Categories
ಶರಣರು / Sharanaru

ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ??

ಸು.1600ರಲ್ಲಿ ಇದ್ದಿರಬಹುದಾದ ಈ ಅಂಕಿತದ ವಚನಕಾರನ ಹೆಸರು ಅಲಭ್ಯ. ಏಳು ವಚನಗಳು ದೊರೆತಿವೆ. ಇಷ್ಟಲಿಂಗವ ಬಿಟ್ಟು ಅನ್ಯದೈವಕ್ಕೆರಗುವವರ ಟೀಕೆ ನಿಂದಕರ ತೆಗಳಿಕೆ ಮುಂತಾದ ವಿಷಯಗಳು ಆಕರ್ಷಕ ದೃಷ್ಟಾಂತಗಳ ಮೂಲಕ ಈ ವಚನಗಳಲ್ಲಿ ನಿರೂಪಿಸಲ್ಪಟ್ಟಿವೆ. ನೀತಿಪರವಾದ ಮಾತುಗಳಿವೆ. ಏಕದೈವದ ಬಗೆಗೆ ನಿಷ್ಠೆಯಿರಬೇಕೆಂಬ ಸೂಚನೆಯಿದೆ.

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.