Loading Events

« All Events

  • This event has passed.

ಎಂ. ರಾಘವೇಂದ್ರರಾವ್‌

August 7, 2023

೦೭.೦.೧೯೧೪ ೩೦.೧೧.೧೯೯೯ ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ತಂದೆ ಮೈಸೂರು ನೀಲಕಂಠ ಕೇಶವರಾಯರು, ತಾಯಿ ವೆಂಕಟಲಕ್ಷ್ಮಮ್ಮ. ಮೈಸೂರಿನ ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಗುರುಕುಲ ಪದ್ಧತಿಯಲ್ಲಿ ಕಲಿತ ಗಮಕಾಭ್ಯಾಸ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪರೀಕ್ಷೆಗಳಿಗೆ ನೀಡಿದ ಮಾರ್ಗದರ್ಶನ. ಪಠ್ಯಪುಸ್ತಕ ರಚನೆ, ಪರೀಕ್ಷಕರ ನೇಮಕ, ಮೌಲ್ಯಮಾಪನ, ಮುಂತಾದವುಗಳ ಜವಾಬ್ದಾರಿ. ಬೆಂಗಳೂರು ಆಕಾಶವಾಣಿಯಿಂದ ನೂರಾರು ಕಾರ್ಯಕ್ರಮಕಗಳ ಪ್ರಸಾರ. ಪಂಪ, ರನ್ನ, ಕುಮರವ್ಯಾಸ, ಲಕ್ಷ್ಮೀಶ, ರಾಘವಾಂಕ ಕವಿಗಳ ಕಾವ್ಯಗಳ ರಸಭರಿತ ವಾಚನ. ಗಮಕ ಕಲೆಗೆ ಸಂಬಂಧಿಸಿದ ಗಮಕಿ, ಕಾವ್ಯಗಾಯನ ಕಲಾಸಂಗ್ರಹ, ಗಮಕಪ್ರಚಾರ ಬೋಧನ, ಗಮಕ ಪ್ರವೇಶ ದಾಯಿನಿ. ಗಮಕಗೀತೆಗಳಲ್ಲದೆ ಸತ್ಯದೇವಚರಿತೆ, ವಾಸುದೇವವಿಜಯ, ವೆಂಕಟೇಶವಿಜಯ, ಶ್ರೀರಾಘವೇಂದ್ರ ಗುರು ಕೀರ್ತನ ಮಾಲಿಕೆ ಮುಂತಾದ ಗೇಯ ಕೃತಿಗಳ ರಚನೆ . ಶಿಕ್ಷಣ ಇಲಾಖೆಯಿಂದ ನಿವೃತ್ತಿಯ ನಂತರ ಗಮಕ ಕಲೆಯ ಪ್ರಚಾರಕ್ಕಾಗಿ ನಾಡಿನಾದ್ಯಂತ ಪ್ರವಾಸ. ಕರ್ನಾಟಕ ಗಮಕ ಕಲಾ ಪರಿಷತ್ತನ್ನು ಸ್ಥಾಪಿಸಿದವರಲ್ಲಿ ಪ್ರಮುಖರು. ಗಮಕ ಪ್ರಚಾರ ಗೋಷ್ಠಿ ಪ್ರಾರಂಭಿಸಿ ತಮ್ಮ ಮನೆಯಲ್ಲೇ ಪ್ರಾರಂಭಿಸಿದ ಕಾವ್ಯ ಗಾಯನ ಕಲಾ ಮಂದಿರ, ನೂರಾರು ಶಿಷ್ಯರಿಗೆ ಗಮಕ ಕಲೆಯ ಬಗ್ಗೆ ಶಿಕ್ಷಣ, ಮಾರ್ಗದರ್ಶನ. ಮಗ ಎಂ. ಆರ್. ಸತ್ಯನಾರಾಯಣರಿಂದ ಮುಂದುವರಿಕೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗಮಕಲಾ ಪರಿಷತ್ತಿನ ತೃತೀಯ ಸಮ್ಮೇಳನದ ಅಧ್ಯಕ್ಷತೆ – ಗಮಕ ರತ್ನಾಕರ ಬಿರುದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು: ಕೌಸಲ್ಯಾ ಕೃಷ್ಣಸ್ವಾಮಿ – ೧೯೩೦ ರಾಮಸ್ವಾಮಿ, ಕೆ.ಜಿ. – ೧೯೪೮

* * *

Details

Date:
August 7, 2023
Event Category: