Categories
ಶರಣರು / Sharanaru

ಮನಸಂದ ಮಾರಿತಂದೆ

ಅಂಕಿತ: ಮನಸಂದಿತ್ತು ಮಾರೇಶ್ವರಾ

ಈತನ ಜೀವನ ವಿವರಗಳು ದೊರೆತಿಲ್ಲ. ಕಾಲ-೧೧೬೦. ‘ಮನಸಂದಿತ್ತು ಮಾರೇಶ್ವರ’ ಅಂಕಿತದಲ್ಲಿ ೧೦೧ ವಚನಗಳು ದೊರೆತಿವೆ. ಗುರುಲಿಂಗಜಂಗಮ ವಿಚಾರ, ಲಿಂಗಾಂಗ ಸಾಮರಸ್ಯದ ರೀತಿ, ವ್ರತ ನೇಮಗಳ ವಿವರ, ಧರ್ಮಭ್ರಷ್ಟರ ಟೀಕೆ-ಇವುಗಳಲ್ಲಿ ಪ್ರತಿಪಾದನೆಗೊಂಡಿವೆ.

ವಚನಗಳು ಗಾತ್ರದಲ್ಲಿ ಚಿಕ್ಕವು. ಲಿಂಗಾಂಗ ಸಾಮರಸ್ಯ, ಗುರು-ಲಿಂಗ-ಜಂಗಮ ಲಕ್ಷಣ, ಜ್ಞಾನಿಯ ಇರವು, ಶಿವಭಕ್ತರ ವ್ರತನೇಮ, ಆತ್ಮನಸ್ವರೂಪ, ಧರ್ಮಭ್ರಷ್ಟರ ವಿಡಂಬನೆ-ವಚನಗಳಲ್ಲಿ ಬಂದಿವೆ.