Categories
ರಚನೆಗಳು

ಗೋಪಾಲದಾಸರು

ಈ ಶರೀರವನ್ನು ಒಳಗೊಂಡಂತೆ
೧೨೪
ಸುಳಾದಿಧ್ರುವತಾಳ
ಎಲ್ಲೆಗೇಹ ಎಲ್ಲೆದಯ್ಯಾ ವ್ಯಕ್ತಿ ಕ್ಷೇತ್ರಎಲ್ಲೆದಯ್ಯಾ ಗ್ರಾಮ ಸ್ಥಳವು ಎಲ್ಲೆದಯ್ಯಾ ದೇಶವಾಸಎಲ್ಲೆದಯ್ಯಾ ಧನವು ಧಾನ್ಯ ಎಲ್ಲೆದಯ್ಯಾ ಸತಿಯು ಸುತರುಎಲ್ಲೆದಯ್ಯಾ ವಸನ ಪಶುವು ಎಲ್ಲೆದಯ್ಯಾ ಬಂಧು ಬಳಗಎಲ್ಲೆದಯ್ಯಾ ಒಡವೆಗಳು ಎಲ್ಲೆದಯ್ಯಾ ಕರಿ ಊಷ್ಟ್ರಗಳುಎಲ್ಲೆದಯ್ಯಾ ಆಳು ವೇಳ್ಯ (ವ್ಯಾಳೆ)ಎಲ್ಲೆದಯ್ಯಾ ಕೂಪ ತಟಾಕ ಎಲ್ಲೆದಯ್ಯಾ ವೃಕ್ಷಗಳುಎಲ್ಲೆದಯ್ಯಾ ಮುತ್ತು ಮಾಣಿಕ್ಯನಿಲ್ಲದೆ ಪೋಗೊ ನೀರಗುಳ್ಳೆಯಂತೆ ದೇಹಕ್ಕೆಇಲ್ಲದ ಕರ್ತತ್ವ ಇನ್ನೆಲ್ಲಿಂದ ಪಚ್ಚಿಕೊಂಬಿಸಲ್ಲದು ನಿನಗೀವಾಕು ಎಲ್ಲಿ ಪೋದರು ಅನ್ಯಗೆಲ್ಲಲಾರೆಯೊ ಜೀವ ಬಲ್ಲವಿಕೆಲ್ಲ ನಿನಗೀಲ್ಲ ನನ್ನದೆಂಬೋದು ಒಳಿತಲ್ಲವೊ ನಿನಗೆನಿಲ್ಲಿಸಿ ನಿನ್ನ ಮುಂದೆ ಎಲ್ಲವು ಹೋಹಾಗಕಲ್ಲು ಹೊಡೆದಂತೆ ನೀ ಮೆಲ್ಲನೆ ನೋಡುತಿಪ್ಪೆನಿಲ್ಲದೆ ನೀನು ಬಿಟ್ಟು ಚೆಲ್ಲಿ ಹೋಗುವಾಗಹುಲ್ಲುಕಡ್ಡಿಯನ್ನ ನೀ ಬಾಯಲ್ಲಿ ಕೊಂಡುಹೋಗುವ್ಯಎಲ್ಲರೂಪದಲ್ಲಿ ಶ್ರೀವಲ್ಲಭಾಲ್ಲಲ್ಲಿ ತಾನೆ ಇದ್ದು ಜೀವರೆಲ್ಲರ ಪಾಲಿಸಿನ್ನುಗುಲ್ಲು ಎಬ್ಬಿಸಿ ಪ್ರಳಯದಲ್ಲಿಎಲ್ಲರ ನುಂಗೊ ಬಲ್ಲಿದರಂಗ ನಮಗೆಲ್ಲರಿಗೊಡೆಯ ಕಾಣೊಮಲ್ಲಮರ್ದನರಂಗ ಗೋಪಾಲವಿಠಲ ತಾಬಲ್ಲದೆ ಮಾಡಿಸುವ ಎಲ್ಲ ಕಾಲದಲಿನ್ನು ೧

ಮಠ್ಯತಾಳ
ಕಣದ ಒಳಗೆ ಧಾನ್ಯ ಒಣಗ ಹಾಕಿದರೆಮನೆಗೆ ತರಲಾಗಿ ಕಣದಲಿ ಉಳಿದವೆ ಅಷ್ಟುಒನಕೆಯಿಂದಲಿ ಧಾನ್ಯ ಘನವಾಗಿ ಕುಟ್ಟಿದರೆಒನಕೆ ನುಂಗಿದವೆಷ್ಟು ಅನ್ಯವರಿತು ನೋಡಿಶುನಕಗೆ ಪುಷ್ಕರಣಿ ಮಲ್ಕರ್ಣಿ ? ಇರಲುದಣಿ ಕುಡುವುದೆ ಉದಕ ಕೊನೆನಾಲಿಗಿಲಲ್ಲದೆಮಣಕಕೆ ಸೇರು ತುಪ್ಪ ಮನೆಯೊಳಗಾದರೆಮಣಕಕೆ ಬಂದುದೇನು ಮಡಿ ? ಮಾತ್ರವುಕನಸಿನೊಳಗೆ ಹಣವು ಕಂಢಾಗೆ ಕೊಟ್ಟರೀಣಿಸಿ ಕೊಡಬಲ್ಲ್ಯಾ ಋಣದವ ಬೇಡಿದರೆಮುನಸು ಗುಟ್ಟಿದವನ ಮುದ್ದಾಡಿದರಿನ್ನುಮನಸಿಗೆ ಹರುಷತ್ವ ಮದಡ ಜೀವವೆ ಕೇಳುಧನತೂಗೋ ತಕ್ಕಡಿ ಮನೆಯೊಳಗಿರಲಿಕ್ಕೆಧನ ಹೋದರೆ ತಕ್ಕಡಿನ್ನ ಕೇಳೋರುಂಟೆಗುಣಹೀನ ಜೀವ ನಿನಗೆ ಅಲ್ಲದವೆಲ್ಲ ನನಗೆನನ್ನದೆಂಬೊದೆನಿತು ನೀತಿಯ ಕಾಣೊಸನಕಾದಿಗಳೊಡೆಯ ಗೋಪಾಲವಿಠಲನ್ನಾನುವಾಗಿ ನೀ ತಿಳಿದು ಗುಣವುಪಾಸನೆ ಮಾಡು ೨

ತ್ರಿಪುಟತಾಳ
ಆರಿಗೆ ವಶವಲ್ಲದಲಂಕೆಯ ಕಟ್ಟಿದಧೀರರಾದಂಥ ಸುರರಿಂದ ಪೂಜೆಯಗೊಂಡಆ ರಾವಣನು ಕಡೆಗೆ ಆದ ತೆರನು ನೋಡುಆರಾದರು ಅವಗೆ ಆಯುಷ್ಯವಿತ್ತರೆಆರಿಂದ ಮರಣವು ಆಗಲಿಕ್ಕಿಲ್ಲವೆಂದುಆ ರುದ್ರನಿಂದ ವರವನು ಪಡಿದಿದ್ದಂಥಆ ರಕ್ಕಸ ಹಿರಣ್ಯಕರಾದರುಳುಹಿದರೆಆರಿಗೆ ಆರಿಲ್ಲ ಹಾರದಿರೆಲೊ ಬರಿದೆಕ್ರೂರಕಂಸನ ನೋಡು ದುರಿಯೋಧನರ ನೋಡುಆರು ಇವರಿಗೆ ತನ್ನವರು ಇದ್ದಿಲ್ಲವೆದೂರು ಮಾತ್ರವೆ ತನ್ನವರು ತನ್ನದೆಂಬೋದುಆರಿಗಾರಿಲ್ಲ ವಿಚಾರವ ಮಾಡಲುಮೂರು ದಿನದ ಭಾಗ್ಯ ಸ್ಥಿರವೆಂದು ನಂಬಿ ನೀಕಾರಣಕರ್ತನ ಮರೆಯದಿರುಸೇರು ಈತನವರ ದ್ವಾರದ ಬಳಿಯಲ್ಲಿಕಾರುಣ್ಯದಿ ಪಾಲಿಸುವ ಕರುಣಾಕರರಂಗಮಾರಜನಕ ಚೆಲುವ ಗೋಪಾಲವಿಠಲನ್ನಆರುಮೂರುಭಕ್ತಿಲಿ ಬಾರಿಬಾರಿಗೆ ಸ್ಮರಿಸೊ ೩

ಅಟ್ಟತಾಳ
ನಷ್ಟವೆಂಬೋದು ನನ್ನದೆಂಬೋದು ಬಲು ನಷ್ಟೈಷ್ಟರೊಳಗೆ ಕೃಷ್ಣ ನೀನೆ ಎಂಬೋದು ನಿಷ್ಟಕಷ್ಟದೊಳಗೆ ಪುನಃ ಹುಟ್ಟಿ ಹೋಹೋದೆ ಕಷ್ಟನಿಷ್ಠೆಯೊಳಗೆ ಹರಿಸ್ಮರಣೆ ಮಾಡೋದೆ ನಿಷ್ಟಾಷ್ಟ ಕರ್ತೃತ್ವವು ಶ್ರೀಹರಿ ಅಧೀನವು ಎಂದುಭ್ರಷ್ಟ ಸಂಸಾರವ ದಾಟುವವನೆ ದಿಟ್ಟಸೃಷ್ಟಿಗೊಡೆಯನಾದ ಗೋಪಾಲವಿಠಲಮುಟ್ಟಿ ಪೂಜಿಸುವರ ಬಿಟ್ಟೆನೆಂದರು ಬಿಡ ೪

ಆದಿತಾಳ
ಧರೆಯೊಳು ಇದ್ದಂಥ ಈ ಪರಿಪರಿಪದಾರ್ಥಹರಿಯಿಂದ ನಿರ್ಮಿತಕರವಾದುವು ಎಲ್ಲಾರಿದು ನೋಡಿ ಇನ್ನು ಕರಕರೆಗಳು ಬಿಟ್ಟುಕರಣ ಶುದ್ಧಿಯಲಿನ್ನು ಕರವೊಡ್ಡಿಕೊಂಡು ನಿಂದುವರ ಉದಕದಲಿಂದ ಹರಿಗರ್ಪಿತವೆಂದುಹರುಷದಲಿ ತಿನ್ನು ಸ್ಥಿರಪದವಿಯ ಪಡಿಬರಿದೆ ನನ್ನದು ಎಂಬೋ ಮರುಳ ಕರ್ತೃತ್ವವ ಮರೆದು ದುರ್ವೃತ್ತಿಯ ತೊರೆದು ಲೌಕಿಕವಕರುಣಾಕರ ರಂಗ ಗೋಪಾಲವಿಠಲನ್ನಶರಣರ ಮರೆಬಿದ್ದು ನೆರೆ ಬದುಕನುಗಾಲ ೫

ಜತೆ
ಡೊಂಬನ ಗೂಡಿನಂತೆ ನಂಬದಿರೀದೇಹನಂಬು ಗೋಪಾಲವಿಠಲನಂಬುಜ ಚರಣ

ತಮಗೆ ಹಲವಾರು ಜನ್ಮಗಳು ಬಂದುಹೋದರೂ
೧೨
ಸುಳಾದಿ
ಧ್ರುವತಾಳ
ಏಸೇಸು ಜನುಮಂಗಳು ಎನಗೆ ಬಂದು ಪೋದುವುನಾಶವಾಗಲಿಲ್ಲ ಮನದ ಆಸೆ ಬೇಸರವಾಗಲಿಲ್ಲ ವಿಷಯಂಗಳಲ್ಲಿ ಬುದ್ಧಿಸಾಸಿರದೊಳಗೊಂದು ಪಾಲಾದರುನಾಶವೈದಿತು ಹೀಗೆ ನಾನಾ ಹಿಂದಿನ ಜನ್ಮಈ ಶರೀರವ ಧರಿಸಿ ಇಲ್ಲಿ ಬಂದೆಭೂಸುರ ಜನ್ಮದಲ್ಲಿ ಬಂದೆ ಸುಕೃತ ಬಲುರಾಶಿ ಪುಣ್ಯಗಳು ಕೂಡಲಾಗಿವಾಸಿ ಮತ್ತೇನಿದಕೆ ಬಾಳಿದುದಕೆ ವಿಷಯರಾಶಿ ಗಳಿಸಿ ಉಂಬೋದೆ ಮಹಾ ಫಲವೊದೇಶ ಕಾಲ ನೋಡಲನುಕೂಲವಾಗಿಹುದೊವಾಸುದೇವನೆ ನಿನ್ನ ಇಚ್ಛೆಯೊಂದೆಏಸು ಮಾತುಗಳನ್ನು ಆಡಿದರೇನು ನಿನ್ನದಾಸರ ದಾಸತನ ಉಂಟಾಗಿತ್ತೆಈ ಸಮಯವೆ ನೋಡು ಎನ್ನನುದ್ಧರಿಸಲುದೋಷರಹಿತ ಜ್ಞಾನಾನಂದಪೂರ್ಣಲೇಶವಾದರು ನಿನ್ನ ತಿಳಿಯೋ ವಿಷಯದಲ್ಲಿನಿಸ್ಸಂಶಯವೆಂಬುದೆ ಸರ್ವೇಶ್ವರಸಂಶಯ ಮಿಕ್ಕ ಜ್ಞಾನಿ ಆನಹುದಿಲ್ಲ ವಿ-ಶೇಷವಾಗಿನ್ನು ನೀನು ಅರಿಯದದ್ದೆನೀ ಸ್ವತಂತ್ರನು ನಿನಗೆ ಬೇಕು ಬೇಡೆಂಬರಿಲ್ಲಈ ಸಥೆಮಾತು ನೀನೆ ಕೊಟ್ಟದ್ದಲ್ಲೆಈಷಣತ್ರಯದಲ್ಲಿ ಎಳೆವೆನ್ನ ಮನ ಸ-ರ್ವೇಶನೆ ನಿನ್ನ ಕಡೆ ಮಾಡಬಹುದೊನಾಶರಹಿತ ಶ್ರೀಶ ಗೋಪಾಲವಿಠಲಶಾಶ್ವತವಾಗಿ ವಾಸವಾದ ಮೂರ್ತಿ ೧

ಮಠ್ಯತಾಳ
ಕಾಣೆನೋ ಕಾಣೆನೋ ಕಡೆ ದಾಟಿಸುವವರಜ್ಞಾನ ಪ್ರೇರಕರ ನಾಕಾಣೆ ಕಾಣೆ ಇನ್ನುಗೇಣು ಮುಂದಕೆ ಸಾಗೆ ಮೊಳವು ಹಿಂದಾಗುವುದುಕಾಣಿ ಪೋದರೆ ಎನ್ನ ಪ್ರಾಣ ಒಪ್ಪಿಸುವೆನೊಹಾನಿ ಜಯಾದಿಗಳನೇನು ತಿಳಿಯಲಿಲ್ಲಶ್ವಾನ ಬುದ್ಧಿಯವನೋ ನಾನಾಕುಯೋಚಿಸುವೆಜ್ಞಾನವಂತರ ಸಂಗವೇನೆಂತಾಗುವುದೊಗೋಣು ಹಿಸುಕುವರ ಸಂಗವೆನಗೆ ಬಹಳಶ್ರೀನಿವಾಸ ಶ್ರೀಶ ಗೋಪಾಲವಿಠಲನಾನು ನಿನ್ನವರವನೋ ಏನು ಮಾಡಿದರು೨

ರೂಪಕತಾಳ
ಇಂದ್ರಿಯಂಗಳನಿತ್ತೆ ಅದಕೆ ವಿಷಯಂಗಳಿತ್ತೆಒಂದರ ಸಾಧನಗಳೊಂದಕ್ಕಾಗಿವೆ ಅಯ್ಯಚೆಂದದಿ ನಿನ್ನಯ ಕಥೆಯ ಕೇಳುವ ಕರ್ಣಮಂದಿವಾರ್ತೆಯ ಕೇಳಿ ಮರುಳಾದುವೋಸುಂದರ ನಿನ್ನ ಮೂರ್ತಿಯ ನೋಳ್ಪ ಅಕ್ಷಿಗಳುಸೌಂದರ್ಯ ಸ್ತ್ರೀಯರ ನೋಡಲೆಳಸಿದವಯ್ಯಇಂದಿರಾಪತಿ ನಿನ್ನ ನಿರ್ಮಾಲ್ಯ ತುಳಸಿಯ ಬಿಟ್ಟುಇಂದುಮುಖಿಯರ ಮೈಗಂಧಕೆಳಸಿತು ಘ್ರಾಣಹೊಂದಿ ನಿನ್ನವರನಪ್ಪುವ ಸ್ಪರ್ಶೇಂದ್ರಿಯಮಂದ ಸ್ತ್ರೀಯರ ಮೈಯ್ಯಾಲಿಂಗನಕ್ಕೆಳೆವುದುಅಂದದಿ ಸುಜನರರ್ಪಿಸಿದನ್ನಗಳ ಬಿಟ್ಟುನಿಂದ್ಯರ ಮನೆಯ ಓಗರ ಬಯಸುವುದು ಜಿಹ್ವೆಇಂದ್ರಿಯಂಗಳು ಎಲ್ಲ ಈ ಪರಿ ಒಟ್ಟಾಗೆಮುಂದಿನ ಗತಿಯೇನೊ ಮುಕುಂದನೆಕಂದರ್ಪಜನಕ ಗೋಪಾಲವಿಠಲ ಕೃಷ್ಣಮುಂದೇನು ಗತಿಯೆನಗೆ ಮುಕುಂದನೆ ೩

ಝಂಪೆತಾಳ
ಮದುವೆಯಾಗುವುದಕ್ಕೆ ಮಾಡಿದ ಸಾಧನ ವಧೆಯಾನಂತರ ಉತ್ತರಕ್ರಿಯಕ್ಕಾದಂತೆಉದರಕೋಸುಗವಾಗಿ ಇಟ್ಟ ಅನ್ನವ ಒಯಿದುಉದರದ ಮೇಲಿಡಲು ಕ್ಷುಧೆ ಪೋಪುದೆಬಧಿರನ ಮುಂದೆ ಗಾಯನ ಮಾಡಿದಂತೆಆದುದು ಎನಗಯ್ಯ ಕೊನೆಗೆ ನೋಡಾಒದಗಿ ಬಾಹ ಪೈಣದ ಗತಿ ತಪ್ಪದೊಉದಯ ರಾತ್ರಿ ಮಧ್ಯವಾದದ್ದರಿಯೆಇದೆ ಸಮಯ ಮೀರಿದರೆ ಮುಂದ್ಯಾರೊ ನಾನ್ಯಾರೊನದಿಗಳ ತೆರೆಯಂತೆ ಜನನ ಮರಣವಿಧಿಕುಲವು ಸುಮ್ಮನೆ ಬಾಹೋದಿಲ್ಲವಿಧಿಜನಕನೆ ನೀನು ತಿಳಿಯದ್ದಿಲ್ಲವೊಸುದರುಶನ ಪಾಂಚಜನ್ಯಪಾಣಿಮಧುಸೂದನ ಕದನಕರ್ಕಶ ಮಲ್ಲರವೈರಿ ಹೃಷಿಕೇಶಅದುಭುತಮಹಿಮನೆ ಅಲೌಕಿಕಬುಧಜನಪ್ರಿಯ ಗೋಪಾಲವಿಠಲರೇಯ ವಿಧಿ ನಿಷೇಧಕ್ಕೆ ನೀನೇ ನಿಯಾಮಕ ೪

ತ್ರಿಪುಟತಾಳ
ಚಿಂತಾಮಣಿಗಾದರು ಬೆಲೆಯ ಕಂಡವರುಂಟುಕಂತೆಗೆ ಬೆಲೆಯುಂಟೆ ನಾನಾ ಛಿದ್ರಕಂತೆಯೊಳಗೆ ಮಣಿಯ ಕಟ್ಟಿದ ಕಾರಣಸಂತೆ ಜನರು ಬಂದಿದ ನೋಳ್ಪರುಕಂತೆ ಬಿಡಿಸಿ ಮಣಿಯ ಕಡೆಗೆ ಮಾಡಿದರಾಗಸಂತೆಯ ಜನರೆಲ್ಲ ಕಂತೆಯ ನೋಳ್ಪರೆಕಂತೆಯಲ್ಲಭಿಮಾನ ಮಣಿಗಿದ್ದ ಕಾರಣಸಂತೆ ಜನರು ಇದ ಬೆಲೆಗೆ ಬಳೆಸುವರಯ್ಯಅಂತರ್ಮುಖರೆ ಇದರ ವಿವರ ಬಲ್ಲರಲ್ಲದೆಚಿಂತಿತವಾಗುವುದೆ ಸರ್ವರಿಗೆಶಾಂತಮೂರುತಿ ನಮ್ಮ ಗೋಪಾಲವಿಠಲ ನೀನಿಂತಲ್ಲಿ ಸಕಲ ನಿಧಾನವುಂಟು ೫

ಅಟ್ಟತಾಳ
ಚೇತನನ್ನ ನೀನು ಜಡವ ಮಾಡುವೆ ಅ-ಚೇತನ ಪಿಡಿದಿನ್ನು ಚೇತನ ಮಾಡುವೆಪಾತಕ ಪಾವನವೆರಡು ನಿನ್ನಾಧೀನಏತರವನು ನಾನಲ್ಲ ನಿನ್ನಾಧೀನಕೋತಿಯ ಮರಿ ತಾಯ ಕಚ್ಚಿಕೊಂಡಿದ್ದಂತೆಆ ತೆರವಯ್ಯ ನಿನ್ನ ಹಿಡಿತ ಬಲು-ಪ್ರೀತಿಬಡಿಸು ಬಲು ಯಾತನೆ ಬಡಿಸಿನ್ನುಖ್ಯಾತಿ ಅಖ್ಯಾತಿಯು ನಿನ್ನದೋ ಸರ್ವೇಶಸ್ವಾತಿಹನಿಯ ಕಪ್ಪೆಚಿಪ್ಪು ಬಯಸಿದಂತೆಆ ತೆರದಲ್ಲಿ ನಿನ್ನ ಕರುಣಾರಸ ಬಿಂದುಏತರಿಂದಾಗಲಿ ಎರೆವುದಿಂದೆನ್ನಲ್ಲಿಆತುರನಾಗಿ ಕೈಸೋತು ನಿಲ್ಲಿಸಿಯಿಪ್ಪೆಜ್ಯೋತಿರ್ಮಯ ಮೂರ್ತಿ ಗೋಪಾಲವಿಠಲ ನೀಪ್ರೀತನಾಗುವುದೇತರಿಂದಲಿ ಪೇಳೊ೬

ಆದಿತಾಳ
ಮರವಾಗಿ ಮನೆಯಾಗಿ ಕಾಣಲಿಲ್ಲಕೊರವ ನಾನಾಗಿನ್ನು ಕಾಣಲಿಲ್ಲಎರಳಾಗಿ ಕಪ್ಪೆಯಾಗಿ ಕಾಣಲಿಲ್ಲನೊರಜಾಗಿ ನೆಗಳಾಗಿ ಕಾಣಲಿಲ್ಲಎರಡು ಪಕ್ಕದಿ ಹಾರಿ ಕಾಣಲಿಲ್ಲಮರದಿಂದ ಮರಕಡರಿ ಕಾಣಲಿಲ್ಲತುರುಕರುವು ಆಗಿ ಕಾಣಲಿಲ್ಲಪುರ ನಿರ್ಮಿಸಿ ನಿನ್ನ ಕಾಣಲಿಲ್ಲಪರಮಹಂಸನಾಗಿ ಕಾಣಲಿಲ್ಲಗಿರಿ ಗುಹೆಗಳ ತುಕ್ಕಿ ಕಾಣಲಿಲ್ಲಪರಿಪರಿ ವ್ರತ ಉಪಾಸನೆಗಳನೆ ಮಾಡಿಬರಿದೆ ದಂಡಿಸಿ ತನುವ ಕಾಣಲಿಲ್ಲನೆರೆ ಮರುಳಾಹಂಕಾರದಿ ಮಾಯಕೆ ಸಿಲುಕಿನ್ನುಅರಿದವ ನಾನಲ್ಲ ನೀನಿರೆ ನಾನಾರೊತರಳನ ಅಪರಾಧ ತಾಳಿದೆ ನಿನಗಿನ್ನುಸರಿವುಂಟೆ ಸರಿವುಂಟೆ ಕರುಣಾನಿಧೆಎರಡು ವಿಂಶತಿ ವತ್ಸರವಾಯಿತು ಈಹರಣ ಧರಿಸಿ ಕರುಣಾಕರನೆ ನೀನುಇರುವ ಬಗೆಯ ಎಚ್ಚರಿಸಿದಂದಕೆ ಎನ್ನಬರಿದೆ ಕಾಲವ ಪೋಗಗೊಡಲಾಗದೊಗುರುದೇವತಾ ಪ್ರೀತಿಯಾಗಿ ಸಕಲ ಕರ್ಮಾ-ಚರಣೆಯ ಮಾಡಿಸೋ ಹರೆ ಹರೆ ಹರೆ ಹರೆ ಪರಮದಯಾನಿಧೆ ಗೋಪಾಲವಿಠಲಇರುಳು ಹಗಲು ನಿನ್ನ ಸ್ಮರಣೆಯನೀಯೊ ೭

ಜತೆ
ಸಕಲಕ್ಕು ನಿನ್ನ ಬೇಡುವುದೇನೊ ವಿಷಯದಾ-ಸಕುತಿಯ ಬಿಡಿಸೊ ಗೋಪಾಲವಿಠಲರೇಯ

ಅನಂತ ಅಪರಾಧಗಳನ್ನು ಮಾಡಿ
೧೩
ಸುಳಾದಿ
ಧ್ರುವತಾಳ
ಒಂದಪರಾಧವೆಂದು ವಂದಿಸಲೇನಯ್ಯಒಂದರ ಚಿಂತೆಯೆಂದು ಪೊಂದಿಸಲೇನಯ್ಯಒಂದರ ಭಯವೆಂದು ಬೇಡಿಕೊಳ್ಳಲೇನಯ್ಯಒಂದರ ಹರುಷವೆಂದು ಒಪ್ಪಿಕೊಳ್ಳಲೇನಯ್ಯಒಂದರ ಕ್ಲೇಶವೆಂದು ಒದಗಿ ನುಂಗಲೇನಯ್ಯಒಂದಲ್ಲ ಎರಡಲ್ಲ ವಿವರಿಸಿ ಹೇಳಲಿನ್ನುಒಂದಪರಾಧವೆ ಇವಕೆ ಕಾರಣ ಮೂಲಇಂದಿರೆ ಅರಸ ಗೋಪಾಲವಿಠಲ ಕೃಷ್ಣತಂದೆ ನಿಮ್ಮ ವಿಸ್ರ‍ಮತಿ ಎನಗೆ ಮುಖ್ಯಾಪರಾಧ ೧

ಮಠ್ಯತಾಳ
ಜನನದ ಚಿಂತೆ ಜನಿಸುವ ಭಯವುಜನಿಸಿದರೆ ಹರುಷ ದಿನದಿನಕೆ ಆಸೆಘನ ಆಸೆಯಿಂದಲಿ ಮೋಹ ಮೋಹದಿಂದ ಕ್ಲೇಶಅನಂತರಪಾಯಗಳು ಒಂದೊಂದು ಅನಂತಇನಿತಿನಿತು ಆವಾವ ಘನ ಕ್ಲೇಶಗಳಿಂದ ದಣಿದು ದಣಿದು ದಣಿದು ಧೈರ್ಯ ಭ್ರಷ್ಟನಾಗಿಮುಣುಗಿ ತೇಲುವೆನಯ್ಯ ಮುಂದುಗಾಣದೆ ಇನ್ನುಘನ ದಯಾವಾರಿಧಿ ಗೋಪಾಲವಿಠಲನೆನೆಯದೆ ನಾ ನಿನ್ನ ಕೊನೆಗಾಣದೆ ಪೋದೆ ೨

ರೂಪಕತಾಳ
ಇಂದಿನ ಸಾಧನ ಏನು ಆದರು ಎಲ್ಲಇಂದಿಗೆ ಇದರ ವಿಚಾರವು ತಿಳಿಯಿತುಮುಂದಿನ ಗತಿಗೆ ಮುಕುಂದ ಪೊಂದುವಚಂದವನರುಹಯ್ಯ ಸುಂದರಾಂಗ ದೇವನಿಂದಲ್ಲಿ ಕುಳಿತಲ್ಲಿ ಬಂದಲ್ಲಿ ಹೋದಲ್ಲಿತಂದು ನೀಡು ನಿನ್ನ ಚೆಂದುಳ್ಳ ಸ್ರ‍ಮತಿಯನುನಂದನ ಕಂದ ಗೋಪಾಲವಿಠಲ ಆಪ್ತಬಂಧು ಕರುಣಾಸಿಂಧು ಗತಿ ನೀನೆ ಹಿಂದೆ ಮುಂದೆ೩

ಝಂಪೆತಾಳ
ಸಲಹುವ ನೀನಯ್ಯ ಸಲಹಿಕೊಂಬುವ ನಾನುಫಲಿತಾರ್ಥ ಒಂದೆ ಸರಿ ಉಳಿದುದು ಏನಯ್ಯಹಲವು ಪರಿ ಸಾಧನಗಳು ಕೂಡಿದರೇನುಕಳೆಯಬಲ್ಲುವೆ ಎನ್ನ ಭವರೋಗವತಿಳಿದದ್ದು ಇಷ್ಟೆ ಸರಿ ನಳಿನನಾಭನೆ ನಿನ್ನಸುಲಭ ಸ್ಮರಣೆಗಿಂತ ಮಿಗಿಲು ಇಲ್ಲಚೆಲುವ ಕೇಳಯ್ಯ ಕೊಳ್ಳಯ್ಯ ನಿಲ್ಲಯ್ಯಚಲಿಸಬೇಡೆನ್ನ ಮನದಿಂದಲಿನ್ನುಸಲಿಸಯ್ಯ ಸಂಸಾರ ಕೊಲೆಯ ತಾಳಲಾರೆಬಳಲಿ ಬಳಲಿ ಬಾಯ ಬಿಡುತಲಿಹೆಹೊಳೆಯಜನಕ ನಮ್ಮ ಗೋಪಾಲವಿಠಲ ನೀತಿಳಿಸಬೇಕು ಎನ್ನ ಸ್ಥಿತಿಗತಿಯ ೪

ತ್ರಿಪುಟತಾಳ
ಆವಾಗ ಎನಗಿನ್ನು ನಿನ್ನ ಸ್ರ‍ಮತಿಯು ಬಂತೆಆವ ದೇಶವೆ ಪುಣ್ಯದೇಶವಯ್ಯಆವ ಕಾಲದಲ್ಲಿ ನಿನ್ನ ಸ್ರ‍ಮತಿಯು ಬಂತೆಆವ ಕಾಲವೆ ಪುಣ್ಯ ಕಾಲವಯ್ಯಆವ ಸಂಗತಿಯಿಂದ ನಿನ್ನ ಸ್ರ‍ಮತಿಯು ಬಂತೆಆವ ಸಹವಾಸವೆ ಸಜ್ಜನ ಸಹವಾಸಆವ ನಿನ್ನ ಸ್ಮರಣೆರಹಿತವಾದ ಕರ್ಮದೇವಾರ್ಚನಾದರು ಏನು ಫಲವೊನಾ ಒಲ್ಲೆನಯ್ಯ ನಿನ್ನ ಸ್ಮರಣೆರಹಿತನಾಗಿಜೀವಿಸಿಕೊಂಡಿನ್ನು ವ್ಯರ್ಥವಾಗಿಪಾವನಕಾಯ ಗೋಪಾಲವಿಠಲ ನಿನ್ನಸರ್ವದಾ ಸ್ಮರಿಸುವವನೆ ಜೀವನ್ಮುಕ್ತ ೫

ಅಟ್ಟತಾಳ
ನಿನ್ನ ಸ್ರ‍ಮತಿಯೆ ವಿಧಿ ವಿಸ್ರ‍ಮತಿ ನಿಷೇಧಪುಣ್ಯವೆಂದರು ಇದೆ ಪಾಪವೆಂದರು ಇದೆಇನ್ನಿಲ್ಲ ಇನ್ನಿಲ್ಲ ಇದಕಿಂತ ಸಾಧನಸ್ತನ್ಯಪಾನವ ತಾ ಉಣಲೊಲ್ಲನು ಪುನಃಇನ್ನೊಂದು ಅವಗಿಲ್ಲ ಇದೆ ಇದೆ ಉಪಾಯತನ್ನ ಮೊದಲು ಮಾಡಿ ತೃಣಜೀವ ಕಡೆಯಾಗಿಚೆನ್ನಾಗಿ ತತ್ವೇಶರಿನ್ನು ಲಕುಮಿ ಸಹಿ-ತಿನ್ನವರವರ್ಗೆ ತನ್ನಿಯಾಮಕನಾಗಿಎನ್ನ ಅಂತರ್ಯಾಮಿಯವನೆ ಮಾಡಿಪನೆಂಬೊಇನ್ನಾವ ಸ್ರ‍ಮತಿಯೇನು ಪುಣ್ಯಸಾಧನವಯ್ಯಘನ್ನ ದಯಾನಿಧಿ ಗೋಪಾಲವಿಠಲನೀನರಿಯದನ್ಯ ಪುಣ್ಯ ಪಾಪಗಳಿಲ್ಲ ೬

ಆದಿತಾಳ
ನಿನ್ನರಿಯದಿಪ್ಪುದೆ ಅಜ್ಞಾನವಯ್ಯ ಅಯ್ಯಇನ್ನು ಅಜ್ಞಾನದಿಂದ ಅನ್ಯಥಾಜ್ಞಾನವಯ್ಯಅನ್ಯಥಾಜ್ಞಾನ ಈಗ ಅಧಮಜೀವಿಗಳಿಗೆ ಇನ್ನು ಮಿಥ್ಯಾಜ್ಞಾನವನ್ನು ಪುಟ್ಟಿಪುದಯ್ಯಇನ್ನು ಆದುದಜ್ಞಾನ ಅರಿತು ಜ್ಞಾನಕ್ಕೆ ನೀನುಮುನ್ನ ಪ್ರೇರಕನಾಗಿ ಮುದದಿಂದ ಮಾಡಿಸುವೆಘನ್ನ ಸ್ವಾಮಿಯು ನೀನು ಬನ್ನದಾಸನು ನಾನುನಿನ್ನ ತಿಳಿವ ಜ್ಞಾನ ಇನ್ನು ಎನಗೆ ಇತ್ತುಜನನ ಮರಣದ ಬಾಧೆಯ ಬಿಡಿಸಿನ್ನುಚೆನ್ನಾಗಿ ಸಲಹಯ್ಯ ಗೋಪಾಲವಿಠಲ ೭

ಜತೆ
ಅಪರಾಧ ಅನಂತ ಮಾಡಿ ನಾ ಮರೆಹೊಕ್ಕೆಅಪಾರಕರುಣಿ ಗೋಪಾಲವಿಠಲ ಕಾಯೊ

ಶ್ರೀಹರಿಯ ಗುಣರೂಪ ಕ್ರಿಯಾದಿಗಳ ವರ್ಣನೆ
೧೪
ಸುಳಾದಿ
ಧ್ರ್ರುವತಾಳ
ಒಂದು ನಿನ್ನ ಮೂರುತಿ ಬೊಮ್ಮಾಂಡದಿ ಇಪ್ಪುದುಒಂದು ನಿನ್ನ ಮೂರುತಿ ಬೊಮ್ಮಾಂಡ ಸುತ್ತಿಹುದುಒಂದು ನಿನ್ನ ಮೂರುತಿ ಬೊಮ್ಮಾಂಡದ ಹೊರಗೆ ಗಂಧ ಪೂಸಿದಂತೆ ಅವ್ಯಾಕೃತ ವ್ಯಾಪಿಸಿಇಂದಿರೆ ಅಭಿಮಾನಿ ಆ ತಥ್ಯ ನಿತ್ಯವಸ್ತುಎಂದಿಗೆ ಅಲ್ಲಿ ಬಿಡದೆ ಇಪ್ಪ ಮಹಾಮೂರುತಿಒಂದೆ ನಿನ್ನ ಮೂರುತಿ ಮೂಲಾವತಾರ ಐಕ್ಯಒಂದೆ ಬಲಜ್ಞಾನ ಆನಂದ ನಿರ್ದೋಷಎಂದಿಗೂ ಜೀವ ಜಡದಿಂದ ಅಗಲದೆ ಇಪ್ಪಸುಂದರವಿಗ್ರಹ ಗೋಪಾಲವಿಠಲನಿಂದು ಭಕುತರಲಿ ಇಪ್ಪ ಕರುಣಿ೧

ಮಠ್ಯತಾಳ
ಸರ್ವಾಪರೋಕ್ಷಿ ಸರ್ವಜ್ಞನೆ ಸರ್ವಾನಂದಗುಣಗಣಪರಿಪೂರ್ಣಸರ್ವೋತ್ತಮ ಸಾಕ್ಷಾತ್ಕಾರಸರ್ವದಿ ವ್ಯಾಪ್ತ ಸರ್ವಚೇಷ್ಟನಿರ್ವಿಕಾರ ನಿತ್ಯತೃಪ್ತಗರ್ವಹರ ಗರುಡಗಮನನಿರ್ವಧಿಕ ಅಂತರ್ಯಾಮಿರೂಪಘನದಲ್ಲಿ ಅಣುಅಡಕ ಮೂಲರೂಪದಿಅಣು ಘನ ಕಾರ್ಯಗಳು ನಿನ್ನ ಭಕುತರಿಗಾಗಿದಿನದಿನಗಳಲ್ಲಿ ಮಾಡುತಲಿ ಇಪ್ಪೆಘನಅಣುಪರಿಪೂರ್ಣ ಗೋಪಾಲವಿಠಲನಿನಗಲ್ಲದೀಶಕುತಿ ಭಣಗುಗಳಿಗುಂಟೆ ೨

ತ್ರಿಪುಟತಾಳ
ನಿಷೇಧ ವಿಶೇಷ ವಿಭಾಗ ಮಾಡಲಾಗಿನಿಷೇಧ ವಿಶೇಷ ವಸ್ತು ನೀನೆವಿಶೇಷಾವಿಶೇಷ ವಿಭಾಗ ಮಾಡಲಾಗಿವಿಶೇಷ ನಿಷೇಧವಸ್ತು ನೀನೆಸಾಸಿರಕೆ ಬೆಲೆ ನೀನೆ ಕಾಸಿಗೆ ಬೆಲೆ ನೀನೆಲೇಸು ಹ್ರಾಸಕೆ ಎಲ್ಲ ಶೇಷ ನೀನೆದೋಷರಹಿತ ಭಕ್ತಪೋಷ ಆವಲಿದ್ದರುಕೇಶವಾಚ್ಯುತಾನಂತ ನಾಶರಹಿತವಾಸುದೇವ ಮುಕುಂದ ಗೋಪಾಲವಿಠಲದಾಸ ದಾಸ ದಾಸರ ಪೊರೆವ ಭಾರ ನಿನ್ನದೊ ದೇವ ೩

ಅಟ್ಟತಾಳ
ಗೋವಿಂದ ಗೋಪಾಲ ಗೋವರ್ಧನಧರಗೋವಳರೊಡೆಯನೆ ಗೋವುಗಳ ಪಾಲಜೀವಜಡದಿ ಭಿನ್ನ ಪಾವನ್ನ ಮೂರುತಿಈವ ಕಾವ ಇಷ್ಟ ಯಾವತ್ತರಲಿ ವ್ಯಾಪ್ತಕಾವಕರುಣಿ ರಂಗ ಗೋಪಾಲವಿಠಲಕೋವಿದರಿಗೆ ನಿನ್ನ ಕುರುಹ ತೋರಿರುವಿ ೪

ಆದಿತಾಳ
ನಿನ್ನ ಇಚ್ಛೆಯಿಂದಲಿ ಜಗವ ಸೃಷ್ಟಿಸುವಿನಿನ್ನ ಇಚ್ಛೆಯಿಂದಲಿ ಅವತಾರ ಮಾಡುವಿನಿನ್ನ ಇಚ್ಛೆಯಿಂದಲಿ ಜಗವ ಪಾಲಿಸುವಿನಿನ್ನ ಇಚ್ಛೆಯಿಂದಲಿ ಜಗವ ಸಂಹರಿಸುವಿನಿನ್ನಗೆ ನೀನೆ ಪ್ರೇರಣೆಮಾಡುವಿ ನಿನ್ನಿಂದ ನೀನೆ ಆನಂದಬಡುವಿಭಿನ್ನ ವಸ್ತುವಿನಿಂದ ಇನ್ನಪೇಕ್ಷೆಯುಇನ್ನಿಲ್ಲ ಇನ್ನಿಲ್ಲ ಚಿನ್ನುಮಯ ನಿನಗೆಇನ್ನು ಆವಾವ ಜೀವರುಗಳಿಗೆಉನ್ನಾಹ ವ್ಯಕುತಿ ಮಾಡುವ ನೀನೆಘನ್ನ ದಯಾನಿಧೆ ಗೋಪಾಲವಿಠಲನಿನ್ನ ಮಹಿಮೆಗೆ ನಾ ನಮೋ ನಮೋಯೆಂಬೆ೫

