Categories
ಶರಣರು / Sharanaru

ಕೋಲ ಶಾಂತಯ್ಯ

ಅಂಕಿತ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
ಕಾಯಕ: ಕಟ್ಟಿಗೆ ಅಥವಾ ಕೋಲು ಹಿಡಿದು ಕಾಯಕ ಮಾಡುವವನು.

ಪಶುಪಾಲನ ವೃತ್ತಿಯನ್ನು ಕೈಕೊಂಡಿದ್ದ ಈತನ ಹೆಸರು ವಚನಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಸಕಲಪುರಾತನರ ಮೂರು ವಿಧದ ಕಟ್ಟುಗಳಲ್ಲಿ ಮೊದಲನೆಯದು ಈತನ ವಚನಗಳಿಂದ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ. ಚೆನ್ನಬಸವ ಪುರಾಣ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನಿಗೆ ಸಂಬಂಧಿಸಿದ ಕಥೆ ನಿರೂಪಿತವಾಗಿದೆ. ಕಾಲ-೧೧೬೦. ‘ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ’ ಅಂಕಿತದಲ್ಲಿ ೧೦೩ ವಚನಗಳು ದೊರೆತಿವೆ. ಹೆಚ್ಚಾಗಿ ಎಲ್ಲವೂ ಬೆಡಗಿನ ರೂಪದಲ್ಲಿವೆ. ಭಕ್ತಿಯ ಸ್ವರೂಪ, ಸದ್ಗುರುವಿನ ರೀತಿ, ಆಷಾಢಭೂತಿಗಳ ಟೀಕೆ ಇತ್ಯಾದಿ ವಿಷಯಗಳು ಪ್ರತಿಪಾದಿತವಾಗಿದೆ. ಕೆಲವು ವಚನಗಳಲ್ಲಿ ತನ್ನ ಗೋಪಾಲ ವೃತ್ತಿಯ ಪರಿಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾನೆ.