ಷೆ ಮಾಡುತಲಿರೆಪಕ್ಷಿವಾಹನದೇವ ನೀನಾಕ್ಷಣದಿ ಖಳರಶಿಕ್ಷಿಸಿ ಸುಜನರ ರಕ್ಷಿಸಿ ಮೆರೆದೆತಕ್ಷಕ ನರನ ಭಕ್ಷಿಸ ಬರುತಿರೆ ಈಕ್ಷಿಸಿ ರಥವತಕ್ಷಣ ನೆಲಕೊತ್ತಿದೆ ಲಕ್ಷ್ಮೀಶನೆ ಅಕ್ಷಯ ಫಲದಾಯಕಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೆ ೨
ಅಂಬುಜಾಕ್ಷನೆ ಬಾರೊ ಅಂಬುಜವದನನೆಅಂಬುಜಾಲಯಪತಿ ಅಂಬುಜನಾಭನೆ ಅಂಬುಜಜನಕ ಅಂಬುಜಾರಿಧರಹೃದ-ಯಾಂಬುಜನಿವಾಸ ಅಂಬುಜಮಿತ್ರ ಅನಂತಾನಂತತೇಜಕೊಂಬು ಕಹಳೆಗಳು ಭೋಂಭೋರಿಡುತಿರೆತುಂಬುರನಾರದರಿಂಬಾಗಿ ಪಾಡಲುಅಂಬರದಲಿ ವಾದ್ಯ ಧಂಧಣರೆನೆಸಂಭ್ರಮದಲಿರೊ ಶಂಭು ವಂದಿತನೆ ೩
ಮನಕೆ ಬಾರಯ್ಯ ಸುಧಾಮನ ಸಖ ಹರಿಯೆ ಸೋ-ಮನ ಧರಿಸಿದವನ ಮನ ಕುಮುದಕೆ ಚಂದ್ರ-ಮನೆ ಕೇಳೊ ಎನ್ನ ದುಮ್ಮಾನ ಪರಿಹರಿಸೊ ಒ-ಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೆನ್ನ ಬಿನ್ನಪವಮನ ನಿನ್ನದು ಹೇ ಮನಸಿಜಪಿತ ಸುಮನಸರೊಡೆಯ ಬೊ-ಮ್ಮನ ಪೆತ್ತವನೆ ಸುಮ್ಮನೆ ತಡವ್ಯಾಕೊ ನಿ-ಮ್ಮನೆಯವರೊಡನೆ ಇಮ್ಮನ ಮಾಡದೆ ಗಮ್ಮನೆ ಬಾ ವೆಂಕಟ ೪
ಪರಿಪರಿಯಿಂದಲಿ ಕರವ ಮುಗಿದು ಸ್ತುತಿಸಿಕರೆದರೆ ಬಾರದ ಗರ್ವತನವು ಯಾಕೊಕರಿಯ ಮೊರೆಯ ಕೇಳಿ ಸಿರಿಗೆ ಹೇಳದೆ ಬಂದೆಕರಿರಾಜ ಅವನಿನ್ನ ಕಿರಿಯಪ್ಪನ ಮಗನೇನೊಶರಣಾಗತರಕ್ಷ ವರಮಣಿ ಎಂಬೊಬಿರುದು ಬೇಕಾದರೆ ಸರ್ರನೆ ಬಾರಯ್ಯಗರುಡಗಮನ ಗೋಪಾಲವಿಠಲರೇಯಕರುವಿನ ಮೊರೆಗಾವು ನೆರೆದಂತೆ ಪೊರೆಯುತ ೫

ದಾಸರನ್ನು ಲೌಕಿಕ ಆಸೆ ಆಮಿಷಗಳಲ್ಲಿ
೨೭
ನಾನೆ ಭ್ರಮಿಸಿದೆನೊ ವಿಷಯದಿ ಮಮತೆ ನೀನೆ ಸೃಜಿಸಿದೆಯೊ ಪ.
ಅನಾದಿ ನಿಧಾನ ನೀನೆ ತಿಳಿದು ನೋಡೊ ಅ.ಪ.
ಕೇವಲಾನಂದ ಚಿನ್ಮಯರೂಪ ನೈಜಸ್ವಭಾವ ತ್ಯಜಿಸಿ ಅನ್ಯ-ಭಾವವಾಶ್ರಯಿಸಲು ಶ್ರೀವರ ನಿನ್ನ ಬಂಧಕಶಕುತಿಆವರಿಸೆನ್ನ ಕಾವಗೊಳಿಸಿ ಈ ವಿಧ ಬನ್ನ ಬಡಿಸುತಿದೆಕೈವಲ್ಯದರಸನೆ ನೀ ವಿಚಾರಿಸಿ ಕಾಯೊ ೧
ಸ್ವತಂತ್ರ ನೀನು ಅಸ್ವತಂತ್ರ ನಾನು ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ೨
ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ ದಣಿದು ಮೊರೆ-ಯಿಕ್ಕುವೆ ನಿನಗೆ ಬಂದು ಬೇಗ ನೀ ತಕ್ಕೊನೀ ಕೈಗೆ ಎನ್ನವಗುಣ ಲೆಕ್ಕಿಸದಲೆ ಕಾಯ್ಯಬೇಕಯ್ಯ ಕೊನೆಗೆ ೩
ಪ್ರಿಯ ನೀನೆನಗೆಂದು ಅಯ್ಯ ನಿನ್ನ ನಂಬಲು ಮಯ್ಯ ಮರೆಸಿ ವಿ-ಷಯದುಯ್ಯಾಲೆಗೊಪ್ಪಿಸಿದೆ ಸಯ್ಯಲೊ ದೊರೆಯೆ ಇಂಥವನೆಂದುಅಯ್ಯೊ ಮುನ್ನರಿಯೆ ಕರುಣಿ ಎಂಬೊ ಹಿಯ್ಯಳಿ ಸರಿಯೆ ಇನ್ನಾದರುಕಯ್ಯ ಪಿಡಿಯಲು ಕೀರ್ತಿ ನಿನಗೆಲೊ ಹರಿಯೆ೪
ಮೊದಲೆಮ್ಮಾರ್ಯರು ನಿನ್ನ ಪದನಂಬಲವರಘ ಸದೆದು ಸಮ್ಮುದದಿಸಂ-ಪದವ ನೀಡಿದೆಯಂತೆ ಅದನು ಮರೆದೆಯೊ ಶಕುತಿಯು ಸಾಲದಲೆ ಜ-ರಿದೆಯೊ ಜನರು ಪೇಳಿದ ಮಾತು ಪುಸಿಯೊ ನಿಜ ತೋರಲು ಬುಧನುತ ಗೋಪಾಲವಿಠಲ ಕೀರುತಿಯೊ ೫

ಕಂಸನ ಆದೇಶದಂತೆ ಬಿಲ್ಲಹಬ್ಬಕ್ಕೆಂದು
೧೦೦
ನಾಳೆ ಬರುವೆನೆಂದು ಹೇಳಿ ಮಧುರೆಗೆ ಪೋದ ಬ-ಹಳ ದಿನವಾಯಿತಲ್ಲೊ ಉದ್ಧವ ಪ.
ಕೇಳಿದ್ಯಾ ನೀ ಬಾಹ ವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಅ.ಪ.
ಪಳ್ಳಿವಾಸಿಗಳು ನಾವು ಪರಿಪರಿ ಅಲಂಕರಿಸಿ ಒಲಿಸಿಕೊಂಬುದನರಿಯೆವೊಗೊಲ್ಲ ಸತಿಯರು ಸದಾ ಗೋರಕ್ಷಕರು ಮೈಯ ಹೊಲೆತೊಳೆಯಲರಿಯೆವೊಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯನೆಲ್ಲ ತಿಳುಹಿಸಿಕೊಂಡೆವೊಚಲ್ಲೆಗಂಗಳ ಚಪಲೆಯರು ಮಧುರೆ ನಾರಿಯರ ಒಲಪಿಗೆ ನಾವೆದುರೇನೊ ? ೧
ಚೊಕ್ಕನಾದ ನಿತ್ಯ ತೃಪ್ತನಿಗೆ ಬೆಣ್ಣೆ ಕಳವಿಕ್ಕಿದೆವಲ್ಲವೊಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆ ಸೊಕ್ಕಿನುಕ್ತಿಯ ನುಡಿದೆವೊಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆ ದಕ್ಕಿದನು ಎಂತಿದ್ದೆವೊವಕ್ರಗತಿಯಾಗಿ ಅಕ್ರೂರ ಬಂದ್ಯೆಮ್ಮ ಚಕ್ರಧರನಗಲಿಸಿದನೊ ೨
ಧೀರ ಸ್ವರಮಣ ದೋಷದೂರನ್ನ ಅಲ್ಪ ಬಹುಜಾರನೆಂದರಿತೆವಲ್ಲೊಆರಾರ ಮನಕಿನ್ನು ತೋರದವನ ನಮ್ಮ ಓರಗೆಯವನೆಂದರಿದೆವೊಮುರಾರಿ ಅಜ ಪರಿವಾರದೊಡೆಯನ ನಾವು ಪೋರನೆಂದಾಡಿಸಿದೆವೊನಾರಿಯರು ನಾವಲ್ಪ ದಾರಿದ್ರ್ಯ ದಷ್ಟರಿಗೆ ಶ್ರೀರಮಣನೆಂತೊದಗುವನೊ ೩
ನಿಧಿಯ ಬದಿಲಿದ್ದರು ವಿಧಿಸುವುದನರಿಯದೆ ಮದಡೆಯರಾದೆವೊಮದನನಾಟಕೆ ಮನವಿಕ್ಕಿ ಅವನಿಂದೊಂದು ತತ್ವ ತಿಳಿಯಲಿಲ್ಲೊಚದುರೆಯರು ನಮ್ಮ ಬಿಟ್ಟು ಕದಲನಿವನೆಂತೆಂಬ ಮದದಿ ಮೋಸಹೋದೆವೊಮಧುರೆಯಿಂದೆಮ್ಮ ತಮ್ಮ ಹೃದಯದೊಳಿಪ್ಪನೆಂದು ಚದುರ ಪೇಳಿಹನಂತೆಲೊ ೪
ಮತಿ ತಪ್ಪಿದೆವೊ ನಾವು ಸತಿಯರೆಲ್ಲೊಂದಾಗಿ ರಥವ ನಿಲಿಸದೆ ಹೋದೆವೊಹಿತರಾರು ನಮಗೆ ಸಾರಥಿ ನಿನ್ನ ಸಹಾಯ ದೊರೆತರೆತನವ ಮಾಳ್ಪೆವೊಪಥವ ತೋರಿಸೊ ನಮಗೆ ಮುಂದೆಮ್ಮ ಚೆಲ್ವ ಶ್ರೀಪತಿಯು ಬಂದೊದಗುವಂತೆಗತಿಯಾರೊ ಅವನ್ಹೊರತು ಗೋಪಾಲವಿಠಲ ಅಚ್ಯುತನ ಮಹಿಮೆ ಕಾಣೆವೊ ೫

ಇಲ್ಲಿ ದಾಸರು ತಾವು ಹಿಂದಿನ ರಾತ್ರಿ
೧೬೪
ನಿನ್ನೆ ಇರುಳಿನಲಿ ಚೆನ್ನಿಗ ಪುರುಷನುಎನ್ನ ಮಂದಿರಕೆ ಬಂದಿರುವ ಇವನ್ಯಾರೆ ಅವ್ವ ಪ.
ಕಣ್ಣು ಬಿಡುತಲೆ ಬೆನ್ನೊಳಗಡಗಿಸಿತನ್ನ ಮೋರೆತ್ತಿ ನೋಡನೆ ಬಾಯಾರಿಹನೆಮಣ್ಣು ನಲುವುತಾನೆ ತನ್ನೊಳು ಕಾದಿ ಉಣದೆಹೆಣ್ಣುಗಳನೆ ಮೋಹಿಸುವ ಹಯನೇರಿ ಮೆರೆವ1
ಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪಪಲ್ಗಿರಿದು ದಾನವ ಬೇಡುವ ಪೆತ್ತವಳನೆ ಜರಿವಶಿಲೆಯ ಮಾತಾಡಿಸುವ ಕೊಳಲೂದಿ ಕೃತ್ಯವೇದ ಹಳಿವ ಹಗೆಗಳನೆ ಸದೆಬಡಿವ ಹಯನೇರಿ ಮೆರೆವ ೨
ಚರಣ ರೋಮಗಳಿಲ್ಲ ಮಗನ ಮೂಗಿಲೆ ಬಂದಎರಡು ರೂಪದಿ ಬಾಲಕ ಬಾಹುಜಕುಲಗೊಯ್ಕಾರಸಾಗಿ ಗೋಪಾಲವಿಠಲ ಮೋಹಖಳರ ತರಿವತನ್ನಾಳಾಗನೆ ಪಾರವ ಹಯನೇರಿ ಮೆರೆವ ೩

೩೨
ಉಗಾಭೋಗ
ಪರಮಪುರುಷ ಪಾಪನಾಶ ಪತಿತಪಾವನ ಪರತರಪರಮ ಆಪ್ತ ಪರಾತ್ಪರಾತ್ಮಕಪರಂಜ್ಯೋತಿಸ್ವರೂಪ ಪರಮಮಂಗಳಪರಮ ಕರುಣಿ ಪಾಹಿ ಪಂಡರಿರಾಜಪರಮಪುರುಷ ಶರಣಜನಪಾಲಕನೆ ಜಯ ಜಯಶರಧಿ ಬಂಧನ ರಾಮ ಜಯ ಜಯ ಶರಧಿಶಯನ ಶ್ವೇತವರ್ಣ ಶ್ವೇತವಾಹನ ಪ್ರಿಯನೆಭಾರತೀಶನೊಡನೆ ಏ ಭೂ-ಭಾರನಿಳುಹಿದ ಸ್ವಾಮಿ ನಮೋ ನಮೋಚಾರು ಶ್ವೇತ ದ್ವೀಪವಾಸಿ ಗೋಪಾಲ ವಿಠಲಸಾರ್ವಭೌಮ ಪರಮ ಪುರುಷ

ಈ ಸಂಸಾರ ಶರಧಿಯಲ್ಲಿ ಈಸಲಾರೆ
ಪಾಲಿಸಯ್ಯ ಪವನನಯ್ಯಪಾಲವಾರಿಧಿಶಯ್ಯ ವೆಂಕಟರೇಯ ಪ.
ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲ ಮೂರುತಿ ತೋರೊ ಮೇಲು ಕರುಣದಿ ಅ.ಪ.
ಶ್ರೀಶ ಸಂಸಾರವೆಂಬೊ ಸೂಸುವ ಶರಧಿಯೊ-ಳೀಸಲಾರೆನು ಹರಿಯೆ ಏ ದೊರೆಯೆದಾಸನೆಂತೆಂದ ಮ್ಯಾಲೆ ಘಾಸಿಗೊಳಿಸುವುದುಲೇಸು ನಿನಗಲ್ಲವಯ್ಯ ಹೇ ಜೀಯಾದೋಷರಾಶಿಗಳೆಲ್ಲ ನಾಶನ ಮಾಡಿಸುವಿಶೇಷವಾದ ಜ್ಞಾನ ಲೇಸು ಭಕುತಿನಿತ್ತುಆಸೆಯ ಬಿಡಿಸೆನ್ನ ಮೀಸಲ ಮನ ಮಾಡಿನೀ ಸುಳಿವುದು ಶ್ರೀನಿವಾಸ ಕೃಪಾಳೊ ೧
ಮೂರು ಗುಣಗಳಿಂದ ಮೂರು ತಾಪಗಳಿಂದಮೂರು ಅವಸ್ಥೆಯಿಂದ ಮುಕುಂದಮೂರು ಐದರಿಂದ ಮೂರು ಏಳರಿಂದಮೂರರ ದಾರಿಗಾಣದೆ ಮೂರಾದೆಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿಮೂರು ಮೂರು ಭಕ್ತಿಯ ಮೂರುಕಾಲಕೆ ಇತ್ತುಮೂರು ರೂಪನಾಗಿ ಮೂರು ಲೋಕವನೆಲ್ಲಮೂರು ಮಾಡುವ ಬಿಂಬಮೂರುತಿ ವಿಶ್ವ ೨
ಕರುಣಾಸಾಗರ ನಿನ್ನ ಸ್ಮರಣೆ ಮಾತ್ರದಿ ಸಕಲದುರಿತ ಪರಿಹಾರವೆಂದು ನಾ ಬಂದುಮರೆಹೊಕ್ಕಮ್ಯಾಲೆನ್ನ ಪೊರೆಯಬೇಕಲ್ಲದೆಜರಿದು ದೂರ ನೂಕುವರೆ ಮುರಾರಿಮರುತಾಂತರ್ಗತ ಗೋಪಾಲವಿಠಲ ಈಶರೀರವೆ ನಿನ್ನ ಚರಣಕರ್ಪಿಸಿದೆನೊಸರಿ ಬಂದದ್ದು ಮಾಡೊ ಬಿರುದು ನಿನ್ನದು ದೇವಪರಮ ದಯಾನಿಧೆ ಉರಗಾದ್ರಿವಾಸ3

