Categories
ಶರಣರು / Sharanaru

ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ

ಅಂಕಿತ: ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ
ಕಾಯಕ: ಅರಸ

ಮಾಸ್ತಿ ವಂಶಕ್ಕೆ ಸೇರಿದ ಇಮ್ಮಡಿ ಕಾರ್ಯೇಂದ್ರ ಈತನ ತಂದೆ. ತಾಯಿ ಕುಪ್ಪಮಾಂಬೆ, ಗುರು-ದೊಡ್ಡದೇಶಿಕಾರ್ಯ. ಕಾಲ-1700. ‘ಮುಮ್ಮಡಿ ಕಾರ್ಯಕ್ಷಿತೀಂದ್ರ’ ಎಂದು ತನ್ನನ್ನು ಕರೆದುಕೊಂಡಿರುವುದರಿಂದ ಈತ ಅರಸನಾಗಿರಬೇಕು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ‘ಕಾರ್ಯ’ ಗ್ರಾಮದಲ್ಲಿ ದೊರೆಯಾಗಿದ್ದಿರಬೇಕೆಂದು ಊಹಿಸಲಾಗಿದೆ.

‘ವೇದ ಸಂಜೀವಿನಿ’ ಎಂಬುದು ಕಾರ್ಯೇಂದ್ರ ರಚಿಸಿದ ಕೃತಿ. ಇದರಲ್ಲಿ 11 ಅಧ್ಯಾಯ, 125 ವಚನಗಳಿವೆ. ‘ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ’ ಎಂಬುದು ಅಂಕಿತ. ಗುರು ಕನಸಿನಲ್ಲಿ ಬಂದು ‘ಜೀವರ ಪಾಪಮಂ ನೀಗುವಂತು ಪರತತ್ವ ವಚನಮಂ ರಚಿಸೆಂದು ನಿರೂಪಿಸಲು’ ತಾನು ಹೇಳಿದುದಾಗಿ ತಿಳಿಸುತ್ತಾನೆ.

ಇದು ಶುದ್ಧ ತಾತ್ವಿಕ ಕೃತಿ. ಲಿಂಗಾಯತ ತತ್ವ ವೇದಕ್ಕಿಂತಲೂ ಮಿಗಿಲಾದುದು, ವೇದಕ್ಕೆ ಸಂಜೀವಿನ ರೀತಿಯಲ್ಲಿ ಎಂದು ಸಾರಿ ಹೇಳುವುದೇ ಇದರ ಮೂಲ ಉದ್ದೇಶ.