Categories
ಶರಣರು / Sharanaru

ಮನುಮುನಿ ಗುಮ್ಮಟದೇವ

ಅಂಕಿತ: ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಕಾಯಕ: ಮೀಮಾಂಸಕ

ಈತ ಮೂಲತ: ಜೈನಧರ್ಮೀಯನಾಗಿದ್ದು, ಅನಂತರ ಶರಣಧರ್ಮ ಸ್ವೀಕರಿಸಿದಂತೆ ತಿಳಿದುಬರುತ್ತದೆ. ಕಾಲ-೧೧೬೦. ‘ಗೂಡಿನ ಗುಮ್ಮಟನೊಡೆಯ ಆಗಮ್ಯೇಶ್ವರಲಿಂಗ’ ಅಂಕಿತದಲ್ಲಿ ೯೯ ವಚನಗಳು ದೊರೆತಿವ. ಇವುಗಳನ್ನು ಎಲ್ಲ ಪುರಾನತರ ವಚನಕಟ್ಟುಗಳಲ್ಲಿ ಆತ್ಮನರಿವು ಭಾವಸ್ಥಲ, ಆತ್ಮ ಐಕ್ಯನಸ್ಥಲ, ಪಿಂಡಜ್ಞಾನಸಂಬಂಧ ಎಂಬ ಸ್ಥಲಗಳ ಅಡಿಯಲ್ಲಿ ಜೋಡಿಸಲಾಗಿದೆ. ಷಟ್ಸ್ಥಲ ತತ್ವ, ಏಕದೇವೋಪಾಸನೆ, ಪರಮತ ದೂಷಣೆ, ಜೀವದಯಾಭಾವ ಇವುಗಳಲ್ಲಿ ವಿಶೇಷವಾಗಿ ನಿರೂಪಿತವಾಗಿದೆ. ಬೆಡಗಿನ ಪರಿಭಾಷೆಯಿದ್ದರೂ ಕೆಲವು ವಚನಗಳು ಸುಂದರವಾಗಿವೆ.

ಬಿಜ್ಜಳನಿಗೆ ಧರ್ಮ ಬೋಧಿಸಿದ ಮೀಮಾಂಸಕನೆಂದೂ, ಜಿನನೇಮ ಗುಣನಾಮ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯನೆಂದೂ ತನ್ನನ್ನು ತಾನು ಕರೆದುಕೊಂಡಿರುವುದು ವಿಶೇಷ. ಈತನ ವಚನಗಳಲ್ಲಿ ಭಕ್ತಿಸ್ಥಲ ಐಕ್ಯಸ್ಥಲಗಳಿಗೆ ಸಂಬಂಧಿಸಿದ ವಿವೇಚನೆಯೇ ಹೆಚ್ಚಾಗಿ ಕಂಡು ಬರುತ್ತದೆ. ದಯವೇ ಧರ್ಮದ ಮೂಲ, ಏಕದೇವೋಪಾಸನೆ, ಪರಮತ ದೂಷಣೆಯಂಥ ಸಂಗತಿಗಳನ್ನೂ ಇಲ್ಲಿ ವಿವರಿಸಲಾಗಿದೆ.