ಪುರಂದರದಾಸರನ್ನು ಕುರಿತ ಸ್ತುತಿ
೮೦
ಪುರಂದರರಾಯರ ಪುಣ್ಯನಾಮಸ್ಮರಣೆ ಇನ್ನು ಜಪಿಸಿರೊ ಸುಜನರುಅನಂತಜನುಮದಘವನ್ನು ಕಳೆದಮ್ಯಾಲೆ ಪುನರಾವರ್ತಿ ಬಾರದಲೋಕ ಪೊಂದಿಪುದು ಪ.
ಆಗಮಾರ್ಥಗಳು ಅನುವಾಗಿ ಸಾರವ ತೆಗೆದು ರಾಗ ಪದ ಕಾವ್ಯದಿಂದಶ್ರೀಗುರುಮಧ್ವಮುನಿಮತವ ಪೊಂದಿ ಬಲು ಭಾಗವತ ಧರ್ಮವಹಿಸಿನಾಗಶಯನನ ಗುಣವ ಕೊಂಡಾಡಿ ಜಗದೊಳಗೆ ಯೋಗ್ಯಪ್ರಹ್ಯದಿಂದ ಮೆರೆದಸಾಗರವು ದಕ್ಷಿಣೋತ್ತರ ಪೂರ್ವ ಪಶ್ಚಿಮ ಯೋಗದಲಿ ಚರಿಸಿ ಒಳಗಾಗದೆ ಕಲಿಯಗೆದ್ದ ೧ ನೋಡಿದ ಮಾತ್ರಿವರ ನಯನಗಳ ದೋಷಗಳು ಓಡಿದವು ಲೇಶವಿರದೆಆಡಿದ ಮಾತುರದಿ ಇವರ ವಾರ್ತೆಯು ವದನ ಬೇಡದಿನ್ನೊಂದು ವಿಷಯಮಾಡಿದ ಮಾತ್ರಿವರ ಅರ್ಚನೆಯ ಕರಗಳು ಮಾಡುವವು ಅನ್ಯಕರ್ಮ ಕೂಡಿ ಮನಬೆರೆದು ಜಪಿಸುತ ನಿತ್ಯ ಧ್ಯಾನವನು ಮಾಡಿದವನ ಪುಣ್ಯಕೀಡು ನಾ ಕಾಣೆ ೨
ಪೂಯೆಂದು ಉಚ್ಚರಿಸೆ ಪುಣ್ಯ ಕರ್ಮಕೆ ಧರ್ಮ ಸಹಾಯವಾಗಿ ಒದಗುವುದುರಾಯೆನ್ನೆ ಜ್ಞಾನಾಖ್ಯವೆಂಬ ರತುನಾರ್ಥಗಳು ಆಯಾಸಿಲ್ಲದೆ ಬಪ್ಪುವುದಾಯೆಂದು ಉಚ್ಚರಿಸೆ ಸರ್ವಕಾಮಗಳು ದದಾತಿ ಎಂದಾಗುವುವುರಾಯೆನ್ನೆ ರಾಜಗೋಪಾಲವಿಠಲ ತನ್ನ ಸಾಯುಜ್ಯವನು ಇತ್ತು ಸಲಹುವನು ಸರ್ವದಾ3

೧೮೧
ಪೂಜೆಯನು ಮಾಡಿರೊ ಪಾಪಿಪುರುಷನಿಗೆಪೂಜಾವಿಧಿಗಳೆಲ್ಲ ಕಾಲಕಾಲದಿ ತಿಳಿದು ಪ.
ಕಾಯಮಲತೋಯದ ಸ್ನಾನವನೆ ಮಾಡಿಸಿಬಾಯಮುಕುಳಿಸಿದಾಚಮನ ಎನಿಸಿಹೇಯಮೈಲಿಗೆವಸನ ವಸ್ತ್ರಗಳನೆ ಕೊಟ್ಟುಕಾಯಕಳಚಿದ ರೋಮ ನಖಗಳ ಅಲಂಕರಿಸಿ ೧
ನಯನ ನಾಸಿಕದ ಮಲ ಗಂಧಲೇಪನ ಮಾಡಿಪ್ರಿಯವಾದಪಾನವಾಯು ಧೂಪಮಾಡಿಬೆÉವ ನುಡಿಗಳೆಂಬ ಪುಷ್ಪ ಸಮರ್ಪಣೆಮಾಡಿನೈವೇದ್ಯಸ್ಥಳ ಮೆಟ್ಟುಮಣೆಯಲಿ ಕುಳ್ಳಿರಿಸಿ ೨
ಗುಪಿತದಲಿ ಗುದಮಲ ಹಸ್ತೋದಕವ ಕೊಟ್ಟುತಪ್ಪದಲೆ ಮೂತ್ರ ಪಾನೋದಕವ ಕೊಟ್ಟುತೃಪ್ತನಾಗು ಎಂದು ತಪ್ಪದಲೆ ಸ್ಮರಿಸುತ್ತಕಪ್ಪುವರ್ಣನೆ ಚೆಲ್ವ ಕಾಡಿಗೀನಯನನೆಂದು ೩
ಅಷ್ಟಮದ ದರಿದ್ರ ಅಲ್ಪಬಲನೆ ಕ್ರೂರದುಷ್ಟ ದುರಾಗ್ರಹ ಬ್ರಹ್ಮಹತ್ಯಕಾರಿಶಿಷ್ಟಜನಮಲಹಾರಿ ನಷ್ಟ ಪ್ರತಿಷ್ಠನೆ ಎಂದುತುಷ್ಟಿಬಡಿಸುತ ಹೀಗೆ ಸ್ತೋತ್ರವನೆ ಮಾಡುತ್ತ ೪
ನವವಿಧ ದ್ವೇಷಕೆ ನೀನೆ ಅಧಿಕಾರಿಯುನವವಿಧೇಂದ್ರಿಯದಿಂದ ಪೂಜೆಮಾಡಿಪವನನಂತರ್ಯಾಮಿ ಗೋಪಾಲವಿಠಲನುಭವತರಿದು ತನ್ನನುಭವವನ್ನು ನಿಮಗೀವ ೫

ಶ್ರೀಮಧ್ವಾಚಾರ್ಯರ ಹನುಮ
೬೨
ಪೊಗಳಲೆನ್ನಳವೆ ನಿನ್ನ ಗುರುಗಳ ರನ್ನ ಪ.
ಪೊಗಳಲೆನ್ನಳವೆ ನಿನ್ನಗಣಿತಮಹಿಮೆಯಖಗವಾಹನನ ದೂತ ತ್ರಿಜಗದೊಳ್ ಪ್ರಖ್ಯಾತ ಅ.ಪ.
ವಸುಧೆಯ ಮೇಲೇಸೊ ಅಸುರರು ಪುಟ್ಟಿ ತ್ರಿ-ದಶರನ್ನು ಬಾಧಿಸೆ ಕುಸುಮಸಂಭವಗೆ ವಂ-ದಿಸಿ ಮೊರೆಯಿಡಲಾಗ ಬಿಸಜನಾಭನು ಇದ್ದದೆಸೆಗೆ ಪೋಗಿ ತಮ್ಮ ಕುಶಲಗಳನು ಪೇಳೆನಸುನಕ್ಕು ಬೇಗನೆ ದಶರಥನಲ್ಲಿ ಉ-ದಿಸಲು ಆತನ ಸೇವೆ ಉದ್ದಿಶವಾಗಿ ಅಂಜನೆಬಸುರಲಿ ಬಂದು ಉದಿಸಿದಾಕ್ಷಣವೆ ತಾಮ-ರಸಸಖನಿಗೆ ಲಂಘಿಸಿ ಇಂದ್ರನ ಚಾಪಕೊಸರಿ ನಿರಾಕರಿಸಿ ಅಸುರರ ಜೀವ-ದುಸಿರು ಸೆಳೆದಂಥ ಅಸಮಪರಾಕ್ರಮಿ ೧
ಕಂಜಮಿತ್ರನ ಸುತನೊಡನೆ ಸಖ್ಯವ ಮಾಡಿಕಂಜನಾಭನ ಪಾದಕ್ಕೆರಗಿ ಮುದ್ರಿಕೆ ಕೊಂಡುಮಂಜಿನುದಕ ಬಿಂದುವಂತೆ ವನಧಿ ದಾಟಿಸಂಜೆಯಚರನ ಪುರವ ಪೊಕ್ಕು ವನದೊಳುಕುಂಜರಗಮನೆಗೆ ಕುರುಹುಕೊಟ್ಟಸುರರಭಂಜಿಸಿ ಅಕ್ಷಕುವರನ ಸಂಹಾರ ಮಾಡಿಕಂಜಸಂಭವನಾಸ್ತ್ರಕೆ ಸಿಲುಕಿ ಅಸುರಗೆಅಂಜದುತ್ತರ ನಡೆಸಿ ದನುಜಬಲಪುಂಜಗಳನೆ ವರೆಸಿ ಬಾಲದಲಿದ್ದಪಂಜಿಲಿ ಪುರದಹಿಸಿ ಮರಳಿ ಬಂದುಕಂಜಜಾಂಡದ ದೊರೆಗೆರಗಿದ ಧೀರ2
ವಾನರ ನಿಕರವ ನೆರಹಿ ಸೇತುವೆ ಕಟ್ಟಿಶ್ರೀನಾಥನಿಗೆ ವಾಹನನಾಗಿ ದನುಜರೊಳ್‌ನಾನಾ ಯೂಥಪರನ್ನು ಕೊಂದು ಗಿರಿ ತಂದುದಾನವೇಂದ್ರನ ರಾಮ ಮುರಿಯಲಾಕ್ಷಣ ಬೇಗಜಾನಕಾಕೃತಿ ತಂದು ಹರಿಗೆ ಅರ್ಪಣೆ ಮಾಡಿದೀನನಾದ ವಿಭೀಷಣಗೆ ಪಟ್ಟವನು ಕಟ್ಟಿಆ ನಾರದರು ಹರಿ ಆಜ್ಞೆಯಿಂದಲಿ ಬಂದುಹೀನ ದಶಾಸ್ಯನ ಗೆಲಿದ ಜಯವಂತನೀತನೇವೀಂದೆನ್ನೆ ಹನುಮ ನಿನಗೇನುಬೇಕು ಬೇಡೆನ್ನೆನಿನ್ನಯ ಪಾದಧ್ಯಾನ ನಿರುತ ನೀಡೆನೆ ಭಳಿರೆ ಶ-ತಾನಂದ ಪದವಿಯ ಕೊಂಡ ಧೀರ3
ಕೃಷ್ಣನ ಸೇವೆಗೋಸುಗವೆ ಕುಂತಿಜನಾಗಿಹುಟ್ಟಿದಾಕ್ಷಣ ಬೆಟ್ಟಕುಟ್ಟಿ ಹಿಟ್ಟನೆ ಮಾಡಿಕೊಟ್ಟ ವಿಷವನುಂಡು ಅಹಿಗಳನೊರೆಸಿ ಕೈ-ಕಟ್ಟಿ ಜಲದೊಳಿಡೆ ಬಂದು ಲಾಕ್ಷಾಗೃಹಸುಟ್ಟು ಭಸ್ಮವಮಾಡಿ ಹಿಡಿಂಬಕನ ಕೊಂದುದಿಟ್ಟಘಟೋತ್ಕಚನ ಪಡೆದು ದನುಜೆಯಲ್ಲಿಶಿಷ್ಟದ್ವಿಜನಿಗೊಲಿದು ಬಕನ ಸಂಹಾರ ಮಾಡಿಕೃಷ್ಣಾಸ್ವಯಂವರದಿ ಜಿಷ್ಣುವಿಂದಲಿ ಲಕ್ಷ್ಯ-ಕುಟ್ಟಿ ಕನ್ನಿಕೆವರಿಸಿ ಅಲ್ಲಿಗೆ ಬಂದದುಷ್ಟರ ಸಂಹರಿಸಿ ಶಲ್ಯನ ವ್ಯೋಮ-ಕಿಟ್ಟು ನೆಲದಲ್ಲಿರಿಸಿ ಇಂದ್ರಪ್ರಸ್ಥಪಟ್ಟಣವಾಳಿದ ಶೂರ ಸಮೀರ ೪
ವೀರರಾಯರನೆಲ್ಲ ಸೆರೆಯನಾಳುವಂಥಕ್ರೂರ ಜರೆಯ ಸುತನೊಡನೆ ಯುದ್ಧವ ಮಾಡಿಚೀರಿ ಬೊಬ್ಬಿಡುತಲಿ ಅವನ ಸೀಳಿದ ಶಬ್ದವಾರಿಜಜಾಂಡ ಒಡೆದ್ದಕ್ಕಿಮ್ಮಡಿಯಾಗೆಮೂರೇಳುದಿಕ್ಕು ಜಯಿಸಿ ರಾಜಸೂಯಯಾಗವಪೂರೈಸಿ ಕೃಷ್ಣಗೆ ಅಗ್ರಪೂಜೆಯಮಾಡಿಅರಣ್ಯದಲ್ಲಿ ಪೋಗಿ ಮಣಿಮಂತ ಕಿಮ್ಮೀರರವಿರಾಟನಗರದಿ ಕೀಚಕರನು ಕೊಂದುಧೀರ ಗೋವ್ಗಳ ಬಿಡಿಸಿ ಅಕ್ಷೋಹಿಣೀಮೂರಾರುಗಳ ಬೆರೆಸಿ ಪಾರ್ಥನ ಧ್ವಜ-ಕ್ಕೇರಿ ಶಬ್ದವ ಘೋಷಿಸಿ ಕೌರವ ಬಲಆರಕ್ಷೋಹಿಣೀ ಸಂಹಾರ ಮಾಡಿದ ಧೀರ ೫
ನಡುರಣದಲಿ ಬಂದು ಘುಡುಘುಡಿಸುತ ನಿಂದುಜಡಜಂಗಮರೆಲ್ಲ ನಡುಗೆ ದುಶ್ಶಾಸನನ್ನ್ಹಿಡಿದುಕೆಡಹಿ ಬಡಿದೊಡಲಬಗೆದು ರಕ್ತಕುಡಿದಂತೆ ತೋರಿಸಿ ಮಡದಿಗೆ ಕರುಳನ್ನುಮುಡಿಸಿ ಸುಯೋಧನನೊಡನೆ ಗದಾಯುದ್ಧಬಿಡದೆ ಜಡಿದು ಮಾಡಿ ಒಡೆಯನಾಜ್ಞದಿತೊಡೆಕಡಿದು ಪೊಡವಿಮೇಲೆ ಕೆಡಹಿ ಅಗ್ರಜಾನುಜ-ರೊಡನೆ ಸಾಮ್ರಾಜ್ಯವ ಸಡಗರದಲಿ ಮಾಡಿಹಿಡಿದು ಕಲಿಯ ಭಂಜಿಸಿ ಅಧರ್ಮವಕೆಡಹಿ ಅಸಮನೆನಿಸಿ ಸನ್ಮಾರ್ಗವದೃಢಭಕ್ತರಿಗೆ ತೋರಿಸಿ ಲೋಕದಿ ಖ್ಯಾತಿಪಡೆದು ಮೆರೆದೆ ಶರ್ವನೊಡೆಯ ಭಾರತೀಕಾಂತ ೬
ಮಾಯಿಗಳು ಹೆಚ್ಚಿ ಮಹಿಯೆಲ್ಲ ವ್ಯಾಪಿಸೆಆ ಯಜ್ಞ ಭುಜರು ಮತಿಗೆಟ್ಟು ಬಳಲುತ್ತತೋಯಜಭವಗೆ ವಂದಿಸಿ ಪೇಳಲಾತನುಶ್ರೀಯರಸಗೆ ಪೇಳೆ ಹರಿ ನಿನ್ನ ಮೊಗನೋಡೆಆಯವರಿತು ನೀನವನಿಯೊಳಗೆ ಮಧ್ಯ-ಗೇಹಭಟ್ಟರಲ್ಲಿ ಜನಿಸಿ ಅಚ್ಚುತ ಪ್ರೇಕ್ಷಾ-ಚಾರ್ಯರಿಂದುಪದೇಶಗೊಂಡು ಗ್ರಂಥವನೋದಿನ್ಯಾಯಶಾಸ್ತ್ರವ ಮಾಡಿ ಸುರರಿಗೆ ಅದರರ್ಥಪೀಯೂಷವನುಣಿಸಿ ಮೋಹಕಶಾಸ್ತ್ರಹೇಯವೆಂದು ತೋರಿಸಿ ಅಜ್ಞಾನದಮಾಯ ನಿರಾಕರಿಸಿ ಸರ್ವರಿಗೆಲ್ಲಪ್ರಿಯ ಮಾರ್ಗವ ತೋರಿ ಮೆರೆದ ಮಾತರಿಶ್ವ7
ದಶಉಪನಿಷತ್ತುಗಳಿಗೆ ಟೀಕವಮಾಡಿಪೊಸ ಗೀತಭಾಷ್ಯ ರುಗ್ಭಾಷ್ಯಾಣು ವೇದಾಂತಾಸಮ ತಾತ್ಪರ್ಯನಿರ್ಣಯ ದ್ವಾದಶಸ್ತೋತ್ರಕುಶಲದಿ ಯಮಕ ಭಾರತ ಗ್ರಂಥವ ಮಾಡಿಕುಸುಮನಾಭತೀರ್ಥ ನರಹರಿತೀರ್ಥರು ಎಸೆವ ಮಾಧವತೀರ್ಥ ಅಕ್ಷೋಭ್ಯತೀರ್ಥರಿ-ಗುಸುರಿ ಸರ್ವಾರ್ಥಸಾರವ ತೋರಿ ಗ್ರಂಥವವಸುಧೆಯ ಮೇಲಿರಿಸಿ ರಂಜಿಸುತಲಿ ಬದರಿಗೆ ನಿರ್ಗಮಿಸಿ ಮರಳಿ ಬಂದು ದಶದಿಶಗಳಗೆದ್ದ ದಶಪ್ರಮತಿರಾಯ ೮
ವಾಲುಕ ಮುಷ್ಟಿ ಅಷ್ಟವು ದಿಗ್ವಿಜಯ ರಾಮ-ಲೋಲವಿಠಲ ನರಹರಿಮುನಿ ತಂದಂಥಮೂಲಸೀತಾರಾಮ ಹಯಗ್ರೀವ ಮೂರುತಿಸಾಲಿಗ್ರಾಮ ಶಂಖ ಮೊದಲಾದ ಪದಾರ್ಥಭೂಲೋಕದೊಳು ನಿಮ್ಮ ಪೀಳಿಗೆಯಲ್ಲಿರಿಸಿ ಶೀಲ ತ್ರಿವಿಕ್ರಮ ಪಂಡಿತಾಚಾರ್ಯರು ಬಾಲನಾರಾಯಣ ಪಂಡಿತಾಚಾರ್ಯರ್ಗೆ ಶೀಲಜ್ಞಾನವ ಬೋಧಿಸಿ ಸ್ತೋತ್ರ ಕೈಕೊಂಡುಖೂಳ ಮಾಯಿಗಳ ಭಂಜಿಸಿ ಅವರ ಮತಗಾಳಿ ಮಾಡಿ ಓಡಿಸಿ ಸಿದ್ಧಾಂತವಮೇಲು ಮೇಲೆಂದೆನಿಸಿ ಬದರಿಯಲ್ಲಿಮೂರ್ಲೋಕಾಧಿಪ ವ್ಯಾಸಮುನಿಯ ಸೇವಿಪ ಧೀರ ೯
ಮೂರ್ಹತ್ತು ಎರಡು ಲಕ್ಷಣವುಳ್ಳ ಕಾಯನೆಮೂರವತಾರ ಮುಖ್ಯಪ್ರಾಣರಾಯನೆಮೂರೆರಡುರೂಪ ಮುನಿಕುಲ ಪ್ರದೀಪಮೂರುಕೋಟಿರೂಪ ಮೂರೆರಡರಿಲೋಪಮೂರೆಂಟು ತತ್ವೇಶರಿಗೆ ನಿಯಾಮಕಮೂರೇಳಾಯತ ಮೂರೆರಡು ನೂರುಮಂತ್ರಮೂರು ಅವಸ್ಥೆಯ ಜೀವರಲಿ ನಿಂತು ಮಾಡಿಪಮೂರು ಶರೀರ ವ್ಯಾಪ್ತನಾರಾಯಣ ಮೂರುತಿದೂತ ಆಪ್ತ ಮಧ್ವರಾಯಮೂರುತಾಪದಿ ನಿರ್ಲಿಪ್ತ ಶಕ್ತಮುನಿಮೂರುಲೋಕವ ಪೊತ್ತ ಮುಕುತಿಪ್ರದಾಯಕ ೧೦
ಆನಂದತೀರ್ಥ ನಿಜಾನಂದಚರಿತ ಪಂ-ಚಾನನ ಸುರ ಮುಖ್ಯಾದ್ಯರಿಗೆಲ್ಲ ನೀ ಮುಖ್ಯ-ಪ್ರಾಣನೆ ಅಹಿಪರ್ವತವನುಂಗುಟದಿ ಮೀಟಿಶ್ರೀನಾಥ ನಿನ್ನ ಬಲವೆಷ್ಟು ಪೇಳೆನೆಈ ನಳಿನಜಾಂಡವ ಒಡೆದು ತಾಳವ ಮಾಡಿಅನಾಯಾಸದಲಿ ಘೋಷಿಪೆನೆಂದೆನೆದಾನವಸಮುದಾಯತಿಮಿರಮಾರ್ತಾಂಡನೆಜ್ಞಾನಮಯಾನಂದ ಗೋಪಾಲವಿಠಲನಧ್ಯಾನಲೋಲತಿಬಲ ಭಕ್ತರ ದೋಷ-ಕಾನನದಾವಾನಲ ಸ್ವರೂಪದಆನಂದ ಕೊಡು ಸುಶೀಲ ಸುಮನಸಮಾನಸಚಕೋರಸೋಮ ಸದ್ಗುಣ ಧಾಮ ೧೧