ಜತೆ
ಸ್ವತಂತ್ರ ಸ್ವಾಧೀನ ಪರತಂತ್ರಾದಿದೂರಅತಂತ್ರರು ಪೊರೆಯೊ ಗೋಪಾಲವಿಠಲ

ಅನಂತ ಒಂದೇ ರೂಪ
೧೨೬
ಸುಳಾದಿ
ಧ್ರುವತಾಳ
ಒಂದು ರೂಪ ನೋಡೆ ಅನಂತಪೂರ್ಣವಿನ್ನುಒಂದು ಅವಯವವೆ ಪೂರ್ಣವಯ್ಯಒಂದು ರೂಪದೊಳಗೆ ಅನಂತ ರೂಪಗಳುಒಂದು ರೂಪದಿಂದ ಭೇದಾಭೇದನಾಗಿಪ್ಪಒಂದು ಧನುರ್ಧರ ಒಂದು ಅರಿಶಂಖಧರಒಂದು ಚತುರ್ಭುಜ ಒಂದು ದ್ವಿಭುಜರೂಪಒಂದು ಚತುರಹಸ್ತ ಒಂದು ದ್ವಿಹಸ್ತಒಂದು ಏಕಮುಖ ಒಂದು ಚತುರಮುಖಒಂದು ಸಾಸಿರಮುಖ ಒಂದು ಗಜಮುಖಒಂದು ಮತ್ಸ್ಯಮುಖ ಒಂದು ಸೂಕರಮುಖಒಂದು ಕ್ರೂರಮುಖ ಒಂದು ಶಾಂತಮುಖಒಂದು ಶ್ಯಾಮವರ್ಣ ಒಂದು ರಕ್ತವರ್ಣಒಂದು ಪೀತವರ್ಣ ಒಂದು ಶುಭ್ರವರ್ಣಒಂದು ಭಯಪ್ರದ ಒಂದು ಅಭಯಪ್ರದಒಂದು ಅಣುವಾಗಿಪ್ಪುದು ಒಂದು ಮಹತ್ತಾಗಿಪ್ಪುದುಒಂದು ಕುಳಿತಿಪ್ಪುದು ಒಂದು ನಿಂತಿಪ್ಪುದುಒಂದು ಕೇವಲ ಲಘು ಒಂದು ಮಹಾ ಗುರುಒಂದು ಕಡೆ ಓಡ್ಯಾಟ ಒಂದು ಕಡೆ ಸಂಹಾರಒಂದು ಕಡೆ ಸೃಷ್ಟಿಯು ಒಂದು ಕಡೆ ಪಾಲನೆಒಂದು ರೂಪದಲ್ಲಿನ್ನು ನಿಂದು ನಾನಾ ವೈಚಿತ್ರನಾಗಿ ತೋರುವ ದೈವಸುಂದರ ಮೂರುತಿ ಗೋಪಾಲವಿಠಲಒಂದೊಂದನಂತರೂಪ ಅನಂತ ಒಂದೆ ರೂಪ ೧

ಮಠ್ಯತಾಳ
ಒಂದು ರವಿಯ ತೇಜ ಒಂದು ದ್ವಿರವಿ ತೇಜಒಂದಕ್ಕೊಂದು ಅಧಿಕ ಹತ್ತು ರವಿಯ ತೇಜಒಂದು ಬಲ ಜ್ಞಾನಪೂರ್ಣವಾದ ರೂಪನಿಂದಿವೆ ಮಲಗಿವೆ ಮಲಗಿ ತಿರುಗಿವೆಪೊಂದಿಕೊಂಡಿಹವೇಕವೆಂದಿಗು ಭೇದಗಳಿಲ್ಲಮಂದಜನರ ಮನಕೆ ಮಹಾಕಳಂಕಗಂಧಾದಿ ಶಬ್ದವೆಲ್ಲ ಸ್ವರೂಪಭೂತೈಂದ್ರಿಯಗಳೆಲ್ಲ ಒಂದೊಂದು ಪೂರ್ಣವುಪೊಂದಿಪ್ಪುವು ನೋಡನಂತ ಬೊಮ್ಮಾಂಡಗಳುಇಂದಿನ ಅತೀತ ಅನಾಗತವೆಲ್ಲಒಂದೊಂದು ರೂಪದಿ ಪೊಂದಿಕೊಂಡಿಪ್ಪುವುಒಂದು ಆದರು ಅಂತ ಕಂಡೆನೆಂಬುವರಾರುನಂದನಂದನಕಂದ ಗೋಪಾಲವಿಠಲಬಂದು ತೋರುವ ತತ್ತದ್ಯೋಗ್ಯತೆಯನುಸಾರ ೨

ರೂಪಕತಾಳ
ಒಂದು ಕಡೆಯಲ್ಲಿ ರಾವಣನ ಸಂಹಾರ ಮಾಡುವಒಂದು ಕಡೆಯಲ್ಲಿ ತತ್ವಜ್ಞಾನ ಬೋಧಿಸುತಿಪ್ಪಒಂದು ಕಡೆಯಲ್ಲಿ ತುರುಗಳನು ಕಾಯುವಒಂದು ಕಡೆಯಲ್ಲಿ ಕ್ರೂರಜನರ ಸದೆಬಡಿಯುವಒಂದು ಕಡೆಯಲ್ಲಿ ಕುರುಪಾಂಡವರ ಕಡಿದಾಡಿಸುವಒಂದು ಕಡೆಯಲ್ಲಿ ಗೋಪಸ್ತ್ರೀಯರ ಒಡನಾಡುವಒಂದು ಕಡೆಯಲ್ಲಿ ಗೋವರ್ಧನಗಿರಿಯನೆತ್ತುವಒಂದು ಕಡೆಯಲ್ಲಿ ಬ್ರಹ್ಮಾದ್ಯರಿಂದ ಪೂಜಿಸಿಕೊಂಬಒಂದು ಕಡೆಯಲ್ಲಿ ಕಂಸನ ಹನನ ಮಾಡುತಿಪ್ಪಒಂದು ಕಡೆಯಲ್ಲಿ ಯಶೋದೆಯ ಮುಂದಾಡುತಿಪ್ಪಒಂದು ಕಡೆಯಲ್ಲಿ ಪಾಲು ಮೊಸರು ಕದ್ದು ತಿಂದುಇಂದುಮುಖಿಯರ ಮುಂದೆ ಇಲ್ಲೆಂದಾಡುತಿಪ್ಪಒಂದು ರೂಪದಲ್ಲೆ ಈ ಪರಿಪರಿ ರೂಪಚೆಂದದಿ ತೋರುತಿಪ್ಪ ಒಂದೆರಡೆನೆ ಸಲ್ಲಕಂದರ್ಪಜನಕ ಗೋಪಾಲವಿಠಲ ತನ್ನಪೊಂದಿದವರ ಮನಕೆ ಒಂದನಂತಾಗಿ ತೋರ್ಪ3

ಝಂಪೆತಾಳ
ಒಂದು ಕಡೆಯಲ್ಲಿ ದ್ರೋಣ ಭೀಷ್ಮಾದಿಗಳನೆಲ್ಲಕೊಂದು ಕೊಂದರ್ಜುನ ಕೊಲ್ಲು ನೀ ಎನುತಿರ್ಪಒಂದು ಕಡೆಯಲ್ಲಿ ಅರಿಸೈನ್ಯಕ್ಕೆ ಬಲವಾಗಿಮುಂದರಿದು ಮತ್ತವರ ಮೋಹಗೊಳಿಸುತಲಿಪ್ಪಒಂದು ರೂಪದಿ ಪಾರ್ಥನಿಗೆ ತತ್ವ ತಿಳಿಸುತ್ತಬಂದ ಅರಿಗಳ ಅಸ್ತ್ರಗಳ ತಾನೆ ವರೆಸುತಲಿಪ್ಪಒಂದು ರೂಪದಲ್ಲಿ ಅರ್ಜುನನ ಆಲಿಂಗಿಸಿಬಂದ ಆಯಾಸಗಳ ಬಡಿಸದೆ ನಿಂದಿಪ್ಪಒಂದು ರೂಪದಿ ದೇವದತ್ತ ಶಂಖವನೂದಿತಂದೀವ ಬಲವ ಪ್ರತಿಕ್ಷಣಕೆ ಪಾರ್ಥನಿಗಿನ್ನುಮಂದ ಅಸುರರಿಗೆ ಇದೆ ಶಬ್ದದಿಂದ ಅವರಕುಂದು ಮಾಡುವ ಬಲವ ಒಂದು ರೂಪದಲ್ಲಿನ್ನುಒಂದೊಂದನಂತಾನಂತ ರೂಪನಾಗಿಮುಂದರಿದ ಕುರುಸೈನ್ಯವ ಕೊಂದು ಕೊಂಧಾಕುತಿಹಮಂದಾಕಿನೀಜನಕ ಗೋಪಾಲವಿಠಲ ಹೀ-ಗೆಂದು ತಿಳಿದರ್ಚಿಪಗೆ ಬಂಧನವ ಕಡಿವ ೪

ತ್ರಿಪುಟತಾಳ
ಮತ್ಸ್ಯಾದಿ ಕೇಶವಾದಿ ಅನಿರುದ್ಧಾದಿ ಅಜಾದಿವಿಶ್ವಾದಿ ಹಯಾದಿ ಶಿಂಶುಮಾರ ಕಪಿಲವ್ಯಾಸಸ್ವಚ್ಛವಾದನಂತ ರೂಪಗಳೆಲ್ಲವುನಿಚ್ಚನಿಚ್ಚ ಕೃಷ್ಣನಲ್ಲೆ ನಿತ್ಯವಾಗಿಎಚ್ಚೆತ್ತಿಪ್ಪುವು ಕಾಣೊ ಲೇಶಸಂಶಯವಿಲ್ಲಾಚ್ಚನಿಟ್ಟಂತೆ ಮತ್ತೊಂದೆ ಪಾದದಲ್ಲಿನ್ನುಅಚ್ಯುತನರೂಪ ಒಂದು ದುರ್ಬಲ ಪ್ರಬಲ ನೀ-ಚೋಚ್ಚವಿಲ್ಲವೊ ನಿತ್ಯ ವ್ಯಕ್ತಾಚ್ಚು ಬೆಲ್ಲವ ಒಂದು ಆವಕಡೆ ತಿಂದರು ಹುಚ್ಚ ಒಂದು ಕಡೆ ಹುಳಿ ಸಿಹಿ ಎನಿಪುದೆಮಚ್ಚರ ಜನರಿಗೆ ಮರುಳುಗೊಳಿಸಿ ಹೀಗೆನಿಚ್ಚವಾದ ನಿರಯ ಪೊಂದಿಸುವಸ್ವಚ್ಛ ಮೂರುತಿ ನಮ್ಮ ಗೋಪಾಲವಿಠಲಾಚ್ಚ ಕರುಣಿ ಕಾಣೊ ಆರ್ತಜನಕೆ ನಿತ್ಯ ೫

ಅಟ್ಟತಾಳ
ಅಣು ಪರಮಾಣು ಅತ್ಯಣು ಬಲು ಅಣುಘನ ಘನ ಘನರೂಪ ಘನತರ ಘನತಮಾಣುರೂಪದ ದ್ರವ್ಯ ಮನಸ್ಸಿಗೆ ಒಂದನ್ನುಎಣಿಕೆ ಹಿಡಿದೆನೆನಲು ಮನಕೆ ನಿಲ್ಲುವುದಲ್ಲಘನರೂಪದ ದ್ರವ್ಯ ಆಕಾರದೊಳಗಿನ್ನುಅಣುವಾಗಿ ತೋರುವುದು ಅವ್ಯಾಕೃತ ದ್ರವ್ಯಘನವ್ಯಾಪ್ತಿ ಉಳ್ಳದ್ದಾದರು ಸರಿಯೇವೆಘನಹರಿ ದ್ರವ್ಯದಲ್ಲಿ ಅಣುವಾಗಿ ತೋರೋದುಚಿನುಮಯ ಹರಿ ತಾನು ಚಿದ್ರೂಪಕೆ ಬಿಂಬಎನೆ ಸಲ್ಲ ಮನುಜ ಘನ ಸೋಜಿಗವುಂಟುಅನುವಾದ ಪಂಚಮಹಾಭೂತ ಅವ್ಯಕ್ತಕೆಮನಸಿಜನಯ್ಯ ತಾ ಬಿಂಬನಾಗಿಪ್ಪನುಎಣಿಸಿ ಧೇನಿಪ್ಪಂಗೆ ಎಲ್ಲಕ್ಕೆ ಹರಿಬಿಂಬಘನ ಜಾಗೃತನಯ್ಯ ಗಣನೆ ಮಾಡಲು ಅನ್ಯಸನಕಾದಿಗಳೊಡೆಯ ಗೋಪಾಲವಿಠಲಾನಿಮಿಷರಿಗೆ ತಿಳಿಯ ಅಗೋಚರನಯ್ಯ ೬

ಆದಿತಾಳ
ಚತುರವಿಂಶತಿ ತತ್ವ ಸ್ವರೂಪಭೂತವುಪತಿತಪಾವನನಾದ ಹರಿಯಲ್ಲಿ ಇಪ್ಪುದುತತು ತತುರೂಪ ತದ್ವರ್ಣ ತದಾಕಾರಗತಿಗೆ ನಿಯಾಮಕ ಸತತ ಬಿಂಬನಾಗಿಖತಿಗೊಳಗಾಗದೆ ಖಂಡಾಖಂಡನಾಗಿಜಿತವಾದ ತನ್ನ ಸ್ವರೂಪದಿಂದಲೆಇತರಾಪೇಕ್ಷೆಯು ಇಲ್ಲ ಇವರಿಂದಲಿ ಬಂದಾತಿಶಯ ಬೇಕಿಲ್ಲ ಆಶ್ರಿತ ಜನಪಾಲಜಿತವಾದ ಜಡಕೆ ಬಿಂಬವಾದ ಬಳಿಕಿನ್ನುತತುವ ಜೀವರಿಗೆಲ್ಲ ಬಿಂಬನಾಗೋದಾಶ್ಚರ್ಯೈತರ ಜೀವರಿಗೆಲ್ಲ ನಿಶ್ಚಯ ನಿತ್ಯದಿಗತಿ ಬೇಕಾದವನಿಗೆ ಇದೆ ಚಿಂತನೋಪಾಯೈತರ ದೈವರ ಗಂಡ ಗೋಪಾಲವಿಠಲಚ್ಯುತದೂರ ನಿತ್ಯ ಆಶ್ರಿತ ಜನಪಾಲ7

ಜತೆ
ವಿಶ್ವರೂಪ ದರುಶನಾಧಿಕಾರಿಗಳು ಅರಿದುವಿಶ್ವನಾಮಕ ಗೋಪಾಲವಿಠಲನ ಭಜಿಸಿ

ಜೀವಿ ಒಂಟಿಯಲ್ಲ
೧೫೯
ಸುಳಾದಿ
ಧ್ರುವತಾಳ
ಒಬ್ಬನೆ ಪೋಪನೆಂದು ಆಡಲ್ಯಾತಕೆ ಮನುಜಒಬ್ಬ ನಾನಹುದೆ ನೋಡಿ ಎಲ್ಲ್ಯಾದರುಒಬ್ಬೊಬ್ಬರೊಳಗೆ ಅನಂತ ಜನರಿಪ್ಪರುಹಬ್ಬಿಕೊಂಡಿಪ್ಪರು ಪರಸ್ಪರ ಭೇದವಾಗಿತಬ್ಬಿಬ್ಬುಗೊಂಬರಲ್ಲ ಬಹು ಕುಶಲರುಒಬ್ಬನ ಕರ್ಮವಿನ್ನು ಅನಂತ ಜನರ ಕರ್ಮಒಬ್ಬನ ಕರ್ಮಕನಂತ ಜನರ ಸಹಾಯತುಂಬಿದ್ದ ಪಟ್ಟಣದೊಳುಳ್ಳಿಯ ಮಾರುವಂತೆಒಬ್ಬ ನಾ ಯಃಕಶ್ಚಿತ ಬಿದ್ದಿಹೆನೂಬ್ಬನೆ ಈ ದೇಹಕ್ಕೆ ಕರ್ತನೆಂದರೆ ಸೌಖ್ಯಗುಬ್ಬಿ ಕೊರಳಿನಲ್ಲಿ ಗೋದಿಕಲ್ಲು ಕಟ್ಟಿದಂತೆಉಬ್ಬಸವಲ್ಲದೆ ಉರುಳುವ ನಿರಯದಿಗರ್ಭಧಾರಣ ಮರಣ ಬಿಡಲರಿಯವು ಕಬ್ಬುಬಿಲ್ಲನಜನಕ ಗೋಪಾಲವಿಠಲನಂಘ್ರಿಅಬ್ಜ ಎಂಬೋದು ಕಾಣ ಅವನೆಂದೆಂದು ೧

ಮಠ್ಯತಾಳ
ಜನಕನಲ್ಲಿಗೆ ಬಾಹನಾಗ ಒಬ್ಬನಲ್ಲಜನನಿಯ ಜಠರದಿಂದ ಜನಿಸಲೊಬ್ಬನಲ್ಲ ಜನನಾನಂತರದಿ ಒಬ್ಬ ನಂಬುವದಲ್ಲತನು ನಾಶವಾಗೆ ಒಬ್ಬ ನಂಬುವದಲ್ಲತನು ಸಂಬಂಧಿಗಳು ತೊಲಗೆ ಒಬ್ಬನಲ್ಲತನುವು ತನ್ನದಲ್ಲ ತನುವಿಗೆ ತಾನಲ್ಲಾನುವಾಗಿ ಇದ್ದರೆ ಆಪ್ತರು ಸರ್ವರುಕನಸಿನಂದದಿ ಕಾಣೊ ಕಂಡದ್ದು ಎಲ್ಲವುಮನಸು ಮಾಡಬೇಡ ಮಮತೆ ಇವುಗಳಲ್ಲಿನಸುಜಾಗರ ಸುಪ್ತಿ ಘನ ಪಾತಾಳ ಸ್ವರ್ಗಜನರಹಿತ ಸ್ಥಾನ ವನ ಕಾನನಗಳಲ್ಲಿನಿನಗೆ ಗೆಳೆಯನಾಗಿ ಗೋಪಾಲವಿಠಲಾನಿಮಿತ್ತ ಬಾಂಧವನಾಗಿ ಕ್ಷಣ ಬಿಡದಲೆ ೨

ರೂಪಕತಾಳ
ಇಷ್ಟು ಮಂದ್ಯಾಡಿಸಲು ಆಡುವಿ ವಚನಗಳುಸ್ಪಷ್ಟವಾಗಿ ನೋಡು ನಿನ್ನೊಳಗೀಷ್ಟು ಮಂದಿ ಆಡಿ ಇಟ್ಟರೆ ನೀ ಇಡುವಿಗಟ್ಯಾಗಿ ನೋಡು ಚಲನಿಲ್ಲದೀಷ್ಟು ಮಂದಿ ಯೋಚಿಸಲು ನೀ ಯೋಚಿಸುವಿನಿಷ್ಠೆಯಿಂದಲಿ ತಿಳಿಯೊ ನಿನ್ನೊಳಗೆಕಟ್ಟಿಗೆ ಸಾದೃಶ್ಯ ಕಾಣೊ ನೀ ಇವರೆಲ್ಲಚೇಷ್ಟ ಮಾಡಿಸದೆ ಸುಮ್ಮನಿರಲು ಇಷ್ಟರು ಬಹುಮಂದಿ ಉಂಟು ನಿನ್ನೊಳಗೆಇಷ್ಟಾನಿಷ್ಟ ಕ್ರಿಯ ಇವರಿಗೆ ಪ್ರೇರಕನಾಗೀಷ್ಟನಾಗಿ ಗೋಪಾಲವಿಠಲನೆ ಮಾಡಿಪ ೩

ಝಂಪೆತಾಳ
ವಾಸುದೇವನಾಗಿ ಒಳಗಿದ್ದು ತಾ ಹೃಷಿ-ಕೇಶನಾಗಿ ಇಂದ್ರಿಯಂಗಳಿಗೆ ಪ್ರೇರಕನು ಹ-ಯಾಸ್ಯನಾಗಿ ಒಳಗೆ ಜ್ಞಾನಪುಟ್ಟಿಸುವ ಮಹಿ-ದಾಸನಾಗಿ ವಿಷಯವಿರಕುತಿನೀವವ್ಯಾಸನಾಗಿ ಉಪದೇಶಗಳ ಮಾಳ್ಪಪೋಷಕನಾಗಿಹ ಪ್ರದ್ಯುಮ್ನನಾಗಿನ್ನುಬೇಸರದೆ ಸೃಜಿಸುವ ಸಂಕರುಷಣನಾಗಿಮೋಸಗೊಡ ಜ್ಞಾನಮತ್ಸ್ಯನಾಗಿ ಒಳಗಿದ್ದುಬೇಸರದೆ ಹೊರುವ ಕೂರ್ಮನಾಗಿ ಕ್ಲೇಶಗಳ ಪರಿಹರಿಪ ಒಳಗೆ ವರಾಹನಾಗಿದ್ವೇಷಪುಟ್ಟಿಸುವ ದೈತ್ಯರ ಮೇಲೆ ನರಸಿಂಹಕಾಸುಕಾಸಿಗೆ ಕೂಡಿಹಾಕಿಸುವ ವಾಮನಭೂಸುರರಿಗೆ ತ್ಯಾಗ ಮಾಡಿಸುವ ಭಾರ್ಗವವಾಸ ಮಾಡುವ ಬುದ್ಧಿನೀವ ಒಳಗೆ ರಾಮ ಮೀಸಲಭೋಗಗಳು ಕೊಂಬ ಮನಸಿಗೆ ಕೃಷ್ಣನಾಶಮಾಡುವ ಪರರ ಮೋಹಿಸುವ ಬೌದ್ಧ ದೇಶಗಳು ತಿರುಗುವಾಗ ಮನಕೊಡುವ ಒಳಗೆ ಕಲ್ಕಿಬೇಸರದೆ ಬಹುರೂಪನಾಗಿ ಗೋಪಾಲವಿಠಲಪೋಷಿಸುವ ನಿರ್ವ್ಯಾಜದಿಂದ ನಿತ್ಯ ೪

ತ್ರಿಪುಟತಾಳ
ವರುಣ ಪ್ರತಿಪಾದ್ಯ ಐವತ್ತೊಂದುಇರುವು ನಿಯಾಮಕ ಕೇಶವಾದಿಗಳುಎರಡೊಂದು ಅವಸ್ಥಾಪ್ರದ ಮೂರ್ತಿಗಳು ಎರಡೊಂದು ವರ್ಣ ಮೂರ್ತಿಗಳು ಇನ್ನುಪರಿಪರಿ ಕೃದ್ಧೋಲ್ಕ ಆತ್ಮಾದಿ ಮೂರ್ತಿಗಳುಎರಗಿ ರೋಮ ರೋಮ ತುಂಬಿಹ ಮೂರ್ತಿಗಳುಹೊರಗೆ ಒಳಗೆ ವ್ಯಾಪ್ತ ಗೋಪಾಲವಿಠಲತಿರುಗುವ ಎಮ್ಮೊಡನೆ ಪರಿ ಪರಿ ರೂಪನಾಗಿ ೫

ಅಟ್ಟತಾಳ
ಏಕ ಮೂರುತಿ ಚತುರ ಮೂರುತಿಏಕ ಸಪುತ ಮೂರುತಿ ಏಕದಶ ಮೂರುತಿಏಕ ಶತ ಮೂರುತಿ ಏಕಷ್ಟ ಮೂರುತಿಏಕ ಸಾಸಿರ ಮೂರುತಿಏಕಾಧಿಕ ಎಪ್ಪತ್ತೊಂದು ಸಾವಿರ ಮೂರುತಿಏಕ ಅಷ್ಟಕೋಟಿ ರೂಪನಾಗಿಪ್ಪ ಮೂರುತಿಏಕಾರ್ಣವದಲ್ಲಿ ಏಕಮೇವನದ್ವಿತೀಯ ಮೂರುತೀಇಕಡ್ಯಾಕಡೆ ಸವ್ಯಾಪಸವ್ಯ ಮೂರುತಿಸಾಕಾರ ಮೂರುತಿಗಳು ಸರ್ವಜ್ಞ ಪರಿಪೂರ್ಣಸಾಕುವ ಸರ್ವತ್ರ ಗೋಪಾಲವಿಠಲನಿರೆನಾ ಕಾಣೆ ಎನಗಿನ್ನು ಏಕಾಂತವೆಂಬುದು ೬

೧೬
ಸುಳಾದಿ
ಧ್ರುವತಾಳ
ಕಚ್ಚಲೆನಗೆ ಕಾಮ ಕ್ರೋಧಗಳೆಂಬ ಕುನ್ನಿಗಳುಪೆಚ್ಚಿತೈ ಮೋಹಮದ ಮತ್ಸರವುಅಚ್ಚ ವಿಷಯಗಳೆಂಬೊ ಕಿಚ್ಚಿನೊಳಗೆ ಕೆಡಹಿಹುಚ್ಚುಗೊಳಿಸುವುದಯ್ಯ ಎಚ್ಚರಿಸದಲಿನ್ನುನಿಚ್ಚಳ ದಾರಿಯನ್ನು ಮುಚ್ಚಿಸಿ ಕಾಣದಂತೆಮೆಚ್ಚು ಆಯಿತು ಮನವು ಕುತ್ಸಿತಭೋಗದಲ್ಲಿಅಚ್ಯುತ ನಿನ್ನ ಪಾದ ಅರ್ಚಕರಾದವರುಬೆಚ್ಚಿಸಿದಡಾಯಿತೆ ಉಚಿತವೆ ನಿನಗೆನೆಚ್ಚದವನ ಪರರ ಇಚ್ಛೈಸಿದರೆ ಎನ್ನವಾಂಛ್ಯ ನಿನ್ನದೊ ಅಲ್ಲೆ ವತ್ಸಾಸುರಮರ್ದನಕಚ್ಚಿನಗಡಿಗೆಮ್ಮ ಹುಚ್ಚು ಮೋರೆಯಮರಿಗಿಗಚ್ಚಿನ ಪೋತರಾಜ ರಚ್ಚಕಟ್ಟೆಯ ಎಲ್ಲಿಬಿಚ್ಚಾಳೆಪಲ್ಲಿ ಶಡವಿ ಬನದ ಶಂಕರಿ ಯಃಕಶ್ಚಿತ್ ದೇವತೆಗಳ ಇಚ್ಛಿಸಲಿಲ್ಲವಯ್ಯಮಚ್ಛ ಕೂರ್ಮ ವರಾಹ ನಿಚ್ಚಳ ನಾರಸಿಂಹಮೆಚ್ಚಿ ಭಕ್ತರ ಬಾಗಿಲು ಕಾಯಿದ ತ್ರಿವಿಕ್ರಮಹೆಚ್ಚಿನ ಪರಶುಪಿಡಿದ ಭಾರ್ಗವ ದೇವೋತ್ತಮಸಚ್ಚಿದಾನಂದ ರಾಮಕೃಷ್ಣ ಬೌದ್ಧ ಕಲ್ಕಿಯೆಮಚ್ಛಾವತಾರ ಮೂಲರೂಪ ಐಕ್ಯನಾದಸುಚಿತ್ರ ಚರಿತ್ರ ಜ್ಞಾನಾನಂದ ಗುಣಪೂರ್ಣಇಚ್ಛೆ ಮಾತ್ರದಿ ಜಗವ ಸೃಷ್ಟಿಸ್ಥಿತಿಲಯವ ಮಾಳ್ಪೆಕಶ್ಯಪಸುತನಾದ ಭಕ್ತವತ್ಸಲ ದೇವಮೆಚ್ಚಿದೆ ನಿಮ್ಮ ಪಾದ ಗೋಪಾಲವಿಠಲನುಚ್ಚು ಮಾಡಯ್ಯ ಕಾಮಕ್ರೋಧಗಳೆಂಬವು ಬೇಗ ೧

ಮಠ್ಯತಾಳ
ಅನಂತ ಸಾಧನೆಯೊಳು ಏನೊಂದು ನಾನರಿಯೆಅನಂತ ದೋಷಗಳು ಮುನ್ನ ಮುನ್ನ ಮಾಡಿದಲ್ಲದೆಇನ್ನು ಅದೆ ಹಾದಿಗೆ ಎನ್ನನ್ನು ಸೆಳೆದೊಯಿದುಹುಣ್ಣು ಹುಣ್ಣನು ಮಾಡಿ ಎನ್ನ ಕೊಲ್ಲಿಸಿದರೆಇನ್ನಾರಿಗೆ ಪೇಳುವೆ ಘನ್ನ ದಯಾನಿಧೆ ಎನ್ನ ಯತ್ನವೇನುನಿನ್ನ ದಯಾರಸಕೆ ಚಿನ್ನನ ಬಾಯಿ ತೆರೆದುಚೆನ್ನಾಗಿ ಮಾತೆ ಮಣ್ಣು ಬೆಣ್ಣೆ ಸಮವನ್ನು ಮಾಡಿ ಉಣಿಸೆಇನ್ನು ಅರಿಯದವಗೇನು ಒಂದೇ ರೂಪಮುನ್ನ ಲೇಸು ಆಗೊ ಪುಣ್ಯ ಪಾಪಂಗಳುನಿನ್ನ ಅಧೀನವು ಎನ್ನ ಫಲಾಫಲವು ನಿನ್ನ ಸಂಕಲ್ಪಕ್ಕೆಇನ್ನು ನಾಶವಾಗಿಲ್ಲ ನಿನ್ನ ಇಚ್ಛೆ ಬಂದಂತೆ ಮಾಡೊ ರಂಗಚಿನ್ಮಯ ಮೂರುತಿ ಗೋಪಾಲವಿಠಲಎನ್ನ ಮನೋಕಾರ್ಯವನ್ನು ನೀನೆ ಬಲ್ಲಿ ೨

ತ್ರಿಪುಟತಾಳ
ದೇವ ನಿನ್ನಲ್ಲಿ ದ್ವೇಷಮಾಡುವನಿಗೆ ಆವ ಕಾಲಕ್ಕೆ ದುಃಖ ಭೋಗವೆ ಸಾಕ್ಷಿಕೋವಿದರು ನಿನ್ನಲ್ಲಿ ಸ್ನೇಹ ಮಾಡುವರಿಗೊಆವದಾದರು ಸುಖವ ತೋರುವುದಯ್ಯನೀ ಒಲಿದವರಿಗೆ ಆವಾಗ ಸ್ಮರಣೆಗೆ ದೇವ ಇನ್ನು ಬಾಹುವುದೆ ಸಾಕ್ಷಿಯುಆವ ದೇಶದಲ್ಲಿ ಆವ ದಿಕ್ಕಿನಲ್ಲಿ ಆವಾವ ಜನರಲ್ಲಿಆವ ಕಾರ್ಯಗಳಲ್ಲಿ ಯಾವತ್ತರಲ್ಲಿ ನೀ ವ್ಯಾಪಕನಾಗಿನ್ನುಆವಾವ ಬಗೆ ಕಾರ್ಯವ ಮಾಡಿಸುವಂಥಭಾವನೆ ಒಂದೆ ತಿಳಿಸುವುದುನಾ ಒಂದೊಲ್ಲೆನೊ ನಿನ್ನ ಸೇವೆ ಮಾತ್ರವಿನ್ನೀಯೊಜೀವರಿಗೆ ಕರ್ಮದ ಅನುಭವ ಉಂಟು ದೇವ ನೀ ನಿರ್ಲಿಪ್ತ ಆವಲ್ಲಿದ್ದರೇನುಆವಾವರಲ್ಲಿ ನೀ ಈವ ವ್ಯಾಪ್ತವು ಇನ್ನುದೇವ ನಿನ್ನ ಗುಣಗಳೇವೆ ಮಣಿಗಳುಭಾವ ಶುದ್ಧದಿ ಜ್ಞಾನವೆಂಬೊ ತಂತಿಲಿಆವಾಗ ಪೋಣಿಸುತಿರುವಂತೆ ಮಾಡೆನ್ನನಾ ಒಲ್ಲೆ ಇನ್ನೊಂದು ಈ ಉಪಾಯಕಿನ್ನುಕೋವಿದರ ಮನೆ ದ್ವಾರವು ಕಾವಂತೆಆ ಊಳಿಗನ್ನ ಮಾಡಿ ಆವಲ್ಯಾದರು ಇಡಿಸುದೇವಾಧಿದೇವರೊಡೆಯ ಗೋಪಾಲವಿಠಲಕಾವುವಾತನೆ ನೀನು ಆವಲ್ಲಿದ್ದರೆನ್ನ ೩

ಅಟ್ಟತಾಳ
ಅರಿಯದೆ ನಾ ಇನ್ನು ನರರ ಬೇಡಿದರೆನರರಲ್ಲಿ ನೀ ಇನ್ನು ಪರಿಪೂರ್ಣವಲ್ಲವೆಅರಿಯದೆ ಅನ್ಯದೇವರ ಭಜಿಸಿದರೆಹರಿಯೆ ನೀ ಅಲ್ಲಿನ್ನು ಇರುವುದು ಮಿಥ್ಯವೆಇರುವೆ ನೊಣ ಎಂಬತ್ತುನಾಲ್ಕು ಲಕ್ಷ ಪರಿ ಜೀವರಲ್ಲಿ ಪರಿಪೂರ್ಣಮಯ ನೀನುಬರಿದೆ ನಮ್ಮನೇನು ಮರುಳುಗೊಳಿಸಬೇಡ ಅರಿದು ನೋಡಲು ಸರ್ವಾಂತರದಲ್ಲಿ ನೀನೆಮರುಳೆ ಆವಾವ ಜನಂಗಳಲ್ಲಿ ಇನ್ನುಪರಿಪರಿ ಜೀವರಾರಾಧಿಸಿದದೆಲ್ಲಅರಿದು ಮನದೊಳು ಹರಿಯೆ ನಿನಗಿನ್ನುಕರವ ಮುಗಿದು ನಿಂದು ಭರದಿ ಅರ್ಪಿಸುವೆನೊಕರುಣಾಕರ ರಂಗ ಗೋಪಾಲವಿಠಲಶರಣು ಹೊಕ್ಕೆನೊ ಕಾಯೊ ಬಿರುದುಳ್ಳ ದೈವವೆ ೪

ಆದಿತಾಳ
ಕ್ಷೀರ ಉಕ್ಕಿದರು ನೀರು ಎರೆವರಯ್ಯನೀರು ಉಕ್ಕಲು ಹರಿಗೋಲು ಹಾಕುವರಿನ್ನುಈರೇಳು ಧರೆಯೆಲ್ಲ ಮೇರೆತಪ್ಪಿ ಬರಲುಸೇರಿಸುವರ್ಯಾರೊ ತಡಿಗೆ ಮಾರಜನಕ ನೀನೆಬಾರಿಬಾರಿಗಿನ್ನು ಭಕ್ತರಿಗೆ ಬಂದ ದೋಷಹಾರಿಸುವುದಕಿನ್ನು ಕಾರಣಕರ್ತ ನೀನೆಆರು ನಿನ್ನಂತೆ ಮತ್ತಾರು ಪೊರೆವರಿಲ್ಲಕಾರುಣ್ಯ ಮೂರುತಿ ಕರಿರಾಜವರದ ರಂಗಮಾರುತವಂದ್ಯ ಪಾದ ಗೋಪಾಲವಿಠಲಅರಿಷಡ್ವರ್ಗಗಳ ದೂರಮಾಡಯ್ಯ ಬೇಗ ೫

ಜತೆ
ಪರಿಮಿತಿ ಇಲ್ಲದ ದುರಿತ ದೋಷವನಕೆಪರಶು ನಿನ್ನ ನಾಮ ಗೋಪಾಲವಿಠಲ

ಈ ಸುಳಾದಿ ಒಂದು ನಿಂದಾಸ್ತುತಿ
೧೭
ಸುಳಾದಿ
ಧ್ರುವತಾಳ
ಕರೆದ ಮಾತಿಗೆ ನೀನು ಬರುವವನಲ್ಲಅರುವಾಯಿತೆನ್ನ ಮನಕೆ ಅಪ್ರಮೇಯತುರುವ ಸ್ವಭಾವ ನೀನು ತುರಿಸಿದರೆ ಲಭ್ಯತುರಿಸುವ ಬಗೆಯ ತಿಳಿಯಬೇಕಾಯಿತುಪುರುಷ ನಿನಗೆ ಸಮಾಧಿಕರಿದ್ದರಾದಡೆಒರಸ್ಯಾಡಬಹುದು ನಿನ್ನವರ ಕೂಡೆಪರಮ ಅಸ್ವತಂತ್ರ ಪರಿಪಾಲಿತ ನಿನ್ನಿಂದಒರೆಸುವೆ ಎಷ್ಟೆಂದು ವಾರಿಜಾಕ್ಷಅರಸು ನೀನೆವೆ ನಿನ್ನ ಸ್ಪರುಷ ಮಾಡುವುದಕ್ಕೆಭರವಸೆ ಕೊಡುವುದೊ ಭಕ್ತಪ್ರಿಯಪುರುಷನ ಕೂಡಲಿನ್ನು ಸಲಿಗೆ ಕೊಟ್ಟರೆ ಅರಸಿಸರಸವಾಡುವಳು ತನ್ನ ಸರಿಬಂದಂತೆಅರಸರರಸ ಚೆಲುವ ಗೋಪಾಲವಿಠಲ ನಾ ಉ-ಚ್ಚರಿಸುವೆ ನಿನ್ನ ಗುಣಕರ್ಮಗಳ ೧

ಮಠ್ಯತಾಳ
ಉರಗನಂದದ ಗುಣವುಳ್ಳ ಪುರುಷ ನೀನುಹರಿಯೆ ಮಾರ್ಜಾಲನಂದದ ಗುಣದವಸರಿ ಬಿಡು ಮೂಷಕದ ಗುಣವುಳ್ಳವ ನೀನುಗರುಡನಂಥವ ನೀನು ವರಕಪಿಗುಣವುಳ್ಳವ ನೀನುಕರಿಯಂಥವ ನೀನು ಕಪ್ಪೆಯಂಥವ ನೀನುಪರಿಪೂರ್ಣ ನಿರ್ದೋಷ ಗೋಪಾಲವಿಠಲಸರಿ ಬಂದಂತಾಡುವೆ ಸಲಿಗೆಯಿಂದಲಿ ನಾನು ೨

ತ್ರಿಪುಟತಾಳ೦
ಮಡಿವಾಳನಂಥವ ಮೈಲಿಗೆ ಕಳೆವಲ್ಲಿಬಡಗಿಯಂಥವ ದೋಷವ ಕಳೆವಲ್ಲಿತಡೆಯದೆ ಕುಲಾಲನಂಥವ ದೇಹವಬಿಡಲು ಪುನಃ ಕೊಡುವಲ್ಲಿ ಮನೆಮಾಡಿಪಿಡಿದು ಒಂದನಂತ ಮಾಡುವಲ್ಲಗಸಾಲಿಪಿಡಿದು ಬಿಡದಿರುವಲ್ಲಿ ಊಷ್ಟ್ರನಂಥವ ನೀನುಬಡವ ಬಲ್ಲಿದನೆನ್ನದೆ ಬಿಡದೆ ಸರಿವೆರಸಿದ್ದುತಡೆಯದೆ ಸರ್ವ ವ್ಯಾಪಾರ ಮಾಡುವಕಡು ದಯಾಸಾಗರ ಗೋಪಾಲವಿಠಲ ನುಡಿದೆನೊ ನಾ ನಿನ್ನಲ್ಲಿದ್ದ ಗುಣಗಳಿಗೆ ೩

ಅಟ್ಟತಾಳ
ಆಳುಗಳಿಂದೊಂದು ಅಪರಾಧ ಬಂದರೆತಾಳಿಕೊಂಡವ ಸ್ವಾಮಿ ಎನಗೆ ಕಾಣೊಊಳಿಗವನ್ನು ಕೊಂಡು ಫಲ ಕೊಟ್ಟರಾಯಿತೆಹೇಳಯ್ಯ ನಿನ್ನ ಸ್ವಾಮಿತ್ವ ಪೂರ್ಣತೆಯನ್ನುಊಳಿಗವನೆ ಮಾಡಿ ಫಲ ಬೇಡಿಕೊಂಬಂಥಆಳು ನಾನಾಹುದಿಲ್ಲ ಯೋಚನೆ ಏತಕೆವೇಳೆ ಸಮಯ ನೋಡಿ ಕೇಳಲಿಲ್ಲೆಂದರೆವೇಳೆ ಯಾವುದು ನೋಡೊ ಭಕ್ತಬೇಡುವುದಕ್ಕೆಕೇಳೆನ್ನ ಸ್ವಭಾವ ನಿನ್ನ ಭಕ್ತರಿಗೊಂದುಆಲಾಪ ಬಂದರೆ ಹೇಳಿಕೊಂಬುವುದುಂಟುಪಾಲಸಾಗರಶಾಯಿ ಗೋಪಾಲವಿಠಲಪಾಲಿಸಬೇಕೆನ್ನ ಎಷ್ಟರ ಮಾತಯ್ಯ ೪

ಆದಿತಾಳ
ಎನ್ನದು ಸಾಕಾಗಿ ಇನ್ನೊಂದು ಕೊಡು ಎಂದುನಿನ್ನ ಬೇಡುವುದಿಲ್ಲ ಘನ್ನ ದಯಾನಿಧೆನಿನ್ನ ಭಕುತಜನಕಿನ್ನೊಂದು ದುರ್ಘಟಬನ್ನ ಬಂದರೆ ನಿನ್ನ ಬೇಡುವುದು ಬಿಡೆಇನ್ನು ಅಪರಾಧವನ್ನು ಮೊದಲು ಮಾಡಿಎನ್ನ ನೀ ದಣಿಸಿದರಿನ್ನಂಜುವನಲ್ಲಸಣ್ಣಪರಾಧಕೆ ಕಣ್ಣಿಗೆ ತೋರದೆಮುನ್ನಡಗುವುದೆ ಚಿನ್ಮಯ ದೇವಪನ್ನಗಶಯನ ಗೋಪಾಲವಿಠಲ ಕೃಷ್ಣನಿನ್ನವರ ದಯವಿರೆ ಇನ್ನೇನು ಮಾಳ್ಪೆಯೊ ೫

ಜತೆ
ಏನು ಬಂದರೆ ನಿನ್ನ ನಾನು ಬಿಡುವುನಲ್ಲಮಾನ ನಿನ್ನದೊ ಜಾಣ ಗೋಪಾಲವಿಠಲ

ಜೀವರ ಎಲ್ಲ ಬಗೆಯ ಸಾಧನಗಳೂ
೧೮
ಸುಳಾದಿ
ಧ್ರುವತಾಳ
ಕಾಯಕ್ಲೇಶವಬಡಿಸಿ ಕಂಡವರಿಗೆ ಹಾರೈಸಿಸಾಯಾಸಬಟ್ಟು ನಾನಾಸಾಧನವನ್ನು ಮಾಡಿಕಾಯ ನಿನ್ನ ಪ್ರೀತಿ ಆಯಿತೊ ಎಂದು ಎನ್ನಸಾಯಾಸಕೆ ಇನ್ನಾರು ಸರಿಯಿಲ್ಲ ಎಂದುಕೊಂಬೆನ್ಯಾಯವೊ ಅನ್ಯಾಯವೊ ನಾನರಿತವನಲ್ಲಆಯವ ನೀನೆ ಬಲ್ಲೆ ಅವರವರದುಜ್ಯೋಯಿಸಿಯ ಧರ್ಮವು ಆಗುವದ್ಹ್ಯಾಗೊ ಕಡೆಗೆಮಾಯಮಾಡಲಿಬೇಡ ಮಾರಮಣ ಎನ್ನೊಡನೆನ್ಯಾಯವೆಂದು ತಿಳಿದಿಪ್ಪೆ ನಾನು ಮಾಡುವ ಧರ್ಮನ್ಯಾಯವೆಂಬೋದು ನೀನನ್ಯಾಯವ ಮಾಡುವಿನ್ನುನಾಯಕ ಕೇಳು ನಾ ಅನ್ಯಾಯ ಒಂದಾದ್ದೆಲ್ಲನ್ಯಾಯವಾಗಿ ತೋರೋದು ನಿನ್ನ ಚಿತ್ತದಲ್ಲಿಮಾಯಾರಹಿತ ನಮ್ಮ ಗೋಪಾಲವಿಠಲದಾಯಿಗರಿಗೊಪ್ಪಿಸದೆ ಆಯವರಿತು ಪೊರೆಯೊ ೧

ಮಠ್ಯತಾಳ
ನಿನ್ನವನೆಂತೆಂದು ಪೇಳಿಕೊಂಬುವುದಕ್ಕೆಇನ್ನಿತಾದರು ಸಾಧನವೆನ್ನಲಿಲ್ಲನಿನ್ನವರಲ್ಲಿ ಭಕುತಿ ಇನ್ನು ಮೊದಲಿಗೆ ಇಲ್ಲನಿನ್ನ ವಾರುತೆಯಲ್ಲಿ ನಿನ್ನ ಕೀರುತಿಯಲ್ಲಿನಿನ್ನ ದಾಸರು ಎಲ್ಲಿ ಆನೆಲ್ಲಿ ನರಗುರಿಯುಬಣ್ಣಗೆಟ್ಟವನಯ್ಯ ಬರಿದೆ ನಿನ್ನವನೆಂದುನನ್ನೊಳಗೆ ನಾನು ಮದಸೊಕ್ಕಿ ತಿರುಗಿಧನ್ಯನೆಂದುಕೊಂಡು ಧೈರ್ಯದಲ್ಲಿ ಇಪ್ಪೆನಿನ್ನ ಚಿತ್ತದಲಿ ಹೊಂದಿನ್ನು ನೀನೆ ಬಲ್ಲೆಅನ್ಯ ದೈವರಗಂಡ ಗೋಪಾಲವಿಠಲನಿನ್ನ ದಯಾರಸವೊ ಇನ್ನೊಂದನರಿಯೆ ೨

ರೂಪಕತಾಳ
ಹಾಡಿ ಸುಖಿಪರು ಕೆಲರು ಬೇಡಿ ಸುಖಿಪರು ಕೆಲರುಮಾಡಿ ಸುಖಿಪರು ಕೆಲರು ನೀಡಿ ಸುಖಿಪರು ಕೆಲರುನೋಡಿ ಸುಖಿಪರು ಕೆಲರೊಡನಾಡಿ ಸುಖಿಪರು ಕೆಲರುನಾಡ ಜೀವರಿಗೆ ನಾನಾ ಕುಸಾಧನೆ ಉಂಟುಆಡುವ ನಾನಲ್ಲ ಬೇಡುವ ನಾನಲ್ಲಪಾಡುವ ನಾನಲ್ಲ ಕಾಡುವ ನಾನಲ್ಲನೀಡುವ ನಾನಲ್ಲ ಮಾಡುವ ನಾನಲ್ಲಮಾಡಿಸಿ ಮಾಡುವ ಸಾಧು ಜೀವರ ಸಂಗಕೂಡಿ ಒಡನಾಡಿನ್ನು ನೋಡುವ ಭಾಗ್ಯವುಬೇಡಿ ಹಾರೈಸಿ ನಾ ಬೆನ್ನು ಬಿದ್ದೆನು ದೇವರೂಢಿಗಧಿಕ ನಮ್ಮ ಗೋಪಾಲವಿಠಲಈಡು ಇಲ್ಲದ ದೈವ ಮಾಡು ಎನಗೆ ಕೃಪೆಯ ೩

ಝಂಪೆತಾಳ
ಸ್ನಾನ ಸಂಧ್ಯಾನ ಜಪತಪದಿ ಅನುಷ್ಠಾನದಾನ ಸತ್ಕರ್ಮಂಗಳಲ್ಲಿ ಎನಗೆಏನಾಯಿತು ಇಷ್ಟೆ ಸಾಕೆಂಬ ವೈರಾಗ್ಯವನು ಕೊಡದಿರು ಎನಗೆ ಕರ್ಮಂಗಳಲ್ಲಿಹೀನರ ಸಂಗದಲ್ಲಿ ಇಟ್ಟು ಎನ್ನನು ಬಹುದಿನಗಳು ಬದುಕಿಸೋಕಿಂತ ಹರಿಯೆಜ್ಞಾನಿಗಳೊಡನೊಂದು ದಿನ ಬದುಕಿದುದಕೆ ಸ-ಮಾನ ಉಂಟೇನಯ್ಯ ಸರ್ವೋತ್ತಮಮಾನಿಸ ಜನ್ಮವು ಮೇಲೆ ವೈಷ್ಣವನಾಗಿಶ್ರೀನಾಥ ಸೃಜಿಸಿದೆಯೊ ಅವನಿಯೊಳಗೆಕಾಣೆನೊ ನಾನಿದಕೆ ತಕ್ಕ ಸಾಧನಗಳುನೀನೆ ಗತಿ ಎನಗೆ ಮುಕುಂದಾನಂದನೀನು ಕರುಣಿಸಿದರೆ ಸಕಲ ಸಾಧನ ತನ್ನಿಂತಾನೆ ಆಗುವುದಯ್ಯ ತಪ್ಪಿಸದಲೆಹಾನಿ ಲಾಭವು ಎರಡು ಎನಗೆ ಬಂದರು ನೀಧ್ಯಾನಿಸಿ ನಿನ್ನ ತಿಳಿವೊ ಜ್ಞಾನನೀಯೊ ದೀನರಕ್ಷಕ ರಂಗ ಗೋಪಾಲವಿಠಲನೀನೆ ಗತಿ ನಿನ್ನ ಬಿಡೆ ನಿತ್ಯತೃಪ್ತ ೪

ತ್ರಿಪುಟತಾಳ
ನಾನು ದೋಷಕಾರಿಯೊ ನೀ ನಿರ್ದೋಷನು ದೇವ ನಾನು ದುಃಖಭರಿತ ನೀನು ಸುಖಪೂರ್ಣನಾನು ಅಜ್ಞಾನಿಯೊ ನೀನು ಜ್ಞಾನಪೂರ್ಣನಾನು ಅಲ್ಪಗುಣನೊ ನೀನು ಗುಣಪೂರ್ಣನಾನು ಅಸ್ವತಂತ್ರ ನೀನು ಸ್ವತಂತ್ರನೊನಾನು ನಾಶವು ಇಲ್ಲಾ ನೀನು ನಾಶವು ಇಲ್ಲನೀನು ಅನಾದಿ ನಿತ್ಯ ನಾನು ಅನಾದಿ ಭೃತ್ಯನೀನು ಎನಗೆ ಬೇಕು ನಾನು ನಿನಗೆ ಬೇಕುನಾನೆಂಬುವರು ಬೇರೆ ಇಲ್ಲದಿದ್ದರಾಯಿತೆನೀನೆಂಬುವುದು ಇನ್ನೂ ಆರು ಬಲ್ಲರು ದೇವಜ್ಞಾನಿ ಇವನೆಂದರೆ ಅಜ್ಞಾನಿ ಬ್ಯಾರುಂಟುದಾನಿ ಇವನೆಂದರೆ ದೀನನು ಬ್ಯಾರುಂಟುಜಾಣ ಇವನೆಂದರೆ ಜಡಮತಿಯೆಂಬುವರು ಉಂಟುಮಾನಿ ತಾನೆನೆ ಅಪಮಾನಿ ತಾ ಬ್ಯಾರುಂಟುಹೀನ ಎಂಬೊ ಅಹಂಕಾರವದು ಎನಗೆ ಇರಲಿನಾನೆ ಕರ್ತನೆಂಬೋದೆನಗೆ ಎಂದಿಗೆ ಬೇಡನಾನೆಂಬ ಅಸ್ವಾತಂತ್ರ್ಯ ವಸ್ತುವಿದ್ದಕಾರಣ ನೀನೆಂಬ ಸ್ವಾತಂತ್ರ್ಯ ಪ್ರಕಟವಾಯಿತು ರಂಗಏನೆಷ್ಟು ಸೌಭಾಗ್ಯವಿದ್ದ ಕಾಲಕು ನಿನಗೆದಾನ ಬೇಡುವ ಜೀವರಿಂದಲೆ ಶೋಭಿತನೀನೆ ನಿನಗೆ ಬೇರೆಕೊಟ್ಟು ಕೊಂಡಾಡೆಯಾನೀನೆ ನಿನಗೆ ತುತಿ ಮಾಡಿಕೊಂಡೆಯಾ ದೇವ ಶ್ರೀನಾಥ ಬಾರಯ್ಯ ಗೋಪಾಲವಿಠಲಏನಾದರು ನಿನಗೆ ಎನಗೆ ಬಿಟ್ಟದ್ದು ಅಲ್ಲ ೫

ಅಟ್ಟತಾಳ
ಎಂಟು ಸೇರಿನದೊಂದು ಘಂಟೆಯ ನಿರ್ಮಿಸಿಒಂಟಿಲಿ ಇಟ್ಟಿನ್ನು ಹಿಡಿದು ಬಾರಿಸಿದರೆಘಂಟೆಯಲ್ಲಿದ್ದ ನಾದ ಘಂಟೆಯಿಂದದ ತಿಳಿವುದೆಎಂಟು ತೊಲೆಯದೊಂದು ಸೊಂಟ ನಾಲಿಗೆಯನ್ನುಉಂಟಾದರಾಯಿತೆ ಘಂಟೆ ಶೋಭಿಸುವುದುಘಂಟೆಯಂತೆ ನೀನು ನಾಲಿಗೆಯಂತೆ ನಾನುಘಂಟೆಯೊಳಗೆ ನಾಲಿಗಡಕವಾಗಿಪ್ಪೋದುಬಂಟ ನಾ ನಿನ್ನೊಳು ಅಡಕವಾಗಿಪ್ಪೆನುನಂಟತನವು ನಿನಗೆನಗೆ ಹೀಗುಂಟು ವೈ-ಕುಂಠ ಮೂರುತಿ ರಂಗ ಗೋಪಾಲವಿಠಲಬಂಟರಿಂದಲೆ ನಿನ್ನ ಭಾಗ್ಯ ಶೋಭಿಸುವುದು ೬

ಆದಿತಾಳ
ಸಿರಿವಂತ ನೀನೆಂದು ಧರೆಯೊಳುತೋರಿದ ಪರಮಭಕುತನಾದ ದರಿದ್ರ ಸುದಾಮನೆಹರಿ ನಿರ್ದೋಷ ನೀನೆಂದು ಸ್ಮರಿಸಿ ಜಗದೊಳಗೆಹರಹಿದ ಅಜಮಿಳ ಪರಮ ದೋಷಕಾರಿಯೆಹರಿ ಸರ್ವೋತ್ತಮನೆಂದು ನರಗೆ ಅಂಜದಲಿದ್ದತರಳ ಪ್ರಹ್ಲಾದ ಪರಮ ಛಲ ಪಾತಕಿಯೆಹರಿಕಾರ್ಯವ ಅರಿತು ಅಸುರಗೆ ರಾಜ್ಯವ ಸೋತುಧರೆ ಚರಿಸಿದ ಪಾಂಡವರು ಅಜ್ಞಾನಿಗಳೆಹರಿ ನೀ ಭಕ್ತರ ವಶಕರನು ಎಂಬುವುದಕೆಪಿರಿದು ಕಾಲಕಟ್ಟಿದ ದುರುಳಳೇನಾ ಯಶೋದೆಹರಿ ನಿನ್ನ ಶರಣರ ಸಿರಿಯು ಇನ್ನೆಂತೆಂತುಸರಿಗಾಣೆ ನಾ ನಿನ್ನ ಶರಣರಿಗೆ ನಮೋ ಎಂಬೆಪರಮದಯಾಳುವೆ ಗೋಪಾಲವಿಠಲಮೊರೆಹೊಕ್ಕೆನಿನಗಿನ್ನು ನೆರೆ ಬದುಕಿಸನುಗಾಲ ೭

ಜತೆ
ನಿನ್ನ ಚಿತ್ತದಲಿದ್ದದೆನಗೆ ಮಾಡಿಸು ದೇವಇನ್ನೊಂದು ಆನೊಲ್ಲೆ ಗೋಪಾಲವಿಠಲ

ಜನ್ಮಾಂತರಗಳಲ್ಲಿ ತೊಳಲಾಡಿ
೧೯
ಸುಳಾದಿ
ಧ್ರುವತಾಳ
ಕೇಳಯ್ಯ ದೇವ ನಿನ್ನ ಊಳಿಗನ ಬಿನ್ನಹಏಳಿಲ ಮಾಡದಲೆ ಆಲಿಸಿ ಹರುಷದಿತಾಳಲಾರೆನೊ ತಾಯಗರ್ಭದೊಳಿಹ ದುಃಖಹೇಳಿಕೊಳ್ಳಲು ಜಲ ಪ್ರಳಯವಾಗಿಹುದುಏಳು ಪ್ರಾಕಾರ ಹೊಲೆಯ ಚೀಲದೊಳಗೆ ಹಾಕಿ ಬ-ಹಳ ಪರಿಲಿ ಕುದಿದು ಬಾಳುವೆನು ದೇವಕೋಳಿ ಕಲ್ಲನು ತಿಂದು ಗೋಳಿಟ್ಟು ಕೂಗಿದಂತೆಬಾಳಿದೆನಯ್ಯ ಗರ್ಭದೊಳಿಂಥ ಸುಖದಿಂದ ವೇಳ್ಯವಕಳೆದೆ ಹೀಗೆ ಏಳೈದು ಮಾಸ ಮೇಲೆ ಪುಟ್ಟಿದೆ ರಂಗಮೇಳವಗಟ್ಟಿ ಬಂಧುಗಳು ಎಲ್ಲರು ಬಂದುಕೇಳಿ ಮುಹೂರ್ತ ನಾಮಕರಣಗಳೆಲ್ಲನು ಮಾಡಿಪಾಲಿಸಿದರಾಗೆ ಜೋಗುಳಪಾಡುತಲಿಶೂಲೆ ಎಂದು ಉದರ ಚಾಲುವರಿದರಿನ್ನುಪಾಲನೆರೆವರಯ್ಯ ಬಾಲ ಹಸಿದನೆಂದುಆಲಸ್ಯದಿಂದ ಹಸಿದು ಅಳುವುತ್ತಿರೆ ಖಾರಗಳನು ಹಾಕುವರು ತಿಳುವಿಕೆ ಇಲ್ಲದಲೆಸೂಳೆಯ ಗುಡಿಸಿಲಂತೆ ಬಾಳಿವ್ಯಾಯಿತೆನ್ನದುಕೇಳಯ್ಯ ಹರಿ ಕರುಣಾಳುಗಳರಸನೆಆಲದೆಲೆಯಶಾಯಿ ಗೋಪಾಲವಿಠಲಘಾಸಿಮಾಡದೆ ವಾಕು ಲಾಲಿಪುದು ಜೀಯ ೧

ಮಠ್ಯತಾಳ
ಅನಂತ ಅನಂತ ದೇಹ ಅನಂತ ಅನಂತ ಜನುಮಅನಂತ ಅನಂತ ಬಂಧು ಅನಂತ ಅನಂತ ಬಳಗಅನಂತ ಅನಂತ ಸತಿ ಅನಂತ ಅನಂತ ಸುತರುಅನಂತ ಅನಂತ ತಾಯಿ ಅನಂತ ಅನಂತ ತಂದೆಅನಂತ ಅನಂತ ಪರಿಯಲಿ ಹೀಗೆ ಪುಟ್ಟಿ ಪುಟ್ಟಿಘನ್ನ ಬಂಧನದೊಳಗಿನ್ನು ಬೆಳೆದೆನಯ್ಯಎನ್ನದಾವುದೊ ಜಾತಿ ಎನ್ನದಾವುದು ಕುಲವೊಎನ್ನದಾವುದೊ ಗೋತ್ರ ಎನ್ನವರಾವರುಇನ್ನಾರದು ಪಿಂಡ ಇನ್ನಾರಿಗುದಿಸಿತುಬನ್ನಭವದೊಳು ಇನ್ನು ಹೊರಳಿ ಹೊರಳಿಮುನ್ನ ನೆಲೆಯ ದಾರಿಯನ್ನು ಕಾಣದೆ ಪೋದೆಚಿನ್ನುಮಯ ಮೂರ್ತಿ ಗೋಪಾಲವಿಠಲಹುಣ್ಣು ಹುಣ್ಣಾದೆನು ಜನನ ಮರಣಗಳಿಂದ ೨

ತ್ರಿಪುಟತಾಳ
ಜನುಮ ಜನುಮದಲ್ಲಿ ಅನುವಾಗಿ ಉಂಡಂಥಜನನಿಯ ಮೊಲೆಪಾಲು ಎಣಿಕೆಮಾಡಲು ಇನ್ನುಘನವಾದುವಯ್ಯ ಕ್ಷೀರವನಧಿಗಿಮ್ಮಡಿಎಣಿಸಲೊಶವೆ ಎಲುವು ಚರ್ಮ ರಕ್ತ ಮಾಂಸಕೊನೆಗಾಣದಾದೆ ಮೇರುವಿನ್ನಾಲ್ಕು ಮಡಿಕ್ಷಣ ಕ್ಷಣಕೆ ದೇಹ ಪರಿಮಾಣದ ಚರ್ಮಅನುವರಿತು ನೋಡಾ ಅವನಿಗಿಂದೈದು ಮಡಿದಣಿದೆನಯ್ಯ ನಾನಾ ಬವಣೆಯಿಂದಲಿನ್ನುಕೊನೆಗಾಣೆ ಕೊನೆಗಾಣೆ ಇನಿತು ಇಷ್ಟಷ್ಟೆಂದುಕುಣಿಯ ಒಳಗೆ ಬಿದ್ದ ಕುರುಡನಂತಲಿ ಇನ್ನುಒಣಗಿ ಬಾಯಾರಿ ಆಲ್ಪರಿದೆನು ಅನುಗೆಟ್ಟುಕನಸಿನಾಗಿನ ಗಂಟಿನಂತೆ ಈ ಕಾಯವುಎನಗೆ ನಂಬುಗೆಯಿಲ್ಲ ಎನ್ನವ ಮೊದಲಿಲ್ಲಅನುಗೆಟ್ಟೆ ಅನುಗೆಟ್ಟೆ ಅನಿಮಿತ್ತಬಾಂಧವತನು ಸಂಬಂಧಿಗಳು ತಮ್ಮತ್ತಲೆಳೆವರುನಿನಗೆ ನಾ ಮೊರೆಯಿಟ್ಟೆ ಗೋಪಾಲವಿಠಲನಿನಗೆ ನಾ ನಿನ್ನವನಾಗದಾದೆ ೩

ಅಟ್ಟತಾಳ
ಸುತನಾದೆ ನಾ ಮಾತಾಪಿತರಿಗೆ ಗತಿಯನ್ನುಪತಿಯಾದೆ ನಾ ನೋಡು ಸತಿಯಳಿಗೆ ಇನ್ನು ಪಿತನಾದೆ ನಾ ಎನ್ನ ಸುತರಿಗೆಲ್ಲ ಇನ್ನುಇತರ ಜನರಿಗೆ ಬಂಧುಬಳಗವಾದೆಮತಿಗೇಡಿ ನಾ ನಿನ್ನ ಗತಿಗೆ ದಾವದು ಅದೆಪಥ ತಿಳಿಯದು ಜಗತ್ಪತಿ ನಿನ್ನ ಪೊಂದೋದುಪತಿತಪಾವನ ರಂಗ ಗೋಪಾಲವಿಠಲಹಿತದಿಂದಲಿ ನಿನ್ನ ಸತತ ಭೃತ್ಯನೆನಿಸೊ ೪

ಆದಿತಾಳ
ನಿನ್ನವರ ಸೇವೆ ದೊರಕದು ಆವಾಗಲೆ ನಾನಿನ್ನವನಾಗುವೆ ಆವುದು ತಪ್ಪಲುಸಾವುದು ತಪ್ಪದು ಆವಲ್ಲಿ ಇದ್ದರುಕಾವುವ ನೀನಯ್ಯ ಆವುದುವಲ್ಲೆ ನಿನ್ನವನೆಂದೆನಿಸೆನ್ನಗೋವಳರೊಡೆಯ ಗೋಪಾಲವಿಠಲರೇಯಭಾವಶುದ್ಧ ನೀ ಎಂಬೊ ಭಕುತಿಯನೀಯಿನ್ನು ೫

ಜತೆ
ಸಂಸಾರವೆಂಬಂಥ ಶರಧಿಯ ದಾಟಲುಕಂಸಾರಿ ನಿನ್ನ ಪಾದಕೆ ನೀ ಗತಿ ಎನ್ನು ?

ಸರ್ವೋತ್ತಮನಾದ ಹರಿಯ
೨೨
ಸುಳಾದಿ
ಧ್ರುವತಾಳ
ಚಿನುಮಯಮೂರುತಿ ಚಿತ್ರವಿಚಿತ್ರನೆಘನಮಹಿಮ ಗಂಭೀರ ಕೀರ್ತಿದೋಷದೂರಅನಿಮಿತ್ತ ಬಂಧು ದ್ರೌಪದಿಮಾನದೊಡೆಯಗುಣಗಣಭರಿತ ಸೃಷ್ಟ್ಯಾದ್ಯಷ್ಟಕರ್ತನೆಸನಕಾದಿಗಳೊಡೆಯ ಜ್ಞಾನಾನಂದಪೂರ್ಣದಿನಕರಶತತೇಜ ದೀನಜನರಪಾಲದನುಜಮರ್ದನರಂಗ ಧರ್ಮಜ ನುತಪಾಲತನುಮನದೊಡೆಯ ಏ ತಾತ ಭಕ್ತವತ್ಸಲಅಣೋರಣೀಯಾನ್ ಎಂಬೊ ಶ್ರುತಿಪಾದ್ಯ ಅಪ್ರಾಕೃತಜನನಮರಣರಹಿತ ಜಾನಕಿರಮಣನೆಕೊನೆಗಾಣರು ನಿನ್ನ ಗುಣ ಎಣಿಸಿ ಅಜಭವರುಇನಿತು ವರ್ಣಿಸೆ ನಿನ್ನ ಎನಗಳವಲ್ಲವುನಿನಗೆ ನೀ ಕರುಣಿಸಿ ನಿನ್ನ ಭಕ್ತರನ್ನಘನತೆ ಮಾಡುವೆ ಎಣೆಯಾರು ನಿನಗಿನ್ನುದಿನಕರ ಶಶಿಗಳು ನಿನ್ನ ಆಜ್ಞೆಯಿಂದ ದಿನವ ಚರಿಸುತಲಿ ನಿನ್ನ ಸೇವಿಸುವರೊನಿನಗೆ ಸಮವಸ್ತು ಇಲ್ಲ ಗೋಪಾಲವಿಠಲನಿನಗೊಬ್ಬರು ಸಮರಿಲ್ಲ ಸರ್ವೋತ್ತಮ ೧

ಮಠ್ಯತಾಳ
ಭಕ್ತವತ್ಸಲ ನೀನೆಂಬುವುದಕಿನ್ನುಭಕ್ತರು ಕರೆಯೆ ಬಂದೊದಗೋದೆ ಸತ್ಯಸಕಲದೋಷದೂರ ನೀನೆಂಬುವುದಕಿನ್ನುಸಕಲದೋಷಿ ಅಜಮಿಳನ ಕಾಯ್ದದೆ ಸತ್ಯ ಸಕಲಜ್ಞಾನಭರಿತ ನೀನೆಂಬುವುದಕ್ಕೆಭಕ್ತವಾಲ್ಮೀಕನ್ನ ಉಕುತಿನಿತ್ತದ್ದೆ ಸತ್ಯಸಕಲಸಮರ್ಥನು ನೀನೆಂಬುವುದಕ್ಕೆಭಕ್ತಕುಬ್ಜೆಯನ್ನೆ ಚಕಿತಮಾಡಿದ್ದೆ ಸತ್ಯಸಕಲಸುಖಪೂರ್ಣ ನೀನೆಂಬುವುದಕ್ಕೆಸಕಲ ಪದಾರ್ಥದಿ ಸಾರತೋರೋದೆ ಸತ್ಯಲಕುಮಿರಮಣ ನಮ್ಮ ಗೋಪಾಲವಿಠಲಭಕ್ತರಿಚ್ಛೆಯಗಾರ ಭಕ್ತರ ಮನದೊಡೆಯ ೨

ತ್ರಿಪುಟತಾಳ
ಇನ್ನಾವ ಜನ್ಮದ ಎನ್ನ ಸಾಧನೆಯೊಇನ್ನಾವ ಜನ್ಮದ ಸಜ್ಜನ ಸಂಗತಿಯೊಇನ್ನಾವ ಜನ್ಮದ ಶ್ರವಣ ಮನನದ ಫಲವೊಇನ್ನಾವ ಜನ್ಮದ ದಾನ ಧರ್ಮದ ಫಲವೊಇನ್ನು ನಿನ್ನನು ಏನು ಅರಿಯದಲಿದ್ದೆನ್ನಘನ್ನ ಮಾಡಿನ್ನು ಅರಿದು ನಿನ್ನ ಪಾದಸುಖವನ್ನು ಸೇವಿಸುವಚೆನ್ನದಾಸರಮನೆ ಕುನ್ನಿ ಎನಿಸಿ ಎನ್ನನಿನ್ನ ಅಂಕಿತವಿತ್ತೆ ನಿನ್ನ ಕರುಣರಸಕ್ಕಿನ್ನು ಸರಿ ಉಂಟೆಎನ್ನಪ್ಪ ಎನ್ನಯ್ಯ ಎನ್ನ ಸಾಕುವ ದೊರೆಯೆನಿನ್ನ ಪಾದದ ಮೇಲೆ ಎನ್ನ ಶರೀರವನ್ನು ನಿವಾಳಿಸೆಇನ್ನು ಬಿಡುವೆನಯ್ಯ ನಿನ್ನಂತೆ ಸಾಕುವರಿನ್ನೊಬ್ಬರಿಲ್ಲವೊನಿನ್ನ ತೊತ್ತಿಗೆ ತೊತ್ತು ತೊಂಡ ನಾನಾಗುವೆಇನ್ನು ಅಜನು ನಿನ್ನ ನಾಮಬಲದಮೇಲೆ ನಿನ್ನ ತೊತ್ತುಕೊಂಬಿಅನ್ಯಾರನಲ್ಲಾಳು ಅನ್ನ ಭಕ್ಷ್ಯ ಉಳ್ಳಮನೆಯಿಂದ ಎಬ್ಬಿಟ್ಟುಕಣ್ಣಿಯ ಕಟ್ಹೊರಮನೆಯ ಹೊಗಿಸಬೇಡನಿನ್ನ ಪಾದವನಂಬೆ ಅನ್ಯರಿಗಿತ್ತರೆನಿನ್ನದೆ ಬಿರುದಿನ್ನು ಎನ್ನದೇನಾಯಿತುಪುಣ್ಯೋತ್ತಮ ನಮ್ಮ ಗೋಪಾಲವಿಠಲರೇಯಬೆನ್ನು ಬಿದ್ದೆನೊ ಬಲುಬಣ್ಣಗೆಟ್ಟ ತೊತ್ತು ೩

ಅಟ್ಟತಾಳ
ಭೂತ ಹತ್ತಿದವ ಯಾತ್ಯಾತರೊಳಗಿನ್ನುನೀತವರಿಯದಲೆ ತಾ ತಿರುಗಿದಂತೆನಾತ ಹತ್ತಿದ ಶ್ವಾನ ಜೋತು ಮುಖವು ಇರೆಪಥಬಿಟ್ಟೆನ್ನ ಮಾತು ಕೇಳುವುದೆವಾತಜಾತನ ಪ್ರೀತಿ ನಿನ್ನಲ್ಲಿ ಶಾಶ್ವತವಾದವ ನಿನ್ನಆ ತೆರದಿ ಬಿಡುವೆನೆ ಕೌತುಕವಲ್ಲ ಮನೋವಾಕ್ಕಾಯದಿ ಮಾಡಿಪ್ಪದಾತರದಾತ ಎನ್ನುತ್ತಮ ಮೂರುತಿಈ ತೆರದಿ ನೀ ಪ್ರೇರಕನಾಗಿ ಅನ್ಯಥಕ್ಕೆರಗಿಸುವುದುನೀತವಲ್ಲವೊ ದೇವ ಬಾತೀಗೆ ಬಾರದ್ದಿನ್ಯಾತಕ್ಕೆ ಜನ್ಮವುತಾ ತೆಗೆದಕೊದನ್ನ ? ಈ ದೇಹ ನಿನ್ನಲ್ಲಿಪ್ರೀತಿ ಒಂದಿದ್ದರಾಯಿತೆ ಸಾಕು ಶಾ-ಶ್ವತ ದೈವವೆ ಗೋಪಾಲವಿಠಲಸೋತೆನೊ ವಿಷಯದ ಯಾತನೆ ಬಿಡಿಸೊ ೪

ಆದಿತಾಳ
ನಿನ್ನಲ್ಲಿ ಭಕುತಿಯ ಇನ್ನುನಿಯ್ಯದಲೇವೆ ಅನಂತ ಭಾಗ್ಯವನಿತ್ತರೆ ನಾನೊಲ್ಲೆನೊನಿನ್ನಲ್ಲಿ ಭಕುತಿಯ ಚೆನ್ನಾಗಿ ಇತ್ತಿನ್ನುಅನ್ಯರಿಲ್ಲದ ಅರಣ್ಯದೊಳಿಡು ಲೇಸುಮನ್ನಣೆ ಮಾಡಿಸು ನಿನ್ನ ಬಲ್ಲವರಿಂದಮನ್ನಣೆ ಆನೊಲ್ಲೆ ನಿನ್ನರಿಯದವರಿಂದಹೊನ್ನು ಹೆಣ್ಣು ಮಣ್ಣು ಸಮವು ಮಾಡಿದಂಥಪುಣ್ಯಾತ್ಮರಮನೆಯ ಕುನ್ನಿ ಎಂದೆನಿಸುಪನ್ನಗಶಯನ ಗೋಪಾಲವಿಠಲರೇಯನಿನ್ನ ನಾ ಬಿಡೆನಯ್ಯ ಅನಂತಕಾಲದಲ್ಲಿ ೫

ಜತೆ
ಅನಂತ ಜನ್ಮಕ್ಕೆ ಅನಂತ ಮಾತಿಗೂಅನಂತ ನೀನೆಗತಿ ಗೋಪಾಲವಿಠಲ

ಮುಕ್ತಿಬೇಕೆನ್ನುವವರು ಹರಿಯಕರ್ತೃತ್ವ
೧೨೭
ಸುಳಾದಿ
ಧ್ರುವತಾಳ
ಚ್ಯುತರಹಿತವಾದಂಥ ಗತಿಯು ಬೇಕೆಂಬುವರಿಗೆಜಿತಜ್ಞಾನ ಭಕುತಿ ವಿರಕುತಿಯು ಬೇಕುಪತಿವ್ರತೆ ತಾನೆಂಬೋದು ಮನಕೆ ಲೇಶವ ತಾರದೆಪತಿತನಾಗಿರಬೇಕು ಅಂತರದಿಪತಿತ ಬಾಹ್ಯರ ಕಂಡು ಪರವೆ ಮಾಡದೆ ತನ್ನಮತಿಯಲ್ಲಿ ತಿಳಿದುಕೊಂಡು ಮೌನಧರಿಸಿಅತಿ ಆಯಾಸವು ಪಡದೆ ಅಲ್ಪ ಬಂದರು ತಾ ಪೂ-ರ್ಣತೆಯನ್ನು ಮಾಡಿಕೊಂಡು ತುಷ್ಟನಾಗಿಮತಿ ಎರಡು ಪ್ರಕಾರ ಮಾಡದೆ ಸಗುಣದಿಂದಾತಿವೇಗ ಬಿಡಿಸಿ ನಿರ್ಗುಣಕೆ ನಿಲ್ಲಿಸಿಹಿತಾಹಿತದ ದಾರಿ ವಿವರವನ್ನೆ ಅರಿದುಸತಿಸುತರ ಮನಕೆ ಸಿಕ್ಕದಲೆವ್ಯಥೆ ಬಂದ ಕಾಲದಲ್ಲಿ ಹರುಷ ಮನಕೆ ತಂದುಅತಿ ಸುಖ ಬಂದಾಗಲು ವ್ಯಥೆಯ ತಿಳಿದುಸತತ ನಿತ್ಯವಾದ ವಸ್ತು ಆವುದು ಅದಕೆಪ್ರತಿಬಿಂಬ ತಾನು ಎಂದು ತಿಳಿದುಕೊಂಡುಸ್ವತಂತ್ರಾಸ್ವತಂತ್ರ ವಿವೇಕವನ್ನೆ ತಿಳಿದಸ್ವತಂತ್ರ ದೃಢವ ತನ್ನಲ್ಲಿರವ ನೋಡಿಚತುರವಿಧ ಉಪಾಯದಿಂದ ತನ್ನ ಸ್ವರೂಪಚ್ಯುತನಲ್ಲವೆಂದು ತನ್ನ ತನ್ನ ಸ್ಥಿತಿಯನರಿದುಪತಿತನಾಗೋದೆಲ್ಲ ತನಗೆ ಬಂದ ದೇಹಗಳೆಂದುಹಿತ ಮಾಡದೆ ಅಲ್ಲಲ್ಲಿ ಮಮತೆ ಬಿಟ್ಟುತತುವ ವಿವೇಕ ಜ್ಞಾನವುಳ್ಳವನಾಗಿ ಶಾ-ಶ್ವತವೆಂಬ ಜ್ಞಾನ ಸಂಸಾರದಲ್ಲಿ ಬಿಟ್ಟುಕ್ರತು ಮೊದಲಾದ ಕರ್ಮ ಹರಿ ಮಾಡಿ ಮಾಡಿಸಿದಸ್ಥಿತಿಯನರಿದು ತನ್ನ ಕೃತಿಯ ಮರೆದುದ್ವಿತೀಯ ತೃತೀಯ ತತ್ವ ಚತುರವಿಂಶತಿ ದಶತೃತೀಯ ಮಂಡಲತತ್ವ ಭಾಗವರಿದುಅತಿ ದೂರನಾಗಿ ಅದಕ್ಕೆ ತತುವಿಲಕ್ಷಣ ತನ್ನ ಜಡವಸ್ತುವಿನಕಿಂತಶತಗುಣ ವಿಲಕ್ಷಣನೆಂದು ಮತಿ ಮಾತ್ರದದರಲ್ಲಿಸತತ ತಾನಾಗೆ ಶಾಶ್ವತ ವಸ್ತುವಿನ್ನುಜಿತವಾಗಿ ಪಿಡಿದುಕೊಂಡುಪತಿತಪಾವನನಾದ ಗೋಪಾಲವಿಠಲನಲ್ಲಿರತಿ ಉಳ್ಳವನಾದರೆ ಪಥಪೊಂದುವನು ಗತಿಗೆ ೧

ಮಠ್ಯತಾಳ
ಪ್ರಥಮಸಾಧನ ಜೀವ ಅಸ್ವತಂತ್ರದ್ವಿತೀಯ ಸಾಧನ ಹರಿ ಸ್ವತಂತ್ರ ಸ್ಮ್ರತಿತೃತೀಯ ಸಾಧನ ಜಡಚೇತನ ಜ್ಞಾನಚತುರ ಸಾಧನ ಪೂರ್ಣ ಅಪೂರ್ಣವುಚತುರ ಸಾಧನದೊಳಗೆ ಸರ್ವಸಾಧನವಡಕಮತಿಯಿಂದಲಿ ಇದನೆ ಮತ್ತೆ ವಿಸ್ತರಿಸಲುಶತ ಸಹಸ್ರವು ಆಗಿ ಸಾಧನ ಕಾಣಿಪುವುಸತುವ ಜೀವ ಮಾತ್ರಕ್ಕೆ ಸಾಧನ ಹೊರ್ತುಗತಿ ಆಗದು ಕಾಣೊ ಎಷ್ಟು ಸಾಧನೆ ಮಾಡೆಗತಿ ಅಗತಿ ಗಮನ ಸ್ವರ್ಗ ನರಕಗಳಲ್ಲಿಮಿತಿ ಇಲ್ಲದೆ ಪುನಃ ಸುತ್ತುತಲೆ ಇರುವಚ್ಯುತದೂರ ಚೆಲುವ ಗೋಪಾಲವಿಠಲಸ್ವತಃ ಒಲಿದರೆ ಒಲಿವ ಯತನಕ್ಕಗೋಚರ ೨

ರೂಪಕತಾಳ
ಕರ್ತೃ ನಾನೆಂದರೆ ದೋಷ ಫಲವು ಪ್ರಾಪ್ತಿಕರ್ತನಲ್ಲೆಂದರೆ ಸಾಧನಕ್ಕೆ ಫಲವಿಲ್ಲವ್ಯರ್ಥ ಸುಮ್ಮನಿಪ್ಪುದಕ್ಕೆ ಜೀವ ಜಡವಲ್ಲಕರ್ತೃ ಜೀವೆಂಬುವುದು ಶೃತಿ ಸ್ಮ್ರತಿಗಳಲಿ ಸಿದ್ಧಕರ್ತೃ ಜೀವೆಂಬುವುದು ಜೀವ ಸ್ವಾಧೀನಲ್ಲಕರ್ತೃನಿಷ್ಠ ಧರ್ಮ ಕೊಟ್ಟರಿವರಿಗೆ ಉಂಟುಕೊರ್ತೆ ಮಾಡುವನಲ್ಲ ಕೊಟ್ಟ ಕರ್ತೃತ್ವನ್ಯನಿಷ್ಟವಾಗಿ ಜೀವಖತ್ತಿ ತಾ ಇಪ್ಪುದುಸ್ಫೂರ್ತಿ ಬಂದರೆ ಅರಿವ ಸ್ಫೂರ್ತಿ ಬರದಿರೆ ಮರೆವಗಾತ್ರ ಹಸಿದರೆ ಅಳುವ ಗಾತ್ರ ತುಂಬಲು ನಲಿವಕೀರ್ತಿ ಅಪಕೀರ್ತಿ ತನ್ನದೆಂದು ಹಿಗ್ಗುವವ್ಯರ್ಥ ಇದರಿಂದ ಆನಂದ ಆಚರಿಸುವಸ್ವಾರ್ಥ ಸುಖವನರಿಯ ಹರಿ ಕರ್ಮಕನಾಗಿಸ್ಫೂರ್ತಿ ತಂದಿತ್ತರೆ ಸುಖವೆ ಬಡುವೆಮರ್ತರೆ ಮರೆವುವನು ಸ್ವಾರ್ಥ ಪುಟ್ಟದೊ ಹರಿಯು ತಿಳಿಸದಿರಲುಕರ್ತೃ ಕಾರ್ಯ ತಾ ವಿಷ್ಣು ಗೋಪಾಲವಿಠಲಪಾತ್ರಾಪಾತ್ರವರಿತು ಫಲವನೀವ ೩

ಅಟ್ಟತಾಳ
ಅನಾದಿಯಿಂದಲೆ ಹರಿ ತನ್ನ ಸ್ವಾತಂತ್ರ್ಯನಾನಾ ಜೀವರಲ್ಲಿ ವಿವರಮಾಡಿ ಇಟ್ಟಿರುವತಾನು ಅಭೇದನಾಗಿ ಸರ್ವಾಂತರದಿದ್ದುನ್ಯೂನಾಧಿಕವೆನಿಪ ಅಧಿಕಾರಾನುಸಾರಶ್ರೀನಾರಿಯಲ್ಲಿ ಶತಸಹಸ್ರ ಭಾರವನಿಟ್ಟಾನಿಲನಲ್ಲಿ ಶತವು ಇಟ್ಟುತಾನು ಇಟ್ಟನು ರುದ್ರನಲ್ಲಿ ತದರ್ಧವುನ್ಯೂನ ಇದರೊಳಗರ್ಧ ಇಂದ್ರಗಿತ್ತಾನಿಮಿಷ ಗಂಧವು ಋಷಿಕ್ಷಿತಿಪರು ಕ್ರ-ಮಾನುಸಾರವು ಇತ್ತ ಮನುಷ್ಯರಿಗೆಏನಿತ್ತ ಸ್ವಾತಂತ್ರ್ಯ ತಾನೆ ಇಟ್ಟುಕೊಂಡುನಾನಾ ಪರಿಯ ಆಟ ಆಡಿಸುವಆನೆಯಲ್ಲಿ ಇದ್ದು ಗೋಣಿಯ ಹೊರಿಸುವಹೊನ್ನಿನಲ್ಲಿದ್ದರು ತೃಣವು ಭಾರೈನಿತಿಘೆಚ್ಚಗೊಡ ಅಲ್ಲಲ್ಲಿ ಸ್ವಾತಂತ್ರ್ಯತಾನು ಸಮ ಸರ್ವತ್ರ ದ್ರವ್ಯಪೂರ್ಣಪ್ರಾಣಿಗಳಿಗೆ ಮಾತ್ರ ತಿಳಿಯಗೊಡದೆ ತನ್ನತಾನು ಬಡಿದಾಡಿಸುವ ಜೀವಿಗಳನತಾನು ಜ್ಞಾನ ಬಲಪೂರ್ಣನು ಆದರುಪ್ರಾಣಿಗಳ ಸ್ಥಿತಿಯ ಅರಿತು ಚರಿಯ ಮಾಳ್ಪಆನಂದ ಸುಖಸಾಂದ್ರ ಗೋಪಾಲವಿಠಲಜ್ಞಾನಿಗಳಿಂದೀಗೆ ತಿಳಿಯಪಡುವ ೪

