Categories
ಶರಣರು / Sharanaru

ಕರುಳ ಕೇತಯ್ಯ

ಅಂಕಿತ: ಮನಕ್ಕೆ ಮನೋಹರ ಶಂಕೇಶ್ವರಲಿಂಗ

ವ್ರತಾಚಾರನಿಷ್ಠ ಶರಣನಾದ ಈತನ ಜೀವನೇತಿಹಾಸದ ವಿವರಗಳು ದೊರಕುವುದಿಲ್ಲ. ಕಾಲ – ೧೧೬೦. ಅ೦ಕಿತ – ಶಂಖೇಶ್ವರ. ಎ೦ಟು ವಚನಗಳು ದೊರೆತಿವೆ. ಅವುಗಳಲ್ಲಿ ‘ಭವಿಯ ಸೋಂಕಲಾಗದು, ಅನಪಿ೯ತವ ಸ್ವೀಕರಿಸಲಾಗದು’ ಎಂಬ ವ್ರತನಿಷ್ಠೆ, ‘ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿ ಮೆಚ್ಚುವ ದೈವ ಬೇಡ’ ಎ೦ಬ ಡಾಂಭಿಕ ವ್ರತಾಚಾರಿಗಳ ನಿಂದೆ ವಿಶೇಷವಾಗಿ ತೋರುತ್ತದೆ.