Categories
ಶರಣರು / Sharanaru

ದೇಶಿಕೇಂದ್ರ ಸಂಗನಬಸವಯ್ಯ

ಅಂಕಿತ: ಗುರುನಿರಂಜನ ಚನ್ನಬಸವಲಿಂಗ
ಕಾಯಕ: ವಿರಕ್ತ ಪರಂಪರೆಗೆ ಸೇರಿದ ಚರಜಂಗಮ

ಈತನ ವೃತ್ತವೇನೂ ದೊರಕುವುದಿಲ್ಲ. ‘ದೇಶಿಕೇಂದ್ರ’ ಎಂದು ಕರೆದುಕೊಂಡಿರುವುದರಿಂದ ವಿರಕ್ತ ಪರಂಪರೆಗೆ ಸೇರಿದ ಚರಜಂಗಮನಾಗಿರಬೇಕು. ಸೊಲ್ಲಾಪುರದ ಸಮೀಪದ ಕರಜಿಗೆ ಈತನ ಸ್ಥಳವಾಗಿರಬೇಕು. ಕಾಲ ಸು.೧೭ನೇ ಶತಮಾನ. ಅಂಕಿತ- ನಿರಂಜನ ಚೆನ್ನ ಬಸವಲಿಂಗ’ ಸದ್ಯ ೧೨೪೨ ವಚನಗಳು ದೊರೆತಿವೆ. ‘ಷಟ್ ಸ್ಥಲ ವಚನಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಅವುಗಳನ್ನು ಸಂಕಲಿಸಲಾಗಿದೆ. ಒಟ್ಟು ೫೩ ಸ್ಥಲಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಕೆಲವು ಇದುವರೆಗೆ ಹೆಸರಿಸದೇ ಇರುವ ನೂತನ ಸ್ಥಲಗಳಾಗಿರುವುದು ವಿಶೇಷವೆನಿಸಿದೆ.