Categories
ಶರಣರು / Sharanaru

ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಮ್ಮ

ಅಂಕಿತ: ಮಸಣಯ್ಯ ಪ್ರಿಯ ಗಜೇಶ್ವರ

ಈಕೆ ಗಜೇಶ ಮಸಣಯ್ಯನ ಸತಿ. ಹೆಸರು ಮಸಣಮ್ಮ. ಗಂಡನ ಊರು ಅಕ್ಕಲಕೋಟೆ ತಾಲೂಕ ಕರ್ಜಗಿ. ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಇಬ್ಬರೂ ಕಲ್ಯಾಣಕ್ಕೆ ಬಂದು ಸೇರುತ್ತಾರೆ. ಕಾಲ – ೧೧೬೦. ಅಂಕಿತ ‘ಮಸಣಯ್ಯ ಪ್ರಿಯ ಗಜೇಶ್ವರ’ ಸದ್ಯ ಈಕೆಯ ಹತ್ತು ವಚನಗಳು ದೊರೆತಿವೆ. ಸೃಷ್ಟಿಯ ಉತ್ಪತ್ತಿ, ಲಿಂಗದ ಸ್ವರೂಪ, ಅರಿವಿನ ಮಹತ್ವ, ಗುರುಲಿ೦ಗಜ೦ಗಮ ಸಂಬಂಧ, ಶರಣರ ಸ್ತುತಿ ಇಲ್ಲಿ ವಿಶೇಷಸ್ಥಾನ ಪಡೆದಿರುವುದರಿಂದ ವ್ರತಾಚಾರ ನಿಷ್ಠೆಗೆ ಅದ್ಯಸ್ಥಾನ ಕೋಟ್ಟ, ಉಳಿದ ವಚನಕಾರ್ತಿಯರಿಂದ ಈಕೆ ಭಿನ್ನಳಾಗಿ ತೋರುತ್ತಾಳೆ.