Categories
ಶರಣರು / Sharanaru

ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

ಅಂಕಿತ: ಕರ್ಮಹರ ಕಾಳೇಶ್ವರಾ
ಕಾಯಕ: ಮರ ಗೆಲಸದವ (ಬಡಗಿ)

೧೦೯೦
ಕಾಯಕ ತಪ್ಪಿದಡೆ ಸೈರಿಸಬಾರದು
ವ್ರತ ತಪ್ಪಲೆಂತೂ ಸೈರಿಸಬಾರದು ಕರ್ಮಹರ ಕಾಳೇಶ್ವರಾ.

ಈಕೆ ಬಡಗಿ ಕಾಯಕದ ಬಸವಯ್ಯಗಳ ಹೆಂಡತಿ ಕಾಲ ೧೧೬೦. ‘ಕರ್ಮಹರ ಕಾಳೇಶ್ವರ’ ಅಂಕಿತದಲ್ಲಿ ೨ ವಚನಗಳು ದೊರೆತಿವೆ. ಕಾಯಕ, ವ್ರತ ಮತ್ತು ನುಡಿಯ ಮಹತ್ವವನ್ನು ಅವುಗಳಲ್ಲಿ ಎತ್ತಿ ಹೇಳಲಾಗಿದೆ. ತನ್ನ ವೃತ್ತಿಪರಿಭಾಷೆಯನ್ನು ಬಳಸಿಕೊಂಡು, ಉಚಿತ ದೃಷ್ಟಾಂತದೊಂದಿಗೆ ಹೇಳಿದ ಮಾತುಗಳು ಮನಮುಟ್ಟುವಂತಿವೆ.

೧೦೯೧
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ, ಕರ್ಮಹರ ಕಾಳೇಶ್ವರಾ.