Categories
ಶರಣರು / Sharanaru

ಅರಿವಿನ ಮಾರಿತಂದೆ

ಅಂಕಿತ: ಸದಾಶಿವ ಮೂರ್ತಿಲಿಂಗ

‘ಸದಾಶಿವ ಮೂರ್ತಿಲಿಂಗ’ ಆಂಕಿತದಲ್ಲಿ ೩೦೯ ವಚನಗಳು ದೊರೆತಿವೆ. ಹೆಸರಿಗೆ ಸೇರಿದ ವಿಶೇಷಣದಂತೆ ಇಲ್ಲಿ ‘ಅರಿವಿಗೆ’ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ತತ್ವ ಪ್ರಧಾನವಾದ ಈತನ ವಚನಗಳಲ್ಲಿ ಗುರು-ಲಿ೦ಗ-ಜ೦ಗಮ-ಪ್ರಸಾದ, ಶೈವ-ವೀರಶೈವ ಕುರಿತ ಸಂಗತಿಗಳು ಚರ್ಚಿತವಾಗಿವೆ. ಹೆಚ್ಚಿನ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.