Categories
ಶರಣರು / Sharanaru

ಘನಲಿಂಗದೇವ

ಅಂಕಿತ: ಘನಲಿಂಗಿಯ ಮೋಹದ ಮಲ್ಲಿಕಾರ್ಜುನ
ಕಾಯಕ: ಸುತ್ತೂರು ವೀರಸಿಂಹಾಸನದ ಅಧ್ಯಕ್ಷ

ಈತ ತೋಂಟದ ಸಿದ್ಧಲಿಂಗರ ಶಿಷ್ಯ. ಸುತ್ತೂರು ಮಠಾಧೀಶ ಕಾಲ ೧೬ನೇಯ ಶತಮಾನ ಕಗ್ಗೆರೆಯಲ್ಲಿ ಐಕ್ಯ. ‘ಘನಲಿಂಗಿಯ ಮೋಹದ ಮಲ್ಲಿಕಾರ್ಜುನ” ಅಂಕಿತದಲ್ಲಿ ೬೬ ವಚನಗಳು ದೊರೆತಿವೆ. ಇವುಗಳಲ್ಲಿ ಸತಿಪತಿಭಾವದ ನಿರೂಪಣೆಯಿದೆ.

ಸರಳವೂ ಕಾವ್ಯಮಯವೂ ಆಗಿದೆ. ಈತನ ವೃತ್ತಿ ಪ್ರತಿಭಾಸ್ಪರ್ಶದಿಂದ ತನಗೆ ತಾನೇ ಕಾವ್ಯತ್ವವನ್ನು ಪಡೆದುಕೊಳ್ಳುತ್ತದೆ. ಶರಣಸತಿ ಲಿಂಗಪತಿ ಭಾವದಲ್ಲಿ ಶೃಂಗಾರ ಪ್ರಧಾನವಾಗಿ ಮೂಡಿಬಂದಿದೆ. ಈತ ಕುರುಡರು ಆನೆಯನ್ನು ವರ್ಣಿಸುವ ದೃಷ್ಟಾಂತವನ್ನು ಬಳಸಿಕೊಂಡು ಅಜ್ಙಾನಿಗಳನ್ನು ವಿಡಂಬಿಸುತ್ತಾನೆ.