ತ್ರಿಪುಟತಾಳ
ನೋಡು ಕರ್ಮಗಳಿನ್ನು ಅನಂತವಾಗ್ಯುಂಟುಮಾಡಿ ಪೂರೈಪುದೆ ಅಂತೆ ಎಲ್ಲಮಾಡಿದೆನೆಂಬ ಅಹಂಕಾರ ಬಂದೊದಗಿದರೆಮಾಡಿದವು ನಷ್ಟ ಮೇಲಿನ್ನು ದೋಷಮಾಡದಿಪ್ಪವೆ ನಡೆಯದ ಕರ್ಮ ಮಾಡೋದಕಿಂತಮೂಢನಾಗಿಪ್ಪುವಡೆ ಜಡನು ಲೇಸುನೋಡು ಸಕಲ ಕರ್ಮ ಆವುದರೊಳುಅಡಕ ಮಾಡಿದರೆ ಪುರುಷ ಕೊಡುವಂಥದುಮಾಡು ಹರಿಕಥಾಶ್ರವಣಾಖ್ಯ ಕರ್ಮವು ಮನಕೆಕೂಡಿದರೆ ಪುನಃ ಪುನಃ ಮಾಡಬೇಕೊಮಾಡಿದಂತೆ ಮನನ ಮಾಡಿ ಮನದಲ್ಲಿ ಗುರುತುಮಾಡಬೇಕಿನ್ನು ಮಹಾಶ್ರದ್ಧೆಯಿಂದಮಾಡಿ ಮಾಡಿಸುವಂಥ ಹರಿಯ ತಿಳಿದರೆ ಕೈಯ್ಯ-ಗೂಡುವುದು ಒಂದಕಾನಂತ ತಿಳಿಪಮಾಡಿ ಮಾಡಿ ಹೀಗೆ ಅರ್ಪಣ ಬುದ್ಧಿಯಲಿಮಾಡದೆ ಕರ್ಮಫಲ ಕೊಡುವವನಲ್ಲನೋಡು ಒಂದು ಜನ್ಮ ಶ್ರವಣವ ಮಾಳ್ಪನೋಡು ಒಂದು ಜನ್ಮ ಮನನ ಮಾಳ್ಪನೋಡು ಶತಜನ್ಮವು ನಿಧಿಧ್ಯಾಸವು ಮಾಡಿನೋಡುವ ಸಂಪ್ರಜ್ಞ ಸ್ಥಿತದಿ ಹರಿಯಮಾಡುವನು ಆಮೇಲೆ ಅಸಂಪ್ರಜ್ಞ ಸಮಾಧಿಕೂಡುವನು ಅನ್ಯ ಎಚ್ಚರವ ಮರೆದುನೋಡುವ ಜನರಿಗೆ ಜಡನಂದದಿ ಕಾಂಬಮಾಡನು ಬಾಹಿರ ವಿಷಯದಲಿ ಮನವಪಾಡಿದವರ ಪ್ರಾಣ ಗೋಪಾಲವಿಠಲನೀಡುವನು ಗತಿ ಅವರ ಯೋಗ್ಯತರಿತು ೫

ಅಟ್ಟತಾಳ
ತಿಳುವನಾಗಲಿ ಬೇಕು ತನಗಿಂದುತ್ತಮರಿಂದತಿಳಿದಾಡುತಿರಬೇಕು ತನ್ನ ಸಮಾನಿಕರಿಂದತಿಳಿಯ ಪೇಳಲಿಬೇಕು ತನಗಿಂದವರಾರಿಗೆತಿಳಿದವರವರ ಸ್ಥಿತಿಗಳು ಅರಿದಿನ್ನುತಲೆವಾಗಿ ಸತ್ವರಿಗಭಿಮುಖವಾಗಿ ಸಂಚರಿಸು-ತಲಿರಬೇಕು ಚಲಿಸದೆ ನೀಚರ್ಗೆಆಲ್ಪರಿಯದೆ ಅರ್ಧ ಬಲವಂತರ ಕಂಡುಹಳಿದು ತನ್ನ ನಿಜ ಬಡತನ ಪೇಳದೆಗಳಿಸಿ ದ್ರವ್ಯದಿ ಪೂಜೆ ಹರಿಯ ಒಲಿಸೇನೆಂಬಕಳವಳವನು ಬಿಟ್ಟು ಮಲರಹಿತನಾಗಿಸಲಿಲದಿಂದಲೆ ಹರಿ ಸಂತೋಷಬಡಿಸಿನ್ನುಕಿಲಿಕಿಲಿ ನಗುತಲಿ ದುಷ್ಟರ ಎದುರಿಗೆಸಿಲುಕದೆ ಅವರಿಂದರ್ಚನೆ ಒಮ್ಮೆ ಆದರುಬಲರಹಿತರ ಬಳಿಯಲಿ ಇದ್ದ ತನ್ನ ಭಾಗತಿಳಿದುಕೊಂಡು ಹರಿಗೆ ಅರ್ಪಣೆಮಾಡಿಜಲದಲ್ಲಿ ಇದ್ದ ಕಮಲದಂತೆ ಸಂಸಾರ-ಸುಳಿಗೆ ಸಿಕ್ಕದೆ ಬಯಲಿಗೆ ಬೀಳೊ ಬಗೆ ಇದೆಮಲೆತ ಮಲ್ಲರಗಂಡ ಗೋಪಾಲವಿಠಲಸುಲಭನು ಈ ಪರಿ ತಿಳುವಿಕಿದ್ದವಗೆ ೬

ಆದಿತಾಳ
ದ್ವೇಷಿಯಾದವರಿಗೆ ದ್ವೇಷಿಯಾಗಿರುವದಾಸನಾದವರಿಗೆ ಪೋಷಿಯಾಗಿರುವದೋಷರಹಿತನೆನ್ನೆ ದೋಷ ಕೆಡಿಸುವನಾಶರಹಿತನೆನ್ನೆ ನಾಶದೇಹವನೀಯದೋಷಕ್ಕೆ ಕ್ಲೇಶ ತಾ ಉಣಿಸಿ ಬಿಡುವುದುದ್ವೇಷಕ್ಕೆ ದುಃಖ ಶಾಶ್ವತವೆಂದೆಂದುದೋಷಕ್ಕೆ ಪ್ರಭೇದ ನಾನಾಬಗೆ ಉಂಟುದೋಷವಲ್ಲವೆ ನೋಡು ಅನೃತವೆಂಬೋದುಈ ಸಮಸ್ತ ಜನ ಬಿಡದಲೆ ಆಡೋದುನಾಶವಿಲ್ಲದ ಭೇದ್ಯಾಭೇದ್ಯ ಜೀವರಿಗಿತ್ತನಾಶನಾದೆನಲ್ಲ ಎಂದೆನುವುದು ತಾನುಮೃಷಕಾಣತ್ವಾದಿಗಳನೆಲ್ಲ ತಾನಾಗೆಶಾಶ್ವತವೆಂದು ತಾ ಕ್ಲೇಶವ ಬಡುವದುನಾಶ ತಿಳಿದು ತನ್ನ ತಾನೆವೆ ಭೇದಿಸಿಕೊಂಡುಮೋಸ ಹೋಗುವ ತನ್ನ ವಾಸಿಯ ಅರಿಯದದೋಷ ಇನ್ನದರಿಂದೆ ಹೇಸಿ ಸಂಸಾರದಿಬೇಸರದಲೆ ಇದ್ದು ಬೆಂದು ಬೆಂಡಾಗುವಏಸೇಸು ಜನುಮವು ಬಂದರು ದು-ರ್ವಿಷಯದಾಸೆಯ ಬಿಡದಲೆ ಲೇಸು ದೊರೆಯದಿನ್ನುಶ್ರೀಶನ ಕರುಣವು ಸಂಪಾದಿಸಲಾಯಿತೆಏಸೇಸು ಜನುಮದಿ ಮಾಡಿದಘವು ತೂಲ-ರಾಶಿಗೆ ವಹ್ನಿಸ್ಪರ್ಶವಾದಂತೆ ವಿ-ನಾಶನವಾಗೋವು ದೋಷ ಕಾರ್ಯಗಳೆಲ್ಲಭಾಸುರ ಮೂರುತಿ ಗೋಪಾಲವಿಠಲಶಾಶ್ವತನಾಗಿನ್ನು ಸಾಕುವ ಬಿಡದೆ ೭

ಜತೆ
ಹರಿ ಕರ್ತೃತ್ವ ತಿಳಿದು ತಾರತಮ್ಯ ಪಂಚಭೇದಾರಿದವರಿಗೆ ಒಲಿವ ಗೋಪಾಲವಿಠಲ

ಮಂತ್ರಾಲಯದ ಶ್ರೀರಾಘವೇಂದ್ರ
೧೬೩
ಸುಳಾದಿ
ಧ್ರುವತಾಳ
ತರಣಿ ಕುಲೋತ್ಪನ್ನ ತಪುತ ಕಾಂಚನವರ್ಣಪರಮ ಮಂಗಳಮೂರ್ತಿ ಪಾವನ್ನ ಸುಕೀರ್ತಿಕ್ಷರ ಅಕ್ಷರದಿಂದ ವಂದಿತ ವ್ಯಾಪುತಶರಣ ಜನರ ಪಾಲ ಶತ ಆನಂದ ಜನಕ ಪರಿಪೂರ್ಣ ಗುಣಭರಿತ ವರಜ್ಞಾನ ಪ್ರದಾತ ಅರಿತು ಫಲವ ತ್ರಿವಿಧರಿಗೆ ಇಪ್ಪುವ ದಾತಧರೆ ಈರೇಳು ರಕ್ಷಕ ಧರ್ಮ ಪ್ರತಿಪಾಲಕಸರಿಯಿಲ್ಲದ ದೇವ ಸರ್ವೋತ್ತಮ ದುರುಳ ಜನಮರ್ದನ ದುಃಖಾದಿಗಳ ದೂರತರುಣಿಯಿಂದ ಬೆರೆದು ವರಗಳನೀವುತನಿರುತದಿ ನಮ್ಮ ವಸುಧೇಂದ್ರ ಮುನಿಯ ಚೆಲ್ವಕರಕಮಲದಲಿ ನಿಂದು ಮೆರೆವ ದಾತಪರಮದಯಾಳು ರಾಮ ಗೋಪಾಲವಿಠಲ ನಿನ್ನದರುಶನವೆ ಇಂದಿನ ದಿನವೆ ಸುದಿನವು ೧

ಮಠ್ಯತಾಳ
ಆದಿಯಲ್ಲಿ ಆದರದಲ್ಲಿ ನಿನ್ನ ಮೋದದಿ ಅರ್ಚಿಸಿಸಾಧಿಸಿ ಪದವಿಯ ಐದುವ ಧರೆಗೆ ಸಾಧು ಜೀವರ ಪೊರೆಯೆ ಕ್ರೋಧರಹಿತ ನಿನ್ನಮೇದಿನಿಯೊಳಗಿಟ್ಟು ಹಾದಿಯ ತೋರಿದ ಅಜನು ನಿನ್ನಪಾದಸೇವೆಯ ಶೋಧಿಸಿ ಮಾಳ್ಪರಿಗೆಬಾಧೆ ಗೆಲಿಸುವುದು ಜನನ ಮರಣಗಳಪಾದ ಸೋಕಿದ ಶಿಲೆಯ ಪಾವನ್ನ ಮಾಡಿದಶ್ರೀಧರ ರಾಮ ಗೋಪಾಲವಿಠಲವಾದೇಂದ್ರಸುತರಿಗೊಲಿದು ಮೆರೆವ ಪ್ರೀತ ೨

ರೂಪಕತಾಳ
ಚೆಂದದಿ ಬೊಮ್ಮ ರುದ್ರ ಇಂದ್ರಾದಿಗಳು ಕುಂದದೆ ಸುರಋಷಿ ಗಂಧರ್ವಾದಿಗಳುಒಂದೊಂದಂಶದಿಂದ ಬಂದು ನಿನ್ನರ್ಚಿಸಿಮಂದ ಬುದ್ಧಿಗಳುಳ್ಳ ಜಗವ ಪಾಲಿಸುವರುಮಂದಮತಿಗಳು ಇವರ ಮನುಜರೆಂದರಿದರೆಪೊಂದುವರು ಮಹದಾದಿ ನಿರಯದಲ್ಲಿಸಂದರುಶನದಿಂದೆ ಸಕಲ ದೋಷ ದೂರೈಂದಿರೆ ಅರಸನು ಇಪ್ಪುವ ಇವರಲ್ಲಿಬಂದ ಬಂದವರ ಅಭೀಷ್ಟವ ಪೂರೈಸಿನಿಂದು ಮೆರೆವ ವಸುಧೇಂದ್ರಮುನಿಯ ಮನ-ಮಂದಿರದೊಳೊಪ್ಪುವ ರಾಮ ಗೋಪಾಲವಿಠಲಬಂಧಕ ಮೋಚಕ ಮಾಳ್ಪ ಶಕ್ತ3

ಝಂಪೆತಾಳ
ನಿನ್ನ ನಾಮ ಒಮ್ಮೆ ಸ್ಮರಿಸಿದಡಾಯಿತೆಘನ್ನ ದುರಿತಗಳೆಲ್ಲ ದೂರಾಗಿ ಪೋಗುವುವುನಿನ್ನ ಮೂರುತಿ ಒಮ್ಮೆ ನೋಡಿದಡಾಯಿತೆಜನುಮಾದಿಗಳು ಜಡಕ್ಲೇಶಗಳು ತರಿವುವುನಿನ್ನ ಅವಯವಂಗಳು ಎಲ್ಲಿ ನೋಡಲು ಪೂರ್ಣನಿನ್ನ ಬಳಿಯಲ್ಲಿ ಸಕಲಾದಿ ತೀರ್ಥಂಗಳುಂಟು ನಿನ್ನ ಓಲೈಸುತ್ತ ಸುರರಿಪ್ಪುವರುಘನ್ನ ಮಹಾಮಹಿಮ ಮೂಲರಾಮ ನಿನ್ನ ಪರಿವಾರಸಹಿತ ಎನ್ನ ಗುರು ವಸುಧೇಂದ್ರಮುನ್ನೆ ನಿನ್ನರ್ಚಿಸುವ ಭಾಗ್ಯವೆಂತೊಚಿನುಮಯಮೂರುತಿ ಗೋಪಾಲವಿಠಲನಿನ್ನ ಭಕುತರು ನಿನ್ನ ಮಹಿಮೆಗೆ ನಮೋ ೪

ತ್ರಿಪುಟತಾಳ
ಶರಣರ ಪಾಲಕ ದುರುಳರ ಶಿಕ್ಷಕಶರಣು ಶರಣು ನಿನ್ನ ಚರಣ ಕಮಲಕೆಪರಮಪಾವನನಾಮ ಪರಿಪೂರ್ಣಗುಣಕಾಮಸ್ಥಿರಯೋಗಿಗಳರಸ ಸ್ಥಿರಜೀವಿಯೊದುರಿತಗಿರಿಗೆ ಕುಲಿಶ ದೂರ ಅತಿದೂರ ಚರಣದಂದುಗೆ ಗೆಜ್ಜೆ ವರ ಜಾನು ಜಂಘೆ ಕಟಿ-ಕರ ಮೇಲೆ ಒಲಿವ ಕಿಂಕಿಣಿಯ ಗಂಟೆಪರಮಶೋಭಿತದ ಉದರ ವಕ್ಷಕೌಂಸ್ತುಭಕೊರಳಪದಕ ನಾನಾ ಸರಗಳಿಂದೊಪ್ಪುತಸಿರಿಗಂಧ ಕಸ್ತೂರಿ ಪರಿಮಳಭೂಷಿತವರ ಸಾರಂಗಪಾಣಿ ಕರ್ನಕುಂಡಲಧರಸರಸಿಜನಯನ ಸಿರಿಕಿರೀಟಧರಸ್ವರೂಪಾಲಂಕಾರದಿಂದೊಪ್ಪುವ ಶ್ರೀರಾಮಪರಮಶೋಭಿತನಾಮ ಗೋಪಾಲವಿಠಲನಿರುತ ವಸುಧೇಂದ್ರ ಮುನಿಯ ಮನದಿ ವಾಸ ೫

ಅಟ್ಟತಾಳ
ನಿತ್ಯ ಅನಿತ್ಯ ಜಡದಲಿಪ್ಪುವನು ನೀನೆವ್ಯಕ್ತ ಅವ್ಯಕ್ತನಾಗಿದ್ದು ಈ ಧರೆಯಭಕ್ತರುಗಳಿಗೆ ನೀ ಬಲ್ಲಂತೆ ತೋರುತ್ತಮರ್ತ್ಯಲೋಕದಿ ಬಂದು ಈ ಪ್ರತಿಮೆಅಂತರ್ಗತನಾಗಿ ಇದ್ದು ನಿತ್ಯ ಉತ್ಸವಗಳುಭಕ್ತರಿಂದಲಿ ಕೊಂಡು ಬಹು ಧರ್ಮದಿಂದಲಿನಿತ್ಯ ವಸುಧೇಂದ್ರ ಹೃತ್ಕಮಲದಿತತ್ತಳಿಸುತ್ತ ಮೆರೆವ ಸಿರಿರಾಮಮುಕ್ತಿಪ್ರದಾಯಕ ಗೋಪಾಲವಿಠಲಚಿತ್ತಶುದ್ಧನ ಮಾಡು ಭಕ್ತಿಜ್ಞಾನವ ನೀಡು ೬

ಆದಿತಾಳ
ದುರಿತದೂರ ದುಃಖನಾಶ ಕರುಣಾಕರ ಕಪಟರಹಿತಶರಣಪಾಲ ಸಿರಿಯರಸಗರುಡಗಮನ ಗರ್ವರಹಿತಸರಸಿಜಾಕ್ಷ ಸರ್ವೋತ್ತಮ ಸಾರಭೋಕ್ತ ಸರ್ವವ್ಯಾಪ್ತಕಾರಣನೆ ಕರ್ಮರಹಿತಭಾರಕರ್ತ ಭಯ ನಿವಾರಣತಾರಕನೆ ತ್ರಿಗುಣದೂರಮಾರನಯ್ಯ ಮಧುಸೂದನಮಾರುತೀಶ ಮಾಯಾರಹಿತಜಾರಚೋರ ಜನ್ಮರಹಿತಧೀರ ಶೂರ ದಿವ್ಯವಿಗ್ರಹಪರಮಪುಣ್ಯ ಪರಿಪೂರ್ಣಸುರಾದಿ ವಿನುತ ಗೋಪಾಲವಿಠಲಗುರು ವಸುಧೇಂದ್ರ ಮುನಿಯ ಈಶ ೭

ಜತೆ
ಗುರು ವಸುಧೇಂದ್ರದ ಕರಕಮಲದೊಳು ತೋರ್ಪಸಿರಿರಾಮ ಗೋಪಾಲವಿಠಲ ಶರಣು ಶರಣು

ಶ್ರೀಹರಿಯ ಸ್ವಾತಂತ್ರ್ಯವನ್ನೂ
೯೯
ಸುಳಾದಿಧ್ರುವತಾಳ
ದೀನ ರಕ್ಷಕ ನಿನ್ನಾಧೀನದವ ನಾನುದಾನ ಬೇಡಿದೆ ನಾ ಧರ್ಮವಂತಪ್ರಾಣಿಮಾತ್ರಕೆ ಹಿಂಸೆ ಪಾಪವೆನ್ನಿಂದೆನ್ನ ಬೇಡನಾನಾ ಜೀವರಲ್ಲಿ ನಿನ್ನಂತೆ ತಿಳಿಸೊಗೇಣು ಒಡಲಿಗಾಗಿ ಗೆದ್ದು ಹೋಗುವ ಮಾತುಏನಾದರೇನು ಎಂದೆಂದಿಗು ಬೇಡಗಾಣಿಗ ತಿಲವ ಪಿಡಿದು ಗಟ್ಟಿಸಿ ತೈಲ ತೆಗೆದುದಾನವ ಮಾಡಿದಂತೆ ಧರ್ಮ ಒಲ್ಲೆಮಾನಸದೊಳಗೆ ನಿನ್ನ ಮೂರುತಿ ಎನಗೆ ತೋರಿಹೀನ ಕರ್ಮಗಳೆಲ್ಲ ಹಿಮ್ಮೆಟ್ಟಿಸೊಶ್ರೀನಿವಾಸ ರಂಗ ಗೋಪಾಲವಿಠಲಕಾಣೆನೋ ನೀನಲ್ಲದಾರೊಬ್ಬರಿನ್ನೆಂದಿಗೆ ೧

ಮಠ್ಯತಾಳ
ಮಾಯಾಧರನ ಮಾಯ ತಿಳಿಯದನಕಮಾಯವ ನೀಗೊ ಉಪಾಯವ ಬಲ್ಲೆನೆಮಾಯ ಪೊಂದಿಸುವುದು ನಿನ್ನ ಅಧೀನವೊಮಾಯ ಬಿಡುವುದು ನಿನ್ನ ಅಧೀನವೊಕಾಯಕ್ಲೇಶವ ಬಿಟ್ಟು ಕರ್ಮವ ಮಾಡಿದರೆರಾಯ ನಿನ್ನ ಒಲುಮೆ ಆಯತಾಗುವುದೆಮಾಯಾರಹಿತ ದೇವ ಗೋಪಾಲವಿಠಲನಪಾಯಸ ತುಪ್ಪೆಂನ್ನಂಥ ನಾಯಿಗೆ ದೊರಕುವುದೆ ? ೨

ತ್ರಿಪುಟತಾಳ
ಗೋದಿಯ ಹೊಲದೊಳಗೆ ಹಾದಿ ದೊರಕಿದರೆಆದರದಿ ಮನೆಮನೆಗೆ ಹೋಗಿ ಔತಣ ಪೇಳಿಭೂದೇವ್ಯ ಮೇಲೆ ಭಕ್ಷ್ಯ ಸಂಖ್ಯೆಯ ಬರೆದುಪೋದ ಪೋದ ಜನಕೆ ಉಣಿಸೋರೇನೊಮಾಧವಗಿನ್ನು ಸಾಧಿಸುತ ಸ್ವಲ್ಪಆದೀತೆಂದು ಇನ್ನು ತಿಳಿಯದಲೆವಾದಿಸುತಲಿ ತತ್ವ ಬರೆದೊರೆದು ಪರರಿಗೆಬಾಧಿಸಿ ಬೋಧಿಸ ಪೇಳಿದೆನೊಆದದ್ದು ಇದರೊಳಗೆ ಒಂದಾದರು ಕಾಣೆಓದನಕೆ ಉಪಾಯ ಆಯಿತಲ್ಲಶ್ರೀದೇವಿ ಅರಸ ಗೋಪಾಲವಿಠಲ ನಿನ್ನಪಾದಕಮಲ ನಿರುತ ಸ್ವಾದವೆನಗೆ ತೋರೊ ೩

ಅಟ್ಟತಾಳ
ಇಂದು ಎನ್ನೊಳಗೆ ನೀ ಬಂದು ನಿಂದೆಯೊ ದೇವಾಂದು ನಾ ನಿನ್ನವ ಇಂದು ನಿನ್ನವನೆಒಂದಕೆ ಎನಗೊಂದು ಭೌತಿಕ ದೇಹವಚೆಂದದಲಿತ್ತು ದೂರದಿಂದ ನೋಡುತಲಿದ್ದುಅಂದವು ನಿನಗಿದು ಆಟವಾಗಿದೆ ಒಂದುಇಂದಿರಾಪತಿ ಎಮ್ಮ ಕುಂದುಗಳೇನಯ್ಯಹಿಂದು ಇಂದು ಮುಂದು ಎಂದೆಂದಿಗೆ ನಿನ್ನಪೊಂದಿದವರ ಮನೆ ಕಂದ ನಾನಯ್ಯ ದೇವಕಂದರ್ಪಜನಕ ಗೋಪಾಲವಿಠಲ ನಿನ್ನಸಂದರುಶನದಿಂದ ನಂದವಬಡಿಸು ೪

ಆದಿತಾಳ
ಬೇಡುವರನಂತ ನೀಡುವ ನೀನೊಬ್ಬಮಾಡುವಿ ಕರುಣವು ಮಾಡಿದರಿತು ಇನ್ನುಬಿಡುವಿ ನೀ ಭಕುತರನ ಭಕುತಿಯನ್ನುಮಾಡುವ ಸ್ವಾತಂತ್ರ್ಯ ಕೊಡುವುದೆಮಗಿನ್ನುನೀಡಿದರೆನಗುಂಟು ನೀಡದಿದ್ದರೆ ಇಲ್ಲಕೋಡಗನ ಕೊರವ ಆಡಿಸಿದಂತೆ ನೀನಾಡ ವಿಷಯಂಗಳಿಗೆ ಓಡಿ ಆಡಿಸಿ ಎನ್ನಕೇಡು ಮಾಡಿಸಿ ದೂರ ನೋಡುವಿ ಕರುಣದಿಗಾಢ ಅಹಂಕಾರವು ನೀಡದಲೆ ಎನ್ನಲ್ಲಿಕಾಡೊ ದುರಿತ ಹೋಗಲಾಡಿಸಿ ಪೊರೆ ಎನ್ನನಾಡದೈವರಗಂಡ ಗೋಪಾಲವಿಠಲಬೇಡುವೆ ನಿನ್ನನು ಬೇಡೆನೊ ಅನ್ಯರ ೫

ಜತೆ
ಸ್ವತಂತ್ರ ನೀನು ಅಸ್ವತಂತ್ರತರ ನಾನುದಾತರದಾತ ಗೋಪಾಲವಿಠಲರೇಯ

ಶ್ರೀಗುರುರಾಘವೇಂದ್ರರು ನೆಲೆಸಿರುವ ಮಂತ್ರಾಲಯದ
೭೫
ಸುಳಾದಿಧ್ರುವತಾಳ
ಧರೆಯೊಳಗೆ ನಮ್ಮ ಗುರು ರಾಘವೇಂದ್ರರಿನ್ನುಇರುತಿಪ್ಪ ವಿವರವ ಅರಿತಷ್ಟು ವರ್ಣಿಸುವೆಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿಹರಿಭಕ್ತಪ್ರಹ್ಲಾದ ವರಯಾಗ ಇಲ್ಲಿ ಮಾಡಿಸುರರಿಗಮೃತ ಉಣಿಸಿ ಪರಿಪರಿಕ್ರಿಯಮಾಡಿಪರಿಶುದ್ಧ ಆದನೆಂದು ಅರಿತು ಈ ಸ್ಥಳದಲ್ಲಿಗುರು ರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿಪರಲೋಕಸಾಧನ ಪರಿಪೂರ್ತಿ ಮಾಡಿಕೊಂಡುಸಿರಿಕೃಷ್ಣನ ಚರಣಕ್ಕೆರಗಿ ಸಂತೋಷದಲ್ಲಿಧರೆಯ ಮೇಲಿದ್ದ ಜನರ ಪೊರೆಯಬೇಕೆಂದೆನಲುಹರಿ ನೋಡಿದನಿವರ ಪರಮದಯಾಳುತನವಗುರುವಂತರ್ಯಾಮಿಯಾಗಿ ವರವ ನೀಡಲು ಜಗಕೆನರಹರಿ ತಾನೆ ನಿಂದು ನಿರುತ ಪೂಜೆಯಗೊಂಡುಸಿರಿವುಳ್ಳ ಕೀರುತಿಯ ಸುರರ ಪಾಲಕ ಚಕ್ರ-ಧರ ನಾರಾಯಣ ತಾನಿವರ ಸನ್ನಿಧಾನನಾಗಿ-ವರಿಗೆ ಫಲ ತಂದೀವ ಇಹಪರದಲ್ಲಿ ಇನ್ನುಕರುಣಾಕರ ರಂಗ ಗೋಪಾಲವಿಠಲ ತನ್ನಶರಣರ ಪೊರೆವಂಥ ಚರಿಯ ಪರಿಪರಿವುಂಟು ೧

ಮಠ್ಯತಾಳ
ನರಹರಿಕೃಷ್ಣರಾಮ ಸಿರಿ ವೇದವ್ಯಾಸಎರಡೆರಡು ನಾಲ್ಕು ಹರಿಮೂರ್ತಿಗಳುಪರಿವಾರ ಸಹಿತಾಗಿ ಸಿರಿಸಹಿತ ನಿಂದುಸುರಗುರು ಮಧ್ವಾಚಾರ್ಯರೆ ಮೊದಲಾಗಿತರುವಾಯದಲ್ಲಿನ್ನು ತಾರತಮ್ಯಾನುಸಾರಪರಿಪರಿಯತಿಗಳು ಇರುತಿಪ್ಪರು ಇಲ್ಲಿಹರುಷದಿಂದಲಿ ವೇದ ಬರೆದು ಶಾಸ್ತ್ರಗಳಿನ್ನುಪರಿಪರಿ ಪುರಾಣ ಭಾರತಾಗಮದಲ್ಲಿಸರಿಸರಿ ಬಂದಂತೆ ಸರಿಗಮವೆನುತಲಿಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನುಹರಿಯ ಪೂಜಿಸುತ ಇರುಳು ಹಗಲು ಬಿಡದೆಪರಿಪರಿ ವಿವರವ ಪರಿಪರಿ ಕೇಳ್ವರುಗರುಡವಾಹನ ರಂಗ ಗೋಪಾಲವಿಠಲ ತನ್ನಶರಣರ ಪಾಲಿಸುತಿರುತಿಪ್ಪನಿಲ್ಲಿ ೨

ತ್ರಿಪುಟತಾಳ
ನರಹರಿ ರೂಪನಾಗಿ ವಾಸವಾಗಿ ಇಲ್ಲಿದುರಿತದುಷ್ಕ್ರತ ಬ್ರಹ್ಮತ್ಯಗಳ ದೂರೋಡಿಸುವಸಿರಿರಾಮನಾಗಿ ವಾಸವಾಗಿ ಇಲ್ಲಿಪರಿಪರಿಯಿಂದ ದೇಶಾಂತರ ಅನ್ನಕಳಕೊಂಡುನರರಿಲ್ಲಿ ಬಂದರೆ ಸ್ಥಿರಪಟ್ಟಗಟ್ಟುವಸಿರಿಕೃಷ್ಣನಾಗಿ ವಾಸವಾಗಿ ಇಲ್ಲಿಪರಿಪರಿಯಲ್ಲಿ ಬಂದ ಪರಮಾತುರರಿಗೆವರವೀವ ಪುತ್ರೋತ್ಸವ ಮದುವೆ ಮುಂಜಿಹರಕೆಗಳ ಕೈಗೊಂಡು ಹರುಷಬಡಿಸುವವರ ವೇದವ್ಯಾಸನಾಗಿ ವಾಸವಾಗಿ ಇಲ್ಲಿಭರದಿಂದಲಿ ಬಂದ ದುರ್ವಾದಿಗಳನ್ನೆಲ್ಲದೂರ ಓಡಿಸಿ ಮುರಿದು ಅವರ ಕುಶಾಸ್ತ್ರವಹರಿ ಸರ್ವೋತ್ತಮನೆಂದು ಇರುವನಿಲ್ಲಿ ತೋರಿಶರಣ ಜನಕೆ ಇನ್ನು ವರಜ್ಞಾನಸುಧೆಯ ಕರೆದು ಕೊಡುತ ಇರುತಿಪ್ಪುವನಿಲ್ಲಿಸಿರಿವಂದಿತಪಾದ ಗೋಪಾಲವಿಠಲಪರಿಪರಿಯಲಿ ಓಲಗ ಕೈಕೊಳುತಿಪ್ಪ ೩

ಅಟ್ಟತಾಳ
ರಾಘವೇಂದ್ರನೆಂಬ ರೂಪ ತಾನೆಯಾಗಿರಾಘವೇಂದ್ರನೆಂಬ ನಾಮ ಇಡಿಸಿಕೊಂಡುರಾಘವೇಂದ್ರರಿನ್ನು ಮಾಡಿದಂಥ ಪುಣ್ಯಭೋಗವರಿತು ತನ್ನ ಭಾಗವತರ ಕೀರ್ತಿಸಾಧಿಸಿ ಸಲಹಲು ಜಗದೊಳಗೆಲ್ಲಮೇಘ ಸೂರ್ಯನಂತೆ ಅಮೋಘಕೀರುತಿಯನ್ನುರಾಘವ ಇವರಿಗೆ ರಾಜ್ಯದಿ ತಂದಿತ್ತರಾಘವೇಂದ್ರ ಮೂರುತಿ ಗೋಪಾಲವಿಠಲಭಾಗವತರಲ್ಲಿ ಬಹುಪೂಜೆಯನುಗೊಂಬ ೪

ಆದಿತಾಳ
ದಿನದಿನಕಿಲ್ಲಿ ನೂತನ ಪೂಜೆಗಳಾಗುವುವುದಿನದಿನಕಿಲ್ಲಿ ನೂತನ ಉತ್ಸವಗಳಾಗುವುವುದಿನದಿನಕಿಲ್ಲಿ ನೂತನ ವಾರ್ತೆಗಳಾಗುವುವುಜನರ ಸಂದಣಿ ಪ್ರತಿದಿನ ವಿಪ್ರಭೋಜನಜನರ ಕೈಯಿಂದ ಪ್ರತಿಜನರೀಪ್ಸಿತ ತುಂಬುವರುಜನುಮ ಸಫಲ ತಮ್ಮ ಜನನವ ನೀಗುವರುದಿನಸಪ್ತಶತವರುಷದಿನ ಪರಿಯಂತರದಿನಕರಶತತೇಜ ಜಗನ್ನಾಥ ತಾನಿಲ್ಲಿಅನುವಾಗಿ ತಾ ನಿಂದು ಜನರ ಪಾಲಿಪುದ-ಕ್ಕನುಮಾನ ಸಲ್ಲದು ಗುಣಗಣ ಪರಿ-ಪೂರ್ಣ ಗೋಪಾಲವಿಠಲ ಅಣೋ-ರಣೀಯ ಎಂಬುವಗೆ ಎಣೆಯಾರೊ ಜಗದೊಳಗೆ ೫

ಜತೆ
ಮಂತ್ರಸಿದ್ಧಿಯ ಕ್ಷೇತ್ರ ಇದು ನೋಡಿ ಕೋವಿದರುಮಂತ್ರಪ್ರತಿಪಾದ್ಯ ಗೋಪಾಲವಿಠಲನಿಂದ

ಚಲಾಚಲಗಳಲ್ಲಿ ಸರ್ವಕ್ರಿಯೆಗಳಲ್ಲಿ
೧೨೯
ಸುಳಾದಿಧ್ರುವತಾಳ
ಧ್ಯಾನ ಮಾಡು ಮನವೆ ದೈನ್ಯ ವೃತ್ತಿಯಲಿನ್ನುಜ್ಞಾನವಂತನಾಗಿ ಗೆದ್ದು ವಿಷಯಹಾನಿ ಲಾಭಗಳಿಗೆ ಹರುಷ ಕ್ಲೇಶವು ಪಡದೆಜಾಣತನದಿ ಚಿಂತಿಸು ಜಗದೀಶನ್ನನಾನು ಎಂಬೋದು ಬಿಟ್ಟು ನಿತ್ಯದಲ್ಲಿ ಇನ್ನುಜ್ಞಾನಪೂರ್ಣ ಶ್ರೀಹರಿಯ ಧ್ಯಾನಿಸಿನ್ನುಯೋನಿ ಎಂಬತ್ತು ಲಕ್ಷ ಬಂದ ಕಾಲಕ್ಕುನೀನು ಪಕ್ವ ಬಾರದ ಗತಿಯು ಇಲ್ಲಕಾಣೆ ನಿನಗೆ ಮುಖ್ಯ ಸಾಧನ ಸಂಪತ್ತುಮಾನವ ಯೋನಿಯಲ್ಲೆ ಗಳಿಸಬೇಕುಕ್ಷೆÆÃಣಿಯೊಳಗೆ ಈ ಜನ್ಮ ಬಪ್ಪುದೆ ದುರ್ಘಟಶ್ರೀನಾಥನ ಕಾರುಣ್ಯವೆಂದು ತಿಳಿಯೊಶ್ವಾನಸೂಕರ ನಾನಾ ಯೋನಿ ಬಂದ ಕಾಲಕ್ಕೆಮಾನಿಸನಾಗೆ ಚಿಂತಿಸಲಿಬೇಕುಜ್ಞಾನ ಅಲ್ಲಿ ದೊರೆಯದೊ ಕುಚ್ಛಿತ ಯೋನಿಯಲ್ಲಿ ನಾನಾ ಬವಣೆಯುಂಟು ನಾನೇನೆಂಬೆನಾನಾ ಕುಜೀವರಿನ್ನು ನಾಲ್ಕು ಬಗೆಯ ಕರ್ಮತಾವು ಮಾಡುತ್ತಿಹರೊ ದೇಹಧಾರಿಗಳಾಗಿಕಾಣಿಸುವರು ಎಲ್ಲ ಜಗದ ಒಳಗೆ ಇನ್ನುಜ್ಞಾನ ಮಾತ್ರ ನೀ ಪಿಡಿದು ಕುಳಿತುಕೊಗೇಣು ಮೊಳವು ಅಣುರೇಣುಸ್ಥಳದ ಪರಿನಾನಾ ದೇಹಧಾರಿಗಳಿಂದ ಆಗುವ ಕರ್ಮ ಕಾಣೊನಿನ್ನಲ್ಲಿ ಇದ್ದು ಸ್ವಾಮಿ ಮಾಡಿಪನೆಂದುಖೂನ ಪಿಡಿದು ಕುಣಿಕುಣಿದಾಡೊನಾನು ಅಸ್ವತಂತ್ರ ನನ್ನಂತೆ ಅವರೆಂದುಕಾಣು ಅಲ್ಲಿ ವ್ಯಾಪಾರ ಹರಿಯೆ ಎಂದುಮಾನವ ಬಿಟ್ಟು ಮಮತೆಯಲ್ಲಿ ನಮೋ ಎಂದುಪ್ರಾಣನ ಸಾಕ್ಷಿಯಾಗಿ ಹರಿಗರ್ಪಿಸುಹೀನರಲ್ಲಿ ದಯಘನಗಳಲ್ಲಿ ಸೇವೆನೀನು ಅರಿತು ಮಾಡು ನಿತ್ಯದಲ್ಲಿದೀನಜನಬಂಧು ಗೋಪಾಲವಿಠಲನ್ನಕಾಣು ಚೇತನಾಚೇತನದಿ ಇಪ್ಪನೆಂದು ೧

ಮಠ್ಯತಾಳ
ಭಾವಾದ್ವೈತ ಕ್ರಿಯಾದ್ವೈತ ದ್ರವ್ಯಾದ್ವೈತೈವು ಮೂರನ್ನು ದೇವನಲ್ಲಿ ಇಪ್ಪುವೆಂದು ಅರಿದು ನೋಡುಆವಾವಲ್ಲಿ ಚಿಂತಿಸು ಬಿಡದೆಕಾವ ಕೊಲ್ಲುವಲ್ಲಿ ಈವಲ್ಲಿ ಕೊಂಬಲ್ಲಿಧಾವತಿಗಳಲ್ಲಿ ಸುಲಭ ಸೂಕ್ಷ್ಮದಲ್ಲಿಭಾವ ಕ್ರಿಯಾದ್ರವ್ಯ ದೇವದೇವ ಎಂದು ನೀವಿವೇಕದಿ ನೀಚ ಉಚ್ಚ ಕ್ರಮದಿಜೀವಿಗಳ ಗತಿಯು ಜಿತವಾಗಿ ಅರಿತುಭಾವಶುದ್ಧದಲಿ ಭಕುತಿಪೂರ್ವಕದಿಂದನೀ ಒಲಿಒಲಿದು ತಿಳಿದು ಒಲಿಸು ಒಲಿಸಿ ಪಾಡುಸೇವ್ಯ ಸೂತ್ರವು ನಿಂದ್ಯ ನೋವು ದಂಡನೆಯೆಲ್ಲದೇವ ಪೂಜ್ಯ ಎಂಬ ಭಾವಕ್ರಿಯವ ಗಳಿಸುಆವ ವಿಷಯದಲ್ಲಿ ದೇವದೇವರನ್ನುಸಾವಧಾನದಿ ಹುಡುಕಿ ಪಾವನಾಂಗನಾಗೊಕೋವಿದರ ಪ್ರಿಯ ಗೋಪಾಲವಿಠಲಕಾವ ನಿನ್ನ ಬಿಡದೆ ಆವಲ್ಲಿ ಇದ್ದರು ೨

ರೂಪಕತಾಳ
ನೋಡಿಸಿದರೆ ನೋಡು ಆಡಿಸಿದರೆ ಆಡುಕೂಡಿಸಿದರೆ ಕೂಡು ಓಡಿಸಿದರೆ ಓಡುಬೇಡಿಸಿದರೆ ಬೇಡು ನೀಡಿಸಿದರೆ ನೀಡುಮಾಡಿಸಿದರೆ ಮಾಡು ವಿಹಿತ ಅವಿಹಿತಗಳುಕೇಡು ಎಂದು ತಿಳಿಯೊ ಅವಿಹಿತ ಮಾಡಿಸಿದರೆಕೇಡು ಲಾಭಂಗಳು ಮಾಡಿಸಿದರೆ ನೀನುಬೇಡಿಕೊ ದೈನ್ಯದಿ ಪಶ್ಚಾತ್ತಾಪನಾಗುನೋಡು ನಿನಗಾವ ವಿಷಯಂಗಳಲ್ಲಿನ್ನುಮಾಡಿಸುವ ಅನುಭವ ಹರಿಯೆ ಎನ್ನುಕೂಡಿಸು ಯಾವತ್ತು ಜಡಚೇತನಗಳಲ್ಲಿಗೂಡು ಮಾಡಿಟ್ಟಂಥ ಮೂರ್ತಿಗಳೆಲ್ಲಕ್ರೋಡೀಕರಿಸಿ ಧ್ಯಾನ ಮಾಡು ನಿನ್ನ ಮನದಿಕೇಡು ತೋರದು ನಿನ್ನ ಸಾಧನಕ್ಕೆಮೂಢ ಮತಿಯಲ್ಲಿ ಜಡ ಪ್ರತಿಮೆ ಪಿಡಿದುಮಾಡೊ ಅಲ್ಲಿ ಪೂಜೆ ಇದೆ ಬಗೆ ಚಿಂತಿಸುಷೋಡಶ ಕಳೆಯುಳ್ಳ ಲಿಂಗದ ಒಳಹೊರಗೆಮಾಡಿ ಮಾಡಿಸುವ ಹರಿಯ ಮಹಿಮೆ ತಿಳಿನಾಡಿಗೊಡೆಯ ರಂಗ ಗೋಪಾಲವಿಠಲೈಇಡಿಲ್ಲದ ದೈವನ ನೋಡು ಮನದಿ ನಿಲ್ಲಿಸಿ ೩

