Categories
ಶರಣರು / Sharanaru

ಕಾಲಕಣ್ಣಿಯ ಕಾಮಮ್ಮ

ಅಂಕಿತ: ನಿರ್ಭೀತ ನಿಜಲಿಂಗ
ಕಾಯಕ: ಹಗ್ಗವನ್ನು ಹೊಸೆದು ಮಾರುವುದು

೭೫೦
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರುಲಿಂಗಜಂಗಮದ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರುತುರನೆ ತೂರುವೆ,
ನಿರ್ಭಿತ ನಿಜಲಿಂಗದಲ್ಲಿ ?

ಈಕೆಯ ಜೀವನ ವಿವರ ತಿಳಿದು ಬಂದಿಲ್ಲ. ಹೆಸರ ಹಿಂದಿನ ವಿಶೇಷಣದಿಂದ ಈಕೆ ಹಗ್ಗ ಹೊಸೆಯುವ ಕುಟುಂಬದವಳೆಂದು ತಿಳಿಯುತ್ತದೆ. ಕಾಲ-೧೧೬೦. ಅಂಕಿತ “ನಿರ್ಭಿತ ನಿಜಲಿಂಗ’. ಒ೦ದು ವಚನ ಮಾತ್ರ ದೊರತಿದೆ. ವ್ರತನಿಷ್ಠೆ, ವ್ರತಹೀನರ ನಿಷ್ಠುರ ಟೀಕೆ ಇದರ ಉದ್ದೇಶವಾಗಿದೆ.