Categories
ಶರಣರು / Sharanaru

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

ಅಂಕಿತ: ಕುಂಭೇಶ್ವರ
ಕಾಯಕ: ಗಡಿಗೆ ಸಿದ್ಧಪಡಿಸುವುದು

ಈಕೆ ಕುಂಬಾರ ಗುಂಡಯ್ಯನ ಸತಿ. ಕಾಲ – ೧೧೬೦. ಬೀದರ ಜಿಲ್ಲೆಯ ಭಾಲ್ಕಿ (ಭಲ್ಲುಂಕೆ) ಈಕೆಯ ಸ್ಥಳ. ಗಡಿಗೆ ಸಿದ್ಧಪಡಿಸುವುದು ಕಾಯಕ. ಎರಡು ವಚನಗಳು ದೊರೆತಿವೆ. ‘ಕುಂಭೇಶ್ವರ’ ಅ೦ಕಿತ. ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ.