Categories
ಶರಣರು / Sharanaru

ಗಾವುದಿ ಮಾಚಯ್ಯ

ಅಂಕಿತ: ಕಲ್ಯಾಣದ ತ್ರಿಪುರಾ೦ತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದು ದಿಟವೆನ್ನಿರಣ್ಣಾ

ಕಾಲ – ೧೧೬೦. ಕಲ್ಯಾಣದ ಶರಣರ ಮಧ್ಯ ತನ್ನ ಶಿವಪೂಜಾನಿಷ್ಠೆ ಮತ್ತು ಪ್ರಾಣಲಿಂಗಾನುಸಂಧಾನದಲ್ಲಿ ಕಾಲ ಕಳೆಯುತ್ತಿದ್ದನೆಂದು ತಿಳಿದುಬರುತ್ತದೆ. ‘ಕಲ್ಯಾಣದ ತ್ರಿಪುರಾ೦ತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದು ದಿಟವೆನ್ನಿರಣ್ಣಾ’ ಎಂಬ ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ಸತ್ಯ ಶುದ್ಧ ಕಾಯಕದಿ೦ದ ಧನ ಸಂಗ್ರಹಿಸು; ಅಗತ್ಯವಿದ್ದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದುದನ್ನು ಗುರುಲಿಂಗಜಂಗಮಕ್ಕೆ ಅಪಿ೯ಸು; ಆಶಾಪಾಶ ಬಂಧಿತನಾಗಬೇಡ ಎ೦ಬುದು ಅವುಗಳ ಮುಖ್ಯ ಆಶಯ.