Categories
ವಚನಗಳು / Vachanagalu

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ವಚನಗಳು

ಪೃಥ್ವ್ಯಾದಿಪಂಚತತ್ವಕ್ಕೆ ಇಪ್ಪತ್ತೈದು ಗುಣಂಗಳು ಸಹಿತ
ಮೂವತ್ತನೊಳಗು ಮಾಡದೆ
ಪ್ರಾಣಾದಿ ಪಂಚವಾಯುವಂ ಸತ್ಪ್ರಾಣವಂ ಮಾಡಿ,
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ
ಈ ಐವರನು ಭೂತಗ್ರಾಮಂಗಳಿಂದರಿದು,
ಶ್ರೋತ್ರದಿಂ ಪಂಚಜ್ಞಾನೇಂದ್ರಿಯಂಗಳ ವ್ಯವಹಾರವನರಿದು ಮುಂದರಿವುದು,
ನಾದ ಅನಾದ ಸುನಾದ ಮಹಾನಾದ
ಅನಾಹತನಾದವೆಂಬ ನಾದಪಂಚಕದಿಂದ ನಿರತನಾಗಿ,
ಗರ್ಭ ಸಂಸಾರ ದೇಹ ದಾರಿದ್ರ ದುಮ್ಮಲವೆಂಬ
ಪಂಚ ಉಪಾಯಂಗಳ ಹೊದ್ದಲೀಯದೆ,
ದೇಹ ಶಿರ ಮುಖ ಪಾಣಿ ಚರಣವೆಂಬ ಪಂಚಾಂಗ ಹೀನನಾಗದೆ
ಅವಯವ ಸಂಪೂರ್ಣನಾಗಿ,
ಇಂತೀ ಪಂಚತತ್ವದ ಗುಣ ಇಪ್ಪತ್ತೈದು,
ಪಂಚಸಂಪಾದನೆ ನಾಲ್ವತ್ತೈದು, ಇದರ ಅನುಭಾವಿ ಬಸವಣ್ಣ,
ಮಹಾನುಭಾವಿ ಪ್ರಭುದೇವರು. ಇವರಿಬ್ಬರ ಸಂಗದಿಂದ ನಾನು
ಸ್ವಯಾನುಭಾವಿಯಾದೆನು ಕಾಣಾ ಕೂಡಲಚೆನ್ನಸಂಗಮದೇವಾ/1001
ಪ್ರಕಟದಿಂದ ಕೊಂಬುದು ಪ್ರಸಾದವಲ್ಲ,
ಗುಪ್ತದಿಂದ ಕೊಂಬುದು ಪ್ರಸಾದವಲ್ಲ,
ಪ್ರಕಟದಂತುಟೆ ಪ್ರಸಾದ? ಗುಪ್ತದಂತುಟೆ ಪ್ರಸಾದ?
ಪ್ರಸಾದದಂತುವನೇನೆಂದು ಹೇಳುವೆನಯ್ಯಾ?
ಭವಭಾರಿ ಜೀವಿಗಳೊಡನೆ ಪ್ರಸಾದದಂತುವನೇನಂದುಪಮಿಸುವೆನು?
ನಾರೂಢಸ್ಯ ಪ್ರಸಾದೋ ಹಿ ನ ಗುಪ್ತಸ್ಯ ಪ್ರಸಾದಕಂ
ಗೋಪ್ಯಾರೂಢೋಭಯಂ ನಾಸ್ತಿ ಮಹಾಪ್ರಸಾದಸಂಗಿನಃ
ಎಂದುದಾಗಿ, ಪ್ರಕಟ ಗುಪ್ತವ ಕಳೆದು ನೆಟ್ಟನೆ ಪ್ರಸಾದವ ಕೊಳಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ. /1002
ಪ್ರಕೃತಿವಿಡಿದಿಹುದು(ದೆ) ಪ್ರಾಣ, ಪ್ರಾಣವಿಡಿಹುದು(ದೆ) ಜ್ಞಾನ,
ಜ್ಞಾನವಿಡಿಹುದು(ದೆ) ಗುರು.
ಸಗುಣವೆಂದು ಹಿಡಿದು ಗುರುಲಿಂಗ ಜಂಗಮ ಪ್ರಸಾದವನು
ನಿರ್ಗುಣವೆಂದು ಬಿಡುವ ಸಂದೇಹಿ ವ್ರತಗೇಡಿಗಳ ತೋರಿಸದಿರಾ,
ಕೂಡಲಚೆನ್ನಸಂಗಮದೇವಾ. /1003
ಪ್ರಜರು, ಪ್ರಧಾನಿಯ ಮುಂದೆ ಗಜವನೇರಲಾಗದು.
ಪ್ರಧಾನಿ, ಪಟ್ಟದವರ ಮುಂದೆ ತುರಂಗವನೇರಲಾಗದು.
ಪಟ್ಟದಾತ, ಕೂಡಲಚೆನ್ನಸಂಗನ ಶರಣರ ಮುಂದೆ
ಅಂದೋಳನವನೇರಲಾಗದು, ಸಿದ್ಧರಾಮಯ್ಯ/1004
ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ,
ಪ್ರಣಮ:ಓಂಕಾರದ ಶ್ರುತಿಯ ಮೂಲಾಂಕುರವನರಿಯಬಲ್ಲರೆ
ಪ್ರಣಮ:ಐವತ್ತೆರಡಕ್ಷರದ ಲಿಪಿಯ ತಿಳಿದುನೋಡಿ ಓದಬಲ್ಲರೆ,
ಪ್ರಣಮ, ನಾದಬಿಂದು ಕಲಾತೀತನಾಗಬಲ್ಲರೆ-
ಇದು ಕಾರಣ, ಕೂಡಲಚೆನ್ನಸಂಗಾ,
ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ ಪ್ರಣಮಪ್ರತಿಷ್ಠಾಚಾರ್ಯರು.
ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು./1005
ಪ್ರತಃಕಾಲದಲದಕವನು ತಂದು ಲಿಂಗದ ಅನುವನರಿವನು,
ಪಾದೋದಕವನು ತಟ್ಟದೆ ಮುಟ್ಟದೆ ಕೊಂಬನು.
ತನಗೋಸುಗವೆಂದರಿಯದೆ ಲಿಂಗದವಸರವೆಂದರಿದು,
ಮಹಾಮಜ್ಜನಾದಿಗಳಂ ಮಾಡಿಸಿ,
ಲಿಂಗ ಸನ್ನಿಧಿಯಲು ಲಿಂಗೋದಕವ ಗ್ರಹಿಸುವ ಪ್ರಸಾದಿ,
ಲಿಂಗಿಚ್ಛೆಯಾರೋಗಣೆಯಂ ಮಾಡಿಸಿ, ಪ್ರಸಾದದರಿವನೊಮ್ಮೆ ಅರಿವನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಪ್ರಾಸಾದಿಗೆ ನಮೋ ನಮೋ. /1006
ಪ್ರತಿಯಿಲ್ಲದ ಲಿಂಗ ಬಿನ್ನವಾಯಿತ್ತೆಂದು
ತನ್ನ ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ,
ಆತ್ಮ ದ್ರೋಹಿಯ ಮುಖವ ನೋಡಲಾಗದು.
ಶಬ್ದ ಬಿನ್ನವಿಲ್ಲಾಗಿ ಪೂಜೆ ಬಿನ್ನವಿಲ್ಲ.
ಮಹಾಬಯಲೊಳಗಣ ಪ್ರಾಣದ ಸಂಚವನರಿಯರಾಗಿ
ಕೂಡಲಚೆನ್ನಸಂಗಯ್ಯಾ ಅವರು ರೌರವನರಕಿಗಳು/1007
ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ
ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿದ್ದಿರಯ್ಯಾ.
ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯಾ.
ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯಾ.
ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯಾ.
ಷಷ್ಠ ಕಾಲದಲ್ಲಿ ಪರಮಪುರುಷಾರ್ಥಸಾಧನವಾಗಿ,
ತ್ರಿವಿಧಭಕ್ತಿಗೆ ನೀವೇ ಕಾರಣವಾಗಿ ಬಂದಿರಿ ಪ್ರಮಥರು ಸಹಿತ,
ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ತ.
ಬೆಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೆ ನಿಮ್ಮ ಕರಸ್ಥಲದಲ್ಲಿ
ಕೂಡಲಚೆನ್ನಸಂಗಮದೇವಾ
ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು/1008
ಪ್ರಥಮ ಗುರು ಕಾಣಲಿಕೆಯಾಗಿ ಕರ್ಮಂಗಳು ಬೆದರಿ ಬೆಚ್ಚಿದವು:
ಹುಸಿಯಾಮಿಷ ತಾಮಸ ಕುಟಿಲಂಗಳು
ತವಗೆ ನಿಂದಿರೆಠಾವಿಲ್ಲೆನುತಿದ್ದವು.
ಸದ್ಗುರು ಕಾರುಣ್ಯ ಹಸ್ತಮಸ್ತಕ ಸಂಯೋಗದಲ್ಲಿ
ಪೂರ್ವಗುಣವಳಿದು ಪುನರ್ಜಾತನಾಗಿ,
ಕರಣಾದಿಗಳ ಕಳೆದು ಶಿವಲಿಂಗದಲ್ಲಿ ಉಳಿದು
ಅನುಪಮ ಸುಖಸಾರಾಯ ಶರಣನೆನಿಸಿ[ದಫ]
ಇದನರಿದು ಲಿಂಗದಲ್ಲಿ ಜಂಗಮದಲ್ಲಿ ಕರುಣವ ಪಡೆದು
ಭವಿಯನೊಲ್ಲೆನೆಂದು ಬೇರೆ ನಿಂದ ಕಾರಣ
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಭವಕಲ್ಪಿತವ ಕಳೆದ. /1009
ಪ್ರಥಮದಲ್ಲಿ ಸ್ಪರ್ಶವೆಂಬ ಸ್ಪರ್ಶನಗುಣದಿಂದ ಪಾದೋದಕ,
ದ್ವಿತೀಯದಲ್ಲಿ ಅಂಗಗುಣವಳಿಯಿತ್ತಾಗಿ
ಲಿಂಗಮುಖದಿಂದ ಬಂದುದು ಲಿಂಗೋದಕ,
ತೃತೀಯದಲ್ಲಿ ಮಹಾಗಣಂಗಳ ಬರವಿನಿಂದ (ಬಂದುದಾಗಿ) ಮಜ್ಜನೋದಕ,
ಚತುರ್ಥದಲ್ಲಿ ಚತುರ್ದಳಪದ್ಮ ವಿಕಸಿತವಾಗಿ ಪುಷ್ಪೋದಕ,
ಪಂಚಮದಲ್ಲಿ ಲಿಂಗಕ್ಕೆ ಪರಮ ಪರಿಯಾಣ (ಪರಿಣಾಮರಿ)
ಇಕ್ಕುವಲ್ಲಿ ಅವಧಾನೋದಕ,
ಷಷ್ಠಮದಲ್ಲಿಲಿಂಗಾರೋಗಣೆಯ ಅಪ್ಯಾಯನೋದಕ,
ಸಪ್ತಮದಲ್ಲಿ ಲಿಂಗಕ್ಕೆ ಹಸ್ತೋದಕ
ಅಷ್ಟಮದಲ್ಲಿ ಅಷ್ಟಾಂಗಯೋಗ ಪರಮಪರಿಣಾಮೋದಕ,
ನವಮದಲ್ಲಿ ನಾಮ ಸೀಮೆ ಇಲ್ಲವಾಗಿ ನಿರ್ನಾಮೋದಕ,
ದಶಮದಲ್ಲಿ ಹೆಸರಿಲ್ಲವಾಗಿ ನಿತ್ಯೋದಕ,-ಇಂತು ದಶವಿಧೋದಕ.
ಇನ್ನು ಏಕಾದಶಪ್ರಸಾದ:
ಪ್ರಥಮದಲ್ಲಿ ಮಹಾದೇವಂಗೆ ಮನವರ್ಪಿತ,
ದ್ವಿತೀಯದಲ್ಲಿ ಮಾಹೇಶ್ವರಂಗೆ ವೀರಾರ್ಪಿತ,
ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ,
ಚತುರ್ಥದಲ್ಲಿ ನಿರ್ವಿಷಯಾರ್ಪಿತ, ಪಂಚಮದಲ್ಲಿ ಪಂಚವಸ್ತ್ರಾರ್ಪಿತ,
ಷಷ್ಠಮದಲ್ಲಿ ನಷ್ಟರೂಪ ನಿರೂಪಾರ್ಪಿತ, ಸಪ್ತಮದಲ್ಲಿ ಆತ್ಮಾರ್ಪಿತ,
ಅಷ್ಟಮದಲ್ಲಿ ತನ್ನ ಮರೆದ ಮರಹಾರ್ಪಿತ,
ನವಮದಲ್ಲಿ ಅಸಮಸಹಸ್ರನಾಳದಿಂದ ತೃಪ್ತ್ಯಾರ್ಪಿತ,
ದಶಮದಲ್ಲಿ ಚಿತ್ತಸುಯಿಧಾನಿಯಾಗಿ ಸುಷುಮ್ನಾನಾಳದಿಂದ ಅಮೃತಾರ್ಪಿತ,
ಏಕಾದಶದಲ್ಲಿ ಏಕಪ್ರಸಾದ ನೋಡಹೋದರೆ ತನ್ನ ನುಂಗಿತ್ತಯ್ಯಾ.
ಹೇಳಬಾರದ ಘನವು ಕಾಣಬಾರದಾಗಿ
ಕೂಡಲಚೆನ್ನಸಂಗನಲ್ಲಿ ಉಪಮಿಸಬಾರದ ಮಹಾಘನವು/1010
ಪ್ರಥಮಸ್ಥಲ ಸೂತಕದಲ್ಲಿ ಹೊಲೆ, ದ್ವಿತೀಯಸ್ಥಲ ಜನನದಲ್ಲಿ ಹೊಲೆ,
ತೃತೀಯಸ್ಥಲ ಮರಣದಲ್ಲಿ ಹೊಲೆ, ಇಂತೀ ಹೊಲೆಯ ತನ್ನೊಳಗೆ ಇಂಬಿಟ್ಟು
ಮುಂದಿನವರ ಹೊಲೆಯನರಸುವ
ಅನ್ಯಾಯಿಗಳ ಮಾತ ಕೇಳಲಾಗದು ಕೇಳಲಾಗದು ಕಾಣಾ,
ಕೂಡಲಚೆನ್ನಸಂಗಮದೇವಾ/1011
ಪ್ರಮಥದಲ್ಲಿ ಪಾದೋದಕ, ದ್ವಿತೀಯದಲ್ಲಿ ಲಿಂಗೋದಕ,
ತೃತೀಯದಲ್ಲಿ ಮಜ್ಜನೋದಕ, ಚತುರ್ಥದಲ್ಲಿ ಸ್ಪರ್ಶನೋದಕ,
ಪಂಚಮದಲ್ಲಿ ಅವಧಾನೋದಕ, ಷಷ್ಠದಲ್ಲಿ ಆಪ್ಯಾಯನೋದಕ,
ಸಪ್ತಮದಲ್ಲಿ ಹಸ್ತೋದಕ, ಅಷ್ಟಮದಲ್ಲಿ ಪರಿಣಾಮೋದಕ,
ನವಮದಲ್ಲಿ ನಿರ್ನಾಮೋದಕ, ದಶಮದಲ್ಲಿ ಸತ್ಯೋದಕ,-
ಇಂತೀ ದಶವಿಧಪಾದೋದಕವ ತಿಳಿದುಕೊಳಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ/1012
ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು.
ಅತೀತ ಅನಾಗತವೆಂಬ ನುಡಿಯಲೆ ಸಿಲುಕಿದರು.
ಶ್ರುತಿವಂತರೆಲ್ಲರೂ ಆಗಮದಲ್ಲಿ ಸಿಲುಕಿದರು. ಇಂಥವನೆ ಲಿಂಗೈಕ್ಯನು ?
ನುಡಿದ ನುಡಿಯ ನಡೆಯನು, ನಡೆದ ನಡೆಯ ನುಡಿಯನು,
ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು,
ನಿಸ್ಸೀಮನು ಕೂಡಲಚೆನ್ನಸಂಗಾ ಲಿಂಗೈಕ್ಯನು. /1013
ಪ್ರಸಾದ ಕಾಯವಾದ ಬಳಿಕ ಸರ್ವಾಂಗ ಉತ್ತಮಾಂಗ.
ಪ್ರಾಣ ಲಿಂಗವಾದ ಬಳಿಕ ಸದಾ ಸನ್ನಿಹಿತ ಲಿಂಗ.
ಶರಣನಲ್ಲಿ ಭಾವ ಭೇದವಿಲ್ಲ ನಿರಂತರ ಲಿಂಗಸಂಗಿ.
“ಅಕಾಯೋ ಭಕ್ತಕಾಯಸ್ತು’ ಎಂದುದು
ಕೂಡಲಚೆನ್ನಸಂಗನ ವಚನ./1014
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ಕೊಂಬಿರಣ್ಣಾ
ಮುಂದೆ ನೋಡಿದಡೆ ಪ್ರಸಾದವಾಯಿತ್ತು
ಹಿಂದೆ ನೋಡಿದರೆ ಮಲಮೂತ್ರವಾಯಿತ್ತು,
ಪ್ರಸಾದಕ್ಕೆ ಭಂಗ ಬಂದಿತ್ತು ನೋಡಾ !
ಇಂತಪ್ಪ ಪ್ರಸಾದಿಗಳ ನಮ್ಮ ಕೂಡಲಚೆನ್ನಸಂಗ ಮೆಚ್ಚ/1015
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ,
ಧನಮುಟ್ಟಿ ಕೊಂಡುದು ಪ್ರಸಾದವಲ್ಲ.
ಅವು ಏಕಾಗಿ ತ್ರಿವಿಧಸಾಹಿತ್ಯದಲ್ಲಿ ಮುಟ್ಟಿ ಕೊಂಡುದು ಪ್ರಸಾದವಲ್ಲ.
ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ.
ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ. /1016
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡುಂಬಿರಿ,
ಪ್ರಸಾದವಾವುದು? ಓಗರವಾವುದು? ಬಲ್ಲವರು ನೀವು ಹೇಳಿರೇ.
ಕೈಯಲಿಕ್ಕಿದವ ಶಿವದ್ರೋಹಿ, ಕೈಯಾಂತು ಕೊಂಡವ ಗುರುದ್ರೋಹಿ,
ಕಾಯವ ಕಳೆದು ಕಾಯಪ್ರಸಾದಿ, ಜೀವವ ಕಳೆದು ಜೀವಪ್ರಸಾದಿ,
ಪ್ರಾಣವ ಕಳೆದು ಪ್ರಾಣಪ್ರಸಾದಿ.
ಕಾಯ ಜೀವ ಇಂದ್ರಿಯ ವಿರೋದಿಗಲ್ಲದೆ ಮತ್ತಾರಿಗೂ ಆಗದು.
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ
ಮತ್ತಾರಿಗೂ ಆಗದು. /1017
ಪ್ರಸಾದ ಪ್ರಸಾದವೆಂಬರು ಪ್ರಸಾದದ ಕುಳವೆಂತಿಪ್ಪುದೆಂದರೆ:
ಕೊಟ್ಟವ ಗುರುವಲ್ಲ, ಕೊಂಡವ ಶಿಷ್ಯನಲ್ಲ,
ಅಂಜಿಕೆಯಿಂದ ಕೊಂಡುದು ಎಂಜಲ ಪ್ರಸಾದ,
ಅದೆಂತೆಂದರೆ;
ಈಡಾಪಿಂಗಳನಾಳಮಂ ಕಟ್ಟಿ, ಸುಷುಮ್ನಾನಾಳದಲ್ಲಿ ಇಪ್ಪಪರಿಚಾರಕನು
ಅಗ್ನಿಯೆಂಬ ಸುವ್ವಾರನನೆಬ್ಬಿಸಲು,
ಮಸ್ತಕದಲ್ಲಿ ಇದ್ದ ಉತ್ತಮ ಪ್ರಸಾದ ದಾಳೂದೂಳಿಯೆನುತ್ತ (ದಳದಳನಿಳಿಯುತ್ತ?)
ಮಹಾಘನವೆಂಬ ಪ್ರಸಾದಿಯೆದ್ದು,
ಮುಯ್ಯಾಂತು ಉಂಡು ಭೋಗಿಸ ಬಲ್ಲರೆ ನಿತ್ಯಪ್ರಸಾದಿ.
ಅದಲ್ಲದೆ, ಧನವುಳ್ಳವರ ಕಂಡು ಬೋದಿಸಿ ಬೋದಿಸಿಕೊಂಬ
ಪ್ರಸಾದಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ? /1018
ಪ್ರಸಾದ ಮುಖದಲ್ಲಿ ಕಲ್ಪಿತ
ಲಿಂಗಮುಖದಲ್ಲಿ ಸಂಕಲ್ಪಿತ.
ಜಂಗಮಮುಖದಲ್ಲಿ ಸಂದೇಹಿ
ಗುರುಮುಖದಲ್ಲಿ ಸಮಾಪ್ತಿ.
ಇಂತೀ ಚತುರ್ವಿಧವನೇಕಾರ್ಥವ ಮಾಡಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು./1019
ಪ್ರಸಾದಲಿಂಗಮೋಹಿತನಾದಡೆ ಅಂಗರುಚಿಗೆ ಇಚ್ಛೈಸಲಾಗದು.
ಪ್ರಸಾದಲಿಂಗಭಕ್ತನಾದಡೆ ಪೂರ್ವಾಹಾರವ ಕೈಕೊಳ್ಳಲಾಗದು.
ಪ್ರಸಾದಲಿಂಗಪೂಜಕನಾದಡೆ ಅಪ್ರಸಾದಿಗೆ ಉಣಲಿಕ್ಕಲಾಗದು.
ಪ್ರಸಾದಲಿಂಗವೀರನಾದಡೆ ಅನ್ಯರಿಗೆ ಕೈಯಾನಲಾಗದು.
ಪ್ರಸಾದಲಿಂಗಪ್ರಸಾದಿಯಾದಡೆ ಜೀವಹಿಂಸೆಯ ಮಾಡಲಾಗದು.
ಪ್ರಸಾದಲಿಂಗಪ್ರಾಣಿಯಾದಡೆ ಆತ್ಮನಿಗ್ರಹವ ಮಾಡಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಪ್ರಸಾದಲಿಂಗಭಕ್ತಿ/1020
ಪ್ರಸಾದವನೆ ಬಿತ್ತಿ, ಪ್ರಸಾದವನೆ ಬೆಳೆವ,
ಫಲದ ಪರಿಯ ಬೆಸಗೊಳಲಿಲ್ಲ,
ಫಲದಥರ್ಿಯಲ್ಲ, (ಪದಾರ್ಥ)ಕಾಯ ಪ್ರಸಾದಕ್ಕೆ ಭೇದವಿಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ. /1021
ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡು,
ಓಗರ ಪ್ರಸಾದವೆಂಬ ಸಂಕಲ್ಪ ವಿರಹಿತ ಪ್ರಸಾದಿ.
ಭ್ರಾಂತುಸೂತಕವಳಿದುಳಿದ ಪ್ರಸಾದಿ.
ಕೂಡಲಚೆನ್ನಸಂಗಯ್ಯನಲ್ಲಿ ತಾನೇ ಪ್ರಸಾದಿ/1022
ಪ್ರಸಾದಿಗೆ ಅಗ್ನಿಯೆ ಅಂಗ, ಆ ಅಂಗಕ್ಕೆ ನಿರಹಂಕಾರವೆ ಹಸ್ತ,
ಆ ಹಸ್ತಕ್ಕೆ ಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಇಚ್ಛಾಶಕ್ತಿ,
ಆ ಶಕ್ತಿಗೆ ಶಿವನೆ ಲಿಂಗ, ಆ ಲಿಂಗಕ್ಕೆ ವಿದ್ಯೆಯೆ ಕಳೆ,
ಆ ಕಳೆಗೆ ನೇತ್ರೇಂದ್ರಿಯವೆ ಮುಖ,
ಆ ಮುಖಕ್ಕೆ ಸುರೂಪುದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು, ಅವಧಾನಭಕ್ತಿಯಿಂದರ್ಪಿಸಿ
ಆ ಸುರೂಪಪ್ರಸಾದವನು ಭೋಗಿಸಿ ಸುಖಿಸುತಿಹನು
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ/1023
ಪ್ರಾಣ ಲಿಂಗಕ್ಕೆ ಆಗಿ, ಲಿಂಗ ಪ್ರಾಣಕ್ಕೆ ಆಗಿ,
ಆಚಾರ ಅನುಭಾವ ದ್ವಿವಿಧ ಸನುಮತವಾಗಿ,
ತನು ಪ್ರಸಾದಕ್ಕೆಯಾಗಿ ಪ್ರಸಾದ ತನುವಿಂಗಾಗಿ,
ಶರೀರಪ್ರೇಮದಿಂ ಸರ್ವಾಂಗ (ಲಿಂಗ) ನೋಡಾ.
ಬಂದುದೆ ಓಗರ ನಿಂದುದೆ ಪ್ರಸಾದ.
ಅಲ್ಲಿ ನಿತ್ಯನಿರಂತರ ಸಾವಧಾನಿ
ಕೂಡಲಚೆನ್ನಸಂಗಾ ನಿಮ್ಮ ಶರಣ./1024
ಪ್ರಾಣದಿಂದ ಲಿಂಗ ಹಿಂಗಲಾಗದಯ್ಯಾ,
ಧನದಿಂದ ಜಂಗಮ ಹಿಂಗಲಾಗದಯ್ಯಾ,
ಕಾಯದಿಂದ ಪ್ರಸಾದ ಹಿಂಗಲಾಗದಯ್ಯಾ.
ಈ ತ್ರಿವಿಧವ ತ್ರಿವಿಧದಲ್ಲಿ ನೆಲೆಗೊಳಿಸದಿದ್ದರೆ ಭಕ್ತನಲ್ಲ, ಭವಿ-
ಕೂಡಲಚೆನ್ನಸಂಗಯ್ಯಾ. /1025
ಪ್ರಾಣಲಿಂಗ ಎಂಬಿರಿ, ಪ್ರಾಣವೆಲ್ಲಿರ್ಪುದು ?
ಪ್ರಾಣಲಿಂಗದ ಭೇದವ ಬಲ್ಲಡೆ ನೀವು ಹೇಳಿರೆ.
ಕಾಯಶೂನ್ಯ, ಲಿಂಗ, ಪ್ರಾಣಶೂನ್ಯ, ಶರಣ.
ಕಾಯವಳಿದು ಸಮಾದಿಯೊ ? ಕಾಯವಳಿಯದೆ ಸಮಾದಿಯೊ ?
ಬಲ್ಲಡೆ ನೀವು ಹೇಳಿರೆ.
ಕಾಯ ವಾಯವಾಗದೆ ಸಮಾದಿಯಂತುವ ಬಲ್ಲ,
ಕೂಡಲಚೆನ್ನಸಂಗಯ್ಯನಲ್ಲಿ ನಿಮ್ಮ ಶರಣ ಬಸವಣ್ಣನು. /1026
ಪ್ರಾಣಲಿಂಗ ಓಸರಿಸಿತ್ತು ಓಸರಿಸಿತ್ತು ಎಂಬಿರಯ್ಯಾ
ಪ್ರಾಣಲಿಂಗ ಓಸರಿಸಿದಡೆ ಕಾಯವೇಕೆ ಬೀಳದು ಹೇಳಿರೆ ?
ಪ್ರಾಣಲಿಂಗ ಓಸರಿಸಬಲ್ಲುದೆ ಸರ್ವಭುವನದೊಡೆಯನು ?
ಈ ಪ್ರಾಣಲಿಂಗ ಓಸರಿಸಿದುದೆಂದು ಸಮಾದಿಯ ಹೊಗುವ[ರ]
ಮುಸುಡ ನೋಡಲಾಗದು ಕಾಣಾ
ಕೂಡಲಚೆನ್ನಸಂಗಮದೇವಾ./1027
ಪ್ರಾಣಲಿಂಗ ಪ್ರಸಾದ ಎಲ್ಲಾ ಎಡೆಯಲೂ ಉಂಟು.
ಲಿಂಗಪ್ರಾಣಪ್ರಸಾದವಪೂರ್ವ ನೋಡಯ್ಯಾ.
ಪ್ರಾಣಲಿಂಗಪ್ರಸಾದಿ ದೇಹಧರ್ಮಿ.
ಲಿಂಗಪ್ರಾಣಪ್ರಸಾದಿ ಲಿಂಗಭೋಗೋಪಭೋಗಿ
ಕೂಡಲಚೆನ್ನಸಂಗನಲ್ಲಿ. /1028
ಪ್ರಾಣಲಿಂಗ ಪ್ರಾಣಲಿಂಗವೆಂಬರು, ಪ್ರಾಣಲಿಂಗವೆಂಬುದಾರಿಗುಂಟಯ್ಯಾ ?
ಮೂವರಿಗೆ ಹುಟ್ಟಿದ ಲಿಂಗವು ತನ್ನ ಪ್ರಾಣಲಿಂಗವಾದ ಪರಿಯಿನ್ನೆಂತೊ ?
ವಸುಧೆಗೆ ಹುಟ್ಟಿದ ಲಿಂಗವನು ವಶಕ್ಕೆ ತಂದು,
ತನ್ನ ದೆಸೆಯಲ್ಲಿ ನಿಲಿಸುವ ಪರಿಯಿನ್ನೆಂತೊ ?
ಭೂಮಿಗೆ ಹುಟ್ಟಿ ಶಿಲೆಯಾದ, ಕಲುಕುಟಿಗ ಮುಟ್ಟಿರೂಪಾದ,
ಗುರುಮುಟ್ಟಿ ತೇಜವಾದ.
ಹಿಂದೆ ಮುಟ್ಟಿದವರಿಗೆಲ್ಲ ಪ್ರಾಣಲಿಂಗವಾದ ಪರಿಯಿನ್ನೆಂತೊ ರಿ ?
ತನ್ನ ಪ್ರಾಣ ಮುಂದೆ ಹೋಗಿ ಲಿಂಗ ಹಿಂದುಳಿದಡೆ
ಪ್ರಾಣ ಲಿಂಗವಾದ ಪರಿಯಿನ್ನೆಂತೊ ?
ಹಸಿವು ತೃಷೆ, ವಿಷಯ ನಿದ್ರೆ ಜಾಡ್ಯ,
ಇಂತಿವೆಲ್ಲವನತಿಗಳೆದು ನಿರ್ಮಲದೇಹಿಯಾಗಿ
ಹೃದಯಕಮಲದೊಳು ವಿಮಲವಪ್ಪ ಶ್ರೀಗುರುಮೂರ್ತಿ,
ಪರಂಜ್ಯೋತಿ ಎಂದೆನಿಸುವ ಲಿಂಗವ,
ಮಲಿನವಿಡಿಯದ ಕಾಯದ ಸೆಜ್ಜೆಯೊಳು ದೃಢದೊಳ್ಬಿಜಯಂಗೈಸಿ,
ಸಪ್ತಧಾತು ಅಷ್ಟಮದವಿಲ್ಲದೆ ಜ್ಞಾನದೋಗರವನರ್ಪಿಸಿ,
ಸುಜ್ಞಾನಬುದ್ಧಿಯೊಳು ಪ್ರಸಾದವ ಸ್ವೀಕಾರವ ಮಾಡಿ,
ನಿತ್ಯಸುಖಿಯಾಗಿ ಆಡುತಿಪ್ಪ-
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನೊಬ್ಬನೆ ಪ್ರಾಣಲಿಂಗ ಸಂಬಂದಿ;
ಪ್ರಾಕ್ಶುದ್ಧಿಗಳೆಲ್ಲ ಲಿಂಗಲಾಂಛನಧಾರಿಗಳೆಂದೆನಿಸುವರು/1029
ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ,
ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ,
ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ,
[ಇಂತೀ] ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ. /1030
ಪ್ರಾಣಲಿಂಗದಲ್ಲಿ ಪ್ರವೇಶಿಯಾಗಿ, ಪ್ರಸಾದದಲ್ಲಿ ಸನ್ನಹಿತನಯ್ಯಾ.
ಪ್ರಸಾದದಲ್ಲಿ ಸನ್ನಿಹಿತನಾಗಿ ಪ್ರಾಣಲಿಂಗದಲ್ಲಿ ಪ್ರವೇಶಿಯಯ್ಯಾ.
ಲಿಂಗಾರ್ಪಿತವನಲ್ಲದೆ ಅನರ್ಪಿತವ ಮುಟ್ಟಲೀಯನಯ್ಯಾ.
ಅಂಗಗುಣಂಗಳನೆಲ್ಲವ ಕಳೆದು ಪ್ರಸಾದಬ್ರಹ್ಮಚಾರಿ,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು/1031
ಪ್ರಾಣಲಿಂಗದಲ್ಲಿ ಪ್ರಸಾದಕಾಯವಂತನೆಂತೆಂಬೆ?
ಆರಾಧ್ಯಲಿಂಗದಲ್ಲಿ ಸಮಯಾಚಾರವಂತನೆಂತೆಂಬೆ?
ಆಚಾರವಿಲ್ಲದ ಕಾಯ ಪ್ರಯೋಜನಕ್ಕೆ ಸಲ್ಲದು,
ಸಮಯವಿಲ್ಲದಾಚಾರಕ್ಕೆ ಆಶ್ರಯವಿಲ್ಲ.
ಆಚಾರಸ್ಥಳ ಆರಾಧ್ಯಸ್ಥಳ ಪ್ರಸಾದಸ್ಥಳ ಪ್ರತಿಗ್ರಾಹಕನಾಗಿ,
“ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ’
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣನ ಲಿಂಗದೇವನೆಂಬೆನು. /1032
ಪ್ರಾಣಲಿಂಗವ ಸುಯಿಧಾನವ ಮಾಡು ಮಗನೇ, ಎಂದು
ಶ್ರೀ ಗುರು ಲಿಂಗವ ಕೊಟ್ಟನೇಕಾಂತದಲ್ಲಿ.
ಕೊಟ್ಟ ಲಿಂಗದ ನೇಮವ ಮರೆಯದೆ,
ಪ್ರಾಣಲಿಂಗದ ಪರಿಚಾರವ ಮಾಡುವರಾರೂ ಇಲ್ಲ.
ಅಂಗದಿಂದ ಆ ಪ್ರಾಣಲಿಂಗ ಹಿಂಗಿದರೆ
ಈ ಲಿಂಗವ ಮುಟ್ಟಿ ಪೂಜಿಸುವರೆಲ್ಲ ಭಂಗಿತರಾದರು.
ಅರುಹಿರಿಯರೆಲ್ಲರಿಗೆ ಶರಣಸಂಬಂಧ ಸಾಲದ ಕಾರಣ,
ಎಲೆಯ ಮರೆಯ ಕಾಯಂತೆ
ಮರೆಯ ಮಾಡಿ, ಕುರುಹ ತೋರಿ
ನೆರೆ ಜಗವನಾಳಿಗೊಂಡ ಕೂಡಲಚೆನ್ನಸಂಗಯ್ಯ./1033
ಪ್ರಾಣಲಿಂಗವೆಂದೆಂಬರು, ಪ್ರಾಣನಲ್ಲಿ ಹರಿವ ಪ್ರಕೃತ್ಯಾದಿಗಳಿಗಿನ್ನೆಂತೋ,
ಪ್ರಾಣನ, ಪರಮದಾರೂಢನ ನಿರ್ವಾಣದಲ್ಲಿದ್ದಾತನೆ ಬಲ್ಲ,
ಪ್ರಾಣಲಿಂಗವಾದಾತನ ನಿಲವುಯೆಂತಿದ್ದಹುದೆಂದರೆ:
ನೆಯಿ ಹತ್ತದ ನಾಲಗೆಯಂತೆ, ಕಾಡಿಗೆ ಹತ್ತದಾಲಿಯಂತೆ,
ದೂಳು ತಾಗದ ಗಾಳಿಯಂತೆ, ಜಲ ಹತ್ತದ ಜಲಜದಂತೆ,
ಉಷ್ಣತಾಗದಗ್ನಿಯಂತಿಪ್ಪ, ಕೂಡಲಚೆನ್ನಸಂಗಾ ನಿಮ್ಮ ಶರಣ. /1034
ಪ್ರಾಣಲಿಂಗಸಂಬಂದಿಯಾದ ಬಳಿಕ ತನುಗುಣವಿರಲಾಗದಯ್ಯಾ.
ಕೈ ಸಿಂಹಾಸನವಾದ ಬಳಿಕ ಸಂದಾಗಿರಲಾಗದಯ್ಯಾ.
ಕೂಡಲಚೆನ್ನಸಂಗಯ್ಯಾ, ಈಯನುವನಲ್ಲಮ ತೋರಿದ./1035
ಪ್ರಾಣಲಿಂಗಿಗಳಾದವರು ಪ್ರಸಾದಕಾಯರಪ್ಪರಲ್ಲದೆ ಲಿಂಗಭಾಜನವೆಂತಳವಡುವುದಯ್ಯಾ?
ತನುವಿನಲ್ಲಿ ಪಂಚವಿಂಶತಿ ಗುಣಂಗಳೆಚ್ಚತ್ತಿಪ್ಪನ್ನಕ್ಕ,
ಲಿಂಗಭಾಜನವೆಂತಳವಡುವುದಯ್ಯಾ? ಬಂದುದು ಬಾರದುದೆಂಬ ಸಂದೇಹವುಳ್ಳನ್ನಕ್ಕ,
ಕೊಂಡುದು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ./1036
ಪ್ರಾಣಲಿಂಗಿಗೆ ವಾಯುವೆ ಅಂಗ, ಆ ಅಂಗಕ್ಕೆ ಸುಮನವೆ ಹಸ್ತ,
ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಆದಿಶಕ್ತಿ,
ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿಯೇ ಕಳೆ,
ಆ ಕಳೆಗೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶದ್ರವ್ಯಂಗಳನು
ರೂಪು-ರುಚಿ-ತೃಪ್ತಿಯನರಿದು ಅನುಭಾವಭಕ್ತಿಯಿಂದರ್ಪಿಸಿ,
ಆ ಸುಸ್ಪರ್ಶಪ್ರಸಾದವನು ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ ನಿಮ್ಮ ಪ್ರಾಣಲಿಂಗಿ/1037
ಪ್ರಾಣಲಿಂಗಿಯಾಗಿ ಲಿಂಗವ ನಂಬಿದ.
ನಿಸ್ಸಂಗಿಯ ನಿಲವಿನ ಬೋಧವಾವರಿಸಲೊಡನೆ,
ತನ್ನ ಮರವಹುದು; ಮತ್ತೊಂದಕ್ಕಿಂಬುಗೊಡದು.
ಕೂಡಲಚೆನ್ನಸಂಗನ ಅರಿವು ಅನುಪಮವಾಗಿ
ವ್ಯವಹಾರದೊಳಗಿರಲೀಯದು/1038
ಪ್ರಾಣವಾಯು ನೇತ್ರನಾಳ, ಅಪಾನವಾಯು ಜಿಹ್ವಾನಾಳ,
ವ್ಯಾನವಾಯು ಅಧಮನಾಳ, ಉದಾನವಾಯು ಕಮಲನಾಳ,
ಸಮಾನವಾಯು ಮುಖನಾಳ, ನಾಗವಾಯು ಶ್ರೋತ್ರನಾಳ,
ಕೂರ್ಮವಾಯು ಕಂಠನಾಳ, ಕೃಕರವಾಯು ಚಂದ್ರನಾಳ,
ದೇವದತ್ತವಾಯು ಸೂರ್ಯನಾಳ, ಧನಂಜಯವಾಯು ಬ್ರಹ್ಮನಾಳ,
ಇಂತು ದಶವಾಯುಗಳ ಸ್ಥಾನ.
ಪ್ರಾಣವಾಯು ಹರಿದಲ್ಲಿ ಲಿಂಗಪ್ರಾಣವಂ ಮರೆದು
ತನುಮನಧನವೆ ಪ್ರಾಣವಾಗಿಹ.
ಅಪಾನವಾಯು ಹರಿದಲ್ಲಿ ಲಿಂಗಬಯಕೆಯ ಮರೆದು
ಷಡುರಸಾನ್ನದ ಬಯಕೆಯಾಗಿಹ.
ವ್ಯಾನವಾಯು ಹರಿದಲ್ಲಿ [ಲಿಂಗ] ಧ್ಯಾನವಂ ಮರೆದು
ಚತುರ್ವಿಧಪದವೇದ್ಯವಾಗಿಹ.
ಉದಾನವಾಯು ಹರಿದಲ್ಲಿ ಲಿಂಗಗಮನವ ಬಿಟ್ಟು
ಉದ್ದೇಶ ಗಮನಿಯಾಗಿಹ.
ಸಮಾನವಾಯು ಹರಿದಲ್ಲಿ ಚತುರ್ವಿಧಸಾರವಂ ಮರೆದು
ಕಲ್ಲು ಮರನಾಗಿಹ.
ನಾಗವಾಯು ಹರಿದಲ್ಲಿ ಸುಭಾಷಿತ ಗೋಷ್ಠಿಯಂ ಕೇಳಲೊಲ್ಲದೆ
ಕುಭಾಷಿತ ಕುಚಿತ್ತರ ಶಬ್ದವ ಕೇಳಿಹೆನೆಂಬ.
ಕೂರ್ಮವಾಯು ಹರಿದಲ್ಲಿ ಸುಜ್ಞಾನವಂ ಬಿಟ್ಟು
ಅಜ್ಞಾನ ಸಂಭಾಷಣೆಯಂ ಮಾಡುವ.
ಕೃಕರವಾಯು ಹರಿದಲ್ಲಿ ಸುಗುಣವಂ ಬಿಟ್ಟು
ದುರ್ಗುಣಕ್ಕೆ ಬೀರಿ ಬಡವಾಗುತ್ತಿಹ.
ದೇವದತ್ತವಾಯು ಹರಿದಲ್ಲಿ ಆವ ವಿಚಾರವಂ ಮರೆದು
ಕೋಪದಲುರಿದೇಳುತ್ತಿಹ.
ಧನಂಜಯವಾಯು ಹರಿದಲ್ಲಿ ಅನೇಕಾಯಸದಿಂ
ಗಳಿಸಿದಂಥ ಧನವನು ಲಿಂಗಜಂಗಮಕ್ಕೆ ವೆಚ್ಚಿಸಲೊಲ್ಲದೆ,
ಅನರ್ಥವ ಮಾಡಿ ಕೆಡಿಸಿ ಕಳೆದು ಹೋಯಿತ್ತೆಂದು ಮರುಗುತ್ತಿಹ.
ಇಂತೀ ದಶವಾಯುಗಳ ಭೇದವನರಿದು
ಕೂಡಲಚೆನ್ನಸಂಗಯ್ಯನಲ್ಲಿ ನಿಲಿಸೂದೆ ಯೋಗ. /1039
ಪ್ರಾಣಾದಿ ವಾಯುಗಳ ಕಳೆದು ಭಕ್ತರಾದರೆಮ್ಮವರು, -ಅದೆಂತೆಂದಡೆ:
ಅಲ್ಲಲ್ಲಿರ್ದ ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ
ಭಕ್ತಿಯ ಮಾಡುವ ಪರಿಯ ಹೇಳಿಹೆ ಕೇಳಿರಣ್ಣಾ:
ಪ್ರಾಣವಾಯುವ ನಿಲಿಸಿದರು ಪ್ರಾಣಲಿಂಗದಲ್ಲಿ,
ಅಪಾನವಾಯುವ ನಿಲಿಸಿದರು ಪ್ರಸಾದಲಿಂಗದಲ್ಲಿ,
ವ್ಯಾನವಾಯುವ ನಿಲಿಸಿದರು ಚತುರ್ವಿಧಪದದ ಬಯಕೆಯಳಿದ ಲಿಂಗಧ್ಯಾನದಲ್ಲಿ.
ಉದಾನ ವಾಯುವ ನಿಲಿಸಿದರು ಉದ್ದೇಶದಿಂದ ನಡೆವ ಅನ್ಯಗಮನವ ಕೆಡಿಸಿ
ನಿರ್ಗಮನವೆಂಬ ಸುಚಿತ್ತದಲ್ಲಿ.
ಸಮಾನವಾಯುವ ನಿಲಿಸಿದರು ಸಮ್ಯಗ್ ಜ್ಞಾನದ ಸ್ವಯಂಜ್ಯೋತಿಯ
ಬೆಳಕಿನ ಕಳೆಯಲ್ಲಿ.
ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷ್ಠಿಯ ಸುಜ್ಞಾನದ
ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ.
ಕೂರ್ಮವಾಯುವ ನಿಲಿಸಿದರು,
ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ.
ಕೃಕರ ವಾಯುವ ನಿಲಿಸಿದರು
ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ
ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ.
ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು,
ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ
ನಿಷ್ಠೆಯಿಂದ ಭಾಷೆಯ ನುಡಿದು
ದೃಢವಿಡಿದು ಅನ್ಯವ ಜರಿವಲ್ಲಿ.
ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು
ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ
ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ
ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ,
ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ
ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು,
ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ
ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ !
ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ
ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ
ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು.
ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು.
ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ.
ಆತನ ಪಾದಾಂಗುಷ್ಠಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ
ಒಂದು ಕೋಟಿ ಫಲ ಸರಿಯಲ್ಲ.
ಆತನು ಸತ್ಯವೆಂಬ ವೃಕ್ಷವನೇರಿ, ನಿಷ್ಠೆಯೆಂಬ ಕೊನೆಯ ಹಿಡಿದು
ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ,
ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ;
ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ;
ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ;
ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ,
ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ,
ಉರಿಯುಂಡ ಕರ್ಪುರದಂತೆ !
ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ.
ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ.
ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂದಿಯ ನಿಲವು
ಮಹವ ನುಂಗಿದ ಬಯಲೊ ! /1040
ಪ್ರಾರಬ್ಧ ಪ್ರಯತ್ನಗಳ ತಾರತಮ್ಯವನಿಲ್ಲಿ ಹೇಳಿಹೆ ಕೇಳಿರಯ್ಯಾ:
ಪ್ರಯತ್ನದ ಹೆಚ್ಚು ಕುಂದಿನಂತೆ, ಇಂದಾಗಲಿ ಮುಂದಾಗಲಿ
ಪ್ರಾರಬ್ಧವು ಫಲಪದವನೀವುದಲ್ಲವೆ ?
“ಅತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮಶ್ನುತೇ ಎಂದುದಾಗಿ
ಪಿರಿದಪ್ಪ ಪುಣ್ಯಪಾಪಂಗಳು ಇದೆ ಜನ್ಮದಲ್ಲಿಯೆ
ಫಲವನೀಯದೆ ಮಾಣವು.
ವಿಶ್ವಾಮಿತ್ರನು ಕ್ಷತ್ರಿಯನಾದಡೆಯೂ,
ತನ್ನ ತಪಃಪ್ರಭಾವದಿಂದ ಬ್ರಾಹ್ಮಣನಾಗಲಿಲ್ಲವೆ ?
ಮಾರ್ಕಂಡೇಯನು ಅತ್ಯುತ್ಕಟವಾದ ಶಿವಭಕ್ತಿಯಿಂದ
ಚಿರಂಜೀವಿಯಾಗಲಿಲ್ಲವೆ ?
ರಾವಣ ಕೀಚಕಾದಿಗಳು ಪಾಪಾದಿಕ್ಯದಿಂದ ಹತಭಾಗ್ಯರಾಗಲಿಲ್ಲವೆ ?
ಅದು ಕಾರಣ-ತಾನು ಕೈಕೊಂಡ ಕಜ್ಜದಲ್ಲಿ
ಪ್ರಯತ್ನವೆ ಪ್ರಾರಬ್ಧವಾಗಿ ಫಲವೀವುದರಿಂದ
ಪ್ರಾರಬ್ಧಕ್ಕಿಂತ ಪ್ರಯತ್ನವೇ ಮಿಗಿಲಾಗಿಪ್ಪುದು ಕಾಣಾ,
ಕೂಡಲಚೆನ್ನಸಂಗಮದೇವಾ/1041
ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು,
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು,
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು,
ಶಿಶುಕಂಡ ಕನಸಿನ ಪರಿಯಂತಿದ್ದಿತ್ತು,
ಕೂಡಲಚೆನ್ನಸಂಗಯ್ಯಾ [ನಿಮ್ಮ ನಿಲವು] ಫ
ಸದ್ಗುರುಚಿತ್ತದ ಪದದಂತಿದ್ದಿತ್ತು./1042
ಬಂದ ಸುಖವನತಿಗಳೆಯಲಾಗದು ಶರಣಂಗೆ,
ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು
ಉಂಡು ಉಪವಾಸಿಗಳು, ಬಳಸಿ ಬ್ರಹ್ಮಚಾರಿಗಳು./1043
ಬಟ್ಟಬಯಲೆಲ್ಲ ಗಟ್ಟಿಗೊಂಡಡೆ,
ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ?
ಮೇಘನಿರ್ಮಳಜಲವೆಲ್ಲ ಮುತ್ತಾದಡೆ
ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ?
ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ
ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ ?
`ಗುರುಭಕ್ತಿಂ ಪರಿತ್ಯಜ್ಯ ಸದ್ಯೋಪಿ ನರಕಂ ವ್ರಜೇತ್’-
ಇಂತೆಂದುದಾಗಿ, ಕೂಡಲಚೆನ್ನಸಂಗಯ್ಯಾ
ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ/1044
ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ.
ಆ ಪಟ್ಟಣಕ್ಕೆ ಒಡಲಿಲ್ಲದಾದ ಅರಸು ನೋಡಾ !
ಆ ಅರಸಂಗೆ ಅರುವರು ಅರಸಿಯರು;
ಮೂವರು ಸುರೂಪಿಯರು ಮೂವರು ಕುರೂಪಿಯರು;
ಇವರಿಗೊಬ್ಬರಿಗೊಬ್ಬರಿಗೊಂದೊಂದು ಪರಿಯ ಕೂಟ ನೋಡಾ !
ಐವರ ಕಣ್ಣ ಕಟ್ಟಿ ಒಬ್ಬಳನೆ ನೆನೆದಡೆ
ಪ್ರತಿಯಿಲ್ಲದ ಸುಖವು ಸಯವಾದ ಕಾರಣ
ಕೂಡಲಚೆನ್ನಸಂಗಾ,
ನಿಮ್ಮ ಶರಣ ಪ್ರಭುವಿಂಗೆ ನಮೋ ನಮೋ ಎನುತಿರ್ದೆನು/1045
ಬಟ್ಟಲೊಳಗಣ ಉದಕವ ತೆಗೆದುಕೊಂಡು ಲಿಂಗದ ಮೇಲೆ ನೀಡಿ,
ಜಿಹ್ವೆಯಲ್ಲಿ ಸ್ವೀಕರಿಸಿದಲ್ಲಿಗೆ ಗುರು ಪಾದೋದಕವು.
ಮೊದಲು ನಿರೂಪಿಸಿದ ಗುರುಪಾದೋದಕದಿಂದ ಆವ ಪದವಿಯೆಂದಡೆ:
ಧರೆಯ ಜನನದ ಅಜ್ಞಾನದ ಭವತ್ವವಳಿದು,
ಶಿವಜ್ಞಾನವ ಕರುಣಿಸಿ ಕೊಡುವುದು.
ಲಿಂಗಪಾದೋದಕದಿಂದ ಆವ ಪದವಿಯೆಂದಡೆ:
ಇಹಲೋಕದ ತನುಭೋಗವಪ್ಪ ಪ್ರಾರಬ್ಧಕರ್ಮವಳಿವುದು,
ಶಿವಲೋಕದಲ್ಲಿ `ಇತ್ತಬಾ’ ಎಂದೆನಿಸಿಕೊಂಬ ಮನ್ನಣೆಯ ಪದವಿಯಪ್ಪುದು,
ಆ ಬಟ್ಟಲಲೆತ್ತಿ ಸಲಿಸಿದ ಜಂಗಮಪಾದೋದಕದಿಂದ ಆವ ಪದವಿ ಎಂದಡೆ:
ಇಹಪರಕ್ಕೆ ಎಡೆಯಾಡುವ ಅವಸ್ಥೆಗಳನು,
ಪರತತ್ವವಾದ ಜಂಗಮವನು ಐಕ್ಯಮಾಡಿ ಅರಿವಡಿಸಿಕೊಂಡಿಪ್ಪನು.
ಇಂತು ಗುರುಪಾದೋದಕ, ಲಿಂಗಪಾದೋದಕ,
ಜಂಗಮಪಾದೋದಕ, ತ್ರಿವಿಧ.
ಉಳಿದ ಏಳು ಉದಕದೊಳಗೆ ಸ್ಪರ್ಶನೋದಕ ಅವಧಾನೋದಕ ಇವೆರಡು,
ಆ ಲಿಂಗದ ಮಸ್ತಕದ ಮೇಲೆ ನೀಡಿ,
ಅಂಗುಲಿಗಳ ಜಿಹ್ವೆಯಲ್ಲಿ ಇಟ್ಟುಕೊಂಡಂತಹ ಗುರುಪಾದೋದಕದಲ್ಲಿ ಸಂಬಂಧವು
ಅಪ್ಯಾಯನೋದಕ, ಹಸ್ತೋದಕ ಇವೆರಡು,
ಲಿಂಗವನೆತ್ತಿ ಸಲಿಸಿದಂತಹ ಲಿಂಗಪಾದೋದಕದಲ್ಲಿ ಸಂಬಂಧವು
ಪರಿಣಾಮೋದಕ ನಿರ್ನಾಮೋದಕ ಇವೆರಡು,
ಬಟ್ಟಲೆತ್ತಿ ಸಲಿಸಿದಂತಹ ಜಂಗಮ ಪಾದೋದಕದಲ್ಲಿ ಸಂಬಂಧವು.
ಸತ್ಯೋದಕ ಬಟ್ಟಲ ಖಂಡಿತ ಮಾಡಿದಲ್ಲಿಗೆ ಸಂಬಂಧವು
ಈ ಹತ್ತು ಪಾದೋದಕವು ಮಹತ್ಪಾದದಲ್ಲಿ ಸಂಬಂಧವು
ಧೂಳಪಾದೋದಕ, ದಶವಿಧ ಪಾದೋದಕ ಸಂಬಂಧವು
ಕ್ರಿಯಾಪಾದೋದಕದಲ್ಲಿ ನೋಡಾ ಕೂಡಲಚೆನ್ನಸಂಗಮದೇವಾ/1046
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ.
ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ,
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು,
ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ,
ಈ ಮೂವರ ಪೀಠವಂತಿರಲಿ,
ಆ ಶರಣನನರಿದು ಶರಣೆನುತ್ತಿದ್ದೆನು, ಕೂಡಲಚೆನ್ನಸಂಗಮದೇವಾ. /1047
ಬಯಸಿ ಬಂದುದಂಗ ಭೋಗ, ಬಯಸದೆ ಬಂದುದು ಲಿಂಗಭೋಗ.
ಅಂಗಭೋಗ ಅನರ್ಪಿತ, ಲಿಂಗಭೋಗ ಪ್ರಸಾದ,
[ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯ
ಬೇಕೆಂಬುದು ಅಲ್ಲ ಬೇಡೆಂಬುದು ಅಲ್ಲ
ಈ ಉಭಯವನತಿಗಳೆದು ಭೋಗಿಸಬಲ್ಲಡೆ]
ಕೂಡಲಚೆನ್ನಸಂಗಾ [ನಿಮ್ಮ ಶರಣನೆಂಬೆ] /1048
ಬರಿಯ ಬೋಳುಗಳೆಲ್ಲಾ ಜಂಗಮವೆ ?
ಜಡಜೀವಿಗಳೆಲ್ಲಾ ಜಂಗಮವೆ ?
ವೇಷಧಾರಿಗಳೆಲ್ಲ ಜಂಗಮವೆ ?
ಇನ್ನಾವುದು ಜಂಗಮವೆಂದಡೆ:
ನಿಸ್ಸೀಮನೆ ಜಂಗಮ, ನಿಜೈಕ್ಯನೆ ಜಂಗಮ
ಇಂಥ ಜಂಗಮದ ಸುಳುಹ ಕಾಣದೆ
ಕೂಡಲಚೆನ್ನಸಂಗಮದೇವ ತಾನೆ ಜಂಗಮವಾದ/1049
ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ ? ಅಲ್ಲ.
ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು ?
ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು ?
ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು ?
ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು ?
ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ
ಆತನ ತಲೆಯನರಿಯಲದೇನು ?
ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು ?
ಸಹಸ್ರಾರ್ಜುನ ಬಲ್ಲಿದನೆಂದಡೆ, ತೋಳು ತುಂಡಿಸಲದೇನು ?
ಅಂಬುದಿ ಬಲ್ಲಿತ್ತೆಂದಡೆ, ಅಪೋಶನಕ್ಕೊಳಗಾಗಲದೇನು ?
ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು ?
ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು ?
ಕೃಷ್ಣ ಬಲ್ಲಿದನೆಂದಡೆ, ಬೇಡನ ಅಂಬು ತಾಗಲದೇನು ?
ರವಿ ಶಶಿಗಳು ಬಲ್ಲಿದರೆಂದಡೆ, ರಾಹುಕೇತು ಗ್ರಹಿಸಲದೇನು ?
ಶ್ರೀರಾಮ ಬಲ್ಲಿದನೆಂದಡೆ, ತನ್ನ ಸತಿ ಕೋಳುಹೋಗಲದೇನು ?
ಪಾಂಡವರು ಬಲ್ಲಿದರೆಂದಡೆ ತಮಗೆ ಹಳುವಟ್ಟು ಹೋಗಲದೇನು ?
ಹರಿಶ್ಚಂದ್ರ ಬಲ್ಲಿದನೆಂದಡೆ, ಸ್ಮಶಾನವ ಕಾಯಲದೇನು ?
ಹರನೆ ನೀ ಮಾಡಲಿಕೆ ರುದ್ರರು, ನೀ ಮಾಡಲಿಕೆ ದೇವರ್ಕಳು,
ನೀ ಮಾಡಲಿಕೆ ಬಲ್ಲಿದರು, ನೀ ಮಾಡಲಿಕೆ ವೀರರು, ನೀ ಮಾಡಲಿಕೆ ದಿರರು.
ಅಮೂರ್ತಿ, ಮೂರ್ತಿ, ನಿರಾಕಾರ, ನಿರ್ಮಾಯ-
ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ
ಕೂಡಲಚೆನ್ನಸಂಗಮದೇವಾ/1050
ಬಸವ’ ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ,
ಅಭೇದ್ಯ ಭೇದ್ಯವಾಯಿತ್ತು, ಅಸಾಧ್ಯ ಸಾಧ್ಯವಾಯಿತ್ತು.
ಇಂತು ಬಸವಣ್ಣನಿಂದ ಲೋಕಲಾಕಿಕದ ಕುಭಾಷೆಯ ಕಳೆದು,
ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ/1051
ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ,
ಎಸೆದನಯ್ಯಾ ಆ ಲಿಂಗವನು ಗುರಿಮಾಡಿ.
ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ,
ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ !
ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ ಬಸವಪೂಯದ ಬಂದು ಆರೈದ ಲಿಂಗವನು/1052
ಬಸವ ಮೈದೊಡಿಗೆ, ಸಂಗಯ್ಯ ಮದುವಣಿಗ
ವಸುಧೆಯ ಭಕ್ತರೆಲ್ಲರು ಮದವಳಿಗೆಯರಾಗಿ
ಅಂಗವಿಸಿಂ ಭೋ! ಶುದ್ಧಶಿವಾಚಾರಿಗಳೆಲ್ಲ.
ಕೂಡಲಚೆನ್ನಸಂಗಯ್ಯನು ಒಬ್ಬನೆ ಅಚಳ
ನಾವೆಲ್ಲರೂ ನಿತ್ಯಮುತ್ತೈದೆಯರಾಗಿ. /1053
ಬಸವಣ್ಣ ಮರ್ತ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ,
ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು
ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ.
ಬೆಳಗಿನೊಳು ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ.
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ
ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು/1054
ಬಸವಣ್ಣ ಮಾಡುವ ಮಾಟವನಾರು ಬಲ್ಲರಯ್ಯಾರಿ
ಲಿಂಗವಿಲ್ಲದೆ ಮಾಡಿದನಯ್ಯಾ ಬಸವಣ್ಣನು;
ಜಂಗಮವಿಲ್ಲದೆ ನೀಡಿದನಯ್ಯಾ ಬಸವಣ್ಣನು;
ಪ್ರಸಾದವಿಲ್ಲದೆ ರುಚಿಸಿದನಯ್ಯಾ ಬಸವಣ್ಣನು.
ಈ ಮಹಕ್ಕೆ ಬಂದು ಅನುಭಾವವ ಮಾಡಿ
ಆಡಿದನಯ್ಯಾ ಬಸವಣ್ಣನು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಸಂಗ
ಇಂದಿನಲಿ ಅಗಲಿತ್ತು ಕಾಣಾ
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣಂಗೆ/1055
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು,
ಬಸವಣ್ಣನ ಲಲಾಟದಲ್ಲಿ ವೀರಗಣಂಗಳು,
ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು,
ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು,
ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು,
ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು,
ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು,
ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ,
ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು,
ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು.
ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು,
ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ,
ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ.
ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.-
ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು
ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ
ಕೂಡಲಚೆನ್ನಸಂಗಮದೇವಾ/1056
ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ ಮೇಲೆ ಲಿಂಗವ ಧರಿಸಿ
ಗುರುಲಿಂಗಜಂಗಮವನಾರಾದಿಸಿ, ಅವರೊಕ್ಕುದ ಕೊಂಡು ಮುಕ್ತರಾಗಲರಿಯದೆ,
ಬೇರೆ ಇದಿರಿಟ್ಟು ನಂದಿ ವೀರಭದ್ರ ಮತ್ತೆ ಕೆಲವು ಲಿಂಗಂಗಳೆಂದು ಪೂಜಿಸುವ
ಲಿಂಗದ್ರೋಹಿಯ ಮುಖವ ನೋಡಲಾಗದು. ಅದೇನು ಕಾರಣವೆಂದಡೆ:
ಗಂಡನುಳ್ಳ ಸತಿ ಅನ್ಯಪುರುಷನನಪ್ಪುವಲ್ಲಿ ಪಾಣ್ಬರಪ್ಪರಲ್ಲದೆ ಸತ್ಯರಪ್ಪರೆರಿ
ಅದು ಕಾರಣ – ಲಿಂಗವಂತನ ಕೈಯಲ್ಲಿ ಪೂಜಿಸಿಕೊಂಬ ಅನ್ಯಲಿಂಗಂಗಳೆಲ್ಲವು
ಹಾದರಕ್ಕೆ ಹೊಕ್ಕ ಹೊಲೆಗೆಟ್ಟವಪ್ಪುವಲ್ಲದೆ ಅವು ಲಿಂಗಂಗಳಲ್ಲ.
ತನ್ನ ಲಿಂಗದಲ್ಲಿ ಅವಿಶ್ವಾಸವ ಮಾಡಿ ಅನ್ಯಲಿಂಗಂಗಳ ಭಜಿಸುವಲ್ಲಿ
ಆ ಲಿಂಗವಂತ ಕೆರ್ಪ ಕಚ್ಚಿದ ಶ್ವಾನನಪ್ಪನಲ್ಲದೆ ಭಕ್ತನಲ್ಲ. ಅದೆಂತೆಂದಡೆ:
ಲಿಂಗದೇಹೀ ಶಿವಾತ್ಮಾಚ ಸ್ವಗೃಹಂ ಪ್ರತಿಪೂಜನಾತ್ (ಪೂಜನಂರಿ)
ಉಭಯಂ ಪಾಪಸಂಬಂಧಂ ಶ್ವಾನಶ್ವಪಚಪಾದುಕೈಃ – ಎಂದುದಾಗಿ
ಇದುಕಾರಣ, ಈ ಉಭಯವನು ಕೂಡಲಚೆನ್ನಸಂಗಯ್ಯ ಛಿದ್ರಿಸಿ
ಚಿನಿಖಂಡವನಾಯ್ದು ದಿಗ್ಬಲಿ ಕೊಟ್ಟುಅಘೋರ ನರಕದಲ್ಲಿಕ್ಕುವನು/1057
ಬಸವಣ್ಣಾ ಓಂಕಾರದಿಂದತ್ತತ್ತ ನೀನೆ;
ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,
ಬಸವಣ್ಣಾ ಪ್ರಥಮಾಚಾರ್ಯ ನೀನೆ,
ಬಸವಣ್ಣಾ ಲಿಂಗಾಚಾರ್ಯ ನೀನೆ,
ಬಸವಣ್ಣಾ ಜಂಗಮಾಚಾರ್ಯ ನೀನೆ,
ಬಸವಣ್ಣಾ ಪ್ರಸಾದಾಚಾರ್ಯ ನೀನೆ,
ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ,
ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ
ಕೂಡಲಚೆನ್ನಸಂಗಮದೇವಾ
ಆವ ವರ್ಣವಿಲ್ಲದಂದು `ಓಂ ನಮಃ ಶಿವಾಯ’ ಎನುತಿರ್ದೆನು. /1058
ಬಸವೇಶ್ವರದೇವರು ತೃಣಪುರುಷನ ಮಾಡಿ
`ಮೀಮಾಂಸಕಂಗೆ ಉತ್ತರವ ಕೊಡು ಹೋಗು’ ಎನಲು
ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು,
ಮೀಮಾಂಸಕಂಗೆ ಉತ್ತರವ ಕೊಟ್ಟು
ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು
ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು
ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ
ಷಟ್ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು
`ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಟ್ಟುಕೊಳಬಹುದೆರಿÙರ ಎಂದು ಕೇಳಲು,
ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು
ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು
“ ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಡಬಹುದೆರಿ’ ಎನಲು
`ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ
ಅದು ಕಾರಣ ಜಂಗಮವೆ ಅದಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ
ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ
ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ
ನರಕಜೀವಿಯಾಗಿರುÙರÙರ ಎಂದುದೆ ಸಾಕ್ಷಿ.
ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು.
ಅದೆಂತೆಂದಡೆ:ವೀರಾಗಮದಲ್ಲಿ,
ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ
ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ
ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ
ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ
ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ
ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ
ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ,
ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು.
ಇಂತಪ್ಪ ಷಟ್ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ.
ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ
ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ
ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ
ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ
ಕೂಡಲಚೆನ್ನಸಂಗಮದೇವಾ. /1059
ಬಹಿರಂಗದ ಆರೋಗಣೆಯ ರುಚಿ ಅರಿಯಬಾರದು,
ಏನು ಕಾರಣವೋ ಲಿಂಗಯ್ಯ ?
ಅಂತರಂಗದ ಆರೋಗಣೆಯ ಮಹಂತನೇ ಬಲ್ಲನೊ ಲಿಂಗಯ್ಯ.
ಅರಿದು ಮರೆದಂಗೆ ವಿರೋಧವೆ ?
ಸಜ್ಜಕ್ಕೆ (ಸಜ್ಜನಕ್ಕೆ?) ಉಪಚಾರವುಂಟೆ ಲಿಂಗಯ್ಯ ?
ಅಲ್ಲಿ ಸೋಂಕಿದ ಬಳಿಕ ನೋಡಲಿಲ್ಲ, ಕೂಡಲಚೆನ್ನಸಂಗಯ್ಯನ./1060
ಬಾಗಿಲ ಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒಡೆತನವುಂಟೆ ಅಯ್ಯಾ ?
ಸೂತ್ರದ ಬೊಂಬೆಗೆ ಪ್ರಾಣವುಂಟೆ ಆಡಿಸುವ ಜಾತಿ ಉತ್ತಮಂಗಲ್ಲದೆ ?
ಎನ್ನ ಭಾವಕ್ಕೆ ಮನೋಮೂರ್ತಿಯಾಗಿ, ಕೂಡಲಚೆನ್ನಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಅಗಮ್ಯವಾಗಿತ್ತು./1061
ಬಾಯಿಗೆ ಬಂದಂತೆ ಬಗುಳಾಟ,
ಹಸಿದಾಗ ಲಿಂಗಕ್ಕೆ ಸಿತಾಪತ್ರೆಯಂ ಕೊಟ್ಟು,
ವಿಭೂತಿಯನಿಟ್ಟು, ರುದ್ರಾಕ್ಷಿಯ ತೊಟ್ಟು,
ಕಂಥೆ ಬೊಂತೆಯ ಧರಿಸಿ ಪರನಿಂದೆಯಂ ಮಾಡಿ,
ರುದ್ರನ ಮನೆಯ ಛತ್ರದಲುಂಡುಂಡು ಕೆಡೆವಾತನು
ವೇಶಿಯ ಪುತ್ರ ಕಾಣಾ ಕೂಡಲಚೆನ್ನಸಂಗಮದೇವಾ/1062
ಬಿಂದುಮಧ್ಯಗತೋ ನಾದಃ ನಾದಮಧ್ಯಗತಾ ಕಲಾ
ಕಲಾಮಧ್ಯಗತಂ ಶೂನ್ಯಂ ಶೂನ್ಯಮಧ್ಯಗತಃ ಶಿವಃ
ಪರಾತ್ಪರಂ ಪರಂ ನಾಸ್ತಿ ಪರಮಿಚ್ಛಂತಿ [ಯೋಗಿನಃ]
ಕೂಡಲಚೆನ್ನಸಂಗಯ್ಯ. /1063
ಬಿತ್ತಿದ ಬೀಜದ ಫಲವು ವಿಪರೀತ ನೋಡಾ!
ತನ್ನಲ್ಲಿ ತಾನೆಯಾಗಿ ಆಗಮವನರಿಯದು,
ತಾನೆ ಸ್ವಯಂಕೃತ ಸಹಜ.
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು. /1064
ಬಿನ್ನದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರವಯ್ಯಾ
ನಂಬಿಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು.
ಕೊಟ್ಟು ಕೊಂಡು ನೀಡಿ ಮಾಡಿ, ಹಮ್ಮು ನುಡಿವ
ಭಕ್ತನ ಮನೆಯ ಆರೋಗಣೆ ಕಾರದ ಕೂಳು
ನಿಮ್ಮ ನಂಬಿದ ಸದ್ಭಕ್ತರ ಮನೆಯ ಆರೋಗಣೆ ಲಿಂಗಾರ್ಪಿತವಯ್ಯಾ.
