Loading Events

« All Events

ಸಿದ್ಧವನಹಳ್ಳಿ ಕೃಷ್ಣಶರ್ಮ

July 4

೦೪..೧೯೦೪ ೧೪.೧೦.೧೯೭೩ ಗಾಂಧಿ ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿ, ಲೇಖಕ, ಸಹಕಾರಿ ಕ್ಷೇತ್ರದ ಹರಿಕಾರ ಮತ್ತು ಪತ್ರಕರ್ತರಾದ ಕೃಷ್ಣಶರ್ಮರು ಹುಟ್ಟಿದ್ದು ೧೯೦೪ರ ಜುಲೈ ೪ ರಂದು ಚಿತ್ರದುರ್ಗ ತಾಲ್ಲೂಕಿನ ಸಿದ್ಧವನಹಳ್ಳಿಯಲ್ಲಿ. ತಂದೆ ರಂಗಾಚಾರ್, ತಾಯಿ ಶೇಷಮ್ಮ. ತಂದೆಯ ತಾತಂದಿರು ಮೈಸೂರು ಪರಕಾಲ ಮಠದ ಕಾರ್ಯಕರ್ತರಾಗಿದ್ದರೆ ಅವರ ಅಣ್ಣಂದಿರು ಪರಕಾಲಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತರಾದ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು. ಇವರು ಅಂದಿನ ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದವರು. ಇಂತಹ ವಂಶದಲ್ಲಿ ಹುಟ್ಟಿದ ಕೃಷ್ಣಶರ್ಮರಿಗೂ ಸ್ವಾಭಾವಿಕವಾಗಿ ವಿದ್ವತ್‌, ಸಂಸ್ಕಾರ, ಸುಸಂಸ್ಕೃತ ನಡವಳಿಕೆಗಳು ರಕ್ತಗತವಾಗಿ ಬಂದಿದ್ದವು. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಹುಟ್ಟಿದ ಹಳ್ಳಿಯಲ್ಲಿಯೆ. ಶಾಲೆಯ ಉಪಾಧ್ಯಾಯರಾಗಿದ್ದ ಸೂರಪ್ಪನವರು ಸಂಜೆವೇಳೆ ಓದುತ್ತಿದ್ದ ಭಾರತವಾಚನದಿಂದ ಆಕರ್ಷಿತರಾದರು. ಮಾಧ್ಯಮಿಕ ಶಾಲೆಗೆ ಸೇರಿದ್ದು ಚಿತ್ರದುರ್ಗದ ಆಂಗ್ಲೋವರ್ನಾಕ್ಯುಲರ್ ಶಾಲೆಗೆ. ಅಲ್ಲಿನ ಕನ್ನಡ ಪಂಡಿತರಾದ ಗರಣಿ ರಂಗಾಚಾರ್ಯರು ವ್ಯಾಕರಣದಲ್ಲಿ ನಿಷ್ಣಾತರಾಗಿದ್ದು ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಪಂಡಿತರಾಗಿದ್ದರು. ಇವರ ಪ್ರೋತ್ಸಾಹದಿಂದ ಕೃಷ್ಣಶರ್ಮರಿಗೆ ಕನ್ನಡದಲ್ಲಿ ಅಭಿರುಚಿ ಬೆಳೆಯತೊಡಗಿತು. ಹೈಸ್ಕೂಲಿಗೆ ಬಂದಾಗ ಹನುಮಂತರಾಯರೆಂಬ ಕನ್ನಡ ಪಂಡಿತರು ಛಂದಸ್ಸನ್ನು ಕಲಿಸಿದರು. ಜೊತೆಗೆ ಚಿಕ್ಕಪ್ಪ ಮನೆಯಲ್ಲಿ ತಂದಿಟ್ಟಿದ್ದ ಶ್ರೀರಾಮ ಪಟ್ಟಾಭಿಷೇಕ, ರಾಮಶ್ವಮೇಧ, ಆನಂದ ರಾಮಾಯಣ ಮುಂತಾದ ಕೃತಿಗಳಲ್ಲದೆ ದೈವಶಿಖಾಮಣಿ ಅಳಸಿಂಗಾಚಾರ್ಯರ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳನ್ನೆಲ್ಲ ಓದಿ ಪರಿಚಯ ಮಾಡಿಕೊಂಡರು. ಒಮ್ಮೆ ಹೈಸ್ಕೂಲಿನಲ್ಲಿದ್ದಾಗ ಇನ್‌ಸ್ಪೆಕ್ಷನ್‌ಗಾಗಿ ಬಂದ ಇನ್‌ಸ್ಪೆಕ್ಟರು ತರಗತಿಯಲ್ಲಿ ಪರೀಕ್ಷೆ ನಡೆಸಿ ಇವರಿಗಿದ್ದ ಸಂಸ್ಕೃತ, ಕನ್ನಡದ ಜ್ಞಾನವನ್ನೂ ಕಂಡು ಬಹುಮಾನ ರೂಪವಾಗಿ ಬಿ. ವೆಂಕಟಾಚಾರ್ಯರ ‘ವಂಗವಿಜೇತ, ‘ವಿಷವೃಕ್ಷ’ ಕಾದಂಬರಿಗಳನ್ನು ನೀಡಿದರಂತೆ. ಹೀಗೆ ದೊರೆತ ಕನ್ನಡ ಕಾದಂಬರಿಗಳನ್ನು ಓದುತ್ತಾ ಹೋದಂತೆ ಕನ್ನಡದ ಬಗ್ಗೆ ಹೆಚ್ಚು ಹೆಚ್ಚು ಆಸ್ಥೆ ಬೆಳೆಯತೊಡಗಿತು. ಹೀಗೆ ಓದುತ್ತಾ ಹೋದಂತೆಲ್ಲ ಬರವಣಿಗೆಯನ್ನೂ ಪ್ರಾರಂಭಿಸಿ, ಚಿಕ್ಕಪ್ಪನೊಡನೆ ಸೇರಿ ಹೊರತಂದ ಕೈಬರಹದ ಪತ್ರಿಕೆ ‘ವಾಣಿವಿಲಾಸ’. ಒಂದೆರಡು ಸಂಚಿಕೆಯ ನಂತರ ನಿಂತುಹೋದ್ದರಿಂದ, ಮೈಸೂರಿನ ‘ಮಧುರವಾಣಿ’ ಪತ್ರಿಕೆಗೆ ಕೆಲ ಕತೆಗಳನ್ನೂ ಬರೆದರು. ಕಾಲೇಜಿಗೆ ಸೇರಿದ್ದು ಮೈಸೂರಿನಲ್ಲಿ.  ಮೊದಲ ಬಿ.ಎ. ಓದುತ್ತಿದ್ದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು ಕಾಲೇಜು ತೊರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದರು. ೧೯೨೦-೨೧ ರ ಸುಮಾರಿನಲ್ಲಿ, ಆಯುರ್ವೇದ, ಯೋಗ, ಶಿಕ್ಷಣ ತ

Details

Date:
July 4
Event Category: