Categories
ಶರಣರು / Sharanaru

ಕರಸ್ಥಲದ ಮಲ್ಲಿಕಾರ್ಜುನ ದೇವ/ಕರಸ್ಥಲದ ಮಲ್ಲಿಕಾರ್ಜುನೊಡೆಯ

ಅಂಕಿತ: ಪರಮಗುರು ಶಾಂತೇಶ/ಪರಮ ಗುರು ಶಾಂತಮಲ್ಲಿಕಾರ್ಜುನಾ
ಕಾಯಕ: ಗುರು/ಜಂಗಮ

‘ಬ್ರಹ್ಮಾದ್ವೈತ ಸಿದ್ಧಾಂತ ಷಟ್ ಸ್ಥಲಾಭರಣ” ಎಂಬ ಕೃತಿಯನ್ನು ಸಂಕಲಿಸಿದ ಈತನ ಜೀವನ ಸಂಗತಿಗಳು ಹೆಚ್ಚಿಗೆ ದೊರೆತಿಲ್ಲ. ಕರಸ್ಥಲ ಪರಂಪರೆಯ ಶಾಂತೇಶೆ ಗುರು. ಕಾಲ-೧೪೦೯-೧೪೪೭. ‘ಪರಮಗುರು ಶಾಂತೇಶ’ ಅಂಕಿತದಲ್ಲಿ ನಾಲ್ಕು, ವಚನಗಳು ದೊರೆತಿವೆ. ಅವುಗಳಲ್ಲಿ ಇಷ್ಟಲಿಂಗ ದಲ್ಲಿ ನಿಷ್ಟೆಯಿಲ್ಲದವರ ಟೀಕೆ, ಸಂಸಾರದಲ್ಲಿ ಮೈಮರೆತವರ ರೀತಿ, ಅಂತರಂಗದಲ್ಲಿ ಅರಿವಿಲ್ಲದ ಬಹಿರಂಗದ ಕ್ರೀವಂತರ ವಿಮರ್ಶೆ, ಪರಶಿವಯೋಗಿಯ ಸ್ವರೂಪ ವಣ೯ನೆ ಮಾಡಲಾಗಿದೆ.