Categories
ಶರಣರು / Sharanaru

ಮೈದುನ ರಾಮಯ್ಯ

ಅಂಕಿತ: ಮಹಾಲಿಂಗ ಚೆನ್ನರಾಮ

ಈತ ಆಂಧ್ರ ಪ್ರದೇಶದ ಭೀಮಾವತಿ ಎಂಬ ಊರಿನ ಸೋಮನಾಥ ಮತ್ತು ಮಹಾದೇವಿ ಅವರ ಮಗ. ಸ್ವಭಾವತ: ಮುಗ್ಧ. ಕಲ್ಯಾಣಕ್ಕೆ ಬಂದು ಶರಣರೊಂದಿಗೆ ಬೆರೆತು. ತನ್ನ ಮುಗ್ಧಭಕ್ತಿಯಿಂದ ಎಲ್ಲರ ಗಮನ ಸೆಳೆಯುತ್ತಾನೆ. ಇವನು ಶಿವ ಪಾರ್ವತಿಯರನ್ನೇ ಅಕ್ಕ ಭಾವಂದಿರನ್ನಾಗಿ ಭಾವಿಸಿಕೊಂಡು ‘ಮೈದುನ ರಾಮಯ್ಯ’ನೆನಿಸಿದನೆಂದು ಕಾವ್ಯ-ಪುರಾಣಗಳಿಂದ ತಿಳಿದುಬರುತ್ತದೆ. ಕಾಲ-1160.

ನೇಹ=ಸ್ನೇಹ, ಗೆಳೆತನ, ಪ್ರೀತಿ

‘ಮಹಾಲಿಂಗ ಚೆನ್ನರಾಮ’ ಅಂಕಿತದಲ್ಲಿ ಆರು ವಚನಗಳು ದೊರೆತಿವೆ. ಸದ್ಗುರುವಿನ ಕರುಣೆ, ನಿಜಲಿಂಗೈಕ್ಯನ ಸ್ಥತಿ ಮನದ ಸ್ವಭಾವ, ಶರಣರ ಸ್ತುತಿ ಇವು ಆತ್ಮೀಯ ಶೈಲಿಯಲ್ಲಿ ನಿರೂಪಿತವಾಗಿವೆ. ಈತನ ಶಿವಭಕ್ತಿ ಅಪೂರ್ವವಾದುದು. ನಾನಿಲ್ಲದಿದ್ದರೆ ನೀನಿಲ್ಲ. ನೀನಲ್ಲದಿದ್ದರೆ ನಾನಿಲ್ಲ. ನಾನು ನೀನೆಂಬುದಂತಿರಲಿ. ಹಿಡಿಯೊ ಮುಡಿಯೊ ಮಾಡಿದಂತೆಯಪ್ಪೆನು. ನಗುವುದು ಕೆಲಕಡೆ ನೋಡಾ ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು ನಿನಗಂಜಿ ಎಂದು ದೇವರಿಗೆ ಸವಾಲು ಹಾಕುವನು ತನ್ನ ಮನದ ಚಾಂಚಲ್ಯವನ್ನು ನೋಡಿ ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ ನಗುತ್ತಲಿದ್ದಾನೆ” ಎನ್ನುವನು.