ಶ್ರೀಹರಿಯನ್ನು ಕುರಿತ ಒಂದು ಸ್ತುತಿ
೩೩
ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ಪ.
ಮಾರಜನಕ ನಿನ್ನ ಕೋರಿ ಬಂದೆನೊ ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ೧
ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ ೨
ಬಡವರ ಪಾಲಿಪ ಶಕ್ತಿ ನಿನ್ನದೊ ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ೩

ಶ್ರೀಹರಿಯೇ ಒಂದು ರೂಪದಿಂದ
೩೬
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ.
ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ.
ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ ೧
ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ೨
ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ ೩
ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ ೪
ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ ೫
ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ ೬
ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು ೭

ಗೋಪಾಲದಾಸರ ದೈವಸಾಕ್ಷಾತ್ಕಾರದ ಅಭಿವ್ಯಕ್ತಿ
೧೬೬*
ಬಂದ್ಯಾ ವಿಠಲ ಇಂದು ಬಡವನಲ್ಲಿ ಪ.
ವೃಂದಾವನದಲ್ಲಿ ಗೋವೃಂದಗಳ ಕಾಯಿದವನೆ ಅ.ಪ.
ಸುಳಿಗುರುಳು ಮೇಲೆ ಅರಳೆಲೆಯು ಸಿರಿಕಿರೀಟಎಳೆದಳಿಲು ಚೂತ ಮಲ್ಲಿಗೆಯ ದೂರ್ವೆಥಳಥಳಿಪ ಮುಖ ನಾಸ ನಯನ ಫಣೆಯಲಿ ತಿಲಕಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ೧
ಕೊರಳಲ್ಲಿ ಸರಿಗೆ ಸರಪಳಿ ಪಚ್ಚೆಪದಕವುಪರಿಪರಿಯ ಹಾರ ಶ್ರೀತುಲಸಿಮಾಲೆಸಿರಿಗಂಧಲೇಪ ಸಿರಿವತ್ಸಉರ ಕಿರುಡೊಳ್ಳುವರಕಟಿಗೆ ಕಿರುಗಂಟೆ ಪರಿಪರಿಯ ಧಾಮವ ಸುತ್ತಿ ೨
ಮುಂಗಯ್ಯ ಕಡಗ ಸರಪಳಿ ತೋಳಭಾಪುರಿಶೃಂಗಾರವಾದ ಗದೆ ಶಂಖ ಚಕ್ರಾಂಗಯ್ಯ ಪದುಮ ಅಂಗುಲಿ ವೇಣು ಮೀಟುತಹಿಂಗದೆ ಎನ್ನಂತರಂಗದ ಮನೆಗಿನ್ನು ೩
ಮಾಳಿಗೆ ಶ್ರೀನಿವಾಸಾರ್ಯರ ಮನೆಯಿಂದಶೀಲಗುರು ವಿಜಯರಾಯರಿಗೆ ಒಲಿದುಮೇಲಾಗಿ ಬಹುಪರಿಗಳಿಂದ ಪೂಜೆಯಗೊಂಡುಕೀಳುಮನುಜನ ಎನ್ನ ಪಾಲಿಸಲುಬೇಕೆಂದು ೪
ಈಸು ಬಗೆ ಪೂಜೆಯು ಎನ್ನಿಂದಲಾಗದುಲೇಶವಾದರು ಇಲ್ಲ ಎನಗೆ ಜ್ಞಾನಶ್ರೀಶನೆ ನೀ ನಿಂತಲ್ಲಿ ಸಕಲುಂಟುಶ್ರೀ ಶ್ರೀನಿವಾಸ ಗೋಪಾಲವಿಠಲ ವಿಜಯ ೫

೧೮೨
ಬರಗಾಲವಲ್ಲವಿದು ಬಳಲದಿರಿಪರಿಪಾಲಿಸುವ ಹರಿಯು ಪರಿಪರಿಯಲ್ಲಿ ಪ.
ಧ್ಯಾನಪ್ರಿಯವು ಆಗೆ ಧನ ಬ್ಯಾರೆ ಪ್ರಿಯನಲ್ಲನಿನಗೆಷ್ಟು ಮಾರಬೇಕೆನೆ ಪೇಳುದಿನಕೆ ಅಂದಿನ ಗ್ರಾಸ ನಿನಗೆ ಕ್ಲುಪ್ತಾಗಿ ಅದೆಧಾನ್ಯಧಾರಣೆ ಅರಿತು ಧನವೀವ ಹರಿಯು ೧
ಅಗ್ಗವಾದಾಗಲಿ ಮುಗ್ಗಿ ಬೆಳುವರೆದುಗ್ಗಾಣೆಗೊಮ್ಮಾನ ಮಾರಿದರುಹಿಗ್ಗದು ನಿನ್ನ ಉರದ ಸುಗ್ಗಿಲಿ ಒಮ್ಮನ ಉಣುವ್ಯಾಕುಗ್ಗದಿರು ಕುತ್ಸಿತ್ಚಿಂತನೆಯ ನೀಗು ೨
ಮಾರುವಧಾರಣೆಯು ಏರಿ ಇಳುವುದಕೆಬ್ಯಾರೆ ಮಳೆಯೆ ತಾನು ಕಾರಣವಲ್ಲ ನಾರಾಯಣನಮರೆತು ಬರಿದೆ ಮಳೆ ಗೋರಿದರೆಆರಿತವು ತೀರುವುದೆ ಅಲ್ಪಮನವೆ ೩
ವರಣ ಆಶ್ರಮಗಳ ಮರಿಯಾದಿಗಳು ತಪ್ಪಿಗುರು ಹಿರಿಯರ ಮನ್ನಣೆಗಳ ಮರೆದುಹಿರಿದರಲ್ಲಿ ಕಿರಿದಿನ್ನು ಮರ್ಯಾದೆ ತಪ್ಪಿ ಪೂಜೀರಡು ವಿಧ ಪಾಪದಿಂದೆ ಬರಗಾಲವೆನಿಪುದು ೪
ಜ್ಞಾನ ಬರಗಾಲವು ಬಿದ್ದದೆ ಜನಕೆಲ್ಲನಾನಾ ಭೌತಿಕದ ಬಾಧೆಯು ತೋರೋದುಧೇನಿಸಿ ನೋಡಿದರೆ ಎಲ್ಲ ಆನಂದಮಯಕಾಣಿಗೆ ಒಳಗಾಗಿ ಕಾಣಿಸುತಿಹನೊ ೫
ಪಾಲನೆಯ ಕಾಲವಿದು ಸಂಹಾರ ಕಾಲಲ್ಲಿಪಾಲಿಸುವ ಕಲಿಯು ಪ್ರಭುಧರ್ಮವಿದುಆಲೋಚಿಸಿ ನೋಡಿ ಅನುಭವದಿ ನಿಮ್ಮನಆಳುವ ಹರಿಗಿನ್ನು ಮೇಲಾಗಿ ಕೂಗಿ ೬
ಹರಿಯ ಮರದಿಪ್ಪುದೆ ಬರಗಾಲ ಬರಗಾಲಹರಿಸ್ಮ್ರತಿ ಮಾಡುವುದೆ ಶೋಭನ ಕಾಲಸಿರಿಮಹಾರಾಜ ಗೋಪಾಲವಿಠಲ ಕರುಣ-ವೆರೆಸಿ ವೃಷ್ಟಿಯಗರೆದು ಪರಿಪಾಲಿಸುವನು ೭

ಬದುಕಿನಲ್ಲಿ ಏನಿಲ್ಲ ದುಃಖ
೩೭
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ಪ.
ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ಅ.ಪ.
ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ ೧
ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿನರಸಖನಿಗೆ ಭಾರ ಸಮರ್ಪಿಸಲಿವಿರಸಮಾಡಿ ಮನೆ ಮುರಿಸುತ ಬರಲಿ ೨
ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿಜ್ಞಾನಹೀನನೆಂದೆನುತ ನಿಂದಿಸಲಿಶ್ರೀನಿಧಿ ಗೋಪಾಲವಿಠಲ ಬೆರಿಲಿ ೩

ಇಲ್ಲಿ ಶ್ರೀನಿವಾಸನನ್ನು ದಾಸರು
೧೬೮
ಬಾರಯ್ಯ ಬಾ ಬಾ ಭಕುತರಪ್ರೀಯ ಶ್ರೀನಿವಾಸರಾಯಮಾರಜನಕ ಮುಕ್ತರೊಡೆಯ ದೇವಯ್ಯ ಜೀಯ ಪ.
ವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆವಾರಿಜಜಾಂಡದ ಕಾರಣ ದೊರೆಯೆ ಅ.ಪ.
ಸ್ಯಂದನವೇರಿ ಬಾಪ್ಪಾ ರಂಗ ದೇವೋತ್ತುಂಗನಂದನನಂದನ ಅರಿಮದಭಂಗ ಕಾರುಣ್ಯಾಪಾಂಗಸುಂದರ ವಿಗ್ರಹ ಶುಭಾಂಗ ವಿಹಂಗ ತುರಂಗಕಂದವಿರಿಂಚಿಯು ನಂದಿವಾಹನ ಅಮ-ರೇಂದ್ರ ಸನಕ ಸನಂದನಾದಿಮುನಿವೃಂದ ಬಂದು ನಿಂದುಧಿಂ ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ೧
ಜಗಜನ್ಮಾದಿಕರ್ತೃ ಗೋವಿಂದ ಉದರದಿ ಲೋಕವಲಘುವಾಗಿ ಧರಿಸಿ ಮುಕುಂದ ಭಕ್ತರ ಮನಕೆಝಗಝಗಿಸುತ್ತ ಪೊಳೆವಾನಂದ ನಿಗಮಾವಳಿಯಿಂದಾಗಣಿತ ಮುನಿಗಣ ನಗಖಗಮೃಗಶಶಿಗಗನಮಣ್ಯಾದ್ಯರುಸೊಗಸಾಗಿ ಬಗೆ ಬಗೆ ಪೊಗಳುತಲಿ ಬೇಗ ಚಿಗಿ-ಚಿಗಿದಾಡಲು ಮುಗುಳುನಗೆಯ ಮಹೋರಗಗಿರಿವಾಸ2
ತಡಮಾಡಬೇಡಯ್ಯ ಹೇ ನಲ್ಲ ವಾಕು ಲಾಲಿಸು ಎ-ನ್ನೊಡೆಯ ಶ್ರೀಗೋಪಾಲವಿಠಲ ದೇವ ಪರಾಕುಅಡಿಯಿಡು ಭಕ್ತವತ್ಸಲ ಶ್ರೀಲಕುಮಿನಲ್ಲಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ ಮಡದಿಗೆ ಹೇಳದೆ ದುಡುದುಡನೆ ಬಂದು ಹಿಡಿದು ನಕ್ರನಬಾಯಿ ಕಡಿದು ಬಿಡಿಸಿದನೆ ಸಡಗರದಲಿ ರಮೆ ಪೊಡವಿಯೊಡನೆ ಬೇಗ ೩

ಮಧುರಭಾವದ ಕೀರ್ತನೆಯಿದು
೧೬೯
ಬುದ್ಧಿ ಪೇಳಬಾರದೇನೆ ಗೋಪ್ಯಮ್ಮ ಕೃಷ್ಣಗೆಮುದ್ದು ಮಾಡುವುದ್ಯಾಕೆ ಜಾಣೆ ಪ.
ಬುದ್ಧಿ ಪೇಳದಿದ್ದ ಕಾರಣ ಸದ್ದುಮಾಡದೆ ಮುದ್ದುಕೃಷ್ಣನು ಕದ್ದು ಬೆಣ್ಣೆಯ ಮೆದ್ದು ಮನೆಯೊಳಗಿದ್ದ ಬಾಂಡಗಳ್ವೊದ್ದು ಕೆಡಹಿದ ಅ.ಪ.
ಮಿಕ್ಕ ಮಕ್ಕಳಂದದಿ ಕೃಷ್ಣನು ಚಿಕ್ಕವನೇನೆಅಕ್ಕರದಿ ಕುಚಗಳ ಪಿಡಿದು ಸಿಕ್ಕದೋಡುವನೆದಕ್ಕದಿರುವ ರಕ್ಕಸರುಗಳ ಸೊಕ್ಕು ಮುರಿದ ಸಿಕ್ಕುಗಾರ ಕೇ-ಳಕ್ಕ ಕೃಷ್ಣಗೆ ತಕ್ಕ ನೀತಿಯ ಘಕ್ಕನೆ ಪೇಳ್ ಧಿಕ್ಕರಿಸಿ ನೀ ೧
ಸೀರೆ ದಡದಮ್ಯಾಲಿಟ್ಟು ನೀರಿನಾಟಗಳ ಮಾಡೆ ನಾವೆಲ್ಲರು ಪೋಗಿವಾರಿಯೊಳಿರಲು ಚೋರ ನಿನ್ನ ಕಿಶೋರ ಅಲ್ಲಿದ್ದಸೀರೆಗಳನಪಹಾರಮಾಡಿದ ಜಾರ ಇವನ ಅ-ಪಾರ ಲೂಟಿಗಳ ಪೇಳಲಳವೆ ನೀರಜಾಕ್ಷಿ ೨
ಕೇಳು ಕೃಷ್ಣನ ದುಡುಕುಗಳನು ವಿಶಾಲ ನೇತ್ರೆಯೋಳೆಜಾಲ ಮಾಡುವದ್ಯಾತಕೆ ಈ ಪರಿ ಲೋಲಹಾರಳೆಬಾಲಕನ ಘನದಾಳಿಗಳೀಗ ತಾಳಲಾರದೆ ಕಾಲಿಗೆರಗುವೆಪೇಳಿದ ನುಡಿಯ ಲಾಲಿಸಿ ಈ ಚಾಳಿ ಬಿಡಿಸೆ ಗೋಪಾಲವಿಠಲಗೆ ೩

ವಿಜಯದಾಸರ ಮಹಿಮೆಯನ್ನು ಕುರಿತ
೮೪
ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದರಜವ ಸೇವಿಸೋ ಭಾಗ್ಯ ನಿಜವೊ ನಿಜವೊ ಪ.
ಕಾಮಧೇನುವ ಕಂಡು ಕರೆದು ಕೊಂಡಂತೆನ್ನಗ್ರಾಮಗೋವಿನಪಾಲು ಕರೆಕೊಂಬಿ ವಿಹಿಯನತಾಮರಸಬಂಧು ಕಂಡು ತಮಸುಹರಿದಂತೆಧೂಮ ಪೊರಡುವ ಉರಿಗೆ ತಮವು ಓಡುವುದೆ1
ಕಲ್ಪವೃಕ್ಷವಕಂಡು ಬೇಡಿದ್ದು ಕೊಡುವಂತೆವಳ್ವ ಮುಂತಾದ ಗಿಡ ಕೊಡಬಲ್ಲುವೆಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆಅಲ್ಪ ಚಿಂತ್ರಣಿಬೀಜ ಅದು ತಾ ಕೊಡುವುದೆ ೨
ಹಲವು ಸಾಧನಮಾಡಿ ಬಳಲಲಿನ್ಯಾಕೆ ನೀನಿಲಿಸು ನಿಗಮಗಳ ಧ್ಯಾಸ ನಿಜಮನಕೆತಿಳಕೊ ಇವರೆ ನಿನಗೆ ಗತಿಪೊಂದಿಪುದಕೆಒಲಿವ ಗೋಪಾಲವಿಠಲ ಸಂಶಯವಿಲ್ಲಿದಕೆ3

ಭಾರತೀದೇವಿಯ ಸ್ತುತಿ
ಭಾರತಿ
೬೯
ಭಾರತಿ ಜನನಿ ಪಾಲಿಸೆ ನಿತ್ಯ ಮಾರುತನ ರಾಣಿ ಪ.
ಭಾರತಿ ಭಕುತಿಗೆ ಸಾರಥಿಯಾಗಿ ನೀಪೂರತಿ ಕರಪಿಡಿ ಮಾರುತನ ರಾಣಿ ಅ.ಪ.
ಸುರರ ಸತಿಯರಿಗೆ ಧರೆಯೊಳವ-ತರಿಸಿ ಶಾಪ ಪರಿದೆದರುಶನ ಮಾತ್ರದಿ ವರವಿತ್ತು ಅವರಿಗೆಪರಿಹರಿಸಿದೆ ಬಂದದುರಿತಗಳನು ತಾಯೆ ೧
ಜ್ಞಾನಶುಭಕಾಯಳೆ ಸಜ್ಜನರಿಗೆಜ್ಞಾನಪ್ರದಾಯಕಳೆಮಾನವ ಜನುಮದಿಂದೇನು ಸಾಧನ ಉಂಟುನ್ಯೂನ ಮಾಡಿಸದೆ ನಿಧಾನದಿ ಪಾಲಿಸೆ ೨
ನಂಬಿದೆ ನಿನ್ನ ಪಾದಯುಗಾಂಬುಜ-ದಿಂಬು ತೋರೆನಗೆ ನಿಜಕಂಬು ಚಕ್ರಾಂಕಿತ ಗೋಪಾಲವಿಠಲನಾಂಬಕದಲಿ ನೋಳ್ಪ ಸಂಭ್ರಮ ಪಾಲಿಸೆ ೩

ಭಾರತೀದೇವಿಯನ್ನು ಕುರಿತ ಸ್ತುತಿ
೭೦
ಭಾರತಿ ನೀ ಪರಿಪಾಲಿಸೆ ವಾರಿಜಾಂಬಕಿ ಮಾತ ಲಾಲಿಸೆ ಪ.
ಆರಾದ ಭವವೆಂಬ ಮಾರಿಯ ಹೊಯ್ಲಿಗೆಶ್ರೀ ರಾಮನಪಾದದಿಚ್ಛೈಸಿ ವಿಘ್ನಹರಿಸಿ ಯತ್ನ ಪೂರೈಸಿ ೧
ಭಕ್ತಾಭಿಮಾನಿ ಸದ್ಯುಕ್ತಿಯುತ ಹರಿಭಕ್ತನೆಂದೆನಿಸೆನ್ನ ವಾಗ್ವಾಣಿ ಪಲ್ಲವಪಾಣಿ ಪನ್ನಗವೇಣಿ ೨
ವೇದಾಂತವೇದ್ಯ ಗೋಪಾಲವಿಠಲನಪಾದದೊಳಿರಿಸೆನ್ನ ಸತ್ಖ್ಯಾತೆ ಆಶ್ರಿತಪೋತೆ ಶ್ರೀಜಗನ್ಮಾತೆ ೩

ಹನುಮನ ಸತಿಯಾದ ಭಾರತೀದೇವಿಯ ಸ್ತುತಿ
೭೧
ಭಾರತಿ ಭಕುತಿಯನು ಕೊಡೆನಗೆಮಾರುತಿ ಸತಿ ನೀನು ಪ.
ಮೂರು ಲೋಕದೊಳು ಯಾರು ನಿನಗೆ ಸರಿ ಮಾರಾರಿಗಳಿಂದಾರಾಧಿತಳೆ ಅ.ಪ.
ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿಮಂದಹಾಸ ಮುಖದಿಂದಲಿ ನೋಡಿ ನಿನ್ನಕಂದನೆಂದು ಎನ್ನ ಮುಂದಕೆ ಕರೆಯೆ ೧
ವಾಣಿ ಎನ್ನ ವದನದಲ್ಲಿಡುಮಾಣದೆ ಹರಿಸ್ತವನವೀಣಾಧೃತ ಸುಜ್ಞಾನಿಯೆ ಪಂಕಜ-ಪಾಣಿಯೆ ಕೋಕಿಲವಾಣಿಯೆ ಎನ್ನಯ ೨
ಮಂಗಳಾಂಗಿಯೆ ಎನ್ನಾಂತರಂಗದಲ್ಲಿ ಮುನ್ನತುಂಗವಿಕ್ರಮ ಗೋಪಾಲವಿಠಲನ್ನಹಿಂಗದೆ ನೆನೆವ ಸುಖಂಗಳನು ಕೊಡೆ ೩

ಭೀಮನ ಪರಾಕ್ರಮಗಳನ್ನು ತಿಳಿಸುವ ಕೀರ್ತನೆಯಿದು
೬೩
ಭೀಮನ ನೋಡಿರೈ ಕುರುಕುಲ ಸೋಮನ ಪಾಡಿರೈ ಪ.
ಕಾಮಜನಕ ಹರಿ ಯದುಕುಲ-ತಿಲಕನ ಬಂಟ ನೆನೆವರ ನೆಂಟಾ.ಪ.
ಕುಂತಿಯ ಉದರದಿ ಜನಿಸಿದ ಧರ್ಮನ ಅನುಜ ಪ್ರಾಣನ ತನುಜಾಂತರಖಾರುವ ಹಿಡಿಂಬಕಾಸುರನ ತರಿದ ಹಿಡಿಂಬಿಯ ನೆರದಸಂತರಿಗೆ ಬಾಧೆ ಬಡಿಸುವ ಬಕನ ಕೊಂದಾ ಅದು ಬಲು ಚೆಂದಕಂತುಪಿತ ವ್ಯಾಸನಾಜ್ಞದಿ ದ್ರೌಪದಿಯ ತಂದನಾಯಾಸದಿಂದ ೧
ಅಂಧಕ ಕರೆಸಲು ಹಸ್ತಿನಪುರಕೆ ಬಂದಾಗ್ರಹದಲಿನಿಂದಬಂಧು ಸಹಿತ ದಿಗ್ವಿಜಯದಿ ನೃಪರನು ಗೆಲಿದ ದ್ವಿಜರಿಗೆ ಒಲಿದಾಂಧರಿ ಪ್ರಸ್ತದಿ ವರಯಜ್ಞವ ಮಾಡಿ ಕೊಟ್ಟಾ ದ್ವಿಜರಿಗಭೀಷ್ಟಸಂದಣಿಸಿ ಬಂದ ದ್ವಿಜರಿಗೆ ದ್ರವ್ಯದಾತನಾದ ವಿಖ್ಯಾತ2
ತಂದೆ ಕರೆದು ವನವಾಸಕೆ ಪೋಗೆನೆ ಹೋಗಿ ದೈತ್ಯರ ನೀಗೆಮಂದಗಮನೆಗೆ ಸೌಗಂಧಿಕ ತಂದಿತ್ತ ಬಹು ಸಮರ್ಥಾಸೈಂಧವನ ಸಖ ಕೋಟಿಕಾಖ್ಯನ ಶಿರವರಿದ ಅವನನು ತರಿದೈಂದುಮುಖಿ ಸಹಿತ ವಿರಾಟ ಗೃಹದಲಿ ವಾಸವಾದಭವೇಶ ೩
ಮಲ್ಲ ಬರಲು ನೃಪನಾಜ್ಞದಿ ಪಡೆಗಳ ಪಿಡಿದ ಅವನನು ಬಡಿದಾಲ್ಲದ ಮತಿ ಮಾಡಿದ ಕೀಚಕನ ಕರದ ಸಂದುಗಳ್ಮುರಿದಬಲ್ಲಿದರಾಗಿಹ ಉಪಕೀಚಕರನ ಸದೆದ ಕೀರ್ತಿಗೆ ಮುದದನಿಲ್ಲದೆ ಬಂದ ಸುಶರ್ಮನ ಕೈಸೆರೆತಂದ ನಿರ್ಭಯದಿಂದ ೪
ಕುರುಕುಲ ಅಧಮನ ಅನುಜರ ಸಹಿತ ಹಿಡಿದ ಗದೆಯಿಂದ ಬಡಿದಗುರುಸುತನ ಅಪರಾಧವ ಕ್ಷಮಿಸಿದ ಧೀರ ಕದನಕಠೋರಧರಣಿಯ ಭಾರವನಿಳುಹಲಿ ಬಂದ ಶ್ರೇಷ್ಠ ಭಕ್ತರ ಪ್ರೇಷ್ಠಸಿರಿಪತಿ ಗೋಪಾಲವಿಠಲನ ಅಛಿನ್ನದಾಸ ಕಾಮಸನ್ಯಾಸ5

ಪರಗತಿಯ ಚಿಂತೆಯಿಲ್ಲದೆ
೧೦೪
ಭ್ರಾಂತನಾದೆನಲ್ಲ ಪರಗತಿ ಚಿಂತೆಯೆಂಬೊದಿಲ್ಲ ಶ್ರೀಕಾಂತನ ಪದಗಳ ಸಂತತ ಪೂಜಿಸಿ ಸಂತೋಷಿಸಲಿಲ್ಲ ಬರಿದೆ ಪ.
ಮೋಸ ಹೋದೆನಲ್ಲ ವಿಷಯದ ಆಶೆ ತೀರಲಿಲ್ಲ ಹೇಸಿಕೆ ಭವಸುಖ ಲೇಸೆಂದೆನಿಪ ವಿಲಾಸವಾಯಿತಲ್ಲ ಬರಿದೆ ೧
ಮಂದನಾದೆನಲ್ಲ ದಿನಗಳು ಸಂದು ಹೋದವಲ್ಲಮಂದರಧರ ಮುಕುಂದನಂಘ್ರಿಯ ಹೊಂದಿ ಸುಖಿಸಲಿಲ್ಲ ಬರಿದೆ ೨
ದೇಹ ನಿತ್ಯವಲ್ಲ ಮಮತೆ ಗೇಹ ವ್ಯರ್ಥವಲ್ಲಮೋಹವಸ್ತು ಗೋಪಾಲವಿಠಲ ಮೋಹದರಸ ಬಲ್ಲ ಬರಿದೆ ೩

