Categories
ಶರಣರು / Sharanaru

ನಿಜಗುಣಯೋಗಿ

ಅಂಕಿತ: ನಿಜಗುಣಯೋಗಿ

ಈತನ ಸ್ಥಳ-ಚಿಮ್ಮಲಗಿ. ಚಂದಿಮರಸ ಈತನ ಶಿಷ್ಯ. ಕಾಲ ೧೧೬೦ ‘ನಿಜಗುಣಯೋಗಿ’ ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ಬರೆದಿದ್ದಾನೆ. ಈಗ ದೊರೆತ ೧೬ ವಚನಗಳಲ್ಲಿ ಶಿವಯೋಗದ ಪ್ರತಿಪಾದನೆ ಮುಖ್ಯವಾಗಿದೆ. ಕೆಲವು ಸೂತ್ರಪ್ರಾಯವಾದ ಮಾತುಗಳಲ್ಲಿ ಅನುಭಾವ ಹರಳುಗಟ್ಟಿದೆ. ಈತನ ಘನವ್ಯಕ್ತಿತ್ವವನ್ನು ಅನೇಕ ಶರಣರು ಕೊಂಡಾಡಿದ್ದಾರೆ.