Loading Events

« All Events

ಸತೀಶ ಕುಲಕರ್ಣಿ

July 13

೧೩.೭.೧೯೫೧ ನಟ- ನಾಟಕಕಾರ, ಕವಿ – ಕಲಾವಿದ ಸತೀಶ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡ. ತಂದೆ ನೀಲಕಂಠರಾವ್‌ ಕುಲಕರ್ಣಿ, ತಾಯಿ ಲೀಲಾಬಾಯಿ. ಚಿಕ್ಕಂದಿನಿಂದಲೂ ನಾಟಕದ ಬಗ್ಗೆ ಬೆಳೆದ ಅಭಿರುಚಿ. ಹಲವಾರು ನಾಟಕಗಳ ಅಭಿನಯ ಮತ್ತು ನಿರ್ದೇಶನ. ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದವುಗಳಲ್ಲಿ ಅಭಿನಯ ಮತ್ತು ನಿರ್ದೇಶನ. ದೂರದರ್ಶನ ಧಾರಾವಾಹಿಗಳಲ್ಲೂ ನಟನೆ, ಭಾಗ್ಯಶ್ರೀ, ಸ್ವಾತಂತ್ಯ್ರ ಸಂಗ್ರಾಮದ ಪುಟಗಳು, ಮೂಡಲಮನೆ ಪ್ರಮುಖವಾದುವುಗಳು. ಆಕಾಶವಾಣಿಯ ಹಲವಾರು ನಾಟಕ, ಕವಿಗೋಷ್ಠಿಗಳಲ್ಲಿ ಭಾಗಿ. ಬೆಂಕಿಬೇರು, ನೆಲದ ನೆರಳು, ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್‌ ಮುಂತಾದ ಕವನ ಸಂಕಲನಗಳು ಪ್ರಕಟಿತ. ಕರ್ನಾಟಕ ಸಾಹಿತ್ಯ ಅಕಾಡಮಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಹಾವನೂರು ಪ್ರತಿಷ್ಠಾನ, ಕಡಕೋಳ ಪ್ರತಿಷ್ಠಾನ, ವಾಯುವ್ಯ ಕರ್ನಾಟಕ ಸಾರಿಗೆ ಕನ್ನಡ ಕ್ರಿಯಾ ಸಮಿತಿ, ಹಾವೇರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ಸಮಿತಿ, ಕರ್ನಾಟಕ ನಾಟಕ ಅಕಾಡಮಿ ಜಿಲ್ಲಾ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ವಹಿಸುತ್ತಿರುವ ಪ್ರಮುಖ ಪಾತ್ರ. ಯುವರಂಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಂಗಾರಕೊಡ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ, ಜೋಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ಕತೆಯಾದ ಕಾಳ ನಾಟಕಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆಯಲ್ಲಿ ಸಾಹೇಬರ ನಾಯಿ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಮುಂತಾದ ರಂಗಭೂಮಿ ಚಟುವಟಿಕೆಗಳಿಗೆ ಸಂದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಎನ್‌. ರಾಮದಾಸ ಕಾಮತ್‌ – ೧೯೨೨ ಸೋಮಶೇಖರಯ್ಯ ಎಂ.ಎಂ. – ೧೯೬೦ ಸುಪ್ರಿಯಾ ವರ್ಮಾ – ೧೯೭೮

* * *

Details

Date:
July 13
Event Category: