Categories
ಶರಣರು / Sharanaru

ಬೊಕ್ಕಸದ ಚಿಕ್ಕಣ್ಣ

ಅಂಕಿತ: ಬಸವಣ್ಣಪ್ರಿಯ ನಾಗರೇಶ್ವರಲಿಂಗ
ಕಾಯಕ: ಬೊಕ್ಕಸದ ಅಧಿಕಾರಿ

ಈತ ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದ. ಕಾಲ-೧೧೬೦. ‘ಬಸವಣ್ಣಪ್ರಿಯ ನಾಗರೇಶ್ವರಲಿಂಗ’ ಅಂಕಿತದಲ್ಲಿ ಬರೆದ ೧೦ ವಚನಗಳು ದೊರೆತಿವೆ. ತನ್ನ ವೃತ್ತಿ ವಿವೇಚನೆ ಮಾಡುತ್ತಾನೆ. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾನೆ.

ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿರುವನು. ಕಾಯಕದಿಂದ ಶಿವಜ್ಞಾನವನ್ನೂ, ಶಿವನನ್ನೂ ತಿಳಿಯಲು ಸಾಧ್ಯವೆನ್ನುವನು. ತನ್ನ ಕಾಯಕ ಬಸವಣ್ಣ ಚನ್ನಬಸವಣ್ಣ ಕೊಟ್ಟದ್ದು ಎಂದಿರುವನು. ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು ಎನ್ನುವ ಅವನ ವ್ಯಾವಹಾರಿಕ ಗುಣ ಮೆಚ್ಚುವಂತಹುದು.