Categories
ಶರಣರು / Sharanaru

ಕಲಕೇತಯ್ಯ

ಅಂಕಿತ: ಮೇಖಲೇಶ್ವರಲಿಂಗ
ಕಾಯಕ: ಜಾನಪದ ಆಟವಾದ ಕಿಳ್ಳಿಕೇತರ ಆಟ ಆಡುವವನು

‘ಕಲಕೇತನಂತಪ್ಪ ತಂದೆ ನೊಡೆನಗೆ’ ಎಂದು ಬಸವಣ್ಣನಿಂದ ಸ್ತುತಿಸಿಕೊಂಡ ಈತ ಒಬ್ಬ ಜಾನಪದ ಕಲಾವಿದ. ಕಿಳ್ಳಿಕೇತರಾಟ (ಕಲಕೇತ) ಎಂಬ ಕಲೆಯನ್ನು ಪ್ರದರ್ಶಿಸುವದು ಈತನ ಕಾಯಕ. ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಲಕ್ಕಣ್ಣ ದಂಡ್ದೇಶರ ಕಾವ್ಯಗಳಲ್ಲಿ ಈತನ ಕಥೆ ಬರುತ್ತದೆ. ಕಾಲ – ೧೧೬೦. ‘ಮೇಖಲೇಶ್ವರಲಿಂಗ’ ಎಂಬ ಅಂಕಿತದಲ್ಲಿ ಹನ್ನೊ೦ದು ವಚನಗಳು ದೊರೆತಿವೆ. ತತ್ವ, ಬೆಡಗು, ಅನುಭಾವ ಇವುಗಳಲ್ಲಿ ಮುಪ್ಪುರಿಗೊಂಡಿವೆ.