ಅದೆಂತೆಂದಡೆ:
ಸದಾಚಾರ ಶಿವಾಚಾರ ಲಿಂಗಾಚಾರ ಗಣಾಚಾರ ಭೃತ್ಯಾಚಾರ
ಸತ್ಕಾಯಕದಿಂದ ಬಂದುದಾಗಿ ಭಕ್ತಿಪದಾರ್ಥವಯ್ಯಾ
ಕೂಡಲಚೆನ್ನಸಂಗಮದೇವಾ/1065
ಬಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ
ಕಣ್ಣಾಲಿ ಉರೆ ನಟ್ಟು ಹೊರ ಸೂಸದೆ
(ಕ)ಣ್ಣ ಬಣ್ಣವ ಕಳೆದು, ಉಣ್ಣನು ಉಣ್ಣದೆ ಇರನು,
ತನ್ನ ನಿಲವನರಿತು ತಾನೊಬ್ಬನೆ ಇರನು.
ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ, ತನ್ನ ಪ್ರಾಣ ತನಗೆ ಪ್ರಕಾಶವು.
ತನ್ನೊಳಗೆ ಹೊಣೆ ಹೊಕ್ಕು, ಕುಂಬಳದ ಸೂಚಿಯ ಸುಮ್ಮಾನಿ
ಶರಣನ ನಿಲವ ನೋಡಾ !
ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ,-ಎರಡಳಿದ ನಿಲವು.
ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ.
ಹೊರಳಲರಿಯನು ಕೊಳಚಿಯ ಉದಕದೊಳಗೆ.
ಕಳಾಕಳಾ ಭೇದದಿಂದ ತೊಳತೊಳಗುವನು.
ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ
ಕೂಡಲಚೆನ್ನಸಂಗಯ್ಯನೊಳಗೆ
ಶರಣಕಾಂತಿಯ ನಿಲವಿಂಗೆ ಶರಣು ಶರಣು !/1066
ಬೀಜದಿಂದಾಯಿತ್ತು ಅಂಕುರವೆಂದೆಂಬರು,
ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು.
ಲಿಂಗದಿಂದಾಯಿತ್ತು ಜಂಗಮವೆಂದೆಂಬರು
ಆ ಲಿಂಗಕ್ಕೆ ಜಂಗಮವೆ ಪ್ರಾಣವೆಂದರಿಯರು, ಕಾಣಾ
ಕೂಡಲಚೆನ್ನಸಂಗಮದೇವಾ/1067
ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು,
ಬಸವಗಳಪ್ಪುವೆ, ಲಿಂಗಮುದ್ರೆಯನೊತ್ತದನ್ನಕ್ಕ?
ಭಕ್ತಂಗೆ ಭಕ್ತೆಗೆ ಹುಟ್ಟಿದರೆಂದರೆ
ಬರಿಯ ಗುರುಕಾರುಣ್ಯದಲ್ಲಿ ಭಕ್ತರಪ್ಪರೆ, ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ?
ಅವರನೊಳಗಿಟ್ಟುಕೊಂಡು ನಡೆದರೆ
ಭಕ್ತಿಹೀನರೆನಿಸಿತ್ತು, ಕೂಡಲಚೆನ್ನಸಂಗನ ವಚನ. /1068
ಬೆನ್ನಲ್ಲಿ ಬಸವಣ್ಣನ ತೆಗೆದ, ಹೊಟ್ಟೆಯಲ್ಲಿ ಎನ್ನ ತೆಗೆದ,
ಬ್ರಹ್ಮರಂಧ್ರದಲ್ಲಿ ಅಲ್ಲಮನ ತೆಗೆದ,
ಸಂಗನೆ ಮಡಿವಾಳನೊ, ಮಡಿವಾಳನೆ ಸಂಗನೊ,
ಎಂದು ನುಡೆಯಲಮ್ಮೆನು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಮಡಿವಾಳಸಾಹಿತ್ಯ ನಮ್ಮ ಬಸವಣ್ಣಂಗೆ./1069
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ
ಕತ್ತುರಿಯ ಲೇಪನವಿತ್ತಡೇನು, ನೀರುಳ್ಳೆಯ ದುರ್ಗಂಧ ದೂರಪ್ಪುದೆ ?
ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ ?
ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು,
ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲಚೆನ್ನಸಂಗಮದೇವಾ
ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ ?/1070
ಬೇಕು ಬೇಡೆನ್ನದ ಪ್ರಸಾದಿಯ ಕಾಯ, ಲಿಂಗಾರ್ಪಿತ,
ಆ ಅರ್ಪಿತವೆ ಪ್ರಸಾದ, ಅದೆ ಮತ್ತೆ ಮತ್ತೆ ಅರ್ಪಿತ,
ದರ್ಶನದಿಂದಾಯಿತ್ತು, ಸ್ಪರ್ಶನದಿಂದಾಯಿತ್ತು.
ಅರ್ಪಿಸಿ, ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು.
ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ
ಮುಂದೆ ಅದಕ್ಕೆಂತೊ ?/1071
ಬೇಕೆಂಬುದು ಕಾಯಗುಣ, ಬೇಡೆಂಬುದು ವೈರಾಗ್ಯಗುಣ.
ಬೇಕೆಂಬುದು ಇನಿತಿಲ್ಲ; ಬೇಡೆಂಬುದು ಇನಿತಿಲ್ಲ.
ಈ ಉಭಯವ ಅತಿಗಳೆದು ಭೋಗಿಸಬಲ್ಲಡೆ
ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣನೆಂಬೆ/1072
ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ,
ಲಿಂಗವಶದಿಂದ ಬಂದುದ ಪರಿಕರಿಸದಿರ್ದಡೆ
ಮಹಾಘನವು ಅವಗವಿಸದು ನೋಡಾ.
ಅದೆಂತೆಂದಡೆ:
ಅವ್ರತೋ ಸುವ್ರತಶ್ಚೈವ ವೇಶ್ಯಾ ದಿವ್ಯಾನ್ನಭೂಷಣಂ
ಅಕಲ್ಪಿತಂ ಚ ಭೋಗಾನಾಂ ಸರ್ವಂ ಲಿಂಗಸ್ಯ ಪ್ರೇರಣಂ ಎಂದುದಾಗಿ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರ
ಪರದ್ವಾರಿಗಳೆಂದು ನುಡಿದವರಿಗೆ ನಾಯಕನರಕವಯ್ಯಾ/1073
ಬೇಡವೊ ಇಲಿಚಯ್ಯಾ !
ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ,
ಇಂದು ಬಂದು ನಮ್ಮ ವಸ್ತ್ರವ ಕಡಿದೆ.
ಬೇಡವೋ ಇಲಿಚಯ್ಯಾ !
ನಿನಗಂಜರು ನಿನ್ನ ಗಣಪತಿಗಂಜರು;
ಕೂಡಲಚೆನ್ನಸಂಗನ ಶರಣರು ಕಂಡಡೆ,
ನಿನ್ನ ಹಲ್ಲ ಕಳೆವರು, ಹಂ(ದಂ?)ತವ ಮುರಿವರು/1074
ಬೇಡಿ ಮಾಡೂದಂಗಭೋಗ, ಬೇಡದೆ ಮಾಡೂದು ಲಿಂಗಭೋಗ.
ಬೇಡುವನೆ ಜಂಗಮ ? ಬೇಡಿಸಿಕೊಂಬನೆ ಭಕ್ತ ?
ಕೂಡಲಚೆನ್ನಸಂಗಯ್ಯಾ ಮಾಟದಿಂದ ಕೂಟಕ್ಕಿಂಬಾಯಿತ್ತು. /1075
ಬೇಡುವನೆ ಲಿಂಗಜಂಗಮ ? ಬೇಡಿಸಿಕೊಂಡು ಮಾಡುವಾತ ಭಕ್ತನೆ ?
ಬೇಡಲಾಗದು ಲಿಂಗಜಂಗಮಕ್ಕೆ,
ಬೇಡಿಸಿಕೊಂಡು ಮಾಡಲಾಗದು ಭಕ್ತಂಗೆ,
ಹಿರಿಯರು ನರಮಾಂಸವ ಭುಂಜಿಸುವರೆ
ಕೂಡಲಚೆನ್ನಸಂಗಮದೇವಾ ? /1076
ಬೇಡುವಾತ ಕರ್ತನಲ್ಲ, ಮಾಡುವಾತ ಭಕ್ತನಲ್ಲ.
ಬೇಡಬೇಕು ನೋಯದಂತೆ, ಮಾಡಬೇಕು ಮರುಗದಂತೆ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಈ ಉಭಯದ ನೋವು ಲಿಂಗದ್ರೋಹ/1077
ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ,
ಬೇಡದೆ ಆ ಭಕ್ತ ಮಾಡಿದ ಮಾಟವ ಪರಿಣಾಮಿಸಬಲ್ಲಡೆ ಜಂಗಮ.
ಬೇಡಿಸಿಕೊಳ್ಳದೆ ಆ ಜಂಗಮ ಇಂಗಿತವನರಿದು
ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೆ ಪರಮಭಕ್ತ.
ಆ ಭಕ್ತ ನನ್ನದು ನಾನೆಂದು ನುಡಿದಡೆ
ನಾಯ ಮಾಂಸ, ಸತ್ತ ಹೆಣನ ಮಲವು !
ಇದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ
ಬೇಡದೆ ಮಾಡಿಸಿಕೊಂಬುವ ಜಂಗಮಪೂರ್ವವಯ್ಯಾ./1078
ಬೊಬ್ಬೆಯ ಬಾಯಿ, ಬಾಚದ ಮಂಡೆ, ಮೀರಿದ ಶರಣಂಗಲ್ಲದೆ ಇಲ್ಲ.
ಓಡಿನ ಊಟ, ಕಾಡಿನಲ್ಲಿ ಇಕ್ಕೆ, ಮೀರಿದ ಶರಣಂಗಲ್ಲದೆ ಇಲ್ಲ.
ವಿರಕ್ತೋ ವಾಥ ಯುಕ್ತೋ ವಾ ಸಸ್ತ್ರ್ಯಾದಿವಿಷಯೇಷ್ವಪಿ
ಪಾಪೈನರ್ೈವ ಪ್ರಲಿಪ್ಯೇತ ಪದ್ಮಪತ್ರಮಿವಾಂಭಸಾ ಎಂದುದಾಗಿ,
ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣರು ಮಲೆಯೊಳಗಿರ್ದಡೇನು ? ಮೊಲೆಯೊಳಗಿರ್ದಡೇನು ?/1079
ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು
ರುದ್ರನವತರಿಸದಂದು, ಈರೇಳುಭುವನ ನೆಲೆಗೊಳ್ಳದಂದು
ಸಪ್ತಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು,
ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು
ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ?
ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ
ಹಮ್ಮಿಲ್ಲದಿರ್ದನಂದು !/1080
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ ?
ವಿಷ್ಣು ನಿಮ್ಮ ಬಲ್ಲಡೆ ಭುಜವ ಸುಡಿಸಿಕೊಂಬನೆ ?
ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ ?
ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ ?
ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಅಶ್ವಯಾಗವ ಮಾಡಿ ಕುದುರೆಯ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ?
ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಮಹಿಷಹೋಮವ ಮಾಡಿ ಕೋಣನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ?
ಕಲಿಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಅಜಯಾಗವ ಮಾಡಿ ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ ?
ಬ್ರಾಹ್ಮಣನೆ ದೈವವೆಂದಾರಾದಿಸಿ ಗಾತಮ ಗೋಹಂತೃವಾದುದಿಲ್ಲವೆ ?
ಬ್ರಾಹ್ಮಣನೆ ದೈವವೆಂದಾರಾದಿಸಿ ಪಂಚಪಾಂಡವರು ದೇಶಭ್ರಷ್ಟರಾಗರೆ ?
ಬ್ರಾಹ್ಮಣನೆ ದೈವವೆಂದಾರಾದಿಸಿ ಹರಿಶ್ಚಂದ್ರ ಚಂಡಾಲಗೆ ಮಾರಿಸಿಕೊಳ್ಳನೆ ?
ಬ್ರಾಹ್ಮಣನೆ ದೈವವೆಂದಾರಾದಿಸಿ ಬಲಿಚಕ್ರವರ್ತಿ ಬಂಧನಕ್ಕೊಳಗಾಗನೆ ?
ಬ್ರಾಹ್ಮಣನೆ ದೈವವೆಂದಾರಾದಿಸಿ ಮುಕ್ತಿಗೆ ಸಂದವರಿಲ್ಲ.
ಬಲ್ಲಡೆ ನೀವು ಹೇಳಿರೊ, ಅರಿಯದಿದ್ದರೆ ನೀವು ಕೇಳಿರೊ:
ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ;
ಬಾಹೂರ ಬೊಮ್ಮಯ್ಯಗಳು ಕಲ್ಲ ನಂದಿಗೆ ಕಬ್ಬು ಮೇಯಿಸಿದ್ದಲ್ಲವೆ ?
ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಗೊಬ್ಬೂರ ಬಿಬ್ಬಿಬಾಚಯ್ಯಗಳು ಪ್ರಸಾದದಿಂದ ಗೊಬ್ಬೂರ ಸುಟ್ಟುದಿಲ್ಲವೆ ?
ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ
ಕೊಟ್ಟಣವ ಕುಟ್ಟಿಸಲಿಲ್ಲವೆ ?
ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಹಾವಿನಹಾಳ ಕಲ್ಲಯ್ಯಗಳು ಶ್ವಾನನ ಬಾಯಿಂದ ವೇದವನೋದಿಸಲಿಲ್ಲವೆ ?
ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಸಿಂಧುಬಲ್ಲಾಳ ಸ್ವಯಲಿಂಗಿಯಾಗಲಿಲ್ಲವೆ ?
ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಸಿರಿಯಾಳಸೆಟ್ಟಿ ಕಂಚಿಪುರವ ಕೈಲಾಸಕ್ಕೆ ಕೊಂಡೊಯ್ಯಲಿಲ್ಲವೆ ?
ಅಯ್ಯಾ ನಮ್ಮ ಜಂಗಮಲಿಂಗವ ದೈವವೆಂದಾರಾದಿಸಿ
ಮುಂದೆ ನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ
ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ
ಅಂಗುಳವ ಮೆಟ್ಟಿಕ್ಕುವನೆಂದ ಕೂಡಲಚೆನ್ನಸಂಗಮದೇವ/1081
ಬ್ರಹ್ಮಣಿ ಚರತಿ ಬ್ರಾಹ್ಮಣಃ ಎಂದೆಂಬಲ್ಲಿ ಬ್ರಹ್ಮವೆಂದೆಂಬುದು
ಎಮ್ಮ ಶಿವಲಿಂಗ ಕಾಣಿರೋ.
`ಓಂ ತಸ್ಯ ತೃತೀಯಂ ಜನ್ಮೇತಿ’ ಎಂಬುದಾಗಿ ವಿಪ್ರ ದ್ವಿಜನಲ್ಲ.
`ದ್ವಿಜಸ್ತಸ್ಮೈ ಸಮಪ್ರ್ಯತೇ ಶೈವಮಂತ್ರಂ ಪ್ರಶಸ್ತಂ’ ಎಂಬುದಾಗಿ ವಿಪ್ರ ದ್ವಿಜನಲ್ಲ.
ತತ್ಸರ್ವೆ ಯೇ ನಿಜಾಃ ಪ್ರಾಣಾಃ ಜಂತೂನಾಂ ಸಮಜಂತುಷು
ದ್ವಿತೀಯೇ ಮಂತ್ರತಾ ಶೈವೇದ್ವಿತೀಯ ಇತ್ಯುಚ್ಯತೇ ಬುಧೈಃ
ಎಂಬುದಾಗಿ ವಿಪ್ರ ದ್ವಿಜನಲ್ಲ.
ಇದು ಕಾರಣ ಕೂಡಲಚೆನ್ನಸಂಗನ ಶರಣರೇ ವಿಪ್ರೋತ್ತಮರು. /1082
ಬ್ರಹ್ಮನನಾರಾದಿಸಿ ನಿರ್ಮೂಲವಾದರಯ್ಯ
ವಿಷ್ಣುವನಾರಾದಿಸಿ ಭವಭವಕ್ಕೆ ಬಂದರಯ್ಯ
ಭೈರವನನಾರಾದಿಸಿ ಬಾಹಿರವೋದರಯ್ಯಾ,
ಮೈಲಾರನನಾರಾದಿಸಿ ಕುರುಳು ಬೆರಳ ಕಡಿಸಿಕೊಂಡು ನಾಯಾಗಿ ಬಗಳುತಿಪ್ಪರು,
ಜಿನನನಾರಾದಿಸಿ ಲಜ್ಜೆದೊರೆದರು ನೋಡಾ,
ನಮ್ಮ ಕೂಡಲಚೆನ್ನಸಂಗಯ್ಯನನಾರಾದಿಸಿ ದೇವಾ,
ಭಕ್ತಯೆಂದೆನಿಸಿಕೊಂಬರು ನೋಡಯ್ಯಾ. /1083
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು
ಸೃಷ್ಟ್ಯಸೃಷ್ಟಿಯಿಲ್ಲದಂದು, ಕಾಳಿಂಗ ಕರೆಕಂಠರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು,
ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರನಿಲ್ಲದಂದು
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು
ದೇಹಾಹಂಕಾರ ಪ್ರಕೃತಿಯಿಲ್ಲದಂದು,
ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು/1084
ಬ್ರಹ್ಮೋಪದೇಶವಾಯಿತ್ತೆಂದು ಬ್ರಹ್ಮದೊಡನೆ ದಿಕ್ಕಾರ ಬೇಡ.
ಶಿವಜ್ಞಾನದೀಪ್ತಿ ತೋರಿತ್ತೆಂದು ಶಿವಶರಣರೊಡನೆ ದಿಕ್ಕರಿಸಬೇಡ.
ಕಾಲಜ್ಞಾನವಾಯಿತ್ತೆಂದು ಕರ್ಮವ ಹಳಿಯಬೇಡ.
ಈ ತ್ರಿವಿಧೋತ್ಪಾತ ಸಲ್ಲದು.
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
ಇವರೆಲ್ಲರೂ ಸಜ್ಜನ ಶುದ್ಧ ಶಿವಾಚಾರಕ್ಕೆಸಲ್ಲರು. /1085
ಬ್ರಾಹ್ಮಣ ಭಕ್ತನಾದರೇನಯ್ಯಾ ? ಸೂತಕಪಾತಕಂಗಳ ಬಿಡ.
ಕ್ಷತ್ರಿಯ ಭಕ್ತನಾದರೇನಯ್ಯಾ ? ಕ್ರೋಧವ ಬಿಡ.
ವೈಶ್ಯ ಭಕ್ತನಾದರೇನಯ್ಯಾ ? ಕಪಟವ ಬಿಡ.
ಶೂದ್ರ ಭಕ್ತನಾದರೇನಯ್ಯಾ ? ಸ್ವಜಾತಿಯೆಂಬುದ ಬಿಡ.
ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?/1086
ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ,
ವೈಶ್ಯದೇಹಿಕನಲ್ಲ, ಶೂದ್ರದೇಹಿಕನಲ್ಲ,
ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು.
ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು.
ಲೈಂಗ್ಯಪುರಾಣೇಃ
`ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವೀ
ಲಿಂಗಾರ್ಚಕಶ್ಚ ಶ್ವಪಚೋ ದ್ವಿಜಕೋಟಿವಿಶೇಷಿತಃ -ಎಂದುದಾಗಿ,
ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ
ಆತನೆ ಸದ್ಬ್ರಾಹ್ಮಣ.
ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದುಕೋಟಿಯಾದಡೆಯೂ
ಶ್ವಪಚರಿಂದ ಕರಕಷ್ಟ ನೋಡಾ, ಕೂಡಲಚೆನ್ನಸಂಗಮದೇವಾ./1087
ಭಕ್ತ ಜಂಗಮಕ್ಕೆ, ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ,
ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ
ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ
ಪರಸತಿ ಪರಧನ ಪರದೈವ ಭವಿಸಂಗ-ಇಷ್ಟುಳ್ಳನ್ನಕ್ಕ,
ಅವನು ನಾಯಡಗು ನರಮಾಂಸ ಕ್ರಿಮಿಮಲ ಭುಂಜಕನು
ಸುರಾಪಾನಸೇವಕನಪ್ಪನಲ್ಲದೆ, ಭಕ್ತನಲ್ಲ, ಜಂಗಮನಲ್ಲ, ಅದೆಂತೆಂದಡೆ:
ಅಕ್ಷದೂತವಿನೋದಶ್ಚ ನೃತ್ಯಗೀತೇಷು ಮೋಹನಂ
ಅಪಶಬ್ದಪ್ರಯೋಗಶ್ಚ ಜ್ಞಾನಹೀನಸ್ಯಕಾರಣಂ
ತಸ್ಕರಂ ಪಾರದಾರಂಚ ಅನ್ಯದೈವಮುಪಾಸಕಂ
ಅನೃತಂ ನಿಂದಕಶ್ಚೈವ ತಸ್ತ್ಯತೇ ಸ್ಯುಶ್ಚಾಂಡಲವಂಶಜಾಃ ಎಂದುದಾಗಿ
ಈತನು ಗುಣಾವಗುಣವನೊಡಗೂಡಿಕೊಂಡು ನಡೆದಡೆ
ಭಕ್ತ ಜಂಗಮನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ/1088
ಭಕ್ತ ಜಂಗಮದ ನುಡಿಗಡಣದ ಮೇಳಾಪವೆಂತಿರಬೇಕೆಂದರೆ:
ಪ್ರಚ್ಛನ್ನವಾಗಿ ಲೋಕಕ್ಕೆ ಅದೃಶ್ಯವಾಗಿರಬೇಕು,
ಜಲಚರನ ಪಾದಪಥದಂತಿರಬೇಕು,
ಶಿಶುಕಂಡ ಕನಸಿನಂತಿರಬೇಕು,
ಮೌನಿಯುಂಡ ರುಚಿಯಂತಿರಬೇಕು, ಶಿವಾಚಾರಕ್ಕೆ ಇದು ಚಿಹ್ನ.
ಅಂತಲ್ಲದೆ ಹಗರಣದ ವಾದ್ಯದಂತೆ ನಗೆಗೆಡೆಯಾಗಿರುತಿಪ್ಪರು.
ಹೇಮದೊರೆಯ ಮೃತ್ತಿಕೆಯಲೆತ್ತಿದಂತೆ,
ಭೇರುಂಡ ಬಾಯಿವಡೆದಿಪ್ಪವರ ಭಕ್ತರೆಂತೆಂಬೆ ? ಜಂಗಮವೆಂತೆಂಬೆ ?
ಕೂಡಲಚೆನ್ನಸಂಗಮದೇವಾ. /1089
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ?
ಅದು ಉಪಮಾತೀತ !
ಭಕ್ತನೊಳಗೆ ಜಂಗಮವಡಗಿದಡೆ
ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ.
ಜಂಗಮದೊಳಗೆ ಭಕ್ತನಡಗಿದಡೆ,
ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ,
ಅರಿವರತು ಮರಹು ನಷ್ಟವಾಗಿ,
ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ.
ಈ ಉಭಯಭಾವಸಂಗದ ಪರಿಣಾಮವ ಕಂಡು
ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು/1090
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ಎಂದಿಂತು ಷಟ್ಸ್ಥಲವಾರು:
ಭಕ್ತ ಮಹೇಶ ಈ ಎರಡು ಗುರುಸ್ಥಲ;
ಪ್ರಸಾದಿ ಪ್ರಾಣಲಿಂಗಿ ಈ ಎರಡು ಲಿಂಗಸ್ಥಲ;
ಶರಣ ಐಕ್ಯ ಈ ಎರಡು ಜಂಗಮಸ್ಥಲ.
ಇವಕ್ಕೆ ಅಂಗಂಗಳಾವವೆಂದಡೆ:
ಭಕ್ತಂಗೆ ಪೃಥ್ವಿಯೆ ಅಂಗ, ಮಹೇಶ್ವರಂಗೆ ಅಪ್ಪುವೆ ಅಂಗ,
ಪ್ರಸಾದಿಗೆ ಅಗ್ನಿಯೆ ಅಂಗ, ಪ್ರಾಣಲಿಂಗಿಗೆ ವಾಯುವೆ ಅಂಗ,
ಶರಣಂಗೆ ಆಕಾಶವೆ ಅಂಗ, ಐಕ್ಯಂಗೆ ಆತ್ಮವೆ ಅಂಗ.
ಈ ಅಂಗಂಗಳಿಗೆ ಹಸ್ತಂಗಳಾವವೆಂದಡೆ:
ಭಕ್ತಂಗೆ ಸುಚಿತ್ತವೆ ಹಸ್ತ, ಮಹೇಶ್ವರಂಗೆ ಸುಬುದ್ಧಿಯೆ ಹಸ್ತ,
ಪ್ರಸಾದಿಗೆ ನಿರಹಂಕಾರವೆ ಹಸ್ತ, ಪ್ರಾಣಲಿಂಗಿಗೆ ಸುಮನವೆ ಹಸ್ತ,
ಶರಣಂಗೆ ಸುಜ್ಞಾನವೆ ಹಸ್ತ, ಐಕ್ಯಂಗೆ ಸದ್ಭಾವವೆ ಹಸ್ತ.
ಈ ಹಸ್ತಂಗಳಿಗೆ ಲಿಂಗಂಗಳಾವವೆಂದಡೆ:
ಸುಚಿತ್ತಹಸ್ತಕ್ಕೆ ಆಚಾರಲಿಂಗ ಸುಬುದ್ಧಿಹಸ್ತಕ್ಕೆ ಗುರುಲಿಂಗ,
ನಿರಹಂಕಾರಹಸ್ತಕ್ಕೆ ಶಿವಲಿಂಗ, ಸುಮನಹಸ್ತಕ್ಕೆ ಚರಲಿಂಗ,
ಸುಜ್ಞಾನ ಹಸ್ತಕ್ಕೆ ಪ್ರಸಾದಲಿಂಗ, ಸದ್ಭಾವಹಸ್ತಕ್ಕೆ ಮಹಾಲಿಂಗ,
ಈ ಲಿಂಗಂಗಳಿಗೆ ಮುಖಂಗಳಾವವೆಂದಡೆ:
ಆಚಾರಲಿಂಗಕ್ಕೆ ಘ್ರಾಣ, ಗುರುಲಿಂಗಕ್ಕೆ ಜಿಹ್ವೆ,
ಶಿವಲಿಂಗಕ್ಕೆ ನೇತ್ರ, ಚರಲಿಂಗಕ್ಕೆ ತ್ವಕ್ಕು,
ಪ್ರಸಾದಲಿಂಗಕ್ಕೆ ಶ್ರೋತ್ರ, ಮಹಾಲಿಂಗಕ್ಕೆ ನಿರ್ಭಾವ.
ಈ ಮುಖಂಗಳಿಗೆ ಅರ್ಪಿತಂಗಳಾವವೆಂದಡೆ:
ಘ್ರಾಣಕ್ಕೆ ಗಂಧ, ಜಿಹ್ವೆಗೆ ರುಚಿ, ನೇತ್ರಕ್ಕೆ ರೂಪು,
ತ್ವಕ್ಕಿಗೆ ಸ್ಪರ್ಶನ, ಶ್ರೋತ್ರಕ್ಕೆ ಶಬ್ದ, ನಿರ್ಭಾವಕ್ಕೆ ನಿರ್ವಯಲು.
ಇಂತೀ ಸರ್ವೆಂದ್ರಿಯ ಸಮ್ಮತ ನಿರ್ವಿಕಲ್ಪ ಮಹಾಲಿಂಗಾಂಗಭಾವದ
ಸುಚಿತ್ತಲೇಪಗ್ರಾಹಕ ಭಕ್ತ ಗುರುಲಿಂಗವಾದ.
ಗುರುಲಿಂಗಾಂಗ ಸುಬುದ್ಧಿಲೇಪಗ್ರಾಹಕ ಮಹೇಶ್ವರ ಶಿವಲಿಂಗವಾದ.
ಶಿವಲಿಂಗಾಂಗ ನಿರಹಂಕಾರಲೇಪಗ್ರಾಹಕ ಪ್ರಸಾದಿ ಜಂಗಮಲಿಂಗವಾದ.
ಜಂಗಮಲಿಂಗಾಂಗ ಸುಮನಲೇಪಗ್ರಾಹಕ ಶರಣ ಮಹಾಲಿಂಗವಾದ.
ಪ್ರಸಾದಲಿಂಗಾಂಗ ಸುಜ್ಞಾನಲೇಪಗ್ರಾಹಕ ಐಕ್ಯ
ಅಭೇದಾನಂದ ಪರಿಪೂರ್ಣಮಯವಾದ.
`ನಿಶ್ಶಬ್ದಂ ಬ್ರಹ್ಮ ಉಚ್ಯತೇ’ ಎಂಬ ಶ್ರುತಿಯ ಮೀರಿ ನಿಂದ
ಅಖಂಡಮಹಿಮಂಗೆ, ಸುನಾದಯುಕ್ತಂಗೆ ಶಬ್ದ ನಷ್ಟವಾದಲ್ಲಿ-
ಆಚಾರಲಿಂಗವಿಲ್ಲ ಭಕ್ತಂಗೆ, ಗುರುಲಿಂಗವಿಲ್ಲ ಮಹೇಶ್ವರಂಗೆ,
ಶಿವಲಿಂಗವಿಲ್ಲ ಪ್ರಸಾದಿಗೆ, ಚರಲಿಂಗವಿಲ್ಲ ಪ್ರಾಣಲಿಂಗಿಗೆ,
ಪ್ರಸಾದಲಿಂಗವಿಲ್ಲ ಶರಣಂಗೆ, ಜಡದೇಹ ಧರ್ಮ ಭಾವವಿಲ್ಲ ಐಕ್ಯಂಗೆ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ನಿಮ್ಮ ಷಟ್ಸ್ಥಲದ ಪರಿಯಾಯವ ನೀವೆ ಬಲ್ಲಿರಿ.
ಉಳಿದ ಅಜ್ಞಾನಿಜೀವಿಗಳೆತ್ತ ಬಲ್ಲರು ?/1091
ಭಕ್ತ ಮಹೇಶ ಪ್ರಸಾದಿಯ
ಪಿಂಡಾದಿಯಾದ ಸಾಕಾರ ಮೂವತ್ತೊಂದು ಸ್ಥಲದ ಮೂಲಿಗ ತಾನಯ್ಯಾ.
ಪ್ರಾಣಲಿಂಗಿ ಶರಣ ಐಕ್ಯ ಮೊದಲಾದ
ನಿರಾಕಾರ ಹದಿಮೂರು ಸ್ಥಲದ ಆಚಾರ್ಯ ತಾನಯ್ಯಾ.
ಈ ಉಭಯ ಕುಲಸ್ಥಲ ಒಂದೆಂದರಿದು ತಾನಾದ ಲಿಂಗೈಕ್ಯನು
ಜಾತನಲ್ಲ ಅಜಾತನಲ್ಲ ಮೂರ್ತನಲ್ಲ ಅಮೂರ್ತನಲ್ಲ,
ದ್ವೈತಿಯಲ್ಲ ಅದ್ವೈತಿಯಲ್ಲ, ಸಕಲನಲ್ಲ ನಿಷ್ಕಲನಲ್ಲ,
ಸಕಲ ನಿಷ್ಕಲಾತ್ಮಕ ತಾನೆ ಕೂಡಲಚೆನ್ನಸಂಗಮದೇವ./1092
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು
ಬೇರು ಮಾಡಿ ನುಡಿದು ಬೇರು ಮಾಡಿ ನಡೆವ ಬಿನ್ನನಲ್ಲ.
ಬಿನ್ನವಿಲ್ಲದ ಅಂತರಂಗದಲ್ಲಿ ಅರಿವು ಪರಿಪೂರ್ಣ ಬಸವಣ್ಣ.
ಬಹಿರಂಗದಲ್ಲಿ ದಾಸೋಹ ಸಂಪನ್ನ ಬಸವಣ್ಣ.
ಮನ ವಚನ ಕಾಯದಲ್ಲಿ ಸದ್ಭಕ್ತಿಸಂಪನ್ನ ಬಸವಣ್ಣ.
ಎಡೆದೆರಹಿಲ್ಲದ ಲಿಂಗಸಂಪನ್ನ ಬಸವಣ್ಣ.
ಸರ್ವಾಂಗದಲ್ಲಿ ಸರ್ವಾಚಾರಸಂಪನ್ನ ಬಸವಣ್ಣ.
ಕೂಡಲಚೆನ್ನಸಂಗನಲ್ಲಿ ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು/1093
ಭಕ್ತ ಶಾಂತನಾಗಿರಬೇಕು,
ತನ್ನ ಕುರಿತು ಬಂದಠಾವಿನಲ್ಲಿ ಸತ್ಯನಾಗಿರಬೇಕು,
ಭೂತಹಿತವಹ ವಚನವ ನುಡಿಯಬೇಕು,
ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು
ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು,
ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು,
ಅಪಾತ್ರದಾನವ ಮಾಡಲಾಗದು,
ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು,
ಇದೇ ಮೊದಲಲ್ಲಿ ಬೇಹ ಶೌಚ ನೋಡಾ.
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇಸಾಧನ
ಕೂಡಲಚೆನ್ನಸಂಗಮದೇವಾ. /1094
ಭಕ್ತ, ಭೃತ್ಯನಾಗಿ ಮಾಡುವ ಮಾಟದಲ್ಲಿ ವಿಚಾರವುಂಟಯ್ಯಾ,
ಅದೆಂತೆಂದರೆ:ಸಂಸಾರಚ್ಛೇದನೆಯುಳ್ಳರೆ ಜಂಗಮಲಿಂಗವಹುದು,
ಅದಕ್ಕೆ ಮಾಡಿದ ಫಲಂ ನಾಸ್ತಿ.
ಸಂಸಾರಚ್ಛೇದನೆ ಇಲ್ಲದಿದ್ದರೆ ಆ ಜಂಗಮ ಭವಭಾರಿಯಹನು.
ಅದಕ್ಕೆ ಮಾಡಿದಲ್ಲಿ ಫಲವುಂಟು.
ಫಲವುಂಟಾದಲ್ಲಿ ಭವ ಉಂಟು, ಫಲವಿಲ್ಲದಲ್ಲಿ ಭವವಿಲ್ಲ.
`ಮನದಂತೆ ಮಂಗಳ’ ಎಂಬ ಶ್ರುತಿಯ ದಿಟವ ಮಾಡಿ,
ಈ ಉಭಯದೊಳಗೆ ಆವುದ ಪ್ರಿಯವಾಗಿ ಮಾಡುವರು ಅಹಂಗೆ ಇಹರು ಕಾಣಾ
ಕೂಡಲಚೆನ್ನಸಂಗಮದೇವಾ/1095
ಭಕ್ತಂಗಾಗಲಿ, ಜಂಗಮಕ್ಕಾಗಲಿ,
ಸದಾಚಾರವುಳ್ಳವರಿಗೆ ಅನಾಯತ ಹೊದ್ದಬಾರದು.
ಅನಾಯತವೆಂಬುದೆ ಅನುಸರಣೆ, ಅನುಸರಣೆಯೆಂಬುದೆ ಅಂಗದಿಚ್ಛೆ,
ಅಂಗದಿಚ್ಛೆಯೆಂಬುದೆ ಅನಾಚಾರ, ಅನಾಚಾರವೆಂಬುದೆ ಪಾತಕ,
ಆ ಪಾತಕವೆ ನರಕ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಸದಾಚಾರವುಳ್ಳವರು ಅನುಸರಿಸಿ ನಡೆದರೆ ನಾಯಕನರಕ. /1096
ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ,
ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ,
ಆ ಶಕ್ತಿಗೆ ಆಚಾರವೆ ಲಿಂಗ, ಆ ಲಿಂಗಕ್ಕೆ ನಿವೃತ್ತಿಯೆ ಕಲೆ,
ಆ ಕಲೆಗೆ ಘ್ರಾಣೇಂದ್ರಿಯವೆ ಮುಖ,
ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು
ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ
ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ ನಿಮ್ಮ ಭಕ್ತನು/1097
ಭಕ್ತನ ಹಸ್ತಮುಟ್ಟಿ ಪಾವನವೆಂಬನ್ನಕ್ಕ ತಾನು ಭವಿಯೇ ?
ಆತ[ನ] ಲಿಂಗದೇಹಿಯೆಂತೆಂಬೆ ? ಲಿಂಗಾಚಾರಿಯೆಂತೆಂಬೆ ?
ಪವಿತ್ರಕಾಯನೆಂತೆಂಬೆ ?
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಲಿಂಗಕ್ಷೇತ್ರ, ಜಂಗಮ ಬೀಜವೆಂಬುದನರಿಯರಾಗಿ. /1098
ಭಕ್ತನ ಹಾಡಿ ಬೇಡುವಾತ ಜಂಗಮವಲ್ಲ.
ಭಕ್ತನ ಹೊಗಳಿ ಬೇಡುವಾತ ಜಂಗಮವಲ್ಲ.
ಭಕ್ತನ ಓದಿ ಬೇಡುವಾತ ಜಂಗಮವಲ್ಲ.
ಭಕ್ತನ ಕೊಂಡಾಡಿ ಬೇಡುವಾತ ಜಂಗಮವಲ್ಲ.
ಭಕ್ತನ ಸ್ತುತಿಸಿ ಬೇಡುವಾತ ಜಂಗಮವಲ್ಲ.
ಭಕ್ತನ ಕೈವಾರಿಸಿ ಬೇಡುವಾತ ಜಂಗಮವಲ್ಲ.
ಕೂಡಲಚೆನ್ನಸಂಗಮದೇವರಲ್ಲಿ ಬೇಡದೆ ಮಾಡುವನೆ ಭಕ್ತ,
ಬೇಡದೆ ಮಾಡಿಸಿಕೊಂಬಾತನೆ ಜಂಗಮ./1099
ಭಕ್ತನಾಗಿ ಬಯಕೆಯ ಮಾಡಿ ನೋಡುವದು ಭಕ್ತಿಯ ಸ್ಥಲವಲ್ಲ.
ಬಯಸಿ ಮಾಡುವುದೆ ಭಕ್ತಿಯ ಕೇಡು
ಕೂಡಿಸಿ ಮಾಡುವುದೇ (ಕೂಟುಂಡು)?
(ಸಾಯಸ)ವಿಲ್ಲದೆ ಸಮತೆಯ ಮಾಡಿ,
ಬೋನವ ನೀಡಿಹೆನೆಂಬುದು ಸಜ್ಜನತ್ವದ ಕೇಡು.
ಇಂಥ ಬಯಕೆಯ ಮಾಡಿ ನೀಡುವವನ ಭಕ್ತಿ
ಬರಿಯ ಮಡಕೆಯನಟ್ಟು ಹೊರಗೆ
ಹುಲಿಯೇದಿಸಿದಂತಾಯಿತ್ತು ? ಕಾಣಾ.
ಅವನು ಭಕ್ತಿ ಜಪತಪನೇಮನಿತ್ಯ
ಅನುಷ್ಠಾನಾರ್ಚನೆ ಷೋಡಶ ಉಪಚಾರವ ಮಾಡಿ
ಮುಕ್ತಿಯ ಪಡೆದೆನೆಂದು
ಗುರುವಿನಲ್ಲಿ ಆಜ್ಞೆಯ ಮಾಡಿಕೊಂಡು,
ಸಮಯಾಚಾರಕ್ಕೆ ಜಂಗಮದೇವರ ತಂದು
ಪ್ರಸಾದ ಕೃತ್ಯವೆಂದು ಕಟ್ಟು ಮಾಡಿ ತನ್ನಲ್ಲಿ ಇಟ್ಟುಕೊಂಡು
ಆಯತದ ಅಗ್ಘವಣಿ ಆಯತವೆಂದು ಮಾಡುವನ್ನಕ್ಕ (ಶೀಲವೆರಿ)
ಆ ಜಂಗಮದೇವರ ತಂದು ತನ್ನ ಮನೆಯಲ್ಲಿಟ್ಟುಕೊಂಡು,
ಆ ಜಂಗಮಕ್ಕೆ ಇಚ್ಛಾಭೋಜನವ ನೀಡಿ ತೃಪ್ತಿಯಂ ಬಡಿಸಿ,
ಮುಂದೆ ಕೃತ್ಯವ ಮಾಡುವುದೇ ಸತ್ಯ ಸದಾಚಾರ ಶೀಲ,
ಧರ್ಮದ ನಡೆ ಧರ್ಮದ ನುಡಿ. ಇದು ತಪ್ಪದೇ ಒಪ್ಪುದು ಕಾಣಾ.
ಇದರ ಅಂತುವನರಿಯದೆ
ತನ್ನ ಮನೆಯ ಆಯತದ ಬೋನವಾಗುವನ್ನಕ್ಕ
ಆ ಜಂಗಮದೇವರ ಹಸಿದು ಬಳಲಿಸು ಎಂದು
ಆಯತವ ಕಟ್ಟಿಕೊಟ್ಟನೆ ನಿಮ್ಮ ಗುರುನಾಥನು ?
ಇಂಥ ಕಟ್ಟಳೆಯ ಕಟ್ಟಿದಾತ ಗುರುವಲ್ಲ,
ಕಟ್ಟಿಕೊಂಡಾತ ಭಕ್ತನಲ್ಲ, ಭವಿ.
ಇಂತೀ ಗುರುವಲ್ಲ ನರನು, ಇಂತಿವರು ಭಕ್ತರಲ್ಲ.
ಒಲಿದು ಭಕ್ತಿಯ ಮಾಡಿಹನೆಂದು
ಭಕ್ತನ ಅಂತವನರಿಯದೆ ಮುಂದುಗಾಣದೆ
ಕೃತ್ಯವ ಕಟ್ಟುವ ಗುರುವಿಗೆ ಹಿಂದೆ ಬಹ ನರಕ
ಇವರಿಗೆ ಇಂದೇ ಅಘೋರನರಕ ಕಾಣಾ
ಮಹಾದಾನಿ ಕೂಡಲಚೆನ್ನಸಂಗಮದೇವಯ್ಯಾ./1100
ಭಕ್ತನಾದಡೆ ಲಿಂಗಸ್ಥಲವ ಮೆಟ್ಟಲಾಗದು,
ಶರಣನಾದಡೆ ಭಕ್ತಸ್ಥಲವ ಮೆಟ್ಟಲಾಗದು,
ಲಿಂಗೈಕ್ಯನಾದಡೆ ಪ್ರಸಾದಿಸ್ಥಲವ ಮೆಟ್ಟಲಾಗದು.
ಈ ತ್ರಿವಿಧ ಸಾಹಿತ್ಯ ಮಹಾಬೆಳಗಿನ ಬೆಳಗು
ಕೂಡಲಚೆನ್ನಸಂಗಮದೇವ/1101
ಭಕ್ತನಾದರೆ ಕಿಂಕಿಲನಾಗಿರಬೇಕು.
ಮಾಹೇಶ್ವರನಾದರೆ ಆದಿ ಅನಾದಿಯನರಿಯದಿರಬೇಕು.
ಪ್ರಸಾದಿಯಾದರೆ ಒಡಲಗುಣವಿರಹಿತನಾಗಿರಬೇಕು.
ಪ್ರಾಣಲಿಂಗಿಯಾದರೆ ಪ್ರಸಾದ(ಬಾಹ್ಯವಿಚಾರ?)ವಿಲ್ಲದಿರಬೇಕು.
ಶರಣನಾದರೆ ನಿಸ್ಸಂಗಿಯಾಗಿರಬೇಕು.
ಐಕ್ಯನಾದರೆ ಬಯಲು ಬಯಲಾಗಿರಬೇಕು.
ಇಂತೀ ಸ್ಥಲವನರಿದಲ್ಲದೆ, ಕೂಡಲಚೆನ್ನಸಂಗನಲ್ಲಿ
ಸುಸಂವೇದ್ಯನೆಂದೆನಿಸಬಾರದು./1102
ಭಕ್ತನಾದರೆ ತನುಮನಧನದಾಸೆ ಅಳಿದುಳಿದಿರಬೇಕು.
ಮಾಹೇಶ್ವರನಾದರೆ ಪರಧನ ಪರಸತಿಯಾಸೆಯಳಿದು ಉಳಿದಿರಬೇಕು.
ಪ್ರಸಾದಿಯಾದಡೆ ಪ್ರಸಾದ ಅವಗ್ರಾಹಿಯಾಗಿ, ಪ್ರಸಾದದ ಘಟವಳಿಯದೆ
ಉಳಿದಿರಬೇಕು.
ಪ್ರಾಣಲಿಂಗಿಯಾದರೆ ಸುಖ-ದುಃಖವ ಮರೆದು
ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿರಬೇಕು.
ಶರಣನಾದರೆ ಸತಿಯರ ಸಂಗವ ತೊರೆದು ತಾನು ಲಿಂಗಕ್ಕೆ ಸತಿಯಾಗಿರಬೇಕು-
ಲಿಂಗೈಕ್ಯನಾದರೆ ಲಿಂಗದಲ್ಲಿ ಬೆರಸಿ ಬೇರಿಲ್ಲದಿರಬೇಕು,
ಕೂಡಲಚೆನ್ನಸಂಗಯ್ಯಾ. /1103
ಭಕ್ತನಾದರೆ ಭಕ್ತಿಸ್ಥಲವನರಿದು ಅರಿಯದಂತಿರಬೇಕು,
ಮಹಾಹೇಶ್ವರನಾದರೆ ನಿಷ್ಠೆಯ ಕುಳವನರಿದು ಅರಿಯದಂತಿರಬೇಕು,
ಪ್ರಸಾದಿಯಾದರೆ ಪ್ರಸಾದಿಸ್ಥಲವನರಿದು ಅರಿಯದಂತಿರಬೇಕು,
ಪ್ರಾಣಲಿಂಗಿಯಾದರೆ ಸ್ಥಿತಿ-ಗತಿಯನರಿದು ಅರಿಯದಂತಿರಬೇಕು,
ಶರಣನಾದರೆ ಸತಿಪತಿಯೆಂದರಿದು ಅರಿಯದಂತಿರಬೇಕು,
ಐಕ್ಯನಾದರೆ ತಾನು ತಾನಾಗಿ ಆಗದಂತಿರಬೇಕು,-
ಇಂತೀ ಷಡುಸ್ಥಲವನರಿಯದೆ ಮಾಡಿದೆನೆಂಬ
ಲಜ್ಜೆಗೆಟ್ಟ ಲಾಂಛನಧಾರಿಯನೇನೆಂಬೆ,
ಕೂಡಲಚೆನ್ನಸಂಗಮದೇವಾ./1104
ಭಕ್ತನಾದರೆ ಭವಿ ನಾಸ್ತಿಯಾಗಿರಬೇಕು,
ಶರಣನಾದರೆ ಭವಂ ನಾಸ್ತಿಯಾಗಿರಬೇಕು,
ಲಿಂಗೈಕ್ಯನಾದರೆ ಲಯವನರಿಯದಿರಬೇಕು,
ಪ್ರಸಾದಿಯಾದರೆ ತ್ರಿವಿಧನಾಸ್ತಿಯಾಗಿರಬೇಕು,
ಕೂಡಲಚೆನ್ನಸಂಗಮದೇವಾ. /1105
ಭಕ್ತನಾದೆನೆಂದು ನಚ್ಚದಿರೊ ಅಣ್ಣಾ,
ನಿನ್ನ ಕರಣಾದಿಗಳ ಭಕ್ತರ ಮಾಡಯ್ಯಾ,
ಹಸಿವು ತೃಷೆ ವಿಷಯ ಘನ ನೋಡಯ್ಯಾ.
ಇವು, ಸಹಿತ ಮಜ್ಜನಕ್ಕೆರೆದರೆ
ಹಿಂದಣ ಭವಿಸಂಗ ಹಿಂಗದು ನೋಡಾ
ಮೃತಕರೋಟಿ ವರ್ತಮಾನರಿಬ್ಬರು ಅವರ ತಮ್ಮನೊಬ್ಬ-
ಇಂತೀ ಮೂವರ ಹಿಂಗಿಸಿ ಮಜ್ಜನಕ್ಕೆರೆದು
ಲಿಂಗಸಂಗಿಯಾಗಿಪ್ಪ ಕೂಡಲಚೆನ್ನಸಂಗಾ, ನಿಮ್ಮ ಶರಣ./1106
ಭಕ್ತನೆ ಕುಲಜನೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ !
ವ್ಯಾಕುಳ ನಿರಾಕುಳವೆಂಬ ಎರಡು ಕುಳ ನೋಡಾ !
ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ.
ವ್ಯಾಕುಳವೆ ಪಾಪ, ನಿರಾಕುಳವೆ ಪುಣ್ಯ.
ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ.
ಭವೇ ಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ
ಶಿವಬೀಜಂ ತಥಾ ಜ್ಞಾನಂ ಜ್ಞಾನಂ ತ್ರೈಲೋಕ್ಯ ದುರ್ಲಭಂ
ಎಂಬುದಾಗಿ, ಜ್ಞಾನಿಗೆ ಕತ್ತಲೆಯಿಲ್ಲ, ಅಜಾತಂಗೆ ಹೊಲೆಯಿಲ್ಲ,
ಕುಲಾದಿಶ, ಕೂಡಲಚೆನ್ನಸಂಗಾ./1107
ಭಕ್ತನೆಂತೆಂಬೆನಯ್ಯಾ ಭಕ್ತಿಸ್ಥಲವೆನಗೆ ಮುನ್ನಿಲ್ಲ,
ಯುಕ್ತನೆಂತೆಂಬೆನಯ್ಯಾ ಯುಕ್ತಿಸ್ಥಲವೆನಗೆ ಮುನ್ನಿಲ್ಲ,
ಮುಕ್ತನೆಂತೆಂಬೆನಯ್ಯಾ ಮುಕ್ತಿಸ್ಥಲವೆನಗೆ ಮುನ್ನಿಲ್ಲ,
ಕೂಡಲಚೆನ್ನಸಂಗನ ಶರಣರಿಗೆ
ನಮೋ ನಮೋಯೆಂದು ಬದುಕುವೆ. /1108
ಭಕ್ತನೆಂದೆನಿಸಿಕೊಂಬುದಯ್ಯಾ ಭಕ್ತಿವಿಡಿದು,
ಮಾಹೇಶ್ವರನೆನಿಸಿಕೊಂಬುದಯ್ಯಾ ನಿಷ್ಠೆವಿಡಿದು,
ಪ್ರಸಾದಿಯೆನಿಸಿಕೊಂಬುದಯ್ಯಾ ಅವಧಾನವಿಡಿದು,
ಪ್ರಾಣಲಿಂಗಿಯೆನಿಸಿಕೊಂಬುದಯ್ಯಾ ಅನುಭಾವವಿಡಿದು,
ಶರಣನೆನಿಸಿಕೊಂಬುದಯ್ಯಾ [ಆನಂದದಿಂದ]
ಐಕ್ಯನೆನಿಸಿಕೊಂಬುದಯ್ಯಾ ಸಮರಸದಿಂದ.
ಇಂತೀ ಷಡುಸ್ಥಲಸಾಹಿತ್ಯನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಸಹಜನೆನಿಸಿಕೊಂಬುದಯ್ಯಾ./1109
ಭಕ್ತನೆಂಬ ನಾಮಧಾರಕಂಗೆ ಆವುದು ಪಥವೆಂದರೆ:
ಗುರುಭಕ್ತನಾದರೆ ಜಂಗಮವನಾರಾದಿಸುವುದು,
ಗುರುಶಿಷ್ಯರಿಬ್ಬರ ಗುರುತ್ವ ಮಾಡಿದನಾಗಿ,
ಆಚಾರಭಕ್ತನಾದರೆ ಜಂಗಮನಾರಾದಿಸುವುದು.
ಗುರುಶಿಷ್ಯರಿಬ್ಬರ ಸದಾಚಾರದಲ್ಲಿ ನಿಲಿಸಿದನಾಗಿ,
ಲಿಂಗಭಕ್ತನಾದರೆ ಜಂಗಮವನಾರಾದಿಸುವುದು.
ಗುರು ತನ್ನ ಲಿಂಗವ ಶಿಷ್ಯಂಗೆ ಕೊಟ್ಟು ವ್ರತಗೇಡಿಯಾಗಿ ಹೋಹಲ್ಲಿ
ಆ ಗುರು ಸಹಿತ ಶಿಷ್ಯಂಗೆ ಸ್ವಾಯತವ ಮಾಡಿದನಾಗಿ.
ಪ್ರಸಾದಭಕ್ತನಾದರೆ ಜಂಗಮನಾರಾದಿಸುವುದು,
ಗುರುಶಿಷ್ಯ ಸಂಬಂಧದಲ್ಲಿ ಪ್ರಸಾದೋದ್ಭವವ ತೋರಿದನಾಗಿ.
ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅದಿಕವೆಂಬ
ಉತ್ತರಕ್ಕೆ ಆವುದು ಸಾಕ್ಷಿಯೆಂದರೆ, ಶಿವವಾಕ್ಯವು ಪ್ರಮಾಣು:
ಲಿಂಗದ್ವಯಂ ಸಮಾಖ್ಯಾತಂ ಚರಂ ಚಾಚರಮೇವ ಚ
ಅಚರಂ ಮಂತ್ರಸ್ಥಾಪ್ಯಂ ಹಿ ಚರೇ ನಿತ್ಯಂ ಸದಾಶಿವಃ
ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ !
ಲಿಂಗಾಚಾರಂ ಸಮಾಖ್ಯಾತಂ ಜಂಗಮಸ್ಯ ವಿಶೇಷತಃ
ಇಂತು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯಂಗೆ
ಜಂಗಮಸಹಿತ ಮಾಡುವುದು ಸದಾಚಾರ, ಜಂಗಮ ವಿರಹಿತ ಅನಾಚಾರ.
ಇಂತು ಶಿವನಲ್ಲಿ ಏಕಾರ್ಥವಾದ ಕಾರಣ
ಜಂಗಮಪ್ರಾಣಿಯಾದ ಜಂಗಮಪ್ರಸಾದಿಯಾದ ಬಸವಣ್ಣ.
ಆ ಬಸವಣ್ಣನ ಪ್ರಸಾದದಿಂದ ಬದುಕಿದೆ ಕಾಣಾ
ಕೂಡಲಚೆನ್ನಸಂಗಯ್ಯಾ. /1110
ಭಕ್ತನೆಂಬೆನೆ ? ಭಕ್ತಸ್ಥಲ ಮುನ್ನವೆಯಿಲ್ಲ,
ಮಾಹೇಶ್ವರನೆಂಬೆನೆ ? ಮಾಹೇಶ್ವರಸ್ಥಲ ಮುನ್ನವೆಯಿಲ್ಲ,
ಪ್ರಸಾದಿಯೆಂಬೆನೆ ? ಪ್ರಸಾದಿಸ್ಥಲ ಮುನ್ನವೆಯಿಲ್ಲ,
ಪ್ರಾಣಲಿಂಗಿಯೆಂಬೆನೆ ? ಪ್ರಾಣಲಿಂಗಿಸ್ಥಲ ಮುನ್ನವೆಯಿಲ್ಲ,
ಶರಣನೆಂಬೆನೆ ? ಶರಣಸ್ಥಲ ಮುನ್ನವೆಯಿಲ್ಲ,
ಐಕ್ಯನೆಂಬೆನೆ ? ಐಕ್ಯಸ್ಥಲ ಮುನ್ನವೆಯಿಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ./1111
ಭಕ್ತನೆದ್ದು ಭವಿಯ ಮುಖವ ಕಂಡರೆ, ರಾರವ ನರಕವೆಂಬರು.
ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ.
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ.
ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು,
`ನಾನು ಭವಿಯ ಮೋರೆಯ ಕಾಣಬಾರದು, ಎಂದು
ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ
ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?/1112
ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ
ಅವ ಭಕ್ತನಲ್ಲ, ಲಿಂಗವಿರಳ ನೋಡಾ.
ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ
ಕಾಯಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲವು.
ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ.
ಕುರುಡನ ಕೈಯ ದರ್ಪಣದಂತೆ/1113
ಭಕ್ತರ ಮಠಕ್ಕೆ ಬಂದು ಒಳಹೊರಗೆಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಅಗ್ಘಣಿಯ ತನ್ನಿ ಎಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಪುಷ್ಪವ ತನ್ನಿ ಎಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಓಗರ ಮಾಡಿ ಎಂಬುದು ಶೀಲವೆ ?
ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವ ಕೊಂದಾತನು
ಕೊಡಲಚೆನ್ನಸಂಗನಲ್ಲಿ ಆತನೆ ಶೀಲವಂತನು./1114
ಭಕ್ತರ ಮಠವನರಸಿಕೊಂಡು ಹೋಗಿ
ಭಕ್ತದೇಹಿಕ ದೇವನೆಂದು ಶ್ರುತಿವಾಕ್ಯವ ಕೇಳಿ
ಭಕ್ತನೆ ದೇವನೆಂದರಿದು ಯುಕ್ತಿಯನರಸುವ ಪಾತಕರ ವಿದಿಗಿನ್ನೆಂತೊ ?
ಭಕ್ತರ ಮಠಕ್ಕೆ ಹೋಗಿ `ಅದು ಇದು’ ಎಂಬ ಸಂದೇಹಪಾತಕ ನೀ ಕೇಳಾ
ಭಕ್ತರ ಮಠದೊಳಗೆ ಭಕ್ತಿರಸದ ಬೆಳಸು, ಲಿಂಗದ ಬೆಳೆ, ಪ್ರಸಾದದ ರಾಶಿ,
ಇಂತಪ್ಪ ಪ್ರಸಾದದಲ್ಲಿಗೆ ಹೋಗಿ
ಸೂತಕವನರಸುವ ಪಾತಕರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ ?/1115
ಭಕ್ತರ ಹೆಚ್ಚು ಕುಂದು ಜಂಗಮದ ಹೆಚ್ಚು ಕುಂದೆಂಬುದನರಿಯಾ ಪ್ರಭುವೆ ?
ನಿಮ್ಮ ಪ್ರಾಣವೆ ಬಸವಣ್ಣನ ಪ್ರಾಣ, ಬಸವಣ್ಣನ ಪ್ರಾಣವೆ ನಿಮ್ಮ ಪ್ರಾಣ
ನಿಮ್ಮ ಕಾಯವೆ ಬಸವಣ್ಣನ ಕಾಯ, ಬಸವಣ್ಣನ ಕಾಯವೆ ನಿಮ್ಮ ಕಾಯ.
ನೀವಿಲ್ಲದಿರೆ ಬಸವಣ್ಣನಿಲ್ಲ, ಬಸವಣ್ಣನಿಲ್ಲದಿರೆ ನೀವಿಲ್ಲ.
ಇಂತಿದನೊಂದು ಬಿಚ್ಚಿ ಬೇರೆ ಮಾಡಬಾರದೆಂಬುದನರಿದು
ಮತ್ತೆ ಬರಿದೆ ಮುನಿವರೆ ಬಲ್ಲವರು ?
ನಡೆವ ವಾರುವ ಮುಗ್ಗಿದಡೆ ನಡೆಸಿಕೊಂಬುದಲ್ಲದೆ
ಮಿಡಿ ಹರಿಯೆ ಹೊಯ್ದವರುಂಟೆ ಲೋಕದೊಳಗೆ ?
ಮರಹಿಂದ ಬಂದ ಅವಗುಣವ ಸಂಪಾದಿಸದೆ
ಜಿಜಯಂಗೈಯ್ವುದಯ್ಯಾ ನಿಮ್ಮ ಗೃಹಕ್ಕೆ ಕೂಡಲಚೆನ್ನಸಂಗಮದೇವಾ,
ನಿಮ್ಮ ಶರಣ ಬಸವಣ್ಣನಾರೆಂಬುದ
ನೀನೊಮ್ಮೆ ತಿಳಿದು ನೋಡಾ ಪ್ರಭುವೆ./1116
ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ.
ಜಂಗಮದಲ್ಲಿ ಜಾತಿಯನರಸುವಾತನೆ ಗುರುದ್ರೋಹಿ.
ಪಾದೋದಕದಲ್ಲಿ ಸೂತಕವ ಪಿಡಿವಾತನೆ ಲಿಂಗದ್ರೋಹಿ.
ಪ್ರಸಾದದಲ್ಲಿ ರುಚಿಯನರಸುವಾತನೆ ಜಂಗಮದ್ರೋಹಿ.
ಇಂತೀ ಚತುರ್ವಿಧದೊಳಗೆ ಸನ್ನಿಹಿತನಾದಾತನೆ ಭಕ್ತ,
ಇಂತೀ ಚತುರ್ವಿಧದೊಳಗೆ ಕಲಿಯಾದಾತನೆ ಮಾಹೇಶ್ವರ,
ಇಂತೀ ಚತುರ್ವಿಧದೊಳಗೆ ಅವಧಾನಿಯಾದಾತನೆ ಪ್ರಸಾದಿ,
ಇಂತೀ ಚತುರ್ವಿಧದೊಳಗೆ ತದ್ಗತನಾದಾತನೆ ಪ್ರಾಣಲಿಂಗಿ,
ಇಂತೀ ಚತುರ್ವಿಧದೊಳಗೆ ಲವಲವಿಕೆಯುಳ್ಳಾತನೆ ಶರಣ,
ಇಂತೀ ಚತುರ್ವಿಧದೊಳಗೆ ಅಡಗಿದಡೆ ಐಕ್ಯ.
ಇಂತಿಪ್ಪ ಷಡುಸ್ಥಲವು ಸಾಧ್ಯವಾದಡೆ ಲಿಂಗದೇಹಿ.
ಆತ ನಡೆಯಿತ್ತೇ ಬಟ್ಟೆ ಆತ ನುಡಿಯಿತ್ತೇ [ಸಿದ್ಧಾಂತ].
ಕೂಡಲಚೆನ್ನಸಂಗಯ್ಯನಲ್ಲಿ ಆತನೇ ಸರ್ವಾಂಗಲಿಂಗಿ, ಆತನೆ ನಿರ್ದೆಹಿ/1117
ಭಕ್ತರಾದೆವೆಂದು ಭವಿಪಾಕವನೊಲ್ಲೆವೆಂದೆಂಬರು.
ಭವಿಪಾಕವೆಂಬುದದೆಂತುಟಯ್ಯಾ?
ಅಂಗತ್ರಯಕ್ಕೆ ನೋಡಿದರೆ ಭವಿಪಾಕ,
ಲಿಂಗತ್ರಯ ನೋಟಕ್ಕೆ ಅದು ಸಲ್ಲದಾಗಿ.
ಗುರು ಕಾರುಣ್ಯವುಂಟು ಭಕ್ತರೆಂದೆಂಬರು,
ಅವರಿಗಂತ್ರಯದ ನೋಟವಲ್ಲದೆ
ಲಿಂಗತ್ರಯದ ನೋಟವೆಲ್ಲಿಯದೊ?
ಪಂಚಭೂತಕಾಯವ ತಂದು ಭಕ್ತರೆಂದರೆ
ಪ್ರಸಾದನಾಸ್ತಿಯೆಂದುದು ಕೂಡಲಚೆನ್ನಸಂಗನ ವಚನ. /1118
ಭಕ್ತರಾದೆವೆಂದು ಯುಕ್ತಿಗೆಟ್ಟು ನುಡಿವರು; ಭಕ್ತಜನ್ಮವೆಲ್ಲರಿಗೆಲ್ಲಿಯದೊ ?
ಗುರುವಿನಲ್ಲಿ ತನುವಂಚನೆ, ಲಿಂಗದಲ್ಲಿ ಮನವಂಚನೆ,
ಜಂಗಮದಲ್ಲಿ ಧನವಂಚನೆವುಳ್ಳನ್ನಕ್ಕ ಭಕ್ತನೆ ?
ಗುರುವಿನಲ್ಲಿ ಚಾರಿತ್ರವ ಲಿಂಗದಲ್ಲಿ ಲಕ್ಷಣವ,
ಜಂಗಮದಲ್ಲಿ ಜಾತಿಯನರಸುವನ್ನಕ್ಕ ಭಕ್ತನೆ ? ಅಲ್ಲ, ಅವನು ದೋಷಾಥರ್ಿ.
“ಭಕ್ತಶ್ಚ ಪ್ರತಿಪಕ್ಷಶ್ಚ ಸದಾಚಾರೇಣ ವರ್ಜಿತಃ
ಗುರುಲಿಂಗಜಂಗಮದ್ವೇಷೀ ಯೋ ನರಸ್ಸದುರಾತ್ಮಕಃ’
ಇದು ಕಾರಣ ಕೂಡಲಚೆನ್ನಸಂಗಮದೇವಾ
ಭಕ್ತಜನ್ಮವೆಲ್ಲರಿಗೆಲ್ಲಿಯದು ? /1119
ಭಕ್ತರಾದೆವೆಂಬರು-ಭಕ್ತಿಯ ಪರಿಯನರಿಯರು
ಭಕ್ತರೆಂತಾದಿರಯ್ಯಾ ?
ಮಾಹೇಶ್ವರರಾದೆವೆಂಬರು, -ಆದಿ ಅನಾದಿಯ ಅರಿಯದನ್ನಕ್ಕ
ಮಾಹೇಶ್ವರರೆಂತಾದಿರಯ್ಯಾ ?
ಪ್ರಸಾದಿಗಳಾದೆವೆಂಬರು, -ಪ್ರಸಾದದ ಅರ್ಪಿತ ಆಯತವನರಿಯದೆ
ಪ್ರಸಾದವ ಗ್ರಹಿಸುವನ್ನಕ್ಕ ಪ್ರಸಾದಿಗಳೆಂತಾದಿರಯ್ಯಾ ?
ಪ್ರಾಣಲಿಂಗಿಗಳಾದೆವೆಂಬರು-ನಡೆ ನುಡಿ ಭಾವ ಎರಡಾಗಿದೆ
ಪ್ರಾಣಲಿಂಗಿಗಳೆಂತಾದಿರಯ್ಯಾ ?
ಶರಣನಾದೆವೆಂಬರು-ಇಂದ್ರಿಯಂಗಳ ಬಿನ್ನವಿಟ್ಟು ವರ್ತಿಸುವನ್ನಕ್ಕ
ಶರಣರೆಂತಾದಿರಯ್ಯಾ ?
ಐಕ್ಯವಾದೆವೆಂಬರು-ಧರ್ಮಕರ್ಮ ಚತುರ್ವಿಧದ ಫಲಪದ ಮೋಕ್ಷ
ಜನನ ಮರಣ ಬೆನ್ನ ಬಿಡದೆ ಐಕ್ಯರೆಂತಾದಿರಯ್ಯಾ ?
ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ
ಬಸವಣ್ಣನೆ ಬಲ್ಲ./1120
ಭಕ್ತರೆಲ್ಲರೂ ಕೂಡಿ ಗುರೂಪದೇಶ ಸಹಿತವಾಗಿ ಕೊಟ್ಟ ಇಷ್ಟಲಿಂಗವ
ಪ್ರಾಣಲಿಂಗವೆಂದು ಅಪ್ಪವಿಸಿದ ಮಾತ ಮರೆವರಲ್ಲಾ.
ಸ್ಥಾವರಕ್ಕೆ ಹೋಗಿ ದಂಡಪ್ರಣಾಮವ ಮಾಡುವರು, ಆವುದಾಚಾರವಯ್ಯಾ ?
ತನ್ನ ಲಿಂಗವಿದ್ದಂತೆ ಅನ್ಯಲಿಂಗವ ಮುಟ್ಟಿ ದರುಶನ ಮಾಡುವ
ಪಾತಕರನಚ್ಚಶರಣರೆಂತೆಂಬೆನಯ್ಯಾ,
ಕೂಡಲಚೆನ್ನಸಂಗಮದೇವಾ? /1121
ಭಕ್ತಸ್ಥಲ ಘನವೆಂದೆಂಬಿರಿ, ಭಕ್ತಸ್ಥಲಕ್ಕೆ ಮಾಹೇಶ್ವರಸ್ಥಲವೆ ಪ್ರತಿ,
ಮಾಹೇಶ್ವರಸ್ಥಲಕ್ಕೆ ಪ್ರಸಾದಿಸ್ಥಲವೆ ಪ್ರತಿ,
ಪ್ರಸಾದಿಸ್ಥಲಕ್ಕೆ ಪ್ರಾಣಲಿಂಗಿಸ್ಥಲವೆ ಪ್ರತಿ.
ಪ್ರಾಣಲಿಂಗಿಸ್ಥಲಕ್ಕೆ ಶರಣಸ್ಥಲವೆ ಪ್ರತಿ,
ಶರಣಸ್ಥಲಕ್ಕೆ ಐಕ್ಯಸ್ಥಲವೆ ಪ್ರತಿ.
ಪ್ರತಿಯುಳ್ಳುದರಿವೆ ? ಪ್ರತಿಯು?್ಳುದು ಜ್ಞಾನವೆ ?
ಪ್ರತಿಯುಳ್ಳುದು ನಿರ್ಭಾವವೆ ? ಪ್ರತಿಯುಳ್ಳುದು ಮೋಕ್ಷವೆ ?
ಇಂತಿದು ಸ್ಥಲದ ಮಾರ್ಗವಲ್ಲ, ಸಾವಯವಲ್ಲ, ನಿರವಯವಲ್ಲ,
ಸ್ಥಲವೂ ಅಲ್ಲ ನಿಃಸ್ಥಲವೂ ಅಲ್ಲ, ಒಳಗೂ ಅಲ್ಲ, ಹೊರಗೂ ಅಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ. /1122
ಭಕ್ತಿ ಜ್ಞಾನ ವೈರಾಗ್ಯ ಕುಲಸ್ಥಲವ ಹರಹಲೆಂದು
ಮತ್ರ್ಯಲೋಕಕ್ಕೆ ಇಳಿತಂದನಯ್ಯಾ ಬಸವಣ್ಣನು.
ವ್ರತಾಚಾರದ ಶಿವಾಚಾರದ ಮುಂದಣ ಕನ್ನಡಕವ ಕಳೆದು
ಕರತಳಾಮಳಕ ಮಾಡಿದನಯ್ಯಾ ಬಸವಣ್ಣನು.
