ಸಿ.ಎಚ್‌. ಲೋಕನಾಥ್‌

೧೪.೦೮.೧೯೨೭ ಶಿಸ್ತುಬದ್ಧ ಜೀವನದ, ರಂಗಭೂಮಿ, ಚಲನಚಿತ್ರದ ಮೇರು ನಟರಾದ ಲೋಕನಾಥ್‌ರು ಹುಟ್ಟಿದ್ದು ಬೆಂಗಳೂರು. ತಂದೆ ಹನುಮಂತಪ್ಪ, ತಾಯಿ ಗೌರಮ್ಮ. ಓದಿದ್ದು ಎಂಜಿನಿಯರಿಂಗ್‌. ವಾಣಿಜ್ಯ ವಹಿವಾಟಿನ ಕುಟುಂಬ. ೧೪ ರ ವಯಸ್ಸಿನಿಂದಲೇ ಜವಳಿ ಖರೀದಿಸಲು ಬೆಂಗಳೂರು - ಅಮೃತಸರ, ಬನಾರಸ್‌ ಮಧ್ಯೆ ಓಡಾಟ. […]

ಕ.ಗಿ. ಕುಂದಣಗಾರ

೧೪-೮-೧೮೯೨ ೨೨-೮-೧೯೬೫ ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕುಂದಣಗಾರರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ. ತಂದೆ ಗಿರಿಯಪ್ಪ, ತಾಯಿ ಶಾಕಾಂಬರಿ. ಮೂರು ವರ್ಷದ ಹುಡುಗನಾಗಿದ್ದಾಗಲೇ ತಂದೆ ತಾಯಿಯ ಪ್ರೀತಿಯಿಂದ ವಂಚಿತರು. ಬಡತನದಲ್ಲಿ ಬೆಳೆದರೂ ಕುಶಾಗ್ರಮತಿ. ಜಾಣ ಹುಡುಗ ಎನ್ನಿಸಿಕೊಂಡು […]

ಡಾ. ಬೆಸಗರಹಳ್ಳಿ ರಾಮಣ್ಣ

೧೫.೦೮.೧೯೩೮ ೧೩.೦೭.೧೯೯೮ ತಮ್ಮಲ್ಲಿದ್ದ ಪ್ರತಿಭೆ,  ಶಕ್ತಿ,  ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸುತ್ತಲೇ ಇದ್ದು, ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿ, […]

ವೆಂಕಟೇಶ್ ಗೋಡಕಿಂಡಿ

೧೫.೦೮.೧೯೪೦ ಹಿಂದೂಸ್ತಾನಿ ಸಂಗೀತದ ಬಾನ್ಸುರಿ ವಾದನದಲ್ಲಿ ಪ್ರಖ್ಯಾತರೆನಿಸಿರುವ ವೆಂಕಟೇಶ ಗೋಡಕಿಂಡಿಯವರು ಹುಟ್ಟಿದ್ದು ಧಾರವಾಡ. ತಂದೆ ರಾಮಚಂದ್ರ ಕುಲಕರ್ಣಿ, ತಾಯಿ ಅನಸಕ್ಕ. ಓದಿದ್ದು ಅರ್ಥಶಾಸ್ತ್ರದ ಬಿ.ಎ. ಸಂಗೀತ ಗಾಯನ, ಹಾರ್ಮೋನಿಯಂ ವಾದನದಲ್ಲಿ ಪಡೆದ ಪರಿಣತಿ. ಹಾರ್ಮೋನಿಯಂ ವಾದಕರಾಗಿ ಹಿಂದೂಸ್ಥಾನಿ ಸಂಗೀತದ ದಿಗ್ಗಜರಿಗೆಲ್ಲಾ ನೀಡಿದ […]

ನರೇಂದ್ರಬಾಬು. ಎಂ.