ವಿಷಯಾಸಕ್ತಿಯಲ್ಲಿ ಮುಳುಗಿರುವವನಿಗೆ
೧೩೭
ಭ್ರಾಂತಿ ಬಿಡದೊ ಭಾಗ್ಯ ಪುರುಷನೆ ಪ.
ವಿಷಯಂಗಳ ಜರಿದು ಶಾಂತಚಿತ್ತನಾಗೋತನಕಹೇ ಪ್ರಾಣಿ ನಿನ್ನ ಅ.ಪ.
ಕಾಲಕಾಲಕೆ ಹರಿಕಥಾಶ್ರವಣ ಗುರುಗಳ ಮುಖದಿಂದಕೇಳಿದ್ದೆ ಕೇಳುತ ಪೇಳುತ ಮನನ ಮಾಡುತ್ತಕೇಳಿದಂತೆ ಧ್ಯಾನವ ಮಾಡುತ್ತ ಮಾಡಿದ್ದನು ಭವಕೆಮೇಲಾಗಿ ಬಂದೊದಗೋತನಕ ೧
ಪಾಂಚಜನ್ಯ ಅರಿಪಾಣಿ ಸರ್ವೇಶ ತದ್ರಾಣಿ ಲಕುಮಿ ವಿ-ರಿಂಚಿ ವಾಯುಸಮ ವಾಣಿ ಭಾರತಿಭುಜಂಗ ಪತಿಯುಪಂಚಾನನ ಖಗ ಸುತ್ರಾಮ ಕಾಮ ಈ ಬಗೆ ತಾರತಮ್ಯಪಂಚಭೇದವ ತಿಳಿಯೋತನಕ ೨
ಪೂರಕ ಕುಂಭಕ ರೇಚಕದಿಂದಲಿ ಹೃದಯಸ್ಥ ಭೌತಿಕಮಾರುತನ ಜಯಿಸಿ ಅಣಿಮಾದಿ ಸಿದ್ಧಿ ಅಷ್ಟಾಂಗಯೋಗಧಾರಣನಾಗಿ ನಿಸ್ಸಂಗದಿ ಚರಿಸಿ ಭಾರತಿಪತಿಯಾದ ಸ-ಮೀರನ ಒಲುಮೆ ಪಡೆಯೋತನಕ ೩
ಅಂಶಿ ಅಂಶ ವೇಷಾಧಿಷ್ಠಾನ ಅಂತರ್ಯಾಮಿಗಳಸಂಶಯ ರಹಿತತ್ಯಂತ ಭೇದವು ರೂಪಗಳ ತಿಳಿದುಕಂಸಾರಿಯ ಕರುಣ ಬಲಮಾಡಿ ಹಿಂಸೆಗಳೀಡ್ಯಾಡಿಹಂಸೋಪಾಸಿಯಾಗೋತನಕ ೪
ಹಂಚುಹಾಟಕ ಸಮದರ್ಶಿ ಎನಿಸಿ ಶೀತೋಷ್ಣವ ಸಹಿಸಿಸಂಚಿತಾಗಮಗಳನೆ ದಹಿಸಿ ಇಂದ್ರಿಯಗಳ ಜಯಿಸಿಪಂಚ ವೃತ್ಯಾತ್ಮಕ ಮನ ವಶೀಕರಿಸಿ ಧ್ಯಾನದೊಳು ಶ್ರೀಹರಿಮಿಂಚಿನಂದದಿ ಪೊಳೆಯೋತನಕ ೫
ವಿಷಯಾವಿಷಯಂಗಳ ರೂಪವ ತಿಳಿದು ವಶವಾಗದನ್ಯವಿಷಯವೆಂಬೋದನ್ನು ತಾನರಿದು ದುರಾಶೆಯ ತೊರೆದುಹಸಿ ತೃಷೆ ಹಗಲಿರುಳು ಮಾಡದಲೆ ಹರಿದಾಸರ ಬೆರೆದುಕುಶಲ ವಾರ್ತೆಗಳಾಡೋತನಕ ೬
ಸ್ವತಂತ್ರ ಅಸ್ವತಂತ್ರ ವಸ್ತು ವಿವೇಕವ ತಿಳಿದುಸ್ವತಂತ್ರನೆ ಮುಖ್ಯ ಶ್ರೀಹರಿಯೆಂದು ಧ್ಯಾನಕೆ ತಂದುಸ್ವತಂತ್ರನಲ್ಲವೊ ನೀ ಬಂದು ಆಪ್ತ ನೀನೆಂದುವ್ಯಾಪ್ತದರ್ಶಿ ಆಗೋತನಕ ೭
ಸಕಲೇಂದ್ರಿಯಗಳಿಂದ ಶ್ರೀಹರಿಯ ವ್ಯಕತತಿಗೆ ತಂದುಕಕುಲಾತಿ ಹಗಲಿರುಳು ಬಿಡುತಲಿ ಮುಕುತರಟ್ಟಿದಲ್ಲಿಲಕುಮೀಶ ಗೋವಿಂದನ ಮೂರ್ತಿಯ ಭಕುತಿಲಿ ತನ್ನಸುಖ ವಿಷಯನೆಂದರಿಯೋತನಕ ೮
ಬಿಂಬ ಭಾವ ಕ್ರಿಯ ದ್ರವ್ಯಾ ದ್ವೈತವ ತಿಳಿದು ಸರ್ವಗತಬಿಂಬ ಮಮ ಸ್ವಾಮಿ ಗೋಪಾಲವಿಠಲನಲ್ಲದಿನ್ನಿಲ್ಲಎಂಬುದನರಿತು ಅನ್ಯ ಸ್ವತಂತ್ರವ ಜರಿದು ಸರ್ವ ವ್ಯಾಪಾರದಿಬಿಂಬಕ್ರಿಯವ ಕಾಣೋತನಕ ೯

ಹನುಮಂತನನ್ನು ಕುರಿತ ಮಂಗಳ
೬೪
ಮಂಗಳ ಮುಖ್ಯ ಪ್ರಾಣೇಶಗೆ ಜಯಮಂಗಳ ವಾಯುಕುಮಾರಗೆ ಪ.
ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷಹನುಮಗೆ ಮಂಗಳಸಂಜೀವನ ತಂದಾತಗೆ ಮಂಗಳಸಜ್ಜನಪರಿಪಾಲಗೆ ಮಂಗಳ1
ಅತಿ ಬಲವಂತ ಶ್ರೀಭೀಮಗೆ ಮಂಗಳಪೃಥ್ವಿಮಲ್ಲರ ಗೆಲಿದಗೆ ಮಂಗಳಸತಿಗಳ ಸೀರೆಯ ಸೆಳೆದ ದೈತ್ಯನ ಕೊಂದಶಿರವ ಚಂಡಾಡ್ದಗೆ ಮಂಗಳ ೨
ಸೀತಾದೇವಿಯ ಬಾಲಗೆ ಮಂಗಳಶ್ರೀರಾಮರ ಬಂಟಗೆ ಮಂಗಳಗೋಪಾಲವಿಠಲನ್ನ ಪೂಜೆಯ ಮಾಡುವೊಗುರುಮಧ್ವಮುನಿರಾಯಗೆ ಮಂಗಳ ೩

ವಿಷ್ಣುವನ್ನು ಕುರಿತ ಮಂಗಳ
೩೯
ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ಪ.
ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ ೧
ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ ೨
ರಾಜರಾಜಿತ ಗೋಪಾಲವಿಠಲ ಮಹಾ ರಾಜ ಭೋಜ ಕಲ್ಪರಾಜ ಸುತೇಜ ೩

ವಿಷ್ಣುವನ್ನು ಕುರಿತ ಮಂಗಳ
೪೦
ಮಂಗಳಂ ಮಂಗಳಂ ಭವತು ತೇ ರಮಾಪತೆ ಪ.
ಮಂಗಳಂ ಮಧುವೈರಿ ದೇವವರೇಣ್ಯ ಅ.ಪ.
ಮಾರಜನಕ ದಿವ್ಯಸಾರ ಸುಂದರದೇಹವಾರಿಜದಳನೇತ್ರ ಕಾರುಣ್ಯಗುಣನಿಧೆ ೧
ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ೨
ವೇದವಿಬುಧವಂದ್ಯ ಗೋಪಾಲವಿಠಲಸಾಧುಸಜ್ಜನಪಾಲ ಶ್ರೀದೇವಿಲೋಲ ೩

ತ್ರಿವಿಧಜೀವರಿಗೆ
೧೩೮
ಮಧ್ವಮುನಿಮನಮಂದಿರನಿವಾಸ ಸಿರಿಕೃಷ್ಣಉದ್ಧರಿಸಬೇಕು ಎಲ್ಲರನ ಪ.
ಶುದ್ಧರಿಗೆ ಸದ್ಗತಿ ಮಿಶ್ರರಿಗೆ ಮಧ್ಯವುಪೊದ್ದಿದ ತಾಮಸರಿಗೆ ತಮೋಗತಿಯಿತ್ತು ಅ.ಪ.
ಸತ್ವರಿಗೆ ನವವಿಧ ಭಕುತಿಯನೆ ತೋರಿಸಿಮತ್ತೆ ಮಧ್ಯಮರಿಗೆ ಸಂಶಯ ಪುಟ್ಟಿಸಿಮತ್ತರಿಗೆ ನವವಿಧ ದ್ವೇಷಪರಿಪೂರ್ತಿಸಿನಿತ್ಯದಲಿ ಮಾಡಿದ ಸಾಧನವು ಹೆಚ್ಚಿಸುತ ೧
ಒಬ್ಬರ ಕರ್ಮದಲಿ ಒಬ್ಬರು ರತರಾಗೆಹಬ್ಬಲೀಸದೆ ವೇಗ ಹತನಬಡಿವುದುಕೊಬ್ಬು ಮುರಿವುದು ಅಧಿಕ ಒಚ್ಛೆಯನು ಮಾಡಿದರೆಒಬ್ಬರ ವಿಷಯಗಳಿಗೆ ಸಾಗದಂತೆ ಇನ್ನು ೨
ದೇಹ ಸಂರಕ್ಷಣೆಯಲ್ಲಿ ಇನ್ನುಸಹಾಯವಾಗಿ ಒಂದೆ ತ್ರಿವಿಧರಿಗೆಶ್ರೀಹರಿ ನೀ ಇನ್ನು ಮಾಡಿ ನಿತ್ಯದಲ್ಲಿರಹಸ್ಯ ಅವರವರ ಅರಿತು ಸುಖವ ಕೊಡುತ ೩
ದುಷ್ಟಜೀವ ದುಷ್ಟಶಾಸ್ತ್ರ ದುಷ್ಟಕರ್ಮಗಳಿನ್ನುಇಟ್ಟುದರಿಂದ ವಿವೇಕ ನಮಗೆಬಿಟ್ಟುಕೊಡಬಹುದಿರವ ತಿಳಿದ ಬಳಿಕನಷ್ಟ ಇದು ಬ್ಯಾರೆ ಇಷ್ಟ ನಮಗೆಂತೆಂದು ೪
ಈ ವಿಧದಲಿ ನಿತ್ಯ ಪೊರೆದು ಎನ್ನ ಮರೆದೆಈವ ವೈಷಮ್ಯ ಸಂಶಯಗಳ ಬಿಡಿಸಿಶ್ರೀವಾಯುಮತದ ಅನುಸಾರ ಜ್ಞಾನವನಿತ್ತುಆವಾಗ ಗೋಪಾಲವಿಠಲ ತಿಳಿಸುತ ನಿನ್ನ5

ಗೋಪಾಲದಾಸರ ಕಾಲದಲ್ಲಿ
೭೯
ಮಾರಮದಘನ ಸಮೀರ ಮಧ್ವಮತೋ-ದ್ಧಾರ ಶುಭಗುಣಸಾಗರ ಧೀರಗುರು ಸತ್ಯಬೋಧಾರ್ಯ ಹರಿಕರುಣದಲಿಪರವರ್ಗವ ಗೆಲಿದು ಧಾರುಣಿಯೊಳು ಮೆರೆದೆ ಪ.
ಮುನಿ ನಿಮ್ಮ ಮಹಿಮೆಯನು ತಿಳಿಯದಲೆ ದಂಡೆತ್ತಿಮನಸಿಜನು ಬರಲು ಕೇಳಿ ತಾಳಿಘನಮಹಿಮ ಸತ್ಯಪ್ರಿಯ ಗುರು ಕರುಣ ದೃಢಕವಚ-ವನು ಧರಿಸಿ ಧೀರರಾಗಿ ಸಾಗಿಮನೋಜಯ ಅಷ್ಟಾಂಗ ಯೋಗಸಾಧನ ಬಲದಿಮಣಿಯದಲೆ ಮಾರ್ಮಲೆತು ಕಲೆತುಪ್ರಣವಾದಿ ಮಂತ್ರ ಪ್ರತಿಪಾದ್ಯ ಮೂರ್ತಿಗಳ ಚ-ಮ್ಮೊನೆ ಮಾಡಿ ಅದಿರ್ಪುತವನ ಹಳಿದು ಓಡಿಸಿದ ಸಮೀರ ೧
ಕುಸುಮಾಸ್ತ್ರಾನಂಗನಾಗಲು ಉಡುಸಹಿತ (ಹಿಮಗು-ವೆಸಗಿ) ನಭಕೇರಿ ನಿಂದ ಮಂದಸೊಶನ ಮೆಲ್ಲನೆಜರಿದ ವನಕೆಪೋದ ವಸಂತಝಷ ಮಕರ ಜಲದೊಳಡಗೆ ನಡುಗೀಸೆವ ಶುಕಪಿಕಸಮೂಹಗಳು ಭಯಪಟ್ಟು ಬಲುದಶದಿಶೆಗೆ ಓಡಿಪೋಗೆ ಕೂಗೆಹೊಸ ಮಲ್ಲಿಕಾದಿ ಕುಟ್ಮಲಗಳಂಜಿ ಬಾಯಿ ಬಿಡಲುಯಶೋನಿಧಿಯೆ ತವಕೀರ್ತಿ ಪಸರಿಸಿತು ಭುವನದಲಿ ೨
ಮಾರನಪಜಯಕಂಡು ಕ್ರೋಧಾದಿವರ್ಗಗಳುದೂರದಲಿ ನಿಂದು ನಮಿಸೆ ಗಮಿಸೆಧೀರ ನಿಮ್ಮ ಪಾಂಡಿತ್ಯಕಂಡು ತಲೆಬಾಗಿ ಫಣಿಧಾರುಣಿ ತಳಕೆ ನಡೆದ ವಿಬುಧವೀರಕರ್ಣನು ನಿಮ್ಮ ಮೀರ್ದತ್ಯಾಗವ ನೋಡಿಸೇರ್ದ ರವಿಮಂಡಲವನು ಅವನುಶ್ರೀ ರಾಮವ್ಯಾಸಗೋಪಾಲವಿಠಲನಂಘ್ರಿಆರಾಧಕರೆ ತಮ್ಮ ಚಾರುಚರಣಕೆ ನಮಿಪೆ3

ಮುಖ್ಯ ಪ್ರಾಣನಾದ ಹನುಮಂತ
೬೫
ಮುಖ್ಯ ಪ್ರಾಣನೆ ಕೈಯ ಮುಗಿದು ಬೇಡುವೆನಯ್ಯ ಪ.
ಭಕ್ತಿಪಾಲಿಸು ಹರಿಯ ಪಾದಬಳಿಯಮುಕ್ತಿಯಿಂದಲಿ ವಿವಿಧ ಸಂಸಾರ ದಾಟಿಶಕ್ತಿ ಎನಗೆ ಇತ್ತು ಸಲಹೊ ನಮಗೆ ಕರ್ತು ಅ.ಪ.
ನಿನ್ನ ಮತ ಪೊಂದಿಸು ನಿನ್ನ ಚಿಹ್ನೆಯ ಧರಿಸುನಿನ್ನ ಶಾಸ್ತ್ರದೊಳೆನ್ನ ಮುಳುಗಾಡಿಸುನಿನ್ನವರೊಳಗಿಡಿಸು ನಿನ್ನ ಮೂರ್ತಿಯ ತೋರಿಸುನಿನ್ನ ವ್ಯಾಪ್ತತ್ವ ಚೆನ್ನಾಗಿ ತಿಳಿಸುಇನ್ನು ದಿನದಿನದಿ ಎನ್ನಿಂದ ಮಾಡಿದ ಕರ್ಮನಿನ್ನ ಅಂತರ್ಯಾಮಿಗೊಪ್ಪಿಸೊಬಿನ್ನಪವ ಲಾಲಿಸು ಘನ್ನ ದಯಾಳುವೆನಿನ್ನ ಹೊರತು ಎನಗೆ ಅನ್ಯಗತಿಯಿಲ್ಲ ೧
ನೀನು ಪಿಡಿಯಲು ಹರಿಯು ತಾನು ಪಿಡಿವನುನೀನು ಮುನಿದರೆ ಹರಿಯು ತಾನು ಮುನಿವನೀನು ಮಾಡಿದ ಕರ್ಮ ನಮ್ಮ ನಿನ್ನ ಒಡೆಯಗೆ ಧರ್ಮನೀನು ಇದ್ದರೆ ಹರಿಯು ತಾನು ಇರುವನೀನು ಬಿಟ್ಟರೆ ಹರಿಯು ತಾನು ಇರುವನೀನು ಬಿಟ್ಟರೆ ಹರಿಯು ತಾನು ಬಿಟ್ಟೋಡುವನೀನಿತ್ತುದದು ಏನಾದದ್ದೆಲ್ಲಜ್ಞಾನಸುಖದಾಯಕ ನಿಧಾನ ಮುಕ್ತಿಪ್ರದಾಯಕದೀನರಕ್ಷಕಗುರುವೆ ದಾನಿ ಕಲ್ಪತರುವೆ ೨
ನವವಿಧ ನೀನು ಮುಖ್ಯಾಭಿಮಾನಿಕವಿಗಳಿಗೆ ನೀನು ಕರುಣಿಸಿದರುಂಟುಭವರೋಗದ ಧಾತು ನೋಡಿ ನಡೆಸುವ ಮಂತ್ರಿಭವರೋಗದಿ ಕಡೆಹಾಯ್ವುಪಾಯವ ತೋರಿಸೊಭಗವದನುಗ್ರಹ ಎನ್ನಮೇಲೆ ಪರಿಪೂರ್ತಿಸಿಭವನ ಬಿಡಿಸದೆ ಭಕುತಿಯೆನಗೆ ಇತ್ತುಭವಹಾರಿ ಚೆಲ್ವ ಗೋಪಾಲವಿಠಲನ ಅನು-ಭವಕೆ ತಂದಿತ್ತೆನಗೆ ಬಹುಪಂಥದಲ್ಲಿರಿಸೊ ೩