ಪರವಾದಿ ಬಿಜ್ಜಳನ ಒರೆಗಲ್ಲ ಹಿಡಿದು ಶಿವಭಕ್ತಿಸಂಪಾದನೆಯ ಮಾಡುವಲ್ಲಿ
ಮೂವತ್ತಾರು ಕೊಂಡೆಯ ಪರಿಹರಿಸಿ
ಶಿವಾಚಾರದ ಧ್ವಜವನೆತ್ತಿ ಮೆರೆದನಯ್ಯಾ ಬಸವಣ್ಣನು-
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನ ನಿಲವ ಹೊಗಳುವುದು ಎನ್ನಳವಲ್ಲ, ನಿನ್ನವಳಲ/1123
ಭಕ್ತಿ ಪದಾರ್ಥವನರಿದ ಮಹೇಶ್ವರನು
ತನ್ನಲ್ಲಿ ತಾನು ಸುಯಿಧಾನಿಯಾಗಿರಬೇಕು.
ಎಲ್ಲಿ ಲಿಂಗದಲ್ಲಿ; ಎಲ್ಲಿ ಜಂಗಮದಲ್ಲಿ; ಎಲ್ಲಿ ಪ್ರಸಾದದಲ್ಲಿ.
ಸುಯಿಧಾನಿಯಾಗದಿದ್ದರೆ “ಶ್ವಾನಗರ್ಭೆಷು ಜಾಯತೇ
ಎಂದುದು ಕೂಡಲಚೆನ್ನಸಂಗನ ವಚನ. /1124
ಭಕ್ತಿ ಭಕ್ತಿಯೆಂದೇನು ತುತ್ತಿಡುವನ್ನಕ್ಕವೆ ?
ಗುರು ಗುರುವೆಂದೇನು ಪರಕೆ ಹೆಸರ ಹೇಳುವನ್ನಕ್ಕವೆ ?
ಲಿಂಗ ಲಿಂಗವೆಂದೇನು ಅಂಗ ಬೀಳುವನ್ನಕ್ಕವೆ ?
ಜಂಗಮ ಜಂಗಮವೆಂದೇನು ಮುಂದಿದ್ದ ಧನವೆಲ್ಲಾ ಸವೆವನ್ನಕ್ಕವೆ ?
ಪಾದೋದಕ ಪಾದೋದಕವೆಂದೇನು ಇವೆಲ್ಲಾ ಜಲವ ಕೂಡಿ ಹೋಹನ್ನಕ್ಕವೆ ?
ಪ್ರಸಾದ ಪ್ರಸಾದವೆಂದೇನು ಉಂಡುಂಡು
ತನು ಕಳಚಿ ಪ್ರಳಯಕ್ಕೊಳಗಹನ್ನಕ್ಕವೆ ?
ಅಲ್ಲಿ ನಿಂದಿರದಿರಾ ಮನವೆ,
ನಿಂದಿದ್ದರೆ ನೀ ಕೆಡುವೆ, ಬಂದರೆ ನಾ ಕೆಡುವೆ,
ಎನ್ನ ತಂದೆ ಕೂಡಲಚೆನ್ನಸಂಗಯ್ಯಾ,
ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು. /1125
ಭಕ್ತಿ, ಭಕ್ತಿಯ ಸುಖವ ಕಾಣಬಹುದಲ್ಲದೆ,
ಲಿಂಗ ಲಿಂಗದ ಸುಖವ ಕಾಣಬಾರದು.
ಲಿಂಗ ಲಿಂಗದ ಸುಖವ ಕಾಣಬಹುದಲ್ಲದೆ,
ಜಂಗಮ ಜಂಗಮದ ಸುಖವ ಕಾಣಬಾರದು.
ಜಂಗಮ ಜಂಗಮದ ಸುಖವ ಕಾಣಬಹುದಲ್ಲದೆ,
ನಿಜ ನಿಜದ ಸುಖವ ಕಾಣಬಾರದು.
ನಿಜ ನಿಜದ ಸುಖವ ಕಾಣಬಹುದಲ್ಲದೆ,
ನಿಷ್ಪತಿ ನಿಷ್ಪತಿಯ ಸುಖವ ಕಾಣಬಾರದು,
ನಿಷ್ಪತಿ ನಿಷ್ಪತಿಯ ಸುಖವ ಕಾಣಬಹುದಲ್ಲದೆ,
ನಿಜೈಕ್ಯ ನಿಜೈಕ್ಯದ ಸುಖವ ಕಾಣಬಾರದು,
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ನಿರ್ನಾಮಿಗಲ್ಲದೆ ನಿರ್ನಾಮದ ಸುಖವ ಕಾಣಬಾರದ/1126
ಭಕ್ತಿಗೆ ಅನುಭಾವವೆ ಬೀಜ ಕಾಣಿರೆ,
ಭಕ್ತಿಗೆ ಅನುಭಾವವೆ ಆಚಾರ ಕಾಣಿರೆ,
ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು.
ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ
ಕೂಡಲಚೆನ್ನಸಂಗಮದೇವರು ಅಘೋರನರಕದಲ್ಲಿಕ್ಕುವ/1127
ಭಕ್ತಿಯಂತುಟಲ್ಲ, ಮುಕ್ತಿಯಂತುಟಲ್ಲ, ಯುಕ್ತಿಯ ಪರಿ ಬೇರೆ.
ವೀರವೈರಾಗ್ಯಭಾಷೆಯಂತುಟಲ್ಲ, ಸಹಜದ ಪರಿ ಬೇರೆ.
ಅಂಗಲಿಂಗದ ಸಂಬಂಧವು ಸಾರಾಯಂಗಲ್ಲದೆ,
ಸುಪ್ರಸಾದ ಗ್ರಾಹಕತ್ವ ಪ್ರಾಣಲಿಂಗಿಗಲ್ಲದೆ.
ಪರಿತಃ ಪ್ರಾಣಲಿಂಗೀನಾಂ ಲಿಂಗಪ್ರಾಣಂ ತದುತ್ತಮಂ
ಸ್ವಯಮಾತ್ಮವಧಂ ಕುರ್ವನ್ ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಸಂಬಂಧಸಾರಾಯಸುಪ್ರಸಾದ,
ಪ್ರಾಣನಿಯತ ಲಿಂಗಪ್ರಾಣಿಗಲ್ಲದೆಲ್ಲಿಯದೋ. /1128
ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ ?
ಭಾವಶುದ್ಧವಿಲ್ಲ, ಮಹೇಶ್ವರರೆಂತಪ್ಪಿರಯ್ಯಾ ?
ಅರ್ಪಿತದನುವರಿದು ಅರ್ಪಿಸಲರಿಯಿರಿ,
ಪ್ರಸಾದವ ಗ್ರಹಿಸುವ ಪರಿಯೆಂತಯ್ಯಾ ?
ನಡೆ-ನುಡಿ ಎರಡಾಗಿ ಇದೆ, ಪ್ರಾಣಲಿಂಗಸಂಬಂದಿಯೆಂತಾದಿರಿ ?
ಇಂದ್ರಿಯಂಗಳು ಭಿನ್ನವಾಗಿ, ಶರಣರಾದ ಪರಿಯೆಂತಯ್ಯಾ ?
ವಿದಿ ನಿಷೇಧ ಭ್ರಾಂತಿ ಮುಕ್ತಿಯಾದ ಪರಿಯನರಿಯಿರಿ, ಐಕ್ಯರೆಂತಪ್ಪಿರಿ ?
ಈ ಪಡುಸ್ಥಲದ ಕ್ರಿಯಾಕರ್ಮವರ್ಮ ಆರಿಗೆಯೂ ಅರಿಯಬಾರದು.
ಈ ವರ್ಮವರಿದಡೆ ಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ. /1129
ಭಕ್ತಿಯುಕ್ತಿಯ ಹೊಲಬ ಬಲ್ಲವರ,
ಮೂರುಲೋಕದೊಳಗಾರನೂ ಕಾಣೆ.
ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು
ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ
ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು.
ಆ ಪ್ರಸನ್ನತೆಯ ರುಚಿಯನುಪಮಿಸಬಾರದು.
ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು.
ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು.
ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ
ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು;
ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ
ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ,
ಇಲ್ಲವೆಂದು ಬಿಜ್ಜರಿ ತಕರ್ಿಸಲು,
ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ?
ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ
ಬಸವಣ್ಣ ಪ್ರಭುದೇವರ ಪ್ರಸಾದದ ಘನವು
ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !/1130
ಭಕ್ತಿಯೆಂಬುದು ಬಾರಿ ಬಾಯ ಧಾರೆ, ಅದೆಂತೆಂದಡೆ:
ಕಂಗಳಿನ ವರಿಯದಂತೆ ಸುತ್ತಲರಿದು;
ಮಧ್ಯಾಹ್ನದ ಆದಿತ್ಯನಂತೆ ನೋಡಲರಿದು,
ಪಾಪಿಯ ಕೂಸಿನಂತೆ ಎತ್ತಲರಿದು,
ಒಳು(ವಾಳಿರಿ)ಗುದುರಿಯಂತೆ ಒ(ಹ ರಿ)ತ್ತಲರಿದು,
ಸಜ್ಜನವುಳ್ಳ ಸತಿಯಂತೆ ಉಳಿಯಲರಿದು,
ಪಾದರಸದಂತೆ ಹಿಡಿಯಲರಿದು,
ಮೊದಲುಗೆಟ್ಟ ಹರದನಂತೆ ಕೆತ್ತಿಕೊಂಡಿಹುದು,
ಭಕ್ತಿಯ ಮುಖ ಎತ್ತಲೆಂದರಿಯಬಾರದು.
ಇದು ಕಾರಣ-ಕೂಡಲಚೆನ್ನಸಂಗಯ್ಯ ಹಿಡಿಯಬಲ್ಲವರಿಗಳವಟ್ಟಿತ್ತು
ಹೊಡೆ(ಹಿಡಿರಿ)ಯಲರಿಯದವರಿಗೆ ವಿಗುರ್ಬಣೆಯಾಗಿತ್ತು./1131
ಭಕ್ತಿವಿಶೇಷವಳವಡದಯ್ಯಾ! ವಿಷದ ಕೊಡನುವ ತುಡುಕಲೇಬಾರದು.
ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯ ವಿಷ.
ಮಾಯಾವಿಚಿತ್ರ ಕೂಡಲಸಂಗಯ್ಯನಲ್ಲಿ
ಸದಾಚಾರ ಸಂಬಂಧವು. /1132
ಭಜಿಸಲಿಲ್ಲ, ಗತಿಮತಿ ಫಲವಿರಹಿತನಾಗಿ,
ಉಂಟೆಂಬ ಕುಳವಲ್ಲ, ಇಲ್ಲೆಂಬ ನಿಸ್ಸಾರನಲ್ಲ.
ಕೂಡಲಚೆನ್ನಸಂಗಾ ನಿಮ್ಮ ಶರಣ ಲಿಂಗೈಕ್ಯನಾಗಿ. /1133
ಭಯದಳವು ನಡೆದು ಬಂದು ಮುಂದೆ ನಿಂದಿರ್ದು
ಭಾಷೆಯಾಗಿ ಬಿರಿದನುಚ್ಚರಿಸುತ್ತ ಹೊಯಿಕುಟ್ಟಿಯಾಡುವ
ಕಾಳಗದೊಳಗೆ ಕೈದು ಬಿದ್ದಡೆ ಭಂಗವಲ್ಲದೆ
ಶಸ್ತ್ರಸಾಧಕ ಕಲಿತೇನೆಂದು ಅಭ್ಯಾಸಮಾಡುವ ಅಭ್ಯಾಸದೊಳಗೆ
ಕೋಲು ಬಿದ್ದರೆ ಭಂಗವೆ ? ಅಲ್ಲ.
ಮತ್ತೆ ಮರಳಿ ಕೋಲು ಕಳೆದುಕೊಂಡು
ಅಭ್ಯಾಸ ಮಾಡುವುದೇ ಉಚಿತವಲ್ಲದೆ;
ನಾನಿನ್ನು ಅಭ್ಯಾಸವ ಮಾಡಲಾಗದು
ಕೋಲು ಬಿದ್ದಿತ್ತೆಂಬ ಗಾವಿಲರ ಮಾತ ಕೇಳಲಾಗದು.
ದೃಷ್ಟವೇ ಕೋಲು ಅದೃಷ್ಟವೆ ಕೈದು (ಪ್ರಾಣ?).
ಕಾಣಬಾರದ ಲಿಂಗವ ಕಾಬುದು ತನ್ನ ಸತ್ಕ್ರೀ ಕಾಣಾ
ಕೂಡಲಚೆನ್ನಸಂಗಯ್ಯಾ./1134
ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ
ಕಾಮನ ಕಾಟವು ಕಡೆಗಾಣದಯ್ಯಾ.
ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ
ಕಾಲದೂತರ ಬಿತಿಯು ತಪ್ಪದಯ್ಯಾ.
ತನುತ್ರಯದ ಅಬಿಮಾನ ಇಹನ್ನಬರ
ಸಂಸಾರಸಂತಾಪ ಓರೆಯಾಗದಯ್ಯಾ.
ಕೂಡಲಚೆನ್ನಸಂಗಮದೇವಾ,-
ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ
ನಿನ್ನ ಮಾಯದ ಮಾಟವೆಂದರಿದೆನಯ್ಯಾ./1135
ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ ಮನುಜನು
ಶ್ರೀಗುರುವಿನ ಕರುಣವ ಪಡೆಯಬೇಕಾಗಿ
ಆ ಗುರುವಿನಿರವ ಬೆದಕುತ್ತಿರುವಲ್ಲಿ,
ಶಿಷ್ಯತಂಡವನೊಳಕೊಂಡ ಒರ್ವ ದೇಶಿಕನ ಕಂಡು,
ಕೆಲಕಾಲ ಆತನ ಸೇವೆಯಲ್ಲಿರಬೇಕು.
ಆತನಲ್ಲಿ ಜ್ಞಾನಾಚಾರಂಗಳಿಲ್ಲದುದ ಕಂಡಡೆ ಆತನನ್ನುಳಿದು
ಗುರುಲಕ್ಷಣದಿಂದೊಪ್ಪುವ ಮತ್ತೊರ್ವ ಮಹಿಮನೆಡೆಗೈದಿ
ಪರಕಿಸಿ ಮನದಟ್ಟಾದಲ್ಲಿ ಆತನಿಂದೆ ಜ್ಞಾನದೀಕ್ಷೆಯ ಪಡೆಯಬೇಕು.
ಇದು ಸದ್ಭಾವಿಗಳ ಸನ್ಮಾರ್ಗವಯ್ಯಾ, ಕೂಡಲಚೆನ್ನಸಂಗಮದೇವಾ./1136
ಭವಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ
ಶಿವಬೀಜಂ ತಥಾ ಜ್ಞಾನಂ ತ್ರೈಲೋಕ್ಯದುರ್ಲಭಂ
ಈಷಣತ್ರಯಸಂಯುಕ್ತಃ ಶಿವಜ್ಞಾನವಿವರ್ಜಿತಃ
ಶ್ವಪಚಃ ಪಾದಾತೀರ್ಥಂ ತು ಸ್ವೀಕುರ್ವನ್ನರಕಂ ವ್ರಜೇತ್
ಸಂಸಾರಾರ್ಣವಘೋರೇಣ ವೇಷಮಂಗೀಕರೋತಿ ಯಃ
ಪಾದತೀರ್ಥಂ ಪ್ರಸಾದಂ ಚ ಸ್ವೀಕುರ್ವನ್ನರಕಂ ವ್ರಜೇತ್
ಉತ್ತಮಂ ಪ್ರಾಣಲಿಂಗಸ್ಯ ತ್ವಂಗಲಿಂಗಸ್ಯ ಮಧ್ಯಮಂ
ಕನಿಷ್ಠಂ ಸ್ಥಾವರಾದೀನಾಂ ಧ್ಯಾನಂ ಶೂನ್ಯಸ್ಯ ನಿಷ್ಫಲಂ -ಇಂತೆಂದುದಾಗಿ
ಪ್ರಾಣಲಿಂಗವರಿಯದವರ ಪಾದಾರ್ಚನೆಯ ಮಾಡಲಾಗದು.
ಮುಖಲಿಂಗವಿಲ್ಲದವರಲ್ಲಿ ಪ್ರಸಾದವ ಕೊಂಡಡೆ,
ಸರ್ವಾಂಗ ಲಿಂಗವೆಂದರಿಯದವರಲ್ಲಿ ಪ್ರಸಾದವ ಕೊಂಡಡೆ,
ಅಘೋರನರಕ ತಪ್ಪದಯ್ಯಾ, ಕೂಡಲಚೆನ್ನಸಂಗಮದೇವಾ./1137
ಭವವಿಲ್ಲದ ಭಕ್ತನ ಪರಿಯ ನೋಡಾ !
ಮನ ಪ್ರಾಣ ಮುಕ್ತಿಭಾವ ವಿರಹಿತ
ಒಡಲಿಲ್ಲದ ಜಂಗಮದ ಪರಿಯ ನೋಡಾ !
ಸಿಡಿಲು ಮಿಂಚಿನ ರೂಹನೊಂದೆಡೆಯಲ್ಲಿ ಹಿಡಿಯಲುಂಟೆ ?
ಈ ಉಭಯ ಒಂದಾದವರ ಕಂಡರೆ ನೀವೆಂಬೆನಯ್ಯಾ.
ಕೂಡಲಚೆನ್ನಸಂಗಮದೇವಾ./1138
ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ ?
ವೇಶಿ ಭಕ್ತೆಯಾದರೇನಯ್ಯಾ ಎಂಜಲ ತಿಂಬುದ ಬಿಡದನ್ನಕ್ಕ ?
ಅರಸು ಭಕ್ತನಾದರೇನಯ್ಯಾ, ಅಹಂಕಾರವಳಿಯದನ್ನಕ್ಕ ?-
ಇಂತೀ ಮೂವರಿಗೆ ಲಿಂಗವ ಕೊಟ್ಟಾತ ವ್ಯವಹಾರಿ, ಕೊಂಡಾತ ಲಾಭಗಾರ-
ಇವರ ಭಕ್ತಿಯೆಂಬುದು,
ಒಕ್ಕಲಗಿತ್ತಿ ಹೊಸ್ತಿಲ ಪೂಜೆಯ ಮಾಡಿ, ಇಕ್ಕಾಲಿಕ್ಕಿ ದಾಟಿದಂತಾಯಿತ್ತು.
ಹಟ್ಟಿಯ ಹೊರಗೆ ಬೆನವನ ಪೂಜೆಯ ಮಾಡಿ
ತಿಪ್ಪೆಯೊಳಗೆ ಬಿಟ್ಟಂತಾಯಿತ್ತು.
ಜಂಗಮದ ಪೂಜೆಯ ಮಾಡಿ ನೈಷ್ಠೆಯಿಲ್ಲದ ಭ್ರಷ್ಟರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ ?/1139
ಭವಿ ಮಣ್ಣಲಿ ಮಾಡಿದ ಮಡಕೆಯ ಕಳೆವುದು ಶೀಲವೆ ?
ಅಲ್ಲಲ್ಲಿ ಮೆಟ್ಟಿದ ಭೂಮಿಯ ಕಳೆವುದು ಶೀಲವೆ?
ಕೆರೆ ಬಾವಿ ತೊರೆಯ ತೊರೆವುದು ಶೀಲವೆ ?
ಅಲ್ಲಲ್ಲಿಗೆ ಒಸರುವ ಉದಕವ ತೊರೆವುದು ಶೀಲವೆ ?
ಲಿಂಗಾರ್ಪಿತ ಮಾಡಿದ ಪ್ರಸಾದವ ಭವಿ ನೋಡಲಿಕ್ಕೆ ಕೊಂಡರೆ ಭಾಷೆಗೆ ವ್ರತಗೇಡಿ,
ಕೊಳ್ಳದಿದ್ದರೆ ಪ್ರಸಾದದ್ರೋಹಿ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸಂಕಲ್ಪ ವಿಕಲ್ಪದಿಂದ ಕೆಟ್ಟಿತ್ತು ಶೀಲ. /1140
ಭವಿ ಮಾಡಲಿಕೆ ಪೃಥ್ವಿಯಾಯಿತ್ತು, [ಭ ಮಾಡಲಿಕೆ ಅಪ್ಪುವಾಯಿತ್ತು
ಭವಿ ಮಾಡಲಿಕೆ ತೇಜವಾಯಿತ್ತು, ಭವಿ ಮಾಡಲಿಕೆ ವಾಯುವಾಯಿತ್ತು]
ಭವಿ ಮಾಡಲಿಕೆ ಆಕಾಶವಾಯಿತ್ತು, ಭವಿ ಮಾಡಲಿಕೆ ಸೂರ್ಯಚಂದ್ರರಾದರು.
[ಭವಿ ಮಾಡಲಿಕೆ] ವಿಷ್ಣುವಾದ ರುದ್ರನಾದ ದೇವರ್ಕಳಾದರು.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಭವಿಯಿಂದಾಯಿತ್ತು ಸಕಲ ಜಗವೆಲ್ಲ. /1141
ಭವಿಗೆ ಇಕ್ಕಲಾಗದೆಂಬ ಸಂಬಂದಿಗಳು ಮರಳಿ ಭವಿಗಿಕ್ಕಿದರೆ,
ಭಾಷೆಗೆ ವ್ರತಗೇಡಿ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಭವಿಗಳು
ನಿಮ್ಮನಾವ[ರಿಸಿ]ಕೊಂಡಿರಲು ಮತ್ತೆ ಭವಿಗಿಕ್ಕೆನೆಂಬ ಪರಿಯೆಂತೋ ?
ಬಹಿರಂಗದ ಭವಿಯ ಕಳೆವುದು (ಅಭ್ಯಾಸವಲ್ಲದೆ ನಿಜವಲ್ಲ),
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಅಂತರಂಗದ ಭವಿಯ ಕಳೆವ ಶರಣನಪೂರ್ವ. /1142
ಭವಿಗೆ ಭವವಿಲ್ಲ, ಭಕ್ತಂಗೆ ಭವಿಯನೊಲ್ಲೆನೆಂಬುದು ದುರಾಚಾರ.
ದೇವಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆಂದೆ,
ಲಿಂಗಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆ ?
ಭವಿಗೆ ಮಾಡುವ ಪದಾರ್ಥವನತಿ ಸುಯಿದಾನದಲ್ಲಿ ಮಾಡಬೇಕು.
ಭಕ್ತಕಂಡಡೆ ಮುಟ್ಟಪಡವಾಯಿತಾಗಿ-ಇದು ಕಾರಣ
ಕೂಡಲಚೆನ್ನಸಂಗಯ್ಯ, ಭಕ್ತನಾಗಿ ಭವಿಯಾಗದಿರ್ದಡೆ
ಅವರನೆಂತು ಭಕ್ತರೆಂಬೆ ?/1143
ಭವಿಗೆ ಹುಟ್ಟಿದ ಭಕ್ತ, ಭಕ್ತಗೆ ಹುಟ್ಟಿದ ಪ್ರಸಾದ,
ಪ್ರಸಾದಕ್ಕೆ ಹುಟ್ಟಿದ ಅರ್ಪಿತ, ಅರ್ಪಿತಕ್ಕೆ ಹುಟ್ಟಿದ ಆರೂಢ.
ಆರೂಢಕ್ಕೆ ಹುಟ್ಟಿದ ಆಚಾರ, ಆಚಾರಕ್ಕೆ ಹುಟ್ಟಿದ ಆಗಮ-
ಕ್ರಿಯಾಜ್ಞಾನಸಂಪಾದನೆಯ ಕೂಡಲಚೆನ್ನಸಂಗಾ
ನಿಮ್ಮ ಶರಣ ಬಲ್ಲ. /1144
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು,
ಜಂಗಮವ ಕಂಡು ಗೃಹಕ್ಕೆ ಬಿಜಯಂಗೈಸಿ ತಂದು,
ತೊತ್ತಿನ ಕೈಯಲ್ಲಿ ಅಗ್ಗವಣಿಯ ತಂದಿರಿಸಿ
ಪಾದಾರ್ಚನೆಯ ಮಾಡುವ ಭಕ್ತನ ಯುಕ್ತಿಯ ಕೇಳಿರಣ್ಣಾ !
ಭಕ್ತರ ಬಸುರಲ್ಲಿ ಬರುತ ಬರುತಲಾ
ತೊತ್ತಿನ ಬಸುರಲ್ಲಿ ಬರುತ್ತಿಪ್ಪನು ಕಾಣಾ
ಕೂಡಲಚೆನ್ನಸಂಗಮದೇವಾ./1145
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು
ಸದ್ಗುರುವನರಸಿಕೊಂಡು ಬಂದು
ಅವರ ಕಾರುಣ್ಯದಿಂದ ಮುಕ್ತಿಯಂ ಪಡೆದೆನೆಂದು
ಆ ಶ್ರೀಗುರುವಿಂಗೆ ದಂಡಪ್ರಣಾಮಂ ಮಾಡಿ
ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು
ಎಲೆ ದೇವಾ ! ಎನ್ನ ಭವಿತನಮಂ ಹಿಂಗಿಸಿ
ನಿಮ್ಮ ಕಾರುಣ್ಯದಿಂದೆನ್ನ ಭಕ್ತನಂ ಮಾಡುವುದೆಂದು
ಶ್ರೀಗುರುವಿಂಗೆ ಬಿನ್ನಹವಂ ಮಾಡಲು
ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಶುವಂ ಕಂಡು
ತಮ್ಮ ಕೃಪಾವಲೋಕನದಿಂ ನೋಡಿ ಆ ಭವಿಯ
ಪೂರ್ವಾಶ್ರಯಮಂ ಕಳೆದು ಪೂನಜರ್ಾತನಂ ಮಾಡಿ
ಆತನ ಅಂಗದ ಮೇಲೆ ಲಿಂಗಪ್ರತಿಷ್ಠೆಯಂ ಮಾಡುವ
ಕ್ರಮವೆಂತೆಂದಡೆ-
ಓಂ ಅಗ್ನಿರಿತಿ ಭಸ್ಮ ಓಂ ವಾಯುರಿತಿ ಭಸ್ಮ
ಓಂ ಜಲಮಿತಿ ಭಸ್ಮ ಓಂ ಸ್ಥಲಮಿತಿ ಭಸ್ಮ
ಓಂ ವ್ಯೋಮೇತಿ ಭಸ್ಮ ಓಂ ಸೋಮೇತಿ ಭಸ್ಮ
ಓಂ ಸೂಯರ್ೆತಿ ಭಸ್ಮ ಓಂ ಆತ್ಮೇತಿ ಭಸ್ಮ
ಎಂಬೀ ಮಂತ್ರದಿಂದ ಆತನ ಅಷ್ಟತನುವಂ ಶುದ್ಧವ ಮಾಡುವುದು
ಇನ್ನು ಆತನ ಜೀವ ಶುದ್ಧವ ಮಾಡುವ ಕ್ರಮವೆಂತೆಂದಡೆ-
ಓಂ ಅಸ್ಯ ಪ್ರಾಣಪ್ರತಿಷ್ಠಾ ಮಂತ್ರಸ್ಯ ಬ್ರಹ್ಮವಿಷ್ಣು ಮಹೇಶ್ವರಾ ಋಷಯಃ
ಋಗ್ಯಜುಃ ಸಾಮಾಥರ್ವಣಾ ಶ್ಫಂದಾಂಸಿ
ಸದಾಶಿವ ಮಹಾಪ್ರಾಣ ಇಹಪ್ರಾಣ ಮಮ ಜೀವ ಅಯಂ ತಥಾ
ಮಮಾಸಕ್ತ ಸರ್ವೆಂದ್ರಿಯಾಣಿ
ವಾಙ್ಮನಶ್ಚಕ್ಷುಃ ಶ್ರೋತ್ರ ಜಿಹ್ವಾಘ್ರಾಣ ಮನೋಬುದ್ಧಿ ಚಿತ್ತ ವಿಜ್ಞಾನವ?
ಮಮ ಶರೀರೇ ಅಂಗಸ್ಯ ಸುಖಂ ಸ್ಥಿರಿಷ್ಯತಿ
ಜೀವಃ ಶಿವಃ ಶಿವೋ ಜೀವಃ ಸಜೀವಃ ಕೇವಲಃ ಶಿವಃ
ಪಾಶಬದ್ಧೋ ಭವೇಜ್ಜೀವಃ ಪಾಶಮುಕ್ತಃ ಶದಾಶಿವಃ
ಎಂದೀ ಮಂತ್ರದಿಂದ ಆತನ ಜೀವನ ಶುದ್ಧವಂ ಮಾಡುವುದು.
ಇನ್ನು ಆತ್ಮಶುದ್ದವ ಮಾಡುವ ಕ್ರಮವೆಂತೆಂದಡೆ-
ಓಂ ಶಿವಾತ್ಮಕಸುಖಂ ಜೀವೋ ಜೀವಾತ್ಮಕಸುಖಂ ಶಿವಃ
ಶಿವಜೀವಾತ್ಮಸಂಯೋಗೇ ಪ್ರಾಣಲಿಂಗಂ ತಥಾ ಭವೇತ್
ಎಂದೀ ಮಂತ್ರದಿಂದ ಆತನ ಆತ್ಮನ ಶುದ್ಧವಂ ಮಾಡುವುದು.
ಇನ್ನು ವಾಕ್ಕು ಪಾಣಿ ಪಾದ ಗುಹ್ಯ ಪಾಯುವೆಂಬ ಕಮರ್ೆಂದ್ರಿಯಂಗಳ
ಮೇಲಣ ಇಂದ್ರಿಯ ಲಿಖಿತವಂ ತೊಡೆದು ಲಿಂಗಲಿಖಿತವಂ
ಮಾಡುವ ಕ್ರಮವೆಂತೆಂದಡೆ-
ಓಂ [ಮೇ] ನೇತ್ರೇ ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ
ಕರ್ಣಾ ಪಾತು ಶಂಭುಮರ್ೆ ನಾಸಿ ಕಾಯಾಂ ಭವೋದ್ಭವಃ
ವಾಗೀಶಃ ಪಾತು ಮೇ ಜಿಹ್ವಾಮೋಷ್ಠಂ ಪಾತ್ವಂಬಿಕಾಪತಿಃ
ಎಂದೀ ಮಂತ್ರದಿಂದ ಆತನ ಪಂಚೇಂದ್ರಿಯಂಗಳ ಮೇಲಣ ಇಂದ್ರಿಯ
ಲಿಖಿತಮಂ ತೊಡೆದು ಲಿಂಗಲಿಖಿತವಂ ಮಾಡುವುದು.
ಇನ್ನು ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳ
ನಿವರ್ತನೆಯ ಮಾಡುವ ಕ್ರಮವೆಂತೆಂದಡೆ-
ಮನದಲ್ಲಿ ಧ್ಯಾನವಾಗಿ ಬುದ್ಧಿಯಲ್ಲಿ ವಂಚನೆಯಿಲ್ಲದೆ
ಚಿತ್ತವು ದಾಸೋಹದಲ್ಲಿ ಅಹಂಕಾರವು ಜ್ಞಾನದಲ್ಲಿ
ಈ ಮರ್ಯಾದೆಯಲ್ಲಿ ಚತುರ್ವಿಧಮಂ ನಿವರ್ತನೆಯಂ ಮಾಡುವುದು.
ಇನ್ನು ಆತಂಗೆ ಪಂಚಗವ್ಯಮಂ ಕೊಟ್ಟು ಏಕಭುಕ್ತೋಪವಾಸಂಗಳಂ ಮಾಡಿಸಿ
ಪಂಚಭೂತಸ್ಥಾನದ ಅದಿದೇವತೆಗಳಂ ತೋರುವುದು
ಅವಾವೆಂದಡೆ-
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ
ಏತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ
ಎಂದೀ ಮಂತ್ರದಿಂದ ಆತನ ಪಂಚಭೂತ ಶುದ್ಧಿಯಂ ಮಾಡುವುದು.
ಈ ಕ್ರಮದಲ್ಲಿ ಶುದ್ಧಾತ್ಮನಂ ಮಾಡಿದ ಬಳಿಕ ಆತನನ್ನು
ಗಣತಿಂಥಿಣಿಯ ಮುಂದೆ ನಿಂದಿರಿಸುವುದು.
ನಿಂದಿದರ್ಾತನಂ ದಂಡಪ್ರಣಾಮಮಂ ಮಾಡಿಸುವ ಕ್ರಮವೆಂತೆಂದಡೆ-
ಅನಂತ ಜನ್ಮಸಂಪ್ರಾಪ್ತ ಕಮರ್ೆಂಧನವಿದಾಹಿನೇ
ಜ್ಞಾನಾನಲಪ್ರಭಾವಾಯ ತಸ್ಮೈ ಶ್ರೀಗುರವೇ ನಮಃ
ಕರ್ಮಣಾ ಮನಸಾ ವಾಚಾ ಗುರು ಭಕ್ತೈತುವತ್ಸಲಃ
ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್
ಪ್ರಣಮ್ಯ ದಂಡವದ್ಭೂಮೌ ಅಷ್ಟಮಂತ್ರೈಃ ಸಮರ್ಚಯೇತ್
ಶ್ರೀಗುರೋಃ ಪಾದಪದ್ಮಂಚ ಗಂಧಪುಷ್ಪಾಕ್ಷತಾದಿಬಿಃ
ಅನ್ಯಥಾ ವಿತ್ತಹೀನೋಪಿ ಗುರುಭಕ್ತಿಪರಾಯಣಃ
ಕೃತ್ವಾ ದಂಡನಮಸ್ಕಾರಂ ಸ್ವಶರೀರಂ ನಿವೇದಯೇತ್
ಎಂದೀ ಮಂತ್ರದಿಂದ ದಂಡಪ್ರಣಾಮವಂ ಮಾಡಿಸುವುದು
ಆತನ ರೈವಿಡಿದೆತ್ತುವ ಕ್ರಮವೆಂದರೆ
ಗುರುಃ ಪಿತಾ ಗುರುರ್ಮಾತಾ ಗುರುರೇವ ಹಿ ಬಾಂಧವಃ
ಗುರುದೈವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ
ಓಂ ಗುರುದೇವೋ ಭವ, ಓಂ ಪಿತೃದೇವೋ ಭವ, ಓಂ ಆಚಾರ್ಯದೇವೋ ಭವ
ಎಂದೀ ಮಂತ್ರದಿಂದ ಆತನ ಕೈವಿಡಿದೆತ್ತುವುದು
ಇನ್ನು ಭೂಶುದ್ಧಿಯಂ ಮಾಡುವ ಕ್ರಮವೆಂತೆಂದಡೆ-
ಓಂ ಶಿವಶಿವ ಶಿವಾಜ್ಞಾ ವಿಷ್ಣುಪ್ರವರ್ತಮಾನುಷಾ ಅಪವಿತ್ರಃ ಪವಿತ್ರೋವಾ
ಸರ್ವಾವಸ್ಥಾಂಗತೋಪಿ ವಾ
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ
ಪ್ರಥ್ವಿ ತ್ವಯಾ ಧೃತಾ ದೇವಿ ದೇವತ್ವಂ ವಿಷ್ಣುನಾ ಧೃತಾ
ಪಂಚದಾರಾಮಯೋ ದೇವಿ ಪವಿತ್ರಂ ಕುರು ಚಾಸನಮ್
ಸಮ್ಮಾರ್ಜನಂ ಶತಂ ಪುಣ್ಯಂ ಸಹಸ್ರಮನುಲೇಪನಮ್
ರೇಖಾಶತಸಹಸ್ರೇಷು ಅನಂತಂ ಪದ್ಮಮುಚ್ಯತೇ
ಬಂಧೋ ಭವಹರಶ್ಚೈವ ಸ್ವಸ್ತಿಕಂ ಶತ್ರುನಾಶನಮ್
ಪದ್ಮಂ ಪುಣ್ಯಂ ಫಲಂ ಚೈವ ಮುದ್ರಾ ತು ಮೋಕ್ಷಸಾಧನಮ್
ಎಂದೀ ಮಂತ್ರದಿಂದ ಭೂಶುದ್ಧಿಯ ಮಾಡುವದು.
ಇನ್ನು ಆತನ ಚೌಕಮಧ್ಯದಲ್ಲಿ ಕುಳ್ಳಿರಿಸುವ ಕ್ರಮವೆಂತೆಂದಡೆ-
ಓಂ ನಮೋ ರುದ್ರೇಭ್ಯೋ ಯೇ ಪೃಥ್ವಿವ್ಯಾಂ
ಯೇಂತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ
ವರ್ಷಮಿಷವಸ್ತೇಭ್ಯೋ ದಶಪ್ರಾಚೀರ್ದಶ ದಕ್ಷಿಣಾ
ದಶ ಪ್ರತೀಚೀರ್ದಶೋದೀಚೀರ್ದಶೋಧ್ರ್ವಾಸ್ತೇಭ್ಯೋ
ನಮಸ್ತೇನೋ ಮೃಡಯಂತು ತೇ ಯಂ ದ್ವಿಷ್ಟೋ ಯಶ್ಚನೋ
ದ್ವೇಷ್ಟಿ ತಂ ವೊ ಜಂಬೇ ದಧಾಮಿ
ಚಾಂ ಪೃಥಿವ್ಯಾ ಮೇರು ಪೃಷ್ಠ ಋಷಿಃ ಕೂಮರ್ೋ ದೇವತಾ
ಜಗತೀ ಛಂದಃ ಆಸನೇ ವಿನಿಯೋಗಃ
ಎಂದೀ ಮಂತ್ರದಿಂದ ಶ್ರೀಗುರು ಆತನ ಚಾಕಮಧ್ಯದಲ್ಲಿ ಕುಳ್ಳಿರಿಸುವುದು.
ಇನ್ನು ನಾಲ್ಕೂ ಕಲಶದ ಪ್ರತ್ಯೇಕ ಪ್ರಧಾನ ದೇವತೆಗಳಂ ಕುಳ್ಳಿರಿಸಿ
ಗುರುಕಲಶವಂ ಸ್ಥಾಪ್ಯವಂ ಮಾಡುವ ಕ್ರಮವೆಂತೆಂದಡೆ-
ಚೌಕಮಧ್ಯೇ ಸುಮಾಂಗಲ್ಯಂ ಷೋಡಶಂ ಕಲಶಂ ತಥಾ
ಭಾಸುರಂ ತಂಡುಲಂ ತಸ್ಯ ಪಂಚಸೂತ್ರಂ ತಥೈವ ಚ
ತೇಷು ತೀರ್ಥಾಂಬುಪೂರ್ಣೇಷು ನಿದಧ್ಯಾದಾಮ್ರಪಲ್ಲವಾನ್
ದೂರ್ವಾಂಕುರಸುಪೂಗಾನಿ ನಾಗವಲ್ಲೀದಲಾನ್ಯಪಿ
ಓಂ ತತ್ಪುರುಷಾಯ ನಮಃ ತತ್ಪುರುಷವಕ್ತ್ರಾಯ ನಮಃ
ಓಂ ಅಘೋರರಾಯ ನಮಃ ಅಘೋರವಕ್ತ್ರಾಯ ನಮಃ
ಓಂ ಸದ್ಯೋಜಾತಾಯ ನಮಃ ಸದ್ಯೋಜಾತವಕ್ತ್ರಾಯ ನಮಃ
ಓಂ ವಾಮದೇವಾಯ ನಮಃ ವಾಮದೇವವಕ್ತ್ರಾಯ ನಮಃ
ಓಂ ಈಶಾನಾಯ ನಮಃ ಈಶಾನವಕ್ತ್ರಾಯ ನಮಃ
ಓಂ ತತ್ಪುರುಷ ಅಘೋರ ಸದ್ಯೋಜಾತ ವಾಮದೇವ ಈಶಾನ ವಕ್ತ್ರೇಭ್ಯೋ ನಮಃ
ಎಂದು ಈ ಮಂತ್ರದಿಂದ ಗುರುಕಲಶಕ್ಕೆ ಪಂಚಸೂತ್ರಂಗಳನಿಕ್ಕಿ ಪಂಚಪಲ್ಲವಂಗಳನಿಕ್ಕಿ
ಪಂಚಮುಖಂಗಳನಿಕ್ಕಿ ಗುರುಕಲಶವಂ ಸ್ಥಾಪ್ಯವಂ ಮಾಡುವುದು.
ಇನ್ನು ಜಲಶುದ್ಧವಂ ಮಾಡುವ ಕ್ರಮವೆಂತೆಂದಡೆ –
ಓಂ ನಮಃ ಶಿವಾಯ ನಮಸ್ತೇ ಅಸ್ತು ಭಗವನ್
ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ
ತ್ರಿಕಾಲಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ
ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ
ಶ್ರೀಮನ್ಮಹಾದೇವಾಯ ನಮಃ
ಓಂ ನಿಧನಪತಯೇ ನಮಃ ನಿಧನಪತಾಂತಿಕಾಯ ನಮಃ
ಓಂ ಊಧ್ರ್ವಾಯ ನಮಃ ಊಧ್ರ್ವಲಿಂಗಾಯ ನಮಃ
ಓಂ ಹಿರಣ್ಯಾಯ ನಮಃ ಹಿರಣ್ಯಲಿಂಗಾಯನಮಃ
ಓಂ ಸುವರ್ಣಾಯ ನಮಃ ಸುವರ್ಣಲಿಂಗಾಯ ನಮಃ
ಓಂ ದಿವ್ಯಾಯ ನಮಃ ದಿವ್ಯಲಿಂಗಾಯ ನಮಃ
ಓಂ ಭವಾಯ ನಮಃ ಭವಲಿಂಗಾಯ ನಮಃ
ಓಂ ಶಿವಾಯ ನಮಃ ಶಿವಲಿಂಗಾಯ ನಮಃ
ಓಂ ಜ್ಯೇಷ್ಠಾಯ ನಮಃ ಜ್ಯೇಷ್ಠಲಿಂಗಾಯ ನಮಃ
ಓಂ ಶ್ರೇಷ್ಠಾಯ ನಮಃ ಶ್ರೇಷ್ಠಲಿಂಗಾಯ ನಮಃ
ಓಂ ಜ್ವಲಾಯ ನಮಃ ಜ್ವಲಲಿಂಗಾಯ ನಮಃ
ಓಂ ಸ್ಥೂಲಾಯ ನಮಃ ಸ್ಥೂಲಲಿಂಗಾಯ ನಮಃ
ಓಂ ಸೂಕ್ಷ್ಮಾಯ ನಮಃ ಸೂಕ್ಷ್ಮಲಿಂಗಾಯ ನಮಃ
ಓಂ ಶೂನ್ಯಾಯ ನಮಃ ಶೂನ್ಯಲಿಂಗಾಯ ನಮಃ
ಓಂ ನೇತ್ರಾಯ ನಮಃ ನೇತ್ರಲಿಂಗಾಯ ನಮಃ
ಓಂ ಶ್ರೋತ್ರಾಯ ನಮಃ ಶ್ರೋತ್ರಲಿಂಗಾಯ ನಮಃ
ಓಂ ಘ್ರಾಣಾಯ ನಮಃ ಘ್ರಾಣಲಿಂಗಾಯ ನಮಃ
ಓಂ ಪ್ರಾಣಾಯ ನಮಃ ಪ್ರಾಣಲಿಂಗಾಯ ನಮಃ
ಓಂ ವ್ಯೋಮಾಯ ನಮಃ ವ್ಯೋಮಲಿಂಗಾಯ ನಮಃ
ಓಂ ಆತ್ಮಾಯ ನಮಃ ಆತ್ಮಲಿಂಗಾಯ ನಮಃ
ಓಂ ಪರಮಾಯ ನಮಃ ಪರಮಲಿಂಗಾಯ ನಮಃ
ಓಂ ಶರ್ವಾಯ ನಮಃ ಶರ್ವಲಿಂಗಾಯ ನಮಃ
ಓಂ ಶಾಂತಾಯ ನಮಃ ಶಾಂತಲಿಂಗಾಯ ನಮಃ
ಓಮೇತತ್ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ
ಸ್ಥಾಪಯತಿ ಪಾಣಿಮಂತ್ರಂ ಪವಿತ್ರಮ್
ಓಂ ನಮಸ್ತೇ ಸವರ್ೋ ವೈ ರುದ್ರಸ್ತಸ್ಮೈ ರುದ್ರಾಯ ನಮೋಸ್ತು
ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ
ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ
ಪಶುಪತಯೇ ನಮೋ ನಮಃ
ಋತಂ ಸತ್ಯಂ ಪರಬ್ರಹ್ಮ ಪುರುಷಂ ಕೃಷ್ಣಪಿಂಗಲಂ
ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ
ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ
ಭವೇ ಭವೇ ನಾತಿಭವೇ ಭವಸ್ವ ಮಾಂ ಭವೋದ್ಭವಾಯ ನಮಃ
ಓಂ ವಾಮದೇವಾಯ ನಮೋ
ಜ್ಯೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ
ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಾಯ ನಮೋ
ಬಲಾಯ ನಮೋ ಬಲಪ್ರಮಥನಾಥಾಯ ನಮಃ
ಸರ್ವಭೂತದಮನಾಯ ನಮೋ
ಮನೋನ್ಮನಾಯ ನಮಃ
ಓಂ ಅಘೋರೇಭ್ಯೋಥ ಘೋರೇಭ್ಯೋ ಘೋರಘೋರತರೇಭ್ಯಃ
ಸರ್ವೇಭ್ಯಸ್ಯರ್ವ ಸರ್ವೇಭ್ಯೋ ನಮಸ್ತೇ ಅಸ್ತು ರುದ್ರರೂಪೇಭ್ಯಃ
ಶ್ರೀ ಸದಾಶಿವಾಯ ನಮಃ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ದಿಮಹಿ
ತನ್ನೋ ರುದ್ರಃ ಪ್ರಚೋದಯಾತ್
ಓಮೀಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವಭೂತಾನಾಂ
ಬ್ರಹ್ಮಾದಿಪತಿಬ್ರಹ್ಮಣೋದಿಪತಿಬ್ರ್ರಹ್ಮಾ ಶಿವೋ ಮೇ
ಅಸ್ತು ಸದಾಶಿವೋಂ
ಕದ್ರುದ್ರಾಯ ಪ್ರಚೇತಸೇ ಮೀಡುಷ್ಟಮಾಯ ತವ್ಯಸೇ
ವೋಚೇಮ ಶಂತಮಗ್ಂ ಹೃದೇ
ಏಕಃ ಶಿವ ಏವಾನ್ಯರಹಿತಾಯ ತೇ ನಮೋ ನಮಃ
ಓಂ ವಿಶ್ವಂ ಭೂತಂ ಭುವನಂ ಚಿತ್ರಂ ಬಹುಧಾಜಾತಂ ಜಾಯಮಾನಂ ಚ ಯತ್
ಓಂ ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇ
ಸುಕಾಮಶ್ಚ ಮೇ ಕಾಮಶ್ಚ ಮೇ ಸೌಮನಶ್ಚ ಮೇ
ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ
ಯಶಶ್ಚ ಮೇ ಭಗಶ್ಚ ಮೇ
ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ
ಕ್ಷೇಮಶ್ವಮೇ ಧೃತಿಶ್ಚಮೇ ವಿಶ್ವಂ ಚ ಮೇ
ಮಹಶ್ಚಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ
ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ
ಲಯಶ್ಚಯ ಮೇ ಅಮೃತಂ ಚ ಮೇ ಯಕ್ಷ್ಮಂಚ ಮೇ ಮೃತಂ ಚ ಮೇ
ನಾಮಯಶ್ಚ ಮೇ ಜೀವಾತು ಶ್ಚ ಮೇ ದೀಘರ್ಾಯುತ್ವಂ ಚ
ನಮಿತ್ರಂ ಚ ಮೇಖ ಭಯಂ ಚಮೇ ಸುಗಂಧಂ ಚ ಮೇ ಶಯನಂ ಚ ಮೇ
ಸೂಷಾ ಚ ಮೇ ಸುದಿನಂ ಚ ಮೇ
ಓಂ ಸಹನಾವವತು ಸಹ ನಾ ಭುನಕ್ತು
ಸಹ ವೀರ್ಯಂ ಕರವಾವಹೈ ತೇಜಸ್ವಿನಾವದಿತಮಸ್ತು
ಮಾ ವಿದ್ವಿಷಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ಎಂದೀ ಮಂತ್ರದಿಂದ ಜಲಶುದ್ಧವಂ ಮಾಡುವುದು.
ಇನ್ನು ಜಂಗಮಕ್ಕೆ ಪಾದಾರ್ಚನೆಯಂ ಮಾಡುವ ಕ್ರಮವೆಂತೆಂದಡೆ-
ಅಂಗುಷ್ಠಾಗ್ರೇ ಅಷ್ಟಷಷ್ಟಿ ತೀರ್ಥಾನಿ ನಿವಸಂತಿ ವೈ
ಸಪ್ತಸಾಗರಪಾದಾಧಸ್ತದೂಧ್ರ್ವೆ ಕುಲಪರ್ವತಾಃ
ಚರಸ್ಯ ಪಾದತೀಥರ್ೆನ ಲಿಂಗಮಜ್ಜನಮುತ್ತಮವಮ್
ತತ್ಪ್ರಸಾದಂ ಮಹಾದೇವಿ ನೈವೇದ್ಯಂ ಶುಭಮಂಗಲಮ್
ಈ ಮಂತ್ರದಿಂದ ಪಾದಾರ್ಚನೆಯಂ ಮಾಡುವುದು.
ಇನ್ನು ಕುಮಾರಠಾವನು ಜಲಾಬಿವಾಸವ ಮಾಡುವ ಕ್ರಮವೆಂತೆಂದಡೆ-
ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ
ಎಂದೀ ಮಂತ್ರದಿಂದ ಕುಮಾರಠಾವನ್ನು ಜಲಾದಿವಾಸವ ಮಾಡಿಸುವುದು.
ಇನ್ನು ಆ ಶಿಷ್ಯನ ಹಸ್ತವಂ ಶೋದಿಸುವ ಕ್ರಮವೆಂತೆಂದಡೆ-
ಓಂ ತ್ರಾತ್ವಿಯಂ ಶಕ್ತಿಃ
ಶ್ರೀಕರಂ ಚ ಪವಿತ್ರಂ ಚ ರೋಗಶೋಕಭಯಾಪಹವರಿ್
ಮನಸಾ ಸಹ ಹಸ್ತೇಭ್ಯೋ ಪದ್ಭ್ಯಾಮುದ್ಧರಣಾಯ ಚ
ಎಂದೀ ಮಂತ್ರದಿಂದ ಶಿಷ್ಯನ ಹಸ್ತವಂ ಶೋದಿಸುವುದು.
ಇನ್ನು ವಿಭೂತಿಯ ಧರಿಸುವ ಕ್ರಮವೆಂತೆಂದಡೆ-
ಮೂದ್ನರ್ಿ ಲಲಾಟೇ ಕಣರ್ೆ ಚ ಚಕ್ಷುಷೋಘ್ರರ್ಾಣಕೇ ತಥಾ
ಆಸ್ಯೇ ದ್ವಾಭ್ಯಾಂ ಚ ಬಾಹುಭ್ಯಾಂ ತನ್ಮೂಲತನವಸ್ತಥಾ
ಮಣಿಬಂಧೇ ಚ ಹೃತ್ಪಾಶ್ರ್ವೆ ನಾಭೌ ಮೇಢ್ರೇ ತಥೈವ ಚ
ಉರೌ ಚ ಜಾನುಕೇ ಚೈವ ಜಂಘಾ ಪೃಷ್ಠೇ ತಥೈವ ಚ
ಪಾದೇ ದ್ವಾತ್ರಿಂಶತಿಶ್ಚೈವ ಪಾದಸಂಧೌ ಯಥಾ ಕ್ರಮಾತ್
ಇತ್ಯುದ್ಧೂಳನಂ ಸ್ನಾನಂ ಧಾರಣಂ ಮೋಕ್ಷಕಾರಣಮ್
ಎಂದೀ ಮಂತ್ರದಿಂದ ಆ ಶಿಷ್ಯನ ಮೂವತ್ತೆರಡು ಸ್ಥಾನಗಳಲ್ಲಿ
ವಿಭೂತಿಯಂ ಧರಿಸುವುದು.
ಇನ್ನು ರುದ್ರಾಕ್ಷಿಯಂ ಧರಿಸುವ ಕ್ರಮವೆಂತೆಂದಡೆ-
ಓಂ ಹ್ರೂಂ ಶ್ರೂಂ ಭ್ರೂಂ ರೂಂ ಬ್ರೂ-
ಪ್ರರೂಮಪಿ ಸ್ರೀಯಂ ಕ್ಷೇಕ್ಷಮಪಿಕ್ಷೂ ಹ್ರೀಂ ನಮೋಂತಿ ಮಯಯೇ
ಇತಿ ಪೂವರ್ೊಕ್ತ ಮಂತ್ರಾನಂತರೇ ಪ್ರಾಣನಾಯಮ್ಯ
ಸಮಸ್ತ ಪಾಪಕ್ಷಯಾರ್ಥಂ ಶಿವಜ್ಞಾನಾವಾಪ್ತ್ಯರ್ಥಂ
ಸಮಷ್ಟಿಮಂತ್ರೈಃ ಸಹ ಧಾರಣಂ ಕರಿಷ್ಯೇ ಇತಿ ಸಂಕಲ್ಪ್ಯ-
ಶಿರಸಾ ಧಾರಯೇತ್ಕೋಟಿ ಕರ್ಣಯೋರ್ದಶಕೋಟಿಬಿಃ
ಶತಕೋಟಿ ಗಳೇ ಬದ್ಧಂ ಸಹಸ್ರಂ ಬಾಹುಮೂಲಯೋಃ
ಅಪ್ರಮಾಣಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನವರಿ್
ಎಂದೀ ಮಂತ್ರದಿಂದ ಆ ಶಿಷ್ಯನ ಹಸ್ತಂಗಳಲ್ಲಿ ರುದ್ರಾಕ್ಷಿಯಂ ಧರಿಸುವುದು,
ಇನ್ನು ಜಲಾದಿವಾಸದೊಳಗಣ ಕುಮಾರಠಾವಂ ತೆಗೆಯುವ ಕ್ರಮವೆಂತೆಂದಡೆ-
ಮಹಾದೇವಾಯ ಮಹತೇ ಜ್ಯೋತಿಷೇಖನಂತತೇಜಸೇ
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ
ಎಂದೀ ಮಂತ್ರದಿಂದ ಜಲಾದಿವಾಸದೊಳಗಣ ಕುಮಾರಠಾವಂ ತೆಗೆಯುವದು.
ಇನ್ನು ಶಿಲೆಯ ಪೂವಾಶ್ರಯವಂ ಕಳೆವ ಪರಿಯೆಂತೆಂದಡೆ-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ
ವಿಶ್ವತಃಸ್ವಾತ್ ಸಂಬಾಹುಭ್ಯಾಂ ದಮತಿ ಸಂಪದಂ ತ್ರಯೀ-
ದ್ರ್ಯಾವಾಭೂಮೀ ಜನಯನ್ ದೇವ ಏಕಃ
ಎಂದೀ ಮಂತ್ರದಿಂದ ಆ ಶಿಲೆಯ ಪೂರ್ವಾಶ್ರಯವಂ ಕಳೆವುದು.
ಇನ್ನು ಆ ಶಿಲೆಗೆ ಪ್ರಾಣ ಪ್ರತಿಷ್ಠೆಯಂ ಮಾಡುವ ಕ್ರಮವೆಂತೆಂದಡೆ-
ಓಂ ವಿಶ್ವಾದಿಕೋ ರುದ್ರೋ ಮಹಷರ್ಿಃ ಸವರ್ೊ ಹ್ಯೇಷ ರುದ್ರ
ಸ್ತಸ್ಮೈ ರುದ್ರಾಯ ತೇ ಅಸ್ತು ನಮೋ ರುದ್ರೋ ವೈ ಕ್ರೂರೋ-
ರುದ್ರಃ ಪಶುನಾಮದಿಪತಿಸ್ತಥಾ ದೇವಾ ಊಧ್ರ್ವಬಾಹವೊ-
ರುದ್ರಾ ಸ್ತುನ್ವಂತಿ ಯಸ್ಮಾತ್ಪರಂ ನಾಪರಮಸ್ತಿ ಕಿಂಚಿದ್ಯಸ್ಯಾನಾ
ಣೀಯೋ ನ ಧ್ಯೇಯಃ ಕಿಂಚಿತ್ ಶಿವ ಏಕೋ ಧ್ಯೇಯಃ
ಎಂದೀ ಮಂತ್ರದಿಂದ ಆ ಶಿಲೆಗೆ ಪ್ರಾಣಪ್ರತಿಷ್ಠೆಯಂ ಮಾಡುವುದು.
ಇನ್ನು ದೇವರಿಗೆ ಸ್ನಪನಕ್ಕೆರೆಯುವ ಕ್ರಮವೆಂತೆಂದಡೆ-
ಸಪುಷ್ಪಶೀರ್ಷಕಂ ಲಿಂಗಂ ತಥಾ ಸ್ನಪನಮಾಚರೇತ್
ಪಯೋಧಧ್ಯಾಜಮದ್ವಿಕ್ಷುರಸೈಮರ್ೂಲೇನ ಪಂಚಬಿಃ
ಓಮನಂತ ಶುಚಿರಾಯುಕ್ಷ ಭಕ್ತಂ ತಿಸ್ತರತಾತ್
ಪರಮಂ ನಿಯಮುಚ್ಯತೇರ್ಮರಾತಸ್ಯ
ಅವಿರಸ ಭುವನಂ ಜ್ಯೋತಿರೂಪಕವರಿ್
ಎಂದೀ ಮಂತ್ರದಿಂದ ದೇವರಿಗೆ ಸ್ನಪನಕ್ಕೆರೆವುದು.
ಇನ್ನು ದೇವರಿಗೆ ವಸ್ತ್ರವಂ ಸಮರ್ಪಿಸುವುದೆಂತೆಂದಡೆ –
ವ್ಯೋಮರೂಪ ನಮಸ್ತೇಖಸ್ತು ವ್ಯೋಮತ್ಮಾಯ ಪ್ರಹಷರ್ಿಣೇ
ವಾಸಾಂಸಿ ಚ ವಿಚಿತ್ರಾಣಿ ಸರವಂತಿ ಮೃದೂನಿ ಚ
ಶಿವಾಯ ಗುರವೇ ದತ್ತಂ ತಸ್ಯ ಪುಣ್ಯಫಲಂ ಶೃಣು
ಏವಂ ತದ್ವಸ್ತ್ರತಂತೂನಾಂ ಪರಿಸಂಖ್ಯಾತ ಏವ ಹಿ
ತಾವದ್ವರ್ಷಸಹಸ್ರಾಣಿ ರುದ್ರಲೋಕೇ ಮಹೀಯತೇ
ಎಂದೀ ಮಂತ್ರದಿಂದ ದೇವರಿಗೆ ವಸ್ತ್ರವಂ ಸಮರ್ಪಿಸುವುದು.
ಇನ್ನು ದೇವರಿಗೆ ಗಂಧವಂ ಸಮರ್ಪಿಸುವ ಕ್ರಮವೆಂತೆಂದಡೆ-
ಚಂದನಾಗರುಕಪರ್ೂರತಮಾಲದಳಕುಂಕುಮಂ
ಉಶೀರಕೋಷ್ಠಸಂಯುಕ್ತಂ ಶಿವಗಂಧಾಷ್ಟಕಂ ಸ್ಮೃತವಮ್
ಆಚಮಾನಸ್ತು ಸಿದ್ಧಾರ್ಥಂ ಅವಧಾರ್ಯ ಯಥೈವ ಚ
ಅಷ್ಟಗಂಧಸಮಾಯುಕ್ತಂ ಪುಣ್ಯಪ್ರದಸಮನ್ವಿತವಮ್
ಎಂದೀ ಮಂತ್ರದಿಂದ ದೇವರಿಗೆ ಗಂಧಮಂ ಸಮರ್ಪಿಸುವುದು.
ಇನ್ನು ದೇವರಿಗೆ ಅಕ್ಷತೆಯನರ್ಪಿಸುವ ಕ್ರಮವೆಂತೆಂದಡೆ
ಅಬಿನ್ನಶಂಖವಚ್ಚೈವ ಸುಶ್ವೇತವ್ರೀಹಿತಂಡುಲವಮ್
ಸ್ಮೃತಂ ಶಿವಾರ್ಚನಾಯೋಗ್ಯಂ ನೇತರಂ ಚ ವರಾನನೇ
ಗಂಧಾಕ್ಷತಸಮಾಯುಕ್ತಂ ಶಿವಮುಕ್ತೇಶ್ಚಕಾರಣಮ್
ಸರ್ವವಿಘ್ನವಿನಿಮರ್ುಕ್ತಂ ಶಿವಲೋಕೇ ಮಹೀಯತೇ
ಎಂದೀ ಮಂತ್ರದಿಂದ ದೇವರಿಗೆ ಅಕ್ಷತೆಯಂ ಸಮರ್ಪಿಸುವುದು.
ಇನ್ನು ದೇವರಿಗೆ ಪುಷ್ಪವಂ ಸಮರ್ಪಿಸುವ ಕ್ರಮವೆಂತೆಂದಡೆ –
ಮಲ್ಲಿಕೋತ್ಪಲಪುನ್ನಾಗಕದಂಬಾಶೋಕಚಂಪಕಮ್
ಸೇವಂತಿಕಣರ್ಿಕಾರಾಖ್ಯಂ ತ್ರಿಸಂಧ್ಯಾರಕ್ತಕೇಸರೀ
ಕದಂಬವನಸಂಭೂತಂ ಸುಗಂದಿಂ ಚ ಮನೋಹರಮ್
ತತ್ವತ್ರಯಾತ್ಮಕಂ ದಿವ್ಯಂ ಪುಷ್ಪಂ ಶಂಭೋಖರ್ಪಯಾಮಿ ತೇ
ಎಂದೀ ಮಂತ್ರದಿಂದ ದೇವರಿಗೆ ಪುಷ್ಪವ ಸಮರ್ಪಿಸುವದು.
ಇನ್ನು ದೇವರಿಗೆ ಧೂಪವ ಸಮರ್ಪಿಸುವ ಕ್ರಮವೆಂತೆಂದಡೆ-
ಗುಗ್ಗುಲಂ ಘೃತಸಂಯುಕ್ತಂ ಲಿಂಗಮಭ್ಯಚ್ರ್ಯ ಸಂದಹೇತ್
ವನಸ್ಪತಿವಾಸನೋಕ್ತಂ ಗಂಧಂ ದದ್ಯಾತ್ತಮುತ್ತಮಮ್
ಅರ್ಪಣಾದೇವ ದೇವಾಯ ಭಕ್ತಪಾಪಹರಾಯ ಚ
ಎಂಬೀ ಮಂತ್ರದಿಂದ ದೇವರಿಗೆ ಧೂಪವನರ್ಪಿಸುವುದು.
ಇನ್ನು ದೇವರಿಗೆ ದೀಪವ ಸಮರ್ಪಿಸುವ ಕ್ರಮವೆಂತೆಂದಡೆ-
ಸ್ವಪ್ರಕಾಶ ಮಹಾತೇಜ ಸರ್ವಾಂತಸ್ತಿಮಿರಾಪಹೆ
ಸ ಬಾಹ್ಯಾಭ್ಯಂತರಂ ಜ್ಯೋತಿದರ್ೀಪೊಖಯಂ ಪ್ರತಿಗೃಹ್ಯತಾಮ್
ಎಂಬೀ ಮಂತ್ರದಿಂದ ದೇವರಿಗೆ ದೀಪವನರ್ಪಿಸುವುದು.
ಇನ್ನು ದೇವರಿಗೆ ನೈವೇದ್ಯವನರ್ಪಿಸುವ ಕ್ರಮವೆಂತೆಂದಡೆ-
ಕ್ಷೀರವಾರಿದಿಸಂಭೂತಮಮೃತಂ ಚಂದ್ರಸನ್ನಿಭಮ್
ನೈವೇದ್ಯಂ ಷಡ್ರಸೋಪೇತಂ ಶಾಶ್ವತಾಯ ಸಮರ್ಪಿತಮ್
ಎಂಬೀ ಮಂತ್ರದಿಂದ ದೇವರಿಗೆ ನೈವೇದ್ಯವ ಸಮರ್ಪಿಸುವುದು.
ಇನ್ನು ದೇವರಿಗೆ ತಾಂಬೂಲವ ಸಮರ್ಪಿಸುವ ಕ್ರಮವೆಂತೆಂದಡೆ-
ಪೂಗಸಂಭೂತಕಪರ್ೂರ ಚೂರ್ಣಪರ್ಣದ್ವಿಸಂಯುತಃ
ತ್ರಯೋದಶಕಲಾತ್ಮಾನಂ ತಾಂಬೂಲಂ ಫಲಮುಚ್ಯತೇ
ಎಂದೀ ಮಂತ್ರದಿಂದ ದೇವರಿಗೆ ತಾಂಬೂಲವ ಸಮರ್ಪಿಸುವುದು.
ಇನ್ನು ದೇವರಿಗೆ ಮಂತ್ರಪುಷ್ಪವ ಸಮರ್ಪಿಸುವ ಕ್ರಮವೆಂತೆಂದಡೆ
ತ್ರಿಯಂಬಕಂ ಯಜಾಮಹೇ ಸುಗಂದಿಂ ಪುಷ್ಟಿವರ್ಧನವಮ್
ಉರ್ವಾರುಕಮಿವ ಬಂಧನಾನು್ಮೃತ್ಯೋಮರ್ುಕ್ಷೀಯ ಮಾಮೃತಾತ್
ಎಂಬೀ ಮಂತ್ರದಿಂದ ದೇವರಿಗೆ ಮಂತ್ರಪುಷ್ಪವಂ ಸಮರ್ಪಿಸುವುದು.
ಇನ್ನು ದೇವರಿಗೆ ನಮಸ್ಕಾರವಂ ಮಾಡುವ ಕ್ರಮವೆಂತೆಂದಡೆ-
ಪಿಠಂ ಯಸ್ಯಾ ಧರಿತ್ರೀ ಜಲಧರಕಲಶಂ ಲಿಂಗಮಾಕಾಶಮೂರ್ತಿಂ
ನಕ್ಷತ್ರಂ ಪುಷ್ಪಮಾಲ್ಯಂ ಗ್ರಹಗಣಕುಸುಮಂ ನೇತ್ರಚಂದ್ರಾರ್ಕವಹ್ನಿಮ್
ಕುಕ್ಷಿಂ ಸಪ್ತ ಸಮುದ್ರಂ ಭುಜಗಿರಿಶಿಖರಂ ಸಪ್ತಪಾತಾರಿಪಾದಂ
ವೇದಂ ವಕ್ತ್ರಂ ಷಡಂಗಂ ದಶದಿಶಸನಂ ದಿವ್ಯಲಿಂಗಂ ನಮಾಮಿ
ಎಂಬೀ ಮಂತ್ರದಿಂದ ದೇವರಿಗೆ ನಮಸ್ಕಾರವಂ ಮಾಡುವುದು.
ಇನ್ನು ದೇವರಿಗೆ ಅನುಷ್ಠಾನವಂ ಮಾಡುವ ಕ್ರಮವೆಂತೆಂದಡೆ-
“ಏತೇಷಾಂ ಪುರುಷೋಸ್ತು”
ಎಂದೀ ಮಂತ್ರದಿಂದ ದೇವರಿಗೆ ಅನುಷ್ಠಾನವಂ ಮಾಡುವುದು.
ಇನ್ನು ಅನುಷ್ಠಾನವಂ ಮಾಡಿದ ಬಳಿಕ ಶ್ರೀಗುರುವು ಶಿಷ್ಯಂಗೆ
ಉರಸ್ಥಲದ ಸಜ್ಜೆಯಲ್ಲಿ ಲಿಂಗವ ಧರಿಸುವ ಕ್ರಮವೆಂತೆಂದಡೆ-
ಅಯಂ ಮೇ ಹಸ್ತೊ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಬಿಮರ್ಶನಃ
ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಗಮತ್
ಇದಂ ತವ ಸಮರ್ಪಣಂ ಸುಬಂಧವೇ ನಿರೀಹಿ
ಎಂದೀ ಮಂತ್ರದಿಂದ ಆ ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯಂ
ಮಾಡುವುದು.
ಇನ್ನು ಆ ಶಿಷ್ಯನ ವಾಯುಪ್ರಾಣಿತ್ವವಂ ಕಳೆದು ಲಿಂಗಪ್ರಾಣಿಯ
ಮಾಡುವ ಕ್ರಮವೆಂತೆಂದಡೆ-
ಓಂ ಅಪಿ ಚ ಪ್ರಾಣಾಪಾನವ್ಯಾನೋದಾನಸಮಾನಾದಿ
ತಚ್ಚೈತನ್ಯ ಸ್ವರೂಪಸ್ಯ ಪರಮೇಶ್ವರಸ್ಯ
ಓಂ ಶ್ರದ್ಧಾಯಾಂ ಪ್ರಾಣೇನ ವಿಷ್ಣೋಖಮೃತಂ ಜುಹೋಮಿ
ಶಿವೋ ಮಾಂ ವಿಷಪ್ರದಾಹಾಯ ಪ್ರಾಣಾಯ ಸ್ವಾಹಾ
ಓಂ ಶ್ರದ್ಧಾಯಾಮಪಾನೇನ ವಿಷ್ಣೋಖಮೃತಂ ಜುಹೋಮಿ
ಶಿವೋ ಮಾಂ ವಿಷಪ್ರದಾಹಾಯ ಅಪಾನಾಯ ಸ್ವಾಹಾ
ಓಂ ಶ್ರದ್ಧಾಯಾಂ ವ್ಯಾನೇನ ವಿಷ್ಣೋಖಮೃತಂ ಜುಹೋಮಿ
ಶಿವೋ ಮಾಂ ವಿಷಪ್ರದಾಹಾಯ ವ್ಯಾನಾಯ ಸ್ವಾಹಾ
ಓಂ ಶ್ರದ್ಧಾಯಾಮುದಾನೇನ ವಿಷ್ಣೋಖಮೃತಂ ಜುಹೋಮಿ
ಶಿವೋ ಮಾಂ ವಿಷಪ್ರದಾಹಾಯ ಉದಾನಾಯ ಸ್ವಾಹಾ
ಓಂ ಶ್ರದ್ಧಾಯಾಂ ಸಮಾನೇನ ವಿಷ್ಣೋಖಮೃತಂ ಜುಹೋಮಿ
ಶಿವೋ ಮಾಂ ವಿಷಪ್ರದಾಹಾಯ ಸಮಾನಾಯ ಸ್ವಾಹಾ
ಎಂದೀ ಮಂತ್ರದಿಂದ ಆ ಶಿಷ್ಯನ ವಾಯುಪ್ರಾಣಿತ್ವವ ಕಳೆದು ಲಿಂಗ
ಪ್ರಾಣಿಯಂ ಮಾಡುವುದು.
ಇನ್ನು ಆ ಶಿಷ್ಯಂಗೆ ಅಗ್ರೋದಕವನ್ನು ಸರ್ವಾಂಗದ ಮೇಲೆ ತಳಿವ
ಕ್ರಮವೆಂತೆಂದಡೆ-
ಶಿವಃ ಪಶ್ಯತಿ ಶಿವೋ ದೃಶ್ಯತೇ ಅಹೋರಾತ್ರಂ
ಶಿವಸನ್ನಿಧಾವೈಕಮೇನಂ ಪ್ರಯುಜ್ಯತೇ
ತ್ರೈಜಾತಾಮಿ ಯಜೇಕಂ ಆ ಸರ್ವೇಭ್ಯೋಹಿ
ಕಾಮೇಭ್ಯೋ ಅಗ್ನೀನಾಂ ಪ್ರಯುಜ್ಯತೇ
ಸರ್ವೇಭ್ಯೋ ಹಿ ಕಾಮೇಭ್ಯೋ ಅಗ್ನೀನಾಂ ಪ್ರಯುಜ್ಯತೇ
ತ್ರೈಜಾತಾಮಿಯಜೇಕಂ ಅಬಿಚಾರನ್ ಇತಿ
ಸವರ್ೋ ವೈ ಏಷ ಯಜ್ಞಃ ಯತ್ರೋಪಾತ್ತಯಜ್ಞಃ
ಸರ್ವೇಷಾಮೇನಂ ಯಜ್ಞೇನ ಜಾಯತೇ
ನ ದೇವತಾಭ್ಯಾಂ ಆ ಉಚ್ಯತೇ ದ್ವಾದಶಕಪಾಲ ಪೂರುಷೋ ಭವತಿ
ತಂ ತೇ ಯಜೇತ ಕಪಾಲ ಸ್ತ್ರೀಸಾಮುದ್ರೈ-
ತ್ರಯಂ ತ್ರಯೀ ಮೇ ಲೋಕಾ ಏಷಾಮ್-
ಲೋಕಾನಾಮಪ್ಯುತ್ತರೋತ್ತರ ಜ್ಞೇಯೋ ಭವತಿ
ಎಂದೀ ಮಂತ್ರದಿಂದ ಆ ಶಿಷ್ಯಂಗೆ ಸರ್ವಾಂಗದಲ್ಲಿ ಅಗ್ರೋದಕವಂ ತಳೆವುದು.
ಇನ್ನು ಆ ಶಿಷ್ಯನ ಭಾಳದಲ್ಲಿವಿಭೂತಿಯ ಪಟ್ಟವಂ ಕಟ್ಟುವ ಕ್ರಮವೆಂತೆಂದಡೆಓಂ ತ್ರಿಪುಂಡ್ರಂ ಸತತಂ ತ್ರಿಪುಂಡ್ರಂ
ಸರ್ವದೇವಲಲಾಟಪಟ್ಟತ್ರಿಪುಂಡ್ರಂ
ಸಪ್ತಜನ್ಮಕೃತಂ ಪಾಪಂ ಭಸ್ಮೀಭೂತಂ ತತಃ ಕ್ಷಣಮ್
ಎಂದೀ ಮಂತ್ರದಿಂದ ಆ ಶಿಷ್ಯನ ಭಾಳದಲ್ಲಿ ವಿಭೂತಿ ಪಟ್ಟವಂ ಕಟ್ಟುವುದು.
ಇನ್ನು ಆ ಶಿಷ್ಯನ ದುರಕ್ಷರವ ತೊಡೆವ ಕ್ರಮವೆಂತೆಂದಡೆ-
ಐಶ್ವರ್ಯಕಾರಣಾಧ್ಭೂತಿರ್ಭಾಸನಾದ್ಭಸಿತಂ ತಥಾ
ಸರ್ವಾಂಗಾಭ್ಯರ್ಚನಾದ್ಭಸ್ಮ ಚಾಪದಕ್ಷರಣಾತ್ ಕ್ಷರಂ
ತತೋಭೂತಪ್ರೇತಪಿಶಾಚಬ್ರಹ್ಮರಾಕ್ಷಸ –
ಅಪಸ್ಮಾರಭವಬಿತಿಭ್ಯೋ ಬಿಕಾರಣಾದ್ರಕ್ಷಾ ರಕ್ಷತೇ
ಏತಾನಿ ತಾನಿ ಶಿವಮಂತ್ರ ಪವಿತ್ರಿತಾನಿ
ಭಸ್ಮಾನಿ ಕಾಮದಹನಾಂಗ ವಿಭೂಷಿತಾನಿ
ತ್ರೈಪುಂಡ್ರಕಾನಿ ರಚಿತಾನಿ ಲಲಾಟಪಟ್ಟೇ
ಲುಂಪಂತಿ ದೈವಲಿಖಿತಾನಿ ದುರಕ್ಷರಾಣಿ
ಎಂದೀ ಮಂತ್ರದಿಂದ ಆ ಶಿಷ್ಯನ ದುರಕ್ಷರವಂ ತೊಡೆವುದು.
ಇನ್ನು ಆ ಶಿಷ್ಯನ ಲಲಾಟದಲ್ಲಿ ಲಿಂಗಲಿಖಿತವಂ ಬರೆವ ಕ್ರಮವೆಂತೆಂದಡೆ-
“ಓಂ ಓಂ ಓಂ ನಮಃ ಶಿವಾಯ ಸರ್ವಜ್ಞಾನಧಾಮ್ನೇÙರÙರ
ಎಂದೀ ಮಂತ್ರದಿಂದ ಆ ಶಿಷ್ಯನ ಲಲಾಟದಲ್ಲಿ ಶಿವಲಿಖಿತಮಂ ಬರೆವುದು.
ಇನ್ನು ಆ ಶಿಷ್ಯನ ಮಸ್ತಕದಲ್ಲಿ ಹಸ್ತವನಿರಿಸುವ ಕ್ರಮವೆಂತೆಂದಡೆ-
ಉದ್ಯದ್ಭಾಸ್ಕರ ಕೋಟಿ ಪ್ರಕಾಶ ಮಹಾದರ್ಶನ ದಿವ್ಯಮೂರ್ತಿಬಿಷಣಮ್
ಭುಜಂಗಭೂಷಣಂ ಧ್ಯಾಯೇತ್ ದಿವ್ಯಾಯುಧಂ ರುದ್ರವರಿ್
ಸರ್ವೈಸ್ತಪಸ್ವಿಬಿಃ ಪ್ರೋಕ್ತಂ ಸರ್ವಜ್ಞೇಷು ಭಾಗಿನಮ್
ರುದ್ರಭಕ್ತಂ ಸ್ಮೃತಾಃ ಸರ್ವೇ ತ್ರಿಪುಂಡ್ರಾಂಕಿತಮಸ್ತಕಮ್
ಎಂದೀ ಮಂತ್ರದಿಂದ ಆ ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿರಿಸುವುದು.
ಇನ್ನು ಆ ಶಿಷ್ಯನ ಕರ್ಣದಲ್ಲಿ ಶಿವಮಂತ್ರವಂ ನಿರೂಪಿಸುವ ಕ್ರಮವೆಂತೆಂದಡೆ –
ಕರ್ಣದ್ವಾರೇ ಯಥಾವಾಕ್ಯಂ ಸದ್ಗುರೋರ್ಲಿಂಗಮೀರ್ಯತೇ
ಇಷ್ಟಪ್ರಾಣಸ್ತಥಾಭಾವೋ ತ್ರಿಧಾಮ್ನೈಕ್ಯಮಿದಂ ಶೃಣು
ಕರ್ಣೇ ಶಿಷ್ಯಸ್ಯ ಶನಕೈಃ ಶಿವಮಂತ್ರಮುದೀರಯೇತ್
ಸ ತು ಬದ್ಧಾಂಜಲಿಃ ಶಿಷ್ಯೋ ಮಂತ್ರತದ್ಧ್ಯಾನಮಾನಸಃ
ಎಂದೀ ಮಂತ್ರದಿಂದ ಆ ಶಿಷ್ಯನ ಕರ್ಣದಲ್ಲಿ ಶಿವಮಂತ್ರವಂ ನಿರೂಪಿಸುವುದು.
ಇನ್ನು ಶತಪತ್ರದೊಳಗಣ ಮನಪ್ರಾಣದೊಳಗಿಪ್ಪ
ಪ್ರಾಣಲಿಂಗಕ್ಕೊಂದು ಇಷ್ಟಲಿಂಗ ಸ್ಥಲಮಂ ತೋರಿಸಿ
ಆ ಶಿಷ್ಯನಂ ಕೃತಕೃತ್ಯನಂ ಮಾಡಿದ ಶ್ರೀಗುರುವಿಂಗೆ
ನಮೋ ನಮಃ ಎಂದು ಬದುಕಿದನಯ್ಯಾ
ಕೂಡಲಚೆನ್ನಸಂಗಮದೇವಾ./1146
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಭವಿಯೊಡನೆ ಸಂಗವು ಭಂಗವೆಂದರಿಯರು.
ಭವಿಯೊಡನೆ ಸಂಗವ ಮಾಡುವರು
ಕೂಡಲಚೆನ್ನಸಂಗಯ್ಯ ಅವರತ್ತಲೂ ಅಲ್ಲ ಇತ್ತಲೂ ಅಲ್ಲ. /1147
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯ ಸಂಗ ಮತ್ತೇಕಯ್ಯಾ ?
ಕಾಮನು ಬಾಣವಕೊಂಡು, ತನು ತನುಮುಖಕ್ಕೆ ಎಚ್ಚರೆ
ಭವಿ ಬಳಿಕವುಂಟು ನೋಡಾ !
ಕಾಮನ ಬಾಣವ ಮುರಿದು ಮಾಯದ ಸಂಚವ ಕೆಡಿಸಿ
ಎನಗೆ ತನಗೆಂಬುದಳಿದ ಬಳಿಕ ಲಿಂಗಸಂಗಿ ಶರಣನಾಗಿಪ್ಪನು.
ಭವ ಬಳಿಕೆಲ್ಲಿಯದೊ ?
ಅಂತರಂಗದ ಅನುಭವವರಿದು ಮನದ ಆಗು ಹೋಗಬಲ್ಲರೆ,
ಕೂಡಲಚೆನ್ನಸಂಗನಲ್ಲಿ ಲಿಂಗಸಂಗಿ ಶರಣನಾಗಿಪ್ಪನು./1148
ಭವಿತನಕ್ಕೆ ಹೇಸಿಭಕ್ತನಾದಹೆನೆಂದರೆ,
ಆ ಭವಿಯ ಪೂರ್ವಾಶ್ರಯವ ಕಳೆದು ಭಕ್ತನ ಮಾಡುವ ಪರಿಯೆಂತುಟಯ್ಯಾರಿ
ಆತನ ಕಾಯಶುದ್ಧನ ಮಾಡುವುದು, ಜೀವಶುದ್ಧನ ಮಾಡುವುದು,
ಆತ್ಮಶುದ್ಧನ ಮಾಡುವುದು, ಮಂತ್ರಶುದ್ಧನ ಮಾಡುವುದು,
ವಾಕು ಪಾಣಿ ಪಾದ ಪಾಯು ಗುಹ್ಯವೆಂಬ
ಕರ್ಮೇಂದ್ರಿಯಂಗರಿ ಶುದ್ಧನ ಮಾಡುವುದು.
ಶ್ರೋತ್ರ ನೇತ್ರ ಜಿಹ್ವೆ ತ್ವಕ್ಕು ಘ್ರಾಣವೆಂಬ
ಬುದ್ಧೀಂದ್ರಿಯಂಗಳ ಶುದ್ಧನ ಮಾಡುವುದು.
ಸುತ್ತಿರ್ದ ಮಾಯಾಪ್ರಪಂಚಮಂ ಬಿಡಿಸಿ,
ಜೀವನೆ ಶಿವನೆಂಬ ಪರಿಯಾಯಮಂ ಕೆಡಿಸಿ
ಶಿವನೆ ಜೀವನೆಂಬ ಪರಿಯಾಯಮಂ ತೋರಿ ಜೀವಶುದ್ಧನ ಮಾಡುವುದು.
ಪಂಚಭೂತಂಗಳ ಅದಿದೇವತೆಗಳಂ ತೋರಿ ಪಂಚವಕ್ತ್ರಂಗಳಂ ನೆಲೆಗೊಳಿಸಿ
ಅವರ ವರ್ಣ-ಶ್ವೇತ ಪೀತ ಹರಿತ ಕಪೋತ
ಮಾಂಜಿಷ್ಟ ಗಾರವರ್ಣಂಗಳಂ ತೋರಿ
ಪಂಚಭೂತಶುದ್ಧನಂ ಮಾಡುವುದು.
`ಜೀವಾತ್ಮಾ ಪರಮಾತ್ಮಾ ಚ’ ಎಂಬ ಶ್ರುತಿಯಿಂದ, ಆತ್ಮಶುದ್ಧನ ಮಾಡುವುದು,
ಇಂತು ಸರ್ವಶುದ್ಧನ ಮಾಡುವುದು.
ಆತನಂ ತಂದು ಗಣತಿಂಥಿಣಿಯ ಮುಂದೆ ನಿಲಿಸಿ,
ಕರ್ಮಣಾ ಮನಸಾ ವಾಚಾ ಗುರುಭಕ್ತ್ಯಾ ತು ವತ್ಸಲಃ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್
ಎಂದು ಮನಃ ಸ್ಮರಣೆಯಂ ಮಾಡಿಸಿ, ಶಿಷ್ಯನ ಭವಚ್ಛೇದನಂ ಮಾಡಿ
ಚಾಕಮಧ್ಯದಲ್ಲಿ ಕುಳ್ಳಿರಿಸಿ,
`ಓಂ ಸಮೇ ಕಾಮಾನ್ ಕಾಮ ಕಾಮಾಯ ಮಹ್ಯಂ’ ಎಂಬ ಮಂತ್ರದಿಂದ
ಅಗ್ರೋದಕವಂ ತಳಿದು, ಭಾಳದಲ್ಲಿ ವಿಭೂತಿಯ ಪಟ್ಟವಂ ಕಟ್ಟಿ
ಮಸ್ತಕದ ಕಳಸದ ಮೇಲೆ ಹಸ್ತವನ್ನಿಳುಹಿ,
[ಸಹಸ್ರದಳ]ಕಮಳದೊಳಗಿಪ್ಪ ಮಾನಸ ಪೃಥ್ವಿಯಿಂದ
ಪ್ರಾಣಲಿಂಗಸ್ಥಳಮಂ ತೋರಿ,
ಸ್ಥಾವರ ಪೂಜೆಯಂ ಮಾಣಿಸಿ,
ಎನ್ನ ಕೃತಾರ್ಥನಂ ಮಾಡಿದ ಕೂಡಲಚೆನ್ನಸಂಗಯ್ಯಾ
ನಿಮ್ಮ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ./1149
ಭವಿತನವ ಕಳೆದು ಭಕ್ತನಾದ ಬಳಿಕ
ಮತ್ತೆ ಭಕ್ತಿಯ ಹೊಲಬ ಹೊದ್ದಲೊಲ್ಲದೆ,
ಆಚಾರವನತಿಗಳೆದು ಅನ್ಯದೈವವ ಭಜಿಸಿ, ಅವರೆಂಜಲ ಭುಂಜಿಸಿ
ನರಕಕ್ಕಿಳಿವ ಪಾತಕರು ತಾವು ಕೆಟ್ಟುದಲ್ಲದೆ;
ಇತ್ತ ಮತ್ತೆ ಎತ್ತಲಾನೊಬ್ಬನು ಸತ್ಯಸದಾಚಾರವಿಡಿದು
ಗುರುಲಿಂಗಜಂಗಮವನಾರಾದಿಸಿ ಪ್ರಸಾದವ ಕೊಂಡು ಬದುಕುವೆನೆಂಬ
ಭಕ್ತಿಯುಕ್ತನ ಅಂದಂದಿಗೆ ಜರೆದು,
ನಿಮ್ಮ ತಂದೆತಾಯಿಗಳಿಗೆ ಬಳಿವಿಡಿದು ಬಂದ ಕುಲದೈವ ಮನೆದೈವವ ಬಿಟ್ಟು
ಈ ಲಿಂಗಜಂಗಮದ ಪ್ರಸಾದ ಭಕ್ತಿಯುಕ್ತಿಗಳಲ್ಲಿ ಏನುಂಟೆಂದು
ಕೆಡೆನುಡಿದು ಬಿಡಿಸಿ, ಆ ಅನ್ಯದೈವಂಗಳ ಹಿಡಿಸಿ
ತಾ ಕೆಡುವ ಅಘೋರನರಕದೊಳಗೆ ಅವರನೂ ಒಡಗೂಡಿಕೊಂಡು
ಮುಳುಗೇನೆಂಬ ಕಡುಸ್ವಾಮಿದ್ರೋಹಿನಾಯ ಹಿಡಿದು, ಮೂಗ ಕೊಯಿದು
ನಡೆಸಿ ಕೆಡಹುವ ನಾಯಕನರಕದಲ್ಲಿ
ಎನ್ನೊಡೆಯ ಕೂಡಲಚೆನ್ನಸಂಗಯ್ಯ./1150
ಭವಿಪಾಕವನುಂಡರೆ ಪ್ರಥಮ ಪಾತಕ,
ಪರಧನ ಪರಸತಿಗಳುಪಿದರೆರಡನೆಯ ಪಾತಕ,
ಜಂಗಮನಿಂದೆಯ ಮಾಡಿದರೆ ಮೂರನೆಯ ಪಾತಕ,
ಗುರುವಾಜ್ಞೆಯ ಮೀರಿದರೆ ನಾಲ್ಕನೆಯ ಪಾತಕ,
ಶಿವನಿಂದೆಯ ಮಾಡಿದಡೈದನೆಯ ಪಾತಕ,
ಪಂಚಮಹಾಪಾತಕ ಭಕ್ತಂಗಲ್ಲದೆ ಭವಿಗೆಲ್ಲಿಯದು
ಕೂಡಲಚೆನ್ನಸಂಗಮದೇವಾ? /1151
ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ,
ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ
ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು
ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ
ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ,
ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ
ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ.
ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು,
ಗುರು ಚರ ಪರವೆಂದು ಆರಾದಿಸಿದವಂಗೆ ಅಘೋರನರಕ ತಪ್ಪದು.
ಅದೆಂತೆಂದಡೆ:“ಯಸ್ತು ಗುರು ಭ್ರಷ್ಟಾರಾರಾದಿತಃ ತಸ್ಯ ಘೋರನರಕಃ’
ಎಂದುದಾಗಿ- ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ
ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ
ಕೂಡಲಚೆನ್ನಸಂಗಮದೇವಾ/1152
ಭವಿಯ ಕಳೆದು, ಭವಿಯ ಬೋದಿಸಿ ಬೇಡುವರು ಸಂಬಂದಿಗಳಲ್ಲ.
ರವಿಯ ಕಪ್ಪ ಕಳೆಯಲರಿಯದವರು ಸಂಬಂಧಿಗಳಲ್ಲ.
ಭವಿಯ ಕಳೆದು ಭಕ್ತನ ಮಾಡುವವರು ಭಕ್ತರಲ್ಲ, ಸಂಬಂದಿಗಳಲ್ಲ.
ಇಂತೀ ಸಾರಾಯವಾರಿಗೂ ಅಳವಡದಾಗಿ ಕೊಂಡ ವ್ರತವನನುಸರಿಸಿ ನಡೆದು,
ನಿಂದೆಗೆ ಬಂದ ಸಂದೇಹಿಯನೆಂತು ಸಂಬಂದಿಯೆಂಬೆ
ಕೂಡಲಚೆನ್ನಸಂಗಯ್ಯಾ? /1153
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ,
ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು.
ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ
ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ
ಈ ತ್ರಿವಿಧವನರಿಯದೆ ಕೆಟ್ಟು ಹೋದರು,
ಕೂಡಲಚೆನ್ನಸಂಗಯ್ಯಾ. /1154
ಭವಿಯ ತಂದು ಭಕ್ತನ ಮಾಡುವುದೆ ಅನಾಚಾರ,
ಭಕ್ತನ ತಂದು ಭವಿಯ ಮಾಡುವುದೆ ಆಚಾರ.
ಭವಿ ಮಾಡಿದ ಓಗರವ ಭಕ್ತ ನೋಡಿದರೆ ನಾಯಕನರಕ,
ಆ ಭಕ್ತ ಭವಿಯಹನಲ್ಲದೆ ಆ ಭವಿ ಭಕ್ತನಾಗಲರಿಯನಾಗಿ.
ಈ ಕ್ರಮವರಿದು ಮಾಡೂದು
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು. /1155
ಭವಿಯ ತಂದು ಭಕ್ತನ ಮಾಡೂದನಾಚಾರ,
ಭಕ್ತನ ತಂದು ಭವಿಯ ಮಾಡೂದಾಚಾರ.
ಭವಿ ಮುಟ್ಟಿ ಪ್ರಸಾದ, ಭಕ್ತ ಮುಟ್ಟಿ ಓಗರ. ಇದು ಕಾರಣ ಕೂಡಲಚೆನ್ನಸಂಗನಲ್ಲಿ
ಭವಿಯ ಪ್ರಸಾದವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು./1156
ಭವಿಯ ಮನೆಯಲ್ಲಿ ಭವಿಪಾಕವಲ್ಲದೆ
ಭಕ್ತನ ಮನೆಯಲ್ಲಿ ಭವಿಪಾಕವಿಲ್ಲ.
ಆ ಭಕ್ತನೂ ಆ ಭಕ್ತನ ಸ್ತ್ರೀಯೂ ಲಿಂಗ ಮುಂತಾಗಿ
ಗುರುಲಿಂಗ ಜಂಗಮಕ್ಕೆ ಬೇಕೆಂದು ಭಕ್ತಿರತಿಯಿಂದ
ಲಿಂಗಹಸ್ತದಲ್ಲಿ ಮಾಡಿದ ಸರ್ವದ್ರವ್ಯಂಗಳು ಸಕಲಪದಾರ್ಥಂಗಳೆಲ್ಲವೂ
ಶುದ್ಧಪಾಕ, ಅತ್ಯಂತ ಪವಿತ್ರಪಾಕ, ಲಿಂಗಕ್ಕೆ ಸಲುವುದು.
ಅದನತಿಗಳೆದಡೆ ದ್ರೋಹ, ಲಿಂಗಕ್ಕೆ ಕೊಟ್ಟುಕೊಳಬೇಕು
ಕೂಡಲಚೆನ್ನಸಂಗಮದೇವಾ/1157
ಭವಿಯ ಮನೆಯಲ್ಲಿ ಭವಿಯ ಹಸ್ತದಲ್ಲಿ ಭವಿಪಾಕವಲ್ಲದೆ,
ಭಕ್ತರ ಮನೆಯಲ್ಲಿ ಭಕ್ತರ ಹಸ್ತದಲ್ಲಿ ಭವಿಪಾಕವುಂಟೆ ? ಇಲ್ಲ ಇಲ್ಲ.
ಸುಡಲಿವದಿರ ಭಕ್ತಿಯೆಂತಹುದೊ, ಯುಕ್ತಿಯಂತಹುದೊ, ಶೀಲವೆಂತಹುದೊ !
ಸದ್ಭಕ್ತಿಯಿಂದ ಮಾಡಿ ನೀಡುವ ಭಕ್ತನು ಭಕ್ತದೇಹಿಕದೇವ
ಆತ ತಾನೆ ಪರಶಿವನು.
ಆ ಭಕ್ತನ ಹಸ್ತದಿಂದ ಬಂದ ದ್ರವ್ಯಪದಾರ್ಥಂಗಳೆಲ್ಲವೂ
ಪ್ರಸನ್ನತ್ವದಿಂದ ಬಂದುವಾಗಿ ಪ್ರಸಾದ, ಲಿಂಗಕ್ಕೆ ಕೊಟ್ಟು ಕೊಂಬುದು.
ಅದು ತಾನೆ ಶುದ್ಧ ಸಿದ್ಧ ಪ್ರಸಿದ್ಧಪ್ರಸಾದವು.
ಆ ಮಹಿಮನು ಭಕ್ತದೇಹಿಕದೇವನೆಂದು
ಭಾವಶುದ್ಧಿಯಿಂದ ಪ್ರಸಾದವ ಕೊಂಡಡೆ
ಅದೇ ಮಹಾಪ್ರಸಾದ ಕೂಡಲಚೆನ್ನಸಂಗಯ್ಯಾ./1158
ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ,
ಪರಧನ ಪರಸತಿಯಾಸೆಯುಳ್ಳನ್ನಬರ ಮಾಹೇಶ್ವರನಲ್ಲ,
ಸಕಲ ಪದಾರ್ಥವನೆಲ್ಲ ಗ್ರಹಿಸುವನ್ನಕ್ಕ ಪ್ರಸಾದಿಯಲ್ಲ,
ಪ್ರಾಣಲಿಂಗದಲ್ಲಿ ಸ್ವಸ್ಥಿರವಾಗದನ್ನಕ್ಕ ಪ್ರಾಣಲಿಂಗಿಯಲ್ಲ,
ಕರಣಾದಿಗಳು ವರ್ತಿಸುವನ್ನಕ್ಕ ಶರಣನಲ್ಲ,
ಜನನಮರಣವುಳ್ಳನ್ನಕ್ಕ ಐಕ್ಯನಲ್ಲ.
ಕೂಡಲಚೆನ್ನಸಂಗಮದೇವರಲ್ಲಿ
ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ. /1159
ಭವಿರಹಿತ ಮಜ್ಜನಕ್ಕೆರೆದೆವೆಂಬರು,
ಶ್ವಾನ ಮುಟ್ಟಿದ ಎಂಜಲ ಮನಮುಟ್ಟಿ ಉಣ್ಣೆವೆಂಬರು,
ಭವಿಯಿಂದ ಕಷ್ಟವಲ್ಲಾ.
ಅನ್ಯದೈವವ ಪೂಜಿಸುವ ಸತಿ ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ.
ಭವಿಮಿಶ್ರವಾದ ಮನುಷ್ಯರು ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ.
ಶ್ವಾನ ಭವಿಗಳೆದೆವೆಂಬವರು, ಅವೆಲ್ಲಿಗೆಯೂ ಹೋಗವು.
ಶ್ವಾನ ಭವಿಗಳೆಂಬುಭಯವರ್ಗ ಕಳೆದಲ್ಲದೆ
ಕೂಡಲಚೆನ್ನಸಂಗನ ಹೊಂದಬಾರದು. /1160
ಭವಿವಿರಹಿತ ಭಕ್ತನೆಂದೆಂಬರು, ಭವಿವಿರಹಿತ ಭಕ್ತನಾದ ಪರಿಯೆಂತೋ?
ಭವಿಪಾಕಂ ನಿವೇದ್ಯಂ ಸ್ಯಾತ್ ಬಂಧನಂ ಭವಿಸಂಗಿನಾಂ
ಸರ್ವಲೋಕಸ್ತು ಉಚ್ಛಿಷ್ಟಂ ಸಂಸಾರೋ ಹಿ ತಟಾಕವತ್
ಇದನರಿದು ಊರೆಲ್ಲಾ ಒಂದೇ ತಳಿಗೆಯಲುಂಡು
ಬೇರೆ ಬೇರೆ ಕೈತೊಳೆದಂತೆ ಕೂಡಲಚೆನ್ನಸಂಗಮದೇವಾ. /1161
ಭವಿವಿರಹಿತನಾಗಿ ಭಕ್ತನಾದ ಬಳಿಕ
ತನ್ನ ಮನೆಯಲ್ಲಿ ಮಾಡಿದ ಪಾಕವ ಭವಿಗಿಕ್ಕಬಹುದೆ ?
ಇಂತಪ್ಪ ಯುಕ್ತಿಶೂನ್ಯರಿಗೆ ಪ್ರಸಾದವಿಲ್ಲ; ಮುಕ್ತಿ ಎಂತಪ್ಪುದೊ ?
ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು !
ಕೂಡಲಚೆನ್ನಸಂಗಮದೇವಯ್ಯ
ನಿಮ್ಮಾ ಪಥವನರಿಯದ ಅನಾಚಾರಿಗಿನ್ನೆಂತಯ್ಯ ?/1162
ಭಾಂಡ ಭಾಜನ ಪದಾರ್ಥ ತ್ರೈವಿಧ ಪ್ರಸಾದವವ್ವಾ,
ಅಂಗಲೇಪನ ಸರ್ವಪ್ರಸಾದವವ್ವಾ,
ರೋಮ ರೋಮ ಪ್ರಸಾದವವ್ವಾ,
ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ./1163
ಭಾವ ಭಾವಿಸಲುಂಟೆ ಭಾವಭಾವಿಸಲರಿಯದು. ಅದೇನು ಕಾರಣ ?
ಭಾವದಲ್ಲಿ ಭರಿತನಾಗಿ, ನೇತ್ರ ನೋಡಲುಂಟೆ ? ನೇತ್ರ ನೋಡಲರಿಯದು, ಅದೇನು ಕಾರಣ ?
ನೇತ್ರೇಂದ್ರಿಯದ ಬಾಗಿಲಲ್ಲಿ ನಿಂದು ನೋಡುವನಾಗಿ.
ಶ್ರೋತ್ರ ಕೇಳಲುಂಟೆ? ಶ್ರೋತ್ರ ಕೇಳಲರಿಯದು, ಅದೇನು ಕಾರಣ ?
ಶ್ರೋತ್ರದ ಬಾಗಿಲಲ್ಲಿ ನಿಂದು ಕೇಳುವನಾಗಿ. ನಾಸಿಕಪರಿಮಳವರಿವುದೆ?
ನಾಸಿಕ ಪರಿಮಳವರಿಯದು, ಅದೇನು ಕಾರಣ ? ನಾಸಿಕದ ಬಾಗಿಲಲ್ಲಿ ನಿಂದು ವಾಸಿಸುವ ತಾನಾಗಿ.
ಜಿಹ್ವೆ ರುಚಿಯನರಿವುದೆ? ಜಿಹ್ವೆ ರುಚಿಯನರಿಯದು, ಅದೇನು ಕಾರಣ ?
ಜಿಹ್ವೆಯ ಬಾಗಿಲಲ್ಲಿ ನಿಂದು ರುಚಿಯ ನಿಶ್ಚೈಸುವ ತಾನಾಗಿ.
(ತ್ವಕ್ಕು ಸ್ಪಶರ್ಿಸಬಲ್ಲುದೆ ತ್ವಕ್ಕು ಸ್ಪಶರ್ಿಸಲರಿಯದು, ಅದೇನು ಕಾರಣ ?
ತ್ವಕ್ಕಿನಲ್ಲಿ ನಿಂದು ಸ್ಪಶರ್ಿಸುವ ತಾನಾಗಿ)
ಜಂತ್ರಂಗಳಾಡಬಲ್ಲವೆ? ಜಂತ್ರಂಗಳಾಡಲರಿಯವು, ಅದೇನು ಕಾರಣ ?
ಜಂತ್ರಂಗಳನಾಡಿಸುವ ಯಂತ್ರವಾಹಕ ತಾನಾಗಿ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಾಂಗಲಿಂಗಿ. /1164
ಭಾವದ ಕೊನೆಯ ಮೊನೆಯಲ್ಲಿ ದೃಷ್ಟಿಯ ಸಂದಿಸಿ,
ಪದಾರ್ಥದ ಪೂರ್ವಾಶ್ರಯವ ಕಳೆದನು ಶರಣನು, ಮನಮುಟ್ಟಲೀಯದೆ.
ಸ್ವಾಮಿ ಭೃತ್ಯಸಂಬಂಧಕ್ಕೆ ಗುಣವಲ್ಲೆಂದ ಶರಣನು, ಮನಮುಟ್ಟಲೀಯದೆ,
ಭಕ್ತನ ಕೈಮುಟ್ಟಿ ಪಾವನವೆಂಬ ಸಂದಣಿಯಲ್ಲಿ ಹುಗದು, ಮನಮುಟ್ಟಲೀಯದೆ.
ಇದು ಕಾರಣ ಕೂಡಲಚೆನ್ನಸಂಗನ ಬಸವಣ್ಣನ
ಪ್ರಸಾದದಲ್ಲಿ ಸುಖಿಯಾದೆ. /1165
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ,
ಜಿಹ್ವೆಯಲ್ಲಿ ರುಚಿ, ಶ್ರೋತ್ರದಲ್ಲಿ ಕುಶಬ್ದ,
ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ-
ಇಂಥ ಭವಿಯ ಕಳೆದು ಭಕ್ತನ ಮಾಡಿದ ಪರಿಯೆಂತೆಂದರೆ:
ಕಾಮನ ಸುಟ್ಟ ವಿಭೂತಿಯೂ ಅಲ್ಲ, ಜವನ ಸುಟ್ಟ ವಿಭೂತಿಯೂ ಅಲ್ಲ,
ತ್ರಿಪುರವ ಸುಟ್ಟ ವಿಭೂತಿಯೂ ಅಲ್ಲ,
ಆದಿಯಾಧಾರ ವಿಲ್ಲದಂದಿನ [ಚಿದ್] ವಿಭೂತಿಯ ತಂದು ಪಟ್ಟವ ಕಟ್ಟಿದರೆ,
ಭಾವಕ್ಕೆ ಗುರುವಾಯಿತ್ತು, ಪ್ರಾಣಕ್ಕೆ ಲಿಂಗವಾಯಿತ್ತು
ಜಿಹ್ವೆಗೆ ಪ್ರಸಾದವಾಯಿತ್ತು, ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು,
ನಾಸಿಕಕ್ಕೆ ಸುಗಂಧವಾಯಿತ್ತು ನೋಟಕ್ಕೆ ಜಂಗಮವಾಯಿತ್ತು,
ಶಬ್ದಕ್ಕೆ ಸಂಭಾಷಣೆಯಾಯಿತ್ತು-
ಇಂತೀ ಪೂರ್ವಗುಣಂಗಳೆಲ್ಲವ ಕಳೆದು ಸ್ವಸ್ಥಾನವಾಯಿತ್ತಾಗಿ
ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ. /1166
ಭಾವದಿಂದಲಿ ಲಿಂಗೈಕ್ಯವಾದೆವೆಂಬರು,
ಜೀವದಿಂದ ಲಿಂಗೈಕ್ಯವಾದೆವೆಂಬರು,
ಸುಷಮ್ನಾನಾಳದ ಭೇದವನರಿಯರು,
ವಿಷಯದಲ್ಲಿ ಗಸಣಿಗೊಂಬರು,
ಅಂತರಂಗ ಶುದ್ಧಿಯನವರೆತ್ತ ಬಲ್ಲರು
ಕೂಡಲಚೆನ್ನಸಂಗಮದೇವಾ ? /1167
ಭಾಷೆ ತಪ್ಪಿದ ತನುವಿಂಗಲಗ ಕಿತ್ತರೆ ಲಿಂಗ ಓಸರಿಸುವ,
ಮುಂದೆ ವೀರನಪ್ಪ. ಇಂಥ ಭಾಷೆವಂತನೆ ಶರಣ ?
ಕಾಲಕಲ್ಪಿತನಲ್ಲ, ಪೂರ್ವಾಶ್ರಯವಿಲ್ಲ,
ಉಭಯಕುಳರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ /1168
ಭಾಷೆಗೇರಿಸಿ ತನುವಿಂಗೆ ಆಲಗ ಕೊಂಡರೆ ಲಿಂಗ ಓಸರಿಸಿತ್ತಯ್ಯಾ.
ಆತ ವೀರನೆನಿಸುವ.
ಲಿಂಗಕ್ಕೆ ದೂರ, ಜಂಗಮಕ್ಕೆ ದೂರ,
ಪ್ರಸಾದಕ್ಕೆ ದೂರ, ವ್ರತಗೇಡಿಯಾಗಿ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬ್ರಹ್ಮೇತಿಕಾರನೆನಿಸುವ. /1169
ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ
ಆ ಶಿಷ್ಯನೆ ಜಂಗಮವಾಗಿ ಗುರುವಿನ ಮಠಕ್ಕೆ ನಡೆದು ಬಂದರೆ
ಗುರುವೆಂಬ ಹಮ್ಮಿಲ್ಲದೆ ಪರಮಗುರುವೆಂದು
ಪಾದಾರ್ಚನೆಯಂ ಮಾಡೂದು ಆಚಾರ,
ನಾಚಿ ಮಾಡದಿದ್ದರೆ ನಾಯಕ ನರಕ.
ಆ ಜಂಗಮ ಶಂಕೆಯಿಲ್ಲದೆ ಪಾದಾರ್ಚನೆಯ ಮಾಡಿಸಿಕೊಂಬುದೆ ಕರ್ತೃತ್ವ,
ಶಂಕೆಗೊಂಡಡೆ ಪಂಚಮಹಾಪಾತಕ.
ಹೀಂಗಲ್ಲದೆ ಗುರುವೆಂಬ ಹಮ್ಮು, ಶಿಷ್ಯನೆಂಬ ಶಂಕೆಯುಳ್ಳನ್ನಬರ
ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ./1170
ಭೂಮಿ ನಷ್ಟವಾದರೆ ಜಲಕ್ಕಿಂಬಿಲ್ಲ, ಜಲ ನಷ್ಟವಾದರೆ ಇಂದ್ರಿಯಕ್ಕಿಂಬಿಲ್ಲ,
ಇಂದ್ರಿಯ ನಷ್ಟವಾದರೆ ಜಂಗಮಕ್ಕಿಂಬಿಲ್ಲ, ಜಂಗಮ ನಷ್ಟವಾದರೆ ಲಿಂಗಕ್ಕಿಂಬಿಲ್ಲ.
ಇದು ಕಾರಣ ಕರಣಾದಿಗಳಂ ಬಿಡದೆ ಆನು ವ್ರತಿಯೆಂಬವರ ತೋರಯ್ಯಾ
ಕೂಡಲಚೆನ್ನಸಂಗಮದೇವಾ. /1171
ಭೂಮಿಗೆ ಕೆಸರುಗಲ್ಲನಿಕ್ಕಿ, ಮೇರುವ ಸ್ಥಳಗೊಳಿಸಿ,
ಅಂಡಜ ಉತ್ಪತ್ಯವಾದ ಬಳಿಕ ಹಿರಿಯರನಾರುವ ಕಾಣೆ.
ನರೆತೆರೆಗಳು ತೋರಿದವರು ಹಿರಿಯರೆಂಬೆನೆ ಎನ್ನೆನು.
ಮತಿಗೆಟ್ಟು ಒಂದನಾಡಹೋಗಿ ಒಂಬತ್ತನಾಡುತ್ತಿದ್ದರೆ
ಹಿರಿಯರೆಂಬೆನೆ ಎನ್ನೆನು.
ಕೂಡಲಚೆನ್ನಸಂಗಮದೇವರಲ್ಲಿ
ಹಿರಿಯತನದ ತೆರನ ಚೀಲಾಳ ಬಲ್ಲ. /1172
ಭೂಮಿಯ ಮೇಲೆ ಇದ್ದ ಅಚಲಪೀಠವೆಲ್ಲಾ ಲಿಂಗವೆ ?
ಅಲ್ಲ, ಲಿಂಗಮೂರ್ತಿ ಇಲ್ಲಾಗಿ.
ಜಾಯತೇ ಚರಾದಿಗಳೆಲ್ಲಾ ಜಂಗಮವೆ ?
ಅಲ್ಲ, ಆಚಾರ ಸಮತೆ ಸಂಬಂಧವಿಲ್ಲಾಗಿ, ಇವರೆಲ್ಲರೂ ಉಪಜೀವಿಗಳು.
ಕೂಡಲಚೆನ್ನಸಂಗಮದೇವ ಸಹವಾಗಿ
ಉಭಯಲಿಂಗ ಜಂಗಮವಾದವರಿಗೆ ನಮೋ ನಮೋಯೆಂಬೆ. /1173
ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆಂದೆನಬೇಡ,
ಮುಂದಣ ಫಲದೊಳಗರಸಿಕೊ !
ಕಾಸಿ ಕರಗಿಸಿದ ಬಂಗಾರ ಕೆಟ್ಟಿತ್ತೆಂದೆನಬೇಡ,
ಮುಂದಣ ಬಣ್ಣದೊಳಗರಸಿಕೊ !
ಹೊತ್ತಿಸಿದ ದೀಪ್ತಿ ಕೆಟ್ಟಿತ್ತೆಂದೆನಬೇಡ,
ಮುಂದಣ ಅಗ್ನಿಯೊಳಗರಸಿಕೊ !
ಲಿಂಗದೊಳಗೆ ಪ್ರಾಣ, ಪ್ರಾಣದೊಳಗೆ ಲಿಂಗ.
ಇದು ಕಾರಣ ಕೂಡಲಚೆನ್ನಸಂಗನ ಶರಣರ
ಪಾದಪ್ರತಿಬಿಂಬದೊಳಗರಸಿಕೊ
ಸಂಗನಬಸವಣ್ಣನ ಬಸವಣ್ಣನ. /1174
ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು.
ವೇದಶಾಸ್ತ್ರ ಪುರಾಣಾಗಮಂಗಳನರಿದ ಸಂಬಂದಿಗಲ್ಲದೆ
ವೀರಶೈವ ಅಳವಡದು, ಅದೇನು ಕಾರಣ?
ಅರಿದು ಭವಿಪಾಕವೆಂದು ಕಳೆದ ಬಳಿಕ
ಜಂಗಮಕ್ಕೆ ನೀಡಿದರೆ ಅದಿಕ ಪಾತಕ.
ಅದೆಂತೆಂದರೆ:ತನ್ನ ಲಿಂಗಕ್ಕೆ ಸಲ್ಲದಾಗಿ, ಆ ಜಂಗಮಕ್ಕೆ ಸಲ್ಲದು.
ಆ ಜಂಗಮಕ್ಕೆ ಸಲ್ಲದಾಗಿ, ತನ್ನ ಲಿಂಗಕ್ಕೆ ಸಲ್ಲದು.
ಲಿಂಗಭೋಗೋಪಭೋಗೀ ಯೋ ಭೋಗೇ ಜಂಗಮವರ್ಜಿತಃ
ಲಿಂಗಹೀನಸ್ಸ ಭೋಕ್ತಾ ತು ಶ್ವಾನಗರ್ಭೆಷು ಜಾಯತೇ
ಇದು ಕಾರಣ ಕೂಡಲಚೆನ್ನಸಂಗಮದೇವಾ
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು. /1175
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು;
ವಸ್ತ್ರ ಮಾಸಿದಡೆ ಮಡಿವಾಳರಿಗಿಕ್ಕುವುದು;
ಮನದ ಮೈಲಿಗೆಯ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು/1176
ಮಂತ್ರಯೋಗ, ಹಠಯೋಗ, ಲಯಯೋಗ, ಜ್ಞಾನಯೋಗ.
ಇಂತೀ ಎಲ್ಲ ಯೋಗವನರಿದು ಮರೆದು
ಭಕ್ತಿಯೋಗದ ಮೇಲೆ ನಿಂದು, ರಾಜಯೋಗದ ಮೇಲೆ ನುಡಿವುದು ಕಾಣಿರೆ !
ರಾಜಯೋಗದ ಮೇಲೆ ನಡೆವುದು ಕಾಣಿರೆ !
ವಾಗತೀತಂ ಮನೋತೀತಂ ಭಾವತೀತಂ ನಿರಂಜನಂ
ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ
ಎಂದುದಾಗಿ, ಶಿವ ಜೀವ ಲಿಂಗ ಪ್ರಾಣ, ಶಿವಯೋಗವೆಂಬುದೆ ಐಕ್ಯ.
ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರು,
ಕೂಡಲಚೆನ್ನಸಂಗಮದೇವ ? /1177
ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ, ನಾದವೆ ಕಿರೀಟ,
`ಅಕಾರ `ಉ’ಕಾರವೆ ಬಿಂದುವಕ್ತ್ರ,
ಪರಶಿವಸ್ವರೂಪವಾದ `ಹ್ರ’ಕಾರವೆ ದೇಹ,
`ಹ್ರೀಂ’ಕಾರವೆ ಶಕ್ತಿ, ಹಂಸದ್ವಯಾ ಶೃಂಗವೇ ಭುಜ,
`ವ’ಕಾರವೆ-ಕಳಾ ಸ್ವರೂಪವಾದವನಿಯೆ ಪಾದದ್ವಯ.
ಇಂತೀ ಮಂತ್ರಮೂರ್ತಿಯಾದ ಪರಶಿವನು,
ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೊಡುವದೇವ
ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ./1178
ಮಂದಾರಸ್ಥಾನ ಮೊದಲಾದ ಆರರ ಕಡೆಯ
ಸ್ವಾದೋದಕಸಮುದ್ರದಲ್ಲಿ ವಿಶ್ರಮಿಸಿದ,
ಇಕ್ಷುಸಮುದ್ರದಲ್ಲಿ ತೃಪ್ತನಾಗಿ ಮೇರುಮಂದಿರದಲಿ ಮುಗ್ಧನಾದ ಕಾಣಾ
ಕೂಡಲಚೆನ್ನಸಂಗಾ, ನಿಮ್ಮ ಶರಣ./1179
ಮಜ್ಜನಕ್ಕೆರೆವುದು ಮಾದ ಬಳಿಕ ಮನ ಮತ್ತೊಂದಕ್ಕೆರಗದಿರಬೇಕು.
ಪೂಜೆಯ ಪೂಜಿಸಿ ಮಾದ ಬಳಿಕ ಪರರ ಬೋದಿಸಲಾಗದು.
ಆರೋಗಣೆ ಅವಸರ ಮಾದ ಬಳಿಕ ಅಂಗಭೋಗಂಗಳ ನೆರೆ ಮಾಣಬೇಕು.
ನಾನೀನೆಂಬ ಭ್ರಾಂತುಳ್ಳನ್ನಕ್ಕರ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬೇಕು.
ಕೂಡಲಚೆನ್ನಸಂಗಯ್ಯಾ,
ಇವ ಮಾಡದಿದ್ದರೆ ನಾಯಕ ನರಕ. /1180
ಮಡಿಲಲ್ಲಿ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದಡೇನು ?
ಕೊರಳಲ್ಲಿ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದಡೇನು ?
ಕಳವು ಹಾದರ ಭವಿಯ ಸಂಗ ಅನ್ಯದೈವವ ಬಿಡದನ್ನಕ್ಕ
ಲಿಂಗಭಕ್ತನೆನಿಸಲು ಬಾರದಯ್ಯ.
ಅನಾಚಾರದಿಂದ ನರಕ, ಆಚಾರದಿಂದ ಸ್ವರ್ಗ.
ಕೂಡಲಚೆನ್ನಸಂಗಯ್ಯನೊಲ್ಲ ಭೂಮಿಭಾರಕರ. /1181
ಮತಿಗೆಟ್ಟ ಕುಂಬರ ಮಣ್ಣ ಸೂಚಿಯ ಮಾಡಿ
ಕುಂಬಾರಗೇರಿಗೆ ಮಾರಹೋದಡೆ,
ಅವರುಕ್ಕಿನ ಸೂಜಿಯ ಮಾರುವರಾಗಿ !
ವೇಷಧಾರಿ ಮಾತ ಕಲಿತು ಅಬಿಮಾನಕ್ಕೆ ಪರೀಕ್ಷೆಯ ಕೊಡುವಂತೆ
ಕೂಡಲಚೆನ್ನಸಂಗನ ನಿಲವನರಿಯದೆ
ಉಲಿಯದಿರಾ ಲೀಲೆಯ ಪಶುವೆ !/1182
ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ,
ಕೇವಲಜ್ಞಾನ, ಜ್ಯೋತಿಜ್ಞರ್ಾನ,
ಮಹಾಜ್ಯೋತಿಜ್ಞರ್ಾನವೆಂದಿಂತು ಜ್ಞಾನವಾರು ತೆರನು.
ಮತಿಜ್ಞಾನದಿಂದ ಶ್ರುತಿಜ್ಞಾನವಹುದು,
ಶ್ರುತಿಜ್ಞಾನದಿಂದ ಖಂಡಜ್ಞಾನವಹುದು.
ಖಂಡಜ್ಞಾನದಿಂದ ಕೇವಲಜ್ಞಾನವಹುದು,
ಕೇವಲಜ್ಞಾನದಿಂದ ಜ್ಯೋತಿಜ್ಞರ್ಾನವಹುದು.
ಜ್ಞೋತಿಜ್ಞರ್ಾನದಿಂದ ಮಹಾಜ್ಯೋತಿಜ್ಞರ್ಾನವಹುದು.
ಮತಿಜ್ಞಾನವೆ ಭಕ್ತ, ಶ್ರುತಿಜ್ಞಾನವೆ ಮಹೇಶ್ವರ,
ಖಂಡಜ್ಞಾನವೆ ಪ್ರಸಾದಿ,
ಕೇವಲಜ್ಞಾನವೆ ಪ್ರಾಣಲಿಂಗಿ, ಜ್ಯೋತಿಜ್ಞರ್ಾನವೆ ಶರಣ,
ಮಹಾಜ್ಯೋತಿಜ್ಞರ್ಾನವೆ ಐಕ್ಯ.
ಈ ಷಟ್ಸ್ಥಲದ ನೆಲೆಯ ಬಲ್ಲಾತನೆ-
ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು/1183
ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು,
ದೇವಾ, ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ.
ಸತ್ಯ ಶರಣರೆಲ್ಲರನು ಪಾವನವ ಮಾಡಲೆಂದು ಬಂದಡೆ,
ಜನ್ಮದಲ್ಲಿ ಬಂದನೆಂದೆನಬಹುದೆರಿ
ಕರ್ತನ ನಿರೂಪು ಭೃತ್ಯಂಗೆ ಬಂದಲ್ಲಿ,ಆ ಭೃತ್ಯ ಕರ್ತನನರಸಿ ಬಂದನಲ್ಲಾ!
ಸತ್ಯ ಸದಾಚಾರವ ಹರಡಿ, ಮತ್ರ್ಯರ ಪಾವನವ ಮಾಡಿ
ನಿಜಲಿಂಗ ಸಮಾದಿಯೊಳು, ನಿಲ್ಲುವರಿನ್ನಾರು ಹೇಳಾ, ನೀವಲ್ಲದೆರಿ
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ನಿಮಗೆ ಭವವುಂಟೆಂದು ಮನದಲ್ಲಿ ಹಿಡಿದಡೆ
ಸಂಗನಬಸವಣ್ಣಾ ನಿಮ್ಮ ಶ್ರೀಪಾದದಾಣೆ!/1184
ಮದ್ಯಪಾನಿಗೆ ಲಿಂಗಸಾಹಿತ್ಯವ ಮಾಡಿದಾತ
ಹಿಂಗದೆ ನರಕದಲಾಳುತ್ತಿಪ್ಪನು.
ಮಾಂಸಾಹಾರಿಗೆ ಲಿಂಗಸಾಹಿತ್ಯವ ಮಾಡಿದಾತನ
ವಂಶಕ್ಷಯವೆಂದುದು.
ಜೂಜುಗಾರಂಗೆ ಲಿಂಗಸಾಹಿತ್ಯವ ಮಾಡಿದಾತ
ರೌರವನರಕಕ್ಕೆ ಹೋಹನು.
ಸೂಳೆಗೆ ಲಿಂಗಸಾಹಿತ್ಯವ ಮಾಡಿದಾತ
ಏಳೇಳು ಜನ್ಮದಲ್ಲೂ ಶ್ವಾನನ ಗರ್ಭದಲ್ಲಿ ಬರುತಿಪ್ಪನು.
ಅಂಗಹೀನಂಗೆ ಲಿಂಗಸಾಹಿತ್ಯವ ಮಾಡಿದಾತ ಲಿಂಗದ್ರೋಹಿ,
ಆತನ ಮುಖವ ನೋಡಲಾಗದು.
ಮದ್ಯಪಾನೀ ಮಾಂಸಭಕ್ಷೀ ಶಿವದೀಕ್ಷಾವಿವರ್ಜಿತಃ
ದ್ಯೂತೀ ವೇಶ್ಯಾಂಗಹೀನಶ್ಚ ತದ್ಗರೋರ್ದರ್ಶನಂ ತ್ಯಜೇತ್
ಇದು ಕಾರಣ ಕೂಡಲಚೆನ್ನಸಂಗನಲ್ಲಿ
ವಿಚಾರಿಸದೆ ಲಿಂಗವ ಕೊಟ್ಟ ಗುರುವಿಂಗೆ ನರಕ ತಪ್ಪದು. /1185
ಮಧುರಗುಣವ ಇರುವೆ ಬಲ್ಲುದು.
ವೇಳೆಯ ಗುಣವ ಕೋಳಿ ಬಲ್ಲುದು.
ಗೋತ್ರದ ಗುಣವ ಕಾಗೆ ಬಲ್ಲುದು
ಈ ಮನುಷ್ಯ ಜನ್ಮದಲ್ಲಿ ಹುಟ್ಟಿ,
ಶಿವಜ್ಞಾನಿಗಳ ಬರವನರಯದಿದ್ದಡೆ
ಆ ಕೋಳಿ ಕಾಗೆ ಇರುವೆಗಿಂದಲು ಕರಕಷ್ಟ ಕಾಣಾ
ಕೂಡಲಚೆನ್ನಸಂಗಮದೇವಾ./1186
ಮನ ಆವ ವಸ್ತುವನಾದಡೂ ನೆನೆದಡೆ ಬುದ್ಧಿ ನಿಶ್ಚೈಸುವುದು,
ಚಿತ್ತ ವಾಕ್ಯಕ್ಕೆ ತಂದು, ಮಾಡಬೇಕೆಂಬುದು,
ಅಹಂಕಾರ ಕಾಯದ ಕೈಯಿಂದ ಮಾಡಿಸುವುದು.
ಇಂತೀ ಅಂತಃಕರಣ ಚತುಷ್ಟಯಂಗಳ ಅಂತುವನರಿತು ಸಮವೇದಿಸಲು
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೆನಿಸುವನು./1187
ಮನ ನಷ್ಟವಾದರೆ ಭಕ್ತನೆಂಬೆ,
ಉಪದೇಶ ನಷ್ಟವಾದರೆ ಗುರುವೆಂಬೆ,
ಭಾವ ನಷ್ಟವಾದರೆ ಲಿಂಗವೆಂಬೆ,
ಗಮನ ನಷ್ಟವಾದರೆ ಜಂಗಮವೆಂಬೆ,
ಅರ್ಪಿತ ನಷ್ಟವಾದರೆ ಪ್ರಸಾದಿಯೆಂಬೆ
ಆಕಾ(ಚಾ?)ರ ನಷ್ಟವಾದರೆ ಐಕ್ಯನೆಂಬೆ.
ಇಂತೀ ಷಡುಸ್ಥಲ ನಿಂದ ನಿಲವಿನ ಪರಿಣಾಮಪದವ
ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ./1188
ಮನ ಭಾವ ಕರಣಂಗಳೊಳಹೊರಗೆ ತೆರಹಿಲ್ಲದ ದೇವಾ,
ಬಂದ ಪದಾರ್ಥವನವಧರಿಸು ದೇವಾ, ಭಾವಭರಿತದೇವಾ.
ಅದೆಂತೆಂದಡೆ:
ತಿಲಮಧ್ಯೇ ಯಥಾ ತೈಲಂ ಕ್ಷೀರಮಧ್ಯೇ ಯಥಾ ಘೃತಂ
ಪುಷ್ಪಮಧ್ಯೇ ಯಥಾ ಗಂಧೋ ಭಾವಮಧ್ಯೇ ತಥಾ ಶಿವಃ ಎಂದುದಾಗಿ
ಎಲ್ಲ ಭೋಗಂಗಳು ತನ್ನವಾಗಿ,
ಎಲ್ಲ ಕರಣಂಗಳ ತನ್ಮಯ ಮಾಡಿಕೊಂಡನಾಗಿ
ಕೂಡಲಚೆನ್ನಸಂಗದೇವರು/1189
ಮನ ಮತವಲ್ಲದೆ, ಸಯದಾನ ಮತವಲ್ಲದೆ,
ಶರೀರಾರ್ಥದಲ್ಲಿ ದ್ರವ್ಯವಂತನಲ್ಲದೆ, ಅರ್ಪಿತಮುಖವರಿತ ಪ್ರಸಾದಿ,
ಸಕೀಲಸುಖವಳಿಯದ ಪ್ರಸಾದಿ,
ಶೋಣಿತ ಇಚ್ಛಾದಿಗಳಳಿದ ಪ್ರಸಾದಿ,
ನಾದ ಬಿಂದುವಿನ ಪರಿಭಾವವಳಿದ ಪ್ರಸಾದಿ.
ಪ್ರಸಾದವೆ ಭಾವ, ಪ್ರಸಾದವೆ ನಿರ್ಭಾವ,
ನಡೆ ನುಡಿ ಚೈತನ್ಯ ಆಳಾಪ, ಸಂಗ ಸುಸಂಗ ಮಹಾಸಂಗ
ಘನಸಂಗದಲ್ಲಿ ಮನನಿಂದ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಮದೇವಾ
ಶಬ್ದಾರ್ಥದಲ್ಲಿ ಮನನಿಂದ ಪ್ರಸಾದಿ./1190
ಮನ ಲಿಂಗವಾಗಿ ಘನ ವೇದ್ಯವಾದೆನೆಂದು ನುಡಿವವ,
ತಾ ಲಿಂಗಪ್ರಸಾದವ ಕೊಂಬಾಗ ಭವಿದೃಷ್ಟಿ ಸೋಂಕಿತ್ತೆಂದು
ಬಿಡುವ ಅನಾಚಾರವ ನೋಡಾ!
ಆಚಾರವನೆ ಅನಾಚಾರವ ಮಾಡಿ ಅನಾಚಾರವನೆ ಆಚಾರವೆಂದು
ಸಂಬಂದಿಸಿಕೊಂಬ ಪರಿಯ ನೋಡಾ!
ಇದು ಕಾರಣ-ಸಂಕಲ್ಪಿತವ ಮಾಡಲಾಗದು.
ಸಂಕಲ್ಪಿತದಲ್ಲಿ ಶಿವನಿಲ್ಲ ಪ್ರಸಾದವಿಲ್ಲ.
ಲಿಂಗ ಮುಟ್ಟಿ ತಾ ಲಿಂಗವಾದ ಬಳಿಕ ಭವವಿಲ್ಲ ಕಾಣಾ
ಕೂಡಲಚೆನ್ನಸಂಗಮದೇವಾ. /1191
ಮನ ವಚನ ಕಾಯದಲ್ಲಿ ಆಸೆಯಿಲ್ಲದ ಶರಣ,
ಅರ್ಥ ಪ್ರಾಣ ಅಬಿಮಾನದಲ್ಲಿ ಲೋಭವಿಲ್ಲದ ಶರಣ,
ವಾಕ್ಕು ಪಾಣಿ ಪಾಯು ಪಾದ ಗುಹ್ಯವೆಂಬ ಕಮರ್ೆಂದ್ರಿಯಂಗಳನು
ಹೊದ್ದಲೀಯದ ಶರಣ,
ಲಿಂಗಜಂಗಮದ ಪ್ರಸಾದಸಾರಾಯ ಶರಣ,
ಕೂಡಲಚೆನ್ನಸಂಗ[ನ] ಅನುಭಾವಸಾರಾಯ ಶರಣ./1192
ಮನಕ್ಕೆ ಮನವೇಕಾರ್ಥವಾಗಿ,
ಪ್ರಾಣಕ್ಕೆ ಪ್ರಾಣವೇಕಾರ್ಥವಾಗಿ,
ಭಾವಕ್ಕೆ ಭಾವವೇಕಾರ್ಥವಾಗಿ, ಸಂಗಕ್ಕೆ ಸಂಗ ಸಮರತಿಯಾಗಿ,
ಕೂಡಿದ ಕೂಟವನಗಲಬಾರದಯ್ಯ ;
ಅಗಲಿ ಒಂದು ನಿಮಿಷ ಸೈರಿಸಬಾರದಯ್ಯಾ.
ಕೂಡಲಚೆನ್ನಸಂಗಾ, ನಿಮ್ಮ ನಚ್ಚುಮೆಚ್ಚಿನ ಶರಣರನಗಲುವ ಅಗಲಿಕೆ
ಎನ್ನ ಪ್ರಾಣದ ಹೋಕು ನೋಡಯ್ಯಾ. /1193
ಮನದ ಭ್ರಮೆಯ ಕಳೆದು ಗುರುವ ಮಾಡಿ
ಗುರುಭಕ್ತನಾದನಯ್ಯಾ ಬಸವಣ್ಣನು.
ಪ್ರಾಣದ ಭ್ರಮೆಯ ಕಳೆದು ಲಿಂಗವ ಮಾಡಿ
ಲಿಂಗಭಕ್ತನಾದನಯ್ಯಾ ಬಸವಣ್ಣನು.
ಸಂಸಾರದ ಭ್ರಮೆಯ ಕಳೆದು ಜಂಗಮವ ಮಾಡಿ
ಜಂಗಮಭಕ್ತನಾದನಯ್ಯಾ ಬಸವಣ್ಣನು.
ಈ ತ್ರಿವಿಧಭ್ರಮೆಯ ತ್ರಿಕರಣದಲ್ಲಿ ಕಳೆದು
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನಾದನಯ್ಯಾ ಬಸವಣ್ಣನು./1194
ಮನದ ಭ್ರಮೆಯ ಕಳೆದು, ಗುರುವ ಮಾಡಿ
ಗುರುಭಕ್ತನಾದನಯ್ಯಾ ಬಸವಣ್ಣನು.
ಪ್ರಾಣದ ಭ್ರಮೆಯ ಕಳೆದು ಲಿಂಗವ ಮಾಡಿ
ಲಿಂಗಭಕ್ತನಾದನಯ್ಯಾ ಬಸವಣ್ಣನು.
ಸಂಸಾರದ ಭ್ರಮೆಯ ಕಳೆದು ಜಂಗಮವ ಮಾಡಿ
ಜಂಗಮಭಕ್ತನಾದನಯ್ಯಾ ಬಸವಣ್ಣನು.
ಈ ತ್ರಿವಿಧಭ್ರಮೆಯ ತ್ರಿಕರಣದಲ್ಲಿ ಕಳೆದು
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನಾದನಯ್ಯಾ ಬಸವಣ್ಣನು/1195
ಮನದ ಮತ್ಸರವ ಕಳೆದು, ಮನದ ಮೇಲೆ ಲಿಂಗವ ಕುಳ್ಳಿರಿಸಬೇಕಯ್ಯಾ.
ಧನದ ಲೋಭವ ಕಳೆದು, ಧನದ ಮೇಲೆ ಜಂಗಮವ ಕುಳ್ಳಿರಿಸಬೇಕಯ್ಯಾ.
ಕಾಯಗುಣಂಗಳ ಕಳೆದು ಕಾಯವ ಪ್ರಸಾದವ ಮಾಡಬೇಕಯ್ಯಾ.
ಈ ಎಲ್ಲಾ ಗುಣಂಗಳನತಿಗಳೆದು ತ್ರಿವಿಧದಲ್ಲಿ ದಾಸೋಹಿಯಾಗಿರಬೇಕು,
ಕೂಡಲಚೆನ್ನಸಂಗಯ್ಯಾ. /1196
ಮನದ ಮನೋಹರ, ರಮಣೀಯ (ರಮಣ)
ಸುಖದ ಮನದ, ದುಃಖದ ಮನದ,
ಸುಚಿತ್ತ ದುಶ್ಚಿತ್ತದ ಒಡೆಯ, ನೀ ಸಹಿತವಲ್ಲದೇನುವನನುಭವಿಸೆ.
ಕೂಡಲಚೆನ್ನಸಂಗಯ್ಯಾ
ಎನಗೆ ಬೇರೆ ಅನುಭವಿಸಲುಂಟೆ ? /1197
ಮನದ ಸೂತಕವಳಿಯದೆ ಘನದಲ್ಲಿ ಕೂಡಿಹೆನೆಂದರೆ ದೊರೆಕೊಳ್ಳದು,
ಭಕ್ತಿಪಥ ದೊರೆಕೊ?್ಳದು, ಶರಣಪಥ ದೊರೆಕೊಳ್ಳದು,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾದಂಗಲ್ಲದೆ./1198
ಮನದಂತೆ ಮಂಗಳವೆಂಬುದು ತಪ್ಪದು ನೋಡಾ ಬಸವಣ್ಣಾ;
ಅರಸುವಂಗೆ ಅರಕೆ ಸಾಧ್ಯವಪ್ಪುದು ತಪ್ಪದು ನೋಡಾ ಬಸವಣ್ಣಾ.
ನಿಮ್ಮ ಮನದ ಅರ್ತವನಡಗಿಸುವಡೆ
ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರ ಬರವು
ತಪ್ಪಲರಿಯದು ಕೇಳಾ ಬಸವಣ್ಣಾ. /1199
ಮನದದ್ಭುತವಹಂಕಾರವಳಿಯದನ್ನಕ್ಕ ಸದ್ಭಕ್ತಿ ಸದರವೆಂತೆಂಬೆನು ?
ಕಾಯ ಸಮ್ಮೋಹಿಯನು ಲಾಂಛನಧಾರಿಯೆಂಬೆನು,
ಜೀವ ಸಮ್ಮೋಹಿಯನು ಸಂಸಾರಿಯೆಂಬೆನು.
ಇದು ಕಾರಣ ಮಿಗೆ ಮಿಗೆ ಮೀಸಲು
ಸಲೆ ಸಹಜ ಕೂಡಲಚೆನ್ನಸಂಗನೆಂಬೆನು. /1200
ಮನವಿಲ್ಲದೆ ಮಾಡಿದಡೆ ಲಿಂಗರೂಪಾಯಿತ್ತು;
ಧನವಿಲ್ಲದೆ ಮಾಡಿದಡೆ ಜಂಗಮರೂಪಾಯಿತ್ತು;
ತನುವಿಲ್ಲದೆ ಮಾಡಿದಡೆ ಪ್ರಸಾದರೂಪಾಯಿತ್ತು;
ಈ ತ್ರಿವಿಧ ಸಕೀಲಸಂಬಂಧವ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಬಲ್ಲ./1201
ಮನವೆಂಬ ಘನದ ತಲೆಬಾಗಿಲಲ್ಲಿ ಸದಾಸನ್ನಹಿತನಾಗಿಪ್ಪೆ ಎಲೆ ಅಯ್ಯಾ.
ಸಕಲ ಪದಾರ್ಥಂಗಳು ನಿಮ್ಮ ಮುಟ್ಟಿ ಬಹವಲ್ಲದೆ,
ನಿಮ್ಮ ಮುಟ್ಟದೆ ಬಾರವೆಂಬ ಎನ್ನ ಮನದ ನಿಷ್ಠೆಗೆ
ನೀನೆ ಒಡೆಯ ಕೂಡಲಚೆನ್ನಸಂಗಯ್ಯಾ./1202
ಮನಶುದ್ಧವಾಗಿ ಮಜ್ಜನಕ್ಕೆರೆದರೆ ಭಾವ ಮತ್ತೇಕಯ್ಯಾ ?
ಪತ್ರ ಪುಷ್ಪ ರಂಗವಲ್ಲಿಯನಿಕ್ಕಲೇನು, ಬಿತ್ತಿಯ ಚಿತ್ತಾರವೆ ?
ಅವರು ಕಾಣಬೇಕು, ಇವರು ಕಾಣಬೇಕೆಂಬ
ಭ್ರಮೆಯ ಭ್ರಮಿತರು ಅಂಗಹೀನರು.
ಮನದಂಗವನಗಲರು, ಲಿಂಗ ಮತ್ತೆಲ್ಲಿಯದೋ ?
ಸದಮದವಳಿದು ನಿಜವನರಿದಡೆ ಲಿಂಗಕ್ಕೆ ಪೂಜೆ ಕಂಡಾ,
ಕೂಡಲಚೆನ್ನಸಂಗಯ್ಯ ಸಾಹಿತ್ಯನಾಗಿಹನು. /1203
ಮನಸ್ಥಂ ಮನಮಧ್ಯಸ್ಥಂ ಮನಸಾ ಮನವರ್ಜಿತಂ
ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾಂತಯೋಗಿನಃ
ಅರಿದೆನೆಂಬ ಅರಿವು ಅರಿವನೆ ಗುಂಗಿತ್ತು,
ಮರೆದೆನೆಂಬ ಮರಹು ಮರಹನೆ ನುಂಗಿತ್ತು.
ನೆನಹೆ ಅವಧಾನಗೆಟ್ಟಿತ್ತು ಕೂಡಲಚೆನ್ನಸಂಗನೆಂಬ ಲಿಂಗ
ಅವಧಾನವಿಲ್ಲಾಗಿ. /1204
ಮನು ಮುನೀಶ್ವರ ವೇದ ಶಾಸ್ತ್ರ ಸ್ಮೃತಿಗಳೆಲ್ಲ
ತಮ ತಮಗೆ ಹೊಗಳುತಿಹವು ಶಿವಘನತೆಯಂ,
ಘನತರಾಂತರಗಾಣದ ಅತ್ಯತಿಷ್ಠದ್ದಶಾಂಗುಲನೆಂದು,
ಒರಲುತಿಹವು ಎನಲು ಆ ಘನವದು ದರ್ಶನಾಗಮ ತರ್ಕದನುಮತಕೆ ಸಾಧ್ಯವೆರಿ
ಲಿಂಗದ ಮಹಾತ್ಮೆಗೆ ಕಡೆಯನೆಣಿಸಲಿಲ್ಲಾಗಿ.
ಪ್ರಣವಾದಿ ಪಂಚಾಕ್ಷರಿಯೊಳಗಡಕವಾಗಿಹುದು ಸತ್ಯ, ನಿತ್ಯ.
ಅನಿತ್ಯದೇವತೆಗಳರಿಯಲಿಕರಿವೆ ಸಚ್ಚಿದಾನಂದ ಶಿವಜ್ಞಾನಾನುಭಾವಭಾವೋತ್ತಮರ
ಭಾವ ಕರಣದ ಕರದೊಳಮೃತಕರಕಿರಣ ಸಮ್ಯಗ್ಜೋತಿಯರಿ
ಒತ್ತರಿಸಿ ತೊಳತೊಳಗುವತ್ಯಂತ ನಿರವಯದ
ಮತ್ತೆ ಸಚ್ಚಿತ್ ಸುಖನಿರಂಜನದ ನಿರ್ಮಲದ ನಿತ್ಯ ಕೂಡಲಚ್ನೆಸಂಗನಂಗವನು
ಪ್ರಭುಲಿಂಗದಲ್ಲಿಯೆ ಕಂಡೆನು/1205
ಮನೆಯೊಳಗಣ ಕಿಚ್ಚು ಕಾನನವ ಸುಟ್ಟಿತ್ತು,
ಕಾನನ ಬೆಂದಲ್ಲಿ ಮನೆ ಉರಿಯಹತ್ತಿತ್ತು, ಮನೆ ಬೆಂದು ಕಂಬ ಉಳಿಯಿತ್ತು.
ಆ ಕಂಬದ ಮೇಲೆ ರತ್ನವಿದ್ದುದ ಕಂಡೆ.
ಅದರ ಬೆಳಗು ಮೂರು ಲೋಕವ ತುಂಬಿತ್ತಲ್ಲಾ
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು/1206
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ,
ಬಸುರೊಳಗಣ ಶಿಶು ಬಸುರ ಮುಟ್ಟದಂತೆ,
ಕಕ್ಷೆ, ಕರಸ್ಥಳ, ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ,
ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ.
ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ./1207
ಮರಕ್ಕೆ ಬಿತ್ತು ಹುಟ್ಟಿದರೇನಯ್ಯಾ ಬಿತ್ತಿಂಗೆ ಮರ ಹುಟ್ಟಿದರೇನಯ್ಯಾ?
ಮರದ ಬೆಳಸಿನ ಫಲದ ಪರಿಯ ಬೆಸಗೊಳ್ಳಲಿಲ್ಲ.
ಸಸಿ ಪಲ್ಲವಿಸಿ ತ್ರಿವಿಧವಾಯಿತ್ತು.
ಕೂಡಲಚೆನ್ನಸಂಗಾ ನಿಮ್ಮ ಶರಣಂಗಯ್ಯಾ. /1208
ಮರಹು ಅರಿವಿನಲ್ಲಡಗಿ, ಅರಿವು ಮರಹ ನುಂಗಿ
ತೆರಹಿಲ್ಲದಿರ್ದೆನೆಂಬ ಅಹಂ ಇದೇನೊರಿ
ಬ್ರಹ್ಮವನೊಳಕೊಂಡ ಬ್ರಹ್ಮವು ತಾನಾಗಿ
ಮತ್ತೆ ಬ್ರಹ್ಮದ ನುಡಿ ಇದೇನೊರಿ
ಆದಿಶೂನ್ಯ ಮಧ್ಯಶೂನ್ಯ ಅಂತ್ಯಶೂನ್ಯ ಉಧ್ರ್ವಶೂನ್ಯದಿಂದತ್ತತ್ತ ನಿಂದ
[ಘನದ]ನಿಲವ ಕಾಬರಾರೊರಿ
ಇದು ಕಾರಣ-ಕೂಡಲಚೆನ್ನಸಂಗನ [ಸಹಜದ] ನಿಲವು
ಬಯಲು ಚಿತ್ರಿಸಿದ ರೂಪ, ಬಯಲರಿಯದಂತೆ! /1209
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತ್ತು,
ಚಿತ್ರಕನೊಳಡಗಿದ ಚಿತ್ರದಂತಿದ್ದಿತ್ತು,
ಆಲಿಯೊಳಡಗಿದ ತೇಜದಂತಿದ್ದಿತ್ತು
ನುಡಿಯೊಳಡಗಿದ ಅರ್ಥದಂತಿದ್ದಿತ್ತು
ಕೂಡಲಚೆನ್ನಸಂಗಯ್ಯಾ ನಿಮ್ಮ ನಿಲವು. /1210
ಮರುತನ ಸಂಗದಿಂದ ಪರಿಮಳ ಬೀಸರವಾಯಿತ್ತು,
ನುಡಿಯ ಗಡಣದಿಂದ ಅನುಭಾವ ಬೀಸರವಾಯಿತ್ತು,
ಮಾಟದ ಸಂಭ್ರಮದಿಂದ ಭಕ್ತಿ ಬೀಸರವಾಯಿತ್ತು.
ಕೂಟದ ಬೆರಕೆಯ ಸಂಭ್ರಮದಿಂದ ಅರಿವು ಬೀಸರವಾಯಿತ್ತು.
ಸೂಕ್ಷ್ಮ ಶಿವಪಥವು ಸಾಮಾನ್ಯಂಗಳವೆರಿ
ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ./1211
ಮರ್ಮವರಿದು ಮಾಡುವಂಗೆ ಕರ್ಮವಿಲ್ಲ,
ಹೆಮ್ಮೆಯಲ್ಲಿ ಮಾಡಿದವನ ವಿದಿಯ ನೋಡಾ.
ಸಜ್ಜನ ಸದಾಚಾರವರಿದು ಮಾಡುವನು
ಕೂಡಲಚೆನ್ನಸಂಗಯ್ಯನಲ್ಲಿ ನಮ್ಮ ಬಸವಣ್ಣನು/1212
ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು,
ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು,
ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ.
ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು
ಲಿಂಗಕ್ಕಬಿಷೇಕಂಗೆಯ್ಯುತಿಪ್ಪರು ನೋಡಾ.
ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು ಗಳಹುತಿಪ್ಪರು ನೋಡಾ.
ಇಂತೀ ಮರುಳರಾಟವ ಕಂಡು,
ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ
ಕೂಡಲಚೆನ್ನಸಂಗಮದೇವಾ/1213
ಮಸಣವೈರಾಗ್ಯರು ಲಕ್ಷ ಲಕ್ಷ, ಪುರಾಣವೈರಾಗ್ಯರು ಲಕ್ಷ ಲಕ್ಷ,
ಪ್ರಸೂತಿವೈರಾಗ್ಯರು ಲಕ್ಷ ಲಕ್ಷ, ಪಿತ್ತವೈರಾಗ್ಯರು ಲಕ್ಷ ಲಕ್ಷ,
ಸ್ವಯಾನುಭಾವ ಸಮ್ಯಕ್ಜ್ಞಾನ ವೈರಾಗ್ಯರನೊಬ್ಬರನೂ ಕಾಣೆ
ಕೂಡಲಚೆನ್ನಸಂಗಮದೇವಾ./1214
ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ,
ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯಾ.
ನಾಬಿಯಲ್ಲಿ ಶಂಕರನೆಂಬ ರುದ್ರನಿಪ್ಪನಯ್ಯಾ,
ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯಾ.
ಕೊರಳಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯಾ.
ಬಲದ ಭುಜದಲ್ಲಿ ಶ್ರೀಕಠನೆಂಬ ರುದ್ರನಿಪ್ಪನಯ್ಯಾ,
ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯಾ.
ಬಲದ ಬಾಹುವಿನಲ್ಲಿಈಶ್ವರನೆಂಬ ರುದ್ರನಿಪ್ಪನಯ್ಯಾ.
ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯಾ.
ಬಲದ ಮುಂಗೈಯಲ್ಲಿ ಕೋದಂಡನೆಂಬ ರುದ್ರನಿಪ್ಪನಯ್ಯಾ,
ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯಾ.
ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯಾ,
ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಿಪ್ಪನಯ್ಯಾ.
ಬಲದ ಕಣ್ಣಲ್ಲಿ ಕಾಮಸಂಹರನೆಂಬ ರುದ್ರನಿಪ್ಪನಯ್ಯಾ,
ಎಡದ ಕಣ್ಣಲ್ಲಿ ತ್ರಿಪುರಸಂಹರನೆಂಬ ರುದ್ರನಿಪ್ಪನಯ್ಯಾ.
ಬಲದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಿಪ್ಪನಯ್ಯಾ,
ಎಡದ ಕರ್ಣದಲ್ಲಿ ಏಕಾದಶನೆಂಬ ರುದ್ರನಿಪ್ಪನಯ್ಯಾ.
ಹಿಂದಲೆಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯಾ.
ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡಖಂಡಿತನೆಂಬ ರುದ್ರನಿಪ್ಪನಯ್ಯಾ;
ಇಂತೀ ರುದ್ರರುಗಳು ತಮ್ಮ ತಮ್ಮಸ್ಥಾನಂಗಳೊಳಗಿಪ್ಪರಾಗಿ;
ಇದನರಿಯದೆ ವಿಭೂತಿಯ ಧರಿಸಿದಡೆ
ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ
ಕೂಡಲಚೆನ್ನಸಂಗಮದೇವಾ./1215
ಮಹಾಂತನ ಕೂಡಲದೇವರೆಂಬ ಪಾಷಂಡಿ ವೇಷಧಾರಿ
ಉದರಘಾತಕ ಮೂಳ ಹೊಲೆಯರನೇನೆಂಬೆನಯ್ಯಾ?
ಮಹಾಂತನ ಪರಿ ಪ್ರಕಾರವನೇನೆಂದರಿನರಯ್ಯಾ.
ಮಹಾಂತನೆಂದಡೆ ಪರಂಜ್ಯೋತಿ ಸ್ವರೂಪು, ನಿತ್ಯ ನಿರಂಜನನು,
ನಿಃಕಳಂಕ ನಿದರ್ೇಹನು, ನಿಃಶೂನ್ಯ ನಿರಾಮಯನು,
ಅನಂತ ಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ಕರ್ತೃ.
ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ
ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ ವಿಶ್ವಪರಿಪೂರ್ಣನು.
ಇಂತಪ್ಪ ಪರಂಜ್ಯೋತಿ ಮಹಾಂತನ ತನ್ನ ಸರ್ವಾಂಗದೊಳಗಡಗಿಸಿಕೊಂಡು
ನಿಬ್ಬೆರಗಿಯಾಗಿ ನಿಃಶೂನ್ಯ ನಿಃಶಬ್ದನಾಗಿ ಇರಬಲ್ಲಡೆ
ಮಹಾಂತ ಕೂಡಲದೇವರೆಂಬೆ.
ಇದನರಿಯದ ವೇಷಲಾಂಛನ ನರಕಿಗಳನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವರಲ್ಲಿ ಸಲ್ಲದ ನರಕಿಗಳರಿ/1216
ಮಹಾಕಾಲದಲ್ಲಿ ನಿಮ್ಮಿಂದ ನೀವೆ ಸ್ವಯಂಭುವಾಗಿರ್ದಿರಯ್ಯಾ
ಒಂದನಂತಕಾಲ.
ಮಹವು ಮಹಾನಂದದಲಕ್ಕಾಡಿ, ಮತ್ತಲ್ಲಿಯೆ ಲೀಯವಾಗಿರ್ದುದು
ಒಂದನಂತಕೋಟಿ ವರುಷ
ಕೂಡಲಚೆನ್ನಸಂಗಮದೇವ ವಿಪರೀತಚಾರಿತ್ರ./1217
ಮಹಾಘನ ಶ್ರೀಗುರುಲಿಂಗವೆ ಗುರುವಲ್ಲದೆ,
ಪಿತನೊಂದು ಗುರುವೆ? ಮಾತೆಯೊಂದು ಗುರುವೆರಿ
ಭ್ರಾತನೊಂದು ಗುರುವೆ? ಸತಿಯೊಂದು ಗುರುವೆರಿ
ಸುತನೊಂದು ಗುರುವೆ?
ಗುರುಗುರುವೆಂದೇನೊ ಒಮ್ಮರ (ಒಮ್ಮ?) ಗುರುವೆ?
ಆ ಮಹಾಘನ ಗುರುಲಿಂಗಕ್ಕೆ ಇವರೆಲ್ಲರ ಸರಿಗಂಡಡೆ
ಅಘೋರ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ/1218
ಮಹಾಘನಲಿಂಗವೆ ಅಂಗತ್ರಯದಲ್ಲಿ,
ಇಷ್ಟ ಪ್ರಾಣ ತೃಪ್ತಿಯೆನಿಸಿತ್ತು,
ಇಂದ್ರಿಯಸ್ಥಾನದಲ್ಲಿ ಷಡ್ವಿಧಲಿಂಗವೆನಿಸಿತ್ತು.
ನವವಿಧವಾದುದು ಒಂದು ಎಂದರಿದ
ಕೂಡಲಚೆನ್ನಸಂಗಾ ನಿಮ್ಮ ಶರಣ/1219
ಮಹಾಜ್ಞಾನ ಗುರುವಿನಲ್ಲಿ ಸ್ವಾಯತವಾಯಿತ್ತು,
ಸುಜ್ಞಾನ ಶಿಷ್ಯನಲ್ಲಿ ಸ್ವಾಯತವಾಯಿತ್ತು;
ಜ್ಞಾನ ಲಿಂಗದಲ್ಲಿ ಸ್ವಾಯತವಾಯಿತ್ತು.-
ಇಂತು ಜ್ಞಾನ ಸುಜ್ಞಾನ ಮಹಾಜ್ಞಾನವೆಂಬವು,
ಜಂಗಮ ಲಿಂಗದಲ್ಲಿ ಸ್ವಾಯತವಾಗಿಪ್ಪುವಾಗಿ! –
ಅದು ಕಾರಣ, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದು; ಅದೇನು ಕಾರಣವೆಂದಡೆ-
ಗಮನಿಸಿ ಬಂದ ಜಂಗಮಲಿಂಗವು ಪಾದಾರ್ಚನೆಯ ಮಾಡಿ[ಕೊಂಬು]ದಾಗಿ.
ಲಿಂಗಕ್ಕೆ ವಸ್ತ್ರವ ಕೊಡಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ವಸ್ತ್ರಾಲಂಕಾರವ ಮಾಡಿಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ಗಂಧವ ಪೂಸಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ಗಂಧವ ಲೇಪಿಸಿಕೊಳ್ಳ[ಬಲ್ಲು]ದಾಗಿ
ಲಿಂಗಕ್ಕೆ ಅಕ್ಷತೆಯ ಕೊಡಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮವು ಲಲಾಟದಲ್ಲಿ ಧರಿಸಿಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ಪುಷ್ಪವ ಕೊಡಲಾಗದು, ಅದೇನು ಕಾರಣವೆಂದಡೆ –
ಚರವೆಂಬ ಜಂಗಮಲಿಂಗವು, ತಮ್ಮ ಸಿರಿಮುಡಿಯಲ್ಲಿ ತುರುಬಿಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ಧೂಪಾರತಿಯ ಕೊಡಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು, ನಾಸಿಕದಲ್ಲಿ ಪರಮಳವ ಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ದೀಪಾರತಿಯ ಬೆಳಗಲಾಗದು, ಅದೇನು ಕಾರಣವೆಂದಡೆ –
ಚರವೆಂಬ ಜಂಗಮಲಿಂಗವು, ದೃಷ್ಟಿಯಲ್ಲಿ ನೋಡಿ ಪರಿಣಾಮಿಸ[ಬಲ್ಲು]ದಾಗಿ.
ಲಿಂಗಕ್ಕೆ ನೈವೇದ್ಯವ ಕೊಡಲಾಗದು, ಅದೇನು ಕಾರಣವೆಂದಡೆ –
ಚರವೆಂಬ ಜಂಗಮಲಿಂಗವು ಜಿಹ್ವೆಯಲ್ಲಿ ಸಕಲರುಚಿಗಳ ರುಚಿಸ[ಬಲ್ಲು]ದಾಗಿ.
ಲಿಂಗಕ್ಕೆ ಹಸ್ತಮಜ್ಜನಕ್ಕೆ ಸಿತಾಳವ ನೀಡಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು, ಹಸ್ತಮಜ್ಜನವ ಮಾಡಿಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ತಾಂಬೂಲವನರ್ಪಿಸಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು,
ಶ್ರೀಮುಖದಲ್ಲಿ ತಾಂಬೂಲವನರ್ಪಿಸಿಕೊಳ್ಳ[ಬಲ್ಲು]ದಾಗಿ.
ಲಿಂಗಕ್ಕೆ ಸುಖಾಸನವನಿಕ್ಕಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ಸುಖಾಸನದಲ್ಲಿ ಕುಳ್ಳಿರ[ಬಲ್ಲು]ದಾಗಿ.
ಲಿಂಗಕ್ಕೆ ಸ್ತೋತ್ರ, ಮಂತ್ರ, ಗೀತ, ವಾದ್ಯ, ನೃತ್ಯಂಗಳನಾಗಿಸಲಾಗದು,
ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ನೇತ್ರ ಶ್ರೋತ್ರ ಹಸ್ತಂಗಳಿಂದ
ಸ್ತೋತ್ರ ಮಂತ್ರ ವಾದ್ಯ ನೃತ್ಯಂಗಳ
ಕೇಳಿ ನೋಡಿ ತಣಿದು ಪರಿಣಾಮಿಸ[ಬಲ್ಲು]ದಾಗಿ.
ಲಿಂಗಕ್ಕೆ ಭೂಷಣಲಂಕಾರವ ಮಾಡಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ಕರ ಶಿರ ಚರಣಾದ್ಯವಯವಂಗಳಲ್ಲಿ
ಆಭರಣಂಗಳನಲಂಕರಿಸ[ಬಲ್ಲು]ದಾಗಿ.
ಲಿಂಗಕ್ಕೆ ವಾಹನಂಗಳನರ್ಪಿಸಲಾಗದು, ಅದೇನು ಕಾರಣವೆಂದಡೆ-
ಚರವೆಂಬ ಜಂಗಮಲಿಂಗವು ವಾಹನಂಗಳ ಮೇಲೆ ಕುಳಿತು ಚಲಿಸ[ಬಲ್ಲು]ದಾಗಿ.
ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗವೆಂಬ ಜಂಗಮಲಿಂಗಕ್ಕೆ
ದಾಸೋಹವ ಮಾಡಿ ಪ್ರಸಾದವ ಕೊಂಬ ಭಕ್ತಂಗೆ
ಗುರುವುಂಟು, ಲಿಂಗವುಂಟು ಜಂಗಮವುಂಟು,
ಪಾದೋದಕ ಪ್ರಸಾದವುಂಟು. ಆಚಾರವುಂಟು ಸದ್ಭಕ್ತಿಯುಂಟು.
ಇಂತೀ ಎಲ್ಲವನು ಜಂಗಮಕ್ಕೆ ದಾಸೋಹವ ಮಾಡದೆ
ತನ್ನ ಗುರುವಿಗೂ ಲಿಂಗಕ್ಕೂ ಆರು ಕೆಲಂಬರು ಭಕ್ತಿಯ ಮಾಡುವರು
ಅವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕ ಪ್ರಸಾದವಿಲ್ಲ.
ಇಂತೀ ಪಂಚಾಚಾರವಿಲ್ಲವಾಗಿ ಅವರು ವ್ರತಗೇಡಿಗಳು.
ಅವರ ಮುಖವ ನೋಡಲಾಗದು, ಕೂಡಲಚೆನ್ನಸಂಗಮದೇವಾ./1220
ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ
ಸುಜ್ಞಾನವು ಶಿಷ್ಯನಲ್ಲಿ ಸಾಹಿತ್ಯ, ಜ್ಞಾನವು ಲಿಂಗದಲ್ಲಿ ಸಾಹಿತ್ಯ.
ಇಂತೀ ಜ್ಞಾನವೂ ಸುಜ್ಞಾನವೂ ಮಹಾಜ್ಞಾನವೂ ಜಂಗಮದಲ್ಲಿ ಸಾಹಿತ್ಯವು.
ಇದು ಕಾರಣವಾಗಿ- ಸಕಲ ಭೋಗಾಧಿಭೋಗಂಗಳೆಲ್ಲವನು
ಜಂಗಮಕ್ಕೆ ಕೊಡದೆ ಲಿಂಗಕ್ಕೆ ಕೊಡಲಾಗದು
ಅದೇನು ಕಾರಣವೆಂದರೆ:
ಸರ್ವಸುಖಂಗಳನು ಜಂಗಮಕ್ಕೆ ಅರ್ಪಿಸಿದಡೆ
ಆ ಸುಖವ ಸುಖಿಸಬಲ್ಲನಾಗಿ ತನಗೆ ಪ್ರಸಾದವಾಯಿತ್ತು.
ಲಿಂಗಕ್ಕೆ ಅರ್ಪಿಸಿದಡೆ ಆ ಸುಖವ ಸುಖಿಸಲರಿಯದಾಗಿ
ತನಗೆ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ.
ಅದು ಕಾರಣವಾಗಿ- ಜಂಗಮಕ್ಕೆ ಮಾಡದೆ ಲಿಂಗಕ್ಕೆ ಆರು ಮಾಡಿಹಾರು
ಅಲ್ಲಿ ಲಿಂಗಕ್ಕೆ ತೃಪ್ತಿಯಿಲ್ಲ ಕಾಣಾ
ಕೂಡಲಚೆನ್ನಸಂಗಮದೇವಾ./1221
ಮಹಾಲಿಂಗಮೋಹಿತನಾದಡೆ ಲೋಕದ ಮೋಹವ ಮರೆಯಬೇಕು.
ಮಹಾಲಿಂಗಭಕ್ತನಾದಡೆ ಪೂರ್ವಭಕ್ತಿಯ ಮಾಡಲಾಗದು.
ಮಹಾಲಿಂಗಪೂಜಕನಾದಡೆ, ಅಜ್ಞಾನಿಗಳ ಕೂಡೆ
ಸಂಗ-ಸಂಭಾಷಣೆಯ ಮಾಡಲಾಗದು.
ಮಹಾಲಿಂಗವೀರನಾದಡೆ ಪ್ರಳಯಾದಿಗಳಿಗಂಜಲಾಗದು.
ಮಹಾಲಿಂಗಪ್ರಸಾದಿಯಾದಡೆ ಸಮತೆ ನೆಲೆಗೊಳ್ಳಬೇಕು.
ಮಹಾಲಿಂಗಪ್ರಾಣಿಯಾದಡೆ ಮನದ ಕೊನೆಯಲ್ಲಿ
ಲಿಂಗದ ನೆನಹು ಹಿಂಗಲಾಗದು.
ಇದು ಕಾರಣ -ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಮಹಾಲಿಂಗಭಕ್ತಿ./1222
ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು
ನರಕಕ್ಕಿಳಿದು ಹೋದರು.
ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು
ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು.
ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ
ಒಕ್ಕು ಮಿಕ್ಕ ಪ್ರಸಾದವ ಕೊಂಡು
ಆಗಳೆ ಅಂತೆ ಮೋಕ್ಷವನೈದಿದರು,
ಶಿವರಹಸ್ಯದಲ್ಲಿ;
ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ
ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ ಎಂದುದಾಗಿ
ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು
ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ
ಕೂಡಲಚೆನ್ನಸಂಗಮದೇವಾರಿ/1223
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ.
ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ,
ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು. /1224
ಮಾಟವಿಲ್ಲದ ಕೂಟವದೇಕೋಳ ಕೂಟವಿಲ್ಲದ ಮಾಟವದೇಕೋ?
ಮಾಟಕೂಟವೆರಡರನುವರಿಯಬೇಕು.
ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಬೇಕು.
ಕೂಟಮಾಟವೆರಡರ ಅನುಮತದಿಂದವೆ ಭಕ್ತಿ.
ಇದೇ [ಕೂಟ] ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ. /1225
ಮಾಡಬಾರದ ಭಕ್ತಿಯನೆ ಮಾಡಿ, ನೋಡಬಾರದ ನೋಟವನೆ ಕೂಡಿ,
ಸ್ತುತಿಸುವರೆ ಸ್ತುತಿಗೆ ಬಾರದೆ, ಮುಟ್ಟುವ[ರೆ] ಮುಟ್ಟಬಾರದೆ
ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ
ನಮೋ ನಮೋ ಎಂದು ಬದುಕಿದೆನು ಕಾಣಾ
ಕೂಡಲಚೆನ್ನಸಂಗಮದೇವಾ/1226
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು
ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ!
ಅನ್ಯ ಚಿಹ್ನವಳಿದು ತನ್ನ ತಾ ಮರೆಯಿತ್ತು,
ಕೂಡಲಚೆನ್ನಸಂಗನೆಂದೆನಿಸಿತ್ತು!/1227
ಮಾಡುವ ದಾಸೋಹ ಕಿಂಕುರ್ವಾಣದಿಂದಾದರೆ
ಭಕ್ತನ ಆವ ಅವಗುಣಂಗಳು ಮುಟ್ಟಲಮ್ಮವಯ್ಯಾ.
ಅರ್ಥ ಪ್ರಾಣ ಅಬಿಮಾನ ತ್ರಿಸ್ಥಾನ ಶುದ್ಧವ ಮಾಡುವಲ್ಲಿ
ನಿರಾಭಾರಿ ಮಹೇಶ್ವರನ ಕೂಡಿಕೊಂಡಿಪ್ಪ
ಕೂಡಲಚೆನ್ನಸಂಗಮದೇವ. /1228
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ.
ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ.
ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ,
ಕೂಡಲಚೆನ್ನಸಂಗಮದೇವಾ./1229
ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ.
ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ.
ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ.
ಮಾಡುವ ಸದಾಚಾರಕ್ಕೆ ಮೂರು ಪೂಜೆ.
ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ,
ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ/1230
ಮಾಡುವರಯ್ಯಾ ಮಾಡುವರಯ್ಯಾ ಉದ್ದೇಶಕ್ಕೆ ಭಕ್ತಿಯ.
ಎಡೆಯಲೆ ಆಯಿತ್ತು, ಎಡೆಯಲೆ ಹೋಯಿತ್ತೆಂಬವಂಗೆ ಬಂದಿತ್ತೆ ಭಕ್ತಿ ?
ಕಳಶ ಪೂರಾಯವಹನ್ನಬರ ಮಾಡದಿದ್ದಡೆ
ಭಕ್ತಿಗೆ ಭಂಗವಯ್ಯಾ ಕೂಡಲಚೆನ್ನಸಂಗಯ್ಯಾ. /1231
ಮಾಡುವರಯ್ಯಾ ಮಾಡುವರಯ್ಯಾ ಮರುಳುಗೊಂಡಂತೆ,
ಮರ್ಮವರಿಯದ ಮಾಟ ಸಯಿದಾನದ ಕೇಡು, ಕರ್ಮದ ಬೆಳಸು.
ಕೂಡಲಚೆನ್ನಸಂಗನ ಶರಣರ ಅನುವರಿಯದೆ
ಮಾಡುವ ಮಾಟ ಭವಮಾಟ. /1232
ಮಾಡುವಲ್ಲಿ ಎನ್ನ ನಾನು ಅರೆಯಿತ್ತು ಮಾಡಿದೆನಾದಡೆ,
ನೀಡುವಲ್ಲಿ ಎನ್ನ ನಾನು ಅರೆಯಿತ್ತು ನೀಡಿದೆನಾದಡೆ,
[ಉಣಿಸುವಲ್ಲಿ] ಎನ್ನ ನಾನು ರುಚಿಗೆ ಹಾರೈಸಿದೆನಾದಡೆ
ನಿಮಗಂದೇ ದ್ರೋಹಿಯಯ್ಯಾ!
ಮಾಡುವಲ್ಲಿ ನೀಡುವಲ್ಲಿ [ಉಣಿಸುವಲ್ಲಿ] ಕೂಡೆ ಶುದ್ಧನಲ್ಲದಡೆ
ನೀನಂದೆ ಮೂಗ ಕೊಯ್ಯಾ ಕೂಡಲಚೆನ್ನಸಂಗಮದೇವಾ/1233
ಮಾಡುವಲ್ಲಿ ಭಕ್ತನೆ ? ಮಾಟದ ಕ್ರಮವರಿಯದನ್ನಕ್ಕ.
ನೀಡುವಲ್ಲಿ ಭಕ್ತನೆ ?
ಸಯದಾನವ ಸನ್ನಹಿತದ ಮರ್ಮವ ತಿಳಿಯದನ್ನಕ್ಕ.
ಸುಳಿವಲ್ಲಿ ಜಂಗಮವೆ ? ಸುಳಿವಲ್ಲಿ ಸೋಂಕು ತಿಳಿಯದನ್ನಕ್ಕ.
ಈ ಉಭಯಕುಳವಳಿಯದನ್ನಕ್ಕ
ಭವ ಹಿಂಗದು ಕೂಡಲಚೆನ್ನಸಂಗಮದೇವಾ. /1234
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ
ಮೇಳವಿಸಿದನು ಮಹಾಮಂತ್ರಂಗಳ.
ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು!
ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ
ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ
ಏಳು ರತ್ನದ ಪುತ್ಥಳಿಗಳಾಟವು,
ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ,
ಎಳೆಯ ನೀಲದ ತೊಡಿಗೆಯನೆ ತೊಟ್ಟರು,
ಸುಳಿದು ಮದ್ದಳೆಗಾರರೊಳು ಮೊಳಗೆ (ದಂದ?) ಮೆನಲು
ಕುಣಿವ (ಪಾಡುವ) ಬಹುರೂಪಿಗಳ ನಾಟಕ, ತಾಳಧಾರಿಯ ಮೇ?
ಕಹಳೆಗಾರನ ನಾದ ಕೊಳಲ ರವದೊಳಗಾಡುತ್ತ
ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ!
ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇ?
ಕೂಡಲಚೆನ್ನಸಂಗಯ್ಯನಲ್ಲಿ
ಕಳಸ (ಕಳಾಸರಿ) ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು/1235
ಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು ?
ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆ
ಆಗಮಾಚಾರಿಯರಾಗಲರಿಯರು ಕಾಣಿರೇ.
ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು.
ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚ
ನಮ್ಮ ಕೂಡಲಚೆನ್ನಸಂಗಮದೇವ./1236
ಮಾತನು ಮನೆಯ ಮಾಡಿ ಪತಿ (ಸತಿರಿ) ಯ ನೆಲೆಗೊಳಿಸಿ
ಭ್ರಾಂತಿನ ಕದವನಿಕ್ಕಿ ಸೂತಕವಳಿದ ಸುಯಿದಾನಿ,
ಇದನರಿದು ಮರೆದವರ ಕೂಡಲಚೆನ್ನಸಂಗನೆಂಬೆ/1237
ಮಾತಿನ ಮಾತಿನ ಗೀತಾಂಗದಲ್ಲಿ ಸುಜಾಣನಾಗಲಹುದು.
ಶ್ರೋತ್ರಶೋಭೆ ಪ್ರಜ್ಞಾಪ್ರವೀಣತೆಯಲ್ಲಿ ಶಾಸ್ತ್ರಿಕನಾಗಲಹುದು.
ಅಂತರಂಗ ಬಹಿರಂಗವನಂತವ ಕಾಣಬಹುದು
ಅಂತರಾಗಮ, ಗಣಿತಗುಣಿತ ಶ್ರುತಿ ಸ್ಮೈತಿಗತಕ್ರ್ಯನಾಗಿರಬಹುದು.
ಭೂತವಿಕಾರದ ಪ್ರಕೃತಿಸ್ವಭಾವ ಭ್ರಾಂತಳಿದಿರಬಹುದು.
ಕಾಂತಾರತಿಗುಣವರ್ಜಿತ ಸನ್ಯಾಸಿ, ಕ್ಷೇತ್ರವಾಸಿಗಳಾಗಿರಬಹುದು.
ಎನ್ನೊಡೆಯ ಕೂಡಲಚೆನ್ನಸಂಗಮದೇವನ
ನಚ್ಚಿನ ಮಚ್ಚಿನ ಇಚ್ಛಾವಶ[ವರ್ತಿ]ಯಾಗಿರಬಾರದು
ಲಿಂಗಾನುಭಾವವಿಲ್ಲದೆ. /1238
ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ
ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ
ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ
ಸಮರಸದಲ್ಲಿ!
ಉದಯದ ಬೆಳಗನು ಮದಗಜ ಒಳಕೊಂಡು
ಮಾವತಿಗನ ನುಂಗಿ ಉಗುಳದಲ್ಲಾ!
ಸದಮದ ಭರಿಕೈಯೊಳಗೆ ಈರೇಳು ಭುವನವನು
ಒದರಿ ಹಾಯ್ಕಿ ತಾನೆ ನಿಂದುದಲ್ಲಾ!
ಸದಮಲಜ್ಞಾನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣಂಗೆ ಸ್ವಯವಾಯಿತ್ತು/1239
ಮಾಯದ ಕಾಯದಲ್ಲಿ ಹುಟ್ಟಿದ ಕಷ್ಟಗುಣಂಗಳ ಬಿಟ್ಟು,
ನಿಷ್ಠೆಯಿಂದ ಬಂದು ನಿಮ್ಮ ಚರಣಕೆರಗಿದೆನು, ಮೊರೆಹೊಕ್ಕೆನು,
ಕೃಪೆಯಿಂದಲೆನಗೆ ಉಪದೇಶಪ್ರಸಾದವನಿತ್ತು ಸಲಹಾ
ಬಸವಣ್ಣಗುರುವೆ, ಕೂಡಲಸಂಗಮದೇವಾ/1240
ಮಾಯಾಂಗನೆಯ ಸೋಂಕಳಿದಲ್ಲದೆ ಅಂಗಸೋಂಕಲ್ಲ,
ಘಟವು ಸಯವಾದಲ್ಲದೆ ಕಕ್ಷೆಯಲ್ಲ,
ಅನ್ಯದೈವಕ್ಕೆ ತಲೆವಾಗೂದುತ್ತಮಾಂಗವಲ್ಲ,
ಷಡುರುಚಿಯ ಬೇಡೂದಮಳೋಕ್ಯವಲ್ಲ,
ನಿಂದೆ ಸ್ತುತಿಯ ನುಡಿವುದು [ಕಂಠ]ವಲ್ಲ,
ಅನ್ಯರಿಗೆ ಕೈಯಾನೂದು ಕರಸ್ಥಳವಲ್ಲ.
ಇಂತೀ ಆರರ ಕುಳವನರಿಯದಿದ್ದಡೆ
ಮುಂದಣ ನರಕ ಇಂದೇ ಬಂದಿತ್ತು
ಕೂಡಲಚೆನ್ನಸಂಗಮದೇವಾ. /1241
ಮಾಯೆವಿಡಿದು ಜೀವಿಸುವ ಜೀವಕನಲ್ಲ,
ಅದೇನು ಕಾರಣವೆಂದಡೆ:
ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ.
ವಿಷಯವಿಡಿದು ಭುಂಜಿಸುವ ಭುಂಜಕನಲ್ಲ;
ಅದೇನು ಕಾರಣವೆಂದಡೆ;
ಆತ ಮಹಾಪ್ರಸಾದವಿಡಿದು ಭುಂಜಿಸುವ ಭುಂಜಕನಾಗಿ.
ವೇಷವಿಡಿದು ರಂಜಿಸುವ ರಂಜಕನಲ್ಲ,
ಅದೇನು ಕಾರಣವೆಂದಡೆ:
ಆತ ಸಹಜವಿಡಿದು ರಂಜಿಸುವ ರಂಜಕನಾಗಿ.
ಇಂತೀ ತ್ರಿವಿಧವಿಡಿದು ಪರಮಾರ್ಥದಲ್ಲಿ ಆಚರಿಸುವ ಶರಣಂಗೆ
ಶರಣೆಂಬೆನು ಕೂಡಲಚೆನ್ನಸಂಗಮದೇವಾ. /1242
ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ.
ವಿೂರಿದಕ್ರಿಯಾಸಮಯದಲ್ಲಿ ಶಿವಲಿಂಗಸಂಪುಟ.
ಉಭಯಕ್ರಿಯಾನುಭಾವ ನೆಲೆಗೊಂಡಲ್ಲಿ ಮನಲಿಂಗಸಂಪುಟ.
ಮನ ಲಿಂಗ ಲೀಯವಾದ ಬಳಿಕ ತೆರಹಿಲ್ಲದೆ ಕುರುಹಳಿದ ಲಿಂಗೈಕ್ಯ.
ಸುತ್ತಿದ ಪ್ರಪಂಚು ಮೆಲ್ಲಮೆಲ್ಲನೆ ಅಚ್ಚುಗವಿಲ್ಲದೆ ಹಿಂಗಿದವು
ಕೂಡಲಚೆನ್ನಸಂಗಾ ಲಿಂಗೈಕ್ಯಂಗೆ./1243
ಮಾಹೇಶ್ವರಂಗೆ ಅಪ್ಪುವೆ ಅಂಗ, ಆ ಅಂಗಕ್ಕೆ ಸುಬುದ್ಧಿಯೆ ಹಸ್ತ
ಆ ಹಸ್ತಕ್ಕೆ ಕರ್ತೃಸಾದಾಖ್ಯ, ಆ ಸಾದಾಖ್ಯಕ್ಕೆ ಜ್ಞಾನಶಕ್ತಿ,
ಆ ಶಕ್ತಿಗೆ ಗುರುಲಿಂಗ, ಆ ಲಿಂಗಕ್ಕೆ ಪ್ರತಿಷ್ಠೆಯೆ ಕಳೆ,
ಆ ಕಳೆಗೆ ಜಿಹ್ವೇಂದ್ರಿಯವೆ ಮುಖವು,
ಆ ಮುಖಕ್ಕೆ ಸುರಸದ್ರವ್ಯಂಗಳ ರೂಪು-ರುಚಿ-ತೃಪ್ತಿಯನರಿದು
ನೈಷ್ಠಿಕ ಭಕ್ತಿಯಿಂದರ್ಪಿಸಿ, ಸುಪ್ರಸಾದವ ಭೋಗಿಸಿ ಸುಖಿಸುತ್ತಿಹೆನು
ಕೂಡಲಚೆನ್ನಸಂಗಾ ನಿಮ್ಮ ಮಾಹೇಶ್ವರ/1244
ಮಿಂಚು ಮಿಂಚಿದಡೆ,
ಮಿಂಚಿನಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು.
ಇಂದ್ರಚಾಪ ತೋರಿದಡೆ
ಇಂದ್ರಚಾಪದಲುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು.
ಮಹಾನುಭಾವಿಗಳು ಮನದೆರೆದು ಮಾತನಾಡಿದಡೆ
ಅನುಭಾವದೊಳಗುಳ್ಳ ಪ್ರಯೋಗವನಾಕ್ಷಣವೆ ಪ್ರಯೋಗಿಸಬೇಕು.
ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಶರಣರು ಸ್ವೇಚ್ಛಾಪರರು./1245
ಮೀನಜ ರೋಮಜ ಋಷಿಯರು ಮೊದಲಾದ
ಅನಂತಕೋಟಿ ಬ್ರಹ್ಮರಿಲ್ಲದಂದು,
ಅಲ್ಲಿಂದತ್ತತ್ತ ಏಕೋಲಿಂಗನೊಬ್ಬನೆ ಶರಣ.
ಗುರುವೆ ಪರಮಗುರುವೆ ನೀನೆ ಗತಿಯಯ್ಯಾ.
ಆದಿಕುಳಕ್ಕೆ ಮೂಲಿಗನಾಗಿ ಸುಳುಹ ತೋರಿ ಪಾವನವ ಮಾಡಬಂದೆ
ಬಹುಮುಖ ಜೀವಿಗಳಿಗೆ ಬಹುಮುಖ ಪ್ರಸಾದವ ತೋರಿದೆಯಯ್ಯಾ
ಭುವನವ ಸಲಹಲೆಂದು ಆದಿಯ ಲಿಂಗವ
ಅನಾದಿಯ ಶರಣನ ಕೈಯಲಿ ಕೊಟ್ಟಿರಿ.
ಆ ಲಿಂಗವನು ನೀ ಪುಟ್ಟಿಸಿದ ಘಟಕ್ಕೆ ಕಾರುಣ್ಯವ ಮಾಡಿ ಸಲಹಯ್ಯಾ
ಕೂಡಲಚೆನ್ನಸಂಗಮದೇವಾ. /1246
ಮೀರಿದ ಕ್ರೀಯ ಸಂಪಾದಿಸನಾಗಿ, ದ್ವೈತಿಯಲ್ಲ ಅದ್ವೈತಿಯಲ್ಲ.
ಮೀರಿ ಜಾರಿ ಹದುಳಿಗನಾಗಿ, ಸ್ವಗರ್ಿಯಲ್ಲ, ಅಪವಗರ್ಿಯಲ್ಲ.
ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಪ್ರಸಾದಿ ಬಸವಣ್ಣನು. /1247
ಮುಂಡೆಯ ಕೈಯಲ್ಲಿ ಬಾಗಿನವ ಕೊಂಡಡೇನಯ್ಯಾ?
ಗಂಡನುಳ್ಳ ಗರತಿಯರು ಮೆಚ್ಚರು.
ಶೈವಗುರುವಿನ ಕೈಯಲ್ಲಿ ಲಿಂಗಸಾಹಿತ್ಯವಾದಡೇನಯ್ಯಾ?
ವೀರಶೈವ ಶರಣು ಮೆಚ್ಚರು.
ಇದು ಕಾರಣ-ಕೂಡಲಚೆನ್ನಸಂಗಮದೇವಯ್ಯಾ,
ಶೈವಗುರುವಿನ ಕೈಯಲ್ಲಿ ಸಾಹಿತ್ಯವಪ್ಪುದರಿಂದ ಸಾವುದೆ ಲೇಸಯ್ಯಾ/1248
ಮುಂದುಗಾಣದ ಮಾನವರು ಮತ್ತೊಂದನರಿಯದೆ ಕೆಟ್ಟರು,
ಲಿಂಗವ ಪೂಜಿಸಿ, ಜಂಗಮವ ವೇದಿಸಿ
ಪ್ರಸಾದದ ಪರಿಣಾಮವನರಿಯದೆ ಕೆಟ್ಟು ಹೋದರಯ್ಯಾ,
ಕೂಡಲಚೆನ್ನಸಂಗಮದೇವಾ. /1249
ಮುಂದುಗಾಣದ ಮಾನವರು ಮತ್ತೊಂದನರಿಯದೆ ಕೆಟ್ಟರು.
ಲಿಂಗವ ಪೂಜಿಸಿ, ಪ್ರಸಾದವ ವೇದಿಸಿ,
ಪ್ರಾಣಲಿಂಗ ಜಂಗಮವೆಂದರಿಯದೆ
ಕೆಟ್ಟು ಹೋದರಯ್ಯಾ, ಕೂಡಲಚೆನ್ನಸಂಗಮದೇವಾ. /1250
ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಪ್ರಸಾದಸಾಹಿತ್ಯವಾಗದು.
ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಜಂಗಮಸಾಹಿತ್ಯವಾಗದು.
ಲಿಂಗವ ಬೆರಸಿಹೆನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಶಿವಲಿಂಗಸಾಹಿತ್ಯವಾಗದು.
ವಿಶೇಷ ತತ್ವ ಉಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ
ಶ್ರೀಗುರುಸಾಹಿತ್ಯವಾಗದು.
ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ-
ಇಂತೀ ಚದುರ್ವಿಧಲಿಂಗ ಏಕೀಕರಿಸಿ
ಪ್ರಾಣಲಿಂಗವಾದ ಮಹಾಮಹಿಮಂಗೆ
ಕಾಮಿಸಲಿಲ್ಲ, ಕಲ್ಪಿಸಲಿಲ್ಲ, ಭಾವಿಸಲಿಲ್ಲ ಚಿಂತಿಸಲಿಲ್ಲ.
ಆತ ನಿಶ್ಚಿಂತ ಪರಮಸುಖಿ, ಆತನಿರ್ದುದೆ ಕೈಲಾಸ,
ಕೂಡಲಚೆನ್ನಸಂಗಮದೇವಾ./1251
ಮುಖಲಿಂಗದರುಶನ ಜಂಗಮದಲ್ಲಿ,
ಭಾವಲಿಂಗ ದರುಶನ ಮನದಲ್ಲಿ
ಸ್ವಯಲಿಂಗದರುಶನ ಕಾಯದಲ್ಲಿ,
ಈ ತ್ರಿವಿಧಲಿಂಗದರುಶನ ಜ್ಞಾನದಲ್ಲಿ.
ಇದು ಕಾರಣ-ಕೂಡಲಚೆನ್ನಸಂಗನಲ್ಲಿ, ಜಂಗಮಲಿಂಗದರುಶನ
ಬಸವಣ್ಣಂಗಲ್ಲವೆ ಉಳಿದವರಾರಿಗೆಯೂ ಅಳವಡದು. /1252
ಮುಟ್ಟದ ಮುನ್ನ ಗುರುವುಂಟು,
ಲಿಂಗವುಂಟು ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು.
ಮುಟ್ಟಿದ ಬಳಿಕ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಸ್ವಯವಲ್ಲದೆ ಪರವಿಲ್ಲವೆಂಬುದು
ನಿನ್ನಲ್ಲಿ ಕಾಣಬಂದಿತ್ತು ಕಾಣಾ ಪ್ರಭುವೆ/1253
ಮುಟ್ಟದ ಮುನ್ನ ದಿಟ ಘಟಿಸಿ ನಿಂದುದು ಸಟೆಯಿಲ್ಲ ಕಾಣಿರೆ !
ಮುಟ್ಟಿತ್ತೆ ಮಹಾಪ್ರಸಾದ ಕೂಡಲಚೆನ್ನಸಂಗನಲ್ಲಿ. /1254
ಮುಟ್ಟದೆ ಮುಟ್ಟೆನಯ್ಯಾ
ಅನರ್ಪಿತವೆಂದು ಮುಟ್ಟಿ ಲಿಂಗಕ್ಕೆ ಮಾಡಲಿಲ್ಲ.
ತಟ್ಟದೆ ಮುಟ್ಟದೆ ಮನಸೋಂಕದೆ ಅನುದಿನ ಲಿಂಗಕ್ಕೆ ಮಾಡಬೇಕು.
[ಕೊಟ್ಟು] ಕೊಂಬ ಭೇದವನು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ. /1255
ಮುಟ್ಟಿದಲ್ಲಿ ಇಷ್ಟಲಿಂಗ, ಬೆರಸಿದಲ್ಲಿ ಪ್ರಾಣಲಿಂಗ,
ಸ್ವಾಯತವಾದರೆ ಅಂಗ[ಭಾವ?]ಲಿಂಗ, ಇದು ಲಿಂಗೈಕ್ಯವಲ್ಲ.
ಇದು ಕಾರಣ ಕೂಡಲಚೆನ್ನಸಂಗನು ಅಂಗವಿಲ್ಲದ ನಿಜಲಿಂಗೈಕ್ಯವು./1256
ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು
ಅದಕೆ ಮುತ್ತಿನ ಬೆಲೆ ಗೊತ್ತಾಗಬಲ್ಲುದೆ ?
ಬುತ್ತಿಯನೆನಿಸು ಹೊತ್ತು ನೆತ್ತಿಯಲ್ಲಿ ಹೊತ್ತಡೇನು
ತೃಪ್ತಿಯಾಗಬಲ್ಲುದೆ ?
ನೈಷ್ಠೆಯಿಲ್ಲದ ಕಷ್ಟಜೀವಿಗೆ ಇಷ್ಟಲಿಂಗವ ಕಟ್ಟಿದಡೇನು
ಶ್ರೇಷ್ಠ ಶಿವಭಕ್ತನಾಗಬಲ್ಲನೆ ?
ಅದು ಕಾರಣ, ಉತ್ತಮಾದಿಕಾರಿಯನರಿದು
ಇಷ್ಟಲಿಂಗವ ಕೊಟ್ಟ ಗುರುವಿಗೆ
ಕೂಡಲಚೆನ್ನಸಂಗಯ್ಯನು ಮೆಚ್ಚಿ ಮನ್ನಣೆಯನೀವನು/1257
ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ ಮೆರೆಯದೆಂದು
ಮುನ್ನಿನ ಆದ್ಯರು ಮಾಡಿದರು.
ಮಜ್ಜನಕ್ಕೆರೆಯಲೆಂಬುದನೀಗ ಸಜ್ಜನವಾಗಿ
ಭಾವದಲರಿವಿದ್ದಡೆ ಸಾಲದೆ ? ಇಷ್ಟ ತಾನೇಕೊ ?
ಸಿದ್ಧರಾಮಯ್ಯದೇವರಂದು ಸಾಹಿತ್ಯವಿಡಿದಿದ್ದನೆ ?
ಮನಶುದ್ಧವಾಗಿ ಆ ಲಿಂಗವ ತಂದು ಅಂಗದ ಮೇಲಣ ಲಿಂಗ
ಸ್ವಯವಾದಡೆ ಹಿಂಗದೆ ದೇಹಸಹವಾಗಿರಬೇಕು.
ಅಂಗೈ ಮೇಗೈಯಾಗಿ ಹೋಗುತ್ತಿದೆ
ತಿಂಗಳ ಮಾತೆಂಬುದು ದೂರಣ ಮಾತು
ಮಂಗಳಮೂರುತಿಗಳು ಸಕಲಪುರಾತನರರಿಯಲು
ಕೂಡಲಚೆನ್ನಸಂಗಮದೇವ ಸ್ವಯಂ ನಿರಾಳವೋ ಜಂಗಮದೊಳಗೆ/1258
ಮುನ್ನರಿಯದೆ ಹಿಡಿದುದಕ್ಕೆಂತು ? ಇನ್ನರಿದು ಬಿಟ್ಟಡದಕ್ಕೆಂತು ?
ಹಿಡಿದಡೆ ಜ್ಞಾನವಿರೋಧ, ಬಿಟ್ಟಡೆ ಲೋಕವಿರೋಧ.
ಈ ಉಭಯಸ್ಥಳವನರಿದು ಬಿಡಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ. /1259
ಮುನ್ನಿನ ಆದ್ಯರ ವಚನ :ಆ ಲಿಂಗದ ನಡೆ,
ಆ ಲಿಂಗದ ನುಡಿ, ಆ ಲಿಂಗದಂತೆ,
ಮುನ್ನಿನ ಜಂಗಮದ ನಡೆ, ಜಂಗಮದ ನುಡಿ, ಆ ಜಂಗಮದಂತೆ
ಮುನ್ನಿನ ಪ್ರಸಾದದ ನಡೆ, ಪ್ರಸಾದದ ನುಡಿ ಆ ಪ್ರಸಾದದಂತೆ.
ಇಂತಿವಕ್ಕನುಸಾರಿ ಮಾಡಿಹೆನೆಂಬ ಕರ್ಮಿಯ ಮಾತ ಕೇಳಲಾಗದು
ಹೊಂಬಿತ್ತಾಳೆಯ ಕೆಲಸದಂತೆ.
ಲಿಂಗಾನುಭಾವಿಗಳು ಕೇಳಿದರೆ ಛಿಃ ಇವನ ಮುಟ್ಟಲಾಗದೆಂಬರು,
ಓಡ ಹಿಡಿದಡೆ ಕೈ ಮಸಿಯಾದೂದೆಂದು.
ಸಿಂಹದ ನಡುವಿಂಗೆ ನಾಯ ನಡು ಸರಿಯೆಂಬ ಪಂಚಮಹಾಪಾತಕರ ನುಡಿಯ
ಕೇಳಲಾಗದು, ಕೂಡಲಚೆನ್ನಸಂಗಮದೇವಾ. /1260
ಮುನ್ನಿನವರು ನಡೆದ ಪರಿಯಲ್ಲಿ ಇನ್ನು ನಡೆದರಾಗದೆಂಬ
ಬಿನ್ನ ನುಡಿಯ ಕೇಳಲಾಗದು, ಹೇಳಲಾಗದು.
ಅದೆಂತೆಂದಡೆ:
ಶ್ರೀಗುರು ಕಾರುಣ್ಯವಂ ಪಡೆದು ಜ್ಞಾನಪ್ರತಿಷ್ಠೆಯಂ ತೋರಿದನಾಗಿ
ಅನ್ಯಾಯದ ಗೊಡವೆಯಂ ಬಿಟ್ಟು ಚೆನ್ನಾಗಿ ಶಿವಭಕ್ತರಭಾವವ
ಲಾಲಿಸಿ ಕೇಳಿಹೆನೆಂದಡೆ ಹೇಳುವೆ ಕೇಳಿರಣ್ಣಾ:
ಶಿವಕಾರುಣ್ಯೇನ ಸಾಧ್ಯಾಹಿ ಗಾರುಡಂ ಚಾಷ್ಟಸಿದ್ಧಯಃ
ಸ್ವರ್ಗಪಾತಾಳಸಾಧ್ಯಾಸ್ತು ಅಂಜನಂ ಘಟಿಕಾಸ್ತಥಾ ಎಂದುದಾಗಿ
ಮಲಗಿದ್ದಲ್ಲಿ ಕನಸ ಕಂಡೆಹೆನೆಂಬರು,
ಆ ಜೀವನು ಈ ಕಾಯ ನಾಶವ ಮಾಡಿ, ಆ ದ್ವೀಪಕ್ಕೆ ಹೋಗಿ ಕಂಡುಬಂದಿತ್ತೆ ?
ಆ ದ್ವೀಪಕ್ಕೆ ಹೋದವು ಈ ಕಾಲೆ ? ಆ ದ್ವೀಪಕ್ಕೆ ಹೋದವು ಈ ಕಣ್ಣೆ ?
ಅದು ಹುಸಿ, ದಿಟವೆಂದಡೆ :
ಆ ದ್ವೀಪ ತನ್ನ ಹೃದಯಕಮಲ ಮಧ್ಯದಲುಂಟು, ಮತ್ತು ಸರ್ವಜಗವುಂಟು.
ಅದೆಂತೆಂದಡೆ :
ನಿದ್ರೆಗೈದಲ್ಲಿ ಕಣ್ಣಿನ ಜ್ಯೋತಿ ಹೃದಯಕಮಲ ಮಧ್ಯಕ್ಕಿಳಿದಲ್ಲಿ
ಜ್ಯೋತಿ ಮನ ಒಂದಾಯಿತ್ತು; ಒಂದಾದಲ್ಲಿ ಶಿವನುಂಟು.
ಆ ಶಿವನ ಹೃದಯದಲ್ಲಿ ಸಕಲ ಭುವನಾದಿ ಭುವನಂಗಳೆಲ್ಲ ಉಂಟು,
ಅಲ್ಲಿ ಈ ವಾಯು ತಿರುಗುತ್ತಿದ್ದುದು, ಅಲ್ಲಿ ಕಂಡುದ ಕನಸೆಂದೆಂಬರು
ತಲೆಯೊಳಗಣ ಸಹಸ್ರದಳಕಮಲ ಮಧ್ಯದಲ್ಲಿ ಸಕಲಾತ್ಮನು ಸುಖದಿಂದಿರುತ್ತಿಹನು
ಅದೆಂತೆಂದಡೆ:
ಅಂತಹ ಆತ್ಮನಿಲ್ಲದಿರ್ದಡೆ ನೀರಬೊಬ್ಬುಳಿಕೆಯ ಕಣ್ಣು ಕಾಣಬಲ್ಲುದೆ ?
ಅಂತಹ ಆತ್ಮನಿಲ್ಲದಿರ್ದಡೆ ತೊಗಲ ಛಿದ್ರದ ಕಿವಿಗಳು ಕೇಳಬಲ್ಲುವೆ ?
ಅಂತಹ ಆತ್ಮನಿಲ್ಲದಿರ್ದಡೆ ಹಡಿಕೆ ಮಲಿನ ಮೂಗು ಪರಿಮಳಂಗಳ ಕೊಳಬಲ್ಲುದೆ ?
ಅಂತಹ ಆತ್ಮನಿಲ್ಲದಿರ್ದಡೆ ಮತಿಯು ಮನದೊಳಗಿರಬಲ್ಲುದೆ ?
ಅದು ಹುಸಿ ಎಂದಡೆ, ಅಂಗುಷ್ಟದೊಳಗೆ ವಿಷವುಂಟು;
ನಾಬಿಯಲ್ಲಿ ಅಗ್ನಿಯುಂಟು, ಕಂಕುಳಲ್ಲಿ ನಗೆಯುಂಟು,
ಕಂಗಳಲ್ಲಿ ದುಃಖವುಂಟು; ಹುಬ್ಬಿನಲ್ಲಿ ಅಮೃತವುಂಟು,
ಕೋಪವೆಂಬಾ ಕಿಚ್ಚು ಕೆದರಿ ಅಂಗುಷ್ಟದ ಮೇಲೆ ಬೀಳಲಿಕೆ,
ಆ ವಿಷವು ಭುಗಿಲೆಂದೆದ್ದು ಸರ್ವಾಂಗಮಂ ಸುಡುತ್ತ ಬಪ್ಪಲ್ಲಿ
ಜ್ಞಾನವೆಂಬ ಜ್ಯೋತಿ ಹೋಗಿ ತಲೆಯೊಳಡಗಿತ್ತು.
ಅಂತಹ ಕೋಪವೆಂಬ ಹೊಲೆಯು ಶತಸಹಸ್ರ
ಹೊನ್ನ ಕೊಟ್ಟಡೆ ತಿದ್ದುವುದೆ ? ತಿದ್ದದು.
ಹಣೆಯ ಅಮೃತ ಬಂದು ಅಂಗುಷ್ಟದ ವಿಷದ ಮೇಲೆ ಬೀಳಲಿಕೆ
ಪರುಷ ಬಂದು ಲೋಹಮಂ ಮುಟ್ಟಿದಂತಾಯಿತ್ತು.
ಸರ್ವಮಂ ಕೊಂದ ಹಗೆಯಾದಡೆಯೂ ಹೋಹುದು.
ಇಂತಪ್ಪ ಸರ್ವಾಂಗಲಿಂಗಾಂಗಿಗಳು ನಿಮ್ಮ ಶರಣರು.
ಕೂಡಲಚೆನ್ನಸಂಗಮದೇವಾ/1261
ಮೂರು ಗ್ರಾಮದ ಪಟ್ಟಣಕ್ಕೆ ಪಂಚನಾಯಕರ ಕಾಹು.
ಅವರ ಸಂಚವಿಡಿದು ಲಿಂಗಾರ್ಚನೆಯ ಮಾಡಿದಡೆ
ಲೋಕದ ಬಳಕೆ ಕಂಡಯ್ಯಾ.
ಐವರ ಪಂಚಸ್ಥಳವಳಿದು ಏಕಸ್ಥಳವಾಗಿ
ನವನಾಳಭೇದದ ಪರಿಯನರಿದಡೆ
ಕೂಡಲಚೆನ್ನಸಂಗಯ್ಯನೊಬ್ಬನೆ/1262
ಮೂರು ಲೋಕದವರ ನಿದ್ರಾಂಗನೆ ಹೀರಿ ಹಿಂಡಿ
ಪ್ರಾಣಕಾರ್ಪಣ್ಯವ ಮಾಡಿ ತಟ್ಟುಗೆಡಹಿದಳು.
ಇವಳ ಗೆಲುವವರ ಆರನೂ ಕಾಣೆ,
ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತ ಐದಾರೆ
ಕೂಡಲಚೆನ್ನಸಂಗಮದೇವಾ/1263
ಮೂರ್ತನಲ್ಲ ಅಮೂರ್ತನಲ್ಲ,
ಲಿಂಗದಲ್ಲಿ ಪ್ರಾಣಸಂಚಿತ, ಪ್ರಾಣದಲ್ಲಿ ಪ್ರಸಾದ ಸಂವರಣೆ,
ಪ್ರಸಾದದಲ್ಲಿ ಕಾಯಾಶ್ರಿತ ಜನ್ಯ.
ಲೋಕಲೌಕಿಕಪ್ರಸಾದದುದಯನಲ್ಲ ಕೂಡಲಚೆನ್ನಸಂಗನ ಶರಣನು. /1264
ಮೃದು ಕಠಿಣ ಶೀತ ಉಷ್ಣ ಸ್ಪರ್ಶನ ಅಂಗಸೋಂಕೆಲ್ಲಾ ಲಿಂಗಸೋಂಕು.
ಅಂಗ ಲಿಂಗ ಸಂಬಂಧವಾದ ಬಳಿಕ ಎನ್ನ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ
ಮುಂತಾದ ಪಂಚವಿಷಯದಲ್ಲಿ ತಟ್ಟುವ ಪಂಚದ್ರವ್ಯವೆಲ್ಲಕ್ಕೂ
ನೀನಲ್ಲದೆ ನಾನೆಂಬುದಿಲ್ಲ.
ಕೂಡಲಚೆನ್ನಸಂಗಯ್ಯಾ ಎನ್ನಂಗಸೋಂಕೆಲ್ಲ, ಶಬ್ದಸ್ಪರ್ಶರೂಪುರಸಂಗಂಧವೆಲ್ಲ
ನಿನ್ನ ಪೂಜೆಯಲ್ಲದೆ ಬೇರನ್ಯವಿಷಯ ಸೋಂಕಿಲ್ಲ/1265
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ,
ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ,
ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು-
ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ?
ಅಮೃತಸೇವನೆಯ ಮಾಡಿದರೆ ?
ಆವ ಸ್ಥಲದಲ್ಲಿ ನಿಂದರೂ
ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ,
ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ
ಕೂಡಲಚೆನ್ನಸಂಗಮದೇವರ/1266
ಮೈ ಶೀತೋಷ್ಣವ ಮರೆದು, ಘ್ರಾಣ ಗಂಧವ ಮರೆದು,
ನಯನ ನೋಟವ ಮರೆದು, ಕಿವಿ ಶಬ್ದವ ಮರೆದು,
ನಾಲಗೆ ರುಚಿಯ ಮರೆದು,
ಅಂಡಜ ಜರಾಯುಜನೆನಿಸದೆ-
ಕೂಡಲಚೆನ್ನಸಂಗಯ್ಯನ ಉಪನಯನವಾದ ಶರಣನು. /1267
ಮೊದಲಲ್ಲಿ ಮನದಲಚ್ಚೊತ್ತಿದ ಕಾರಣ ಎಚ್ಚರಿಕೆಯಾಯಿತ್ತು,
ಗುರುಕಾರುಣ್ಯದಿಂದ ಆಚಾರದರಿವಾಯಿತ್ತು,
ಜಂಗಮದಿಂದ ತಿಳಿದ ತಿಳಿವಿನಲ್ಲಿ ಪ್ರಸಾದ ಸಾಧ್ಯವಾಯಿತ್ತು,
ಕೂಡಲಚೆನ್ನಸಂಗನ ಶರಣರಲ್ಲಿ [ಏಕಾರ್ಥ]ವಾಯಿತ್ತು. /1268
ಮೋಹದಲಚ್ಚೊತ್ತಿ ಎಚ್ಚ ಎರಕವ ಬಿಟ್ಟು,
ಗಡ್ಡ ಮಂಡೆ ಬೋಳಿಸಿ, ಮೂರು ಬೆರಳಿನ ಕುರುಹಿನಿಂದವೆ
ಎಚ್ಚರಿಕೆಯಲ್ಲಿ ನಡೆವುದು, ನುಡಿವುದು.
ಅಂತಲ್ಲದೆ-ಮನದ ವಿಕಾರದ ಕತ್ತಲೆಯೊಳಗೆ ಸಿಲುಕಿ
ಕಾಲೂರಿ ನಿಂದ ನಿಲುವೆ.
ಪ್ರಸನ್ನತೆಗೆ ನೆಲೆಯಾಗರ್ದಿಡೆ, ಕೂಡಲಚೆನ್ನಸಂಗಯ್ಯನು
ಗಸಣಿಗೆ ಗೋರಿಗೊಳಿಸುವನು/1269
ಯತ್ರ ಜೀವಸ್ತ್ರ ಶಿವನೆಂಬ ಬಾಲಭಾಷೆಯ ಕೇಳಲಾಗದು
ಶಿವಶಿವಾ ಯತ್ರಜೀವಸ್ತತ್ರ ಶಿವನಾದರೆ ಜೀವಂಗೆ ಮರಣವೇಕೋ?
ಯತ್ರ ಜೀವಸ್ತತ್ರ ಶಿವನಾದರೆ ಜನನ ಸ್ಥಿತಿ
ಮರಣ ರುಜೆ ಸಂಸಾರ ಬಂಧನವೇಕೋ?
ಯತ್ರ ಜೀವಸ್ತತ್ರ ಶಿವನಾದರೆ ಪುಣ್ಯಪಾಪ ಪ್ರಳಯಕಾಲ ಕಲ್ಪಿತವೇಕೊ?
ಇದು ಕಾರಣ ಯತ್ರ ಜೀವಸ್ತತ್ರ ಶಿವನಲ್ಲ,
ಉತ್ಪತ್ತಿ ಸ್ಥಿತಿ ಪ್ರಳಯರಹಿತನು ಸದ್ಭಕ್ತರಲ್ಲಿಪ್ಪನಲ್ಲದೆ ಮತ್ತೆಲ್ಲಿಯೂ ಇಲ್ಲ,
ಕೂಡಲಚೆನ್ನಸಂಗಮದೇವ. /1270
ಯದಾ ಶಿವಕಲಾಯುಕ್ತಂ ಲಿಂಗಂ ದದ್ಯಾನ್ಮಹಾಗುರುಃ
ತದಾರಾಭ್ಯಂ ಶಿವಸ್ತತ್ರ ತಿಷ್ಠತ್ಯಾಹ್ವಾನಮತ್ರ ಕಿಂ
ಸುಸಂಸ್ಕೃತೇಷು ಲಿಂಗೇಷು ಸದಾ ಸನ್ನಿಹಿತಃ ಶಿವಃ
ತಥಾಹ್ವಾನಂ ನ ಕರ್ತವ್ಯಂ ಪ್ರತಿಪತ್ತಿವಿರೋಧತಃ
ನಾಹ್ವಾನಂ ನಾ ವಿಸರ್ಗಂ ಚೆ ಸ್ವೇಷ್ಟಲಿಂಗೇ ಕಾರಯೇತ್
ಲಿಂಗನಿಷ್ಠಾಪರೋ ನಿತ್ಯಮಿತಿ ಶಾಸ್ತ್ರವಿನಿಶ್ಚಯಃ
ಆಹ್ವಾನಕ್ಕೋಸ್ಕರವಾಗಿ ಎಲ್ಲಿರ್ದನು ?
ಈರೇಳು ಭುವನ ಹದಿನಾಲ್ಕು ಲೋಕವನೊಡಲುಗೊಂಡಿಪ್ಪ ದಿವ್ಯವಸ್ತು
ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿರ್ದನು ?
ಮುಳ್ಳೂರೆ ತೆರಹಿಲ್ಲದಂತಿಪ್ಪ ಅಖಂಡವಸ್ತು !
ಆಕಾಶಂ ಲಿಂಗಮಿತ್ಯಾಹುಃ ಪೃಥಿವೀ ತಸ್ಯ ಪೀಠಿಕಾ
ಆಲಯಂ ಸರ್ವಭೂತಾನಾಂ ಅಯನಂ ಲಿಂಗಮುಚ್ಯತೇ
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ವೇದಾದಿನಾಮ ನಿರ್ನಾಮ ಮಹತ್ವಂ ಮಮ ರೂಪಯೋಃ
ಗುರೂಕ್ತಮಂತ್ರಮಾರ್ಗೆಣ ಇಷ್ಟಲಿಂಗಂ ತು ಶಾಂಕರಿ
ಇಂತೆಂದುದಾಗಿ, ಬರಿಯ ಮಾತಿನ ಬಳಕೆಯ ತೂತುಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಲದೊಳ್ ಒಪ್ಪುತಿರ್ಪ ಇಷ್ಟಲಿಂಗವ ದೃಷ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗಿ,
ಆ ದಿವ್ಯ ನಿಶ್ಚಯದಿಂದ ವ್ಯಾಕುಳವಡಗಿ ಅದ್ವೈತವಪ್ಪುದು.
ಅದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
ಆಹ್ವಾನ-ವಿಸರ್ಜನವೆಂಬ ಉಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ
ಸ್ವಯಲಿಂಗವಾದರು ಕಾಣಿರೋ !/1271
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಗುರುವಾಯಿತ್ತು,
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಶಿಷ್ಯನಾದ.
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಲಿಂಗವಾಯಿತ್ತು,
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಭಕ್ತನಾದ.
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದವಾಯಿತ್ತು,
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದಿಯಾದ.
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ
ಕೂಡಲಚೆನ್ನಸಂಗ ತಾನಾದ./1272
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನಧಾರಣ ಸಮಾದಿಯೆಂಬ ಅಷ್ಟಾಂಗಯೋಗವನರಿದು
ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳದ
ಜೀವ ಪರಮರ ಭೇದವೆಂತಿರ್ದುದೆಂದಡೆ:
ಗ್ರಂಥ:
ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ
ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋ ಕ್ಷಯ ಏವ ಚ
ಎಂದುದಾಗಿ-ಇಂತಾದ ತನುಕ್ಷೇತ್ರಜ್ಞನನು
ಗಂಧದ್ವಾರದ ರಂಧ್ರದ ನಡುವಣ ಸಣ್ಣ ಬಿಲಬಟ್ಟೆಯೆಂಬ
ಬ್ರಹ್ಮರಂಧ್ರದ ನಾಳದೊಳು ಪ್ರಯೋಗಿಸಿ, ಕವಾಟದ್ವಾರಮಂ ತೆಗೆದು
ತೆರಹಿಲ್ಲದೆ ಬಯಲಾದ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ/1273
ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ
ಪಿಶಾಚಗ್ರಸ್ತನ ಪಿಶಾಚಿಯು ಫಲಾಯನವಪ್ಪ ತೆರನಂತೆ,
ಶ್ರೀಗುರುವಿನ ಶಿವಮಂತ್ರ ಶಿವಲಿಂಗ ಸಂಬಂಧದಿಂದ
ಮನುಜನ ಮಾಯಾಗ್ರಹವು ತೊಲಗುವುದಯ್ಯಾ.
ಗಿಡಮರಬಳ್ಳಿಗಳ ನಾರುಬೇರುಗಳ ಶರೀರದೊಂಡೆಯಲ್ಲಿ ಧರಿಸಿದಡೆ
ರೋಗಿಯ ಹಲವು ರೋಗಗಳು ನಷ್ಟವಪ್ಪ ಪರಿಯಂತೆ
ಇಷ್ಟಲಿಂಗವನಂಗದಲ್ಲಿ ಸಂಗಗೊಳಿಸುವುದರಿಂದ,
ಭವಿಯ ಭವ ಕೆಟ್ಟು, ಕೂಡಲಚೆನ್ನಸಂಗಯ್ಯನ
ಕಾರುಣ್ಯಕ್ಕೆ ಪಕ್ಕಾಗುವನಯ್ಯಾ/1274
ಯೋಗಿ ಎನಲಿಲ್ಲ, ಭೋಗಿ ಎನಲಿಲ್ಲ,
ಕಾಮಿ ಎನಲಿಲ್ಲ, ನಿಃಕಾಮಿಯೆನಲಿಲ್ಲಾಗಿ,
ತನ್ನ ಪರಿ ಬೇರೆ ಕಾಣಿರಯ್ಯ.
ದೇವ ಎನಲಿಲ್ಲ, ಭಕ್ತ ಎನಲಿಲ್ಲ,
ಭಾವವೆನಲಿಲ್ಲ, ನಿರ್ಭಾವವೆನಲಿಲ್ಲಾಗಿ,
ತನ್ನ ಪರಿ ಬೇರೆ ಕಾಣಿರಣ್ಣಾ.
ಭವಭಯಂಗಳೆಲ್ಲವ ಪರಿಹರಿಸಿ ಕಳೆದನು.
ನಿಭ್ರಾಂತಿ ನಿರುತನು, ನಿಮ್ಮ ಶರಣ,
ಅಪ್ರತಿಗೆ ಪ್ರತಿವುಂಟೆ? ಕೂಡಲಚೆನ್ನಸಂಗಮದೇವಾ./1275
ರಚನೆ ರಂಜಕವ ನುಡಿವಾತ ಜಂಗಮವಲ್ಲ.
ನರರ ಹೊಗಳಿ ಹಾಡಿ ಬೇಡುವಾತ ಜಂಗಮವಲ್ಲ.
ನರರ ಕೈವಾರಿಸುವಾತ ಜಂಗಮವಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಪ್ರಭುವೇ ಜಂಗಮ, ಬಸವಣ್ಣನೇ ಭಕ್ತ./1276
ರಜದ ನಿಜದ ಭುಜದ ಗಜದ ಸದದ
ಇವೆಲ್ಲವನು ಕೊಂಡು ಹೋಗಿ, ಮಡಿವಾಳನೆಂದು ಒಗೆಯ ಹಾಕಿದೆನು.
ಒಗೆಯ ಹಾಕಿದಡೆ, ಗುರುಮೂರ್ತಿಯ ನಷ್ಟವ ಬಿಳಿದು ಮಾಡಿದನು.
ಲಿಂಗಸಾರಾಯಸ್ವರೂಪವ ಬಿಳಿದು ಮಾಡಿದನು,
ಜಂಗಮಸಾರಾಯಸ್ವರೂಪವ ಬಿಳಿದು ಮಾಡಿದನು,
ಅಗ್ನಿಯಿಲ್ಲದ ಪಾಕದ ಪದಾರ್ಥವ ಲಿಂಗವಿಲ್ಲದೆ ಅರ್ಪಿಸಿದನು;
ಜಂಗಮವಿಲ್ಲದೆ ನೀಡಿದನು, ಪ್ರಸಾದವಿಲ್ಲದೆ ಗ್ರಹಿಸಿದನು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣ, ಮಡಿವಾಳನೆಂಬ ಪ್ರಸಾದ ಎನಗಳವಟ್ಟಿತ್ತು./1277
ರಣವನರ್ಚಿಸಿ, ಭೂತಕ್ಕೆ ಬಲಿಯ ಕೊಡುವ ಕಲಿಯ ಮನ
ಮೊನೆಯ ಮೇಲೆ ಇಪ್ಪಂತೆ
ಸಮಯಾಚಾರವ ಮಾಡಬೇಕು.
ಮಾಡಿಹೆನೆಂಬುದು ಸಾಮಾನ್ಯವೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಸಮಯಭಕ್ತಿ ಸಂದಿತ್ತು ಸಂಗನ ಬಸವಣ್ಣಂಗೆ. /1278
ರವಿಯ ಕಿರಣಂಗಳ ರಮಿಸದೆ ಪಾಲಿಸದೆ ಆಲಿಸದೆ ಎಂದೂ ನಿಂದುದಾಗಿ,
ಹಿಮಕರಾದಿಗ?ನು ಮನಸ್ತಂಭನೆಗೆ ತಾರದೆ ನಿಂದುದಾಗಿ,
ದಿನಕರ ಅಬೋಧ ಸ್ತಂಭಗಳ ಅರ್ಪಿತವೆನ್ನದೆ ಆಯಿತ್ತಾಗಿ,
ಘನಮನವೇದ್ಯ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಾ ಆನೆನ್ನದ ಪ್ರಸಾದಿ./1279
ರುಂಡವ ಧರಿಸಿದಾತ ರುಂಡಾಭರಣನೆಂಬ ಗಣೇಶ್ವರನು.
ಆಕಾಶವ ಧರಿಸಿದಾತ ಅಂಢಾಭರಣನೆಂಬ ಗಣೇಶ್ವರನು.
ಭೂಮ್ಯಾಕಾಶವ ತಾಳವ ಮಾಡಿ ಒತ್ತಿದಾತ
ಕ್ಷಿತಿವಿಯತ್ತಳನೆಂಬ ಗಣೇಶ್ವರನು.
ಬ್ರಹ್ಮಾಂಡವ ಖಂಡಿಸಿದಾತ ಬ್ರಹ್ಮಾಂಡಖಂಡಿತನೆಂಬ ಗಣೇಶ್ವರನು.
ತ್ರಿಪುರದಹನವ ಮಾಡಿದಾತ ಪಂಚವಿಕೃತನೆಂಬ ಗಣೇಶ್ವರನು.
ಕಾಮದಹನವ ಮಾಡಿದಾತ ಅರ್ಧನಾರೀಶ್ವರನೆಂಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತ ಮಹಾರುದ್ರನೆಂಬ ಗಣೇಶ್ವರನು.
ಸಿರಿಯಾರನ ಮಗನ ಬಿಕ್ಷವ ಬೇಡಿದಾತ
ಬಹುಬಿಕ್ಷುಕನೆಂಬ ಗಣೇಶ್ವರನು.
ಪರ್ವತಂಗಳ ಧರಿಸಿದಾತ ಪರ್ವತಾಭರಣನೆಂಬ ಗಣೇಶ್ವರನು.
ಇಂತಿವರೆಲ್ಲರೂ ಕೂಡಲಚೆನ್ನಸಂಗಯ್ಯನ ಲೀಲೆಯ ತದರ್ಧಕರು./1280
ರುಚಿಯೆಂದರೆ ರೂಪಾಯಿತ್ತು, ಸವಿಯೆಂದರೆ ಸಂದಾಯಿತ್ತು.
ರುಚಿಯೆನ್ನದ, ರೂಪೆನ್ನದ, ಸವಿಯೆನ್ನದ, ಸಂದಿಲ್ಲದ
ಕೂಡಲಚೆನ್ನಸಂಗನ ಪ್ರಸಾದಿಗೆ ನಮೋ ನಮೋಯೆಂಬೆ./1281
ರುಚಿವಿರಹಿತ ಪ್ರಸಾದ, ಸ್ಪರ್ಶವಿರಹಿತ ಅರ್ಪಿತ
ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ !
ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದದಿಂದ
ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ !/1282
ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ ಸುಖಮರ್ಪಿತಂ
ಉಭಯಾರ್ಪಿತ ವಿಹೀನಂ ಚ ಪೂಜನಂ ನಿಷ್ಫಲಂ ಭವೇತ್
ಇಂತೆಂಬ ಶ್ರುತಿಯನೊಲ್ಲೆ.
ರುಚಿಯ ಬಲ್ಲನೆ ಪ್ರಸಾದಿ ತಾ ಲಿಂಗಭೋಗೋಪಭೋಗಿಯಾಗಿ ?
ಸುಖವ ಬಲ್ಲನೆ ಭಕ್ತ ತಾ ಜಂಗಮಭೋಗೋಪಭೋಗಿಯಾಗಿ ?
ರುಚಿಯನರ್ಪಿಸುವಾತ ಪ್ರಸಾದಿಯಲ್ಲ, [ಸುಖವ]ನರ್ಪಿಸುವಾತ ಭಕ್ತನಲ್ಲ,
ಇದನರಿದ ಶರಣಂಗೆ ನಮೋ ನಮೋ ಎಂಬೆ
ಕೂಡಲಚೆನ್ನಸಂಗಮದೇವಾ. /1283
ರುದ್ರಮುನಿಲಿಂಗವೆ ಸದ್ಭಕ್ತರನೆ ತೋರಿಸಯ್ಯಾ ಪ್ರಭುವೆ.
ನಿಧಾನವನಗಿವೆನೆಂದು ಹೋದಡೆ,
ವಿಘ್ನ ಬಪ್ಪುದು ಮಾಬುದೆ ಅಯ್ಯಾ ?
ಸದಾಶಿವನ ಪೂಜಿಸಿಹೆನೆಂದು ಹೋದಡೆ
ತರುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು
ಎಡೆಭಂಗವಿಲ್ಲದೆ ನಿಲಬಲ್ಲಡೆ
ಸದಮಲಸುಖವನೀವ ನಮ್ಮ ಕೂಡಲಸಂಗಮದೇವರು/1284
ರೂಪ-ಕುರೂಪ, ಗಂಧ-ದುರ್ಗಂಧ,
ರಸ-ನಿರಸ, ಪರುಶ-ಅಪರುಶ, ಶಬ್ದ-ನಿಃಶಬ್ದ,
ಲಿಂಗಮುಖಕ್ಕೆ ಬಾರದುದು ಕಿಲ್ಬಿಷವಯ್ಯಾ.
ಕೂಡಲಚೆನ್ನಸಂಗಾ ನಿಮ್ಮತ್ತ ಮುಂತಾದಲ್ಲವೆ ಎನ್ನತ್ತ ಮುಂತಾಗದು. /1285
ರೂಪಚಕ್ರ ನಯನದಿಂದೆ ನಡೆವುದು;
ಶಬ್ದಚಕ್ರ ಶ್ರೋತ್ರದಿಂದೆ ನಡೆವುದು.
ಸಾರಭಚಕ್ರ ಘ್ರಾಣದಿಂದೆ ನಡೆವುದು,
ರುಚಿಚಕ್ರ ಜಿಹ್ವೆಯಿಂದ ನಡೆವುದು,-
ಸ್ಪರ್ಶಚಕ್ರ ತ್ವಕ್ಕಿನಿಂದ ನಡೆವುದು,
ಈ ಐದರಿಂದ ನಡೆವುದು ಲೋಕಾದಿಲೋಕಂಗಳೆಲ್ಲ.
ರೂಹಿಗೆ ಕೆಟ್ಟು ಹೋದರು.
ಈ ಐದರ ಕಥನದಲ್ಲಿ, ಈ ಸಂಸಾರವೆಂಬ ವಿದಿಯ ಕೈಯಲ್ಲಿ
ಹರಿಬ್ರಹ್ಮಾಸುರರು ಮೊದಲಾದವರೆಲ್ಲರು ಕೆಟ್ಟುಹೋದರು ನೋಡಾ
ಕೂಡಲಚೆನ್ನಸಂಗಮದೇವಾ/1286
ರೂಪನರ್ಪಿತವ ಮಾಡಿದ ಬಳಿಕ ರುಚಿಯನರ್ಪಿತವ ಮಾಡಲೇಬೇಕು,
ರುಚಿಯನರ್ಪಿತವ ಮಾಡಿದ ಬಳಿಕ ಮುಟ್ಟಿದ ಕೈ ವ್ರತಗೇಡಿಯಾಗಲೇಬೇಕು.
ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ./1287
ರೂಪನರ್ಪಿಸಬಹುದಲ್ಲದೆ ರುಚಿಯನರ್ಪಿಸುವ ಪರಿಯಿನ್ನೆಂತೊ ?
ಉರವಣಿಸಿ ಬಂದ ತನುಗುಣಾದಿಗಳ
ಲಿಂಗದೊಳಗೆ ನಿಕ್ಷೇಪವ ಮಾಡದಿದ್ದರೆ ಪ್ರಾಣಲಿಂಗನಾಸ್ತಿ,
ಪ್ರಸಾದವೆಲ್ಲಿಯದು ಕೂಡಲಚೆನ್ನಸಂಗಯ್ಯಾ ?/1288
ರೂಪನರ್ಪಿಸಿ ನಿರೂಪಪ್ರಸಾದಿ,
ತನ್ನನರ್ಪಿಸಿ ತಾನಿಲ್ಲದ ಪ್ರಸಾದಿ,
ಇವೆಲ್ಲವನರ್ಪಿಸಿ ಬಯಲಪ್ರಸಾದಿ.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರು ಮಹಾಪ್ರಸಾದಿಗಳು./1289
ರೂಪನರ್ಪಿಸಿ ಫಲವೇನು, ರುಚಿಯನರ್ಪಿಸದನ್ನಕ್ಕ ?
ರುಚಿಯನರ್ಪಿಸಿ ಫಲವೇನು ಪರಿಣಾಮವನರ್ಪಿಸದನ್ನಕ್ಕ ?
ಪರಿಣಾಮವನರ್ಪಿಸಿ ಫಲವೇನು ತನ್ನನರ್ಪಿಸದನ್ನಕ್ಕ ?
ತನ್ನನರ್ಪಿಸಿ ಫಲವೇನು,
ಕೂಡಲಚೆನ್ನಸಂಗಯ್ಯನೆಂಬ ಭಾವ ಬರಿದಾಗದನ್ನಕ್ಕ ?/1290
ರೂಪವನರ್ಪಿಸಿದ ಬಳಿಕ ಅಂಗವೆಂಬುದಿಲ್ಲ.
ರುಚಿಯನರ್ಪಿಸಿದ ಬಳಿಕ ಪ್ರಾಣವೆಂಬುದಿಲ್ಲ.
ಭಾವ ನಿರ್ಭಾವವ ನಿಜ ನುಂಗಿತ್ತು, ಅರ್ಪಿಸುವ ಪರಿಯೆಂತೋ?
ರೂಪು ಲಿಂಗ, ರುಚಿ ಜಂಗಮ,
ಅರ್ಪಿಸುವ ಅರ್ಪಣ ಮುನ್ನಿಲ್ಲ ಕೂಡಲಚೆನ್ನಸಂಗಮದೇವಾ. /1291
ರೂಪವೆಂತೆಂಬೆನಯ್ಯಾ ರೂಪಿಸಲಿಲ್ಲವಾಗಿ ?
ಭಾವವೆಂತೆಂಬೆನಯ್ಯಾ ಭಾವಿಸಲಿಲ್ಲವಾಗಿ ?
ಜ್ಞಾನವೆಂತೆಂಬೆನಯ್ಯಾ ಉಪಮಿಸಲಿಲ್ಲವಾಗಿ ?
ಸಹಜಲಿಂಗದ ಬೆಳಗನಂಗವಿಸುವ ಕೂಡಲಚೆನ್ನಸಂಗಯ್ಯನಲ್ಲಿ
ಪ್ರಭುವಿನ ನಿಲವು ವಿಪರೀತ./1292
ರೂಪಾಗಿ ಬಂದುದ ಕಾಯದ ಕೈಯಲ್ಲಿ ಕೊಡುವುದು,
ರುಚಿಯಾಗಿ ಬಂದುದ ಮನದ ಕೈಯಲ್ಲಿ ಕೊಡುವುದು,
ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು,
ಅರ್ಪಿಸುವ ತೆರನಿದು ಪ್ರಸಾದಿಗಯ್ಯಾ.
“ಇಷ್ಟಲಿಂಗಾರ್ಪಿತಂ ರೂಪಂ ರುಚಿಃ ಪ್ರಾಣಸಮರ್ಪಿತಾ
ತೃಪ್ತಿರ್ಭಾವಸಮಾಯುಕ್ತಾ ಅರ್ಪಿತಂ ತ್ರಿವಿಧಾತ್ಮಕಂ ” -ಎಂದುದಾಗಿ,
ರೂಪು ರುಚಿ ತೃಪ್ತಿಯ ಕೊಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿಯಯ್ಯಾ/1293
ರೂಪಿನ ಪೂರ್ವಾಶ್ರಯವ ಕಳೆದು
ಆಯತಕ್ಕೆ ಕೊಟ್ಟುಕೊಳಬಲ್ಲನಾಗಿ ಶುದ್ಧಪ್ರಸಾದಿ.
ರುಚಿಯ ಪೂರ್ವಾಶ್ರಯವ ಕಳೆದು
ಸ್ವಾಯತಕ್ಕೆ ಕೊಟ್ಟುಕೊಳಬಲ್ಲನಾಗಿ ಸಿದ್ಧಪ್ರಸಾದಿ.
ಈ ಉಭಯ ಕ್ರೀಯನುಭಾವವಳಿದಾತನೆ
ಕೂಡಲಚೆನ್ನಸಂಗನಲ್ಲಿ ಪ್ರಸಿದ್ಧಪ್ರಸಾದಿ./1294
ರೂಪಿಲ್ಲದ ರೂಪು, ನಿರ್ಣಯವಿಲ್ಲದ ನಿಷ್ಪತ್ತಿ
ಸೀಮೆಯ ಮೀರಿದ ನಿಸ್ಸೀಮ, ಗಮನವಿಲ್ಲದ ಗಮ್ಯ,
ನುಡಿಯುಡಿಗಿದ ನಿಃಶಬ್ದ, ಪರವನರಿಯದ ಪರಿಣಾಮಿ
ಕೂಡಲಚೆನ್ನಸಂಗನ ಶರಣ ಪ್ರಭುದೇವರಿಗೆ
ನಮೋ ನಮೋ ಎನುತಿರ್ದೆನು/1295
ರೂಪು ಎಂದಡೆ ರುಚಿಯಾಯಿತ್ತು,
ರುಚಿ ಎಂದಡೆ ಸವಿಯಾಯಿತ್ತು,
ಸವಿ ಎಂದಡೆ ಸಂದಾಯಿತ್ತು.
ರುಚಿ ಎಂದಡೆ, ರೂಪೆಂದಡೆ, ಭವ ಹಿಂಗದು ನೋಡಾ.
ರೂಪೆನ್ನದೆ ರುಚಿಯೆನ್ನದೆ ಸವಿಯೆನ್ನದೆ ಸಂದೆನ್ನದೆ ಇದ್ದ ಪ್ರಸಾದಿಗೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ/1296
ರೂಪು ಶೂನ್ಯವಾಗಬೇಕು,
ಶೂನ್ಯ ಅಂಕುರಿತವಾಗಬೇಕು.
ಅಂಕುರಿತಕ್ಕೆ ಸಂದು ತೆರಹಿಲ್ಲದಿದ್ದರೆ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು./1297
ರೂಪುರಹಿತ ಲಿಂಗದಲ್ಲಿ
ಅರ್ಪಿತ, ಪ್ರಸಾದ, ಉಭಯ ನಾಸ್ತಿ.
ಇಂತೀ ತ್ರಿವಿಧಸಂಚವ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಬಲ್ಲ./1298
ರೂಪುವಿಕಾರಿಗಳಿಗಿನ್ನಾಗದಯ್ಯಾ,
ರುಚಿವಿಕಾರಿಗಳಿಗಿನ್ನಾಗದಯ್ಯಾ,
ವಚನದ ರಚನೆಯ ನುಡಿವವರಿಗೆ ಪ್ರಸಾದ ವೇದ್ಯವಾಗದಯ್ಯಾ,
ಈ ತ್ರಿವಿಧದ ಮೊದಲನರಿಯದ ಅಸಂಬಂದಿಗಳಿಗೆ ಇನ್ನಾಗದಯ್ಯಾ,
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದ./1299
ರೂಪುವಿರಹಿತ ಲಿಂಗ ಕಂಡಾ !
ಗುರುವುಳ್ಳನ್ನಕ್ಕ ಶಿಷ್ಯನಲ್ಲಾ, ಲಿಂಗವುಳ್ಳನ್ನಕ್ಕ ಜಂಗಮವಲ್ಲಾ,
ಪ್ರಸಾದವುಳ್ಳನ್ನಕ್ಕ ಭಕ್ತನಲ್ಲಾ.
ಲಿಂಗೈಕ್ಯನಾದಡೆ; ಸ್ಥಾವರವಿರಹಿತ ಶರಣಭರಿತನಾಗಿರಬೇಕು.
ಕಾಯಕ್ಕೆ ಸಾಹಿತ್ಯವೆಲ್ಲಿಯಾದಡೆಯು ಉಂಟು
ಆತ್ಮಸಾಹಿತ್ಯವಪೂರ್ವ ನೋಡಾ !
ಆಚಾರ[ಸಾಹಿತ್ಯ]ವೆ ಲೋಕ, ಅನಾಚರ[ಸಾಹಿತ್ಯ]ವೆ ಶರಣ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಅನಾಚಾರಗಲ್ಲದೆ ಪ್ರಸಾದವಿಲ್ಲ./1300
ರೂಹಿಲ್ಲದ ನೆಳಲಿಂಗೆ ಮಳಲ ಬೊಂಬೆಯ ಮಾಡಿ,
ನಾದ ಬಿಂದುವಿನಲ್ಲಿ ಪುದಿಸಿ, ಆರಿಗೂ ಮೈದೋರದೆ
ಏಡಿಸಿ ಕಾಡಿತ್ತು ಶಿವನ ಮಾಯೆ.
ಕಾಯದ ಕಳವಳಕ್ಕೆ ಮುಂದೆ ರೂಪಾಗಿ ತೋರಿತ್ತಲ್ಲದೆ,
ಅದು ತನ್ನ ಗುಣವಲ್ಲದೆ [ಬೇರೆ] ತೋರುತ್ತಿಲ್ಲ.
ಅಂಗಭೋಗವನೆ ಕುಂದಿಸಿ ಪ್ರಸಾದವ ರುಚಿಸಿಹೆನೆಂಬ
ಲಿಂಗವಂತರೆಲ್ಲರೂ ಅರಿವೆಣಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ, ಲಿಂಗಭೋಗವೆ ಅರ್ಪಿತ.
ಸ್ವಕೀಯಃ ಪಾಕಸಂಬಂದಿ ಭೋಗೋ ಜಂಗಮವರ್ಜಿತಃ
ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್
ಲಿಂಗಕ್ಕೆಂದು ಬಂದ ರುಚಿ ಜಂಗಮಕ್ಕೆ ಬಾರದಿದ್ದಡೆ,
ಜಂಗಮಕ್ಕೆಂದು ಬಂದ ರುಚಿ ಲಿಂಗಕ್ಕೆ ಬಾರದಿದ್ದಡೆ.
[ಲಿಂಗಜಂಗಮಭರಿತವರಿಲ್ಲ.]
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಪಾಕಸಂಬಂದಿಗೆ ಪ್ರಸಾದ ದೂರ. /1301
ರೇಚಕ ಪೂರಕ ಕುಂಭಕವೆಂಬ ಗರುಡವಾಯುವ ಸೋಂಕ ತೆಗೆದು,
ಬ್ರಹ್ಮಾಂಡದಲ್ಲಿ ಕೀಲಿಟ್ಟು, ದ್ವಾರಕವಾಟವನೆ ತೆರೆದು ಆಂದೋಳಿಸುತ್ತಿದ್ದಿತ್ತು,
ಪರಶಿವಯೋಗ.
ಬಾಲ ಕುಮಾರ ಪ್ರೌಢ ಭಾಗದಲ್ಲಿ ಕಾಳಂ ಪೊಕ್ಕಿತ್ತು.
ಕಾಳಾಂದರದಿಂದತ್ತತ್ತಲಾರು ಬಲ್ಲರೋ ?
ಅಪ್ಪಿನ ಘಟ ಹೊತ್ತುಕೊಂಡು ಸುಳಿದ ಜಗದೊಳಗೆ,
ಅದು ಬಿರಿಬಿರಿದು ನಿರಾಳದಲ್ಲಿ ನೆರೆವ ಭೇದವ,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯರನುವ ಆ ಲಿಂಗೈಕ್ಯರೆ ಬಲ್ಲರು/1302
ಲಯ ಗಮನ ಶೂನ್ಯವಾಗಿರ್ಪುದು ಶಿವಲಿಂಗ ತಾನೆ ನೋಡಾ !
ಕೇವಲ ನಿಷ್ಕಲರೂಪವಾಗಿರ್ಪುದು ಪರತರ ಪರಬ್ರಹ್ಮ ತಾನೆ ನೋಡಾ !
ಭಕ್ತನ ಕರಕಂಜದಲ್ಲಿ ಖಂಡಿತಾಕಾರದಿಂದ ರೂಪುಗೊಂಡಿರ್ದು
ಅನಿಷ್ಟವ ಕಳೆದು ಇಷ್ಟಾರ್ಥವನೀವುದು ಪರವಸ್ತು ನೋಡಾ
ಕೂಡಲಚೆನ್ನಸಂಗಮದೇವಾ, ನಿಮ್ಮ ಒಲವು./1303
ಲಾಂಛನದೆಡೆಯಲ್ಲಿ ಹುಸಿಯ ಸಂಪಾದಿಸುವವ ಭಕ್ತನಲ್ಲ,
ಹುರುಡುವಿಡಿದಾತ ಮಾಹೇಶ್ವರನಲ್ಲ,
ಪದಪದಾರ್ಥ ನಾಸ್ತಿ ಪ್ರಸಾದಿಗೆ, ಖತಿ ನಾಸ್ತಿ ಪ್ರಾಣಲಿಂಗಿಗೆ,
ಶರಣಂಗೆ ಸತಿ ನಾಸ್ತಿ, ಐಕ್ಯಂಗೆ ಪತಿ ನಾಸ್ತಿ.
ಇಂತೀ ಷಡುಸ್ಥಲಂಗಳ ಸಕೀಲ ಸಂಯೋಗ ಸಂಬಂಧ,
ಕೂಡಲಚೆನ್ನಸಂಗಮದೇವಾ ಸಾಧಕರಳವೆ
ಸಹಜದ ಒಡೆಯರಿಗಲ್ಲದೆ ? /1304
ಲಾಂಛನಧಾರಿಗಳ ಜಂಗಮವೆಂತೆಂಬೆನಯ್ಯಾ ?
ವೇಷಧಾರಿಗಳ ಜಂಗಮವೆಂತೆಂಬೆನಯ್ಯಾ ?
ಮುದ್ರಾಧಾರಿಗಳ ಜಂಗಮವೆಂತೆಂಬೆನಯ್ಯಾ ?
ಮತ್ತಿನ್ನಾವುದು ಜಂಗಮವಯ್ಯಾ ? ಎಂದಡೆ,
ಹೇಳಿಹೆನು ಕೇಳಿ ಬೆಸಗೊಳ್ಳಿರಯ್ಯಾ:
ನಿಸ್ಸೀಮನೆ ಜಂಗಮ, ನಿರಾಶ್ರಯನೆ ಜಂಗಮ, ನಿರ್ದೆಹಿಯೆ ಜಂಗಮ,
ನಿರ್ದೊಷಿಯೆ ಜಂಗಮ, ನಿರುಪಾದಿಕನೆ ಜಂಗಮ
ನಿರಾಸಕ್ತನೆ ಜಂಗಮ, ನಿರಾಭಾರಿಯೆ ಜಂಗಮ, ನಿಃಪುರುಷನೆ ಜಂಗಮ.
ಇಂತಪ್ಪ ಜಂಗಮದಿಂದ ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ/1305
ಲಿ’ ಕಾರವೆ ಶೂನ್ಯ, ಬಿಂದುವೆ ಲೀಲೆ, `ಗ’ ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ.
ಇದು ಕಾರಣ-ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ/1306
ಲಿಂಗ ಜಂಗಮ ಪ್ರಸಾದವೆಂಬರು,
ಲಿಂಗವೆಂದಡೆ ಅಂಗದೊಳಗಾಯಿತ್ತು, ಜಂಗಮವೆಂದಡೆ ಆಸೆಗೊ?ಗಾಯಿತ್ತು,
ಪ್ರಸಾದವೆಂದಡೆ ವಿಷಯಕ್ಕೊಳಗಾಯಿತ್ತು- ಇಂತೀ ತ್ರಿವಿಧವು ನಷ್ಟ
ಇವರ ಮೇಲಣ ಅಂಕುರಿತವ ಬಲ್ಲ ಜಂಗಮವ ತೋರಾ
ಕೂಡಲಚೆನ್ನಸಂಗಮದೇವಾ/1307
ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ,
ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ !
ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ,
ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ !
ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ
ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ !
ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ,
ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ !
ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ
ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ,
ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ !
ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು
ನಿರವಯವಾದೆಯಲ್ಲಾ ಸಂಗನಬಸವಣ್ಣಾ ! /1308
ಲಿಂಗ ಪ್ರಣಾಮವ ಮಾಡುವೆ, ಲಿಂಗಾಲೋಕನವ ಮಾಡುವೆ.
ಜಂಗಮ ಪ್ರಣಾಮವ ಮಾಡುವೆ, ಜಂಗಮಸಂಭಾಷಣೆಯ ಮಾಡುವೆ,
ಪ್ರಸಾದ ಪ್ರಣಾಮವ ಮಾಡುವೆ, ಪ್ರಸಾದಭೋಗವ ಮಾಡುವೆ.
ಈ ತ್ರಿವಿಧಾಲೋಕನವ ಮಾಡುವೆ,
ಕೂಡಲಚೆನ್ನಸಂಗಾ ನೀ ಮಾಡಿಸಲು. /1309
ಲಿಂಗ ಪ್ರಾಣವೆಂಬೆನೆ? ಪ್ರಾಣದ ಹಂಗಿನ ಲಿಂಗ,
ಪ್ರಾಣ ಲಿಂಗವೆಂಬೆನೆ? ಲಿಂಗದ ಹಂಗಿನ ಪ್ರಾಣ.
ಪ್ರಾಣ ಲಿಂಗವಲ್ಲ, ಲಿಂಗ ಪ್ರಾಣವಲ್ಲ.
ಈ ಉಭಯ ಸಂದಳಿದವರ ತೋರಿ ಬದುಕಿಸಯ್ಯಾ,
ಕೂಡಲಚೆನ್ನಸಂಗಮದೇವಾ. /1310
ಲಿಂಗ ಪ್ರೇಮಿಗಳು ಜಂಗಮದನುವನರಿಯದಡೆ
ಜಂಗಮ ಪ್ರೇಮಿಗಳು ಲಿಂಗದನುವನರಿಯದಡೆ
ಪ್ರಸಾದ ಪ್ರೇಮಿಗಳು ಲೋಕದ ಸಂಗವನರಿಯದಡೆ
ಲಿಂಗಪ್ರೇಮಿಗಳೂ ಅಲ್ಲ ಜಂಗಮ ಪ್ರೇಮಿಗಳೂ ಅಲ್ಲ,
ಪ್ರಸಾದ ಪ್ರೇಮಿಗಳೂ ಅಲ್ಲ. ಆ ಜೀವಿಗಳಿಗೆ ಭಕ್ತಿಯೆಲ್ಲಿಯದೊ.
ಕೂಡಲಚೆನ್ನಸಂಗಮದೇವಾ. /1311
ಲಿಂಗ ಬಂದು ಮನವನಿಂಬುಗೊಂಬುದು,
ಜಂಗಮ ಬಂದು ಧನವನಿಂಬುಗೊಂಬುದು,
ಪ್ರಸಾದ ಬಂದು ತನುವನಿಂಬುಗೊಂಬುದು,
[ಈ] ತ್ರಿವಿಧವು ತಾನೆ, ಕೂಡಲಚೆನ್ನಸಂಗಾ,
ನೀನೊಲಿದ ಶರಣಂಗೆ ದೃಷ್ಟ. /1312
ಲಿಂಗ ಬಿದ್ದಿತು, ಲಿಂಗ ಬಿದ್ದಿತೆಂಬರಯ್ಯಾ.
ಲಿಂಗ ಬೀಳಿಲು ಬಲ್ಲುದೆ ? ಭೂಮಿ ತಾಳಲು ಬಲ್ಲುದೆ ?
ಕಮ್ಮಾರ ಕಡೆದು ಮಾರಿದ, ಬೋಗಾರ ತಂದು ಮಾರಿದ,
ಗುರು ಕೊಂಡು ಮಾರಿದ ಈ ಲಿಂಗ ಬಿದ್ದಡೆ ಸಮಾದಿಯುಂಟೆ ?
ಲಿಂಗವ ಕಟ್ಟಿದ ಗುರು ಸತ್ತಡೆ ಸಮಾದಿಯನೇಕೆ ಕೊಳ್ಳರೊ
ಕೂಡಲಚೆನ್ನಸಂಗಮದೇವಾ ?/1313
ಲಿಂಗ ಮುಂತಾಗಿಯೇ ನಡೆವನು ಶರಣನು,
ಲಿಂಗ ಮುಂತಾಗಿಯೇ ನುಡಿವನು ಶರಣನು,
ಲಿಂಗ ಮುಂತಾಗಿಯೇ ತೃಪ್ತನು ಶರಣನು,
ಲಿಂಗಕಾಯ ಶರಣ, ಶರಣಕಾಯಲಿಂಗ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಾಂಗ ಲಿಂಗಿ. /1314
ಲಿಂಗ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಜಂಗಮ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಪ್ರಸಾದ ಮುಖದಲ್ಲಿ ಬಂದ ಪ್ರಸಾದವ ಪ್ರಸಾದವೆಂಬೆ,
ಅರ್ಪಿತ ಸಂಕಲ್ಪಿತ ಭಾವಾರ್ಪಿತವ ಮಾಡಬಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣ. /1315
ಲಿಂಗ ಮುಟ್ಟದೆ ಮುಟ್ಟೆನಯ್ಯಾ !
ಅದು ಅನರ್ಪಿತ, ಲಿಂಗಕ್ಕೆ ಮಾಡಲಿಲ್ಲಾಗಿ.
ತಟ್ಟದೆ ಮುಟ್ಟದೆ ಮನಸೋಂಕದೆ
ಅನುವಿನ ಅಂಗಕ್ಕೆ ಮಾಡಬೇಕು.
ಕೊಟ್ಟು ಕೊಂಬ ಭೇದವ ಕೂಡಲಚೆನ್ನಸಂಗಯ್ಯನಲ್ಲಿ
ಮಹಾಪ್ರಸಾದಿಯೆ ಬಲ್ಲ./1316
ಲಿಂಗ ಲಿಂಗವೆಂದಲ್ಲಿಯೇ ತಪ್ಪಿತ್ತು,
ಜಂಗಮ ಜಂಗಮವೆಂದಲ್ಲಿಯೇ ತಪ್ಪಿತ್ತು,
ಪ್ರಸಾದ ಪ್ರಸಾದವೆಂದಲ್ಲಿಯೇ ತಪ್ಪಿತ್ತು.
ಈ ತ್ರಿವಿಧದ ನಿಕ್ಷೇಪದ ಸಂಚವ ಬಲ್ಲರೆ ಈ ಲೋಕದಲ್ಲಿ ಇದ್ದರೇನು?
ಆ ಲೋಕಕ್ಕೆ ಹೋದರೇನು ?
ಆ ಲೋಕದಿಂದ ಈ ಲೋಕಕ್ಕೆ ಬಂದರೇನು?
ಹದಿನಾಲ್ಕು ಭುವನದೊಳಗಿದ್ದ ನಿಸ್ಸಾರಮಂ ಬಿಟ್ಟು
ಲಿಂಗಸಾರಾಯ ಮೋಹಿಯಾಗಿ ಕೂಡಲಚೆನ್ನಸಂಗನಲ್ಲಿ ನಿರ್ಲೆಪನಾದ ಶರಣ. /1317
ಲಿಂಗ ಲಿಂಗವೆಂದು ಕಾಣದನ್ನಕ್ಕ,
ಜಂಗಮ ಜಂಗಮವೆಂದು ಕಾಣದನ್ನಕ್ಕ,
ಇನ್ನಾಗದಯ್ಯಾ, ಇನ್ನಾಗದಯ್ಯಾ.
ಅರಿವಿನೊಳಗಣ ಘನವೆ ಸುಳುಹಡಗಿದ ಸೂತಕ,
ಇನ್ನಾಗದಯ್ಯಾ, ಇನ್ನಾಗದಯ್ಯಾ.
ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯ,
ಸರ್ವಾಂಗ ಸಂದೇಹಿಗಳಿಗೆಂತೊಲಿವ ?/1318
ಲಿಂಗ ಲಿಂಗವೆಂಬನ್ನಕ್ಕ ಜಂಗಮವಲ್ಲ,
ಪ್ರಸಾದ ಪ್ರಸಾದವೆಂಬನ್ನಕ್ಕ ಶರಣನಲ್ಲ,
ಗುರು ಲಿಂಗವೆಂಬುದಕ್ಕೆ ಅಂಗವಿಸಲಾರೆ, ಕೂಡಲಚೆನ್ನಸಂಗಯ್ಯಾ./1319
ಲಿಂಗ ಲಿಂಗವೆಂಬವ ಲಿಂಗಸೂತಕಿಯಯ್ಯ,
ಜಂಗಮ ಜಂಗಮವೆಂಬವ ಜಂಗಮಸೂತಕಿಯಯ್ಯ,
ಪ್ರಸಾದ ಪ್ರಸಾದವೆಂಬವ ಪ್ರಸಾದಸೂತಕಿಯಯ್ಯ ಈ ತ್ರಿವಿಧ ಸೂತಕಿಯ ಮಾತ ಕೇಳಲಾಗದು.
ಸರ್ವಸೂತಕ ನಿರ್ವಾಹವಾಯಿತ್ತು.
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ. /1320
ಲಿಂಗಕ್ಕೀಯದೆ ಅಂಗಸುಖಕ್ಕಾಗಿ ಅನ್ನೋದಕವ ಕೊಂಡ
ಅಜ್ಞಾನಿಯನೇನೆಂದು ನುಡಿವೆನಯ್ಯಾ ?
ಆತನು ಪತಿತನಾಗಿ ನರಕದಲ್ಲಿ ಹೊರಳುತ್ತಿರ್ಪನು.
“ಅಸಮಪ್ರ್ಯ ಪ್ರಾಣಲಿಂಗೇ ಜಲಂ ವಾ ಫಲಮೇವ ವಾ
ಸ್ವೀಕುರ್ಯಾದ್ಯದಿ ಮೋಹೇನ ಪತಿತೋ ನರಕಂ ವ್ರಜೇತ್ ” ಎಂದುದಾಗಿ
ಆವ ಪದಾರ್ಥವನಾದಡೆಯು ಲಿಂಗಕ್ಕೆ ಕೊಡದೆ ಕೊಳಲಾಗದೆಂದುದು
ನಮ್ಮ ಕೂಡಲಚೆನ್ನಸಂಗಯ್ಯನ ವಚನ/1321
ಲಿಂಗಕ್ಕೆ ಕೊಟ್ಟು ಕೊಂಡರೆ ಪ್ರಸಾದ.
ಜಂಗಮವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ,
ಇದೇ ಪ್ರಸಾದದಾದಿ ಕಂಡಯ್ಯಾ.
ಆದಿಯ ಪ್ರಸಾದವ ವೇದಿಸಬಲ್ಲರೆ ಇದೆ ಕಂಡಯ್ಯಾ.
ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡದೆ ಕೊಂಡರೆ ಹುಳುಕುಂಡುದಲಿಕ್ಕುವ
ನಮ್ಮ ಕೂಡಲಚೆನ್ನಸಂಗಮದೇವ. /1322
ಲಿಂಗಕ್ಕೆ ಗಿಣ್ಣಿಲ ಓಗರ, ಭಕ್ತಂಗೆ ತಳಿಗೆ ತುಂಬಿದ ಓಗರ, ಆನಿನ್ನೇವೆನಯ್ಯಾ!
ಲಿಂಗವ ಕಿರಿದು ಮಾಡಿ, ಅಂಗವ ಹಿರಿದು ಮಾಡಿ, ನಾನಿನ್ನೇವೆನಯ್ಯಾ!
ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷ, ಆನಿನ್ನೇವೆನಯ್ಯಾ!
ಲಿಂಗಕ್ಕೆ ಬಾರದ ಭೋಗವ ಭೋಗಿಪರ ತೋರದಿರಯ್ಯಾ,
ಕೂಡಲಚೆನ್ನಸಂಗಮದೇವಾ. /1323
ಲಿಂಗಕ್ಕೆ ಜಂಗಮ ಹೊಣೆ, ಜಂಗಮಕ್ಕೆ ಲಿಂಗ ಹೊಣೆ.
ಲಿಂಗದಂತೆ ಜಂಗಮ, ಜಂಗಮದಂತೆ ಲಿಂಗ.
ಈ ಉಭಯವ ತಿಳಿದಡೆ,
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು !/1324
ಲಿಂಗಕ್ಕೆ ಬೇರೆ ಭಾಜನ ತಮಗೆ ಬೇರೆ ಭಾಜನವೆಂದೆಂಬರು
ನಾನಿದನರಿಯೆನಯ್ಯಾ.
ಅಂಗದ ಮೇಲೆ ಪ್ರಾಣ[ಲಿಂಗ]ಪ್ರತಿಷ್ಠೆಯಾದ ಬಳಿಕ
ಲಿಂಗಕ್ಕೆಯೂ ತಮಗೆಯೂ ಏಕಭಾಜನವಿಲ್ಲದನ್ನಕ್ಕ
ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ ?
ಇದನರಿದು ಏಕಭಾಜನವಾಗದಿದ್ದಡಂತದು ದೋಷ
ಅರಿಯದೆ ಏಕಭಾಜನವಾದಡಿಂತು ದೋಷ.
ಈ ಕುಳಸ್ಥಳದ ಭೇದವ ಭೇದಿಸಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ/1325
ಲಿಂಗಕ್ಕೆ ಮನ ಭಾಜನ, ಜಂಗಮಕ್ಕೆ ಧನ ಭಾಜನ,
ಪ್ರಸಾದಕ್ಕೆ ತನು ಭಾಜನ-
ಈ ತ್ರಿವಿಧಭಾಜನದಲ್ಲಿ ಸಹಭೋಜನವ ಮಾಡುವನು
ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು/1326
ಲಿಂಗಕ್ಕೆಂದು ಮಾಡಿದ ಬೋನವ
ಜಂಗಮಕ್ಕೆ ನೀಡಬಾರದೆಂಬ ಕರ್ಮಿಯ ನೋಡಾ,
ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ
ಲಿಂಗಜಂಗಮಯೋರ್ಮಧ್ಯೇ ಜಂಗಮಸ್ತು ವಿಶೇಷತಃ
ಇದು ಕಾರಣ ಜಂಗಮವೇ ಲಿಂಗ
ಕೂಡಲಚೆನ್ನಸಂಗಮದೇವಾ. /1327
ಲಿಂಗಕ್ಕೆಂದು ಮಾಡುವೆನು, ಲಿಂಗಕ್ಕೆಂದು ನೀಡುವೆನು ನೋಡಯ್ಯಾ.
ಲಿಂಗಕ್ಕೆಂದು ಭಾವಿಸುವೆನು, ಅಂಗಗುಣಂಗಳನರಿಯೆನಾಗಿ.
ಲಿಂಗಕ್ಕೆಂದು ಕಾಮಿಸುವೆನು ನಿಃಕಾಮಿಯಾಗಿ,
ಲಿಂಗಕ್ಕೆಂದು ತಹೆನಲ್ಲದೆ,
ಅಂಗಕ್ಕೆಂದು ಬಯಸಿದರೆ ಲಿಂಗಾರ್ಪಿತಕ್ಕೆ ಸಲ್ಲದಾಗಿ.
ಲಿಂಗಕ್ಕೆಂದು ಕೊಟ್ಟು ಕೊಂಬೆನಲ್ಲದೆ,
ಅನರ್ಪಿತವನರಿಯೆ ಕೂಡಲಚೆನ್ನಸಂಗಮದೇವಾ. /1328
ಲಿಂಗಗಂಬಿರ ನಿಸ್ಸಂಗಿಯ ಸಂಗವ ನಾನೇನೆಂಬೆನಯ್ಯಾ?
ಪರಮಾರ್ಥದಿಂದ ಗಮಿಸುವ ಗಮನವ ನಾನೇನೆಂಬೆನಯ್ಯಾ?
ಕೂಡಲಚೆನ್ನಸಂಗನ ಶರಣರು ಕಾಯವ ನೆವದಿಂದಲರ್ಪಿಸುವ
ಬೆಡಗ ನಾನೇನೆಂಬೆನಯ್ಯಾ?/1329
ಲಿಂಗಗಂಬಿರವಾದ ಶರಣ ಅಂಗವಿಕಾರವನರಿಯ,
ಲಿಂಗಸನುಮತವಾದ ಶರಣ ಇಂದ್ರಿಯವಿಕಾರವನರಿಯ.
ಲಿಂಗಗಂಬಿರವಾಗಿ, ಮನವಲ್ಲಿಯೆ ಲೀಯವಾಗಿ, ಅವಧಾನವನರಿಯ
ಕೂಡಲಚೆನ್ನಸಂಗಾ ಲಿಂಗೈಕ್ಯನು./1330
ಲಿಂಗಗ್ರಾಹಕ ಶರಣ ಅಂಗಭೋಗಕ್ಕೆ ವಿರೋದಿಯಯ್ಯಾ.
ಜಂಗಮಗ್ರಾಹಕ ಶರಣ ಅರ್ಥಪ್ರಾಣಾಬಿಮಾನಕ್ಕೆ ವಿರೋದಿಯಯ್ಯಾ,
ಪ್ರಸಾದಗ್ರಾಹಕ ಶರಣ ಜಿಹ್ವೆ[ಯ] ರುಚಿ[ಗೆ] ವಿರೋದಿಯಯ್ಯಾ.
ಈ ತ್ರಿವಿಧಸಾಹಿತ್ಯ ಕೂಡಲಚೆನ್ನಸಂಗಾ ನಿಮ್ಮಶರಣಂಗೆ. /1331
ಲಿಂಗಜಂಗಮ ಜಂಗಮಲಿಂಗದ ಮುಖವ ನೀವಲ್ಲದೆ
ಇನ್ನು ಬಲ್ಲವರಾರಯ್ಯಾ ?
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದಲ್ಲಿ
ಪರವಾದಿ ಬಿಜ್ಜಳನು ಒರೆದು ನೊಡಲೆಂದಟ್ಟಿದಡೆ ಹಗರಣಿಗರ
ಜಂಗಮಮುಖದಲ್ಲಿ ಲಿಂಗವ ಮಾಡಿದವರಾರು ಹೇಳಾ ನೀವಲ್ಲದೆ ?
ಮರದ ಮಾನಿಸನ ಕರೆದು `ಓ’ ಎನಿಸಿ ನುಡಸಿ ಉಡಿಸಿ ಉಣಿಸಿ
ಜಂಗಮಲಿಂಗಪ್ರಾಣಿ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ
ಈ ಕಲ್ಯಾಣದಲ್ಲಿ ನೀವಲ್ಲದೆ ?
ಜಂಗಮಮುಖಲಿಂಗವನರಿಯೆನೆಂದು
ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದಡೆ ನಾನು ಸೈರಿಸಬಲ್ಲೆನೆ ?
ನೀನು ಜಂಗಮಮುಖಲಿಂಗಸಂಬಂದಿ ಎಂಬುದ ಕೇಳಿ
ಆದಿಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ
ನಿನ್ನನರಿಸಿಕೊಂಡು ಬರುತ್ತಲೈದಾನೆ.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ,
ಸಂಗನಬಸವಣ್ಣಾ, ನೀನೇ ಜಂಗಮಪ್ರಾಣಿಯೆಂದು
ನಾನು ನಂಬಿದೆನು. /1332
ಲಿಂಗಜಂಗಮ ಭಕ್ತಿಯ ಮಾಡಿಸಿಕೊಂಬಲ್ಲಿ ವಿವರವುಂಟು;
ಲಾಕಿಕ ಅಲೌಕಿಕ ಸಹಜವೆಂಬ ಮಾಟತ್ರಯವನರಿದು-
ಲಾಕಿಕಭಕ್ತರಲ್ಲಿ ಅವರಿಚ್ಛೆಯಲ್ಲಿರ್ದು ಭಕ್ತಿಯ ಮಾಡಿಸಿಕೊಂಬುದು.
ಅಲಾಕಿಕ ಭಕ್ತರಲ್ಲಿ ತಾ ಕರ್ತನಾಗಿ ಅವರು ಭೃತ್ಯರಾಗಿ
ಭಕ್ತಿಯ ಮಾಡಿಸಿಕೊಂಬುದು.
ಸಹಜಭಕ್ತರಲ್ಲಿ ಕರ್ತೃತ್ವ ಭೃತ್ಯತ್ವವಿಲ್ಲದೆ ಭಕ್ತಿಯ ಮಾಡಿಸಿಕೊಂಬುದು.
ಇಂತಿದು ಲಿಂಗಜಂಗಮದ ಜಾಣಿಕೆ ಕಾಣಿರೆ !
ಹೀಗಿಲ್ಲದೆ ಅವರ ಕಾಡಿ ಕರಕರಿಸಿ ಅವರ ಭಂಡು ಮಾಡಿ
ತಾ ಭಂಡನಹ ಭಂಡನ ಮುಖವ ತೋರದಿರು
ಕೂಡಲಚೆನ್ನಸಂಗಮದೇವಾ/1333
ಲಿಂಗದ ಕಲೆ ಅಂತರಂಗಕ್ಕೆ ವೇದಿಸುವ ಹಲವು ಸಾಧನಂಗಳಲ್ಲಿ
ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯಾ.
ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹರಿಚದಂತಿರ್ದಡೆ
ಆ ಲಿಂಗವು ಕಂಗಳಲ್ಲಿ ವ್ಯಾಪಿಸುತಿಪ್ಪುದು.
ಆ ಮಂಗಲಮಯವಾದ ಕಂಗಳಲ್ಲಿ ಮನವಿರಿಸಿ,
ಲಿಂಗನಿರೀಕ್ಷಣೆಯಿಂದ ನೆನೆಯಲು,
ಆ ಲಿಂಗಮೂರ್ತಿ ಮನವನಿಂಬುಗೊಂಡು
ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು.
ಬಳಿಕ ಮನೋಮಯಲಿಂಗವನು ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,
ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು
ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.
ಆ ಭಾವಲಿಂಗವನು ಎಡೆವಿಡದೆ ಭಾವಿಸುತ್ತ,
ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,
ಶರಣನು ನಿತ್ಯತೃಪ್ತನಾಗಿ ವಿರಾಜಿಸುತಿಪ್ಪನು.
ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ
ಕೂಡುವ ಪರಮೋಪಾಯವು./1334
ಲಿಂಗದ ಗುಣದಿಂದ ಲಿಂಗೈಕ್ಯವೆಂಬರು;
ಲಿಂಗದ ಗುಣದಿಂದ ಲಿಂಗೈಕ್ಯವಿಲ್ಲ ನೋಡಾ.
`ಭಾವಾದ್ವೈತಂ ಪರಂ (ಹಿ?)ತಂ’
ಕೂಡಲಚೆನ್ನಸಂಗಾ ಲಿಂಗೈಕ್ಯವು/1335
ಲಿಂಗದ ಘನವನರಿದೆನೆಂದರೆ ಅದೆ ಕುಚಿತ್ತ.
ಜಂಗಮದ ಘನವನರಿದೆನೆಂದರೆ ಅದೆ ಕುಚಿತ್ತ.
ಪ್ರಸಾದದ ಘನವನರಿದೆನೆಂದರೆ ಅದೆ ಕುಚಿತ್ತ.
ಗುರುಲಿಂಗಜಂಗಮದಲೊದಗಿದ ಪ್ರಸಾದ ಘನಕ್ಕೆ ಘನ ಮನವೇದ್ಯವೆಂದು
ತೋರಿದನೆನ್ನ ಗುರುಲಿಂಗ,
ಕೂಡಲಚೆನ್ನಸಂಗಯ್ಯನ ಶರಣ ಬಸವಣ್ಣ. /1336
ಲಿಂಗದ ಪೂರ್ವಾಶ್ರಯವ ಕಳೆದು,
ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು!
ಲಾಂಛನದ ಪೂರ್ವಾಶ್ರಯವ ಕಳೆದು,
ಇದು ಲಿಂಗಜಂಗಮ (ಜಂಗಮಲಿಂಗ) ವೆಂದು ತೋರಬಂದನಯ್ಯಾ ಬಸವಣ್ಣನು!
ಪ್ರಸಾದದ ಪೂರ್ವಾಶ್ರಯವ ಕಳೆದು,
ಇದು, ಪ್ರಸಾದವೆಂದು ಸಯವ ಮಾಡಿ ತೋರಬಂದನಯ್ಯಾ ಬಸವಣ್ಣನು!
ಇಂತು ಲಿಂಗ ಜಂಗಮದ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮತ್ರ್ಯಕ್ಕೆ ಜನಿಸಿದನಯ್ಯಾ ಕೂಡಲಚೆನ್ನಸಂಗನಲ್ಲಿ ಬಸವಣ್ಣನು. /1337
ಲಿಂಗದ ಪೂರ್ವಾಶ್ರಯವ ಕಳೆಯ ಬಲ್ಲಾತನೆ ಭಕ್ತ.
ಗುರುವಿನ ಪೂರ್ವಾಶ್ರಯವ ಕಳೆಯಬಲ್ಲಾತನೆ ಶಿಷ್ಯ.
ಪ್ರಸಾದದ ಪೂರ್ವಾಶ್ರಯವ ಕಳೆಯಬಲ್ಲಾತನೆ ಪ್ರಸಾದಿ.
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆಯಬಲ್ಲರೆ.
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. /1338
ಲಿಂಗದ ರಚನೆಯ ಮಾಡುವರೆ ಇಲ್ಲಿಯ ರಚನೆ ಕೆಡಬೇಕು.
ರಚನೆ ರಂಜಕ ಭುಂಜಕ ಹೊಂದಿದ ಸಂಗಸೂತಕವಿಲ್ಲ, ಲಿಂಗವಿಯೋಗವಿಲ್ಲ,
ಅಂಗದ ನಿಲವ ಸಂಗಕ್ಕೆ ತರಲುಂಟೆ ?
ಆನಂದದಿಂದ ವಿಚಾರಿಸಿ ನೋಡಲು ಸಂಗ ನಿಸ್ಸಂಗ ನೋಡಾ !
ಕೂಡಲಚೆನ್ನಸಂಗನೆಂಬ ನಿಶ್ಚಿಂತ ನಿರಾಳವು/1339
ಲಿಂಗದಲುದಯ, ಜಂಗಮದಲನುಭಾವ.
ಮತ್ತೊಂದ ಮತ್ತೊಂದನರಿಯನಯ್ಯಾ, ಶರಣ.
ಕೂಡಲಚೆನ್ನಸಂಗಯ್ಯನಲ್ಲಿ ದ್ವಿವಿಧಸಂಪನ್ನನಾಗಿ ಅಯ್ಯಾ. /1340
ಲಿಂಗದಲ್ಲಿ ಅರ್ಪಿತ, ಜಂಗಮದಲ್ಲಿ ಅನರ್ಪಿತ,
ಪ್ರಸಾದದಲ್ಲಿ ಉಭಯ ನಾಸ್ತಿ.
ಈ ತ್ರಿವಿಧಸಮ್ಮತವ ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನೆ ಬಲ್ಲ ಕಾಣಿರೆ./1341
ಲಿಂಗದಲ್ಲಿ ಆಯತ, ಲಿಂಗದಲ್ಲಿ ಸಾಹಿತ್ಯವಾಗಿದ್ದೆ ನಾನು,
ಪರಮಸುಖಪರಿಣಾಮದೊಳಗಿದ್ದೆ ನಾನು,
ಸ್ಥಾವರ ಜಂಗಮ ಉಭಯ ಒಂದಾಗಿ, ಬಿನ್ನಭಾವವ ವಿಚಾರಿಸಲಿಲ್ಲ,
ಕೂಡಲಚೆನ್ನಸಂಗಮದೇವರಲ್ಲಿ ಸ್ವಯವಾಗಿರ್ದೆ ಸಹಜ !/1342
ಲಿಂಗದಲ್ಲಿ ಕಠಿಣವಾರ್ತೆ,
ಜಂಗಮದಲ್ಲಿ ಜಾತಿವಾರ್ತೆ,
ಪ್ರಸಾದದಲ್ಲಿ ಅಪವಿತ್ರವಾರ್ತೆಯ ಕೇಳಲಾಗದು ಶಿವ,
ಶಿವ ಕೂಡಲಚೆನ್ನಸಂಗಮದೇವನು ಅಘೋರನರಕದಲಿಕ್ಕುವ/1343
ಲಿಂಗದಲ್ಲಿ ಕೊಡಲುಂಟು, ಕೊಳಲುಂಟಾಗಿ ಅರ್ಪಿತ,
ಜಂಗಮದಲ್ಲಿ ಕೊಟ್ಟು ಕೊಳಲಿಲ್ಲಾಗಿ ಅನರ್ಪಿತ,
ಪ್ರಸಾದದಲ್ಲಿ ಕೊಡಲು ಕೊಳಲಿಲ್ಲಾಗಿ ಉಭಯನಾಸ್ತಿ.
ಈ ತ್ರಿವಿಧ ಸಂಚದ ಸನುಮತವನು
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ./1344
ಲಿಂಗದಲ್ಲಿ ಸಾಹಿತ್ಯನು, ಜಂಗಮದಲ್ಲಿ ಸನುಮತನು,
ಪ್ರಸಾದದಲ್ಲಿ ಸನ್ನಹಿತನು,
ಈ ತ್ರಿವಿಧ ಸಂಬಂಧ ಸಾರಾಯ
ಬಸವಣ್ಣಂಗಲ್ಲದೆ ಮತ್ತಾರಿಗೆಯೂ ಆಗದು.
ಕೂಡಲಚೆನ್ನಸಂಗಯ್ಯನ ದಯದಿಂದ
ಆನು ಬದುಕಿದೆನು. /1345
ಲಿಂಗದಲ್ಲಿ ಸೂತಕವ ಹಿಡಿವನ್ನಕ್ಕ
ಪ್ರಾಣಲಿಂಗ ಸಂಬಂದಿಯೆಂತೆಂಬೆ?
ಜಂಗಮದಲ್ಲಿ ಸೂತಕವ ಹಿಡಿವನ್ನಕ್ಕ
ಅನುಭಾವಿಯೆಂತೆಂಬೆ?
ಪ್ರಸಾದದಲ್ಲಿ ಸೂತಕವ ಹಿಡಿವನ್ನಕ್ಕ
ಸ್ವಾಮಿಭೃತ್ಯಸಂಬಂಧಿಯೆಂತೆಂಬೆ?
ಭಕ್ತನೆಂತೆಂಬೆ, ಪ್ರಸಾದಿಯೆಂತೆಂಬೆ,
ಕೂಡಲಚೆನ್ನಸಂಗನಲ್ಲಿ ಶರಣನೆಂತೆಂಬೆ? /1346
ಲಿಂಗದಿಂದ ಉದಯಿಸಿ ಅಂಗವಿಡಿದವರ ಇಂಗಿತವನೇನೆಂಬೆನಯ್ಯಾ ?
ಅವರ ನಡೆಯೆ ಆಗಮ, ಅವರ ನುಡಿಯೆ ಪರಮಾಮೃತ
ಅವರ ಲೋಕದ ಮಾನವರೆನಬಹುದೆ ಅಯ್ಯಾ ?
ವೃಕ್ಷಾದ್ಭವತಿ ಬೀಜಂ ಹಿ ತದ್ ವೃಕ್ಷೇ ಲೀಯತೇ ಪುನಃ
ರುದ್ರಲೋಕಂ ಪರಿತ್ಯಜ್ಯ ಶಿವಲೋಕಂ ಪ್ರವಿಶ್ಯತಿ
ಅಂಕೋಲೆಯ ಬೀಜ ತರುವನಪ್ಪುವಂತೆ ಅಪ್ಪುವರಯ್ಯಾ
ಕೂಡಲಚೆನ್ನಸಂಗಾ ನಿಮ್ಮ ಶರಣರು/1347
ಲಿಂಗದಿಂದೊದವಿದ ಜಂಗಮವು, ಜಂಗಮದಿಂದೊದವಿದ ಲಿಂಗವು
ಉಪಮೆಗೆ ತಂದು ಎರಡೆನಬಹುದೆ ಮಹಾಘನವ?
ಜಂಗಮ ಸಜ್ಜನ ಸಹಜ ಶಿವೈಕ್ಯನನೇನೆಂದುಪಮಿಸಬಹುದು ಹೇಳಾ?
ಕೂಡಲಚೆನ್ನಸಂಗಮದೇವಾ ಜಂಗಮಪ್ರಾಣಿ ಬಸವರಾಜನು. /1348
ಲಿಂಗದೇಹಿಯಾದ ಬಳಿಕ
ಲಿಂಗೈಕ್ಯನಾಗದನ್ನಕ್ಕ
ಲಿಂಗದೇಹಿ ಎಂತಹನೋ ಅಯ್ಯಾ ?
ಲಿಂಗದೇಹಿಯಾದ ಬಳಿಕ
ಲಿಂಗಾಂಗರ ಕೂಡ ಗೋಷ್ಠಿ
ಲಿಂಗಾಂಗರ ಕೂಡ ಸಂಗತಿ
ಲಿಂಗಾಂಗರ ಕೂಡ ಸನ್ನಿದಿ
ಲಿಂಗಾಂಗರ ಕೂಡ ನಡೆ ನುಡಿ.
ಲಿಂಗಾಂಗಿಗಳಲ್ಲದ ಲಿಂಗಹೀನರ ಕೂಡ
ಸಂಗವ ಬೆರಸಿ ನಡೆದರೆ
ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದತೀರ್ಥ ಪ್ರಸಾದವಿಲ್ಲ ಕಾಣಾ,
ಮಹಾದಾನಿ ಕೂಡಲಚೆನ್ನಸಂಗಮದೇವಾ/1349
ಲಿಂಗದೊಡನೆ ಸಹಭೋಜನವ ಮಾಡುವ ಅದ್ವೈತಿಗಳ ಮಾತುಕೇಳಿ,
ಸಂಸಾರದೊಳಗಿರ್ದ ಭಕ್ತನು, ಆ ಲಿಂಗದೊಡನೆ ಸಹಭೋಜನವ ಮಾಡಿದಡೆ
ಅಘೋರನರಕ ತಪ್ಪದು. ಅದೆಂತೆಂದಡೆ:
“ರಾಗದ್ವೇಷಮದೋನ್ಮತ್ತಸ್ತತ್ತ್ವಜ್ಞಾನಪರಾಙ್ಮುಖಃ
ಸಂಸಾರಸ್ಯ ಮಹಾಪಂಕೇ ಜೀರ್ಣಾಂಗೋ ಹಿ ನಿಮಜ್ಜತಿ ”
ಇದನರಿದು ಲಿಂಗದೊಡನೆ ಸಹಭೋಜನವ ಮಾಡಲಾಗದು.
ಮಾಡುವ ಅಜ್ಞಾನಿಗಳು ನೀವು ಕೇಳಿರೊ:
ಗುರುಲಿಂಗಜಂಗಮತ್ರಿವಿಧವನು ಏಕಾರ್ಥವ ಮಾಡದನ್ನಕ್ಕರ
ಸಹಭೋಜನವುಂಟೆ ಹೇಳಿರಣ್ಣಾ ! ಇಲ್ಲವಾಗಿ.
ಅದೆಂತೆಂದಡೆ:
“ಗುರುರೇಕೋ ಲಿಂಗಮೇಕಂ ಏಕಾರ್ಥೊ ಜಂಗಮಸ್ತಥಾ
ತ್ರಿವಿಧೇ ಬಿನ್ನಭಾವೇನ ಶ್ವಾನಯೋನಿಷು ಜಾಯತೇ ”-
ಇಂತೆಂಬ ಶಿವನವಾಕ್ಯವನರಿಯದೆ, ನೀವೇ ಲಿಂಗವೆಂಬಿರಿ ಲಿಂಗವೆ ನೀವೆಂಬಿರಿ
ಜನನ-ಮರಣ, ತಾಗು-ನಿರೋಧ ಉಳ್ಳನ್ನಕ್ಕರ
ನೀವೆಂತು ಲಿಂಗವಪ್ಪಿರಿ ಹೇಳಿರಣ್ಣಾ ?
ಆ ಶಿವಜ್ಞಾನದ ಮಹಾವರ್ಮವನರಿಯದೆ
ಲಿಂಗದೊಡನೆ ಸಹಭೋಜನವ ಮಾಡಿದೊಡೆ
ಅಘೋರನರಕದಲ್ಲಿಕ್ಕದೆ ಬಿಡುವನೆ
ನಮ್ಮ ಕೂಡಲಚೆನ್ನಸಂಗಮದೇವನು ?/1350
ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ.
ಕಾಯಗುಣವಿಲ್ಲಾಗಿ ಸಂಸಾರ ಭಯವಿಲ್ಲ.
ಅಂತರಂಗಶುದ್ಧಾತ್ಮ, ನಿಸ್ಸಂಗಿ ಜಂಗಮ,
ಕೂಡಲಚೆನ್ನಸಂಗಮದೇವಾ. /1351
ಲಿಂಗದ್ರೋಹದವನ ಮುಖವ ನೋಡಲಾಗದು,
ಮತ್ತೆ ನೋಡಬಹುದು, ಏಕೆ? ಮುಂದೆ ಗುರುವಿಪ್ಪ ಕಾರಣ.
ಗುರುವಿನಲ್ಲಿ ದ್ರೋಹದವನ ಮುಖವ ನೋಡಲಾಗದು
[ಮತ್ತೆ] ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪ ಕಾರಣ.
ಜಂಗಮದಲ್ಲಿ ದ್ರೋಹದವನ ಮುಖವ ನೋಡಲಾಗದು,
[ಮತ್ತೆ] ನೋಡಬಹುದು, ಏಕೆ? ಮುಂದೆ ಪ್ರಸಾದವಿಪ್ಪ ಕಾರಣ.
ಪ್ರಸಾದದಲ್ಲಿ ದ್ರೋಹದವನ ಮುಖವ ನೋಡಲಾಗದು,
ಮತ್ತೆ ನೋಡಬಹುದು [ಏಕೆ?]ಪ್ರಸಾದದಿಂದ ಪರವಿಲ್ಲವಾಗಿ
ಕೂಡಲಚೆನ್ನಸಂಗಮದೇವಾ. /1352
ಲಿಂಗದ್ರೋಹಿಯನೆ ಗುರುವೆಂಬೆ, ಗುರುದ್ರೋಹಿಯನೆ ಶಿಷ್ಯನೆಂಬೆ.
ಸಮಯದ್ರೋಹಿಯನೆ ಭಕ್ತನೆಂಬೆ, ಪ್ರಸಾದದ್ರೋಹಿಯನೆ ಮಾಹೇಶ್ವರನೆಂಬೆ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ನಿಮ್ಮ ಶರಣ ಸರ್ವಾಂಗದ್ರೋಹಿಯ ಲಿಂಗೈಕ್ಯನೆಂದೆಂಬೆ/1353
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು,
ಜಂಗಮನಿಷ್ಠೆ ಅನುಸರಣೆಯಲ್ಲಿ ಬೀಯವಾಯಿತ್ತು,
ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಯಿತ್ತು,
ಇಂತೊಂದರ ನಿಷ್ಠೆ ಅಂದಂದಿಂಗೆ ಬೀಯವಾಯಿತ್ತು,
ಕೂಡಲಚೆನ್ನಸಂಗಯ್ಯನ ಭಕ್ತಿ ಜಗವನಾಳಿಗೊಂಡಿತ್ತು./1354
ಲಿಂಗಪೂಜೆಯ, ಸ್ವಯಪೂಜೆಯ ನಾ ಮಾಡಿದೆನೆಂದೆನ್ನದ ಪ್ರಸಾದಿ.
ಜಂಗಮಮಾಟದಲ್ಲಿ ನಾ ಮಾಡಿದೆನೆಂದು ಮನದಲ್ಲಿ ನೆನೆಯದ ಪ್ರಸಾದಿ.
ದೂರದೂರದಲ್ಲಿ ಪರಾನುಸಂಗವಾದ ಪ್ರಸಾದಿ.
ವಿಕಸಿತವಾದ ಒಂದೊಂದು ಭಾವದ ತನುವಿರಹಿತವಾದ ಪ್ರಸಾದ ಪ್ರಸಾದಿ.
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಲಿಂಗ ಜಂಗಮ ಸನುಮತವಾದ ಪ್ರಸಾದಿ. /1355
ಲಿಂಗಪ್ರಸಾದ ಭವಕ್ಕೆ ಬೀಜ, ಜಂಗಮಪ್ರಸಾದ ಭವಂ ನಾಸ್ತಿ.
ವಾಸನೆಯೆ ಲಿಂಗಭಕ್ತಿ, ನಿರ್ವಾಸನೆಯೆ ಜಂಗಮಭಕ್ತಿ.
ಜಂಗಮ ಪ್ರಸಾದವನಲ್ಲದೆ ಕೊಂಡೆನಾದಡೆ
ಅಘೋರ ನಾಯಕನರಕ ಕೊಡಲಚೆನ್ನಸಂಗಮದೇವಾ. /1356
ಲಿಂಗಪ್ರಸಾದ ಸೋಂಕಿನಿಂದ ಇರುಹೆಗೆ ರುದ್ರತ್ವವಾಯಿತ್ತು.
ಲಿಂಗಪ್ರಸಾದ ಸೋಂಕಿನಿಂದ ಬಿಬ್ಬಬಾಚಯ್ಯ ಸ್ವಯಲಿಂಗವಾದ.
ಲಿಂಗಪ್ರಸಾದ ಸೋಂಕಿನಿಂದ ವಿಷವನಮೃತವ ಮಾಡಿ ಬಸವಣ್ಣ ಮೆರೆದ.
ಲಿಂಗಪ್ರಸಾದಃ ಸಂಗ್ರಾಹ್ಯಸ್ಸರ್ವದೇವಾನುಚೇಷ್ಟಿತಃ
ತೇನ ಪ್ರಸಾದಮಪ್ರಾಪ್ಯ ಭವಾನ್ಮುಕ್ತಿಃ ಕಥಂ ಭವೇತ್
ಇದು ಕಾರಣ ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಸಾದದ ಮಹಿಮೆ
ದೇವಕ್ರಿಯೆಯ ಮೀರಿದುದನೇನೆಂಬೆ./1357
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ !
ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ !
ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ;
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ.
ಅಅದೆಂತೆಂದಡೆ:
ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ
ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ,
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ/1358
ಲಿಂಗಪ್ರಸಾದವನುಂಬರೆ ಎಂಜಲೆಂಬರು, ಲಿಂಗವನೆಂತೊಲಿಸುವರು?
ತನುಭಾವವೆಂಜಲಾದರೇನು, ಪ್ರಸಾದವನೆಂಜಲೆಂತೆನಬಹುದು?
ಜನ್ಮವುಂಟೆಂಬರು ಪಾವನವಿಡಿದು, ಮುನ್ನೊಂದು ಮೃಗದ ಮುಖದಲ್ಲಿ!
ಅನ್ಯರಿಗುಂಟೆ ಶಿವಪಥವು? ಮನ್ನಿಸಲೇಕೆ ಒಲ್ಲೆನಯ್ಯಾ.
ಶ್ವಪಚ್ಯೋಪಿ ಶಿವಭಕ್ತಾನಾಂ ಲಿಂಗಾರ್ಚನಪರಃ ಪದಂ
ಅನ್ಯದೇವಂ ತು ಜಿಹ್ವಾಗ್ರೇ ಪರಜನ್ಮವಿಮೋಕ್ಷಣಂ
ಪರಬ್ರಹ್ಮ ವೇದಶಾಸ್ತ್ರೇಭ್ಯೋ ಶಿವಶಾಸ್ತ್ರಂತು ಶಾಂಕರಿ
ಎಂದುದಾಗಿ, ಕರ್ಮಾದಿಗುಣಂಗಳಂ
ಕಳೆವ ಸಾಮಥ್ರ್ಯವೆನ್ನ ಲಿಂಗಕ್ಕಲ್ಲದೆ ಬೇರುಂಟೆ?
ಇಂತೆಂದುದು ದೃಷ್ಟ. ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ./1359
ಲಿಂಗಪ್ರಸಾದಿಗಳೆಂಬರು ಬಲ್ಲರೆ ನೀವು ಹೇಳರೋ!
ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ಸದ್ಭಕ್ತರು
ತಮ್ಮ ಲಿಂಗಕ್ಕೆ ಗುರುಮಂತ್ರೋಪದೇಶದಿಂದ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಸಕಲ ಪದಾರ್ಥವೆಲ್ಲವ ಪ್ರಮಾಣಿನಲ್ಲಿ ಭರಿತವಾಗಿ ಗಡಣಿಸಿ,
ತನು ಕರಗಿ ಮನ ಕರಗಿ ನಿರ್ವಾಹ ನಿಷ್ಪತ್ತಿಯಲಿ ಗಟ್ಟಿಗೊಂಡು
ತಟ್ಟುವ ಮುಟ್ಟುವ ಭೇದದಲ್ಲಿಯೇ ಚಿತ್ತವಾಗಿ ಲಿಂಗಾರ್ಪಿತವ ಮಾಡೂದು
ಆ ಪ್ರಸಾದವ ತನ್ನ ಪಂಚೇಂದ್ರಿಯ ಸಪ್ತಧಾತು ತೃಪ್ತವಾಗಿ ಭೋಗಿಸೂದು.
ಲಿಂಗಪ್ರಸಾದ ಗ್ರಾಹಕನ ಪರಿಯಿದು,
ಕೊಡಲಚೆನ್ನಸಂಗಮದೇವಾ./1360
ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ
ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೆ ಸದಾಚಾರವಲ್ಲದೆ,
ವಾರ ತಿಥಿ ಸುಮುಹೂರ್ತವೆಂಬ ಲಾಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯಾ ಕೂಡಲಚೆನ್ನಸಂಗಮದೇವಾ/1361
ಲಿಂಗಭಾಜನದಲ್ಲಿ ಸಹಭೋಜನವ ಮಾಡಿಹೆವೆಂದೆಂಬರು,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವವರ ನೋಡಿರೇ.
ಲಿಂಗವಂತರೆಲ್ಲಾ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆಸೆವುಳ್ಳನ್ನಕ್ಕ
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ ?
ಹಸಿವು ತೃಷೆ ನಿದ್ರೆ ಆಲಸ್ಯ ವ್ಯಸನವುಳ್ಳನ್ನಕ್ಕ,
(ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ ?)
ಗುರುಲಿಂಗಜಂಗಮತ್ರಿವಿಧಸಂಪನ್ನತೆವುಳ್ಳನ್ನಕ್ಕ,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವಜ್ಞಾನಿಗಳು
ತಾವೇ ಲಿಂಗವೆಂಬರು, ಲಿಂಗವೇ ತಾವೆಂಬರು.
ತಾವೆ ಲಿಂಗವಾದರೆ ಜನನ ಮರಣ ರುಜೆ ತಾಗು ನಿರೋಧವಿಲ್ಲದಿರಬೇಡಾ?
ಮಹಾಜ್ಞಾನವ ಬಲ್ಲೆವೆಂದು ತಮ್ಮ ಭಾಜನದಲ್ಲಿ ಲಿಂಗಕ್ಕೆ ನೀಡುವ
ಪಾತಕರ ತೋರದಿರು ಕೂಡಲಚೆನ್ನಸಂಗಮದೇವಾ. /1362
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಅಜ್ಞಾನಿಗಳು
ತಾವೆ ಲಿಂಗವೆಂದೆಂಬರು.
ತಾವೆ ಲಿಂಗವಾದಡೆ ಜನನ ಸ್ಥಿತಿ ಮರಣ ರುಜೆ ಸಂಸಾರಬಂಧನವಿಲ್ಲದಿರಬೇಕು.
ಮಹಾಜ್ಞಾನವ ಬಲ್ಲೆವೆಂದು,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪಾತಕರ
ಎನಗೊಮ್ಮೆ ತೋರದಿರಾ, ಕೂಡಲಚೆನ್ನಸಂಗಮದೇವಾ/1363
ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ ಶರಣ,
ಪ್ರಸಾದಭೋಗೋಪಭೋಗದಲ್ಲಿ ಆಪ್ಯಾಯನ ಶರಣ,
ಅನಪ್ಯಾಯನಪ್ರಸಾದಿ ಕುಳಾಕುಳರಹಿತನು.
ಕ್ರೀ ಹಿಂದಾದ, ಲಿಂಗ ಮುಂದಾದ ಪ್ರಸಾದಿ.
ಪ್ರಸಾದಕ್ಕೆ ತಾನವಗ್ರಾಹಿ, ಪ್ರಸಾದಿ ತನಗವಗ್ರಾಹಕನು.
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ./1364
ಲಿಂಗಮಧ್ಯದೊಳಗೆ ಜಗವಿದ್ದಡೇನು ?
ಜಗವ ಹೊರಗಿಕ್ಕಿ ಲಿಂಗವನೊಳಗಿಟ್ಟುಕೊಂಬ ಆ ಘನಕ್ಕೆ ಶರಣೆಂಬೆನು.
ಆ ಮಹಾಘನವಾಯತಕ್ಕೊಳಗು, ಪ್ರಳಯಕ್ಕೆ ಹೊರಗು
ಕೂಡಲಚೆನ್ನಸಂಗಾ ನಿಮ್ಮ ಶರಣರು.
ಅಲ್ಲಮಪ್ರಭುದೇವರು/1365
ಲಿಂಗಮುಖದಿಂದ ಬಂದುದು ಶುದ್ಧ ಪ್ರಸಾದ
ಜಂಗಮಮುಖದಿಂದ ಬಂದುದು ಸಿದ್ಧಪ್ರಸಾದ
ಗುರುಮುಖದಿಂದ ಬಂದುದು ಪ್ರಸಿದ್ಧಪ್ರಸಾದ.
ಅದೆಂತೆಂದಡೆ:
ಲಿಂಗಂಚ ಇಷ್ಟರೂಪಂತು ಜಂಗಮಪ್ರಾಣಲಿಂಗಕಂ
ಭಾವಲಿಂಗಂ ಗುರೋರ್ಲಿಂಗಂ ತ್ರಿವಿಧಂಚೇಕಮುಚ್ಯತೇ
ಶುದ್ಧಂ ಲಿಂಗಮುಖಂ ತ್ಯಕ್ತ್ವಾ ಸಿದ್ಧಂ ಚರವಿಸರ್ಜಿತಃ
ಪ್ರಸಿದ್ಧಂ ಚ ಗುರೋರ್ಭುಕ್ತಂ ಇತ್ಯೇತತ್ರಿವಿಧಂ ಸ್ಮೃತಂ
ಎಂದುದಾಗಿ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದತ್ರಯದಲ್ಲಿ ಅವಧಾನಿ
ಕೂಡಲಚೆನ್ನಸಂಗಾ ನಿಮ್ಮ ಶರಣ/1366
ಲಿಂಗಮುಖವರಿದಂಗೆ ಅಂಗವೆಂಬುದಿಲ್ಲ,
ಜಂಗಮಮುಖವರಿದಂಗೆ ಸಂಸಾರವೆಂಬುದಿಲ್ಲ,
ಪ್ರಸಾದಮುಖವರಿದಂಗೆ ಇಹಪರವೆಂಬುದಿಲ್ಲ
ಈ ತ್ರಿವಿಧವೊಂದೆಂದರಿದಂಗೆ ಮುಂದೇನೂ ಇಲ್ಲ,
ಈ ತ್ರಿವಿಧದ ನೆಲೆಯ ಶ್ರುತಿಸ್ಮೃತಿಗಳರಿಯವು,
ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ./1367
ಲಿಂಗಮುಖವು ಜಂಗಮವೆಂದುದಾಗಿ,
ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತು
ತತ್ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆ
ಅದು ಅಶನವೆಂಬೆ, ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ,
`ಸಾಶನಾನಶನೇ ಬಿ’ ಎಂದುದಾಗಿ.
ಇಂತೀ ಅಶನ ಅನಶನಗಳ ಭೇದವನರಿಯದೆ
ತನುವ ದಂಡಿಸದೆ ಮನವ ಖಂಡಿಸದೆ
ತನಗಾಗಿ ಜನವ ಮೋಸಂಗೈದು ತಂದು
ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು,
ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ.
ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನು
ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?/1368
ಲಿಂಗಮೂರ್ತಿಯನು ನಿತ್ಯವೂ
ಮೂರು ಬಾರಿ ತಪ್ಪದರ್ಚಿಸುವುದುತ್ತಮ,
ಎರಡು ವೇಳೆ ಅರ್ಚಿಸುವುದು ಮಧ್ಯಮ,
ಒಂದು ಸಲ ಪೂಜಿಸುವುದು ಕನಿಷ್ಠ.
ಈ ತ್ರಿವಿಧನವನರಿಯದೆ ಭಕ್ತರಾದೆವೆಂದು ಯಕ್ತಿಗೆಟ್ಟು ನುಡಿದಡೆ
ಮುಕ್ತಿಯನೀವನೆ ನಮ್ಮ ಕೂಡಲಚೆನ್ನಸಂಗಮದೇವ ?/1369
ಲಿಂಗಲಕ್ಷಣವಂತ ಬಸವಣ್ಣ, ಲಿಂಗಸಿರಿವಂತ ಬಸವಣ್ಣ,
ಲಿಂಗಸಾಭಾಗ್ಯವಂತ ಬಸವಣ್ಣ.
ಜಂಗಮಲಕ್ಷಣವಂತ ಬಸವಣ್ಣ, ಜಂಗಮಸಿರಿವಂತ ಬಸವಣ್ಣ,
ಜಂಗಮಸಾಭಾಗ್ಯವಂತ ಬಸವಣ್ಣ.
ಪ್ರಸಾದಲಕ್ಷಣವಂತ ಬಸವಣ್ಣ, ಪ್ರಸಾದಸಿರಿವಂತ ಬಸವಣ್ಣ
ಪ್ರಸಾದಸಾಭಾಗ್ಯವಂತ ಬಸವಣ್ಣ.
ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿದ್ದೆನು/1370
ಲಿಂಗವ ಕಟ್ಟಿ ಸುಳಿವಾತ ಜಂಗಮವಲ್ಲ,
ಆ ಜಂಗಮಕ್ಕೆ ಮಾಡುವಾತ ಭಕ್ತನಲ್ಲ.
ಉಭಯ ಕುಳವಳಿದಾತ ಜಂಗಮ.
ಆ ಜಂಗಮಕ್ಕೆ ಮಾಡುವರೆ ಭಕ್ತ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಉಭಯಕುಳವಳಿದ ಭಕ್ತಜಂಗಮವಪೂರ್ವ. /1371
ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ ಎಂಬಿರಿ.
ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ !
ಕೊಂಬುದು ಪಾದೋದಕ ಪ್ರಸಾದ, ಕಳಚುವುದು ಮಲಮೂತ್ರ.
ಅಂಗ ಸೋಂಕಿದ ಪಾದೋದಕಕ್ಕೀ ವಿದಿ
ಕೂಡಲಚೆನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇರೆ./1372
ಲಿಂಗವಂತನ ಲಿಂಗವೆಂಬುದೆ ಶೀಲ.
ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ.
ಲಿಂಗವಂತನ ಅರ್ಥ-ಪ್ರಾಣ-ಅಬಿಮಾನಕ್ಕೆ ತಪ್ಪದಿಪ್ಪುದೆ ಶೀಲ.
ಲಿಂಗವಂತನ ಪಾದೋದಕ-ಪ್ರಸಾದಸೇವೆಯ ಮಾಡುವುದೆ ಶೀಲ.
ಇಂತಪ್ಪ ಶೀಲವೇ ಶೀಲ.
ಉಳಿದ ಶೀಲಕ್ಕೆ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
ಸಿದ್ಧರಾಮೇಶ್ವರ
ಬಸವಾ ಬಸವಾ ಎಂಬ ಶಬ್ದವಡಗಿತ್ತು.
ಬಸವಾ ಬಸವಾ ಎಂಬ ಕಂಬ ಮುರಿಯಿತ್ತು.
ಬಸವಾ ಬಸವಾ ಎಂಬ ಮಾಟ ನಷ್ಟವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ. || /1373
ಲಿಂಗವನರಿದೆನೆಂದರೆ ಮನವಿಲ್ಲದಿರಬೇಕು.
ಜಂಗಮವನರಿದೆನೆಂದರೆ ಧನವಿಲ್ಲದಿರಬೇಕು.
ಪ್ರಸಾದವನರಿದೆನೆಂದರೆ ರುಚಿಯಿಲ್ಲದಿರಬೇಕು.
ತ್ರಿವಿಧವನರಿದೆನೆಂದರೆ ತಾನಿಲ್ಲದಿರಬೇಕು.
ಕೂಡಲಚೆನ್ನಸಂಗಮದೇವಾ. /1374
ಲಿಂಗವನರಿವಡೆ ಮನ ನಿಚ್ಚಣಿಕೆ,
ಜಂಗಮವನರಿವಡೆ ಧನ ನಿಚ್ಚಣಿಕೆ,
ಪ್ರಸಾದವನರಿವಡೆ ತನು ನಿಚ್ಚಣಿಕೆ,
ಈ ತ್ರಿವಿಧವನರಿವಡೆ ತ್ರಿವಿಧ ನಿಚ್ಚಣಿಕೆ,
ಇದು ಕಾರಣ ಕೂಡಲಚೆನ್ನಸಂಗನ
ಶರಣಂಗಲ್ಲದಿಲ್ಲವೀ ಸಂಪತ್ತು. /1375
ಲಿಂಗವನು ಭವಿಯೆಂಬೆ, ಜಂಗಮನು ಭವಿಯೆಂಬೆ,
ಪ್ರಸಾದವನು ಭವಿಯೆಂಬೆ, ಅದೇನು ಕಾರಣ ಭವಿಯೆಂಬೆ?
ಈ ತ್ರಿವಿಧಕ್ಕೆ ಹಸ್ತಮಸ್ತಕ ಸಂಯೋಗವಿಲ್ಲದ ಕಾರಣ ಭವಿಯೆಂಬೆ.
ಇದು ಕಾರಣ ಈ ತ್ರಿವಿಧವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ./1376
ಲಿಂಗವಲ್ಲದೆ ಎನ್ನ ಮನಕ್ಕೆ ಸಮನಿಸದು, ಸಮನಿಸದು.
ಜಂಗಮವಲ್ಲದೆ ಎನ್ನ ಧನಕ್ಕೆ ಸಮನಿಸದು, ಸಮನಿಸದು.
ಪ್ರಸಾದವಲ್ಲದೆ ಎನ್ನ ತನುವಿಗೆ ಸಮನಿಸದು, ಸಮನಿಸದು.
ಕೂಡಲಚೆನ್ನಸಂಗಯ್ಯಾ, ಇದು ಸತ್ಯ ನೋಡಯ್ಯಾ,
ಸಕಳೇಂದ್ರಿಯಂಗಳು ಅನ್ಯಸಂಗಕ್ಕೆ ಸಮನಿಸವು, ಸಮನಿಸವು /1377
ಲಿಂಗವಿಡಿದು ಲಿಂಗಮಾಹೇಶ್ವರನೆನಿಸಿಕೊಂಬುದಯ್ಯಾ,
ಲಿಂಗವಿಡಿದು ಲಿಂಗೈಕ್ಯನೆನಿಸಿಕೊಂಬುದಯ್ಯಾ,
ಲಿಂಗವಿಡಿದು ಲಿಂಗಪ್ರಾಣಿಯೆನಿಸಿಕೊಂಬುದಯ್ಯಾ.
ಅರಿವರತು ಕ್ರಿಯಾನುಭಾವವಿಡಿದು ಮೀರಿ
ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗೈಕ್ಯನೆನಿಸಿಕೊಂಬುದಯ್ಯ /1378
ಲಿಂಗವಿದ್ದ ಕಾಯದಲ್ಲಿ ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಆಸೆ ರೋಷ ಹರುಷವಿಲ್ಲ,
ಮನ ಬುದ್ಧಿ ಚಿತ್ತಹಂಕಾರ ಮಾಯಾಪಾಶಬದ್ದನಲ್ಲ, ಮಾಯಾ ಶರೀರಿಯಲ್ಲ.
ಕಾಮನೆಸಲಮ್ಮ, ಮಾಯೆ ಕೈಗೆಯ್ಯಲಮ್ಮದು.
ಲಿಂಗಾನುಶರೀರಿಯಾಗಿದ್ದ ಕಾಯದ ಚರಿತ್ರವೆಂತೆಂದರೆ:
ಲಿಂಗದಂತೆ ನಡೆವುದು, ಲಿಂಗದಂತೆ ನುಡಿವುದು,
ಲಿಂಗಜಂಗಮದೊಳಗೆ ಬೆಳೆದನುಭಾವವ ಮಾಡೂದು.
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರುಶನದಲ್ಲಿ
ಲಿಂಗ ಸಮುಚ್ಚಯವಾಗಿ ಸನ್ನಹಿತ ಪ್ರಸಾದಿ.
ಇದು ಕಾರಣ, ಹೊನ್ನಿನಲ್ಲಿ ಹೆಣ್ಣಿನಲ್ಲಿ ಆಶ್ರಿತನಲ್ಲ.
ಭಕ್ತಿಸಾರಾಯವಾಗಿ ಬಂದುದನೆ ಕೊಂಬನು
ಅನ್ಯಸಾರಾಯ ಲಿಂಗಾರ್ಪಿತಕ್ಕೆ ಸಲ್ಲದಾಗಿ.
ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣ ಭಕ್ತಿಸಾರಾಯನಿವಾಸಿಯಾಗಿರ್ಪನು./1379
ಲಿಂಗವಿಲ್ಲದ ಜಂಗಮವೆಲ್ಲಿಯದೊ ?
ಜಂಗಮವಿಲ್ಲದ ಲಿಂಗವೆಲ್ಲಿಯದೊ ?
ಉರಿಯಿಲ್ಲದ ಅಗ್ನಿ ದಹಿಸಬಹುದೆ ?
ವಿಷವಿಲ್ಲದ ಸರ್ಪ ಕಡಿಯಬಹುದೆ ?
ನಿಮ್ಮ ಶರಣರ ಅನುಭಾವವಿಲ್ಲದೆ ಪ್ರಭುದೇವರ ಬೆರಸಬಹುದೆ ?
ಕೂಡಲಚೆನ್ನಸಂಗಮದೇವಾ/1380
ಲಿಂಗವಿಲ್ಲದೆ ನಡೆವನ, ಲಿಂಗವಿಲ್ಲದೆ ನುಡಿವನ, ಲಿಂಗವಿಲ್ಲದವನಂಗ ಸೂತಕ.
ಲಿಂಗಾಂಗಿ, ಲೌಕಿಕವ ಮುಟ್ಟಲಾಗದು.
ಲಿಂಗವಿಲ್ಲದೆ ಗಮಿಸಿದಡೆ ಆ ನಡೆನುಡಿ ಗೊಂಪೆ ಪಾತಕ.
ಲಿಂಗವಿಲ್ಲದೆ ನುಡಿವ ಶಬ್ದವ ಕೇಳಲಾಗದು, ಶಿವಶಿವಾ!
ಲಿಂಗವಿಲ್ಲದೆ ಉಗುಳು ನುಂಗಿದರೆ ಕಿಲ್ಬಿಷ,
ಕೂಡಲಚೆನ್ನಸಂಗಮದೇವಾ. /1381
ಲಿಂಗವೆ ಅಂತರಂಗದ ನಿರವಯವದು;
ಅಂಗವೆ ಬಹಿರಂಗದ ಸಾವಯವದು,
ಜಂಗಮವೆ ಅಂತರಂಗದ ನಿರವಯವದು,
ಬಹಿರಂಗದ ಸಾವಯವದು ಮಾಂಸದೃಷ್ಟಿ ಎಂಬ ಹೆಸರು ನೋಡಾ
ಅಂತರಂಗ ಬಹಿರಂಗ ಈ ಉಭಯ ಒಂದಾದಡೆ
ಅದು ಅಭೇದ್ಯ, ಕೂಡಲಚೆನ್ನಸಂಗಾ, ನಿಮ್ಮಲ್ಲಿ/1382
ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು ನಂಬಿದಲ್ಲಿ
ಹೊರೆ ಹುಟ್ಟಿದ ಬಳಿಕ,
ಹಾಲ ಹರವಿಯೊಳಗೆ ಹುಳಿ ಹೊಕ್ಕಂತೆ ನೋಡಯ್ಯಾ !
ಅಂಗದ ಮೇಲೆ ಲಿಂಗವುಳ್ಳುದೆಲ್ಲ ಸಂಗಮನಾಥದೇವರೆಂದು ನಂಬಿದ ನಂಬುಗೆಯು
ಬಂದ ಶರಣರ ನಿಲವನರಿಯದಿದ್ದಲ್ಲಿ ತಪ್ಪಿತ್ತು ನೋಡಾ ಗುರುವೆ.
ಸಂಗಮನಾಥ ಅಂಗವಿಡಿದು ಮನೆಗೆ ನಡೆದು ಬಂದಡೆ
ದಿಮ್ಮನೆ ಇದಿರೆದ್ದು ವಂದಿಸಬೇಕು ನೋಡಯ್ಯಾ.
ಕೂಡಲಚೆನ್ನಸಂಗನ ಶರಣ ಪ್ರಭುದೇವರು, ಸಿದ್ಧರಾಮಯ್ಯದೇವರು
ಬಂದು ಬಾಗಿಲೊಳಗಿರಲು
ಕಣ್ಣರಿಯದಿದ್ದರೂ ಕರುಳರಿಯಬೇಡವೆ ಸಂಗನಬಸವಣ್ಣಾ ?/1383
ಲಿಂಗವೆ ಪ್ರಾಣವಾಯಿತ್ತಾಗಿ ಆಚಾರವಿಲ್ಲಯ್ಯಾ,
ಪ್ರಸಾದವೆ ಕಾಯವಾಯಿತ್ತಾಗಿ ರಜ ತಮ ಸತ್ವ ಕ್ರೋಧವಿಲ್ಲಯ್ಯಾ.
ಜಂಗಮಮುಖ ಲಿಂಗವಾದ ಕಾರಣ
ಲಿಂಗದಲನುಭಾವಿಸಿ ನೋಡುತ್ತಿದ್ದೆನಯ್ಯಾ.
ಭಕ್ತಕಾಯ ಮಮಕಾಯವಾಗಿ ಕೂಡಲಚೆನ್ನಸಂಗನಲ್ಲಿ ಸುಖಿಯಾಗಿದ್ದೆ ನಾನಯ್ಯಾ/1384
ಲಿಂಗವೆಂದರಿದಂಗೆ ಹಿಂದಿಲ್ಲ, ಜಂಗಮವೆಂದರಿದಂಗೆ ಮುಂದಿಲ್ಲ,
ಇದೇ ಶಿವಾಚಾರ, ಇದೇ ಶಿವದೊಡಕು,
`ಆತ್ಮಾನಂ ಪ್ರಕೃತಿಂ ಚ ಭಾವಯೇತ್’ ಎಂದುದಾಗಿ,-
ಇದು ಕಾರಣ ಕೂಡಲಚೆನ್ನಸಂಗಮದೇವನು ಮುಟ್ಟಬಾರದಠಾವ ಮರೆಗೊಂಡಿಪ್ಪ. /1385
ಲಿಂಗವೆಂದು ಪೂಜಿಸಿದರೆ ಅಂಗದೊಡನೆ ಉಳಿಯಿತ್ತು.
ಅಂಗದೊಡನೆ ಉಳಿದ ಲಿಂಗವ ಹಿಂಗಿ(ಹಿಂಗದೆ?)ಪೂಜಿಸಬೇಕು.
ಹಿಂಗದ ಪೂಜೆಯನರಿದಡೆ ಪ್ರಾಣಲಿಂಗದಾಪ್ಯಾಯನವನರಿಯಬೇಕು.
ಪ್ರಾಣಲಿಂಗದಾಪ್ಯಾಯನವನರಿದಡೆ
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನೆನಿಸುವ./1386
ಲಿಂಗವೆಂಬವಂಗೆ ಲಿಂಗವಿಲ್ಲ,
ಜಂಗಮವೆಂಬವಂಗೆ ಜಂಗಮವಿಲ್ಲ.
ಪ್ರಸಾದವೆಂಬವಂಗೆ ಪ್ರಸಾದವಿಲ್ಲ.
ಲಿಂಗವೆನ್ನದವಂಗೆ ಲಿಂಗವುಂಟು,
ಜಂಗಮವೆನ್ನದವಂಗೆ ಜಂಗಮವುಂಟು,
ಪ್ರಸಾದವೆನ್ನವಂಗೆ ಪ್ರಸಾದವುಂಟು.
ಈ ತ್ರಿವಿಧಸ್ಥಳವನರಿಯಬಲ್ಲರೆ ಕೂಡಲಚೆನ್ನಸಂಗ ತಾನೇ ಉಂಟು./1387
ಲಿಂಗಸಂಗಸಾರಾಯ ಸುಸಂಗಿಗಲ್ಲದೆ ವೇದಿಸದಯ್ಯಾ.
ಲಿಂಗಾನುಭಾವಿ ಶರಣನು
ಲಿಂಗದಲ್ಲಿ ನಿರುತನಾಗಿದ್ದ ನೋಡಾ.
ಜಂಗಮಸಾಹಿತ್ಯ ಪ್ರಸಾದದಲ್ಲಿ ಭರಿತ ನೋಡಾ,
ಕೂಡೆ ಪ್ರಸಾದಿ, ಕೂಡಲಚೆನ್ನಸಂಗಾ ನಿಮ್ಮ ಶರಣ. /1388
ಲಿಂಗಸಂಬಂಧ ಸೀಮೆ ನೋಡಾ,
ಶರಣಸಂಬಂಧ ನಿಸ್ಸೀಮೆ ನೋಡಾ.
ಲಿಂಗವು ಗಮ್ಯ, ಅಗಮ್ಯ ಶರಣ ನೋಡಾ.
`ಯದ್ಭಾವಂ ತದ್ಭವತಿ’ಯೆಂಬುದಿಲ್ಲಾಗಿ.
ಆದಿಲಿಂಗ, ಅನಾದಿಶರಣ ಕೂಡಲಚೆನ್ನಸಂಗಾ/1389
ಲಿಂಗಸಾರಾಯಸುಖಸಂಗಿಗಳನುಭಾವ
ಲಿಂಗವಂತಂಗಲ್ಲದೆ ಕಾಣಬಾರದು.
ಏಕೋ ಲಿಂಗ ಪ್ರತಿಗ್ರಾಹಕನಾದರೆ, ಅನ್ಯಲಿಂಗವ ಮುಟ್ಟಲಾಗದು.
ದೃಷ್ಟಲಿಂಗವಲ್ಲದೆ ಬಹುಲಿಂಗದ ಅರ್ಪಿತ ಕಿಲ್ಬಿಷವೆಂದುದು.
ಅನರ್ಪಿತವ ಮುಟ್ಟಲಾಗದು ಲಿಂಗಸಜ್ಜನರಿಗೆ
ಅನುಭಾವದಿಂದಲ್ಲದೆ ಲಿಂಗಜಂಗಮ ಪ್ರಸಾದವರಿಯಬಾರದು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣಸಂಬಂಧವಪೂರ್ವ. /1390
ಲಿಂಗಸಾಹಿತ್ಯ ಮಡಿವಾಳ, ಜಂಗಮಸಾಹಿತ್ಯ ಬಸವಣ್ಣ,
ಇವರಿಬ್ಬರ ಪ್ರಸಾದಸಾಹಿತ್ಯ ನಾನೇ ಕೂಡಲಚೆನ್ನಸಂಗಯ್ಯಾ. /1391
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವನರಿದಿಹೆವೆಂದರೆ ಮತ್ತಾರಿಗೂ ಆಗದು.
ಸಾದಿಸುವ ಸಾಧಕಂಗಲ್ಲದೆ ಮತ್ತಾರಿಗೂ ಆಗದು.
ಭೇದಿಸುವ ಭೇದಕಂಗಲ್ಲದೆ ಮತ್ತಾರಿಗೂ ಆಗದು.
ಪ್ರಸಾದಿಯ ಪ್ರಸಾದ ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು. /1392
ಲಿಂಗಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ,
ಜಂಗಮಸ್ಥಲ ನಾಸ್ತಿಯಾದಲ್ಲದೆ ಶರಣನಲ್ಲ,
ಗುರುಸ್ಥಲ, ನಾಸ್ತಿಯಾದಲ್ಲದೆ ಐಕ್ಯನಲ್ಲ.
ಇದು ಕಾರಣ ಕೂಡಲಚೆನ್ನಸಂಗಮದೇವಾ,
ಈ ತ್ರಿವಿಧನಾಸ್ತಿಯಾಗಿ ಭಕ್ತಿ ಕೆಟ್ಟು
ಭವಿಯಾದಲ್ಲದೆ ಲಿಂಗೈಕ್ಯನಲ್ಲ. /1393
ಲಿಂಗಸ್ಥಲ ಲಿಂಗಸ್ಥಲದಲ್ಲಿಯೇ ನಿಂದುದು,
ಜಂಗಮಸ್ಥಲ ಜಂಗಮಸ್ಥಲದಲ್ಲಿಯೇ ನಿಂದುದು,
ಪ್ರಸಾದಸ್ಥಲ ಪ್ರಸಾದಸ್ಥಲದಲ್ಲಿಯೇ ನಿಂದುದು,
ಈ ತ್ರಿವಿಧಸ್ಥಲ ತ್ರಿವಿಧದಲ್ಲಿಯೇ ನಿಂದುದು,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ. /1394
ಲಿಂಗಸ್ಥಲವಿಲ್ಲದವರ ಭಕ್ತರೆಂಬೆ,
ಗುರುಸ್ಥಲವಿಲ್ಲದವರ ಪ್ರಸಾದಿಗಳೆಂಬೆ (ಶಿಷ್ಯರೆಂಬೆ?),
ಪ್ರಸಾದಿಸ್ಥಲವಿಲ್ಲದವರ ಜಂಗಮವೆಂಬೆ,
ಈ ತ್ರಿವಿಧಸ್ಥಲವಿಲ್ಲದವರ ಶರಣರೆಂಬೆ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಭವಿಸಹಿತವಾಗಿದ್ದಾತನ ಲಿಂಗೈಕ್ಯನೆಂಬೆ. /1395
ಲಿಂಗಸ್ಥಲವೆಂಬೆನೆ ? ಲಿಂಗಕ್ಕೆ ನೆಲೆಯಿಲ್ಲ.
ಜಂಗಮಸ್ಥಲವೆಂಬೆನೆ ? ಜಂಗಮಕ್ಕೆ ಜನನವಿಲ್ಲ.
ಪ್ರಸಾದಸ್ಥಲವೆಂಬೆನೆ ? ಪ್ರಸಾದಕ್ಕೆ ಪರಿಣಾಮವಿಲ್ಲ.
ಈ ತ್ರಿವಿಧವೂ ಇಲ್ಲ ಎಂಬೆನೆ ?
ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ. /1396
ಲಿಂಗಸ್ವಾಯತ ಶರಣ ಪ್ರಸಾದಸ್ವಾಯತ ಪ್ರಸಾದಿ.
ಅರ್ಪಿತವಿಡಿದುದೆ ಪಥವು, ಅನರ್ಪಿತವಿಡಿದುದೆ ಭಂಗವು.
ಅಸಂಬಂಧ ಸಂಬಂಧವಾಯಿತ್ತು,
ಕೂಡಲಚೆನ್ನಸಂಗಾ ನಿಮ್ಮಲ್ಲಿ. /1397
ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ
ಪ್ರಾಣಲಿಂಗಸಂಬಂದಿಯಲ್ಲ.
ಜಂಗಮದಲ್ಲಿ ಕುಲಸೂತಕವ ಹಿಡಿವನ್ನಕ್ಕ
ಶಿವಚಾರಯುಕ್ತನಾದ ಭಕ್ತಾನುಭಾವಿಯಲ್ಲ.
ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವನ್ನಕ್ಕ,
ಪ್ರಸಾದಿಯಲ್ಲ, ಭಕ್ತನಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ,
ಅವಂಗೆ ಲಿಂಗವಿಲ್ಲ ಕಾಣಾ ಕೂಡಲಚೆನ್ನಸಂಗಯ್ಯಾ. /1398
ಲಿಂಗಾಂಗಿಗಳೆಂಬರು ತ್ರಿಪುರಮರ್ದನವರಿಯರು.
ಲಿಂಗವಂತರೆಂಬರು ಕಾಮದಹನವ ಮಾಡಲರಿಯರು.
ಪ್ರಾಣಲಿಂಗಿಗಳೆಂಬರು ಹರಿಯ ನಷ್ಟವನರಿಯರು.
ಲಿಂಗಪ್ರಾಣಿಗಳೆಂಬರು ಬ್ರಹ್ಮನ ಕೊಲಲರಿಯರು.
ಇಂತಪ್ಪ ಶಬ್ದಸೂತಕಿಗಳ ಕಂಡು ಕೂಡಲಚೆನ್ನಸಂಗನಲ್ಲಿ
ನಾಚಿತ್ತೆನ್ನ ಮನವು. /1399
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ
ಪಂಚಾಚಾರದ ಆಚರಣೆಯೆಂತೆಂದಡೆ:
ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ
ಸತ್ಯಶುದ್ಧನಾಗಿಹುದೆ ಸದಾಚಾರ.
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ
ಅವರೊಕ್ಕುದ ಕೊಂಬುದೆ ಶಿವಚಾರ.
ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ.
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ
ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ-
ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ
ಪ್ರಭುವೆ, ಕೂಡಲಚೆನ್ನಸಂಗಮದೇವಾ. /1400
ಲಿಂಗಾಭಿಮಾನಿಗೆ ಅಂಗಾಶ್ರಯವಿಲ್ಲ ನೋಡಯ್ಯಾ,
ಬಂದುದೆ ಪರಿಣಾಮ, ನಿಂದುದೆ ನಿವಾಸ,
ಅದು ಇದು ಎಂಬುದಿಲ್ಲ ಕೂಡಲಚೆನ್ನಸಂಗನ ಶರಣಂಗೆ/1401
ಲಿಂಗಾರೋಪಿತ ಮುಖದಿಂದ ಬಂದುದು ಪಾದೋದಕ,
ಲಿಂಗಾವಧಾರಿತ ಮುಖದಿಂದ ಬಂದುದು ಲಿಂಗೋದಕ,
ಲಿಂಗಾರ್ಪಿತ ಮುಖದಿಂದ ಬಂದುದು ಪ್ರಸಾದೋದಕ,
ಪಾದೋದಂ ತ್ರಿವಿಧಂ ಆರೋಪ್ಯಂ ಚಾವಧಾರಿತಂ
ಲಿಂಗಾರ್ಪಿತಂ ಪ್ರಸಾದಂ ಚ ತಥಾ ಲಿಂಗೋದಕಂ ಭವೇತ್
ಇಂತು ಮಜ್ಜನ ಭೋಜನ ಅಬಿಮುಖದಿಂದ ತ್ರಿವಿಧೋದಕವನು
ಕೂಡಲಚೆನ್ನಸಂಗಾ ನಿಮ್ಮ ಶರಣನೇ ಬಲ್ಲ. /1402
ಲಿಂಗಾರ್ಚನೆಯ ಮಾಡಿ ಲಿಂಗಕ್ಕರ್ಪಿಸಿದ ಪ್ರಸಾದವನಲ್ಲದೆ
ಭೋಗಿಸೆನೆಂಬ ಪ್ರಸಾದಿಭಕ್ತನು,
ಅನರ್ಪಿತವ ನೆನೆವ ಪರಿಯೆಂತೊ?
ಅನರ್ಪಿತವ ನೋಡುವ ಪರಿಯೆಂತೊ?
ಅನರ್ಪಿತವ ಕೇಳುವ ಪರಿಯೆಂತೊ?
ಅನರ್ಪಿತವ ವಾಸಿಸುವ ಪರಿಯೆಂತೊ?
ಅನರ್ಪಿತವ ಮುಟ್ಟುವ ಪರಿಯೆಂತೊ?
ಅನರ್ಪಿತವ ರುಚಿಸುವ ಪರಿಯೆಂತೊ?
ಅನರ್ಪಿತ ಸುಖ-ದುಃಖಂಗಳನನುಭವಿಸುವ ಪರಿಯೆಂತೊ?
ಈ ವರ್ಮಕುಳವಾರಿಗೆಯೂ ಅರಿಯಬಾರದು,
ಕೂಡಲಚೆನ್ನಸಂಗಮದೇವರರಿದಡರಿವುದು,
ಮರೆದಡೆ ಮರೆವುದು. /1403
ಲಿಂಗಾರ್ಚನೆಯಂ ಮಾಡಿ,
ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ
ಸಹಭೋಜನವ ಮಾಡುವ ಸಮಯದಲ್ಲಿ
ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆವುದು.
ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು ಭೋಗಿಸಿದಡೆ,
ಪ್ರಸಾದ ದ್ರೋಹ.
ಪ್ರಸಾದವೆಂದು ಅರ್ಪಿತವ ಭೋಗಿಸಿ,
ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ.
ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ ಉಳುಮೆಯಲಿ
ಉಳಿದ ತಾರಕಬ್ರಹ್ಮವಯ್ಯಾ. [ಅದೇನು ಕಾರಣವೆಂದಡೆ:]
ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ ! ಆದಿಗೂ ಅನಾದಿಗೂ ನೀನೆ !
ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ !
ಕ್ರೀ ನಿಃ [ಕ್ರೀ ಗೂ ನೀನೇ]. ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ ! ದೇವ,
ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ, ಸಾಕಾರ ನಿರಾಕಾರವಾದ.
ಏಕ ಬ್ರ[ಹ್ಮ ಸಂ]ಗನ ಬಸವಣ್ಣ
ಬಿಬ್ಬಿ ಬಾಚಯ್ಯ ಮರುಳಶಂಕರದೇವರೆಂಬ ಪರಂಜ್ಯೋತಿ ಮಹಾಲಿಂಗದಲ್ಲಿ
ಏಕತೆಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ/1404
ಲಿಂಗೈಕ್ಯವಿಲ್ಲದವರನೊಲ್ಲ ಲಿಂಗಧಾರಿ.
ಲಿಂಗಾರ್ಚನೆಯ ಕಾಲದಲ್ಲಿ ಪ್ರಸಾದ ಭೋಗದ ಕಾಲದಲ್ಲಿ,
ಅಂಗದ ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ.
ಪಂಚಮಹಾಪಾತಕವೆಂದುದಾಗಿ
ಲಿಂಗೈಕ್ಯಂ ಲಿಂಗಧಾರೀಣಾಂ ಅಂಗಬಾಹ್ಯೇ ವಿದಿಯತೇ.
ಭವೀನಾಂ ಪಾಪದೃಷ್ಟೀನಾಂ ಪ್ರಚ್ಛನ್ನಪಟಮುತ್ತಮಂ
ಎಂದುದಾಗಿ-ಭವಿಮಾರ್ಗ ನೇಮಸ್ತಗುಂಟಾಗಿ
ಭವಿಯ ಸಂಗವ ಕಳೆದ ಲಿಂಗೈಕ್ಯರನಲ್ಲದೊಲ್ಲ
ಕೂಡಲಚೆನ್ನಸಂಗಯ್ಯ. /1405
ಲಿಂಗೋದಕ ಪಾದೋದಕ ಪ್ರಸಾದೋದಕವೆಂದು ತ್ರಿವಿಧ:
ಲಿಂಗೋದಕವೆಂಬುದು ಶಿವಸಂಸ್ಕಾರದಿಂದಾದುದು,
ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು,
ಪ್ರಸಾದೋದಕವೆಂಬುದು ಲಿಂಗವಾರೋಗಿಸಿದ ಬಳಿಕ ಸಿತಾಳಂಗೊಟ್ಟುದು.
ಲಿಂಗೋದಕದಲ್ಲಿ ಲಿಂಗಕ್ಕೆ ಪಾಕಪ್ರಯತ್ನ, ಮಜ್ಜನಕ್ಕೆರೆವುದು.
ಪಾದೋದಕದಲ್ಲಿ ಮುಖಪಕ್ಷಾಲನವ ಮಾಡುವುದು,
ಶಿರಸ್ಸಿನ ಮೇಲೆ ತಳಿದುಕೊಂಬುದು.
ಪ್ರಸಾದೋದಕವನಾರೋಗಿಸುವುದು- ಇಂತೀ ತ್ರಿವಿಧೋದಕ.
ದಾಸೋಹ ಷಟ್ಪ್ರಕಾರ ವರ್ತಿಸುವುದು;
ಭಕ್ತನಿಂದೆಯ ಮಾಡಲಾಗದು, ಆಚಾರನಿಂದೆಯ ಮಾಡಲಾಗದು.
ಹುಸಿಯಿಲ್ಲದಿದ್ದಡೆ ಭಕ್ತನು-
ಇಂತಿದು ಭಕ್ತಸ್ಥಲ ಕೂಡಲಚೆನ್ನಸಂಗಮದೇವಾ/1406
ಲಿಂಗೋದಯದ ಅಂಗಸುಖವು, ಅಂಗೋದಯದ ಲಿಂಗಸುಖವು,
ಎರಡಿಲ್ಲದ ಘನವನೇನೆಂಬೆನಯ್ಯಾ, ಮಿಕ್ಕುಮೀರಿನಿಂದ ನಿಲವನೇನೆಂಬೆನಯ್ಯಾ.
ಕೂಡಲಚೆನ್ನಸಂಗನ ಶರಣನನೇನೆಂಬೆನಯ್ಯಾ. /1407
ಲಿಂದಿಂದಲಿ ಗುರು, ಲಿಂಗದಿಂದಲಿ ಜಂಗಮ,
ಲಿಂಗದಿಂದಲಿ ಪಾದೋದಕ ಪ್ರಸಾದ,
ಲಿಂಗದಿಂದಲಿ ಸರ್ವವೆಲ್ಲಾ ಆಯಿತ್ತು.
(ಅವು) ನಮ್ಮ ಕರಸ್ಥಲದೊಳಗೆ ಇಲ್ಲವೆಂಬ
ಸುರಾಭುಂಜಕರ ಮಾತ ಕೇಳಲಾಗದು.
ಅದೆಂತೆಂದರೆ:
ಲಿಂಗ ಘನೆಂಬಿರಿ ಅದೆಂತು ಘನವಹುದು ?
ನಮ್ಮ ಜಂಗಮದೇವರ ಅಷ್ಟಕೋಟಿರೋಮ ಕೂಪದೊಳಗೆ,
ಒಂದು ರೋಮ ತಾ ಇಷ್ಟಲಿಂಗ.
ಇಷ್ಟಲಿಂಗವನೆ ಘನವ ಮಾಡಿ ದೃಷ್ಟಜಂಗಮವನತಿಗಳೆವ
ಭ್ರಷ್ಟಹೊಲೆಯರ ಮಾತ ಕೇಳಲಾಗದು.
ಅದೆಂತೆಂದರೆ:
ಎನ್ನ ಜಂಗಮದೇವರ ಹಾಗೆ ಪಾದಾರ್ಚನೆಯ ಮಾಡಿಸಿಕೊಂಡು
ಪಾದತೀರ್ಥ ಪ್ರಸಾದವ ಕೊಟ್ಟು ಪಾಲಿಸಬಲ್ಲುದೆ ಲಿಂಗವು ?
ಮತ್ತೆನ್ನ ಜಂಗಮದೇವರ ಹಾಗೆ
ಒಕ್ಕು ಮಿಕ್ಕುದನಿಕ್ಕಿ ಸಲಹಬಲ್ಲುದೆ ಲಿಂಗವು ?
ಮತ್ತೆನ್ನ ಜಂಗಮದೇವರ ಹಾಗೆ, ಅರ್ಥಪ್ರಾಣ ಅಬಿಮಾನವನಿತ್ತಡೆ
ಸ್ವೀಕಾರವ ಮಾಡಬಲ್ಲುದೆ ಲಿಂಗವು ?
ಲಿಂಗ ಆವುದನು ಕೊಡಲರಿಯದು
ರಾಸಿಗೆ ಅರ್ಚಿಸಿದ ಲಚ್ಚಣ ರಾಸಿಯನೊಳಕೊಂಬುದೆ, ರಾಸಿಯ ಒಡೆಯನಲ್ಲದೆ ?
ಭಕ್ತನೆಂಬ ರಾಸಿಗೆ ಲಿಂಗವೆಂಬ ಲಚ್ಚಣ
ಇದಕ್ಕೆನ್ನ ಜಂಗಮದೇವರೆ ಮುದ್ರಾದಿಪತಿ ಕಾಣಾ
ಕೂಡಲಚೆನ್ನಸಂಗಮದೇವಾ. /1408
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ,
ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ,
ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ,
ತಾಳಸಂಪುಟಕ್ಕೆ ಬಾರದ ಘನವ ?
ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ,
ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ,
ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ
ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ. /1409
ಲೋಕದ ಡೊಂಕ ನೀವು ತಿದ್ದುವಿರಯ್ಯ
ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ.
ಪುರಾತನರು, ನುಡಿದಂತೆ ನಡೆಯದವರೆಲ್ಲ,
ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ.
ನೆರೆಮನೆಯವರ ದುಃಖವ ಕೇಳಿ,
ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು
(ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ
ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ./1410
ಲೋಕದ ನುಡಿ ತನಗೆ ಡೊಂಕು,
ತನ್ನ ನುಡಿ ಲೋಕಕ್ಕೆ ಡೊಂಕು.
ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ.
ಕಪಾಲದೊಳಗೆ ಉಲುಹಡಗಿದ,
ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು. /1411
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ,
ಉದಕದ ಹೊಲೆ ಏತರಿಂದ ಹೋಹುದು?
ವಾಕು ಪ್ರಮಾಣಿನಿಂದ ಅಗ್ಛಣಿಯೆನಿಸಿತ್ತು.
ಸಾಹಿತ್ಯವರಿದು ಕೊ(ಡ)ಳಬಲ್ಲ ಚೆನ್ನನ ಪ್ರಸಾದ
ಲಿಂಗಕ್ಕೆ ಓಗರವಾಯಿತ್ತು
ಕೂಡಲಚೆನ್ನಸಂಗಮದೇವಾ./1412
ಲೋಕದೊಳಗಿಪ್ಪವರು, ಲೋಕದೊಳು ಸುಳಿವವರು, ಲೋಕದ ಹಂಗಿಗರು,
ಲಿಂಗದ ಶುದ್ಧಿಯ ತಾವೆತ್ತಬಲ್ಲರು? ಬರಿದೆ ಹೋರುವ ಭ್ರಮಿತರು.
ಇವರು, ತ್ರಿವಿಧಕ್ಕೆ ವಿರಹಿತರೆಂಬೆ ಕೂಡಲಚೆನ್ನಸಂಗಮದೇವಾ. /1413
ಲೋಕವನು ಹೊದ್ದ, ಲೌಕಿಕವ ಬೆರಸ, ಏಕಗ್ರಾಹಿ ಶರಣ,
ಲಿಂಗವ ಪೂಜಿಸಿ ಅನ್ಯವನರಿಯದ ಅಚ್ಚಲಿಂಗೈಕ್ಯ,
ಕೂಡಲಚೆನ್ನಸಂಗಾ ನಿಮ್ಮ ಶರಣ /1414
ಲೋಕವಿರಹಿತ ಶರಣ, ಶರಣವಿರಹಿತ ಲೋಕ.
ಊರ ಹೊಂದ, ಕಾಡ ಹೊಂದ, ಆಪ್ಯಾಯನ ಭುಕ್ತಿವಿರಹಿತ
ಕೂಡಲಚೆನ್ನಸಂಗಮದೇವರಲ್ಲಿ ಲಿಂಗನಿಜೈಕ್ಯನು./1415
ಲೋಕವಿರೋದಿ ಭಕ್ತ, ಭಕ್ತವಿರೋದಿ ಶರಣ,
ಶರಣವಿರೋದಿ ಲಿಂಗೈಕ್ಯ-
ಈ ತ್ರಿವಿಧವಿರೋದಿ ಕೂಡಲಚೆನ್ನಸಂಗಯ್ಯನಲ್ಲಿ
ಮಹಾಲಿಂಗೈಕ್ಯವು./1416
ಲೋಹ ಪರುಷವ ಮುಟ್ಟುವುದಲ್ಲದೆ,
ಪರುಷ ಪರುಷವ ಮುಟ್ಟುವುದೆ ಅಯ್ಯಾ ?
ಅಂಗವಿಡಿದಂಗೆ ಪ್ರಸಾದವಲ್ಲದೆ ಲಿಂಗವಿಡಿದಂಗೆ ಪ್ರಸಾದವುಂಟೆ ?
`ಅಣೋರಣೀಯಾನ್ ಮಹತೋ ಮಹೀಯಾನ್’ ಎಂದುದಾಗಿ
ಕಿರಿದಿಂಗೆ ಕಿರಿದು ಹಿರಿದಕ್ಕೆ ಹಿರಿದು, ವಾಙ್ಮನಕ್ಕಗೋಚರ.
ಕೂಡಲಚೆನ್ನಸಂಗಮದೇವ [ಕೇಳಯ್ಯಾ]
ಸ್ವರೂಪು ಪ್ರಸಾದಿ, ನಿರೂಪು ಲಿಂಗೈಕ್ಯ !/1417

ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ ಕುಳ್ಳಿರ್ದು,
ಗಳಿಗೆಗೊಮ್ಮೆ ಸುಳಿದು ಹೋದ ಕಳ್ಳನನಾರಯ್ಯಾ ಬಲ್ಲವರು ?
ಹಾರುವ ಹಂಸೆಯ ತಲೆಗಿಂಬು ಮಾಡಿದವರ
ಬಸವಣ್ಣ ಬಲ್ಲ ಕಾಣಾ ಗುಹೇಶ್ವರ. /1418
ವಚನ ಸನ್ನಿಹಿತ ತರ್ಕಕ್ಕೊಡಲು,
ಅನುಭಾವ ಸನ್ನಿಹಿತ ಬಹುಮಾ[ತಿ]ಗೊಡಲು,
ಇಂದ್ರಿಯ ಸನ್ನಿಹಿತ ವ್ಯಾಪ್ತಿಗೊಡಲು.
ಸರ್ವಾಂಗದೊಳಗಾವಂಗವಿಲ್ಲ,
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನ ಪರಿ ಬೇರೆ./1419
ವಚನರಚನೆಯ ಅನುಭಾವವ ಬಲ್ಲೆವೆಂದೆಂಬರು
ವಚನವಾವುದು ರಚನೆಯಾವುದು ಅನುಭಾವವಾವುದು ಹೇಳಿರಣ್ಣಾ ?
ವಚನ:ಆತ್ಮತುಷ್ಟಿಯನರಿವುದು.
ರಚನೆ:ಸ್ಥಾವರ ಲಿಂಗ ಜಂಗಮ ತ್ರಿವಿಧದಲ್ಲಿ ಕಾಣಬಲ್ಲರೆ.
ಅನುಭಾವ:ಕಾಮದಿಚ್ಛೆಗೆ ಹರಿದು ಮದಮಚ್ಚರವಿಲ್ಲದಿರಬೇಕು,
ಆಸೆಯಾಮಿಷ ಹರುಷದಿಚ್ಛೆಗೆ ಹರಿದು [ಯಾ]ಚಕನಾಗದಿರಬೇಕು,
ಕಾಮ ಕ್ರೋಧ ಲೋಭ ಮೋಹ ಮದ ಮಚ್ಚರ ಆಶೆಯಾಮಿಷ
ರೋಷಾದಿಗಳಂ ಹರಿವೊದೆದು,
ಏಕೋಗ್ರಾಹಿಯಾಗಿ ನಿಂದಲ್ಲೇ ಅನುಬಾವಿ.
ನಾಲ್ಕು ವೇದಶಾಸ್ತ್ರಂಗಳ ಬಲ್ಲೆವೆಂದು ನುಡಿವಾತನನುಭಾವಿಯೆ ? ಅಲ್ಲ,
ಅವು ಬ್ರಹ್ಮನೆಂಜಲು, ಇವ ಬಲ್ಲೆವೆಂದು ನುಡಿವಾತನನುಭಾವಿಯೆ ? ಅಲ್ಲ,
ಆತನು ಇದಿರ ನಂಬಿಸಿ ಉಂಬ ಭುಂಜಕನಯ್ಯಾ
ಕೂಡಲಚೆನ್ನಸಂಗಮದೇವಾ. /1420
ವಜ್ರವ ಒರಲೆ ಮುಟ್ಟುಬಲ್ಲುದೆ ಅಯ್ಯಾ ?
ಮದ್ದಿನ ಚೀಲವ ಹಾವು ಮುಟ್ಟಬಲ್ಲುದೆ ಅಯ್ಯಾ ?
ಕಿಚ್ಚಿದ್ದ ಒಲೆಯಲ್ಲಿ ಶ್ವಾನ ಮಲಗಬಲ್ಲುದೆ ಅಯ್ಯಾ ?
ಸಮುದ್ರಕ್ಕೆ ಹೋಗಿ ಸಪ್ಪೆಯ ಸಲಿಸುವರೆ ಅಯ್ಯಾ ?
ಗುರುಲಿಂಗಜಂಗಮವ ಪೂಜಿಸಿ ಬರಿ ಸಾವ ಸಾವರೆ;
ಊರ ಮುಂದಣ ಹೆಮ್ಮಾರಿಯೆ ಲೇಸೆಂದ
ಕೂಡಲಚೆನ್ನಸಂಗಮದೇವ/1421
ವಲಿತ ಪಲಿತಪ್ರಸಾದವವ್ವಾ,
ಆದಿವ್ಯಾದಿ ಪ್ರಸಾದವವ್ವಾ,
ಗಮನಾಗಮನ ಪ್ರಸಾದವವ್ವಾ; ಸ್ವಯವವ್ವಾ,
ಕೂಡಲಚೆನ್ನಸಂಗನ ಪ್ರಸಾದವವ್ವಾ !/1422
ವಸ್ತ್ರ ಬಲುಹಿನಲ್ಲಿ ಕಟ್ಟು, ಸೆಜ್ಜೆಯ ಬಲುಹಿನಲ್ಲಿ ಕಟ್ಟು.
ಶಿವದಾರವ ಬಲುಹಿನಲ್ಲಿ ಕಟ್ಟೆಂದು ಹೇಳೂದು ಉಪದೇಶವೆ ?
ಮತ್ತೆ ಕಟ್ಟುವರಿವುಂಟಾಗಿ,
ಅಷ್ಟವಿಧಾರ್ಚನೆ, ಷೋಡಶೋಪಚಾರ,
ಕಾಲನೇಮವೆಂದು ಹೇಳೂದು ದೀಕ್ಷೆಯೆ ? ಮತ್ತೆ ಕಾಲನೇಮವುಂಟಾಗಿ,
ಇದನರಿಯದೆ ಹೇಳಿದಾತ ಶಿವದ್ರೋಹಿ.
ಕೇಳಿದಾತ ಗುರುದ್ರೋಹಿ.
ಐಕ್ಯವಿಲ್ಲದ ಮಾಟ, ಸಯಿದಾನದ ಕೇಡು.
ಕೂಡಲಚೆನ್ನಸಂಗಯ್ಯಾ ಆ ಗುರುಶಿಷ್ಯರಿಬ್ಬರೂ
ಉಭಯಭ್ರಷ್ಟರು. /1423
ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ ವಿವರ:
ವಾಕು:ನುಡಿವುದು, ಪಾಣಿ:ಮಾಡುವುದು
ಪಾದ:ನಡೆವುದು, ಪಾಯು:ಸರ್ವಾಂಗದಲ್ಲಿ ಕೂಡುವುದು.
ಗುಹ್ಯ:ಸೇರಿಸುವುದು.
ಇಂತೀ ಪಂಚಕಮರ್ೆಂದ್ರಿಯಂಗಳಲ್ಲಿ ಚರಿಸದೆ ಸುಚಾರಿತ್ರದಲ್ಲಿ
ನಡೆಯಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು./1424
ವಾಙ್ಮನಕ್ಕೆ ಗೋಚರ ಲಿಂಗ, ಅಗೋಚರ ಶರಣ.
ಸಕಾಯ ಲಿಂಗ, ಅಕಾಯ ಶರಣ.
ಆದಿ ಲಿಂಗ, ಅನಾದಿ ಶರಣ:ಪೂರ್ವಿಕ ಲಿಂಗ, ಅಪೂರ್ವಿಕ ಶರಣ
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ
ಅಚ್ಚಲಿಂಗೈಕ್ಯ ಕಾಣಾ ಪ್ರಭುದೇವರು./1425
ವಾಯದ ಮಾಯದಲ್ಲಿ ಹುಟ್ಟಿದ ಕಷ್ಟದಳವನೆ ಬಿಟ್ಟು
ನಿಷ್ಠೆಯಿಂದ ನಿಮ್ಮ ಶ್ರೀಚರಣಕ್ಕೆರಗಿದೆನು.
ಪ್ರಸಾದವ ಕಾರುಣ್ಯವ ಮಾಡು ಗುರುವೆ
ಕೂಡಲಚೆನ್ನಸಂಗಮದೇವಾ. /1426
ವಾಯುಪ್ರಾಣಿಯ ಕಳೆದು, ಗುರುಸ್ವಾಮಿ
ಲಿಂಗಪ್ರಾಣಿಯ ಮಾಡಿದಠಾವನುದಾಸೀನವ ಮಾಡಿ ನಡೆವರು.
ಇದನಾನೇನೆಂದರಿಯೆನಯ್ಯಾ.
ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದನಾಗಿ
ಮುಂದೆ ಅರ್ಪಿತವೆಂಬುದನಾನರಿಯೆನಯ್ಯಾ.
ಶಿವಾತ್ಮಕಂ ಸುಖಂ ಜೀವಃ ಜೀವಾತ್ಮಕಂ ಸುಖಂ ಶಿವಃ
ಶಿವಾತ್ಮನಾಪಿ ಸಂತುಷ್ಟಂ ಪ್ರಾಣಲಿಂಗಪ್ರಸಾದಿನಾಂ
ಇಂತೆಂಬ ವಚನವ ಕೇಳಿ ನಂಬೂದು.
ನಂಬದಿದ್ದರೆ ಪ್ರಾಣಲಿಂಗವೆಂಬ ಶಬ್ದಕ್ಕೆ ಭಂಗ ಹೊದ್ದಿತ್ತು.
ಕೂಡಲಚೆನ್ನಸಂಗಮದೇವಾ/1427
ವಾಯುವಶದಿಂದ ತರುಗಳಲ್ಲಾಡುವವು,
ಭರತವಶದಿಂದ ಮೃದಂಗಾದಿಯಾದ ಪಟಹ ನುಡಿವವು,
ಕೂಡಲಚೆನ್ನಸಂಗಯ್ಯಾ, ಲಿಂಗವಶದಿಂದ ಶರಣ ಮಾತಾಡುವ. /1428
ವಾರವೇಳು ಕುಲ ಹದಿನೆಂಟು ಎಂಬರಯ್ಯಾ
ಅದ ನಾವು ಅಲ್ಲವೆಂಬೆವು.
ಇರುಳೊಂದು ವಾರ ಹಗಲೊಂದು ವಾರ,
ಭವಿಯೊಂದು ಕುಲ, ಭಕ್ತನೊಂದು ಕುಲ,
ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವಾ/1429
ವಾಸಿಸುವ ನಾಸಿಕ ನೀನೆಂದರಿದೆ, ರುಚಿಸುವ ಜಿಹ್ವೆ ನೀನೆಂದರಿದೆ,
ನೋಡುವ ನಯನ ನೀನೆಂದರಿದೆ, ಮುಟ್ಟುವ ತ್ವಕ್ಕು ನೀನೆಂದರಿದೆ,
ಕೇಳುವ ಶ್ರೋತ್ರ ನೀನೆಂದರಿದೆ- ಇದು ಕಾರಣ
ಕೂಡಲಚೆನ್ನಸಂಗಯ್ಯಾ,
ನಾ ನಿಮ್ಮ ಬೇಡಲಿಲ್ಲಾಗಿ ಕೂರ್ತು ಕೊಡಲಿಲ್ಲ/1430
ವಿನಾಶದೇಶದ, ವಿನಾಶ ವಿನೋದದ, ಭಾವದ ಉತುಕುಟದ,
ಶರೀರಂಗಳ ಹೊರೆಯಲ್ಲಿ ಮೋಹಿತವಿಲ್ಲದ ಪ್ರಸಾದಿ.
ಕರಕಾಲ ಸನ್ನಿದಿಯಲ್ಲಿ, ಸತ್ಪುರುಷರ ಸನ್ನಿದಿಯಲ್ಲಿ. ಭೇದವಿಲ್ಲದೆ ಬೆಳೆದ ಪ್ರಸಾದಿ,
ರಾಗದ್ವೇಷಂಗಳ ಶಬ್ದವಿಲ್ಲದ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸದಾಸನ್ನಹಿತವಾದ ಪ್ರಸಾದಿ. /1431
ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ,
ಅದು ವಿಭೂತಿ ಅಹುದೊ ಅಲ್ಲೊ ಎಂಬ ಕ್ರಮವನರಿಯಬೇಕಲ್ಲದೆ ?
ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ ?
ನಿಃಕ್ರಿಯ ನಿಃಕಾಮ್ಯ ನಿರುಪಾದಿಕದಿಂದ
ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ.
ಅದಕ್ಕಂಜುವುದು, ಬೆಚ್ಚುವುದು, ಅದಕ್ಕೆ ತಪ್ಪಿದಡೆ ತಪ್ಪಿದುದು,
ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು.
ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು
ಧನದುಪಾದಿಕೆಗೆ ಅಹುದನಲ್ಲವ ಮಾಡಿ, ಕುಚೇಷ್ಟೆವಿಡಿದು ಚರಿಸುವುದು
ವಿಭೂತಿಯೆ ? ಅಲ್ಲ. ಅದಕಂಜಲಿಲ್ಲ ಬೆಚ್ಚಲಿಲ್ಲ.
ಅದೇನು ಕಾರಣವೆಂದೆಡೆ- ವಿಭೂತಿಯಲ್ಲಾಗಿ.
ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ
ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ ? /1432
ವಿಶ್ವವೆಲ್ಲವೂ ಮಾಯೆಯ ವಶವಾಗಿ,
ವಿಶ್ವದೊಳಗಾದ ದ್ರವ್ಯವ ಮಾಯೋಚ್ಛಿಷ್ಟವೆಂದು ಶಿವನೊಲ್ಲ.
ಅಂತಪ್ಪ ಮಾಯೆಯ ಗೆಲಿದು,
ಮಾಯಾತೀತರಾದ ಭಕ್ತರಿಂದೊದಗಿದ ಪ್ರಸಾದ,
ಮಾಯಾತೀತನಾದ ಶಿವಂಗೆ ಮಹಾನೈವೇದ್ಯ,
ಪರಮತೃಪ್ತಿ ಎಂಬುದ ನಾ ಬಲ್ಲೆನಯ್ಯಾ.
ಅದೆಂತೆಂದಡೆ:
ಮಾಯೋಚ್ಛಿಷ್ಟಂ ಜಗತ್ಸರ್ವಂ ಶುದ್ಧಂ ಪಂಚಾಕ್ಷರೇಣ ಚ
ಅಬಿಮಂತ್ರ್ಯ ತದುಚ್ಛಿಷ್ಟಂ ಪದಾರ್ಥಂ ಭಕ್ತಿಮಾನ್ನರಃ
ಚರಲಿಂಗೇ ವಿಚಾರೇಣ ಸಮರ್ಪ್ಯ ತದನಂತರಂ
ಸ್ವಲಿಂಗೇ ಚ ಪ್ರಸಾದಾನ್ನಂ ದತ್ವಾ ಭೋಜನಮಾಚರೇತ್ ಎಂದುದಾಗಿ
ಚೆನ್ನಯ್ಯನುಂಡು ಮಿಕ್ಕುದ ಚಪ್ಪರಿದು ಸವಿದ,
ಚೋಳಿಯಕ್ಕನೊಕ್ಕುದ ಕೊಂಡ.
ಇದು ಕಾರಣ- ನಿಮ್ಮ ಪರಮಕಲಾರೂಪವಾದ
ಜಂಗಮದ ಪ್ರಸಾದವ ನಿಮಗೆ ದಣಿಯಿತ್ತು
ನಿಮ್ಮ ಪ್ರಸಾದವೆಂಬ ಜ್ಯೋತಿ
ಎನ್ನಂಗ-ಪ್ರಾಣ-ಭಾವ-ಜ್ಞಾನ ಹಿಂಗದೆ ಬೆಳಗುತ್ತಿದೆ,
ನೋಡಾ ಕೂಡಲಚೆನ್ನಸಂಗಮದೇವಾ/1433
ವಿಷದಷ್ಟವಾದ ನರನ, ಗಾರುಡಮಂತ್ರೌಷಧದಿಂದ
ಆರೋಗ್ಯಕಾಯನ ಮಾಡುವಂತೆ,
ಶೈವಗುರುವಿನ ಕೈಯಲ್ಲಿ ಮಂತ್ರೋಪದಿಷ್ಟನಾದ ಶಿಷ್ಯಂಗೆ,
ವೀರಶೈವದ ಮಂತ್ರೋಪದೇಶದಿಂದ
ಆತನ ಕಾಯಶುದ್ಧನ ಮಾಡಿ
ಆತನ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ತುಂಬಿ
ಆತನ ಅಂಗದ ಮೇಲೆ ಲಿಂಗವ ಬಿಜಯಂಗೈಸಿ
ಕೃತಕೃತ್ಯನಂ ಮಾಡಿದ ನಮ್ಮ ವೀರಶೈವಗುರು,
ಕೂಡಲಚೆನ್ನಸಂಗಮದೇವ/1434
ವಿಷಯಾಬಿಲಾಷೆಯಲ್ಲಿ ವಿರಾಗವು ನೆಲೆಯಾಗಿ,
ಅಷ್ಟಾವರಣದ ಆಚಾರವೆ ಅಂಗವಾದಡೆ;
ಮರುಳುಗೊಳಿಪ ಮಾರನ ಮಾಟವು ದೂರವಾಗುವುದಯ್ಯಾ.
ಅನಾಹತಶಬ್ದದ ಅನುಸಂಧಾನದಿಂದ, ಅವಸ್ಥಾತ್ರಯದಲ್ಲಿ ತೋರುವ
ತನು ಮೂರರ ವಾಸನೆಯು ನಾಶವಾಗುವುದಯ್ಯಾ.
ಇಷ್ಟಲಿಂಗದಲ್ಲಿಟ್ಟ ದೃಷ್ಟಿ, ಬಿಂದುವಿನ ಪರಿಪರಿಯ ಬಣ್ಣವ
ನೋಡಿ ನೋಡಿ ದಣಿದು, ಶಿವಕಲಾರೂಪದಲ್ಲಿ ವ್ಯಾಪಿಸಿ,
ಕಂಗಳ ಎವೆ ಮಾಟವಿಲ್ಲದೆ ಲಿಂಗಲಕ್ಷ್ಯವು ಕದಲಂತಿದ್ದಡೆ
ಕಾಲನ ಕಾಟವು ತೊಲಗಿ ಹೋಗುವುದಯ್ಯಾ.
ಇಂತೀ ಸಾಧನತ್ರಯವು ಸಾಧ್ಯವಾದ ಶರಣಂಗೆ
ಕಾಲ-ಕಾಮ-ಪುರವೈರಿಯಾದ ನಮ್ಮ ಕೂಡಲಚೆನ್ನಸಂಗಯ್ಯನು
ಮನ್ನಣೆಯ ಮುಕ್ತಿಯನೀವನು/1435
ವೀರನಾದರೆ ಅಲಗಿನ ಮೊನೆಯಲ್ಲಿ ಕಾಣಬಹುದು,
ದಿರನಾದರೆ ತನ್ನಸೋಂಕಿದಲ್ಲಿ ಅರಿಯಬಹುದು,
ಭಕ್ತನಾದರೆ ತಾಗು ನಿರೋಧದಲ್ಲಿ ಅರಿಯಬಹುದು,
ಕೂಡಲಚೆನ್ನಸಂಗಯ್ಯಾ
ಸುಜ್ಞಾನಿಯಾದರೆ ಸುಳುಹಿನಲ್ಲಿ ಅರಿಯಬಹುದು/1436
ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ ದೈವಂಗಳಿಗೆ,
ನಮ್ಮ ಕುಲದೈವಂಗಳೆಂದು ಹೇಳುವವರಿಗೆ
ಗುರುವಿಲ್ಲ ಲಿಂಗವಿಲ್ಲ ಪಾದೋದಕ-ಪ್ರಸಾದವಿಲ್ಲ
ಕೂಡಲಚೆನ್ನಸಂಗಮದೇವಾ/1437
ವೀರಶೈವನಾದಡೆ ಪರಧನವ ಪರಸತಿಯರ ಮುಟ್ಟದಿರಬೇಕು.
ಎಂತೂ ಪರಹಿಂಸೆಯನೆಸಗದಿರಬೇಕು.
ಒಡಲಳಿದಡೆಯೂ ಹಿಡಿದಾಚಾರವ ಬಿಡದಿರಬೇಕು.
ಇಂತೀ ವೀರಾಚಾರವು ನೆಲೆಗೊಳ್ಳದೆ
ವೀರವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪನಯ್ಯಾ
ಕೂಡಲಚೆನ್ನಸಂಗಮದೇವಾ ?/1438
ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು
ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ
ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು-
ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು
ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ. /1439
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು ?
ಸುತ್ತಳಿದು ಬತ್ತಲೆಯಿದ್ದರೇನು ?
ಕಾಲರಹಿತನಾದಡೇನು ? ಕರ್ಮರಹಿತನಾದರೇನು ?
ಕೂಡಲಚೆನ್ನಸಂಗನ ಅನುಭಾವವನರಿಯದವರು
ಏಸು ಕಾಲವಿದ್ದರೇನು ? ವ್ಯರ್ಥಕಾಣಿರೋ ! /1440
ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು?
ಸುತ್ತಳಿದು ಬತ್ತಲೆಯಿದ್ದರೇನು?
ಕಾಲರಹಿತನಾದಡೇನು? ಕರ್ಮರಹಿತನಾದರೇನು?
ಕೂಡಲಚೆನ್ನಸಂಗನ ಅನುಭಾವವನರಿಯದವರು
ಏಸು ಕಾಲವಿದ್ದರೇನು? ವ್ಯರ್ಥಕಾಣಿರೋ ! /1441
ವೇದ ಘನವೆಂಬೆನೆ ? ವೇದ ವೇದಿಸಲರಿಯದೆ ಕೆಟ್ಟವು.
ಶಾಸ್ತ್ರ ಘನವೆಂಬೆನೆ ? ಶಾಸ್ತ್ರ ಸಾದಿಸಲರಿಯದೆ ಕೆಟ್ಟವು.
ಪುರಾಣ ಘನವೆಂಬೆನೆ ? ಪುರಾಣ ಪೂರೈಸಲರಿಯದೆ ಕೆಟ್ಟವು.
ಆಗಮ ಘನವೆಂಬೆನೆ ? ಆಗಮ ಅರಸಲರಿಯದೆ ಕೆಟ್ಟವು.
ಅದೇನು ಕಾರಣವೆಂದಡೆ:
ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ, ತಮ್ಮ ತನುವಿಡಿದು ಅರಸಲರಿಯವು.
ಇದಿರಿಟ್ಟುಕೊಂಡು ಕಡೆಹೋದ,
ನರಲೋಕದ ನರರುಗಳರಿಯರು, ಸುರಲೋಕದ ಸುರರುಗಳರಿಯರು,
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ./1442
ವೇದ ವೇದಾಂತವನೋದಿ ಜ್ಞಾನ ಸೂರೆಯ ಮಾಡುವ ಜಂಗಮ
ಕ್ರಿಯಾಹೀನನಾದಡೆ ಆಗಮಸಮರಸ ಆತನಲ್ಲ.
ಅದೇನು ಕಾರಣವೆಂದಡೆ:ನುಡಿದಂತೆ ನಡೆಯನು.
ಅಲ್ಲಿ ಕೂಡಲಚೆನ್ನಸಂಗಮದೇವ ನಿಲ್ಲಲಾರನು ಸಿದ್ಧರಾಮಯ್ಯಾ./1443
ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ,
ಕೊಂಡಾಡಿಸಿಕೊಳ್ಳಲ್ಪಟ್ಟ
ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ.
ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ
ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ
ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ, ಅವನು ಬ್ರಾಹ್ಮಣನಲ್ಲ,
ಅವನು ಪಂಚಮಹಾಪಾತಕ, ಆತ ಶ್ವಪಚನೆಂದು ಪುರಾಣಪ್ರಸಿದ್ಧ.
ಅದೆಂತೆಂದಡೆ, ಗರುಡಪುರಾಣದಲ್ಲಿ:
“ಶ್ರುತಯಃ ಸ್ಮೃತಯಸ್ಸರ್ವೆ ಪುರಾಣಾನ್ಯಖಿಲಾನಿ ಚ
ವದಂತಿ ಭೂತಿಮಹಾತ್ಮ್ಯಂ ತತಸ್ತಂ ಧಾರಯೇದ್ದ್ವಿಜಃ
ತದಭಾವೇ ತಥಾ ವಿಪ್ರೋ ಲೌಕಿಕಾಗ್ನಿಂ ಸಮಾಹರೇತ್
ಭಸ್ಮನೈವ ಪ್ರಕುರ್ವಿತ ನ ಕುರ್ಯಾನ್ಮೃತ್ತಿಕಾದಿಬಿಃ
ಗೋಪೀಚಂದನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ
ಶತೈಕವಿಂಶತಿಕುಲಂ ಸೋಕ್ಷಯಂ ನರಕಂ ವ್ರಜೇತ್
ಮತ್ತಂ ಕೂರ್ಮಪುರಾಣದಲ್ಲಿ:
ತ್ರಿಪುಂಡ್ರಂ ಬ್ರಾಹ್ಮಣೋ ವಿದ್ವಾನ್ ಮನಸಾಪಿ ಲಂಘಯೇತ್
ಶ್ರುತ್ಯಾ ವಿದಿಯತೇ ತಸ್ಮಾತ್ತ್ಯಾಗೀ ತು ಪತಿತೋ ಭವೇತ್ ಎಂದುದಾಗಿ
ನಮ್ಮ ಕೂಡಲಚೆನ್ನಸಂಗಮದೇವರಲ್ಲಿ,
ಶ್ರುತಿಸ್ಮೃತಿ ಪ್ರಸಿದ್ಧವಾದ ಶ್ರೀಮಹಾವಿಭೂತಿಯನಿಟ್ಟಾತನೆ ಸದ್ಬ್ರಾಹ್ಮಣ.
ಈ ಮಹಾವಿಭೂತಿಯ ಬಿಟ್ಟು ಮಣ್ಣು ಮಸಿ ಮರದ ರಸಂಗಳ
ಹಣೆಯಲ್ಲಿ ಬರೆದುಕೊಂಡನಾದಡೆ
ಆವ ವಿಪ್ರನಲ್ಲ; ಆವ ಪಾಪಿ, ಶುದ್ಧ ಶ್ವಪಚ ಕಾಣಿಭೋ/1444
ವೇದಪ್ರಿಯನೆಂಬೆನೆ ನಮ್ಮ ದೇವ ?
ವೇದಪ್ರಿಯನಲ್ಲ.
ನಾದಪ್ರಿಯನೆಂಬೆನೆ ನಮ್ಮ ದೇವ ?
ನಾದಪ್ರಿಯನಲ್ಲ.
ಭೋಗಪ್ರಿಯನೆಂಬೆನೆ ನಮ್ಮ ದೇವ ?
ಭೋಗಪ್ರಿಯನಲ್ಲ.
ತುತ್ತುಪ್ರಿಯನೆಂಬೆನೆ ನಮ್ಮ ದೇವ ?
ತುತ್ತುಪ್ರಿಯನಲ್ಲ.
ಮನದ ಭಕ್ತಿಪ್ರಿಯ ಕಾಣಾ, ಕೂಡಲಚೆನ್ನಸಂಗಮದೇವಾ/1445
ವೇದವಂತಿರಲಿ, ಶಾಸ್ತ್ರಮುನ್ನವೆ ಸಾಕು, ಸಾದಿಸಿದನು ಸಜ್ಜನ ಸಾರಾಯವನು,
ಲಿಂಗ ಜಂಗಮದ ಪ್ರಸಾದವೆ ಪ್ರಾಣವೆಂದರಿದ,
ಇವರಲ್ಲಿ ಸಜ್ಜನ ಸದರ್ಥ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು. /1446
ವೇದವನೋದಿ ಹೊನಲಲ್ಲಿ ಹೋದ ದ್ವಿಜರು, ಕೆಟ್ಟ ಕೇಡಿಂಗೆ ಕಡೆಯಿಲ್ಲ.
ಅದು ಹೇಗೆಂದಡೆ:ಹೇಮದಾಸೆಗೆ ಒಕ್ಕಲಿಗಂಗೆ
ದತ್ತಪುತ್ರನಾಗೆಂದು ಹೇಳಿತ್ತೆ ವೇದವು ?
ಕೊರಡಿನ ಮೇಲೆ ಕುಳಿತು ತುತ್ತು ಗದ್ಯಾಣವ ನುಂಗಿ
ಸೀಮೆಯಹೊರವಡಿಸಿಕೊಳ್ಳೆಂದು ಹೇಳಿತ್ತೆವೇದ?
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನಕಪಿಲೆಯ ಕೊಂದು ನರಕಕ್ಕಿಳಿಯ ಹೇಳಿತ್ತೆವೇದ?
`ಅಹಿಂಸಾ ಪರಮೋ ಧರ್ಮಃ’ ಎಂದೋದಿ, ಅಸುರಭೋಜನಕ್ಕೆ ಅಂಗವಿಸಿ
ಕರ್ಮವ ಮಾಡಿ ಹೋತ ಕೊಂದು ತಿಂಬುದು ಪಾತಕವಲ್ಲವೆ ?
`ಪರಮೋ ಧರ್ಮಃ ಹಿರಣ್ಯಗರ್ಭಃ’ ಎಂದು ಹೊನ್ನ ಕಪಿಲೆಯಂ ಮಾಡಿ ಕಡಿದು
ಹಂಚಿಕೊಂಬುದು ಚಾಂಡಾಲವಲ್ಲವೆ ?
ಹೊಲೆಯನಂತೆ ಹುಲುವೆಣನ ಸುಟ್ಟು
ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಹಸುವಿನ ಉತ್ಕ್ರಾಂತಿಯ
ಕಾನನದಲ್ಲಿ ಕೂಳು ಭೋಜನವನುಂಡು, ಲೋಕೋಪಚಾರಕ್ಕೆ ಒಳಗಾಗಿ
ಪಾಪಕರ್ಮವ ಮಾಡಿ ಸಲ್ಲದೆ ಹೋದರು ಶಿವನಲ್ಲಿಗೆ.
ಕೂಡಲಚೆನ್ನಸಂಗಮದೇವ ಶಿವಭಕ್ತಂಗೊಲಿದ ಕಾರಣ
ಕಂಚಿಯ ಏಳು ಕೇರಿಯ ಕೈಲಾಸಕ್ಕೊಯ್ದ./1447
ವೇದವನೋದುವ ಅಣ್ಣಗಳು ನೀವು ಕೇಳಿರೊ !
ವೇದ ವೇದಿಸಲಿಲ್ಲ ಶಾಸ್ತ್ರ ಸಾದಿಸಲಿಲ್ಲ;
ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ.
ಇದು ಕಾರಣ-
ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ
ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ./1448
ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ
ಹದಿನೆಂಟು ಪುರಾಣಂಗಳಾದವು.
ಆ ಪುರಾಣಂಗಳನರಿವುದರಿಂದೆ ಜ್ಯೋತಿಜ್ಞರ್ಾನವಾಯಿತ್ತು.
ಆ ಜ್ಯೋತಿಜ್ಞರ್ಾನದಿಂದೆ; -ಮತಿಜ್ಞಾನ,
ಶ್ರುತಜ್ಞಾನ, ಮನಪರಿಪೂರ್ಣಜ್ಞಾನ,
ಅವದಿಜ್ಞಾನ ಕೇವಲಜ್ಞಾನ. -ಇಂತೀ ಪಂಚಜ್ಞಾನವೆ ಪಂಚಸ್ಥಲವಾಯಿತ್ತು.
ಮತಿಜ್ಞಾನವುಳ್ಳಾತನೆ ಭಕ್ತ, ಶ್ರುತಜ್ಞಾನವುಳ್ಳಾತನೆ ಮಹೇಶ್ವರ,
ಮನಪರಿಪೂರ್ಣ ಜ್ಞಾನವುಳ್ಳಾತನೆ ಪ್ರಸಾದಿ, ಅವದಿಜ್ಞಾನವುಳ್ಳಾತನೆ ಪ್ರಾಣಲಿಂಗಿ,
ಕೇವಲಜ್ಞಾನವುಳ್ಳಾತನೆ ಶರಣ, ಶರಣಸ್ಥಲವೆಂಬುದು ಭವಂ ನಾಸ್ತಿ.
ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ಞರ್ಾನವೆ
ಪಂಚಸ್ಥಲದಲ್ಲಿ ಏಕಾಕಾರವಾದ ಐಕ್ಯನು-
ಇಂತೆಂದುದಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ
ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು/1449
ವೇದಶಾಸ್ತ್ರ ಪುರಾಣಾಗಮಾದಿಯಾದ ಲಿಂಗವಲ್ಲದಿಲ್ಲೆಂದು
ಲಿಂಗಾರ್ಚನೆಯ ಮಾಡುವ ಮಹಾಮಹಿಮರು ನೀವು ಕೇಳಿರೇ.
ಅಂಗ ಲಿಂಗವೊ, ಆಚಾರ ಲಿಂಗವೊ, ಅನುಭಾವ ಲಿಂಗವೊ ?
ಗುರು ಲಿಂಗವೊ, ಜಂಗಮ ಲಿಂಗವೊ ?
ಪ್ರಸಾದ ಲಿಂಗವೊ, ಪ್ರಾಣ ಲಿಂಗವೊ, ಭಾವಲಿಂಗವೊ ?
ಪ್ರಾಣಲಿಂಗಸ್ಯ ಸಂಬಂದಿ ಪ್ರಾಣಲಿಂಗೀ ಪ್ರಕೀರ್ತಿತಃ
ಪ್ರಸನ್ನಲಿಂಗಯುಕ್ತಾತ್ಮಾ ಮಮ ರೂಪೋ ಮಹೇಶ್ವರಿ
ಇದು ಕಾರಣ, ಕೂಡಲಚನ್ನಸಂಗಮದೇವಾ
ಲಿಂಗನಾಮನಿರ್ಣಯವಪೂರ್ವ. /1450
ವೇದಾಂತಿಗಳಂತೆ ಜ್ಞಾನಬದ್ಧರಲ್ಲ, ಮುನಿಗಳಂತೆ ಕ್ರಿಯಾಬದ್ಧರಲ್ಲ,
ಸಾಧಕರಂತೆ ಕಾರ್ಯಬದ್ಧರಲ್ಲ.
ಜ್ಞಾನಕ್ರಿಯಾಕಾರ್ಯಗಳಲ್ಲಿ ಕೂಡಲಚೆನ್ನಸಂಗನ ಶರಣರು
ನಿರತರು ಕಾಣಾ ಸಿದ್ಧರಾಮಯ್ಯಾ. /1451
ವೇದ್ಯರ ನುಡಿಗಡಣವಿಲ್ಲದವರು ನಡೆದರೆಡಹರೆ ?
ಅಹಿತರೆ ವೃಷಭದ್ವಜರು ?
ಪ್ರಕೃತಿ ಪ್ರಾಣಿಗಳಿಗೆಲ್ಲಿಯದು ಭಕ್ತಿ ?
ಬಾಣ ನಿರ್ವಾಣ ಕೂಡಲಚೆನ್ನಸಂಗ ಲಿಂಗೈಕ್ಯವು/1452
ವ್ಯವಹಾರವ ಮುಂದುಗೊಂಡಿದ್ದೆನಯ್ಯಾ,
ಆನು ವ್ಯವಹಾರವ ಮುಂದುಗೊಂಡಿದ್ದೆನಯ್ಯಾ,
ಮೊದಲುಗೆಡದ ಹರದೆನಗಾಯಿತ್ತಯ್ಯಾ.
ಭವಗೇಡಿ ಲಿಂಗೈಕ್ಯರ ಒಡನಾಡಿ ಅವರ ಪರಿ ಎನ್ನ ಹತ್ತಿತಯ್ಯಾ.
ಕೂಡಲಚೆನ್ನಸಂಗಯ್ಯಾ
ಭಕ್ತರೆನ್ನ ಮರುಳು ಮಾಡಿತ್ತನೇನೆಂಬೆ!/1453
ವ್ರತಸ್ಥನರಿವು ಪ್ರಪಂಚಿನಲೆ ಹೋಯಿತ್ತು,
ಭಾಷೆವಂತನರಿವು ವಂಚನೆಯಲೆ ಹೋಯಿತ್ತು,
ನೇಮಸ್ಥನರಿವು ಸಂಕಲ್ಪದಲೆ ಹೋಯಿತ್ತು,
ಶೀಲವಂತನರಿವು ಸೂತಕದಲೆ ಹೋಯಿತ್ತು,
ಜಂಗಮದರಿವು ಬೇ[ಡಿದಾಗ]ಲೆ ಹೋಯಿತ್ತು,
ಪ್ರಸಾದದರಿವು ಬೆರಕೆಯಲ್ಲಿ ಹೋಯಿತ್ತು.
ಇಂತೀ ಷಡುಸ್ಥಲದ ನಿರ್ಣಯ [ಇ]ಲ್ಲದೆ
ಹೋಯಿತ್ತು ಕೂಡಲಚೆನ್ನಸಂಗನಲ್ಲಿ. /1454
ಶಂಕರ ಶಂಕರ’ ಎಂದು ಸಹಜವರಿಯದೆ ನುಡಿವ
ಶ್ವಾನನ ಮಾತ ಕೇಳಲಾಗದು, ಶಂಕರವಾವುದೆಂದರಿಯರಾಗಿ.
ಲಿಂಗ ಶಂಕರವೊ ? ಜಂಗಮ ಶಂಕರವೊ ? ಪ್ರಸಾದ ಶಂಕರವೊ ?
ತ್ರಿವಿಧದಲ್ಲಿ ಹೊರಗಿಲ್ಲ.
ಆವ ಶಂಕರದಲ್ಲಿ ಆವುದು ಚೇಗೆ ? ಬಲ್ಲಡೆ ಹೇಳಿರಿ.
ಬರುಮಾತಿನ ಬಳಕೆಯ ಬಳಸಿ ಹಿರಿಯರಾದೆವೆಂಬ
ಮೂಕೊರೆಯರನೇನೆಂಬೆ ಕೂಡಲಚೆನ್ನಸಂಗಮದೇವಾ/1455
ಶಕ್ತಿಯು ಸೂಕ್ಷ್ಮವೆಂದು ಸ್ಥೂಲವೆಂದು ಇತ್ತೆರನಾಗಿರ್ಪುದು.
ಸೂಕ್ಷ್ಮಶಕ್ತಿಯ ಪರಿಣಾಮ ದೃಗ್ಗೋಚರವಾಗದು.
ಸ್ಥೂಲಶಕ್ತಿಯ ಪರಿಣಾಮ ಪ್ರತ್ಯಕ್ಷವಾಗಿ ಪರಿಣಮಿಸುತಿರ್ಪುದು.
ಇವುಗಳಲ್ಲಿ ಸೂಕ್ಷ್ಮಶಕ್ತಿಯ ವಿವರವೆಂತೆಂದಡೆ:
ಪ್ರಾಣಿಗಳ ಪುರಸ್ಕಾರದಿಂದ ಪುಣ್ಯವು, ತಿರಸ್ಕಾರದಿಂದ ಪಾಪವು,
ಅದೃಷ್ಟವಾಗಿರುವ ಪಳಯಂತೆ;
ಕಾಲವು ಅಮೂರ್ತವಾಗಿ ಪತ್ರಪುಷ್ಪಾದಿ ಮೂರ್ತವಸ್ತುಗಳಿಗೆ
ಕಾರಣವಾಗಿರ್ಪಂತೆ,
ಮಂತ್ರಪ್ರಯೋಗದಿಂದ ಉರಗನ ಗರಳವು ಹರಣವಾದಂತೆ,
ನಿಮಗರ್ಪಿತ ಪ್ರಸಾದಪರಿಣಾಮದ ಸೂಕ್ಷ್ಮಶಕ್ತಿಯಿಂದ
ಅನಿಷ್ಟನಿವೃತ್ತಿ ಇಷ್ಟಾರ್ಥಪ್ರಾಪ್ತಿಗಳಾಗುತ್ತಿರ್ಪವಯ್ಯಾ,
ಕೂಡಲಚೆನ್ನಸಂಗಮದೇವಾ./1456
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯ ಮೊದಲಾಗಿ
ನಡೆದವು ಲಿಂಗದತ್ತತ್ತಲೆ.
ಬಂದ ಸುಖ ಲಿಂಗಾರ್ಪಿತವೆಂದು ನಡೆದವು ಲಿಂಗದತ್ತತ್ತಲೆ.
ಕೂಡಲಚೆನ್ನಸಂಗಾ ಲಿಂಗ ನೀವಾಗಿ ಶರಣಂಗೆ./1457
ಶಬ್ದವೂ ಅ(ಪ)ಶಬ್ದವೂ ಶಬ್ದದಲ್ಲಿಯೆ ಕಾಣಬಹುದು, ಕಾಣಿರೋ !
ಇದ್ದವರು ಇದ್ದ ಸ್ಥಲವನೆ ನುಡಿವರು, ಅದಕದು ಸಹಜ.
ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ./1458
ಶಬ್ದವೆಂಬುದು ಶ್ರೋತ್ರದೆಂಜಲು, ರೂಪೆಂಬುದು ನಯನದೆಂಜಲು,
ವಾಸನೆಯೆಂಬುದು ನಾಸಿಕದೆಂಜಲು, ರುಚಿಯೆಂಬುದು ಜಿಹ್ವೆಯೆಂಜಲು,
ಸ್ವರ್ಶವೆಂಬುದು ತ್ವಕ್ಕಿನೆಂಜಲು, ಮಾಡಲಾಗದು.
ಲಿಂಗಕ್ಕೆ ರೂಪಿಲ್ಲ, ಜಂಗಮಕ್ಕೆ ಅಂಗವಿಲ್ಲ.
ಪದಾರ್ಥವ ನೀಡಬಲ್ಲ ನಿಜೈಕ್ಯ ನಿಮ್ಮ ಶರಣ,
ಕೂಡಲಚೆನ್ನಸಂಗಮದೇವಾ./1459
ಶಬ್ದಾದಿ ವಿಷಯಂಗಳ ವಿವರವು:
ಶಬ್ದ ಆಕಾಶದ ಗುಣ, ಸ್ಪರ್ಶ ವಾಯುವಿನ ಗುಣ.
ಶಬ್ದಸ್ಪರ್ಶ ರೂಪುಳ ಅಗ್ನಿಯ ಗುಣ, ಶಬ್ದ ಸ್ಪರ್ಶ ರೂಪು ರಸ
ಅಪ್ಪುವಿನ ಗುಣ, ಶಬ್ದ ಸ್ಪರ್ಶ ರೂಪು ರಸ ಗಂಧ ಸಹಿತ
ಇವೈದು ಪೃಥ್ವಿಯ ಗುಣ.
ಇಂತೀ ಪಂಚಗುಣವನು ಒಂದೇ ಗುಣವ ಮಾಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು/1460
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾದಿ ಸಾಧನಸಂಪನ್ನನಾಗಿ
ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ
ಇಷ್ಟಲಿಂಗವ ಧರಿಸಿ;
ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ;
ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ,
`ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ
ಇಷ್ಟಲಿಂಗಕ್ಕೆ ಸಮರ್ಪಿಸಿ,
`ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು
ಪ್ರಾಣಲಿಂಗಕ್ಕೆ ಸಮರ್ಪಿಸಿ;
ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ
`ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ
ರಾಜಯೋಗ ಸಮರಸವಾದಲ್ಲಿ- ಅಂಗ ಲಿಂಗ, ಲಿಂಗವಂಗವಾಗಿ
ಶಿಖಿ ಕಪರ್ೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ
ಉಭಯ ವಿನಿಮರ್ುಕ್ತವಾಗಿ
`ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ
ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು./1461
ಶರಣ ದೃಷ್ಟಾದೃಷ್ಟ ಕಾಣಯ್ಯಾ; ಮುಟ್ಟದೆ ಮುಟ್ಟುವ ಕಾಣಯ್ಯಾ,
ಆಗಿನ ಆಗು ಕಾಣಯ್ಯಾ; ಭೇದದ ಭೇದ ಕಾಣಯ್ಯಾ;
ಅರಿವಿನ ಅರಿವು ಕಾಣಯ್ಯಾ.
ಲಿಂಗದಲ್ಲಿ ಹಿಂಗದ ಬಿಂದು ಕೂಡಲಚೆನ್ನಸಂಗಾ
ನಿಮ್ಮಲ್ಲಿ ಸಂಗನಬಸವಣ್ಣ ಕಾಣಾ/1462
ಶರಣ ಮೂರ್ತನಲ್ಲ, ಅಮೂರ್ತನಲ್ಲ,
ಲಿಂಗದಲ್ಲಿ ಪ್ರಾಣಸಂಚಿತ, ಪ್ರಾಣದಲ್ಲಿ ಪ್ರಸಾದಸಂವರಣೆ,
ಪ್ರಸಾದದಲ್ಲಿ ಕಾಯಾಶ್ರಿತನು-ಲೋಕಲೌಕಿಕಪ್ರಕಾರದುದಯನಲ್ಲ.
ಕೂಡಲಚೆನ್ನಸಂಗಾ ನಿಮ್ಮ ಶರಣ./1463
ಶರಣ ಶರಣನ ಕಂಡು,
`ಶರಣು’ ಎಂದು ಕರವ ಮುಗಿವುದೆ ಭಕ್ತಿಲಕ್ಷಣ.
ಶರಣ ಶರಣನ ಕಂಡು,
ಪಾದವಿಡಿದು ವಂದಿಸುವುದೆ ಭಕ್ತಿಲಕ್ಷಣ.
ಶರಣ ಚರಣವ ಪಿಡಿಯದೆ
ಕಂಡೂ ಕಾಣದೆ ಪೋದನಾದಡೆ
ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ./1464
ಶರಣ ಸತ್ತರೆ ಭಕ್ತರು ಹೊತ್ತರು, ಪ್ರಸಾದಿಗಳತ್ತರಲ್ಲಾ,
ಸುತ್ತಲಿದ್ದ ಜಂಗಮವೆಲ್ಲಾ ಕಿಚ್ಚ ಹಿಡಿದರಲ್ಲಾ,
ಊರೊಳಗಿದ್ದವರು ಒಂಬತ್ತು ಬಾಗಿಲ ತುಂಬಿಕೊಂಡಿದ್ದರು ನೋಡಾ !
ಮರಳಿ ಒಂದು ಬಾಗಿಲ ತೆಗೆದು, ಸತ್ತುದ ಕಂಡು,
ಅದಾರು ಅದಾರು ಸತ್ತರೆಂದು, ಸತ್ತವರು ಬಹುದ ಕಂಡು ಇತ್ತಲೆಯಾದರಲ್ಲಾ.
ಕೂಡಲಚೆನ್ನಸಂಗ ಸತ್ತು ಸಯವಾದ./1465
ಶರಣಂಗೆ ಆಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನವೆ ಹಸ್ತ,
ಆ ಹಸ್ತಕ್ಕೆ ಶಿವಸಾದಾಖ್ಯ, ಆ ಸಾದಾಖ್ಯಕ್ಕೆ ಪರಾಶಕ್ತಿ,
ಆ ಶಕ್ತಿಗೆ ಪ್ರಸಾದವೆ ಲಿಂಗ, ಆ ಲಿಂಗಕ್ಕೆ ಶಾಂತ್ಯತೀತವೆ ಕಳೆ,
ಆ ಕಳೆಗೆ ಶ್ರೋತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುಶಬ್ದದ್ರವ್ಯಂಗಳನು,
ರೂಪು ರುಚಿ ತೃಪ್ತಿಯನರಿದು ಆನಂದಭಕ್ತಿಯಿಂದರ್ಪಿಸಿ,
ಆ ಸುಶಬ್ದಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ, ನಿಮ್ಮ ಶರಣ. /1466
ಶರಣನಿರ್ಣಯವೆಂತೆಂದಡೆ:
ಕರವೆ ಕಪ್ಪರ ಒಡಲೆ ಜೋಳಿಗೆ, ಆಕಾಶವೆ ಹೊದಿಕೆ
ಭೂಮಿಯೆ ಖಟ್ವಾಂಗ.
ಸರ್ವಸಂಗನಿವೃತ್ತಿಯ ಮಾಡಿ ಬಸವಣ್ಣ ಹೋದುದನು ಕಂಡೆ,
ಕೂಡಲಚೆನ್ನಸಂಗಮದೇವಾ/1467
ಶರಣನು ಅದೃಷ್ಟ ದೃಷ್ಟ ಎರಡುವನೂ ತೋರುವನು.
ಸಾವಯ ನಿರವಯ ಏನೆಂದು ವಿವರಿಸ ಶರಣನು.
ತಾನು ಸ್ವತಂತ್ರನಾಗಿ ಭಾವರಹಿತನು.
ವಿಕೃತವೇಷದಿಂದ ಸುಕೃತವ ಜೋಡಿಪನಲ್ಲ.
ಪ್ರಕೃತಿಗುಣವಿಡಿದು ಮೂರ್ತಿಯಾದ ಉಪಜೀವಿ ತಾನಲ್ಲ,
ಕೂಡಲಚೆನ್ನಸಂಗಾ
ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ/1468
ಶರಣನೆನಿಸಿಕೊಂಬುದು ಕರ ಅರಿದು ನೋಡಯ್ಯಾ !
ಸತ್ಯಸದ್ಭಕ್ತರೊಳಡಗಿ ತನ್ನ ಕುರುಹ ಲೋಕಕ್ಕೆ ತೋರದಿರಬೇಕು.
ಸಕಲಜೀವರಾಶಿಗಳಿಗೆ ರೋಷ ಹರುಷವ ತಾಳದಿರಬೇಕು.
ಇಂತಪ್ಪ ಶರಣನಲ್ಲಿ ಸನ್ನಿಹಿತ ನಮ್ಮ ಕೂಡಲಚೆನ್ನಸಂಗಮದೇವ/1469
ಶರಣಭರಿತ ಲಿಂಗ ಎಲ್ಲಾ ಎಡೆಯಲ್ಲಿ ಉಂಟು.
ಲಿಂಗಭರಿತ ಶರಣನಪೂರ್ವ ನೋಡಾ.
ಗಮನವುಳ್ಳುದೇ ಜಂಗಮಲಿಂಗ, ನಿರ್ಗಮನಿಯಾದುದೆ ಲಿಂಗಜಂಗಮ.
ಅದರ ಸಂಯೋಗ ಸಂಬಂಧವ ವೇದಿಸಿ ನಡೆಯಬಲ್ಲರೆ,
ಕೂಡಲಚೆನ್ನಸಂಗಮದೇವನೆಂಬೆನು. /1470
ಶರಣರೆಂಬುವರು ಜನನಕ್ಕೆ ತವಕಿಗಳಲ್ಲ, ವಿಷಯಾನುಭಾವಿಗಳಲ್ಲ,
ನಿಂದ ನಿಲವು ತಾನೆ ಪರಿಣಾಮ.
ಲಿಂಗದ ಸಂಗವ ಸವಿವ ಶರಣರು ಅನುಮಾನಕ್ಕವಧಾನಿಗಳಲ್ಲ,
ಕೂಡಲಚೆನ್ನಸಂಗಾ ನಿಮ್ಮ ಶರಣರು./1471
ಶರಣಸತಿ ಲಿಂಗಪತಿಯೆಂಬ ಉಭಯ ಸಂದು ಬಿಡದು,
ಮಜ್ಜನವ ಮಾಡುವರಯ್ಯಾ.
ಪ್ರಾಣಲಿಂಗಕ್ಕೆಂದರ್ಪಿಸುವರು, ಮತ್ತೆ ಲಿಂಗಜಂಗಮಪ್ರಸಾದವೆಂದೆಂಬರು
ಇಂತಪ್ಪ ಸಂದೇಹವುಳ್ಳನ್ನಕ್ಕ ಐಕ್ಯರೆಂತಪ್ಪರಯ್ಯಾ ?
ಈ ಸಂಕಲ್ಪ ವಿಕಲ್ಪವೆಂಬ ಸಂದೇಹವ ಕಳೆದುಳಿದ
ಕೂಡಲಚೆನ್ನಸಂಗಾ ನಿಮ್ಮ ಶರಣ./1472
ಶರಣಸಮತೆಯ ನಿದಿ ಬಸವನಯ್ಯಾ,
ಭಕ್ತಿಯ ಬೆಳೆಸಿರಿ ಬಸವನಯ್ಯಾ,
ಮುಕ್ತಿಯ ತವನಿದಿ ಬಸವನಯ್ಯಾ,
ಸತ್ಯದ ನಿದಿ ಬಸವನಯ್ಯಾ,
ಕೂಡಲಚೆನ್ನಸಂಗಯ್ಯನಲ್ಲಿ ಅನಿಮಿಷ ಬಸವನಯ್ಯಾ !/1473
ಶರಣಸಾಹಿತ್ಯ ಲಿಂಗ ನೋಡಾ, ಲಿಂಗ ಸಾಹಿತ್ಯ ಶರಣ ನೋಡಾ.
ಸಂಗವೆ ಸನುಮತವಾಗಿ ಮತ್ತೊಂದು ಪರಿಯಲ್ಲ.
ಶರಣನೆ ಓಗರ, ಲಿಂಗವೆ ಪ್ರಸಾದ,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ./1474
ಶರಣಸ್ವಾಯತ ಲಿಂಗ, ಪ್ರಸಾದಿಸ್ವಾಯತ ಪ್ರಸಾದ
ಅನರ್ಪಿತವಿಡಿದುದೆ ಪದವು, ಅರ್ಪಿತವಿಡಿದುದೇ ಭಂಗವು
ಸಂಬಂಧ ಅಸಂಬಂಧವಾಯಿತ್ತು, ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ !/1475
ಶರಣು ಶರಣಾರ್ಥಿ ಮಹಾದೇವಾ,
ಶರಣು ಶರಣಾರ್ಥಿ ಪರಬ್ರಹ್ಮಸ್ವರೂಪಾ,
ಶರಣು ಶರಣಾರ್ಥಿ ನಿರಾಕಾರತತ್ವವೆ,
ನೀವೆ ಗತಿ ನಿಮ್ಮ ಚರಣಕ್ಕೆ ಶರಣಯ್ಯಾ ಪ್ರಭುವೆ.
ಸತಿಪತಿಯ ಒಲುಮೆಯ ಮುನಿಸು, ಅತಿಬೇಟವೆಂಬುದು ತಪ್ಪದು ನೋಡಾ.
ನಿಮ್ಮ ಶರಣ ಬಸವಣ್ಣನೊಡತಣ ಮುನಿಸು
ಎನ್ನ ಮನಕ್ಕೆ ಸಂಶಯ ತೋರದು ನೋಡಾ.
ಸಂತೆಯ ನೆರವಿಯಲ್ಲಿ ಅಬಿಮಾನದ ಮಾತ ಮಾರಬಹುದೆ ?
ಬೀದಿಯಲ್ಲಿ ನಿಂದು ನುಡಿವ ಅನುಭಾವದ ರಚ್ಚೆ ನಗೆಗೆಡೆ ನೋಡಯ್ಯಾ.
ಸಂಗನಬಸವಣ್ಣನೊಳಗೆ ನಿಮ್ಮೊಳಗೆ ಭೇದವಿಲ್ಲೆಂಬುದ
ನೀವೆ ಅರಿದರಿದು; ಮತ್ತೆ ಬಾರೆವೆಂಬುದುಚಿತವೆ ?
ಕೂಡಲಚೆನ್ನಸಂಗನ ಶರಣ ಬಸವಣ್ಣನೆ ನಿಮ್ಮ ಪ್ರಾಣವಾಗಿರಲು
ಇನ್ನಾರೊಡನೆ ಮುನಿವಿರಿ? ಕೃಪೆ ಮಾಡಾ ಪ್ರಭುವೆ. /1476
ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ.
ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ.
ಆ ವಸ್ತು ಜಗದ ಹಿತಾರ್ಥ ಪೀಠಸಂಬಂದಿಯಾಗಿ
`ಏಕಮೂರ್ತಿಸ್ತ್ರಯೋ ಭಾಗಾಃ’ ಆಗಲಾಗಿ
ವರ್ತುಳ ಗುರುವಾಗಿ, ಗೋಮುಖ ಜಂಗಮವಾಗಿ
ಗೋಳಕಾಕಾರಮೂರ್ತಿ ಲಿಂಗವಾದ ಕಾರಣ, ಲಿಂಗವಾಯಿತ್ತು.
ಇಂತೀ ತ್ರಿವಿಧದೊಳಗೆ ಒಂದ ಮೀರಿ ಒಂದ ಕಂಡೆಹೆನೆಂದಡೆ
ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ.
ಅಂಕುರ ಬೀಜವಿರೆ, ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ
ಅಂಕುರಕ್ಕೆ ದೃಷ್ಟವಿಲ್ಲ.
ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ
ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು. /1477
ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ,
ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ,
ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ,
ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ.
ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರ, /1478
ಶಿವ ಲೋಕವನಿಚ್ಛಿಸಿ ಶಿವಪೂಜೆಯಂ ಗೈದೊಡೆ
ಮುಂದೆ ಶಿವಲೋಕವನೈದಿ ಅನಂತಕಾಲ ಶಿವಸುಖವನನುಭವಿಸುತಿರ್ದು
ಆ ಪುಣ್ಯವು ತೀರಲೊಡನೆ ಮರಳಿ ಧರೆಗಿಳಿದು
ಪೂರ್ವಪುಣ್ಯಸಂಸ್ಕಾರದಿಂದ ಸತ್ಕುಲದಲ್ಲಿ ಹುಟ್ಟುತಿರ್ಪನು ನೋಡಾ !
“ಅನೇಕಯುಗಸಾಹಸ್ರಂ ಭುಕ್ತ್ವಾ ಭೋಗಾನನೇಕಧಾ
ಪುಣ್ಯೇ ಕ್ಷಯೇ ಕ್ಷೀಣಪಾಪಃ ಕುಲೇ ಮಹತಿ ಜಾಯತೇ ‘ ಎಂದುದಾಗಿ,
ಶಿವಕುಲದಲ್ಲಿ ಹುಟ್ಟಿ ಶಿವಸಂಸ್ಕಾರ ಹೊಂದಿ
ಸದ್ಗುರುವಿನಿಂದ ಲಿಂಗಸಾಮರಸ್ಯ ಪಡೆದು
ಅಷ್ಟಾವರಣವೆ ಅಂಗ, ಪಂಚಾಚಾರವೆ ಪ್ರಾಣವಾಗಿ ನಡೆದು
ಕಡೆಗೆ ಚಿರಸುಖಿಯಾಗುತಿರ್ಪನು ನೋಡಾ
ಕೂಡಲಚೆನ್ನಸಂಗಮದೇವಾ/1479
ಶಿವ ಶಿವಾ ! ಕನಸಿನಲ್ಲಿ ಜಂಗಮವ ಕಂಡು,
ಮನಸ್ಸಿನಲ್ಲಿ ಗುಡಿಯ ಕಟ್ಟುವರಯ್ಯಾ !
ನೆಟ್ಟನೆ ಮನೆಗೆ ಜಂಗಮ ಬಂದಡೆ ಕೆಟ್ಟೆವಿನ್ನೇನ ಬೇಡಿಯಾರೆಂಬ
ಕಷ್ಟ ಜೀವಿಯ ಭಕ್ತಿಯಂತಾಯಿತ್ತು ವ್ರತಸ್ಥನ ಭಕ್ತಿ.
ಕಾಗೆ ತಮ್ಮ ದೇವರೆಂದು ಕರೆದು ತಮ್ಮ ಮನೆಯ ಮೇಲೆ ಕೂಳ ಹಾಕಿ
ಕೈಮುಗಿದು ಬೇಡಿಕೊಂಬರಯ್ಯಾ, ಆ ಕಾಗೆ ಬಂದು ಮನೆಯ ಹೊಕ್ಕಡೆ
ಒಕ್ಕಲೆತ್ತಿ ಹೋಹ ಮರ್ಕಟನ ಭಕ್ತಿಯಂತಾಯಿತ್ತಯ್ಯಾ ನೇಮಸ್ಥನ ಭಕ್ತಿ.
ಹಾವು ತಮ್ಮ ದೇವರೆಂದು ಹಾಲನೆರೆದು ಕೈಮುಗಿದು ಬೇಡಿಕೊಂಬರಯ್ಯಾ
ಆ ಹಾವ ಕಂಡಡೆ ಹೆದರಿ ಓಡುವ
ಭಾವಭ್ರಮಿತರ ಭಕ್ತಿಯಂತಾಯಿತ್ತಯ್ಯಾ ಶೀಲವಂತನ ಭಕ್ತಿ.
ಹೊಸ್ತಿಲ ದೇವರೆಂದು ಪೂಜಿಸಿ ಮರಳಿ ಇಕ್ಕಾಲಿಕ್ಕಿ ದಾಂಟಿ ಹೋಹ
ಒಕ್ಕಲಗಿತ್ತಿಯ ಭಕ್ತಿಯಂತಾಯಿತ್ತಯ್ಯಾ, ಭಾಷೆವಂತನ ಭಕ್ತಿ.
ಕೆರಹ ಕಳೆದು ಕೈಯ ತೊಳೆದು ಸಗ್ಗಳೆಯ ನೀರ ಕುಡಿದ
ಬ್ರಾಹ್ಮಣನ ಭಕ್ತಿಯಂತಾಯಿತ್ತಯ್ಯಾ ಸಮಯಾಚಾರಿಯ ಭಕ್ತಿ.
ನಾಯ ನಡು ಸಣ್ಣದೆಂದು ಅಂದಣವನೇರಿಸಿದಡೆ
ಆ ನಾಯಿ ಎಲುವ ಕಂಡಿಳಿದಂತಾಯಿತ್ತಯ್ಯಾ ನಿತ್ಯಕೃತ್ಯನ ಭಕ್ತಿ-
ಇಂತೀ ಆರು ಪ್ರಕಾರದ ದೃಷ್ಟಾಂತಗಳ ತೋರಿ ಹೇಳಿದೆ.
ಅಂತು ಭಕ್ತನ ಜಂಗಮವೆ ಶಿವನೆಂದರಿದು
ಪಾದೋದಕ ಪ್ರಸಾದವ ಕೊಂಡು ನಮಸ್ಕರಿಸಿದ ಬಳಿಕ
ಮತ್ತಾ ಜಂಗಮ ಮನೆಗೆ ಬಂದು,
ಹೊನ್ನು [ವಸ್ತ್ರಾದಿ] ಮುಟ್ಟಿಯಾರೆಂಬ ಅಳುಕುಂಟೆ ಸದ್ಭಕ್ತಂಗೆ ?
ಇಲ್ಲವಾಗಿ, ಅದೆಂತೆಂದಡೆ, ಲೈಂಗ್ಯೇ:
ಅರ್ಥಪ್ರಾಣಾಬಿಮಾನೇಷು ವಂಚನಂ ನೈವ ಕುತ್ರಚಿತ್
ಯಥಾ ಭಾವಸ್ತಥಾ ದೇವಶ್ಚರೋಚ್ಛಿಷ್ಟಂ ವಿಶೇಷತಃ
ಸ್ವೇಷ್ಟಲಿಂಗಾಯ ದತ್ವಾ ತು ಪುನಃ ಸೇವೇತ ಭಕ್ತಿಮಾನ್
ಸ ಏವ ಷಟ್ಸ್ಥಲಬ್ರಹ್ಮೀ ಪ್ರಸಾದೀ ಸ್ಯಾನ್ಮಹೇಶ್ವರಃ
-ಇಂತೆಂಬ ಪುರಾಣ ವಾಕ್ಯವನರಿಯದೆ
ಅಳುಳ್ಳಡೆ ಸುಡುಸುಡು, ಅವನು ಗುರುದ್ರೋಹಿ ಆಚಾರಭ್ರಷ್ಟ ವ್ರತಗೇಡಿ
ನರಮಾಂಸಭುಂಜಕ ಜಂಗಮನಿಂದಕ ಪಾಷಂಡಿ ದೂಷಕ.
ಆತನ ಹಿಡಿದು ಹೆಡಗುಡಿಯ ಕಟ್ಟಿ ಮೂಗನುತ್ತರಿಸಿ ಇಟ್ಟಿಗೆಯಲೊರಸಿ
ಅನಂತಕಾಲ ಕೆಡಹುವ ನಮ್ಮ ಕೂಡಲಚೆನ್ನಸಂಗಮದೇವ/1480
ಶಿವ ಶಿವಾ ಆವನಾನೊಬ್ಬನು ಶ್ರೀಮಹಾದೇವನ
ದಿವ್ಯಕಾಂತಿಯಿಂದೊಗೆದ ಶ್ರೀಮಹಾಭಸಿತವ ಬಿಟ್ಟು
ಹಣೆಯಲ್ಲಿ ಗೋಪಿ ಮಲಿನ ಸಾದು ಕಸ್ತೂರಿ ಚಂದನಗಳೆಂಬ
ಮಣ್ಣುಮಸಿಗಳಿಂದ ನೀಳ ಬೊಟ್ಟು ಕಾಗೆವರೆಬೊಟ್ಟು, ಹೂಬೊಟ್ಟು
ಅರ್ಧಚಂದ್ರರೇಖೆ, ಅಂಕುಶದ ರೇಖೆ ಮೊದಲಾದ ಕಾಕುವರೆಗಳ
ವಿಶ್ವಾಸದಿಂದ ಇಡುತಿಪ್ಪ ಪಾತಕರ ಮುಖವ ನೋಡಲಾಗದು.
ಸುಡು ! ಅದು ಅಶುದ್ಧ, ಅದು ಪಾಪದ ರಾಶಿ, ಅದ ನೋಡಿದಡೆ ಮಹಾದೋಷ
ಅದೆಂತೆಂದಡೆ, ಪಾರಾಶರಪುರಾಣದಲ್ಲಿ:
ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ
ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ
ಮತ್ತಂ ಶಾಂಭವಪುರಾಣದಲ್ಲಿ:
ಅಶುದ್ಧಂಚ ತಥಾ ಪ್ರೋಕ್ತಂ ವರ್ತುಲಂ ಚೋಧ್ರ್ವಪುಂಡ್ರಕಂ
ಅಶುದ್ಧಂ ಚಾರ್ಧಚಂದ್ರಂ ಚ ಕೀರ್ತಿತಂ ತು ಕುಶಾದಿಬಿಃ
ಮತ್ತಂ ಸೂತಸಂಹಿತೆಯಲ್ಲಿ:
ಅಶ್ರೌತಂ ಚೋಧ್ರ್ವಪುಂಡ್ರಂ ತು ಲಲಾಟೇ ಶ್ರದ್ಧಯಾ ಸಹ
ಧಾರಯಿಷ್ಯಂತಿ ಮೋಹೇನ ಪಾಷಂಡೋಪಹತಾ ಜನಾಃ
ಮತ್ತಂ ಮಾನವಪುರಾಣದಲ್ಲಿ:
ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ
ತತ್ವನಿಷ್ಠೈರ್ನ ಧಾರ್ಯಂ ಚ ನ ಧಾರ್ಯಂ ವೈದಿಕೈರ್ಜನೈಃ
ಊಧ್ರ್ವಪುಂಡ್ರಂ ಮುಖಂ ದೃಷ್ಟ್ವಾ ವ್ರತಂ ಚಾಂದ್ರಾಯಣಂ ಚರೇತ್
ಮತ್ತಂ ಸ್ಕಂದಪುರಾಣದಲ್ಲಿ:
ಊಧ್ರ್ವಪುಂಡ್ರಂ ದ್ವಿಜಃ ಕುರ್ಯಾತ್ ಲೀಲಯ್ಯಾಪಿ ಕದಾಚನ
ತದಾಕಾರೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈ ಎಂದುದಾಗಿ,
ಶ್ರೀಮಹಾವಿಭೂತಿಯ ಬಿಟ್ಟು
ವೇದವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿ ಇಡುತಿಪ್ಪ
ಪಂಚಮಹಾಪಾತಕರ ಮುಸುಡ ನೋಡಲಾಗದು ಕಾಣಾ
ಕೂಡಲಚೆನ್ನಸಂಗಮದೇವಾ/1481
ಶಿವ ಸಾಧ್ಯವೆಂದು, ಶಿವ ವೇದ್ಯವೆಂದು, ಶಿವ ಸತ್ಯವೆಂದು,
ಶಿವ ಸಹಜವೆಂದು, ಶಿವ ನಿರುತವೆಂದು,
“ಯದ್ಭಾವಃ ತದ್ಭವತಿ ಎಂಬ ಭಾವಬಲಿದು,
ಬಂದವರನೆ ಶಿವನೆಂದು ನಂಬೂದು.
ರೂಪವಾನ್ ರೂಪಹೀನೋ ವಾ ಮಲಿನೋ ಮಲಿನಾಂಬರಃ
ಯೋಗೀಂದ್ರಸ್ಯ ತ್ವ ಸಂದೇಹಂ ದೇಹಾದೀನ್ನ ವಿಚಾರಯೇತ್
ಅಭೋಗಿನಂ ಭೋಗಿನಂ ವಾ ಪೂಜಯೇಚ್ಛಿವಯೋಗಿನಂ
ಪ್ರತ್ಯಹಮನ್ನ ಪಾನಾದ್ಯೈಃ ಶಯನೇನಾಸನೇನ ವಾ
ಎಂದುದಾಗಿ, ಇದು ಕಾರಣ ಕೂಡಲ ಚೆನ್ನಸಂಗಯ್ಯಾ
ಲಿಂಗಾನುಭಾವಿಗಳ ಬರವಿಂಗೆ ಇಂಬುಗೊಡುವುದಲ್ಲದೆ
“ಯತ್ರ [ಜೀವಃ] ತತ್ರ ನಶಿವಃಫಎಂದು
ನುಡಿವರೆ ಭಕ್ತನಲ್ಲಯ್ಯಾ. /1482
ಶಿವಕಳಶ ಗುರುಕಳಶವೆಂದು ಹೆಸರಿಟ್ಟುಕೊಂಡು ನುಡಿವಿರಿ.
ಶಿವಕಳಶ ಗುರುಕಳಶವ ನೀವು ಬಲ್ಲರೆ ಹೇಳಿರೇ.
ಶಿವಕಳಶವಲ್ಲ ಇದು ಕುಂಭಕಳಶ.
ಓಂ ಧಾಮಂತೇ ಗೋತಮೋ ಆಪೋ ಬೃಹತೀ
ಧಾಮಂತೇ ವಿಶ್ವಂ ಭುವನಮದಿಶ್ರಿತಮಂತಃ ಸಮುದ್ರೇ
ಹೃದ್ಯಂತರಾಯುಷಿ ! ಅಪಾಮನೀಕೇ ಸಮಿಧೇಯ
ಅಭೃತಸ್ತಮಶ್ಯಾಮ ಮಧುಮಂತಂತ ಊರ್ಮಿಂ
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಶಿವಕಳಶ ಗುರುಕಳಶದ ಹೊಲಬ ನಮ್ಮ ಬಸವಣ್ಣ ಬಲ್ಲ./1483
ಶಿವಕ್ಷೇತ್ರದಲಾದ ಪದಾರ್ಥವ, ಕಿಂಕಿಲದಿಂದ ಅತಿಪ್ರೇಮದಿಂದ
ತನು [ವಾಂಶಿಕ] ಮುಟ್ಟಲೀಯದೆ ಲಿಂಗಾರ್ಪಿತವ ಮಾಡೂದು,
ಆ ಪ್ರಸಾದವ ಸತಿಸುತರಿಗೆನ್ನದೆ ಭೃತ್ಯಾಚಾರದಲ್ಲಿ ಗ್ರಹಿಸೂದು.
ಪ್ರಸಾದ ಬೀಸರವಾದರೆ ಭಕ್ತಿ ಸಹಜವಾಗದು,
ನಿಮಗೆಂದೂ ದೂರ ಕೂಡಲಚೆನ್ನಸಂಗಮದೇವಾ. /1484
ಶಿವಚಾರವೆ ಅಂಗ, ಶಿವಭಕ್ತಿಯೆ ಅಂಗ, ಶಿವಶರಣರ ನಿಷ್ಠೆಯೆ ಅಂಗ.
ಅಂಗಲಿಂಗಸಂಗವೆಂದೂ ಹಿಂಗದುದು ಸದಂಗ. ಆವ ಪದಾರ್ಥವಾದಡೇನು ?
ತನ್ನ ನೇಮಿಸಿ ಬಂದುದ ಸಕಲೇಂದ್ರಿಯಂಗಳ ಹೊದ್ದಲೀಯದೆ
ಭಾವಮುಖದಲ್ಲಿಯೆ ಸಂದಿಸಿ
ಕೂಡಲಚೆನ್ನಸಂಗಯ್ಯಂಗರ್ಪಿಸಿ ಕೊಳಬಲ್ಲಡೆ
ಅದೆ ಅಂಗಲಿಂಗಸಂಯೋಗ/1485
ಶಿವಜನ್ಮ ಶಿವಕುಲಜನಾಗಿ ಶಿವಶರಣರ ಮನೆಯ ಒಕ್ಕುದ ಕೊಂಬುದು.
ಭವಭಾರಿಯ ಮನೆಯಲು ಲಿಂಗಾರ್ಚನೆಯ ಮಾಡಲಾಗದು.
ಭವಿವಿರಹಿತಂ, ಭವಿಪಾಕವ ತನ್ನ ಲಿಂಗಕ್ಕೆ ಕೊಟ್ಟಡೆ
ರೌರವಂ ನರಕ ನೋಡಾ.
ಅಸಂಸ್ಕಾರಿಕೃತಂ ಪಾಕಂ ಶಂಭೋನರ್ೈವೇದ್ಯಮೇವ ನ
ಅನಿವೇದ್ಯಂ ತು ಭುಂಜೀಯಾನ್ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಭವಿಯ ಸಂಗ ಪುನರಪಿ ಜನ್ಮ. /1486
ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ
ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು
ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ
ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ
ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ?
ಸೂರ್ಯನು ಜ್ಞಾನವುಳ್ಳ್ಳವನಾದಡೆ
ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ
ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ
ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ?
ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು
ಜಾತಜ್ವರದಲ್ಲಿ ಅಳಲುತಿಹನೆ ?
ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ
ವಿವಾಹವಾದ ಹೆಂಡತಿ ರೋಹಿಣೀದೇವಿಯ
ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ?
ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ?
ಅದು ಕಾರಣ- ತಮಗೆ ಮುಂಬಹ ಸುಖದುಃಖಂಗಳನರಿಯದವರು
ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು.
ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು.
ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು
ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು,
ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು.
ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ,
ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ
ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು,
ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು
ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ,
ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು.
`ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ
ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ‘ ಇಂತೆಂದುದಾಗಿ
ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ
ಪರಿಹರಿಸೇನೆಂದಡೆ ಹೋಗಲರಿಯದು.
ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ,
ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ,
ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ,
ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು.
ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ
ಕೂಡಲಚೆನ್ನಸಂಗಮದೇವಾ./1487
ಶಿವನ ಪಾದೋದಕವನಲ್ಲದೆ ಕೊಳ್ಳಲಾಗದೆಂದುದು ವೇದ.
ಶಿವನ ಪ್ರಸಾದವನಲ್ಲದೆ ಉಣಲಾಗದೆಂದುದು ವೇದ.
ಜಾಬಾಲಶಿಖಾಯಾಂ:
“ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ
ರುದ್ರೇಣ ಘ್ರಾತಂ ಜಿಘ್ರಂತಿ
ತಸ್ಮಾತ್ ಬ್ರಾಹ್ಮಣೋ ವಿದ್ವಾನ್ ನಿರ್ಮಾಲ್ಯಮೇವ ಭಕ್ಷಯೇತ್
ನಿರ್ಮಾಲ್ಯಮೇವ ನಿಷೇವಯೇತ್ ‘
ಇದನರಿದು, ಶಿವನ ಪಾದೋದಕ ಪ್ರಸಾದವ ಕೊಂಬಾತನೆ ಸದ್ಬ್ರಾಹ್ಮಣ,
ಆತನೆ ವಿದ್ವಾಂಸನು, ಆತನೆ ಎಲ್ಲವನು ಬಲ್ಲ ಸರ್ವಜ್ಞನಯ್ಯಾ,
ಆತನೆ ಸದ್ಭಕ್ತನು ಕೂಡಲಚೆನ್ನಸಂಗಮದೇವಾ./1488
ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು ವೇದ.
ಉಳ್ಳಡೆ, ದಕ್ಷನ ಜನ್ನ ತಾನೆ ಹೇಳದೆ ?
ಉಳ್ಳಡೆ ಕ್ರತುವನು ಕಾಯಲಾಗದೆ ?
ಉಳ್ಳಡೆ ತಮ್ಮ ತಮ್ಮ ಶಿರಗಳ ಹೋಗಲಾಡಿಕೊಳಲೇಕೆ ?
ಈ ಕ್ರತುಗಳಿಗೆ `ಶಿವನೇಕೋ ದೇವ’ ಎಂದುದು ಋಗ್ವೇದ.
`ಆವೋ ರಾಜಾನಮಧ್ವರಸ್ಯ ರುದ್ರಂ
ಹೋತಾರಂ ಸತ್ಯಯಜುಂ ರೋದಸ್ಯೋಃ
ಅಗ್ನಿಂ ಪುರಾತನಯಿತ್ನೋರಚಿತ್ತಾತ್
ಹಿರಣ್ಯರೂಪಮವಸೇ ಕೃಣುಧ್ವಂ -ಎಂದುದಾಗಿ
ಇಂತೆಂಬ ಶ್ರುತಿಯಿದೆ.
ಇದು ಕಾರಣ- ಕೂಡಲಚೆನ್ನಸಂಗನಲ್ಲದಿಲ್ಲ; ನಿಲ್ಲು, ಮಾಣು./1489
ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದಕ್ಕೆ ಶ್ರುತಿ:
‘ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ’, ಎನುತ
ಕೂಡಲಚೆನ್ನಸಂಗಯ್ಯನ ವೇದಿಸಿಹೆವೆನುತ ವೇದಂಗಳಾದವು. /1490
ಶಿವನಿಗೈದು ಮುಖ, ಭಕ್ತನಿಗೈದು ಮುಖ.
ಆವುವಾವುವೆಂದರೆ:
ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,
ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.
ಇಂತೀ ಪಂಚಮುಖವನರಿಯದ
ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ
ಇಂತೀ ಐವರಿಗೆ ಲಿಂಗವ ಕಟ್ಟಿದಡೆ
ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ
ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !
ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ
ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ/1491
ಶಿವಭಕ್ತನಾದ ಬಳಿಕ ಭವಿ ಮಿಶ್ರವ ನಡೆಯಲಾಗದು
ಅನ್ಯದೈವದ ಭಜನೆಯ ಮಾಡಲಾಗದು.
`ಮಾತರಃ ಪಿತರಶ್ಚೈವ ಭರ್ತಾರೋ ಬಾಂಧವಾಸ್ತಥಾ
ಶಿವಸಂಸ್ಕಾರಹೀನಾಶ್ಚೇತ್ ಪಾಕೋ ಗೋಮಾಂಸಭಕ್ಷಣಂ’ ಎಂದುದಾಗಿ
ಕೂಡಲಚೆನ್ನಸಂಗಯ್ಯಾ ನಿಮ್ಮ ಲಿಂಗಸಂಗಿಗಳಂಗವಿಸರು/1492
ಶಿವಭಕ್ತಿಯುಳ್ಳವಂಗೆ;
ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ;
ಮೋಹ ಬೇಡ, ಮದ ಬೇಡ, ಮತ್ಸರ ಬೇಡ.
ಶಿವಭಕ್ತಿಯುಳ್ಳವಂಗೆ;
ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು,
ಮೋಹ ಬೇಕು, ಮದ ಬೇಕು, ಮತ್ಸರ ಬೇಕು.
ಬೇಕೆಂಬುದಕ್ಕಾವ ಗುಣ ?
ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ,
ಲೋಭ ಬೇಕು ಪಾದೋದಕ ಪ್ರಸಾದದಲ್ಲಿ,
ಮೋಹ ಬೇಕು ಗುರುಲಿಂಗ ಜಂಗಮದಲ್ಲಿ,
ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು,
ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ-ಇಂತೀ ಷಡ್ಗುಣವಿರಬೇಕು.
ಬೇಡವೆಂಬುದಕ್ಕಾವುದು ಗುಣ ?
ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ,
ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ,
ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.-
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ/1493
ಶಿವಭಕ್ತಿಯೆ ಶಿವಾನುಗ್ರಹಕ್ಕೆ ಕಾರಣವಾಗಿರ್ಪುದು ನೋಡಾ.
ಶಿವಾನುಗ್ರಹವೆ ಇಹಪರ ಸುಖಕ್ಕೂ ಪರಮಾನಂದ ಪ್ರಾಪ್ತಿಗೂ
ಕಾರಣವಾಗಿರ್ಪುದು ನೋಡಾ.
`ಯೋಗೇನ ತು ಪರಾಭಕ್ತಿಃ ಪ್ರಸಾದಸ್ತದನಂತರಂ
ಪ್ರಸಾದಾನ್ಮುಚ್ಯತೇ ಜಂತುಮರ್ುಕ್ತಶ್ಶಿವಸಮೋ ಭವೇತ್
ಎಂದಿಹುದನಾರಯ್ಯದೆ, ಎನ್ನ ನಂಬುಗೆ ಎನ್ನ ಕಟ್ಟು ಕ್ರಿಯಾದಿಗಳಿಂದ
ಸರ್ವಸುಖ ಪಡೆವೆನೆಂಬ ಜೀವಭಾವದ ಹಮ್ಮಿನ ಬಿಮ್ಮುಹತ್ತಿ
ಮುಂದುಗಾಣದ ಮಂದಮತಿಗೆ ಮೆಚ್ಚುವರೆ
ಕೂಡಲಚೆನ್ನಸಂಗಯ್ಯನ ಶರಣರು ?/1494
ಶಿವಮಂತ್ರ ಸಂಸ್ಕಾರವಿಲ್ಲದ ತನುಭವಿಗಳು ತನ್ನಲಿಂಗಕ್ಕೆ ಮಾಡುವನ್ನಕ್ಕ
ಭವಿಮಿಶ್ರವ ಕಳೆದೆವೆಂದೆಂತೆನಬಹುದು?
ಶಿವಸಂಸ್ಕಾರವಾಗಿ ಜಾತಿಸೂತಕ [ಜನನಸೂತಕ] ಪ್ರೇತಸೂತಕ ರಜಸ್ಸೂತಕ
ಎಂಜಲುಸೂತಕವೆಂಬ ಪಂಚಸೂತಕವುಳ್ಳ ಭವಿಗಳು
ತನ್ನ ಲಿಂಗಕ್ಕೆ ಮಾಡುವನ್ನಕ್ಕ ಭವಿಮಿಶ್ರವ ಕಳೆದೆವೆಂದೆಂತೆನಬಹುದು?
ತನುಭವಿಯ ಹಸ್ತವೆ ಪಂಚ ಮಹಾಪಾತಕ
ಮನಭವಿಯ ಹಸ್ತವೆ ಅಘೋರನರಕ.
ಭವಿನಾಂ ಪಾಪದೃಷ್ಟೀನಾಂ ನ ಕಿಂಚಿತ್ಪರಮಂ ಪದಂ
ಎಂಬುದನರಿದು ಇಂತಪ್ಪ ಭವಿಗಳನೊಳಗಿಟ್ಟುಕೊಂಡು
ಎನಗೆ ಭವಿಮಿಶ್ರವಿಲ್ಲೆಂಬ ಲಜ್ಜೆಗೆಟ್ಟ ದುರಾಚಾರಿಗಳ
ಸಜ್ಜನಸದ್ಭಕ್ತರು ಮೆಚ್ಚರು ಕೂಡಲಚೆನ್ನಸಂಗಮದೇವಾ. /1495
ಶಿವಯೋಗವಾದಲ್ಲಿ ಸಂಸಾರಯೋಗ ಮಾಬುದಯ್ಯಾ,
ಸಂಸಾರಯೋಗ ಮಾದಲ್ಲಿ ಭಕ್ತಾನುಗ್ರಹಯೋಗವಯ್ಯಾ,
ಭಕ್ತಾನುಗ್ರಹಯೋಗವಾದಲ್ಲಿ ಲಿಂಗಾನುಗ್ರಹಯೋಗವಯ್ಯಾ,
ಲಿಂಗಾನುಗ್ರಹಯೋಗವಾದಲ್ಲಿ ಜಂಗಮಾನುಗ್ರಹಯೋಗವಯ್ಯಾ,
ಜಂಗಮಾನುಗ್ರಹಯೋಗವಾದಲ್ಲಿ ಪ್ರಸಾದಾನುಗ್ರಹಯೋಗವಯ್ಯಾ,
ಪ್ರಸಾದಾನುಗ್ರಹಯೋಗವಾದಲ್ಲಿ ತ್ರಿವಿಧ ಸನುಮತಯೋಗವಯ್ಯಾ,
ತ್ರಿವಿಧ ಸನುಮತಯೋಗವಾದಲ್ಲಿ ಮನಮಗ್ನಯೋಗವಯ್ಯಾ,
ಮನಮಗ್ನಯೋಗವಾದಲ್ಲಿ ಕೂಡಲಚೆನ್ನಸಂಗನಲ್ಲಿ
ಲಿಂಗಸಂಯೋಗವಯ್ಯಾ. /1496
ಶಿವಯೋಗಿಯೇ, ನಿಭ್ರಾಂತನೇ, ಶರಣ.
ಕರ್ಮಕಾಯನು ಅಲ್ಲ, ಕಾಲಕಲ್ಪಿತನಲ್ಲ ಶರಣನು.
ಸಂಕಲ್ಪ ವಿಕಲ್ಪ ವಿರಹಿತನಾಗಿ
ಅವರವರ ಬೆರಸಿಪ್ಪ, ತನ್ನ ಪರಿ ಬೇರೆ,
ನಿರಂತರಸುಖಿ, ಕೂಡಲಚೆನ್ನಸಂಗಾ
ಪ್ರಪಂಚಿನೊಳಗಿಪ್ಪ, ತನ್ನ ಪರಿ ಬೇರೆ. /1497
ಶಿವಲಿಂಗಮೋಹಿತನಾದಡೆ ಅನ್ಯಮೋಹವ ಮರೆಯಬೇಕು.
ಶಿವಲಿಂಗ ಭಕ್ತನಾದಡೆ ಅನ್ಯದೈವದ ಭಜನೆ ಮಾಡಲಾಗದು.
ಶಿವಲಿಂಗಪೂಜಕನಾದಡೆ ಅನ್ಯದೈವದ ಪೂಜೆಯ ಮಾಡಾಗದು.
ಶಿವಲಿಂಗವೀರನಾದಡೆ ಪುಣ್ಯಕ್ಷೇತ್ರಂಗಳ ಕುರಿತು ಹೋಗಲಾಗದು.
ಶಿವಲಿಂಗಪ್ರಸಾದಿಯಾದಡೆ ಅಂಗಭೋಗವ ಮರೆಯಬೇಕು.
ಶಿವಲಿಂಗಪ್ರಾಣಿಯಾದಡೆ (ಪರ)ಸತಿಸಂಗವ ಮಾಡಲಾಗದು.
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ
ಈ ಆರು ಸಹಿತ ಶಿವಲಿಂಗಭಕ್ತಿ. /1498
ಶಿವಲಿಂಗವ ನೋಡುವ ಕಣ್ಣಲ್ಲಿ
ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ.
ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ,
ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ.
ಘನಲಿಂಗವ ಪೂಜಿಸುವ ಕೈಯಲ್ಲಿ,
ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ.
ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ
ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ
ಕೂಡಲಚೆನ್ನಸಂಗಮದೇವಾ/1499
ಶಿವಲಿಂಗಾರ್ಚನೆಯ ಮಾಡಿ ಶಿವಾರ್ಪಿತಕ್ಕೆ ಕೈದೆಗೆದಡೆ
ಅದು ಲಿಂಗಾರ್ಪಿತಕ್ಕೆ ನೈವೇದ್ಯ ತನಗೆ ಪ್ರಸಾದವಹುದು.
ಇದು ಕಾರಣ-ಕೂಡಲಚೆನ್ನಸಂಗಮದೇವ
ಇಂತಪ್ಪ ಸಮಯೋಚಿತ ಉಳ್ಳವರ ಎನಗೆ ತೋರಯ್ಯಾ./1500