Categories
ಶರಣರು / Sharanaru

ದಶಗಣ ಸಿಂಗಿದೇವ

ಅಂಕಿತ: ನಾಚಯ್ಯಪ್ರಿಯ ಮಲ್ಲಿನಾಥಾ
ಕಾಯಕ: ಧರ್ಮ ಪ್ರಸಾರಕ

೧೧೬೦ರಲ್ಲಿ ಇದ್ದ ಈತನು ‘ದಶಗಣ’ರಲ್ಲಿ ಒಬ್ಬನು. ನಾಲ್ಕು ವಚನಗಳು ದೊರೆತಿವೆ. ಅಂಕಿತ ‘ನಾಚಯ್ಯಪ್ರಿಯ ಮಲ್ಲಿನಾಥಯ್ಯ’ ಬಸವಣ್ಣನವರ ವಚನಗಳ ದಟ್ಟ ಪ್ರಭಾವಕ್ಕೊಳಗಾದ ಈತನ ವಚನಗಳಲ್ಲಿ ಗುರುಭಕ್ತಿ, ಇಷ್ಟಲಿಂಗ ನಿಷ್ಠೆ ಎದ್ದು ತೋರುತ್ತದೆ.

೧೦೫೨
ಸತಿಸುತ ಮಾತಾಪಿತರಿಗೆಂದು ಹೊನ್ನನ್ನು ಪಡೆಯುವುದು, ಮಾನವರ ಸೇವೆ ಮಾಡುವುದು ಸಲ್ಲದು ಎನ್ನುವ ನಿಲುಮೆ ಆಶ್ಚರ್ಯಕರವಾಗಿದೆ. ಗುರುವಿನಿಂದ ಬದುಕಿದೆನು ನಿಮ್ಮ ಹಂಗೇನು ಎನ್ನುವ ಅವನ ಧೋರಣೆ ಗಮನಾರ್ಹವಾದುದು.