ಈ ಕೀರ್ತನೆಯಲ್ಲಿ ಅಣುಮಹತ್ತುಗಳಲ್ಲಿ
೪೨
ಮುಖ್ಯಕಾರಣ ವಿಷ್ಣು ಸ್ವತಂತ್ರನೆಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ ಪ.
ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ೧
ಧ್ವನಿ ವರ್ಣಉಭಯ ಶಬ್ದದ ವಾಚ್ಯನು ನೀನೆಗುಣದೇಶಕಾಲ ಕರ್ಮದನು ನೀನೆತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ ೨
ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭ ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು ಆದೆ ಕೃಪಾಳುವೆ ಶ್ರೀಶ ೩
ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-ಚೇತನನು ಸರಿ ನೀನು ಸುಮ್ಮನಿರಲುಯಾತರವ ನಾನಯ್ಯ ನಿನ್ನಧೀನವು ಎಲ್ಲಚೇತನನಹುದೊ ನೀ ಚಲಿಸೆ ಚಲಿಸುವೆನು ೪
ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆತಿಳಿಸೊ ಸೋತ್ತುಮರೆಲ್ಲ ತಿಳಿದ ಶೇಷತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿಚಲಿಸದಲೆ ಮನ ನಿಲಿಸೊ ಗೋಪಾಲವಿಠಲ ೫

ಗುರುರಾಘವೇಂದ್ರ ಸ್ವಾಮಿಗಳನ್ನು ಕುರಿತ
೭೬
ಮುನಿಯ ನೋಡಿರೊ ಮುಕುತಿಧನವ ಬೇಡಿರೊ ಪ.
ಜನುಮರಹಿತನಾಗಿ ನಿಂದು ಘನವರವೀರ ರಾಘವೇಂದ್ರ ಅ.ಪ.
ಸಂತರಗೂಡಿ ಸಕಲ ಚಿಂತೆಯ ಬಿಡಿಪಂಥವನಾಡಿ ನಾನೆಂತೆಂಬೋದು ಬಿಡಿಅಂತರಂಗದಲ್ಲಿ ಹರಿಯ ಚಿಂತಿಸಿ ಚಿತ್ತದಲ್ಲಿ ೧
ಗೋಳಕತ್ರಯ ಇನ್ನು ಕೇಳು ನಿರ್ಣಯಆಲೋಚನೆಯಲ್ಲಿ ಶೀಲಮೂರ್ತಿಯಾಳನ ಸಹಿತ ಇಪ್ಪನಲ್ಲಿ ಬಹಳ ಫಲವನೀವುತಲಿ ೨
ಮಂದಜಗವನು ಪೊರೆಯೆ ಒಂದು ರೂಪದಿಬಂದು ಹರಿಯು ತಾನಿಲ್ಲಿ ನಿಂದೀರೂಪದಿಸುಂದರಾಂಗ ಗೋಪಾಲವಿಠಲ ತಂದು ಫಲವನೀವುತಿಪ್ಪ ೩

ಮೃತ್ಯು ಮನುಷ್ಯನನ್ನು ಸದಾಕಾಲ
೪೩
ಸುಳಾದಿ
ಧ್ರುವತಾಳ
ಮೃತ್ಯು ಕಾದಿಹುದಿನ್ನು ವ್ಯರ್ಥವೇತಕೆ ದಣಿವೆಅರ್ತುಕೊ ಇದೆವೇಳೆ ಮರ್ತು ಕೆಡದೆತೀರ್ಥಪಾದನ ಪಾದಕೀರ್ತನೆ ಮಾಡು ಮನದಿಸ್ಫೂರ್ತಿಯ ಮಾಡುವನು ಸಾರ್ಥಕಾಗಿರಾತ್ರಿಹಗಲು ನೀ ತ್ರಿಮೂರ್ತಿಯ ಮರೆಯದೆಗಾತ್ರ ಉಪಯೋಗದ ಚಿಂತೆ ತೊರೆದುಅರ್ಥ ನಿನಗೆ ಮುಖ್ಯ ಅರ್ತುಕೊ ಆವುದೆಂದುವಾರ್ತೆಯ ಬಿಡು ಒಲಿಸಬೇಡ ಅನ್ಯಶ್ರೋತ್ರ ಜಿಹ್ವೆ ನಾಸಿಕಮಾತ್ರದಿ ವಿಷಯದಲ್ಲಿಅರ್ತು ಸಾಧಿಸು ಎಲ್ಲ ಶ್ರೀಹರಿಯಮರ್ತರೆ ಮರೆವೆ ಅರ್ತರೆ ಅರಿವೆನೆಂಬಸ್ಫೂರ್ತಿ ಬರುತಿರಲೊ ಆರ್ತನಾಗಿ ಶಾಸ್ತ್ರಪ್ರತಿಪಾದ್ಯ ಮೂರುತಿ ತಿಳಿದು ಮನದಿಸ್ತೋತ್ರವ ಮಾಡು ನೀ ಸತ್ಪಾತ್ರದಿಂದಯಾತ್ರೆಯು ತೀರ್ಥಗಳು ಎಲ್ಲ ಇದರೊಳುಂಟುಮರ್ತು ಬಿಡಬೇಡವೊ ಶ್ರೀಹರಿಯಕ್ಷೇತ್ರಜ್ಞನಮ್ಮ ಸಿರಿ ಗೋಪಾಲವಿಠಲಮೂರ್ತಿಮಂತನಾಗಿ ಇಪ್ಪ ಎಲ್ಲ ಸ್ಥಳದಿ ೧

ಮಠ್ಯತಾಳ
ಧನವೋದನವು ಇನ್ನು ಧನದೊಳಗಿಪ್ಪನ್ನನೆನೆದು ತೆಗೆದುಕೊ ಶೋಧನಮಾಡಿ ನೋಡಿತನುವಿಗೆ ಕೆಲಸವಿಡು ತನುಬಂಧುಗಳ ನೋಡುಎಣಿಕೆಗೆ ತಂದು ಭಾಗವನು ಮಾಡು ನಾಲ್ಕುಎಣಿಸುತಲ್ಲಲ್ಲಿ ನೆನೆ ಎಲ್ಲ ಸ್ಥಳದಿಗುಣ ಹರಿಯದೆಂದು ಗುಪ್ತನಾಗಿ ಇನ್ನುಅಣುಘನಪರಿಪೂರ್ಣ ಗೋಪಾಲವಿಠಲಅನಿಮಿತ್ತ ಬಂಧ್ವೆಂಬ ಗುಣವುಂಟವನಿಗೆ೨

ರೂಪಕತಾಳ
ಒಂದು ಅರ್ಥವು ನಿನಗೆ ದೊರಕಿದಡಾಯಿತೆಚಂದದಿ ಚಿಂತಿಸು ಅನಂತಪರಿಯಲ್ಲಿಒಂದುಭಾಗ ದೇವಸಮುದಾಯಕ್ಕೆ ಕೊಡುಒಂದುಭಾಗ ಪಿತೃಗಳಿಗೆ ಇನ್ನು ಮಾಡುಒಂದುಭಾಗ ಪರಿವಾರ ಬಂಧುಗಳಿಗೆಚಂದದಿ ಕೊಟ್ಟು ಆನಂದ ಉಣುಕಂಡ್ಯನಂದಗೋಪನ್ನ ಕಂದ ಗೋಪಾಲವಿಠಲನ್ನಚಂದದಿ ನಿನ್ನ ಮನಮಂದಿರದೊಳು ತಿಳಿ ೩

ಝಂಪೆತಾಳ
ಜ್ಞಾನವೆ ಮುಖ್ಯಸಾಧನ ನಿನಗೆ ನೋಡುಏನು ಧನದಿಂದಾಗೊ ಕರ್ಮವದರೊಳಗುಂಟುಪ್ರಾಣಹಿಂಸರಹಿತಕರ್ಮ ಮಾಡು ನಿತ್ಯಶ್ರೀನಿವಾಸನು ಅದಕೆ ಮೆಚ್ಚುವನುಜ್ಞಾನಮಯಕಾಯ ಗೋಪಾಲವಿಠಲರೇಯಕಾಣಿಸುವ ನಿನಗೆ ಕರುಣವಮಾಡಿ ನಿರುತ ೪

ತ್ರಿಪುಟತಾಳ
ತನುವು ಮಂಟಪಮಾಡು ಮನವೆ ಪೀಠವ ಇಡುನೆನೆದು ಕುಳ್ಳಿರಿಸು ನಿನ್ನ ಒಳಗಿದ್ದ ಮೂರ್ತಿಯಧ್ಯಾನ ಆವಾಹನಾದಿಗಳ ನೆನೆದು ಅಲ್ಲಿಪ್ಪಅಣುಮಹಾಮೂರ್ತಿಗೆ ಅಭಿಷೇಕ ಮಾಡಿಸುಗುಣಮೂರರೊಳಗಿದ್ದ ಹರಿಯ ನೆನೆದುಜಿನಸು ವಸನಾಭರಣ ಧೂಪದೀಪವ ಮಾಡಿನೆನಸು ಗಂಧ ಪುಷ್ಪವನು ಮಿಕ್ಕಾದದ್ದೆಲ್ಲಗುಣ ಮೂರುವಿಧದ ಪದಾರ್ಥಗಳನ್ನೆಲ್ಲನಿನಗೆ ಒಂದು ಉದಕಮಾತ್ರ ದೊರಕಿದರೆಇನಿತು ಪರಿಯು ಎಲ್ಲ ಅದರಿಂದ ಚಿಂತಿಸೊಧನದ ಪೂಜೆಗೆ ಅತ್ಯಾಯಾಸಪಡಲಿಬೇಡಘನದೈವ ನಮ್ಮ ಗೋಪಾಲವಿಠಲರೇಯನಿನಗೆಷ್ಟುಪರಿಯಲ್ಲಿ ಪೊರೆವನವನ ತಿಳಿ ೫

ಅಟ್ಟತಾಳ
ಒಳಗೆ ಬಂದರೆ ನಿನ್ನ ಒಳಗೆ ಇರುತಲಿಪ್ಪಸುಳಿಯುತಿಪ್ಪ ನಿನ್ನ ಸುತ್ತ ಬಿಡದೆ ಬೆನ್ನಹಲವುಪರಿಕರ್ಮ ನಿನಗಾಗಿ ಮಾಡುತ್ತಚೆಲುವ ನಿರ್ಲಿಪ್ತನ್ನ ತಿಳಿಯದೆ ಕೆಡುವಿ ಯಾಕೆಸುಲಭವಾಗಿ ಕರತಳದಲ್ಲಿದ್ದಂಥಫಲವ ನೀ ಕಾಣದೆ ಬಲು ದಣಿಸುವುದೇನೊಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿಚೆಲುವ ಗೋಪಾಲವಿಠಲರೇಯನ ನೀನುಗಳಿಗೆ ಮರೆಯಬೇಡ ಬಲುಪ್ರಿಯಾ ಬಲುಪ್ರಿಯಾ ೬

ಆದಿತಾಳ
ಈವಾಗ ಆವಾಗ ಎಂಬೋದು ಬೇಡವೊದೇವನ ಸ್ಮರಣೆಯು ಬಾಹುದೆ ಕಾಲವುಪಾವಕ ಜಲದಲ್ಲಿ ಆ ವಾಯು ವಿಪ್ರರುಆವ ಸೂರ್ಯ ಅಧಿಷ್ಠಾನದಲ್ಲಿದ್ದುದೇವನ ಸ್ಮರಣೆಯು ಬರುತಿರಲಿ ಕಂಡ್ಯಾಕಾವನು ಬಿಡನಿನ್ನು ಗೋಪಾಲವಿಠಲ ೭

ಜತೆ
ಗೃಹಮೇಧಿ ಮಾಡಿ ನಿನ್ನ ಗೃಹದೊಳಗಿಪ್ಪಂಥಶ್ರೀಹರಿ ಗೋಪಾಲವಿಠಲನ್ನ ನೆನೆಕಂಡ್ಯಾ

ಲೌಕಿಕದಲ್ಲೇ ಮುಳುಗಿರುವ ತಮ್ಮನ್ನು
೪೪
ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ಪ.
ತನುವು ತನ್ನದು ಅಲ್ಲ ….ತನುವಿನ ಸಂಬಂಧಿಗಳೆಂಬೊ ಅವರ್ಯಾರೊನಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಂಗಳಅನುಭವ ಹಿಂದಿನ ದೇಹದಂತರ ಅರಿಯೆವೊ ೧
ನಿನ್ನ ಹಂಬಲಿಸದೆ ಅನ್ಯ ವಿಷಯಗಳಿಗೆನ್ನನೊಪ್ಪಿಸುವದು ನೀತವೆಮನ್ನಿಸಿ ದಯದಿ ನೀ ಯನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ ೨
ಇಂದ್ರಿಯಂಗಳು ವಿಷಯಂಗಳಿಗೆಳೆಯೆ ಗೋ-ವಿಂದಯೆನ್ನ ವಶಕೆ ಬಾರದುಇಂದಿರೆಯರಸ ಬ್ರಹ್ಮೇಂದ್ರವಂದಿತ ಸುಖಸಾಂದ್ರ ಭವಮೋಚಕ ನಮೋ ನಮೋ ೩
ಅರಿತು ಅರಿತು ಯನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿಮ್ಮ ದರುಶನವಲ್ಲದೆಮರಳು ನೀಗುವ ಬಗೆ ಕಾಣೆನೊ ೪
ಎಂದಿಗೆ ನಿನ್ನ ಚಿತ್ತಕ್ಕೆ ಬರುವದೊ ರಂಗಅಂದೆ ಉದ್ಧರಿಸಯ್ಯ ಎನ್ನನುಸುಂದರವಿಗ್ರಹ ಗೋಪಾಲವಿಠಲ ಸುಖ-ಸಾಂದ್ರ ಭವ ಮೋಚಕ ನಮೋ ನಮೋ ೫

ಮಂತ್ರಾಲಯದ ಗುರುರಾಘವೇಂದ್ರರ
೭೭
ರಥವನೇರಿದ ರಾಘವೇಂದ್ರರಾಯ ಗುಣಸಾಂದ್ರ ಪ.
ಸತತ ಮಾರ್ಗದಿ ಸಂತರ ಸೇವಿಪರಿಗೆಹಿತದಿಂದಲಿ ಮನೋರಥವ ಕೊಡುವೆನೆಂದು ಅ.ಪ.
ಚತುರದಿಕ್ಕುವಿದಿಕ್ಕುಗಳಲ್ಲಿ ಹರಿವೊ ಜನರಲ್ಲಿಮಿತಿಯಿಲ್ಲದೆ ಬಂದು ಓಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿ ಹರಿಗೆಗತಿಪೇಳದೆ ಸರ್ವಥಾ ನಾ ಬಿಡೆನೆಂದು ೧
ಅತುಳಮಹಿಮನೆ ಆ ದಿನದಲ್ಲಿ ದಿತಿಜವಂಶದಲಿಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮಮತಿಯಲ್ಲಿಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-ಪಿತನೊಲಿಸಿದ ಜಿತ ಕರುಣದಲಿ ೨
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರಪತಿತರುದ್ಧರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರಮಂತ್ರಾಲಯದೊಳು ಶುಭವೀಯುತ ೩