ಝಂಪೆತಾಳ
ಒಂದೆ ಪಿಡಿದು ಮತ್ತಾನಂತವ ಚಿಂತಿಸುಒಂದೆ ಚಿಂತಿಸುತ್ತಾನಂತವೆಲ್ಲತಂದುಕೊ ನಿನ್ನಲ್ಲಿ ಕ್ಷಣಕ್ಷಣಕ್ಕೆ ಸ್ಮ್ರತಿಯನ್ನುಸಂದೇಹ ಬಿಟ್ಟು ಸರ್ವೋತ್ತಮನೆಂದು ಭಿ-ನ್ನಾದಿಯನ್ನು ತಿಳಿಯದಿರು ಹರಿ ಅಂಶಿ ಅಂಶಕ್ಕೆಒಂದೊಂದೆ ಪೂರ್ಣ ಬಲ ಉಳ್ಳವೆಂದುಇಂದ್ರಿಯಗಳು ಎಲ್ಲ ಪೂರ್ಣಮಯ ಎಂತೆಂದುಒಂದು ರೂಪನ್ನ ಇಂದ್ರಿ ಭೇದವುಪೊಂದಿಪ್ಪುವು ಕಪಿಲಾದಿ ನಾಮಗಳಿಂದಗಂಧ ಆಘ್ರಾಣಿಸುತ್ತ ನೋಡುತ್ತ ಕೇಳುತ್ತನಿಂದಿಪ್ಪುವು ಪೂರ್ಣವಾಗಿ ತನ್ನ ಮನಬಂದಂತೆ ಕ್ರೀಡೆಗಳನ್ನು ತೋರಿಸಂದಿಸಂದಿಲಿ ಇನ್ನು ವ್ಯಾಪ್ತನಾಗಿ ಇನ್ನುಒಂದು ಪಿಡಿದು ನೋಡಿ ಆಡಿ ಕಂಡೆವೆನಲುಇಂದಿರೆಗೆ ತಿಳಿಯಲಗೋಚರವುಬಂದು ನಿಲ್ಲುವ ತತ್ತತ್ಯೋಗ್ಯತಾನುಸಾರಸಂದರುಶನವಿತ್ತು ಸಲಹುವನೂಂದು ಕೊಂಡು ಮತ್ತೊಂದು ಕೊಡುವನಲ್ಲಒಂದು ಕೊಳ್ಳದೆ ಮತ್ತೆ ಈವನಲ್ಲಒಂದು ಕೊಟ್ಟರೆ ಮತ್ತೊಂದು ಕೊಡುವನಲ್ಲಒಂದಕ್ಕನಂತವ ಅನಂತಕ್ಕೆ ಒಂದೀವಾ-ನಂದ ಮೂರುತಿ ನಮ್ಮ ಗೋಪಾಲವಿಠಲಾಂದಿ ಕೈತೋರಿ ಅಂದದಂತೆ ಪೊಳೆವ ೪

ತ್ರಿಪುಟತಾಳ
ಮಾಡುವ ಕರ್ಮವುಂಟು ನೋಡುವ ಕರ್ಮವುಂಟುಬೇಡುವ ಕರ್ಮವುಂಟು ಮಾಡಿಸುವುದುಂಟು ಮಾಡಿಮಾಡಿಸುವರು ಸಾಂಶ ಸುರಾದಿ ದಿವಿಜರುಮಾಡುವರು ಮಾತ್ರ ನಿರಾಂಶರುನೋಡುವರು ಉತ್ತಮರು ಕರ್ಮಾಧಮರುಬೇಡಿ ಮಾಡುವ ಕರ್ಮ ಸರ್ವ ಜೀವರಿಗುಂಟುಕೂಡುವ ಮಲಗುವ ಓಡುವ ನಿಲುವಮಾಡುವ ನಾಲ್ಕು ಕರ್ಮದೇಹಿಗಳುಮಾಡಿಸುವ ಹರಿಯೆಂದು ತಿಳಿಯಬೇಕುಮಾಡಿಸುವರ ದಯ ಮಾಡುವರ ದಯನೋಡುವರ ದಯ ಬೇಡು ನಿನಗೆ ಬೇಕುಮಾಡುವ ಕರ್ಮವು ಈ ಪರಿ ತಿಳಿಯದೆಮಾಡಲು ಏನೇನು ಫಲಬಾರದುನಾಡನೆಲ್ಲ ತಿರುಗಿ ತೀರ್ಥಾದಿಗಳ ಮಿಂದುಮಾಡೆ ನಾನಾ ದಾನ ಯಜ್ಞಾದಿಗಳೆಲ್ಲಕೂಡಿಸವು ಗತಿಗೆ ಎಂದೆಂದಿಗುಮಾಡಿದವರ ಪ್ರಾಣ ಗೋಪಾಲವಿಠಲಮಾಡಿ ಮಾಡಿಸುವಂಥ ಕರ್ತನರಿತು ಬಾಳು ೫

ಆದಿತಾಳ
ಮುಕ್ತ ಅಮುಕ್ತ ಚೇತನದೊಳಗೆಲ್ಲನಿತ್ಯಾನಿತ್ಯ ಜಡಗಳ ಒಳಗೆಲ್ಲತತ್ತತ್ತದಾಧಾರ ಸತ್ಪ್ರವೃತ್ತಿಯೊನಿತ್ಯ ಮುಕುತ ನಿರ್ಲಿಪ್ತ ನಿರಾಶ್ರಯಸತ್ವಾದಿರಹಿತ ನಿತ್ಯಾನಂದಮೂರ್ತಿಚಿತ್ರಚಾರಿತ್ರ ವಿಮಲಜ್ಞಾನಪೂರ್ಣಭಕ್ತವತ್ಸಲ ಬಂಧಕಮೋಚಕದೇವರಕ್ತಶುಕ್ಲ ಶ್ಯಾಮಲ ವರ್ಣತತ್ತಳಿಸುವ ಹರಿಮೂರ್ತಿಯಸುತ್ತ ಪರಿವಾರ ನಿಲ್ಲಿಸಿ ನಿನ್ನಯಹೃತ್ಕಮಲದಲ್ಲಿ ನಿತ್ಯ ವಾಸವಾದನಿತ್ಯ ಮೂರುತಿಯನು ಚಿತ್ತಜನಯ್ಯ ಸರ್ವೋತ್ತಮ ಹರಿಯಮತ್ತೆ ಪೇಳಿದಂತೆ ಭಗವಂತನೆ ರೂಪ-ಕತ್ಯಂತ ಅಭೇದ ಚಿಂತಿಸಿ ತುತಿಸಿಪ್ರತ್ಯೇಕ ಪ್ರತ್ಯೇಕಾಧಿಷ್ಠಾನಗಳಲ್ಲಿಭಕ್ತಿಪೂರ್ವಕದಿ ಎತ್ತಿ ಕರವ ಮುಗಿದ-ತ್ಯಂತ ಮಹಿಮನೆ ನಿತ್ಯ ಕಾಯೊ ಎಂದೂತ್ತಮರ ಸಂಗ ಜತ್ತಾಗಿ ಮಾಡಿನ್ನುಸತ್ಯಸಂಕಲ್ಪ ಗೋಪಾಲವಿಠಲರೇಯತುತ್ತು ಮಾಡಿಪಂತೆ ಸಾಧನ ಮಾಡಿಪ ೬

ಆದಿತಾಳ
ಎಂತೆಂತು ಬಿಂಬನ್ನ ಚಿಂತನೆ ಮಾಡಲುಅಂತಂತೆ ಬರುವನು ಪ್ರತಿಬಿಂಬಕ್ಕೆ ಸ್ವ-ತಂತ್ರ ಒಂದು ಮಾತ್ರ ಹೊರ್ತಾಗಿಚಿಂತಿಸಿ ನೋಡಲು ಜೀವ ಚಿದ್ರೂಪನುಸಂತೋಷಾದಿಗಳೆಲ್ಲ ಹರಿಯಾಧೀನ ನಿ-ರಂತರ ಪರಾಧೀನ ಜೀವ ಸ್ವಾಮಿಭೃತ್ಯ ನ್ಯಾಯವೆಂದು ಉಪಾಸನೆ ಎದುರಿಲಿಚಿಂತಿಸಿ ಕರಮುಗಿದು ಚಿಂತನೆ ಮಾಡಲುಸಂತೋಷದಲ್ಲಿ ಪ್ರಾಣದ್ವಾರಚಿಂತಾಯಕ ತನ್ನ ಮೂರ್ತಿ ತೋರಿ ಭವ-ಗ್ರಂಥಿಯ ಹರಿಸುವ ತಡವಿಲ್ಲದೆಶಾಂತಮೂರುತಿ ನಮ್ಮ ಗೋಪಾಲವಿಠಲನಿಂತಲ್ಲಿ ನಿಧಾನವಾಗಿ ಉಣಿಸುವ ೭

ಜತೆ
ಚಲಾಚಲಗಳಲ್ಲಿ ಈ ಪರಿ ಧ್ಯಾನಿಸೆಒಲಿವ ಗೋಪಾಲವಿಠಲ ಇವಗೆ ಕರುಣದಲ್ಲಿ

ತಮ್ಮೆಲ್ಲ ವರ್ತನೆಗಳಿಗೂ ಸುಖ
೧೦೧
ಸುಳಾದಿಧ್ರುವತಾಳ
ನಿನ್ನ ಚಿತ್ತ ಎನ್ನ ಭಾಗ್ಯ ಇನ್ನೊಬ್ಬರೆನಗಿಲ್ಲಮನ್ನಣೆ ಅಮನ್ನಣೆ ನಿನ್ನದೋ ಸರ್ವೇಶನೆಬೆನ್ನು ಕೊಟ್ಟೆನೊ ನಿನಗೆ ಎನ್ನ ಏನನ್ನ ಮಾಡುಕಣ್ಣಿಲಿ ಕಂಡಷ್ಟು ಎನ್ನ ಕೇಳೋಣನಿನ್ನ ಬಣ್ಣಿಸಿ ನಾನು ಘನ್ನ ಬೇಡುವುದಿಲ್ಲಎನ್ನದೆಂಬೊ ಅಹಂಕಾರವನ್ನು ಬಿಡಿಸೊ ದೇವಎನ್ನ ಸಂಕಲ್ಪವೆಲ್ಲ ನಿನ್ನ ಅಧೀನವಯ್ಯನಿನ್ನ ಸಂಕಲ್ಪಕಿನ್ನು ಛಿನ್ನ ಭಿನ್ನಗಳಿಲ್ಲನಿನ್ನಚ್ಛೆ ನೀ ಪ್ರೇರಕ ನಿನ್ನದೊ ಎನ್ನ ಭಾರೈನ್ನು ಮುನ್ನೆಂದೆಂದು ಇನ್ನಿದೆ ಸಿದ್ಧವಯ್ಯೈನ್ನೊಂದು ನಾನರಿಯೆ ಎನ್ನೊಡೆಯನೆ ಕೇಳೊಮನ್ನವಚನಕಾಯದಿ ಇನ್ನೊಂದು ಹಾರೈಸೆಬಿನ್ನಹ ಮಾಡಿದೆನೊ ನಿನ್ನ ನಿಲ್ಲಿಸಿಕೊಂಡುಚಿನ್ಮಯ ಮೂರುತಿ ಗೋಪಾಲವಿಠಲನಿನ್ನ ಬೇಡುವೆನಲ್ಲದೆ ಅನ್ಯರಿಗೆ ಆಲ್ಪರಿಯೆ ೧

ಮಠ್ಯತಾಳ
ನಿನ್ನಿಂದಲಿ ದತ್ತ ಇನ್ನಾಗದ ವಸ್ತುಅನಂತವಿತ್ತರು ಇನ್ನೊಲ್ಲೆ ಇನ್ನೊಲ್ಲೆಅನ್ಯಕರ್ಮವ ಮಾಡಿ ಅನ್ಯದೈವವ ಬೇಡಿಎನ್ನುದರ ಪೂರ್ತಿಯಿನ್ನು ಮಾಡೋಕಿಂತಬನ್ನಗೆಟ್ಟವನಾಗಿ ಅನ್ಯವಿಷಯ ಬಿಟ್ಟುನಿನ್ನವನಾಗಿನ್ನು ಅನ್ಯವಿಲ್ಲದೆ ಅ-ರಣ್ಯವ ಸೇರಿನ್ನು ಹಣ್ಣುಹಂಪಲು ಮೆದ್ದುನಿನ್ನ ವಿಷಯ ಕರ್ಮ ನಿನ್ನ ವಿಷಯ ಧರ್ಮೈನ್ನೇನಾದದ್ದು ನಿನ್ನ ಪರವ ಮಾಡಿಎನ್ನ ಇಡಿಸಿದರೆ ಘನ್ನ ಉಪಕಾರವುಇನ್ನೆಂದಿಗೆ ಮರೆಯೆ ಚಿನ್ಮಯಮೂರುತಿ ಗೋಪಾಲವಿಠಲನಿನ್ನ ಚಿತ್ತಕೆ ಬಾರದ್ದಿನ್ನೆಂದಿಗು ಒಲ್ಲೆ ೨

ರೂಪಕತಾಳ
ಹಾಗೆ ಇತ್ತೇ ಇನ್ನು ಹಾಗೆ ಆಗಲಿ ದೇವಹೀಗೆ ಇತ್ತೇ ಇನ್ನು ಹೀಗೆ ಆಗಲಿ ದೇವಹಾಗೆ ಹೀಗೆ ಇನ್ನು ಎರಡೂ ಆಗಲಿದೇವಆಗಲಂಜುವನ್ಯಾರು ಈಗ ಅಳುಕುವನ್ಯಾರುಆಗುವಂಥ ಕಾರ್ಯ ಆಗಲೀಸನು ಯಾರುಆಗದಂಥ ಕಾರ್ಯ ಆಗು ಮಾಡುವನ್ಯಾರುಬಾಗಿದೆ ನಿನ್ನ ಚರಣಂಗಳಿಗೆ ನಾನುಹೇಗಾದರು ಲೇಸೆ ನೀನಿತ್ತ ಭಾಗ್ಯಕೆಹೋಘೊರಡೆಂದರೆ ಆಗೋದೆ ಎನ್ನಿಂದಸಾಗಿ ಸಾಗಿ ಇನ್ನು ತೂಗೆ ತೊಟ್ಟಿಲುಹೋಗಿ ಹೋಗಿ ತನ್ನ ಸ್ಥಳಕೆ ನಿಲ್ಲುವುದುಸಾಗರಶಯನ ಗೋಪಾಲವಿಠಲರೇಯಭೋಗ ತೀರಿಸಿ ದಾಸನಾಗ ಮಾಡೊ ದೇವ ೩

ಝಂಪೆತಾಳ
ನೀ ನಿತ್ಯ ನಾ ನಿತ್ಯ ಅನಾದಿಕಾಲದಿಏನು ಆಗುವ ಪ್ರೀತಿ ನಿನ್ನಿಂದಲೆನಗೆಕಾಣದೊಂದುಂಟೆ ನಿನ್ನ ಕಂಡವರಿಗೆಜಾಣತನವೇಕೆ ಎನ್ನೊಡನೆ ಛಲಬೇಡಪ್ರಾಣರಿಗೊಂದೊಂದು ಅನಿತ್ಯ ವಸ್ತುಗಳಲಿಏನು ಭ್ರಮೆ ಪುಟ್ಟಿಸಿ ಮರುಳು ಮಾಡುವೆ ದೇವಶ್ರೀನಾಥ ನಿನ್ನ ಸಾಹಸಕ್ಕೆ ನಾನೇನೆಂಬೆಧೇನಿಸಿ ನೋಡೆ ಶತಾನಂದಗೆ ವಶವಲ್ಲಕಾಣುವನೆ ಎನ್ನಂಥ ನರಗುರಿಯು ನಿನ್ನನುಶ್ರೀನಿವಾಸನೆ ನಮೋ ನಮೋ ಎಂಬೆನೊದೀನರಕ್ಷಕ ದೇವ ಗೋಪಾಲವಿಠಲನೀನು ಕುಣಿಸಿದಂತೆ ನಾನು ಕುಣಿವೆನಯ್ಯ ೪

ತ್ರಿಪುಟತಾಳ
ವಾಸುದೇವನೆ ನಿನಗೆ ವಾಸಿ ಒಂದೇ ಕೇಳೊಈಶನೆಂಬೊ ಪೆಸರು ನಿನ್ನದಯ್ಯದಾಸನೆಂಬೊ ಪೆಸರು ನಿನಗೆ ಎಂದಿಗು ಇಲ್ಲದಾಸತ್ವತನವೆಲ್ಲ ನಮ್ಮದಯ್ಯದಾಸರು ಇಲ್ಲದ ಈಶತ್ವ ಪ್ರಕಟಿಸದುಈಶನು ಇಲ್ಲದ ದಾಸತನವ್ಯಾಕೆದೇಶ ಕಾಲ ಪಾತ್ರ ಈಸು ಕೂಡಿದಲ್ಲಿಕಾಸು ಕೊಡುವ ದಾತರಿಲ್ಲದಿರೆಕಾಸು ಇದ್ದವನಲ್ಲಿ ದೇಶ ಹೋಗುವುದುದೇಶವಿದ್ದಲ್ಲಿಗೆ ಕಾಸು ಬಾಹುವುದೆದಾಸತ್ವ ಎನ್ನಲ್ಲಿ ಈಷನ್ಮಾತ್ರವನ್ನುಆಶ್ರೈಸಿ ಇತ್ತ ಈಶ ನೀ ಎನಗುಂಟುದೇಶದೇಶದವರು ಏಸುಕಾಲಕೆ ಕುರುಹುಮಾಸದೆ ಕಂಡರೆ ಪೋಷಿಸುವರು ಬಿಡದೆಲೇಸಾಗಿ ಇಬ್ಬರು ಒಂದೇ ಸ್ಥಳದಲ್ಲಿವಾಸವಾಗಿದ್ದು ನಾಶರಹಿತರಾಗಿಕ್ಲೇಶಕೊಬ್ಬನ ಮಾಡಿ ಕ್ಲೇಶರಹಿತನಾಗಿಘಾಸಿ ಪಡಿಸಿ ನಮ್ಮ ಮೀಸಲಾಗಿ ನೀನಿಂದುದೋಷರಹಿತ ರಂಗ ಗೋಪಾಲವಿಠಲದಾಸರ ಬಿಡದಿರು ಏಸೇಸು ಬಂದರು ೫

ಅಟ್ಟತಾಳ
ಧನದಿಂದ ನಂಟರು ಕೆಲವರು ಎನಗಿನ್ನುತನುವಿನ ನಂಟರು ಕೆಲವರು ಎನಗಿನ್ನುಮನದಿಂದ ನಂಟರು ಕೆಲವರು ಎನಗಿನ್ನುದಿನದಿಂದ ನಂಟರು ಕೆಲವರು ಎನಗಿನ್ನುಗುಣದಿಂದ ನಂಟರು ಕೆಲವರು ಎನಗಿನ್ನುಇನಿತು ನಂಟರೊಳು ಎನಗೆ ಒಬ್ಬರ ಕಾಣೆಅನುವಾಗಿ ಇದ್ದರೆ ಅಷ್ಟು ನಮ್ಮವರೆಲ್ಲಾನುವು ತಪ್ಪಿದರಿನ್ನು ಆರು ನಮ್ಮವರಲ್ಲನಿನಗೆ ಎನಗೆ ನಂಟತನವಿನ್ನು ಹೀಗಲ್ಲ ಅ-ರೆನಿಮಿಷವಗಲದ ಅನಿಮಿತ್ತ ಬಾಂಧವನಾಗಿಕ್ಷಣ ಬಿಡದಲೆ ಕಾಯ್ವ ಗೋಪಾಲವಿಠಲನಿನಗೆ ಮಾಡುವುದೇನೊ ನಮೋ ನಮೋ ಎನ್ನಿಂದ ೬

ಆದಿತಾಳ
ನೀನೇವೆ ವೈಕುಂಠ ನೀನೇವೆ ಮುಕ್ತಿಯೆನಗೆನೀನೇವೆ ಸಕಲತೀರ್ಥಯಾತ್ರೆಗಳೆನಗೆನೀನೇವೆ ಇಹಪರದಲ್ಲಿ ಕಾಯಿದವಆನೆಲ್ಲಿ ನೋಡಲು ನೀನೆ ಕಾಣಿಸುವಿನೀನಿದ್ದ ಸ್ಥಳದಲ್ಲಿ ಸಕಲ ದೇವತೆಗಳುನೀನೇವೆ ಫಲಗಳ ಸಕಲರಲ್ಲಿದ್ದೀವೆದೀನಜನರಪಾಲ ಗೋಪಾಲವಿಠಲಜ್ಞಾನಿಗಳಿಗೆ ಪ್ರಿಯ ನಿನಗೆ ಜ್ಞಾನಿ ಪ್ರಿಯ ೭

ಜತೆ
ಕಾಣದವನು ನಿನ್ನ ಕಂಡದ್ದು ಹಾರೈಸುವಕಾಣುವ ಬಿಡ ನಿನ್ನ ಗೋಪಾಲವಿಠಲ

ಸರ್ವವ್ಯಾಪ್ತನೂ ಸರ್ವಪ್ರೇರಕನೂ ಆದ
೧೩೨
ಸುಳಾದಿಧ್ರುವತಾಳ
ನಿನ್ನ ನಿರ್ದೋಷನೆಂದು ನಾ ನಿರ್ದೋಷಿ ಆಗುವೆನಿನ್ನ ಸರ್ವಜ್ಞನೆಂದು ಜ್ಞಾನವಂತನಾಗುವೆನಿನ್ನ ಬಲವು ಪೂರ್ಣನೆಂದು ನಾ ಬಲಿಷ್ಠನಾಗುವೆನಿನ್ನ ಸುಖಪೂರ್ಣನೆಂದು ಇನ್ನು ನಾ ಸುಖಿಸುವೆನಿನ್ನ ವ್ಯಾಪ್ತನೆಂತೆಂದು ಇನ್ನು ಶೋಕ ನೀಗುವೆನಿನ್ನ ಸ್ವತಂತ್ರನೆಂದು ಎನ್ನ ಸ್ವತಂತ್ರ ಬಲಿಪೆನಿನ್ನ ಅನಾದಿ ಎಂದು ಇನ್ನು ನಿತ್ಯ ನಾನಾಹೆನಿನ್ನ ನಿರ್ಗುಣನೆಂದು ನಾ ನಿರ್ಗುಣನಾಗುವೆಭಿನ್ನ ಕಾಮರಹಿತ ಗೋಪಾಲವಿಠಲನಿನ್ನಾಧೀನವು ದೇವ ಎನ್ನ ವಿಭವಾತಿಶಯ ೧

ಮಠ್ಯತಾಳ
ಸ್ವಾಮಿಯೆಂದು ನಿನ್ನುಪಾಸನೆಯನು ಮಾಡಿಸ್ವಾಮಿಯಾಗುವೆನಯ್ಯ ಎನಗಿಂದವರಿಗೆಪ್ರೇಮನೆಂದು ನಿನ್ನುಪಾಸನೆಯನು ಮಾಡಿಪ್ರೇಮ ಪಡಿವೆನಯ್ಯ ಎನ್ನಿಂದುತ್ತಮರಕಾಮಪೂರ್ಣನೆಂದು ನಿನ್ನ ವಂದಿಸಿ ಭಿನ್ನಕಾಮರಹಿತ ಆತ್ಮಕಾಮವುಳ್ಳವನಾಹೆಸಾಮಜವರದನೆ ಗೋಪಾಲವಿಠಲತಾಮಸಜನವೈರಿ ಆ ಮಹಾಗುಣಪೂರ್ಣ ೨

ರೂಪಕತಾಳ
ಶುದ್ಧಾತ್ಮನೆಂದು ಅಶುದ್ಧ ಪದಾರ್ಥದಲೀದ್ದವ ನಾ ನಿನ್ನ ಬುದ್ಧಿಂದ ಕೊಂಡಾಡಿಅಧ್ಯಾತ್ಮ ಮೊದಲಾದ ತ್ರಿವಿಧ ತಾಪಂಗಳಒದ್ದು ನಾ ಬಿಡುವೆನು ನಿನ್ನ ವಂದಿಸಿಉದ್ಧಾರಕ ಸರ್ವ ಜಗಕೆ ನೀನೆಂತೆಂದೂದ್ಧರಿತನಾಗುವೆ ದಿನದಿನ ನಿನ್ನಿಂದಮಧ್ಯ ಆದಿ ಅಂತ್ಯರಹಿತನೆಂದು ನಿನ್ನ ತುತಿಸಿಶುದ್ಧವಾದ ನಿನ್ನ ಲೋಕದಿ ಹೊಂದಿರುವೆಛೇದ್ಯ ಭೇದ್ಯ ರಹಿತನೆಂದು ನಿನ್ನ ತುತಿಸಿಛೇದ ಭೇದಗಳಿಗೆ ದೂರ ನಾನಾಗಿರುವೆಭದ್ರಮೂರುತಿ ಚೆಲುವ ಗೋಪಾಲವಿಠಲಸಾದೃಶ್ಯರಹಿತನೆಂದು ಧನ್ಯನಾನಾಗುವೆ ೩

ಝಂಪೆತಾಳ
ಜನನ ಮರಣರಹಿತನೆಂದು ನಿನ್ನನು ಭಜಿಸಿಜನನ ಮರಣಗಳಿಂದ ದೂರನಾಗುವೆನಯ್ಯತನುವು ಅಪ್ರಾಕೃತನೆಂದು ನಿನ್ನ ತಿಳಿದೆನ್ನತನುವಿನ ಭ್ರಮಣತ್ವನೆಲ್ಲಿ ನೀಗುವೆನಯ್ಯನಿನಗೆ ನಿನ್ನವತಾರಕೈಕ್ಯವನು ಚಿಂತಿಸಿತೊಲಗದಾನಂದದಲ್ಲಿ ನಿನ್ನ ವಿಷಯೀಕರಿಸುವೆನಿನಗೆ ನಿತ್ಯತೃಪ್ತ ಅನಿದ್ರನೆಂದರಿತುಎನಗಿಪ್ಪ ಹಸಿವೆ ತೃಷೆ ನಿದ್ರೆಗಳ ನೀಗುವೆಅನಿಮಿಷರೊಡೆಯ ಗೋಪಾಲವಿಠಲ ಎಂತುನೆನವುವರು ನೀನವರ ಗುಣದಂತೆ ಗುಣವೀವೆ ೪

ತ್ರಿಪುಟತಾಳ
ತನು ಹೃದಯಾಕಾಶವನಜಮಂಡಲದಲ್ಲಿದಿನಕರನಂತೆ ತಾ ಹರಿ ನಿಲ್ಲಿಸಿಘನಜ್ಞಾನವೆಂಬ ಕಿರಣಗಳೆಲ್ಲ ಪಸರಿಸಿಮನವೆಂಬ ರಥವೇರಿ ತಿರುಗಾಡುತಾನುವಾದ ಬುದ್ಧಿಯನು ಅರುಣನ ಸಾರಥಿ ಮಾಡಿಘನವಾದ ಭವಾಂಬುಧಿ ಒಣಗಿಸುವದಿನದಿನ ತನ್ನ ನೂತನ ಧ್ಯಾನವನ್ನೆ ಇತ್ತುಜನನಿಯ ಮೊಲೆ ಹಾಲು ಉಣಿಸನಯ್ಯತನು ಸಂಬಂಧಿಗಳಂತೆ ಬಂಧು ಅಲ್ಲವು ಕಾಣೊಅನಿಮಿತ್ತ ಬಾಂಧವ ಅಪ್ರಮೇಯಸನಕಾದಿಗಳೊಡೆಯ ಗೋಪಾಲವಿಠಲಾನುವಾಗಿ ಅವರವರ ಗುಣದಂತೆ ಉಪಾಸ್ಯ ೫

ಅಟ್ಟತಾಳ
ದುಃಖಿಷ್ಠರಿಗೆ ದುಃಖ ವ್ಯಕ್ತ ಮಾಡುವನಾಗಿದುಃಖಿ ಎಂತೆಂದು ತಾ ಕರೆಸಿಕೊಂಬುವನಯ್ಯರಕ್ಕಸರಿಗೆ ನೀಚರ ಮಾಡೋದರಿಂದಚೊಕ್ಕ ತಾ ಅವರನೆಂತೆಂದು ಬಂಧನೆನಿಸಿಕೊಂಬದಿಕ್ಕಾಗಿ ಅವರವರ ಸಾಧ್ಯ ಸಾಧನಕರ್ಮವ್ಯಕ್ತ ಮಾಡೋದರಿಂದ ಬಾಧ್ಯ ಬಾಧಕನೆಂಬಉಕ್ತಿಲಿ ಕರೆಸಿಕೊಂಬುವ ಹೇಯತ್ವಗಳಿಂದಲಕ್ಕುಮಿಪತಿ ಆವ ದಾವ ನಿಷೇಧವಿಲ್ಲಭಕ್ತವತ್ಸಲ ದೇವ ಗೋಪಾಲವಿಠಲಸಿಕ್ಕದೆ ಮನೆ ಮನೆ ತುಕ್ಕುತ ಚರಿಸುವ ೬

ಆದಿತಾಳ
ತಾರಕಹರಿ ಮುಖ್ಯ ಕಾರಣಕರ್ತಮುರಾರಿ ಬೊಮ್ಮ ಕಾರಣನೈದಿರಿಆರಾರಿಗೊರಗಳು ನೀವರು ಇವರೆಲ್ಲಬಾರದಿದ್ದರೆ ಸರಿ ಹರಿ ತರಿದೊಟ್ಟುವಮೀರ ಶಕ್ಯರು ಅಲ್ಲ ಈ ಶಕ್ತಿಯು ಒಬ್ಬರಾರಾದರು ವಿಚಾರಿಸೆ ನೋಡಲುಭಾರನಿಳುಹೆ ಭೂದೇವಿಯಾಗೇಳವತಾರಮಾಡುವ ಜೀವರ ಉದ್ಧರಿಸಲುಈರೇಳು ಜಗವ ಸೃಷ್ಟಿಸಿ ಒಡನಿದ್ದುಆರ ಭಾರಕೆ ಎಲ್ಲ ಕಾರಣನಾಗಿಹೈಇರೀತಿ ಸೃಷ್ಟಿಸ್ಥಿತಿಲಯ ವ್ಯಾಪಾರವೆಲ್ಲಮಾರನಯ್ಯಗೆ ಕ್ರೀಡೆ ನಾರಿಗೆ ಸಂಪತ್ತುಮೂರು ವಿಧ ಜೀವರಿಗೆಲ್ಲ ಭೋಗನಾರಾಯಣನ ವ್ಯಾಪಾರವಯ್ಯವಾರಿಜಭವನಯ್ಯ ಗೋಪಾಲವಿಠಲದೂರಕೆದೂರತಿ ಸಾರಿಗೆ ಸಾರ್ಯಾ ೭

ಜತೆ
ಎಂತೆಂತು ತನ್ನನ್ನು ಭಜನೆಯ ಮಾಳ್ಪರಿಗೆಅಂತಂತೆ ಆಗಿ ಪೊಳೆವ ಗೋಪಾಲವಿಠಲ

ಈ ಸುಳಾದಿ ಒಂದು ನಿಂದಾಸ್ತುತಿ
೨೮
ಸುಳಾದಿಧ್ರುವತಾಳ
ನಿನ್ನ ಸತಿಯಳಾದ ಸಿರಿಯ ಪದವಿಯ ನೋಡೊನಿನ್ನ ಮಗನಾದ ಅಜನ ಪದವಿಯ ನೋಡೊನಿನ್ನ ಮೊಮ್ಮಗನಾದ ಹರನ ಪದವಿಯ ನೋಡೊನಿನ್ನ ಸೇವಕರೊಳು ಇಂದ್ರನ ಭಾಗ್ಯವ ನೋಡೊನಿನ್ನ ಮಗಳು ಭಾಗೀರಥಿಯ ಭಾಗ್ಯವ ನೋಡೊನಿನ್ನ ಭಕ್ತರಾದ ಗಂಧರ್ವರ ಭಾಗ್ಯವ ನೋಡೊನಿನ್ನಿಂದವರನೆಲ್ಲ ಸೃಷ್ಟಿಸಲ್ಪಟ್ಟಿತುಎನ್ನನು ನೀನೆ ಸೃಷ್ಟಿಯ ಮಾಡಲಿಲ್ಲೆತನ್ನ ಮಕ್ಕಳು ತಾಯಿ ಅನಂತವಿದ್ದರಿನ್ನುಮನ್ನಿಸಿ ಒಬ್ಬರನು ಮನ್ನಿಸದಲಿಪ್ಪೋಳೆಇನ್ನು ಇವರು ಎಲ್ಲ ಏನಿತ್ತರೊ ನಿನಗೆಮುನ್ನ ನಾನೇನು ನಿನಗೀಯದೆ ಪೋದೆ ರಂಗಮನ್ನಿಸುವರು ನೀ ಮನ್ನಿಸಿದರಿವರುಕಣ್ಣಲ್ಲಿ ನೋಡರು ನೀ ಕರುಣಿಸದಿರಲಿನ್ನುಘನ್ನ ಘನ್ನ ಸೇವೆ ಇವರಿಗುಂಟಾದರಿನ್ನುಮುನ್ನ ಇವರ ಉಚ್ಛಿಷ್ಟನ್ನವಾದರು ಎನಗೆಇನಿತಾದರು ಕಾರಣವಿಲ್ಲವೇನೊನಿನ್ನ ಬೇಡುವ ಸಥೆ ಎಲ್ಲಿಂದ ಬಂತು ಎಂಬ್ಯಾನಿನ್ನವರು ಕೊಟ್ಟಂಥ ಬಲವು ಎನಗೆ ಇದ್ದುಹಣ್ಣು ಉಂಟಾದ ವೃಕ್ಷ ಹಂಬಲಿಸೋರು ಜನರುನಿನ್ನಲ್ಲಿ ಇಹೋದಯ್ಯ ನೀನೆ ಬಲ್ಲೆಯೊ ದೇವಘನ್ನ ಮಹಿಮ ಚೆಲುವ ಗೋಪಾಲವಿಠಲನಿನ್ನಂತೆ ಸಾಕುವರಿನ್ನೊಬ್ಬರಿಲ್ಲ ದೇವ೧

ಮಠ್ಯತಾಳ
ಧರೆಯೊಳಗಿಪ್ಪಂಥ ಪರಿಪರಿ ಕಮಲಗಳುಅರಳುವುದಕ್ಕೆ ಇನ್ನು ಮರಳೊಂದು ರವಿಯುಂಟೆವರುಷ ಕಾಲಗಳಲ್ಲಿ ಸುರಿಸುವ ಮೇಘಗಳುಪರಿಪರಿ ಗ್ರಾಮಕ್ಕೆ ಪರಿಪರಿ ಬೇರುಂಟೆಎರಡೇಳು ಲೋಕಕ್ಕೆ ದೊರೆ ನೀನಲ್ಲದೆಮರಳಿ ಇನ್ನೊಂದು ದೈವವ ನಾಕಾಣೆಕರುಣಾಕರರಂಗ ಗೋಪಾಲವಿಠಲಮರೆಹೊಕ್ಕೆನು ಕಾಯೊ ಬಿರುದುಳ್ಳ ದೇವ ೨

ತ್ರಿಪುಟತಾಳ
ಪಿಡಿಯದೆ ಎನ್ನ ಕರವ ಸಡಿಲಬಿಟ್ಟರೆ ಇನ್ನುಪೊಡವಿಯೊಳಗೆ ನಿನ್ನ ಒಬ್ಬರು ನೆಚ್ಚರುಮಡದಿ ಪತಿಯರು ಕೂಡಿ ಪಡೆದು ಒಂದು ಶಿಶುವಬಡಿದಾಡಿದೋಪಾದಿ ನಿನಗೆ ಎನಗೆ ನ್ಯಾಯಕೆಡವ್ಯಾಟ ಬಿದ್ದಿದೆ ಬಿಡಿಸುವರಿಲ್ಲವೊಬಿಡೆನೊ ನಿನ್ನ ಪಾದ ಎಂದೆಂದಿಗೆಪೊಡವಿಯೊಳಗೆ ನಿನಗೆ ಸರಿಯಾರಿಲ್ಲವೊ ದೇವದೃಢವಾಗಿ ನೀನಲ್ಲದೆನಗಿನ್ನು ಗತಿಯಿಲ್ಲಬಿಡದೆ ಎನ್ನಲ್ಲಿ ಪಡೆದಂಥ ಸುತರನ್ನುಕೊಡುವೆ ನಿನಗೆ ಕೃಷ್ಣ ತಡೆಯದಲೆ ಇನ್ನುತುಡುಗುತನ ಬಿಡಿಸು ಕೆಡಿಸದೆ ಎನ್ನ ಕಂಡಕಡೆಯ ವಿಷಯಗಳಿಗೆ ಎರಗಿಸದೆಬಡವ ನಾನೆಂದು ಎನ್ನ ಕಡೆಗಣ್ಣಿಂದ ನೋಡಲುಬಡವ ನಾನಲ್ಲ ನಿನ್ನ ಒಡತಿಗೆ ಪಿಡಿತೊತ್ತುಕಡಲಶಯನ ರಂಗ ಗೋಪಾಲವಿಠಲಕಡು ದೀನರಕ್ಷಕ ನಮೋ ನಮೋ ನಮೋ ೩

ಅಟ್ಟತಾಳ
ಊರ ಔತಣ ಹೇಳಿ ಸಾರಿ ಡಂಗುರ ಹೊಯಿಸಿಧೀರರಾಯರಿಗೆಲ್ಲ ಸಾರಷಡ್ರಸವಿತ್ತುತೀರತೀರದಿ ಇನ್ನು ಬೀರುತ ಉಣುವಾಗದ್ವಾರದಲೊಬ್ಬ ಮಧುಕರದವ ಬಂದುಆರಿಪಾರಿದರಿನ್ನು ಹಾರಿಸ್ಹ್ಯಾಕುವರುಂಟೆಕಾರುಣ್ಯಮೂರುತಿ ಕರುಣದಿಂದಲಿ ನೋಡೊನೀರೊಳಗಿನ ಮತ್ಸ್ಯ ನೀರೆ ಬಯಸುವುವುಘೋರ ಅರಣ್ಯಕ್ಕೆ ಹಾರೈಸಬಲ್ಲವೆಮಾರಜನಕ ನಮ್ಮ ಗೋಪಾಲವಿಠಲಸೇರಿಸೊ ನಿನ್ನನು ಸೇರಿದವರ ಬಳಿಯ ೪

ಆದಿತಾಳ
ಒಂದೆ ಬೇಡುವೆ ನಿನ್ನ ಒಂದೆ ದೇವನೆ ಕೇಳೊಒಂದೆ ಮನವ ಕೊಡು ವಂದಿಪೆ ನಿನ್ನನುಹಿಂದನಂತ ಜನ್ಮದಿ ಮಾಡಿದ ದೋಷಮುಂದಾಗುವ ಅನಂತಾನಂತ ದೋಷಗಳಿಗೆಒಂದು ಬಾರಿ ನಿನ್ನ ಸ್ಮರಣೆಯ ಮರೆಸದೆಚೆಂದದಿ ಇತ್ತು ಆನಂದದಿ ಪೊರೆಯೊಬಂದೆನೊ ನಾನಿತ್ತ ಬರಬಾರದೆ ಇನ್ನುನೊಂದೆನೊ ನಾ ಬಲು ಬಂಧನಕ್ಕೆ ಸಿಲುಕಿತಂದುದಕ್ಕೆ ಇನ್ನು ತಂದ ಕಾರ್ಯ ಮಾಡಿಸಿಪೊಂದಿಸು ನಿನ್ನ ಅರವಿಂದ ಚರಣದಲ್ಲಿಕಂದರ್ಪನಯ್ಯ ಗೋಪಾಲವಿಠಲ ಇನ್ನುಎಂದೆಂದಿಗೆ ಎನಗೆ ನೀನೆ ಗತಿಯೊ ೫

ಜತೆ
ನಿನ್ನ ದಾಸರ ದ್ವಾರವನ್ನು ಕಾಯ್ವರ ಮನೆಕುನ್ನಿ ಎಂದೆನಿಸೆನ್ನ ಗೋಪಾಲವಿಠಲ

ಸರ್ವಸ್ವತಂತ್ರನೂ ಸರ್ವಕರ್ತನೂ
೨೯
ಸುಳಾದಿ
ಧ್ರುವತಾಳ
ನಿನ್ನ ಸ್ಮರಣೆ ಎನಗೆ ತೀರ್ಥಯಾತ್ರೆಗಳಯ್ಯನಿನ್ನ ಸ್ಮರಣೆ ಎನಗೆ ಯಜ್ಞದಾನಂಗಳಯ್ಯನಿನ್ನ ಸ್ಮರಣೆ ಎನಗೆ ವ್ರತ ಚಾಂದ್ರಾಯಣಗಳಯ್ಯನಿನ್ನ ಸ್ಮರಣೆ ಎನಗೆ ತಪಸ್ಸು ಸಿದ್ಧಿಗಳಯ್ಯನಿನ್ನ ಸ್ಮರಣೆ ಎನಗೆ ಸಾಧನ ಸಂಪತ್ತುಗಳುನಿನ್ನ ಸ್ಮರಣೆ ಎನಗೆ ಬಲ ಧೈರ್ಯವೊ ಎನ್ನಯ್ಯನಿನ್ನ ಸ್ಮರಣೆ ಎನಗೆ ಇಹಪರದಲ್ಲಿ ಲಾಭನಿನ್ನ ಸ್ಮರಣೆ ಎನಗೆ ಸಿದ್ಧವಾದ ಮುಕುತಯ್ಯನಿನ್ನ ವಿಸ್ಮರಣೆಯಿಂದ ಆವ ಕರ್ಮ ಮಾಡಲುಪುಣ್ಯದ ಫಲವದು ದೊರೆಯದು ಜೀವರಿಗೆಕಣ್ಣು ಬಿಗಿದು ಕಟ್ಟಿ ಚಿತ್ರವ ಬರೆದಂತೆನಿನ್ನರಿಯದ ಕರ್ಮ ಅನಂತ ಮಾಡಲೇಕೆಕನ್ನಿಕೆಗೆ ಬಾಲ್ಯದಿ ಕಂಡವರು ಪತಿ ಆದಂತೆನಿನ್ನ ಸ್ಮರಣಿಲ್ಲದ ಕರ್ಮ ಈ ಪರಿಯೊ ದೇವನಿನ್ನ ವಿಸ್ಮರಣೆಯೆ ಗೋಹತ್ಯ ಬ್ರಹ್ಮಹತ್ಯ ನಿನ್ನ ವಿಸ್ಮರಣೆಯೆ ಪಂಚಮಹಾಪಾತಕನಿನ್ನ ವಿಸ್ಮರಣೆಯೆ ಸರ್ವ ಅಪರಾಧವಯ್ಯನಿನ್ನ ವಿಸ್ಮರಣವೆ ಸಕಲ ನಿಷೇಧಗಳುನಿನ್ನ ಸ್ಮರಣವೆ ಇಷ್ಟಗಳಯ್ಯನಿನ್ನ ಸ್ಮರಣೆ ಇರಲು ಅಧಮ ಕರ್ಮ ಮಾಡಲುಅನ್ಯಾಯವೆನಿಸದು ಆಗಮ ಸಮ್ಮತವುಘನ್ನ ದಯಾನಿಧೆ ಗೋಪಾಲವಿಠಲನಿನ್ನ ಸ್ಮರಣೆ ಪುಣ್ಯ ನಿನ್ನ ವಿಸ್ಮರಣೆ ದೋಷ ೧

