Categories
ಶರಣರು / Sharanaru

ಆಯ್ದಕ್ಕಿ ಮಾರಯ್ಯ

ಅಂಕಿತ: ಅಮರೇಶ್ವರಲಿಂಗ
ಕಾಯಕ: ಆಕ್ಕಿಯನ್ನು ಆಯುವ ಕಾಯಕ

ಈತನ ಸ್ಥಳ ರಾಯಚೂರ ಜಿಲ್ಲೆಯ ಲಿ೦ಗಸೂರ ತಾಲೂಕಿನ ಅಮರೇಶ್ವರ. ಸತಿ-ಲಕ್ಕಮ್ಮ. ಅಧಿದೈವ ಅಮರೇಶ್ವರ. ಕಾಲ-೧೧೬೦. ಕಲ್ಯಾಣಕ್ಕೆ ಬಂದ ಈತನ ಕಾಯಕ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯುವುದು. ಕಾಯಕ-ದಾಸೋಹ ನಿಷ್ಠ ಶರಣರಲ್ಲಿ ಅಗ್ರಗಣ್ಯ. “ಕಾಯಕವೇ ಕೈಲಾಸ” ಎ೦ಬುದು ಇವನ ಬದುಕಿನ ಮುಖ್ಯ ಸಿದ್ವಾಂತ. ‘ಅಮರೇಶ್ವರಲಿಂಗ’ ಆಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಸದ್ಯ ದೊರೆತ ೩೨ ವಚನಗಳಲ್ಲಿ ಕಾಯಕತ್ವದ ವಿಚಾರವೇ ಪ್ರಧಾನವಾಗಿದೆ.