Categories
ಶರಣರು / Sharanaru

ಢಕ್ಕೆಯ ಬೊಮ್ಮಣ್ಣ

ಅಂಕಿತ: ಕಾಲಾಂತಕ ಭಿಮೇಶ್ವರಲಿಂಗ
ಕಾಯಕ: ಡೊಳ್ಳು ಬಾರಿಸುತ್ತ, ಉಡಿಯಲ್ಲಿ ತಡಿಯಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು, ಬಾಳು ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡು, ಬಳೆಯನ್ನು ಕೈಗೆ ತೊಟ್ಟುಕೊಂಡು, ಮಾರಿಯನ್ನು ಮೊರದಲ್ಲಿ ಹಾಕಿಕೊಂಡು ಭಕ್ತರ ಮನೆಮನೆಯ ಮುಂದೆ ನಿಂತು ಬೇಡುವುದು ಇವನ ಕಾಯಕವಾಗಿದ್ದಿರಬಹುದು.

ಈತನಿಗೆ ಡಕ್ಕೆಯ ಮಾರಯ್ಯ ಎಂದೂ ಕರೆಯಲಾಗುತ್ತದೆ. ಈತ ಒಬ್ಬ ಜಾನಪದ ಕಲಾವಿದ. ಶರಣನಾಗುವ ಮೊದಲು ಮಾರಿಯನ್ನು ತಲೆಯ ಮೇಲೆ ಹೊತ್ತು ಢಕ್ಕೆಯನ್ನು ಬಾರಿಸುತ್ತ ಭಿಕ್ಷೆ ಬೇಡುವುದು ಈತನ ಕಾಯಕವಾಗಿತ್ತು. ಶಂಕರ ದಾಸಿಮಯ್ಯನ ಗರ್ವವನ್ನು ಈತ ಮುರಿದನೆಂದು ವೀರಶೈವಾಮೃತ ಮಹಾಪುರಾಣ ಹೇಳುತ್ತದೆ. ಕಾಲ-೧೧೩0. ‘ಕಾಲಾಂತಕ ಭಿಮೇಶ್ವರಲಿಂಗ’ ಅಂಕಿತದಲ್ಲಿ ೯0 ವಚನಗಳು ದೊರಿತಿವೆ. ಅವುಗಳಲ್ಲಿ ತನ್ನ ಕಲೆಯ ವೇಷ ಭೂಷಣ ಮತ್ತು ಪರಿಭಾಷೆಯನ್ನು ಆಧ್ಯಾತ್ಮಿಕ್ಕೆ ಸಂಕೇತವಾಗಿ ಬಳಸಿದ್ದಾನೆ. ತನ್ನ ವ್ಯಕ್ತಿತ್ವವನ್ನು ರೂಪಿಸಿದ ಬಸವಾದಿ ಶರಣರನ್ನು ನೆನೆಯುತ್ತಾನೆ.