ಯದುಗಿರಿಸೀಮೆಯ ಕಾಮವರ
೬೬
ರಾಮದೂತನ ಪಾದತಾಮರಸವ ಕಂಡಆ ಮನುಜನೆ ಧನ್ಯನು ಪ.
ಶ್ರೀಮನೋಹರನಂಘ್ರಿ ಭಜಕ-ಸ್ತೋಮಕುಮುದಕೆ ಸೋಮನೆನಿಸುವಭೂಮಿಯೊಳೆದುಗಿರಿಯ ಸೀಮೆಯಕಾಮವರದೊಳು ಪ್ರೇಮದಿಂದಿಹಾ.ಪ.
ಕೋತಿರೂಪದಿ ರಘುನಾಥನಾಜ್ಞೆಯನಾಂತುಪಾಥೋದಧಿಯ ಲಂಘಿಸಿಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನು ಕಂಡೆರಗಿ ದಶಮುಖ-ಪೋತ ಖಳಕುಲವ್ರಾತ ಘಾತಿಸಿಸೀತೆವಾರ್ತೆಯ ನಾಥಗರುಹಿದ ೧
ಪಾಂಡುಸುತನೆ ಪ್ರಚಂಡಗದೆಯನು ದೋ-ರ್ದಂಡದೊಳು ಧರಿಸುತಲಿಮಂಡಲದೊಳು ಭಂಡಕೌರವಚಂಡರಿಪುಗಳ ಖಂಡ್ರಿಸಿ ಶಿರಚೆಂಡಾಡಿ ಸತಿಗೆ ಕರುಳಿನದಂಡೆ ಮುಡಿಸಿದುದ್ದಂಡವಿಕ್ರಮ ೨
ಧಾರುಣಿಯಲಿ ದ್ವಿಜನಾರಿಗರ್ಭದಿ ಬಂದುಮೂರೊಂದಾಶ್ರಮ ವಹಿಸಿಧೀರ ನೀ ಏಳಧಿಕ ತ್ರಿದಶಸಾರ ಗ್ರಂಥಗಳ್ವಿರಚಿಸುತ ಮಹ-ಶೂರ ಶ್ರೀ ಗೋಪಾಲವಿಠಲನಚಾರು ಚರಣಕೆ ಅರ್ಪಿಸಿದ ಗುರು ೩

ರಾಘವೇಂದ್ರಸ್ವಾಮಿಗಳನ್ನು ಕುರಿತ
೭೮
ವಂದಿಸಿ ನೋಡುವ ಬಾರೆ ಇಂದುಮುಖಿಯಳೆ ರಾಘ-ವೇಂದ್ರರ ವೃಂದಾವನವನು ಹಿಂದೆ ಮಾಡಿದ ಸುಕೃತ-ದಿಂದ ಹರಿ ಇವರಲ್ಲಿ ನಿಂದು ತಾ ಪೂಜೆಯಗೊಂಬುದ ಪ.
ಬಹುಜನುಮಗಳಲ್ಲಿ ಅಹಿಶಾಯಿ ಇವರಿಂದರಹಸ್ಯ ಅರ್ಚನೆಯ ಕೊಂಡು ಇಹಲೋಕದಲ್ಲಿ ಇವರಮಹಿಮೆ ವ್ಯಕುತಿ ಮಾಡ್ದ ಸ್ವಾಹಾಕಾರಿಗಳು ಸರ್ವರಸಹಿತ ಒಂದಂಶದಿ ಶ್ರೀಹರಿ ತಾನಿಲ್ಲಿ ನಿಂದುಇಹಪರ ಫಲಂಗಳನು ಪಾಲಿಸಿ ನಮೋ ಎಂದು ಬಂದುದೇಹಿ ಎಂದವರಿಗಿನ್ನು ವಹಿಸಿ ವರಗಳ ನೀಡುವ ೧
ನರಹರಿರೂಪ ತಾನಾಗಿ ಪರಿಪರಿಯಲಿ ಬಂದಂಥದುರಿತ ಬ್ರಹ್ಮೇತಿಗಳು ದುಷ್ಟ ಕರೆಕರೆ ರಾಕ್ಷಸಜನ್ಮ ಪಡೆದು ದಣಿಪೊ ಅವನೆಲ್ಲ ದೂರದಿ ಓಡಿಸುವ ಬಿಡದೆಸಿರಿರಾಮರೂಪಾಗಿ ಅನ್ನ ದೊರೆಯದೆ ಬಂದವರಿಗೆಸ್ಥಿರವಾದ ಪಟ್ಟವಗಟ್ಟುವ ಹರಿಕೇಕಿಗಳು ? ಶುಭ ಉಚ್ಚವರಸಂಧಾನ ವೈಭೋಗವು ಸಿರಿಕೃಷ್ಣನಾಗಿ ನಡೆವ ೨
ವ್ಯಾಸರೂಪನಾಗಿ ಇಲ್ಲಿ ವಾಸವಾಗಿ ಬಂದಬಂದದಾಸಜನರ ಅಜ್ಞಾನವ ಲೇಶವಿಡದೆ ಪರಿಹರಿಸಿದೋಷಗಳ ತರಿದು ಉಪದೇಶ ಮಾಡುವನು ಸುತತ್ವಶೇಷವೇಷ ಪ್ರಹ್ಲಾದ ವ್ಯಾಸಮುನಿಯೆ ರಾಘವೇಂದ್ರ-ಗೀಸು ಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾ-ಡಿಸಿ ಈ ಸುಖ ಇಹಪರದಲ್ಲಿ ಶಾಶ್ವತವಾಗಿತ್ತು ಸಲಹುವ ೩
ಅನಿರುದ್ಧಾದಿ ನಾಲ್ಕು ಮೂರ್ತಿ ಘನವಾಗಿ ತಾವಿದ್ದು ಪ್ರತಿದಿನದಿನಕತಿಶಯವಾಗಿ ದಿನಕರನಂತೆ ಸರ್ವತ್ರಮನೆಮನೆಯಲ್ಲಿ ತಾವಿದ್ದು ಅನುವಾಗಿ ಪೂಜೆಯಗೊಂಬರಾರುಕನಸು ಜಾಗರದಿ ಬಂದು ಎಳ್ಳನಿತು ಪೂಜೆ ತಪ್ಪಿದರೆದಣಿಸಿ ದಂಡಿಸಿ ಮಾಡಿಪ್ಪರು ಜನರು ಮಾಡಿದ ಸುಕೃತಾನುಕೂಲವೇನು ಒದಗಿತು ಮನೆಯ ಪುಣ್ಯ ಏನು ಏನು ಎಂಬೆ ೪
ಆವ ತೀರ್ಥದಲ್ಲಿ ಪೋಗಿ ಸೇವಿಸಿ ಬಂದುದಕಿಂತತಾವಧಿಕವಾಗಿ ಫಲವ ಈವನು ಶ್ರೀಹರಿ ಲಕುಮಿ-ದೇವಿಸಹಿತವು ಇದ್ದು ಕೋವಿದಗಿನ್ನು ಬಿಡದೆಪಾವನ ಮಂಗಳಕ್ಷೇತ್ರ ಆವಾವ ವರ್ಣಿಪನೊ ಇತ್ತಭೂವಲಯದೊಳಗೆ ಮಹಿಮದೇವ-ದೇವೇಶ ಕೃಷ್ಣ ಗೋಪಾಲವಿಠಲ ಆವಾಗ ಸೇವಿಸಿಕೊಳುತಿಪ್ಪ ೫

ವಾದಿರಾಜರನ್ನು ಕುರಿತ ಸ್ತುತಿ
೭೩
ವಾದಿರಾಜ ಮುನಿಪ ಹಯಮುಖಪಾದ ಕಮಲ ಮಧುಪ ಪ.
ನೀ ದಯದಲಿ ತವ ಪಾದಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು ಅ.ಪ.
ಮೂಷಕ ಬಿಲದಿಂದ ಉದರ ಪೋಷಕ ಬರಲಂದುವಾಸುಕಿ ಭಯದಿ ನಿಮ್ಮಾಸನದೆಡೆ ಬರೆಕ್ಲೇಶ ಕಳೆದು ಸಂತೋಷಗೈಸಿದೆ ೧
ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನನಿಂದರಿಸತಿ ಆನಂದದಿಂದ ಜನ-ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ2
ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆಖ್ಯಾತಿಯಿಂದ ಬಹು ಮಾತನಾಡಿ ಶ್ರೀ-ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ ೩
ತುರಗವದನ ಪಾದ ಭುಜ(ದಲಿ)ಗಳಲಿಧರಿಸಿಕೊಂಡ ಮೋದ ಕಡಲೆಮಡ್ಡಿಯನುಕರದಿಂದುಣಿಸಿದ ಗುರುವರಶೇಖರ ೪
ಆ ಮಹಾ ಗೋಪಾಲವಿಠಲ ತಾಮರಸದಳಗಳಧೀಮಂತರಿಗೆ ಸುಕಾಮಿತವನು ಕೊಡುವಆ ಮಹಾಮಹಿಮ ೫

ವಿಜಯದಾಸರನ್ನು ಕುರಿತ ಕೀರ್ತನೆ
೮೫
ವಿಜಯ ಆರಿಂದಲೆನಗೆ ಆಗುವುದೊವಿಜಯದಾಸರ ಕರುಣದಿಂದ ಬರುವುದು ಪ.
ಪರತತ್ವ ವಿಚಾರ ಪರಮನಿಷ್ಠರಸಂಗಪರಿಪರಿಯ ಸುಕರ್ಮ ಪರಿಣಾಮವುಪರವಾದಿಗಳ ತುಚ್ಛೀಕರಿಸಿ ಅವರುಕ್ತಿಗಳಹರಿಯೆ ಸರ್ವೋತ್ತಮನೆಂದರಿದು ಬಾಳುವಂಥ ೧
ಭೂಸುರರಸೇವೆ ಯಾತ್ರೆ ದಾನ ಧರ್ಮಗ್ರಾಸ ಉಣ ಉಡುವೋದು ಲೇಸು ಎಲ್ಲವಾಸುದೇವನ ಗುಣಗಳಾಸೆಯು ಕೇಳುತಕ್ಲೇಶ ತಟ್ಟದೆ ಹರಿವುಪಾಸನೆಯ ಮಾಳ್ಪಂಥ ೨
ಜ್ಞಾನಿಗಳಿಂ ಮಾನಕ್ಷೆÆÃಣಿಯೊಳಗೆ ಶಶ್ಯು ?ಹೀನ ಜನರಿಗೆ ದೈನ್ಯವನು ಬಡದೆನಾನಾ ಪರಿ ಕವನಗಳು ಜ್ಞಾನಿ ಸಮ್ಮತ ರಚಿಸಿಶ್ರೀನಿವಾಸನ್ನ ದಾಸಾನುದಾಸೆಂಬಂಥ ೩
ಬಂಧು ಜನಸಂದಣಿ ಚೆಂದುಳ್ಳ ಆಭರಣಾ-ನಂದದಿ ಉಡುಗೊರೆ ಉತ್ಸಾಹವುಇಂದಿರೇಶನ ಸ್ತೋತ್ರದಿಂದಲೆ ದಿನವನ್ನುಒಂದು ಗಳಿಗೆ ಮರೆಯದಂದದಿ ಇರುವಂಥ ೪
ಅಪಾರ ಜನುಮ ಇವರ ಪಾದ ಆಶ್ರೈಸಿಶ್ರೀಪತಿಯಧ್ಯಾನ ಮಾಡಿದ ಕಾರಣಗೋಪಾಲವಿಠಲನ್ನ ರೂಪಧ್ಯಾನದಿ ನಿಲಿಸೀಇ ಪರಿಯಲಿ ಎನ್ನ ಕಾಪಾಡು ಎಂತೆಂಬ ೫

ವಿಜಯದಾಸರನ್ನು ಕುರಿತ ಕೀರ್ತನೆ
೮೬
ವಿಜಯರಾಯರ ನೆನೆದು ದಿಗ್ವಿಜಯ ಮಾಡಿರೊರುಜುಮಾರ್ಗ ಪಿಡಿಸಿನ್ನು ನಿಜಪುರಕೆ ಸೇರಿಪರೊ ಪ.
ಶ್ರವಣ ಮನನವು ನಿಧಿಧ್ಯಾಸನವು ಮಾಡುವಾಗಕವನಗಳ ರಚಿಸೆ ನಿತ್ಯ ಕುಳಿತಿರುವಾಗಭುವನೇಶನ ತತ್ವ ವಿವರವನ್ನು ಮಾಡುವಾಗಪವನಮತ ಓದಿ ಸದಾಚಾರ ಕರ್ಮವು ಮಾಡುತ ೧
ಹರಿದಿನದಲಿ ಉತ್ಸಾಹ ಜಾಗರ ಮಾಡುವಾಗಹರಿಯಾತ್ರೆ ತೀರ್ಥಗಳ ಚರಿಸುವಾಗಪರಿಪರಿವ್ರತ ಚಾಂದ್ರಾಯಣವಾಚರಿಸುವಾಗ ೨
ಅರಸುಗಳಿಂದ ಆದರಕೊಂಬುವಾಗಕರೆಕರೆಯ ಸಂಸಾರದಿ ತೊಳಲುವಾಗಕರವೆತ್ತಿ ದಾನವನು ಕೊಡುವಾಗ ಕೊಂಬುವಾಗದುರಿತಭಯಗಳು ತಡಹಿ ಬಿಡುವುವಾಗ ೩
ದ್ವೈತ ಅದ್ವೈತ ಪ್ರಸಂಗಗಳ ಮಾಡುವಾಗಶೈತ್ಯ ವಾತ ಪಿತ್ತ ತೊಡರಿದಾಗನೀತವಾದ ಮಂತ್ರಜಪಕೆ ಕುಳ್ಳಿರುವಾಗವಾತ ನಿರೋಧಿಸಿ ಪ್ರಾಣಾಯಾಮ ಮಾಡುವಾಗ ೪
ನರಗಳನು? ವರಗಳನು ಕೊಡುವಾಗಶರಣಜನರಿಂದ ಸೇವೆ ಕೈಕೊಳುವಾಗಮರೆಯದೆ ಹರಿಸ್ಮ್ರತಿ ಮನದೊಳಗೆ ಮಾಡುವಾಗಪರಿಪರಿಯ ಸುಖರಸವು ಸವಿವುವಾಗ ೫
ವಿ ಎಂದು ಜಪಿಸಲು ವಿರಕುತಿ ದೊರಕುವುದುಜ ಎನ್ನೆ ಜನನ ಮರಣ ನಾಶವುಯ ಎನ್ನೆ ಎಲ್ಲದಕ್ಕಿಂತ ಭಕುತ್ಯಧಿಕಿತ್ತುರಾ ಎನ್ನೆ ರಾಯ ರಾಯರನ ತೋರುವುದು ೬
ಹರಿಯೆ ನಿರ್ದೋಷ ಜ್ಞಾನಾನಂದ ಪರಿಪೂರ್ಣಹರಿಯೆ ಸರ್ವತಂತ್ರ ಸ್ವತಂತ್ರನುಸಿರಿ ಅಜ ಭವರೆಲ್ಲ ಪರಿವಾರ ಹರಿಗೆಂದುಗುರುಗತ ಗೋಪಾಲವಿಠಲನ್ನ ಸ್ಮರಿಸುತ ೭

ವಿಷಯಾಸಕ್ತಿಯಲ್ಲಿ ಮುಳುಗಿದ
೧೪೧
ವಿಷಯ ಸಂಗದಲಿಂದ ಕುಶಲವನು ಬಯಸಿದರೆ ಹಸನಾಗಿ ತೋರುವುದೆ ನಿನಗೆ ಪ.
ಅಸಮಜ್ಞಾನಿಗಳ ಧೀಯು ಮಸಳಿ ಮರುಳಾಗುವುದುಮಶಕ ನಿನಗಾವ ನೆಲೆಯೊ ಮನುಜ ಅ.ಪ.
ಭರತರಾಯನ ನೋಡು ಹರಿಣ ಕುಣಪನು ಪೋಗೆಬರಲೊರಲಿ ಪ್ರಾಣ ಬಿಡನೆಮರಳಿ ಎರಳೆಯ ಜನ್ಮವನುಭವಿಸಿ ಸಂಗವನುತರವಲ್ಲವೆಂದು ಮೊರೆಯಿಡನೆ ಮನುಜ ೧
ಮೌನಿ ವಿಶ್ವಾಮಿತ್ರ ತಾನು ಊರ್ವಶಿ ಕೂಡಿಶ್ವಾನನಾಗುತ ಪೋದನೊಏನೆಂಬೆ ದೇಹದಲಿ ಹೀನತ್ವವೈದಿ ನಿ-ತ್ರಾಣನಾದನು ನೋಡೆಲೊ ಮನುಜ ೨
ವಿಪುಳಮತಿಯಾದ ಸೌಭರಿಯು ದೃಢ ಮನಸಿನಲಿತಪವ ಮಾಡುತ ಕುಳ್ಳಿರೆಶಫರ ಶಫರಿಗಳ ಸಂಯೋಗವನು ಕಂಡು ಮನಚಪಲವಾಯಿತು ನೋಡೆಲೊ ಮನುಜ ೩
ಲೇಸಾದ ಕುಲದಲ್ಲಿ ಸಂಜನಿಸಿದಜಮಿಳನುದಾಸಿ ಸಂಗವ ಮಾಡಿದದಾಶರಾಯನ ಮಗಳ ಪರಮ ಋಷಿಯಾದ ಪ-ರಾಶರನು ಕಂಡು ಮನಗೆಟ್ಟ ಮನುಜ ೪
ಅಂದಣವನೇರಿದ ನಹುಷರಾಯನ ನೋಡುಇಂದ್ರರಾಣಿಯನು ಬಯಸಿಮಂದ ಅಜಗರನಾಗಿ ಬಂದ ಭೂಮಿಯಲಿ ಅದ-ರಿಂದ ಗೆಲಲೊಶವಲ್ಲವೊ ಮನುಜ ೫
ವಿಷಯದಲಿ ಮನ ಸನ್ನಿಕರ್ಷವಾದರೆ ನಿನ್ನವಶಕೆ ಬರಲರಿಯದಯ್ಯಎಸೆವ ಶ್ರುತಿ ಸ್ಮ್ರತಿಯೆಂಬ ನಿಶಾಣದಲಿ ಮಸೆಮಸೆದುವಶಮಾಡಿಕೊ ಬಿಡದಲೆ ಮನುಜ ೬
ವಿವಿಧ ಸಾಂಸಾರಿಕ ದುಃಖ ದರುಶನವಾಗೆಶ್ರವಣೀಯ ಶಾಸ್ತ್ರಂಗಳಹವಣರಿತು ಜ್ಞಾನದ್ರವಿಣರಲಿ ಕೇಳಿಕೊಬವಣೆ ದೂರಾಗುವುದೊ ಮನುಜ ೭
ಈಷಣತ್ರಯ ನಿನಗೆ ಮೋಸಗೊಳಿಸಿ ಕಡೆಗೆನಾಶವಾಗುವುದು ಕಾಣೊ ವಾಸುದೇವನ ಪರಮ ದಾಸರ ಕರುಣವನುಲೇಸಾಗಿ ಪೊಂದಿ ಸುಖಿಸೊ ಮನುಜ ೮
ಕ್ರಿಮಿ ಭಸ್ಮ ಮಲವಾಗಿ ಪೋಪದೇಹಕೆ ಬಹಳಮಮತೆಯನು ಕೊಡಲಿಬೇಡಕಮಲನಾಭನ ಪಾದಕಮಲವನು ಭಜಿಸಿ ಭವಶಮಲಗಳ ಕಳೆಕಂಡೆಯಾ ಮನುಜ ೯
ಇಂತು ಮಹಾಂತ ದೃಷ್ಟಾಂತ ತೋರಿದೆ ನಿನಗೆಭ್ರಾಂತಿ ಜ್ಞಾನವ ಕಳೆಯಲುಶಾಂತನಾಗಿರು ವಿಷಯಕಾಂತಾರದೊಳು ಬಿದ್ದುಭ್ರಾಂತನಾಗಲಿ ಬೇಡವೊ ಮನುಜ ೧೦
ದ್ರವ್ಯಕಾರಕ ಕ್ರಿಯಭ್ರಮವೆಂಬ ಭ್ರಮಣದಲಿದುರ್ವಿಷಯದಲಿ ಚರಿಸದೆಶರ್ವಪಿತಪ್ರಿಯ ಶ್ರೀಗೋಪಾಲವಿಠಲನಗುರ್ವಧಿಷ್ಠಾನದಲಿ ಭಜಿಸೊ ಪ್ರಾಣಿ ೧೧

೧೮೩
ವೇಣುಗೋಪಾಲವಿಠಲ ದಾತ ಮಹಾಪ್ರಭುವೆನಾನು ಬೇಡುವೆನು ವರವಪ್ರಾಣಿ ಈತಗೆ ಬಂದಹಾನಿ ಹಿಂದಕೆ ಮಾಡಿಕ್ಷೋಣಿಯಲಿ ನಿಲಿಸಿ ಸಲಹೊ ಸ್ವಾಮಿ ಪ.
ಸಾಧು ಜೀವರ ಸೃಜಿಸಿದುದಕೆ ಫಲವೇನಿಲ್ಲ ಬಾಧೆ ತಂದಿತ್ತ ಬಳಿಕಯಾದವ ಶತವತ್ಸರಾಯ ಮನುಷ್ಯರಿಗೆ ಮರೆಯದೆ ಇಲ್ಲದೆ ಹೋಯಿತು (?)ಬಾಧಕವೆನೆ ತನ್ನಿಂದ ಅಪರಾಧ ಆಯತ ಆದದ್ದು ಕೊರತೆ ಇನ್ನುಸಾಧುಗಳ ಸಮ್ಮತ ಸನ್ಮಾರ್ಗಪ್ರವೃತ್ತವಾದ ಜೀವಕೆ ಬರಿದೆ ಬಾಧೆಬಡಿಸುವರಿಗೆ1
ಚಿಂತ್ರಣಿಯ ವೃಕ್ಷ ವಿಷಾದಕಾರಣ ಎಲ್ಲಿ ಚಿಂತಿಪರು ಸಂತರುಗಳುಪಿಂತಿನ ಜನುಮದಲಿ ಅಪಮೃತ್ಯು ಪರಿಹರ ಚಿಂತಾಯಕ ಕಳೆದಿಲ್ಲವೆಚಿಂತೆ ತಾನಾಗಿಪ್ಪ ನಮ್ಮ ಹಿರಿಯರಿಂದ ಸಂತೋಷ ಬಡಿಸಿ ನಿನ್ನಎಂತು ಪರಿ ಆದರು ಬಂದದುರಿತವ ಕಳೆದು ಸಂತೋಷ ಮಾಡು ಮನಕೆ ಕರುಣಿ ೨
ಬಿತ್ತಿ ಬೀಜವ ಬೆಳೆಸಿ ಕೊಯ್ಯಕುಳಿತವಗೆ ಮಾರುತ್ತರವು ಭಿರಿಯಲ (?)ಕಿತ್ತು ತಾ ದಂಟುಗಳ ಬಾಹೊ ಅದರೊಳಗಾಗಿ ಪ್ರತ್ಯೇಕ ಬೆಳೆಯಿಂದಸುತ್ತಿ ತಾ ದಂಟನು ಬಿಟ್ಟುಕೊಡುವರು ಸ್ನೇಹ ಮತ್ತೆ ಬೆಳೆಯ ಮ್ಯಾಲಿಟ್ಟುಸುತ್ತ ಜನರು ಬೆಳೆಯಂತೆ ಇವನಿಂದ ಪವಿತ್ರರಾಗಿಹರು ಉಳುಹೊ ಸಲಹೊ (?) ೩
ಆವ ಜನುಮದಲಿಂದ ಸಾವವೊ ಅರಿಯೆ ನೋವು ಮೊಳಕಿನ್ನು ಬಹಳಜೀವರಾಶಿಗಳು ನೀನೆ ಬಲ್ಲೆಯೊ ಸ್ವಾಮಿ ಸೇವ್ಯ ಸೇವಕರ ಸ್ಥಿತಿಯೈಇ ವಸುಧೆಯಲ್ಲಿ ನಿನ್ನ ಶರಣರೆ ಸ್ವಲ್ಪವು ಆವ ಅಸುರರೆ ಬಹಳಸೇವಾನುಸೇವಕನ ಬಿನ್ನಪವ ನೀ ಒದಗಿ ಕೇಳಿ ಸಾಕು ಹರಿಯೆ ೪
ಪ್ರಾರ್ಥಿಸಿದೆ ನಿನ್ನ ಭಕುತನ ಅರ್ತಿಯನ್ನು ಮನದಲಿ ಸ್ಫೂರ್ತಿ ಆರದರಿಂದಲಿಕೀರ್ತಿ ನಿನ್ನದು ಭಕುತ ಸ್ವಾರ್ಥನೆಂಬ ಬಿರುದು ವ್ಯರ್ಥ ಅನ್ಯರಿಗೆ ಸ್ತುತಿಸಿಕರ್ತೃ ನೀನಾಗಿ ತಾ ನಿಂದು ಮಾಡಿಸುವಂಥ ಸತ್ಕರ್ಮಗಳು ಉಂಟುಪಾರ್ಥಸಖ ಚೆಲುವ ಗೋಪಾಲವಿಠಲ ಅಪಮೃತ್ಯು ಪರಿಹರಿಸಿ ನಿನ್ನ ಭಕ್ತನ ಸಲಹೊ ೫

ವ್ಯಾಸರಾಯರನ್ನು ಕುರಿತ ಕೀರ್ತನೆ
ಯತಿಗಳು-ದಾಸರು
೭೨
ವ್ಯಾಸರಾಯರ ದಿವ್ಯ ಪಾದಕಮಲವನು ಸೇವಿಸುವ ಭಕುತರಿಗೆ ಏಸುಜನ್ಮದ ಸುಕೃತ ಒದಗಿ ಬಂದಿದ್ದವಗೆಈ ಸೇವೆ ದೊರಕುವುದು ಸಾಸಿವೆನಿತಾದರುಪ.
ಪನ್ನಗಶಯನನ ಪರಮ ಆಜ್ಞದಿ ತಾನುಇನ್ನು ಅವತರಿಸಿ ಇತ್ತಬನ್ನೂರು ಗ್ರಾಮದಲಿ ನೆಲೆಸಿ ಬೆಳೆದು ಮತ್ತೆಸ್ತನ್ಯಪಾನಗಳಿಲ್ಲದೆಚೆನ್ನಾಗಿ ಬ್ರಹ್ಮಣ್ಯತೀರ್ಥರ ಸುತರೆನಿಸಿಸನ್ಯಾಸಾಶ್ರಮ ಕೊಂಡುಚಿನ್ನುಮಯ ಹರಿಯನ್ನು ತನ್ನ ಮನದಲಿ ನೆನೆದುಅನ್ಯ ಗಣನಿಲ್ಲದೆ ಇನ್ನು ಸಂಚರಿಸಿದ ೧
ಶಾಪಾನುಗ್ರಹ ಸಮರ್ಥಿಕೆಯುಳ್ಳ ಚೆಲುವ ನಿಜಶ್ರೀಪಾದರಾಯರಲಿತಾ ಪ್ರೇಮದಿಂದ ವರವಿದ್ಯವನು ಓದಿ ಎಲ್ಲಶ್ರೀಪತಿಗೆ ಅರ್ಪಿಸಿನ್ನುಅಪಾರ ಮಹಿಮನು ಸರ್ವೋತ್ತಮ ಹರಿಯೆಂದುಸ್ಥಾಪಿಸುತ್ತ ಸರ್ವಪರಿಲೀಇ ಪೃಥ್ವಿಯೊಳಗಿದ್ದ ಮಾಯಿಗಳರ್ಥವೆಲ್ಲವನುಭೂಪ ಸೋಲಿಸಿ ಬಹು ಪ್ರತಾಪದಿಂದಲಿ ಮೆರೆದ ೨
ಸ್ನಾನವನು ಮಾಡಿ ಅಸಂಪ್ರಜ್ಞಾತ ಸಮಾಧಿಯಲಿಧ್ಯಾನಕ್ಕೆ ಕುಳಿತಿರಲುಶ್ರೀನಿವಾಸನ ಪ್ರೇರಣಿಂದ ಸರ್ಪವು ಬಂದುನಾನಾ ಅಂಗಕೆ ಸುತ್ತಲುಜ್ಞಾನನಿಧಿ ಶ್ರೀಪಾದರಾಯ ಇದನು ತಿಳಿದುತಾನು ಮತ್ತಲ್ಲಿ ಬಂದುಜ್ಞಾನಪೂರ್ವಕದಿ ಅಹಿಯೊಡನೆ ಮಾತಾಡಿ ದೂರ-ವನು ಮಾಡಿ ನೋಡಿ ನೀನು ಮನುಜಲ್ಲೆಂದು ೩
ನಾನಾಪರಿ ಗ್ರಂಥ ನ್ಯಾಯಾಮೃತ ಚಂದ್ರಿಕೆ-ಯನು ತಾಂಡವತರ್ಕವುತಾನು ರಚಿಸಿ ದಿವ್ಯ ಉಕ್ತಿಗಳಿಂ-ದನ್ಯ ಭಾಷ್ಯಗಳ ಮುರಿದುಶೂನ್ಯವಾದಿಗಳನ್ನು ಬಾಯಿಮುಚ್ಚಿಸಿ ಅವರಜ್ಞಾನ ವೆಗ್ಗಳಿಸಗೊಡದೆಶ್ರೀನಿವಾಸನೆ ಸರ್ವೋತ್ತಮನು ಜಗಕೆಂದುತಾನು ತೋರಿಸಿ ಮಧ್ವಮುನಿಯ ಮತ ಬಲಿಸಿದ ೪
ಎರಡು ನಾಲ್ಕುಮಂದಿ ಪರಮಶಿಷ್ಯರು ಆದವರ ದಿಗ್ಗಜಗಳ ಪಡೆದುಸಿರಿ ವಾದಿರಾಜ ವಿಜಯೀಂದ್ರ ಗೋವಿಂದ ಒಡೆ-ಯರು ಪುರಂದರದಾಸರುಗುರು ಪುರಂದರದಾಸರಿನ್ನು ಮುಂತಾದಂಥಪರಿಪರಿಯ ಶಿಷ್ಯರುಗಳಬೆರೆದು ಸಕಲಶಾಸ್ತ್ರ ಒರೆದು ಅವರುಗಳನ್ನುಪರಮಶುದ್ಧರ ಮಾಡಿ ಪರಲೋಕ ತೋರಿಸಿದ ೫
ದಾನ ಮಾನವು ವ್ಯಾಖ್ಯಾನ ಸುಳಾದಿಗಳಗಾನ ಸಂಭ್ರಮದಿಂದಲಿನಾನಾಪರಿಯಲಿ ಶ್ರೀ ಕೃಷ್ಣನ ಮೆಚ್ಚಿಸಿ ದುರಿತ-ವನು ಕಾಲಲಿ ಒದೆವುತತಾನು ನೋಡದೆ ಸಂಚಿತಾಗಾಮಿಗಳ ನೀ-ಗಿನ್ನು ನೀ ಪ್ರಾರಬ್ಧ ಉಣುತದೀನರನು ಪೊರೆದಾನಂದತೀರ್ಥರ ನಿಜ ಪಟ್ಟ-ದಾನೆ ಎನಿಸಿ ಮೆರೆದು ಕ್ಷೋಣಿ ಉದ್ಧರಿಸಿದ ೬
ಮಧ್ವಮತವೆಂತೆಂಬೊ ಅಬ್ಧಿಯಲಿ ಚಂದ್ರನಂ-ತುದ್ಭವಿಸಿ ಶರಣಾರಿಷ್ಟಾದ್ವೈತ ಮತ ಕಾಲಲೊದ್ದು ಸದ್ಭಕ್ತರಿಗೆತಿದ್ದಿ ಅಮೃತವುಣಿಸಿದಗದ್ದುಗೆಯನೇರಿ ಮುನಿರಾಯ ತಾ ಕುಳಿತಿನ್ನುಪದ್ಧತಿಲಿ ಜಗವ ಪೊರೆದಪ್ರದ್ಯುಮ್ನನಾಮ ಸಿರಿ ಗೋಪಾಲವಿಠಲನಹೃದ್ವನಜದೊಳು ತೋರಿ ಹಿತದಿಂದ ಪಾಲಿಸುವ7