Loading Events

« All Events

  • This event has passed.

ಆರ್.ಎಸ್‌. ನಾಯ್ಡು

August 27, 2023

೨೭..೧೯೦೬ .೧೦.೧೯೮೫ ಅತಿಸರಳ ಜೀವಿ, ಮಾರ್ಕ್ಸ್‌ವಾದಿ, ರೇಖಾಚಿತ್ರ ಮತ್ತು ಶಿಲ್ಪ ಕೃತಿ ರಚನೆಯಲ್ಲಿ ಅದ್ವಿತೀಯರಾಗಿದ್ದ ಆರ್. ಸೀತಾಪತಿ ನಾಯ್ಡುರವರು ಹುಟ್ಟಿದ್ದು ಮೈಸೂರು. ತಂದೆ ಪಿ.ವಿ. ರಂಗಸ್ವಾಮಿ ನಾಯ್ಡು, ತಾಯಿ ರಂಗನಾಯಕಮ್ಮ. ವಿದ್ಯಾಭ್ಯಾಸ ಮೈಸೂರು, ಧಾರವಾಡ ಮತ್ತು ತಿರುಚಿನಾಪಳ್ಳಿ, ಪೂನಾದ ಫರ್ಗುಸನ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಯೂತ್‌ ಕಾಂಗ್ರೆಸ್‌ ಸಂಸ್ಥೆಯನ್ನು ಕಟ್ಟಿ ಚಳುವಳಿಯಲ್ಲಿ ಭಾಗಿಯಾಗಿ ಗಾಂಧೀಜಿಯವರು ಜೈಲಿನಲ್ಲಿದ್ದಾಗ, ಯರವಾಡ ಜೈಲಿನಲ್ಲಿ ಇವರಿಗೂ ಶಿಕ್ಷೆ. ಮಾರ್ಕ್ವ್‌ವಾದವನ್ನು ಸ್ವೀಕರಿಸಿ ಜೈಲಿನಲ್ಲಿದ್ದಾಗಲೇ ಜೇಡಿಮಣ್ಣು ತರಿಸಿ ಆಳೆತ್ತರದ ಲೆನಿನ್‌ ಮೂರ್ತಿ ನಿರ್ಮಾಣ. ಮೀನೂಮಸಾನಿ, ಅಶೋಕ ಮೆಹ್ತಾ, ಮೆಹರಾಲಿಯವರೊಡಗೂಡಿ ಕಟ್ಟಿದ ಸಮಾಜವಾದಿಪಕ್ಷ, ಅಖಿಲ ಭಾರತ ಆರ್ಥಿಕ ಪರಿಸ್ಥಿತಿ ಚಿತ್ರಣ ಕೊಡಲು ಪ್ರಾರಂಭಿಸಿದ ವಿಕ್ಟೋರಿಯಲ್‌ ಎಕನಾಮಿಕ್ಸ್ ಪತ್ರಿಕೆ. ಹಲವಾರು ಪತ್ರಿಕೆಗಳಿಗೆ ಬರೆದ ವ್ಯಂಗ್ಯ ಚಿತ್ರಗಳು. ಮ್ಯಾಂಚೆಸ್ಟರ್ ಗಾರ್ಡಿಯನ್‌ ಪತ್ರಿಕೆಯಲ್ಲಿ ಮರುಮುದ್ರಣ. ಜ್ಯೋತಿಬಸು, ರಜನಿಪಟೇಲ್‌, ಕುಮಾರಮಂಗಳಂ ರೊಡನೆ ಲಂಡನ್ನಿನಲ್ಲಿ ಕೆಲಕಾಲ. ಮುಂಬಯಿಯಲ್ಲಿ ಕೆಲವರ್ಷದ ಜೀವನ. ಬೆಂಗಳೂರಿಗೆ ಬಂದು ಟಿ. ಎಸ್ಸಾರ್‌ ಸ್ನೇಹದಿಂದ ಪ್ರಜಾವಾಣಿ, ಹೆರಾಲ್ಡ್‌ ಪತ್ರಿಕೆಗೆ ಬರೆದ ವ್ಯಂಗ್ಯ ಚಿತ್ರಗಳು, ಮತ್ತು ರೇಖಾ ಚಿತ್ರಗಳು. ರೇಖಾ ಚಿತ್ರಗಳಲ್ಲಿನ ವಿನೂತನ ಶೈಲಿ, ನಿರೂಪಣೆ, ಗತಿ, ವಿನ್ಯಾಸದ ಅಳವಡಿಕೆ. ಸ್ನೇಹಿತರಿಗೆ ಬರೆದ ಕಾಗದಗಳಲ್ಲೂ ಬರೆದ ರೇಖಾ ಚಿತ್ರಗಳು. ಉಬ್ಬು ಚಿತ್ರ, ಭಾವ ಚಿತ್ರ, ಶಿಲ್ಪ ಚಿತ್ರಗಳಲ್ಲಿ ರಚನೆಯಲ್ಲಿ ಸಾಧಿಸಿದ ಅಗಾಧ ಪ್ರತಿಭೆ. ಪ್ಲಾಸ್ಟರ್ ನಲ್ಲಿ ಲೆನಿನ್‌, ಸ್ಟಾಲಿನ್‌, ಶಿವ, ಬುದ್ಧ, ಕ್ರಿಸ್ತ, ಮೇರಿ, ಷಾ, ಕೈಲಾಸಂ, ಕುವೆಂಪು, ಬೇಂದ್ರೆ, ಠಾಕೂರ್, ಬಿ.ಎಂ. ಶ್ರೀ ಯವರುಗಳ ಕೃತಿ ರಚನೆ. ಮೈಸೂರಿನ ರಾಜೇಂದ್ರನಗರದಲ್ಲಿ ಕರ್ನಾಟಕ ಗೃಹ ಮಂಡಲಿಯು ಕಟ್ಟಿಸಿದ ಕಾರ್ಮಿಕ ಕಾಲನಿಯಲ್ಲಿ ಕೊನೆಗಾಲದ ಬದುಕು.   ಇದೇ ದಿನ ಹುಟ್ಟಿದ ಕಲಾವಿದರು ವೈ. ನಾಗರಾಜು – ೧೯೦೫ ಎಲ್‌. ಪಿ. ಅಂಚನ್‌ – ೧೯೨೭ ಎಸ್‌. ಬಿ. ಶಿವಣ್ಣ – ೧೯೨೮ ಬಿ.ಎಸ್‌. ಶ್ರೀಪಾದರಾಜ – ೧೯೪೪ ನಮಿತಾ ಕುಲಕರ್ಣಿ – ೧೯೮೦

* * *

Details

Date:
August 27, 2023
Event Category: