Categories
ಶರಣರು / Sharanaru

ಚೆನ್ನಯ್ಯ

ವಚನಾಂಕಿತ: ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.

ಈತನು ಮಾದಾರ ಚೆನ್ನಯ್ಯನು ಬೇರೆ ಬೇರೆ, ಈತನ ಬಗ್ಗೆ ಹೆಚ್ಚಿನ ವಿವರಗಳು ಅಲಭ್ಯ, “ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.” ಎಂಬ ವಚನಾಂಕಿತ ಹೊಂದಿದ ೪೨ ವಚನಗಳು ಸಿಕ್ಕಿವೆ. ಈತನ ವಚನಗಳಲ್ಲಿ ಪ್ರಸಾದದ ಅರ್ಥವಿವರಣೆ, ಮಹತ್ವ, ಪ್ರಸಾದ ಅರ್ಪಿತ ವಿಧಾನ, ಪಾದೋದಕ ಮಹತ್ವ, ಶರಣ-ಲಿಂಗ ಸಂಬಂಧ-ಇವುಗಳ ನಿಜವಾದ ಅರ್ಥ ತಿಳಿಯದೆ ನಿಂದಿಸುವವರ ಟೀಕೆ ಇಲ್ಲಿನ ಪ್ರಧಾನ ವಿಷಯ.