
ಮಂಜುಳಾ ಬಿ. ಜಾನೆ
July 14, 2024
೧೪.೭.೧೯೬೦ ಪ್ರಸಿದ್ಧ ಚಿತ್ರಕಲಾವಿದೆ, ಕಲಾ ಶಿಕ್ಷಕಿಯಾಗಿರುವ ಮಂಜುಳಾರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ, ತಂದೆ ರಂಗಣ್ಣ, ತಾಯಿ ರಂಗಮ್ಮ. ಗೋದೂಬಾಯಿ ಕಾಲೇಜಿನಿಂದ ಬಿ.ಎ. ಪದವಿ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಗುಲಬರ್ಗಾದ ‘ದಿ ಐಡಿಯಲ್ ಫೈನ್ ಆರ್ಟ್ಸ್’ ಇನ್‌ಸ್ಟಿಟ್ಯೂಟಿನಿಂದ ಡಿಪ್ಲೋಮ. ಎ.ಎಮ್ ಮತ್ತು ಬಿ.ಎಫ್..ಎ. ಪದವಿಗಳು. ಕರ್ನಾಟಕ ಲಲಿತ ಕಲಾ ಅಕಾಡಮಿಯಿಂದ ದೊರೆತ ವಿದ್ಯಾರ್ಥಿವೇತನ. ಗುಲಬರ್ಗಾದ ಶರಣಬಸವೇಶ್ವರ ರೆಸಿಡೆನ್ಸಿ ಶಾಲೆಯಲ್ಲಿ ಕೆಲಕಾಲ, ಇದೀಗ ಸಂತ ಜೋಸೆಫರ ಕಾನ್ವೆಂಟ್ (ಬಾಲಕಿ) ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿ. ಬೆಂಗಳೂರು, ತುಮಕೂರು, ಮುಂಬಯಿ, ಪೂನಾ ಹಾಗೂ ಗುಲಬರ್ಗಾದಲ್ಲಿ ಭಾಗವಹಿಸಿದ ಪ್ರಮುಖ ಸಾಂಘಿಕ ಪ್ರದರ್ಶನಗಳು. ಗುಲಬರ್ಗಾದ ಎಚ್.ಕೆ. ಇ. ಸೊಸೈಟಿ ಕಲಾ ಮಹೋತ್ಸವ ಮೈಸೂರು ದಸರಾ ಉತ್ಸವ, ಗುಲಬರ್ಗಾದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಮುಖ ಪ್ರದರ್ಶನಗಳು ಹಂಪಿಯಲ್ಲಿ ನಡೆದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿ ಶಿಬಿರ, ಬೀದರ್, ಕರ್ನಾಟಕ ಸಂಸ್ಕೃತಿ ಇಲಾಖೆ, ರಾಜಶ್ರೀ ಸಿಮೆಂಟ್ – ಮಳಖೇಡ ಮುಂತಾದೆಡೆಗಳಲ್ಲಿ ನಿಯೋಜಿಸಿದ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ. ಮಹಿಳಾ ಕಲಾ ಶಿಬಿರ-ಬೀದರ, ಭಾಲ್ಕಿ, ಹಂಪಿಯ ಕಲಾ ಶಿಬಿರ, ಗುಲಬರ್ಗಾದಲ್ಲಿ ನಡೆದ ಕಾವ್ಯ-ಕುಂಚ ಅಪೂರ್ವ ಕಾರ್ಯಕ್ರಮದಲ್ಲಿ ಪ್ರಮುಖ ಕೃತಿಗಳ ರಚನೆ, ಪಡೆದ ಜನ ಮೆಚ್ಚುಗೆ. ಗುಲಬರ್ಗಾ ವಿಭಾಗದ ಉತ್ತಮ ಚಿತ್ರಕಲಾ ಶಿಕ್ಷಕರ ಪ್ರಶಸ್ತಿ, ಮೈಸೂರು ದಸರಾ ಮಹೋತ್ಸವ ಪ್ರಶಸ್ತಿ, ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯಿಂದ ಉತ್ತಮ ಕೃತಿ ಪ್ರಶಸ್ತಿ ಪ್ರಮುಖವಾದವುಗಳು. ಇದೇ ದಿನ ಹುಟ್ಟಿದ ಕಲಾವಿದರು ಬಾಬೂರಾವ್ ಬಿ. ದೇಸಾಯಿ – ೧೯೧೬ ಅಕ್ಮಲ್ ಪಾಷಾ – ೧೯೬೧ ವಿಶ್ವನಾಥ್ ನಾಕೋಡ್ – ೧೯೬೧