ಮಠ್ಯತಾಳ
ಜಡ ಚೇತನ ಜ್ಞಾನ ಅಡಿಗಡಿಗೆ ತಿಳಿದುಜಡಕೆ ಲಯವ ಬಗೆದು ಚೇತನಗಳೆರಡುದೃಢವಾಗಿ ತಾ ತನ್ನ ಒಡಲೊಳಗಿಪ್ಪನ್ನಒಡೆಯನೆಂದು ತಿಳಿದು ಅಡಿಗಳಿಗೆ ಎರಗಿಕೊಡುವವ ಕೊಳುವನು ಬಿಡದಲೆ ನೀನೆಂದುನಡೆಸುವ ನುಡಿಸುವ ಹರಿ ನೀನೆಂದರಿದುಎಡಬಲದಲಿ ಇನ್ನು ಪರಿವಾರ ಸಹವಾಗಿಕಡಕವಿಲ್ಲದೆ ನೋಡಿ ಜಡಮತಿಯನೆ ಬಿಟ್ಟುನುಡಿವುದೆ ಸ್ಮರಣೆಯು ಕೊಡುವುದು ಮಹಾಫಲವುಕಡು ಮೂರ್ಖತನದಿ ಬಿಡದಲೆ ಹಗಲಿರುಳುನುಡಿನುಡಿಗೆ ಗರ್ಜಿಸಲ್ಯಾತಕೆ ಮೊರೆಯಮಿಡುಕುವುದಲ್ಲದೆ ಮೃಢಸಖನು ಮೆಚ್ಚಕಡಲಶಯನ ರಂಗ ಗೋಪಾಲವಿಠಲಕೊಡು ನಿನ್ನ ಸ್ಮರಣೆ ಬಿಡದಲೆ ಕ್ಷಣಕ್ಷಣಕೆ ೨

ರೂಪಕತಾಳ
ನಾ ಕರ್ತನೆಂದದರಿಂದಲೇವೆ ಸಕಲಶೋಕಾನರ್ಥಗಳು ಜೀವರಿಗೊದಗೋದುನೀ ಕರ್ತನೆಂದದರಿಂದ ಜೀವರಿಗೆನರ್ಕಾದ್ಯನರ್ಥಗಳು ಆಗಲರಿಯವಯ್ಯಈ ಕುರುಹಕೆ ತಂದು ದೃಷ್ಟಾಂತರವು ಇನ್ನುಆಕಳನ ಕೊಂದಂತೆ ಆ ವಿಪ್ರನೆ ಸಾಕ್ಷಿಶೋಕ ಸುಖವೆರಡು ನೀನು ಮಾಡಿಸಿ ಇನ್ನುಹಾಕು ದ್ವಿಫಲವನು ಜೀವರ್ಯೋಗ್ಯತೆ ಅರಿದುನೀ ಕಾಣಿಸಿಕೊಂಬುವನೆ ನಿನ್ನ ಕರ್ತೃತ್ವಕ್ಕೆಸಾಕಲ್ಯವಗರೆದು ಏಕ ಚಿತ್ತದಲ್ಲಿಪ್ಪನೀ ಕರ್ತು ಮಮಸ್ವಾಮಿ ನಾ ಕುಶ್ಚಿತಭೃತ್ಯನೀ ಕಾಯೊ ಎನ್ನಯ್ಯ ಸಾಕುವ ಬಿರುದುಂಟು ನಾ ಕೃತಘ್ನ ಬಲು ನೀ ಕರುಣಾಳಯ್ಯನಾ ಕಪಟಿಯೊ ದೇವ ನೀ ದಯಾವಾರಿಧಿಸಾಕಲ್ಯ ಗುಣಪೂರ್ಣ ಗೋಪಾಲವಿಠಲಹಾಕದಿರೆನ್ನ ನಾನಾ ಕುಯೋನಿಗಳಲ್ಲಿ ೩

ಝಂಪೆತಾಳ
ಆವ ಲೀಲೆಯೊ ನಿನ್ನದಾವ ಸ್ವಭಾವವೊಜೀವರೊಡನೆ ಆಟ ಆವ ಸುಖವೊ ನಿನಗೆನಾವಸ್ವತಂತ್ರರು ನೀ ಸರ್ವಸ್ವತಂತ್ರ ಬಾ-ಹುವುದೆಮ್ಮಿಂದ ಏನು ನಿನಗೆ ದೇವನಾವು ಊಳಿಗರು ನಿನಗೆ ಬೇರೆವೆಂಬವೇನೊನೀ ಊಳಿಗನಾಗಿ ಮಾಡಿಸಿ ನಮ್ಮಿಂದಜೀವರಿಗೆ ಫಲವನು ತಂದು ತಂದು ಈವೆದೇವ ನಿನಗೆ ನೋಡೆ ಒಂದು ಕಾರಣವಿಲ್ಲದೇವ ನಿನಗೆ ನೋಡೆ ಒಂದು ಕರ್ಮಗಳಿಲ್ಲಆವಾವ ಪರಿ ನಿನ್ನ ಲೀಲೆಗಳ ತೋರಿದಿದೇವ ನೀ ಬಂಡಿಯ ಬೋವಾದೆ ಅರ್ಜುನಗೆಆವುಗಳ ಕಾದೆ ಸನಕಾದಿಗಳ ಪಾಲಿಸಲುಆ ಉಗ್ರಸೇನನ ಸೇವೆಯನು ಮಾಡಿದೆದೇವ ಗೋಪಿಯ ಕೈಯಲಿ ಕಟ್ಟಿ ಹಾಕಿಸಿಕೊಂಡೆ ನೀ ವಟುವಿಪ್ರನಾಗಿ ಯಜ್ಞದಲಿ ಪೋಗಿದೇವ ಭಿಕ್ಷವ ಬೇಡಿ ಭಕ್ತನ್ನ ಪಾಲಿಸಿದೆಕಾವಲು ಕಾದೆ ಆತನ್ನ ಮನೆ ದ್ವಾರದಲಿ ಆವ ಅಪೇಕ್ಷೆಯು ನಿನಗೆ ಒಂದು ಇಲ್ಲಧಾವತಿಬಡುವೆ ನಿನ್ನ ಭಕುತರಿಗಾಗಿ ನೋವಾಗುವೆ ನಿನ್ನಭಕ್ತರು ದಣಿದರೆಆವ ನಿನ್ನ ಕಾರ್ಯ ಭಕ್ತರ ಪಾಲನೆಆವ ನಿನ್ನ ಕ್ರಿಯ ದನುಜರ ಮರ್ದನೆಆವ ವ್ಯಾಪಾರವು ನಿನಗೆ ಮಾಡೆಂಬರು ಪೇಳುವರುಂಟೆ ದೇವಕಾವ ಕರುಣಿ ನಮ್ಮ ಗೋಪಾಲವಿಠಲಸೇವಕನ ಪಾಲಿಸುವ ಬಗೆಯೆಂತೆಂತೊ ದೇವ ೪

ತ್ರ್ರಿಪುಟತಾಳ
ಎನ್ನ ಅಜ್ಞಾನವೆಲ್ಲ ನಿನ್ನಾಧೀನವಯ್ಯಎನ್ನ ಕರಣಚೇಷ್ಟೆ ವ್ಯಾಪಾರ ನಿನ್ನಾಧೀನಎನ್ನ ಪ್ರೇರಣೆ ಪ್ರತಿಕ್ಷಣಕೆ ನಿನ್ನಾಧೀನಎನ್ನ ಸ್ಮರಣೆ ಸ್ಫುರಣೆ ನಿನ್ನಾಧೀನ ದಮ್ಮಯ್ಯಎನ್ನ ಸ್ವಾಮಿಯೆ ನೀನು ನಿನ್ನ ಭೃತ್ಯನು ನಾನುಇನ್ನೊಂದು ನಾನರಿಯೆ ಎನ್ನೊಡೆಯನೆ ಕೇಳುಎನ್ನ ಐಶ್ವರ್ಯವು ನಿನ್ನ ಪರವಾಗಲಿಎನ್ನ ಆರೋಗ್ಯವು ನಿನ್ನ ಪರವಾಗಲಿಎನ್ನ ಆಯುಷ್ಯವು ನಿನ್ನ ಪರವಾಗಲಿಎನ್ನ ಸಕಲ ವ್ಯಾಪಾರ ನಿನ್ನ ಪರ ಆಗಲಿಎನ್ನ ಚರಣಗಳು ನಿನ್ನ ಯಾತ್ರೆಯ ಮೆಟ್ಟಲಿಎನ್ನ ಕರಗಳಿನ್ನು ನಿನ್ನ ಪೂಜೆ ಮಾಡಲಿಎನ್ನ ಕರ್ಣಗಳಿನ್ನು ನಿನ್ನ ಕಥೆ ಕೇಳಲಿಎನ್ನ ಚಕ್ಷುಗಳು ನಿನ್ನ ಮೂರ್ತಿ ನೋಡಲಿಎನ್ನ ಜಿಹ್ವೆಯು ಸತತ ನಿನ್ನ ಕೊಂಡಾಡಲಿಎನ್ನ ಶಿರಸ್ಸು ನಿನ್ನ ಚರಣಕ್ಕೆರಗುತಿರಲಿಎನ್ನ ಸರ್ವಾಂಗವು ಸಾಷ್ಟಾಂಗ ಹಾಕುತಇನ್ನು ಹಗಲಿರುಳು ನಿನ್ನ ಓಲೈಸಲಿಎನ್ನ ಮನೋವಾಕ್ಕಾಯದಿಂದಿನ್ನುಇನ್ನು ಮಾಡಿದ ಕರ್ಮ ನಿನ್ನ ಪರವು ಮಾಡಿನಿನ್ನವನೆನಿಸಯ್ಯ ಘನ್ನದಯಾನಿಧಿ ಗೋಪಾಲವಿಠಲಇನ್ನಿದೆ ಮಾಡಿಸೊ ಅನಂತ ಜನ್ಮಕ್ಕು ೫

ಅಟ್ಟತಾಳ
ಕೆಡಿಸುವನು ನೀನೆ ಇಡಿಸುವನು ನೀನೆಕೊಡಿಸುವನು ನೀನೆ ಹಿಡಿಸುವನು ನೀನೆಮಡದಿ ಇದ್ದರೆ ಮನೆ ಕಡುಶುಭ ಎಂಬೋರುಹುಡುಗರಿದ್ದರೆ ಮನೆ ಕಡುಶುಭ ಎಂಬೋರುಒಡವೆ ಇದ್ದರೆ ಮನೆ ಕಡುಶೋಭ ಎಂಬೋರುಪಡೆದರಿದ್ದರೆ ಮನೆ ಕಡುಶೋಭವೆಂಬೋರುಜಡಗಳ ಹಿಡಕೊಂಡು ಮಿಡುಕೊ ಜೀವರ ನೋಡಿಎಡವಿ ಬಿದ್ದಂತ್ಯೆದೆ ಎನಗಾಗುತಿದೆ ದೇವಜಡಮತಿ ಜಡಸ್ನಾನ ಜಡಕರ್ಮ ಜಡಪೂಜೆಜಡದಿ ಭಿನ್ನ ನಿನ್ನ ಅಡವಿಗಳವಿಡಿಯದೆಕಡೆಯಿಲ್ಲದ ಕರ್ಮ ಬಿಡದೆ ಮಾಡಲಿ ಯಾಕೆಒಡೆಯ ನಿನ್ನ ಪ್ರೀತಿ ಪಡೆಯದರಿಯರಯ್ಯಕಡು ಸಂಪತ್ತುಗಳು ನಿನ್ನಡಿಗಳು ಎನಗಿನ್ನುಬಿಡೆನು ಎಂದೆಂದಿಗು ದೃಢವಾಗಿ ಮನದೊಳುಕೊಡು ಇನ್ನು ಈ ಭಾಗ್ಯ ಒಡೆಯ ದೇವರದೇವ ಗೋಪಾಲವಿಠಲಕೊಡು ಒಂದು ಕೊಡದಿರು ಬಿಡೆ ನಿನ್ನ ಚರಣವ ೬

ಆದಿತಾಳ
ದಣಿವು ಬಂದರೆನಗೆ ಏನು ಆವಗುಣವು ಬಂದರೆ ಎನಗೆ ಏನುಜನುಮ ಬಂದರೆನಗೆ ಏನು ಸು-ಗುಣವಾಗಿ ಬಂದರೆನಗೇನುನಿನಗೆ ನನಗೆ ಭೇದ ತಿಳಿದುನನಗೆ ದೇಹಕೆ ಭೇದ ತಿಳಿದುಕ್ಷಣಕ್ಷಣಕೆ ನೀ ಸ್ವಾಮಿಯೆಂದುಕ್ಷಣಕ್ಷಣಕೆ ನಿನ್ನ ಭೃತ್ಯನೆಂದುಎಣಿಸುತ್ತ ಎನಗಿಂತ ಗುಣಾಧಿಕರ ಹಿಡಿದುಫಣಿ ರುದ್ರ ಅಜ ಸಿರಿ ಪರಿಯಂತ್ರ ದಿನದಿನದಿಅನುವರಿತು ಕೊಂಡಾಡಿ ಗುಣ ಉಪಾಸನೆಯನ್ನುಎನಗೊಂದು ಇರಲಯ್ಯ ಮುನಿಗಳ ಮನಃಪ್ರಿಯಇನಿತು ಸುಖವೆ ಸಾಕು ಇನ್ನೊಬ್ಬರಿಗೆ ಅಂಜೆಎನಗೊಂದು ಸುಖವಿಲ್ಲ ನಿನ್ನ ನೋಡೋದಕಿಂತಗುಣಪೂರ್ಣ ಚೆಲುವ ಗೋಪಾಲವಿಠಲರೇಯನಿನಗೆ ಎನಗೆ ಲೆಂಕೆ ಎನಗೊಬ್ಬರಿನ್ನಿಲ್ಲ ೭

ಜತೆ
ನಂಬಲು ನಾನಿನ್ನು ಎಷ್ಟರ ಮನುಜನೀ ನಂಬಿಸಲು ನಂಬಿದೆ ಗೋಪಾಲವಿಠಲ

ಈ ಸುಳಾದಿಯಲ್ಲಿ ಶ್ರೀಹರಿಯ ಧ್ಯಾನದ
೩೦
ಸುಳಾದಿ
ಧ್ರುವತಾಳ
ನಿಲ್ಲುನಿಲ್ಲಯ್ಯ ದೇವ ನೀಲವರ್ಣದ ಸ್ವಾಮಿಎಲ್ಲಿ ಪೋಗುತ ಇದ್ದಿ ಎನ್ನ ಠಕ್ಕಿಸಿ ಮುಂದೆಸಲ್ಲದವನೆ ನಾನು ಸಾಕದಿದ್ದರೆ ನೀನುಬಲ್ಲಿದನೆ ಬಡವ ಬಡವ ಬಲ್ಲಿದನಯ್ಯಎಲ್ಲ ಸಾಧನಗಳು ನಿನ್ನ ಬಳಿಯಲ್ಲುಂಟುಇಲ್ಲದ್ದೊಂದಿಲ್ಲ ಎನಗೆ ಇತ್ತ ನೀ ಒಲಿದ ಮೇಲೆಎಲ್ಲ ನಿನ್ನೊಳಡಕ ಯೋಚಿಸಲಾಗಿ ಇನ್ನುಕಲ್ಲು ಮೃದುವಾಗುವುದು ಕಂಡಾಗಲೆ ನಿನ್ನಹುಲ್ಲು ಪರ್ವತಭಾರ ಹರಿ ನಿನ್ನ ಕಾಣದಾಗ ಎಲ್ಲಿಗೆಲ್ಲಿಯೊ ಆಗಿ ಎನಗೆ ತೋರುವುದಿನ್ನುಗಲ್ಲಗಲ್ಲವ ಬಡಿದು ಗಂಟಲನೆ ಸೆಳೆದುಕೊಂಡುಗುಲ್ಲು ಎಬ್ಬಿಸದೋಡಿಪೋದವನಂತೆ ನೀನುಮೆಲ್ಲ ಮೆಲ್ಲನೆ ಮನಕೆ ಬಂದು ಸುಳಿದುಪೋದರೆಎಲ್ಲ ಸಂಪತ್ತು ಪೋಗಲಾಡಿಸಿಕೊಂಡವನು ಎಲ್ಲಿ ತನಕ ಅವಗೆ ಕ್ಲೇಶವು ಆಗುವುದೊಇಲ್ಲ ಸದೃಶ ಸ್ವಲ್ಪ ಆ ವಿಷಯದಲ್ಲಿನ್ನುಎಲ್ಲ ಸುರರೊಡೆಯ ಗೋಪಾಲವಿಠಲಬಲ್ಲಿದ ನಿನ್ನ ಧ್ಯಾನ ಬಲ್ಲವಗನುಭೋಗ ೧

ಮಠ್ಯತಾಳ
ಧ್ಯಾನ ಮಾಡಿದವ ಸ್ನಾನ ಮಾಡಿದವಧ್ಯಾನ ಮಾಡಿದವ ದಾನ ಮಾಡಿದವಧ್ಯಾನ ಮಾಡಿದವ ಮೌನ ಮಾಡಿದವಧ್ಯಾನ ಮಾಡಿದವ ನಾನಾ ಕರ್ಮಗಳುತಾನು ಮಾಡಿದವ ನ್ಯೂನ ಒಂದಿಲ್ಲವುಧ್ಯಾನಕ್ಕೆ ಹರಿಯೆ ನೀನು ಬಾರದಿರೆನಾನು ಕಂಡ ವಿಷಯವನು ಧೇನಿಸುವೆಜ್ಞಾನಪೂರ್ವಕವಾಗಿ ಧ್ಯಾನ ಮಾಡುವನಿಗೆಕಾಣದೊಂದು ಇಲ್ಲ ಕರ್ಮ ಅದರೊಳಡಕದೀನಜನಬಂಧು ಗೋಪಾಲವಿಠಲಧ್ಯಾನಕ್ಕೆ ಎನಗೆ ನೀನು ವಿಷಯನಾಗು ೨

ರೂಪಕತಾಳ
ಆವಾವ ತೀರ್ಥವು ನಿನ್ನ ಬಳಿಯಲ್ಲುಂಟುಆವಾವ ಕ್ಷೇತ್ರವು ನಿನ್ನ ಬಳಿಯಲ್ಲುಂಟುಆವಾವ ತತ್ವವು ನಿನ್ನ ಬಳಿಯಲ್ಲುಂಟುಆವಾವ ಸಜ್ಜನರು ನಿನ್ನ ಬಳಿಯಲ್ಲುಂಟುಯಾವತ್ತು ನಿನ್ನಲ್ಲಿ ಉಂಟು ಯೋಚಿಸಲಾಗಿಈ ವೇಳೆ ಆ ವೇಳೆ ಅನ್ನದೆ ಎಲೊ ದೇವಪಾವನ ಪಾಪವು ಎಲ್ಲ ಶಕ್ತಿಗಳುದೇವ ನಿನ್ನಲ್ಲಿನ್ನು ತಾವಿಪ್ಪುವು ನೋಡೆಈ ವೇಳೆಯಿತ್ತು ನೀ ನೋಡು ಯೋಚಿಸದೆದೇವ ಒಬ್ಬರು ನಿಮಗೆ ಬ್ಯಾಡೆಂಬುವರಿಲ್ಲದೇವಕೀನಂದನ ಗೋಪಾಲವಿಠಲನೀ ಒಲಿಯಲು ಎನಗಿಲ್ಲ ಒಂದಸಾಧ್ಯ ೩

ಝಂಪೆತಾಳ
ಏಸು ಬಗೆ ಪೂಜೆಗಳು ನಿನಗೆ ಮಾಡುವೆ ಎಂಬ್ಯಾನೀನಿತ್ತ ಬಂದೆನಗೆ ಒಲಿದಮೇಲಕೆ ದೇವನಾನಾ ಜಲಗಳಲ್ಲಿ ನಾನಾ ಯೋನಿಗಳೈದಿನಾನು ಇದ್ದುದೆಲ್ಲ ಸ್ನಾನಂಗಳು ನಿನಗೆನೀನು ಎನ್ನನು ಎಲ್ಲಿ ನಿಲಿಸಿದ ಸ್ಥಳವೆಲ್ಲಶ್ರೀನಿವಾಸನೆ ನಿನಗೆ ಅದೆ ಪೀಠವುಧೇನುಜನ್ಮಗಳಲ್ಲಿ ಬಂದು ಕರೆದ ಪಾಲುಶ್ರೀ ನಾರಾಯಣ ನಿನಗೆ ಅಭಿಷೇಕವುನಾನಾಪರಿ ಪುಷ್ಪ ಸಿರಿತುಲಸಿ ಸಿರಿಗಂಧಮರನಾನಾ ಜನುಮಗಳಾಗಿ ನಾನು ಬಂದುದೆಲ್ಲಶ್ರೀನಾಥ ನಿನಗೆ ಇವೆ ಪೂಜೆಗೆ ಆದೆನುನಾನಾವಸನವು ಜಡರುಗ್ಣ ಜನ್ಮಗಳಲ್ಲಿನಾನು ಇದ್ದುದೆಲ್ಲ ನಿನಗೆ ಉಡಿಗಾಭರಣಆನೆ ಕುದುರೆ ಅಂಡಜಾದಿ ಯೋನಿಗಳಲ್ಲಿನಾನು ತಿರುಗಿದೆನಲ್ಲ ನಿನಗೆ ವಾಹನವಯ್ಯನಾನಾ ಪದಾರ್ಥ ತಂಡುಲ ಮೊದಲಾದವುಗಳುಏನು ಐದಿದವೆಲ್ಲ ನಿನಗೆ ನೈವೇದ್ಯವುಭಾನು ಚಂದಿರ ಸಾಕ್ಷಿಯಾಗಿ ಮಾಡಿದ್ದೆ ದೀಪನೀನು ಎನ್ನವನಾಗಿ ಇದ್ದು ಇದರೊಳಗೆಲ್ಲಏನೇನು ಪರಿಪರಿ ಕರ್ಮ ಮಾಡಿಸಿದ್ದುಹೇ ನಾರಸಿಂಹ ಕಪ್ಪವು ನಿನಗೆ ಕಾಣೊನೀನು ಮಂಗಳಮೂರ್ತಿ ಡಿಂಗರಿಗೆ ಬಲುಸಾರ್ಥಿನೀನಾಗಿ ಮಾಡಿಸಿದುದೆಲ್ಲ ನಿನಗೆ ಆರ್ತಿಜ್ಞಾನಮಯಕಾಯ ಗೋಪಾಲವಿಠಲರೇಯನೀನಿತ್ತ ಬಾರೊ ನಿಜಭಕ್ತಜನರೊಡೆಯ೪

ತ್ರಿಪುಟತಾಳ
ಮಾನವ ಯೊನಿಗಳು ಏನೇನು ಐದಿದವೆಲ್ಲನಾನಾ ಬಗೆಯ ಪೂಜೆ ನಿನಗೆ ಸ್ವಾಮಿನಾನು ನಿನ್ನನು ಬಿಟ್ಟು ಒಂದು ಕಾಲದಲಿನ್ನುಏನಿದ್ದೇನೊ ಚೆಲ್ವಚಿತ್ರಮಹಿಮಕಾಣದೆ ಕೆಟ್ಟೆ ನಿನ್ನ ನಾನು ನನ್ನದು ಎಂಬೊಹೀನಬುದ್ಧಿಯ ಮಾಯವು ಎನಗೆ ಪಚ್ಚಿನಾನು ನೀನು ಎಂತೆಂಬೊ ಜ್ಞಾನವ ತಿಳಿಯದೆಮಾನಸ ಪಶುವೊ ನಾ ಏನೆಂಬೆನೊನೀನೆ ಅಲ್ಲವೆ ಎನಗೀ ಮಂದಬುದ್ಧಿಯಿತ್ತವ ಏನು ಎನಗೆ ಕೆಟ್ಟದೊಂದು ಇಲ್ಲಏನಾದದ್ದೆಲ್ಲ ಹಿಂದೆ ನಾನಾ ಕರ್ಮಗಳೆಲ್ಲಮನಸಾ ವಾಚಾ ಕಾಯಾ ಮಾಡಿದದ್ದುಶ್ರೀನಾಥ ನಿನಗೆ ಮತ್ತೀಗ ಒಪ್ಪಿಸುವೆನೊನಾನಲ್ಲ ಇದಕ್ಕೆ ಸ್ವತಂತ್ರನೆಂದುಏನು ಆದದ್ದು ಎಲ್ಲ ನೀನೆ ತೆಗೆದುಕೊಂಡುಹೀನ ನಾ ನೀನು ಸಾರ್ಥಕನ ಮಾಡುಭಾನುಶತತೇಜ ಗೋಪಾಲವಿಠಲಕಾಣಿಸಿಕೊಂಡು ಕರ್ಮಕಾನನ ದಾಟಿಸೆನ್ನ ೫

ಅಟ್ಟತಾಳ
ಎನ್ನ ದಶ ಇಂದ್ರಿಯಗಳು ನಿನ್ನ ವಿಷಯೀಕರಿಸಲಿಎನ್ನ ಮನಸು ಬಂದು ನಿನ್ನಲ್ಲೆ ಎರಗಲಿಅನ್ಯವೆಂದರೆ ಎನಗೆ ವಮನ ಸರಿ ಆಗಲಿನಿನ್ನನೆ ಹುಡುಕುತ ಎನ್ನ ಬುದ್ಧಿಯು ಇರಲಿನಿನ್ನ ನೋಡಿ ನಲಿದಾಡಲೆನ್ನ ಚಿತ್ತನೀನಲ್ಲದಿಲ್ಲೆಂಬೊ ಅಹಂಕಾರ ಎನಗಿರಲಿಇನ್ನೇನು ಬೇಡುವುದಿಲ್ಲವೊ ಹೇ ಸ್ವಾಮಿನಿನ್ನದೆಲ್ಲ ಎಂಬುವುದು ಪಾಲಿಸುಘನ್ನ ದಯಾನಿಧಿ ಗೋಪಾಲವಿಠಲನೀನಲ್ಲದರಿಯೆ ನಾ ಇನ್ನೊಂದು ಸುಖವ ೬

ಆದಿತಾಳ
ಮೂರು ದಿನಕೆ ಒಮ್ಮೆ ಆಹಾರವನ್ನು ಕೊಂಡುನೀರು ಮಾತ್ರವೆ ಕೊಟ್ಟು ನಿಲ್ಲಿಸಿ ದೇಹವಆರು ಎನಗೆ ಹತ್ತದಂತಲಾದರು ಏನುನಾರಿಸುತರು ಸೇರದಂತಲಾದರು ಮಾಡುಅರಿವರಿವರನ್ಯತ್ರರ ಕೂಡಿಸದ್ಹೋಗುಊರನೆ ಹೊರಡಿಸಿ ಕಾನನ ಸೇರಿಸುನಾರಾಯಣ ನಿನ್ನ ನಾನು ಬಿಟ್ಟವನಲ್ಲಈ ರೀತಿ ಎನಗೆ ನೀ ಮಾಡಿದರು ಇನ್ನುಆರ ಭಾರಕೆ ಸರ್ವಕಾರಣ ನೀನೆಂದುಶರೀರ ಒಪ್ಪಿಸಿ ಕರವ ಮುಗಿದೆಘೋರ ಸಂಸಾರದ ಬೇರ ಕಿತ್ತುವುದಕ್ಕೆಬಾರಿಬಾರಿಗೆ ನಿನ್ನ ಸ್ಮರಣೆ ಬಲವಯ್ಯಭಾರತೀಶನೊಡೆಯ ಗೋಪಾಲವಿಠಲದೂರ ನೋಡದೆ ಮನಕೆ ಬಾರೊ ಸರ್ವದಾ ಸ್ವಾಮಿ ೭

ಜತೆ
ನೀನು ಧ್ಯಾನಕೆ ನಿತ್ಯ ನಿಲುಕುತಲಿರು ಎಂದೆನಾನು ಅನ್ಯವನೊಲ್ಲೆ ಗೋಪಾಲವಿಠಲ

ಶ್ರೀಹರಿಯ ನಾನಾರೂಪ,
೧೩೩
ಸುಳಾದಿ
ಧ್ರುವತಾಳ
ನೀನು ಪುಟ್ಟಿಸಲು ಪುಟ್ಟುವಜೀವ ನಾನಯ್ಯನೀನು ಪೋಷಿಸಲು ಪೋಷಿಸಿಕೊಂಬೆ ನಾನಯ್ಯನೀನು ಚಲಿಸಲು ಚಲಿಸುವೆನಯ್ಯ ನಾನುನೀನು ತಡಹಲು ತಡಹುವೆನಯ್ಯ ನಾನುನೀನು ನುಡಿಸಲು ನುಡಿವುದು ನಾಲಿಗೆನೀನೆ ವ್ಯಾಪ್ತನು ಸ್ಥೂಲಸೂಕ್ಷ್ಮ ದೇಹಗಳಲ್ಲಿನೀನೆ ಕರ್ತ ಭೋಕ್ತ ನೀನೆ ಆಧಾರನುನೀನೆ ನೇಮಿಸಿದಂತೆ ಲಾಭ ನಷ್ಟಂಗಳುನೀನೆ ಸರ್ವಚರಾಚರ ಪ್ರೇರಕ ನೀನೆನೀನೆ ಸ್ವತಂತ್ರಾಸ್ವತಂತ್ರ ಸ್ವಪ್ರಕಾಶನೀನೆ ವ್ಯಾಪಕ ಸರ್ವ ಜೀವ ಜಗತ್ತಿನಲ್ಲಿನೀನೆ ನೀನೆ ನೀನೆ ಗೋಪಾಲವಿಠಲ ೧

ಮಠ್ಯತಾಳ
ನಾನಾ ಯೋನಿಗಳಲ್ಲಿ ಜನಿಸಿ ಬರಲಿಕ್ಕೆನಾನು ಸ್ವತಂತ್ರನೇನೊ ಪೇಳೆಲೊ ಹರಿಯೆನೀನು ಸೃಷ್ಟಿಸುವೆ ಕರ್ಮನೆವನ ಮಾಡಿಏನೊ ಕರ್ಮಕೆ ಸ್ವಾತಂತ್ರ್ಯ ನಿನ್ನ ವಿನಹ ಉಂಟೆನೀನೆ ಕಾರಣ ಯೋಗ್ಯತೆ ನಿನ್ನಾಧೀನಏನಾದ ಕರ್ಮದ್ವಯ ನೀನೆ ಮಾಡಿಸುವಿನೀನೆ ಮಾಡಿದ್ದೆಂದು ನಿನಗೆ ಸಮರ್ಪಿತವು ನಾನು ನಿನ್ನಾಧೀನ ಗೋಪಾಲವಿಠಲ ೨

ರೂಪಕತಾಳ
ಪೃಥಿವಿಪತಿ ಒಂದು ರಥವ ನಿರ್ಮಾಣವ ಮಾಡಿಅತಿ ಉತ್ತಮವಾದ ವಾಜಿಗಳನ್ನು ಕಟ್ಟಿಮಥನಿಸಿ ಸೂತನೊಬ್ಬನ ಮಾಡಿ ಆ ಕ್ಷಣರಥದ ಮಧ್ಯದಲ್ಲಿ ತಾ ಕುಳಿತು ಕಂದನ ಸಹಪಥವನರಿತು ನಡೆಸೆಂದು ಸೂತಗೆ ಪೇಳೆಯಥಾಯಥಾ ಮನದಿಚ್ಛೆ ಬಂದಂತೆ ನಡೆಸೋರುರಥಕೆ ಸ್ವಾತಂತ್ರ್ಯ ಆವುದು ಪೇಳೊ ಹರಿಯೆರಥ ಎನ್ನ ದೇಹವು ಪೃಥಿವಿಪತಿ ನೀನುರಥಿಕರೆ ತಾತ್ವಿಕರು ಕಂದನಂದದಿ ನಾನು ಅತಿ ಉತ್ತಮ ವಾಜಿಗಳೆ ಇಂದ್ರಿಯಗಳುಜತನಾಗಿ ಪಿಡಿದ ಹಗ್ಗವೆ ಎನ್ನ ಮನಸುಖತಿಯಿಂದ ಪಿಡಿದಟ್ಟುವ ಮಣಿಯೆ ಕರ್ಮಂಗಳು ಆರಥಕೆ ಈ ರಥಕೇನು ಭೇದ ಉಂಟೆಹಿತದಿಂದ ಪೇಳೆಲೊ ರಥಾಂಗಪಾಣಿಯೆ ಪಾ-ರಥನಪಾಲಕನೆ ಗೋಪಾಲವಿಠಲ ಕೇಳೊಸತತ ನೀ ಪ್ರೇರಕ ಸಥೆ ನಿನ್ನದೊ ೩

ಝಂಪೆತಾಳ
ಪತಿಯು ತಾನಾಗಿ ತನ್ನ ಸತಿಗೆ ಪಾಪಪುಣ್ಯದವ್ರತವ ಮಾಡೆಂದು ನಿರೂಪ ಕೊಡಲು ಇದೆಶ್ರುತಿಸ್ಮ್ರತಿ ನಿರ್ಣಯಗಳು ಪೇಳುತಲಿವೆಪತಿ ನೀನು ಎನಗೆ ಸತಿಯು ನಿನಗೆ ನಾನುಪತಿತಪಾವನ ಪಾಪ ನಿರ್ಲೋಪನಹುದು ಜಗತ್ಪತಿ ಎಂದೆನಿಸಿಕೊಂಬ ಅತಿಶಯವು ನಿನಗಯ್ಯಹಿತದಿಂದ ಕೇಳೊಂದು ದೃಷ್ಟಾಂತರವು ಎನ್ನಮತಿ ನೀ ಪ್ರೇರಿಸಿದಂತೆ ಪೇಳುವೆನೊ ಹರಿಯೆಅತಿಸೀತ ಬಾಧಿಸೆ ವಹ್ನಿ ಆಶ್ರೈಸುವರೊ ಜಿತವಾಗಿ ಸೀತ ವಹ್ನಿಗೆ ಲೇಪಿಸುವುದೆಪತಿತಪಾವನ ಪಾಪ ನಿರ್ಲೇಪ ನೀ ಸತ್ಯದಿತಿಜ ಮರ್ದನನೆ ಗೋಪಾಲವಿಠಲ ನಿನ್ನಕೃತಿ ಅತಿ ಆಶ್ಚರ್ಯವು ಹಿತವೊ ಭಕ್ತರಿಗೆ ೪

ತ್ರಿಪುಟತಾಳ
ತರಣಿ ಉದಿತನಾಗೆ ತಮವು ನಿಲ್ಲುವುದೆಗರುಡನೆದುರಿಗೆ ಉರಗ ಸರಸವಾಡುವುದೆಹರಿಯ ಕೂಡ ಕರಿ ತಿರುಗಿ ಕಾದುವುದೆ ಹರಿ ನಿನ್ನ ಕರುಣವಾಗಲು ದುರಿತದ ಭಯವೆಸುರಪತಿ ವಜ್ರಕ್ಕೆ ಗಿರಿ ಪ್ರತಿನಿಧಿಯೆಪರಮ ಬಲಾಢ್ಯನಿಗೆ ಹೇಡಿ ಅಂಜಿಕೆಯೆಉರಿವ ಮಾರಿಗೆ ತೃಣವು ಅಣಕವಾಡುವುದೆಪರಮಪುರುಷ ನಿನ್ನ ಸ್ಮರಣೆ ಬಲವಿರಲಿಕ್ಕೆದುರಿತಕಂಜೆನೊ ಜವನ ದಂಡಕಂಜೆನೊಪರಮ ದಯಾಳು ಗೋಪಾಲವಿಠಲ ನಿನ್ನಕರುಣಬಲಕಿನ್ನು ಮಿಗೆ ಬಲವಿಲ್ಲವೊ ೫

ಅಟ್ಟತಾಳ
ನಿತ್ಯ ಪತ್ನಿ ಭಾವ ಲಕುಮಿಗಿತ್ತವ ನೀನುಸತ್ಯ ಲೋಕಾಧಿಪತ್ಯ ಬೊಮ್ಮಗಿತ್ತೆಲೊ ದೇವಮೃತ್ಯುಂಜಯಗೆ ಕೈಲಾಸವಿತ್ತವ ನೀನುಭೃತ್ಯ ಇಂದ್ರಗೆ ತ್ರಿವಿಷ್ಟಪ ಕೊಟ್ಟೆ ಈಮರ್ತ್ಯಲೋಕದ ಸಂಪದವಿಗಲ್ಲದೆ ಏಕಛತ್ರಾಧಿಪತಿಗೆ ಒಂದು ಅಸ್ತಿನಾಸ್ತಿಗಳುಂಟೆಅತ್ಯುನ್ನತ ನೀನು ಅಹಿರಾಜತಲ್ಪನೆಮುತ್ತಿವೆ ರೋಮ ರೋಮಕೆ ಕೋಟಿ ಬ್ರಹ್ಮಾಂಡನಿತ್ಯ ಖಗನು ವಾಹನನೇನೊ ನಿನ್ನಕೃತ್ಯ ನೋಡಲು ಅತ್ಯಾಶ್ಚರ್ಯ ತೋರುತಲಿದೆಸತ್ಯಸಂಕಲ್ಪನೆ ಗೋಪಾಲವಿಠಲಉತ್ತಮರಿಗೆ ಸುಲಭ ಭೃತ್ಯಪಾಲಕನೆ6

ಆದಿತಾಳ
ಜಲಧಿ ಪೊಕ್ಕರು ಬಿಡೆ ಜಲದಲಡಗೆ ಬಿಡೆನೆಲದ ಮರೆಯಲಿ ಪೊಕ್ಕರೆ ನಿನ್ನ ಬಿಡೆನೊಬಲುಘೋರರೂಪತನದಲಂಜಿಸಲು ಬಿಡೆ ಸುಲಭದಿ ಗತಿಯಿಲ್ಲ ಯಾಚಕನೆನೆ ಬಿಡೆಬಲವಂತಿಕೆಯಲಿ ಪರಶು ತೋರಲು ಬಿಡೆತಲೆ ಜಡೆಗಳು ತಪಸಿಯಾದರು ಬಿಡೆಕುಲಹೀನನಾಗಿ ದನಗಾಯ್ದರು ಬಿಡೆಬಲು ಅರ್ಭಕನೆಂದು ಬತ್ತಲಾದರು ಬಿಡೆಸಿಲುಕದೆ ವಾಜಿಯನೇರಿ ಓಡದಂತೆನ್ನತಲೆ ನಿನ್ನ ಕಾಲಿಗೆ ಕಟ್ಟಿ ಕೆಡಹುವೆನೊಖಳರ ವಂಚಿಕೆ ವೇಷಗಳ ಬಲ್ಲೆನೊ ನಾನುಸುಲಭದಿಂದಲಿ ಕಾಯೊ ಗೋಪಾಲವಿಠಲ ೭

ಜತೆ
ಗಿರಿಯನೆತ್ತುವನಿಗೆ ಹರಳು ಭಾರವೆ ದೇವಪೊರೆಯೆನ್ನ ಕರುಣಾಳು ಗೋಪಾಲವಿಠಲ

೧೩೪
ಸುಳಾದಿ
ಧ್ರುವತಾಳ
ನೀನೆ ಎನಗೆ ಬಂಧ ನೀನೆ ಎನಗೆ ಮೋಚನೀನೆ ಎನಗೆ ಲಿಂಗ ನೀನೆ ಗುಣತ್ರಯವುನೀನೆ ಎನಗೆ ಲಾಭ ನೀನೆ ಎನಗೆ ನಷ್ಟನೀನೆ ಎನಗೆ ಧರ್ಮ ನೀನೆ ಎನಗೆ ಅಧರ್ಮನೀನೆ ಎನಗೆ ಸೃಜ್ಯ ನೀನೆ ಎನ್ನ ಪಾಲಕನೀನೆವೆ ಸಂಹಾರಕ ನೀನೆ ಎನಗೆ ಕರ್ತೃನೀನೆ ಸರ್ವಪ್ರೇರಕ ನೀನೆ ಎನಗೆ ಸ್ವಾಮಿಜ್ಞಾನಮಯ ಆನಂದವಿಠಲನೀನೆ ಸರ್ವವ್ಯಾಪ್ತ ನಿತ್ಯ ತೃಪ್ತ ೧

ಮಠ್ಯತಾಳ
ಭಿನ್ನ ಭಿನ್ನ ಪುಣ್ಯ ಭಿನ್ನ ಭಿನ್ನ ಪಾಪಭಿನ್ನ ಭಿನ್ನ ಜೀವಕ್ಕಿನ್ನು ಉಣಿಸುವೆಅನ್ಯ ವಿಷಯದಲ್ಲಿ ನನ್ನದೆಂಬೊ ಮಮತೆಇನ್ನು ಪೆಚ್ಚಿ ಹರಿಯೆ ನಿನ್ನ ತಿಳಿಸದೆಬನ್ನ ಬಡಿಸುವಿ ಮುನ್ನ ತೋರದಂತೆಭಿನ್ನ ಪುಣ್ಯಬೀಜ ಭಿನ್ನ ಪಾಪಬೀಜೈನ್ನು ಕೆಡವುದೆಂದು ಮುನ್ನ ಅರಿಯ ಒಂದುಘನ್ನ ದಯಾನಿಧಿ ಗೋಪಾಲವಿಠಲ ನಿನ್ನಚುನ್ನಾಟಕೆ ಇನ್ನು ನಮೋ ಎಂದೆ2

ರೂಪಕತಾಳ
ಅನ್ಯ ವಿಷಯಗಳೆ ಭಿನ್ನ ಧರ್ಮವೆನಗೆನಿನ್ನ ವಿಷಯೀಕರಿಸುವುದೆ ಪುಣ್ಯ ಧರ್ಮವೆನಗೆ ಇಂತು ಈ ಪರಿ ಇರಲಾಗಿ ಏ ದೇವಎನ್ನ ದಣಿಸುವುದು ಇನ್ನಾವ ನ್ಯಾಯವೊಎನ್ನ ಮಮತೆ ಭಿನ್ನದಲ್ಲಿ ಪುಟ್ಟಿಪುವುನಿನ್ನಾಧೀನ ಮತ್ತೆ ನೀ ಅದಕೆ ಪ್ರೇರಕಭಿನ್ನ ಕಾಮರಹಿತ ಗೋಪಾಲವಿಠಲನಿನ್ನವ ನಿನ್ನವ ನಿನ್ನವರವನೊ ೩

ಝಂಪೆತಾಳ
ಅಲ್ಲದೆ ಅಹುದೆಂಬೊ ಬಲ್ಲದ್ದು ಅರಿಯೆನುಕಲ್ಲು ಕಠಿಣವೆಂಬೊ ಜ್ಞಾನವಿಲ್ಲಬೆಲ್ಲ ಬೇವು ಎಂಬೊ ತೆರನಂತೆ ಬಿಟ್ಟಿಹೆಅಲ್ಲವಯ್ಯ ಎನಗೆ ಹೀಗ್ಯಾಕೆ ತಿಳಿಪೆಸಲ್ಲದು ಈ ಮೇಲೆ ಮೋಸಗೊಳಿಸಿದರೆನಗೆನಿಲ್ಲಯ್ಯ ನಿನಗೆ ನಿನ್ನ ಭಕುತರಾಣೆಬಲ್ಲೆ ನಾನೆಲ್ಲ ನಿನ್ನ ಮಾಯವೆಂಬುವುದುಇಲ್ಲ ನೀನಲ್ಲದೀಜಗಕೆ ಸ್ವತಂತ್ರ ಎಲ್ಲ ಸುರರೊಡೆಯ ಗೋಪಾಲವಿಠಲರೇಯಬಲ್ಲವರ ಮುಂದೆ ಬಚ್ಚಿಡುವುದೊಳಿತಲ್ಲ ೪

ತ್ರಿಪುಟತಾಳ
ಎನ್ನ ಮನಸ್ಸಿನಲ್ಲಿ ನಿನ್ನ ಮನಸ್ಸು ಇಟ್ಟುಭಿನ್ನ ವಿಷಯದಲ್ಲಿ ಎನ್ನ ಎಳೆವೀನ್ನ ವಸ್ತದ ಖೂನ ಇನ್ನು ನಾನರಿಯದೆಭಿನ್ನ ವಿಷಯದಲ್ಲಿ ಮೋಸಹೋದೀನ್ನಂತೆ ನೀ ಬೇರೆ ಮೋಸಹೋಗುವನಲ್ಲೈನ್ನು ತ್ರಿಗುಣಗಳಿಗೆ ನಿಯಾಮಕನಿನ್ನ ವಿಷಯಗಳಿಗೆ ನಿನಗೆ ಅಭೇದಎನ್ನ ವಿಷಯಕ್ಕೆ ಎನ್ನ ಭೇದಾಭೇದೈನ್ನಿತು ಈ ಬಗೆ ಇಪ್ಪುವದೆಲ್ಲದುನಿನ್ನಾಧೀನ ದೇವ ನಿನ್ನವನೊಅನಂತ ಗುಣಪೂರ್ಣ ಗೋಪಾಲವಿಠಲೈನ್ಯಾತಕೆ ಸಂಶಯ ನೀನಲ್ಲದೊಂದಿಲ್ಲ ೫

ಅಟ್ಟತಾಳ
ಒಂದೆ ಅನಂತಾಗಿ ಹೊಂದಿವೆ ವ್ಯಾಪ್ತನೆಮಂದಮತಿ ನಾ ತಿಳಿಯೆ ನಿನ್ನೊಡವೀಂದಿಗೆ ಈ ಬಂಧ ಚಿಂದಿ ಆಗುವುದೊ ಮ-ತ್ತೆಂದಿಗೆ ಲಿಂಗದೇಹವು ದಹಿಸುವುದೊಎಂದಿಗೆ ನಿನ್ನ ಪದಾಂಬುಜ ದೊರೆವುದೊಎಂದಿಗೆ ತ್ರಿಗುಣಾತೀತನಾಗುವೆನೊಸುಂದರಮೂರುತಿ ಗೋಪಾಲವಿಠಲತಂದೆ ನಿನ್ನ ಪಾದ ಅಂದಿಸೊ ಮನಕೆ ೬

ಆದಿತಾಳ
ಕಾಲ ಎನಗೆ ಕಾರಣಲ್ಲ ಕರ್ಮ ಎನಗೆ ಕಾರಣಲ್ಲಶೀಲ ವಿಮಲ ಕಾರಣಲ್ಲ ಕಾಮ ಎಂಬೋದೆ ಕಾರಣಲ್ಲಮೇಲು ಮೇಲು ಪೂರ್ವಕ ಕರ್ಮ ಕಾರಣಗಳಿಗೆ ಕಾರಣ ನೀನೆ ಪಾಲಸಾಗರಶಾಯಿ ಚೆಲ್ವ ಗೋಪಾಲವಿಠಲಆಲೋಚನೆಯು ಇಲ್ಲ ಎನಗೆ ಆಪ್ತಬಂಧು ನೀನೆ ನೀನೆ ೭

ಜತೆ
ಹಿಂದೆ ಇಂದು ಮುಂದೆ ಮತ್ತೆ ಎಂದೆಂದಿಗೆ ಇದೆಒಂದೆ ಮಾತಯ್ಯ ಗೋಪಾಲವಿಠಲಯ್ಯ

ಶ್ರೀಹರಿಯ ಅನಂತರೂಪಗಳನ್ನೂ
೧೬೫
ಸುಳಾದಿ
ಧ್ರುವತಾಳ
ನೀನೆ ಏನೋ ವಿಠಲ ನಿಗಮವ ತಂದವನುನೀನೆ ಏನೋ ವಿಠಲ ನಗವನ್ನು ಪೊತ್ತವನುನೀನೆ ಏನೋ ವಿಠಲ ವರಾಹ ರೂಪನಾದವ ನೀನೆ ಏನೋ ವಿಠಲ ನರಮೃಗ ರೂಪಾದದ್ದುನೀನೆ ಏನೋ ವಿಠಲ ವಟುರೂಪ ತಾಳಿದವನೀನೆ ಏನೋ ವಿಠಲ ಪರಶುವ ಪಿಡಿದವನೀನೆ ಏನೋ ವಿಠಲ ಶಿಲೆಯನ್ನುದ್ಧರಿಸಿದವನೀನೆ ಏನೋ ವಿಠಲ ಪಾಂಡವರ ಕಾಯ್ದವನೀನೆ ಏನೋ ವಿಠಲ ಬೌದ್ಧರೂಪನಾದದ್ದು ನೀನೆ ಏನೋ ವಿಠಲ ತುರಗವನೇರಿದವನೀನೆ ಏನೋ ವಿಠಲ ಚತುರಮೂರ್ತಿ ಆದವನೀನೆ ಏನೋ ವಿಠಲ ಅಷ್ಟಮೂರ್ತಿ ಆದವನೀನೆ ಏನೋ ವಿಠಲ ಕೇಶವಾದಿ ಆದವನೀನೆ ಏನೋ ವಿಠಲ ಅಜಾದಿ ಮೂರ್ತ್ಯಾದವ ನೀನೆ ಏನೋ ವಿಠಲ ವಿಶ್ವಮೂರ್ತಿ ಆದವ ನೀನೆ ಏನೋ ವಿಠಲ ಅನಂತಾನಂತರೂಪನೀನೆ ಏನೋ ವಿಠಲ ಸಿರಿ ಅಜಭವರಿಂದ ನಾನಾಕು ಪರಿಯಲ್ಲಿ ಸೇವೆಯ ಕೊಂಬುವನೆನೀನೆ ಏನೋ ವಿಠಲ ಆತ್ಮ ಅಂತರಾತ್ಮಕಾಣಿಸುವೆ ಎನ್ನಲ್ಲಿ ಅನಂತ ಒಂದೆ ಆಗಿಖೂನ ಪಿಡಿದು ಬಿಡೆ ಎಂದಿನವನೆ ನಾನುಏನೋ ಈಗ ನೋಡಲು ಆರೊ ಅಂಬಂಥ ವಿಧಿಜಾಣ ಚೆನ್ನಿಗರಾಯ ಗೋಪಾಲವಿಠಲಪ್ರಾಣದೊಲ್ಲಭ ನಿನ್ನ ಕಾಣದೆ ನಿಲ್ಲಲಾರೆ ೧

ಮಠ್ಯತಾಳ
ಆವ ನಿನ್ನ ಶಿರವು ಅಂತಿಯ ತೋರದುಆವ ನಿನ್ನ ನಯನ ಅಂತಿಯ ತೋರದುಆವ ನಿನ್ನ ಮುಖ ಅಂತಿಯ ತೋರದು ಆವ ನಿನ್ನ ಕರಗಳಂತಿಯ ತೋರದುಆವ ನಿನ್ನ ಅವಯವಂಗಳಿಗೆ ಅಂತ್ಯವಿಲ್ಲಆವ ನಿನ್ನ ಪಾದಂಗಳಿಗೆ ಅಂತಿಯಿಲ್ಲದೇವ ನಿನ್ನ ಆವ ಅವಯವಕೆಲ್ಲ ಪೂರ್ಣಆವ ದಿಕ್ಕು ನೋಡಲಿ ನಿನ್ನ ನೋಟವ್ಯಾಪ್ತಿಧಾವತಿಯು ಇಲ್ಲ ಆವಲ್ಲಿ ನಿನಗೆಕಾವು ಬಹಳ ಭಕುತರನ್ನ ಪಾಲಿಪಲ್ಲಿದೇವ ಬಾರೊ ಗೋವಳರಾಯ ನಿನಗೆ ಆವ ತಂದೆ ಕಾಣೊ ಆವ ತಾಯಿ ನಿನಗೆಜೀವ ಜಡಭಿನ್ನ ಗೋಪಾಲವಿಠಲ ದೇವ ನಿನ್ನ ಚರಿಯ ಕೋವಿದರಿಗೆ ಪ್ರಿಯ ೨

ರೂಪಕತಾಳ
ನಿನ್ನ ಕರುಣದಿಂದೆ ಎನ್ನ ಸೃಷ್ಟಿಸಿದ್ದುನಿನ್ನ ಕರುಣದಿಂದೆ ಎನ್ನ ಪಾಲಿಸುವುದುನಿನ್ನ ಕರುಣದಿಂದೇ ದೇಹ ವಿಯೋಗವುನಿನ್ನ ಕರುಣದಿಂದೆ ಎನ್ನ ಬಾಳುವೆ ಬದುಕುನಿನ್ನ ಕರುಣದಿಂದೆ ಮಾನಾಪಮಾನವುನಿನ್ನ ಕರುಣದಿಂದೆ ಲಾಭಾಪಜಯಗಳು ನಿನ್ನ ಕರುಣದಿಂದೆ ಸಾಧನಸಂಪತ್ತುನಿನ್ನ ಕರುಣದಿಂದೆ ಬಂಧನ ನಿವೃತ್ತಿನಿನ್ನ ಕರುಣದಿಂದೆ ಆಗುವುದೊ ರಂಗಎನ್ನಿಂದ ನಿನಗಿನ್ನು ಲೇಶಾಪೇಕ್ಷೆಯು ಇಲ್ಲನಿನ್ನ ಹಂಗಿನೊಳು ಮುಳುಗಿ ಆಡುವೆನಯ್ಯೈನ್ನು ಮುನ್ನೆ ಇದೆ ಆಗಲಿ ಆಗಲಿಚಿನ್ನುಮಯಮೂರ್ತಿ ಗೋಪಾಲವಿಠಲಜನುಮ ಜನುಮಕ್ಕೆ ನೀನೆ ಎನಗೆ ದಾತ ೩

ಝಂಪೆತಾಳ
ಎನಗೆ ಪಶುಜನ್ಮವು ಬಂದಾಗ ನೀನಿದ್ದುಎನಗೆ ಸ್ಥಾವರಜನ್ಮವು ಬಂದಾಗ ನೀನಿದ್ದುಎನಗೆ ಶ್ವಾನಸೂಕರಜನ್ಮ ಬಂದಾಗ ನೀನಿದ್ದುಎನಗೆ ಜಲಚರಜೀವಜನುಮ ಬಂದಾಗಿದ್ದುಎನಗೀಗ ಆವಾವ ದೇಹದಲ್ಲನುಭೋಗಾನುವಾಗಿ ನೀನಿದ್ದು ಅಲ್ಲಿ ಉಣಿಸಿಎನಗೆ ಅನುಭೋಗಕ್ಕೆ ಆಗ ತಂದುಕೊಡದೆದಣಿಸಿ ನೋಡಿದಿ ಅಲ್ಲವೇನೊ ಕೃಪಾಳುಎನಗೆ ನಿನ್ನ ಮಹಿಮೆ ಎಣಿಸಲಾಗೋದರಿವುದಣಿದೆ ದಣಿದೆ ನಾನಾ ಜನುಮಗಳಲ್ಲಿ ಬಂದುಎನಗೀಗ ಮಾನಿಸಜನುಮ ಲಾಭವಿನ್ನುಅನುವಾಗಿ ಇತ್ತದಕ್ಕನುಕೂಲವಾಗಿನ್ನುಘನವಾದ ಸಾಧನವನ್ನು ಎನ್ನಿಂದಲಿದಿನದಿನದಿ ಮಾಡಿಸಿ ನೂತನವಾಗಿನ್ನುಕ್ಷಣ ಕ್ಷಣಕೆ ನಿನ್ನ ಸ್ಮರಣೆ ಎನಗೆ ಇತ್ತುಜನನಿಯ ಜಠರದಿ ಜನಿಸದಂದದಿ ಮಾಡುಘನದೇವ ಕೇಳು ಗೋಪಾಲವಿಠಲರೇಯ ಎನಗೆ ನಿನ್ನರ್ಚಿಸೋ ಗುಣ ಉಪಾಸನೆ ಈಯೊ ೪

ತ್ರಿಪುಟತಾಳ
ಪ್ರಾಕೃತ ರಹಿತನೆ ಎಲೊ ದೇವ ನಿನಗೆ ಈಪ್ರಾಕೃತ ಉದಕದಿ ಮಜ್ಜನವೆಪ್ರಾಕೃತರಹಿತನೆ ಎಲೊ ದೇವ ನಿನಗೆ ಈಪ್ರಾಕೃತ ಉಡುಗೆಯ ವಸನಂಗಳೆಪ್ರಾಕೃತರಹಿತನೆ ಎಲೊ ದೇವ ನಿನಗೆ ಈಪ್ರಾಕೃತ ಜಡಗಳು ಆಭರಣವೆಪ್ರಾಕೃತರಹಿತನೆ ಎಲೊ ದೇವ ನಿನಗೆ ಈಪ್ರಾಕೃತ ಗಂಧ ತುಲಸಿ ಪುಷ್ಪವೆಪ್ರಾಕೃತರಹಿತನೆ ಎಲೊ ದೇವ ನಿನಗೆ ಈಪ್ರಾಕೃತ ಧೂಪಾದೀಪದಾರ್ತಿಯೆಪ್ರಾಕೃತರಹಿತನೆ ಎಲೊ ದೇವ ನಿನಗೆ ಈ ಪ್ರಾಕೃತದನ್ನವು ನೈವೇದ್ಯವೆಪ್ರಾಕೃತಬದ್ಧನ ಮಾಡಿ ಎನ್ನಿಂದಲಿಪ್ರಾಕೃತ ಪೂಜೆಯ ಕೈಕೊಂಬೆಪ್ರಾಕೃತದೊಳು ನೀನಪ್ರಾಕೃತನಾಗಿದ್ದುಈ ಪರಿಯಲಿ ನಿತ್ಯ ಪೂಜೆಗೊಂಬೆಪ್ರಾಕೃರತರಹಿತನಾಗಿ ನಿನ್ನ ದಾಸರುಪ್ರಾಕೃತದೊಳಗಿನ್ನು ಇಪ್ಪುವರುಪ್ರಾಕೃತರಹಿತನೆಂದೀಪರಿ ಚಿಂತಿಪರಪ್ರಾಕೃತಬದ್ಧದಿರಹಿತರ ಮಾಡುವೆಅಪಾರ ಮಹಿಮನೆ ಗೋಪಾಲವಿಠಲೈಇ ಪರಿಯಲಿ ನಿನ್ನ ಚಿಂತಿಪರೊಡನಿಡಿಸೊ ೫

ಅಟ್ಟತಾಳ
ಧನದ ಅಪೇಕ್ಷಕ್ಕೆ ನಿನ್ನ ಪೂಜೆಯು ಬೇಡವನಿತೆ ಅಪೇಕ್ಷಿಸಿ ನಿನ್ನ ಪೂಜೆಯು ಬೇಡಮನೆಯು ಅಪೇಕ್ಷಿಸಿ ನಿನ್ನ ಪೂಜೆಯು ಬೇಡತನುವು ಅಪೇಕ್ಷಿಸಿ ನಿನ್ನ ಪೂಜೆಯು ಬೇಡಘನಸುತರಿಗಾಗಿ ನಿನ್ನ ಪೂಜೆಯು ಬೇಡಕನಸಿನೊಳಾದರು ಕಾಮ್ಯ ಫಲಕೆ ನಿನ್ನನೆನಸದಂತೆ ಮಾಡು ನ್ಯಾಯದಲೆ ಇನ್ನುಎನಗೆ ಈ ದೇಹದಲ್ಲೇನೇನು ಅನುಭೋಗಾನುವಾಗಿ ಇದ್ದದ್ದು ಉಣಿಸದೆಬಿಡೆ ಇನ್ನುಎನಗೇನು ಈ ದೇಹ ಹೇಗೆ ಬಂದಿತೆಂದುಕ್ಷಣವು ಆದರು ನಿನ್ನ ಚಿಂತಿಸಿ ಇದ್ದೆನೆತನುವು ಕೊಟ್ಟವಗೆ ತಾಪತ್ರಯದ ಚಿಂತೀನಗೆ ಎನಗೇನು ಯೋಚನಿಲ್ಲತನುಮನದೊಡೆಯನೆ ಗೋಪಾಲವಿಠಲಎನಗೆ ನಿಷ್ಕಾಮಕ ನಿನ್ನಾರಾಧನೆ ಈಯೊ ೬

ಆದಿತಾಳ
ಶುಭವೆಂದು ಪಿಡಿಯೆ ಶುಭದೊಳಶುಭವುಂಟ-ಶುಭವೆಂದು ಬಿಡಲು ಅಶುಭದೊಳು ಶುಭವುಂಟುಶುಭವು ಅಶುಭವು ಎರಡೆಂದು ಎನಗೆವಿಭಾಗ ತಿಳಿಯದು ವಿವರಿಸಿ ನೋಡಲುಶುಭಕೆ ಕಾರಣ ನೀನೆ ಅಶುಭಕೆ ಕಾರಣನೆಂದುದ್ವಿಭಾಗವು ವಿವರಣೆ ನಭದವರೆ ಮಾಡಿಹರುಇಭರಾಜಪಾಲಕ ಗೋಪಾಲವಿಠಲ ಶುಭ ಅಶುಭವು ನಿನ್ನಾಧೀನ ಇಪ್ಪುವು ೭

ಜತೆ
ಎನಗೆ ನೀ ಬೇಕೆಂಬೊ ಆಸೆಯು ಘನವಯ್ಯನಿನಗೆ ಬೇಕಿತ್ತೆ ಪೊರೆ ಗೋಪಾಲವಿಠಲ

೧೮೦
ಸುಳಾದಿಧ್ರುವತಾಳ
ನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲುಸಾಲು ಬೆರಳುಂಗುರ ಕೈಲಿ ಖಡ್ಗವ ಪಿಡಿದುತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿಫಾಲ ಕಸ್ತೂರಿನಿಟ್ಟು ಮೈಲಿ ಗಂಧವ ಪೂಸಿಪಾಲಾಯನದಿ ಅಶ್ವವೇರಿ ಓಲ್ಯಾಡಿಸುತ್ತ’ಆಲೆನಾಹಿ’ ಎಂದು ಕೇಳಿದವನಾರವ್ವ ವೇಳೆ ಸಾಲಧೋಯಿತು ಕೇಳುವುದಕ್ಕೆನಗೆಹೇಳುವುದಕ್ಕೆ ವಚನಗದ್ಗದದಿಏಳದು ವಚನ ಉಚ್ಚರಿಸುವೆನೆನಲುಆಲೋಚನೆಗೆ ಅತಿವಿಚಿತ್ರವುಕೇಳಿಲ್ಲ ಕಂಡಿಲ್ಲ ಇಂಥ ಪುರುಷನ್ನ ಎಂದೂಕಾಳಗತ್ತಲು ಅಲ್ಲ ಅತ್ತ ನೋಡು ಹಗಲುಕೇಳು ತಗ್ಗು ಮಿಟ್ಟೆ ಮೇಲೆ ಮಂಜುರವಲ್ಲಹೇಳಲೇನಿದು ಒಂದು ಸೋಜಿಗವು ಕಾಲುಏಳವು ಮುಂದೆ ನಡೆಯಲು ಎನಗಿನ್ನುಆಲೋಚನೆಯೆಲ್ಲ ಅತ್ತಲಾಗಿ ಎನ್ನಕೇಳಿದನಲ್ಲೆ ಅರೆ ಮಾತಿನಿಂದಲಿ ಎನ್ನಹೇಳುವ ಪುರುಷನು ಆವನಾಗುವನುಆಲೋಚನೆಗೆ ಎನಗೆ ತೋರುತಲಿದೆ ತುಲಸಿ-ಮಾಲೆ ಪರಿಮಳಗಂಧ ಕುರುಹದಿಂದಶೀಲಮೂರುತಿ ಪಂಡರಿರಾಯ ಗೋಪಾಲವಿಠಲಓಲ್ಯಾಡಿ ಕುದುರೆ ಓಲ್ಯಾಡಿಸುತ್ತ ಪೋದನಲ್ಲೆ ೧

ಮಠ್ಯತಾಳ
ಕಂಡಿರ್ಯಾ ಕಂಡಿರ್ಯಾ ಖಂಡವ್ಯಾಪುತನಿವಕಂಡಿರ್ಯಾ ಕಂಡಿರ್ಯಾ ಬೊಮ್ಮಾಂಡದೊಡೆಯನಕಂಡಿರ್ಯಾ ಕಂಡಿರ್ಯಾ ಅಜಭವಾದಿಗಳತೊಂಡರ ಮಾಡಿ ಬಿಡದಖಂಡ ಪೊರೆವವನಕಂಡಿರ್ಯಾ ಕಂಡಿರ್ಯಾ ಸರ್ವಜೀವರ ಪಶು-ಹಿಂಡು ಮಾಡಿ ಬಿಡದೆ ಕಾಯುವ ಗೋಪಾಲನಕಂಡಿರ್ಯಾ ಕಂಡಿರ್ಯಾ ಮಣಿಮೌಳಿ ಮಲ್ಲಿಗೆ ದಂಡೆಯಮಂಡೆಯು ಶೋಭಿಸೆ ಮುದ್ದುಮೊಗದ ಚೆಲುವಪುಂಡರೀಕದಳನಯನ ಕಸ್ತೂರಿತಿಲಕಕುಂಡಲಕರ್ಣ ಕಪೋಲ ತತ್ತಳಿಸುತ್ತ ಪುಂಡರೀಕ ತುಲಸೀದಂಡೆಯ ಕೊರಳೊಲಿಯೆಚೆಂಡು ಬುಗುರಿ ಚಿಣ್ಣಿಗೋಲುಗಳಾಡುತ್ತಪುಂಡರೀಕನ ಭಕುತಿಗೊಲಿದು ಬಂದುನಿಂದಪಂಡರಪುರಿರೇಯ ಗೋಪಾಲವಿಠಲನ್ನಕಂಡಿರ್ಯಾ ಕಂಡಿರ್ಯಾ ಕಪಟನಾಟಕಹರಿಯ ೨

ರೂಪಕತಾಳ
ಆವ ರೂಪದಲ್ಲೇ ಗೋವು ಕಾಯಿದ ರೂಪಆವ ಈ ರೂಪವೇ ಮತ್ಸ್ಯಾದಿ ರೂಪವುಆವ ಈ ರೂಪವೇ ಅಜಾದಿರೂಪವುಆವ ಈ ರೂಪವೇ ಆತ್ಮಾದಿರೂಪವುಆವ ಈ ರೂಪವೇ ಅನಂತಾತ್ಮಕಶ್ರೀವಿಷ್ಣು ರೂಪವು ಮತ್ತಿವನೆ ಸಾಕ್ಷಾತು ನೋಡಾಈ ವಿಧ ರೂಪವು ಅನಂತಾನಂತವಿರಲುಆವ ರಾಹುತನಂತೆ ಅಶ್ವವೇರಿ ಎನ್ನೈಇ ವಿಧದಲಿ ಎನ್ನ ಕಾವಳಗೊಳಿಸಿದುದು ಏನೊನಾವೊಂದರಿತವನಲ್ಲ ನಿನ್ನ ಲೀಲೆಆವ ಬಗೆಯೊ ನಾನರಿಯೆ ಈ ವಿಧ ತೋರಿದ್ದುಸೇವಕಜನಸ್ಥಿತಿ ನೀನೆ ಬಲ್ಲೆಗೋವರ್ಧನೋದ್ಧಾರ ಗೋಪಾಲವಿಠಲದೇವ ಪಂಡರಿರಾಯ ಶ್ರೀ ವಿಜಯದಾಸರ ಪ್ರೀಯ ೩

ಝಂಪೆತಾಳ
ನೋಡಿದಂತೆನ್ನನು ನೋಡುತಿದ್ದರೆ ಕೊನೆಗೆಮಾಡಿಕೊಂಬೆ ಮನಕೆ ಅವ ನಾಥನೆಂದುನೋಡಿದಾಕ್ಷಣದಲಿ ಕಾಣಧೋದುದರಿಂದನೋಡಬೇಕಾಯಿತು ಆವವನೊ ಎಂದುನೋಡನೋಡಾ ಅದೃಶ್ಯನಾದ ಕಾರಣ ಮನಕೆನೋಡು ಎಂತಿಪ್ಪುದು ನೋಡುವರಿಗೆ ಆಡುವ ಮಾತಲ್ಲ ಕಂಡು ಕಂಡಂತಿನ್ನುನೋಡಬಾರದೆ ಒಂದು ಘಳಿಗೆ ನಿಂತುನೋಡಿದಾಕ್ಷಣ ನಿಂದು ಬೇಡುವುದಿನ್ನೇನುನೋಡೊ ಯೋಗ್ಯತೆಯರಿತು ನೋಡು ದೊರೆಯೆಆಡಿದ್ದೆಲ್ಲ ಬರಲಿ ಇಲ್ಲವೆಂದು ಎನ್ನನೋಡು ಆವಸ್ಥಳಕೆ ಬರಲಿ ನಾನುನೋಡು ತಿಳಿಯದು ಸ್ವಾಮಿ ಗೋಪಾಲವಿಠಲನೋಡು ಪಂಡರಿರಾಯ ಮಾಡು ದಯವ ೪

ತ್ರಿಪುಟತಾಳ
ಆವ ದೇಶಕೆ ಬರಲಿ ಆವ ಕ್ಷೇತ್ರವ ನೋಡಲಿಆವ ಸಂಗವ ಬಿಡಲಿ ಆವ ಸಂಗವ ಪಿಡಿಯಲಿಆವ ವ್ರತಗಳ ಮಾಡಲಿ ಆವ ಶ್ರವಣವ ಕೇಳಲಿಆವ ಧೈರ್ಯವು ಇರಲಿ ಆವುದಾವುದು ತಿಳಿಯಲಿಆವ ಸಾಧನ ಮಾಡಲಿ ಆವುದಾವುದು ಕೊಡಲಿಆವುದಾವುದು ಉಣಲಿ ಆವುದಾವುದು ಹೊದೆಯಲಿಆವುದಾವುದು ನೋಡಲಿ ಆವುದಾವುದು ಬಿಡಲಿಆವುದಾವುದು ತಡೆಯಲಿ ಆವುದಾವುದು ಜಡಿಯಲಿಆವುದಾವುದರ್ಚಿಸಲಿ ಆವುದಾವುದು ಕೇಳಲಿಆವುದಾವುದು ನುಡಿಯಲಿ ಆವುದಾವುದು ಜಪಿಸಲಿದೇವ ನೀನಲ್ಲದಿಲ್ಲ ಇದರೊಳಗೊಂದುಆವಲ್ಲಿಗೊ ನಾನರಿಯೆ ಬರಹೇಳಿದ್ದು ಎನ್ನಪಾವನ್ನ ಮಾಳ್ಪ ಶಕ್ತ ನೀನೆ ಎನ್ನಆವಲ್ಲಿದ್ದರು ಎನಗೆ ಅನುಭೋಗ ಈಗಲೆಕಾವಲಿ ಬಹು ಇರಲಿಕಾಕು ಜನರಿಂದ ಬಂದ ಸೊಲ್ಲಿಗೆ ಮನ ಒ-ಯ್ದು ವಶವು ಮಾಡಲಿಬ್ಯಾಡನಾವೊಬ್ಬನೆ ನಿನ್ನ ಪೊಂದಿನಡೆವ ಸಿ-ರಿ ವಿಜಯದಾಸರ ಸಹವಾಸದಲ್ಲಿಪ್ಪಜೀವರುಗಳಿಗೆಲ್ಲ ನೋವು ಎಂಬುದು ಬ್ಯಾಡದೇವ ಪಂಡರಿರಾಯ ಗೋಪಾಲವಿಠಲನೀ ಒಲಿದುದಕ್ಕಿಂದು ಈ ವರವ ನೀಡು ೫

ಅಟ್ಟತಾಳ
ಶರಣು ಗೋವಳರಾಯ ಶರಣು ನಿರ್ಜಿತ ಮಾಯಶರಣು ಮುಕ್ತಾಶ್ರಯ ಶರಣಾನಂದಮಯಶರಣು ದೋಷವಿದೂರ ಶರಣು ನಿರ್ವಿಕಾರಶರಣು ಭಕ್ತರಪಾಲ ಶರಣು ಲೀಲಾವತಾರಶರಣು ಅವ್ಯಕ್ತಕಾಯ ಶರಣು ಪ್ರಾಕೃತಕಾಯಶರಣು ಜ್ಞಾನಪೂರ್ಣ ಶರಣು ಮೂಲಕಾರಣಶರಣು ಅಖಂಡೇಶ ಶರಣು ಅನಾದಿದೇವಶರಣು ನಿತ್ಯತೃಪ್ತ ಶರಣು ನಿರಂಜನಶರಣು ಅಘಟಿತಘಟಿತಾನಂತ ಐಶ್ವರ್ಯಶರಣು ಅಗಮ್ಯ ಅಲೌಕಿಕ ಐಶ್ವರ್ಯಶರಣು ಮಹಾಪ್ರಭೊ ಹೇ ರಾಜಾಧಿರಾಜಶರಣು ಅಯ್ಯ ಅಯ್ಯ ಪೂತುರೆ ಪೂತುರೆಶರಣು ಪಂಡರಿರಾಯ ಗೋಪಾಲವಿಠಲಶರಣು ಶರಣು ನಿನ್ನ ಪರಿವಾರಸಹ ನಿತ್ಯ ೬

ಆದಿತಾಳ
ಮಾನಿಸರೂಪದಿ ಮಹಿಮೆಯ ತೋರ್ಪನೆಮಾನಿಸರೂಪದಿ ಮನೆಮನೆ ಪೊಕ್ಕನೆಮಾನಿಸರೂಪದಿ ಮಣ್ಣನೆ ಮೆದ್ದನೆಮಾನಿಸರೂಪದಿ ಮುನಿಮನ ಸೆಳೆದನೆಮಾನಿಸರೂಪಾಗಿ ಮಾನಿನಿಗೊಲಿದನೆಮಾನಿಸರೂಪಾಗಿ ದನುಜರ ಕೊಂದನೆಮಾನಿಸರೂಪಾಗಿ ಧನುವನ್ನು ಮುರಿದನೆಮಾನಿಸದೃಷ್ಟಿಗೆ ಮನುಷ್ಯನಂತೆ ಅ-ಮಾನುಷ್ಯ ಮಹಿಮನೆ ಮರೆಮೋಸ ಮಾಡೋದುಮಾನಿತವೇನಯ್ಯ ಮಾನವಂತನೆ ಹೀಗೆಮಾನಿಸಾನ್ನವನುಂಬ ಮನುಜನಾದುದರಿಂದಮನುಷ್ಯನಂತೆ ನಿನ್ನ ಮನದಿ ನಿಶ್ಚೈಸಿದೆಮಾನಗುಣಾಂಬುಧಿ ಗೋಪಾಲವಿಠಲಮನಸಾವಾಚಾಕಾಯಾ ಮರೆಹೊಕ್ಕೆ ಮನ ನೀಡೊ ೭

ಜತೆ
ಎಲ್ಲಿ ನೋಡಲು ಮತ್ತಲ್ಲಿ ನೀನಿರೆ ಬರಲಿಲ್ಲವೆಂಬುದೇನೋ ಗೋಪಾಲವಿಠಲ

ಕಾಯದ ಸುಖಕ್ಕಾಗಿ
೩೪
ಸುಳಾದಿ
ಧ್ರುವತಾಳ
ಪೋಯಿತೆನ್ನ ಜನುಮ ವೃಥಾಯುವಾಗಿ ಇನ್ನುನ್ಯಾಯದ ಮಾರ್ಗವನು ಆಯವಳಿಯದೆಬಾಯಿಮುಚ್ಚಿಕೊಂಡು ಬಹುಜನ್ಮದ ದುಷ್ರ‍ಕತಕಾಯದ ಸುಖಕ್ಕಾಗಿ ಕಂಡವರ ಹಾರೈಸಿಛಾಯಗಾರಿಕೆ ತೋರಿ ಕ್ಷೇತ್ರವೃತ್ತಿಗಳಿಸಿಮಾಯಾಪ್ರಪಂಚನಾಗಿ ಮದೋನ್ಮತ್ತದಿಂದಲಿನ್ನುಆಯುಷ್ಯವ ಕಳೆದೆ ಅಜ್ಞಾನತನದಲ್ಲಿನಾಯಿಬದುಕಿನಂತೆ ಆಯಿತೆನ್ನದು ನೋಡುತಾಯಿಯ ಪಂಕ್ತಿಯಲ್ಲಿ ಪಾಯಸೂಟವ ಬಿಟ್ಟುದಾಯಿಗರಮನೆ ಪೀಯೂಷ ಉಂಡಂತೆನಾಯಕನಿರಲು ಸತಿ ಅನ್ಯಾಯಕ್ಕೆ ಬಿದ್ದು ಪರ-ನಾಯಕಗೆ ಬಲು ಸಾಯಾಸಬಟ್ಟಂತೆನೋಯ ದಣಿದೆನಯ್ಯ ಸಾಯ (ಸಹಾಯ) ವಾಗುವರಿಲ್ಲಕಾಯೊ ಲಕುಮಿರಮಣ ದಯದಿಂದಲಿ ಎನ್ನಗಾಯತ್ರಿ ಪ್ರತಿಪಾದ್ಯ ಗೋಪಾಲವಿಠಲಮಾಯಾರಹಿತ ಸೂತ್ರಧಾರಕ ಜಯ ಜಯ ೧

ಮಠ್ಯತಾಳ
ನಿನ್ನವನೆಂತಲೆ ಅನ್ಯರಿಗೆ ತೋರ್ವೆನಿನ್ನ ಪ್ರೀತಿಯ ಧರ್ಮ ಎನ್ನೊಳೊಂದಿಲ್ಲಅನ್ಯಕೆ ಮಾಡುವೆನೊ ಅರ್ಚನೆಗಳು ಎಲ್ಲಪುಣ್ಯಾತುಮ ನಿನ್ನ ಪೂಜಿಸಲಿಲ್ಲಯ್ಯಕಣ್ಣಿಗೆ ತೋರುವೆ ಹರಿಭಕ್ತನಂತೆಕನ್ನಗಾರನಂತೆ ನಿನ್ನವರಲಿ ದೋಷವನ್ನು ತಾ ಎಣಿಸುವೆ ಬಣ್ಣಗೆಟ್ಟು ಬಲುಇನ್ನು ಇದರ ಮೇಲೆ ನಿನ್ನವನೆಂತಾಹೆಅನ್ಯಾಯನ್ಯಾಯ ಇನ್ನೇನಿನ್ನೇನುಘನದಯಾನಿಧೆ ಗೋಪಾಲವಿಠಲಎನ್ನ ಗುಣದೋಷ ಎಣಿಸದೆ ಕಾಯಯ್ಯ೨

ರೂಪಕತಾಳ
ಅನ್ಯವಿಷಯಕೆ ಬಟ್ಟಂತ್ತಿನ್ನು ಧಾವತಿಗಳುನಿನ್ನ ಪರ ಆದರೆ ಎನಗೆಲ್ಲೆವ ದೋಷಹೊನ್ನು ಮಣ್ಣು ಮಿಕ್ಕ ಅನ್ಯವಾರ್ತೆಗಳಲ್ಲಿಎನ್ನ ಮನವು ಎಳೆದು ಪುಣ್ಯವ ಪೋಗಾಡಿ ಹುಣ್ಣು ಆಗೋದನಿನ್ನವರೆನ್ನುವರ ಬಾಗಿಲನ್ನು ಕಾಯಿದಿಹಂತೆಕುನ್ನಿ ಎನಿಸು ಹರಿ ಎನ್ನ ಮನೋವಾಚಕಾಯದಿನ್ನು ಮಾಳ್ಪಚೆನ್ನ ಕರ್ಮಗಳೆಲ್ಲ ನಿನ್ನಪರವೆ ಮಾಡುಇನ್ನೇನು ನಿನ್ನ ನಾ ಘನ್ನ ಬೇಡುವುದಿಲ್ಲಮನ್ನಿಸಿ ಎನ್ನಮನ ಅಧೀನವ ಮಾಡುಪನ್ನಗಶಯನ ಗೋಪಾಲವಿಠಲರೇಯನಿನ್ನ ಹೊರತು ಎನಗನ್ಯಥಾ ಗತಿಯಿಲ್ಲ ೩

ಝಂಪೆತಾಳ
ಗತಿ ಎಂಬುವುದೆ ನಿನ್ನ ಸ್ಮರಣವೆ ಗತಿ ಅನ್ಯ-ಗತಿ ಎಂಬುವುದು ನಿನ್ನ ವಿಸ್ಮರಣೆಹಿತ ಎಂಬುವುದು ನಿನ್ನ ಅರ್ಚನೆ ಹಿತವುಅಹಿತವೆಂಬುವುದು ನೀನೆ ತಾನೆಂಬೋದುಮತಿ ಎಂಬುವುದು ನಿನ್ನ ಮನದಲ್ಲಿ ತಿಳಿವುದು ಮಂದ-ಮತಿ ಎಂಬುವುದು ನಿನ್ನನ್ನು ತಿಳಿಯದ್ದೆಆತುಮಮೂರುತಿ ಅಂತರಾತುಮ ಮೂರುತಿಯಾಗಿಸತತ ಮಾಡಿಸುವಿ ಸರ್ವಕರ್ಮವುಹಿತಕಾರ್ಯವೆಲ್ಲ ದೇವತೆಗಳ ದ್ವಾರ ಅ-ಹಿತಕಾರ್ಯ ಅಹಿತ ಅಸುರರ ದ್ವಾರದಿಂದಜಿತವಾಗಿ ಮಾಡಿಸಿ ಜೀವರಿಗೆ ಕರ್ಮಫಲಮಿತಿ ತಪ್ಪದೆ ಉಣಿಸುವೆಯ ದೊರೆಯೆಪತಿತಪಾವನ ರಂಗ ಗೋಪಾಲವಿಠಲಪತಿತನ್ನ ಪೊರೆಯಯ್ಯ ಹಿತದಿಂದಲಿ ೪

ತ್ರಿಪುಟತಾಳ
ಅನಾದಿಕಾಲದಿಂದ ಆ ನಿನ್ನವನಾದೆನೆಆನಾವದು ಮಾಡಿದ ಅಧರ್ಮವೆ ಧರ್ಮಆನಾದರು ಇನ್ನು ಅನಂತ ಪಾತಕೊಂದುಕಾಣಿಸುತದೆ ದೇವ ಕಾರುಣ್ಯಸಾಗರಏನು ಸ್ವಭಾವವೊ ಎನಗೆ ಕಾಣೆ ನೀನೆ ಬಲ್ಲ್ಯೊನೀನೆಗತಿ ಎಂಬೊ ದೃಢವನು ದೊರಕುತದೆನೀನಿರು ಸ್ವಾತಂತ್ರ್ಯ ಆನೇನು ಬಲ್ಲೆನೊಏನಿದರ ಮೇಲೆ ನಾ ನಿನ್ನವನಾಹೆ ಹೇಗೆಜ್ಞಾನಿಗಳು ಕಂಡರೆ ಹೀನನ ಮೇಲೆ ದಯ-ವನು ಮಾಡುತಲಾರೆ ನ್ಯೂನಗಳೆಣಿಸದೆನಾನಾದರು ಅವರ ಧೇನಿಸಿ ತಿಳಿಯಲರಿಯೆತಾನಾಗೇವೆ ದಯವನು ಮಾಡುವರು ರಂಗಯ್ಯನೀನೆ ಕಾರಣ ಪಯೋನಿಧಿ ನಿಷೇಧನೆಯಲ್ಲಿಆನೊಬ್ಬರರಿಯೆನು ಅನಿಮಿತ್ತ ಬಂಧು ದೇವದೀನರಕ್ಷಕ ಚೆಲುವ ಗೋಪಾಲವಿಠಲಮಾನಾಭಿಮಾನದೊಡೆಯ ನಾ ನಿನ್ನ ಬಿಡೆನಯ್ಯ ೫

ಅಟ್ಟತಾಳ
ಕೆಟ್ಟದ್ದೆಲ್ಲ ಎನ್ನ ಕಾರ್ಯಗಳೇನುಕೊಟ್ಟದ್ದಿಲ್ಲ ನಿನ್ನ ಕೈಗೆ ನಾನೇನುಎಷ್ಟು ಕ್ಲುಪ್ತದೊಳಿಟ್ಟಷ್ಟೆ ಮಾಡಿಸುವಿನ್ನುಗಟ್ಟ್ಯಾಗಿ ಕ್ಲುಪ್ತ ಮೀರಿ ಪಾಪಪುಣ್ಯಅಟ್ಟಹಾಸವಾಗೆ ನಷ್ಟ ಮಾಡಿಸಿ ಇನ್ನುಇಷ್ಟು ಮಾತ್ರಕೆ ನಾ ಕೆಟ್ಟದ್ದೇನು ಹರಿನಷ್ಟ ಇಷ್ಟ ಇನ್ನು ಆರಭಾರಗಳೆಲ್ಲಸೃಷ್ಟಾದ್ಯಷ್ಟಕರ್ತ ಕೃಷ್ಣ ನಿನ್ನದಯ್ಯಇಷ್ಟದೈವ ನಮ್ಮ ಗೋಪಾಲವಿಠಲಬಿಟ್ಟೇನೆಂದರೆ ಬಿಡೆ ಎಷ್ಟು ಸುಮ್ಮನಿರೆ೬

