Loading Events

« All Events

  • This event has passed.

ಪಂಡಿತ ಮಹಾದೇವ ಪ್ರಭಾಕರ ಪೂಜಾರ

August 6, 2023

೬-೮-೧೮೮೪ ೫-೧-೧೯೬೨ ಸುಪ್ರಸಿದ್ಧ ಸಾಹಿತಿ, ವಿದ್ವಾಂಸರಾದ ಪೂಜಾರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬಂಕಾಪುರದಲ್ಲಿ. ತೀರಾಬಡತನದ ಅರ್ಚಕ ಮನೆತನ. ಧಾರವಾಡದಲ್ಲಿ ನಾಲ್ಕು ವರ್ಷ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ. ಅಲಂಕಾರ, ವ್ಯಾಕರಣ, ವೇದಾಂತ ಶಾಸ್ತ್ರಗಳಲ್ಲಿ ಪಡೆದ ಪ್ರಾವೀಣ್ಯತೆ. ಧಾರವಾಡದ ಕನ್ನಡ ಟ್ರೈನಿಂಗ್ ಶಾಲೆಯಲ್ಲೂ ಉತ್ತೀರ್ಣರಾಗಿ ಉಪ್ಪಿನ ಬೆಟಗೇರಿಯಲ್ಲಿ ಅಧ್ಯಾಪಕ ವೃತ್ತಿ ಆರಂಭ. ಮೈಸೂರಿನಲ್ಲಿ ಪಂಡಿತ ಪರೀಕ್ಷೆಯಲ್ಲಿ ಪಡೆದ ಪ್ರಥಮ ಶ್ರೇಣಿ. ಧಾರವಾಡಕ್ಕೆ ವಾಪಸ್ಸು ಬಂದು ಶಿರಾಳ ಕೊಪ್ಪ, ಅಮ್ಮಿನ ಭಾವಿಗಳಲ್ಲಿ ಶಿಕ್ಷಕರಾಗಿ ಸೇವೆ. ೧೯೧೩ರಲ್ಲಿ ಧಾರವಾಡದ ಮಹಾವಿದ್ಯಾಲಯದಲ್ಲಿ ಕನ್ನಡ ಪಂಡಿತರಾಗಿ ನೇಮಕ. ನಂತರ ಕೆ.ಇ. ಬೋರ್ಡ್ ಆಫ್ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ‍್ಯ ನಿರ್ವಹಣೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ಪತ್ರಿಕೆ ಸಂಪಾದಕ ಮಂಡಲದಲ್ಲಿ, ಸಂಘದ ಕಾರ‍್ಯಕಾರಿ ಸಮಿತಿಯಲ್ಲಿ, ೧೯೪೭ರಲ್ಲಿ ಮುಂಬಯಿ ಸರಕಾರದ ಕನ್ನಡ ಪಠ್ಯಪುಸ್ತಕ ಸಮಿತಿಯಲ್ಲಿ, ‘ಪಂಪಭಾರತ ನಿಘಂಟು’ ರಚನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನೊಡನೆ, ಶಬ್ದಕೋಶದ ಸಹಾಯಕರಾಗಿ ‘ಸೊಗಸಿನ ಓದು’ ಎಂಬ ಕನ್ನಡ ವಾಚನ ಪಾಠಶಾಲೆಯ ಸಂಪಾದಕ ಮಂಡಲದಲ್ಲಿ-ಹೀಗೆ ಹಲವಾರು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆ. ಹಲವಾರು ಪತ್ರಿಕೆಗಳಿಗೆ ಪ್ರಾಚೀನ ಕವಿ-ಕಾವ್ಯ ವಿಚಾರವಾಗಿ ಬರೆದ ವಿದ್ವತ್‌ಪೂರ್ಣ ಲೇಖನಗಳು. ಪ್ರಕಟಿಸಿದ್ದು ಹಲವಾರು ಕೃತಿಗಳು. ಅಶೋಕ ಅಥವಾ ಪ್ರಿಯದರ್ಶಿ, ಜೈನಧರ್ಮ ಪರಿಭಾಷೆ ; ಜೈನ ಪದ್ಮಪುರಾಣಸಾರ ; ನುಡಿಗನ್ನಡ-ಭಾಗ ೧-೨ ; ಛಂದೋ ಮಂಜರಿ, ಪಂಚತಂತ್ರಸಾರ-ಭಾಗ ೧,೨ ; ಭಾರತೀಯ ವಿದುಷಿಯರು ; ಭೀಷ್ಮಾಚಾರ‍್ಯ ; ಮದುವೆ ; ಮಹಮದ್ ಪೈಗಂಬರ್ ; ಮೊಹರಂ ; ರಾಮಾಶ್ವಮೇದ ಸಾರಸಂಗ್ರಹ ; ಶಬ್ದಾನುಶಾಸನ ವೃತ್ತಿ ಸಹಿತ; ಶೇರ್‌ಶಹಾ; ಸತ್ಕಥಾಲಾಪ ; ಸತಿಯೂ ಸುನೀತಿಯೂ ; ಸದ್ಗುಣಾದರ್ಶ ; ಕೆಲವು ಕನ್ನಡ ವ್ಯಾಕರಣ ವಿಚಾರಗಳು, ವಾಚನ ಪಾಠಶಾಲೆ-ಕವಿತಾ ಪಾಠಮಾಲೆ ಮುಂತಾದ ಸರ್ವಧರ್ಮಗಳ ಗ್ರಂಥ ರಚನೆ. ಅಶೋಕ, ಭಾರತೀಯ ವಿದುಷಿಯರು, ಮಹಮದ್ ಪೈಗಂಬರ್, ಕೃತಿಗಳಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಬಹುಮಾನವನ್ನಿತ್ತು ಗೌರವಿಸಿದೆ.   ಇದೇ ಹುಟ್ಟಿದ ಸಾಹಿತಿಗಳು : ಗಂಗಾಧರ ನಂದಿ – ೧೯೪೪ ಎಸ್. ಸತ್ಯವತಿ – ೧೯೪೭ ಕೆ.ಆರ್. ಕೃಷ್ಣಯ್ಯ – ೧೯೪೮ ಡಾ. ಚಂದ್ರಕಲಾ ಸೋಂದ – ೧೯೫೪ ಪ್ರಭಾಕರ ಗಂಗೊಳ್ಳಿ – ೧೯೫೬

Details

Date:
August 6, 2023
Event Category: