
ಕಲ್ಪನಾ
July 18, 2024
೧೮.೭.೧೯೪೩ ೧೩.೫.೧೯೭೯ ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಲಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ರವರು ಹುಟ್ಟಿದ್ದು ಮಂಗಳೂರು. ತಂದೆ ಕೃಷ್ಣಮೂರ್ತಿ, ತಾಯಿ ಜಾನಕಕಮ್ಮ, ಕಾನ್ವೆಂಟ್ ವಿದ್ಯಾಭ್ಯಾಸ. ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯ. ಅಭಿನಯ ಕಲೆಯನ್ನು ಸ್ವತಃ ರೂಢಿಸಿಕೊಂಡ ಕಲಾವಿದೆ. ರಂಗಭೂಮಿಯಲ್ಲಿ ನಟಿಸಲು ಪ್ರೋತ್ಸಾಹಿಸಿದವರು ಚಿಕ್ಕಮ್ಮ ಸೀತಮ್ಮ. ಆರ್. ನಾಗರತ್ನಮ್ಮನವರ ಸ್ತ್ರೀ ನಾಟಕ ಮಂಡಲಿಯ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭ. ಕೃಷ್ಣಗಾರುಡಿಯ ರುಕ್ಮಿಣಿ, ಮೋಹಿನಿಯಾಗಿ; ಸಂಸಾರ ನೌಕಾದಲ್ಲಿ ಗಿರಿಜೆಯಾಗಿ ಅಭಿನಯಿಸಿ ಗಳಿಸದ ಖ್ಯಾತಿ. ಭರತನಾಟ್ಯ ಕಲಾವಿದೆ. ಕೃಷ್ಣಲೀಲೆಯಲ್ಲಿ ಕೃಷ್ಣನಿಗಾಗಿ ಪರಿತಪಿಸುವ ರಾಧೆಯಾಗಿ ನೃತ್ಯದ ಮೂಲಕ ‘ಕೃಷ್ಣಬಾರೋ’ ಹಾಡಿಗೆ ಮಾಡುತ್ತಿದ್ದ ಅಮೋಘ ನೃತ್ಯ. ನರಸಿಂಹರಾಜು ರವರ ಪರಿಚಯದಿಂದ ಸೇರಿದ್ದು ಚಿತ್ರರಂಗ. ಸಾಕುಮಗಳು ಮೊದಲ ಚಲನಚಿತ್ರದಲ್ಲಿ ಅಭಿನಯ. ಬೆಳ್ಳಿಮೋಡ, ನಾಂದಿ, ಬಂಗಾರದ ಹೂ ನಲ್ಲಿ ಕುಷ್ಠರೋಗಿಯಾಗಿ, ಗೆಜ್ಜೆಪೂಜೆಯ ವೇಶ್ಯೆಮಗಳು ಚಂದ್ರಳಾಗಿ, ಶರಪಂಜರದ ಬುದ್ಧಿಭ್ರಮಣೆಯ ಕಾವೇರಿಯಾಗಿ, ಉಯ್ಯಾಲೆಯ ರಾಧ, ಸರ್ವಮಂಗಳದ ಮಂಗಳೆ ಕಲ್ಪನಾ ಅಭಿನಯದ ಮೈಲುಗಲ್ಲುಗಳು. ಸುಮಾರು ೫೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೀಡಿದ ಅಮೋಘ ಅಭಿನಯ, ಉತ್ತಮ ವಾಗ್ಮಿ, ಸಾಹಿತ್ಯಪ್ರಿಯೆ, ಸಂಗೀತ-ಕಲೆ ಆಸಕ್ತಿ. ಉತ್ತಮ ಅಭಿನಯಕ್ಕಾಗಿ ಕರ್ನಾಟಕ ಸರಕಾರದಿಂದ ಮೂರು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ.ಪುನಃ ರಂಗಭೂಮಿಯ ಗುಡಿಗೇರಿ ಬಸವರಾಜರ ನಾಟಕಗಳಲ್ಲಿ ಪಾತ್ರಾಭಿನಯ. ಪಾತ್ರದೊಡನೆ ಲೀನವಾಗಿ ಅಭಿನಯಿಸುತ್ತಿದ್ದ ಕಲಾವಿದೆಯ ಅಂತ್ಯದಿಂದ ಚಿತ್ರರಂಗ, ರಂಗಭೂಮಿಗಾದ ಬಹುದೊಡ್ಡನಷ್ಟ. ಇದೇ ದಿನ ಹುಟ್ಟಿದ ಕಲಾವಿದೆ ಹೇಮಲತಾ ವಿ -೧೯೭೧
* * *