Categories
ಶರಣರು / Sharanaru

ತುರುಗಾಹಿ ರಾಮಣ್ಣ

ಅಂಕಿತ: ಗೋಪತಿನಾಥ ವಿಶ್ವೇಶ್ವರಲಿಂಗ
ಕಾಯಕ: ಪಶುಪಾಲಕ

ಶಿವಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಈತನ ಕಾಲ ೧೧೬೦ ‘ಗೋಪತಿನಾಥ ವಿಶ್ವೇಶ್ವರಲಿಂಗ’ ಅಂಕಿತದಲ್ಲಿ ರಚಿಸಿದ ೪೬ ವಚನಗಳು ದೊರೆತಿವೆ. ತನ್ನ ವೃತ್ತಿ ವಲಯದ ಅನುಭವವನ್ನು ಆಧ್ಯಾತ್ಮಾನುಭವದ ಜೊತೆ ಸಮೀಕರಿಸಿ ಹೇಳಿದ ರೀತಿ ತುಂಬ ಅರ್ಥಪೂರ್ಣವೆನಿಸಿದೆ. ಕೆಲವು ಬೆಡಗಿನ ವಚನಗಳಲ್ಲಿ ತಾತ್ವಿಕ ವಿವೇಚನೆಯಿದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ ಮತ್ತು ಇತರ ಶರಣರು ಎಲ್ಲಿ ಹೋಗಿ ಐಕ್ಯರಾದರು ಎಂಬುದನ್ನು ತಿಳಿಸುವ ವಚನ ಐತಿಹಾಸಿಕ ಮಹತ್ವವನ್ನು ಪಡಿದಿದೆ.

ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮ ಬೋಧೆ ಮಾಡಿರುವನು. ಹಾಗೆಯೇ ತನ್ನ ಕಾಯಕದ ಬಗೆಗೂ ಹೇಳಿಕೊಂಡಿರುವನು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ – ಇವರು ಬಯಲಾದ ವಿವರ ನೀಡಿರುವನು.