ಆದಿತಾಳ
ಕಾಲಕಾಲಕೆ ನಿನ್ನ ಕಾರ್ಯಗಳನ್ನು ತಿಳಿಯೆಪಾಲಿಸಬೇಕಯ್ಯ ಪರಮಪುರುಷ ಹರಿಬಾಳುವೆಯ ಮಾಡಿಸು ವೇಳ್ಯೆ ವೇಳ್ಯೆಕೆ ನಿನ್ನಊಳಿಗದೊಳಗಿಟ್ಟು ಕಾಲವ ಕಳೆಸೋದುತಾಳಿಮಿಕಿಯ ಕೊಡು ಕೋಪಾಟೋಪಗಳಲ್ಲಿಆಳರಿತು ಪೊರೆಕಂಡ್ಯಾ ಗೋಪಾಲವಿಠಲ೭

ಜತೆ
ನಾ ಅಪರಾಧ್ಯಯ್ಯ ನೀ ಅಲ್ಲೆ ಪ್ರೇರಕಾಹೆಅಹಲ್ಯಾಶಾಪವಿಮೋಚ ಗೋಪಾಲವಿಠಲ

ಜಡಚೇತನರ ನಾನಾ ಬಗೆಯ
೧೩೬
ಸುಳಾದಿ
ಧ್ರುವತಾಳ
ಪ್ರಸ್ತಮಾಡುವಂಥ ಕರ್ತ ನಾನಲ್ಲವಯ್ಯವಸ್ತು ಬೇರೆ ಇದ್ದಾನೆ ಒಳಹೊರಗೆ ನೋಳ್ಪುದುಪುಸ್ತಕವಲ್ಲವಿದು ಬಿಚ್ಚಿತೋರಿಪುದಕ್ಕೆವಿಸ್ತರಿಸಿ ನೋಡಿ ವಿವೇಕರುಅಸ್ತಮಾನುದಯತನಕ ಅದರಿವೆಯಾಗೊಬ್ಬ ಗೃ-ಹಸ್ಥ ನಮಗೆಲ್ಲರಿಗೆ ಒಡೆಯ ಕಾಣೊಹಸ್ತದಿ ಕನ್ನಡಿ ಪಿಡಿದು ಕರ್ತೃತ್ವ ಎನಗೆಂದರೆಹುಸ್ತು ಹೋದಾವು ನಿಮ್ಮ ವಚನಂಗಳುಹೊಸ್ತಿಲ ಮುಂದೆ ನಿಂತು ಗೋವಿಂದ ಎಂದರೆವಸ್ತುವೆನಿಸುವುದೆ ದೇವ ನಮಸ್ಕಾರಕ್ಕೆಕಸ್ತೂರಿ ಭರಣಿಯೊಳು ಪರಿಮಳ ಎಚ್ಚಿದ್ದರೆವಸ್ತು ಇದೆ ಎಂಬೋರೆ ಭರಣಿಯನ್ನುದುಸ್ತರ ನಮಗಿದು ಆಸ್ತಿಕತನದಿ ನೋಡಿಸ್ವಸ್ತದಲ್ಲಿಪ್ಪೋದು ಯೋಚಿಸದೆವಸ್ತುವಾಹನ್ನ ಗೋಪಾಲವಿಠಲನೆಪ್ರಸ್ತಮಾಡಿಸುವ ಬಗೆಯ ಕೇಳಿ ೧

ಮಠ್ಯತಾಳ
ಒಂದು ಜೀವನಲ್ಲಿ ಕರ್ತೃವಾಗುವನುಒಂದು ಜೀವನಲ್ಲಿ ಭೋಕ್ತ್ರವಾಗುವನುಒಂದೊಂದು ಪದಾರ್ಥದಲ್ಲಿ ತಾನೆ ಇದ್ದುಒಂದೊಂದುರೂಪದಿ ಒಂದೊಂದಾಗಿ ಬಂದುಒಂದಕ್ಕೊಂದು ಭೇದ ಒಂದು ವಿಷಯದಲ್ಲಿಒಂದೆ ಒಂದಾಗುವನೊಂದರಲ್ಲಿ ನೋಡಾಒಂದರ ದ್ವಾರದಿ ಒಂದಕೆ ಫಲವೀವಒಂದರಲ್ಲ್ಯುಣಿಸುವ ಒಂದರಲ್ಲಿ ಇಪ್ಪಒಂದರಲ್ಲಿ ಇಲ್ಲವೆಂಬ ವಚನ ಸಲ್ಲಒಂದೆ ದೈವ ನಮ್ಮ ಗೋಪಾಲವಿಠಲವಂದಿಸಿ ತಿಳಿವರಿಗಾನಂದ ಬಡಿಸುವ ೨

ರೂಪಕತಾಳ
ತಾ ಎಂದೆನಿಸಿಕೊಂಡು ತಾನೆ ತಾಹುವನುಬಾ ಎಂದೆನಿಸಿಕೊಂಡು ತಾನೆ ಬಾಹುವನುಪೋ ಎಂದೆನಿಸಿಕೊಂಡು ತಾನೆ ಪೋಗುವನುಕೋ ಎಂದೆನಿಸಿಕೊಂಡು ತಾನೆ ಕೊಂಬುವನುಆ ಎಂದು ಕ್ಷ ಎಂದು ಐವತ್ತೊಂದಕ್ಷರಬಾಯಿಂದ ಉಚ್ಚರಿಸಿ ಕಾಯಶುದ್ಧಿಯ ಮಾಡಿಮಾಯ ಪೊಂದಿಸದಂತೆ ತತ್ವಗಳ ತೋರಿಸಿಕಾಯಿದು ಕೊಂಬನು ತಡವಿಲ್ಲದೆ ಭಕುತಿಬಾಯ ಬಡಿಯ ಭಕ್ತರಿಂದ ಆದ ಕರ್ಮಬಾಯ ಬಡಿಯ ಭಕ್ತರಲ್ಲದವರನಿನ್ನುನಾಯಕನಾಗಿ ಸರ್ವರಂತರಂಗದಿ ನಿಂತುನಿಯಾಮಕನಾಗಿ ನಿತ್ಯ ಕುಣಿಸ್ಯಾಡುವಮಾಯಾರಹಿತ ದೇವ ಗೋಪಾಲವಿಠಲತಾಯಿ ಲಾಲಿಸಿದಂತೆ ತನ್ನವರ ಪೊರೆವ ೩

ಝಂಪೆತಾಳ
ನಾನೆ ಕರ್ತನೆಂದು ನಾಲ್ಕು ದಿಕ್ಕುಗಳಿಂದನಾನಾ ಪದಾರ್ಥಗಳನು ತರಿಸಿಜ್ಞಾನವಿಲ್ಲದೆ ಯಜ್ಞಸ್ನಾನ ಗೋದಾನ ಭೂ-ದಾನ ಹಿರಣ್ಯದಾನ ಭೂಸುರರಿಗುಣಿಸೆನಾನಾವ್ರತ ಚಾಂದ್ರಾಯಣಗಳಿನ್ನುಗಾನ ಗಾಯತ್ರಿ ಜಪಮಂತ್ರಗಳುಏನು ಏಸೊಂದು ಕರ್ಮಗಳ ಮಾಡಿದರುಶ್ರೀನಿವಾಸನು ಇದರಿಂದೊಲಿಯನುಕಾಣದ ಕರ್ಮವನಂತ ಮಾಡೋಕಿಂತಜ್ಞಾನಪೂರ್ವಕದಿ ಗೆಲುವ ಯೋಚನೆನೀನು ಎನ್ನ ಸ್ವಾಮಿ ನಾನು ನಿನ್ನ ಭೃತ್ಯನೆಂದುದೈನ್ಯಬಟ್ಟುದಕ್ಕೇನೇನು ಸಮಾನವುಂಟೆದಾನವಾಂತಕ ಗೋಪಾಲವಿಠಲರೇಯನೀನೆ ಗತಿಯೆಂದವಗೆ ನಿಜವ ತಿಳಿಪುವ ೪

ತ್ರಿಪುಟತಾಳ
ನಿತ್ಯದಲ್ಲಿ ನಿಷ್ಕಾಮಕರ್ಮಗಳ ಮಾಡೆಪ್ರತ್ಯಕ್ಷದಲ್ಲಿ ತಾ ನಿಂತು ಫಲವೀವಸತ್ಯ ಅದಕೆ ಫಲವಿತ್ತರೆ ತಪ್ಪನುಭಕ್ತಿರಿಚ್ಛೆಗನಾಗಿ ಬಹುಬೇಗ ಒಲಿವನುಮತ್ತೊಂದು ಫಲಕಾಗಿ ಮತ್ತೊಂದು ಕರ್ಮಮಾಡೆದೈತ್ಯರ ದ್ವಾರದಿ ಫಲಗಳನೀವನುನಿತ್ಯವಲ್ಲವೊ ಅದು ತತ್ಕಾಲಕ್ಕೆ ಸುಖಚಿತ್ತಜನಯ್ಯನ ಚರಿತೆ ಹೀಗೆಭಕ್ತರಾದವರಿಂಥ ಕರ್ಮ ಮಾಡಿದರೆಕ್ಲುಪ್ತಿಗೆ ಕಡಿಮಿಲ್ಲ ಅಧಿಕಾನಂದವು ಹ್ರಾಸಉತ್ತಮ ಅಪರೋಕ್ಷ ಆದಮೇಲಕೆ ಹೀಗೆಜತ್ತಾಗಿ ಪ್ರಾರಬ್ಧ ಉಣಿಸುವುದು ಸಂ-ಚಿತ ಆಗಾಮಿಯು ನಾಶವಹುದು ಕ್ಷಣದಿಸತ್ಯಸಂಕಲ್ಪ ಗೋಪಾಲವಿಠಲನ್ನಭಕ್ತರಿಗೆ ಕೇಡಿಲ್ಲ ಭಯವಿಲ್ಲವೊ ೫

ಅಟ್ಟತಾಳ
ಒಂದು ಫಲವು ಒಬ್ಬನಿಂದಾದರೆ ಇನ್ನುಎಂದಿಗು ಅವನ ಉಪಕಾರ ಮರೆಯದೆಬಂಧಕ ನಮಗೆ ಅನಾದಿಕಾಲದಿಂದ ಇದ್ದದ್ದು ತನ್ನಚಂದುಳ್ಳ ನೋಟದಿ ಆನಂದಬಡಿಸುವಹಿಂದೆ ಮುಂದೆ ಅನಿಮಿತ್ತ ಬಂಧುವಾಗೀಂದಿರಾಪತಿ ದಯಾಸಿಂಧು ಕರುಣಾಳುಕಂದರ್ಪಜನಕ ಗೋಪಾಲವಿಠಲನ್ನಎಂದಿಗು ಮರೆಯದೆ ಮನಮಂದಿರದೊಳಗೆ ೬

ಆದಿತಾಳ
ಮಾಡಿಬಲ್ಲ್ಯಾ ಒಂದದರಿಂದಲಿನೋಡಿ ಬಲ್ಲ್ಯಾ ಒಂದದರಿಂದಲಿಕೂಡಿಬಲ್ಲ್ಯಾ ಒಂದದರಿಂದಲಿಬೇಡಿಬಲ್ಲ್ಯಾ ಒಂದದರಿಂದಲಿಗಾಡಿಕಾರ ಗೋಪಾಲವಿಠಲನೊ-ಳಾಡಿಬಲ್ಲ್ಯಾ ಒಂದದರಿಂದಲಿ ೭

ಜತೆ
ಕರ್ತೃ ಎನಿಸುವ ನಮ್ಮ ಕರ್ತೃವೆ ತಾನಾಗಿಸೂತ್ರಧಾರ ಗೋಪಾಲವಿಠಲ ಕಾಯ್ವ

ಶ್ರೀಹರಿಯನ್ನು ತಮ್ಮ ಮನೋಮಂದಿರಕ್ಕೆ
೩೫
ಸುಳಾದಿ
ಧ್ರುವತಾಳ
ಬಂದುನಿಲ್ಲಯ್ಯ ಭವದ ಸಿಂಧುವಿಗೆ ಅಗಸ್ತ್ಯನಂದದಿ ಸೆಳೆದು ಎನ್ನ ಮಂದಿರದೊಳಗಿನ್ನುಇಂದಿರೆಯಿಂದೊಪ್ಪುತ ಕಂದಕಂದ ಬೊಮ್ಮ ಮತ್ತನಂದಿವಾಹನ ಸುರರಿಂದ ವಂದಿತನಾಗಿಚೆಂದುಳ್ಳ ಓಲಗ ಆನಂದದಿ ಕೊಳುತಲಿಇಂದು ಬಾರಯ್ಯ ಬಲು ಸುಂದರವಿಗ್ರಹಮಂದಮತಿ ನಾ ನಿನ್ನ ಮನದಣಿ ಬೇಡಿಕೊಂಬೆಕಂದನ ಬಿನ್ನಪವ ತಂದೀಯೊ ತಾರೊ ಮನಕೆಒಂದರಿತವನಲ್ಲ ಒಂದೆ ದೇವನೆ ಕೇಳುವಂದಿಸೊ ಬಗೆ ನಿನ್ನ ಒಂದಾದರು ಆನರಿಯೆಕುಂದು ಮನುಜ ನಿನ್ನಾನಂದ ನೋಡೆನೆಂಬೊಚೆಂದುಳ್ಳ ಬಹು ದಿವಸದಿಂದಲೆನ್ನ ಆಸೆಯಮಂದರಧರ ಎನ್ನ ಮನದಭೀಷ್ಟೆ ಪೂರೈಸುಸಂದೇಹ ಮಾಡದಿರು ಸಾಧುಜೀವರಪಾಲವೃಂದಾವನದ ಗೋವಿಂದ ಸಿರಿ ಕೃಷ್ಣಮಂದಾಕಿನಿಯಜನಕ ಗೋಪಾಲವಿಠಲಬಂದೆನ್ನ ರಕ್ಷಿಸಯ್ಯ ಭಕುತವತ್ಸಲದೇವ ೧

ಮಠ್ಯತಾಳ
ಕೊಡುವುದು ಹಿಡಿವುದು ಬಿಡುವುದು ಇಡುವುದುನಡೆವುದು ನುಡಿವುದು ಅಡಗೋದು ಮಡಗೋದುಒಡಲೊಳು ಪೋಗುವುದು ತಡೆವುದು ಅಲ್ಲಲ್ಲಿಸಡಗರದಲಿ ತಿಳಿಸಿ ಕಡೆಹಾಯಿಸು ಭವದ-ಕಡಲ ಎನ್ನನು ಬೇಗ ಮಡದಿಯರು ಮಕ್ಕಳುಒಡವೆಗಳಲಿ ಮನವು ಕಡಕವಿಲ್ಲದೆ ಎಳೆದುಪಡಬಾರದ ಭಂಗ ಬಡಿಸಿದ ಕಾಲಕ್ಕುದೃಢ ನಿನ್ನ ಜ್ಞಾನ ಕೊಡು ಎನಗೆಲ್ಲಲ್ಲಿಮೃಡಸಖನೆ ಚೆಲ್ವ ಗೋಪಾಲವಿಠಲ ಎನ್ನಹಿಡಿದಾಡಿಸೊ ದೊರೆಯೆ ಬಿಡದಿರು ಎನ್ನ ಕರವ ೨

ತ್ರಿಪುಟತಾಳ
ಆನಂದ ಕೊಡುವುದು ನಿನ್ನಂದ ಮಾತ್ರದಿಆನಂದ ಕೊಡುವುದು ನಾನಂದ ಮಾತ್ರದಿಆನಂದವೆಂಬ ಸಥೆಯು ಆನಾಡಲಿಲ್ಲವೆಂದುಆನಂದಮೂರುತಿ ಹರಿ ಆಡಿಸಿದನೆಂತೆಂದುಆನಂದನಾಗಿ ಶ್ರೀಮದಾನಂದ ತೀರ್ಥರಆನಂದ ಉಕ್ತಿಯ ಆನಂದದಲ್ಲಿದ್ದರೆಆನಂದ ಕೊಡುವುದು ಆನಂದಮೂರ್ತಿಯಆನಂದವೆಂಬೋದು ನಿನ್ನ ನೋಳ್ಪುವುದೆಆನಂದವೆಂಬೋದಿನ್ನೊಂದು ಅರಿಯೆನುಆನಂದಗುಣಪೂರ್ಣ ಗೋಪಾಲವಿಠಲಈ ನಿಮಿಷವೆ ಸಾಕು ನಿನ್ನ ತಿಳಿವವ ಧನ್ಯ ೩

ಅಟ್ಟತಾಳ
ದೋಷದೂರನೆ ನಿನ್ನ ಸ್ಮರಿಸುವರಿಗೆ ದೋಷದರಾಸಿ ಇನ್ನಾಶ್ರೈಸಲಿ ಬೇಕೆನಾಶ ಮಾಡೆನ್ನಘರಾಸಿಗಳೆಲ್ಲನುಮೋಸಗೊಳಿಸಬೇಡ ದಾಸರ ಪ್ರಿಯನೆಹೇಸಿಕ್ಹುಟ್ಟಿಸು ದುರಾಸೆಗೆ ಮನವನುಆಸೆ ತೋರಿಸು ನಿನ್ನ ಪಾದಕಮಲಾನಂದಈಷನ್ಮಾತ್ರವನ್ನು ದಾಸತ್ವ ಎನ್ನಲ್ಲಿವಾಸವಾಗೆ ಇತ್ತೆ ಪೋಷಿಸು ಶ್ರೀ ಹರಿಈಶ ನೀನೆಂಬೋದು ದಾಸ ನಾನೆಂಬಂಥಈ ಸಮಯದಿ ಅಲ್ಲ ಅನಾದಿಕಾಲದಲಿಂದಶ್ರೀಶ ಬಾ ಎನ್ನಯ್ಯ ಗೋಪಾಲವಿಠಲಮಾನಿಸದೆ ಎನ್ನ ಮನದೊಳಗೆ ನಿಲ್ಲು ೪

ಆದಿತಾಳ
ಒಂದು ದಿನದ ಗೆಳೆಯ ತಾನುಹೊಂದಿದವನು ಅಂದು ಅವಗೆ ದುಃಖಚೆಂದದಿ ತರಿವನು ಕುಂದು ನಿಂದೆ ಆದರೆನೊಂದುಕೊಂಬೋನು ಮನದಿ ಒಂದಾಗುವರು ತಮ್ಮನಂದಾಗಲಿಇಂದಿರೇಶನೆ ಎನಗೆ ನಿನಗೆ ಗೆಳೆಯತನಇಂದಾದುದಲ್ಲ ಅನಾದಿಕಾಲದಲಿಂದಹೊಂದಿಕೊಂಡಿದ್ದ ಮೇಲೆ ಬಂದು ಎನಗೆ ದೋಷನಿಂದಿರದಂತೆ ಮಾಡಬೇಕಲ್ಲದೆ ನೀ ಎನ್ನಬಂಧನದೊಳಗ್ಹಾಕಿ ಬರಿದೆ ದಣಿಸುವರೆತಂದೆಯ ಮೇಲೆ ಸ್ನೇಹ ಚೆಂದದುಂಟಾದದ್ದೆಮ್ಮತಂದೆಯತಂದೆ ಕೇಳೊ ಬಂದೆ ನಾನದರೊಳುಹೊಂದಿದವ ನಿಮ್ಮ ಕಂದನ ಮತವನುಮಂದಮತಿಯ ಮಾತು ಮಾರಮಣ ಮನ್ನಿಸುವೃಂದಾರಕಪಾಲ ಗೋಪಾಲವಿಠಲಬಂಧು ಎನಗೆ ಭವದಿಂದ ದಾಟಿಸು ಜೀಯ೫

ಜತೆ
ಭಕುತಿಯನೀಯೆನಗೆ ಯುಕುತಿಯಿಂದಲಿ ನಿನ್ನಉಕುತಿಲಿ ಪಾಡುವಂತೆ ಮಾಡು ಗೋಪಾಲವಿಠಲ

ಶ್ರೀಹರಿಗಿಂತ ಅವನ ಭಕ್ತರೇ
೩೮
ಸುಳಾದಿ
ಧ್ರುವತಾಳ
ಭಕುತರ ಸೃಷ್ಟಿಯೇವೆ ನಿನ್ನ ಸೃಷ್ಟಿಯೊ ದೇವಭಕುತರ ಸ್ಥಿತಿಯೇವೆ ನಿನಗೆ ಸ್ಥಿತಿಯು ಸ್ವಾಮಿಭಕುತರ ಲಯವೆ ನೋಡು ನಿನಗೆ ಲಯವು ಇನ್ನುಭಕುತರ ಪ್ರೇರಣವೆ ನಿನಗೆ ಪ್ರೇರಣೆ ಕಾಣೊಭಕುತರ ಜ್ಞಾನವೆ ನಿನಗೆ ಜ್ಞಾನವು ನೋಡುಭಕುತರ ಅಜ್ಞಾನವೆ ನಿನಗೆ ಸ್ವಾಧೀನವದುಭಕುತರ ಬಂಧದಿಂದ ಬಂಧನೆಂದೆನಿಸಿಕೊಂಬೆಭಕುತರ ಮೋಚನವೆ ನಿನಗೆ ಮುಖ್ಯ ಮೋಚನಭಕುತರಿಗೆ ಒಂದಾದರು ನಿನ್ನದು ಬಾರದುಭಕುತರದು ನಿನ್ನಲ್ಲಿ ಒಂದು ಇಲ್ಲದವಿಲ್ಲಭಕುತರಿಗೆ ನಿನ್ನಾಧೀನ ನೀ ಭಕುತರಾಧೀನಭಕುತರಿಗೆ ನೀ ಬೇಕು ನಿನಗೆ ಭಕುತರು ಬೇಕುಭಕುತರೆ ನಿನಗಿನ್ನು ಬ್ಯಾಡದಿದ್ದರೆ ಸ್ವಾಮಿವ್ಯಕುತಿ ಮಾಡುವರಾರು ಈ ನಿನ್ನ ಗುಣಗಳಸಕಲವುಳ್ಳವ ಶೌರ್ಯವಂತ ನೀನು ಆದರುರಿಕತನಿಂದಲೆ ಅದು ಪ್ರಕಟವಾಗಲಿಬೇಕುಭಕುತವತ್ಸಲ ನಮ್ಮ ಗೋಪಾಲವಿಠಲಭಕುತರೆ ಬಲ್ಲಿದರೊ ನಿನ್ನ ಬಲದಿಂದ ಸ್ವಾಮಿ ೧

ಮಠ್ಯತಾಳ
ಜಗವು ನಿನ್ನ ಒಳಗೆ ನೀನು ಭಕುತರೊಳಗೆಜಗವ ಪೊತ್ತಿಹೆ ನೀನು ನಿನ್ನ ಪೊತ್ತಿಹರವರುಜಗಕೆ ಮೋಹಕ ನೀನು ನಿನಗೆ ಮೋಹಿಸೊರವರುಜಗದಿ ವ್ಯಾಪ್ತ ನೀನು ನಿನ್ನ ವ್ಯಾಪ್ತರವರುಜಗದಿ ಭಿನ್ನನು ನೀನು ನಿನಗೆ ಭಿನ್ನರವರುಚಿಗಿದರೆ ಚಿಗಿವರು ನಗಿದರೆ ನಗುವರುಹಗೆಯು ಸ್ನೇಹವೆಲ್ಲ ನಿನ್ನಾಧೀನವೆಂದುಬಿಗಿದುಕೊಂಡಿಹರು ಬಗೆಯದೆ ಅನ್ಯರನಖಗವಾಹನ ಚೆಲ್ವ ಗೋಪಾಲವಿಠಲಅಗಲದೆ ನಿನ್ನನ್ನು ಅರ್ಚಿಸುವರು ಬಿಡದೆ ೨

ರೂಪಕತಾಳ
ಜಗವನೆಲ್ಲ ಸುತ್ತಿಸುವನೆ ನಿನ್ನ ಅವರುಮಗನ ಮಾಡಿ ಪಿಡಿದು ಮತ್ತೆ ಆಡಿಸುವರುಜಗವನೆಲ್ಲವ ಇಚ್ಛೆಯಲಿ ಕಟ್ಟುವನೆ ನಿನ್ನಬಿಗಿದು ಕಟ್ಟುವರು ಕಾಲನೆ ಹಗ್ಗದಿಂದಲಿಸೊಗಸಾದ ವೈಕುಂಠವಾಸವಾಗಿದ್ದನ್ನಜಗದಲ್ಲಿ ನಿಂತು ಬಾ ಎಂದಿಲ್ಲಿ ಕರೆವರುಯುಗಮಹಾಪ್ರಳಯಕ್ಕೆ ಚಲಿಸದವನ ನಿನ್ನಮಿಗೆ ಕೂಗಿ ಕರೆದು ಗಾಬರಿಗೊಳಿಸಿದರು ನಿನ್ನಜಗಜನ್ಮಾದಿಕರ್ತ ಗೋಪಾಲವಿಠಲಬಿಗುವು ಬೇರೆ ನಿನ್ನ ಭಕುತರ ಭಾಗ್ಯವು ೩

ಝಂಪೆತಾಳ
ನಿತ್ಯ ತೃಪ್ತನೆ ನಿನಗೆ ಅನ್ನವನೆ ಉಣಿಸಿದರುಸತ್ಯ ವಚನವು ಬಿಡಿಸಿ ಪಿಡಿಸಿದರು ಚಕ್ರವನುಭೃತ್ಯರಜಭವ ಮಹಾಮಹಿಮನೆ ಕಯ್ಯಎತ್ತಿಹಾಕಿಸಿದರೆಲ್ಲರು ಉಂಡ ಪರ್ಣಗಳರಕ್ತ ಶುಕ್ಲ ರಹಿತ ಕಾಯದವನ ನಿನ್ನಮತ್ತೆ ಬಾಣದಿ ಎಚದು ತೋರಿದರು ನಿನ್ನವರುಸ್ತುತ್ಯ ನೀ ಸರ್ವೋತ್ತಮ ಅಹುದೊ ಅಲ್ಲವೊ ಎಂದುಎತ್ತಿ ಕಾಲಲಿ ಎದೆಗೆ ಒದ್ದರು ನಿನ್ನವರುಭಕ್ತವತ್ಸಲತ್ವ ತೋರುವುದಕೆ ನಿನ್ನ ಕಚ್ಚಿಸುತ್ತಿದನು ಕಪಟದಲ್ಲಿ ನಿನ್ನವನುಮತ್ತೆ ಕಟ್ಟಿದ ಮೀಸೆಯನು ಪಿಡಿದು ಸತ್ಯವ್ರತನಿತ್ಯ ಬಾಗಿಲ ಕಾಯಿಸಿದನು ಆ ಬಲಿರಾಯಕಿತ್ತಿಕೊಂಡೋಡಿದನು ಕಿರೀಟ ನಿನ್ನವನುಮತ್ತೆ ಮಳೆಗರೆದು ಪರ್ವತ ಹೊರಿಸಿದರವರುಸತ್ಯಸಂಕಲ್ಪ ಗೋಪಾಲವಿಠಲರೇಯಭಕ್ತರೊಳು ನಿನ್ನ ಆಟವ ತಿಳಿವ ಧನ್ಯ ೪

ತ್ರಿಪುಟತಾಳ
ನೋಡಿ ನೋಡಿಸಬೇಕು ಓಡಿ ಓಡಿಸಬೇಕುನೀಡಿ ನೀಡಿಸಬೇಕು ಆಡಿ ಆಡಿಸಬೇಕುಕೂಡಿ ಕೂಡಿಸಬೇಕು ಮಾಡಿ ಮಾಡಿಸಬೇಕುಕೇಡು ಲಾಭಂಗಳಿಗೆ ಭಿನ್ನವಾಗಿ ನೀನುಮಾಡುತ್ತ ಈಪರಿ ಸಿಲ್ಕಿ ನಿನ್ನವರೊಳುಕೂಡುತ ಮಲಗುತ ಏಳುತ ನಿಂತು ನೀನೋಡುವರಿಗೆ ಬಿಂಬಕ್ರಿಯದ ಮೇಲಿನ್ನುಪಾಡಾಗಿ ತಿಳಿದರೆ ಸ್ವಾಮಿ ಭೃತ್ಯ ಕಾರ್ಯಜೋಡೆರಡೊಂದಲ್ಲಿ ಮಾಡುವನು ಒಬ್ಬಮಾಡಿಸುವ ತತ್ತದ್ಯೋಗ್ಯತೆ ಅನುಸಾರಪ್ರೌಢ ನಿನಗೆ ಬಿಂದು ಫಲ ಅಪೇಕ್ಷೆಯು ಇಲ್ಲಮಾಡುವಿ ಈಪರಿ ಭಕ್ತರಿಗೆಮೂಢಶಂಕೆಯು ಸಲ್ಲ ವೈಷಮ್ಯ ನೈರ್ಗುಣ್ಯಕೂಡದು ನಿನ್ನಲ್ಲಿ ಎಂದೆಂದಿಗುಪಾಡಿದವರ ಪ್ರಾಣ ಗೋಪಾಲವಿಠಲಈಡ್ಯಾರೊ ನಿನಗೆ ನೀ ಮಾಡಿದ್ದೆ ಮಹಾಧರ್ಮ ೫

ಅಟ್ಟತಾಳ
ಭಕುತರು ಮಾಡಿದ್ದು ನೀ ಮಾಡಿದುದಯ್ಯಭಕುತರು ನೋಡಿದ್ದೆ ನೀನು ನೋಡಿದುದಯ್ಯಭಕುತರು ನೀಡಿದ್ದೆ ನೀನು ನೀಡಿದುದಯ್ಯಭಕುತರು ಕೊಂಡದ್ದೆ ನೀನು ಕೊಂಡುದುದಯ್ಯಭಕುತರು ಆಡಿದ್ದೆ ನೀನು ಆಡಿದುದಯ್ಯಭಕುತರು ಬೇಡೋದು ನೀನು ಬೇಡುವುದಯ್ಯಭಕುತರು ಉಂಡರೆ ನೀನು ಉಂಡವನಯ್ಯಭಕುತರು ಉಟ್ಟರೆ ನೀನು ಉಟ್ಟವನಯ್ಯಭಕುತರು ದಣಿದರೆ ನೀ ದಣಿವನಯ್ಯಭಕುತರ ಹಿತವೆಲ್ಲ ನಿನ್ನ ಹಿತವು ಸ್ವಾಮಿಭಕುತರಲ್ಲಿ ನಿನ್ನ ರತಿ ಅನುಗಾಲವುಭಕುತ ಬೇಸತ್ತರು ನೀ ಬೇಸರುವನು ಅಲ್ಲಭಕುತರನು ಮತ್ತೆ ನೀನು ಹುಡುಕುತಿಪ್ಪೆಭಕುತರು ನಿನ್ನ ಸುತ್ತಲೆ ಸಂಚರಿಸೋರು ಮುಕುತಿದಾಯಕ ಸಿರಿ ಗೋಪಾಲವಿಠಲಭಕುತರಲ್ಲೆವೆ ಆಸಕುತಿಯು ನಿನಗೆ ೬

ಆದಿತಾಳ
ಕಂಡರು ಕಾಣರು ಉಂಡದ್ದೆ ಉಣ್ಣರುಕೊಂಡದ್ದೆ ಕೊಳ್ಳರು ಪಂಡಿತರವರುಮಂಡೆಯ ತಗ್ಗಿಸಿ ನಿನ್ನ ಕೆಳಗೆ ಬಿದ್ದುಮಂಡಲದೊಳಗೆಲ್ಲ ಸಂಚರಿಸುವರುಪುಂಡರೀಕಾಕ್ಷ ನೀ ಅವರೆಲ್ಲಿ ಪೋದಲ್ಲಿಕಂಡ್ಹಾಗೆ ತಿರುಗಿದಂತೆ ನೀನು ತಿರುಗುವಿಖಂಡಾಖಂಡಮೂರ್ತಿ ವ್ಯಾಪ್ತ ನಿರ್ಲಿಪ್ತ ಉ-ದ್ದಂಡ ಉತ್ತಮ ಪುರುಷೋತ್ತಮ ಸರ್ವೋತ್ಮನೆಪಾಂಡವಪಾಲಕ ಗೋಪಾಲವಿಠಲಕಂಡ ಮಾತಿಗೆ ಇದಕನುಮಾನವ್ಯಾತಕೆ ೭

ಜತೆ
ಭಕುತರ ಭಾಗ್ಯವು ಜಗವೆಲ್ಲ ತುಂಬಿದೆರಿಕತನೊಬ್ಬನೆ ಕಾಣೊ ಗೋಪಾಲವಿಠಲ

ಈ ಸುಳಾದಿಯಲ್ಲಿ ದಯೆ
೧೭೦
ಸುಳಾದಿ
ಧ್ರುವತಾಳ
ಭಾವಾಷ್ಟ ಪುಷ್ಪಂಗಳು ದೇವಗೆ ಅರ್ಪಿಸುವ ಭಾವನೆಯನು ಕೇಳಿ ಭಕ್ತಜನರುಜೀವರಿಂದ ಈ ಧರ್ಮ ಎಂದಿಗೆ ಆದದ್ದಲ್ಲದೇವನಲ್ಲೇವೆ ಇಂಥಾ ಗುಣಗಳುಂಟುಭಾವಾಷ್ಟಪುಷ್ಪಗುಣವಾ ದೇವನಲ್ಲಿಪ್ಪುವೆಂದುಜೀವ ತಿಳಿದರೆ ಉದ್ಧಾರ ಉಂಟು ಜೀವರೆಂಬುವರು ಕರ್ಮಬದ್ಧರು ಇನ್ನುದೇವನು ಕರ್ಮತ್ರಿಗುಣರಹಿತಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿಯಾವತ್ತರಾದಿ ವ್ಯಾಪ್ತ ಎಣೆಯಿಲ್ಲದ ಮೂರ್ತಿಪಾವನಾಂಗ ಪಾಪನಾಶ ನಿತ್ಯತೃಪ್ತಜೀವಜಡದಿ ಎಂದಿಗೆ ಅಗಲದೆ ಇಪ್ಪೈಇ ವಿಧ ಶಕುತಿಯು ಈಶ ಗೋಪಾಲವಿಠಲದೇವರಿಗುಂಟೆಂದು ಅರಿವ ಜೀವನೆ ಬಲು ಧನ್ಯ ೧

ಮಠ್ಯತಾಳ
ಬೊಮ್ಮಾಂಡವ ಸೃಜಿಸಿ ಬೊಮ್ಮನೊಳಗೆ ನಿಂತುಸುಮ್ಮನಸರನೆಲ್ಲ ನಿರ್ಮಿಸಿ ಪಾಲಿಸಿಬೊಮ್ಮಾಂಡ ಆಳಿಸಿ ಬೊಮ್ಮನ ಕೊಲ್ಲುವ ಬೊಮ್ಹತಿ ದೋಷವು ಎಮ್ಮಯ್ಯಗಿಲ್ಲಹಮ್ಮಿನ ಹಂಸ ಡಿಬಿಕರನಿರ್ಮಲದಿ ಕೊಂದ ನಿರ್ಮತ್ಸರದಿಂದಧರ್ಮಾದಿ ಪುಷ್ಪ ನಮ್ಮಯ್ಯಗೆಂದುಘಮ್ಮನೆ ಅರ್ಪಿಸು ಘನ ಭಕುತಿಯಲಿರಮ್ಮೆರಮಣನೆ ಗೋಪಾಲವಿಠಲ ಪರ-ಬೊಮ್ಮ ಒಲಿವ ಧರ್ಮ ಅರಿದವರಿಗೆ

ರೂಪಕತಾಳ
ಎರಡೆಂಟುಸಾಸಿರ ಅರಸಿಯರ ಕೂಡಪರಿಪರಿ ಕ್ರೀಡೆಯ ಮಾಡಿನೋಡಿ ಚೆಲ್ವತರಳತನದಿ ಹನ್ನೆರಡು ಸಾಸಿರ ಮಂದಿತರಳೇರ ಪಡೆದು ತಾ ಪರೀಕ್ಷಿತನಿಗೆ ಇನ್ನುಪರಿಣಾಮ ಮಾಡಿದ ವರಬ್ರಹ್ಮಚಾರಿ ಎಂದುಸರಿಹೋಗುವುದೆ ಇಂಥ ಚರಿಯ ಮನುಜರಿಂದ ಹರಿಗೆ ಇಂದ್ರಿಯನಿಗ್ರಹ ಸ್ಥಿರ ಪುಷ್ಪವೆಂತೆಂದುಅರಿದು ಅರ್ಪಿಸುವ ಜೀವರಿಗೆ ಲೇಪಿಸದುಪರಮ ದಯಾಳು ಗೋಪಾಲವಿಠಲ ತನ್ನಾರಿದಂತೆ ಫಲವೀವ ಶರಣ ಜನಕೆ ೩

ಝಂಪೆತಾಳ
ಭೂತದಯಾಪುಷ್ಪ ಭೂತೇಶಗಲ್ಲದೆಭೂತಾಧಾರದಿ ಇಪ್ಪ ಭೂತರಿಗೆ ತರವೆನೀತಿಲಿ ತ್ರಿವಿಧ ಜೀವರಿಗೆ ತಾ ತಪ್ಪದೆಪ್ರೀತಿಲಿ ಉಣಿಸಿ ಅಜಾತನಾಗಿಪ್ಪಮಾತು ಮಾತಿಗೆ ಅನಂತ ಕರ್ಮಂಗಳಜ್ಞಾತವಿಲ್ಲದೆ ಮಾಳ್ಪ ಜೀವರಿಗಿದು ಸಲ್ಲ ಭೂತರುಗಳ ಗತಿ ತಾ ತಿಳಿದು ತ್ರಿವಿಧರಿಗೆನೋತ ಫಲವಿತ್ತು ಸಮನಾಗಿ ಇಪ್ಪವನೆಂದುಈ ತೆರದಿ ತಿಳಿದು ನೀ ಭೂತದಯಾಪುಷ್ಪಪ್ರೀತಿಯಲಿ ಅರ್ಪಿಸನ್ಯಥಾ ಚಿಂತಿಸದೆದಾತ ನಮ್ಮ ಸ್ವಾಮಿ ಗೋಪಾಲವಿಠಲಸೋತೆನೆಂದ ಬಳಿಕ ಸಲಹದೆ ಬಿಡನು ೪

ತ್ರಿಪುಟತಾಳ
ಸರ್ವದಾ ಕ್ಷಮೆಪುಷ್ಪ ಸರ್ವೇಶಗಲ್ಲದೆಗರ್ವತತ್ವದಿ ಬದ್ಧ ಜೀವರಿಗೆ ಸಲ್ಲಶರ್ವನಲ್ಯಾದರು ಸಹಿಸಿಲ್ಲ ಈ ಕರ್ಮಪೂರ್ವದ ಆಖ್ಯಾನ ಇದಕೆ ಉಂಟುಸರ್ವ ಉತ್ತಮ ದೇವನಾರೆಂದು ಭೃಗುಮುನಿಸರ್ವಪೂರ್ಣ ಹರಿಯ ಎದೆಯ ಒದ್ದಪರ್ವತದೋಪಾದಿ ಇದ್ದ ಕಾರಣವಾಗಿಸರ್ವೋತ್ತಮನೆಂದು ತುತಿಸಿ ನಲಿದನಿರ್ವ್ಯಾಜದಿಂದಲಿ ನಿತ್ಯ ಕೋಪದಿ ಖೇದಗರ್ವತತ್ವದಿ ಬದ್ಧಜನರಿಗೆ ಕೂಡದುಸರ್ವಾನಂದ ಪೂರ್ಣ ಗೋಪಾಲವಿಠಲಸರ್ವೇಶಗೀಪುಷ್ಪ ಅರಿವ ಜೀವನೆ ಧನ್ಯ ೫

ಅಟ್ಟತಾಳ
ದಮಜ್ಞಾನ ಧ್ಯಾನವು ಸಮೀಚೀನಪುಷ್ಪವುರಮೇಶಗಲ್ಲದೆ ಶ್ರಮಿಸೋ ಜೀವರಿಗಿಲ್ಲವಮನಕಂಡರೆ ಅಂಜೋ ಭ್ರಮಣ ಜೀವರಿಗೆದಮ ಎಂಬ ಪುಷ್ಪವು ಎಂತು ದೊರೆವುದಯ್ಯಮಮತೆ ಜಡದಲ್ಲಿ ನಿಮಿಷ ಬಿಡದೆ ಇದ್ದುಹಮ್ಮತಿ ಜೀವನಿಗೆ ಜ್ಞಾನಪುಷ್ಪವು ಎಂತೊಕ್ಷಮಿಸಿ ನೋಡಲು ಧಾನ್ಯ ಪುಷ್ಪವೆಂಬೋದು ಅಂತುನಿಮಿತ್ತ ಮಾತ್ರವು ಇದು ನೀಚ ಜೀವರಿಗಿಲ್ಲಸಮ್ಮತಿಸಿ ನೋಡಿವು ಸರ್ವೋತ್ತಮನಲ್ಲೆವೆನಿಮಿಷ ಬಿಡದೆ ಇಪ್ಪವೆಂದು ಚಿಂತನೆ ಮಾಡಿದಮ ಜ್ಞಾನ ಧ್ಯಾನವುಳ್ಳವನಾಗುವನಾಜೀವಸುಮನಸರೊಡೆಯ ಗೋಪಾಲವಿಠಲನುನಮಿಸಿ ನೆಚ್ಚಿದಂಗೆ ಅರಿಪುವನಿದನು6

ಆದಿತಾಳ
ಸತ್ಯವೆಂಬುವ ಪುಷ್ಪ ಸತ್ವೇಶಗೆ ಇದುನಿತ್ಯ ಅನೃತ ನುಡಿವ ಜೀವರಿಗೆ ಸಲ್ಲಕತ್ತಲೆ ಒಳಗಿದ್ದ ಮತ್ತೆ ಉದಯವೆಂಬೊಮಿಥ್ಯ ವಚನವಾಡಿ ಸುತ್ತುವ ಸಂಸಾರಮತ್ತೆ ಇವಗೀಪುಷ್ಪ ಎಂತು ದೊರೆಯುವುದಯ್ಯಸತ್ಯಸಂಕಲ್ಪ ನಮ್ಮ ಗೋಪಾಲವಿಠಲಗೆಮತ್ತೆ ನೀ ಉಂಟೆಂದು ಮನಮುಟ್ಟಿ ತಿಳಿಯೊ ೭

ಜತೆ
ಭೇದವಿಲ್ಲದೀ ಪುಷ್ಪ ಇಪ್ಪವು ಹರಿಯಲ್ಲಿಸಾಧಿಸರ್ಚಿಸು ಗೋಪಾಲವಿಠಲ ಒಲಿವ