Loading Events

« All Events

  • This event has passed.

ಎಸ್. ಶೇಷಗಿರಿರಾವ್

November 12, 2023

೧೨.೧೧.೧೯೪೪ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಶೇಷಗಿರಿರಾವ್ ಹುಟ್ಟಿದ್ದು ಬೆಂಗಳೂರು. ತಂದೆಯಿಂದಲೇ ಸಂಗೀತದ ಪ್ರಥಮ ಪಾಠ, ಹನ್ನೆರಡನೆ ವಯಸ್ಸಿನಿಂದ ಪಿಟೀಲು ಶಿಕ್ಷಣ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ, ೧೪ನೇ ವಯಸ್ಸಿಗೆ ಮಲ್ಲೇಶ್ವರದ ತ್ಯಾಗರಾಜ ಆರಾಧನಾ ಸಭೆಯಲ್ಲಿ ಮೊಟ್ಟಮೊದಲ ಪಿಟೀಲು ವಾದನ ಕಚೇರಿ ನಡೆಸಿ ಪಡೆದ ಖ್ಯಾತಿ. ಬೆಂಗಳೂರು, ಚೆನ್ನೈ, ಮುಂಬಯಿ, ಕೋಲ್ಕತ್ತಾ ಮತ್ತು ದೆಹಲಿ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಕರ್ನಾಟಕ ಸಂಗೀತದ ದಿಗ್ಗಜರುಗಳಾದ ಚೆಂಬೈ ವೈದ್ಯನಾಥ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಡಾ. ಎಂ. ಬಾಲಮುರಳಿಕೃಷ್ಣ, ಆರ್.ಕೆ. ಶ್ರೀಕಂಠನ್, ಚಿಂತಲಪಲ್ಲಿ ರಾಮಚಂದ್ರರಾವ್, ಕೆ.ವಿ. ನಾರಾಯಣಸ್ವಾಮಿ ಮುಂತಾದವರುಗಳಲ್ಲದೆ ಕೊಳಲುವಾದಕರಾದ ಟಿ.ಆರ್. ಮಹಾಲಿಂಗಂ, ಎನ್. ರಮಣಿ, ಎಸ್.ಪಿ. ನಟರಾಜನ್ ಮುಂತಾದದವರುಗಳಿಗೆ ನೀಡಿದ ಪಿಟೀಲುವಾದನ ಸಹಕಾರ. ಎಂ.ಎಸ್. ಸುಬ್ಬಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್, ಎಂ.ಎಲ್. ವಸಂತಕುಮಾರಿ ಮುಂತಾದವರುಗಳೊಡನೆ ಸಹವಾದಕರಾಗಿ ಪಡೆದ ಪ್ರಶಂಸೆ. ಆಕಾಶವಾಣಿಯ ಎ ಶ್ರೇಣಿ ಕಲಾವಿದರಾಗಿ ೨೮ ವರ್ಷಗಳ ಸೇವೆಯ ನಂತರ ನಿವೃತ್ತಿ, ಹಲವಾರು ಆಕಾಶವಾಣಿ ಸಂಗೀತ ಸಮ್ಮೇಳನ, ರಾಷ್ಟ್ರೀಯ ಕಾರ್ಯಕ್ರಮಗಳು, ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗಿ. ಮದರಾಸಿನ ಮ್ಯೂಸಿಕ್ ಅಕಾಡಮಿಯಿಂದ ಬೆಸ್ಟ್ ವಯಲನಿಸ್ಟ್, ನಾದಜ್ಯೋತಿ ತ್ಯಾಗರಾಜ ಭಜನ ಸಭಾದಿಂದ ಕಲಾಜ್ಯೋತಿ, ಕರ್ನಾಟಕ ಸಂಗೀತ ಕ್ಷೇತ್ರದ ಸೇವೆಗಾಗಿ ಅನನ್ಯ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಗಾಯನ ಸಮಾಜದಿಂದ ವರ್ಷದ ಕಲಾವಿದ, ಮೈಸೂರಿನ ತ್ಯಾಗರಾಜ ಸಂಗೀತ ಸಭಾದಿಂದ ಕಲಾದೀಪ್ತಿ, ಗಾನಕಲಾ ಪರಿಷತ್ತಿನಿಂದ ಗಾನಕಲಾ ಭೂಷಣ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದೆ ಆರತಿ – ೧೯೭೪

Details

Date:
November 12, 2023
Event Category: