Categories
ಶರಣರು / Sharanaru

ಗಣದಾಸಿ ವೀರಣ್ಣ

ಅಂಕಿತ: ಶಾಂತಕೂಡಲಸಂಗಮದೇವ

ಈತನ ಜೀವನ ವಿವರಗಳು ದೊರೆಯುವುದಿಲ್ಲ. ಕಾಲ-೧೭ನೇಯ ಶತಮಾನ ಶಿವಗನರ ಭೃತ್ಯನೆಂದು ತನ್ನನ್ನು ಕರಿದುಕೊಂಡಿರುವುದರಿಂದ ‘ಗಣದಾಸಿ’ ಎಂಬ ವಿಶೇಷಣ ಅನ್ವರ್ಥಕವೆನಿಸಿದೆ. ಈತನ ೪೦ ವಚನಗಳು ದೊರೆತಿವೆ. ‘ಶಾಂತಕೂಡಲಸಂಗಮದೇವ’ ಎಂಬುದು ವಚನಾಂಕಿತ. ‘ಜ್ಞಾನಸಾರಾಯದ ವಚನ “ಮಹಾಜ್ಞಾನದನುಭಾವದ ವಚನ” ಎಂಬ ಶೀರ್ಷಿಕೆಯ ಈ ವಚನಗಳಲ್ಲಿ ಜ್ಞಾನ-ಅನುಭಾವ ಪ್ರಧಾನವಾಗಿವೆ. ‘ಅಷ್ಟಾವರಣವೆ ಅಂಗ, ಪಂಚಾಚಾರವೇ ಪ್ರಾಣ’ ಎಂದು ನಂಬಿದ್ದ ಈತನ ವಚನಗಳಲ್ಲಿ ಈ ಎರಡೂ ತತ್ವಗಳ ವ್ಯವಸ್ಥಿತ ವಿವೇಚನೆಗೆ ಹೆಚ್ಚಿನ ಸ್ಥಾನ ಸಂದಿದೆ. ಬಸವಾದಿ ಶರಣರ ವಚನಗಳ ಪ್ರಭಾವ ಈತನ ರಚನೆಗಳ ಮೇಲೆ ವಿಶೇಷವಾಗಿ ಆಗಿದೆ.