೧೫-೮-೧೯೨೬ ೧೮-೧೦-೧೯೯೯ ಕನ್ನಡದ ಖ್ಯಾತ ಸಾಹಿತಿ, ಚಲನಚಿತ್ರ ಸಂಭಾಷಣಕಾರ, ಗೀತರಚನಕಾರರಾದ ಎಂ. ನರೇಂದ್ರ ಬಾಬುರವರು ಹುಟ್ಟಿದ್ದು ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಸರಾದ ಮೈಸೂರಿನಲ್ಲಿ. ತಂದೆ ಅರಮನೆಯ ಭಕ್ಷಿಗಳಾಗಿದ್ದ ಕಾಶೀಪತಯ್ಯನವರು, ತಾಯಿ ಮರಮ್ಮಣ್ಣಿಯವರು. ಪ್ರಾರಂಭಿಕ ಶಿಕ್ಷಣ ಮೈಸೂರು ಶಾರದಾ ವಿಲಾಸ್ ಪ್ರೌಢಶಾಲೆಯಲ್ಲಿ. ಹೈಸ್ಕೂಲು […]

ನಾಗತಿಹಳ್ಳಿ ಚಂದ್ರಶೇಖರ್

೧೫-೮-೧೯೫೮ ಸಾಹಿತಿ, ಚಲನಚಿತ್ರ ನಿರ್ದೇಶಕ, ಪರಿಸರವಾದಿ, ಸಮಾಜಸೇವಕ ಚಂದ್ರಶೇಖರರವರು ಹುಟ್ಟಿದ್ದು ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣ ನಾಗತಿಹಳ್ಳಿ. ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಿಂದ ಬಿ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂಟು ಚಿನ್ನದ ಪದಕ, […]

ಸಿ.ಎನ್‌. ಪಾಟೀಲ್‌

೧೬.೮.೧೯೨೩ ೨೫.೬.೨೦೦೭ ಚಿತ್ರಕಲೆ ಕಲಿತದಷ್ಟೇ ಅಲ್ಲದೆ ಚಿತ್ರಕಲಾಭ್ಯಾಸಕ್ಕಾಗಿ ಹಲವಾರು ಸಂಸ್ಥೆಗಳ ಸ್ಥಾಪನೆಯ ರೂವಾರಿಯಾದ ಪಾಟೀಲರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ನಿಟ್ಟೂರ ಗ್ರಾಮದಲ್ಲಿ. ತಂದೆ ನಿಂಗನಗೌಡ ದ್ಯಾಮನಗೌಡ ಪಾಟೀಲ, ತಾಯಿ ನಿಂಗಮ್ಮ. ಬಾಲ್ಯದಿಂದಲೇ ಬೆಳೆದ ಚಿತ್ರಕಲಾಭ್ಯಾಸ. ೧೧ ನೇ ವಯಸ್ಸಿನಲ್ಲಿಯೇ […]

ಎ.ಎಸ್. ಮೂರ್ತಿ

೧೬-೮-೧೯೨೯ ‘ಆಕಾಶವಾಣಿ ಈರಣ್ಣ’ನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿರುವ ಎ.ಎಸ್. ಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಕ್ಯಾಲಿಕೊ ಮಿಲ್ಸ್‌ನಲ್ಲಿ […]

ಚಿ.ಸು. ಕೃಷ್ಣಶೆಟ್ಟಿ

೧೭.೦೮.೧೯೫೨ ಪ್ರಖ್ಯಾತ ಕಲಾ ವಿಮರ್ಶಕ, ಚಿತ್ರ ಕಲಾವಿದ, ಬರಹಗಾರರಾದ ಕೃಷ್ಣಶೆಟ್ಟಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ತಂದೆ ಸಿ.ಪಿ. ಸುಬ್ಬಯ್ಯಶೆಟ್ಟಿ, ತಾಯಿ ಸರೋಜಮ್ಮ. ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್ ಅಂಡ್‌ಕ್ರಾಫ್ಟ್ ನಿಂದ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮ. ಕೇಂದ್ರ ಲಲಿತ ಕಲಾ ಅಕಾಡಮಿಯ […]

ಸುರೇಂದ್ರದಾನಿ

೧೭-೮-೧೯೨೫ ಸಾಹಿತಿ, ಪತ್ರಕರ್ತ ಸುರೇಂದ್ರದಾನಿಯವರು ಹುಟ್ಟಿದ್ದು ಧಾರವಾಡ. ತಂದೆ ಭೀಮರಾವ್, ತಾಯಿ ಗಂಗಾಬಾಯಿ. ಪ್ರಾರಂಭಿಕ ಶಿಕ್ಷಣ ಧಾರವಾಡ, ಬಾಗಲಕೋಟೆ, ಬಿಜಾಪುರ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ. ಬ್ರಿಟಿಷರ ಗುಲಾಮಗಿರಿಯೊಳಗೆ ನೌಕರಿ ಮಾಡಬಾರದೆಂಬ ಛಲ. ಮೊಹರೆ ಹನುಮಂತ […]