Categories
ಶರಣರು / Sharanaru

ನಗೆಯ ಮಾರಿತಂದೆ

ಅಂಕಿತ: ಅತುಳವೈರಿ ಮಾರೇಶ್ವರಾ
ಕಾಯಕ: ನಗೆಗಾರ – ನಗಿಸುವುದು ಒಂದು ಕಾಯಕವಾಗಿ ಸ್ವೀಕರಿಸಿರುವನು.

ನಗಿಸುವದನ್ನೇ ಕಾಯಕವನ್ನಾಗಿ ಮಾಡಿಕೊಂಡ ಹಾಸ್ಯ ಕಲಾವಿದನೀತ. ಕಾಲ-೧೧೬೦. ‘ಆತುರವೈರಿ ಮಾರೇಶ್ವರ’ ಅಂಕಿತದಲ್ಲಿ ೧0೧ ವಚನಗಳನ್ನು ರಚಿಸಿದ್ದಾನೆ. ಚತುರ ಮಾತುಗಾರಿಗೆ, ದೃಷ್ಟಾಂತ ಕಥೆಗಳು ಮತ್ತು ಹೋಲಿಕೆಗಳ ಮೂಲಕ ಕೇಳುಗರ ಮನಸ್ಸನ್ನು ರಂಜಿಸುವ ಕಲೆಗಾರಿಕೆ ಈ ವಚನಗಳಲ್ಲಿ ಎದ್ದು ತೋರುತ್ತದೆ. ಹಾಸ್ಯದ ಒಳಗೆ ಆಧ್ಯಾತ್ಮವನ್ನು ಅಡಗಿಸಿಕೊಂಡಿರುವುದು, ಸರಳತೆ, ಸಂಕ್ಷಿಪ್ತತೆಗಳನ್ನು ಮೈಗೊಡಿಸಿಕೊಂಡಿರುವುದು ಈತನ ವಚನಗಳ ವಿಶೇಷತೆ ಎನಿಸಿದೆ.

ವಾಗದ್ವೈತಗಾರರ ವಿಡಂಬನೆ ಮಾಡಿರುವನು. ಊರಿಂದೂರಿಗೆ ಎತ್ತಿನಮೇಲೆ ಹಸ್ತಪ್ರತಿಗಳನ್ನು ಸಾಗಿಸುತ್ತಿದ್ದ ಚಿತ್ರ ಕೊಟ್ಟಿರುವನು.